ಶ್ರೀ ವಿ. ರಘುರಾಮಶೆಟ್ಟಿಯವರು “ಸರ್ಕಾರಿ ಸೂತ್ರಕ್ಕೆ ಸ್ವಾಗತವೇಕೆ?” ಎಮಬ ಶೀರ್ಷಿಕೆಯಲ್ಲಿ ಬರೆದ ಲೇಖನ (ಪ್ರಜಾವಾಣಿ, ೨೪-೪-೮೨) ಕನ್ನಡ ಲೇಖಕರನ್ನು ತೀವ್ರ ಆತ್ಮಶೋಧನೆಗೆ ಹಚ್ಚಬಲ್ಲುದಾಗಿದೆ: ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ನಡೆದ ಕನ್ನಡ ಚಳುವಳಿ ಆರಂಭವಾದ […]
ವರ್ಗ: ಬರಹ
ಸ್ವಾತಂತ್ರ್ಯ ಪೂರ್ವ ಕನ್ನಡ ಸಾಹಿತ್ಯ ಮತ್ತು ರಾಷ್ಟ್ರೀಯತೆ
ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟೀಯತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಮ್ಮ ರಾಜಕೀಯ ವ್ಯವಸ್ಥೆ ಸೂತ್ರ ತಪ್ಪುತ್ತಿರುವ ಬಗೆಗಿನ ಕಳವಳವನ್ನು, ಸಮುದಾಯ ಪ್ರಜ್ಞೆ ಒಡೆದುಹೋಗುತ್ತಿರುವ ಬಗೆಗಿನ ತಬ್ಬಿಬ್ಬನ್ನೂ, ನಮ್ಮ ಸಂಸ್ಕೃತಿಯ ದ್ವಂದ್ವಗಳನ್ನು ಅರಗಿಸಿಕೊಳ್ಳಲಾಗದ ತಪ್ಪಿತಸ್ಥ ಮನೋಭಾವವನ್ನೂ ತೋರಿಸುತ್ತದೆ. […]
ಕನ್ನಡದ ಅಭಿವೃದ್ಧಿ ನನ್ನ ದೃಷ್ಟಿಯಲ್ಲಿ
ಭಾಷೆ ಜನಸಂಪರ್ಕದ ಬಹು ಪ್ರಮುಖ ಸಾಧನ. ಮನುಷ್ಯರು ತಮ್ಮ ಎಲ್ಲ ಬಗೆಯ ಅನುಭವ, ಆಲೋಚನೆಗಳನ್ನು ಭಾಷೆಯ ಮೂಲಕ ವ್ಯಕ್ತಪಡಿಸುತ್ತಾರೆ, ಇಂತಹ ಒಂದು ಅಭಿವ್ಯಕ್ತಿಮಾಧ್ಯಮ ಮನುಷ್ಯನಿಗೆ ದೊರಕಿರುವುದರಿಂದಲೇ ಅವನಿಂದ ಒಂದು ಸಮಾಜವನ್ನೂ ತನ್ಮೂಲಕ ನಾಗರಿಕತೆಯನ್ನೂ ಕಟ್ಟಲು […]
ಕರ್ನಾಟಕದಲ್ಲಿ ಪ್ರಜಾಸತ್ತಾತ್ಮಕ ಸಂಸ್ಕೃತಿಯೊಂದರ ಕಡೆಗೆ
ಕಡೆಗೂ ಸರ್ಕಾರ ಒಂದು ಕಡೆಗೆ ವಿರೋಧ ಪಕ್ಷಗಳ ಜೊತೆಗೆ, ಇನ್ನೊಂದು ಕಡೆಗೆ ಕನ್ನಡ ಸಾಹಿತಿಗಳು ಮತ್ತು ಅವರ ಹಿಂಬಾಲಕರ ಜೊತೆಗೂ ಅಂತಿಮ ರಾಜಿಯೊಂದನ್ನು ಮಾಡಿಕೊಂಡಿತು. ಈ ಚಳವಳಿ, ಅದರ ಒತ್ತಾಯಗಳು, ಹಿನ್ನೆಲೆಯ ಸಿದ್ಧಾಂತ-ಇವೆಲ್ಲ ಎಷ್ಟು […]
ಕೇಳುತ್ತಾ ಕೇಳುತ್ತಾ ಕಣ್ಣು ಮುಚ್ಚಿದೆ ನೋಡವ್ವ
ಎಲ್ಲವೂ ಸತ್ಯವನ್ನು ಮೀರಿದಂತೆ ಇತ್ತು. ನಾನು ಟ್ರೈನ್‌ನಲ್ಲಿ ಕುಳಿತಿದ್ದುದು…ಕುಳಿತಿದ್ದ ಅನುಭವವಂತೂ ಸತ್ಯ. ಟ್ರೈನ್ ಕೂಡ ತೂಗುತ್ತಿತ್ತು. ಕಿಟಕಿ ಒಂದು ಕ್ಯಾಮರಾದ ಕಿಂಡಿಯಂತೆ ಹೊರಗಿನ ಜಗತ್ತನ್ನು ತೋರಿಸುತಿತ್ತು. ಒಮ್ಮೊಮ್ಮೆ ರಭಸವಾಗಿ, ಒಮ್ಮೊಮ್ಮೆ ಮೆಲ್ಲಗೆ…ಸಾಗುತ್ತಾ ಕಂಡದ್ದಾದರೂ ಏನು? […]
