ಕಾಲ ನಿಲ್ಲುವುದಿಲ್ಲ

೧ ಈ ಕಾಲನೆಂಬುವ ಪ್ರಾಣಿ ಕೈಗೆ ಸಿಕ್ಕರೆ ಚೆನ್ನಾಗಿ ಥಳಿಸಬೇಕೆಂದಿದ್ದೆ; ಎಲ್ಲೊ ತಲೆಮರೆಸಿಕೊಂಡು ಓಡಾಡುತಿದ್ದಾನೆ. ಆಕಾಶದಲ್ಲಿ ಮಿಂಚಿ, ಭೂಕಂಪದಲ್ಲಿ ಗದಗದ ನಡುಗಿ, ಜ್ವಾಲಾಮುಖಿಯೊಳಗೆ ಸಿಡಿದು ನುಚ್ಚುನೂರಾಗಿ, ನದಿನದಿಯ ಗರ್‍ಭವ ಹೊಕ್ಕು, ಮಹಾಪೂರದಲಿ ಹೊರಬಂದು ನಮ್ಮೆದೆಯಲ್ಲಿ […]

ಅಲರ್‍ಜಿ

ಈ ಅಲರ್‍ಜಿ ಯ ಮರ್‍ಜಿ ಕಾಯುವದು ಎಷ್ಟು ಅಯ್ಯೋ ಎಷ್ಟು ಕಷ್ಟ ಪುಷ್ಪ ಪರಾಗ ಸೋಪು ನೊರೆ ಹಬೆ ಹಬೆ ಉಪ್ಪಿಟ್ಟು ಹೀಗೆ ಬಿಸಿಲು ಹಾಗೆ ಚಳಿ ಮಳೆ ಅಂತ ದೋಸ್ತ ದೋಸ್ತಿಯರ ಮಧ್ಯ […]

ಜಗದೇಕಮಲ್ಲ

ಯಾವುದಕ್ಕೂ ಇವಗೆ ಸಂಪೂರ್‍ಣ ಸ್ವಾತಂತ್ರ್ಯ- ಬೇಕಾದಷ್ಟು ಉದ್ದ ನಾಲಗೆಯ ಹರಿಬಿಡಬಲ್ಲ, ಯಾರೆಷ್ಟು ಒದರಿಕೊಂಡರೂ ಕೇಳಿಸದ ಲಂಬಕರ್‍ಣ. ರಸ್ತೆಯಲಿ ಬದಿಗೆ ನಡೆದವರ ಮೇಲೆಯೇ ಕಾರು ಹಾಯಿಸಬಲ್ಲ; ಅದಕೆ ಬ್ರೇಕಿಲ್ಲ. ಸೀದಾರಸ್ತೆ ಇವನೆಂದೂ ಕಂಡುದಿಲ್ಲ. ಬೇಕಾದವರನೆತ್ತಿ ಮುಗಿಲಿಗೆ […]

ಕಾಲಪುರುಷನಲ್ಲಿ ಕವಿಗಳ ಕೋರಿಕೆ

ಏನಮ್ಮ ಕಾಲಪುರುಷ ನಿನ್ನ ಮುಖದರುಶನವನೊಮ್ಮೆ ದಯಪಾಲಿಸಯ್ಯ. ಕಣ್ತುಂಬ ನೋಡಿ, ನಿನ್ನ ರೂಪವನೊಮ್ಮೆ ಅಚ್ಚೊತ್ತಿಕೊಳ್ಳುವೆವು ಹಣೆಯ ಪಾದಕೆ ಹಚ್ಚಿ ನಮಿಸುವೆವು ಸಾಷ್ಟಾಂಗವೆರಗುವೆವು, ಆಯಿತೋ? ಈ ಸೃಷ್ಟಿ ಜೊತೆಗೇ ನಿನ್ನ ರಥವೂ ಹೊರಟು ಬಂದಿಹುದು- (ಉರುಳುತಿದ ಕುರುಡು […]

ಯುಗ ಯುಗದ ಹಾಡು

ಯುಗ ಯುಗಕೂ ಉರುಳುತಿಹುದು ಜಗದ ರಥದ ಗಾಲಿ, ಹಗಲು ಇರುಳು ಮರಳಿ ಮಸೆದು ಸಾಹಸ ಮೈತಾಳಿ. ಕಾಡು-ನಾಡು, ದೇಶ-ಕೋಶ ಭಾಷೆ-ಭಾವ ದಾಟಿ, ಭೂಮಿ-ಬಾನು, ಬೆಂಕಿ-ನೀರು ಗಾಳಿ-ರಾಟಿ-ಧಾಟಿ. ನವ ಜನಾಂಗ ಮೂಡಿ, ಮೊಳಗಿ ಬದುಕು ತಿದ್ದಿ […]

