ಎಲ್ಲ ನೇರ ಅಂತ ಲಾಯರ್ ಹೇಳಿದ್ದರು. ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. […]
ಎಲ್ಲವೂ ತುಂಬಿ ತುಂಬಿ
ಶಿವಾಜೋಯಿಸರಿಗೆ ಏನೊಂದೂ ತೋರದಿದ್ದಾಗ, ಸುಮ್ಮನೆ ಬೆಂಗಳೂರಿನ ಓಣಿ ಕೋಣಿಗಳಲ್ಲಿ ಬೀದಿ ಉದ್ಯಾನ ಸುತ್ತಬೇಕೆನಿಸುತ್ತದೆ. ಅದೇ ಅವರ ಹವ್ಯಾಸ. ಹಿಂದಿನ ದಿನಗಳಲ್ಲಿ ಪ್ರಜಾ ಸಂಕ್ಷೇಮ ವಿಚಾರಿಸಲು ಹೋಗುತ್ತಿದ್ದ ಛದ್ಮ ವೇಷಧಾರಿ ರಾಜಮಹಾರಾಜರ ಹಾಗೆ! ರಿಟೈರಾದಮೇಲೆ ಜೋಯಿಸರು […]
ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ?
ಮಧುಕರ, ಇನ್ನೊಮ್ಮೆ ಯೋಚಿಸುತ್ತ ಕೂತರೆ ಹಿಂದೆ ಅನೇಕ ಸಲ ಆದ ಹಾಗೆ ಅಡಧಳೆಯಾಗಿ, ಮನಸ್ಸಿಗೆ ನಿಷ್ಕಾರಣ ಕಣಕಣಿ ಆವರಿಸಿ; ನಿರ್ಧಾರ ಬದಲಾಗುವ ಎಲ್ಲ ಶಕ್ಯತೆಯೂ ಇದೆಯೆಂದು ಅನ್ನಿಸಿದ್ದರಿಂದ ಅಂದುಕೊಂಡದ್ದನ್ನು ಪಕ್ಕೀಮಾಡಲು ಟಪಾಲು ಬರೆದುಹಾಕಿದ್ದ. “…ಈ […]
ಬೆಸಿಲ್ ಒಪ್ಪಂದ
ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು, ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ […]
ಈಚಲು ಮರದ ಕೆಳಗೆ
ನನಗೆ ತೆಂಗಿನ ಮರವನ್ನು ಕಂಡರೆ ಮನಸ್ಸಿಗೆ ಹೇಗೆಹೇಗೆಯೋ ಆಗುತ್ತದೆ. ನಮ್ಮ ತೋಟ ಜ್ಞಾಪಕಕ್ಕೆ ಬರುತ್ತದೆ. ರೈತ ಜ್ಞಾಪಕಕ್ಕೆ ಬರುತ್ತಾನೆ. ಮನಸ್ಸಿಗೆ ಸಂಕಟ ತರುವ ನೆನಪಿವು. ಆ ತೋಟದ ಕಾಯನ್ನೂ ನಾನು ತಿನ್ನುವಂತಿಲ್ಲ. ಆ ಎಳನೀರನ್ನೂ […]
ಭೀತಿಮೀಮಾಂಸೆ
“ಕನ್ನಡ ನುಡಿ”ಯ ವಿಶೇಷ ಸಂಚಿಕೆಗೆ ಏನು ಬರೆಯೋಣ ಎಂದು ಆಲೋಚಿಸುತ್ತಿದ್ದಾಗ, ಮನಸ್ಸಿಗೆ ಗೆಲುವಾದ ಯಾವ ವಿಷಯವೂ ಬರಲಿಲ್ಲ. ಅನೇಕ ಪ್ರಶ್ನೆಗಳು ಮಾತ್ರ ತಲೆ ಹಾಕಿದವು. ಐಶ್ವರ್ಯವಂತರಿಂದ ಬಡವರಿಗೆ ತೊಂದರೆಯೋ, ಬಡವರಿಂದ ಬಡವರಿಗೆ ತೊಂದರೆಯೋ ಇದನ್ನು […]
ಜಂಗಮನಾಗಬಯಸಿದ ರಂಗಸ್ಥಾವರ – ಸಿಜಿಕೆ
ಇತ್ತೀಚೆಗೆ ಸುಬ್ಬಣ್ಣನವರ ಬಗ್ಗೆ ಬರೆಯುತ್ತಾ ನಾನು ಈ ಮತುಗಳನ್ನು ಹೇಳಿದ್ದೆ: ತೊಂಬತ್ತರ ದಶಕದಲ್ಲಿ ಸಿ.ಜಿ.ಕೆ – ಒಂದು ರೆಪರ್ಟರಿ ಮಾಡುವ ತಯಾರಿಯಲ್ಲಿ ರಂಗನಿರಂತರ ಆಯೋಜಿಸಿ ೧೫೦ ದಿನಗಳ ಕಾಲ ನಾಟಕಗಳನ್ನು ಮಾಡಿಸಿದ್ದರು. ಆದರೆ ಅಲ್ಲಿಂದ […]
ಡಾ. ಶಾಂತರಸ ಹೆಂಬೇರಾಳು ಅವರ – ಅಧ್ಯಕ್ಷೀಯ ಭಾಷಣದ ಭಾಗ ೧
೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ಬೀದರ. ೨೭ ಮತ್ತು ೨೮ ಜನವರಿ ೨೦೦೬ ನುಡಿ ನಮನ : ಪಾತಾಳದಿಂದತ್ತ ಮಾತ ಬಲ್ಲವರಿಲ್ಲ ಗಗನದಿಂದ ಮೇಲೆ ಅನುಭಾವ ತಾನಿಲ್ಲ ಒಳಗಣ ಜ್ಯೋತಿಯ […]
ಕನ್ನಡ ಸಾಹಿತ್ಯ ಸಮ್ಮೇಳನ ಭಾಷಣ – ಬೀದರ್
ಮೂಡುಬಿದರೆಯಲ್ಲಿ ನಡೆದ ೭೧ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪ್ರೊ. ಕಮಲಾ ಹಂಪನಾ ಅವರು ೨೭-೦೧-೦೬ ರಂದು ಬಿದರೆಯಲ್ಲಿ ಮಾಡಿದ ಕಿರು ಭಾಷಣ ಇಂದು ಈ ಬೀದರ್ ನಗರದಲ್ಲಿ ನಡೆಯುತ್ತಿರುವುದು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಯೋಗಾಯೋಗ […]