ನಲುಮೆಯ ಕರೆ

ಅಲ್ಲೆ ಇರು, ಇಲ್ಲೆ ಇರು, ಎಲ್ಲೊ ಎಂತಾದರಿರು ನನ್ನ ನಲುಮೆಯ ಕರೆಗೆ ಓಗೊಡುತಿರು; ಒಮ್ಮೆ ಉದ್ವೇಗದಲಿ, ಒಮ್ಮೆ ಸಂತೃಪ್ತಿಯಲಿ ‘ಓ’ ಎಂಬ ಸವಿದನಿಯ ಸೋಂಕಿಸುತಿರು. ದೂರದಿಂ ತೇನೆಯುಲಿ ಸಾರುವಂತೆ ಮರಳಿ ಬೆಳುದಿಂಗಳಲಿ ಕರಗುವಂತೆ! ಆವ […]

ಮುಖವಾಡಗಳು

ಒಂದು ‘ಸಾವಿಲ್ಲದಾ ಮನೆಯ ಸಾಸುವೆಯ ತಾರವ್ವ’ ಎಂದು ಬುದ್ಧ ಹೇಳಿದಾಗ ಕಿಸಾಗೌತಮಿ ಊರೂರು ಅಲೆದಳು- ಬೀದಿ ಬೀದಿ ಸುತ್ತಿದಳು-ಕಂಡಕಂಡವರ ಕಾಲಿಗೆ ಬಿದ್ದು ಗೋಗರೆದಳು ಆಗಲೇ ಅವಳಿಗೆ ಅರಿವಾದದ್ದು ‘ಒಂದೂ ಸಾವಿಲ್ಲದ ಮನೆ ಈ ಜಗತ್ತಿನಲ್ಲೇ […]

ನನ್ನ ಹೊಂದಾವರೆ

ನನ್ನ ಕನಸಿನ ಹೊನ್ನ ತಾವರೆಯ ಹೂವರಳಿ ಎನ್ನ ಬೊಗಸೆಯೊಳಿಂದು ಕಂಗೊಳಿಸಿದೆ; ಎನ್ನಿನಿಯ ಭಾವಗಳ ಮಧುರ ಮಕರಂದವೂ ಮೃದುಲ ದಲದಲಗಳಲಿ ಪರಿಮಳಿಸಿದೆ! ಮಾನಸ ಸರೋವರದ ಶಾಂತಿಸೌಖ್ಯಾಭೋಗ ಸಕಲ ಸೌಂದರ್‍ಯದೀ ಮೊಗ್ಗೆಯಾಗಿ ನೇಹ ನೇಸರನೊಂದು ಮೀಸಲದ ಕಿರಣದೆಡೆ […]

ಒಂಟಿ ಗೆಜ್ಜೆ

ಮಿನು ಎದ್ದು ಹೊರ ಬಂದರೆ ಹಾಲ್‌ನಲ್ಲಿ ಅಮ್ಮ ಹನಿ ತುಂಬಿದ ಕಣ್ಣುಗಳಿಂದ ಕಿಟಕಿಯಾಚೆ ನೋಡುತ್ತ ಕಳಾಹೀನಳಾಗಿ ಕುಳಿತದ್ದು ಕಾಣಿಸಿತು. ಬೆಳಿಗ್ಗೆ ಬೆಳಿಗ್ಗೆ ಇಂಥ ದೃಶ್ಯ ನೋಡುವುದೆಂದರೆ ಮಿನುಗೆ ಅಸಹನೆ. ನೋಡಿದರೂ ನೋಡದಂತೆ ಮುಖ ತೊಳೆಯಲು […]

