ಛೇದ – ೪

ಪಾರ್ವತಿ ನಿಂತೇ ಇದ್ದಳು: “ನಿನ್ನೆ ಬಂದವನ ಹೆಸರು ನಾನರಿಯೆ. ನಾನು ಕೆಲಸ ಮಾಡುತ್ತಿದ್ದ ಕಟ್ಟಡವೊಂದರಲ್ಲಿ ವಾಚ್‌ಮನ್‌ನ ಕೆಲಸ ಮಾಡುತ್ತಿದ್ದರಿಂದ ನನಗೆ ಅವನು ಗೊತ್ತು. ಇಲ್ಲಿ ಆ ದಿನ ನಾಲ್ಕು ಜನ ಬಂದಿದ್ದರಲ್ಲ-ಅದರ ಮಾರನೆಯ ದಿನದಿಂದ ಅವನು ಕೆಲಸಕ್ಕೇ ಬರುವುದನ್ನು ನಿಲ್ಲಿಸಿದ್ದರಿಂದ ಕೆಲವು ದಿನ ಅವನನ್ನು ಕಂಡೇ ಇರಲಿಲ್ಲ. ನಿನ್ನೆ ಸಂಜೆ, ದೀಪ ಹಚ್ಚುವ ಹೊತ್ತಿಗೆ ಧುತ್ ಎಂದು ನನ್ನ ಗುಡಿಸಲಿಗೇ ಬಂದ. ಗುರುತೇ ಹತ್ತಲಿಲ್ಲ. ದಾಡಿ ಮೀಸೆ ಬೋಳಿಸಿಕೊಂಡು, ತಲೆಗೂದಲನ್ನು ತೀರ ಸಣ್ಣದು ಮಾಡಿ ಕತ್ತರಿಸಿಕೊಂಡು ಒಂದು ನಮೂನೆ ಕಾಣಿಸುತ್ತಿದ್ದ. ನನಗೆ ಹೆದರಿಕೆಯಾಗಹತ್ತಿತು. ಮನೆಯಲ್ಲಾಗ ನಾನೊಬ್ಬಳೇ. ಹಿಂದೆ ಎಂದೂ ಬಂದವನಲ್ಲ. ಮನೆಯ ಪತ್ತೆಯನ್ನು ನಾನು ಕೊಟ್ಟಿರಲಿಲ್ಲ. ಅವನು ಮಾತನಾಡಲು ಬಾಯಿ ತೆರೆದಮೇಲೆಯೆ ನನಗೆ ಇಂಥವನು ಎಂದು ಗೊತ್ತಾದದ್ದು,” ಎಂದಳು.
ಬೆಹರಾಮನಿಗೆ ಅವಳು ಎಂಥದ್ದಕ್ಕೋ ಹೆದರಿಕೊಂಡಿದ್ದಂತೆ ತೋರಿತು. ಅಥವಾ ಅದು ತನ್ನ ಕಲ್ಪನೆಯೊ ? ಹೇಳಿದ:
“ವಾಸು ನಮ್ಮ ಮನೆಯಲ್ಲಿ ನೀನು ಬರುವ ಮೊದಲು ಕೆಲವು ವರ್ಷ ಕೆಲಸಕ್ಕಿದ್ದ. ಕರುಣಾಕರನ್ ಬಂದ ದಿನವೇ ನಮ್ಮ ಮನೆಗೆ ಬಂದಿದ್ದ. ನೀನು ನಮ್ಮ ಮನೆಯಿಂದ ಹೋದ ನಂತರವೇ ಬಂದಿರಬೇಕು.”
“ಇವನು ಅದೇ ಹುಡುಗನೋ ಅಲ್ಲವೋ, ಗೊತ್ತಿಲ್ಲ. ತಾನು ಕರುಣಾಕರನ್ನನ ಅಣ್ಣ ಎಂದ. ಅವನನ್ನು ತಾನು ಹುಡುಕುತ್ತಾ ಇದ್ದೇನೆ ಎಂದ. ಇನ್ನೂ ಭೇಟಿಯಾಗಲಿಲ್ಲವಂತೆ. ಈಹೊತ್ತು ರಾತ್ರಿಯ ವಿಮಾನದಿಂದ ಎಲ್ಲಿಗೋ ಹೋಗಿ ಅಲ್ಲಿಂದಲೇ ಊರಿಗೆ ಹೋಗುತ್ತಾನಂತೆ. ‘ನನ್ನದೊಂದು ಕೆಲಸ ಮಾಡು,’ ಎಂದ. ‘ನಾಳೆ ಬೆಳಿಗ್ಗೆ ಆ ಪಾರಸೀ ಮುದುಕನ ಮನೆಯಲ್ಲಿ ಕೆಲಸಕ್ಕೆ ಹೋದಾಗ ಈ ಲಕ್ಕೋಟೆಯನ್ನು ಅವರಲ್ಲಿ ಮುಟ್ಟಿಸು. ಕರುಣಾಕರನ್ ಬಂದರೆ ಕೊಡಲು ಹೇಳು. ಕೂಡಲೇ ವಿಮಾನದಿಂದ ಊರಿಗೆ ಹೊರಟು ಬಾ ಎಂದು ಬರೆದ ಚೀಟಿ ಒಳಗಿದೆ. ವಿಮಾನ ಟಿಕೆಟ್ಟಿಗೆ ಬೇಕಾಗುವ ಹಣವನ್ನೂ ಇರಿಸಿದ್ದೇನೆ. ಅವನು ಅಲ್ಲಿಗೆ ಬರದೇ ಇರಲಾರ. ಬರದೆ ಇದ್ದರೆ ಹಣ ನೀನು ಇಟ್ಟುಕೋ,’ ಎಂದವನೇ ಸರಕ್ಕನೆ ಕಿಸೆಯಿಂದ ಲಕ್ಕೋಟೆಯನ್ನು ಹೊರತೆಗೆದು ವಿಚಾರ ಮಾಡಲೂ ಸಮಯ ಕೊಡದೇ, ನನ್ನ ಕೈಯಲ್ಲಿ ತುರುಕಿ ಹೊರಟೇಬಿಟ್ಟ. ಇದು ನೋಡಿ, ಅವನು ಕೊಟ್ಟ ಲಕ್ಕೋಟೆ ಬಾಯಿ ಮುಚ್ಚಿದಹಾಗೆಯೆ ತಂದಿದ್ದೇನೆ. ಕರುಣಾಕರನ್ ಎರಡು ದಿನ ಮೊದಲೇ ಬಂದು ಹೋದದ್ದನ್ನು ಹೇಳಲು ಮನಸ್ಸಾಗಲಿಲ್ಲ. ಯಾಕೋ ಅವನು ಕರುಣಾಕರನ್ನನ ಅಣ್ಣನೆಂಬುದರಲ್ಲಿ ವಿಶ್ವಾಸವೇ ಮೂಡಲಿಲ್ಲ. ಇನ್ನೂ ಮೂಡುತ್ತಿಲ್ಲ. ಅವನು ಇದನ್ನು ಕೊಟ್ಟು ಹೋದದ್ದು ಕೂಡ ಒಳ್ಳೆಯ ಕೆಲಸಕ್ಕೆಂದು ಅನ್ನಿಸಲಿಲ್ಲ.” ಪಾರ್ವತಿಯ ಮಾತಿನಲ್ಲಿ ಕಾತರ ತುಂಬಿತ್ತು: ಅವನು ಲಕ್ಕೋಟೆ ಕೊಟ್ಟು ಹೋಗುವಾಗ ಬಂದಿರದ ಕೆಟ್ಟಕೆಟ್ಟ ವಿಚಾರಗಳು ಪಾರ್ವತಿಯನ್ನು ಕಾಡಹತ್ತಿದ್ದು ರಾತ್ರಿ, ದೀಪ ಆರಿಸಿ ಹಾಸಿಗೆಯಲ್ಲಿ ಒರಗಿ ಆದಮೇಲೆ! ಇಲ್ಲವಾದರೆ ಅದನ್ನು ಮುದುಕನ ಮನೆಗೆ ಮುಟ್ಟಿಸಲು ಬೆಳಗಿನ ತನಕ ಕಾಯುತ್ತಿರಲೇ ಇಲ್ಲ! ಒಳಗೆ ಹಣವಿದೆಯೆಂದು ಹೇಳಿ ಕೊಟ್ಟದ್ದು ಪಾರ್ವತಿಯ ಸಂಶಯಕ್ಕೆ ಕಾರಣವಾಗಿತ್ತು: ಕರುಣಾಕರನ್ ಕಾಣಲು ಬಂದೇ ಬರುತ್ತಾನೆ ಎಂದು ಗ್ರಹೀತ ಹಿಡಿಯುವುದೇನು, ಬರಿಯೆ ಕಂಡು ಮಾತನಾಡಿಸಿ ಗೊತ್ತಿದ್ದ ತನ್ನ ಮನೆಯನ್ನು ಹುಡುಕಿಕೊಂಡು ಬರುವುದೇನು, ಬರುತ್ತಲೇ ಹಣ ಕೊಟ್ಟು ಹೋಗುವುದೇನು: ಪಾರ್ವತಿಯ ನಿದ್ದೆಗೇಡಿಗೆ ಕಾರಣವಾದದ್ದು ಹೀಗೆ ಅಚಾನಕವಾಗಿ ಕೈಗೆ ಬಂದ ಈ ಲಕ್ಕೋಟೆಯಲ್ಲಿ ಇದೆ ಎನ್ನಲಾದ ಹಣವೇ ಆಗಿತ್ತು.

ಸನ್ನಿವೇಶ ಅನವಶ್ಯಕವಾಗಿ ತೊಡಕಿನದಾಗುತ್ತ ನಡೆದದ್ದನ್ನು ನೋಡಿ ಬೆಹರಾಮನೂ ಹತಾಶನಾದ: ಹಿಂದುಮುಂದಿನ ವಿಚಾರಮಾಡುವ ಮೊದಲೇ ಹೆಣವನ್ನು ಟ್ಯಾಕ್ಸಿಗೆ ಸಾಗಿಸಲು ನೆರವಾದ ಹುಡುಗನಿಗೆ ಹಣವಿಟ್ಟ ಲಿಫಾಫೆಯನ್ನು ಕೊಟ್ಟು ಹೋಗುವ ಹುಚ್ಚುತನ ಅಶಕ್ಯವಲ್ಲ. ಆದರೂ ಪಾರ್ವತಿ ಮಾತನಾಡಿದ ರೀತಿಯಿಂದ, ಅವಳ ಮನೆಗೆ ಬಂದವನು ನಿಜಕ್ಕೂ ಯಾರು ಎಂಬುದರ ಬಗ್ಗೆ ಮನಸ್ಸು ಗೊಂದಲಕ್ಕೊಳಗಾಯಿತು. ಪಾರ್ವತಿಯ ಇದಿರು ಹಾಗೆ ತೋರಿಸಿಕೊಳ್ಳುವ ಮನಸ್ಸಿಲ್ಲದವನ ಹಾಗೆ-“ಆ ಲಕ್ಕೋಟೆ ಸದ್ಯ ಈ ಟೀಪಾಯಿಯ ಮೇಲೆ ಇರಲಿ. ಆಮೇಲೆ ತೆರೆದು ನೋಡೋಣವಂತೆ. ಕರುಣಾಕರನ್ ಬಂದಿದ್ದ ಎಂದಿಯಲ್ಲ, ಯಾವಾಗ ಬಂದಿದ್ದ? ಯಾಕೆ ಬಂದಿದ್ದ? ವಾಸುದೇವನ್‌ಗೆ-ಬಂದವನು ಅವನೇ ಎಂದು ತಿಳಿಯೋಣ-ಕರುಣಾಕರನ್ ತಾನು ಬರುವ ಮೊದಲೇ ಬಂದು ಹೋಗಿರಬಹುದೆಂದು ತೋರಲಿಲ್ಲವೆ?” ಎಂದು ಕೇಳಿದ.
“ತೋರಿತ್ತು. ನಾನೇ ಅವನು ಬಂದಿಲ್ಲವೆಂದು ಹೇಳಿದೆ. ಹಾಗೆ ಹೇಳುವಾಗ ಬಂದಾತ ಅವನ ಬಗ್ಗೆ ಯಾಕೆ ಕೇಳುತ್ತಾನೆ? ಅವನಿಗೂ ಇವನಿಗೂ ಏನು ಸಂಬಂಧ? ಯಾವುದೂ ಗೊತ್ತಿರಲಿಲ್ಲ. ಆಗಲೇ ಹೇಳಿದ ಹಾಗೆ, ನನಗೆ ಪರಿಚಯವಿದ್ದ ವಾಚ್‌ಮನ್ ನೀವು ಹೇಳುವ ವಾಸುದೇವನ್ ಒಬ್ಬರೇ ಎಂದು ನನಗೆ ಈಗಲೂ ತೋರುತ್ತಿಲ್ಲ. ಕರುಣಾಕರನ್ ಹೇಳಿದ್ದು ಕೂಡ ವಿಚಿತ್ರವಾದದ್ದೇ. ಅವನು ಮೊದಲು ನೆನೆದದ್ದು ನಿಮ್ಮನ್ನು. ನಿಮ್ಮನ್ನು ಕಾಣುವ ಮನಸ್ಸಿದ್ದೂ ಇಲ್ಲಿ ಬರಲು ಹೆದರಿಕೊಂಡಂತಿತ್ತು. ಹುಡುಗನಿಗೆ ಹಿಂದಿ ಮಾತನಾಡಲು ಶಕ್ತಿ ಸಾಲದು. ನನಗೆ ಇಂಗ್ಲಿಷ್ ತಿಳಿಯದು. ಇನ್ನೊಬ್ಬನನ್ನು ಜತೆಗೆ ಕರಕೊಂಡು ಬಂದಿದ್ದ. ಅವನ ಊರಿನ ಕಡೆಯವನೇ ಇದ್ದಾನು. ಹಿಂದಿ ಬರುತ್ತಿತ್ತು. ಇಬ್ಬರೂ ಕೂಡಿ ಏನೇನೋ ಹೇಳಿದರು. ನನಗೆ ಎಷ್ಟರಮಟ್ಟಿಗೆ ಅರ್ಥವಾಗಿದೆ ದೇವರೇ ಬಲ್ಲ.” ಪಾರ್ವತಿಯ ಮೋರೆಯ ಮೇಲೆ ದಣಿವು ಪ್ರಕಟವಾಗಹತ್ತಿತು. ನಿಂತಲ್ಲೇ, ನೆಲಕ್ಕೆ ಹಾಸಿದ ಕಾರ್ಪೆಟ್ ಮೇಲೆ ಕೂತುಕೊಂಡು-“ನಿಮಗೆ ಹೇಳು ಅಂತ ಹೇಳಿದ: ಮೂರು ವರ್ಷಗಳ ಹಿಂದೆ ಕೊಲೆಯಾದವನು ತನ್ನ ಅಣ್ಣನೆಂದು ಯಾರೋ ಅವನಿಗೆ ಪತ್ರ ಬರೆದು ತಿಳಿಸಿದ್ದರಂತೆ. ಆದರೆ ಅವನಿಗೆ ನಂಬಿಕೆಯಾಗಿರಲಿಲ್ಲ. ಹಾಗೆಂದೇ ಇಲ್ಲಿಯ ಮನೆಗಳಿಗೆ ಭೇಟಿಕೊಟ್ಟದ್ದು. ನಿಮ್ಮ ಮನೆಗೂ ಬಂದದ್ದು. ನಿಮ್ಮ ಮನೆಗೆ ಬಂದಾಗಲೇ ಗೊತ್ತಾಯಿತಂತೆ-ಅಣ್ಣ ಸತ್ತದ್ದು ಹೌದು ಎಂದು. ಏನೋ ಅಪ್ಪಾ ನನಗೊಂದೂ ಅರ್ಥ ಆಗುವುದಿಲ್ಲ. ಏನೋ ಬರೆದಿದ್ದೇನೆ, ಪೇಪರಿನಲ್ಲಿ ಬರುತ್ತದೆ ಎಂದ. ಅದೇ ದಿನ ಬಂದು ಹೇಳುವವಳು. ನಿಮ್ಮ ಮಗಳ ಇದಿರು ಧೈರ್ಯವಾಗಲಿಲ್ಲ. ಕರುಣಾಕರನ್ನನ ಹೆಸರನ್ನು ಈ ಮನೆಯಲ್ಲಿ ಎತ್ತಕೂಡದೆಂದು ತಾಕೀತು ಮಾಡಿದ್ದಾಳೆ.” ಇಷ್ಟು ಹೇಳುವುದಕ್ಕೆ ಪಾರ್ವತಿಗೆ ಕಾಲುಗಂಟೆಯೇ ಹಿಡಿದಿರಬೇಕು.
ಅವಳು ಮಾತನ್ನು ಮುಗಿಸುವ ಪುರಸತ್ತಿಲ್ಲ, ಬೆಹರಾಮ್-“ಕರುಣಾಕರನ್ ಇನ್ನೂ ಮುಂಬಯಿಯಲ್ಲೇ ಇದ್ದಾನೆ ಅಂತೀಯಾ?” ಎಂದು ಕೇಳಿದ.
“ಅದನ್ನೇ ಹೇಳುವವಳಿದ್ದೆ. ನಡುವೆಯೇ ಹೇಗೋ ಎಳೆತಪ್ಪಿತು. ಅವನೂ ಕೂಡ ನಾಳೆಗೇ ತಾನು ಊರಿಗೆ ಹಿಂತಿರುಗಿ ಹೋಗುತ್ತೇನೆ, ಕೆಲವು ತಿಂಗಳು ಬಿಟ್ಟು ಮತ್ತೆ ಬಂದಾಗ ನಿಮ್ಮನ್ನು ಕಾಣುತ್ತೇನೆ ಎಂದಿದ್ದ. ತೀರ ನಸುಕಿನಲ್ಲೇ ಎದ್ದು ಬಂದಿದ್ದ. ಹೊರಡುವಾಗ-‘ಸೀತೆಗೂ ಹೇಳು,’ ಎಂದ.” ಇಷ್ಟು ಹೇಳಿ ಪಾರ್ವತಿ ಒಮ್ಮೆಲೇ ಅಳುವುದಕ್ಕೆ ಸುರುಮಾಡಿದಾಗ, ಈ ಸನ್ನಿವೇಶವನ್ನು ಹೇಗೆ ಅರ್ಥಮಾಡಿಕೊಳ್ಳಬೇಕೋ ತಿಳಿಯದೆ, ಬೆಹರಾಮ್ ತಬ್ಬಿಬ್ಬಾದ. ತುಸು ಹೊತ್ತಿನ ಮೇಲೆ ಉಳಿದ ಸಂಗತಿಗಳು ಏನೇ ಇರಲಿ. ಇಬ್ಬರೂ ಸುರಕ್ಷಿತವಾಗಿದ್ದಾರೆ, ಸನ್ನಿವೇಶಕ್ಕೆ ತಕ್ಕಂತೆಯೆ ನಡೆದುಕೊಂಡಿದ್ದಾರೆ ಅನ್ನಿಸಿ ಒಳಗೊಳಗೇ ಖುಶಿಯಾಗತೊಡಗಿದ ಹೊತ್ತಿಗೇ ಪಾರ್ವತಿ ಕ್ಷಣಕಾಲ ಅಳುವನ್ನು ನಿಲ್ಲಿಸಿ-“ಹೇಳಿ, ಇವರು ನಿಜಕ್ಕೂ ಯಾರು? ಇವರ ಪರಸ್ಪರ ಸಂಬಂಧವಾದರೂ ಏನು? ಅಣ್ಣ-ತಮ್ಮ ಎನ್ನುತ್ತ…” ಪಾರ್‍ವತಿ ವಾಕ್ಯವನ್ನು ಪೂರ್ಣಗೊಳಿಸದಾದಳು. ಪರಸ್ಪರರನ್ನು ಹುಡುಕುವ ಆಟವಾಡುತ್ತ ಒಬ್ಬರನ್ನೊಬ್ಬರು ಬೆನ್ನುಹತ್ತಿರಬಹುದೆಂಬ ವಿಚಾರದಿಂದ ಪಾರ್ವತಿ ತಲ್ಲಣಿಸಿರಬಹುದೆ? ಬೆಹರಾಮನಿಗೆ ಈ ಕಲ್ಪನೆಯೇ ಸಹಿಸದಾಯಿತು: ದೇವರೆ! ಇವರಿಬ್ಬರನ್ನೂ ಒಂದೇ ಕಾಲಕ್ಕೆ ಒಂದೇ ಎಡೆಯಲ್ಲಿ-ನಮ್ಮ ಮನೆಯಲ್ಲಿ-ನೋಡುವುದು ಸಾಧ್ಯವಾಗಿದ್ದರೆ! ಇಷ್ಟು ಸಣ್ಣ ಸಂಗತಿ ಕೂಡ ದಿವ್ಯ ಘಟನೆಯಾಗಿ ತೋರಬೇಕೆಂದರೆ!

ಬೆಹರಾಮನಿಗೆ ಹೊರಗೆ ಹೋದವರು ಬೇಗ ಬಂದರೆ ಸಾಕೆನಿಸಹತ್ತಿತು. ತನ್ನನ್ನೇ ವಿಚಿತ್ರವಾಗಿ ನೋಡುತ್ತ ಕುಳಿತುಬಿಟ್ಟ ಪಾರ್ವತಿಗೆ: “ಈಗ ಮತ್ತೆ ಅವರ ಬಗ್ಗೆ ಮಾತು ಬೇಡ. ಶಿರೀನ್ ಬರಲಿ. ನಿನಗೆ ಒಳಗೆ ಕೆಲಸಗಳಿವೆಯೇನೋ. ಹೋಗುವ ಮೊದಲು ಒಂದು ಗ್ಲಾಸು ತಂಪು ನೀರು ತಂದುಕೊಡು,” ಎಂದ. ಅವಳು ನೀರು ತರಲು ಎದ್ದು ಹೊರಟಿದ್ದೇ ಟೀಪಾಯಿಯ ಮೇಲಿನ ಬಾಯಿತೆರೆದಿರದ ಲಕ್ಕೋಟೆ ಕ್ಷಣಕ್ಕೊಂದು ಆಕಾರವಾಗುತ್ತ ನಿಗೂಢವಾಗಿ ಕಾಡತೊಡಗಿತು. ಆಹ್ವಾನಿಸತೊಡಗಿತು: ಮುಟ್ಟುವ ಧೈರ್ಯ ಮಾತ್ರ ಆಗಲಿಲ್ಲ. ಬರಬರುತ್ತ ನೋಡುವ ಧೈರ್ಯವೂ ಇಲ್ಲವಾದಾಗ ಧಡಕ್ಕನೆ ಕೂತಲ್ಲಿಂದ ಎದ್ದು ಬಾಲ್ಕನಿಗೆ ನಡೆದ. ಕಟಕಟೆಯ ದಡಿಯ ಮೇಲೆ ಕೈಯೂರಿ ನಿಂತು ಹೆಂಡತಿಯ ಹಾದಿ ಕಾಯುತ್ತಿದ್ದಾಗ ಪಾರ್ವತಿ ಗ್ಲಾಸಿನಲ್ಲಿ ನೀರು ತಂದಳು. ರೆಫ್ರಿಜರೇಟರಿನಿಂದ ತಂದ ಬರ್ಫಿನಷ್ಟು ತಂಪಾದ ನೀರು ಕರುಳು ಸೇರುತ್ತಿದ್ದ ಹಾಗೆ ಶಿರೀನ್ ಬಂದಕೂಡಲೇ ಅಗರವಾಲನಿಗೆ ತಾನೇ ಫೋನ್ ಮಾಡುತ್ತೇನೆ ಎಂದು ನಿರ್ಧರಿಸಿದ. ನಿನ್ನೆ ಶಿರೀನ್ ಅಪ್ಪನೇ ನಾಳೆ ಫೋನ್ ಮಾಡುತ್ತಾನೆ ಎಂದು ತಿಳಿಸಿರುವಾಗ ಅವನೇಕೆ ಮಾಡಿಯಾನು-ಜಂಭದ ಕೋಳಿ ಅವನು, ಎಂದುಕೊಳ್ಳುವಷ್ಟರಲ್ಲಿ ಕರೆಗಂಟೆ ಸದ್ದುಮಾಡಿತು. ಬಂದವರು ಹೆಂಡತಿ-ಶಿರೀನರಾದರೆ ‘ಲ್ಯಾಂಡ್ಸ್ ಎಂಡ್’ ತನಕ ಹೋಗಿರಲಾರರು: ಪಾರ್‍ವತಿ ಹೋಗಿ ಕದ ತೆರೆದಾಗ ಒಳಗೆ ಬಂದವರು ಯಾರೆಂದು ತಿಳಿಯಲು ಕಾತರನಾದ. ಒಳಗೆ ಬಂದವಳು ಶಿರೀನಳೊಬ್ಬಳೇ ಆಗಿದ್ದಳು: “ಅಮ್ಮ ಮಕ್ಕಳು ಮೇಲೆ ಗಚ್ಚಿಯ ಮೇಲಿದ್ದಾರೆ. ಮಕ್ಕಳಿಗೆ ಬರುವ ಮನಸ್ಸೇ ಇಲ್ಲ. ಪಾರ್ವತಿ ಹೇಳಿದಳೆ?”
“ನಿನ್ನ ಹಾದಿಯನ್ನೇ ಕಾಯುತ್ತಿದ್ದೆ,” ಎಂದು ಆರಂಭಿಸಿದ ಬೆಹರಾಮ್ ಆಗಿನಿಂದಲೂ ನಡೆದದ್ದನ್ನು ಸಂಕ್ಷಿಪ್ತವಾಗಿ ವಿವರಿಸಿದ. ಹಾಗೂ-“ಇದು ಮಾತ್ರ…”
“ಅಪ್ಪಾ, ಅದಕ್ಕೆ ಕೈಹಚ್ಚಬೇಡ. ಬಂದವನು ಯಾರೆಂದು ತಿಳಿಯುವತನಕ ಅದನ್ನು ತೆರೆಯುವುದೇ ಬೇಡ. ನಮಗೆಂದು ಕೊಟ್ಟದ್ದೂ ಅಲ್ಲ, ಮೇಲಾಗಿ.”
“ಯಾರು ಕೊಟ್ಟದ್ದೆಂದು ತಿಳಿಯುವ ಸಾಧ್ಯತೆ ಇದರ ಒಳಗೇ ಇದ್ದರೆ?”
“ಇರಬಹುದು. ನಮ್ಮನ್ನು ಪೇಚಿನಲ್ಲಿ ಸಿಗಿಸುವ ಸಾಧನವೂ ಆಗಿರಬಹುದು. ಕೆಲವು ದಿನ ತಡೆಯೋಣ. ಈಗಲೇ ತೆರೆಯುವ ಉತಾವಳಿ ಬೇಡ.”
ಇವರನ್ನು ನಾವು ಗಂಭೀರವಾಗಿ ಪರಿಗಣಿಸಲು ಪ್ರಯತ್ನ ಮಾಡಿದಷ್ಟೂ ಇವರಿಂದಾಗಿ ಹುಟ್ಟಿಕೊಳ್ಳುತ್ತಿದ್ದ ಸನ್ನಿವೇಶಗಳು ಮಾತ್ರ ನಮ್ಮನ್ನೆಲ್ಲ ಹೆಚ್ಚು ಹೆಚ್ಚು ಹಾಸ್ಯಾಸ್ಪದಗೊಳಿಸುವ ಸ್ಥಿತಿಗೇ ತರುತ್ತಿವೆ: ಖಿo heಟಟ ತಿiಣh ಣhem ಚಿಟಿಜ ಣhe ಠಿಡಿobಟems ಣheಥಿ hಚಿve ಛಿಡಿeಚಿಣeಜ ಜಿoಡಿ ಣhemseಟves. ನಮ್ಮ ಸಹಾನುಭೂತಿಗೆ ಯೋಗ್ಯರಲ್ಲ: ಶಿರೀನಳಿಗೆ ಸಿಟ್ಟು ಅನಾವರವಾಯಿತು. ಅದೇ ಹೊತ್ತಿಗೆ ಅಪ್ಪ ಅವರ ಬಗ್ಗೆ ಹಚ್ಚಿಕೊಂಡ ಹುಚ್ಚನ್ನು ಬಿಡಿಸಲು ಇದೇ ಸರಿಯಾದ ಸಂದರ್ಭವೆಂದೂ ತೋರಿತು.
“ಅಪ್ಪಾ, ಟeಣ us be ಜಿಚಿiಡಿ ಣo ouಡಿseಟves ಜಿoಡಿ ಚಿ ಛಿhಚಿಟಿge. ಕಾರಣ ಏನೇ ಇರಲಿ, ಅವರು ಮುಂಬಯಿ ಬಿಡುವ ಮೊದಲು ಕಷ್ಟಪಟ್ಟು ಕಾಣಲು ಬಂದದ್ದು ಪಾರ್ವತಿಯನ್ನು, ನಿಮ್ಮನ್ನಲ್ಲ.” ‘ಕಾರಣ ಏನೇ ಇರಲಿ’ ಅನ್ನುವಾಗ ಅವರು ತಮ್ಮ ಮನೆಗೆ ಬರಲು ಹಿಂಜರಿದದ್ದು ತನ್ನ ನಡತೆಯಿಂದಾಗಿ ಎಂದು ಅನ್ನಿಸದೇ ಇರಲಿಲ್ಲ. ಆದರೂ ಅದನ್ನು ಕೂಡಲೇ ಒಪ್ಪಿಕೊಳ್ಳಲು ಸಿದ್ಧಳಿಲ್ಲದವಳ ಹಾಗೆ-“ಅವರು ಯಾರೇ ಆಗಿರಲಿ, ಬಂದ ಉದ್ದೇಶ ಯಾವುದೇ ಆಗಿರಲಿ, ಈಗ ಮುಂಬಯಿ ಬಿಟ್ಟು ಹೋಗಿದ್ದಾರೆ,” ಎಂದಳು. ಮಾತಿನಲ್ಲಿ ಅವಳಿಗೆ ತಿಳಿಯದೇನೆ, ಈಗ ಇಬ್ಬರೂ ತಮ್ಮ ಜವಾಬ್ದಾರಿಯ ಕಕ್ಷೆಯ ಆಚೆಗೆ ಹೋಗಿದ್ದಾರೆ ಎನ್ನುವ ಧ್ವನಿ ಮೂಡಿತ್ತು. ಈ ಯಾವ ಮಾತೂ ಅಪ್ಪನ ಮೇಲೆ ಎಳ್ಳಷ್ಟೂ ಪರಿಣಾಮ ಮಾಡುತ್ತಿಲ್ಲ ಎಂದು ಮನಗಂಡ ಶಿರೀನ್ ಹತಾಶಳಾದಳು: ತೀರ ಅಲ್ಪ ಸಮಯದವರೆಗೇ ಆಗಲೊಲ್ಲದೇಕೆ ನಮ್ಮ ಬದುಕಿನಲ್ಲಿ ಏಕಾ‌ಏಕೀ ಬಂದುಹೋದ ಈ ಅಪಗರು, ಉಳಿದವರೊಡನೆ ಹಂಚಿಕೊಳ್ಳಬಹುದಾದ ವಾಸ್ತವ ಜಗತ್ತಿನ ನಿವಾಸಿಗಳಾಗಿಯೆ ಬಂದಿದ್ದರು. ಈಗ, ನಮ್ಮನ್ನು ಮತ್ತೆ ಬಂದು ಕಾಣುವ ಮೊದಲೇ ಹೊರಟು ಹೋಗಿದ್ದಾರೆಂದು ತಿಳಿದ ಗಳಿಗೆಯಿಂದ ಸಂಕೇತಗಳಾಗುತ್ತಿದ್ದಾರೆ: ಒಬ್ಬನು ಬಿಟ್ಟುಹೋದ ಈ ಲಕ್ಕೋಟೆ, ಇನ್ನೊಬ್ಬನು ಬಿಟ್ಟುಹೋಗಿದ್ದಾನೆ ಎನ್ನಲಾದ ರಿಪೋರ್ಟು-ಎರಡೂ ನಾವು ನೇರವಾಗಿ ಮುಖಾಮುಖಿಯಾಗಬಲ್ಲ ವಾಸ್ತವ ಜಗತ್ತಿನಿಂದ ದೂರವಾದವುಗಳು: ಇಲ್ಲ ಇದನ್ನು ಸಂಕೇತವಾಗಲು ಬಿಡಲಾರೆ, ನಮ್ಮನ್ನು ಹೆದರಿಸಲು ಬಿಡಲಾರೆ-ಎಂದುಕೊಂಡವಳು, ಇವಳು ಏನು ಮಾಡುತ್ತಿದ್ದಾಳೆ ಎನ್ನುವುದು ಅಪ್ಪನ ಲಕ್ಷ್ಯಕ್ಕೆ ಬರುವ ಮೊದಲೇ ದೊಡ್ಡ ದನಿಯಲ್ಲಿ-“ಪಾರ್ವತೀ””” ಎಂದು ಕರೆದಳು. ಅದೇ ಹೊತ್ತಿಗೆ, ಆಗಿನಿಂದಲೂ ಅಪ್ಪನ ಧ್ಯಾನದ ವಸ್ತುವಾಗಿ ಟೀಪಾಯಿಯ ಮೇಲೆ ಮುಚ್ಚಿಕೊಂಡು ಬಿದ್ದ ಲಕ್ಕೋಟೆಯನ್ನು ಸರಕ್ಕನೆ ಕೈಗೆತ್ತಿಕೊಂಡಳು. ಧಾವಿಸಿ ಬಂದು ತನ್ನೆದುರಿಗೆ ಪ್ರತ್ಯಕ್ಷಳಾದ ಪಾರ್ವತಿ ಹಾಗೂ ಅಪ್ಪ ಆಶ್ಚರ್ಯದಿಂದ ನೋಡುತ್ತಿದ್ದಾಗ ಲಕ್ಕೋಟೆಯ ಬಾಯನ್ನು ಹರಿದು ಒಳಗಿದ್ದುದನ್ನು ಹೊರಗೆ ತೆಗೆಯಹತ್ತಿದಳು. ಕೊಟ್ಟವನು ಹೇಳಿದ ಹಾಗೆಯೆ ಹಣವಿತ್ತು-ನೂರು ರೂಪಾಯಿಯ ನಾಲ್ಕು ನೋಟುಗಳು, ಜತೆಗೆ ಮಲೆಯಾಳಮ್‌ನಲ್ಲಿ ಬರೆದ ಒಂದು ಸಣ್ಣ ಚೀಟಿ! ಕೊಟ್ಟವನ ಫೋಟೊ ಒಳಗಿರಬಹುದೆಂದು ಬಗೆದಿದ್ದಳು. ಅದು ವಾಸುದೇವನ್‌ನದಾಗಿರುತ್ತದೆ. ಪಾರ್ವತಿ ಅವನ ಗುರುತಿನ ಬಗ್ಗೆ ಎತ್ತಿದ ಸಂಶಯ ದೂರವಾಗುತ್ತದೆ ಎಂದು ಗ್ರಹೀತ ಹಿಡಿದವಳಿಗೆ ಹೊಸತೇ ಒಂದು ಆಶ್ಚರ್ಯ ಕಾದಿತ್ತು: ಲಕ್ಕೋಟೆಯೊಳಗಿಂದ ಹೊರಗೆ ಬಂದ ಮೂರನೆಯ ವಸ್ತು ಅಪರಿಚಿತ ಹಕ್ಕಿಯೊಂದರ ಸಾದಾ ಗರಿಯಾಗಿತ್ತು! ಬಾಲ್ಯದಲ್ಲಿ ಇವರಿಬ್ಬರೂ ಹಂಚಿಕೊಂಡ ಎಂಥ ಗುಟ್ಟನ್ನು ಅದು ಬಚ್ಚಿಟ್ಟಿತ್ತೋ! ನೋಡುತ್ತಿದ್ದ ಹಾಗೆ: ಏನೇನೋ ಕಲ್ಪಿಸಿಕೊಂಡು ತಾವೆಲ್ಲ ಹೆದರಿಕೊಂಡಂತಹದೇನೂ ಅಲ್ಲಿ ಇಲ್ಲದೆ ಇರುವಾಗ, ತಮ್ಮ ಬಾಲಿಶತನದ ಬಗ್ಗೆ ಒಳಗೊಳಗೇ ನಗು ಬರುತ್ತಿರುವಾಗಲೂ, ಲಿಫಾಫೆ ಸಂಕೇತವಾಗುವುದನ್ನು ತಪ್ಪಿಸಲು ಕೈಗೊಂಡ ಕೆಲಸದೊಳಗಿಂದಲೇ ಹುಟ್ಟಿಬಂದ ಇನ್ನೊಂದು ಸಂಕೇತ ಮಾತ್ರ ಒಮ್ಮೆಲೇ ಗಂಭೀರವಾಗುವಂತೆ ಮಾಡಿತು: “ಪಾರ್ವತಿ, ಇದು ತಗೋ-ಈ ಹಣ ನಿನಗೆ ಸೇರಿದ್ದು. ಕರುಣಾಕರನ್ ಆಗಲಿ ವಾಸುದೇವನ್ ಆಗಲಿ ಇಷ್ಟು ಬೇಗ ಮತ್ತೆ ಇಲ್ಲಿ ಬರಲಾರರು. ಬಂದಾಗ ಅವರ ಹಣ ವಾಪಸು ಮಾಡುವ ಜವಾಬ್ದಾರಿ ನಮ್ಮದು. ನಾಳೆ ಅಂಗಡಿಯ ಮಲೆಯಾಳಿಯಿಂದ ಈ ಚೀಟಿ ಓದಿಸಿಕೊಂಡರಾಯಿತು. ಆದರೆ ಈ ಗರಿ?”
ಗರಿಯನ್ನು ಕೈಗೆ ಎತ್ತಿಕೊಂಡದ್ದೇ ಈ ಇಬ್ಬರೂ ಹುಡುಗರ ಬಗ್ಗೆ ತನ್ನ ಮನಸ್ಸು ಇದ್ದಕ್ಕಿದ್ದಹಾಗೆ ಮಿದುವಾಗತೊಡಗಿದಾಗ ಶಿರೀನಳಿಗೆ ತನ್ನ ಬಗ್ಗೆ ತನಗೇ ಆಶ್ಚರ್ಯವಾಯಿತು: ತಾನು ಈವರೆಗೂ ನೋಡಿರದ, ಬಹುಶಃ ಕೇರಳದಲ್ಲಿ ಮಾತ್ರ ನೋಡಲು ಸಿಗುವಂಥ ಹಕ್ಕಿಯೊಂದರ ಬಣ್ಣವಿಲ್ಲದ, ನಯನಾಜೂಕು ಇಲ್ಲದ ಈ ರೂಕ್ಷ ಗರಿ ಎಂಥ ಅದ್ಭುತ ಗುಟ್ಟಿನ ಸಂಕೇತವಾಗಿರಬಹುದು!

ಶಿರೀನ್ ಗರಿಯನ್ನು ಪರೀಕ್ಷಿಸುವುದರಲ್ಲಿ ಗರ್ಕಳಾಗಿದ್ದಾಗ ಪಾರ್ವತಿ ತನ್ನ ಕೆಲಸಕ್ಕೆ ಹಿಂತಿರುಗಿದ್ದಳು. ಬೆಹರಾಮ್ ಬೆಳಿಗ್ಗೆ ಸರಿಯಾಗಿ ಓದಿರದ ಪತ್ರಿಕೆಯನ್ನು ಕೈಗೆತ್ತಿಕೊಂಡಿದ್ದ. ಶಿರೀನಳು ವಾಸ್ತವ ಲೋಕಕ್ಕೆ ಹಿಂತಿರುಗುವ ಹೊತ್ತಿಗೆ ಮೂರನೆಯ ಪುಟದ ಮೇಲಿನ ಜಾಹೀರಾತನ್ನು ಕಣ್ಣರಳಿಸಿ ಓದತೊಡಗಿದ್ದ. ಅವಳು ಈ ಘಟನೆಯ ಅರ್ಥವನ್ನು ಗ್ರಹಿಸುವ ಮೊದಲೇ ಕೂತಲ್ಲಿಂದ ಎದ್ದುನಿಂತು-“I ತಿiಟಟ bಟಚಿsಣ ಣhis ಂgಚಿಡಿತಿಚಿಟ,” ಎನ್ನುತ್ತ ಟೆಲಿಫೋನ್ ಇದ್ದ ಕಡೆಗೆ ಹೊರಟೇಬಿಟ್ಟಿದ್ದ. ಹೊರಟ ರೀತಿ ಶಿರೀನಳ ಕಳವಳಕ್ಕೆ ಕಾರಣವಾಯಿತು. ಅಮ್ಮನ ಮಾತು ಕೇಳಿ ಆ ಪತ್ರಿಕೆಯನ್ನು ಅಡಗಿಸಿ ಇಡದಿದ್ದುದೇ ತಪ್ಪಾಯಿತೇನೋ ಅನ್ನಿಸಿತು. ಆದರೆ ಆ ಗಳಿಗೆಯಲ್ಲಿ ಅಪ್ಪನನ್ನು ತಡೆಯುವಂಥ ಎಂಥ ಮಾತೂ ಅಸಾಧ್ಯವಾಗಿತ್ತು. ಬಚ್ಚಲುಮನೆಯಲ್ಲಿ ಅರಿವೆ ಒಗೆಯುತ್ತಿದ್ದ ಪಾರ್ವತಿಗೆ ಅಮ್ಮನನ್ನು ಕೂಡಲೇ ಕರೆದುಕೊಂಡು ಬಾ ಎಂದು ಹೇಳಿ ಅವಳನ್ನು ಗಚ್ಚಿಗೆ ಕಳುಹಿಸಿದಳು.

ಲಕ್ಕೋಟೆ ಕೊಟ್ಟು ಹೋದವನು ವಾಸುದೇವನ್ನನೇ ಎಂಬುದರಲ್ಲಿ ಶಿರೀನಳಿಗೆ ಸಂಶಯ ಉಳಿಯಲಿಲ್ಲ. ಕರುಣಾಕರನ್ ಅವನ ತಮ್ಮನೋ ಎಂದು ತಿಳಿಯುವುದು ಮಾತ್ರ ಸದ್ಯ ಶಕ್ಯವಿರಲಿಲ್ಲ. ಇಬ್ಬರೂ ಮುಂಬಯಿಯಿಂದ ದೂರ ಹೋಗಿದ್ದಾರೆ ಎಂಬ ಅರಿವಿನಿಂದ ಉಲ್ಲಸಿತವಾದ ಮನಸ್ಸು ಲಕ್ಕೋಟೆಯಿಂದ ಹೊರಗೆ ಬಂದ ಆ ಪುಟ್ಟ ಗರಿಯಲ್ಲಿ, ಕಳೆದ ಎಂಟು ದಿನಗಳಿಂದ ಮನೆಯೊಳಗಿನ ಶಾಂತಿಯನ್ನೇ ಕದಡಿಬಿಟ್ಟು ನಾಟಕದ ಸುಖಾಂತವನ್ನು ಕಂಡು-“ಆಹಾ! ಕೊನೆಗೊಮ್ಮೆ,” ಎಂದು ಬಿಡುಗಡೆಯ ನಿಃಶ್ವಾಸ ಬಿಡುವುದರಲ್ಲಿದ್ದ ಶಿರೀನಳಿಗೆ ಅಪ್ಪ ಎದ್ದುಹೋದ ರೀತಿಯಿಂದ, ನಾಟಕ ಇನ್ನೂ ಮುಗಿದಿಲ್ಲ, ಆರಂಭವಾಗುತ್ತಿದೆ; ಈವರೆಗಿನದು ಬರಿಯ ನಾಂದಿಯಾಗುತ್ತೇನೋ ಅನ್ನಿಸಿದಾಗ ಮನೋವೈಜ್ಞಾನಿಕ ಪುಸ್ತಕವೊಂದರಲ್ಲಿ ಓದಿದ್ದು ನೆನಪಾಯಿತು: ಅನರ್ಥಗಳು ನಮಗೆ ಹೀಗೇ ಒದಗುವುದಿಲ್ಲ; ನಾವಾಗಿ ಅವುಗಳನ್ನು ಹುಡುಕಿ ಹೊರಟಿರುತ್ತೇವೆ. ಅಗರವಾಲನನ್ನು ಕೆಣಕುವ ಸಾಹಸಕ್ಕೆ ಅಪ್ಪ ಹೋಗಬಾರದಿತ್ತೇನೋ, ಆದರೆ ಅವನನ್ನು ತಡೆಯುವುದರಲ್ಲೂ ಅರ್ಥವಿಲ್ಲ, ಅನ್ನಿಸಿತು. ಮೊದಲಿನಿಂದಲೂ ಅವನ ಒಳಗಿನದೇ ಏನೋ ಈ ಮುಖಾಮುಖಿಗೆ ಸಿದ್ಧವಾಗುತ್ತಿದ್ದಿರಬೇಕು ಎಂಬ ಗುಮಾನಿ ಶಿರೀನಳನ್ನು ಕಾಡಹತ್ತಿತು.

ಶಿರೀನಳ ತಾಯಿ ಮೊಮ್ಮಕ್ಕಳು ಸೀತೆಯ ಜೊತೆಗೆ ಒಳಗೆ ಬರುವಷ್ಟರಲ್ಲಿ ಬೆಹರಾಮ್ ಟೆಲಿಫೋನ್-ಸ್ಟೂಲಿನ ಮೇಲೆ ಕುಳಿತು ಎರಡು ಸಾರೆ ಅಗರವಾಲನ ಮನೆ ನಂಬರನ್ನು ತಿರುಗಿಸಿಯಾಗಿತ್ತು. ಎರಡೂ ಸಾರೆ ಎಂಗೇಜ್ಡ್ ಸದ್ದು ಬಂದಿತು. ಮೂರನೆಯ ಸಲ ಪ್ರಯತ್ನ ಮಾಡುವ ಮೊದಲು ತನ್ನನ್ನು ಸುತ್ತುವರಿದು ನಿಂತಂತೆ ನಿಂತ ಹೆಂಡತಿ ಮಗಳಿಗೆ, “ನಾನು ಆರಾಮ ಇದ್ದೇನೆ. ದಯಮಾಡಿ ಶಾಂತಚಿತ್ತನಾಗಿ ಫೋನ್ ಮಾಡಲು ಬಿಡಿ. ಪ್ಲೀಜ್,” ಎಂದಾಗ ಇಬ್ಬರೂ ಹಾಲಿಗೆ ಬಂದರು. ಅಪ್ಪನ ದನಿ ಸರಿಯಾಗಿಯೇ ಇದೆ, ಅದರಲ್ಲಿ ಅನವಶ್ಯಕ ಉದ್ವೇಗವಿಲ್ಲ ಎಂಬುದನ್ನು ಗಮನಿಸಿದ ಶಿರೀನ್-‘ಯಾರಿಗೆ ಗೊತ್ತು, ಇದು ಒಳ್ಳೆಯದಕ್ಕೇ ಇರಬಹುದು. ಎಲ್ಲವೂ ಒಮ್ಮೆ ಹೊರಕ್ಕೆ ಬರುವುದು ಆರೋಗ್ಯಕರವಾದದ್ದು. ಕರುಣಾಕರನ್-ವಾಸುದೇವನ್ನರ ಭೇಟಿ ಎಲ್ಲೋ ಹೇಗೋ ಈ ಅಗರವಾಲನೊಡನೆ ತಳುಕು ಹಾಕಿಕೊಂಡಂತಿದೆ. ಈ ಮುಖಾಮುಖಿಯಲ್ಲಾದರೂ ಎಲ್ಲದರ ಸೋಕ್ಷಮೋಕ್ಷವಾದೀತು, ಆಗಲಾದರೂ ಎಲ್ಲರಿಗೂ ಸಮಾಧಾನ ಲಭಿಸೀತು,’ ಎಂದು ಆಶಿಸುತ್ತ, ಅಮ್ಮನ ಜೊತೆಗೆ ಸೋಫಾದಲ್ಲಿ ಬಂದು ಕುಳಿತಳು. ಇಬ್ಬರ ಕಿವಿಗಳೂ ಮಾತ್ರ ಟೆಲಿಫೋನ್ ಮೇಲೇ ನೆಟ್ಟಿದ್ದುವು.

ಭಾಗ: ನಾಲ್ಕು
ಅಧ್ಯಾಯ ಹತ್ತು

ಬೆಹರಾಮನಿಗೆ ಆ ದಿನ ಅಗರವಾಲ್ ಕೊನೆಗೂ ಫೋನ್ ಮೇಲೆ ಸಿಗಲಿಲ್ಲ. ಹತ್ತು ಸಾರೆ ಸತತವಾಗಿ ನಂಬರು ತಿರುಗಿಸಿದಾಗ ಹತ್ತಿದ ಫೋನ್ ಮೇಲೆ ಬಂದ ಹೆಣ್ಣುದನಿ ಅಗರವಾಲ್ ಅಂದು ಬೆಳಗಿಗೇ ಮುಂಬಯಿಯ ಹೊರಗೆ ಹೋಗಿರುವನೆಂದೂ ಹಿಂತಿರುಗಿ ಬರಲು ನಾಲ್ಕು ದಿನಗಳಾದರೂ ಹಿಡಿಯಬಹುದೆಂದೂ ತಿಳಿಸಿತು. ಬೆಹರಾಮನಿಗೆ ಆಶ್ಚರ್ಯವಾಗಲಿಲ್ಲ. ಇಂಥದ್ದನ್ನು ಊಹಿಸಿದಂತಿದ್ದ ಅವನು ಹೆಂಡತಿ-ಮಗಳನ್ನು ಕೂಡುವ ಹೊತ್ತಿಗೆ ಮೊದಲಿನ ಉದ್ವೇಗವನ್ನು ತೊರೆದು ಶಾಂತನಾಗಿದ್ದ. ಹೆಂಡತಿ-ಮಗಳು ಇಬ್ಬರಿಗೂ ಅವನನ್ನು ಆ ಸ್ಥಿತಿಯಲ್ಲಿ ನೋಡಿ ಸಮಾಧಾನವಾಗಿತ್ತು. “ಚಹ ಮಾಡಿ ತರಲೆ? ನನಗಂತೂ ಬೇಕು,” ಎಂದು ಮುದುಕಿ ಅಡುಗೆಯ ಮನೆಗೆ ಹೋಗಲು ಎದ್ದಾಗ, ಶಿರೀನ್, “ಸೀತೆಗೆ ಹೇಳಲಿಲ್ಲ. ನಮಗೂ ಬೇಕು,” ಎಂದಳು. ತನ್ನ ಹಾಗೂ ಅಪ್ಪನ ಪರವಾಗಿ, “ಸೀತೆ ಒಳಗಿದ್ದಾಳೆ. ಒಗೆದ ಬಟ್ಟೆಗಳನ್ನು ಕಪಾಟಿನಲ್ಲಿ ನಿರಿಗೆ ಮಾಡಿ ಇಡಲು ಹೇಳಿ ಬಂದಿದ್ದೇನೆ. ತುಸು ಹೊತ್ತು ಒಳಗೇ ಇರಲಿ,” ಎಂದು ಚಹ ಮಾಡಿ ತರಲು ಹೊರಟುಹೋದಳು. ಅಗರವಾಲ್ ಕೂಡಲೇ ಫೋನ್ ಮೇಲೆ ಸಿಗದೇ ಇದ್ದುದು ಒಂದು ರೀತಿಯಿಂದ ಒಳ್ಳೆಯದೇ ಆಯಿತೇನೋ ಅನ್ನಿಸಿತು ಶಿರೀನಳಿಗೆ. ಅದೇ ಹೊತ್ತಿಗೆ, ಅಪ್ಪನನ್ನು ಕಾಡುತ್ತಿದ್ದುದನ್ನು ಕುರಿತು ಅವನನ್ನು ಮಾತಿಗೆ ಎಳೆಯುವುದಕ್ಕೆ ಇದೇ ಸರಿಯಾದ ಸಮಯವೆಂದೂ ತೋರಿತು:
“ಬೆಳಿಗ್ಗೆ ನೀನು ಈ ಜಾಹೀರಾತನ್ನು ಹೇಗೆ ನೋಡಲಿಲ್ಲವೋ! ನೋಡಿದರೆ ಸಿಟ್ಟು ಬರುತ್ತದೆಯೆಂದು ಗೊತ್ತಿದ್ದೇ ನಾನು ಪತ್ರಿಕೆಯನ್ನು ಅಡಗಿಸಿ ಇಡಬೇಕು ಎಂದು ಮಾಡಿದ್ದೆ. ಅಮ್ಮ ಬೇಡವೆಂದಳು.”
“ಅಗರವಾಲ್ ಇಂಥದ್ದೇನಾದರೂ ಮಾಡದೇ ಇದ್ದರೇನೆ ಆಶ್ಚರ್ಯವಾಗುತ್ತಿತ್ತು. ಒಚಿಥಿ be I ಚಿm ಣoo hಚಿಡಿsh oಟಿ him. ಸರಿಯಾದ ಪುರಾವೆ ಇಲ್ಲದೇನೆ, ಬರಿಯ ಒಂದು ಗುಮಾನಿಯ ಬಲದ ಮೇಲೆ ಅವನ ಮೇಲೆ ಹರಿಹಾಯುವ ಅಧಿಕಾರ ನನಗೆಲ್ಲಿ? ಈ ಜಾಹೀರಾತಿನಿಂದ ಅಪಾಯಕ್ಕೆ ಬರಬಹುದಾಗಿದ್ದ ಇಬ್ಬರೂ ಹೇಗೂ ತಮ್ಮ ಊರಿಗೆ ಹೊರಟುಹೋಗಿಯಾಗಿದೆ. ಮತ್ತೆ ಯಾಕೆ ಈ ಹಗೆ?”
“ಅಪ್ಪಾ, ನೀನು ನಿನ್ನಷ್ಟಕ್ಕೇ ಮಾತನಾಡುತ್ತಿದ್ದೀ,” ಎಂದು ಶಿರೀನ್ ಬೆಹರಾಮನನ್ನು ಎಚ್ಚರಿಸುವ ಹೊತ್ತಿಗೆ ಶಿರೀನಳ ತಾಯಿ ಚಹ ತಂದಳು.
“ನೋಡು ಶಿರೀನ್, ನನಗೆ ಈ ಅಗರವಾಲನ ಬಗ್ಗೆ ಮೊದಲಿನಿಂದಲೂ ಒಂದು ಗುಮಾನಿ.”
ಬೆಹರಾಮನಿಗೆ ತನ್ನ ಗುಮಾನಿಯನ್ನು ಸ್ಪಷ್ಟಪಡಿಸುವುದಾಗಲಿಲ್ಲ. ಚಹದ ಗುಟುಕನ್ನು ಹೀರುತ್ತ,
“ನನ್ನ ಗುಮಾನಿ ನಿಜವಾಗಿದ್ದಲ್ಲಿ ಈ ರಿಪೋರ್ಟು ಪ್ರಕಟವಾಗಲಾರದು. ಊe is goiಟಿg ಣo seಟಟ iಣ. ಈ ಜಾಹೀರಾತು ಅಂಥ ಖರೀದಿಗೆ ಅಹ್ವಾನವಾಗಿದೆ,” ಎಂದ. “ಈ ಎಲ್ಲ ದುರ್ವ್ಯವಹಾರಗಳಲ್ಲಿ ಒದಗುವ ಹಣದ ಹಸ್ತಾಂತರಕ್ಕೆ ಲೆಕ್ಕವಿಲ್ಲ. ಕೋಟ್ಯಂತರ ರೂಪಾಯಿಗಳ ವ್ಯವಹಾರದಲ್ಲಿ ಕೊಲೆ ಮಾಡಿಸಲು, ಮಾಡಿಸಿದ್ದನ್ನು ಅಡಗಿಸಲು ಲಕ್ಷಗಟ್ಟಲೆ ರೂಪಾಯಿಯ ಖರ್ಚು … ನಂಬುವೆಯಾ? ಮೂರು ವರ್ಷಗಳ ಹಿಂದೆ ನಡೆದ ಕೊಲೆಯ ಸಂದರ್ಭದಲ್ಲಿ ವಾಸುದೇವನ್ನನನ್ನು ಮಾತನಾಡಿಸುವ ಅವಕಾಶ ಒದಗಿಸಿಕೊಟ್ಟರೂ ಸಾಕು, ೨೫,೦೦೦ ರೂಪಾಯಿ ನನ್ನ ಪಾಲಿಗೆ!”
“ಆoಟಿ’ಣ ಣeಟಟ me.”
“ಹೌದು ಮಗೂ, ಇದು ನಿಜ. ಟೆಲಿಫೋನ್ ಮೇಲೆ ಬಂದ ಈ ಸೂಚನೆಯನ್ನು ಕೇಳಿ ನನ್ನ ಬಾಯಿಂದ ಮಾತೇ ಹೊರಡದಾದಾಗ-‘ಇಷ್ಟು ಸಾಲದಾದರೆ ನಿನಗೆ ಬೇಕಾದ ರಕಮನ್ನು ನೀನೇ ಹೇಳು’ ಎಂದ. ನಾನು ಸಿಟ್ಟಿನಿಂದ ಚೀರಿದಾಗ ಹಣ ಕೊಡಲು ಮಾಡಿದ್ದು ನನಗಲ್ಲವಾಗಿತ್ತು ಎಂದು ಹೇಳಲೆಂಬಂತೆ-‘ Weಟಟ, ಈ ಹಣದಿಂದ ವಾಸುದೇವನ್‌ನ ಭವಿಷ್ಯವೇ ಬದಲಿಸೀತು’ ಎಂದು ಮಾತನ್ನು ತಿದ್ದಿದ್ದ. I hಚಿಣe ಣhis mಚಿಟಿ eveಡಿ siಟಿಛಿe. ಸ್ವತಃ ತಾನೇ ಹಣಕ್ಕಾಗಿ ಏನು ಮಾಡಲೂ ಹೇಸುವವನಲ್ಲ ಈತ.”
ಇನ್ನೊಬ್ಬನ ಮೇಲೆ ಇಷ್ಟೊಂದು ಗಂಭೀರ ಆರೋಪ ಹೊರಿಸುವ ತನ್ನ ಕೊನೆಯ ಮಾತಿನಿಂದ ಬೆಹರಾಮ್ ಒಮ್ಮೆಲೇ ಬೇಚೈನುಗೊಂಡ: “ಯಾರಿಗೆ ಗೊತ್ತು, ನನ್ನನ್ನು ಸಂತೈಸುತ್ತ-‘ನನ್ನನ್ನು ತಪ್ಪು ತಿಳಿಯಬೇಡ. ಇಂಥ ಮಹತ್ವದ ಮಾಹಿತಿ ದೊರಕಿಸಲು ನಾವು ಹೀಗೆ ಖರ್ಚು ಮಾಡಬೇಕಾಗುತ್ತದೆ. ನಮ್ಮ ವ್ಯವಸಾಯದ ಒಂದು ತೀರ ಮಾಮೂಲು ಅಂಗವಿದು,’ ಎಂದಿದ್ದ. ಇದ್ದರೂ ಇದ್ದೀತು. ಆದರೂ… ಈ ಜಾಹೀರಾತು ಕೊಟ್ಟ ರೀತಿ ನೋಡಿದರೆ ಈ ರಿಪೋರ್ಟಿನಲ್ಲಿ ವರದಿಯಾದ ವ್ಯವಹಾರಗಳಿಗೆ ಸಂಬಂಧಪಟ್ಟವರಿಗೆ ಬೆದರಿಕೆ ಹಾಕಿ ಹಣ ಎತ್ತುವ ಹಿಕಮತ್ತೋ ಎಂದು ಕೆಟ್ಟ ಸಂಶಯ. ಇದು ನಿಜವಾಗಿದ್ದ ಪಕ್ಷದಲ್ಲಿ ಕರುಣಾಕರನ್ನನಿಗೆ ಎಂಥ ಧೋಕೆ ಕಾದಿತ್ತು ಎಂದು ಊಹಿಸಬಲ್ಲೆಯ? ಪಾರ್ವತಿ ಬೆಳಗಿಗೇ ಬಂದು ಅವನು ಮುಂಬಯಿ ಬಿಟ್ಟ ಬಗ್ಗೆ ಹೇಳಿದ್ದು ಒಳ್ಳೆಯದಾಯಿತು. ಇಲ್ಲವಾದರೆ ಇದನ್ನು ಓದಿ I ತಿouಟಜ hಚಿve goಟಿe mಚಿಜ…”

