ಹೆದ್ದಾರಿಯ ನಟ್ಟ ನಡುವೆ ಎದುರು ಬದುರು ಬಸ್ಸುಗಳಿಗೆ ಮೊಟ್ಟ ಮೊದಲ ನೋಟದಲ್ಲೆ ಪ್ರೇಮ ಉಕ್ಕಿತು ತಡೆಯಲಾಗದೆ ಎರಡು ಮೈಮರೆತು ಭರದಿಂದ ಮುಗಿಸಿಬಿಟ್ಟವು ಅಲ್ಲಿ ಪ್ರಥಮ ಚುಂಬನ ಪಾಪ ಒಳಗಿದ್ದ ಎಲ್ಲರದು ದಂತಭಗ್ನ *****
ವರ್ಗ: ಪದ್ಯ
ರಾಷ್ಟ್ರದ ಕರೆ
ಹಸುರಿನ ಹೂವಿನ ಹೊದರಿನ ಒಳಗೆ ಬುಸುಗಟ್ಟಿದೆ ಘನ ಘಟಸರ್‍ಪ, ನುಸುಳುತ ಕಾಲಿನ ಕೆಳಗೇ ಬಂದಿದೆ ಹಿಮಗಿರಿ ಕೂಡವಿತು ದೀರ್‍ಘತಪ. ‘ಬರಿ ಮೈ ತಣ್ಣಗೆ, ಮನದಲಿ ಬಿಸಿ ಹಗೆ’ ಉಸಿರೋ ಮೋಸದ ಬೆಂಕಿ ಬಲೆ! ‘ಹೊಸನಾತೆ’ನ್ನುತ […]
ಹೃದಯಕ್ಕೆ ಸಾವಿರ ನಾಲಗೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಅವನು ನಿದ್ರಿಸುತ್ತಿದ್ದ ಹಾಗೆ ಕಂಡ ತೋಟದಿಂದ ನಾನು ಕೂಗಿದೆ- “ಬೇಗ ಬೇಗ ಬಾ. ಕದ್ದ ಹಣ್ಣು ನನ್ನಲ್ಲಿದೆ” ಆ ಕಳ್ಳ ನಿದ್ರಿಸುತ್ತಿರಲಿಲ್ಲ ಜೋರಾಗಿ ನಕ್ಕು ಹೇಳಿದ- […]
ವಿಶ್ವಗಾನದ ಬೆಳಕು
೧ ಗಾಳಿ-ಬೆರಳುಗಳಿಂದ ಆ ಮಹಾಕಾಶವಿದೊ ಸೋಕುತಿದೆ ನೆಲದ ಮೈಯ- ಪುಟ್ಟ ಎದೆ ಜಗದಗಲ ಬಾಯ್ ಬಿಟ್ಟು ನೋಡುತಿದೆ ಆಕಾಶಕೊಡ್ಡಿ ಕೈಯ! ಜಗದ ಪಾತ್ರೆಯು ಮತ್ತೆ ತೆರವಾಗಿ ತುಂಬುತ್ತಿದೆ ವಿಶ್ವಗಾನದನಂತ ಸೆಲೆಗಳಿಂದ; ಗಿರಿ, ಕೊಳ್ಳ, ಕಾನುಗಳ […]
ಕೃಷ್ಣಾವತಾರ
ವಸುದೇವ-ದೇವಕಿಯರಂತರ್‍ಭಾವದಿ ಭಗವಜ್ಜ್ಯೋತಿಯು ಹೊತ್ತಿರಲು ಗಾಳಿಮಳೆಯು, ಕಾರ್‍ಗತ್ತಲು, ಕಾರಾಗೃಹವೇ ಬಾಗಿಲು ತೆರೆದಿರಲು, ತುಂಬಿದ ಯಮುನೆಯು ಇಂಬಾದಳು, ಬಾ, ‘ಅಂಬಾ’ ಎಂದಿತು ಗೋಕುಲವು ಶಂಖ, ಚಕ್ರ, ಗದೆ, ಪದ್ಮಧಾರಿ ಕೂಸಾಗಲು ಹರಿಯಿತು ವ್ಯಾಕುಲವು. ಬೆಣ್ಣೆ ಮೊಸರು ತಿಂದಣ್ಣೆವಾಲು […]
ಒಂದು ಚರಮಗೀತೆ
ಹೊಳೆವ ಹೊಂಗನಸುಗಳ ಶಬ್ದ ಸಂಕೋಚಗಳ ದಟ್ಟ ನಟ್ಟಿರುಳ ನಡುವೆ ಒಂದು ಕವಿತೆ ಆತ್ಮಹತ್ಯೆ ಮಾಡಿಕೊಂಡಿತು ಮಾತುಗಳು ಢಿಕ್ಕಿ ಹೊಡೆದು ತೂತಾಗಿ ಕೂತು ಪರಡಿಗಳ ತುಂಬೆಲ್ಲ ಬಣ್ಣದ ಕನ್ನಡಕ ಸುತ್ತಾಮುತ್ತಾ ಎಲ್ಲಾ ಚಿನ್ಹೆಗಳ ಚಿಲಕ ಗೋದಾಮಿನ […]
ಸಮಾಧಿ ದರ್‍ಶನ
ಆ ಕೋಣೆಯಿಂದ ಕೆಳಗಿಳಿದು ಬಂದು ಈ ಮೇಣೆಯಲ್ಲಿ ಕುಳಿತು ಎಲ್ಲ ವೀಣೆದನಿ ಹಿಂದೆ ಇರುವ ಓಂಕಾರದಲ್ಲಿ ಬೆರೆತು, ಸ್ವಪ್ರಕಾಶದಲಿ ಇರುಳ ಬೆಳಗಿ, ಬೆಳಗಿನಲಿ ಶಾಂತವಾಯ್ತು ನೂರು ಚಿಕ್ಕೆ ಚಂದ್ರಮರ ಪಕ್ಕದಲಿ ಚೊಕ್ಕ ಬೆಳ್ಳಿ ಬೆಳಕು. […]
ಸಮುದ್ರದ ಧೂಳು ಮತ್ತು ಸುಖದ ಸುಗ್ಗಿ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಆ ಸುಂದರಾಂಗ ನನ್ನ ಕೈಗೊಂದು ಕಸಪೊರಕೆ ಕೊಟ್ಟು ಹೇಳಿದ : ಸಮುದ್ರದ ಧೂಳು ಗುಡಿಸು ಆಮೇಲೆ ಪೊರಕೆ ಬೆಂಕಿಗೆ ಹಾಕಿ ಉರಿವಾಗ ಹೇಳಿದ : ಆ […]
ಪುಷ್ಪಾಂಜಲಿ
ಸ್ವಾಮಿಯಡಿಗೆ ಶಿರಬಾಗಿ ಬಂದೆವಿದೊ ಎಲ್ಲ ಸೀಮೆಯಿಂದ, ಅರಿವು-ಮರೆವು ಕಣ್ದೆರೆದು ಕರೆದ ಆ ಪೂರ್‍ವಸ್ಮರಣೆಯಿಂದ. ನೀಲದಲ್ಲಿ ತೇಲಾಡೆ ಗಾಳಿಪಟ ಕೃಪಾಸೂತ್ರದಿಂದ. ಕಂಡೆವೇಸೊ ನೆಲ-ಜಲದ ಚೆಲುವ ನೀವಿತ್ತ ನೇತ್ರದಿಂದ. ಎತ್ತರೆತ್ತರಕೆ ಹಾರಿ ಏರಿದರು ಕೋತಿ ಹೊಡೆಯದಂತೆ, ದಿಕ್ಕು […]
