ಸಂದರ್ಶಕಿ : ಪ್ರೀತಿ ನಾಗರಾಜ್
ಸಮಯ: ಮಧ್ಯಾಹ್ನ ೨:೩೦ ಘಂಟೆ
ಸ್ಥಳ: ಜಯನಗರ
ಉದ್ದೇಶ: ಗಿರೀಶ ಕಾಸರವಳ್ಳಿ ಸಂದರ್ಶನ
ಚುರು-ಚುರು ಬಿಸಿಲು. “ಈವತ್ತು ಪ್ರವೀಣ ಸ್ಟುಡಿಯೊದಲ್ಲೇ ಇರ್ತೀನಿ. ಡಬ್ಬಿಂಗ್ ಇದೆ. ಅಲ್ಲಿಗೇ ಬಂದು ಬಿಡಿ. ಅಲ್ಲೇ ಮಾತಾಡೋಣ” ಅಂದಿದ್ದರು ಗಿರೀಶ್. ಬೆಂಗಳೂರನ್ನು ಬಲ್ಲದವರಿಗೆ ಜಯನಗರದಲ್ಲಿ ವಿಳಾಸ ಹುಡುಕುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ಬಹುಶಃ ಅನುಭವಿಸಿದವರಿಗೇ ಗೊತ್ತು. ಎರಡು ಬಾರಿ ರಸ್ತೆ ತಪ್ಪಿ ಹೋಗಿ, ಅಲ್ಲಲ್ಲೇ ಸುತ್ತು ಹೊಡೆಯುತ್ತಾ ಫೋನ್ ಮಾಡಿ ಮತ್ತೆ ಖಾತ್ರಿ ಮಾಡಿಕೊಂಡು ಕಾರುಗಳು ಸಾಲುಗಟ್ಟಿದ್ದ ಮನೆ-ಕಂ-ಸ್ಟುಡಿಯೋ ಸೇರಿದಾಗ ಒಂದು ಹಂತದ ಸಂದರ್ಶನ ಮುಗಿದಷ್ಟೇ ನಿರಾಳ.
ರಿಸೆಪ್ಶನ್ನಿನಲ್ಲಿ ಕೂತ ಕನ್ನಡಕಧಾರಿ “ಗಿರೀಶ್ ಅವರನ್ನ ನೋಡಲಿಕ್ಕೆ ಬಂದಿದ್ದೀರ? ಅಲ್ಲಿ ಕೂತುಕೊಳ್ಳಿ, ಬರ್ತಾರೆ,” ಅಂತ ಹೇಳಿದರು. “ಹೋಗೋ, ಅವರನ್ನ ಹಿಂದೆ ಕೂರಿಸಿ, ಗಿರೀಶ್ ಸಾಹೇಬ್ರಿಗೆ ಯಾರೋ ಲೇಡೀಸ್ ಬಂದಿದ್ದಾರೆ ಅಂತ ಹೇಳು.”
ಮೂಕಪ್ರಾಣಿಯಂತೆ ನನ್ನ ಮುಂದೆ ಹೊರಟ ಕಪ್ಪು-ಬಿಳಿ ಚೌಕಳಿ ಅಂಗಿಯವನನ್ನು ಹಿಂಬಾಲಿಸಿದೆ. ಒಳಗೆ ಮಾತುಗಳ ರೆಕಾರ್ಡಿಂಗ್..”ಅಯ್ಯೋ ಹಾಗಲ್ಲರೀ, ಇನ್ನೊಮ್ಮೆ ಹೇಳಿ” “ಹೂಂ, ಹೂಂ, ಮತ್ತೊಮ್ಮೆ” ಅಂತೆಲ್ಲ ಮಾತುಗಳು ತೆರೆದ ಕಿಟಕಿಯಿಂದ ಕೇಳಿ ಬರುತ್ತಿದ್ದವು.
ಮಧ್ಯೆ, ಮಧ್ಯೆ ರೇಡಿಯೊ ಅಲೆ. ಅದರ ಸದ್ದನ್ನು ಮುಚ್ಚಿ ಹಾಕುವ ಪ್ರಯತ್ನವೆಂಬಂತೆ “ಮ್ಯೂಸಿಕ್ ಪ್ಲೀಸ್..” ಅನ್ನುವ ಧ್ವನಿ. ಅದು ಮುಳುಗುವ ಮೊದಲೇ ಶುರುವಾಗುವ ಸಂಗೀತ…”ರಂಗಣ್ಣಾ, ಪುಟ್ಟಪ್ಪಾ ನನ್ನ ಮೇಲೆ ಹಾಕಿದ ಕೇಸ್ ಸೋತುಬಿಟ್ರು…” ಪದೇ ಪದೇ ಅದೇ ಮಾತು…”ಗೃಹಭಂಗ”ದ ಸಾಲುಗಳ ಹಿನ್ನೆಲೆ…ಇದಕ್ಕೆಲ್ಲ ಸಾಕ್ಷಿಯೆನ್ನುವಂತೆ ನಾನು, ಪ್ರವೀಣ್ ಸ್ಟುಡಿಯೋದ ಹಿತ್ತಲಿನಲ್ಲಿ.
ಅಲ್ಲೊಂದು ತೆಂಗಿನ ಮರ. ಕೂತವರಿಗೆ ಕಾಣುವುದು ಬರೀ ಬಡ್ಡೆ. ಕತ್ತು ನೋಯುವಷ್ಟು ಮೇಲೆ ತಲೆ ಎತ್ತಿ ನೋಡಿದರೆ, ಹಿತ್ತಲಿಗೆ ಛಾವಣಿಯಾಗಿದ್ದ ಹಸಿರು-ನೀಲಿ ಪ್ಲಾಸ್ಟಿಕ್ ಶೀಟನ್ನೂ ಮೀರಿ ಬೆಳೆದಿದ್ದ ಮರದಿಂದ ಜೋತು ಬಿದ್ದಿರುವ ದುಡ್ಡಿನ ಗಿಡ – ಅಲಿಯಾಸ್ – ಮನಿ ಪ್ಲಾಂಟುಗಳು. ಅವೆಲ್ಲ ದುಡ್ಡು ಬಿಡಬಹುದು ಅನ್ನುವಂಥಾ ಆಶಾವಾದಿ ಇಲ್ಲಿದ್ದನೇನೋ ಎಂಬಂತೆ ಪಾಚಿಗಟ್ಟಿದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು, ಅದರಲ್ಲಿ ಮತ್ತಷ್ಟು ಪ್ಲಾಂಟುಗಳು.
ತೆಂಗಿನ ಗಿಡವನ್ನು ಭದ್ರವಾಗಿ ಹಿಡಿದಿದೆಯೆನೋ ಅನ್ನುವ ಭ್ರಮೆ ತರಿಸುತ್ತಿದ್ದ ಕಟ್ಟೆಯ ಮೇಲೆ ಅರಿಶಿಣ-ಕುಂಕುಮಗಳಿಂದ ಅಲಂಕೃತವಾಗಿದ್ದ ತುಳಸಿ ಗಿಡ. ಮನಿ ಪ್ಲಾಂಟುಗಳ ಪಾಪವನ್ನು ತುಳಸಿ ಗಿಡ ಟಿuಟಟiಜಿಥಿ ಮಾಡುತ್ತಿತ್ತೇನೋ ಎಂಬಂತೆ.
ಅವುಗಳಿಂದ ಉದುರಿದ ಎಲೆ ಕಸವಾಗಿ ಮಾರ್ಪಾಡಾಗಿತ್ತು. ಯಾರೂ ಸ್ವಚ್ಛಗೊಳಿಸುವ ಕಾಯಕಕ್ಕೆ ಕೈ ಹಾಕಿದಂತಿರಲಿಲ್ಲ. ಮಣ್ಣು ಎಲೆಗಳ ಮಿಶ್ರಣವನ್ನು ಯಾರೂ ಮನೆಯ ಒಳಗೆ ಮೆಟ್ಟಿ ಹೋಗದಂತೆ ಹಿಂಬಾಗಿಲಿನ ಮುಂದೆ ಹಳೆಯ ಫುಟ್ ರಗ್. ಅದರ ಪಕ್ಕದಲ್ಲಿ ಹವಾಯಿ ಚಪ್ಪಲಿಗಳು. ಮೂಲೆಯಲ್ಲಿ ಸಿಂಕು… ಸ್ವಲ್ಪ ಮೇಲೆ ಸಣ್ಣ ಕನ್ನಡಿ..ಅದರ ಮೇಲೆಲ್ಲ ಕಡು ಕೆಂಪು ಸ್ಟಿಕ್ಕರುಗಳು. ಬಾಜುವಿನಲ್ಲಿ ಆಗಲೋ ಈಗಲೋ ಕೈಗೆ ಬರುವ ಸ್ಥಿತಿಯಲ್ಲಿದ್ದ ಬಾಗಿಲಿಗೆ “ಖಿoiಟeಣ” ಅನ್ನುವ ಫಲಕ. ಆಗಾಗ ಧಡ್-ಧಡ್ ಅಂತಾ ಬಂದು, ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕೂತ ಹೆಂಗಸನ್ನು ಕಂಡ ತಕ್ಷಣ ಮೆಲ್ಲಗೆ ಟಾಯ್ಲೆಟ್ಟಿನೊಳಗೆ ಜಾರುವ ಗಂಡಸರು.
ಅದರ ಅಟ್ಟ ಯಾವ್ಯಾವುದೋ ವಸ್ತುಗಳ ಮನೆಯಾಗಿ ಮಾರ್ಪಾಡಾಗಿತ್ತು. ಹಸಿರು, ಬಿಳಿ, ಕಪ್ಪು, ಕೆಂಪು ಬಣ್ಣಗಳ ಚಿತ್ರವಿದ್ದ ರಟ್ಟಿನ ಡಬ್ಬಗಳು ಯರ್ರಾಬಿರ್ರಿಯಾಗಿ ಬಿದ್ದಿದ್ದವು. ಅವುಗಳ ಧೂಳಿನ ನಾತ ಅಲ್ಲೆಲ್ಲಾ ಹರಡಿತ್ತು. ನಾನು ಕೂತ ಕುರ್ಚಿಯನ್ನೂ ಸೇರಿಸಿ ಇದ್ದ ನಾಲ್ಕು ಪ್ಲಾಸ್ಟಿಕ್ ಕುರ್ಚಿ, ಒಂದು ಮ್ಯಾಚಿಂಗ್ ಟೇಬಲ್ಲಿನ ಮೇಲೆ ಧಾರಾಳವಾಗಿ ಹರಡಿದ್ದ ಧೂಳು.
ಒಮ್ಮೊಮ್ಮೆ ಶಬ್ದದ ಗತಿಯನ್ನು ಮುರಿಯುವ ಪ್ರಯತ್ನವೆಂಬಂತೆ ತೇಲುವ ಮೌನ. ಅದಕ್ಕೆ ಪೈಪೋಟಿಯಾಗಿ ಮೊಬೈಲ್ ಫೋನುಗಳ ಚಿತ್ರ-ವಿಚಿತ್ರ ರಿಂಗಣ. “ಆಫ್ ಮಾಡ್ರೀ ಅವನ್ನ..” ಅಂತ ಯಾರದೋ ಅಸಮಾಧಾನದ ಧ್ವನಿ. ಮತ್ತೆ “ರಂಗಣ್ಣಾ, ಪುಟ್ಟಣ್ಣಾ…” ಕನವರಿಕೆ.
*
*
*
ಬಾದಾಮಿ ಬಣ್ಣದ ಜುಬ್ಬಾಧಾರಿಯಾಗಿ ಗಿರೀಶ್ ಆಗಮನ. “ಹಲೊ”ಗಳ ವಿನಿಮಯ ಮುಗಿದ ಮೇಲೆ ಸಂದರ್ಶನಕ್ಕೆ ಕೂತರು. ಮೊದಮೊದಲು ಸ್ವಲ್ಪ ಬಿಗಿಯಾಗೇ ಕೂತ ಗಿರೀಶರನ್ನು ರಿಲ್ಯಾಕ್ಸ್ ಆಗುವಂತೆ ಮಾಡಿದ್ದು ನನ್ನ ಮೊದಲ ತಪ್ಪು ಪ್ರಶ್ನೆ. “ನಿಮಗೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಇದು ಏಳನೇ ಬಾರಿ ಅಲ್ಲವೇ?”
ಹೌದೋ ಅಲ್ಲವೋ ಅನ್ನುವಂತೆ ನಕ್ಕ ಗಿರೀಶರು “ಇಲ್ಲ, ಇದು ಎಂಟನೇ ಬಾರಿ” ಎಂದು ತಿದ್ದಿದರು.
(ನಾಲ್ಕು ಸ್ವರ್ಣ, ನಾಲ್ಕು ರಜತ ಕಮಲ)
ಮುಂದೆ ನಡೆದದ್ದಿಷ್ಟು:
ಪ್ರ: ಗಿರೀಶರಿಗೆ ಸಿನಿಮಾ ಎಷ್ಟು ಅನಿವಾರ್ಯ ಮತ್ತು ಸಿನಿಮಾಕ್ಕೆ ಗಿರೀಶರು ಎಷ್ಟು ಅನಿವಾರ್ಯ?
ಉ: ಗಿರೀಶ್‌ಗೆ ಸಿನಿಮಾ ಜಾಸ್ತಿ ಅನಿವಾರ್ಯ. ಯಾಕೆ ಅಂದರೆ, ನನಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ಆದರೆ, ಸಿನಿಮಾಕ್ಕೆ ಬೇಕಾದಷ್ಟು ವ್ಯಕ್ತಿಗಳ “ಚಾಯ್ಸ್” ಇದೆ. ಗಿರೀಶ್ ಅದರಲ್ಲೊಬ್ಬ ಮಾತ್ರ. ಆದರೆ ಗಿರೀಶ್‌ಗೆ ಸಿನಿಮಾ ಬಿಟ್ಟರೆ ಬೇರೆ ದಿಕ್ಕು ಇಲ್ಲ.
ಪ್ರ: ಕನ್ನಡಕ್ಕೆ ಎಂಟು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿ ಕೊಟ್ಟಿದ್ದೀರ ಅನ್ನುವುದನ್ನು ಗಮನದಲ್ಲಿಟ್ಟು ಯೋಚಿಸಿದರೆ?
ಉ: ಹಾಗೆ ನೋಡಿದರೆ, ಪ್ರಾಯಶ:, ಕನ್ನಡ ಸಿನಿಮಾಕ್ಕೆ ಗಿರೀಶ್ ಬೇಕು ಅನ್ನಬಹುದು. ಅನಿವಾರ್ಯ ಅಂತ ಹೇಳಲಿಕ್ಕೆ ಆಗುವುದಿಲ್ಲ. ಒಬ್ಬ ಗಿರೀಶ್ ಇಲ್ಲದಿದ್ದರೆ ಅಂಥಾ ನಷ್ಟವೇನೂ ಆಗಲಾರದು. ಇನ್ಯಾರೋ ಹುಟ್ಟಿಕೊಳ್ಳುತ್ತಾರೆ. ಕಲೆಗೆ ಕಲಾವಿದರು “ಮಿತಿ” ಆಗಲಾರರು. ಇದು ಎಲ್ಲಾ ಕಲೆಗೂ ಅನ್ವಯಿಸುವಂಥಾ ಮಾತು.
ಪ್ರ: ಸಿನಿಮಾ ಒಂದು ಮಾಧ್ಯಮವಾಗಿ ಬೆಳೆದ ಹಾಗೆ ಅದರ “ವಿಮರ್ಶೆ” ಬೆಳೆಯಲಿಲ್ಲ ಅನ್ನುವ ಒಂದು ಅಭಿಪ್ರಾಯವಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ?
ಉ: ಹೌದು. ಸಿನಿಮಾ ಒಂದು ಕಲೆಯಾಗಿ ಬೆಳೆದಂತೆ, ಅದರ ವಿಮರ್ಶೆ ಒಂದು ಕಲೆಯಾಗಿ ಬೆಳೆಯಲಿಲ್ಲ. ಒಂದು “ಛಿiಟಿemಚಿಣiಛಿ ಟiಟಿgo” ವಿಕಸನಗೊಳ್ಳಲಿಲ್ಲ. ಹಲವಾರು ವರ್ಷಗಳಲ್ಲಿ, ವಿಮರ್ಶೆಯ ಪ್ರಪಂಚದಲ್ಲಿ ಅಂಥಾ ಬದಲಾವಣೆಯೇನೂ ಕಂಡಿಲ್ಲ. ಸಿನಿಮಾ ಗುಣಗ್ರಹಣ ಕ್ರಮ ಇದೆಯಲ್ಲ, ಅದನ್ನು ಬರಹದಲ್ಲಿ ಸಿದ್ಧಿಸಿಕೊಂಡವರು ತುಂಬಾ ಕಮ್ಮಿ. ಇಲ್ಲಿಯವರೆಗೂ ಸಿನಿಮಾ, ವಿಮರ್ಶಕರ ದೃಷ್ಟಿಯಲ್ಲಿ ಕಥೆಯ ವಿಸ್ತರಣೆಯಾಗಿ ಬೆಳೆದಿದೆ. ಒಂದು ಸಿನಿಮಾದ ಮೂಲ ಕಥೆಯನ್ನ “sಣಚಿಟಿಜಚಿಡಿಜ” ಆಗಿ ಇಟ್ಟುಕೊಂಡು ಬರೆದಿರುವಂಥ ವಿಮರ್ಶೆಯನ್ನೇ ಜಾಸ್ತಿ ಕಾಣಬಹುದು. ಇದು ತಪ್ಪು ಅನ್ನುವ ಅಭಿಪ್ರಾಯವಿದೆ. ಯಾಕೆಂದರೆ, ಸಿನಿಮಾ ಚಿತ್ರಗಳ ಅಥವ imಚಿges ಮೇಲೆ ನಿರ್ಮಾಣವಾಗಿ ಅವುಗಳ ಮೇಲೇ ನಿಲ್ಲುವ ಒಂದು ಕಲೆ ಅಥವ ಮಾಧ್ಯಮ.
ಸಿನಿಮಾದಲ್ಲಿ ಕಾಣುವ “ಠಿoಟiಣiಛಿs oಜಿ imಚಿges” ಬಗ್ಗೆ ಆಳವಾಗಿ ಆಲೋಚಿಸತೊಡಗಿದರೆ ಆ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಅದನ್ನು ಬಿಟ್ಟು ಅದರ ಕಥೆ ಅಥವ “ಫ್ರೇಂ” ಗಳನ್ನು ಮಾತ್ರ ನೋಡಿ ಬರೆದದ್ದು ವಿಮರ್ಶೆ ಆಗುವುದಿಲ್ಲ. ಅದು ಆ ಸಿನಿಮಾದ ವಿಮರ್ಶೆಯೂ ಆಗಿರಬಹುದು ಮತ್ತು ಮೂಲ ಕಥೆಯ ವಿಮರ್ಶೆಯೂ ಆಗಿರಬಹುದು.
ಇದು ಬರೀ ಕನ್ನಡ ಸಿನಿಮಾಕ್ಕೆ ಮಾತ್ರ ಅನ್ವಯಿಸುವುದಿಲ್ಲ. ನನಗೆ ತಿಳಿದ ಮಟ್ಟಿಗೆ ಹಿಂದಿ ಸಿನಿಮಾಕ್ಕೂ ಅಷ್ಟೆ, ಒಟ್ಟಾರೆ ಸಿನಿಮಾ ಮಾಧ್ಯಮಕ್ಕೇ ಅನ್ವಯಿಸುವಂಥಾ ಮಾತು.
