(ಸ್ವಾಮಿ ಬ್ರಹ್ಮಾನಂದ ಸರಸ್ವತಿ (ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ)
ಮನವ ಶೋಧಿಸಬೇಕು ನಿಚ್ಚ. ದಿನದಿನದಿ ಮಾಡುವ ಪಾಪಪುಣ್ಯಗಳ ವೆಚ್ಚ ಎಂದು ದಾಸರು ಹಾಡಿದ್ದಾರೆ. ಪ್ರತಿಯೊಬ್ಬರ ಮನಸ್ಸು, ಬುಧ್ಧಿ, ಶುಧ್ಧವಾಗದೆ ಮೋಕ್ಷವಿಲ್ಲ. ಚಿತ್ತಶುಧ್ಧಿ, ಚಿತ್ತಶೋಧನೆ ಇದೇ ಸಾಧನೆ.
ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? |
ಅಂತರಂಗಭೀರೆಗಳ ತಾನೆ ಕಂದವನಾರ್? ||
ಗಂತಿಗಳು ಗಂಟುಗಳು ಮದಿಪುಮದಿಪುಗಳಲ್ಲಿ
ಸ್ವಂತಕೇ ದುರ್ದರ್ಶ || ಮಂ ||
ಅಂತರಂಗವನ್ನು ಬಿಚ್ಚಿ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಆಂಜನೇಯನು ಮಾತ್ರ ತನ್ನ ಎದೆಯನ್ನು ಸೀಳಿ ಶ್ರೀರಾಮನನ್ನು ತೋರಿಸಿದ. ನಮ್ಮ ಹೃದಯದಾಳದಲ್ಲಿ ಎಲ್ಲಿ ಪರಮಾಥ್ಮನ ವಾಸಸ್ಥಾನವಿದೆಯೋ ಅಲ್ಲಿಯೇ ನಮ್ಮ ಮನಸ್ಸಿದೆ. ಈ ನಮ್ಮ ಮನಸ್ಸಿನಲ್ಲಿ ಹಿಂದಿನ ನೆನಪು, ಮುಂದಿನ ಆಲೋಚನೆ, ಇಂದಿನ ಬಯಕೆಗಳೆಲ್ಲ ತುಂಬಿವೆ. ನಮ್ಮ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತದೆ. ಅಲ್ಲಿಯೇ ಕುರುಕ್ಷೇತ್ರ ಪ್ರಾರಂಭವಾಗುತ್ತದೆ.
ನಿದ್ರೆಯಲ್ಲಿ ಮಾತ್ರ ಆನಂದವಾಗಿ ಮಲಗಿರುತ್ತೇವೆ. ಈ ಆನಂದ ಬೇರೆಯವರು ತಂದು ಕೊಟ್ಟದ್ದಲ್ಲ. ಹಣಕೊಟ್ಟು ಕೊಂಡು ಕೊಂಡದಲ್ಲ. ಈ ಆನಂದ ನಮ್ಮ ನಿಜ ಸ್ವರೂಪ. ನಿದ್ರೆಯಿಂದ ಎದ್ದ ತಕ್ಷಣ ಮತ್ತೆ ಕುರುಕ್ಷೇತ್ರ ಪ್ರಾರಂಭ.
ದೇವದಾನವರ ರಣರಂಗ ಮಾನವಹೃದಯ |
ಭಾವ, ರಾಗ, ಹತಂಗಳವರ ಸೇನೆಗಳು ||
ಭೂಮಿಭವಜಯಗಳ ಭ್ರಾಂತಿಯಲಿ ಮೆರೆಯುವರು |
ಜೀವಾಮೃತವನವರು || ಮಂ ||
ಮನಸ್ಸು ಎನ್ನುವುದು ದೇವದಾನವರ ರಣರಂಗ. ದೇವದಾನವರ ರಣರಂಗದಲ್ಲಿ ಕಷ್ಟಬಂದರೂ ಕೊನೆಗೆ ದೇವತೆಗಳಿಗೇ ಅಮೃಥ ದೊರೆಯಿತು. ಹಾಗೆಯೇ ಮನಸ್ಸನ್ನು, ಭಗವಂತನ ನಾಮಸ್ಮರಣೆ ಹಾಗೂ ಕರ್ಮಯೋಗ ಇವುಗಳಿಂದ ಕಡೆದು ಶುಧ್ಧ ಮಾಡಬೇಕು. ಅಂದರೆ ಮನಸ್ಸಿಗೆ ನಿಜವಾದ ಆನಂದಾಮೃತ ಲಭಿಸುತ್ತದೆ. ಎಲ್ಲ ಋಷಿ ಮುನಿಗಳೂ ಶುಧ್ಧವಾದ ಮನಸ್ಸಿನಿಂದಲೇ ಆನಂದವನ್ನು ಪಡೆದವರು. ಮಹಾತ್ಮರು ಈ ಬ್ರಹ್ಮ ಸತ್ಯವನ್ನು ಎಷ್ಟೇ ವರ್ಣಿಸಿದರೂ ಅದು ನಮಗೆ ಅರಿವಾಗುವುದಿಲ್ಲ. ಯಾಕೆ?
ನಮ್ಮ ಸುತ್ತಲೂ ಒಂದು ಬಗೆಯ ಮಂಜು ಹರವಿಕೊಂಡಿದ್ದರಿಂದ ಬ್ರಹ್ಮ ಸತ್ಯದ ಅರಿವು ನಮಗೆ ಆಗುವುದಿಲ್ಲ.
ಪರಮೇಷ್ಟಿ ನಿಜಚಾತುರಿಯನಳೆಯ ನಿರವಿಸಿದ |
ನೆರದುಕೈಯಿಂದೆರಡು ಜಂತುಗಳ ಬಳಿಕ ||
ಇರದೆ ತಾನವನೊಂದುಗೂಡಿಸಲು ಬೆರೆಗಾಯ್ತು |
ನರಿಯು ವಾನರನು ನರ || ಮಂ ||
ದೇವರು ಮೊದಲು ಸೃಷ್ಟಿಸಿದ್ದು ನರಿ ಮತ್ತು ವಾನರ. ಒಂದು ಸಲ ಅವನಿಗೇ ಈ ನರಿ ಮತ್ತು ವಾನರ ಇವೆರಡನ್ನೂ ಒಂದೇ ಕಡಿಗೆ ಏಕೆ ಸೇರಿಸಬಾರದು? ಎಂಬ ವಿಚಾರ ಬಂತು. ಮೊದಲು ಎರಡು ಕೈಗಳಿಂದ ಬೇರೆ ಬೇರೆ ಅಂದರೆ ಒಂದು ನರಿ ಇನ್ನೊಂದು ವಾನರ ಹೀಗೆ ಸೃಷ್ಟಿ ಮಾಡಿದ್ದ. ಇಗ ಎರಡನ್ನೂ ಸೇರಿಸಿ ಒಂದು ಹೊಸ ಸೃಷ್ಟಿ ಮಾಡಿದ. ನರಿಯು + ವಾನರನು ಸೇರೆ= ನರನಾದನು.
ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು |
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ||
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು |
ನೆಲೆಯೆಲ್ಲಿ ನಿದ್ದೆಗೆಲೊ? || ಮಂ ||
ಕನಲ್ದ ಹುಲಿ ಕೆರಳ್ದ ನರಿ ಮುಳ್ಕರಡಿ ಛಲನಾಗ |
ಅಣಕು ಕಪಿ ಸೀಳ್ನಾಯಿ ಕೊದಲಾದ ಮೃಗದ ||
ಸೆಣಸುಮುಸುದಿಯ ಘೋರದುಷ್ಟಚೇಷ್ಟೆಗಳೆಲ್ಲ |
ವಣಗಿಹುವು ನರಮನದಿ || ಮಂ ||
ಸೃಷ್ಟಿ ಮಾಡಿದ ಬ್ರಹ್ಮನೇ ತನ್ನ ಸೃಷ್ಟಿಗೆ ಬೆರಗಾಗಿದ್ದಾನೆ. ನರಿಯು, ವನರನು ಸೇರಿ ನರದಾದದ್ದು ಅವನನ್ನೇ ಕಷ್ಟಕ್ಕೆ ಗುರಿ ಮಾಡಿದೆ. ಇನ್ನು ನಮ್ಮ ಪಾಡೇನು? ಗುಂಡಪ್ಪನವರು ಮನುಷ್ಯನ ಮನಸ್ಸನ್ನು ನಂಬಲು ಅಸಾಧ್ಯವಾಗಿ ಚಿತ್ರಿಸಿದ್ದಾರೆ. ಆದರೂ, ಅದೆಲ್ಲವೂ ಸತ್ಯ.
ಹಸಿದ ಹುಲಿ ತನ್ನ ಎದುರಿಗೆ ಸಿಲುಕಿದ ಮನುಷ್ಯನನ್ನೇ ಆಗಲಿ, ಇಲ್ಲವೆ ಪ್ರಾಣಿಯನ್ನೇ ಆಗಲಿ ಹಿಸುಕಿ ತಿನ್ನುತ್ತದೆ. ಹರಿವ ಹಾವು, ಅದನ್ನು ತಡವಿದರೆ ಮಾತ್ರ ಕಚ್ಚುತ್ತದೆ. ಪ್ರಪಂಚದಲ್ಲಿಯ ಯಾವುದೇ ಪ್ರಾಣಿಯಿರಲಿ, ಅದರ ಹುಣ ಧರ್ಮ ಹೀಗೆಯೇ ಎಂದು ಹೇಳಬಹುದು. ಆದರೆ ಮನುಷ್ಯನೊಬ್ಬನು ಎದುರಿಗೆ ಬಂದರೆ, ಜಾಗೃತರಾಗಿರಬೇಕು. ಯಾಕೆ? ಅಂದರೆ ಅವನ ಮೇಲೆ ಸಂಪೂರ್ಣ ಭರವಸೆ ಇಡಲು ಸಾಧ್ಯವಿಲ್ಲ. ಅವನಲ್ಲಿ ಹುಲಿ, ಕರಡಿ, ನಾಯಿ, ನರಿ ಮುಂತಾದ ಎಲ್ಲ ಪ್ರಾಣಿಗಳ ಮತ್ತು ಜೀವ ಜಂತುಗಳ ಗುಣಗಳೆಲ್ಲವೂ ಸೇರಿಕೊಂದಿವೆ. ಅದಕ್ಕೇ ನರನು ಶತಶಿರನು ಎಂದು ಹೇಳಿದ್ದಾರೆ. ಅವನ ಅಂತಃಕರಣ ಮನಸ್ಸು ಬುಧ್ಧಿಯಲ್ಲಿ ಎಲ್ಲ ರೀತಿಯ ಕಶ್ಮಲ ಸೇರಿಕೊಂಡಿವೆ. ಅದೆ ಸ್ಥಳದಲ್ಲಿ ಪರಮಾಥ್ಮನ ವಾಸಸ್ಥಾನ, ಶಾಂತಿ ಮತ್ತು ಆನಂದವಿದೆ. ಈ ಆನಂದ ದೊರಕಬೇಕಾದರೆ ಮೊದಲು ಚಿತ್ತಶುದ್ಧಿಯಾಗಬೇಕು.
ಈ ಜಗದ ಗಂಡ ಪರಿಪರಿ ಹಸಿವ ಕೆಣಕುತಿರೆ |
ಭೋಜನವ ನೀದೆನೆನೆ ಮನ ಸುಮ್ಮನಿಹುದೆ? ||
ಸಾಜಗಳ ಕೊಲ್ಲೆನುವ ಹಟಯೋಗಕಿಂತ ಸರಿ |
ರಾಜಯೋಗದುಪಾಯ || ಮಂ ||
ಈ ಶ್ಲೋಕದಲ್ಲಿ ಮನಸ್ಸಿನ ಎರಡು ಮುಖಗಳನ್ನು ಚಿತ್ರಿಸಿದ್ದಾರೆ. ವೈರಾಗ್ಯದಲ್ಲಿ ಮೂರು ತರಹದ ವಿರಾಗ್ಯಗಳಿವೆ. ಉದರ ವೈರಾಗ್ಯ, ಅಭಾವ ವೈರಾಗ್ಯ ಮತ್ತು ಸ್ಮಶಾನ ವೈರಾಗ್ಯ. ಸಾಮಾನ್ಯವಾಗಿ ಇವು ಪ್ರಥಿಯೊಬ್ಬರಲ್ಲಿ ಸಂದರ್ಭಕ್ಕೆ ಅನುಸಾರವಾಗಿ ಬಂದೇ ಬರುತ್ತವೆ. ಈ ವೈರಾಗ್ಯ ತಾತ್ಪೂರ್ತಿಕವಾಗಿ ಇರುತ್ತದೆ. ಒಂದು ಸುಂದರವಾದ ವಸ್ತು ಕಣ್ಣಿಗೆ ಬಿದ್ದರೆ ತಕ್ಷಣ ಆ ವೈರಾಗ್ಯಮಾಯವಾಗಿ ಮತ್ತೆ ಆ ವಸ್ತುವನ್ನು ಪಡೆಯುವ ಆಶೆ ಪ್ರಾರಂಭವಾಗುತ್ತದೆ. ಮಾನವನ ಮನಸ್ಸು ಎಷ್ಟೇ ತ್ಯಾಗದಲ್ಲಿದ್ದರೂ ಹೊರ ಪ್ರಪಂಚದಲ್ಲಿಯ ವಿಷಯಗಳು ಅವನನ್ನು ತಮ್ಮ ಕಡೆಗೆ ಸೆಳೆಯುತ್ತವೆ. ಈ ಮನಸ್ಸನ್ನು ಸೆಳೆದೊಯ್ಯುವವು ಇಂದ್ರಿಯಗಳು. ಈ ಪಂಚೇಂದ್ರಿಯಗಳಲ್ಲಿ ನಾಲಿಗೆ ಬಹಳ ಪ್ರಧಾನ್ಯವಾದದ್ದು. ಎಲ್ಲ ಇಂದ್ರಿಯಗಳು ಒಂದೇ ಕೆಲಸ ಮಾಡಿದರೆ ನಾಲಿಗೆ ಒಂದೇ ವೇಳೆಗೆ ಎರಡು ಮತ್ವದ ಕೆಲಸಗಳನ್ನು ಮಡುತ್ತದೆ. ಎರಡು ಇಂಚಿನ ನಾಲಿಗೆಗೆ ಜಗತ್ತನ್ನೇ ಬದಲಿಸುವ ಶಕ್ತಿ ಇದೆ. ಮಂಥರೆಯ ಚಾದಿಯಿಂದ ರಾಮನ ಪಟ್ಟಾಭಿಷೇಕವಾಗದೆ ರಾಮಾಯಣವಾಯಿತು. ಇನ್ನೊಂದು ನಾಲಿಗೆ ವಿಷಯವೆಂದರೆ ಅದರ ರುಚಿ, ನಾಲಿಗೆ ಸದಾಕಾಲ ಅಮೃತಪಾನಂ ಮೃಷ್ಟಾನ್ನ ಭೋಜನ ಆಶಿಸುತ್ತದೆ. ವೈಧ್ಯರು ಹಾಲು ಅನ್ನ ಹೇಳಿದರೆ ಇದು ಬಯಸುವುದು ಮೊಸರನ್ನ ಉಪ್ಪಿನಕಾಯಿ.
ಇಂತಹ ಚಪಲವಾದ ಇಂದ್ರಿಯಗಳನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡು ಜೀವನ ಸಾಗಿಸಬೇಕು. ಮನಸ್ಸಿಗೆ ಸೇವಿಸುವುದರಿಂದ ದೊರಕುವ ತೃಪ್ತಿ, ಇಲ್ಲವೇ ಚಾದಿಯಿಂದ ದೊರಕುವ ಆನಂದ, ತಾತ್ಪೂರ್ತಿಕವಾಗಿದ್ದು ಸದಾನಂದವನ್ನು ಇತ್ತ ಹಾಗೆ, ನಮ್ಮನ್ನು ಮೋಸ ಮಾಡುತ್ತದೆ. ಇದರ ಅರಿವು ಯಾರಿಗೂ ಇಲ್ಲ. ಏಕೆಂದರೆ ಮನಸ್ಸಿನ, ಬುದ್ಧಿಯ ಆಳಕ್ಕೆ ಯಾರೂ ಇಳಿದಿಲ್ಲ.
ಗುಂಡಪ್ಪನವರು ಹೇಳುತ್ತಾರೆ. ಮನಸ್ಸು, ಬುದ್ಧಿಯನ್ನು ತಮ್ಮ ಸ್ವಾಧೀನದಲ್ಲಿಟ್ಟುಕೊಳ್ಳುವುದೇ ಸಾಧನೆ.
ದೇಹವೆಂಬುದು ಕುದುರೆಯಾತ್ಮನದರಾರೋಹಿ |
ವಾಹನವನುಪವಾಸವಿರಿಸೆ ನಡೆದೀತೆ? ||
ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ? |
ಸ್ನೇಹವೆರದಕಮುಚಿತ || ಮಂ ||
ದೇಹವು ಕುದುರೆಯಾದರೆ ಆತ್ಮನು ಅಶ್ವಾರೋಹಿ ಅಂದರೆ ಕುದುರೆಯನ್ನು ನಡೆಯಿಸುವವನು. ಕುದುರೆಯನ್ನು ನಡೆಸಬೇಕಾದರೆ ಅದಕ್ಕೆ ಆಹಾರ, ನೀರು ಅತ್ಯವಶ್ಯ. ಶರೀರವು ಸಧೃಡವಾಗಿದ್ದರೆ, ಮನಸ್ಸು ಹಿಡಿತದಲ್ಲಿರುತ್ತದೆ. ಆದ್ದರಿಂದ ಆತ್ಮಸಾಧನೆಗಾಗಿ ದೇಹವನ್ನು ಕಡೆಗಣಿಸಬಾರದು. ಶರೀರಮಾದ್ಯಂ ಖಲು ಧರ್ಮ ಸಾಧನಂ.
ಮನಸ್ಸು ಪ್ರಶಾಂತವಾಗಿ ಆತ್ಮನಲ್ಲಿ ನಿಲ್ಲಬೇಕಾದರೆ ಸದೃಡವಾದ ಶರೀರ ಮತ್ತು ಜ್ಞಾನ ಅತ್ಯವಶ್ಯ.
ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ |
ಆಯಸಂಬದಿಸದವೊಲಂತರಾತ್ಮನನು ||
ಮಾಯೆಯೊದನಾದುತ್ತ, ಬೊಮ್ಮನನು ಭಜಿಸುತ್ತ |
ಆಯುವನು ಸಾಗಿಸೆಲೊ || ಮಂ ||
ಖದ್ಯೋತನಂತೆ ಬಿಡುಗೊಳದೆ ಧರ್ಮವ ಚರಿಸು |
ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು ||
ಗೆದ್ದುದೇನೆಂದು ಕೇಳದೆ, ನಿನ್ನ ಕೈ ಮಿರೆ |
ಸದ್ದು ಮಾಡದೆ ಮುಡುಗು || ಮಂ ||
ಸೂರ್ಯನು ಒಂದು ದಿನವೂ ಬಿಡುವಿಲ್ಲದೇ ಪ್ರಪಂಚವನ್ನು ಬೆಳಗುತ್ತಲೆ ಇರುತ್ತಾನೆ. ಪೃಥ್ವಿ, ನೀರು, ಗಾಳಿ ಗಿಡಮರಗಳು ಪರಮಾತ್ಮನ ಸೇವೆ ಮಾಡುತ್ತಲೇ ಇವೆ. ಅವುಗಳಿಗೆ ಯಾವುದೆ ರೀತಿಯ ಪ್ರತಿಫಲದ ಅಪೇಕ್ಷೆ ಇಲ್ಲ. ಇದರಂತೆಯೇ ಹೊರ ಪ್ರಪಂಚದಲ್ಲಿ ನಿನ್ನ ಕರ್ತವ್ಯಕರ್ಮಗಳನ್ನು ಫಲಾಪೇಕ್ಷೆ ಇಲ್ಲದೇ ಪರಮಾತ್ಮನ ಸೇವೆ ಎಂದು ತಿಳಿಧು ಮಾಡು. ನಿನ್ನ ದೇಹವನ್ನು ಗಂಧದ ಕೊರಡಿನ ಹಾಗೆ ಸವೆಸು.
ವಿದ್ಯುಲ್ಲತೆಯ ತೆರದಿ – ಬೆಳಕಿನ ಹಾಗೆ ನಿನ್ನ ಹತ್ತಿರದಲ್ಲಿರುವವರಿಗೆ ಆನಂದವನ್ನು ನೀಡು. ಹೊರಪ್ರಪಂಚದಲ್ಲಿ ಪ್ರಸನ್ನಚಿತ್ತದಿಂದ ಜೀವನ ಸವೆಸುವುದೇ ಸಾಧನೆ.
ತರಚು ಗಾಯವ ಕೆರೆದು ಹುಣ್ಣನಾಗುಪುದು ಕಪಿ |
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ||
ಧರೆಯೆಲ್ಲವನು ಶಪಿಸಿ, ಮನದಿ ನರಕವ್ ನಿಲಿಸಿ |
ನರಳುವುದು ಬದುಕೇನೋ? || ಮಂ ||
ಕೋತಿಗೆ ಗಾಯವಾದರೆ ಅದನ್ನೇ ಮತ್ತೆ ಮತ್ತೆ ಪರಚಿಕೊಂಡು ಗಾಯಮಾದಿಕೊಳ್ಳುತ್ತದೆ. ಯಾಕೆ? ಅದಕ್ಕೆ ಹಿತವಾಗುತ್ತದೆ. ಆದರೆ ಗಾಯವು ದೊಡ್ಡಾಗುವುದೆಂಬುದರ ಅರಿವು ಅದಕ್ಕೆ ಇರುವುದಿಲ್ಲ. ನಮ್ಮದೂ ಅದೇ ಜಾತಿ. ಮಂಗನಿಂದ ಮಾನವ ಕೊರಥೆಯೊಂದನ್ನು ನೀನು ನೆನೆನೆದು ಕೆರಳಿ.
ಪ್ರತಿಯೊಬ್ಬರಿಗೂ ಒಂದಲ್ಲ ಒಂದು ನೋವು ಇದ್ದೇ ಇರುತ್ತದೆ. ಆದ ಗಾಯ, ನೋವನ್ನು ಮರೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಒಂದು ಟೇಪ್‌ರಿಕಾರ್ಡರ್ ಇದ್ದ ಹಾಗೆ, ಸಂದರ್ಭಕ್ಕೆ ಅನುಸಾರವಾಗಿ ತನ್ನ ಟೇಪ್ ಹಚ್ಚಿಯೇ ಬಿಡುತ್ತದೆ. ಮನಸ್ಸಿಗೆ ನೋವು ಮಾಡಿದವರು ಯಾರು? ಮಾಡಿದ ವೇಳೆ, ವಾರ, ತಿಥಿ ಎಲ್ಲವನ್ನೂ ತಿಳಿಸಿಕೊಡುತ್ತದೆ. ಒಮ್ಮೆ ಟೇಪ್ ಹಚ್ಚಿ ಸುಮ್ಮನಾಗುತ್ತಿದ್ದರೆ ತೊಂದರೆಯೇ ಇರಲಿಲ್ಲ. ಆದರೆ ಸಂದರ್ಭ ದೊರೆತಾಗ ಮರೆಯದೇ ಮತ್ತೆ ಟೇಪ್ ಹಚ್ಚುತ್ತದೆ. ಇದರಿಂದ ಮನಸ್ಸಿಗಾದ ನೋವನ್ನು ನೆನೆನೆನೆದು ಹೆಚ್ಚು ಮಾಡಿಕೊಳ್ಳುತ್ತೇವೆ. ಕೋತಿಗೂ ನಮಗೂ ಯಾವ ವ್ಯತ್ಯಾಸವೂ ಇಲ್ಲ.
ಮನಸ್ಸಿಗೆ ಶಾಂತಿ, ಆನಂದ ದೊರಕಬೇಕೆಂಬ ಆಶೆ ಇದ್ದರೆ ಪ್ರಪಂಚವನ್ನಾಗಲಿ, ಬಂಧುಬಳಗದವರನ್ನಾಗಲಿ ಇಲ್ಲವೇ ವಿಧಿಯನ್ನಾಗಲಿ ತೆಗಳದೆ, ಆ ಮನಸ್ಸಿನ ಪ್ರಶಾಂತತೆಯನ್ನು ಕಾಯ್ದುಕೊಳ್ಳುವ ಸಾಧನೆ ಮಾಡು.
ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ |
ಚಿಂತೆ ಕುಮುಲದು ಹೊಗೆಗಳೊತ್ತವಾತ್ಮವನು ||
ಶಾಂತಿ ಬೇಳ್ಪೊದೆ ಮನೆಗೆ ಗೋಡೆವೊಲೆ ಕಿಟಕಿಯುಂ |
ಸಂತತದಪೇಕ್ಷಿತವೊ || ಮಂ ||
ಮನೆಯಲ್ಲಿ ಅಂದವಾಗಿ ಹಾಳಿಯಾದಬೇಕಾದರೆ ಒಂದಕ್ಕೊಂದು ಎದುರುಬದುರಾಗಿ ಕಿಟಕಿಗಳು ಇರಬೇಕು. ಅಂದವಾಗಿ ಗಾಳಿ ಬೀಸುವಲ್ಲಿ ರೋಗ-ರುಜಿನಗಳ ಭಯವಿಲ್ಲ. ಗುಂಡಪ್ಪನವರು ನಮ್ಮ ಮನಸ್ಸಿನಲ್ಲಿಯೂ ಗಾಳಿಯಾಡುವ ಹಾಗೆ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ. ಅದು ಹೇಗೆ ಎಂದರೆ? ಕಷ್ಟಗಳು ಬಂದಾಗ, ಮನಸ್ಸಿಗೆ ನೋವಾದಾಗ, ತಕ್ಷಣ ಆನೋವನ್ನು ಮರೆಯಬೇಕು. ಹಿಂದೆ ಘತಿಸಿದ ಘಟನೆಗಳನ್ನು ನೆನೆನೆನೆದು ಅಳುತ್ತಾ ಕುಳಿತರೆ ಕೊನೆಯವರಗೂ ಅಳುತ್ತಲೆ ಇರಬೇಕಾಗುತ್ತದೆ. ಇದಕ್ಕೆ ಯಾರಿಂಹಲೂ ಸಹಾಯ ದೊರಕುವುದಿಲ್ಲ.
ಮನಸ್ಸನ್ನು ಪ್ರಶಾಂತವಾಗಿತ್ತುಕೊಳ್ಳುವದೇ ಸಾಧನೆ.
ಚಿಂತೆಸಂತಾಪಗಳು ಮನಸಿಗೆ ವಿರೇಚಕವೊ |
ಸಂತಸೋತ್ಸಾಹಗಳೆ ಪಥ್ಯದುಪಚಾರ ||
ಇಂತುಮಂತುಂ ನಡೆಯುತಿರುವುದಾತ್ಮಚಿಕಿತ್ಸೆ |
ಎಂತಾದೊದಂತೆ ಸರಿ || ಮಂ|
ಅಂತಾನುಮಿತಾನುಮೆಂತೊ ನಿನಗಾದಂತೆ |
ಶಾಂತಿಯನೆ ನೀನರಸು ಮನ ಕೆರಳಿದಂದು ||
ಸಂತವಿದುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |
ಸ್ವಾಂತಮಂ ತಿದ್ದುತಿರು || ಮಂ ||
ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಕಷ್ಟ, ಸುಖ, ಲಾಭ, ನಷ್ಟ ಇವು ಬರುತ್ತವೆ. ಶ್ರೀರಾಮಚಂದ್ರನಿಗೆ ವನವಾಸ, ನಳಚಕ್ರವರ್ತಿಗೆ ಶನಿಕಾತ, ಮೀರಾಬಾಯಿಗೆ ವಿಷಪಾನ ಮತ್ತು ದಶರಥನಿಗೆ ನಾನಾ ರೀತಿಯ ಬವಣೆ ಇವೆಲ್ಲವನ್ನೂ ಕೇಳುತ್ತೇವೆ. ಆದಿದೈವಿಕ – ಆಧಿಭೌತಿಕ – ಆಧ್ಯಾತ್ಮಿಕ ಎಂಬ ನಾನಾ ರೀತಿಯ ತಾಪತ್ರಯಗಳು ಬಂದೇ ಬರುತ್ತವೆ. ಈ ತಾಪತ್ರಯಗಳಲ್ಲಿ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳುವ ಸಾಧನೆ ಮಾಡಬೇಕು. ನಮಗೆ ಸುಖ, ದುಃಖದ ಅನುಭವವಾಗುವುದು ನಮ್ಮ ಮನಸ್ಸಿನ ಮೂಲಕ. ಗಾಡವಾದ ನಿದ್ರೆಯಲ್ಲಿ ಹೊರಗಿನ ಪ್ರಪಂಚದ ಅನುಭವ ನಮಗಾಗುವುದಿಲ್ಲ. ಅದೇ ಎದ್ದ ತಕ್ಷಣ ನಮ್ಮ ಜೊತೆಗೇ ನಮ್ಮ ಅಂತಃಕರಣ ಮನಸ್ಸು-ಬುದ್ಧಿ ಏಳುತ್ತದೆ. ಈ ಅಂತಃಕರಣ ಮನಸ್ಸು-ಬುದ್ಧಿಯನ್ನು ತಿದ್ದಿಕೊಂಡು ಶಾಂತರೀತಿಯಿಂದ ಇರು. ಈ ಸಾಧನೆಯೇ ಜೀವನದ ಉಸಿರಾಗಲಿ. ಬಂದದ್ದೆಲ್ಲವೂ ಬರಲಿ ಮನಸ್ಸು ಪ್ರಶಾಂತವಾಗಿರಲಿ. ಪರಮಾತ್ಮನ ಕೃಪೆಯಿಂದಲೇ ಮನಸ್ಸು ಪ್ರಶಾಂತವಾಗಿರಲು ಸಾಧ್ಯ.
ಎಲ್ಲ ಸಂತರೂ ಶರಣರೂ ಮತ್ತು ದಾಸರೂ ದೇವದೃಷ್ಟಿಯಿಂದ ಪ್ರಪಂಚವನ್ನು ಕಂಡರು.
ಇಯಂ ಪೃಥ್ವೀ ಸರ್ವೇಷಾಂ ಭೂತಾನಾಂ ಮಧು: ಜಗತ್ತನ್ನು ಮನೋಹರವಾಗಿ ಕಂಡರು. ಅವರು ಪ್ರಪಂಚದ ಅತೀ ವಿಮರ್ಶೆಗೆ ಹೋಗಲಿಲ್ಲ. ಜಗತ್ತಿನಲ್ಲಿ ಕೈಯಾಡಿಸಿದರೆ ಬರುವುದೇನು ಕೊಳಚೆ, ಕೈ ಹೊಲಸು, ಮನ ಹೊಲಸು ಅಂತೇ ಬಸವಣ್ಣನವರು ಹೇಳಿದ್ದಾರೆ. ಲೋಕದ ಡೊಂಕವನು ನೀವೇಕೆ ತಿದ್ದುವಿರೆ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ.
ಮಹಾತ್ಮರು ಎಷ್ಟೇ ಹೇಳಿದರೂ ಪ್ರಾಪಂಚಿಕರಿಗೆ ಸ್ತ್ರೀ, ಪುತ್ರ, ಧನ, ಕನಕಾದಿಗಳೇ ಬ್ರಹ್ಮ, ಮುಪಾದರೂ ಅದೇ ವಿಚಾರ. ತಮಗೆ ಅರಿವಿಲ್ಲದಂತೆ ಅವರು ಪ್ರಪಂಚದಲ್ಲಿ ಅಷ್ಟು ಮಗ್ನರಾಗಿರುತ್ತಾರೆ.
ಮಹಾತ್ಮರು ಹೇಳುವುದು, ಮನಸ್ಸನ್ನು ಭಗವಂತನಿಗೆ ಸಮರ್ಪಣೆ ಮಾಡು. ಪ್ರಸನ್ನ ಚಿತ್ತನಾಗಿರು. ಇದೇ ಸಾಧನೆ, ಮಾಡು.
ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ-? |
ನೊಳಗು ಶೆಕೆಯಾಗಧವೊಲ್ ಅಳವದಿಸೆ ಹೊರಗ ||
ಸೆರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ |
ಪರಮಜೀವನಯೋಗ || ಮಂ ||
ಪ್ರತಿಯೊಬ್ಬರಿಗೂ ಹುಟ್ಟಿ ಬಂದ ಮೇಲೆ ಬಾಲ್ಯ, ಕೌಮಾರ್ಯ, ಯೌವನ, ವೃದ್ಧಾಪ್ಯ ಇವು ನಾಲ್ಕು ಅವಸ್ಥೆಗಳು ಬಂದೇ ಬರುತ್ತವೆ. ಪ್ರಾಪಂಚಿಕರಿಗೆ ತಮ್ಮ ಪ್ರಪಂಚದಲ್ಲಿ ತಂದೆ, ತಾಯಿ, ಮಡದಿ, ಮಕ್ಕಳು, ಬಂಧು-ಬಾಂಧವರೊಡನೆ ಬರುವ ಅನೇಕ ಸಂದರ್ಭಗಳಲ್ಲಿ ತಮ್ಮ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದು ಕಠಿಣವಾಗುತ್ತದೆ. ಆದರೂ, ಮನಸ್ಸಿಗೆ ಯಾರಾದರೂ ನೋವು ಮಾಡಿದರೆ ತಕ್ಷಣ ಬುದ್ಧಿಯಿಂದ ತಿದ್ದಿಕೊಂಡು ತಾಳ್ಮೆಯಿಂದ ಇರಬೇಕು. ಚಿತ್ತವು ಸಮಾಧಾನದಿಂದ ಇರುವುದಕ್ಕೆ ವ್ಯವಸಾಯಾತ್ಮಿಕ ಬುದ್ಧಿ ಎನ್ನುತ್ತಾರೆ.
ಶ್ರೀ ಕೃಷ್ಣನು ಗೀತೆಯಲ್ಲಿ ಇದನ್ನೇ ಹೇಳಿದ್ದಾನೆ. ಬುದ್ಧಿಯನ್ನು ಸಮತ್ವದಲ್ಲಿಟ್ಟುಕೊಳ್ಳುವುದೇ ಸಾಧನೆ.
ಅನುಭವದ ಪರಿ ನೂರ್ವರಿಗೆ ನೂರು ನೂರು ಪರಿ |
ದಿನವೊಂದರೋಳೆ ಅದೊಬ್ಬಂಗೆ ನೂರುಪರಿ ||
ಎಣಿಪುದಾರನುಭವವನ್, ಆವ ಪ್ರಮಾಣದಲಿ? |
ಮಣಲ ಗೋಪುರವೊ ಅದು || ಮಂ ||
ತರಿದುಬಿಡು, ತೊರೆದುಬಿಡು, ತೊಡೆದುಬಿಡು ನೆನಹಿಂದ |
ಕರೆಕರೆಯ ಬೇರುಗಳ, ಮನದ ಗಂಟುಗಳ ||
ಉರಕೆ ಸೊಗಸೆನಿಸಿದಾ ಪ್ರೀತಿಹಾರಮುಮೊರ್ಮೆ |
ಉರಳಪ್ಪುದಾತ್ಮಕ್ಕೆ || ಮಂ ||
ಪ್ರತಿಯೊಬ್ಬರಿಗೆ ಜೀವನದಲ್ಲಿ ನಾನಾ ರೀತಿಯ ಅನುಭವಗಳು ಬರುತ್ತವೆ. ಒಬ್ಬರ ಅನುಭವದ ಹಾಗೆ ಇನ್ನೊಬ್ಬರ ಅನುಭವ ಇರಲು ಸಾಧ್ಯವಿಲ್ಲ. ಅದೇಕೆ? ಒಬ್ಬರಿಗೆ ಅದೂ ಒಂದೇ ದಿವಸದಲ್ಲಿ ಸಾಕಷ್ಟು ಅನುಭವಗಳು ಬರುವ ಸಾಧ್ಯತೆ ಇದೆ. ಅದಕ್ಕಾಗಿ ಯಾರ ಅನುಭವವೂ ಪ್ರಮಾಣವಲ್ಲ. ಸಂಸಾರದಲ್ಲಿ ಕಷ್ಟಗಳು ಬರುವಾಗ ಧೈರ್ಯಗುಂದಬೇಡ. ಅವುಗಳನ್ನು ಎದುರಿಸಿ ನಗುನಗುತ್ತ ಬಾಳು. ಪ್ರತಿಯೊಬ್ಬರ ನಿಜ ಸ್ವರೂಪವೇ ಆನಂದ. ಈ ಆನಂದವನ್ನು ಕಳೆದುಕೊಳ್ಳಬೇಡ. ಪ್ರತಿದಿವಸವೂ ಮನಸ್ಸಿಗೆ ಆನಂದವನ್ನು ತುಂಬಿಕೊಂಡರೆ, ಸೂರ್ಯ ಉದಯಿಸಿದ ಹಾಗೆ, ಆನಂದವಾಗಿ ಬಾಳಬಹುದು ಎಂದು ಗುಂಡಪ್ಪನವರು ಹೇಳುತ್ತರೆ.
ಶಿಷ್ಯನ ಪ್ರಶ್ನೆ: ನಾವು ಎಷ್ಟೇ ಪ್ರಯತ್ನಪಟ್ಟರೂ ನಮ್ಮ ಮನಸ್ಸು ಅಲ್ಪ ಸಮಯ ಪ್ರಶಾಂತವಾಗಿರುತ್ತದೆ. ಮತ್ತೆ ಅದೇ ಹಿಂದಿನ ಕೊಳಚೆಯಲ್ಲಿ ಬೀಳುತ್ತದೆ ಏನು ಮಾಡುವುದು? ನಿರಾಶೆಯಾಗದೆ ಸಾಧನೆಯ ಮಾರ್ಗದಲ್ಲಿರು.
ಅರೆದಿನದ ನಮ್ಮ ಯತ್ನದಿನದೇನೆನ್ನದಿರು |
ಕಿರಿದುಮೊದಗೂಡಿರಲು ಸಿರಿಯಹುದು ಬಾಳ್ಗೆ ||
ಪರಿಪೋಷಿಸದ ನಿನ್ನೊಡಲ ದಾರಿಮರದ ಫಲ? |
ಕಿರುಜಾಜಿ ಸೊಗಕೊಡದೆ? || ಮಂ ||
ಗುಂಡಪ್ಪನವರು ಸಾಧಕರಿಗೆ ಹುರಿದುಬಿಸುತ್ತಿದ್ದಾರೆ. ಸಾಧನೆ ಬಹಳ ಕಠಿಣ, ಸಾಧಕರಿಗೆ ಸಾಧನೆಯ ಮಾರ್ಗದಲ್ಲಿ ಎಡವಿ ಬೀಳುವ ಸಂಭವಗಳು ಹೆಚ್ಚಾಗಿ ಬರುತ್ತವೆ. ಸಾಧನೆಯಲ್ಲಿ ಎಡವಿ ಬಿದ್ದಾಗ ನಿರಾಶೆಯಾಗದೆ ಆ ಮಾರ್ಗದಲ್ಲಿ ಮುಂದೆ ಹೋಗುವ ದೃಷ್ಟಿ ಇರಲಿ. ಅರೆದಿನದ ನಮ್ಮ ಯತ್ನದಿನದೇನೆನ್ನದಿರು. ನಾನು ಎಷ್ಟು ವರ್ಷಗಳಿಂದ ಸಾಧನೆ ಮಾಡಿದೆ. ಆದರೆ ಅದರಿಂದ ಯಾವ ಪ್ರಯೋಜನವೂ ಆಗದೆ, ಹಾಗೆಯೇ ಉಳಿಯಿತು ಎಂದು ಎದೆಹುಂದಬೇಡ. ಧೈರ್ಯವಿರಲಿ, ಸಾಹಸವಿರಲಿ ನೀನು ಮಾಡಿದ ಸಾಧನೆ ನಿನಗೆ ಅರಿವಿಲ್ಲದಂತೆ ಅಲ್ಪಮಟ್ಟಿಗಾದರೂ ಫಲವನ್ನು ನೀಡಿರುತ್ತದೆ. ಹೇಗೆಂದರೆ ಮನುಷ್ಯನು ಬಿಸಿಲಿನಲ್ಲಿ, ನಡೆದು, ದಣಿದು ಹಸಿದಾಗ, ಒಂದು ಚಿಕ್ಕದಾದ ಬೋರೆಹಣ್ಣು ಅವನಿಗೆ ಅಲ್ಪಮಟ್ಟಿಗಾದರೂ ತೃಪ್ತಿಕೊಡುತ್ತದೆ. ಅಧ್ರಂತೆ ಕಿರುಜಾಜಿ ಮಲ್ಲಿಗೆಯ ಹೂವು ಅರ್ಧ ದಿವಸವಿದ್ದರೂ ತಾನಿದ್ದಲ್ಲಿ ಸುಗಂಧವನ್ನು ಬೀರಿ ಆನಂದವನ್ನು ಕೊಡುತ್ತದೆ. ಆದ್ದರಿಂದ ಸಾಧನೆ ವ್ಯರ್ಥವಾಯಿತೆಂದು ಕೊರಗಬೇಡ.
ಸಾಧೆಯ ಮಾರ್ಗದಲ್ಲಿ ಧೈರ್ಯದಿಂದ ಮುಂದುವರೆ.
ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು |
ಪಟ್ಟುವರಸೆಗಲೆಲ್ಲ ವಿಫಲವೆನ್ನುವೆಯೇಂ? ||
ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ |
ಗಟ್ಟಿತನ ಗರಡಿಫಲ || ಮಂ ||
ಜಟ್ಟಿ ಗರಡಿ ಮನೆಯಲ್ಲಿ ಕುಸ್ತಿಯಾಡಲು ತರಬೇತಿ ಪಡೆಯುತ್ತಾನೆ. ಅವನಿಗೆ ಒಂದೇ ಒಂದು ಗುರಿ ಏನೆಂದರೆ, ಎದುರಾಳಿಯನ್ನು ಸೋಲಿಸುವದು. ಒಂದು ವೇಳೆ, ಅವನಿಗೆ ಅವನ ಎದುರಾಳಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಅವನೇ ಸೋತು ಅವನು ಕಾಳಗದಲ್ಲಿ ಸೋತರೂ ಅವನ ಸಾಧನೆಯ ಫಲ ಅವನಿಗೆದೆ. ಪ್ರತಿ ದಿವಸವೂ ಸಾಧನೆ ಮಾಡಿ ಅವನ ಮೈ ಕಬ್ಬಿಣದ ಹಾಗೆ ಗಟ್ಟಿಯಾಗಿದೆ. ಜೀವನದಲ್ಲಿ ಸೋಲು ಇಲ್ಲವೆ ಗೆಲುವು ಸ್ವಭಾವಿಕ ಅದಕ್ಕಾಗಿ ಸಾಧನೆಯಲ್ಲಿರು.
ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು- |
ನಡೆಯ ಕಲಿತವನು? ಮತಿನೀತಿಗತಿಯಂತು ||
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- |
ದಡವಿಕೊಳುವವರೆಲ್ಲ ||ಮಂ||
ನಡೆಯುವ ಕಾಲು ಎಡುವುದು ಎಂಬ ಗಾದೆಯ ಮಾತು ಇದೆ. ಮಗುವನ್ನು ನಿಧಾನವಾಗಿ ಗಮನಿಸಿದರೆ ಇದರೆ ಅರಿವಾಗುತ್ತದೆ. ಮಗು ಮೊದಲು ಎದ್ದು ನಿಲ್ಲುವಾಗ, ನಂತರ ನಡೆಯುವಾಗ ಎಷ್ಟೋ ಸಲ ಬೀಳುತ್ತದೆ. ಆದರೂ ಆ ಮಗುವು ಬೀಳುವುದಕ್ಕೆ ಹೆದರಿ ಒಂದು ಕಡೆ ಕುಳಿತುಕೊಳ್ಳುವುದಿಲ್ಲ. ಮತ್ತೆ ಮತ್ತೆ ಬೀಳುತ್ತ ಏಳುತ್ತ ನಡೆಯಲು ಕಲಿಯುತ್ತದೆ. ತಾಯಿ ಮಗು ಬೀಳುವುದನ್ನು ನೋಡಿಯೂ ಸುಮ್ಮನಿರುತ್ತಾಳೆ. ಏಕೆ? ಅವಳಿಗೆ ಮಗು ಬಿದ್ದು ಎದ್ದು ಪ್ರಯತ್ನ ಮಾಡದೇ ನಡೆಯುವುದಿಲ್ಲ ಎಂದು ಗೊತ್ತು.
ಇದರಂತೆಯೇ ಪರಮಾತ್ಮನಿಗೂ ಮಾನವ ಮೂರ್ತಿಯಾಗಬೇಕಾದರೆ ಅವನಿಗೆ ಪೆಟ್ಟು ಬೀಳಲೇಬೇಕು. ಮತ್ತು ಕಷ್ಟನಷ್ಟಗಳನ್ನು ಅನುಭವಿಸಲೇಬೇಕು ಎಂಬುದು ಗೊತ್ತಿದೆ. ಶಿಲ್ಪಿಯು ಉಳಿಯಿಂದ ಕಲ್ಲನ್ನು ಕೆತ್ತಿಮೂರ್ತಿ ಮಾಡುವಂತೆ ಪರಮಾತ್ಮನು ದಾನವನನ್ನು ಕಷ್ಟಗಳೆಂಬ ಉಳಿಯಿಂದ ಕೆತ್ತಿ ಮಾನವನನ್ನಾಗಿ ಮಾಡುತ್ತಾನೆ.
ಏಸು ಸಲ ತವಗೈದೇಸು ಬನ್ನವನಾಂಥು |
ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್? ||
ಫಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ |
ಲೇಸಾಗಿಸಾತ್ಮವನು||ಮಂ||
ಕೌಶಿಕಕ್ಷತ್ರಿಯ, ವಿಶ್ವಾಮಿತ್ರರಾಗಿಂ ಬ್ರಹ್ಮರ್ಷಿಯಾಗಿಂ ಬ್ರಾಹ್ಮಣನಾಗಬೇಕಾದರೆ ಬಹುದೊಡ್ಡ ಸಾಧನೆಯನ್ನು ಮಾಡಿದರು. ವಿಶ್ವಾಮಿತ್ರರು ಸಾಧನೆಯಲ್ಲಿರುವಾಗ, ಮೊದಲು ಮೇನಕೆಯನ್ನು ಕಂಡಾಕ್ಷಣ ಅವಳನ್ನು ಮೋಹಿಸಿ ಎಡವಿ ಬಿದ್ದರು. ಆದರೆ ಅವರು ತಮ್ಮ ಧ್ಯೇಯವನ್ನು ಮರೆಯದೆ, ಸಾಧನೆಯಲ್ಲಿ ಮುಂದುವರೆದು ಬ್ರಹ್ಮರ್ಷಿಯಾದರು.
ಶ್ರೀಕೃಷ್ಣ ಪರಮಾತ್ಮನೇ ಹೇಳಿರುತ್ತಾನೆ.
“ಎಂಥ ಪಾಪಿ ಇದ್ದರೂ ಅವನು ತನ್ನ ಮನಸ್ಸು-ಬುದ್ಧಿಯನ್ನು ಪ್ರಶಾಂತವಾಗಿಟ್ಟುಕೊಂಡು ನನ್ನ ಕಡೆಗೆ ತನ್ನ ಮನಸ್ಸನ್ನು ಹೊರಳಿಸುತ್ತಾನೋ ಅವನನ್ನು ಉದ್ಧಾರ ಮಾಡುತ್ತೇನೆ” ಎಂದು.
ನಮಗೆ ನಮ್ಮ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವ ಸಾಧನೆ ಮಾಡಲು ತಾಳ್ಮೆ ಇಲ್ಲ. ಆ ಮನಸ್ಸಿನ ಪ್ರಶಾಂತತೆ ಅನಾಯಾಸವಾಗಿ ಆಚಾರ್ಯ ಮುಖೇನ ನಮಗೆ ದೊರಕಬೇಕು. ಅಂದರೆ ಗುರುಗಳು ತಮ್ಮ ವರದ ಹಸ್ತವನ್ನು ತಲೆಯ ಮೇಲೆ ಇಡಬೇಕು. ಅದರಿಂದ ತಕ್ಷಣ ಶಾಂತಿ ದೊರಕಬೇಕು ಎಂಬ ಇಚ್ಛೆ. ಆದರೆ ಆ ಶಾಂತಿಯನ್ನು ಯಾರೂ ತಂದುಕೊಡುವುದಿಲ್ಲ. ಅದು ನಮ್ಮಲ್ಲಿಯೇ ಒಳಗಡೆ ಇದೆ ಎಂಬುದರ ಅರಿವು ನಮಗಿಲ್ಲ.
ಮನಸ್ಸಿನ ಪ್ರಶಾಂತತೆಗೆ ಸಾಧನೆ ಮಾಡು. ಅದು ನಿನ್ನೊಳಗೆ ಇದೆ.
ದೋಷಿಯವನಿವನು ಪಾಪಿಯೆನುತ್ತ ಗಳಹದಿರು |
ಆಶೆಯೆನಿತವನು ಸಹಿಸಿದನೊ, ದಹಿಸಿದನೊ! ||
ವಾಸನೆಗಳವನನೇನೆಳೆದವೋ ಬಲವೇನೊ! |
ಪಾಶಬದ್ಧನು ನರನು ||ಮಂ||
ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ತುಣಶಾಲಿಯಾಗಿ ಬಾಳಬೇಕೆಂದೇ ಇರುತ್ತದೆ. ಯಾರಿಗೂ ಹೀನ ಗುಣದವನಾಗಿ ಬಾಳುವ ಇಚ್ಛೆ ಇರುವುದಿಲ್ಲ. ಆದರೆ ಅವರವರ ಕರ್ಮಕ್ಕನುಸಾರವಾಗಿ ಅವರ ವಾಸನಾಗಳಿಗೆ ಬದ್ಧರಾಗಿರುತ್ತಾರೆ. ಅವರಿಗೂ ಸ್ವಾತಂತ್ರ್ಯವಿರುವುದಿಲ್ಲ. ಅವರ ಮನಸ್ಸು-ಬುದ್ಧಿ ಅವರ ವಾಸನೆಗಳ ಹಿಂದೆ ಓಡುತ್ತವೆ. ಅವನು ವಾಸನಾಗಳ ಪಾಶಕ್ಕೆ ಬಲಿಯಾಗುತ್ತಾನೆ. ಅವನನ್ನು ಹಳಿಯಬೇಡ. ಅವನಿಗೆ ಸಹಾನುಭೂತಿ ತೋರಿಸಿ ಉದ್ಢಾರ ಮಾಡು.
ವಾಲ್ಮೀಕಿ ಬೇಡರವನು. ಮಹಾತ್ಮರು ಅವನಿಗೆ “ಮರಾ ಮರ ಹೋಗಿ ರಾಮ ರಾಮ” ಆಗುವಂತೆ ಮಾಡಿ ವಾಲ್ಮೀಕಿಯನ್ನಾಗಿ ಮಾಡಿದರು.
ಪ್ರತಿಯೊಬ್ಬರಿಗೂ ಒಳ್ಳೆಯ ಮಾರ್ಗವಿದೆ.
ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? |
ಆತುಮದ ಪರಿಕಥೆಯನರಿತವರೆ ನಾವು? ||
ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ |
ನೀತಿ ನಿಂದೆಯೊಳಿರದು||ಮಂ||
ಪರರ ನಿಂದಿಸಬೇಡ ಎದುರು ಹಳಿಯಲು ಬೇಡ. ಇದೇ ಅಂತರಂಗಶುದ್ಧಿ ಎಂದು ವಚನದಲ್ಲಿ ಹೇಳಿದ್ದಾರೆ.
ಯಾರ ನಿಂದನೆಯನ್ನೂ ಮಾಡಬೇಡ, ಏಕೆಂದರೆ ಪ್ರತಿಯೊಬ್ಬರಿಗೂ ಕೂಡ ಪರಮ ಪುರುಷಾರ್ಥವೆನ್ನುವ ಮೋಕ್ಷ ಸಾಧಿಸುವ ಹಕ್ಕು ಇದೆ. ಪಾಪಿಗೂ ಕೂಡ ಪುಣ್ಯವಂತನಾಗುವ, ಭಾಗ್ಯವಂತನಾಗುವ, ಪರಮಾತ್ಮನಲ್ಲಿ ಏಕರೂಪವಾಗುವ ಕಾಲವಿದೆ ಅವಕಾಶವಿದೆ. ಇಂದು ಪಾಪಿ ಇದ್ದವನು ನಾಳೆ ಯೋಗಿ ಆಗಬಹುದು. ಕರುವು ಹಸುವಾಗುವಂತೆ, ಬಡವ ಬಲ್ಲಿದವನಾಗುವಂತೆ, ಪಾಪಿಯು ಪುಣ್ಯವಂತನಾಗುತ್ತಾನೆ.
ನಿನ್ನನ್ನು ನೀನೆ ಪಾಪಿ ಎಂದು ಅಂದುಕೊಳ್ಳಬೇಡ. ಪ್ರತಿಯೊಬ್ಬರೂ ಅಂತಃಕರಣದಲ್ಲಿ ಬೆಳಗುವ ಪರಮಾತ್ಮನನ್ನು ಕಾಣಲು, ಮನಸ್ಸಿನ ಪ್ರಶಾಂತತೆ ಕಾಯ್ದುಕೊಳ್ಳಲು ಸಾಧನೆ ಮಾಡಬೇಕು.
ಒಂದಗಳು ಹೆಚ್ಚಿರದು, ಒಂದಗಳು ಕೊರಯಿರದು |
ತಿಂದು ನಿನ್ನನ್ನ ಋಣ ತೀರುತಲೆ ಪಯಣ ||
ಹಿಂದಾಗದೊಂದು ಚಣ, ಮುಂದಕುಂ ಕಾದಿರದು |
ಸಂದ ಲೆಕ್ಕವದೆಲ್ಲ ||ಮಂ||
ಈ ಪ್ರಪಂಚಕ್ಕೆ ನಾವು ಬಂದದ್ದು ಉಂಡು, ತಿಂದು, ಸುಖವಾಗು ಬಾಳುವುದಕ್ಕೆ. ಆದರೆ ತಿನ್ನುವ ಅನ್ನದ ಋಣ ತೀರಿದ ಮೇಲೆ ಇರಲು ಎಡೆ ಎಲ್ಲಿ? ಬದುಕಲು ಸಾಧ್ಯವೆ ಇಲ್ಲ. ಒಂದಗಳು ಕಡೆಮೆ ಇದ್ದರೂ ಮೃತ್ಯು ಬರಲಾರದು ಹಾಗೆಯೇ ಭೂಮಿಯ ಋಣ ತೀರಿದರೆ ಆಯಿತು. ಗಂಟುಮೂಟೆ ಸಹಿತ ಪ್ರಯಾಣ ಬೆಳೆಸಲೇ ಬೇಕು. ಇಂದಿನ ವಿಜ್ಞಾನಯುಗದಲ್ಲಿ ಪರಮಾತ್ಮನು,
ಜನನ ಮರಣದ ಗುಟ್ಟನ್ನು ಯಾರಿಗೂ ತಿಳಿಸಿಲ್ಲ ಅದು ಗೂಢವಾಗಿಯೇ ಇದೆ.
ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ |
ತೊಟ್ಟಿಲಿಗೆ ಹಬ್ಬ ಮಸಣವು ತೇಗುತಿರಲು ||
ಹುಟ್ಟಿದವರೆಲ್ಲ ಸಾಯದೆ ನಿಲ್ಲೆ, ಹೊಸತಾಗಿ |
ಹುಟ್ಟುವರ್ಗೆಡೆಯೆಲ್ಲಿ? ||ಮಂ||
ಮೃಥ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |
ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||
ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವುಹುದು? |
ಸತ್ರ ಹೊಸದಿಹುದು ನಡೆ ||ಮಂ||
ಜಗತ್ತಿನಲ್ಲಿ ಬರೀ ಮರಣವಿಲ್ಲ ಅದರೊಂದಿಗೆ ಹುಟ್ಟೂ ಇದೆ. ತೊಟ್ಟಿಲಿಗೆ ಸಂಭ್ರಮ, ಮಸಣಕ್ಕೆ ದುಃಖ ಇವೂ ಇದ್ದದ್ದೇ. ಸಾಧಕರು ಮರಣಕ್ಕೆ ಹೆದರಬಾರದು. ಈ ದೇಹ ಪ್ರತಿ ಕ್ಷಣವೂ ಸಾಯುತ್ತಲೇ ಇದೆ. ಗತ್ಯಾಯಾಂತಿ ಪುನರ್ ನ ದಿವಸಾಃ | ದೇಹಕ್ಕೆ ಬರುವ ಬಾಲ್ಯ, ಕೌಮಾರ್ಯ, ಯೌವನ ಮತ್ತು ವೃದ್ಧಾಪ್ಯ ಇವು ಬರುವ ನಾಲ್ಕು ಸ್ಥಿಥಿಗಳು. ಇವು ಒಂದುಸತ್ತ ಮೇಲೆಯೇ ಇನ್ನೊಂದು ಸ್ಥಿಥಿ ಬರುವುದು. ಶರೀರವು ಪ್ರತಿ ನಿಮಿಷವೂ ಸಾಯುತ್ತಲೇ ಇದೆ. ಇದೇ ಬದಲಾವಣೆಗೆ ಶರೀರ ಅನ್ನುತ್ತಾರೆ. ಶರೀರ ಅನ್ನುವುದೇ ಮೃಥ್ಯು. ಸಾವು ಭೂಮಿಕೆಯನ್ನು ಸಿದ್ಧಮಾಡುತ್ತದೆ. ಅದರೊಳಗೆ ಮತ್ತೆ ಜೀವ ಹುಟ್ಟುತ್ತದೆ. ಸಸ್ಯಗಳನ್ನು ತೆಗೆದುಕೊಂಡರೆ ಬೀಜ ಸಾಯುತ್ತದೆ, ಗಿಡ ಹುಟ್ಟುತ್ತದೆ. ಸಾವಿನಿಂದ ಬದುಕು, ಬದುಕಿನಲ್ಲಿ ಸಾವು, ಇವೆರಡೂ ಒಂದಕ್ಕೊಂದು ಪರಸ್ಪರ ಪೂರಕ.
ಎಲ್ಲಾ ಹಿರಿಯರು ಅಂದರೆ ಅಜ್ಜ, ಅಜ್ಜಿ, ಮುತ್ತಜ್ಜ, ಮುತ್ತಜ್ಜಿ, ಎವರೆಲ್ಲರೂ ಪ್ರಪಂಚವನ್ನು ಬಿಟ್ಟುಹೋಗಿದ್ದಾರೆ. ಅಂತೆಯೇ ನಮಗೆಲ್ಲ ಇಲ್ಲಿ ಬದುಕಲು ಅವಕಾಶ ಸಿಕ್ಕಿದೆ. ಹುಟ್ಟಿದವರೆಲ್ಲರೂ ಇಲ್ಲಿಯೇ ಬದುಕಿ ಇದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು? ಗುಂಡಪ್ಪನವರು ಹೇಳುತ್ತಾರೆ. ಅವರು ಸತ್ತಿದ್ದೇನೋ ನಿಜ. ಆದರೆ ಅವರು ಹೋಗುವುದಾದರೂ ಎಲ್ಲಿಗೆ?
ನಿಮ್ಮಜ್ಜ, ಮುತ್ತಜ್ಜ, ಮೂಲಜ್ಜಗಳೆಲ್ಲರೂ ನಿನ್ನೊಳವತರಿಸಿ ಮುಂದಿನ್ನು ಜನಿಸಲಿಹ.
ಮತ್ತೆ ಅವರೆಲ್ಲರೂ ಹುಟ್ಟಿ ಬರುತ್ತಾರೆ. ಸಾವಿನಿಂದ ಜೀವ ಹೊರಹೊಮ್ಮುತ್ತದೆ.
ಯಾರು ಸಾಥ್ವಿಕತನದಿಂದ ಬಾಳುತ್ತಾರೋ; ಯಾರು ಶರೀರ, ಇಂದ್ರಿಯ, ಮನಸ್ಸು, ಬುದ್ಧಿ ಇವುಗಳನ್ನು ದಾಟಿ ಆತ್ಮನಲ್ಲಿ ನಿಲ್ಲುತ್ತಾರೋ ಅವರಿಗೆ ಅಭಯತ್ವವಿದೆ ನೋಡು.
ಮಲಗಿದೋದುಗನ ಕೈಹೊತ್ತಗೆಯು ನಿದ್ದೆಯಲಿ |
ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ||
ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು |
ಸಡಿಲುವುವು ಬಾಳ್ ಮಾಗೆ ||ಮಂ||
ಸತ್ತನೆಂದೆನಬೇಡ; ಸೋತೆನೆಂದೆನಬೇಡ |
ಬತ್ತಿತೆನ್ನೊಳು ಸತ್ತ್ವದೂತೆಯೆನಬೇಡ ||
ಮೃಥ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |
ಮತ್ತೆ ತೋರ್ಪುದು ನಾಳೆ ||ಮಂ||
ಮಲಗಿ ಓದುವಾಗ ಪುಸ್ತಕ ಕೈಯಲ್ಲಿರುತ್ತದೆ. ಆದರೆ ನಿದ್ರೆ ಆವರಿಸಿದಾಗ ಪುಸ್ತಕ ತನ್ನಷ್ಟಕ್ಕೆ ತಾನೇ ಕೈಯಿಂದ ಕಳಚಿ ಬೀಳುತ್ತದೆ. ಮರದಲ್ಲಿ ಮಾಗಿದ ಹಣ್ಣನ್ನು ಯಾರೂ ಕಿತ್ತಬೇಕಾಗಿಲ್ಲ. ಅದು ತಾನೇ ಮರದಿಂದ ಉದುರುತ್ತದೆ. ಅದರಂತೆಯೇ ಸತ್ತನೆಂದೆನಬೇಡ. ಈಗ ಸತ್ತವನು ಮತ್ತೆ ನಾಳೆಗೆ ಹುಟ್ಟಿ ಬರುತ್ತಾನೆ. ತೆರೆಯಿಳಿತ ತಿರಿಯೇರು-ಜಾತಸ್ಯ ಮರಣಂ ಧೃವಂ. ಮರಣಸ್ಯ ಜನ್ಮಂ ಧೃವಂ. ಶರೀರ ಅನ್ನುವಂಥದ್ದೇ ಮರಣ ಏಕೆಂದರೆ, ಪ್ರತಿ ನಿಮಿಷವೂ ಶರೀರ ಸಾಯುತ್ತಲೇ ಇದೆ. ಬಾಲ್ಯ ಕಳೆದ ಮೇಲೆ ಯೌವನ, ಯೌವನ ಕಳೆದ ಮೇಲೆಯೇ ವೃದ್ಧಾಪ್ಯ. ಕೊನೆಗೆ ಒಂದು ದಿನ ಸಾವು, ಹುಟ್ಟು ಸಾವು ಇದು ಜೀವನದ ಚಕ್ರ.
ಜನ್ಮ ಸಾವಿರ ಬರಲಿ, ನಷ್ಟವದರಿಂದೇನು? |
ಕರ್ಮ ಸಾವಿರವಿರಲಿ, ಕಷ್ಟ ನಿನಗೇನು? ||
ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇಂಗೈದೊಡೇಂ? |
ಇಮ್ಮಿದಳ ಸರಸವದು ||ಮಂ||
ಇಂದ್ರಿಯ, ಮನಸ್ಸು, ಬುದ್ಧಿಯನ್ನು ದಾಟಿ ಆತ್ಮನಲ್ಲಿ ನಿಂತವನಿಗೆ ಮರಣ ಭಯವಿಲ್ಲ. ನಭಿಬೇತಿ. ಬದಲಾಗದ ನಿತ್ಯ, ಸತ್ಯ, ಶುದ್ಧ ಬುದ್ಧ, ಆತ್ಮಸ್ವರೂಪವೇ ನಾನು ಎಂದು ತಿಳಿದವರಿಗೆ ಪುನರ್‌ಜನ್ಮದ ಭಯವೂ ಇಲ್ಲ. ಜನ್ಮಸಾವಿರ ಬರಲಿ ಯಾರ ಮನಸ್ಸು ಆತ್ಮನಲ್ಲಿ ನಿಂತಿದೆಯೋ ಅವರಿಗೇನು ಭಯ?