ಯಾವ ಪುರಾವೆಯೂ ಇಲ್ಲದೆ ಜಾಹೀರಾತಿನ ಬಗ್ಗೆ ಆಡಿದ ಮಾತುಗಳಿಂದ ತನ್ನ ಬಗ್ಗೆ ತನಗೇ ಜಿಗುಪ್ಸೆ ಅನ್ನಿಸತೊಡಗಿತು ಬೆಹರಾಮನಿಗೆ: “I ಚಿm ಜಿeeಟiಟಿg siಛಿಞ,” ಎಂದ. ತುಸು ತಡೆದು, “We mಚಿಞe eಚಿಛಿh oಣheಡಿ siಛಿಞ ಣhese ಜಚಿಥಿs,” ಎಂದ. ಆಮೇಲೆ, “ಸಂಜೆ ಮಕ್ಕಳನ್ನು ಕರಕೊಂಡು ‘ನ್ಯಾಶನಲ್ ಪಾರ್ಕ್’ಗೆ ಹೋಗೋಣ. ಅಲ್ಲಿಯ ಗಿಡಮರಗಳ ಹಸಿರಿನ ಸಹವಾಸದಲ್ಲಾದರೂ ಮನಸ್ಸು ಚೇತರಿಸಬಹುದು,” ಎಂದ. ಹೆಂಡತಿಗೂ ಮಗಳಿಗೂ ಈ ವಿಚಾರ ಒಪ್ಪಿಗೆಯಾಯಿತು. “ಟ್ರೇನ್ ಪ್ರವಾಸ ಮಕ್ಕಳಿಗೂ ಸೇರೀತು,” ಎಂದರು.
ಆಮೇಲೆ ಯಾರೂ ಮತ್ತೆ ಅಗರವಾಲನ ಬಗ್ಗೆ ಚಕಾರಶಬ್ದ ಮಾತನಾಡಲಿಲ್ಲ. ಬೋರಿವ್ಲಿಯ ‘ನ್ಯಾಶನಲ್ ಪಾರ್ಕ್’ಗೆ ಹೋಗುವ ಉತ್ಸಾಹದಲ್ಲಿ ಎಲ್ಲರೂ ಸಂಜೆಯಾಗುವುದನ್ನೇ ಇದಿರುನೋಡಹತ್ತಿದರು.

ಅಚ್ಚಬಿಳಿಯ ಸಂಗಮರವರೀ ಕಲ್ಲಿನಲ್ಲಿ ಕಟ್ಟಿದ ಸುಂದರ ‘ಸ್ಮೃತಿಮಂದಿರ’ವುಳ್ಳ ಗುಡ್ಡದ ತುದಿಯನ್ನು ಮುಟ್ಟುವ ಹೊತ್ತಿಗೆ ಸಂಜೆಯ ಐದು ಗಂಟೆ ದಾಟಿತ್ತು. ಹೊಂಬಣ್ಣಕ್ಕೆ ತಿರುಗಹತ್ತಿದ ಬಿಸಿಲಿನಲ್ಲಿ ಬೆಳಗಿ ನಿಂತ ಸುತ್ತಲಿನ ವನಶ್ರೀಯ ಉಲ್ಲಾಸದಾಯಕ ಹಸಿರು ಮನಸ್ಸಿನ ಬೇಸರವನ್ನು ಕ್ಷಣಾರ್ಧದಲ್ಲಿ ಓಡಿಸಿಬಿಟ್ಟಿತ್ತು. ಶಿರೀನಳ ಮೂರೂ ಮಕ್ಕಳು ಉಕ್ಕಂದದ ಕೇಕೆ ಹಾಕುತ್ತ ಮಂದಿರದ ಸುತ್ತಲಿನ ಕಟ್ಟೆಯ ಪಾವಟಿಗೆಗಳ ಮೇಲೆಲ್ಲ ಕುಣಿಯುತ್ತ ಓಡತೊಡಗಿದುವು. ಶಿರೀನ್ ಹಾಗೂ ಸೀತೆ ಅವುಗಳ ದೇಖರೇಖಿ ಮಾಡುತ್ತಿದ್ದಾಗ ಬೆಹರಾಮ್ ಹೆಂಡತಿಯೊಡನೆ ಗುಡ್ಡದಂಚಿನಲ್ಲಿಯ ಗುಲಾಬಿ ಗಿಡಗಳ ದೊಡ್ಡ ಹಿಂಡೊಂದರ ಮಗ್ಗುಲಲ್ಲಿ ಹುಲ್ಲಿನ ಮೇಲೆ ಕುಳಿತುಕೊಂಡ. ಕೂಡಲೆ, ‘ಆಹಾ! ಎಷ್ಟೊಂದು ಸೊಗಸಾದ ದೃಶ್ಯ!’ ಎಂಬ ಉದ್ಗಾರ ಇಬ್ಬರ ಬಾಯಿಯಿಂದಲೂ ಒಂದೇ ಕಾಲಕ್ಕೆ ಹೊರಟಾಗ ಸಂತೋಷ ವ್ಯಕ್ತಪಡಿಸುವ ಮುಗುಳುನಗೆ ಅವರ ಮೋರೆಗಳ ಮೇಲೆ ಪಸರಿಸಿತು. ಅವರ ಬಾಯಿಂದ ಹೊರಟ ಉದ್ಗಾರಕ್ಕೆ ಮುಂದಿನ ಇಳಿಜಾರಿನಲ್ಲಿ ಕೆಂಪಗೆ ಹೂತು ನಿಂತ ಐದಾರು ಗುಲ್‌ಮೋಹರ ಗಿಡಗಳ ಗುಂಪು ಪ್ರೇರಣೆಯಾಗಿತ್ತು. ಗಿಡದಲ್ಲಿ ಒಂದೂ ಹಸಿರೆಲೆ ಕಾಣುತ್ತಿರಲಿಲ್ಲ. ಹಸಿರೆಲ್ಲ ಕೆಂಪಾಗಿ ರೂಪಾಂತರಗೊಂಡಿತೋ ಎಂಬಂತೆ ಅರಳಿ ನಿಂತ ಮರಗಳು ತಡೆಯಲಾರದ ಉತ್ಸಾಹದಿಂದ ಚಪ್ಪಾಳೆ ತಟ್ಟುತ್ತಿವೆ ಎನ್ನುವ ಭಾಸವಾದಾಗ ಮನಸ್ಸಿನಲ್ಲಿ ಮಿಂಚಿದ ಪ್ರತಿಮೆ ಮಾತಾಗದಾಯಿತು: ಈ ಸೌಂದರ್‍ಯವನ್ನು, ಅದರ ಘನತೆಯನ್ನು ಗ್ರಹಿಸಬಲ್ಲ ಮನಸ್ಸಿನಲ್ಲೇ ಎಷ್ಟೊಂದು ಕ್ಷುದ್ರತೆ, ಅನ್ನಿಸಿತು.
“ಮತ್ತೆ ಏನೋ ವಿಚಾರದಲ್ಲಿ ಮುಳುಗಿದ ಹಾಗೆ ತೋರುವಿಯಲ್ಲ?” ಹೆಂಡತಿ ಭುಜತಟ್ಟಿ ಕೇಳಿದಳು.
“ಅದೇ! ನಿರ್ಜೀವ ಸಿಮೆಂಟು ಗೋಡೆಗಳ ಒಳಗೇ ಕೂತು ಯೋಚಿಸುವ ಮನುಷ್ಯನಿಗೂ, ಇಲ್ಲಿ ದೇವರು ನಿರ್ಮಿಸಿದ ಈ ಎಲ್ಲದರ ಸಾನಿಧ್ಯದಲ್ಲಿ ತೆರೆದುಕೊಳ್ಳುವ ಮನುಷ್ಯನಿಗೂ ಎಷ್ಟು ದೊಡ್ಡ ಅಂತರ! ಏನೇ ಅನ್ನು: ಬೆಳಿಗ್ಗೆ ಅಗರವಾಲನ ವಿಷಯದಲ್ಲಿ ತುಂಬ ತುಂಬ ಸಣ್ಣ ಮನಸ್ಸಿನಿಂದ ಯೋಚಿಸಿದೆ. ಮೂರು ವರ್ಷಗಳ ಹಿಂದೆ, ಆ ಕೊಲೆಯ ಸಂದರ್ಭದಲ್ಲಿ ನನಗೆ ಹಣ ಕೊಡಲು ಮಾಡಿದ್ದನ್ನು ನಾನು ಬದುಕಿರುವವರೆಗೂ ಮರೆಯಲಾರೆ-ಇದು ನಿಶ್ಚಿತ. ಆದರೆ ಅವನು ಆಡಿದ ಮಾತನ್ನು ಅವನೊಡನೆ ಕಾಯಮ್ ಹಗೆ ಕಾಯುವಷ್ಟರಮಟ್ಟಿಗೆ ಮನಸ್ಸಿಗೆ ಹಚ್ಚಿಕೊಳ್ಳಲು ಕಾರಣವಾದದ್ದು ನನ್ನ ಬಗ್ಗೆ ನನ್ನ ಪ್ರಾಮಾಣಿಕತೆಯ ಬಗ್ಗೆ ನಾನೇ ಇಟ್ಟುಕೊಂಡಿರಬಹುದಾದ ಅಹಂಭಾವ ಅಲ್ಲ ತಾನೆ? ಆಮೇಲೆ ಅವನೊಡನೆಯ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳಲು ಬಯಸಿದ್ದು ಅತಿರೇಕವಾಯಿತೇನೋ. ಅವನೂ ಜಿದ್ದಿನ ಮನುಷ್ಯನೇ. ಮೊನ್ನೆ ಕರುಣಾಕರನ್‌ನ ಬಗ್ಗೆ ಫೋನ್ ಮಾಡಿದಾಗ ನನ್ನ ಧ್ವನಿ ಕೇಳಿಸಿದ್ದೇ ಹಾರಡಿದನಲ್ಲ-ನಿನ್ನ ಕರುಣಾಕರನ್‌ನನ್ನು ಅವರು ಈಗಾಗಲೇ ಕೊಂದು ಹಾಕಿದ್ದಾರೆ. ಅವನು ಸತ್ತುಹೋದ, ಅಂತ.” ಹೆಂಡತಿ ಮೆಲ್ಲಗೆ ಕೈ ಅದುಮಿದಾಗ, “ಹೌದು, ಈಗ ಮತ್ತೆ ಬೇಡ. ರಿಟಾಯರ್ ಆದಮೇಲೆ ಒಮ್ಮೆ ನಾನೇ ಹೋಗಿ ಭೇಟಿಯಾಗುತ್ತೇನೆ. ಹಿಂದಿನದೆಲ್ಲ ಮರೆತುಬಿಡು ಎನ್ನುತ್ತೇನೆ,” ಎಂದ. ಮನಸ್ಸು ಹಗುರಾಯಿತು. ಹಸಿರು, ಕೆಂಪು, ಹಳದಿ ಬಣ್ಣಗಳಿಂದ ಕಂಗೊಳಿಸುತ್ತಿದ್ದ ಸುತ್ತಲ ಸೃಷ್ಟಿ ಅಸ್ತಕ್ಕೆ ನಡೆದ ಸೂರ್ಯನ ಬೆಳಕಿನಲ್ಲಿ ಕ್ಷಣಕ್ಷಣಕ್ಕೆ ಬಣ್ಣ ಬದಲಿಸುತ್ತಿದ್ದ ಅಲೌಕಿಕ ಬಗೆಯನ್ನು ವೀಕ್ಷಿಸುತ್ತಿದ್ದಹಾಗೆ ಬೆಹರಾಮನ ಮನಸ್ಸು ತುಂಬ ಮಿದುವಾಯಿತು. ಇದೇ ಸ್ಥಿತಿಯನ್ನು ಕಾಯಮ್ ಆಗಿ ಕಾಯ್ದುಕೊಳ್ಳುವ ಶಕ್ತಿ ತನ್ನ ಮನಸ್ಸಿಗೆ ಇದ್ದುದಾದರೆ-ಎಂಬ ಅನ್ನಿಸಿಕೆ ಮೆಲ್ಲಗೆ ಪ್ರಾರ್ಥನೆಯ ರೂಪ ಪಡೆಯತೊಡಗಿದಾಗ: ‘ನೆಮಾಝ್ ಓ ಚೆರಾಗ್’ ಪ್ರಾರ್ಥನೆಯ ಸಾಲುಗಳು ತಮ್ಮಿಂದ ತಾವೇ ಮನಸ್ಸಿನಲ್ಲಿ ಮೊಳೆಯತೊಡಗಿದುವು: ‘ನಾನು ಮನಸ್ಸಿನಲ್ಲಿ ಇಟ್ಟುಕೊಂಡಿರಬಹುದಾದ ಪ್ರತಿಯೊಂದು ಕೆಟ್ಟ ವಿಚಾರಕ್ಕಾಗಿ, ಆಡಿರಬಹುದಾದ ಪ್ರತಿಯೊಂದು ಕೆಟ್ಟ ಮಾತಿಗಾಗಿ, ಮಾಡಿರಬಹುದಾದ ಪ್ರತಿಯೊಂದು ಕೆಟ್ಟ ಕೃತ್ಯಕ್ಕಾಗಿ ಪರಿತಪಿಸುತ್ತೇನೆ.”

ಬೋರಿವ್ಲಿ ಸ್ಟೇಶನ್ನಿನಲ್ಲಿ ಹತ್ತುವಾಗಲೇ ಒಂದೂವರೆ ಗಂಟೆ ಕಾಯುವ ಕರಾರು ಮಾಡಿ ತಂದ ಟ್ಯಾಕ್ಸಿಯ ಡ್ರಾಯ್ವರ್ ಹೊರಡುವ ವೇಳೆ ಆಯಿತೆಂದು ತಿಳಿಸಲು ಬಂದ. ಇನ್ನೂ ಕೆಲಹೊತ್ತು ಕೂರುವ ಮನಸ್ಸಾಗಿ, “ನಿಲ್ಲುವೆಯಾದರೆ ಸೀದ ಬಾಂದ್ರಾಕ್ಕೇ ಹೋಗಬಹುದಾಗಿತ್ತು,” ಎಂದು ಸೂಚಿಸಿದ. “ಇಲ್ಲ ಸರ್, ಮೂವರು ದೊಡ್ಡವರನ್ನು, ನಾಲ್ಕು ಮಂದಿ ಮಕ್ಕಳನ್ನು ಇಲ್ಲಿಂದಿಲ್ಲಿಗೆ ತರುವಾಗಲೇ ಹೆದರಿದ್ದೆ. ಈ ಪೋಲೀಸರ ಕೈಯಲ್ಲಿ ಸಿಕ್ಕಿಬೀಳುವುದು ಬೇಡ. ಬೇಕಾದರೆ ಇನ್ನೂ ಒಂದು ಅರ್ಧಗಂಟೆ ಹೆಚ್ಚು ಕೂತುಕೊಳ್ಳಿ. ನಾನೂ ಕೂತು ಸಂತೋಷಪಡುತ್ತೇನೆ. ಹಣ ಮಾಡುವ ಜಂಜಾಟ ದಿನವೂ ಇದ್ದದ್ದೇ,” ಎಂದ ಡ್ರಾಯ್ವರ್. ತನ್ನ ಇದೀಗಿನ ಮೂಡಿಗೆ ಸರಿಹೊಂದುವ ಈ ಮಾತುಗಳಿಂದ ಬೆಹರಾಮನ ಮೋರೆಯ ಮೇಲೆ ಮುಗುಳುನಗೆ ಅರಳಿತು: “ಥ್ಯಾಂಕ್ಸ್,” ಎಂದ.

ಕೈಗಡಿಯಾರ ನೋಡಿಕೊಂಡು ಹೊರಡುವ ಹೊತ್ತಾದುದನ್ನು ಗಮನಿಸಿದ ಶಿರೀನಳಿಗೆ ಮಕ್ಕಳನ್ನೆಲ್ಲ ಟ್ಯಾಕ್ಸಿ ಇದ್ದಲ್ಲಿ ಕರೆತಂದು ಒಳಗೆ ಕೂರಿಸುವಾಗ ಸಾಕಾಗಿಹೋಯಿತು. ಅಪ್ಪ-ಅಮ್ಮ ಇದ್ದಲ್ಲಿಗೆ ಬಂದು-“ಮಕ್ಕಳೆಲ್ಲ ಟ್ಯಾಕ್ಸಿಯಲ್ಲಿ ಬಂದು ಕೂತಾಗಲೇ ಹೊರಡುವುದು ಒಳ್ಳೆಯದು. ನಾನು ಇತ್ತ ಕಡೆಗೆ ಬರದೇ ಹತ್ತು-ಹನ್ನೆರಡು ವರ್ಷಗಳ ಮೇಲೆ ಆಗಿರಬೇಕು. ಮದುವೆಯಾದ ಮೇಲಂತೂ ಬಂದೇ ಇರಲಿಲ್ಲ. Whಚಿಣ ಚಿ gಟoಡಿious eveಟಿiಟಿg! ಮಕ್ಕಳಂತೂ ಹೊರಡಲು ಸಿದ್ಧವಾಗಿರಲೇ ಇಲ್ಲ,” ಎಂದಳು. ಶಿರೀನಳ ಮಾತಿನಲ್ಲಿ ತನ್ನ ಮೂಡನ್ನು ತಿಳಿಯುವ ಉದ್ದೇಶದ ಸುಳುಹನ್ನು ಕಂಡ ಬೆಹರಾಮ್-“ಈ ಹೊತ್ತು ಬಂದದ್ದು ಬಹಳ ಒಳ್ಳೆಯದಾಯಿತು, ಮಗಳೇ. ಕಳಕೊಂಡ ಔದಾರ್ಯವನ್ನು, ಆರೋಗ್ಯವನ್ನು ತಿರುಗಿ ಪಡೆಯಲು ಮನಸ್ಸಿಗೆ ನೆರವಾಗುವ ಪರಿಸರವಿದು. ನಾನು ಖುಶಿಯಲ್ಲಿದ್ದೇನೆ,” ಎಂದು ಎದ್ದು ನಿಂತು ಮಗಳ ಭುಜವನ್ನು ತಟ್ಟಿದ: “ನಡೆ ಹೊರಡೋಣ, ನೀನು ಕಲಕತ್ತೆಗೆ ಹೋಗುವ ಮೊದಲು ಇಲ್ಲಿಗೆ ಇನ್ನೊಮ್ಮೆ ಬರೋಣ.”
“ಇದು ಹುಬೇಹೂಬ್. ನಿನ್ನಪ್ಪ ಸೇರಿತು ಎಂದರೆ ಇನ್ನೊಮ್ಮೆ ಬರೋಣ! ನೋಡುವ ಮನಸ್ಸಿದ್ದರೆ ಇನ್ನೆಷ್ಟು ಇಂಥ ಜಾಗಗಳಿಲ್ಲ. ಬೇಕಾದರೆ ‘ಪೊವಾಯಿ-ವಿಹಾರ್’ ಲೇಕ್ಸ್‌ಗೆ ಹೋಗಬಹುದು. ಸದ್ಯ ಅಗರವಾಲನನ್ನು ತಲೆಯೊಳಗಿಂದ ತೆಗೆದುಹಾಕಿದರೆ ಸಾಕು,” ಎಂದಳು ಹೆಂಡತಿ.

