ನಿರಂಜನ ಕಣತಿಯ ಮೂರೂವರೆ ತಿಂಗಳುಗಳ ಅನಿಶ್ಚಿತತೆಯಲ್ಲಿ ಏರನ್ನೋ, ತಿರುವನ್ನೋ ಹೂಡುವಂತೆ ಹಿಮ ಯುಗಾದಿಯ ಬಳಿಕದ ಮೂರನೆಯ ದಿನದಂದು ಅವನ ಮೊಬೈಲಿಗೆ ಫೋನಿಸಿದ್ದಳು. ಭಾನುವಾರದ ಎಂಟರ ಏರುಬಿಸಿಲಿನ ಬೆಳಗು. ಮುಂಬಿನ ಬೇಸಗೆಯ ಅತೀವ ಧಗೆಗೆ ಅಣಿಗೊಳ್ಳುತ್ತಿದ್ದ ಒಂದು ಹಗಲು. ತಿಂಡಿ ಮುಗಿಸಿ ಷೂ ಲೇಸನ್ನು ಕಟ್ಟಿಕೊಳ್ಳುತ್ತಿರುವಾಗಲೆ ಕೊರಳಿಗೆ ನೇಣು ತೂಗಿಸಿ ಶರಟಿನ ಕಿಸೆಯಲ್ಲಿ ಇಳಿಬಿಟ್ಟುಕೊಂಡಿದ್ದ ಮೊಬೈಲು ಹೊಡೆದುಕೊಂಡಿತ್ತು. ಹಿಂದಿನ ದಿನ ಆಫೀಸಿಗೆ ಫೋನಿಸಿದ್ದವಳಿಗೆ ಬೇಕೆಂದೇ ತಾನು ಆಫೀಸಿನಲ್ಲಿ ಇಲ್ಲವೆಂದು ಹೇಳಿಸಿ, ಅವಳ ಆರು ಕರೆಗಳನ್ನು ಅವಾಯ್ಡ್ ಮಾಡಿ, ಯಾವುದೇ ಸಮಯದಲ್ಲಿ ಮೊಬೈಲಿಗೆ ಬರಬಹುದಾದ ಕರೆಗಳನ್ನು ತಡೆಗಟ್ಟಲು ಅದನ್ನು ಬಂದು ಮಾಡಿಟ್ಟಿದ್ದವನಿಗೆ ಈಗದು ಟ್ರಿಂಗುಟ್ಟಿದಾಗ ಎದೆ ಸಶಬ್ದ ಢವಿಸಿತ್ತು. ಕೆಲವಾರು ರಿಂಗುಗಳ ಬಳಿಕ ಅದು ಯಾವುದೋ ಎಸ್ಟೀಡಿ ಬೂತಿನ ನಂಬರೆಂದು ಖಚಿತ ಪಡಿಸಿಕೊಂಡು ರಿಸೀವ್ ಮಾಡಿದ್ದ.
‘ನಿರಿ, ನಾನು ಕಣೋ…!’ ಎನ್ನುವ ಅವಳ ದನಿ ಕೇಳುತ್ತಿದ್ದಂತೆಯೆ ನಿರಂಜನನ ಮೂರು ತಿಂಗಳುಗಳ ತಾಳ್ಮೆ, ಕಾತುರಗಳು ಸೋರಿ ಹೋಗಿದ್ದವು. ಊರಿನ ಎಚ್ಚರದ ದಟ್ಟಣೆಯಲ್ಲಿ ಒಬ್ಬನೇ ಹಾದು ಹೋಗುವಾಗಲೆಲ್ಲ ಅವಳು ಎಂದಾದರೂ ಫೋನು ಮಾಡಿದಲ್ಲಿ ಹೇಗೆ ಮಾತನಾಡಬೇಕು ಅಂತೆಲ್ಲ ಕಲ್ಪಿಸಿಕೊಳ್ಳುತ್ತ, ಹತ್ತಾರು ದಾವೆಗಳನ್ನು ಮತ್ತೆ ಮತ್ತೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದ ಮಾತುಗಳೆಲ್ಲ ಇಂತಹ ಗಟ್ಟಿ ವಾಸ್ತವದಲ್ಲಿ ಕಳಚಿಕೊಂಡಿದ್ದವು. ಅವಳಿಗೆ ತನ್ನ ತಪ್ಪುಗಳು ಮನದಟ್ಟಾಗುವವರೆಗೆ ನೇರ ಮಾತಿಗೆ ನಿಲುಕಬಾರದೆಂದುಕೊಂಡಿದ್ದವನು ಈಗ ಅವಳ ದನಿಗೆ ಒಮ್ಮೆಲೇ ಕರಗಿಹೋಗಿದ್ದ. ಅವನಾಡಿದ ಕೆಲವೇ ಮಾತುಗಳಲ್ಲಿ ದುಗುಡ ದಟ್ಟಯಿಸಿತ್ತು. ಏರಿರದ ಧ್ವನಿಯ ನಡು ನಡುವೆ ಉಮ್ಮಳ. ಹೆಚ್ಚೇನೂ ಹೇಳಲಾಗದೆ ಮತ್ತೆ ಫೋನಿಸುವಂತೆ ಅವಳಿಗೆ ಹೇಳಿದ್ದ.
ಹಿಂದಿನ ದಿನವಷ್ಟೇ ಹಿಮಳ ಹುಟ್ಟಿನ ತೇದಿಯಾದ್ದರಿಂದ ಅವಳ ಅಮ್ಮನ ಮನೆಗೆ ಫೋನು ಮಾಡಿ ನಿರಂಜನ ಶುಭ ಕೋರಿದ್ದ. ಅತ್ತೆ ಬೇರಿನ್ನೇನನ್ನು ವಿಚಾರಿಸಿಕೊಳ್ಳುವ ಮೊದಲೆ ‘ಅವಳಿಗೆ ನನ್ನ ಬೆಸ್ಟ್ ವಿಷಸ್ ತಿಳಿಸಿಬಿಡಿ. ಅವಳ ಖುಷಿಯಷ್ಟೆ ನನಗೆ ಮುಖ್ಯ.’ ಎಂದಷ್ಟೆ ಮೊಟುಕಾಗಿ ಹೇಳಿ ಫೋನು ಇಟ್ಟಿದ್ದ. ಅವರೂ ಅವಳನ್ನು ಕರೆದು ಇವನೊಟ್ಟಿಗೆ ಮಾತಿಗೆ ಎಡೆ ತೋರಿರಲಿಲ್ಲ. ಇವನೂ ಅವಳ ಬಗೆಗೆ ಕೇಳಿರಲಿಲ್ಲ. ಕಳೆದ ಎರಡು ತಿಂಗಳಿಂದ ಹಿಮಳ ಬಗೆಗಿನ ಖುದ್ದು ಉಸಾಬರಿಯನ್ನು ಬಲವಂತದಿಂದ ಕಡಿದುಕೊಂಡ ಬಳಿಕ ಅವಳು ಈವರೆಗೆ ಫೋನಿಗೂ ಸಿಕ್ಕಿರಲಿಲ್ಲ. ಈ ತನಕದ ನಿರೀಕ್ಷೆಗಳೆಲ್ಲ ಫಲಿಸದಿದ್ದಾಗ ಅವಳೆಂದೂ ಮತ್ತೆ ತಾನಾಗಿ ಫೋನಿಸಲಾರಳು ಎಂದು ಆಗಾಗ್ಗೆ ಅಂದುಕೊಂಡರೂ, ಅಂತಹ ಸನ್ನಿವೇಶವೊಂದು ತಳೆದು ಬಂದರೆ ತಾನು ಹೇಗೆ ವರ್ತಿಸಬೇಕೆಂಬುದರ ಬಗ್ಗೆ ಆಗಾಗ್ಗೆ ಲೆಕ್ಕಾಚಾರ ಹಾಕುತ್ತಿದ್ದ.
ಚಿಲಕ ಹಾಕಿಕೊಳ್ಳಲು ಬಾಗಿಲವರೆಗೆ ಬಂದ ಶಾರದೆ ಮಗನಲ್ಲಿ ಏನನ್ನೋ ತಡಕುವಂತೆ ನೋಡಿದಾಗ ಮುಖವನ್ನು ಬೇರೆಲ್ಲೋ ತಿರುಗಿಸಿ ಸಾವರಿಸಿಕೊಂಡು ಮತ್ತೆ ಅವಳತ್ತ ಮಾಡಿ ಅದು ತನ್ನ ಕೆಲಸದ ಬಗೆಗಿನ ಫೋನೆಂದು ಬಲವಂತದ ನಗೆ ಚೆಲ್ಲಿದ. ಹೊರಗೆ ಬಂದು ಜೀಪು ಚಾಲೂ ಮಾಡುವವರೆಗೂ ಅಮ್ಮ ತನ್ನತ್ತಲೇ ದೃಷ್ಟಿ ಹುದುಗಿಸಿದ್ದನ್ನು ಗಮನಿಸಿ ಮುಜುಗರವಾಗಿತ್ತು. ಹಿಮ ಜೊತೆಯಲ್ಲಿದ್ದಾಗ ಅಮ್ಮನಿಗೆ ತನ್ನ ಬಗೆಗೆ ಇಷ್ಟೊಂದು ಕಾಳಜಿಯಿರಲಿಲ್ಲವಲ್ಲ ಎಂದು ತಂತಾನೆ ಹೇಳಿಕೊಂಡ. ಮನೆಯಿರುವ ಇಪ್ಪತ್ತನೆಯ ಕ್ರಾಸು ದಾಟಿ ಮೇಯಿನು ರೋಡಿನತ್ತ ಹೊರಳಿ ಅವಸರದಲ್ಲಿ ಸಿಗರೇಟು ಹೊತ್ತಿಸುವಾಗ ಪ್ರಣತಿಯ ಫೋನು ಬಂದಿತ್ತು. ತಾನು ಅವಳನ್ನು ನೋಡಲಿಕ್ಕೆಂದೇ ಹೊರಟಿರುವುದಾಗಿ ಮೊಟುಕಾಗಿ ಉತ್ತರಿಸಿ ಜೀಪಿನ ವೇಗ ಹೆಚ್ಚಿಸಿದ. ಮನೆಯಿಂದ ರಿಚ್ಮಂಡ್ ಸರ್ಕಲ್ ತಲುಪುವಾಗ್ಗಿನ ಇಪ್ಪತ್ತು ನಿಮಿಷಗಳಲ್ಲಿ ಮೂರು ಸಿಗರೇಟುಗಳ ಹೊಗೆಯುಗುಳಿದ್ದ. ಮನಸ್ಸು ಹಿಮಳ ಮತ್ತೊಂದು ಫೋನಿನ ಲೆಕ್ಕಾಚಾರದಲ್ಲಿತ್ತು. ಇರುಳುಗಳ ಕನವರಗಳಷ್ಟೇ ಎಚ್ಚರದ ತುಡಿತಗಳನ್ನೂ ಹತೋಟಿಯಲ್ಲಿಟ್ಟುಕೊಂಡು ಒತ್ತಾಯದ ನಿರಾಳದಲ್ಲಿ ಹಗಲುಗಳನ್ನು ಅಳವಡಿಸುತ್ತಿರುವಾಗ ಮತ್ತೊಮ್ಮೆ ಅದರಲ್ಲಿ ಸಲ್ಲದ ತಲ್ಲಣವನ್ನು ಹೂಡುವಂತೆ ಅವಳು ಫೋನಿಸಿದಳೇಕೊ? ತಿಳಿಗೊಂಡ ಮನಸ್ಸಿನಲ್ಲಿ ತನ್ನ ಕಹಿ ನೆನಹುಗಳನ್ನು ಕಲಿಲಗಳಾಗಿ ಮತ್ತೆ ತೂರುವುದಕ್ಕೆಂತಲೋ? ತನ್ನ ಗೈರಿನಲ್ಲಿ ಊರಿನ ಹಾಳು ಜಂಜಟದಲ್ಲಿ ತನ್ನ ಗಂಡನಾಗಿದ್ದವನು ಹೇಗೆ ಹೆಣಗುತ್ತಿದ್ದಾನೆಂದು ನೋಡುವುದಕ್ಕೆಂತಲೊ? ಇಲ್ಲವೆ ಎಂದಿನಂತೆ ತನ್ನನ್ನು ಕಾಡುವುದಕ್ಕೆಂತಲೊ? ಆದದ್ದಾಗಲಿ, ಅವಳ ಮತ್ತೊಂದು ಕರೆಗೆ ತಾನು ಓಗೊಡಬಾರದು. ಓಗೊಟ್ಟರೂ ನಿರ್ಲಿಪ್ತವಾಗಿ ಮಾತು ತೂಗಿಸಬೇಕು. . . ಯೋಚನೆಗಳ ಜಾಳಿನಲ್ಲಿ ಸುತ್ತಲಿನ ನಿಚ್ಚಳದ ಎಚ್ಚರವನ್ನು ಮರೆತವನಾಗಿ ನಿರಂಜನ ಕ್ಯಾಷ್ ಫಾರ್ಮಸಿಯ ಸಿಗ್ನಲ್ಲನ್ನು ಹಾರಿಸಿ ಟ್ರಾಫಿಕ್ ಕಾಪ್‌ನ ಸೀಟಿಗೋಗೊಟ್ಟು, ತಪ್ಪಿತಸ್ಥನಂತೆ ಸಾರಿ ಹೇಳಿ ಒಂದಷ್ಟು ತೆತ್ತು, ಮುಂದೆ ಸಾಗುವಾಗ ನೆನಹುಗಳನ್ನು ಮತ್ತಷ್ಟು ಮುಸುರಿಸಿಕೊಂಡ.