ಗಾಢವಾದ ನಿದ್ರೆಯಲ್ಲಿ ಮರಣದ ಭಯವಿಲ್ಲ. ಎಚ್ಚರವಾದಾಗ ಈ ದೇಹವೇ ನಾನು ಎಂದು ಭಾವಿಸಿದಾಗ ಮಾತ್ರ ಮರಣ ಭಯ. ಈ ಶರೀರ ನಾನಲ್ಲ. ಆಥ್ಮನೇ ನಾನು ಎಂದಾಗ ಮರಣ ಭಯವಿಲ್ಲ.
ಆತ್ಮನಲ್ಲಿ ನಿಂತವರ ಶರೀರಕ್ಕೆ ನಾನಾ ರೀತಿಯ ಕಷ್ಟಗಳಾದರೂ, ಮರಣವಿದೆ ಎಂದು ತಿಳಿದರೂ ಅವರು ಆನಂದದಿಂದ ಇರುತ್ತಾರೆ.
ಹಳ್ಳಿಹಳ್ಳಿಗೂ ಮಹಾತ್ಮರು ಆಗಿ ಹೋಗಿದ್ದಾರೆ. ಅವರನ್ನು ಗುರುತಿಸುವುದು ಸಾಧ್ಯವಿಲ್ಲ.
ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ |
ಚರಿಸುತಿರೆ ನರನದರ ಗುರುತನರಿಯದೆಯೆ ||
ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ |
ತೊರೆಯುವನು ದೊರೆತುದನು ||ಮಂ||
ಮನುಷ್ಯನ ಬಾಹ್ಯವೇಷದಿಂದ ಅವನನ್ನು ಗುರುತಿಸಲು ಸಾಧ್ಯವಿಲ್ಲ. ಜ್ಞಾನಿಗಳು, ಮಹಾತ್ಮರು, ಹೊರ ಪ್ರಪಂಚದಲ್ಲಿ ಕಾಣಲು ಒಬ್ಬೊಬ್ಬರು ಒಂದೊಂದು ತೆರನಾಗಿರುತ್ತಾರೆ. ಜ್ಞಾನಿಗಳು ಹೊರದೃಷ್ಟಿಗೆ ಹುಚ್ಚರಂತೆ ಕಂಡರೂ ಒಳಗೆ ಆತ್ಮನಲ್ಲಿದ್ದು ಪ್ರಶಾಂತವಾಗಿರುತ್ತಾರೆ. ತುಕಾಮಾಯಿಯನ್ನು ತೆಗೆದುಕೊಂಡರೆ, ಅವರು ಯಾವಾಗಲೂ ತಲೆಯ ಮೇಲೆ ಟೋಪಿ, ಕೈಯಲ್ಲಿ ಹುಕ್ಕಾ ಮತ್ತು ಒಂದು ಲಂಗೋಟಿ ಧರಿಸುತ್ತಿದ್ದರು. ವಿಚಿತ್ರವಾದ ವೇಷ ಅವರದು. ವಿಜ್ಞಾನಿಗಳನ್ನು ತೆಗೆಧುಕೊಂಡರೂ ಅಷ್ಟೇ. ಅವರು ಇರುವ ಲೋಕವೇ ಬೇರೆ.
ಜ್ಞಾನಿಗಳು ಕಾಣಲು ಜನಸಾಮಾನ್ಯರಂತೆ ಕಾಣುವುದರಿಂದ ಅವರನ್ನು ಗುರುತಿಸುವುದು ಕಷ್ಟ.
ಸಾಮಾನ್ಯ ರೂಪದಲಿ, ಸಂಸಾರಿವೇಷದಲಿ |
ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ ||
ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು |
ತಾಮಸಿಗೆ ವರವೆಲ್ಲಿ? ||ಮಂ||
ಕಾಗೆಯುಂ ಕೋಗಿಲೆಯುಮೊಂದೇ ಮೇಲ್ನೋಟಕ್ಕೆ |
ಯೋಗಿಯುಂ ಸಂಸಾರಭೋಗಿಯೇ ಹೊರಕೆ ||
ಲೋಗರವೊಲಿರುತೆ ಸುಖಧುಃಖಸಂಭ್ರಮಗಳಲಿ |
ತ್ಯಾಗಿಯವನಂತರದಿ ||ಮಂ||
ಯೋಗಿಗಳೂ ಸಂಸಾರಿಗಳಾಗಿದ್ದರು. ಆದರೆ ಅವರಿಗೆ ಸಂಸಾರದಲ್ಲಿ ಆಸಕ್ತಿ ಇರಲಿಲ್ಲ. ದೇವರಿಗೆ ಆಕಾರವಿಲ್ಲ. ಅವನು ನಿರಾಕಾರ, ನಿರ್ಗುಣ. ಆದ್ದರಿಂದ ಪರಮಾತ್ಮನೆ ಸಾಮಾನ್ಯ ವೇಷದಲ್ಲಿ ನಮ್ಮೆದೆಗೆ ಬರಬಹುದು! ಆದರೆ ಅವರನ್ನು ಗುರುತಿಸಲು ಮನಸ್ಸಿಗೆ ಸಂಸ್ಕಾರಬೇಕು. ಆಂತರಿಕಶಕ್ತಿ ಬೇಕು. ತಾಮಸಿಗೆ ಈ ಶಕ್ತಿ ಇರಲಾರದು. ತಪಸ್ಸಿಗೆ ಈ ಶಕ್ತಿ ಇದೆ.
ಮಾನವರು ಮೇಲ್ನೋಟಕ್ಕೆ ಎಲ್ಲರೂ ಸಮನಾಗಿ ಕಾಣುತ್ತಾರೆ. ಅವರ ಆಂತರಿಕ ಶಕ್ತಿ ಬೇರೆ ಬೇರೆಯೇ ಇರುತ್ತದೆ. ಕಾಗೆ ಮತ್ತು ಕೋಗಿಲೆ ನೋಡಲು ಒಂದೇ ಕಾಣುತ್ತದೆ. ಆದರೆ ವಸಂತಕಾಲ ಬರುವಾಗ ಕಾಗೆ ಯಾವುದು, ಕೋಗಿಲೆ ಯಾವುದು ಎಂಬುದರ ಅರಿವು ಸ್ಪಷ್ಟವಾಗಿ ಆಗುತ್ತದೆ. ಜನ ಸಾಮಾನ್ಯರನ್ನು, ಯೋಗಿಗಳನ್ನು ಗುರುತಿಸುವುದು ಕಷ್ಟ. ಸಂದರ್ಭ ಬರುವಾಗ ತಮ್ಮ ಯೋಗ್ಯತೆಯನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವುದಕ್ಕಾಗೆ ಯೋಗಗಳು, ಮಹತ್ಮರು ಪವಾಡಗಳನ್ನು ಮಾಡಿ ತೋರಿಸುತ್ತಾರೆ. ಮಹಾತ್ಮರನ್ನು ಅರಿಯಬೇಕಾದರೆ ಉನ್ನತ ಆತ್ಮಸಂಸ್ಕಾರಬೇಕು. ಜಪತಪ ಸಾಧನೆಬೇಕು.
ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ- |
ಲೆಲ್ಲೆಲ್ಲಿಯುಂ ನೋಡಿ ನದೆದು ನಗುಹಳುತ ||
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ |
ಬಲ್ಲವನೆ ಮುಕ್ತನಲ ||ಮಂ||
ಉದಾರ ಚರಿತಾನಾಂ, ವಸುಧೈವ ಕುಟುಂಬಕಮ್. ಸಂತರು, ಶರಣರು, ದಾಸರು, ಎಲ್ಲರ ಹೃದಯವನ್ನು ಬೆಳಗುವ, ಶುದ್ಧ ಪರಬ್ರಹ್ಮವಸ್ತುವೇ ತಾನು ಎಂದು ತಿಳಿದುಕೊಂಡಿರುತ್ತಾರೆ. ಆದ್ದರಿಂದ ಮಹಾತ್ಮರಿಗೆ ಪ್ರಪಂಚವೇ ಅವರ ಮನೆಯಾಗಿದೆ. ಭಗವಂತನು ಅನಾದಿ, ಅಖಂಡ, ಮತ್ತು ಅನಂತನಾಗುರುತ್ತಾನೆ. ಅವನನ್ನು ನಮ್ಮ ಬಾಹ್ಯದೃಷ್ಟಿಯಿಂದ ಕಾಣಲು ಸಾಧ್ಯವಿಲ್ಲ. ಅವನ ಸಾನಿಧ್ಯವನ್ನು ಕೇವಲ ಅನುಭವದಿಂದ ಅರಿತುಕೊಳ್ಳಲು ಸಾಧ್ಯ? ಅಂದರೆ, ಮನಸ್ಸಿಗೆ ಸಮಾಧಾನ, ಆನಂದ ದೊರಕಿದರೆ ಅದೇ ಪರಮಾತ್ಮನ ಅನುಗ್ರಹವಾದ ಗುರುತು.
ಈಗ ನಮ್ಮ ಶರೀರವನ್ನೇ ಪರೀಕ್ಷಿಸಿದರೆ, ಅದರಲ್ಲಿ ನಡಿಯುವ ಚಲನ, ವಾಯುಚಲನ, ಪಚನ, ವಿಸರ್ಜನ, ಮಾಂಸದ ಸಂಕೋಚ, ವಿಕಾಸ, ಜೀವ ಕಣಗಳು ನವೀಕರಣ, ಮೆದುಳಿನ ನಿಯಂತ್ರಣ ಈ ಎಲ್ಲ ಕಾರ್ಯಗಳು ಶರೀರಕ್ಕೆ ಹುಟ್ಟಿದಾರಭ್ಯ ಬಂದ ಶಕ್ತಿಯ ಆಸರೆಯಲ್ಲಿ ನಡೆದಿವೆ. ಈ ಶಕ್ತಿ ಎಲ್ಲಿದೆ? ಹೇಗಿದೆ? ಎಂದು ಸೋಧ ಮಾಡಲು ಹೊರಟರೆ ಎಲ್ಲಿಯೂ ಸಿಗುವುದಿಲ್ಲ. ಇದೇ ದೈವಶಕ್ತಿ.
ದೇವರನ್ನು ಶೋಧ ಮಾಡಲು ಬರುವುದಿಲ್ಲ. ಅವನನ್ನು ದಿವ್ಯದೃಷ್ಟಿಯಿಂದ ಅರಿತುಕೊಳ್ಳಬೇಕು. ಆದರೆಂ ನಮ್ಮ ಮನಸ್ಸಿನಲ್ಲಿ ಧೂಳು, ಅಂದರೆ ಮದ, ಮೋಹ, ಮತ್ಸರ ಮತ್ತು ಅಹಂಕಾರಗಳೆಲ್ಲ ತುಂಬಿ, ನಮ್ಮ ದೃಷ್ಟಿ ಮಸುಕಾಗಿದೆ. ಯಾರು ಸ್ವಚ್ಛವಾದ ತಿಳಿ ಮನಸ್ಸಿನಿಂದ, ಹೊರಪ್ರಪಂಚದಲ್ಲಿರುವ ಎಲ್ಲ ಚರಾಚರ ವಸ್ತುಗಳನ್ನು ನೋಡುತ್ತಾರೋ ಅವರೇ ಭಗವಧ್ಭಕ್ತರು. ಎಲ್ಲ ಮಹಾತ್ಮರು ನಡೆದ ಹಾದಿ ಇದೇ
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ |
ನಗುವ ಕೇಳುತ ನಗುವುದತಿಶಯದ ಧರ್ಮ ||
ನಗುವ , ನಗಿಸುವ, ನಗಿಸಿ ನಗುತ ಬಾಳುವ ವರವ |
ಮಿಗೆ ನೀನು ಬೇಡಿಕೊಳೊ ||ಮಂ||
ನಗುವು ಮನಸ್ಸಿನ ಪ್ರಶಾಂತತೆ, ಆಂತರಿಕ ಸಮಾಧಾನ ಆನಂದವನ್ನು ಪ್ರಕತ್ ಮಾಡುತ್ತದೆ. ಪ್ರತಿಯೊಬ್ಬರೂ ಕೂಡ ಚಿಕ್ಕವರಿರುವಾಗ ಆನಂದದಿಂದ ನಗುನಗುತ್ತ ಇರುತ್ತಾರೆ. ಏಕೆ? ಅವರಿಗೆ ಯಾವುದೇ ತರಹದ ಅಂದರೆ, ಸಂಸಾರದ, ಐಶ್ವರ್ಯದ, ಅಧಿಕಾರದ ವ್ಯಾಮೋಹವಿರುವುದಿಲ್ಲ. ಹೊಟ್ಟೆ ತುಂಬಿತೆಂದರೆ ಆನಂದವಾಗಿರುತ್ತಾರೆ. ಅದೇ ಮಕ್ಕಳು ಬೆಳೆದು ದೊಡ್ಡವರಾದ ಹಾಗೆ ಇಂದ್ರಿಯಗಳ ಹಿಂದೆ, ವಿಷಯಗಳ ಬೆನ್ನು ಹತ್ತಿ ಓದುತ್ತಾರೆ ಏಕೆ? ಹೊರಗಿನ ಪ್ರಪಂಚದಲ್ಲಿಯ ಸುಖಕ್ಕಾಗಿ ಹೊರ ಪ್ರಪಂಚದಲ್ಲಿ ಸುಖ ದೊರಕದಿರುವಾಗ ನಗುವು ಸ್ವಾಭಾವಿಕವಾಗಿ ಮಾಯವಾಗುತ್ತದೆ.
ಆದರೆ ಜ್ಞಾನಿಗಳು ಹೇಳುವುದು ಪ್ರತಿಯೊಬ್ಬರ ನಿಜವಾದ ಸ್ವರೂಪವೇ ಆನಂದ. ಅವರ ಉಪದೇಶ ನಮಗೆ ರುಚಿಸುವುದಿಲ್ಲ. ನಾವೂ ಆನಂದವಾಗುದ್ದು ನಗುವುದಿಲ್ಲ. ಬೇರೆಯವರನ್ನೂ ನಗಲು ಬಿಡುವುದಿಲ್ಲ.
ನಗುವು ಆನಂದದ ನಗುವಾಗಿರಲಿ. ಕುಹಕನಗೆ ಬೇಡ. ದುರ್ಯೋಧನನು ಬಿದ್ದದ್ದನ್ನು ನೋಡಿ, ದ್ರೌಪದಿ ನಕ್ಕಿದ್ದಕ್ಕೆ ಮಹಾಭಾರತವೇ ಆಯಿತು. ಹೀಗೆ ನಗುವು ಒಂದೇ ಇದ್ದರೂ, ಅದರ ವೈಖರಿ ಬೇರೆ, ಬೇರೆ.
ಮಹಾತ್ಮರು ಹೇಳುವುದೇ ಬೇರೆ ನಗುಹ ನಗಿಸುವ ನಗುತ ಬಾಳುವ ವರವ ಕೇಳು. ತಾನೂ ನಕ್ಕು ಬೇರೆಯವರನ್ನೂ ನಗಿಸಬೇಕು.
ಅಳಬೇಕು, ನಗಬೇಕು ಸಮತೆ ಶಮವಿರಬೇಕು |
ಹೊಳೆಯ ನೆರೆವೊಲು ಹೃದಯರಸ ಹರಿಯಬೇಕು ||
ಅಲೆಯಿನಲ ಗದ ಬಂಡೆಯವೊಲಾತ್ಮವಿರಬೇಕು |
ತಿಳಿದವರ ಚರಿತವದು ||ಮಂ||
ಎಲ್ಲ ಋಷಿಗಳು, ಮಹಾತ್ಮರು, ಜ್ಞಾನಿಗಳು ಮತ್ತು ಸ್ಥಿತಪ್ರಜ್ಞ ಜೀವನ ಮಾಡಿದ ರೀತಿಯೇ ಬೇರೆ. ಅವರಿಗೂ ಕಷ್ಟ, ನಷ್ಟ, ನಾನಾ ರೀತಿಯ ಪೆಟ್ಟುಗಳು ಬೀಳುತ್ತಿದ್ದವು. ಜ್ಞಾನೇಶ್ವರರ ತಂದೆ ಮನೆ ತೊರೆದು ಮೊದಲು ಸನ್ಯಾಸಿಯಾಗಿದ್ದವರು ಮತ್ತೇ ಗೃಹಸ್ಥಾಶ್ರಮಕ್ಕೆ ಮರಳಿ ಬಂದರು.
ಸಮಾಜದ ಕಣ್ಣಲ್ಲಿ ಅದು ಮಹಾಪಾಪ. ಆ ಪಾಪಕ್ಕೆ ಅವರ ಮಕ್ಕಳು, ಜ್ಞಾನೇಶ್ವರ, ನಿವೃತ್ತಿನಾಥ, ಮುಕ್ತಾ ಮತ್ತು ಸೋಪಾನ ಬಲಿಯಾದರು. ಸಮಾಜಕ್ಕೆ ಸಿಕ್ಕು ಪಡಬಾರದ ಕಷ್ಟಪಟ್ಟರು. ಮಹಾತ್ಮರ ಎದೆ ಶಿಲೆಯಲ್ಲಿ ಅವರು ಅಳುತ್ತಾರೆ. ಎಷ್ಟು ಕಾಲ? ಕ್ಷಣ ಮಾತ್ರ. ಎಲ್ಲರೊಳು ಒಂದಾಗಿರುವಾಗ ಅವರ ಮನಸ್ಸೂ ಅಳುತ್ತದೆ. ಮರುಕ್ಷಣ ಮರೆತು ನಗುತ್ತಾರೆ. ಅವರಲ್ಲಿ ಪ್ರೀತಿಯು ನದಿ ತುಂಬಿ ಹರಿದ ಹಾಗೆ ತುಂಬಿ ಹರಿಯುತ್ತದೆ. ಎಲ್ಲ ಮಹಾತ್ಮರೂ ಜೀವನ ಮಾಡಿದ ರೀತಿ ಇದು.
ಹೊರಗೆ ಲೋಕಾಸಕ್ತಿಯೊಳಗೆ ಸಕಲವಿರಕ್ತಿ |
ಹೊರಹೆ ಕಾರ್ಯಧ್ಯಾನವೊಳಗುದಾಸೀನ ||
ಹೊರಗೆ ಸಂಸ್ಕೃತಿಭಾರವೊಳಗದರೆ ತಾತ್ಸಾರ |
ವರಯೋಗಮಾರ್ಗವಿದು ||ಮಂ||
ಋಷಿ, ಮುನಿಗಳೂ ಸಂಸಾರಿಗಳಾಗಿದ್ದರು. ಅವರಿಗೂ ನಾನಾ ತರಹದ ಶಾರೀರಿಕ ಬಾಧೆಗಳು ಮತ್ತು ಪ್ರಾಪಂಚಿಕ ತಾಪತ್ರಯಗಳು ಇರುತ್ತಿದ್ದವು. ಹೊರಗೆ ಲೋಕಾಸಕ್ತಿ ಒಳಗೆ ಸಕಲವಿರಕ್ತಿ. ಹೊರಗಿನ ಪ್ರಪಂಚದಲ್ಲಿ ಸಂಸಾರಿಗಳಿದ್ದ ಹಾಗೆ ಕಂಡರೂ ಒಳಗೆ ಉದಾಸೀನರಾಗಿರುತ್ತಿದ್ದರು.
ಹೊರಗೆ ಕಾರ್ಯಧ್ಯಾನ. ಹೊರಗಿನ ಕೆಲಸಗಳನ್ನು ಚಿತ್ತವಿಟ್ಟು ಮಾಡುತ್ತಿದ್ದರು. ಒಳಗೆ ಉದಾಸೀನ. ಶರೀರವಿರುವ ತನಕ ಕಾರ್ಯಗಳನ್ನು ಮಡಲೇಬೇಕೆಂಬ ಧ್ಯೇಯದಿಂದ ಮಾಡುತ್ತಿದ್ದರು. ಆ ಕಾರ್ಯದಿಂದ ಫಲ ದೊರೆತರೂ ಅಷ್ಟೇ, ಫಲ ದೊರೆಯದಿದ್ದರೂ ಅಷ್ಟೇ. ತಮ್ಮ ಮನಸ್ಸಿನ ಒಳಗಿನ ಆನಂದವನ್ನು ಒಂದೂ ಕಳೆದುಕೊಂಡವರೇ ಅಲ್ಲ.