ಹೆಂಡತಿಯ ಮಾತನ್ನು ಕೇಳುತ್ತಿದ್ದ ಹಾಗೆ ಬೆಹರಾಮ್ ಅಗರವಾಲನ ಬಗ್ಗೆ ಗಟ್ಟಿಯಾದ ಒಂದು ನಿರ್ಧಾರಕ್ಕೆ ಬಂದು ಆಗಿತ್ತು. ಟ್ರೇನಿನಲ್ಲಿ ಕೂತಾಗ ಹತ್ತಿರ ಕೂತ ಶಿರೀನಳಿಗೆ ಅದನ್ನು ಹೇಳುವ ಮನಸ್ಸಾದರೂ ಮುಂದೆ ಕುಳಿತ ಹೆಂಡತಿಯ ಮೋರೆ ನೋಡಿ ಈಗ ಬೇಡವೆನಿಸಿತು: ಮನೆ ತಲುಪಿದಕೂಡಲೇ ಶಿರೀನಳಿಗೆ ಹೇಳುತ್ತೇನೆ, ದುಗುಡ ಕವಿದ ಮನಸ್ಸು ಹೊಳವಾದೀತು, ಎಂದುಕೊಂಡ. ಫಸ್ಟ್‌ಕ್ಲಾಸ್ ಕಂಪಾರ್ಟ್‌ಮೆಂಟ್ ಆದ್ದರಿಂದ ಹೆಚ್ಚು ಗದ್ದಲವಿರಲಿಲ್ಲ. ಮೂರೂ ಮಕ್ಕಳು ಸೀತೆಯ ಜೊತೆಗೆ ದೊಡ್ಡವರು ಕೂತ ಮೂಲೆಯಿಂದ ದೂರ ಸರಿದು ಕಿಡಕಿಯ ಹೊರಗೆ ದೃಷ್ಟಿ ಚಾಚಿ ಕೂತಿದ್ದುವು. ಅಗರವಾಲನ ಬಗ್ಗೆ ಹೇಳಬೇಕೆಂದುಕೊಂಡದ್ದೆಲ್ಲ ಹಲವು ರೀತಿಗಳಲ್ಲಿ ಆಕೃತಿ ಪಡೆಯತೊಡಗಿದಾಗ ಮನೆ ತಲುಪುವತನಕ ಕಾಯುವುದು ಅಸಾಧ್ಯವಾಗಿ ತೋರಿತು. ಅಗರವಾಲನನ್ನು ಮನಸ್ಸಿನೊಳಗಿಂದ ತೆಗೆದುಹಾಕಲು ಆಜ್ಞೆಯಿತ್ತ ಹೆಂಡತಿಯ ಕಡೆಗೆ ನೋಡುವ ಧೈರ್ಯವಾಗದೆ ಶಿರೀನಳ ಕಡೆಗೆ ಮೋರೆ ತಿರುವಿ ಕುಳಿತುಕೊಂಡ. ಹಾಗೆ ಕೂತ ಕೆಲಹೊತ್ತಿನ ಮೇಲೆ ಅವಳ ಮೋರೆ, ‘ಹೇಳು, ಅಡ್ಡಿಯಿಲ್ಲ,’ ಎಂದು ಆಹ್ವಾನಿಸಿದ ಹಾಗೆ ತೋರಿತು:
“ನಂಬುವೆಯಾ ಶಿರೀನ್? ನಮ್ಮ ಕಂಪನಿಯಲ್ಲಿ ನನ್ನ ಜೊತೆಗೆ ಹದಿಮೂರು ವರ್ಷ ಕೆಲಸ ಮಾಡಿದ ಈ ಪುಂಡ ಅಗರವಾಲ ಕಂಪನಿಯನ್ನು ಬಿಟ್ಟುಹೋದ ಬಳಿಕ, ಈ ಎಂಟು ವರ್ಷಗಳಲ್ಲಿ, ಅವನನ್ನು ಕಂಡದ್ದು ಒಮ್ಮೆ ಮಾತ್ರ-ಮೂರು ವರ್ಷಗಳ ಹಿಂದೆ! ಟೆಲಿಫೋನ್ ಮೇಲೆ ಮಾತನಾಡಿಸಿದ್ದೂ ಕೂಡ ಒಮ್ಮೆ ಮಾತ್ರ-ಮೊನ್ನೆ, ನೀನು ಬಂದಮೇಲೆ! ಇದು ನಮ್ಮ ಮುಂಬಯಿಯ ಬದುಕು. ನಮ್ಮ ಕಟ್ಟಡದಲ್ಲಿಯ ಜನವನ್ನು ಕಾಣುವುದು ಕೂಡ ಹೀಗೆಯೆ-ಜಿನ್ನೆಯ ಮೆಟ್ಟಿಲುಗಳ ಮೇಲೆ, ಇಲ್ಲ ಗೇಟಿನಲ್ಲಿ ಫಕ್ಕನೆ ಭೇಟಿಯಾದಾಗ. ನಮ್ಮ ಕಂಪನಿಯನ್ನು ಅವನು ಸೇರಿದಾಗ ತುಂಬ ಎಳೆಯ ಪ್ರಾಯದವನು-ಸುಮಾರು ಇಪ್ಪತ್ತೈದು ವರುಷದವನಿರಬೇಕು. ಸ್ಮಾರ್ಟ್ ಹುಡುಗ. ಅದೇ ಅಮೇರಿಕೆಯಿಂದ ಒಃಂ ಮುಗಿಸಿ ಬಂದಿದ್ದ. ‘ಮಾರ್ಕೆಟಿಂಗ್ ಡಿವಿಜನ್’ದಲ್ಲಿ ಕೆಲಸ ಮಾಡುತ್ತಿದ್ದನಾದರೂ ನನ್ನ ಕ್ಯಾಬಿನ್ನಿಗೆ ಬರುವುದು ಹೆಚ್ಚಾಗಿತ್ತು. ಮಾತನಾಡಲು ಬಹಳ ಬೇಕು. ಬಹಳ ಬುದ್ಧಿವಂತ, buಣ ಟಚಿಛಿಞeಜ seಟಿse oಜಿ ಠಿಡಿoಠಿಡಿieಣಥಿ, ಯಾರ ಕೂಡ ಹೇಗೆ ಮಾತನಾಡಬೇಕು, ಯಾವಾಗ ಹೇಗೆ ಮಾತನಾಡಬೇಕು-ಪರಿವೆ ಮಾಡಿದವನಲ್ಲ. ನನಗಿಂತ ಹನ್ನೆರಡು ವರ್ಷಗಳಿಂದ ಕಿರಿಯನಾದರೂ ನನ್ನ ಸಮವಯಸ್ಕನೆಂಬಂತೆ ಮಾತನಾಡುತ್ತಿದ್ದ. ಕಾರಣವಿಲ್ಲದೆ ಚುಡಾಯಿಸುತ್ತಿದ್ದ. ಕೆಣಕುತ್ತಿದ್ದ. ನಾನು ನಿಜಕ್ಕೂ ಸಿಟ್ಟಿಗೆದ್ದುಬಿಟ್ಟರೆ ನಕ್ಕುಬಿಡುತ್ತಿದ್ದ. ಙou ಟಚಿಛಿಞ ಚಿ seಟಿse oಜಿ humouಡಿ ಎಂದು ನನ್ನ ಮೋರೆಗೇ ಹೇಳುತ್ತಿದ್ದ. ಊe ತಿಚಿs ಣoo ಚಿggಡಿessive ಜಿoಡಿ me. ನನಗವನು ಸೇರುತ್ತಿದ್ದ; ಸೇರುತ್ತಿರಲಿಲ್ಲ. ತನ್ನ ಆಸೆ ಆಕಾಂಕ್ಷೆಗಳನ್ನು, ಬದುಕಿನ ಬಗೆಗಿನ, ವ್ಯವಸಾಯದ ಬಗೆಗಿನ ಕನಸುಗಳನ್ನು ಹೇಳಿಕೊಳ್ಳಲು ಎಲ್ಲರಿಗಿಂತ ಮೊದಲು ನಾನೇ ಬೇಕು. ಯಾವ ಕಾಲಕ್ಕೂ ನನ್ನನ್ನು ಬಹಳ ಹಚ್ಚಿಕೊಂಡವನಲ್ಲ. ಹಾಗೆ ನೋಡಿದರೆ ಯಾರನ್ನೂ. ಆಫೀಸಿನಲ್ಲಿ ಮಾತ್ರ ಎಲ್ಲರಿಗೂ ಬೇಕಾದವನಾಗಿದ್ದ. ಊe ತಿಚಿs veಡಿಥಿ ಠಿoಠಿuಟಚಿಡಿ ಚಿಟಿಜ ಣhe bosses ಡಿegಚಿಡಿಜeಜ him highಟಥಿ, ಕಂಪನಿಯಲ್ಲಿ ಬಹುಬೇಗ ಮೇಲೆ ಬಂದನು ಕೂಡ. ಕಂಪನಿಯನ್ನು ಬಿಡುವಾಗ ಡೆಪ್ಯುಟಿ ಜನರಲ್ ಮ್ಯಾನೇಜರ್! ಯಾವುದರಿಂದಲೂ ಬಹಳ ದಿನ ಆಕರ್ಷಿತನಾದವನಲ್ಲ. ಹಾಗೆಂದೋ ಏನೋ ಮದುವೆಯಾಗಿರಲಿಲ್ಲ. ಗೌರೀಪ್ರಸಾದ್ ಎಂದು ಅವನ ಹೆಸರು. ನಾವೆಲ್ಲ ಗೌರೀ ಎಂದೇ ಕರೆಯುತ್ತಿದ್ದೆವು. ಅಚಿಟಟ me ಉP ಎನ್ನುತ್ತಿದ್ದ. ನನ್ನನ್ನು ‘ಬಿಪಿ’ ಎಂದು ಕರೆಯುತ್ತಿದ್ದ. ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡವನಲ್ಲ. ವಿಚಿತ್ರ ರೀತಿಯಿಂದ ಬೇಫಿಕೀರ್! ಕಂಪನಿಯನ್ನು ಸೇರಿದಷ್ಟೇ ತ್ವರೆಯಿಂದ ಒಂದು ದಿನ ಬಿಟ್ಟುಹೋಗಲು ಸಿದ್ಧವಾಗಿ ನಿಂತ: ‘ಓಕೇ ಬೀಪೀ, ಸುದ್ದಿ ಈಗಾಗಲೇ ನಿನಗೆ ಮುಟ್ಟಿರಬೇಕು. I ಚಿm quiಣಣiಟಿg ಣhe ಛಿomಠಿಚಿಟಿಥಿ!’ ಎಂದು ನನ್ನ ಕ್ಯಾಬಿನ್ನಿಗೂ ಬಂದು ಸಾರಿದ. ನಾನು ಬೆಕ್ಕಸಬೆರಗಾಗಿ ನೋಡುತ್ತ ಕುಳಿತಿದ್ದಾಗ-‘ಬೇಸರ ಬಂತು. ಜರ್ನಲಿಜಮ್ ಸೇರಬೇಕೆಂದು ನಿಶ್ಚಯಿಸಿದ್ದೇನೆ. ಈಚಿmiಟಥಿ busiಟಿess, ಥಿou see. ನನ್ನ ಅಣ್ಣನದೇ ಪತ್ರಿಕೆ-ಎಕ್ಸ್‌ಪ್ರೆಸ್! ನಾನು ಹೊಸ ಸಂಪಾದಕ, ಈ ಮೊದಲಿನವನು ಬಿಟ್ಟುಹೋದದ್ದರಿಂದ. ಙou ತಿiಟಟ see seಟಿsಚಿಣioಟಿಚಿಟ ಛಿhಚಿಟಿges, ಗುಡ್‌ಬಾಯ್ ಃP. ಯಾವಾಗಲಾದರೂ ಮತ್ತೆ ಭೇಟಿಯಾಗೋಣ,’ ಎಂದು ಕೈಕುಲುಕಿ ಹೊರಟೇಬಿಟ್ಟ. ಕ್ಷಣ ಬಿಟ್ಟು ಹಿಂತಿರುಗಿ ಬಂದು ‘ಃಥಿ ಣhe ತಿಚಿಥಿ-ಣhಚಿಟಿಞs ಜಿoಡಿ eveಡಿಥಿಣhiಟಿg,’ ಎಂದ. ಅವನ ರಾಜೀನಾಮೆಯಿಂದ ನಮ್ಮ ಮೇಲಧಿಕಾರಿಗಳು ತುಂಬ ನೊಂದುಕೊಂಡರು. ಂ big ರಿoಞeಡಿ he ತಿಚಿs ಎಂದು ಬೈದರು. ಒಂದು ದಿನ ಮರೆತೇಬಿಟ್ಟರು. ನನ್ನ ಆಗಿನ ಭಾವನೆಗಳನ್ನು ಈಗ ಊಹಿಸುವುದು ಕಷ್ಟ. ಕೆಡುಕೆನಿಸಿರಬೇಕು. ಕೊನೆಗೂ ಹಲವು ವರ್ಷ ಜೊತೆಗೆ ಕೆಲಸ ಮಾಡಿದ್ದೆವು. ಅದೇ ಹೊತ್ತಿಗೆ ಒಂದು ಬಗೆಯ ಬಿಡುಗಡೆಯ ಭಾವನೆ. ಯಾತರಿಂದ ಬಿಡುಗಡೆ? ವಿವರಿಸಲಾರೆ. ಒಂದನ್ನು ಒಪ್ಪಿಕೊಳ್ಳಲೇಬೇಕು. ವಿಲಕ್ಷಣ ರೀತಿಯಲ್ಲಿ ಅವನಿಗೆ ಹೆದರಿಕೊಂಡಿದ್ದೆ,” ಎಂದ.

ಹೆಂಡತಿ ಹಾಗೂ ಮಗಳು ತದೇಕಚಿತ್ತದಿಂದ ತನ್ನನ್ನು ಕೇಳುತ್ತಿದ್ದಾರೆ ಎಂಬ ಅರಿವಿನಿಂದ ತುಸು ಹೊತ್ತು ಮುಜುಗರವಾದರೂ ಮಾತನ್ನು ಮುಂದುವರಿಸಲು ಅನುವಾದ. ಅವನಿಗೆ ತಿಳಿಯದೇನೆ ಅವನ ದನಿ ತಂತಾನೆ ತಗ್ಗಿತ್ತು:
“ಕಂಪನಿಯನ್ನು ಬಿಟ್ಟುಹೋಗುವ ದಿನ ವಿದಾಯ ಹೇಳಲು ಬಂದಷ್ಟೇ ನಾಟಕೀಯವಾಗಿ ಸುಮಾರು ಐದು ವರ್ಷಗಳ ನಂತರ, ಒಂದು ದಿನ, ಮೂರು-ಸಂಜೆಯಲ್ಲಿ ಸಾಧಾರಣ ಇದೇ ಹೊತ್ತಿಗೆ ೭/೭-೩೦ಕ್ಕೆ, ಸೀದ ಮನೆಗೇ ಬಂದು ಕದ ತಟ್ಟಿದ. ನಾನೇ ಕದ ತೆರೆದೆ. ‘ಹಾಯ್ ಬೀಪೀ, ಹೇಳದೆ ಕೇಳದೆ ಮನೆಗೆ ನುಗ್ಗುತ್ತಾ ಇದ್ದೇನೆ,’ ಎಂದು ಒಳಗೆ ಬಂದೇಬಿಟ್ಟ. ‘ನೀನು ಇದ್ದಹಾಗೇ ಇದೀಯಾ,’ ಎನ್ನುತ್ತ ಕೈಕುಲುಕಿದ ಹಾಲಿಗೆ ಬಂದಮೇಲೆ ಭೇಟಿಯಾದ ನಿನ್ನ ತಾಯಿಗೆ-ಖಿhis ಛಿhಚಿಡಿmiಟಿg ಟಚಿಜಥಿ musಣ be ಥಿouಡಿ ತಿiಜಿe. ನಾನು ಗೌರೀಪ್ರಸಾದ ಅಗರವಾಲ್. ಒಂದಾನೊಂದು ಕಾಲಕ್ಕೆ ನಿನ್ನ ಗಂಡನ ಸಹೋದ್ಯೋಗಿ,’ ಎನ್ನುತ್ತ ಅವಳ ಕೈಯನ್ನು ಕುಲುಕಿದ. ಹಾಗೂ ‘ಹೇಳಲು ಸಂತೋಷವಾಗುವ ಸಂಗತಿಯೆಂದರೆ, ಊಟಕ್ಕೆಂದೇ ಬಂದಿದ್ದೇನೆ. ನನ್ನ ಅದೃಷ್ಟದಲ್ಲಿದ್ದರೆ ಬಾಳೆಯೆಲೆಯಲ್ಲಿ ಬೇಯಿಸಿದ ನಿಮ್ಮ ಖಾಸಾ ಮೀನೂ ತಿನ್ನಲು ಸಿಗುತ್ತದೆ,’ ಎನ್ನುತ್ತ ಖುಶಿಯಿಂದ ನಕ್ಕ. ನಿನ್ನ ಅಮ್ಮನಿಗೆ ಈ ಹುಚ್ಚನನ್ನು ಕಂಡು ಖುಶಿಯೋ ಖುಶಿ. ಅವನ ಬಗ್ಗೆ ನನ್ನಿಂದ ಕೇಳಿ ಗೊತ್ತಿತ್ತೇ ಹೊರತು ಕಂಡಿರಲಿಲ್ಲ. ಮತ್ತು ಎಂಥ ಅದ್ಭುತ ಆಕಸ್ಮಿಕ ನೋಡು: ಅಮ್ಮ ಅಂದಿನ ಊಟಕ್ಕೆ ‘ಪಾತ್ರಾನೂಮಚ್ಛಿ’ಯನ್ನೇ ಬೇಯಿಸಿದ್ದಳು! ಮುಂದಿನ ಮೂರು ಗಂಟೆ ನಮ್ಮ ಕಂಪನಿಯಲ್ಲಿ ತಾನು ಕೆಲಸ ಮಾಡುತ್ತಿದ್ದಾಗಿನ ದಿನಗಳನ್ನು ನೆನೆದು ಮಾತನಾಡಿದನೇ ಹೊರತು ತನ್ನ ಹೊಸ ಕೆಲಸದ ಬಗ್ಗೆ ಚಕಾರ ಶಬ್ದ ಹೇಳಲಿಲ್ಲ. ಇದನ್ನೂ ಬಿಟ್ಟು ಹೊರಟಿರಬಹುದೇ ಎಂಬ ಗುಮಾನಿ ಮನಸ್ಸನ್ನು ತಟ್ಟಿಹೋಯಿತು. ಯಾವುದಕ್ಕೂ ಅಂಟಿಕೊಂಡವನೇ ಅಲ್ಲ ಅನ್ನಿಸಿತು. ನನ್ನ ಜೊತೆ ವ್ಹಿಸ್ಕೀ ಕುಡಿಯುತ್ತ, ‘ನಾನು ಎಲ್ಲ ಮಾರವಾಡಿಗಳಂತಲ್ಲ. I eಟಿರಿoಥಿ gooಜ ಣhiಟಿgs oಜಿ ಟiಜಿe,’ ಎಂದ. ‘ಹೊಚ್ಚಹೊಸತು, ಪೂರಾ ಬಂಗಾರದ್ದು, ಸರಪಳಿ ಸಹಿತ,’ ಎಂದು ಮುಂಗೈ ಎತ್ತಿ ಕೈಗಡಿಯಾರ ತೋರಿಸಿದ. ಏನೇನೋ ಸಾಹಸದ ಕತೆಗಳನ್ನು ಹೇಳಿದ. ನಡುವೆಯೆ ಒಮ್ಮೆ, ‘ಒಳ್ಳೇ ಮನೆ ಮಾಡಿದ್ದೀಯಾ. ಫರ್ನಿಚರ್, ಸಜ್ಜಿಕೆ ಕೂಡ ಸುಂದರವಾದದ್ದು. ಙou musಣ hಚಿve sಠಿeಟಿಣ ಚಿ ಜಿoಡಿಣuಟಿe,’ ಎಂದು ಮುಗುಳುನಕ್ಕ. ‘ಪಿತ್ರಾರ್ಜಿತವಾಗಿ ಬಂದ ಮನೆ ಇದು,’ ಎಂಬಂಥ ಮಾತಿಗೆ ನನ್ನ ಬಾಯಿಂದ ಹೊರಗೆ ಬರುವ ಅವಕಾಶವನ್ನೇ ಕೊಡದೆ, ‘ಚಿಯರಪ್ ದೋಸ್ತ್,’ ಎಂದು ನನ್ನ ಭುಜ ತಟ್ಟಿದ. ನನ್ನ ಮೋರೆಯ ಮೇಲೆ ಅಂಥ ಉದ್ಗಾರಕ್ಕೆ ಪ್ರೇರಣೆಯಿತ್ತ ಏನನ್ನೋ ಓದಿಕೊಂಡವನಹಾಗೆ. ‘ಕೆಟ್ಟವನು ಎಂದು ಬೈಸಿಕೊಳ್ಳಲೂ ನೀನು ಹೆದರಿದರೆ ಹೇಗಪ್ಪಾ ಈ ದುಷ್ಟ ಜಗತ್ತಿನಲ್ಲಿ ನಿನ್ನ ಒಳ್ಳೆಯತನವನ್ನು ಸುಖಿಸುವ ಭರವಸೆ ತಾಳುತ್ತೀ?’ ಎಂದು ಕೇಳಿದ. ನನಗೆ ಅರ್ಥವಾಗಲಿಲ್ಲ. ಬಹುಶಃ ತಾನು ಹೀಗೆ ಅಚಾನಕವಾಗಿ ಬಂದಂಥ ಕಾರ್ಯವನ್ನು ಅವನೀಗ ವಿವರಿಸುತ್ತಾನೆ, ಅಂಥ ವಿವರಣೆಗೆ ಈ ಪ್ರಶ್ನೆ ಪೂರ್ವಪೀಠಿಕೆಯಾಗಿರಬಹುದೆಂದು ನಾನು ಏನೂ ಹೇಳಲಿಲ್ಲ. ಹೇಳಲು ಅವನು ಅವಕಾಶ ಕೊಟ್ಟರಲ್ಲವೆ! ಬಂದಂದಿನಿಂದ ಅವನೊಬ್ಬನೇ ಮಾತನಾಡುತ್ತಿದ್ದ. ಮಾತು ಒಮ್ಮೆಲೇ ಊಟದ ಮೆನ್ಯೂ ಕಡೆಗೆ ಹೊರಳಿತು. ಊಟಕ್ಕೆ ಕೂತಾಗ ನಿನ್ನ ಅಮ್ಮನನ್ನು ಬಾಯಿ ತುಂಬ ಹೊಗಳಿದ. ಹೊಟ್ಟೆಬಾಕನಂತೆ ಉಂಡ. ಓoಣhiಟಿg ಟiಞe ಣhis ಟoveಟಥಿ ಜಿooಜ.” ಎಂದ. ಗಡಿಯಾರ ನೋಡಿಕೊಳ್ಳುತ್ತ-ಒಥಿ ಉoಜ! ಈಗಾಗಲೇ ೧೦-೩೦ ಗಂಟೆ. ಹೊರಡಬೇಕು,’ ಎಂದ. ಅಮ್ಮ ಸಿಹಿ ತಿಂಡಿಯ ನೆನಪು ಮಾಡಿದರೂ ಕೇಳದೇ-‘ಖಿhಚಿಟಿಞs ಜಿoಡಿ ಚಿ ಟoveಟಥಿ eveಟಿiಟಿg, ಟoveಟಥಿ ಜಿooಜ. ಕಾರು ತಂದಿಲ್ಲ. ಟ್ಯಾಕ್ಸಿ ಮಾಡಿ ಬಂದಿದ್ದೇನೆ. ನಿನ್ನ ಬ್ಯಾಂಡ್ ಸ್ಟ್ಯಾಂಡ್ ಎಂಥ ಹಳ್ಳಿಗಾಡೋ ಗೊತ್ತಿರಲಿಲ್ಲ. ಮೂರು ತಾಸು ಕಾಯುವ ಕರಾರಿನ ಮೇಲೆ ತಂದಿದ್ದೇನೆ. ಡ್ರಾಯ್ವರ್‌ನನ್ನು ಊಟಕ್ಕೆ ಕಳಿಸಿದ್ದೆ. ಈಗಾಗಲೇ ಬಂದಿರಬೇಕು,’ ಎಂದು ಬಂದಷ್ಟೇ ತ್ವರೆಯಿಂದ ಹೊರಟೇಬಿಟ್ಟ. ಬಂದ ಕಾರಣ ಕೊನೆಗೂ ತಿಳಿಯಲಿಲ್ಲ. ಅಮ್ಮನ ಕೈಯ ಮೀನಿನ ಊಟ ಉಣ್ಣಲೆಂದೇ ಬಂದವನಹಾಗೆ ಬಂದು ಹೊರಟುಹೋಗಿದ್ದ.”

ಯಾವಾಗಿನಿಂದಲೂ ಹೇಳಬೇಕೆಂದು ಯೋಚಿಸಿಕೊಂಡದ್ದನ್ನು, ಕೊನೆಗೊಮ್ಮೆ ಧೈರ್ಯಮಾಡಿ, ಹೇಳಿ ಮುಗಿಸಿದಾಗ ಬೆಹರಾಮನ ಬಾಯಿಂದ ಬಿಡುಗಡೆಯ ನಿಃಶ್ವಾಸ ಹೊರಟಿತು. ನಿನ್ನಿಂದ ಇಂಥ ಕತೆಗಳನ್ನು ನಾವು ಕೇಳಿದ್ದು ಇದೇ ಮೊದಲ ಬಾರಿ ಅಲ್ಲವಲ್ಲ ಎನ್ನುವ ಹಾಗೆ ಹೆಂಡತಿ-ಮಗಳು ಇಬ್ಬರೂ ಮೌನ ಧರಿಸಿ ಕುಳಿತುಬಿಟ್ಟಾಗ ಬೆಹರಾಮ್ ನಿರಾಶನಾದ: ಇದುವರೆಗೆ ಅವನು ಹೇಳಿದ್ದು ಅವನು ನಿಜಕ್ಕೂ ಹೇಳಬಯಸಿದ್ದಕ್ಕೆ ಕೇವಲ ಪ್ರಸ್ತಾವನೆಯಾಗಿತ್ತು. ಹಾಗೆ ಬಾಯಿಬಿಟ್ಟು ತಿಳಿಸಿದನು ಕೂಡ. ಹಾಗೂ ಅವರ ಪ್ರತಿಕ್ರಿಯೆಯ ಹಾದಿ ಕಾಯದೆ-“ಇದಾದ ೮/೧೦ ದಿನಗಳಲ್ಲೇ ಟೆಲಿಫೋನ್ ಮೇಲೆ ಹಣದ ಬಗ್ಗೆ ಮಾತನಾಡಿದ ರೀತಿಯಿಂದ ನಾನು ನಿಜಕ್ಕೂ ಸಿಡಿದೇಳಬೇಕು. ಆದರೂ ನನಗೆ ಈಗಲೂ ಅರ್ಥವಾಗಿರದ್ದೇನೋ ಬಾಯಿ ಕಟ್ಟಿದಾಗ ಟೆಲಿಫೋನ್ ಕೆಳಗಿಟ್ಟುಬಿಟ್ಟಿದ್ದೆ. ಆಮೇಲೆ ಮಾತ್ರ ನಮ್ಮಿಬ್ಬರಿಗೂ ಸಂಪರ್ಕವೇ ಇಲ್ಲ. ಕರುಣಾಕರನ್ನನ ವಿಳಾಸ ಕೇಳಲು ಮೊನ್ನೆ ಫೋನ್ ಮಾಡಿದ್ದೇ ತಪ್ಪಾಯಿತೇನೋ ಅನ್ನಿಸತೊಡಗಿದೆ, ಈಗ. ಯದ್ವಾತದ್ವಾ ರೇಗಿ-he is ಜeಚಿಜ ಎಂದನಲ್ಲ, ದುಷ್ಟ,” ಎಂದ.

ದೀರ್ಘವಾದ ಪೀಠಿಕೆಯ ನಂತರ ಬಂದ ಈ ಕೆಲವು ಮಾತುಗಳಿಂದಲೂ ಬೆಹರಾಮನಿಗೆ ದಮ್ಮು ಹತ್ತಿತು. ಇದು ಶಿರೀನಳ ಲಕ್ಷ್ಯಕ್ಕೆ ಬರದೇ ಇರಲಿಲ್ಲ:
“ಅಪ್ಪಾ, ಅಗರವಾಲನ ಜೊತೆಗೆ ನೀನು ಯಾವುದೇ ರೀತಿಯಿಂದ ತಪ್ಪು ನಡೆದುಕೊಳ್ಳಲಿಲ್ಲ. ಅವನ ಬಗ್ಗೆ ತಪ್ಪು ಹೇಳಲಿಲ್ಲ. ಸುಳ್ಳೇ ಯಾಕೆ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತೀ? ಸತ್ತುಹೋದ ಅಂದಕೂಡಲೇ ಯಾರೂ ಸಾಯುವುದಿಲ್ಲ. ಮರೆತುಬಿಡು ಈ ಅಗರವಾಲನನ್ನು, ಅವನು ಅಂದದ್ದನ್ನು. ಖಿhis bಡಿooಜiಟಿg is bಚಿಜ ಜಿoಡಿ ಥಿouಡಿ heಚಿಟಣh. ಕರುಣಾಕರನ್ ಬಂದ: ನಿನ್ನ ಮನಸ್ಸನ್ನು ವ್ಯಾಪಿಸಿ ಕುಳಿತುಬಿಟ್ಟ. ವಾಸುದೇವನ್ ಬಂದ: ತನ್ನ ಬಗೆಗೇ ಚಿಂತೆಗೊಳ್ಳುವಂತೆ ಮಾಡಿ ಹೋದ. ಈಗ ಅವರಿಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದ ಕೂಡಲೇ ಈ ಅಗರವಾಲ! ಹೀಗೆ ಯಾಕೆ ಆಗುತ್ತದೆಯೆಂದರೆ: ಅವರು ವ್ಯಕ್ತಿಗಳಾಗಿರುವುದನ್ನು ನಿಲ್ಲಿಸಿ ಕೇವಲ ಸಂಕೇತಗಳಾಗುತ್ತಿದ್ದಾರೆ, ಆಗಿ ಹೆದರಿಸುತ್ತಿದ್ದಾರೆ. ಹಾಗೆ ಆಗಲು ನಾವು ಬಿಡಬಾರದು. ಇನ್ನೊಂದು ಮಾತು-ಇದನ್ನು ಮನೋವಿಜ್ಞಾನವೆಂದು ತಳ್ಳಿಹಾಕಬೇಡ: ಎಲ್ಲಿಯವರೆಗೆ ನಾವು ವಾಸ್ತವವನ್ನು ವಾಸ್ತವವಾಗಿಯೆ ಗ್ರಹಿಸುತ್ತೇವೋ ಅಲ್ಲಿಯವರೆಗೆ ನಾವು ಅದನ್ನು ಸುಲಭವಾಗಿ ಎದುರಿಸಬಲ್ಲೆವು. ಅಂಥ ಶಕ್ತಿ ಮನುಷ್ಯನಿಗೆ ಇದೆ. ಎಲ್ಲ ಪ್ರಾಣಿಗಳ ಹಾಗೆಯೇ ಅವನಿಗೆ ಅದು ನಿಸರ್ಗದತ್ತವಾದದ್ದು.” ಶಿರೀನಳಿಗೆ ತನ್ನ ಮಾತುಗಳಿಂದ ಬಂದ ಭಾಷಣದ ಧಾಟಿಯ ಅರಿವು ಇದ್ದರೂ ಈ ಸಂದರ್ಭದಲ್ಲಿ ಅದು ತಪ್ಪೆಂದು ತೋರಲಿಲ್ಲ: “ಅಗರವಾಲ ಇದನ್ನೆಲ್ಲ ಹಣದ ಆಸೆಗಾಗಿ ಮಾಡುತ್ತಿದ್ದಾನೆ ಎಂದು ನಮ್ಮ ಮುಂದೆ ಆಡಿ ತೋರಿಸಿದೆ. ಇದು ಅವನ ಮೇಲೆ ಮಾಡಿದ ಮಿಥ್ಯಾ ಆರೋಪ ಆಗಿರಬಹುದೇ ಎಂಬುದು ನಿನ್ನ ಕೊರಗು. ಹಾಗೆ ಆಗಿದ್ದೇ ಆದರೆ ಅದೇನು ಅಗರವಾಲನ ಸಾವು-ಬದುಕಿನ ಪ್ರಶ್ನೆಯಲ್ಲ. ಒಂದು ವಿಶೇಷ ಸಂದರ್ಭದಲ್ಲಿ ನಿನಗೆ ಹಾಗೆ ಅನ್ನಿಸಿತು, ತಟಕ್ಕನೆ ಆಡಿ ತೋರಿಸಿದೆ. ಅಲ್ಲವೆಂದು ಗೊತ್ತಾದಾಗ, ‘ಕ್ಷಮಿಸು, ನಾನು ತಪ್ಪು ತಿಳಿದೆ,’ ಎನ್ನಲು ಬೇಕಾದ ಧೈರ್‍ಯ ನಮ್ಮಲ್ಲಿರಬೇಕು. ನನಗೆ ಈ ಅಗರವಾಲನ ಬಗ್ಗೆ ಸಿಟ್ಟು ಇದ್ದರೆ ಅದು ಈ ಕಾರಣಕ್ಕಾಗಿಯೆ: ಈವರೆಗೂ ಅವನು ತನ್ನ ದುಷ್ಟ ಮಾತಿನ ಬಗ್ಗೆ ನಿನ್ನಲ್ಲಿ ಕ್ಷಮೆ ಕೇಳದೇ ಇದ್ದುದಕ್ಕೆ ಅವನ ನೈತಿಕರಚನೆಯಲ್ಲೇ ಎಂತಹದೋ ದೋಷವಿದ್ದಂತಿದೆ…ಸದ್ಯ ಅದನ್ನೆಲ್ಲ ಮರೆತುಬಿಡೋಣ. ಇಂಥ ಸುಂದರವಾದ ಸಂಜೆಯನ್ನು ಎಲ್ಲರನ್ನು ಬಿಟ್ಟು ಅಗರವಾಲನ ಮೇಲೆ ಹಾಳುಮಾಡುವುದು ಬೇಡ. ಪ್ಲೀಜ್…” ತನ್ನ ಮಾತು ಮುಗಿದಕೂಡಲೇ, ಅಮ್ಮ ಏನೋ ಮಾತನಾಡಲು ಹವಣಿಸುತ್ತಿದ್ದುದನ್ನು ಗಮನಿಸಿದ ಶಿರೀನ್ ಕಣ್ಣಿನಿಂದಲೇ ಬೇಡ ಎನ್ನುವಂತೆ ಸನ್ನೆ ಮಾಡಿದಳು. ಮನೆ ತಲುಪುವತನಕ ತಿರುಗಿ ಯಾರೂ ಮಾತನಾಡಲಿಲ್ಲ. ಡಬ್ಬಿಯ ಇನ್ನೊಂದು ಮೂಲೆಯಲ್ಲಿ ಮಾತ್ರ ಮಕ್ಕಳ ಗದ್ದಲ ನಡೆದೇ ಇತ್ತು.

ಮುಂದಿನ ಎರಡು ದಿನಗಳಲ್ಲಿ ಬೆಹರಾಮನ ಮನೆಯಲ್ಲಿ ಬದುಕು ಕ್ರಮೇಣ ತನ್ನ ಮಾಮೂಲು ಸ್ವರೂಪಕ್ಕೆ ಹಿಂತಿರುಗತೊಡಗಿತ್ತು. ಬೆಹರಾಮ್ ಎಂದಿನಂತೆ ಹೊತ್ತಿಗೆ ಸರಿಯಾಗಿ ಆಫೀಸಿಗೆ ಹೋಗತೊಡಗಿದ್ದ. ಮಗಳ, ಮೊಮ್ಮಕ್ಕಳ ಸಹವಾಸದಲ್ಲಿ ಕಾಲಕಳೆಯಲೆಂದೇ ಎಂಬಂತೆ ಹೊತ್ತಿಗೆ ಮೊದಲೇ ಆಫೀಸಿನಿಂದ ಹಿಂತಿರುಗಿ ಬಂದಿದ್ದ. ಬರುವಾಗ ಮೊಮ್ಮಕ್ಕಳ ಸಲುವಾಗಿ ಕ್ಯಾಡ್‌ಬರೀ ಚಾಕಲೇಟ್ಸ್ ತಂದಿದ್ದ. ಹಿಂದೆ ಎಂದೂ ಮಾಡಿರದ ಹಾಗೆ ಅವುಗಳ ಜೊತೆಯಲ್ಲಿ ಆಡಿದ್ದ. “ಅಪ್ಪಾ, ಇದು ನಿನ್ನ ವಿಶ್ರಾಂತಿಯ ದಿನಗಳ ನಿಜವಾದ ತಾಲೀಮು,” ಎಂದು ಚೇಷ್ಟೆಯ ಮಾತನಾಡಿ ಅಪ್ಪನನ್ನು ನಗಿಸಲು ಪ್ರಯತ್ನ ಮಾಡಿದ ಶಿರೀನ್ ಸ್ವತಃ ತಾನೇ ನಗದಾದಳು: ಬೋರಿವ್ಲಿಗೆ ಹೋಗಿ ಬಂದಂದಿನಿಂದ ಅಗರವಾಲನ ಹೆಸರು ಒಮ್ಮೆಯೂ ಯಾರೊಬ್ಬರ ಬಾಯಲ್ಲಿ ತಪ್ಪಿ ಕೂಡ ಬಂದಿರಲಿಲ್ಲ. ಇದು ಸಹಜವಾದುದಲ್ಲ ಎಂಬ ಅರಿವು ಅವಳಿಗೆ ಇದ್ದೇ ಇತ್ತು: ತಾವೇ ಪ್ರಯತ್ನಪೂರ್ವಕವಾಗಿ ಹುಟ್ಟಿಸಿಕೊಂಡ ಈ ಸನ್ನಿವೇಶ ಬಹಳ ಕಾಲ ಬಾಳುವಂತಹದಲ್ಲವೇನೋ ಎಂಬ ಅಳುಕೂ ಅವಳನ್ನು ಕಾಡಿತ್ತು: ಮುಂಬಯಿಯ ಹೊರಗೆ ಹೋದ ಅಗರವಾಲ ಹಿಂತಿರುಗಿ ಬಂದಕೂಡಲೇ ಅಪ್ಪನಿಗೆ ಫೋನ್ ಮಾಡದೇ ಇರಲಾರ. ಕರುಣಾಕರನ್-ವಾಸುದೇವನ್ ನಾಟಕದ ಉದ್ದಕ್ಕೂ ಎಲ್ಲೋ ಹಿನ್ನೆಲೆಯಲ್ಲಿ ಈ ಅಗರವಾಲ ಇದ್ದೇ ಇದ್ದಿರಬೇಕು; ಅಪ್ಪನ ವರ್ತನೆಯ ಆಕೃತಿಯನ್ನು ಈ ಅಸ್ತಿತ್ವ ನಿರ್ಧರಿಸುತ್ತಿರಬೇಕು; ಮೊದಲಿನಿಂದಲೂ ಅಪ್ಪ ಒಳಗೊಳಗೇ ಈ ಮುಖಾಮುಖಿಗೆ ಸಿದ್ಧವಾಗುತ್ತಿದ್ದಿರಬೇಕು: ತಾನಾಗಲೀ ಅಮ್ಮನಾಗಲೀ ಬರಿಯೆ ಬಾಯಿಂದ ಆಡಿದ ಮಾತುಗಳಿಂದ ಇದನ್ನು ತಪ್ಪಿಸಲಾರೆವೇನೋ ಅನ್ನಿಸಿತು. ಈ ವಾಗ್‌ಯುದ್ಧ ನಡೆದುಹೋಗುವುದೇ ಒಳ್ಳೆಯದು. ಎಲ್ಲವೂ ಒಮ್ಮೆ ಮಾತಿನಲ್ಲಿ ಹೊರಗೆ ಬಂದರೆ ಮನಸ್ಸು ನಿರಾಳವಾದೀತು. ಕಳೆದ ಮೂರು ವರ್ಷಗಳಿಂದಲೂ ಅಗರವಾಲನ ಬಗ್ಗೆ ಅರಿಯದೇನೆ ತಳೆದಿರಬಹುದಾದ ದ್ವೇಷಕ್ಕೆ ಒಂದು ನಿಲುಗಡೆ ದೊರಕಿತು: ಈ ವಿಚಾರಸರಣಿಯ ಹಿಂದಿನ ಧೈರ್ಯ, ಕೊನೆಗೂ ಈ ಮುಖಾಮುಖಿ ನಡೆಯುವುದು ಟೆಲಿಫೋನ್ ಮೇಲೆ ತಾನೆ ಎಂಬ ಭಾವನೆಯಲ್ಲಿ ಹುಟ್ಟಿದ್ದೆಂದು ಶಿರೀನಳ ಅರಿವಿಗೆ ಬಂದಕೂಡಲೇ ತನ್ನ ಪುಕ್ಕತನದ ಬಗ್ಗೆ ಒಳಗೊಳಗೇ ನಗು ಬಂತು. ಅದೇ ಹೊತ್ತಿಗೆ, ಸದ್ಯಕ್ಕಂತೂ ಮನೆಯಲ್ಲಿ ಶಾಂತಿಯಿದೆ, ಸಾಕು; ಮುಂದಿನದು ಮುಂದೆ-ಅಗರವಾಲ ಫೋನ್ ಮಾಡಿದಾಗ, ಎಂದುಕೊಂಡು ಸಮಾಧಾನ ತಂದುಕೊಂಡಳು. ಆದರೆ ಈ ಸಮಾಧಾನಕ್ಕೆ ಭಂಗ ತರುವಂಥ ಘಟನೆ ಅವಳು ನಿರೀಕ್ಷಿಸಿದ್ದಕ್ಕಿಂತ ಬಹಳ ಬೇಗ-ಅವಳು ಹೀಗೆಲ್ಲ ಯೋಚಿಸಿಕೊಂಡಂಥ ರಾತ್ರಿಯೇ-ನಡೆದುಹೋದಂತಿತ್ತು. ಅವಳಿಗೆ ಗೊತ್ತಾದದ್ದು ಮಾತ್ರ ಮರುದಿವಸದ ಮುಂಜಾವದಲ್ಲಿ, ಅಂದಿನ ಪತ್ರಿಕೆ ಕೈಗೆ ಸಿಕ್ಕಮೇಲೆ: ಮುಖಪುಟದ ಮೇಲೆಯೇ ವರದಿಯಾದ ಕೊಲೆ ಲಕ್ಷ್ಯಕ್ಕೆ ಬಂದದ್ದು ಎಲ್ಲರಿಗಿಂತ ಮೊದಲು ಪತ್ರಿಕೆಯನ್ನು ಕೈಗೆತ್ತಿಕೊಂಡ ಬೆಹರಾಮನಿಗೇ! ಈ ಕೊಲೆ ಕೆಲವು ತಿಂಗಳ ಹಿಂದೆ ನಡೆದ ರದ್ದೀವಾಲಾನ ಕೊಲೆಗೆ ಸಂಬಂಧಪಟ್ಟದ್ದಂತೆ! ಮೂರು ವರ್ಷಗಳ ಹಿಂದಿನ ಕೊಲೆಯದೇ ನೆನಪು ತರುತ್ತ ಅದಕ್ಕೂ ಭೀಕರವಾದದ್ದಂತೆ! ಡೊಂಬಿವ್ಲಿಯ ಹತ್ತಿರ ಈಗ ಸಿಕ್ಕಿದ್ದು ತಲೆಯಾಗಲೀ ಕೈಕಾಲುಗಳಾಗಲೀ ಇಲ್ಲದ ಬರಿಯ ಮುಂಡ ಮಾತ್ರವಂತೆ! ಕಳುವು ಇಲ್ಲವೆ ತನಗೆ ಆಗದವನ ಮೇಲಿನ ಹಗೆ ತೀರಿಸಿಕೊಳ್ಳುವ ಉದ್ದೇಶದಿಂದ ಮಾಡಿದ ಕೊಲೆಯ ಪರಿಯಲ್ಲವಂತೆ ಇದು. ಕೈಗೆ ಸಿಕ್ಕಿರದ ಇನ್ನಾರಿಗೋ ಎಚ್ಚರಿಕೆ ನೀಡುವ ಘೋರ ರೀತಿಯದು ಎಂದು ವರದಿಗಾರನ ಜಾಣತನದ ಹೇಳಿಕೆ: ಸುದ್ದಿಯನ್ನು ಓದುತ್ತಿದ್ದಹಾಗೆ ಪ್ರಕ್ಷುಬ್ಧನಾದ ಬೆಹರಾಮ್-ಒಳಗೆಲ್ಲೋ ಕೆಲಸದಲ್ಲಿದ್ದ ಹೆಂಡತಿ-ಮಗಳನ್ನು ಹೊರಗೆ ಕರೆದು: “ಓದಿ. ಓದಿ ನೋಡಿ. ಈಗ ಅಗರವಾಲನ ಕರಾಮತಿ ಇದು. I ಛಿಚಿಟಿ ಣಚಿಞe ಚಿ beಣ-ಪತ್ರಿಕೆಯಲ್ಲಿಯ ಜಾಹೀರಾತಿನ ಫಲವಿದು. ಕೊಲೆ ಮಾಡಿದವನು ಎಚ್ಚರಿಕೆ ಕೊಡುತ್ತಿದ್ದುದು ಈ ಆಸೆಬುರುಕ ಅಗರವಾಲನಿಗೆ,” ಎಂದು ಹಾರಾಡಿದ.
“ನಮ್ಮ ಕರುಣಾಕರನ್ ಅಲ್ಲ ತಾನೆ!” ಭಯಗ್ರಸ್ತ ಶಿರೀನಳ ಬಾಯಿಂದ ತಂತಾನೆ ಹೊರಟಂತಿದ್ದ ಉದ್ಗಾರ ಕಿವಿಯಮೇಲೆ ಬಿದ್ದದ್ದೇ ತಡ: ಬೆಹರಾಮ ಸೀದಾ ಟೆಲಿಫೋನಿಗೆ ನಡೆದ. ತನಗೆ ಬೇಕಾದ ನಂಬರ್ ಸಿಗುತ್ತಲೇ-“ಗೌರೀ-ಗೌರೀಪ್ರಸಾದ ಅಗರವಾಲ್-ಅಗರವಾಲ್. ನಾನು ಬೆಹರಾಮ್, ಬೆಹರಾಮ್ ಪೋಚಖಾನಾವಾಲಾ, ಬಾಂದ್ರಾದಿಂದ ಮಾತಾಡ್ತಾ ಇದೇನೆ. ಇಂದಿನ ಪತ್ರಿಕೆ ಓದಿದೆಯೇನ್…” ಆ ಬದಿಯ ದನಿ ಏನೋ ಹೇಳಲು ಪ್ರಯತ್ನಿಸುತ್ತಿತ್ತು. ಆದರೆ ಬೆಹರಾಮ್ ಅದನ್ನು ಕೇಳಿಕೊಳ್ಳುವ, ತಿಳಿದುಕೊಳ್ಳುವ ಸ್ಥಿತಿಯಲ್ಲೇ ಇರಲಿಲ್ಲ. ಸಿಟ್ಟಿನ ಭರದಲ್ಲಿ ಅವನು ಆಡಿದ ಮಾತುಗಳು ಹತ್ತಿರ ನಿಂತ ಶಿರೀನಳಿಗೂ ಸ್ಪಷ್ಟವಾಗಿರಲಿಲ್ಲ. ಅಪ್ಪನ ಮೋರೆಯನ್ನು ನೋಡಿಯೆ ಹೆದರಿದ ಅವಳು ಸರಕ್ಕನೆ ಟೆಲಿಫೋನ್ ರಿಸೀವರ್ ಅನ್ನು ಅಪ್ಪನ ಕೈಯಿಂದ ಕಸಿದುಕೊಂಡು ಕಿವಿಗೆ ಹಚ್ಚಿದಾಗ ಆ ಬದಿಯಿಂದ ಬಂದ ಹೆಣ್ಣು ದನಿ ಕೇಳಿಸಿತು: “ಅಗರವಾಲ ಮನೆಯಲ್ಲಿಲ್ಲ. ನಾಳೆ ಬರಬಹುದು. ನಿಮ್ಮ ಹೆಸರು, ಟೆಲಿಫೋನ್ ನಂಬರ್ ಕೊಡಿ. ಬಂದಕೂಡಲೇ ಫೋನ್ ಮಾಡಲು ಹೇಳುತ್ತೇನೆ.” ಶಿರೀನ್ ಅಪ್ಪನ ವತಿಯಿಂದ ಕ್ಷಮೆ ಕೇಳಿ, ಟೆಲಿಫೋನ್ ನಂಬರ್ ಕೊಟ್ಟು, “ಬೆಹರಾಮ ಪೋಚಖಾನಾವಾಲಾ ಬಾಂದ್ರಾದಿಂದ ಫೋನ್ ಮಾಡಿದ್ದರು ಎಂದು ಹೇಳಿ,” ಎಂದು ಟೆಲಿಫೋನ್ ಕೆಳಗಿಟ್ಟಳು.

ಉದ್ಭವಿಸಿದ ಹೊಸ ಪರಿಸ್ಥಿತಿಯಿಂದ ಸುಧಾರಿಸಿಕೊಳ್ಳಲು ಬೆಹರಾಮನಿಗೆ ಬಹಳ ಹೊತ್ತು ಹಿಡಿಯಿತು. ಆದರೆ ಯಾರೊಡನೆಯೂ ಬಹಳ ಮಾತನಾಡದಾದ. ಅಂದು ಬೆಳಗಿನ ಅವನ ಎಲ್ಲ ಚಟುವಟಿಕೆಗಳೂ ಒಂದು ಬಗೆಯ ಅವುಡು ಕಚ್ಚಿಹಿಡಿದ ಮೌನದಲ್ಲಿ ನಡೆದಂತಿದ್ದುವು. ಕರುಣಾಕರನ್ನನ ಹೆಸರು ಉಚ್ಚರಿಸಿದ್ದೇ ತಪ್ಪಾಯಿತೇನೋ ಅನ್ನಿಸಿತು ಶಿರೀನಳಿಗೆ: ತಾಯಿಯ ಮುಂದೆ ಮತ್ತೆಮತ್ತೆ ಹೇಳಿ ಹಳಹಳಿಸಿದಳು. ಪ್ರಜ್ಞಾಪೂರ್ವಕ ಆಡಿದ ಮಾತೇ ಅಲ್ಲವಾಗಿತ್ತು ಅದು. ಅಪ್ಪನ ಮೇಲೆ ಅದು ಮಾಡಿದ ಪರಿಣಾಮದಿಂದಂತೂ ತನ್ನ ಮೇಲೆ ತನಗೇ ಕನಿಕರ ಹುಟ್ಟುವಂತಾಯಿತು. ಈಗ ವಿಚಾರಮಾಡಿದಾಗ ತೋರಿತು: ಅಪ್ಪ ಸಂಶಯಪಟ್ಟಹಾಗೆ ಈ ಬೀಭತ್ಸ ಕೊಲೆ ಅಗರವಾಲನಿಗೆ, ಅವನು ಪ್ರಕಟಿಸುತ್ತೇನೆ ಎಂದು ಜಾಹೀರುಪಡಿಸಿದ ರಿಪೋರ್ಟಿಗೆ ಸಂಬಂಧಪಟ್ಟವರಿಗೆ ನೀಡಿದ ಇಷಾರೆಯಾಗಿದೆ: ತನ್ನ ಊಹೆಯಿಂದಲೇ ಶಿರೀನಳಿಗೆ ಹೊಟ್ಟೆ ಹೊರಳಿದಂತಾಯಿತು. ಕೆಲಹೊತ್ತಿನಮೇಲೆ, ಈ ಊಹೆ ಸರಿಯಿರಲಿ ತಪ್ಪಿರಲಿ, ಅಪ್ಪನ ಪಾಲಿಗೆ ಅಗರವಾಲ ಈಗ ಕೇವಲ ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ ಅನ್ನಿಸಿತು. ಬಹುಶಃ ಮೊದಲಿನಿಂದಲೂ ಆಗಿರಲಿಲ್ಲವೇನೋ: ಅಂತಃಕರಣವನ್ನು ತಟ್ಟಿದ ಅನ್ನುವಷ್ಟರಲ್ಲಿ ಅಪಮಾನಗೊಳಿಸುತ್ತಾನೆ. ಅಪಮಾನವನ್ನೂ ಮರೆಯಲು ಹಚ್ಚಿದ ಆರ್ತಸ್ಥಿತಿಯಲ್ಲಿ ಹತ್ತಿರ ಹೋದರೇ ನಿರ್ದಯವಾಗಿ ಧಿಕ್ಕರಿಸುತ್ತಾನೆ. ಒಮ್ಮೆ ಒಂದು ಇನ್ನೊಮ್ಮೆ ಮತ್ತೊಂದೇ ಆಗುವ ಈತ ಅಪ್ಪನ ಭಾವನೆಗಳಲ್ಲಿ ಇಡಿಯಾಗಲಾರನೇನೋ! ಹಾಗೆ ಆದ ಇತರರೊಡನೆ ಜೊತೆಗೂಡಲಾರನೇನೋ! ಅಪ್ಪ ಸೇವಾನಿವೃತ್ತನಾಗುವ ಎರಡೇ ತಿಂಗಳ ಮೊದಲು ಇದೆಲ್ಲ ಆಗುತ್ತಿದ್ದುದು ಕೇವಲ ಆಕಸ್ಮಿಕವೇನೋ! ಯಾವುದೇ ತೀರ್ಮಾನಕ್ಕೆ ಬರಲು ಅಸಮರ್ಥವಾದ ವಿಚಾರಸರಣಿಯಿಂದ ಶಿರೀನಳಿಗೆ ಕುಳಿತಲ್ಲೇ ದಣಿವಾಗತೊಡಗಿತು: ಆಗಿನಿಂದಲೂ ಅಪ್ಪ-ಅಮ್ಮ-ತಾನು ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದವರ ಹಾಗೆ ನಡೆದುಕೊಳ್ಳುತ್ತಿದ್ದ ರೀತಿಗೆ ಅವಳಿಗೆ ಅಳು ಬರುವಂತಾಯಿತು: “ಅಮ್ಮಾ, ಸಂಜೆ ಎಲ್ಲರೂ ಕೂಡಿ ಯಾವುದಾದರೂ ಸಿನೇಮಾಕ್ಕೆ ಹೋಗಿಬರೋಣ. ಇಡಿಯ ದಿನ ಹೀಗೆ ಕಳೆಯುವಂತಾದರೆ ನನಗೆ ಹುಚ್ಚು ಹಿಡಿಯುವುದು ನಿಶ್ಚಿತ,” ಎಂದಳು. ಮಗಳ ದನಿಯಲ್ಲಿ ಅಳು ಸೇರಿಕೊಂಡದ್ದನ್ನು ನೋಡಿ “ಛೀ ತೆಗೆ! ಅಪ್ಪ ಊಟಕ್ಕೆ ಸಿದ್ಧವಾಗುವಷ್ಟರಲ್ಲಿ ತಿಳಿಯಾಗಿರುತ್ತಾನೆ. ಅಪ್ಪನಂಥ ಮನುಷ್ಯನಿಗೆ ಕೆಲಸ ಬಿಟ್ಟು ಉಳಿಯುವುದು ಶಕ್ಯವೇ ಇಲ್ಲ. ಕ್ರಮೇಣ ಕಲಿತಾನು. ನೀನೇ ಹೇಳು, ಸಿನೇಮಾಕ್ಕೆ ಹೋಗುವ ವಿಚಾರ ಒಪ್ಪದೇ ಇರಲಿಕ್ಕಿಲ್ಲ. ಹೇಗೂ ಈಹೊತ್ತು ಆಫೀಸಿಗೆ ಹೋಗುವುದಿಲ್ಲವಂತೆ. ಇಷ್ಟೇ: ಸರಕ್ಕನೆ ನೀನು ಬಾಯಿಂದ ಆಡಿ ಹೋದ ಹಾಗೆ…” ಶಿರೀನಳ ತಾಯಿ ಅರ್ಧಕ್ಕೇ ತಡೆದಳು: ‘ಕೊಲೆಯಾದವನು ಕರುಣಾಕರನ್ ಇಲ್ಲವೆ ವಾಸುದೇವನ್ ಅಲ್ಲದಿದ್ದರೆ ಸಾಕು,’ ಎನ್ನಲು ಹೋದವಳಿಗೆ, ಅವರು ಕೈಗೆ ಸಿಕ್ಕಿರದ ಕಾರಣಕ್ಕಾಗಿಯೇ ಇದಾವುದಕ್ಕೂ ಸಂಬಂಧವೇ ಇಲ್ಲದ ನಿಷ್ಪಾಪ ಮೂರನೆಯವನೇ ಬಲಿಯಾಗಿರಬಹುದೇ ಎಂಬ ಅನುಮಾನ ಮನಸ್ಸನ್ನು ತಟ್ಟಿಹೋದಾಗ ಬಾಯಲ್ಲಿ ಮೊಳೆಯತೊಡಗಿದ ವಾಕ್ಯ ಪೂರ್ಣವಾಗದಾಯಿತು.

ತಾಯಿ-ಮಗಳು ಮಾತನಾಡಿಕೊಳ್ಳುತ್ತಿದ್ದುದನ್ನು ಚಾಚೂ ತಪ್ಪದೇ ಕೇಳಿಕೊಂಡವನ ಹಾಗೆ-“ಸಂಜೆ ಯಾವುದಾದರೂ ಸಿನೇಮಾಕ್ಕೆ ಹೋಗೋಣ. ನಾಳೆ ಅಗರವಾಲ ತಾನಾಗಿಯೇ ಫೋನ್ ಮಾಡಿದರೆ-ಮಾಡಿದರೆ ಮಾತ್ರ-ಸಾಫ್‌ಸಾಫ್ ಕೇಳಿಬಿಡುತ್ತೇನೆ. ಹೇಳಿದನೇ ಸರಿ. ನಾನು ಊಹಿಸಿಕೊಂಡದ್ದೆಲ್ಲ ತಪ್ಪು ಎಂದು ತಿಳಿದುಬಂದರೆ ಯಾವ ದಾಕ್ಷಿಣ್ಯವೂ ಇಲ್ಲದೇನೆ ಅವನಲ್ಲಿ ಕ್ಷಮೆ ಬೇಡುತ್ತೇನೆ. ಹೀಗೆ ಬರಿಯ ಗಾಳಿಯನ್ನು ಕಡೆದು ಏನೂ ಹುಟ್ಟಿಸಲಾರೆವು: ಊಹೆ-ತರ್ಕ-ಭಯ-ನೋವು! ಸಾಕಾಯ್ತು. ಊಟಕ್ಕೆ ಸಿದ್ಧವಾಗುವಷ್ಟರಲ್ಲಿ ‘ಬಾಂದ್ರಾ ಟಾಕೀಜ್’ನಲ್ಲಿ ಸಂಜೆಯ ‘ಶೋ’ಕ್ಕೆ ಟಿಕೆಟ್ಟುಗಳನ್ನು ಕೊಂಡುಬರುತ್ತೇನೆ. ತುಸು ಅಡ್ಡಾಡಿ ಬಂದಹಾಗೆಯೂ ಆಯಿತು,” ಎಂದ.