ಹಿಮ ತನಗಿನ್ನಿಲ್ಲ ಎಂಬುದನ್ನು ಅರಿವಿಗೊಡ್ಡಿಕೊಳ್ಳುತ್ತಲೆ ಖಿನ್ನನಾಗುತ್ತಿದ್ದವನಿಗೆ ಅವಳ ಅಗಲಿಕೆಯೂ ಒಂದು ವಾಸ್ತವವೆಂದು ಅನಿಸಹತ್ತಿದ್ದು ತಿಂಗಳಿಂದೀಚೆಗಷ್ಟೆ. ಅವಳನ್ನು ಹೊರತುಗೊಂಡ ತನ್ನ ಬದುಕು ಆ ವಾಸ್ತವಕ್ಕಿಂತ ದೊಡ್ಡದು ಎಂದು ತನಗೆ ತಾನೆ ಈಗೀಗ್ಗೆ ಸಮರ್ಥಿಸಿಕೊಂಡು ಮನಸ್ಸಿನ ಜಾಳು ತಗೆಬಗೆಗಳನ್ನು ತಹಬದಿಗೆ ತಂದುಕೊಳ್ಳುತ್ತಿದ್ದ. ಸಲ್ಲದ ನೆವ ಹೊತ್ತು ಮರುಕಳಿಸುವ ನೆನಹುಗಳನ್ನು ಹತ್ತಿಕ್ಕುತ್ತ ಅವಳು ತನ್ನೊಟ್ಟಿಗಿಲ್ಲದ ಊರ ಹರಹಿನಲ್ಲಿ ಹೊಸತನ್ನು ಹುಡುಕುತ್ತಿದ್ದ. ಎಂಟು ವರ್ಷಗಳ ಅವಳ ಸಹಯೋಗದಲ್ಲಿ ಮದುವೆಯ ಮುನ್ನದ ಎಲ್ಲ ಸಹವರ್ತಿಗಳ ಸಂಪರ್ಕವನ್ನು ಕಡಿದುಕೊಂಡಿದ್ದವನಿಗೆ ತನ್ನೊಳಗಿನ ಅಳಲು ತೋಡಿಕೊಳ್ಳಲೂ ಯಾರೂ ಇಲ್ಲದಂತಹ ದುಸ್ತರದ ಸನ್ನಿವೇಶವೀಗ ತಳೆದು ನಿಂತಿತ್ತು. ಓಟವೇ ಗ್ರಾಸವಾದ ಊರಿನಲ್ಲಿ ರೇಸಿಗೆ ಬಿಟ್ಟ ಕುದುರೆಯಂತೆ ತನ್ನನ್ನು ತಾನೇ ಹೂಡಿಕೊಂಡಿದ್ದವನಿಗೆ ಎಂಥದೋ ಶೂನ್ಯವೊಂದರ ಆವಿರ್ಭವವಾಗಿ, ಅದರೆಡೆಯಲ್ಲಿ ಇನ್ನೇನನ್ನಾದರೂ ಅನತಿ ಕಾಲದಲ್ಲಿ ತುಂಬುವುದು ಸದ್ಯಕ್ಕೆ ಎಲ್ಲಕ್ಕಿಂತ ಮುಖ್ಯವಾಗಿತ್ತು. ನಸುಕಿನಲ್ಲಿ ಜಿಮ್ಮ್‌ನಿಂದ ಮೊದಲುಗೊಂಡು ಇನ್ನಿತರೆ ಪ್ರಾತಃವಿಧಿಗಳನ್ನು ಮುಗಿಸಿ ಬೆಳಗಿನ ಏಳೂವರೆಗೆ ದಿನಚರಿಯಲ್ಲಿ ತೊಡಗಿಕೊಂಡರೆ ಅದು ಕೊನೆಗೊಳ್ಳುತ್ತಿದ್ದುದು ರಾತ್ರಿಯ ಹತ್ತೂವರೆಗೆ. ಇಂತಹ ಅವಿರತದ ದೈನಂದಿನದಲ್ಲಿ ತೊಡಗಿಸಿಕೊಂಡಿದ್ದವನಿಗೆ ಹಿಮ ಇರುವವರೆಗೆ ಅವಳಿಗೂ ತನ್ನ ಸಮಯದಲ್ಲಿ ಒಂದಷ್ಟು ಹಿಸ್ಸೆಯನ್ನು ಕೊಡಬೇಕೆಂದು ನಿರಂಜನನಿಗೆ ಅನಿಸಿದ್ದುದು ಕಡಿಮೆಯೆ. ಈಗ ಇದ್ದಕ್ಕಿದ್ದಂತೆ ದಿನದ ಆಯಸ್ಸು ಅಕ್ಷಯವಾದಂತೆ ಅನಿಸುತ್ತಿದ್ದರೂ ಹಂಚಿಕೊಳ್ಳಲು ಅವಳಿಲ್ಲ. ಹಿಮಳಿಲ್ಲದ ಇವನ ಎಚ್ಚರವೆಲ್ಲ ಹಿಗ್ಗಿಕೊಂಡು ಅದನ್ನು ಮೊಟಕುಗೊಳಿಸಲು ಯಾವುದರಲ್ಲಿಯಾದರೂ ಕೂಡಲೆ ತೊಡಗಿಕೊಳ್ಳುವುದು ಅನಿವಾರ್ಯವಾಗಿತ್ತು.
ಆಗಾಗ್ಗೆ ಅಗತ್ಯಕ್ಕಿಂತ ಹೆಚ್ಚು ಉದ್ವಿಗ್ನಗೊಳ್ಳುತ್ತಿದ್ದ ಹಿಮ ಯಾವುದೇ ಸಂದರ್ಭದಲ್ಲಿ ಇಂತಹ ಹಠಾತ್ ನಿರ್ಣಯಕ್ಕೆ ಕೈಯಿಕ್ಕಬಲ್ಲಳು ಎಂಬುದು ನಿರಂಜನನ ಅರಿವಿನಲ್ಲಿದ್ದ ವಿಷಯವೆ. ಅವಳ ಎಂತಹ ಹಠಾತ್ತಿಗೂ ತಾನು ಸಿದ್ಧನಾಗಿರಬೇಕು ಎಂದು ಆಗಾಗ್ಗೆ ಅಂದುಕೊಳ್ಳುತ್ತಿದ್ದವನಿಗೆ ಅವಳ ಗೈರು ಸುರು ಹಚ್ಚಿದ ಒಂಟಿತನ ಭಯಂಕರ ಹುಚ್ಚು ಹಿಡಿಸಿತ್ತು. ಹಿಮಳ ನಿರ್ಗಮನದಷ್ಟೆ ಹಠಾತ್ತಾಗಿ ಈ ಪ್ರಣತಿ ನಿರಂಜನನ ಡೋಲಾಯಮಾನದ ಬದುಕಿನಲ್ಲಿ ಅಡಿಯಿಟ್ಟಿದ್ದಳು. ಬದುಕಿನ ಸಗಟಿನಲ್ಲಿ ದೊರಕಬಹುದಾದ ಘೋರ ಮಗ್ಗುಲೆಂದರೆ ಬೇಸರ ಎಂಬುದು ಹಿಮಳ ಅಗಲಿಕೆ ಹೇಳಿಕೊಟ್ಟ ಪಾಠವೆಂದುಕೊಳ್ಳುತ್ತಿದ್ದ ಒಂದು ಬೆಳಗಿನಲ್ಲಿ ನಿರಂಜನನಿಗೆ ಪ್ರಣತಿಯ ಪರಿಚಯವಾಗಿತ್ತು.
*
*
ಪ್ರಣತಿ ಮೆಹತಾ. ಇಪ್ಪತ್ತೇಳರ ಹರೆಯದ ಗುಜರಾತಿ ಹೆಣ್ಣು. ವೃತ್ತಿಯಿಂದ ಛಾಯಾಗ್ರಾಹಕಿ. ಪ್ರತಿಷ್ಠಿತ ಟಿವಿ ಚಾನೆಲ್‌ಗಳಿಗಾಗಿ ಹತ್ತಾರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ. ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣತಿ. ಈಚೆಗಷ್ಟೆ ‘ಸಮಕಾಲೀನ ಸಂಗೀತ ಪರಂಪರೆಯಲ್ಲಿ ಹೊಸ ಹೊಳಹುಗಳು’ ಎಂಬ ವಿಚಾರವನ್ನು ಕುರಿತು ತನ್ನ ಥೀಸಿಸ್ ಪ್ರಬಂಧವನ್ನು ಮಂಡಿಸಿದ್ದವಳು. ಮುಂದೊಂದು ಮ್ಯೂಸಿಕ್ ಅಕೆಡೆಮಿಯನ್ನು ಹುಟ್ಟುಹಾಕುವ ಕನಸನ್ನು ಎಚ್ಚರದಲ್ಲೂ ಅಸ್ವಗತವೆಂಬಂತೆ ಎಲ್ಲರಲ್ಲಿ ಕಟ್ಟುವವಳು. ತನ್ನೆಲ್ಲ ಸಾಧನೆಗಳ ನಡುವೆ ತನ್ನ ಸುತ್ತಲೂ ಯಾವುದೇ ಪ್ರಭಾವಲಿಯನ್ನು ಕಟ್ಟಿಕೊಳ್ಳದೆ ಎಲ್ಲರೊಟ್ಟಿಗೆ ಬೆರೆಯುವುದರಿಂದ ಎಲ್ಲರಿಗೂ ಕೆಲವು ಮಾತುಗಳಲ್ಲಿಯೆ ಬೇಕಾಗುವವಳು. ಬದುಕಿನ ಬಗೆಗಿನ ಖಚಿತ ನಿರ್ಲಿಪ್ತ ನಿಲುವುಗಳು, ಬಿಗುಮಾನವಿಲ್ಲದ ಸರಳ ಮನಸ್ಸಿನ ಸುಂದರ ರೂಹುಗಳು ಅವಳ ವ್ಯಕ್ತಿತ್ವಕ್ಕೆ ವಯಸ್ಸಿಗೆ ಮೀರಿದ ಛಾಪು ಹೊದಿಸಿದಂತಿತ್ತು. ನಿರಂಜನನ ನಿಟ್ಟಿನಲ್ಲಿ ಹೇಳುವುದಾದರೆ, ತನ್ನ ಕ್ಯಾಮೆರಾ ಕಣ್ಣಿನಿಂದ ಸುತ್ತಲಿನ ಜಗತ್ತಿನ ಸೂಕ್ಷ್ಮ ವಿವರಗಳೊಟ್ಟಿಗೆ ಫ್ರೇಮಿನಲ್ಲಿ ಅಡಕಗೊಳ್ಳುವ ಜನರ ಚರ್ಯೆಗಳನ್ನೂ ಗ್ರಹಿಸಿ ಬದುಕಿನ ಎಳೆಗಳನ್ನು ಸ್ಥೂಲದಲ್ಲಿ, ಸೂಕ್ಷ್ಮದಲ್ಲಿ ದಾಖಲಿಸುತ್ತ, ಸುತ್ತಲಿನ ಪರಿಸರದ ಪ್ರತಿಯೊಂದು ಅಂಶದಲ್ಲೂ ಅತ್ಯಂತ ಆಪ್ತತೆಯನ್ನು ಹೂಡುವವಳು ಎಂತಹವರಿಗೂ ಇಷ್ಟವಾಗಬಹುದಷ್ಟೆ. ಅವಳನ್ನು ಭೇಟಿ ಮಾಡಿದಂದೆ ನಿರಂಜನನಿಗೆ ಎಚ್ಚರದ ನೇರ ಅರಿವಿಗೆ ಬಾರದ ಯಾವುದೋ ಬಂಧದ ಪದರವೊಂದು ಅವನನ್ನು ಸುತ್ತುವರೆದಂತಾಗಿತ್ತು. ಇಬ್ಬರೂ ಒಬ್ಬರಿಗೊಬ್ಬರು ಕಂಡುಕೊಂಡ ಆಕಸ್ಮಿಕದಷ್ಟೇ ಅನಿರೀಕ್ಷಿತವಾದ, ‘ಆಲ್ಮೋಸ್ಟ್ ಇಮ್ಮೀಡಿಯೆಟ್’ ಎನ್ನಿಸುವಂತೆ ಅವರಲ್ಲಿ ಅದೆಂಥದೋ ಬೆಸುಗೆ ಕೂಡಿಬಂದಿತ್ತು. ತನಗಿಂತ ಹತ್ತು ವರ್ಷಗಳಷ್ಟು ಹಿರೀಕನಾದ ನಿರಂಜನನೊಟ್ಟಿಗಿನ ಮೂರನೆಯ ಭೇಟಿಯಲ್ಲಿಯೆ ‘ತನಗೆ ಇಂತಹವನ ಜೊತೆ ಬದುಕಿನ ಪೂರ್ತಿ ಸಿಕ್ಕರಾಗದೆ?’ -ಎಂದು ತನ್ನ ನೋಟ್‌ಪ್ಯಾಡ್‌ನಲ್ಲಿ ಗೀಚಿಕೊಂಡಿದ್ದಳು. ಒಮ್ಮೆ ಕಾಫೀ ಷಾಪಿನಲ್ಲಿ ಅವಳು ಆಗಾಗ್ಗೆ ಕನಸುವ ಮ್ಯೂಸಿಕ್ ಅಕೆಡೆಮಿಯನ್ನು ಕುರಿತು ಮಾತನಾಡಿ, ಅದಕ್ಕೊಂದು ಊರಿಗೆ ಮಾದರಿಯಾಗುವಂತಹ ಕಟ್ಟಡವನ್ನು ಹೇಗೆ ನಿರ್ಮಿಸಬಹುದೆಂದು ನಿರಂಜನ ತಿಳಿಸಿದ್ದ. ಅದರ ವಿನ್ಯಾಸದ ರೂಪುರೇಷೆಗಳನ್ನು ವಿವರಿಸುತ್ತ, ಒಂದು ಟಿಷ್ಯೂ ಚೌಕದಲ್ಲಿ ಅವನು ಎಳೆದ ಕೆಲವು ಗೆರೆಗಳ ಜಾಡು ಹಿಡಿದು ಅವುಗಳಲ್ಲಿ ತನ್ನ ಬದುಕಿನ ಸುಪ್ತ ಪಥಗಳಿವೆಯೆ? -ಎಂದು ತಡಕಿದ್ದಳು. ಆ ಚೌಕವನ್ನು ಮಡಿಚಿ ತನ್ನ ವ್ಯಾನಿಟಿಯಲ್ಲಿ ವಿಸಿಟಿಂಗ್ ಕಾರ್ಡ್‌ಗಳ ನಡುವೆ ತೂರಿಸಿಟ್ಟುಕೊಳ್ಳುವಾಗ ಅದು ತನ್ನ ಬದುಕಿನದೆ ಪ್ರಣಾಳಿಕೆಯೆಂದನಿಸಿ ಅವಳಿಗೆ ಹೆಮ್ಮೆಯಾಗಿತ್ತು. ಇನ್ನು ನಿರಂಜನ ಕಣತಿಯೋ- ಧಾವಂತವೆ ಮೈವೆತ್ತಿದಂತಹ ಊರು ತನ್ನ ಸುತ್ತಲೂ ಹೊಸೆದಿದ್ದ ಜಡ್ಡನ್ನು ಅವಳ ಒಡನಾಟದಲ್ಲಿ ಪದರ ಪದರವಾಗಿ ಕಳಚಿ ಹಗುರಗೊಂಡಂತಿದ್ದ. ತಾನು ಹಿಮಳೊಟ್ಟಿಗೆ ಹವಣಿಸುತ್ತಿದ್ದ ಆಡಂಬರದ ಬದುಕಿನಾಚೆಗೆ ವೆಚ್ಚವೆ ಇಲ್ಲದ ಮೋಜಿನ ಸರಳ ಸುಂದರ ಮಜಲೂ ಈ ಊರಿನಲ್ಲಿದೆ ಎಂದು ಪ್ರಣತಿಯ ಸಹವಾಸದಲ್ಲಿ ಅರಿತುಕೊಂಡು ಅವನಲ್ಲಿ ಹೊಸ ಹುರುಪು ಕಟ್ಟಿಕೊಂಡಿತ್ತು. ಈಚೀಚೆಗಂತೂ ತನ್ನೊಡಲಿನ ಪಸೆಯನ್ನು ನೆಲದಲ್ಲಿ ಚೆಲ್ಲಿ ಹಗುರಗೊಂಡ ಮುಗಿಲಿನ ಬೆಳರು ತೆಳುಮೆ ತಳೆದಂತಿತ್ತು ಅವನ ಮನಸ್ಸು. ಕವಿದ ಕಪ್ಪು ಗಾಜಿನ ತಣಿದ ಹವೆಯುಳ್ಳ ತನ್ನ ಜೀಪು ಕಾರುಗಳಾಚೆ ಸಿರಿಯ ಗರವಿಲ್ಲದ, ಮ್ಯಾನರಿಸಮ್ಮುಗಳ ಕಟ್ಟುಪಾಡಿಲ್ಲದ ಪರ್ಯಾಯ ವಲಯದೊಳಕ್ಕೆ ತನ್ನನ್ನು ಹೂಡಿಕೊಂಡಿದ್ದ. ಹತ್ತು ವರ್ಷಗಳ ಹಿಂದಿನ ತನ್ನ ಹುಮ್ಮಸ್ಸಿನ ಮೇರಿನಲ್ಲಿ ನಡೆಸದ ಯುವೋತ್ಸಾಹದ ವಹಿವಾಟುಗಳೆಲ್ಲ ಅವನ ಮೂವತ್ತಾರರ ಹರೆಯವನ್ನು ಮರೆಮಾಚುವಂತೆ ತೆರೆದುಕೊಂಡವು. ನೀರಿನಲ್ಲಿ ಮಿದ್ದ ಹಕ್ಕಿಯೊಂದು ಮೈಕೊಡವಿ ಎದ್ದು ರೆಕ್ಕೆ ಬಿಚ್ಚಿ ಹಾರಿದ ಸ್ವಚ್ಛಂದತೆಯನ್ನು ಕ್ರಮೇಣ ಕಂಡುಕೊಂಡಿದ್ದ.
ಪ್ರಣತಿ ಮೆಹತಾ ನಿರಂಜನನನ್ನು ಭೇಟಿ ಮಾಡಿದ ಭಾನುವಾರ ಹಿಮಳ ವಿದಾಯದ ಬಳಿಕದ ಮೊದಲನೆಯದು. ಅಸಾಧ್ಯವೆನಿಸುವ ಬಿಡುವು ತನ್ನನ್ನು ಚಪ್ಪರಿಸುತ್ತ ತೊಟ್ಟಿಕ್ಕಿಸುವ ಬೇಸರವನ್ನು ನೀಗಿಕೊಳ್ಳುವುದು ಹೇಗೆಂಬ ಮೆಲುಕಿನಲ್ಲಿ ಈಜೀಪುರದ ಕೊಳಚೆಯ ಮಗ್ಗುಲಿಗೆ ಹೊಂದಿಕೊಂಡಂತಿರುವ ಮಿಸೆಸ್ ರಸ್ತೋಗಿಯವರ ಸೈಟಿನ ಮುಂದೆ ಬೊಲೇರೋ ನಿಲ್ಲಿಸಿ ನಿರಂಜನ ತನ್ನ ವಿನ್ಯಾಸದ ಕಟ್ಟಡವನ್ನು ನಿರುಕಿಸುತ್ತಿರುವಾಗಲೆ ಪ್ರಣತಿ ತನ್ನ ಹತ್ತಾರು ಅಟ್ಯಾಚ್‌ಮೆಂಟ್‌ಗಳಿದ್ದ ಕ್ಯಾಮೆರಾವನ್ನು ಹೊತ್ತು ಎದುರಾದದ್ದು. ತನ್ನ ಅಂಡಿಗೊಂದು ಬಾಲಂಗೋಚಿ ಹೊಸೆದುಕೊಂಡಂತೆ ಹಿಂದೆ ಬಂದ ಕೊಳೆಗೇರಿಯ ಮಕ್ಕಳ ಹಿಂಡಿನ ಕೇಕೆಯ ನಡುವೆ ಇಬ್ಬರ ಮುಖಾಮುಖಿ. ‘ಇxಛಿuse me. ಙou seem ಣo me ಚಿs ಣhe ಚಿಡಿಛಿhiಣeಛಿಣ oಜಿ ಣhis ಠಿಟಚಿಛಿe. ಅಚಿಟಿ I ಣಚಿಞe some ಠಿiಛಿಣuಡಿes oಜಿ ಣhese ಞiಜs ತಿiಣh ಥಿouಡಿ ಛಿಡಿeಚಿಣioಟಿ ಚಿs ಣhe bಚಿಛಿಞಜಡಿoಠಿ?’ ಪರವಾನಗಿ ಯಾಚಿಸಿ ಹತ್ತಾರು ಮಕ್ಕಳನ್ನು ಅಲ್ಲಲ್ಲಿ ಪೋಸು ಕೊಡುವಂತೆ ನಿಲ್ಲಿಸಿ ಸಾಲಾಗಿ ಕೆಮೆರಾ ಕ್ಲಿಕ್ಕಿಸುತ್ತಿದ್ದ ಅವಳ ತಾದಾತ್ಮ್ಯ ನಿರಂಜನನಲ್ಲಿ ವಿಪರೀತ ಕೌತುಕವನ್ನು ಹುಟ್ಟಿಸಿತ್ತು. ಬೊಲೇರೋದಿಂದ ಇಳಿದು ಕಟ್ಟಡದೊಳಗೆ ಹಾಯುತ್ತಿದ್ದವನಿಗೆ ತಾನೂ ಅವಳ ಕಣ್ಣುಗಳ ಚೌಕಟ್ಟಿನಲ್ಲಿ ಹುದುಗಿರಬಹುದು ಎಂಬುದರ ಸ್ಪಷ್ಟ ಪರಿವೆಯಿರಲಿಲ್ಲ. ‘I ತಿouಟಜ ಟiಞe ಣo hಚಿve ಛಿoಠಿies oಜಿ ಣhese ಠಿiಛಿಣuಡಿes’ ಎಂದು ತನ್ನ ವಿಸಿಟಿಂಗ್ ಕಾರ್ಡು ಕೊಟ್ಟವನನ್ನು ಹುಡುಕಿಕೊಂಡು ಮೂರನೆಯ ದಿನವೆ ಆಫೀಸಿಗೆ ಬಂದಿದ್ದಳು ಪ್ರಣತಿ. ನಿರಂಜನ ಹಮ್ಮಿದ ಚಹಾ ಸಂದರ್ಭದಲ್ಲಿ ಇಬ್ಬರೂ ತಂತಮ್ಮ ಬಗೆಗೆ ಹೇಳಿಕೊಳ್ಳುವ, ಒಬ್ಬರೊಬ್ಬರ ಬಗೆಗೆ ತಿಳಿದುಕೊಳ್ಳುವ ಅಡೆಯಿಲ್ಲದ ಘಳಿಗೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ನಿರಂಜನ ತನ್ನ ವೈಯಕ್ತಿಕ ಬದುಕಿನ ಬಿರಿದ ಹಂದರವನ್ನು ನೇರ ಮಾತುಗಳಲ್ಲಿ ವಿಷದ ಪಡಿಸಿದ.
‘Suಟಿಜಚಿಥಿs geಣ exಣಡಿemeಟಥಿ boಡಿiಟಿg, Pಡಿಚಿಟಿಚಿಣhi’ ವಾರದ ದಿನಗಳಲ್ಲಿ ಕೆಲಸದ ನೆವದಲ್ಲಿ ಹಗಲು ಹೇಗೋ ತೂಗಿ ಸವೆಯುವುದಾದರೂ, ಭಾನುವಾರದ ಉದ್ದವನ್ನು ವ್ಯಯಿಸುವುದು ಕಷ್ಟವೆಂದು ನಿರಂಜನ ಹೇಳಿದಾಗ ಪ್ರಣತಿ ತಾನು ಅವನಿಗೆ ಜೊತೆ ಕೊಡುವುದಾಗಿ ಹೇಳಿದ್ದಳು. ಈ ಊರಿನಲ್ಲಿ ಎಡೆಯಿರದೆ ಕಟ್ಟಡಗಳು, ವಾಹನಗಳು ಹುಟ್ಟು ಹಾಕುವ ಇಕ್ಕಟ್ಟುಗಳಲ್ಲೂ ತನ್ನ ಕೆಮೆರಾ ಮೂಲಕ ಖಾಸಗೀ ಸನ್ನಿವೇಶಗಳನ್ನು ಅನುಭವಿಸುವುದು ರಜೆಯ ದಿನಗಳಲ್ಲಿ ಆದ್ದರಿಂದ ನಿರಂಜನ ಅವಳೊಟ್ಟಿಗೆ ಜೊತೆಯಾಗಬಹುದೆಂದು ಹೇಳಿದ್ದಳು. ‘ಙou ಛಿಚಿಟಿ ಛಿಚಿಡಿಡಿಥಿ mಥಿ bಚಿggಚಿge ಚಿಡಿouಟಿಜ!! I meಚಿಟಿ mಥಿ ಛಿಚಿmeಡಿಚಿ equiಠಿmeಟಿಣ’ ನಿರಂಜನ ನಗೆ ತುಳುಕಿಸಿದ್ದ.