ಹೊರಗೆ ಸಂಸ್ಕೃತಿಭಾರ ಒಳಗದರ ತಾತ್ಸಾರ, ಮಹಾತ್ಮರು ಹೊರ ಪ್ರಪಂಚದಲ್ಲಿ ಸಂಸಾರ ಭಾರ ಹೊತ್ತ ಹಾಗೆ ಸಂತ ತುಕಾರಾಮರ ಹಾಗೆ ಬ್ರಹ್ಮಚೈತನ್ಯರ ಹಾಗೆ ತೋರುತ್ತಿದ್ದರು. ಸಂತ ತುಕಾರಾಮರಿಗೆ ಎಲ್ಲಿಲ್ಲದ ಬಡತನ. ಮಕ್ಕಳು, ಕರ್ಕಶಿಯಾದ ಹೆಂಡತಿ ಇಂಥ ಸಂಸಾರದಲ್ಲಿದ್ದರೂ ಒಳಗಿನ ಮನಸ್ಸಿನ ಪ್ರಶಾಂತತೆಯನ್ನು ಅವರು ಕಳೆದುಕೊಂಡವರಲ್ಲ. ಬ್ರಹ್ಮಚೈತನ್ಯರು ಭಕ್ತರ ಊಟ ಉಪಚಾರವಲ್ಲದೇ ಊರಿಗೆ ಹೊರಟು ನಿಂತಾಗೆ ಬುತ್ತಿ ಕಟ್ಟಿಸಿಕೊಡುತ್ತಿದ್ದರು. ಮುತ್ತೈದೆಯರಿಗೆ ಕಾಯಿ ಖಣ ಹಾಕಿ ಉಡಿ ತುಂಬಿಸಿ ಕಳಿಸುತ್ತಿದ್ದರು. ಚಿಕ್ಕ ಮಕ್ಕಳಿಗೆ ಅಂಗಿಟೊಪ್ಪಿಗೆ ಕ್ಕೊಡಿಸುತ್ತಿದ್ದರು. ರಾತ್ರಿ ಎಲ್ಲರೂ ಮಲಗಿದ ಬಳಿಕ ಹಿಲಾಲಿನ ಬೆಳಕಿನಲ್ಲಿ ಎಲ್ಲ ಭಕ್ತರನ್ನು ಒಂದು ಸಲ ನೋಡಿ ಬರುತ್ತಿದ್ದರು. ಒಳಗೆ ತಾತ್ಸಾರ, ಒಳಗಡೆ ಕಾರ್ಯಗಳನ್ನು ಪ್ರಾಪಂಚಿಕರ ಹಾಗೆ ಮಾಡುತ್ತಿದ್ದರು ಒಳಗೆ ತಾತ್ಸಾರ, ಒಳಗಡೆ ಮನಸ್ಸಿನಲ್ಲಿ ಆಸಕ್ತರಾಗಿರುತ್ತಿದ್ದಿಲ್ಲ. ಚಿದಾನಂದರೂಪಃ ಶಿವೋಹಂ ಶಿವೋಹಂ.
ಮಹಾತ್ಮರು ಮೇಲೆ ನೋಡಲು ಸಂಸಾರಿಗಳ ಹಾಗೆ ಕಂಡರೂ ಒಳಗಿನ ಮನಸ್ಸಿನ ಪ್ರಶಾಂತತೆ ಕಳೆದುಕೊಂಡವರೇ ಇಲ್ಲ.
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |
ಹೊರಕೋಣೆಯಲಿ ಲೋಗರಾಟಗಳನಾಡು ||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |
ವರಯೋಗಸೂತ್ರವಿದು ||ಮಂ||
ತನ್ನ ಮನದಾಟಗಳ ತಾನೆ ನೋಡುತ ನಗುವ |
ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||
ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |
ಧನ್ಯತೆಯ ಕಂಡವನು ||ಮಂ||
ಹೊರಗಿನ ಪ್ರಪಂಚದಲ್ಲಿ ಶರೀರವಿದೆ, ಸಂಸಾರವಿದೆ. ನಾನಾ ರೀತಿಯ ಪ್ರಶ್ನೆಗಳಿವೆ. ಅದಕ್ಕೆ ಅಂತಃಕರಣ ಅನ್ನುವಂಥ ಮನಸ್ಸು-ಬುದ್ಧಿಯಲ್ಲಿ ಎರಡು ಕೋಣೆಗಳನ್ನು ಮಾಡು. ಹೊರಗಿನ ಕೋಣೆಯಲ್ಲಿ ಎಲ್ಲ ವ್ಯವಹಾರ ಮಾಡು. ಮಕ್ಕಳು, ಬಂಧುಬಾಂಧವರು ಇವರೆಲ್ಲರೂ ಒಂದೊಂದು ಆಶೆಯಿಂದ ನಿನ್ನ ಸಮೀಪಕ್ಕೆ ಬರುತ್ತಾರೆ. ಕೆಲವೊಮ್ಮೆ ತಂಟೆ, ವಾದ, ಮೌನ, ಅಪಮಾನ ಎಲ್ಲವನ್ನೂ ಎದುರಿಸಬೇಕಾಗಿ ಬರುತ್ತದೆ. ಬರಲಿ, ತಂಟೆ ಮಾಡುವುದೇ ಅವರ ಸ್ವಭಾವ. ಅದಕ್ಕೆಲ್ಲ ತಲೆಬಾಗು. ಮನಸ್ಸಿಗೆ ನೋವಾಗುತ್ತದೆ. ಆವಾಗ, ಒಳಗಿನ ಕೋಣೆಗೆ ಬಾ. ದೃಶ್ಯದಿಂದ ಅದೃಶ್ಯದ ಕಡೆಗೆ. ನಶ್ವರದಿಂದ ಪರಮಾತ್ಮನ ಕಡೆಗೆ. ಪರಮಾತ್ಮ ಒಬ್ಬನೇ ಅವಿನಾಶಿ, ವಿರಮಿಸು ಒಬ್ಬನೇ ಪರಮಾತ್ಮನ ಕಡೆಗೆ. ಎಲ್ಲ ಋಷಿಮುನಿಗಳು ತುಳಿದ ದಾರಿ ಇದು. ಅಜ್ಞಸ್ಯ ವಿಜ್ಞಸ್ಯ ವಿಶ್ವಮಸ್ತಿ. ಅಜ್ಞಾನಿಗೂ ಇದೇ ಜಗತ್ತು. ತಾನೆ ನೋಡುತ ನಲಿವ. ಮಹಾತ್ಮರ, ಜ್ಞಾನಿಗಳ ಮನಸ್ಸಿಗೂ ನೋವಾಗುತ್ತದೆ. ಆದರೆ ಅವರು ಅವುಗಳನ್ನು ಎದುರಿಸಿದ ರೀತಿಯೇ ಬೇರೆ. ಎಲ್ಲವೂ ಭಗವಂತನ ಇಚ್ಛೆಯೆಂದು ಮನಸ್ಸಿನ ಗಲಾಟೆ ಗೊಂದಲಗಳನ್ನು ಸಾಕ್ಷೀರೂಪದಿಂದ ನೋಡುತ್ತ, ಆ ಶುದ್ಧ ಚೈತನ್ಯ ತಾನು ಎಂದು ತಿಳಿದುಕೊಂಡು ಮನಸ್ಸಿನ ಪ್ರಶಾಂತತೆಯನ್ನು ಕಾಯ್ದುಕೊಳ್ಳುತ್ತಾರೆ.
ಯಾರು ಹೊರಗಿನ ಪ್ರಪಂಚದಲ್ಲಿದ್ದು, ಪ್ರಪಂಚದ ಏರು ತಗ್ಗುಗಳನ್ನು ಎದುರಿಸುತ್ತಲೇ ಇದ್ದು, ಮನಸ್ಸಿನ ಪ್ರಶಾಂತತೆಯನ್ನು ಕಾಯ್ದುಕೊಳ್ಳುತ್ತಾರೋ ಅವರೇ ನಿಜವಾಗಿಯೂ ದೊಡ್ಡವರು.
ತೆರೆಯಾಗು ವಿಶ್ವಜೀವನದ ದಿವ್ಯಾಬ್ಧಿಯಲಿ |
ಕರಗಿಸದರಲಿ ನಿನ್ನ ಬೇರೆತನದರಿವ ||
ಮರುತನುರುಬನು ತಾಳುತೇಳುತೋಲಾಡುತ್ತ |
ವಿರಮಿಸಾ ಲೀಲೆಯಲಿ ||ಮಂ||
ಎಲ್ಲರಿಗಮೀಗ ನಮೊ – ಬಂಧುಗಳೆ, ಭಾಗಿಗಳೆ |
ಉಲ್ಲಾಸವಿತ್ತವರೆ, ಮನವ ತೊಳೆದವರೆ ||
ಟೊಳ್ಳು ಜಗ, ಸಾಕು ಬಾಳ್-ಎನಿಸಿ ಗುರುವಾದವರೆ |
ಕೊಳ್ಳಿರೀ ನಮವನೆನು ||ಮಂ||
ನಿನ್ನ ಬಂಧುಗಳೇ ನಿನ್ನ ಮನಸ್ಸಿಗೆ ಒಮ್ಮೆ ಆನಂದವನ್ನು ಕೊಟ್ಟು, ಮತ್ತೊಮ್ಮೆ ಈ ಜಗತ್ತು, ಈ ಸಂಸಾರ ಸಾಕು ಸಾಕು, ಎನಿಸಿದರೂ ನಿನ್ನ ಬಂಧುಗ್ಸಮಾಜದ ಕಣ್ಣಲ್ಲಿ ಅದು ಮಹಾಪಾಪ. ಆ ಪಾಪಕ್ಕೆ ಅವರ ಮಕ್ಕಳು, ಜ್ಞಾನೇಶ್ವರ, ನಿವೃತ್ತಿನಾಥ, ಮುಕ್ತಾ ಮತ್ತು ಸೋಪಾನ ಬಲಿಯಾದರು. ಸಮಾಜಕ್ಕೆ ಸಿಕ್ಕು ಪಡಬಾರದ ಕಷ್ಟಪಟ್ಟರು. ಮಹಾತ್ಮರ ಎದೆ ಶಿಲೆಯಲ್ಲಿ ಅವರು ಅಳುತ್ತಾರೆ. ಎಷ್ಟು ಕಾಲ? ಕ್ಷಣ ಮಾತ್ರ. ಎಲ್ಲರೊಳು ಒಂದಾಗಿರುವಾಗ ಅವರ ಮನಸ್ಸೂ ಅಳುತ್ತದೆ. ಮರುಕ್ಷಣ ಮರೆತು ನಗುತ್ತಾರೆ. ಅವರಲ್ಲಿ ಪ್ರೀತಿಯು ನದಿ ತುಂಬಿ ಹರಿದ ಹಾಗೆ ತುಂಬಿ ಹರಿಯುತ್ತದೆ. ಎಲ್ಲ ಮಹಾತ್ಮರೂ ಜೀವನ ಮಾಡಿದ ರೀತಿ ಇದು.
ಹೊರಗೆ ಲೋಕಾಸಕ್ತಿಯೊಳಗೆ ಸಕಲವಿರಕ್ತಿ |
ಹೊರಹೆ ಕಾರ್ಯಧ್ಯಾನವೊಳಗುದಾಸೀನ ||
ಹೊರಗೆ ಸಂಸ್ಕೃತಿಭಾರವೊಳಗದರೆ ತಾತ್ಸಾರ |
ವರಯೋಗಮಾರ್ಗವಿದು ||ಮಂ||
ಋಷಿ, ಮುನಿಗಳೂ ಸಂಸಾರಿಗಳಾಗಿದ್ದರು. ಅವರಿಗೂ ನಾನಾ ತರಹದ ಶಾರೀರಿಕ ಬಾಧೆಗಳು ಮತ್ತು ಪ್ರಾಪಂಚಿಕ ತಾಪತ್ರಯಗಳು ಇರುತ್ತಿದ್ದವು. ಹೊರಗೆ ಲೋಕಾಸಕ್ತಿ ಒಳಗೆ ಸಕಲವಿರಕ್ತಿ. ಹೊರಗಿನ ಪ್ರಪಂಚದಲ್ಲಿ ಸಂಸಾರಿಗಳಿದ್ದ ಹಾಗೆ ಕಂಡರೂ ಒಳಗೆ ಉದಾಸೀನರಾಗಿರುತ್ತಿದ್ದರು.
ಹೊರಗೆ ಕಾರ್ಯಧ್ಯಾನ. ಹೊರಗಿನ ಕೆಲಸಗಳನ್ನು ಚಿತ್ತವಿಟ್ಟು ಮಾಡುತ್ತಿದ್ದರು. ಒಳಗೆ ಉದಾಸೀನ. ಶರೀರವಿರುವ ತನಕ ಕಾರ್ಯಗಳನ್ನು ಮಡಲೇಬೇಕೆಂಬ ಧ್ಯೇಯದಿಂದ ಮಾಡುತ್ತಿದ್ದರು. ಆ ಕಾರ್ಯದಿಂದ ಫಲ ದೊರೆತರೂ ಅಷ್ಟೇ, ಫಲ ದೊರೆಯದಿದ್ದರೂ ಅಷ್ಟೇ. ತಮ್ಮ ಮನಸ್ಸಿನ ಒಳಗಿನ ಆನಂದವನ್ನು ಒಂದೂ ಕಳೆದುಕೊಂಡವರೇ ಅಲ್ಲ.
ಹೊರಗೆ ಸಂಸ್ಕೃತಿಭಾರ ಒಳಗದರ ತಾತ್ಸಾರ, ಮಹಾತ್ಮರು ಹೊರ ಪ್ರಪಂಚದಲ್ಲಿ ಸಂಸಾರ ಭಾರ ಹೊತ್ತ ಹಾಗೆ ಸಂತ ತುಕಾರಾಮರ ಹಾಗೆ ಬ್ರಹ್ಮಚೈತನ್ಯರ ಹಾಗೆ ತೋರುತ್ತಿದ್ದರು. ಸಂತ ತುಕಾರಾಮರಿಗೆ ಎಲ್ಲಿಲ್ಲದ ಬಡತನ. ಮಕ್ಕಳು, ಕರ್ಕಶಿಯಾದ ಹೆಂಡತಿ ಇಂಥ ಸಂಸಾರದಲ್ಲಿದ್ದರೂ ಒಳಗಿನ ಮನಸ್ಸಿನ ಪ್ರಶಾಂತತೆಯನ್ನು ಅವರು ಕಳೆದುಕೊಂಡವರಲ್ಲ. ಬ್ರಹ್ಮಚೈತನ್ಯರು ಭಕ್ತರ ಊಟ ಉಪಚಾರವಲ್ಲದೇ ಊರಿಗೆ ಹೊರಟು ನಿಂತಾಗೆ ಬುತ್ತಿ ಕಟ್ಟಿಸಿಕೊಡುತ್ತಿದ್ದರು. ಮುತ್ತೈದೆಯರಿಗೆ ಕಾಯಿ ಖಣ ಹಾಕಿ ಉಡಿ ತುಂಬಿಸಿ ಕಳಿಸುತ್ತಿದ್ದರು. ಚಿಕ್ಕ ಮಕ್ಕಳಿಗೆ ಅಂಗಿಟೊಪ್ಪಿಗೆ ಕ್ಕೊಡಿಸುತ್ತಿದ್ದರು. ರಾತ್ರಿ ಎಲ್ಲರೂ ಮಲಗಿದ ಬಳಿಕ ಹಿಲಾಲಿನ ಬೆಳಕಿನಲ್ಲಿ ಎಲ್ಲ ಭಕ್ತರನ್ನು ಒಂದು ಸಲ ನೋಡಿ ಬರುತ್ತಿದ್ದರು. ಒಳಗೆ ತಾತ್ಸಾರ, ಒಳಗಡೆ ಕಾರ್ಯಗಳನ್ನು ಪ್ರಾಪಂಚಿಕರ ಹಾಗೆ ಮಾಡುತ್ತಿದ್ದರು ಒಳಗೆ ತಾತ್ಸಾರ, ಒಳಗಡೆ ಮನಸ್ಸಿನಲ್ಲಿ ಆಸಕ್ತರಾಗಿರುತ್ತಿದ್ದಿಲ್ಲ. ಚಿದಾನಂದರೂಪಃ ಶಿವೋಹಂ ಶಿವೋಹಂ.
ಮಹಾತ್ಮರು ಮೇಲೆ ನೋಡಲು ಸಂಸಾರಿಗಳ ಹಾಗೆ ಕಂಡರೂ ಒಳಗಿನ ಮನಸ್ಸಿನ ಪ್ರಶಾಂತತೆ ಕಳೆದುಕೊಂಡವರೇ ಇಲ್ಲ.
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |
ಹೊರಕೋಣೆಯಲಿ ಲೋಗರಾಟಗಳನಾಡು ||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |
ವರಯೋಗಸೂತ್ರವಿದು ||ಮಂ||
ತನ್ನ ಮನದಾಟಗಳ ತಾನೆ ನೋಡುತ ನಗುವ |
ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||
ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |
ಧನ್ಯತೆಯ ಕಂಡವನು ||ಮಂ||
ಹೊರಗಿನ ಪ್ರಪಂಚದಲ್ಲಿ ಶರೀರವಿದೆ, ಸಂಸಾರವಿದೆ. ನಾನಾ ರೀತಿಯ ಪ್ರಶ್ನೆಗಳಿವೆ. ಅದಕ್ಕೆ ಅಂತಃಕರಣ ಅನ್ನುವಂಥ ಮನಸ್ಸು-ಬುದ್ಧಿಯಲ್ಲಿ ಎರಡು ಕೋಣೆಗಳನ್ನು ಮಾಡು. ಹೊರಗಿನ ಕೋಣೆಯಲ್ಲಿ ಎಲ್ಲ ವ್ಯವಹಾರ ಮಾಡು. ಮಕ್ಕಳು, ಬಂಧುಬಾಂಧವರು ಇವರೆಲ್ಲರೂ ಒಂದೊಂದು ಆಶೆಯಿಂದ ನಿನ್ನ ಸಮೀಪಕ್ಕೆ ಬರುತ್ತಾರೆ. ಕೆಲವೊಮ್ಮೆ ತಂಟೆ, ವಾದ, ಮೌನ, ಅಪಮಾನ ಎಲ್ಲವನ್ನೂ ಎದುರಿಸಬೇಕಾಗಿ ಬರುತ್ತದೆ. ಬರಲಿ, ತಂಟೆ ಮಾಡುವುದೇ ಅವರ ಸ್ವಭಾವ. ಅದಕ್ಕೆಲ್ಲ ತಲೆಬಾಗು. ಮನಸ್ಸಿಗೆ ನೋವಾಗುತ್ತದೆ. ಆವಾಗ, ಒಳಗಿನ ಕೋಣೆಗೆ ಬಾ. ದೃಶ್ಯದಿಂದ ಅದೃಶ್ಯದ ಕಡೆಗೆ. ನಶ್ವರದಿಂದ ಪರಮಾತ್ಮನ ಕಡೆಗೆ. ಪರಮಾತ್ಮ ಒಬ್ಬನೇ ಅವಿನಾಶಿ, ವಿರಮಿಸು ಒಬ್ಬನೇ ಪರಮಾತ್ಮನ ಕಡೆಗೆ. ಎಲ್ಲ ಋಷಿಮುನಿಗಳು ತುಳಿದ ದಾರಿ ಇದು. ಅಜ್ಞಸ್ಯ ವಿಜ್ಞಸ್ಯ ವಿಶ್ವಮಸ್ತಿ. ಅಜ್ಞಾನಿಗೂ ಇದೇ ಜಗತ್ತು. ತಾನೆ ನೋಡುತ ನಲಿವ. ಮಹಾತ್ಮರ, ಜ್ಞಾನಿಗಳ ಮನಸ್ಸಿಗೂ ನೋವಾಗುತ್ತದೆ. ಆದರೆ ಅವರು ಅವುಗಳನ್ನು ಎದುರಿಸಿದ ರೀತಿಯೇ ಬೇರೆ. ಎಲ್ಲವೂ ಭಗವಂತನ ಇಚ್ಛೆಯೆಂದು ಮನಸ್ಸಿನ ಗಲಾಟೆ ಗೊಂದಲಗಳನ್ನು ಸಾಕ್ಷೀರೂಪದಿಂದ ನೋಡುತ್ತ, ಆ ಶುದ್ಧ ಚೈತನ್ಯ ತಾನು ಎಂದು ತಿಳಿದುಕೊಂಡು ಮನಸ್ಸಿನ ಪ್ರಶಾಂತತೆಯನ್ನು ಕಾಯ್ದುಕೊಳ್ಳುತ್ತಾರೆ.
ಯಾರು ಹೊರಗಿನ ಪ್ರಪಂಚದಲ್ಲಿದ್ದು, ಪ್ರಪಂಚದ ಏರು ತಗ್ಗುಗಳನ್ನು ಎದುರಿಸುತ್ತಲೇ ಇದ್ದು, ಮನಸ್ಸಿನ ಪ್ರಶಾಂತತೆಯನ್ನು ಕಾಯ್ದುಕೊಳ್ಳುತ್ತಾರೋ ಅವರೇ ನಿಜವಾಗಿಯೂ ದೊಡ್ಡವರು.
ತೆರೆಯಾಗು ವಿಶ್ವಜೀವನದ ದಿವ್ಯಾಬ್ಧಿಯಲಿ |
ಕರಗಿಸದರಲಿ ನಿನ್ನ ಬೇರೆತನದರಿವ ||
ಮರುತನುರುಬನು ತಾಳುತೇಳುತೋಲಾಡುತ್ತ |
ವಿರಮಿಸಾ ಲೀಲೆಯಲಿ ||ಮಂ||
ಎಲ್ಲರಿಗಮೀಗ ನಮೊ – ಬಂಧುಗಳೆ, ಭಾಗಿಗಳೆ |
ಉಲ್ಲಾಸವಿತ್ತವರೆ, ಮನವ ತೊಳೆದವರೆ ||
ಟೊಳ್ಳು ಜಗ, ಸಾಕು ಬಾಳ್-ಎನಿಸಿ ಗುರುವಾದವರೆ |
ಕೊಳ್ಳಿರೀ ನಮವನೆನು ||ಮಂ||
ನಿನ್ನ ಬಂಧುಗಳೇ ನಿನ್ನ ಮನಸ್ಸಿಗೆ ಒಮ್ಮೆ ಆನಂದವನ್ನು ಕೊಟ್ಟು, ಮತ್ತೊಮ್ಮೆ ಈ ಜಗತ್ತು, ಈ ಸಂಸಾರ ಸಾಕು ಸಾಕು, ಎನಿಸಿದರೂ ನಿನ್ನ ಬಂಧುಗ್ಮ್ ಸೋಂಕಿಂದೆ ಬಿಸಿಲುತಣಿವುಗಳ ||
ನರನುಮಂತೆಯೆ ಮನಸಿನನುಭವದಿ ಕಾಣುವನು |
ಪರಸತ್ತ್ವಮಹಿಮೆಯನು ||ಮಂ||
ಸ್ಥೂಲ ದೇಹದ ದೃಷ್ಟಿ ಬಹಳ ದೂರ ಹೋಗಲಾರದು. ಅದರಂತೆ ನಮ್ಮ ಮನಸ್ಸು-ಬುದ್ಧಿಗೆ ಕಾರ್ಯಕಾರನ ಚೌಕಟ್ಟಿನೊಳಗೆ ಕಾರ್ಯ ಮಾಡುವ ಶಕ್ತಿ ಇದೆ. ಪರಬ್ರಹ್ಮ ವಸ್ತು ಪುರುಷತಂತ್ರಕ್ಕೆ ಮೀರಿದ್ದು. ಕಾರ್ಯಕಾರಣಗಳನ್ನು ದಾಟಿರುವಂಥಗುದು. ಅದು ನಮ್ಮ ಮನಸ್ಸಿಗೆ ನಿಲುಕುವುದಿಲ್ಲ. ಶಾಸ್ತ್ರಮೇವಶರಣಂ. ನಮ್ಮ ಜೀವನದ ಆಧಾರ ಅರಿತುಕೊಳ್ಳಬೇಕಾದರೆ ಶಾಸ್ತ್ರಕ್ಕೆ ತಲೆಬಾಗಬೇಕು. ತಸ್ಮಾತ್ ಶಾಸ್ತ್ರಂ ಪ್ರಮಾಣಂತೇ. ಗೀತೆಯಲ್ಲಿಯೂ ಕೂಡ ಶ್ರೀಕೃಷ್ಣ ಪರಮಾತ್ಮನು ಇದನ್ನೇ ಹೇಳಿದ್ದಾನೆ. ಪರಮಾತ್ಮ ತತ್ತ್ವವೂ ಪುರುಷ ತಂತ್ರಕ್ಕೆ ನಿಲುಕದೇ, ಬುದ್ಧಿಯ ಚೌಕಟ್ಟನ್ನು, ಕಾಲತ್ರಯಗಳನ್ನು ಮಿರಿರುತ್ತದೆ. ಇಂಥ ಪರಮಾತ್ಮ ತತ್ತ್ವವನ್ನು ಅರಿಯಬೇಕಾದರೆ ಗುರುವನ್ನು ಅಶ್ರಯಿಸಬೇಕು. ಶಾಸ್ತ್ರಕ್ಕೆ ಶಿರಬಾಗಲೇಬೇಕು.
ರಾಮಕೃಷ್ಣರು ದೇವಿಯ ಭಕ್ತರು. ಅವರು ಪ್ರತಿದಿವಸ ದೇವಿಯೊಡನೆ ಮಾತನಾಡುತ್ತಾ ಉಣಿಸುತ್ತಿದ್ದರು. ಅವರ ಬಾಗಿಲಿಗೆ ಒಬ್ಬ ಗುರುವು ಬಂದು ರಾಮಕೃಷ್ಣರಿಗೆ “ನಿನಗೆ ಬ್ರಹ್ಮಜ್ಞಾನವಾಗಬೇಕಾದರೆ ಗುರೋಪದೇಶವಾಗಬೇಕು” ಎಂದು ಹೇಳಿ ಅದೃಶ್ಯರಾದರು. ಸ್ವಾಭಾವಿಕವಾಗಿ ರಾಮಕೃಷ್ಣರಿಗೆ ಕೋಪ ಬಂತು. ಮರುದಿನ ದೇವಿಯ ಜೊತೆಗೆ ಮಾತನಾಡುವಾಗ ಅವಳನ್ನು ಕೇಳುತ್ತಾರೆ. “ಅಮ್ಮಾ ಸಾಕ್ಷಾತ್ ನೀನೇ ನನ್ನ ಜೊತೆಗಿರುವಾಗ ಗುರೋಪದೇಶ ಬೇಕಂತೆ” ಎಂದು ನಗುತ್ತಾರೆ. ಅದಕ್ಕೆ ದೇವಿಯು: “ಗುರೋಪದೇಶ ಅತ್ಯವಶ್ಯ. ನೀನು ನನ್ನ ಭಕ್ತನಾದ್ದರಿಂದ ಗುರುವು ತಾನಾಗಿಯೇ ನಿನ್ನ ಬಾಗಿಲಿಗೆ ಬಂದಿದ್ದಾನೆ” ಎಂದು ಹೇಳಿ ಆಶಿರ್ವಾದಿಸುತ್ತಾಳೆ. ಭಗವಂತ ಮತ್ತು ಭಕ್ತ ಇಬ್ಬರೂ ಒಂದೇ. ಕುರುಡನಿಗೆ, ಅಪ್ಪಾ ಇವತ್ತು ಹುಣ್ಣಿಮೆ ಎಂದರೆ, ಅವನಿಗೆ ತಿಳಿಯಲು ಸಾಧ್ಯವಿಲ್ಲ. ಅದೇ ಹುಣ್ಣಿಮೆಯ ತಂಪುಗಾಳಿ, ಮೈಗೆ ಸೋಂಕಿದಾಗ ಅವನಿಗೆ ಗೊತ್ತಾಗುತ್ತದೆ. ಇದರಂತೆಯೇ, ನಮ್ಮ ಮನಸ್ಸಿಗೆ, ಬುದ್ಧಿಗೆ, ಆತ್ಮತತ್ತ್ವ ತಿಳಿಯುವುದಿಲ್ಲ. ನಾವು ನಮ್ಮ ಮನೋಬುದ್ಧಿಗಳನ್ನು ದಾಟಿ, ನಮ್ಮ ನಿಜ ಸ್ವರೂಪದಲ್ಲಿ ನಿಂತಾಗ ಕೆಲವು ಕ್ಷಣ ಆತ್ಮನುಭವ ಆಗುವುದುಂಟು. ಪರಮಾತ್ಮನನ್ನು ಅನುಭವದ ಮೂಲಕ ತಿಳಿಯಬೇಕು. ಬುದ್ಧಿಯ ಕಾರ್ಯಕಾರಣ ಮೂಲಕವಲ್ಲ.
ಪರಮಾತ್ಮನನ್ನು ಅರಿಯಬೇಕಾದರೆ ಶಾಸ್ತ್ರಕ್ಕೆ ಶಿರಬಾಗಬೇಕು. ಗುರುವಿಗೆ ಶರಣಾಗಬೇಕು.
ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |
ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ||
ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ |
ನಿತ್ಯ ಭೋಜನ ನಮಗೆ ||ಮಂ||
ಅಕ್ಕಿಯಾಗಬೇಕಾದರೆ ಮೊದಲು ಭತ್ತವನು ಬಿತ್ತಿ, ನೀರುಣಿಸಿ, ಅದು ಬೆಳೆದಿ ನಿಂತಾಗ, ಅದನ್ನು ಕೊಯ್ದು, ಒಣಗಿಸಿ ಕುಟ್ಟಿ, ಭತ್ತದಿಂದ ತೌಡನ್ನು ಬೇರ್ಪಡಿಸಿದಾಗ ಅಕ್ಕಿ ದೊರೆಯುತ್ತದೆ.
ಅದರಂತೆಯೇ ಈ ಹೊರಗಿನ ಪ್ರಪಂಚ ಮತ್ತು ನಮ್ಮ ಶರೀರಕ್ಕೆ ಕಾರಣೀ ಭೂತವಾದ ಜೀವಕೋಶಗಳನ್ನು ಬೇರ್ಪಡಿಸಿದಾಗ ಮಾತ್ರ ತತ್ತ್ವಾನುಭವವು ತಾನಾಗಿಯೇ ದೊರಕುವುದು.
ನ ಹಿ ಜ್ಞಾನೆನ ಸದೃಶಂ ವಿದ್ಯತೆ. ಜ್ಞಾನವಿಲ್ಲದೆ ತತ್ತ್ವದ ದರ್ಶನ ಆಗುವುದಿಲ್ಲ.
ಬಾಳ ಹಳಿವುದದೇಕೆ? ಗೋಳ ಕರೆವುದದೇಕೆ? |
ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ||
ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ |
ಪಾಲುಗೊಳಲಳಬೇಡ ||ಮಂ||
ಅಳು, ದುಃಖ, ಶೋಕ ಇವು ನಮ್ಮ ಮನಸ್ಸಿನ ದೌರ್ಬಲ್ಯ. ಅದಕ್ಕಾಗಿ ಜ್ಞಾನವನ್ನು ಪಡೆ. ಜ್ಞಾನವೇ ಭವಸಾಗರವನ್ನು ದಾಟಿಸುತ್ತದೆ. ಜ್ಞಾನದಿಂದಲೇ ನಾವು ಭೂಮಿಗೆ ಬಂದದ್ದು, ಎಲ್ಲಿಂದ? ಹೋಗುವುದು ಎಲ್ಲಿಗೆ? ಈ ಹುಟ್ಟುಸಾವು, ಇದಕ್ಕೇನು ಅರ್ಥ? ಎಲ್ಲದರ ಅರಿವಾಗುತ್ತದೆ. ಜ್ಞಾನದಿಂದಲೇ ಎಲ್ಲದರ ಅರಿವಾಗುತ್ತದೆ.
ಮೋಕ್ಷದಾಶೆಯೊಳಮತ್ಯಾತುರತೆಯೊಳಿತಲ್ಲ |
ಶಿಕ್ಷೆ ಬಹುಕಾಲ ನಡೆಯದೆ ಮೋಕ್ಷವಿಲ್ಲ ||
ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ |
ಮೋಕ್ಷ ಸ್ವತಸ್ಸಿದ್ಧ ||ಮಂ||
ದೇವರು ಈ ಪ್ರಪಂಚವನ್ನು ಸೃಷ್ಟಿಸಿದ್ದು ಏಕೆ? ಮಾನವರು ಜನ್ಮ ತಾಳಿದ್ದು ಏತಕ್ಕಾಗಿ? ಅವರ ಜೀವನದಲ್ಲಿ ದುಃಖ, ಕೊರಗು ಏಕೆ? ಪರಮ ಪುರುಷಾರ್ಥ ಎಲ್ಲಿ? ಈ ನಾನಾ ರೀತಿಯ ಪ್ರಶ್ನೆಗಳು ಮನುಷ್ಯನ ಮನಸ್ಸಿನಲ್ಲಿ ಏಳುತ್ತವೆ. ಇದಕ್ಕೆಲ್ಲ ಗುಂಡಪ್ಪನವರು ಬಿಡಿಸಿ ಬಿಡಿಸಿ ಹೇಳಿದ್ದಾರೆ. ಮೋಕ್ಷ, ಮುಕ್ತಿ, ಎಂದರೆ ಮನಸ್ಸಿನ ಸಮಾಧಾನ, ಪ್ರಶಾಂತತೆ ಎಂದು ಮಹಾತ್ಮರು ಅಭಿಪ್ರಾಯ ನೀಡಿದ್ದಾರೆ. ಮನಸ್ಸಿನ ಪ್ರಶಾಂತತೆ ತಪಸ್ಸಿಲ್ಲದೆ, ಸಾಧನೆ ಇಲ್ಲದೆ ದೊರಕಲಾರದು. ಅಂತಃಕರಣ, ಮನಸು, ಬುದ್ಧಿ, ತನ್ನ ನಿಜ ಸ್ವರೂಪವಾದ ಆತ್ಮನನ್ನು ಅರಿಯಬೇಕಾದರೆ, ಸರಿಯಾದ ಶಿಕ್ಷಣ ಬೇಕು.
ಈ ಕಗ್ಗದಲ್ಲಿ ಉಪನಿಷತ್ತುಗಳಲ್ಲಿಯ ಜ್ಞಾನ ಹಾಗೂ ಮನಸ್ಸಿನ ಪ್ರಶಾಂತತೆಯನ್ನು ದೊರಕಿಸುವ ಜ್ಞಾನ ಗಂಗೆ ಹರಿದುಂಬದಿದೆ.
ಅವುದಿರುವಿಕೆಗಾದಿ ? ಎಂದು ಸೃಷ್ಟಿ ಮೊದಲು? |
ಅವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? ||
ಅವುದೆಲರಿನ ನಿಲ್ಲದಲೇತಕ್ಕೆ ಗುಡುಸೀಮೆ? |
ಈ ವಿಶ್ವಕಥೆಯಂತು ||ಮಂ||
ಸಮುದ್ರದ ತೆರೆಗಳನ್ನು ನೋಡಿ, ಈ ತೆರೆಗಳಲ್ಲಿ ಮೊದಲನೆಯ ತೆರೆ ಯಾವಾಗ ಹುಟ್ಟಿತು? ಎಂದು ಕೇಳಿದರೆ ಸಮುದ್ರದ ಒಳಗೆ ತೆರೆ ಹುಟ್ಟಲೇ ಇಲ್ಲ ಏಕೆ? ಏಕೆಂದರೆ ಸಮುದ್ರವೇ ತೆರೆ, ತೆರೆಯೇ ಸಮುದ್ರ. ಬೆಟ್ಟದೆತ್ತರ ತೆರೆಗಳು ಎದ್ದು ಮತ್ತೇ ಅಲ್ಲಿಯೇ ಅಡಗುತ್ತವೆಯೋ ಅದೇ ಸಮುದ್ರ. ಸಮುದ್ರವನ್ನು ವೀಕ್ಷಿಸಿದರೆ, ತೆರೆಗಳೇ ದೃಷ್ಟಿಗೆ ಬೀಳುತ್ತವೆ. ಈ ತೆರೆಗಳ ಹಿಂದೆ ಕಾಣುವ ಸಮುದ್ರವನ್ನು ಕಾಣಲು ಒಳದೃಷ್ಟಿಯಿಂದ ಪ್ರಪಂಚದ ತೆರೆಗಳನ್ನು ನೋಡಿದರೆ ಒಳಗಿನ ಸತ್ಯವೆನ್ನುವ ಸಾಗರದ ದರ್ಶನವಾಗಲಾರದು. ಮೊದಲು ಪ್ರಪಂಚವಿರಲಿಲ್ಲ ನಿಜ. ಪರಮಾತ್ಮನು ಒಂದು ದಿನ ಸೃಷ್ಟಿಸಿದ. ವಿಶ್ವಾಸ್ಯ ಏಕಂ ಪರಮೇಷ್ಟಿತಾರಂ ಏಕೈಕ ಪರಮಾತ್ಮನು ಈ ಸಮಸ್ತ ವಿಶ್ವವನ್ನು ತುಂಬಿದ್ದಾನೆ. ಅವನಿಲ್ಲದ ಸ್ಥಳವಿಲ್ಲ. ಜಗತ್ತು ಮಿಥ್ಯೆ, ಮಾಯೆ, ಅಸತ್ಯವಿರಬಹುದು. ಆದರೆ ಅದನ್ನೆಲ್ಲ ದೇವರು ತುಂಬಿಕೊಂಡಿದ್ದಾನೆ.
ಪರಮಾತ್ಮನು ಸತ್ಯ, ನಿತ್ಯ.
ಸೃಷ್ಟಿಕಥೆ ಕಟ್ಟಿಕಥೆ; ವಿಲಯಕಥೆ ಬರಿಯ ಕಥೆ |
ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ||
ನಿತ್ಯಪರಿವರ್ಥನೆಯ ಚೈತನ್ಯನರ್ತನೆಯೆ |
ಸತ್ಯ ಜಗದಲಿ ಕಾಣೊ ||ಮಂ||
ಪರಮೇಶ್ವರ ಸೃಷ್ಟಿ ಮಾಡಿದ. ಆತ್ಮನಿಂದೆ ಆಕಾಶಕ್ಕೆ, ಆಕಾಶಾತ್ ವಾಯು: ಆಕಾಶದಿಂದ ವಾಯುವುಗೆ, ವಾಯೋರಗ್ನಿ: ವಾಯುವುನಿಂದ ಅಗ್ನಿ, ಅಗ್ನೇರಾಪ: ಅಗ್ನಿಯಿಂದ ನೀರು, ಜಲದಿಂದ ಭೂಮಿ. ಭೂಮಿಯಿಂದ ಸಸ್ಯಗಳಿಗೆ ಮೂಲಚೇತನ ಬಂದಿತು. ನೀರಿನ ಸಾರವೇ ಓಷಧಯ: ಸಸ್ಯ ಸಂಪತ್ತು. ಈ ಸಸ್ಯದ ಸಾರವೇ ದೇಹ. ಅಂದರೆ ಭೂಮಿಯಿಂದ ನೀರು. ನೀರಿನಿಂದ ಸಸ್ಯ. ಸಸ್ಯದಿಂದ ದೇಹ, ದೇಹದಿಂದ ಮಾತು ಹೊರಹೊಮ್ಮಿತು. ಈ ದೇಹದಿಂದ ಹೊರಟಂಥ ಮಾತು, ಸತ್ಯ, ಸಮಾಧಾನದಿಂದ ಕೂಡಿದ ಉದ್ಗಾರ. ಈ ಉದ್ಗಾರವೇ ಓಂಕಾರ. ವಿಶ್ವದ ಪ್ರತಿ ಕಣಕನದಲ್ಲಿಯೂ ಓಂಕಾರ ತುಂಬಿದೆ.
ಶಿಷ್ಯನ ಪ್ರಶ್ನೆ – ಈ ಸೃಷ್ಟಿ ಯಾತಕ್ಕೆ? ಏನಿದು ಸಂಸಾರ? ಈ ಕಷ್ಟಗಳು ಸಂಸಾರದಲ್ಲಿ ಬರುವುದು ಯಾಕೆ?
ಶಿಷ್ಯನು ಪ್ರಶ್ನೆ ಕೇಳುವಾಗ ಜಗತ್ತು – ಜೀವರಾಶಿಗಳು ಇವೆ ಎಂದು ಒಪ್ಪಿದ್ದಾನೆ. ಗುಂಡಪ್ಪನವರು ಮುಂದಿನ ಪ್ರಶ್ನೆಗಳಿಗೆ ಉತ್ತರವನ್ನು ಅವನಿಗೆ ತಿಳುಯುವ ಹಾಗೆ ವಿವರಿಸಿದ್ದಾನೆ. ಸೃಷ್ಟಿಕಥೆ, ಕಟ್ಟುಕಥೆ, ವಿಲಯಕಥೆ, ಬರಿಯ ಕಥೆ.
ವೇದಾಂತಕಲ್ಲಿ ಹಾವು, ಹಗ್ಗದ ದೃಷ್ಟಾಂತವನ್ನು ಎಲ್ಲರೂ ಕೊಟ್ಟಿದ್ದಾರೆ.
ಇರುವ ವಸ್ತು ಒಂದು. ಅದು ಸ್ಪಷ್ಟವಾಗಿ ಕಾಣದೆ ಮತ್ತೊಂದಾಗಿ ಕಾಣುತ್ತದೆ. ಇದಕ್ಕೆ ಅಧ್ಯಾಸ-ಅಧ್ಯಾರೋಪವೆನ್ನುತ್ತಾರೆ. ಇರುವ ಪರಮಾತ್ಮ ವಸ್ತು ಒಂದು ನಾವು ತಿಳಿದಿರುವುದು ಬೇರೆ.
ಮುಸ್ಸಜೆಯ ಹೊತ್ತಿನಲ್ಲಿ ಒಬ್ಬನು ಬೀದಿಯಲ್ಲಿ ಹೋಗುವಾಗ ಹಾದಿಗೆ ಅಡ್ಡವಾಗಿ ಒಂದು ಹಗ್ಗ ಬಿದ್ದಿತ್ತು. ಅದನ್ನು ಕಂಡಾಕ್ಷಣ ಹಾವು ಎಂದು ತಿಳಿದು ಥರಥರನೆ ನಡುಗಿದ. ಕೂಗಲು ಧ್ವನಿಯಲ್ಲ, ಓಡಬೇಕೋ ಕಾಲಲ್ಲಿ ಶಕ್ತಿಯಿಲ್ಲ. ಅಷ್ಟರೊಳಗೆ ಆ ಹಾವು ಕಾಲಿಗೆ ಕಡಿದಂತೆ ಭಾಸವಾಯಿತು. ಕಾಲು ಹಿಡಿದುಕೊಂಡು ಹಾ-ಹಾ-ಹಾವು ಎಂದು ಚೀರುತ್ತ, ಅಳುತ್ತ ಹೊರಟ. ಇದು ನಿಜವೇ?
ಇರುವ ವಸ್ತು ಒಂದು ಅವನು ತಿಳಿದದ್ದು ಮತ್ತೊಂದು. ಪರಮಾತ್ಮ ವಸ್ತು ನಿತ್ಯ, ಸತ್ಯ, ಶುದ್ಧ ವಸ್ತು ಒಂದೇ. ನಾವು ತಿಳಿದಿರುವ ರೀತಿ ಬೇರೆ. ಅಧ್ಯಸ್ತ ವಸ್ತು ಮೊದಲು ಇದ್ದದು ಹಗ್ಗವೇ. ಹುರಿಯುರುಳೆ ಹಾವಲ್ಲ ಅದೊಡಂ ಮಬ್ಬಿನಲೆ. ಹಗ್ಗವು ಮುಸ್ಸಂಜೆಯ ಹೊತ್ತಿನಲ್ಲಿ ಹಾವಿನ ಹಾಗೆ ಕಂಡದ್ದು. ಹಾಗಾದರೆ ಇದು ಸತ್ಯವೇ? ಇದರಂತೆಯೇ ನಿನ್ನ ಸಂಸಾರ. ಹೆಂಡತಿ ಮಕ್ಕಳು ಕಣ್ಣಿಗೆ ಕಾಣುವ ಪ್ರಪಂಚ. ಇದೆಲ್ಲ ಹಗ್ಗದಲ್ಲಿ ಹಾವು ಕಂಡ ಹಾಗೆ.
ನಿಜವಾದ ವಸ್ತು ಹಗ್ಗ. ಅಧಿಷ್ಠಾನ ವಸ್ತು ಹಗ್ಗ. ಅಧ್ಯಸ್ಥ ವಸ್ತು ಹಗ್ಗ. ಇದ್ದ ವಸ್ತು ಒಂದು ಅದು ಇಲ್ಲದ ಹಾಗೆ ಕಾಣುವುದಕ್ಕೆ ಸಂಸಾರ ಅನ್ನುತ್ತಾರೆ.
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ-|
ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು ||
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಲಿಗೆ |
ನೊರೆ ಸೃಷ್ಟಿ ಪಾಲ್ ಬ್ರಹ್ಮ ||ಮಂ||
ಮರಗಳನ್ನು ನೋಡಿದಾಗ ಸಾಮಾನ್ಯವಾಗಿ ಮನಸ್ಸಿನಲ್ಲಿ ಸಂಶಯ ಬರುವುದು ಸಹಜ. ಏನೆಂದು? ಮರ ಮೊದಲೋ? ಬೀಜ ಮೊದಲೋ? ಗುಂಡಪ್ಪನವರು ಹೇಳುವುದು. ಮರ ಬೇರೆ, ಬೀಜ ಬೇರೆ ಅಲ್ಲ. ಎರೆಡೂ ಒಂದೆ. ವ್ಯಕ್ತವಾದ ಕಣ್ಣಿಗೆ ಕಂಡ ಬೀಜವೇ ಮರ. ಅವ್ಯಕ್ತವಾದ ಕಣ್ಣಿಗೆ ಕಾಣದ ಮರವೇ ಬೀಜ. ಯಾವ ಬೀಜ ಬಿತ್ತುತ್ತಿಯೋ ಅದೇ ಮರವಾಗುತ್ತದೆ.
ಹಾಲು-ನೊರೆ, ಹಾಲನ್ನು ಎರಡು ಲೋಟದಲ್ಲಿ ಹಾಕಿ ಕೆಳಗೆ ಮೇಲೆ ಮಾಡಿದರೆ ಮೇಲೆ ನೊರೆ ಒಂದು ಅರ್ಥ ಲೋಟ ಹಾಲಿದ್ದರು ನೊರೆಯಿಂದ ತುಂಬಿದ ಹಾಗೆ ಕಾಣಿಸುತ್ತದೆ. ಹಾಲಿನ ಮೇಲೆ ಇರುವ ನೊರೆಯೇ ಸೃಷ್ಟಿ, ಕೆಳಗೆ ಇರುವ ಹಾಲು ಬ್ರಹ್ಮ.
ಮಬ್ಬಿನಲ್ಲಿ ಹುರಿ ಬಿದ್ದಿದ್ದರೆ ಅದು ಹಾವಲ್ಲ. ಹಾವು ಎಂದು ಮಬ್ಬಿನಲ್ಲಿ ತಿಳಿದದ್ದು. ಅಂದರೆ ಹಾವು ಹಗ್ಗ ಬೇರೆ ಬೇರೆ ಅಲ್ಲ ಒಂದೇ. ಅದರಂತೆ ಪರಮಾತ್ಮನೇ ಸೃಷ್ಟಿಗೆ ಕಾರಣ. ಪರಮಾತ್ಮ ಬೇರೆ ಸೃಷ್ಟಿ ಬೇರೆ ಅಲ್ಲ. ಎರಡೂ ಒಂದೇ. ಏಕಮೇವದ್ವಿತೀಯ ಬ್ರಹ್ಮ. ಪರಮಾತ್ಮ ಒಬ್ಬನೇ. ಹಗ್ಗ ಹಾವು ಒಂದೇ. ನಮ್ಮ ದೃಷ್ಟಿ ದೋಷದಿಂದ ಹಗ್ಗ ಹಾವಿನ ಹಾಗೆ ಕಂಡದ್ದು. ಕಣ್ಣಿಗೆ ಕಾಣುವ ಪ್ರಪಂಚ, ಸಂಸಾರ ಇವೆಲ್ಲ ಸುಳ್ಳು ಎಂದರೆ ಯಾರು ಒಪ್ಪುತ್ತಾರೆ? ಇದು ಸರಿ ಕಾಣುವುದಿಲ್ಲ. ಒಬ್ಬನೇ ಪರಮಾತ್ಮ ಈ ಪ್ರಪಂಚವನ್ನು ತುಂಬಿದ್ದಾನೆ.
ಹುರಿಯುರುಳೆ ಹಾವಲ್ಲವಾದೊಡಂ ಮಬ್ಬಿನಲಿ |
ಹರಿದಾಡಿದಂತಾಗೆ ನೋಳ್ಪವಂ ಬೆದರಿ ||
ಸುರಿಸುವಾಅ ಬೆವರು ದಿಟ; ಜಗವುಮಂತುಟೆ ದಿಟವು |
ಜರೆಯದಿರು ತೋರ್ಕೆಗಳ ||ಮಂ||
ಮುಸ್ಸಂಜೆಯ ಹೊತ್ತಿನಲ್ಲಿ ಬೀದಿಯಲ್ಲಿ ಹೋಗುವಾಗ ಅಡ್ಡವಾಗಿ ಬಿದ್ದ ಹಗ್ಗ; ಹಾವಿನಂತೆ ಕಾಣಿಸಿದ್ದು ನಿಜ. ಅದನ್ನು ಕಂಡಾಕ್ಷಣ ಬೆವರಿ ಗಾಬರಿಯಾಗಿ ಚೀರಿದ್ದು ನಿಜ. ಆದರೆ ಹಗ್ಗ, ಹಾವು ಒಂದೇ. ಹಗ್ಗ ಬದಲಾಗಲಿಲ್ಲ. ಹಗ್ಗ ಹಗ್ಗವೇ ಇತ್ತು. ಹಗ್ಗ ಹಗ್ಗವೇ ಇದೆ. ನಡುವೆ ಏನಾಯಿತು? ಹಾವು ಆದಹಾಗೆ ಅನಿಸಿತು. ಅದು ಭ್ರಮೆ.
ನಿತ್ಯ ಶುದ್ಧ ವಸ್ತು, ಪರಬ್ರಹ್ಮ ವಸ್ತು. ಅದು ಬದಲಾಗುವುದಿಲ್ಲ. ಜೀವ ಹೇಗೆ ಉತ್ಪತ್ತಿಯಾಯಿತು? ಜೀವರು ಪರಮಾತ್ಮನ ಜೊತೆಗೆ ಒಂದಾಗುವ ಬಗೆ ಯಾವುದು? ಈ ಉನ್ನತ ಮಟ್ಟಕ್ಕೆ ಏರುವುದು ಹೇಗೆ? ಎಂದು ಉಪದೇಶ ಮಾಡುವಾಗ ಗುಂಡಪ್ಪನವರು ಶಿಷ್ಯರ ಮಟ್ಟಕ್ಕೆ ಇಳಿದು ಅವರಿಗೆ ತಿಳಿಯುವ ಹಾಗೆ, ಪ್ರಪಂಚ ಏಕೆ ಬಹುರೂಪವಾಗಿ ಸೃಷ್ಟಿ ಮಾಡಿದ ಎಂಬುದನ್ನು ಸುಂದರವಾಗಿ ನಿರೂಪಿಸಿದ್ದಾರೆ.
ಭಗವಂತನ ಸೃಷ್ಟಿ ಅಗಾಧವಾದದ್ದು.
ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |
ಹೊಮ್ಮುವೆನು ಕೋಟಿರೂಪದಲಿ ನಾನೆಂದು ||
ಬೊಮ್ಮನೆಳಸಿದನಂತೆ, ಆಯೆಳಸಿಕೆಯೆ ಮಾಯೆ |
ನಮ್ಮಿರವು ಮಾಯೆಯಲಿ ||ಮಂ||
ಗುಂಡಪ್ಪನವರು ಮತ್ತೇ ಅದನ್ನೇ ಒತ್ತಿ ಒತ್ತಿ ಹೇಳುತ್ತಾರೆ. ಹಗ್ಗ ಒಂದೇ ಇತ್ತು. ಹಗ್ಗ ಹಾವಾಗಲೇ ಇಲ್ಲ. ಇವತ್ತಿಗೂ ಅದು ಹಗ್ಗವೇ. ಇದೇ ಅದ್ವೈತ. ಅವನಿಗೆ ಅರ್ಥವಾಗುವುದಿಲ್ಲ. ಅವನು ಮತ್ತೆ ಅದನ್ನೇ ಕೇಳುತ್ತಾನೆ. ಹಗ್ಗ ಹಾವದದ್ದು ಹೇಗೆ? ಅವನಿಗೆ ತಿಳಿಯುವಂತೆ, ಹಗ್ಗ ಹಾವಾದದ್ದು ತನ್ನ ಸ್ವಂತ ಮಾಯೆಯಿಂದ ಎಂದು ಹೇಳುತ್ತಾರೆ. ಪರಮಾತ್ಮನು ಒಬ್ಬನೇ. ಅವನಿಗೆ ಒಬ್ಬನೇ ಇದ್ದು ಬೇಸರವಾಯಿತಂತೆ, ಅದಕ್ಕೆ ಅವನು ಸೃಷ್ಟಿ ಮಾಡಿದ.
ಪರಮಾತ್ಮನು ಲೀಲೆಯಾಗಿ ಪ್ರಪಂಚವನ್ನು ಸೃಷ್ಟಿಸಿದ.
ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ||
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |
ವಿಹರಿಪನು ನಿರ್ಲಿಪ್ತ ||ಮಂ||
ಮಾಯೆ ಎಂಬಳ ಸೃಜಿಸಿ. ಮಾಯೆ – ಅಮ್ಮನವರನ್ನು ಸೃಷ್ಟಿ ಮಾಡಿದ. ಈ ಮಾಯೆ ಎಂಬ ಶಕ್ತಿಯ ಮೂಲಕ ಇಡೀ ಪ್ರಪಂಚವೇ ಸೃಷ್ಟಿಯಾಯಿತು. ಋಷಿಗಳು ಮಾಯೆ ಎಂಬ ಶಬ್ದದ ಅಭ್ಯಾಸ ಮಾಡಿ ಹೀಗೆ ಹೇಳಿದ್ದಾರೆ. ಯಾ-ಮಾ-ಸಾ-ಮಾಯ. ಅಂದರೆ ಏನು ಇಲ್ಲವೊ ಅದು ಇದ್ದ ಹಾಗೆ ಕಾಣುವುದು. ಹಗ್ಗವನ್ನೇ ತೆಗೆದುಕೊಂಡರೆ? ಹಗ್ಗ ಅನ್ನುವಂಥಹದು ಹಾವಾಗಲೇ ಇಲ್ಲ. ಅವನು ಮತ್ತೇ ಮತ್ತೇ ಕೇಳುವುದು ಹಗ್ಗ ಹಾವಾದದ್ದು ಹೇಗೆ ಅದಕ್ಕೆ ಗುರುಗಳು ಅವನಿಗೆ ತಿಳಿಸಿಹೇಳುತ್ತಾರೆ. ಆ ಹಗ್ಗ ಹಾವಾಗಿಲ್ಲ ಹಾವಿನ ಹಾಗೆ ಕಂಡದ್ದು ಮಾಯೆಯಿಂದ. ಇದರಂತೆಯೇ ಋಷಿಗಳು ಈ ಪ್ರಪಂಚಕ್ಕೆ ಕಾರನ ಕೊಟ್ಟಿಲ್ಲ. ಅದು ಮಾಯೆ ಎಂದು. ಮಾಯೆ ಎಂದರೆ ಅಲ್ಲಿ ಬೇರೆ ವಸ್ತು ಬರಲಿಲ್ಲ. ಅಲ್ಲಿ ಮೊದಲೇ ಇದ್ದ ವಸ್ತು ಇದೆ. ಶಿಷ್ಯನು – ಹಾಗಾದರೆ ಈ ಪ್ರಪಂಚದಲ್ಲಿ ಕಣ್ಣಿಗೆ ಕಾಣುವ ಬೇರೆ ಬೇರೆ ಜೀವರಾಶಿಗಳಲ್ಲಿ ಪರಮಾತ್ಮನೇ ಇರುತ್ತಾನೆಯೇ ಎಂದು ಪ್ರಶ್ನಿಸುತ್ತಾನೆ. ಗುರುವು ಹೌದು. ಅವನಲ್ಲದೆ ಬೇರೆ ಏನೂ ಇರಲಾರದು. ಪ್ರತಿಯೊಂದು ಜೀವರಾಶಿಯೂ ಅವನ ರೂಪವೇ. ಪರಮಾತ್ಮನು ನಿತ್ಯ ಶುದ್ಧ, ಆನಂದಸ್ವರೂಪನು. ಇದನ್ನು ತಿಳಿದುಕೊಂಡ. ಆದರೆ, ಶಿಶ್ಯನು ಮತ್ತೆ ಪ್ರಶ್ನೆ ಕೇಳುತ್ತಾನೆ.
ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು |
ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||
ಅರಸಿಕೊಳುವವೊಲಿಹುದು; ದೊರೆತವೋಲ್ ತೋರೆ ಸುಖ |
ದೊರೆವವರೆಗಾಯಸವೊ ||ಮಂ||
ಶಿಷ್ಯನಿಗೆ ತನ್ನ ನಿಜಸ್ವರೂಪ ಆನಂದ ಸ್ವರೂಪ ಎಂಬುದು ತಿಳಿದಿದೆ. ಆದರೆ, ಅವನು ಹುಡುಕಾಡುತ್ತಿರುವುದು ತನ್ನ ನಿಜಸ್ವರೂಪವನ್ನೇ. ಪ್ರತಿಯೊಬ್ಬರೂ ಕೂಡ ಜೀವನದಲ್ಲಿನ ಹೋರಾಡುವುದು ತಮ್ಮ ನಿಜವಾದ ಆತ್ಮಸ್ವರೂಪವನ್ನು ಪಡೆಯುವುದಕ್ಕೆ ಆತ್ಮನ ನಿಜವಾದ ಸ್ವರೂಪ ಸದಾನಂದ. ಚಿದಾನಂದರೂಪಃ ಶಿವೋಹಂ ಶಿವೋಹಂ. ಇದೇ ನಿಜ ಸ್ವರೂಪ, ಜ್ಞಾನ ಸ್ವರೂಪ, ಆನಂದ ಸ್ವರೂಪ.
ಶಿಷ್ಯನ ಪ್ರಶ್ನೆ – ಹೀಗೆದ್ದ ಮೆಲೆ ನಾವು ಪ್ರಪಂಚದಲ್ಲಿ ಅಳುವುದು ಯಾತಕ್ಕೆ ? ಗುಂಡಪ್ಪನವರು ಕನಸಿನ ಉದಾಹರಣೆ ಕೊಟ್ಟು ತಿಳಿಸಿ ಹೇಳುತ್ತಾರೆ. ಈ ಪ್ರಪಂಚವೂ ಒಂದು ಕನಸು ಇದ್ದ ಹಾಗೆ ಎಂದು. ಪ್ರಪಂಚ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಅದು ಕನಸು ಹೇಗೆ? ಎಂದು ಶಿಷ್ಯನು ಇದಕ್ಕೆ ಒಪ್ಪುವುದಿಲ್ಲ. ಮತ್ತೇ ತಿಳಿಸಿ ಹೇಳುತ್ತಾರೆ.
ಎಚ್ಚರದಲ್ಲಿದ್ದಾಗ ಹೊಟ್ಟೆ ತುಂಬ ತಿಂದದ್ದು ನೆನೆಪಿನಲ್ಲಿದ್ದರೆ, ಕನಸಿನಲ್ಲಿ ಹಸಿವೆಯಾಗಿ ಅಳುತ್ತಿರಲಿಲ್ಲ. ಹಾಗಾದರೆ ನಿಜವಾಗಿಯೂ ಕನಸಿನಲ್ಲಿ ಎಚ್ಚರವಿದೆಯೇ? ಇಲ್ಲ. ಅಂದರೆ, ಮರೆತಿದ್ದೇವೆ ಅನ್ನೋಣವೇ? ಕನಸಿನಲ್ಲಿಯೂ ನಾನೇ, ಎಚ್ಚರದಲ್ಲಿಯೂ ನಾನೇ.
ಹೊರಗಿನ ಪ್ರಪಂಚಕ್ಕೆ ಕನಸಿನ ಪ್ರಪಂಚ ಯಾವುದಕ್ಕೂ ಕಡಿಮೆಯಿಲ್ಲ. ಕನಸಿನಲ್ಲಿ ನಡೆದದ್ದೆಲ್ಲವೂ ನಿಜವಾಗಿ ನಡೆದಂತೆ ಅನಿಸುತ್ತದ. ಆದರೆ, ಎಚ್ಚರವಾದಾಗ ಅದೆಲ್ಲ ನಿಜವಲ್ಲ, ಕನಸು ಎಂದು ಗೊತ್ತಾಗುತ್ತದೆ. ಕನಸಿನಲ್ಲಿ ನಡೆದುದ್ದು ಎಚ್ಚರವಾದಗ್ಗೆ ಸುಳ್ಳು ಎಂದಾದರೆ, ನಿಜವಾಗೆ ಹೊರಗೆ ಕಾಣುವ ಪ್ರಪಂಚ ಕನಸಿನಲ್ಲಿ ಸುಳ್ಳಾಗಿತ್ತು. ಕನಸಿನಲ್ಲಿಯೂ ದೇಹ, ಮನಸ್ಸು, ಬುದ್ಧಿ ಇತ್ತು. ಕನಸು ಹೊರ ಜಗತ್ತಿನ ಅಧೀನವಾಗಿದ್ದರೆ, ಈ ಹೊರಗಿನ ಜಗತ್ತು ಇನ್ನೊಂದರೆ ಅಧೀನವೇಕೆ ಆಗಿರಬಾರದು ಇದು ಕನಸೇ ಹಗ್ಗಕ್ಕೆ ಹಾವು ಎಂದು ತಿಳಿದ ಹಾಗೆ ಶಾಸ್ವತವಾಗಿರುವುದು ಪರಬ್ರಹ್ಮ ವಸ್ತು ಒಂದೇ. ಕನಸು ಹೊರಗಿನ ಪ್ರಪಂಚದ ಮೇಲೆ ಅವಲಂಬಿಸಿದೆ, ಅದರಂತೆ ಹೊರಗಿನ ಪ್ರಪಂಚ ಪರಬ್ರಹ್ಮ ವಸ್ತುವನ್ನು ಅವಲಂಬಿಸಿದೆ. ಕಾರಣ ಈ ಪ್ರಪಂಚ ಕನಸೇ, ನಿಜವಲ್ಲ. ಮಾಯೆ ಎಂದು ಮಹಾತ್ಮರ ಅಭಿಪ್ರಾಯ.
ದಾಸರು ಹೇಳಿದ್ದಾರೆ “ಅಲ್ಲಿದೆ ನಿಮ್ಮನೆ ಇಲ್ಲಿರು ಸುಮ್ಮನೆ.” ನಿನ ಶಾಶ್ವತ ಮನೆ ಇದಲ್ಲ. ಇದು ಬಾಡಿಗೆ ಮನೆ ಎಂದು ಎಷ್ಟು ಹೇಳಿದರೂ ಮಾಯೆಯಿಂದ ಕಣ್ಣಿಗೆ ಕಾಣುವ ಸುಂದರವಾದ ಮನೆ ನಮ್ಮದಲ್ಲ ಎಂದು ಹೇಳಿದರೆ ನಂಬಬಹುದೇ ಆದರೂ ಗುಂಡಪ್ಪನವರು ಮುಂದಿನ ಶ್ಲೋಕದಲ್ಲಿ ತಿಳಿಸಿ ಹೇಳಿದ್ದಾರೆ.
