ಒಕ್ಕಣಿಕೆ

ಮನೆಯ ಮೆಟ್ಟಿಲು ತುಳಿಯುತ್ತಿದ್ದಂತೆಯೇ `ಅಜ್ಜಿ ಇದ್ದಾರೆಯೇ?’ ಎಂದು ಕೇಳಿದ ಪ್ರಶ್ನೆಗೆ ಅವರ ಮಗಳು ವಾಸಂತಿ ಎದ್ದ ರಭಸ, ಏಳುವಾಗ ಸೀರೆ ಕಾಲಿಗೆ ತೊಡರಿ ಮುಗ್ಗರಿಸಿದ್ದು, ಅವಳ ಕಣ್ಣಂಚಿನಲಿ ತಟ್ಟನೆ ತುಂಬಿ ನಿಂತ ಹನಿ – […]

ಹಗಲು ಗೀಚಿದ ನೆಂಟ

ನೆಗಡಿ ಕವುಚಿಕೊಂಡಿತ್ತು. ಮೂಗು ಕಿತ್ತು ಒಂದೆಡೆ ಕುಕ್ಕಿ ಇಡಬೇಕೆಂಬಷ್ಟು. ಸಣ್ಣಗೆ ಜ್ವರದ ಬಿಸಿ ಇತ್ತು. ಬಾಗಿಲು ಸದ್ದಾಯಿತು. ತೆರೆದರೆ ಬಹುಕಾಲದಿಂದ ನಿವೃತ್ತ ಎಂದು ಯಾರಾದರೂ ಕಣ್ಣುಮುಚ್ಚಿ ಹೇಳಬಹುದಾದ ವ್ಯಕ್ತಿ. ಚಪ್ಪತೆ ಮುಖ. ಬಚ್ಚಿ ಬತ್ತಿದ […]

ಉತ್ತುಮಿ

ನಾವು ಐದಾರು ಮಂದಿ ಗೆಳೆಯರು ಮೊನ್ನೆ ಒಂದೆಡೆ ಕಲೆತಾಗ ಮಾನಸಶಾಸ್ತ್ರದಂತಹ ಒಂದು ಗಹನವಾದ ವಿಷಯದ ಮೇಲೇ ಚರ್ಚೆಯಲ್ಲಿ ಸಿಕ್ಕಿಕೊಂಡೆವು. ಫ್ರಾಯ್ಡ್, ಯುಂಗ್(ಜುನ್ಗ್-ಈ ಮಹಾಶಯನ ಹೆಸರಿನ ಉಚ್ಚರಣೆಯ ಬಗೆಗೂ ಕೆಲಹೊತ್ತು ತುರುಸಿನ ವಾದ ನಡೆಯಿತು), ವಿಲ್ಯಮ್ […]

ಪಯಣ

ಆಗ, ಮೂರುಸಂಜೆಯ ಹೊತ್ತಿಗೆ ಭೆಟ್ಟಿಯಾಗಲು ಬಂದಾತ ಹೇಳಿ ಹೋಗಿದ್ದ-“ನಾಳೆ ನಸುಕಿನಲ್ಲಿ ಕೋಳಿ ಕೂಗುವ ಮೊದಲೇ ಹೊರಡಬೇಕು ಸಿದ್ಧನಾಗಿರು” ಎಂದು. ಎಂತಲೇ, ರಾತ್ರಿಯ ಊಟ ಮುಗಿಸಿದ್ದೇ ಅವನು ಹೊರಡುವ ಸಿದ್ಧತೆಗೆ ತೊಡಗಿದ್ದ. ಕಳೆದ ನಾಲ್ಕಾರು ದಿನಗಳಲ್ಲಿ […]

ಕೆಂಡದ ಮಳೆ ಕರೆವಲ್ಲಿ ಉದಕವಾಗಿದ್ದವರ ಕಥೆ

ಪೀರಣ್ಣ ಇಳಿದ ಕೂಡಲೆ ಮಹಾದೇವಿ ಧೂಳೆಬ್ಬಿಸುತ್ತ ಓಡಿತು.  ಧೂಳು ಕರಗುವ ಮಟ ಮೂಗಿಗೆ ಅಡ್ಡಲಾಗಿ ಕರ್ಚೀಪು ಇಡುವುದನ್ನು ಮರೆಯಲಿಲ್ಲ ಆತ.  ಕರಗುತ್ತಿದ್ದ ಧೂಳಿನಾಚೆ ಕಣ್ಣುಚೆಲ್ಲಿದ.  ದುಮ್ಮ ಹಂತ ಹಂತವಾಗಿ ಕರಗುತ್ತಲೆ ಪ್ರಕೃತಿ ವಿರಾಜಮಾನವಾಯಿತು.  ಬರೆದ […]

ಬೇಟೆ, ಬಳೆ ಮತ್ತು ಓತಿಕೇತ

( ಈ ಕಥೆ ಗೆಳೆಯ ಚಂದ್ರಶೇಖರ ಕಂಬಾರರಿಗೆ ಅರ್ಪಿತ ) ‘ಅದೆಷ್ಟು ಸಾವಿರ ವರ್ಷಗಳ ಹಿಂದೆಯೊ ಏನೊ. ಕ್ರಿಸ್ತನಿಗೂ ಹಿಂದೆ. ಬುದ್ಧನಿಗೂ ಹಿಂದೆ. ಕಾಣಿಸ್ತ ಇದೆಯ? ಎದುರು ಬಂಡೆ ಮೇಲೆ? ಅದು ಆ ಮಾನವ […]

ಮುಖಾಮುಖಿ

ಎಲ್ಲವನ್ನೂ ಹೇಳಿಬಿಡಬೇಕೆಂದು ನಿರ್ಧರಿಸಿದ್ದೇನೆ. ನೆತ್ತಿಯಲ್ಲಿ ಸುಡುವ ಬೆಂಕಿ ಹೊತ್ತು ಶಾಂತಿ ತಂಪುಗಳಿಗೆ ಹಾತೊರೆಯುತ್ತ ಅಲೆದಾಡುವ ಶಾಪ ಬಡಿದವನ ಹಾಗೆ, ಈ ರೀತಿ ವ್ಯರ್ಥವಾಗಿ ಬಳಲುವ ಬದಲು ನನ್ನನ್ನು ಗಾಸಿಗೊಳಿಸುತ್ತಿದ್ದುದಕ್ಕೇ ನೋಯಿಸುತ್ತಿದ್ದುದಕ್ಕೇ ಒಂದು ಆಕಾರ ಕೊಟ್ಟು […]

ನೂಲಿನ ಏಣಿ

-೧- ಒಂದೇ ಮನೆಯಲ್ಲಿದ್ದೂ ನೀಲಕಂಠ ತಮ್ಮ ಜೊತೆ ಪತ್ರಮುಖೇನ ಮಾತಾಡಬೇಕಾಗಿ ಬಂದದ್ದರ ಬಗ್ಗೆ ಪಾಟೀಲರಿಗೆ ನೋವಾಯಿತಾದರೂ, ಇದು ಬಾಯಿಬಿಟ್ಟು ಮುಖಾಮುಖಿ ಹೇಳಲಾಗದಂಥ ವಿಷಯ ಎಂದು ಅವನಿಗನಿಸಿತಲ್ಲ ಎಂದು ಸಮಾಧಾನವೂ ಆಯಿತು. ಐದಾರು ಸಾಲುಗಳ ಪತ್ರ […]

ಗುಲಾಬಿ ಮೃದು ಪಾದಗಳು

ದಾರಿಯೇನೂ ಅವಳಿಗೆ ಹೊಸದಲ್ಲ. ಅಲ್ಲಿರುವ ಮನೆಗಳೂ, ಅದರೊಳಗಿರುವವರು ಮಾತ್ರ ಅವಳಿಗೆ ಹೊಸದಲ್ಲ. ಒಂದು ದಿನ, ಪ್ರತಿದಿನದಂತೆ, ಆ ದಾರಿಗುಂಟ ಬರುವಾಗ ಒಂದು ರಿಕ್ಷಾ ಅವಳ ಬದಿಯಿಂದಲೇ ದಾಟಿತು. ಒಂದು ಮನೆ ಮುಂದೆ ನಿಂತಿತು. ರಿಕ್ಷಾದಿಂದ […]