ಮಗುವಿಗೆ

ನಮ್ಮ ಬಾಳಬಳ್ಳಿಗೊಗೆದ ಹೊಚ್ಚಹೊಸತು ಮಲ್ಲಿಗೆ! ನೆಲಮುಗಿಲಿನ ಒಲವು ಗೆಲವು ಪಡೆದು ಬಂದಿತಿಲ್ಲಿಗೆ! ಪರಿಮಳಿಸಿತು ತುಂಬಿ-ತೋಟ ನಿನ್ನ ಒಂದೆ ಸೊಲ್ಲಿಗೆ (ಪುಟ್ಟ ಎಸಳುಗೈಗಳನ್ನು ಮುಟ್ಟಲೇನು ಮೆಲ್ಲಗೆ?) ನಿದ್ದೆಯಲ್ಲು ನಗುವೆ ನೀನು ನಮ್ಮ ಬುದ್ಧಿಯಾಚೆಗೆ ತೇಲುತಿರುವ ಮುದ್ದು […]

ವಿರಹ ಕೂಜನ

೧ ಮನೆಯೊಳಗೆ ಅತ್ತಿತ್ತ ಕಾಲು ಸುಳಿದಾಡುತ್ತಿವೆ ಕಂಡು ಕಂಡೂ ಕಣ್ಣು ಹುಡುಕುತಿಹವು; ಸುಮ್ಮ ಸುಮ್ಮನೆ ಕಿವಿಗಳೇನೊ ಆಲಿಸಿದಂತೆ- ತಮ್ಮ ರೂಢಿಗೆ ತಾವೆ ನಾಚುತಿಹವು. ಅಡುಗೆ ಮನೆಯೊಳು ಬರಿಯ ಹೊಗೆಯಾಡಿದಂತಿಹುದು ದಿನದ ಗುಂಜಾರವದ ನಿನದವಿಲ್ಲ; ನಡುಮನೆಗು […]

ಪಯಣ

ಬಂತು!….. ಬಂದನಿತರಲೆ ಹೊರಟು ನಿಂತಿತು ರೈಲು! ‘ಹೋಗಿ ಬರುವಿರ?’ ಎಂಬ ಧ್ವನಿಯು ಎದೆ ಕಲಕಿರಲು ಹರುಷ ದುಃಖಗಳೆರಡು ಮೌನದಲ್ಲಿ ಮೊಳಗಿರಲು ರೈಲು ಸಾಗಿತು ಮುಂದೆ ಮೈಲು ಮೃಲು! ಕಿಟಕಿಯಲಿ ಕರವಸ್ತ್ರ ಒಲುಮೆ ಬಾವುಟದಂತೆ ಎದೆಯ […]

ಮೌನಭಾರ

ತುದಿಬೆರಳಲೆನ್ನ ಗಲ್ಲವ ಪಿಡಿದು ಮುದ್ದಿನಲಿ ‘ಮುದ್ದು, ಚಿನ್ನಾ’ ಎಂದು ಕರೆಯುವವರು, ಕುರುಳ ತಿದ್ದುತ ಹೆರಳಮಾಲೆಯನ್ನು ನೇರ್‍ಪಡಿಸಿ ‘ಮಲ್ಲಿಗೆಯೆ ಮಾತಾಡು’ ಎನ್ನುವವರು. ಕಂಕಣದ ಕಿಂಕಿಣಿಯ ದನಿಯನಾಲಿಸಿ ಬಂದು ಸಪ್ಪಳಿಲ್ಲದೆ ಎದೆಯನಪ್ಪುವವರು, ಜೇನು ಹಾಡಿಗೆ ಮನವ ಮಾರುಗೊಂಡೈತಂದು […]

ನಿರೀಕ್ಷೆ

ಮನೆಯ ಮಂಗಳಮೂರ್‍ತಿ ಮೌನದಾಳದಿ ಮುಳುಗಿ ಕಣ್ಣ ರತ್ನದ ಖಣಿಯ ದೀಪಿಸಿಹಳು- ‘ಸಂಜೆಯಾಯಿತು ಈಗ ಬಂದೆ ಬರುವರು’ ಎಂದು ಒಂದೆ ಚಿಕ್ಕೆಯ ತೆರದಿ ಜಾನಿಸಿಹಳು. ತುಂಬುಗೈ ಬಾಗಿಲಿಗೆ ಇಂಬುಗೊಟ್ಟಿದೆ, ಕಾಲ ತುದಿಬೆರಳು ಹೊಸತಿಲಕ ಹೂವಾಗಿದೆ! ನೆಟ್ಟ […]