ಅಯೋಧ್ಯ : ಪರಸ್ಪರ ಔದಾರ್ಯದ ಅಗತ್ಯ
ಅನುವಾದ: ಶ್ರೀಧರ ಕಲ್ಲಾಳ ಭಾರತದ ಮುಸ್ಲಿಮರೇನಾದರೂ ಅತ್ಯಂತ ಉದಾರತೆಯನ್ನು ತೋರಿ ಒಂದೊಮ್ಮೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ತಮ್ಮ ಒಪ್ಪಿಗೆಯನ್ನು ನೀಡಬಹುದೇ ಎಂದು ಕನಸು ಕಾಣುತ್ತೇನೆ. ಹಾಗಾದಲ್ಲಿ ಈ ಇಡೀ ಸಮಸ್ಯೆ ಪರಿಹಾರವಾಗಿ ಕಹಿ ಭಾವನೆಯ […]
ಏನಾಗ್ತಿದೆ?
“ಏನಾಗ್ತಿದೆ?” ಕನ್ನಡಸಾಹಿತ್ಯ.ಕಾಂ ಬಲ್ಲವರು, ಬೆಂಬಲಿಗರು, ನನ್ನ ಪರಿಚಿತ ಸ್ನೇಹಿತರು ಎಲ್ಲರದು ಒಂದೇ ಪ್ರಶ್ನೆ. ಎಲ್ಲರಿಗು ಹೇಳಿದ್ದಾಯಿತು. ಇಲ್ಲಿ ಅದನ್ನು ಪುನರುಚ್ಚರಿಸುತ್ತಿರುವುದು-ಅಗೋಚರವಾಗಿರುವ ನಮ್ಮ ಓದುಗರಿಗಾಗಿ. ಈ ಹಿಂದೆ ನಮ್ಮ “ಹೋಸ್ಟಿಂಗ್ ಸಂಸ್ಥೆ” ತಾನು ಎದುರಿಸುತ್ತಿದ್ದ ಪೈಪೋಟಿಗೆ […]
“ದ್ವೀಪ” ಚಿತ್ರದ ಸ್ತ್ರೀವಾದಿ ನಿಲುವು- ಒಂದು ವಿಮರ್ಶೆ
“ದ್ವೀಪ” ಗಿರೀಶ್ ಕಾಸರವಳ್ಳಿಯವರಿಗೆ ನಾಲ್ಕನೇ ಸ್ವರ್‍ಣಕಮಲವನ್ನು ತಂದುಕೊಟ್ಟ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಜನಪ್ರಿಯ ನಟಿಯೊಬ್ಬರು ನುರಿತ ನಿರ್‍ದೇಶಕರೊಟ್ಟಿಗೆ ಸೇರಿ ಚಿತ್ರ ಮಾಡಿದಾಗ ಫಲಿತ ಹೇಗಿರಬಹುದೆಂಬ ಕುತೂಹಲದಿಂದಲೂ ಈ ಚಿತ್ರವನ್ನು ನೋಡಲು ನಾನು ಬಹಳ […]
ಯಶವಂತ ಚಿತ್ತಾಲರಿಗೆ ಎಪ್ಪತ್ತರ ಶ್ರಾವಣ
(ಚಿತ್ತಾಲರಿಗೆ ಎಪ್ಪತ್ತು ತುಂಬಿದಾಗ ಕಾಯ್ಕಿಣಿವರ ಈ ಲೇಖನ ಹಾಯ್ ಬೆಂಗಳೂರ್ ಪ್ರಕಟಿಸಿತ್ತು.) ಹನೇಹಳ್ಳಿ, ರೇವೆಯಗುಂದೆ, ಗಾಳಿಮರಗಳು, ಹಳೇಸಂಕ, ಮರ್ಕುಂಡಿ ದೇವಸ್ಥಾನ, ಶ್ರಾವಣದ ಹಸಿರು ಬೇಲಿಪಾಗಾರ ಹಿನ್ನೆಲೆಗೆ ನಿರಂತರ ಸಮುದ್ರ ಘೋಷ. ಹೂವಿನಂಥ ಆಬೋಲೀನಳ ತುಟಿಗಳನ್ನು […]
ಕನ್ನಡದ ಮೊದಲ ಕಾದಂಬರಿಗಳಲ್ಲಿ ಆದರ್ಶ ಮತ್ತು ವಾಸ್ತವ
ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […]