ಕಾಯುತ್ತೇವೆ

ನಾವು ಹುಂಬರು, ಕಣ್ಣು ತುಂಬಿದ ಕನಸುಗಳಿಗೆ ಸೂರ್ಯನ ಫಳಫಳ ಬೆಳಕನ್ನ ಸಿಂಪಡಿಸಿ ರಂಗೇರಿಸಿ ರಂಗಪಂಚಮಿಯಾಡುತ್ತಾ ಆಡುತ್ತಾ ಈ ಸಿಟಿಗೆ ಬಂದಾಗ- ನಮ್ಮ ಜೊತೆ ಬಂದ ಸೂರ್ಯ ತಪ್ಪಿಸಿಕೊಂಡ. ಅತ್ತಿತ್ತ ನೋಡುತ್ತ ಎತ್ತೆತ್ತರ ಹಾರಿ ಮಿತ್ರಾ […]

ದಿಲ್ಲಿಯಲ್ಲಿ ಕ್ಯಾಬರಿ

ದಿಲ್ಲಿಯ ನೋಡಿರೇ, ಬಾರಿನ ಏರಿಯ ಮೇಲೆ ಹಾರಿಹಾರಿ ಕುಣಿವ ದಿಲ್ಲಿಯೆಂಬ ಕ್ಯಾಬರಿಯ ನೋಡಿರೇ, ಭಾರತ ಭಾಗ್ಯವಿಧಾತನ ಸೌಭಾಗ್ಯವತಿಯ ನೋಡಿರೇ, ವಿದೇಶದ ದೀಬೆಸ್ಟಿನಿಂದ ವಮುದಿ ಮುಚ್ಚಿಕೊಂಡು, ಹದಿ ಹರೆಯದ ಬೆದೆ ಅಭಿನಯಿಸುವ ಗೋಲಮಾಲಿಯ ನೋಡಿರೇ, ಬೆಲೆಯುಳ್ಳ […]

ನಶ್ಯ

ನಶ್ಯದಲ್ಲಿ ನಾನಾ ನಮೂನೆಗಳಿವೆ. ಬಣ್ಣ, ದರ, ತರತಮ ಘಮಘಮ ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- ಮದ್ರಾಸಿನಾರ್ಮುಗಂ ನಶ್ಯ, ಬೆಂಗ್ಳೂರು ಮಗಳಗೌರಿ ನಶ್ಯ, ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು ಪ್ಯಾರಿಸ್, ಕೊನೇಪಕ್ಷ ಲಂಡನ್ ಪಿಸ್ತೂಲ್ […]

ಮಂದಾರ ಮರ

ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ- ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ: ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ. ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ ಸಾಯಲಾರೆ ಶಿವನೆ ಬದುಕಲಾರೆ […]

ನಾನು-ನೀನು

ಕಾಗದದ ಪುಟ್ಟ ದೋಣಿಯ ಈ ತುದಿಯಲ್ಲಿ ನಾನು ಆ ತುದಿಯಲ್ಲಿ ನೀನು ನಿನ್ನ ಕಣ್ಣ ನಿಮ್ನ ನೋಟದಲಿ ಮುಳುಗಿದ ನನ್ನೀ ಮೌನ ಒಳಕ್ಕೂ ಹೊರಕ್ಕೂ ನಮ್ಮಿಬ್ಬರ ನಡುವೆ ತಿರುವು ಮುರಿವಿನ ಡೊಂಕು ಡೊಂಕಿನ ನದಿಯ […]

ಪ್ರಕೃತಿ-ಪುರುಷ

-೧- (ಈಕೆ) ಹೂ. ಹಸಿ ಹೂ. (ದತ್ತ ಹೇಳಿಧಾಂಗ) ಇದೀಗ ಬಿಸಿಯಾಗುತ್ತಿರುವ, ಸಸಿಯ ಹೂ, ಹಗುರು, ನವಿರು. ಆತ ಮಧ್ಯಕಾಲೀನ ಪುರುಷ. ಎಳಸು. ಮುಖವಾಡದವ. ಸೋಕಿತವನ ದುರಾಸೆಯ ನಖ! ನಿಗಿಕೆಂಡದಿ ಕಾದ ಸಲಾಕೆಯ ಮುಖ! […]

ಸದ್ದುಗದ್ದಲದ ನಡುವೆ ಒಂದು ಕವನ

ಹೀಗೆ, ಆಳೆಯ ಮೇಲೆ ಹಾಡು ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ……..ಹಾಡು! ಈಗ ಹಾಳೆಯ ಮೇಲೆ ಹಾಡು – […]

ನದಿ ಹಾಡು

ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […]

ಅಮ್ಮನಿಗೆ – ೧

ನಾನು ನನ್ನಮ್ಮನ ಹಾಗೆ. ಪೀಚು ದೇಹ, ಎಲುಬು ಕಾಣುವ ಕೆ, ಕಣ್ಣ ಕೆಳಗೆ ಹರಡಿದ ಕಪ್ಪು ಒಳಗೆ ಹೊರೆಹೊರೆ ದುಃಖ ಹೊತ್ತ ಎದೆ ಭಾರ ಹೊರಲಾರದ ಚಿಂತೆ ಮನಸ್ಸಿಗೆ ಮೇಲೊಂದು ಮುಗುಳ್ನಗೆ. ನಾನು ನನ್ನಮ್ಮನ […]

ಸ್ವಾತಂತ್ರ್ಯ ೪೦

ಕಾಲೇಜು ಹುಡುಗ ನಾನಂದು ಅನುಭವಿಸಿದ್ದೆ ಮಧ್ಯ ರಾತ್ರಿಗೆ ಮಿಂಚು ಹೊಡೆದದ್ದು -ಮೈ ತುಂಬ, ಬಾನಿಗೇರಿದ ಮೂರು ಬಣ್ಣ -ಬಾವುಟದಿಂದ ಕನಸು- ಹುಮಳೆ ಸುರಿದು. ಒಂದು ಕ್ಷನ ಮಿನುಗಿದ್ದೆ, ಸಂಘರ್ಷ ಶತಮಾನ ಹಿಂಸೆಗೆದೆಗೊಟ್ಟಿರುವ ತ್ಯಾಗದಾವಿರ್ಭಾ, ತೇಲಿ […]