ತಾಯಿಯಂತೆ

ಮಗನ ರಕ್ತ ಸುರಿವ ಗಾಯಕ್ಕೆ ಹಚ್ಚಿದ ತೆಂಗಿನೆಣ್ಣೆಯ ಮದ್ದು ಸೀರೆ ಹರಿದು ಕಟ್ಟಿದ ಬಟ್ಟೆ ತಾಯಿ ಸತ್ತು ವರ್‍ಷಗಳಾದರೂ ಮಾಯ್ದ ಗಾಯದ ಕಲೆಯೊಂದಿಗೆ ನೋವಾಗಿ ಉಳಿದುಕೊಂಡಿದೆ. ನೆನಪಾದಾಗಲೆಲ್ಲ ಅದ ಮುಟ್ಟಿ ನೇವರಿಸುವನು ಆ ಗಾಯ […]

ನನ್ನೊಲವು

ಹುಲ್ಲು ಗದ್ದೆಯ ಹೂವು ನೆಲದೆದೆಯನಪ್ಪಿದೊಲು ಅನಿತು ನನ್ನೆದೆ ಸನಿಹಕಿರುವಳವಳು; ದಣಿದ ಅವಯವಗಳಿಗೆ ನಿದ್ದೆ ಮುದ್ದಾದಂತೆ ನನಗನಿತು ಸವಿಯಾಗಿ ತೋರಿದವಳು. ತನಿ ಶರತ್ಕಾಲದಲ್ಲಿ ಅರ್‍ಪಣಾನಂದದಲಿ ನದಿ ಮಹಾಪೂರದಿಂದೋಡುವಂತೆ ತುಂಬಿ ಹರಿಯುವ ನನ್ನ ಬಾಳು; ಅವಳಲ್ಲಿರುವ ಪ್ರೇಮಬಾಹುಳ್ಯವನೆ […]

ಪ್ರಮೇಯ

ಕುಡಿಯುವ ಉದ್ದೇಶದಿಂದೇನೂ ಇಬ್ಬರೂ ಆ ಪಬ್ ಹೊಕ್ಕದ್ದಲ್ಲ. ಶೀಲಾಳಿಗೆ ತನಗೆ ಹೊರಗೆ ಕೊರೆಯುವ ಚಳಿಯಲ್ಲಿ ಇನ್ನು ನಿಂತು ಮಾತಾಡುವುದಾಗಿಲ್ಲ ಮತ್ತು ಮ್ಯಾಕ್, ಬರ್ಗರ್ ಕಿಂಗ್ ಸೇರಿದಂತೆ ಸುತ್ತಲಿನ ರೆಸ್ಟೋರೆಂಟ್‌ಗಳೆಲ್ಲ ಈಗಾಗಲೇ `ಕ್ಲೋಸ್ಡ್’ ಅಂತ ಬಿಲ್ಲೆ […]

ಐಕ್ಯದ ಹಂಬಲ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನಗೀಗ ವೈನ್ ಬೇಡ, ಅಶುದ್ಧ ಮಧುವೂ ಬೇಡ, ಶುದ್ಧವೂ ಬೇಡ ನನಗೀಗ ನನ್ನ ರಕ್ತವೇ ಬೇಕು ಯುದ್ಧದ ಸಮಯ ಬಂದಿದೆ ಚೂಪಾದ ಖಡ್ಗ ಎಳೆದಿಡು, ದೇಹ […]

ರಸ‌ಋಷಿ

೧ ಆಹ! ಮಧುಮಾಸವೈತಂದಿಹುದು. ಬನಕೆಲ್ಲ ಚಿಗುರು ಹೂಗಳ ಹುಚ್ಚು ಹಿಡಿದಿಹುದು. ಜೀವನದ ರಸಿಕತೆಯ ಮೂರ್‍ತಿಮತ್ತಾಯಿತೆನೆ ಆ ಮರದ ತಳಿರ ತಣ್ಣೆಳಲಲ್ಲಿ ಮುಪ್ಪಾದ- ಅಲ್ಲಲ್ಲ- ಹರೆಯ ಒಪ್ಪಂಬೂಸಿ ಕಪ್ಪು ಕಾಣಿಕೆಯಿತ್ತ ಉಮರ ಖಯ್ಯಾಮನದೊ ನಲ್ಗಬ್ಬಮಂ ಪಿಡಿದು […]