ಮರು ಶನಿವಾರವೆ ಇಬ್ಬರೂ ‘ಫೀಚರಿಂಗ್ ವೆಸ್ಟರ್ನ್ ಘಾಟ್ಸ್’ ಎನ್ನುವ ಅಸ್ಸೈನ್‌ಮೆಂಟನ್ನು ಹಮ್ಮಿಕೊಂಡು, ಊರೆಲ್ಲ ಮಲಗಿದ ಬಳಿಕ ಬೊಲೇರೋದಲ್ಲಿ ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರದಿಂದ ಚಿಕ್ಕಮಗಳೂರನ್ನು ಮೂರನೆಯ ಪಾಳಿಯಲ್ಲಿ ತಲುಪಿದ್ದರು. ಮರುದಿನದ ಬೆಳಗಿನಲ್ಲಿ ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ಹೋಗಿ, ಅಲ್ಲಿಂದ ಚಾರ್ಮಡಿ ಘಾಟಿಯಿಳಿದು ಮತ್ತೆ ಮಂಗಳೂರು ಹೆದ್ದಾರಿ ಹೊಕ್ಕು ಶಿರಾಡಿ ಮಾರ್ಗವಾಗಿ ಘಟ್ಟವೇರಿ ಬೆಂಗಳೂರು ತಲುಪುವಾಗ ರಾತ್ರಿ ಹತ್ತಾಗಿತ್ತು. ಕಾಡುಮೇಡುಗಳ ನೆಲದ ವೈವಿಧ್ಯವನ್ನು ಹಾದು ಸಾಗುವ ಹೆದ್ದಾರಿ ನಿರಂಜನನ್ನಂತೂ ಒಂಟಿಯಾಗಿಸಿರಲಿಲ್ಲ. ತಾನು ಜೀಪು ಚಾಲಿಸುವಾಗ ದಾರಿಯಲ್ಲಿ, ಪ್ರಣತಿ ಸ್ಟಿಯರಿಂಗ್ ಹಿಡಿದಿರುವಾಗ ಡಾಮರಿನ ಹರಹಿನಾಚೀಚೆ ಕ್ಷಿತಿಜದವರೆವಿಗೆ ತೊಡಗಿಸಿಕೊಳ್ಳುತ್ತಿದ್ದವನಿಗೆ ತನ್ನ ಕರಾಳ ಬೇಸರವನ್ನು ನೀಗಿದುದು ತಾವಿಬ್ಬರೂ ಹೊರಟ ಸವ್ವಾರಿಯೆ ಅಥವಾ ಪ್ರಣತಿ ತನ್ನ ಕೆಮೆರಾ ಕೈಚಳಕದ ನಡುನಡುವೆ ಪ್ರತಿಯೊಮ್ಮೆ ನೆಲ-ಮುಗಿಲುಗಳು ಹೂಡುವ ಬೆರಗು ಕಂಡೊಡನೆ ಒರಲುತ್ತಿದ್ದ ಕೇಕೆ ಅಬ್ಬರಗಳ ಲವಲವಿಕೆಯೆ ಎಂದೆಲ್ಲ ತಾಳೆ ಹಾಕಿ ನಿರುತ್ತರಗೊಂಡಿದ್ದ. ‘ಓiಡಿಚಿಟಿರಿಚಿಟಿ! ಙou ಣತಿo ಜಿeಟಟ iಟಿ ಟove ಚಿಟಿಜ goಣ mಚಿಡಿಡಿieಜ is iಣ?’ ನೆನಪುಗಳು ಒತ್ತರಿಸುವಂತೆ ಪ್ರಣತಿ ಕೇಳಿದಾಗ ನಿರಂಜನ ಅವನ್ನು ಒತ್ತಾಯದಿಂದ ಹತ್ತಿಕ್ಕುತ್ತ ಹಾದಿ ಮಗ್ಗುಲಿನ ತೊರೆಯಂಚಿನ ಬೆಳ್ಳಕ್ಕಿಗಳತ್ತ ಬೊಟ್ಟು ಮಾಡಿ ಮಾತು ಹಾರಿಸಿದ್ದ. ಆ ಬಳಿಕದ ಭಾನುವಾರ ಅವಳೊಟ್ಟಿಗೆ ಔಟರ್ ರಿಂಗ್ ರೋಡಿನಲ್ಲಿ ಗುರಿಯಿಲ್ಲದೆ ಗಿರಕಿ ಹೊಡೆಯುತ್ತ ಸುತ್ತಿದುದಾಗಿತ್ತು. ರೋಡುಂಗುರದ ಇಕ್ಕೆಲದಲ್ಲಿ ತಲೆಯೆತ್ತುತಿರುವ ಕಾಂಪ್ಲೆಕ್ಸುಗಳು ಎಡೆಕೊಡಬಹುದಾದ ಟ್ರ್ಯಾಫಿಕ್ಕನ್ನು ಕುರಿತು ಇಬ್ಬರೂ ಚರ್ಚಿಸಿದ್ದರು. ಮರುವಾರ ಮದರಾಸು ಹೆದ್ದಾರಿಯಲ್ಲಿ ಚಿಂತಾಮಣಿಯತ್ತ ಸಾಗಿ ದಾರಿ ಬದಿಯಲ್ಲಿನ ಗುಡ್ಡವನ್ನು ಹತ್ತಿ ಹೊತ್ತು ಮುಳುಗುವವರೆಗೂ ಅಡ್ಡಾಡಿ ಚುಕ್ಕಿ ಮಿಣುಕುಗಳ ಜಾಡಿನಲ್ಲಿ ರಸ್ತೆಯನ್ನು ಹೊಕ್ಕು ಊರಿಗೆ ಹಿಂತಿರುಗಿದ್ದರು. ಪ್ರಣತಿ ಕೆಮೆರಾದಲ್ಲಿ ದೃಶ್ಯದ ಆಯತವನ್ನು ನಿರ್ಮಿಸುವಾಗ ಮೈಮರೆಯುವಂತೆ ತಲ್ಲೀನಗೊಳ್ಳುವುದನ್ನು ನಿರಂಜನ ಬೆರಗುಗೊಳ್ಳುತ್ತಿದ್ದ. ಹೀಗೆ ತಿಂಗಳು ಕಳೆಯುವಷ್ಟರಲ್ಲಿ ವಾರಾಂತ್ಯವೆಂದರೆ ಅದು ಪರಸ್ಪರರಿಗೆ ಮೀಸಲು ಎನ್ನುವ ಅವಿನಾಭಾವದ ಎಳೆಯೊಂದು ಇಬ್ಬರನ್ನೂ ಇನ್ನಷ್ಟು ಹೆಣೆದಿತ್ತು. ವೃತ್ತಿಯಿಂದ ಆರ್ಕಿಟೆಕ್ಟಾಗಿರುವ ನಿರಂಜನ ಬದುಕಿನ ಸಮಷ್ಠಿಪ್ರಜ್ಞೆಯ ಬಗೆಗೆ, ಅದಕ್ಕೆ ತಮ್ಮನ್ನೊಳಗೊಂಡಿರುವ ನೆಲದ ಹರಹನ್ನು ನಾವು ಅನುವುಗೊಳಿಸುವ ಬಗೆಗೆ ಆಗಾಗ್ಗೆ ವಿವರಿಸುವಾಗಲೆಲ್ಲ ಪ್ರಣತಿ ಯಾವುದೋ ಕತೆಯೆಂಬಂತೆ ಕಣ್ಣಗಲಿಸಿಕೊಂಡು ಕಿವಿಗೊಡುತ್ತಿದ್ದಳು. ‘ Iಣ is veಡಿಥಿ veಡಿಥಿ exಛಿiಣiಟಿg ಣo heಚಿಡಿ ಥಿou ಣಚಿಟಞ!!’ ಎಂದು ಗರ ಬಡಿದವರಂತೆ ಹೇಳುತ್ತಿದ್ದಳು. ಹಾಗೆ ಹೇಳಿದಾಗಲೆಲ್ಲ ನಿರಂಜನನಿಗೆ ತಾನು ಹಿಮಳೊಟ್ಟಿಗೆ ಎಂದೂ ಇಷ್ಟೊಂದು ಮಾತು ಆಡುತ್ತಿರಲಿಲ್ಲವಲ್ಲ? ಅಥವಾ ತನ್ನ ಮಾತುಗಳಿಗೆ ಅವಳೆಂದೂ ಕಿವಿಯಗಲಿಸುತ್ತಿರಲಿಲ್ಲವಲ್ಲ ಅಂತ ತನ್ನಲ್ಲಿಯೆ ಸ್ವಗತದಲ್ಲಿ ಹೇಳಿಕೊಳ್ಳುತ್ತಿದ್ದ.