ಉಷೆಯ ಗೆಳತಿ

ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ ಏಳು ಮಂಗಳದಾಯಿ ಉಷೆಯ ಗೆಳತಿ- ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ ಏಳು ಬಣ್ಣದ ಬಿಲ್ಲೆ ಮಾಟಗಾತಿ! ಏಳೆನ್ನ ಕಲ್ಯಾಣಿ, ಏಳು ಭಾವದ ರಾಣಿ ನೋಡು […]

ಜೀವಜೀವಾಳದಲಿ ಕೂಡಿದವಳು

೧ ಸಣ್ಣ ಮನೆಯನು ತುಂಬಿ ನುಣ್ಣಗಿನ ದನಿಯಲ್ಲಿ ಬಣ್ಣವೇರಿದ ಹೆಣ್ಣು ಹಾಡುತಿಹಳು. ಕೈತುಂಬ ಹಸಿರು ಬಳೆ ಹಣೆಗೆ ಕುಂಕುಮ ಚಂದ್ರ ಜಡೆತುಂಬ ಮಲ್ಲಿಗೆಯ ಮುಡಿದಿರುವಳು. ೨ ಹೆಜ್ಜೆ ಹೆಜ್ಜೆಗಳಲ್ಲಿ ನವಿಲನಾಡಿಸುತಿಹಳು ಮಾತು ಮಾತಿಗೆ ಮುತ್ತು […]

ಜೊತೆ

ಬಾನಂಗಣದಲಿ ಕಂಕಣ ಕಟ್ಟಿದೆ ಚಂದಿರ ರೋಹಿಣಿಯರ ಬಳಸಿ, ಕಿರುಮೋಡವು ಹೆಡೆಯಾಡಿಸಿ ನಲಿದಿದೆ ಗಾಳಿಯ ಪುಂಗಿಯನನುಸರಿಸಿ. ಅಲ್ಲಿಂದಿಲ್ಲಿಗೆ ಸಾವಿರ ಮಲ್ಲಿಗೆ- ಚಿಕ್ಕೆಯ ಸೇತುವೆ ತೂಗಿಹುದು, ಇರುಳಿನ ಹೆಜ್ಜೆಯ ಗೆಜ್ಜೆಯ ಮೆಲ್ಲುಲಿ ಗಿರಿ ವನ ಕೊಳದಲ್ಲಿ ಸುಳಿದಿಹುದು. […]

ನಲುಮೆಯ ಕರೆ

ಅಲ್ಲೆ ಇರು, ಇಲ್ಲೆ ಇರು, ಎಲ್ಲೊ ಎಂತಾದರಿರು ನನ್ನ ನಲುಮೆಯ ಕರೆಗೆ ಓಗೊಡುತಿರು; ಒಮ್ಮೆ ಉದ್ವೇಗದಲಿ, ಒಮ್ಮೆ ಸಂತೃಪ್ತಿಯಲಿ ‘ಓ’ ಎಂಬ ಸವಿದನಿಯ ಸೋಂಕಿಸುತಿರು. ದೂರದಿಂ ತೇನೆಯುಲಿ ಸಾರುವಂತೆ ಮರಳಿ ಬೆಳುದಿಂಗಳಲಿ ಕರಗುವಂತೆ! ಆವ […]

ನನ್ನ ಹೊಂದಾವರೆ

ನನ್ನ ಕನಸಿನ ಹೊನ್ನ ತಾವರೆಯ ಹೂವರಳಿ ಎನ್ನ ಬೊಗಸೆಯೊಳಿಂದು ಕಂಗೊಳಿಸಿದೆ; ಎನ್ನಿನಿಯ ಭಾವಗಳ ಮಧುರ ಮಕರಂದವೂ ಮೃದುಲ ದಲದಲಗಳಲಿ ಪರಿಮಳಿಸಿದೆ! ಮಾನಸ ಸರೋವರದ ಶಾಂತಿಸೌಖ್ಯಾಭೋಗ ಸಕಲ ಸೌಂದರ್‍ಯದೀ ಮೊಗ್ಗೆಯಾಗಿ ನೇಹ ನೇಸರನೊಂದು ಮೀಸಲದ ಕಿರಣದೆಡೆ […]