ಹಿಂದಿ ಅಥವಾ ರಾಷ್ಟ್ರೀಯ ಪತ್ರಿಕೆಗಳಲ್ಲಿ ಬರುವ ವಿಮರ್ಶೆಯನ್ನು ಓದಿದರೆ ಸ್ವಲ್ಪ ವ್ಯತ್ಯಾಸ ಕಾಣಬಹುದು. ಅಲ್ಲಿನ ವಿಮರ್ಶಕರು ಬೇರೆ ದೇಶಗಳ ಸಿನಿಮಾಕ್ಕೆ ನಮ್ಮವರಿಗಿಂತ ಹೆಚ್ಚು ಹತ್ತಿರವಾದವರು. ದೆಹಲಿಯಲ್ಲಿ ಇರುವ ವಿಮರ್ಶಕರು ಅಂತರ ರಾಷ್ಟ್ರೀಯ ಸಿನಿಮಾಕ್ಕೆ ನಮ್ಮವರಿಗಿಂತ ಹತ್ತಿರವಾದವರು. ಆ ಕಾರಣದಿಂದ ಅವರ ವಿಮರ್ಶೆಯಲ್ಲಿ ಕೊಂಚ ವ್ಯತ್ಯಾಸ ಕಾಣಬಹುದೇನೋ…ಆದರೆ, ಅದರ ಒಟ್ಟು ಪರಿಣಾಮ “ವಿಮರ್ಶಾ ಪ್ರಪಂಚ” ದ ಮೇಲೆ ಕಮ್ಮಿ.
ಅದಕ್ಕೆ ಹಲವಾರು ಕಾರಣಗಳು ಇರಬಹುದು. ನಮ್ಮ ವಿಮರ್ಶಕರಿಗೆ ಬೆಂಗಾಲಿ, ಚೈನೀಸ್, ಜರ್ಮನ್, ಇಟಾಲಿಯನ್, ಫ್ರೆಂಚ್, ಮರಾಠಿ ಇತ್ಯಾದಿ ಭಾಷೆಗಳ ಸಿನಿಮಾಗಳನ್ನು ವೀಕ್ಷಿಸುವ ಅವಕಾಶಗಳು ಕಮ್ಮಿ. ಮತ್ತೆ, ಅದರ ಬಗ್ಗೆ ಏನಾದರೂ ಮಾಡಬೇಕು, ಹೇಗಾದರೂ ಮಾಡಿ ಈ ಸಿನಿಮಾಗಳನ್ನ ವೀಕ್ಷಿಸಬೇಕು ಅನ್ನುವ ತುಡಿತವೂ ಇದ್ದಂತಿಲ್ಲ. ಹಾಗಾಗಿ, ನಮ್ಮಲ್ಲಿ ವಿಮರ್ಶೆ ನಿಂತ ನೀರಾಗಿ ಬಿಟ್ಟಿದೆ.
[“Poಟiಣiಛಿs oಜಿ imಚಿges” ಅನ್ನು ಸ್ವಲ್ಪ ವಿವರಿಸಿದ ಗಿರೀಶರು ಹೇಳುವಂತೆ ನಾವು ತೆರೆಯ ಮೇಲೆ ನೋಡುವ ಯಾವ ಇಮೇಜೂ “ನ್ಯೂಟ್ರಲ್” ಅಲ್ಲ. “ಉದಾರಹಣೆಗೆ ಓರ್ವ houseತಿiಜಿe ಅನ್ನು ಕಲ್ಪಿಸಿಕೊಳ್ಳಿ ಎಂದು ಒಬ್ಬ ಸಾಮಾನ್ಯ ಮನುಷ್ಯನಿಗೆ ಹೇಳಿದರೆ, ಅವನ ಮನಸ್ಸಿನಲ್ಲಿ ಯಾವುದೋ ಜಾಹೀರಾತು ಇಲ್ಲಾ ಧಾರಾವಾಹಿಯಲ್ಲಿ ನೋಡಿದ ಗರಿ-ಗರಿಯಾದ ಸೀರೆಯುಟ್ಟ, ನೀಟಾಗಿ ತಲೆ ಬಾಚಿಕೊಂಡು, ಕುಂಕುಮ ಇಟ್ಟುಕೊಂಡು ನಗುನಗುತ್ತಾ ಇರುವ ಹೆಂಗಸು ನೆನಪಿಗೆ ಬರುತ್ತಾಳೆ. ಅಸ್ತವ್ಯಸ್ತವಾದ ಸೀರೆ, ಕೂದಲಿಗೆ ಎಣ್ಣೆ ಹಚ್ಚಿಕೊಂಡವಳಲ್ಲ. ಯಾಕೆಂದರೆ, ದಶಕಗಳ ಕಾಲ, ಅಂಥಾ ಒಂದು ಇಮೇಜನ್ನು ಟೀವಿ ಮತ್ತು ಸಿನಿಮಾ ಸೃಷ್ಟಿ ಮಾಡಿವೆ.]
ಪ್ರ: ಸಾಹಿತಿಗಳು ಇದನ್ನು ಬದಲಾಯಿಸಲಿಕ್ಕೆ ಸಾಧ್ಯ ಇತ್ತೇ? ಕಲಾತ್ಮಕ ಸಿನೆಮಾಕ್ಕೆ ಮೂಲ ವಸ್ತುವನ್ನು ಕೊಟ್ಟವರು ಅದರ ವಿಮರ್ಶೆಯ ಬೆಳವಣಿಗೆಗೂ ಸಹಾಯಕರಾಗಬಹುದಿತ್ತಲ್ಲವೇ?
ಉ: ಇಲ್ಲ. ಇದು ಸಾಹಿತಿಗಳ ಕೆಲಸ ಖಂಡಿತಾ ಅಲ್ಲ. ಇದು ಸಂಪೂರ್ಣವಾಗಿ ವಿಮರ್ಶಕರ ಕೆಲಸ. ಸಾಹಿತಿಗಳು ನಮ್ಮ ಸಿನಿಮಾಕ್ಕೆ ಮೂಲ ವಸ್ತುವನ್ನು ಒದಗಿಸಿ ಕೊಟ್ಟ ಮೇಲೆ ಅದು ತೆರೆಯ ಮೇಲೆ ಹೇಗೆ ಮೂಡಿ ಬಂದಿದೆ ಅನ್ನುವುದನ್ನು ನೋಡಿ ಸಂತೃಪ್ತಿ ಅಥವಾ ಅಸಂತೃಪ್ತಿಯನ್ನು ವ್ಯಕ್ತ ಪಡಿಸುವುದರ ಮೂಲಕ ತಮ್ಮ ಜವಾಬ್ದಾರಿ ಮುಗಿಸುತ್ತಾರೆ. ಅಲ್ಲಿಂದ ಮುಂದಿನದು ವಿಮರ್ಶಕರ ಕೆಲಸ. ಸಿನಿಮಾವನ್ನು ಒಂದು ಭಾಷೆಯಾಗಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಸಾಹಿತಿಗಳಿಗಿಂತ ವಿಮರ್ಶಕರಿಗೆ ಜಾಸ್ತಿ ಇದೆ. ಗಮನಿಸಿ ನೋದಿ, ಇಂದಿಗೂ ಒಂದು ಸಿನಿಮಾದ ವಿಮರ್ಶೆ ವಿಮರ್ಶಕನ “ಣಚಿsಣe” ಮೇಲೆ ಬಹುಮಟ್ಟಿಗೆ ನಿಂತಿದೆಯೇ ಹೊರತು ಅವರ “exಠಿosuಡಿe ಣo ಣhe ಚಿಡಿಣ” ಮೇಲೆ ನಿಲ್ಲುವಿದು ಬಹಳ ಅಪರೂಪ. ಇಲ್ಲವೇ ಇಲ್ಲ ಅಂತ ಹೇಳಿದರೆ ತಪ್ಪೇನಿಲ್ಲ.