ಕೆಲವು ಭಾನುವಾರಗಳಂದು ಪ್ರಣತಿ ಅವನನ್ನು ತಾನು ಆಸ್ಥೆಯಿಟ್ಟುಕೊಂಡಿರುವ ಊರಿನ ಗುಟ್ಟು, ವಿಸ್ಮಯಗಳ ಮಗ್ಗುಲನ್ನು ಕ್ಲಿಕ್ಕಿಸುವ ನೆವದಲ್ಲಿ ತನ್ನೊಟ್ಟಿಗೆ ಕರೆದೊಯ್ದಿದ್ದಳು. ಜನವೇ ಜನವಾದ ಮೆಜೆಸ್ಟಿಕ್ಕಿನ ಫ್ಲೈ-ಓವರ್, ಶಿವಾಜಿನಗರದ ದಟ್ಟಣೆ, ಊರಿನ ನೆಲದ ಕಣಿವೆಗಳಲ್ಲಿ ಹರಿವ ಕೊಳಚೆ ಮಗ್ಗುಲಿನ ನಿರಾಶ್ರಿತ ನೆಲೆಗಳು, ವಾಹನಗಳು ಕಚ್ಚಿಕೊಳ್ಳುವ ಇಕ್ಕಟ್ಟಿನ ದಾರಿ. . . ಇವುಗಳು ಅವಳ ಕೆಮೆರಾಕ್ಕೆ ಗ್ರಾಸವಾಗುವ ವಿಷಯಗಳಾಗಿದ್ದವು. ನಿರಂಜನ ಅವಳ ಫೋಟೋಗ್ರಫಿಯ ಸಲುವಿನಿಂದಾಗಿ ಊರಿನ ಹತ್ತು ಹಲವು ಒಳಗೊಳಗಿನ ಪಾರ್ಶ್ವಗಳನ್ನು ಕಂಡರಿತುಕೊಂಡಿದ್ದ. ಒಮ್ಮೆ ಇಬ್ಬರೂ ಬನ್ನೇರುಘಟ್ಟ ರೋಡಿನ ಒಳಾಂತರದಲ್ಲಿ ಶೂಟಿಂಗ್ ಮುಗಿಸಿ ಮನೆಗೆ ವಾಪಸಾದಾಗ ಹತ್ತೂ ಮುಕ್ಕಾಲು ದಾಟಿತ್ತು. ಅಂದೇಕೊ ನಿರಂಜನನಿಗೆ ಅಂದು ಇರುಳು ನಡುಮಟ್ಟ ಮುಟ್ಟುವವರೆಗೆ ನಿದ್ದೆ ಹತ್ತಿರಲಿಲ್ಲ. ತನ್ನ ಬದುಕಿನ ಅಸಂಗತ ಮಜಲುಗಳನ್ನು ಕುರಿತು ಲೆಕ್ಕಾಚಾರದಲ್ಲಿತ್ತು ಮನಸ್ಸು. ತನ್ನೆಲ್ಲ ಸಮಸ್ಯೆಗಳ ನಡುವೆಯೂ ಈ ಊರಿನ ಅಗಾಧ ಹಾಸಿನಲ್ಲಿ ತನಗೊಂದು ತನ್ನದೇ ಆದ ನೆಲೆಯಿದ್ದು ಸಾಕಷ್ಟು ಗಳಿಕೆಯೂ ಇದೆಯಷ್ಟೆ. ತಾನು ಈ ಊರಿನ ಹರಹನ್ನು ತನ್ನ ಬೊಲೇರೋದಲ್ಲಿ ದಿನಕ್ಕೆರಡು ಬಾರಿಯಂತೆ ಎರಡು ತುದಿಗಳ ನಡುವೆ ಹಾಯುತ್ತಿದ್ದರೂ, ತಾನೇ ಕಂಡರಿಯದ ಅದೆಷ್ಟೋ ನೆಲೆಗಳು ಇಲ್ಲಿ ಹುದುಗಿವೆ. ಪ್ರತಿಯೊಂದು ನೆಲೆಯಲ್ಲೂ ಕಿಂಚಿತ್ತು ಬದುಕಿಗಾಗಿ ಹೆಣಗಾಟ. ಬೊಲೇರೋದ ದೊಡ್ಡ ಗಾಲಿಗಳ ಅಗಲ ಮೈ ಸಾಗಲಾಗದಷ್ಟು ಕಡಿದಾದ ಒಳಾಂತರಗಳಲ್ಲಿ ಹಲವಾರು ಶ್ರಮದ ನೆಲಗಟ್ಟುಗಳಿವೆ. ಅವುಗಳಲ್ಲೂ ನೋವು-ನಲಿವುಗಳಿವೆ. ಅಳಲಿನೊಟ್ಟಿಗೆ ಇದ್ದುದರಲ್ಲೇ ನಗೆ ಕಾಣುವ ನಂಬಿಕೆಗಳಿವೆ. ನಾಳಿನ ಬಗೆಗಿನ ಅನಿಶ್ಚಿತತೆಯುಳ್ಳ ಅಸಂಗತ ನಮೂನೆಗಳ ಬದುಕುಗಳಲ್ಲೂ ಎದೆ ಸೆಟೆದು ನಿಲೆ ನಿಲ್ಲುವ ಜೀವಗಳಿವೆ. ಕೆಲವಾರು ಸ್ವಕೀಯವೆನಿಸುವ ಮನಸ್ಸುಗಳಿವೆ. . . ಇವುಗಳನ್ನು ಕಂಡರಿತು ದಾಖಲಿಸಬಲ್ಲ ಪ್ರಣತಿಯಂತಹ ಸೂಕ್ಷ್ಮ ದೃಷ್ಟಿಗಳೂ ಇವೆ. . . . ಈ ನಡುವೆ ತಾನು ಮತ್ತು ಹಿಮಳಂತಹವರು ಮಾತ್ರ ಎಲ್ಲವಿದ್ದೂ ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಇಲ್ಲವಾಗುತ್ತೇವೆ. ಜೊತೆಯಲ್ಲಿದ್ದೂ ಸಲ್ಲದ ಆಚೆಗಳಲ್ಲಿ ಹುದುಗಿ ಒಬ್ಬರಿಂದೊಬ್ಬರು ಕಳೆದುಹೋಗುತ್ತೇವೆ. ಒಂದೇ ಹಾಸಿಗೆಯಲ್ಲಿ ಮಲಗಿಯೂ ತಂತಮ್ಮ ಸುತ್ತ ತಮ್ಮದೆ ಭ್ರಮೆಗಳನ್ನು ಸ್ರವಿಸಿ, ಅವುಗಳದೆ ಎಳೆಗಳಲ್ಲಿ ಕೋಶಗಳನ್ನು ಕಟ್ಟಿ ಅಭೇದ್ಯರಾಗುತ್ತೇವೆ. ಎದುರಿಗಿದ್ದರೂ ಮನಸ್ಸುಗಳ ವಿಕ್ಷಿಪ್ತತೆಯನ್ನು ಹಂಚಿಕೊಳ್ಳದೆ ಇನ್ನೊಬ್ಬರಲ್ಲಿ ಗುಟ್ಟು ಕಟ್ಟುತ್ತೇವೆ. ಅವರಿವರಿಂದ ತಮ್ಮದೇ ರಹಸ್ಯಗಳು ರಟ್ಟಾಗುವಷ್ಟು ದೂರವಾಗುತ್ತೇವೆ. ಈವರೆಗೆ ತಾನು ಮಾಡುತ್ತಿದ್ದ ಊರನ್ನು ಕುರಿತು ವ್ಯಾಖ್ಯಾನಗಳು, ಜನಸೆಲೆಯನ್ನು ಕುರಿತು ಭಾಷಣಗಳು, ನೆಲದ ಹಾಸಿನಲ್ಲಿ ಜನಸಮಷ್ಠಿಯೆಂಬುದು ಕಟ್ಟುವ ಮನೆಗಳು, ಬೀದಿಗಳು, ಮಾರುಕಟ್ಟೆಗಳು, ಮೈದಾನಗಳು, ಆಡಳಿತ ಕೇಂದ್ರಗಳು- ಇಂತ ಎಲ್ಲ ಮೂರ್ತ ಮಾದರಿಗಳ ಬಗ್ಗೆ ಹೊಸ ಅರ್ಥ ಹುಡುಕುವಂತಹ ಲೇಖನಗಳು, ಕೊನೆಗೆ ತನಗೆ ಬೌದ್ಧಿಕವಾಗಿ ಒಗ್ಗದ ಹಿಮಳದ್ದೇ ನಿಟ್ಟಿನಲ್ಲಿ ಬದುಕನ್ನು ಕಲ್ಪಿಸಿಕೊಳ್ಳುವ ಕವನಗಳು. . . ಇವೆಲ್ಲವೂ ಈ ಕಡಿದು ಆವರಣಗಳ ಅನಿವಾರ್ಯದಲ್ಲಿ ಬದುಕುವ ಜೀವಗಳ ನಡುವೆ ಗೌಣವಾಗುವುದಿಲ್ಲವೆ? ನಡುನಡುವೆ ಹಿಮಳ ನೆನಪುಗಳು ಧಾವಿಸಿ ಮರಳಿ ಸಾಂಧ್ರಗೊಂಡಂತೆಲ್ಲ ಅವನ ಕೆನ್ನೆಗಳು ತೋಯ್ದಿದ್ದವು. ಯೋಚನೆಯ ಸಾವಕಾಶದಲ್ಲೆಲ್ಲೊ ಹಗಲು ಹುಟ್ಟುವ ಹೊತ್ತಿನಲ್ಲಿ ನಿದ್ದೆಯ ಮಂಪರು ಹತ್ತಿತ್ತು.
ಬಳಿಕದ ಮುಂಜಾವಿನಲ್ಲಿ ಪ್ರಣತಿಗೆ ಫೋನಿಸಿ ತನ್ನ ಮನಸ್ಸಿನ ಹೊಯ್ದಾಟವನ್ನು ನಿರಂಜನ ಹೇಳಿಕೊಂಡಿದ್ದ. ಈವರೆಗೆ ಗಂಭೀರವಾಗಿ ಏನನ್ನೂ ಅವನೊಟ್ಟಿಗೆ ಹೇಳಿರದ ಪ್ರಣತಿ ಅಂದು ಅವನಿಗೆ ಸಾಕಷ್ಟು ತಿಳಿಹೇಳಿದಳು. ಥ್ರಿಲ್ಲೇ ಇರದ ಬದುಕನ್ನು ಬದುಕು ಎನ್ನಲಾದೀತೆ? ಬದುಕಿನ ನಿರಂತರ ಲಹರಿಯಲ್ಲಿ ಅಡಚಣೆಗಳು ಬಂದಾಗಲಷ್ಟೇ ಹೊನಲು ರಮಣೀಯವೆನಿಸುವುದು? ಎಲ್ಲವನ್ನೂ ಒಪ್ಪಿಕೊಂಡು ಯಾರ ಯೋಚನೆಗಳ ಜಾಳಿಗೆ, ಹಂಗಿಗೆ ನಿಲುಕದಂತೆ ಉದ್ದಿಮೆಯನ್ನು ನಿರಂಜನ ಇನ್ನಷ್ಟು ಬೆಳೆಸಬಹುದಲ್ಲವೆ? ಈಗ ಬೆಳೆದಿರುವ ಎತ್ತರವನ್ನೂ ಮೀರಿ ಬೆಳೆದು ತನ್ನನ್ನೂ ಒಳಗೊಂಡಂತೆ ಹತ್ತಾರು ಮಂದಿಯ ಬದುಕಿಗೆ ಅರ್ಥವತ್ತಿನ ಹಿಸ್ಸೆಯೊದಗಿಸಬಹುದಲ್ಲವೆ? ‘ಬ್ಯಾಂಗಲೂರ್ ಟಾಯಿಂಸ್’ನ ಸಿರಿಯುಳ್ಳ, ಘನವುಳ್ಳ ಮಂದಿಯ ಪುಟಗಳಲ್ಲಿ ಅವನ ಹೆಸರೂ ಬರಬಹುದಲ್ಲವೆ? ಹೊಸ ಬಗೆಯಲ್ಲಿ ಬದುಕಿನ ಅರ್ಥವನ್ನು ಕಂಡುಕೊಳ್ಳಲು ಇದಕ್ಕಿಂತ ಹೊಸ ಅವಕಾಶವಿನ್ನೆಲ್ಲಿದೆ? ಹಳೆಯ ನೆನಪುಗಳಲ್ಲಿ ಜಡ್ಡುಗಟ್ಟಿರುವ ಎಲ್ಲ ಬಿಂಬಗಳನ್ನು ಕಳಚಿ ಹೊಸತೊಂದು ಇಮೇಜನ್ನೇಕೆ ಇವನು ಹುಟ್ಟುಹಾಕಬಾರದು? ಪ್ರಣತಿಯ ಮಾತುಗಳನ್ನು ಕೇಳಿದ ಮೇಲಂತೂ ನಿರಂಜನ ಹಿಮಳನ್ನು ಪ್ರಣತಿಯೊಟ್ಟಿಗೆ ತೂಗಿ ನೋಡಲಿಕ್ಕೆ ತೊಡಗಿದ. ಬದುಕನ್ನು ಸಮಗ್ರವಾಗಿ ನೋಡದ ಹಿಮಳನ್ನು ಕುರಿತು ತಾನಿನ್ನೂ ಏಕಿಷ್ಟು ಭಾವುಕನಾಗುತ್ತೇನೆ? ಇಷ್ಟಾಗಿ ಅವಳನ್ನು ಪೂರ್ತಿ ಕಂಡರಿತಿದ್ದೂ. . . ಅವಳ ಸ್ವಭಾವಾದರೂ ಎಂಥದ್ದು! ಯಾವುದನ್ನೂ ನೇರವಾಗಿ ಓದಲಾಗದ ದ್ವಂದ್ವವುಳ್ಳಂಥದು. ಕೆಲವೊಮ್ಮೆ ತನ್ನನ್ನು ಘನತೆಯುಳ್ಳ ಗಟ್ಟಿಯನ್ನಾಗಿ ಕಂಡಿದ್ದರೆ, ಹಲವೊಮ್ಮೆ ಎಲ್ಲವನ್ನೂ ತೋರುವ ಗಾಜಿನ ಪದರಕ್ಕಿಂತಲೂ ಪಾರದರ್ಶಕವಾದ ತೆಳುಮೆಯೆಂದು ಬಗೆಯುವುದು. ಮೋಂಬತ್ತಿಯ ನೆತ್ತಿಯಲ್ಲಿ ಓಲಾಡುವ ಬೆಳಕಿನ ಬಿತ್ತದಂತಹ ಚಿತ್ತ ಅವಳದ್ದು. ತನ್ನೆದುರಿಗೆ ಸಿಗುವ ಎಲ್ಲವುಗಳ ನೆರಳು ನೆರಳನ್ನೂ ತೂಗಾಡಿಸಿ ತಡಕುವ ಜಾಯಮಾನ! ಎಂತಲೆ ಅವಳು ತಮ್ಮಿಬ್ಬರ ಒಲುಮೆಯ ಗಟ್ಟಿ ಕಟ್ಟನ್ನೂ ಬಿಚ್ಚಿ ಮದುವೆಯನ್ನೇ ಗೋಜಲು ಮಾಡಿ ದೂರವಾದದ್ದು. . . ಅದೂ ತಾನಾಗಿಯೇ ಸಲ್ಲದ ದುಗುಡದ ಮೋಡವನ್ನು ಹೊದ್ದು ದುಮ್ಮಾನದಿಂದ ದಟ್ಟಯಿಸಿ ಭೋರೆಂದು ಮಳೆ ಸುರಿದು ಸರಿದು ಹೋದದ್ದು. . . ಅದರ ಹುಚ್ಚು ನೆರೆಯಲ್ಲಿ ಹೇಳ ಹೆಸರೂ ನಿಲುಕದಂತೆ ಇಂದು ಕೊಚ್ಚಿ ಹೋಗಿಲ್ಲವೆ ತಾನು? ಅಂದು ಬಹಳ ಕಾಲ ನಿರಂಜನನ ಮನಸ್ಸು ಹಿಮ ಮತ್ತು ಪ್ರಣತಿ- ಇಬ್ಬರ ನಡುವೆ ತೂಗಾಡುತ್ತಿತ್ತು.
*
*
‘ಔh sಣoಠಿ iಣ, ಓiಡಿಚಿಟಿರಿಚಿಟಿ! ಂಜಿಣeಡಿ ಚಿಟಟ she is ಥಿouಡಿ ತಿiಜಿe’ ಪ್ರಣತಿ ತನ್ನ ಮಾತುಗಳನ್ನು ಹೆಕ್ಕಿ ಹೆಕ್ಕಿ, ತೂಗಿ ತೂಗಿ ನಿರಂಜನನ ಮುಂದಿಡುತ್ತಿದ್ದವಳು ಒಮ್ಮೆಲೆ ಕನಲಿದವಳಂತೆ ಹೇಳಿದಳು. ಅವನು ಅವಳನ್ನು ಭೆಟ್ಟಿ ಮಾಡುತ್ತಿದ್ದಂತೆ ತಮ್ಮಿಬ್ಬರ ಸುತ್ತ ಹಲವು ಕಣ್ಣುಗಳ ಹೊಂಚು ಬಾರಿಸ್ಟಾದ ಮೂರಡಿಗೆ ಮೂರಡಿಯ ಮೇಜಿನಲ್ಲಿ ನೆಟ್ಟಿರಬಹುದು ಎಂಬುದರ ಯೋಚನೆಯೂ ಇಲ್ಲದೆ ಸಶಬ್ದವಾಗಿ ತನ್ನ ದುಗುಡವನ್ನು ಹನಿದಿದ್ದ. ಹಿಮ ತನ್ನನ್ನು ಮತ್ತೆ ಕಸಿದುಕೊಳ್ಳಬಾರದು! ತಾನು ಮರಳಿ ಮತ್ತೆ ತೋರಿಕೆಯ ಬದುಕಿನಲ್ಲಿ ಜಾರಿಕೊಳ್ಳಬಾರದು! ಹಾಗಾಗಿ ಅವಳೊಟ್ಟಿಗೆ ಮತ್ತೆಂದೂ ಯಾವ ಭೇಟಿಯೂ ಬೇಡ. . .
ನಿರಂಜನನ ಮಾತುಗಳಿಗೆ ಪ್ರತಿಕ್ರಿಸಿದ ಪ್ರಣತಿಯ ದನಿಯಲ್ಲಿ ಏರಿಳಿತವಿರದ ಹದವಿತ್ತು. ಕದಡಿದ ರಾಡಿ ತಿಳಿಗೊಂಡಂತಹ ಸ್ಥಿತಿ ನಿರಂಜನ ಮನಸ್ಸಿಗಿದ್ದರೂ ತಳದಲ್ಲಿನ ಬಗ್ಗಡವನ್ನು ಅವನು ಮೊಗೆದು ಹೊರಹಾಕಿಲ್ಲವೆಂಬುದು ತನಗೆ ಗೊತ್ತಿರುವುದಷ್ಟೆ. ಆ ತಿಳಿ ಹಾಳೆಯ ಒಳಗೆ, ತಳವಿಲ್ಲದ ಹಳ್ಳದ ಗೋಡೆಗಳ ಕಂದರದಲ್ಲೆಲ್ಲೋ ಹೂಡಿಟ್ಟಿರುವ ಹಿಮಳನ್ನು ಕುರಿತಾದ ಗೀಳು ಅದೆಷ್ಟು ಎಂಬುದು ತನ್ನೊಬ್ಬಳಿಗಷ್ಟೆ ಗೊತ್ತು. ನಿರಂಜನ ಇನ್ನೂ ಅವಳ ಅಗಲಿಕೆಯನ್ನು ಒಪ್ಪಿಕೊಂಡಿಲ್ಲದ ಕಾರಣ ಎಲ್ಲ ದ್ವಂದ್ವಗಳನ್ನು ಹತ್ತಿಕ್ಕಿ ಅವನು ಹಿಮ ಮತ್ತೆ ಫೋನಿಸುತ್ತಿದ್ದಂತೆ ಅವಳನ್ನು ಭೆಟ್ಟಿ ಮಾಡಲೇಬೇಕು. ಅವಳು ಇವನ ಬದುಕಿನ ತೊರೆಯನ್ನು ಮತ್ತೆ ಸೇರುವುದಾದಲ್ಲಿ ಅವಳನ್ನು ಒಪ್ಪಿಕೊಳ್ಳಲೇಬೇಕು. ಆದರೆ ನಿರಂಜನನಲ್ಲಿದ್ದ ಹಮ್ಮೊಂದೆ ಪ್ರಣತಿಯ ಮಾತುಗಳನ್ನು ಒಪ್ಪುವುದಕ್ಕೆ ಬಿಡುತ್ತಿಲ್ಲ. ಪ್ರೀತಿಯಲ್ಲಿ ಇನ್ನೆಂತಹ ಹಮ್ಮು-ಬಿಮ್ಮು? . . .
ನಿರಂಜನ ಮೇಲು ಮಾತಿಗೆ ತನ್ನೊಳಗಿನ ಅಳುಕನ್ನು ಮುಚ್ಚುವಂತೆ ಏನೇನೋ ಸಮಜಾಯಿಷಿ ಹೇಳಿದ. ವಾಸ್ತವದಲ್ಲಿ ಅವನು ಹಿಮಳೊಟ್ಟಿಗೆ ಮತ್ತೊಂದು ಅನರ್ಥದ ಭೇಟಿಗೆ, ಅವಳ ಮತ್ತೊಂದು ತಿರಸ್ಕಾರಕ್ಕೆ ಸಿದ್ಧನಿರಲಿಲ್ಲ. ಪ್ರಣತಿ ಅವನಿಗೆ ಹಿಮ ಅನಿವಾರ್ಯವೆಂಬುದನ್ನು ನಿಚ್ಚಳವಾಗಿ ತಿಳಿಹೇಳಿದಳು. ಅವಳನ್ನು ಭೇಟಿ ಮಾಡುವ ಮೊದಲೇ ಅಲ್ಲಿ ತಿರಸ್ಕಾರವಿದೆಯೆಂದು ಹೇಗೆ ಗೊತ್ತು? ‘ Whಥಿ ಣಚಿಟಞ oಜಿ ಡಿeರಿeಛಿಣioಟಿ? Whಥಿ ಜoes oಟಿe ಡಿesigಟಿ beಜಿoಡಿe ಣಚಿಞiಟಿg uಠಿ ಣhe ಣಚಿsಞ? I ಞಟಿoತಿ iಣ is ಜiಜಿಜಿiಛಿuಟಣ. . . ಎusಣ imಚಿgiಟಿe. . !! Iಣ is oಟಿಟಥಿ ತಿheಟಿ ಚಿ ಛಿಚಿಣeಡಿಠಿiಟಟಚಿಡಿ iಟಿsಠಿiಣe oಜಿ iಣs suಜಿಜಿeಡಿiಟಿgs ಡಿuಠಿಣuಡಿes oಠಿeಟಿ iಣs ಛಿoಛಿಛಿooಟಿ iಣ emeಡಿges iಟಿ ಚಿ beಚಿuಣiಜಿuಟ buಣಣeಡಿಜಿಟಥಿ!’ ಕಂಬಳಿ ಹುಳ ತನ್ನ ಕೋಶವನ್ನು ಒಡೆದು ಅತೀವ ಕಷ್ಟದಿಂದ ಹೊರಬಂದರಷ್ಟೆ ಅದು ಚಿಟ್ಟೆಯಾಗಿ ಬಣ್ಣ ಬಣ್ಣದ ರೂಹುಗಳಲ್ಲಿ ಹರಿದಾಡಲು ಸಾಧ್ಯ. ಗರ್ಭದೊಳಗಿನ ಬೆಚ್ಚನೆಯ ಕೋಶ ನಿರಂಜನಿಗೆ ಬೇಕೋ? ಇಲ್ಲವೆ ಅದರಾಚೆಗಿನ ಸುಂದರವಾದ ಎಷ್ಟೆಲ್ಲ ಸ್ತರಗಳಲ್ಲಿ ತೀವ್ರವಾಗಿ ಅನುಭವಿಸಿ ಸವಿಯಬಹುದಾದ ಬದುಕೊ? ಮುಗಿಲುಗಳ ನಡುವೆ ತೂಗುವ ಹಕ್ಕಿಗೆ ನೆಲದಿಂದ ಗುಟುಕು ಹೆಕ್ಕಿದ ಮೇಲಷ್ಟೆ ಬಾನಾಟದ ಕೆಲಸ!
ಪ್ರಣತಿಯಿನ್ನೂ ಕೆಲವಾರು ದೃಷ್ಟಾಂತಗಳ ಮೈದಡವುತ್ತಿರುವಾಗಲೇ ಹಿಮಳ ಕರೆ ನಿರಂಜನ ಮೊಬೈಲಿನ ಮೌನವನ್ನು ಭೇದಿಸಿತು. ನಿರಂಜನ ಸಣ್ಣಗೆ ನಡುಗುತ್ತ ತನ್ನ ಢವಿಸುವ ಗುಂಡಿಗೆಯೊಳಗಿನ ಆಳದ ಮಾತುಗಳಿಗೆ ಬೆಲೆಯಿತ್ತು ಅವಳನ್ನು ಆ ಬಳಿಕದ ಒಂದು ತಾಸಿನಲ್ಲಿ ಷಾಪರ್ಸ್ ಸ್ಟಾಪ್‌ನ ಮಗ್ಗುಲಿಗಿರುವ ಎ.ಟಿ.ಎಂ. ಕೌಂಟರಿನ ಬಳಿ ಭೇಟಿಯಾಗುವುದಾಗಿ ಹೇಳಿದ. ನಿರಂಜನನಿಗೆ ಪ್ರಣತಿ ಆ ಭೇಟಿಯ ಯಾವುದೇ ಸರಣಿಯಲ್ಲಿ ಉದ್ವಿಗ್ನಗೊಳ್ಳಬಾರದೆಂದು ಹೇಳಿ ಅಲ್ಲಿಂದ ಅವನನ್ನು ಬೀಳ್ಕೊಟ್ಟಳು. ‘ಅಚಿಟಟ me ಚಿs sooಟಿ ಚಿs ಥಿou ಚಿಡಿe ಣhಡಿough!’
*
*
ಹನ್ನೆರಡೂವರೆಗೆ ನಿಯತಿಯಾದ ಸ್ಥಳದಲ್ಲಿ ನಿರಂಜನ ಒಳಗಿನ ಕೆಲವು ಸುಪ್ತ ತಲ್ಲಣಗಳಿಗೆ ಮೌನದಲ್ಲಿ ಕಂಪಿಸುತ್ತ ನಿಂತ. ಆರು ವರ್ಷಗಳ ತಮ್ಮ ಜೊತೆಯ ಆಪ್ತ ಕ್ಷಣಗಳಷ್ಟೇ ಈ ಭೇಟಿಯ ಬಂಡವಾಳವೆಂದು ಬೊಲೇರೋ ನಿಲ್ಲಿಸುವಾಗ ತನಗೆ ತಾನೇ ಒಮ್ಮೆ ಹೇಳಿಕೊಂಡಿದ್ದ. ಈ ಆರು ವರ್ಷಗಳಲ್ಲಿ ತನ್ನ ಬದುಕಿನಲ್ಲಿ ಏನೇನೆಲ್ಲ ಜರುಗಿ ಹೋಗಿದೆ. ಅದೂ ಎಷ್ಟು ಕ್ಷಿಪ್ರವಾಗಿ! ಹಿಮ ಅತಿ ಸಂಬಳದ ವಾಂಛೆಗಳ ಬೆನ್ನೇರಿ ಸವ್ವಾರಿ ಮಾಡಿದಷ್ಟೆ ವೇಗದಲ್ಲಿ. . . ಎಗ್ಗಿಲ್ಲದೆ ಹಿಗ್ಗುತ್ತ, ಇದ್ದುದರಲ್ಲಿ ಇನ್ನಷ್ಟು ತುರುಕಿಕೊಳ್ಳುತ್ತಿರುವ ಈ ಊರಿನ ದಾಪಿಗೆ ತಳುಕು ಹಾಕುವಂತೆ. . . ವಾಸ್ತವದಲ್ಲಿ ಅಂದುಕೊಂಡಿದ್ದಕ್ಕಿಂತ ಬೇಗಬೇಗನೆ ಕಡಲಾಚೆಯ ಯಾರದೋ ಎಚ್ಚರಗಳಿಗೆ ತನ್ನನ್ನು ಅನುವುಗೊಳಿಸಿಕೊಳ್ಳುತ್ತಿರುವ ಊರಿನ ಧಾವಂತ ಅವೆಷ್ಟು ಮನಸ್ಸುಗಳ ಜೋಡಿಯನ್ನು ಒಡೆದಿರಬಹುದು? ತನ್ನ ಮಾಟದ ಅಸಂಬದ್ಧತೆಯನ್ನೇ ತನ್ನಲ್ಲಿ ಹೂಡಿಕೊಂಡವರ ಮೇಲೂ ಝಳಪಿಸಿ ಎಷ್ಟು ಒಡನಾಟಗಳನ್ನು ಛಿದ್ರಿಸಿರಬಹುದು? ಎಷ್ಟು ಒಲುಮೆಗಳನ್ನು ದಿವಾಳಿಗೆಬ್ಬಿಸಿರಬಹುದು? ಎಷ್ಟು ಮುದ್ದುಗರೆವ ಪಿಸುಮಾತುಗಳ ಲಲ್ಲೆಗಳನ್ನು ಅಸಹನೆಯ ತಾರಕಕ್ಕೇರಿಸಿ ಬೀದಿಗುಂಟ ಅಬ್ಬರವನ್ನು ಮೊರೆಸಿರಬಹುದು? ತಾನು ಹೂಡಿಕೊಂಡಿರುವ ಮೋಜಿನ ಬೊಜ್ಜೇ ಅವೆಷ್ಟು ಒಡಲುಗಳ ಸುತ್ತ ಕೊಬ್ಬಿನ ಪದರಗಳಾಗಿ, ಅವೆಷ್ಟು ಬದುಕುಗಳಲ್ಲಿ ಅಸಮತೋಲನದ ವಜ್ಜೆಯಾಗಿ ಬಹಿರಂಗಗೊಂಡಿರಬಹುದು? ನಿರಂಜನ ಮೂರನೆಯ ಸಿಗರೇಟನ್ನು ಹೊತ್ತಿಸುತ್ತಿರುವಾಗಲೆ ಇದ್ದಕ್ಕಿದ್ದಂತೆ ವ್ಯಕ್ತಗೊಂಡ ಹಿಮ ಅದನ್ನು ಅವನ ಬಾಯಿಯಿಂದ ಕಿತ್ತೆಸೆದು, ‘ ನೀನಿನ್ನೂ ನಿನ್ನ ಚಾಳಿ ಬಿಟ್ಟಿಲ್ಲ ಅಲ್ಲವಾ?’ ಎಂದಳು.
ನಿರಂಜನನಿಗೆ ಒಮ್ಮೆಲೇ ಪ್ರತ್ಯಕ್ಷಗೊಂಡ ಹಿಮಳನ್ನು ನೋಡುತ್ತಿದ್ದಂತೆ ಬಿಸಿಲಿಗೆ ತೆರಹಿದ ಮಂಜಿನ ಘನದಂತೆ ಕರಗತೊಡಗಿದ. ಮಾತುಗಳೇ ಹೊರಡಲಿಲ್ಲ.
‘ನಿರಿ! ಅದೇನು ಹಾಗೇ ನಿಂತುಬಿಟ್ಟೆ? ನಾನು ಅದೇ ಹಿಮಾನೆ! ನಿನ್ನೊಟ್ಟಿಗೆ ಇಲ್ಲ ಅಷ್ಟೆ. ಇನ್ನು ಮೇಲೆ ಯಾವಾಗಲೂ ಇರೋಕ್ಕಾಗಲ್ಲ!!’ ಅವಳು ಉಲುಹು ಬಿಚ್ಚುತ್ತಿದ್ದಂತೆ ಕೊರಳು ವೇದನೆಯಿಂದ ನರಳಿದಂತಾಯಿತು. ‘ನೀನು ಊರಿಗೆ ಬರ್ತ್‌ಡೆ ವಿಷ್ ಹೇಳಲಿಕ್ಕೆ ಫೋನು ಮಾಡಿದ್ದೆಯಂತೆ. ನಿನ್ನ ಮೇಯಿಲ್ ಕೂಡ ಓದಿದೆ. Iಣ’s ಞiಟಿಜ oಜಿ ಣeಡಿಡಿibಟಥಿ ತಿeeಞeಟಿeಜ me ouಣ , ಓiಡಿi. . . ಈ ಮದುವೆ, ಒಡನಾಟ ಎಲ್ಲ ನಮ್ಮ ಥರದವರಿಗಲ್ಲ. ಆದರೂ ಅದೆಷ್ಟು ಚೆನ್ನಾಗಿದ್ದೆವಲ್ಲೋ ನಾವು? ಊoತಿ ಟಿiಛಿe iಣ ತಿಚಿs! ಏನು ಮಾಡೋದು ಹೇಳೂ? ನಿನಗೆ ನನಗೆ ಅಂತ ಸಮಯವೇ ಇರಲಿಲ್ಲ. ಮೂರು ಹೊತ್ತೂ ಕೆಲಸದ ಉಸಾಬರಿ. ಇಲ್ಲಾ ಅವರಿವರದ್ದು. ಙou ಠಿiಟಿಛಿheಜ ouಡಿ mಚಿಡಿಡಿiಚಿge, ಓiಡಿi. . . !!’ ಹಿಮಳಲ್ಲೂ ತಿಂಗಳುಗಳ ದುಗುಡ ಹೆಪ್ಪುಗಟ್ಟಿದ್ದುದು ಮೆಲ್ಲನೆ ಕರಗತೊಡಗಿತ್ತು. ನಿರಂಜನ ತನ್ನಲ್ಲಿಯೆ ರೂಢಿಸಿಕೊಂಡಿದ್ದ ಸಂಯಮದ ಒಡ್ಡನ್ನು ಒಡನೆಯೆ ಒಡೆದು ‘I miss ಥಿou, ಊimಚಿ! ಒiss ಥಿou so muಛಿh! ನೀನಿರೋವರೆಗೆ ನಾನು ಇಷ್ಟು ಮಿಸ್ಸ್ ಮಾಡ್ತೀನಿ ಅಂತ ಅಂದುಕೊಂಡೇ ಇರಲಿಲ್ಲ.’ ಎಂದು ಗಳಗಳನೆ ಅತ್ತುಬಿಟ್ಟ.
‘ಅಳುತ್ತೀ ಯಾಕೋ, ನಿರೀ? ನಿನಗದೇನು ಕಮ್ಮಿಯಾಗಿದೆ ಹೇಳೂ? ಎರಡು ಕಾರೂ, ಒಂದು ಬಂಗಲೇ, ಆಳೂಕಾಳೂ. . .! ನಿಮ್ಮವ್ವ! ನಿಮ್ಮಾಂಟೀ!! ಎಲ್ಲಾ ಇದ್ದಾರಲ್ಲಾ? ವೇಯ್ಟ್ ಲಾಸ್ ಪ್ರೋಗ್ರಾಂ ಬೇರೆ ಸೇರ್ಕೊಂಡು ತೆಳ್ಳಗೆ ಇನ್ನೊಂದು ಹಸೇ ಏರೋ ಹಾಗೆ ಮಿಂಚುತ್ತಾ ಇದ್ದೀ!’
‘ಹಂಗಿಸಬೇಡವೋ ಹಿಮಾ!! ನಾನು ಅನುಭವಿಸುತ್ತಾ ಇರೋದು ನನಗಷ್ಟೆ ಗೊತ್ತು!’
‘ಇನ್ನೇನು ಹೇಳಲಿ ಹೇಳು? ನನಗೂ ಬೇಜಾರಾಗಿಲ್ವಾ? ಯಾರೋ ನಮ್ಮ ಮೇಲೆ ಕಣ್ಣು ಹಾಕಿಬಿಟ್ಟರೋ ನಿರೀ. . . ! ಇನ್ನು ಯಾರು ಹೇಳು ನಿಮ್ಮ ಆಂಟೀ! She ಚಿಟತಿಚಿಥಿs bಡಿoughಣ ಟಿegಚಿಣive eಟಿeಡಿgಥಿ iಟಿಣo ouಡಿ home. ಂಟಿಜ ಥಿou ತಿhoಟಟಥಿ ತಿeಟಿಣ bಥಿ heಡಿ. ಇರಲೀ ಬಿಡು, ನಾವು ಇಷ್ಟೇ ಪಡಕೊಂಡು ಬಂದದ್ದು. ನಾನಂತೂ ನಮ್ಮಪ್ಪನ ಭಿಕ್ಷೆಯಲ್ಲಿದ್ದೀನಿ.’
‘ಹಿಮಾ! ಙou hಚಿve ಛಿhoseಟಿ ಣo be so. ನನ್ನನ್ನೇಕೆ ಬ್ಲೇಮ್ ಮಾಡೋದೂ?. . . ಸಾಲದ್ದಕ್ಕೆ ಮತ್ತೆ ಮತ್ತೆ ನಮ್ಮಮ್ಮ. . . ಆಂಟೀ. . . ಹಾಗಂತ ನಿಮ್ಮಪ್ಪ ಅಮ್ಮ ಏನು ಕಡಿಮೆ ಮಾಡಲಿಲ್ಲವಲ್ಲಾ? ಒಮ್ಮೆ. . . ಒಮ್ಮೆಯಾದರೂ ನಮ್ಮಿಬ್ಬರ ನಡುವೆ ಏನು ನಡೀತಾ ಇದೆ ಅಂತ ಬಂದು ನೋಡಿದರಾ ಹೇಳು? ನಾನೊಂದು ಮಾತು ಹೇಳ್ತೀನಿ ಕೇಳು. ಇದನ್ನು ಯಾರೂ ಸರೀ ಮಾಡಲಿಕ್ಕಾಗೋಲ್ಲ. We shouಟಜ hಚಿve heಟಠಿeಜ ouಡಿseಟves. ಈಗಲೂ ಕಾಲ ಮಿಂಚಿಲ್ಲ ಅಲ್ಲವಾ?’
‘ನೋಡು ಮೂರು ತಿಂಗಳಾದ ಮೇಲೆ ಥಿouಡಿ ತಿomಚಿಟಿ hಚಿs ಛಿome ಣo meeಣ ಥಿou. ಮತ್ತೆ ನಮ್ಮಪ್ಪ ಅಮ್ಮನ ವಿಷಯ ತೆಗೀತ್ತೀಯಾ. ನಾಚಿಕೆ ಆಗೋಲ್ಲಾ? ಐeಣ us ಣಚಿಟಞ someಣhiಟಿg ಟಿiಛಿe ಚಿಟಿಜ sತಿeeಣ!’
ನಿರಂಜನ ಅವಳ ಕಣ್ಣುಗಳ ಆಳಕ್ಕಿಳಿಯುವ ಪ್ರಯತ್ನವನ್ನು ಮಾಡಿದ. ಏನೂ ಸ್ಪಷ್ಟವೆನಿಸಲಿಲ್ಲ.‘ಸರಿ ಬಾ. ಒಳಗೆ ಹೋಗೋಣ. ಏನಾದರೂ ತಿಂತೀಯೇನು?’ ಹಿಮ ಇಲ್ಲವೆಂಬಂತೆ ಗೋಣು ಹಾಕಿದಳು. ‘ಒಳಕ್ಕೆ ಹೋಗಿ ಕೂತ್ಕೋಳ್ಳೋಣ. ಆಮೇಲೆ ಏನು ಮಾಡೋದು ಅಂತ ಡಿಸೈಡ್ ಮಾಡಬಹುದು.’
ಷಾಪರ್ಸ್ ಸ್ಟಾಪಿನ ಕೊನೆಯ ಅಂತಸ್ತಿನಲ್ಲಿರುವ ಕಾಫೀ ಷಾಪಿನಲ್ಲಿ ಇಬ್ಬರೂ ಎದುರುಬದುರಿಗೆ ಕುಳಿತವರು ಕೆಲಕಾಲ ಮಾತನಾಡಲಿಲ್ಲ. ಹಿಮ ನಿರಂಜನ ತಲೆಗೂದಲಿನಲ್ಲಿ ಅಲ್ಲಲ್ಲಿ ರೇಖಿಸಿದ್ದ ಕೆಂಚುಗೆರೆಗಳನ್ನು ನೋಡುತ್ತಿದ್ದಳು. ಇವನು ಅವಳ ಕೈಬೆರಳುಗಳಲ್ಲಿದ್ದ ಆರು ಉಂಗುರಗಳಲ್ಲಿ ತಾನು ಉಡುಗೊರೆಯಾಗಿ ಕೊಟ್ಟವೆಷ್ಟೆಂದು ಲೆಕ್ಕಿಸುತ್ತಿದ್ದ. ಕಷಾಯದಂತಹ ಕಾಫಿಗೆ ಬುರುಗಿದ ಕೆನೆಹಾಲನ್ನು ಬೆರೆಸಿ ಗುಟುಕಿಸುವಾಗಲಷ್ಟೆ ಹಿಮ ಮತ್ತೆ ಮಾತು ಬಿಚ್ಚಿದಳು. ‘ಈಗ ನಿನ್ನ ಲಾಯರ್‌ಗಳು ಯಾರು?’
‘ಇದ್ದಾರೆ ಒಬ್ಬರು. ನೀನು ಅಪಾಯಿಂಟ್ ಮಾಡಿರೋ ಅಷ್ಟು ಹೈ ಪ್ರೊಫೈಲ್ ಅಂತೂ ಇಲ್ಲ. ಇಷ್ಟಕ್ಕೂ ಅದರ ಯೋಚನೆ ಈಗೇಕೆ? ಃoಣh oಜಿ us ಞಟಿoತಿ ಣhಚಿಣ ತಿe ಛಿಚಿಟಿ ಟಿoಣ be ಣogeಣheಡಿ. ನಿನಗೆ ಈ ಮದುವೆ ಬೇಕಾದರೆ ನನಗೂ ಬೇಕು. ಇಲ್ಲವಾದರೆ ಇಲ್ಲ.’
‘ಆದರೂ ನಿರೀ, ನಾವೇಕೆ ಮ್ಯೂಚುವಲ್ ಕನ್ಸೆಂಟ್‌ನಲ್ಲಿ ಬೇರೆಯಾಗಬಾರದೂ?’
‘ಡಿವೋರ್ಸ್ ಬೇಕಾಗಿರೋದು ನಿನಗೆ. ನಾನಂತೂ ಕೇಳಿಲ್ಲ. ಈ ಮದುವೆ ನಿನ್ನ ಪಾಲಿಗೆ ಎಂದೋ ಮುಗಿದು ಹೋಗಿದೆ ಅಂತ ಎಲ್ಲೆಲ್ಲಿ ಹೇಳಿದ್ದೀಯಾ ಅನ್ನೋದು ನಿನಗೆ ಗೊತ್ತಿದೆ. ನೀನು ಜೊತೆಯಲ್ಲಿ ಇದ್ದಾಗಲೂ ನಾನು ಡಮ್ಮಿಯಾಗಿದ್ದೆ. ಈಗ ಉಳಿದಿರೋದು ಕಾನೂನಿನ ಠಸ್ಸೆ ಒಂದೆ. ಖಿhe ಡಿemಚಿiಟಿಜeಡಿ oಜಿ ಣhis ತಿeಜಜiಟಿg shಚಿಟಟ ಚಿಟso ಛಿeಚಿse oಟಿ iಣs oತಿಟಿ. . . iಟಿ iಣs oತಿಟಿ ಣime ಚಿಟಿಜ sಠಿಚಿಛಿe. ನೀನು ಜೊತೆಯಲ್ಲಿದ್ದಾಗ ನಾನು ಮಾಡಿದ ಸಹಮತದ ಪ್ರಸ್ತಾಪವನ್ನು ನೀನು ಯಾವಾಗಲೂ ವಿರೋಧಿಸಿದೆ. ಈಗ ಇನ್ನೆಂಥ ಕನ್ಸೆಂಟ್ ಹೇಳೂ? ನೀನು ಕೋರ್ಟಿನ ಬಾಗಿಲು ಬಡಿದಿದ್ದೀ. ನಾನು ಅದಕ್ಕೆ ಕಾಯ್ತೀನಿ. ಬದುಕಿನ ಸಾರವನ್ನೇ ಹೀರಿಕೊಂಡ ಈ ಮದುವೆಯಲ್ಲಿ ಇನ್ನುಳಿದಿರುವುದೆಲ್ಲ ತಂತಾನೇ ವ್ಯಯವಾಗಲಿ. ಆ ಶೇಷವನ್ನೂ ತಾನಾಗಿಯೆ ವ್ಯಯಗೊಳಿಸಿ ಕೊನೆಯಾಗಲಿ.’
ಹಿಮ ಕೂಡಲೆ ಅಸಹನೆಯಿಂದ ಎದ್ದು ನಿಂತು ಗಾಜಿನ ತೆರೆಗಳಿಂದಾಚಿಗಿನ ಆಕಾಶವನ್ನು ನೋಡತೊಡಗಿದಳು. ಅವಳ ಮುಖವನ್ನು ರಾಹು ಆವರಿಸಿದಂತಿತ್ತು. ನಿರಂಜನ ಅವಳ ಮಗ್ಗುಲಿಗೆ ಬಂದು ‘ಬಾ. ಕೆಳಗೊಂದು ಗಿಫ್ಟ್ ತಗೊಳ್ಳೋಣ.’ ಎಂದ. ಹಿಮ ಕೂಡಲೆ ಮುಖವರಳಿಸಿ ‘ನೀನು ನನಗೊಂದು ಲಿಪ್‌ಸ್ಟಿಕ್ ಬಯ್ ಮಾಡ್ತೀಯಾ?’ ಎಂದಳು. ಇಬ್ಬರೂ ನಿಧಾನವಾಗಿ ಮೆಟ್ಟಿಲಿಳಿದು ನೆಲ ಅಂತಸ್ತಿನಲ್ಲಿರುವ ಬೆಡಗಿನ ಆವರಣಕ್ಕೆ ಬಂದರು. ಹಿಮ ಕೆಲವಾರು ಲ್ಯಾಕ್ಮೆ, ರೆವ್‌ಲಾನ್‌ಗಳನ್ನು ಪರಿಶೀಲಿಸಿ ಒಂದನ್ನು ಆಯ್ದು ತುಟಿಗೆ ಮೆದ್ದಿ ನಿರಂಜನ ಅಭಿಪ್ರಾಯವನ್ನು ಕೇಳಿದಳು. ‘ಊoತಿ is iಣ?’
ನಿರಂಜನನಿಗೆ ನಾಲ್ಕೈದು ವರುಷಗಳ ಹಿಂದಿನ ತುಟಿಯ ರಂಗಿನ ಆಪ್ತ ಸಂದರ್ಭವೊಂದರ ನೆನಪಾಗಿ ಕಣ್ಣುಗಳು ಮತ್ತೆ ತೊಯ್ದವು. ‘ಹಿಮಾ! ಈಗಿಂದ ನಾನು ನಿನ್ನ ಗಂಡನಲ್ಲ. ಮದುವೆಗೆ ಮೊದಲಿನ ಹಾಗೆ ಬಾಯ್‌ಫ್ರೆಂಡ್ ಸಹ ಅಲ್ಲ. . . ನನ್ನ ಒಪೀನಿಯನ್ ಏಕೆ ಹೇಳು? ಐeಣ us hಚಿve iಣ biಟಟeಜ’ ಕ್ಯಾಷ್ ಕೌಂಟರಿನಲ್ಲಿ ಆರುನೂರು ಚಿಲ್ಲರೆಗೆ ಕ್ರೆಡಿಟ್ ಕಾರ್ಡ್ ಉಜ್ಜಿಸಿ ರುಜುಮಾಡಿ ಇಬ್ಬರೂ ಆಚೆ ಬಂದು ಪಾರ್ಕ್ ಮಾಡಿದ್ದ ಬೊಲೇರೋ ಹಿಂಬದಿಯ ಮರೆಯಲ್ಲಿ ನಿಂತರು. ಹಿಮ ಮೆಲ್ಲನೆ ಅವನ ಮೊಣಕೈಯಲ್ಲಿನ ನವಿರಿನ ಹುಲುಸನ್ನು ತಡವಿದಳು. ಅವನ ಕೈ ಹಿಂಜರಿಯಲಿಲ್ಲ. ಅವನ ಅದೇ ಕೈ ಅಷ್ಟೇ ಮೆಲ್ಲನೆ ಅವಳ ನಡುವನ್ನು ಬಳಸಿತು. ಒಂದು ಹಿತವಾದ ಅಪ್ಪುಗೆ. ಎಷ್ಟೋ ದಿನಗಳ ಹಿಂದೆ ಸ್ವಕೀಯ ಭ್ರಮೆಗಳಲ್ಲಿ ಮರೆಯಾಗಿದ್ದ ಪುಳಕದ ಮಧುರ ಸ್ಪಂದನವೊಂದು ಮತ್ತೆ ಮೈದಳೆಯಿತು. ಇಬ್ಬರೂ ಮುಂದುವರೆಯುವ ಮುನ್ನ ನಿರಂಜನ, ‘ಬೇಡ ಹಿಮಾ. . . ಮತ್ತೆ ನಾವು ಹೊಸ ಭರವಸೆಗಳನ್ನು ಹುಟ್ಟಿಸಿಕೊಳ್ಳುವುದು ಬೇಡ.’ ಅಂತಂದರೂ ಅವಳ ಬೆನ್ನು ತಡವುತ್ತ ಕಿವಿಯಲ್ಲಿ ಉಸುರಿದ. ‘Weಡಿe ಥಿou eveಡಿ iಟಿ ಟove ತಿiಣh me, ಊimಚಿ?’
ಹಿಮ ಕೊಂಚ ಹಿಂದೆ ಸರಿದು ಮೆಲುವಾಗಿ ದನಿದಳು. ‘I ತಿಚಿs ಚಿಟತಿಚಿಥಿs iಟಿ ಟove ತಿiಣh ಥಿou, ಓiಡಿi. ಇveಟಿ ಚಿಣ seveಟಿಣಥಿ. . . ಚಿಣ ಣhe ಟಚಿsಣ sಣಚಿges oಜಿ mಥಿ ಟiಜಿe I shಚಿಟಟ be iಟಿ ಟove ತಿiಣh ಥಿou. ಕೊನೆ ತನಕ ನಿನ್ನ ಪ್ರೀತಿಸ್ತೀನಿ!!’ ಅವಳ ಕಣ್ಣಿನಿಂದ ಕೆಲವು ಹನಿಗಳು ಅವನ ಭುಜವನ್ನು ಒದ್ದೆ ಮಾಡಿದವು. ಮತ್ತೆ ಒಮ್ಮೆಲೆ ಅವಳು ಹಿಂಜರಿದು ಅವಾಂತರದಿಂದ ಹೇಳಿದಳು. ‘ಹೊರಡುತ್ತೀನಿ. ಟೈಂ ಆಯಿತು.’ ನಿರಂಜನ ಮುಂದಕ್ಕೆ ಏನು ಹೇಳಲಾಗದೆ ಮೂಕನಾದ. ಅವನು ಮನಸ್ಸಿನಲ್ಲಿಯೆ ಮಾತು ಜೋಡಿಸುವಷ್ಟರಲ್ಲಿ ಹಾದಿ ಮಗ್ಗುಲಿಗೆ ಹರಿಯುತ್ತಿದ್ದ ಆಟೋವೊಂದನ್ನು ನಿಲ್ಲಿಸಿ ನಟ್ಟಿರುಳಿನ ಗಡಿ ದಾಟಿದ ಸಿಂಡರೆಲಾಳ ಗಡುವು ಹೊತ್ತವಳಂತೆ ಗಡಿಬಿಡಿಯಲ್ಲಿ ಕುಳಿತು ಲವ್ ಯೂ ಎಂದು ಮತ್ತೆ ಹೇಳಿ ಬೀಳ್ಕೊಂಡಳು. ಸರ್ಕಲ್ಲನ್ನು ಸುತ್ತಿ ಬಲಕ್ಕೆ ತಿರುಗುವವರೆಗೂ ನಿರಂಜನನ ದೃಷ್ಟಿ ರಿಕ್ಷಾದ ಬಡರುಬಡರಿನ ಭರದ ಬೆನ್ನು ಹತ್ತಿತ್ತು.
ನಿರಂಜನ ಡಾಮರು ಉಜ್ಜುವ ಚರಚರ ಚರಾಚರಗಳ ನಡುವೆ ಅಲ್ಲೇ ಕೆಲಕಾಲ ಸ್ತಬ್ದನಾದ. ಎಷ್ಟೋ ಹೊತ್ತು ಅಲ್ಲೇ ನಿಂತವನು ಹಬ್ಬದ ಪ್ರಯುಕ್ತದ ಸೋಡಿ ಮಾರಾಟಕ್ಕೆಂದು ದಟ್ಟಯಿಸಿದ್ದ ಸಂದಣಿಯಲ್ಲಿ ಒಂಟಿಯೆನಿಸಿದ. ಸುಮಾರು ಅರೆತಾಸು ಕಳೆದಿರಬೇಕು, ಸುತ್ತಲೂ ಇದ್ದ ಹಲವರ ಮಾತುಗಳ ನಡುವಿನ ಅವನ ಅನಿರ್ವಚನೀಯವನ್ನು ಸೀಳುವಂತೆ ಪ್ರಣತಿಯ ಕರೆ ರಿಂಗುಣಿಸಿತು.
*****