-೧- ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು:ಹುಗಿದ ಹಳಬಾವಿಯೊಳ ಕತ್ತಲ ಹಳಸು ಗಾಳಿ ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿಆಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೆರಗಿ ತೆಕ್ಕಾಮುಕ್ಕಿ ಹಾಯುತ್ತಿದೆ ತುಳಸಿವೃಂದಾವನದ ಹೊದರಿಗೂ. ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿಕತ್ತರಿಸಿದಿಲಿಬಾಲ ಮಿಡುಕುತ್ತದೆ. ಕತ್ತಲಲ್ಲೇ ಕಣ್ಣು […]
ಪ್ರಣಯ-ಪ್ರೀತಿ
ಹಚ್ಚ ಹಸುರಿನ ಹೊರೆಯ ಹೊಚ್ಚ ಹೊಸ ಪ್ರಾಯ. ನಗೆ ತುಂಬಿ ತುಟಿಬಿಗಿದ ಚೆಂಗುಲಾಬಿಯ ಮೊಗ್ಗೆ. ನರ ನರಗಳಲ್ಲಿ ಹುಚ್ಚೆದ್ದು ಪುಟಿವ ಬಿಸಿನೆತ್ತರ ಬುಗ್ಗೆ. ನೂರು ಮದ್ದಾನೆಗಳು ಇರುಳ ಬಾನಿಗೆ ನುಗ್ಗಿ ಢಿಕ್ಕಿಯಾಡಿವೆ. ಗಾಢಾಂಧಕಾರದೆದೆ ಬೆದೆಗೊಂಡ […]
ಹಗಲು ಗೀಚಿದ ನೆಂಟ
ನೆಗಡಿ ಕವುಚಿಕೊಂಡಿತ್ತು. ಮೂಗು ಕಿತ್ತು ಒಂದೆಡೆ ಕುಕ್ಕಿ ಇಡಬೇಕೆಂಬಷ್ಟು. ಸಣ್ಣಗೆ ಜ್ವರದ ಬಿಸಿ ಇತ್ತು. ಬಾಗಿಲು ಸದ್ದಾಯಿತು. ತೆರೆದರೆ ಬಹುಕಾಲದಿಂದ ನಿವೃತ್ತ ಎಂದು ಯಾರಾದರೂ ಕಣ್ಣುಮುಚ್ಚಿ ಹೇಳಬಹುದಾದ ವ್ಯಕ್ತಿ. ಚಪ್ಪತೆ ಮುಖ. ಬಚ್ಚಿ ಬತ್ತಿದ […]
ಈ ಎಲ್ಲ ನೋಡಿ ನಕ್ಕಿದ್ದೇನೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಸಂತರೊಡನೆ ರಾತ್ರಿಯನ್ನು ಹಗಲಾಗಿಸಿದ್ದೇನೆ ನಾಸ್ತಿಕರೊಡನೆ ವಿಗ್ರಹಗಳ ಪದತಲದಲ್ಲಿ ಮಲಗಿದ್ದೇನೆ ನಾನು ವಂಚಕರ ವಂಚಕ, ರೋಗಿಗಳ ನೋವು ನಾನು ಮೋಡ ಮತ್ತು ಮಳೆ, ನಂದನಗಳ ಮೇಲಿನ ವರ್ಷಾಧಾರೆ […]
ನೆಲ-ಮುಗಿಲು
ಕಣ ಕಣದ ಗತಿ-ಮತಿಯ ಗುರುತಿಸು, ಆದರೀಗಲೆ ಅದರ ಇತಿವೃತ್ತವನು ಬರೆಯದಿರು, ನೀನಾಗಿ ಕೊರೆಯದಿರು ದಾರಿಯನು, ಬಯಲ ಬಿಡುಗಡೆ ನುಂಗಿ ನೀರು ಹಿಡಿಯಲಿ, ವಿಶ್ವವೆಲ್ಲವು ತೆರೆದ ಬಾಗಿಲೆ. ಹಾರಿ ಹಕ್ಕಿಯಾಗಲಿ: ತುತ್ತ ತುದಿಗಿದೆ ಚುಕ್ಕಿ. ಮೀರಿ […]
ರಂಗನತಿಟ್ಟಿನಲ್ಲಿ ಮೇ
ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ಹಾರುವ ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ನವಿರು ನೀರಲ್ಲದ್ದಿ ಗಗನಕ್ಕೆ ನೆಗೆಯುವ ರೆಕ್ಕೆಗಳಿಲ್ಲಾ ಇಸ್ತ್ರಿ ಹಾಕಿದ ಗಾಳಿ ಹರಿಯುವದೇ ಇಲ್ಲಾ ಪಟ್ಟೆ ಪಟ್ಟೆ ಗರಿ ಕಣ್ಣು ಕೊಕ್ಕುಗಳು ನಮ್ಮದಲ್ಲದ ಕಾಳು ಹೆಕ್ಕಲಿಲ್ಲಾ ರಂಗನತಿಟ್ಟಿನಲ್ಲಿ ಬಿಳಿಬಾತು […]