ಜೀವರಸಾಯನಶಾಸ್ತ್ರ

ಜೀವರಸಾಯನಶಾಸ್ತ್ರವನ್ನು ನಾನೀಗ ಅಭ್ಯಸಿಸುತ್ತಿದ್ದೇನೆ….. ಜೀವರಸಾಯನಶಾಸ್ತ್ರಕ್ಕೆ ಜೀವವಿಲ್ಲ ಭವಿಷ್ಯದ ಹೊಳಹು ಮತ್ತೆ ಅವಶೇಷದ ಅರಿವು ಹೀಗೆ ಯಾವ ಅವಿರ್‍ಭಾವವೂ ಇಲ್ಲ ಇದಕ್ಕೆ ಪುರಸೊತ್ತಿಲ್ಲದೆ ಮರೆಯಲ್ಲಿದ್ದುದನ್ನ ಸರಸರ ತೆರೆಯಮೇಲೆ ತಂದುಬಿಟ್ಟು ಹೋಗುವದೊಂದೇ ಗೊತ್ತು. ಪ್ರಯೋಗಕ್ಕೆ ಸಿಕ್ಕಿ ನರಳಿ […]

ಭಾವಕೇಂದ್ರ

ನೂರು ಹೂಗಳ ಕಂಪು ತೇಲುತಿದೆ ಗಾಳಿಯಲಿ ಹೀರಿಕೋ; ಅಲ್ಲಿಳಿದ ಮಳೆಯ ನೀರು ಇಲ್ಲಿ ಬಾವಿಗೆ ಸೋಸಿ ಬಂದಿಹುದು, ಸೇದಿಕೋ: ಕಾಣುವುದೆ ಈ ಗಿಡದ ಬುಡದ ಬೇರು? ಸುತ್ತು ಭೂಮಿಯ ಸಾರ ಇದರ ಆಹಾರ; ಹೂ […]

ಹೊಸ ಬಾಳಿನ ಯೋಜನೆ

೧ ಇದು ನೆಲದ ತುಂಡಲ್ಲ ಐದು ಖಂಡದ ಅಖಂಡ ಜೀವ ಪಿಂಡ. ಇದರ ಬದುಕಿನ ಮೇರೆ ಭೋರ್‍ಗರೆವ ಸಾಗರವು ಜೊಂಡು ಪಾಚಿಯ ಚಿಕ್ಕ ಹೊಂಡವಲ್ಲ. ವಿಶ್ವದಂಚಿನವರೆಗು ತೇಲಿಬಿಡು ನೌಕೆಗಳ ಸಪ್ತಸಾಗರಗಳನು ಸುತ್ತಿಬರಲಿ; ಕಳಿಸಿದರೆ ಕಳಿಸು […]

ಅಂತೂ ಕೊನೆಗೆ ಬಂತು ಮಳೆ

ಅಂತೂ ಕೊನೆಗೆ ಬಂತು ಮಳೆ- ತಂತಿ ವಾದ್ಯವ ನುಡಿಸು, ಮದ್ದಳೆಯ ಬಡಿ, ಹೂಡಿ ಕೇಕೆ. ಓಡಿ ಹೋಗುವ ಮೋಡಗಳ ಹಿಡಿದು ಹಿಂಡು. ಬಳುಕಿ ಬಾಗುವ ಮಳೆಯ ಸೆಳಕುಗಳ ಸೇವಿಗೆಯ ಸಿವುಡು ಕಟ್ಟಿಡು; ಬೇಕು ಬೇಕಾದಾಗ […]

ಮಾನಭಂಗ

ಬೆಳಕಿನ ನೂಲುಗಳ ಥರ ಥರ ಬಣ್ಣದಲದ್ದಿ ನೇಯುತ್ತಿದ್ದ ಸೂರ್‍ಯ ನಿನಗೊಂದು ಸೀರೆ ಭೂಮೀ ನಿನ್ನ ಮೇಲೇ ಹಠಾತ್ತನೆ ರಾತ್ರಿ ಬಂದು ಹರಿದೊಗೆಯಿತದನ್ನ ನಿರತ ಸೂರ್‍ಯನನ್ನೊದ್ದು ಕಡಲಿನೊಳಗೆ ಅವ ಬಣ್ಣ ತುಂಬಿದ ಕೈಲಿ ನೀರ ಬಡಿಬಡಿದು […]