ಪ್ರ: ಈಗ ಇರುವ ವಿಮರ್ಶಕರಲ್ಲಿ ಯಾರ ಕೃತಿಯನ್ನು ನೀವು ಓದುತ್ತೀರಿ?
ಉ: ಇದು ಸ್ವಲ್ಪ ಸೂಕ್ಷ್ಮವಾದ ಪ್ರಶ್ನೆ. ನಾನು ಇದಕ್ಕೆ ಉತ್ತರಿಸಲಾರೆ. ಆದರೆ, ನಾನು ವಿಮರ್ಶೆಯನ್ನು ಓದುವ ರೀತಿಯ ಬಗ್ಗೆ ಸ್ವಲ್ಪ ಹೇಳಬಲ್ಲೆ. ಒಬ್ಬ ವಿಮರ್ಶಕನ ಕೃತಿಯನ್ನು ಓದುವಾಗ ಆ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಖಂಡಿತ ಮಾಡಿರುತ್ತೇನೆ. ಅವರು ಮೆಚ್ಚಿದ ಸಿನಿಮಾ ಯಾವುದು, ಯಾಕೆ, ಅದರ ಬಗ್ಗೆ ಏನು ಮತ್ತು ಹೇಗೆ ಬರೆದಿದ್ದರು, ಬೇರೆ ಸಿನಿಮಾದ (ಅದು ನನ್ನ ಸಿನಿಮಾನೇ ಆಗಿರಬೇಕು ಅಂತೇನಿಲ್ಲ) ಬಗ್ಗೆ ಏನು ಬರೆದಿದ್ದರು, ಇತ್ಯಾದಿ. ಇಷ್ಟು ತಿಳಿದ ಮೇಲೆ ಅವರ ವಿಮರ್ಶೆಯಲ್ಲಿ ಪದಗಳ ಬಳಕೆ ಹೇಗೆ, ಒಂದು ಪದ ಪ್ರಯೋಗ ಮಾಡುವುದರ ಮೂಲಕ ಏನನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನುವ ತೀರ್ಮಾನಕ್ಕೆ ಬರ್ತೀನಿ. ಒಂದು ವಿಮರ್ಶೆಯಲ್ಲಿ “ಸಿನಿಮಾದ ಸಂಕಲನ ಬಹಳ ಬಿಗಿಯಾಗಿತ್ತು” ಎಂದು ಹೇಳಿದರೆ, ಸಂಕಲನಕಾರ ತಕ್ಷಣ ಹೆಮ್ಮೆ ಪಡುವ ಮುನ್ನ ಆಲೋಚಿಸಬೇಕಾಗುತ್ತದೆ. ಬಿಗಿ ಸಂಕಲನ ಆ ಸಿನಿಮಾಕ್ಕೆ ಅವಶ್ಯಕವಾಗಿಲ್ಲದಿದ್ದರೆ, ಆ ಒಂದು ವಾಕ್ಯ “ಟಿegಚಿಣive ಆಗ ಬಹುದು. ಇನ್ನೊಂದು ಕಡೆ “ಒಳಾಂಗಣ” ಅಥವ “ಹೊರಾಂಗಣ” ಅತೀ ಸುಂದರವಾಗಿತ್ತು ಎಂದಾಗ ಅದರ uಟಿಜeಡಿಟಥಿiಟಿg ಣoಟಿe ಬೇರೆಯೇ ಆಗಿರಬಹುದು. ಯಾಕೆಂದರೆ, ಒಳಾಂಗಣ ಅಥವ ಹೊರಾಂಗಣ ಆ ಒಂದು ಸಿನಿಮಾಕ್ಕೆ ಅರ್ಥ ಬರುವಂಥ ರೀತಿಯಲ್ಲಿ ಬಳಕೆಯಾಗದಿದ್ದಲ್ಲಿ, ವಿಮರ್ಶಕ “ಅವುಗಳನ್ನು ಬಿಟ್ಟರೆ ಆ ಸಿನಿಮಾದಲ್ಲಿ ಇನ್ನೇನೂ ಇರಲಿಲ್ಲ” ಅನ್ನುವ ಅರ್ಥದಲ್ಲಿ ಹೇಳಿರಬಹುದು! ಅಥವಾ ವಿಮರ್ಶಕನ ಗಮನ ಸೆಳೆದ ಆ ಅಂಶಗಳಷ್ಟೇ (ಹೊರಾಂಗಣ ಅಥವಾ ಒಳಾಂಗಣ) ಒಂದು ಉತ್ತಮ ಸಿನಿಮಾ ಆಗಬಲ್ಲವು ಅನ್ನುವ ನಿರ್ಣಯಕ್ಕೆ ಓದುಗ ಬಂದುಬಿಡಬಾರದು. ನಿರ್ದೇಶನದಿಂದ ಹಿಡಿದು, ಮುಂದೆ ಬರುವ ಎಲ್ಲ “ಛಿomಠಿoಟಿeಟಿಣs” ಆ ಸಿನಿಮಾಕ್ಕೆ ನೆಲೆ ಕಟ್ಟಿಕೊಡಬೇಕು…ಅಲ್ಲಿಂದ ಮುಂದಕ್ಕೂ ಸಿನಿಮಾ ಬೆಳೆಯಬೇಕು. ಅವ್ಯಾವೂ “ಜಿuಟಟ sಣoಠಿ” ಆಗಬಾರದು!
ಪ್ರ: ನಿಮ್ಮ ಸಿನಿಮಾಗಳಲ್ಲಿ ಅತಿ sombಡಿe ಬಣ್ಣಗಳನ್ನು ಉಪಯೋಗಿಸುತ್ತೀರ, ಮತ್ತು ಠಿಡಿimಚಿಡಿಥಿ ಬಣ್ಣಗಳ ಬಳಕೆ ತುಂಬಾ ವಿರಳ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಉ: ಇಲ್ಲ. ನನ್ನ ಸಿನಿಮಾದಲ್ಲಿ ಬಣ್ಣಗಳ ಬಳಕೆಯ ಮೇಲೆ ಯಾವ ನಿರ್ಬಂಧವೂ ಇಲ್ಲ. ಯಾವ ಬಣ್ಣವೇ ಆಗಲಿ, ಅದು ನನ್ನ ಕಥೆ, ಪಾತ್ರ ಮತ್ತು ಸಂದರ್ಭಕ್ಕೆ ಹೊಂದಿಕೊಳ್ಳುವಂತಿದ್ದರೆ ಅದರ ಬಳಕೆಯನ್ನು ಖಂಡಿತವಾಗಿ ಮಾಡಿದ್ದೇನೆ. ಈಗ “ದ್ವೀಪ”ದ ಉದಾಹರಣೆ ತೆಗೆದುಕೊಂಡರೆ, ಅದು ಮಲೆನಾಡಿನ ಒಂದು ಹಳ್ಳಿಯಲ್ಲಿ ಮೂಡಿರುವ ಕಥೆ. ಆ ಹಳ್ಳಿಯಲ್ಲಿ ನನ್ನ ಪಾತ್ರಗಳಿಗೆ ಹತ್ತಿರವಾಗಿರುವಂಥ ವ್ಯಕ್ತಿಗಳು ಏನೇನನ್ನು ತೊಡಬಹುದು ಅನ್ನುವ ಅಂಶವನ್ನು ಗಮನಿಸಿ ನನ್ನ ಪಾತ್ರಗಳ ವಸ್ತ್ರಗಳನ್ನು ನಿರ್ಧರಿಸಲಾಗಿದೆ. ಆ ಪಾತ್ರಗಳು ತಿಳಿ ಅಥವ ಗಾಢ ಬಣ್ಣಗಳನ್ನು ಧರಿಸಿದ್ದರೆ, ಅವುಗಳ ಬಳಕೆ ಆ ಪರಿಸರದಲ್ಲಿ ಆಗಿದ್ದರೆ, ನನ್ನ ಸಿನಿಮಾ ಕೂಡ ಅದನ್ನೇ ಪ್ರತಿಬಿಂಬಿಸಿರುತ್ತದೇ ಹೊರತು, ಅದರಲ್ಲಿ ನಾನು ಛಿoಟಿಣಡಿoಟ ಮಾಡುವಂಥ ಸಾಧ್ಯತೆ ಕಮ್ಮಿ.
ಇನ್ನೊಂದು ಸಂದರ್ಭದಲ್ಲಿ ನೋಡಿದರೆ, ನನ್ನ ಸಿನಿಮಾದಲ್ಲಿನ “ಎ” ಮತ್ತು “ಬಿ” ವ್ಯಕ್ತಿಗಳು ಏನು ಹಾಕಿಕೊಳ್ಳಬೇಕು ಅನ್ನುವುದನ್ನು ನಿರ್ಧರಿಸುವವ ನಾನು, ಅಂದರೆ ನಿರ್ದೇಶಕ. ಸಿನಿಮಾಕ್ಕೆ ಹೊರತಾಗಿ ಅವರಿಬ್ಬರೂ ಬೇರೆ ಉಡುಗೆಗಳನ್ನೇ ತೊಡಬಹುದು…ಅಂದರೆ, ನಿಜ ಜೀವನದಲ್ಲಿ, ಅಂಥ ಇಬ್ಬರು ವ್ಯಕ್ತಿಗಳು ತಾವೇನನ್ನ ತೊಡಬೇಕು ಅನ್ನುವುದನ್ನು ತಾವೇ ನಿರ್ಧರಿಸುತ್ತಾರೆ…ಆದರೆ, ಸಿನಿಮಾದಲ್ಲಿ ಹಾಗಲ್ಲ, ಅವರಿಬ್ಬರ ಉಡುಗೆಗಳನ್ನು ಇನ್ನೊಬ್ಬ ನಿರ್ಧರಿಸುತ್ತಾನೆ, ಸಂದರ್ಭಕ್ಕೆ ತಕ್ಕಂತೆ.
ಪ್ರ: ಎರಡು-ಮೂರು ದಶಕಗಳ ಮುನ್ನ, ಕನ್ನಡ ಸಿನಿಮಾದಲ್ಲಿ ಕಲಾತ್ಮಕ ಚಿತ್ರಗಳ ಒಂದು movemeಟಿಣ ( ಆಂದೋಲನ) ಶುರುವಾಯಿತು. ಆದರೆ, ಅದು ಒಂದು ದಿಕ್ಕನ್ನು ಹಿಡಿಯಲಿಲ್ಲ. ಯಾಕೆ?
ಉ: ಜಗತ್ತಿನ ಹಾಗೂ ಸಿನಿಮಾ ಪ್ರಪಂಚದ ಯಾವುದೇ “movemeಟಿಣ” ಅನ್ನು ನೋಡಿದಾಗ, ಒಂದು ಅಂಶವನ್ನು ಗಮನಿಸಬಹುದು. ಬಹಳಷ್ಟು ಚಳುವಳಿ ಅಥವ ಆಂದೋಲನಗಳಿಗೆ ಒಂದು ನಿರ್ದಿಷ್ಟ “ಆದಿ” ಇರುತ್ತದೆ.
ಯೂರೋಪಿನಲ್ಲಿ ಜರ್ಮನ್ ಚಿನೆಮ, ಇಟಾಲಿಯನ್ ಸಿನಿಮಾ ಅಥವ “ಫ್ರೆಂಚ್ ನ್ಯೂ ವೇವ್”, ಇವೆಲ್ಲಕ್ಕೂ ಒಂದು “ಪ್ರಾರಂಭ” ಇತ್ತು…ಒಂದು “ಛಿommoಟಿ mಚಿಟಿiಜಿesಣo” ಇತ್ತು. ಇಲ್ಲಿ ಅಂಥಾದ್ದೇನೂ ಆಗಿರಲಿಲ್ಲ. ಆದ್ದರಿಂದ ಒಂದು ಆಂದೋಲನ ಶುರುವಾಗಿತ್ತು ಅನ್ನುವುದೇ “ತಪ್ಪು” ಕಲ್ಪನೆ ಆನುವುದು ನನ್ನ ಅಭಿಪ್ರಾಯ.
ನಮ್ಮಲ್ಲಿ ಏನಾಯಿತು ಅಂದರೆ, ಯಾರೋ ಒಬ್ಬರು ಸಿನಿಮಾ ಮಾಡಲಿಕ್ಕೆ ಶುರು ಮಾಡಿದರು, ಉಳಿದವರು ಅದರಿಂದ ಸ್ಫೂರ್ತಿ ಪಡೆದು ಅನುಸರಿಸಿ, ಅನುಕರಿಸಿದರು. ಇಲ್ಲಿ, “ಛಿommoಟಿ mಚಿಟಿiಜಿesಣo” ಇರಲಿಲ್ಲ. ಸಿನಿಮಾ ಯಾಕೆ, ಎಲ್ಲಿ, ಏನನ್ನ ಸಾಧಿಸಲಿಕ್ಕೆ? ಅನ್ನುವ ಪ್ರಶ್ನೆಗಳು ಉದ್ಭವಿಸಿ ಕಾಡಲಿಲ್ಲ. ಅವರೆಲ್ಲ, ತಮ್ಮ-ತಮ್ಮ ಮನಸ್ಸಿಗೆ ಸರಿ ಅನ್ನಿಸಿದ್ದನ್ನ ಮಾಡಿ, ಬೇರೆ-ಬೇರೆ ದಾರಿ ಹಿಡಿದರು.
