ಕಂಡ ಕಣ್ಣಿನಲ್ಲಿ

ನಡೆಯುತ್ತಿದ್ದೆ ಕಂಡೆ ಮೈತುಂಬ ಪೇರಲ ಅರಳಿದ ಹಸಿರು ಚಿಗುರುಗಿಡ ಹಿಂದೆಯೇ-ಹೊಳೆಯುವ ಬೇಗಡೆ ಹುಡುಗಿ ತಂಪು ಪ್ರಾಯ ಮತ್ತೆ ರೆಪ್ಪೆ ಚಿಪ್ಪಿನಲ್ಲಿ ಒದ್ದಾಡುವ ತಳಮಳದ ಹುಳು-ಕಣ್ಣು. ಚಂದದ ಮೈಯ ಹರೆಯದ ವ್ಯಾಖ್ಯೆಯ ಅಂದದ ಪೂರ್‍ಣವಿರಾಮ. ಕೋರೆ […]

ಒಂದು ಚಂದ್ರ

ಕವಿಗಳ ಮನೆಯಂಕಣದ ಬಣ್ಣದ ಬೀಸಣಿಗೆ ನಡುವಿಂದ ತತ್ತರಿಸುತ್ತ ಹೊರ ಬಿದ್ದ ಚಂದ್ರ ಮೆಲ್ಲನಂಗಾಲನೂರಿ ಬೀದಿಗಿಳಿದ ಅತ್ತಾ ಇತ್ತಾ ನೋಡುತ್ತ ನೆರಳ ಚಿಂದಿಗಳ ಚಂದಾ ಎತ್ತುತ್ತ ಚಂದಾನೆ ಚಂದ್ರಾಮ ಕಂಪೌಂಡುಗಳೊಳಗೆ ಹಣುಕುತ್ತ ನಡೆದ ಎತ್ತಿದ ಹೂಗಳ […]

ಓ ನಿಲ್ಲಿ

ಓಯ್ ಕಮಲಗಳೇ ತುಸು ತಾಳಿ ಅರಳಬೇಡಿ ಏಯ್ ಮೋಡಗಳೇ ತುಸು ತಾಳಿ ಓಡಬೇಡಿ ಅಯ್ಯೊ ಕವಿಸಮಯಗಳೇ ತಾಳಿ ಜಾರಬೇಡಿ ನಾನೀಗ ಕಚೇರಿಯೊಂದರಲ್ಲಿ ಒಂದು ಇನ್‌ಕಂ ಸರ್‍ಟಿಫಿಕೇಟ್‌ಗಾಗಿ ಉತ್ಕಟ ತುದಿಗಾಲಲ್ಲಿ ನಿಂತು ಕಾಯುತ್ತಿರುವೆ ಮುಂಜಾನೆಯಿಂದ *****

ಇಷ್ಟು ಇಷ್ಟೆಂದೇಕೆ?

ಇಷ್ಟು ಇಷ್ಟೆಂದೇಕೆ ಕಟ್ಟೆ ಕಟ್ಟುವೆ ಮರೀ ಇದ್ದದ್ದು ಅರಿಯುವಾ ಜತೆಗೆ ಇಲ್ಲದ್ದೂ ಸರಿ ನೀನು ಇಷ್ಟೆಂದದ್ದು ಅವನಿಗಷ್ಟಾದೀತು ನಿನಗೆ ಇಶ್ಶಿಯಾದ್ದವಗೆ ಇಷ್ಟ ನಿನ್ನ ಕಣ್ಣಿನ ಸೂಜಿ ತುದಿಯಷ್ಟು ತೂತೊಳಗೆ ಜಗ ಹೊಕ್ಕು ಬರುವದು ಬಹಳೇ […]

ಹೀಗೊಂದೂರು

ಒಂದಲ್ಲಾ ಒಂದೂರಿನಲ್ಲಿ ಒಂದು ದಿನ- ಎಲ್ಲರೂ ಸತ್ತು ಬಿದ್ದರು ಬಡಿತ ನಿಂತ ಹೃದಯಗಳ ಮೇಲೆ ಹದ್ದು ಹಾರಾಡಿದವು ಕಾಕಾ ಕಾಗೆ ಕೂಗಿದವು ಮಳೆ ವ್ಯರ್‍ಥ ಸುರಿದು ಹೆಣಗಳ ಮೀಯಿಸಿತು ಇರುವೆಗಳು ಜಂಬೂ ಸವಾರಿ ಹೊರಟವು […]

ಕೋಟಿತೀರ್‍ಥ

ದಿಕ್ಕು ದಿಕ್ಕು ಹಾರುವ ಪಿಂಡದನ್ನ ತಿಂದು ಕೊಬ್ಬಿದ ಕಾಗೆಗಳ ಸರೀ ನೆರಳಡಿಗೆ ಮಡಿಸೀರೆ ಕೌಪೀನ ಒದ್ದೆ ಬೆನ್ನು ಬಿಳಿ ರುದ್ರಾಕ್ಷೆ ಚರ್‍ಮ ಹರಗುತ್ತ ಹರಿದಾಗೆಲ್ಲ ಜನಿವಾರ ನಿರ್‍ಲಿಪ್ತ ಬದಲಾಯಿಸುತ್ತ ಬಿಸಿಲು ಕಾಯಿಸುತ್ತ ಕೂತ ದಪ್ಪ […]

ರಂಗನತಿಟ್ಟಿನಲ್ಲಿ ಮೇ

ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ಹಾರುವ ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ನವಿರು ನೀರಲ್ಲದ್ದಿ ಗಗನಕ್ಕೆ ನೆಗೆಯುವ ರೆಕ್ಕೆಗಳಿಲ್ಲಾ ಇಸ್ತ್ರಿ ಹಾಕಿದ ಗಾಳಿ ಹರಿಯುವದೇ ಇಲ್ಲಾ ಪಟ್ಟೆ ಪಟ್ಟೆ ಗರಿ ಕಣ್ಣು ಕೊಕ್ಕುಗಳು ನಮ್ಮದಲ್ಲದ ಕಾಳು ಹೆಕ್ಕಲಿಲ್ಲಾ ರಂಗನತಿಟ್ಟಿನಲ್ಲಿ ಬಿಳಿಬಾತು […]

ಚುಂಬನ

ಹೆದ್ದಾರಿಯ ನಟ್ಟ ನಡುವೆ ಎದುರು ಬದುರು ಬಸ್ಸುಗಳಿಗೆ ಮೊಟ್ಟ ಮೊದಲ ನೋಟದಲ್ಲೆ ಪ್ರೇಮ ಉಕ್ಕಿತು ತಡೆಯಲಾಗದೆ ಎರಡು ಮೈಮರೆತು ಭರದಿಂದ ಮುಗಿಸಿಬಿಟ್ಟವು ಅಲ್ಲಿ ಪ್ರಥಮ ಚುಂಬನ ಪಾಪ ಒಳಗಿದ್ದ ಎಲ್ಲರದು ದಂತಭಗ್ನ *****