ಮೂಲವಸ್ತುವದೊಂದು ಲೀಲೆಗೋಸುಗ ನೂರು |
ಕಾಲದೃಷ್ಟಿಗೆ ಬಹುಳ ಕೇವಲದೊಳೇಕೆ ||
ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯವ ತಾಳಿ |
ಆಳುತಿರು ಜೀವನವ ||ಮಂ||
ಮತ್ತೆ ಅದನ್ನೆ ತಿಳಿಸಿ ಹೇಳುತ್ತಾರೆ. ಮೂಲವಸ್ತು ಒಂದೇ ಅಧಿಷ್ಠಾನ ಒಂದೇ. ಲೀಲೆಗೋಸುಗ ನೂರು. ಬೇರೆ ಬೇರೆ ರೂಪಗಳಲ್ಲಿ ಬೇರೆ ಬೇರೆ ಆಕಾರಗಳಲ್ಲಿ ಯೋನಿಗಳಲ್ಲಿ ಆ ಪರಬ್ರಹ್ಮ ವಸ್ತುವೇ ಕಾಣಿಸುತ್ತಾ ಇದೆ. ಒಂದು ವಸ್ತು ನಮಗೆ ವಿಧ ವಿಧವಾಗಿ ಕಾಣುವುದು ಅವನ ಮಾಯೆ. ಅವನ ಲೀಲೆ.
ಕೇಳಿಯುಂ ಮಾಯೆಯದು; ನೃತ್ಯಗತಿ ಬರಿತೋರ್ಕೆ |
ಮೂಲವಂ ಕಂಡಂಗೆ ಸಂಭ್ರಾಂತಿಯೇನು? ||
ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ |
ಲೀಲಾಪ್ರಿಯಂ ಬ್ರಹ್ಮ ||ಮಂ||
ನಮಗೆ ಈ ಸಂಸಾರ ಮಾಯೆ ಎಂದು ಹೇಳಿದರೂ ಅರ್ಥವಾಗುವುದಿಲ್ಲ. ನಾವೇ ಈ ಸಂಸಾರ ಬಂಧನ ಮಾಡಿಕೊಂಡದ್ದು. ಆದರೆ ಆ ಬಂಧನ ನಾನೇ ಮಾಡಿಕೊಂಡದ್ದು ಅನ್ನುವುದು ನಮಗೆ ಗೊತ್ತಾಗುವುದಿಲ್ಲ.
ಯಾವನೋ ಒಬ್ಬ ಕಂಬವನ್ನು ಗಟ್ಟಿಯಾಗಿ ಹಿಡಿದುಕೊಂಡು ಅಯ್ಯಯ್ಯೋ ನನ್ನನ್ನು ಬಿಡಿಸಿ ಬಿಡಿಸಿ ಎಂದು ಅಳುತ್ತಿದ್ದನಂತೆ. ಅವನನ್ನು ಬೇರೆಯವರು ನೋಡಿ ಮೂರ್ಖ ನೀನೇ ಕಂಬ ಹಿಡಿದುಕೊಂಡದ್ದು, ಬಿಟ್ಟಿಬಿಡು ಅದನ್ನು ಎಂದು ಹೇಳಿದರು. ಅದನ್ನು ಕೇಳಿ ಆತ ಬಿಟ್ಟುಬಿಟ್ಟ. ಹಟ್ಟಿಯಾಗಿ ಕಂಬ ಹಿಡಿದದ್ದು ಅವನೇ ಬಿಟ್ಟಿದ್ದು ಅವನೇ. ಇದೇ ಮೂರ್ಖತನ ನಾವೂ ಮಾಡುವುದು. ಈ ಶರೀರ, ಈ ಮನಸ್ಸು, ಈ ಬುದ್ಧಿ, ಈ ಪಂಚಕೋಶಾದಿ ಶರೀರದಲ್ಲಿ ನಾನು ನಾನು ಅನ್ನುತ್ತ ಕುಣಿಯುತ್ತಾ ಇರುತ್ತೇವೆ. ಅದನ್ನು ಬಿಟ್ಟುಬಿಡು ಅನ್ನುವುದು ಶಾಸ್ತ್ರ. ಮಹಾತ್ಮರೂ ಋಷಿ ಮುನಿಗಳು ಬರೀ ಹೇಳಲಿಲ್ಲ. ತಾವು ಇದ್ದು ಜಗತ್ತಿಗೆ ಮಾದರಿಯಾಗಿ ತೋರಿಸಿದ್ದಾರೆ. ಬ್ರಹ್ಮ ಚೈತನ್ಯರೂ, ತುಕಾರಾಮರೂ, ಪುರಂದರದಾಸರೂ, ಅತ್ರಿ ಮುನಿಗಳೂ ಎಲ್ಲ ಸಂಸಾರಿಗಳಾಗಿದ್ದರು. ಹೇಗೆ? ಬಹಿರಂಗದಲ್ಲಿ ಸಂಸಾರಿಗಳಾಗಿ ಕಂಡರೂ ಅಂತರಂಗದಲ್ಲಿ ಅದರ ಮೋಹಜಾಲದಲ್ಲಿ ಬಿದ್ದಿರಲಿಲ್ಲ. ಕೆಸರಿನಲ್ಲಿಯ ಕಮಲದಂತೆ ನಿರ್ಲಿಪ್ತರಿದ್ದರು. ಬಹಿರಂಗದಲ್ಲಿ ಸ್ತುತಿ ನಿಂದೆ ಕೇಳಿದರೂ ಅಂತರಂಗದಲ್ಲಿ ಪ್ರಶಾಂತ ಮಹಾಮೌನ. ಅಂತರಂಗದಲ್ಲಿ ಜೀವನ್ಮುಕ್ತರಾಗಿದ್ದರು. ಬಹಿರಂಗದಲ್ಲಿ ಕರ್ಮಯೋಗಿಗಳಾಗಿದ್ದರು. ಈ ರೀತಿ ಬದುಕಿ ಜಗತ್ತಿಗೆ ಮಾರ್ಗದರ್ಸ್ಸಮಾಜದ ಕಣ್ಣಲ್ಲಿ ಅದು ಮಹಾಪಾಪ. ಆ ಪಾಪಕ್ಕೆ ಅವರ ಮಕ್ಕಳು, ಜ್ಞಾನೇಶ್ವರ, ನಿವೃತ್ತಿನಾಥ, ಮುಕ್ತಾ ಮತ್ತು ಸೋಪಾನ ಬಲಿಯಾದರು. ಸಮಾಜಕ್ಕೆ ಸಿಕ್ಕು ಪಡಬಾರದ ಕಷ್ಟಪಟ್ಟರು. ಮಹಾತ್ಮರ ಎದೆ ಶಿಲೆಯಲ್ಲಿ ಅವರು ಅಳುತ್ತಾರೆ. ಎಷ್ಟು ಕಾಲ? ಕ್ಷಣ ಮಾತ್ರ. ಎಲ್ಲರೊಳು ಒಂದಾಗಿರುವಾಗ ಅವರ ಮನಸ್ಸೂ ಅಳುತ್ತದೆ. ಮರುಕ್ಷಣ ಮರೆತು ನಗುತ್ತಾರೆ. ಅವರಲ್ಲಿ ಪ್ರೀತಿಯು ನದಿ ತುಂಬಿ ಹರಿದ ಹಾಗೆ ತುಂಬಿ ಹರಿಯುತ್ತದೆ. ಎಲ್ಲ ಮಹಾತ್ಮರೂ ಜೀವನ ಮಾಡಿದ ರೀತಿ ಇದು.
ಹೊರಗೆ ಲೋಕಾಸಕ್ತಿಯೊಳಗೆ ಸಕಲವಿರಕ್ತಿ |
ಹೊರಹೆ ಕಾರ್ಯಧ್ಯಾನವೊಳಗುದಾಸೀನ ||
ಹೊರಗೆ ಸಂಸ್ಕೃತಿಭಾರವೊಳಗದರೆ ತಾತ್ಸಾರ |
ವರಯೋಗಮಾರ್ಗವಿದು ||ಮಂ||
ಋಷಿ, ಮುನಿಗಳೂ ಸಂಸಾರಿಗಳಾಗಿದ್ದರು. ಅವರಿಗೂ ನಾನಾ ತರಹದ ಶಾರೀರಿಕ ಬಾಧೆಗಳು ಮತ್ತು ಪ್ರಾಪಂಚಿಕ ತಾಪತ್ರಯಗಳು ಇರುತ್ತಿದ್ದವು. ಹೊರಗೆ ಲೋಕಾಸಕ್ತಿ ಒಳಗೆ ಸಕಲವಿರಕ್ತಿ. ಹೊರಗಿನ ಪ್ರಪಂಚದಲ್ಲಿ ಸಂಸಾರಿಗಳಿದ್ದ ಹಾಗೆ ಕಂಡರೂ ಒಳಗೆ ಉದಾಸೀನರಾಗಿರುತ್ತಿದ್ದರು.
ಹೊರಗೆ ಕಾರ್ಯಧ್ಯಾನ. ಹೊರಗಿನ ಕೆಲಸಗಳನ್ನು ಚಿತ್ತವಿಟ್ಟು ಮಾಡುತ್ತಿದ್ದರು. ಒಳಗೆ ಉದಾಸೀನ. ಶರೀರವಿರುವ ತನಕ ಕಾರ್ಯಗಳನ್ನು ಮಡಲೇಬೇಕೆಂಬ ಧ್ಯೇಯದಿಂದ ಮಾಡುತ್ತಿದ್ದರು. ಆ ಕಾರ್ಯದಿಂದ ಫಲ ದೊರೆತರೂ ಅಷ್ಟೇ, ಫಲ ದೊರೆಯದಿದ್ದರೂ ಅಷ್ಟೇ. ತಮ್ಮ ಮನಸ್ಸಿನ ಒಳಗಿನ ಆನಂದವನ್ನು ಒಂದೂ ಕಳೆದುಕೊಂಡವರೇ ಅಲ್ಲ.
ಹೊರಗೆ ಸಂಸ್ಕೃತಿಭಾರ ಒಳಗದರ ತಾತ್ಸಾರ, ಮಹಾತ್ಮರು ಹೊರ ಪ್ರಪಂಚದಲ್ಲಿ ಸಂಸಾರ ಭಾರ ಹೊತ್ತ ಹಾಗೆ ಸಂತ ತುಕಾರಾಮರ ಹಾಗೆ ಬ್ರಹ್ಮಚೈತನ್ಯರ ಹಾಗೆ ತೋರುತ್ತಿದ್ದರು. ಸಂತ ತುಕಾರಾಮರಿಗೆ ಎಲ್ಲಿಲ್ಲದ ಬಡತನ. ಮಕ್ಕಳು, ಕರ್ಕಶಿಯಾದ ಹೆಂಡತಿ ಇಂಥ ಸಂಸಾರದಲ್ಲಿದ್ದರೂ ಒಳಗಿನ ಮನಸ್ಸಿನ ಪ್ರಶಾಂತತೆಯನ್ನು ಅವರು ಕಳೆದುಕೊಂಡವರಲ್ಲ. ಬ್ರಹ್ಮಚೈತನ್ಯರು ಭಕ್ತರ ಊಟ ಉಪಚಾರವಲ್ಲದೇ ಊರಿಗೆ ಹೊರಟು ನಿಂತಾಗೆ ಬುತ್ತಿ ಕಟ್ಟಿಸಿಕೊಡುತ್ತಿದ್ದರು. ಮುತ್ತೈದೆಯರಿಗೆ ಕಾಯಿ ಖಣ ಹಾಕಿ ಉಡಿ ತುಂಬಿಸಿ ಕಳಿಸುತ್ತಿದ್ದರು. ಚಿಕ್ಕ ಮಕ್ಕಳಿಗೆ ಅಂಗಿಟೊಪ್ಪಿಗೆ ಕ್ಕೊಡಿಸುತ್ತಿದ್ದರು. ರಾತ್ರಿ ಎಲ್ಲರೂ ಮಲಗಿದ ಬಳಿಕ ಹಿಲಾಲಿನ ಬೆಳಕಿನಲ್ಲಿ ಎಲ್ಲ ಭಕ್ತರನ್ನು ಒಂದು ಸಲ ನೋಡಿ ಬರುತ್ತಿದ್ದರು. ಒಳಗೆ ತಾತ್ಸಾರ, ಒಳಗಡೆ ಕಾರ್ಯಗಳನ್ನು ಪ್ರಾಪಂಚಿಕರ ಹಾಗೆ ಮಾಡುತ್ತಿದ್ದರು ಒಳಗೆ ತಾತ್ಸಾರ, ಒಳಗಡೆ ಮನಸ್ಸಿನಲ್ಲಿ ಆಸಕ್ತರಾಗಿರುತ್ತಿದ್ದಿಲ್ಲ. ಚಿದಾನಂದರೂಪಃ ಶಿವೋಹಂ ಶಿವೋಹಂ.
ಮಹಾತ್ಮರು ಮೇಲೆ ನೋಡಲು ಸಂಸಾರಿಗಳ ಹಾಗೆ ಕಂಡರೂ ಒಳಗಿನ ಮನಸ್ಸಿನ ಪ್ರಶಾಂತತೆ ಕಳೆದುಕೊಂಡವರೇ ಇಲ್ಲ.
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |
ಹೊರಕೋಣೆಯಲಿ ಲೋಗರಾಟಗಳನಾಡು ||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |
ವರಯೋಗಸೂತ್ರವಿದು ||ಮಂ||
ತನ್ನ ಮನದಾಟಗಳ ತಾನೆ ನೋಡುತ ನಗುವ |
ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||
ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |
ಧನ್ಯತೆಯ ಕಂಡವನು ||ಮಂ||
ಹೊರಗಿನ ಪ್ರಪಂಚದಲ್ಲಿ ಶರೀರವಿದೆ, ಸಂಸಾರವಿದೆ. ನಾನಾ ರೀತಿಯ ಪ್ರಶ್ನೆಗಳಿವೆ. ಅದಕ್ಕೆ ಅಂತಃಕರಣ ಅನ್ನುವಂಥ ಮನಸ್ಸು-ಬುದ್ಧಿಯಲ್ಲಿ ಎರಡು ಕೋಣೆಗಳನ್ನು ಮಾಡು. ಹೊರಗಿನ ಕೋಣೆಯಲ್ಲಿ ಎಲ್ಲ ವ್ಯವಹಾರ ಮಾಡು. ಮಕ್ಕಳು, ಬಂಧುಬಾಂಧವರು ಇವರೆಲ್ಲರೂ ಒಂದೊಂದು ಆಶೆಯಿಂದ ನಿನ್ನ ಸಮೀಪಕ್ಕೆ ಬರುತ್ತಾರೆ. ಕೆಲವೊಮ್ಮೆ ತಂಟೆ, ವಾದ, ಮೌನ, ಅಪಮಾನ ಎಲ್ಲವನ್ನೂ ಎದುರಿಸಬೇಕಾಗಿ ಬರುತ್ತದೆ. ಬರಲಿ, ತಂಟೆ ಮಾಡುವುದೇ ಅವರ ಸ್ವಭಾವ. ಅದಕ್ಕೆಲ್ಲ ತಲೆಬಾಗು. ಮನಸ್ಸಿಗೆ ನೋವಾಗುತ್ತದೆ. ಆವಾಗ, ಒಳಗಿನ ಕೋಣೆಗೆ ಬಾ. ದೃಶ್ಯದಿಂದ ಅದೃಶ್ಯದ ಕಡೆಗೆ. ನಶ್ವರದಿಂದ ಪರಮಾತ್ಮನ ಕಡೆಗೆ. ಪರಮಾತ್ಮ ಒಬ್ಬನೇ ಅವಿನಾಶಿ, ವಿರಮಿಸು ಒಬ್ಬನೇ ಪರಮಾತ್ಮನ ಕಡೆಗೆ. ಎಲ್ಲ ಋಷಿಮುನಿಗಳು ತುಳಿದ ದಾರಿ ಇದು. ಅಜ್ಞಸ್ಯ ವಿಜ್ಞಸ್ಯ ವಿಶ್ವಮಸ್ತಿ. ಅಜ್ಞಾನಿಗೂ ಇದೇ ಜಗತ್ತು. ತಾನೆ ನೋಡುತ ನಲಿವ. ಮಹಾತ್ಮರ, ಜ್ಞಾನಿಗಳ ಮನಸ್ಸಿಗೂ ನೋವಾಗುತ್ತದೆ. ಆದರೆ ಅವರು ಅವುಗಳನ್ನು ಎದುರಿಸಿದ ರೀತಿಯೇ ಬೇರೆ. ಎಲ್ಲವೂ ಭಗವಂತನ ಇಚ್ಛೆಯೆಂದು ಮನಸ್ಸಿನ ಗಲಾಟೆ ಗೊಂದಲಗಳನ್ನು ಸಾಕ್ಷೀರೂಪದಿಂದ ನೋಡುತ್ತ, ಆ ಶುದ್ಧ ಚೈತನ್ಯ ತಾನು ಎಂದು ತಿಳಿದುಕೊಂಡು ಮನಸ್ಸಿನ ಪ್ರಶಾಂತತೆಯನ್ನು ಕಾಯ್ದುಕೊಳ್ಳುತ್ತಾರೆ.
ಯಾರು ಹೊರಗಿನ ಪ್ರಪಂಚದಲ್ಲಿದ್ದು, ಪ್ರಪಂಚದ ಏರು ತಗ್ಗುಗಳನ್ನು ಎದುರಿಸುತ್ತಲೇ ಇದ್ದು, ಮನಸ್ಸಿನ ಪ್ರಶಾಂತತೆಯನ್ನು ಕಾಯ್ದುಕೊಳ್ಳುತ್ತಾರೋ ಅವರೇ ನಿಜವಾಗಿಯೂ ದೊಡ್ಡವರು.
ತೆರೆಯಾಗು ವಿಶ್ವಜೀವನದ ದಿವ್ಯಾಬ್ಧಿಯಲಿ |
ಕರಗಿಸದರಲಿ ನಿನ್ನ ಬೇರೆತನದರಿವ ||
ಮರುತನುರುಬನು ತಾಳುತೇಳುತೋಲಾಡುತ್ತ |
ವಿರಮಿಸಾ ಲೀಲೆಯಲಿ ||ಮಂ||
ಎಲ್ಲರಿಗಮೀಗ ನಮೊ – ಬಂಧುಗಳೆ, ಭಾಗಿಗಳೆ |
ಉಲ್ಲಾಸವಿತ್ತವರೆ, ಮನವ ತೊಳೆದವರೆ ||
ಟೊಳ್ಳು ಜಗ, ಸಾಕು ಬಾಳ್-ಎನಿಸಿ ಗುರುವಾದವರೆ |
ಕೊಳ್ಳಿರೀ ನಮವನೆನು ||ಮಂ||
ನಿನ್ನ ಬಂಧುಗಳೇ ನಿನ್ನ ಮನಸ್ಸಿಗೆ ಒಮ್ಮೆ ಆನಂದವನ್ನು ಕೊಟ್ಟು, ಮತ್ತೊಮ್ಮೆ ಈ ಜಗತ್ತು, ಈ ಸಂಸಾರ ಸಾಕು ಸಾಕು, ಎನಿಸಿದರೂ ನಿನ್ನ ಬಂಧುಗು ಸ್ತಬ್ಧ, ಮನಸ್ಸೂ ಸ್ತಬ್ಧ, ಬುದ್ಧಿಯೂ ಸ್ತಬ್ಧ. ಇವುಗಳನ್ನು ದಾಟಿ ನಿನ್ನಲ್ಲಿ ನೀನು ನಿಂತಾಗ ಅಂದರೆ ಶಾಂತವಾಗಿ ಮಲಗಿದಾಗ ನಿದ್ರಯಲ್ಲಿ ನಿನಗೆ ಆನಂದವಿಲ್ಲವೇ? ನಿದ್ರಯಲ್ಲಿ ಜನನ ಮರಣದ ಭಯವಿಲ್ಲ. ಗಾಢಾವಾದ ನಿದ್ರಯಲ್ಲಿ ನೀನು ಆನಂದಸ್ವರೂಪನು. ಇದು ನಿಜ. ನಿದ್ರಯಿಂದ ಎಚ್ಚರವಾದ ತಕ್ಷಣ ಮನಸ್ಸು ಚಂಚಲವಾಗಿ ಕುಣಿಯುತ್ತದೆ.
ನಾವು ಎಚ್ಚರವಿರುವಾಗಲೂ ಆ-ಆನಂದ ದೊರಕಬೇಕಾದರೆ, ಅದು ಒಂದು ದಿವಸಕ್ಕೆ ಬರುವಂಥದಲ್ಲ. ಅದಕ್ಕೆ ಸಾಧನೆ ಬೇಕು.
ಮುಕ್ತಿಯೆಂಬುದು ಮನದ ಸಂಸ್ಥಿತೆಯೆ, ಬೇರಲ್ಲ |
ರಕ್ತಿ ವಿಪರೀತವದಕಾಗದಿರೆ ಮುಕ್ತಿ ||
ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ |
ಶಕ್ತಿವಂತನೆ ಮುಕ್ತ ||ಮಂ||
ಋಷಿಗಳು ಹೇಳಿದ್ದು ಮೋಕ್ಷ, ನಿರ್ವಾಣ, ಮುಕ್ತಿ. ಅಂದರೆ ಬಂಧನದಿಂದ ಬಿಡುಗಡೆಯಲ್ಲ. ಬಂಧನವೇ ಇಲ್ಲ ಅನ್ನುವ ಜ್ಞಾನವೆ ನಿಜವಾದ ಮುಕ್ತಿ ಎಂದು. ಕಾರಣ ನಿನ್ನ ಇಂದ್ರಿಯ, ಮನಸ್ಸು, ಬುದ್ಧಿಮುಕ್ತಿಯ ಬಗ್ಗೆ ಮಾಡಿಕೊಂಡ.
*****
ಮುಂದುವರೆಯುವುದು