ಹಾಗೆ ಆದಾಗ, ನಾನಾ ಥರದ ಸಿನಿಮಾಗಳು “ಕಲಾತ್ಮಕ” ಅನ್ನಿಸಿಕೊಂಡವು. ಯಾವುದು ಚಿಟಿ ಣಡಿಚಿ ಸಿನಿಮಾ ಆಗಿರಲಿಲ್ಲವೋ, ಅದು ಕಲಾತ್ಮಕ ಅನ್ನಿಸಿಕೊಂಡಿತೇ ಹೊರತು, ಅದು “ಕಲಾತ್ಮಕ” ಸಿನಿಮಾ ದ ಎಲ್ಲ ಅಂಶಗಳನ್ನು ಮೈಗೂಡಿಸಿಕೊಂಡಿತ್ತು ಅಂತ ಅಲ್ಲ!
ಆ ರೀತಿ ಹರಡಿಕೊಂಡ ಒಂದು ಚಳುವಳಿಗೆ ಆಯಸ್ಸು ಕಮ್ಮಿ ಆದ್ದದ್ದು ಸಹಜವೇ. ಇಲ್ಲಿ ಕೆಲಸ ಮಾಡುತ್ತಿದ್ದವರಿಗೆಲ್ಲ ಒಳ್ಳೆ ಅವಕಾಶಗಳು ಸಿಕ್ಕ ತಕ್ಷಣ ಅವರು ಹೊರಟು ಹೋದರು. ಇನ್ನು ಕೆಲವರು, ಬಿ ವಿ ಕಾರಂತರಂಥವರು, ಇಲ್ಲಿ ಸ್ವಲ್ಪ ಡಿesisಣಚಿಟಿಛಿe ಕಂಡ ಕೂಡಲೆ, ನಾಟಕದ ಕಡೆ ವಾಪಾಸು ಹೊರಳಿದರು. ಅವರಿಗೆ ನಾಟಕವೇ ತಮ್ಮ ಮನೆ ಆನಿಸಿತೇ ಹೊರತು, ಸಿನಿಮಾದ ಬಗ್ಗೆ ಅಷ್ಟು ವ್ಯಾಮೋಹ ಬೆಳೆ ಯಲಿಲ್ಲ…೧೯೭೫ರಲ್ಲಿ “ಚೋಮನ ದುಡಿ” ಮಾಡಿದರು…ಆಗೊಮ್ಮೆ, ಈಗೊಮ್ಮೆ ಅದ್ಭುತವಾದ ಸಂಗೀತದ ಕೊಡಲು ಬಂದು ಹೋದರು..ಆದರೆ, ಇಲ್ಲಿ ನೆಲೆ ನಿಲ್ಲಲಿಲ್ಲ.
ನನಗೆ, ಇದೇ ಮನೆ. ನಾನು ಸಿನಿಮಾಕ್ಕೇ ಸೇರಿದವ. ಈ ಮಾಧ್ಯಮದ ಭಾಷೆ ನನಗೆ ಇಷ್ಟ…ಕಾರಂತರಂಥವರಿಗೆ ಹಾಗಲ್ಲ. ನಾಟಕವೇ ಅವರ ಮನೆ.
ಪ್ರ: ನಿಮ್ಮ ಸಿನಿಮಾದ ಮೂಲಕ ಛಿommuಟಿiಛಿಚಿಣioಟಿ ಸಾಧ್ಯವಾಗಿದೆಯೆ? ಏನನ್ನ ಹೇಳಲಿಕ್ಕೆ ಪ್ರಯತ್ನಿಸುತ್ತಿದ್ದಿರೋ ಅದನ್ನ ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೀರಾ?
ಉ: ಬಹು ಮಟ್ಟಿಗೆ ಹೌದು. ಛಿommuಟಿiಛಿಚಿಣioಟಿ ವಿಷಯದಲ್ಲಿ ನಾನು ಸುಮಾರು ಯಶಸ್ವಿಯಾಗಿದ್ದೇನೆ, ನನಗನ್ನಿಸಿದ್ದನ್ನ ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇನೆ ಅನ್ನಿಸಿದೆ. ಆದರೆ, ಒಬ್ಬ ಕಲೆಗಾರನಿಗೆ ತನ್ನ ಸೃಷ್ಟಿಯ ಬಗೆಗೆ ಎಂದೂ ಪೂರ್ತಿಯಾಗಿ ಖುಶಿ ಇರುವುದಿಲ್ಲ. ಒಂದರಿಂದ ಇನ್ನೊಂದು ಸೃಷ್ಟಿಗೆ ಅದನ್ನು ಉತ್ತಮ ಪಡಿಸುವ, ಹಾರುವ ಆತುರ ಒಬ್ಬ ಕಲೆಗಾರನಿಗೆ ಇದ್ದೇ ಇರುತ್ತದೆ.
ಪ್ರ: ಯಾವಾಗಲಾದರೂ ನಿಮ್ಮ ಸಿನಿಮಾದ “ಪ್ರೇಕ್ಷಕ”ನೊಡನೆ ಮಾತಾಡಿದ್ದೀರ? ಅಂದರೆ, ನಿಮ್ಮ ಸಿನಿಮಾ ಎಷ್ಟರ ಮಟ್ಟಿಗೆ ನಿಮ್ಮ ಭಾವನೆ, ಅನಿಸಿಕೆಗಳನ್ನು ಪ್ರೇಕ್ಷಕರಿಗೆ ಮುಟ್ಟಿಸಿದೆ ಅನ್ನುವುದನ್ನು ತಿಳಿಯುವ ಮಾನದಂಡವೇನಾದರೂ ಇದೆಯೆ?
ಉ: ಮಾನದಂಡ ಪ್ರೇಕ್ಷಕನ ಹೊರತು ಇನ್ನೇನೂ ಇಲ್ಲ. ಪ್ರೇಕ್ಷಕರು ಬಂದು ಹೇಳದ ಹೊರತು ನಮಗೆ ಹೇಗೆ ತಿಳಿಯಬೇಕು? ನೀವು ಸಿನಿಮಾ ನೋಡಿ ಬಂದು ಹೇಳಿದರೆ ಮಾತ್ರ ನಮಗೆ ಅರಿವಾಗುವುದು.
ಕೆಲವೊಮ್ಮೆ ಇದರಲ್ಲೂ ಎಡವಿ ಬೀಳುವ ಸಾಧ್ಯತೆ ಇದೆ. ಕೆಲವರು ಸುಮ್ಮನೆ ಯಾವುದೋ ಸಿನಿಮಾವನ್ನು ನನ್ನದು ಎಂದು ಭಾವಿಸಿ ಹೊಗಳುತ್ತಾರೆ. “ನಿಮಗೆಲ್ಲೋ ಕನ್‌ಫ್ಯೂಶನ್ ಆಗಿರಬೇಕು” ಅನ್ನುತ್ತೇನೆ. ಆಗಲೂ ನಿಲ್ಲಿಸದಿದ್ದರೆ, ಅವರು ಹೇಳುತ್ತಿರುವುದು ಸುಳ್ಳು ಎಂದು ನನಗೆ ಖಾತ್ರಿ!
ಆದರೆ, ಕೆಲವು ಪ್ರೇಕ್ಷಕರು ಸಿನಿಮಾದ ಬಗ್ಗೆ ನಿಜವಾದ ಕಳಕಳಿಯಿಂದ ಮಾತಾಡುತ್ತಾರೆ. ಅಂತಹವರು ಸುಮ್ಮನಿದ್ದು ಬಿಡುತ್ತಾರೆ, ಇಲ್ಲಾಂದರೆ ಕೆಲವು ಶಬ್ದಗಳಲ್ಲಿ ತಮಗನ್ನಿಸಿದ್ದನ್ನ ಹೇಳಿಬಿಡುತ್ತಾರೆ.
ಆದರೆ, ಎರಡನೇ ಗುಂಪಿಗೆ ಸೇರುವ ಜನರ ಸಂಖ್ಯೆ ಕಮ್ಮಿ!!
ಈ ಸಂದರ್ಶನ ಬರೆದು ಮುಗಿಸುವ ಹೊತ್ತಿಗೆ “ದ್ವೀಪ”ಕ್ಕೆ ರಾಜ್ಯ ಪ್ರಶಸ್ತಿ ಸಂದಿದೆ. ಎಲ್ಲಾ ಪ್ರಶಸ್ತಿಗಳು ತರುವ ಸಂಭ್ರಮವನ್ನು ಈ ಪ್ರಶಸ್ತಿ ತಂದಿಲ್ಲವಂತೆ. ಫೋನ್ ಮಾಡಿದರೆ, “ಡಿಪ್ಲೊಮ್ಯಾಟಿಕ್” ಆಗಿ ಪ್ರತಿಕ್ರಿಯಿಸಲು ಪ್ರಾರಂಭಿಸಿದ ಗಿರೀಶರು, ಸ್ವಲ್ಪ ಖಾರವಾಗಿಯೇ ಮಾತು ಮುಗಿಸಿದರು.
“ಒಬ್ಬ ಕಲಾವಿದನಿಗೆ ಯಾವ ಪ್ರಶಸ್ತಿಯೇ ಆಗಲಿ ಖುಶಿ ತರುತ್ತದೆ…ತರಲೇಬೇಕು. ಆದರೆ, “ದ್ವೀಪ”ಕ್ಕೆ ರಾಜ್ಯ ಪ್ರಶಸ್ತಿ ಬಂದಿರುವ ಬಗ್ಗೆ ನನಗೆ ಸಂತೋಶಕ್ಕಿಂತಾ ನೋವು ಜಾಸ್ತಿ ಆಗಿದೆ, ನಮ್ಮ “ರಿಡಿಥಿ” ಆಡಿರುವ ಮಾತಿನಿಂದ. ಅವರ ಪ್ರಕಾರ, ರಾಷ್ಟ್ರ ಪ್ರಶಸ್ತಿ ಬಂದಿರುವ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಕೊಡಲೇಬೇಕಾದಂಥ ಅನಿವಾರ್ಯತೆ ಇತ್ತಂತೆ. ಏನಿದರ ಅರ್ಥ? ನಮ್ಮ ಜ್ಯೂರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕು, ಧೈರ್ಯ ಇಲ್ಲವೆಂತಲೇ? ಏನಿವರು ಹೇಳುವ “ಅನಿವಾರ್ಯತೆ” ಎಂಬುದರ ಅರ್ಥ? ಸಿನಿಮಾಕ್ಕೆ ಯೋಗ್ಯತೆ ಇಲ್ಲದಿದ್ದರೂ ಕೊಟ್ಟೆವು ಎಂದೋ?”
“ಇದು ಬರೀ “ದ್ವೀಪ”ದ ವಿಷಯವಲ್ಲ. ಒಟ್ಟಿನಲ್ಲಿ ಇಂಥಾ ಧೋರಣೆ ಒಂದು ಒಳ್ಳೆಯ ಸಿನಿಮಾ ಮಾಡಬೇಕೆಂಬ ಹಂಬಲ ಇರುವ ಯಾರಿಗೂ ಪ್ರೋತ್ಸಾಹ ನೀಡುವಂಥದ್ದಲ್ಲ. ಮತ್ತು, ನಮ್ಮ ಜ್ಯೂರಿಯ ಸ್ಥಾನಕ್ಕೆ ಶೋಭೆ ತರುವಂಥದ್ದಂತೂ ಖಂಡಿತಾ ಅಲ್ಲ…”
ಅರೆ! “ಡಿಪ್ಲೋಮ್ಯಾಟಿಕ್” ಆಗಿರುವ ಗಿರೀಶರು ಹೀಗೆಲ್ಲಾ ಹೇಳಬಲ್ಲರೇ ಎಂದು ಯೋಚಿಸುತ್ತಾ, ಸರಸರನೆ ಇದನ್ನೆಲ್ಲ ಬರೆದುಕೊಳ್ಳುತ್ತಿದ್ದವಳಿಗೆ ಕೊನೆಗೂ ಉತ್ತರ ಸಿಕ್ಕಿತು.
“ನಮ್ಮಲ್ಲಿ, “ದ್ವೀಪ” ಸಿನಿಮಾಕ್ಕೂ, ಅದರ ಛಾಯಾಗ್ರಾಹಕ ರಾಮಚಂದ್ರನಿಗೂ ರಾಜ್ಯ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಎರಡೂ ಬಂದಿದೆ. ನಮ್ಮ ಜ್ಯೂರಿ ಯಾರ ಬಗ್ಗೆ ಹೇಳಿದರು (ಸಿನಿಮಾದ ಬಗ್ಗೆಯೋ ಇಲ್ಲಾ ಛಾಯಗ್ರಾಹಕರ ಬಗ್ಗೆಯೋ) ಎಂಬುದು ಸ್ಪಷ್ಟವಾಗಿಲ್ಲ…”
*****