ಉನ್ನಿಕೃಷ್ಣನ್ ಬಂದುಹೋದ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಊರಿನಿಂದ ತುಸುವೇ ದೂರ ಕಡಲ ತೀರದ ಗುಡ್ಡದಂಚಿನಲ್ಲಿ ತೆಂಗಿನ ಮರಗಳ ನಡುವೆ ರಾಮತೀರ್ಥ ಇದೆ. ಸದಾ ಹರಿಯುವ ಸಿಹಿ ಝರಿಗೆ ಈಗಿತ್ತಲಾಗಿ ಸಿಮೆಂಟು ಕಟ್ಟೆ ಮೆಟ್ಟಿಲು ಕಟ್ಟಿ ಆಯತಾಕಾರದ […]

ಮಳೆ ತಂದ ಹುಡುಗ

ಆ ಸೀಮೆ ನೋಡಿ ನಮಗೆ ಬಹಳ ನಿರಾಸೆ ಮತ್ತು ಆಶ್ಚರ್ಯವಾಯಿತು. ಒಂದು ಗಿಡ ಇಲ್ಲ, ಮರ ಇಲ್ಲ, ಅಂಗೈಯಗಲ ಹಸಿರಿಲ್ಲ. ಕ್ಷಿತಿಜರಿಂದ ಕ್ಷಿತಿಜದವರೆಗೆ ಬರೀ ಮರಡಿ. ನೋಡಿದರೆ ಅನಂತಕಾಲದಿಂದ ಈ ಪ್ರದೇಶ ಮಳೆಯನ್ನೇ ಕಂಡಿಲ್ಲವೆಂಬಂತಿತ್ತು. […]

ಅಪ್ಪ

ಎಂದಿನ ಹಾಗೆಯೇ ದೂರ, ಪೂರ್ವ ದಿಕ್ಕಿನಲ್ಲಿ, ಮುರ್ಕುಂಡಿ ದೇವಸ್ಥಾನವನ್ನು ಹೊತ್ತುನಿಂತ ಗುಡ್ಡದಾಚೆಯ ಆಕಾಶ ಕೆಂಪೇರುವ ಮೊದಲೇ ಭರತನು ಎದ್ದ. ಪ್ರಾತರ್ವಿಧಿಗಳನ್ನು ಮುಗಿಸಿ, ರಸ್ತೆಯಂಚಿನ ದೊಡ್ಡ ಅಶ್ವತ್ಥಕ್ಕೆ, ಅಂಗಳದಲ್ಲಿಯ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಹಿತ್ತಲ […]

ಮಣ್ಣಿನ ಮಕ್ಕಳು

“ಹಿಡಿ ಸಿವುಡೋ ಕುಡಗೋಲೋ ಮಕ ಬಾಡ್ಯೊ ಮೈ ಬಾಡ್ಯೋ ಜಡನಾದ್ಯೊ ಮೈಯೊ ಹಾರಿ ಜಡದಂಗೊ………… ಹೋ!” ಮಲ್ಲಪ್ಪನ ಹಂತಿಯ ಹಾಡು ಸುತ್ತು ಮುತ್ತಲಿನ ಹೊಲದಲ್ಲಿದ್ದವರಿಗೂ ಕೇಳಿಬರುತಿತ್ತು. ಮೇಟಿಯ ಸುತ್ತಲೂ ದನಗಳು ತಿರುಗಾಡಿದಂತೆ ಅವುಗಳ ಕಾಲ್ತುಳಿತಕ್ಕೆ […]

ಓಡಿ ಹೋದವನನ್ನು ಹುಡುಕ ಹೊರಟವರು

ಆಶ್ರಮ ಶಾಲೆಯಲ್ಲಿದ್ದ ಕಾನ್‌ತೋಟದ ಹಸಲರ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂಬುದು ತಿಳಿದಾಗ ಸೋಮಣ್ಣ ಬೇಲಿಯ ಮೇಲೆ ಬಟ್ಟೆ ಒಣಹಾಕುತ್ತಿದ್ದ. ನಿನ್ನೆ ರಾತ್ರಿ ಇದ್ದನಂತೆ, ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತಿದ್ದನಂತೆ………. ಆದರೆ ಮುಂಜಾನೆಯ ಪ್ರಾರ್ಥನೆಗೆಂದು ಎಲ್ಲ […]

ಪ್ರಾಣಿಗಳು

ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ […]

ಕರಿವೇಮಲ

ಕರಿವೇಮಲದ ವೆಂಗಳರೆಡ್ಡಿಯನ್ನು ನೋಡಬೇಕೆಂಬ ನನ್ನ ಆಸೆ ಇನ್ನೊಂದೆರಡು ತಿಂಗಳಿಗೆ ದಶಮಾನೋತ್ಸವ ಆಚರಿಸುತ್ತದೆ. ನಾನು ಯಾವತ್ತು ಈ ಪವಿತ್ರ ಕೆಲಸಕ್ಕೆ ಸೇರಿದೆನೋ ಆವತ್ತಿನಿಂದಲೇ ಈ ಪ್ರಸಿದ್ಧ ಜಮೀನ್ದಾರರ ಬಗ್ಗೆ ತಲೆ ಕೆಡಿಸಿಕೊಂಡೆ.  ನಾನು ವಾಸಕ್ಕಿದ್ದ ಮನೆಯ […]

ಒಪೆರಾ ಹೌಸ್

ಚೌಪಾಟಿ ಸಮುದ್ರದಿಂದ ಕೂಗಳತೆ ದೂರದಲ್ಲಿರುವ ಒಪೆರಾ ಹೌಸ್ ಚಿತ್ರಮಂದಿರದ ಹಳೇ ಕಟ್ಟಿಗೆಯ ಚಿತ್ತಾರದ ಕಮಾನಿರುವ ಅಪ್ಪರ್ ಸ್ಟಾಲ್‍ನಲ್ಲಿ ಕೊನೆಯ ಆಟದ ನಂತರ ಕಸ ಹೊಡೆಯುತ್ತಿದ್ದಾಗ ಇಂದ್ರನೀಲನಿಗೆ ಸೀಟಿನ ಅಡಿಗೆ ಸಿಕ್ಕಿದ ಆ ಚೀಲ ತುಸು […]

ಅಶೋಕ ಎಪಿಸೋಡ್

ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. *********** ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ […]

ಕುಮಟೆಗೆ ಬಂದಾ ಕಿಂದರಿಜೋಗಿ

ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು […]