ಉನ್ನಿಕೃಷ್ಣನ್ ಬಂದುಹೋದ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಊರಿನಿಂದ ತುಸುವೇ ದೂರ ಕಡಲ ತೀರದ ಗುಡ್ಡದಂಚಿನಲ್ಲಿ ತೆಂಗಿನ ಮರಗಳ ನಡುವೆ ರಾಮತೀರ್ಥ ಇದೆ. ಸದಾ ಹರಿಯುವ ಸಿಹಿ ಝರಿಗೆ ಈಗಿತ್ತಲಾಗಿ ಸಿಮೆಂಟು ಕಟ್ಟೆ ಮೆಟ್ಟಿಲು ಕಟ್ಟಿ ಆಯತಾಕಾರದ […]

ಇಲ್ಲಿ ಒಂದು ರಾತ್ರಿ

ರಣಸೆಖೆಗೆ ಬೆಂದು ಕೆಂಪಾಗಿ ಸೂರ್‍ಯ ಓ ಅಲ್ಲೆಲ್ಲೋ ಮುಳುಗಿದಾಗ-ಇಲ್ಲಿ ರಾತ್ರಿಯಾಗುವದಂತೆ ಹಗಲಿಡೀ ಕಿಲ ಕಿಲ ನಕ್ಕ ಹೂಗಳು ಪಕಳೆಯೊಡ್ಡಿ ಬೆಳದಿಂಗಳಲ್ಲಿ ತೊಯ್ದು ನಕ್ಷತ್ರಗಳಾಗುವವಂತೆ ಮತ್ತು……. ಕನವರಿಸುವ ಕಟ್ಟಡಗಳ ಸಿಮೆಂಟು ಬ್ಯಾಂಡೇಜೊಳಗಿನ ಮಣ್ಣ ಹಸಿ ಗಾಯ […]

ನಲ್ಮೆ

“ನಿನ್ನೆದೆಯೆ ಜೇನ ನೀಡುವ ನಲ್ಮೆಯಿಂದೆನ್ನ ಒಲಿಸಿ ಮೀಸಲು ನಗೆಯ ಸೂಸಿ ಕರೆದೆ. ಇಂದೇಕೆ ಮೊಗಬಾಡಿ ವಿಹ್ವಲ ವಿಕಾರದಲಿ ನಿಂದಿರುವೆ ಚಂದುಳ್ಳ ಮಧುರ ಹೂವೆ?” “ಬೇರೊಂದು ದುರುದುಂಬಿ ಕೆಟ್ಟಗಾಳಿಯ ಸುಳಿಗೆ ಬಂದೆನ್ನ ಬಲುಮೆಯಲಿ ಬಲಿಗೊಂಡಿತು; ಅಯ್ಯೊ […]

ಮಳೆ ತಂದ ಹುಡುಗ

ಆ ಸೀಮೆ ನೋಡಿ ನಮಗೆ ಬಹಳ ನಿರಾಸೆ ಮತ್ತು ಆಶ್ಚರ್ಯವಾಯಿತು. ಒಂದು ಗಿಡ ಇಲ್ಲ, ಮರ ಇಲ್ಲ, ಅಂಗೈಯಗಲ ಹಸಿರಿಲ್ಲ. ಕ್ಷಿತಿಜರಿಂದ ಕ್ಷಿತಿಜದವರೆಗೆ ಬರೀ ಮರಡಿ. ನೋಡಿದರೆ ಅನಂತಕಾಲದಿಂದ ಈ ಪ್ರದೇಶ ಮಳೆಯನ್ನೇ ಕಂಡಿಲ್ಲವೆಂಬಂತಿತ್ತು. […]

ಪ್ರಯಾಣ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಮರಕ್ಕೆ ಕಾಲೊ ರೆಕ್ಕೆಯೊ ಇದ್ದಲ್ಲಿ ಅದಕ್ಕೆ ಕೊಡಲಿ ರಂಪಗಳ ಭಯವಿಲ್ಲ ಸೂರ್‍ಯನಿಗೆ ರೆಕ್ಕೆಯೊ ಕಾಲೋ ಇಲ್ಲದೆ ಮುಂಜಾವಿನ ಲೋಕಕ್ಕೆ ಬೆಳಕು ಹೇಗೆ? ಸಾಗರದ ಉಪ್ಪು ನೀರು ಚಿಮ್ಮದೆ […]

ಮಿಲನ

ಎರಡೆದೆಗಳು ತುಡಿಯುತ್ತಿವೆ ಪ್ರೇಮಾಂಬುಧಿಗೆಳಸಿ ಆ ಗಂಗಾ ಯಮುನೆಯರೂಲು ಚಿರ ಸಂಗಮ ಬಯಸಿ. ನಡುದಾರಿಗೆ ಅಡ್ಡೈಸಿವೆ ಗುಡುಗಾಡಿವೆ ಮುಗಿಲು ಹೆಡೆಯೆತ್ತುತ ಪೂತ್ಕರಿಸಿದ ಬಿರುಗಾಳಿಯ ಹುಯಿಲು. ನಿಡು ಬಯಕೆಯ ಹಿಂದೂಡಿರೆ ಹರಿಗಡಿಸಿರೆ ಸೋಲು ಗಿರಿದರಿಗಳು ಅವ್ವಳಿಸಿರೆ ತಿರುಗಣಿಯೊಲು […]

ನೆನಹು-ನಲ್ಗನಸು

ಏಕೊ ಏಕಾಂತದಲಿ ಏಕಾಕಿಯಾಗಿರಲು ಮೂಕ ಶೋಕದ ಚಿತ್ರ ಕಣ್ಣ ತಾಗಿ, ಮನದ ನೀರವ ಬಾನ ನಡುವೆ ಬಣ್ಣದ ಮೋಡ ಸುಳಿದು ನುಸುಳುವದಯ್ಯ ದೀನವಾಗಿ. ನೆಲದ ಸುಂಟರಗಾಳಿ ತುಂಟತನದಲಿ ದಾಳಿ- ಯಿಡಲು ಚದುರಿದ ಮೋಡ ದಿಕ್ಕುಪಾಲು! […]

ಅಪ್ಪ

ಎಂದಿನ ಹಾಗೆಯೇ ದೂರ, ಪೂರ್ವ ದಿಕ್ಕಿನಲ್ಲಿ, ಮುರ್ಕುಂಡಿ ದೇವಸ್ಥಾನವನ್ನು ಹೊತ್ತುನಿಂತ ಗುಡ್ಡದಾಚೆಯ ಆಕಾಶ ಕೆಂಪೇರುವ ಮೊದಲೇ ಭರತನು ಎದ್ದ. ಪ್ರಾತರ್ವಿಧಿಗಳನ್ನು ಮುಗಿಸಿ, ರಸ್ತೆಯಂಚಿನ ದೊಡ್ಡ ಅಶ್ವತ್ಥಕ್ಕೆ, ಅಂಗಳದಲ್ಲಿಯ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಹಿತ್ತಲ […]

ಅಜ್ಜೀ ಕವಿತೆ

ಮೊನ್ನೆ ರಜದಲ್ಲಿ ಕುತೂಹಲಕ್ಕೆಂದೇ ಮಲೆನಾಡ ಮೂಲೆಯ ಒಬ್ಬಂಟಿ ಅಜ್ಜಿಮನೆಗೆ ಹೋಗಿದ್ದೆ ಸುತ್ತಲೂ ಒಸರುವ ತೇವ ಹಸಿರು ಹೊಗೆ ಜಿಗಣೆ ತನ್ಮಧ್ಯೆ ಅಜ್ಜಿ ಸುಟ್ಟ ಹಲಸಿನ ಹಪ್ಪಳ ಹದಾ ಮೆಲ್ಲುತ್ತಿರುವಾಗ ಮೆತ್ತಗೆ ಕೇಳಿದಳು- ಏನೋ ಮರೀ […]