ಅಪ್ಪನ ಮಾತು ಕೇಳುತ್ತಿದ್ದವನಹಾಗೆ ಶಿರೀನಳಿಗೆ ಧೈರ್ಯ ಮೊಳೆಯಹತ್ತಿತು. ಕೊನೆಗೂ ಇವರೆಲ್ಲ ಯಾರು? ಕರುಣಾಕರನ್: ಕೆಲವೇ ತಾಸುಗಳ ಆಗಂತುಕ! ವಾಸುದೇವನ್: ತಮ್ಮಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಹೋದಂದಿನಿಂದ ಮತ್ತೆ ಮೋರೆ ತೋರಿಸಿರದವನು! ಅಗರವಾಲ್: ಹಲವು ವರ್ಷಗಳವರೆಗೆ ಜೊತೆಯಲ್ಲಿ ಕೆಲಸ ಮಾಡಿಯೂ ಅಪ್ಪನನ್ನು ಹಚ್ಚಿಕೊಂಡಿರದವನು, ಲಂಚ ಕೊಡುವ ಮಾತನಾಡಿ ಅಪಮಾನಗೊಳಿಸಲೂ ಹಿಂದೆಗೆಯದವನು! ಅಪ್ಪ ತಾನಾಗಿಯೇ ಮನಗಂಡದ್ದು ಒಳ್ಳೆಯದಾಯಿತು. ಆಗ ಅಗರವಾಲನ ಮನೆಯವರಿಗೆ ತಮ್ಮ ಹೆಸರು, ಫೋನ್ ನಂಬರ್ ಹೇಳಲೇ ಬಾರದಿತ್ತೇನೋ. ಅಗರವಾಲ ಫೋನ್ ಮಾಡಲಾರ. ಮಾಡದಿದ್ದರೆ ಸಾಕು. ದೇವರೇ, ಅವನು ಮಾಡದಿರಲಿ…

ಈ ಸಾರೆ ಶಿರೀನಳ ಪ್ರಾರ್ಥನೆ ಫಲಿಸಲಿಲ್ಲ: ರಾತ್ರಿ, ಸಿನೇಮಾ ನೋಡಿ ಬಂದು ಮನೆಗೆ ಹೋಗುತ್ತಿರುವಾಗಲೇ ಟೆಲಿಫೋನ್ ಗಂಟೆ ಅವರನ್ನು ಸ್ವಾಗತಿಸಿತ್ತು. ಆಗ ೯-೩೦ ಗಂಟೆ ಆಗುತ್ತ ಬಂದಿತ್ತು. ಎಲ್ಲರಿಗಿಂತ ಮೊದಲು ಮನೆ ಹೊಕ್ಕ ಶಿರೀನಳೇ ಓಡೋಡಿ ಬರುವಷ್ಟರಲ್ಲಿ ಗಂಟೆ ಬಾರಿಸುವುದು ಒಮ್ಮೆಲೇ ನಿಂತುಬಿಟ್ಟಿತ್ತು. ಅಗರವಾಲನದಿರಬಹುದೆ? ಎಂಬ ಸಂಶಯದಿಂದ ಮೈತುಂಬ ತಣ್ಣಗಿನದೇನೋ ಹರಿದ ಅನುಭವವಾಯಿತು. ತಮ್ಮ ಬೆಳಗಿನ ನಿಶ್ಚಯ ಕೊನೆಗೂ ತಾನು ತಿಳಕೊಂಡಷ್ಟು ಗಟ್ಟಿಯಾದದ್ದಲ್ಲವೇನೋ ಅನ್ನಿಸಿದಾಗ-ಯಾಕೆ ಈ ಅಗರವಾಲನಿಗೆ ಇಷ್ಟೊಂದು ಹೆದರಿಕೊಂಡಿದ್ದೇವೆ? ಅವನು ಕಣ್ಣೆದುರಿಗೆ ಇಲ್ಲವೆಂದೆ?-ಆಶ್ಚರ್ಯವಾಯಿತು. ಇತ್ತ, ಬೆಹರಾಮನ ಮನಸ್ಸಿನಲ್ಲೂ ಇದೇ ವಿಚಾರ ಹಾದುಹೋಗಿತ್ತು: ಟೆಲಿಫೋನ್ ಕರೆ ನಾಳೆ ಬರಬಹುದೆಂದು ತಿಳಿದು ನಿರ್ಧಾಸ್ತವಾದವನ ಮನಸ್ಸು ಅಗರವಾಲನನ್ನು ಕೂಡಲೇ ಇದಿರಿಸಲು ಸಿದ್ಧವಾಗಿರಲಿಲ್ಲ. ತಪ್ಪು ಕರೆಯೇನ್ನೋ ಎಂದುಕೊಂಡು ಬಟ್ಟೆ ಬದಲಿಸಲು ಒಳಗೆ ಹೋಗುವಷ್ಟರಲ್ಲಿ ಟೆಲಿಫೋನ್ ಗಂಟೆ ಮತ್ತೆ ಕಿರುಚತೊಡಗಿತು. ಈ ಸಾರೆ ಶಿರೀನಳ ತಾಯಿ ರಿಸೀವರನ್ನು ಎತ್ತಿ ಕಿವಿಗೆ ಹಚ್ಚುತ್ತಲೇ ಆ ಬದಿಯಿಂದ ಬಂದ ಗಂಡುದನಿ ಸ್ಪಷ್ಟವಾಗಿ: “ನಾನು ಅಗರವಾಲ. ಪೋಚಖಾನಾವಾಲಾ ಫೋನ್ ಮಾಡಿದ್ದರಂತೆ. ಇದ್ದಾರೆಯೆ?” ಎಂದು ಕೇಳಿತು. “ಇದ್ದಾರೆ. ತುಸು ನಿಲ್ಲಿ, ಕರೆಯುತ್ತೇನೆ,” ಎಂದು ಹೇಳಿದ ಮುದುಕಿ, ಗಂಡನತ್ತ ತಿರುಗಿ “ಇಕೋ! ಅಗರವಾಲನ ಫೋನ್. ಈಹೊತ್ತೇ ಬಂದದ್ದು ಒಳ್ಳೆಯದಾಯಿತು. ಮನಸ್ಸಿನೊಳಗಿನ ಎಲ್ಲ ಸಂಶಯಗಳನ್ನೂ ದೂರ ಮಾಡಿಕೊ. ಆದರೆ ಜಗಳ ಬೇಡ,” ಎನ್ನುತ್ತ ಟೆಲಿಫೋನ್ ರಿಸೀವರ್ ಅನ್ನು ಗಂಡನ ಕೈಗೆ ಕೊಡಲು ಕಾದು ನಿಂತಳು. ಶಾಂತ, ಮೆತ್ತಗಿನ ಸ್ವಭಾವದ ಗಂಡ ಟೆಲಿಫೋನ್ ಮೇಲಾಗಲಿ ಖುದ್ದು ಸಂಭಾಷಣೆಯಲ್ಲಾಗಲಿ ಯಾರ ಮೇಲೂ ಹರಿಹಾಯ್ದವನಲ್ಲ. ಆದರೆ ಇತ್ತಿತ್ತ ಅಗರವಾಲನ ಹೆಸರೇ ಸಿಟ್ಟಿಗೆ ಕಾರಣವಾಗುತ್ತಿದ್ದುದನ್ನು ನೆನೆದು ಈ ಎಚ್ಚರಿಕೆ ನೀಡಿದ್ದಳು.

ಬೆಹರಾಮ್ ಅದೇ ಬೂಟು ಕಳಚುವ ಸಿದ್ಧತೆಯಲ್ಲಿದ್ದ. ಅರ್ಧಕ್ಕೇ ತಡೆದು ನಿಧಾನವಾಗಿ ಟೆಲಿಫೋನ್ ಇಟ್ಟಲ್ಲಿಗೆ ಬಂದು, ಹೆಂಡತಿಯ ಕೈಯಿಂದ ರಿಸೀವರ್ ಇಸಕೊಂಡು ಸೀಟಿನ ಮೇಲೆ ಕುಳಿತುಕೊಂಡ. ಹೆಂಡತಿಗೆ ಒಂದು ಗ್ಲಾಸು ನೀರು ಬೇಕೆಂದು ಸನ್ನೆಮಾಡಿದ. ಕಾತರ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದ ಮಗಳ ಕಡೆಗೆ ಹೆದರಬೇಡ ಎನ್ನುವಂತಹ ದೃಷ್ಟಿ ಬೀರಿದ. ಟೆಲಿಫೋನ್ ಮೇಲೆ ಮಾತನಾಡುವಾಗ ಇಷ್ಟೊಂದು ಬೆಳಕು ಯಾಕೆ ಎಂದುಕೊಂಡವನಹಾಗೆ ಹತ್ತಿರದ ಸ್ವಿಚ್ ಅನ್ನು ಒತ್ತಿ ಬೆಳಕು ಆರಿಸಿದ. ಹಾಲಿಗೆ ಹೋಗುವ ದಾರಿಯಲ್ಲಿಯ ದೀಪ ಹಾಕಲು ನಡೆದ ಹೆಂಡತಿಗೆ ಬೇಡವೆಂದ. ದೂರ ಹಾಲಿನಲ್ಲಿ ಮಾತ್ರ ದೀಪವಿತ್ತು. ಮಕ್ಕಳ ಕೋಣೆಯೊಳಗಿನ ಗದ್ದಲ ಕೇಳಿಸಿ ಶಿರೀನಳಿಗೆ ಕದ ಮುಚ್ಚಿಕೊಳ್ಳುವ ಇಶಾರೆ ಮಾಡಿದ. ಗಂಟಲು ಸರಿಪಡಿಸಿಕೊಳ್ಳುತ್ತ-” Soಡಿಡಿಥಿ ಣo hಚಿve ಞeಠಿಣ ಥಿou ತಿಚಿiಣiಟಿg,” ಎಂದು ಮಾತಿಗೆ ಆರಂಭಿಸಿದ. ಆ ಬದಿಯಿಂದ ಬರುವ ಮಾತುಗಳನ್ನು ಕೇಳಿಕೊಳ್ಳಲು ಮನಸ್ಸೇ ಇಲ್ಲದವನಹಾಗೆ, ಕಳೆದ ೨೧ ವರ್ಷಗಳಿಂದಲೂ ಕಾಯುತ್ತಿದ್ದ ಈ ಅವಕಾಶವನ್ನು ಈಗ ಮತ್ತೆ ತಪ್ಪಿಸಿಕೊಳ್ಳಲಾರೆ ಎನ್ನುವವನ ಹಾಗೆ:
“ಈ ಸಾರೆ ಮೊದಲು ನನಗೆ ಪೂರ್ತಿಯಾಗಿ ಮಾತನಾಡಗೊಡು. ಆಮೇಲೆ ನೀನು ಮಾತನಾಡುವಿಯಂತೆ, I ತಿoಟಿ’ಣ ಚಿಟಟoತಿ ಥಿou ಣo moಟಿoಠಿoಟise ಣhe ಛಿoಟಿveಡಿsಚಿಣioಟಿ ಚಿಟಿಜ mಚಿಞe me ಚಿ ಜumb ಟisಣeಟಿeಡಿ. ಙou hಚಿve buಟಟieಜ me eಟಿough. ಈ ಸಾರೆ ನಾನು ಹೇಳುತ್ತೇನೆ, ನೀನು ಕೇಳು. ನಾನು ಕೇಳುವ ಪ್ರಶ್ನೆಗಳಿಗೆ ನೀನು ಉತ್ತರ ಕೊಡು. ನೀನು ಪೇಪರುಗಳಲ್ಲಿ ಜಾಹೀರಾತು ಕೊಟ್ಟಿದ್ದೀಯಲ್ಲ, ಅದರ ಹೇತುವನ್ನು ನಾನು ಅರಿಯದವನಲ್ಲ: ಝೋಪಡಪಟ್ಟಿಗಳ ಒಡೆಯರನ್ನು ಹೆದರಿಸಿ ಅವರಿಂದ ಹಣ ದೋಚುವುದು ನಿನ್ನ ಮಸಲತ್ತು. ನಾನು ಈಗಾಗಲೇ ಮನೆಯವರ ಜೊತೆ ಪಂಥ ಕಟ್ಟಿದ್ದೇನೆ: ಈ ರಿಪೋರ್ಟು ಪ್ರಕಟವಾಗಲಾರದು. ಪುರಾವೆ ಇಲ್ಲದೇನೆ ಆರೋಪ ಹೊರಿಸುತ್ತಿದ್ದೇನೆ ಎಂದು ತಿಳಿಯಬೇಡ. ನಿನ್ನನ್ನು ನಾನು ಎಂದೋ ಅರಿತಿದ್ದೆ, ಹೇಳುವ ಧೈರ್ಯ ಮಾತ್ರ ಆಗಿರಲಿಲ್ಲ. ಂಟಿಜ ಥಿou ಣooಞ ಜಿuಟಟ ಚಿಜvಚಿಟಿಣಚಿge oಜಿ mಥಿ ಣimiಜiಣಥಿ. ಸ್ವಲ್ಪದರಲ್ಲಿ ಹೇಳುವುದಾದರೆ, ಸ್ವತಃ ನಿನಗೆ ಹಣದ ಬಗ್ಗೆ ಇದ್ದ ಅವಾಸ್ತವವಾದ ಆಕರ್ಷಣೆಯಿಂದಾಗಿ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸತೊಡಗಿದೆ. ‘ಜನರಲ್ ಮ್ಯಾನೇಜರ್, ಫಾಯ್ನಾನ್ಸ್’ ಆಗಿಯೂ ‘ಪರ್ಚೇಜ್’ ಖಾತೆ ಕೂಡ ನನ್ನ ಕೈಕೆಳಗಿತ್ತು, ಆಗ. ಅದನ್ನು ಮ್ಯಾನೇಜಿಂಗ್ ಡಾಯ್ರೆಕ್ಟರ್ ನನಗೆ ಒಪ್ಪಿಸಿದ್ದೇ ನನ್ನ ಪ್ರಾಮಾಣಿಕತೆಯಲ್ಲಿ ಅವರಿಗಿದ್ದ ಸಂಪೂರ್ಣ ವಿಶ್ವಾಸದಿಂದಾಗಿ. ಖಿhಚಿಣ ತಿಚಿs mಥಿ ಡಿeಠಿuಣಚಿಣioಟಿ iಟಿ ಣhe oಜಿಜಿiಛಿe ಣoo. ಆದರೆ ನಿನಗೊಬ್ಬನಿಗೆ ವಿಶ್ವಾಸ ಇರಲಿಲ್ಲ. ನಿನ್ನ ಮಾತಿನ ರೀತಿಯಂತೂ ಹಾಗಿತ್ತು. ‘ಪರ್ಚೇಜ್ ಫಂಕ್ಷನ್’ ಮತ್ತು ಪ್ರಾಮಾಣಿಕತೆ ಜೊತೆಯಾಗಿರುವುದು ಶಕ್ಯವೇ ಇಲ್ಲ ಎನ್ನುವ ರೀತಿ-ಅರ್ಧ ತಮಾಶೆಗಾಗಿ ಅರ್ಧ ಗಂಭೀರವಾಗಿ ಎಂಬಂತೆ-ನನ್ನನ್ನು ಕೆಣಕುತ್ತಿದ್ದಾಗ ಬರುತ್ತಿದ್ದ ಸಿಟ್ಟು ಎಷ್ಟೆಂದು ಹೇಳಲಾರೆ. ಆದರೂ ಅವುಡು ಕಚ್ಚಿಹಿಡಿದು ನುಂಗುತ್ತಿದ್ದೆ. ನೀನು ದುಡುಕಿನ ಮಾತುಗಳನ್ನಾಡುವಾಗ I ತಿouಟಜ ಜಿeeಟ ಟiಞe exಠಿಟoಜiಟಿg. ಆದರೆ ನನಗಿಂತ ಇಷ್ಟೊಂದು ಕಿರಿಯನಾದವನ ಇದಿರು ಹಾಗೆ ನಡೆದುಕೊಳ್ಳುವುದೇ ಹಾಸ್ಯಾಸ್ಪದವಾಗಿ ತೋರಿದಾಗ ಅವುಡುಕಚ್ಚಿ ನುಂಗಿದ ಕ್ರೋಧ ಯಾತನೆಯಾಗಿ ಪರಿಣಮಿಸುತ್ತಿತ್ತು. ನನ್ನ ಯಾತನೆ ಒಮ್ಮೆ ಎಷ್ಟೊಂದು ವಿಕೋಪಕ್ಕೆ ಹೋಗಿತ್ತೆಂದರೆ ನೀನು ನಮ್ಮ ಕಂಪನಿಯಲ್ಲಿ ಕೆಲಸಕ್ಕೇ ಸೇರದೇ ಇದ್ದಿದ್ದರೆ ಅಥವಾ ಅಕಸ್ಮಾತ್ ನೀನು ಸತ್ತೇಹೋಗಿದ್ದರೆ… ಎಂಬಂಥ ವಿಚಾರ ಕೂಡ ಮನಸ್ಸನ್ನು ಹಾಯ್ದುಹೋಗಿತ್ತು. ಆ ದಿನ ಇಡೀ ರಾತ್ರಿ ನಿದ್ದೆಯಿಲ್ಲದೇ ತಳಮಳಿಸಿದ್ದೆ. ಮರುದಿವಸವೇ, ಮ್ಯಾನೇಜಿಂಗ್ ಡಾಯ್ರೆಕ್ಟರರಿಗೆ ಆದ ಅಸಂತೋಷವನ್ನೂ ಲೆಕ್ಕಿಸದೇ ‘ಪರ್ಚೇಜ್’ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿದ್ದೆ. ಎಲ್ಲರಿಗಿಂತ ಹೆಚ್ಚು ಆಶ್ಚರ್ಯವಾದದ್ದು ನಿನಗೇ. ಕಾರಣವನ್ನು ಊಹಿಸಿಕೊಂಡವನ ಹಾಗೆ ಆಣೆ ಭಾಷೆ ಮಾಡುತ್ತ-‘I ತಿಚಿs oಟಿಟಥಿ ಠಿuಟಟiಟಿg ಥಿouಡಿ ಟegs,’ ಎಂದಿದ್ದೆ. ‘ಔಜಿ ಛಿouಡಿse, moಟಿeಥಿ ಜಿಚಿsಛಿiಟಿಚಿಣeಜ me. ಆದರೆ ನಿನ್ನ ಎದುರು ಅದರ ಬಗ್ಗೆ ಮತ್ತೆಮತ್ತೆ ಮಾತನಾಡುತ್ತಿದ್ದದ್ದು ನಿನ್ನ ಪ್ರತಿಕ್ರಿಯೆ ತಿಳಿಯಲು. ತಿಳಿಸುವಂತೆ ಮಾಡುವಷ್ಟು ಸಿಟ್ಟಿಗೆಬ್ಬಿಸಲು. ಆದರೆ ನೀನೇ ಅಪ್ರಾಮಾಣಿಕ! ‘ಒಥಿ ಉoಜ!’ ಎಂದು ತಿರುತಿರುಗಿ ಉದ್ಗಾರ ತೆಗೆದಿದ್ದೆ. ಆಮೇಲೆ ನಿನಗೊಬ್ಬನಿಗೇ ಸಾಧ್ಯವಾದ ರೀತಿಯಲ್ಲಿ-‘Whಚಿಣ ಥಿou ಟಚಿಛಿಞ ಃP is ಚಿ seಟಿse oಜಿ humouಡಿ,’ ಎಂದಿದ್ದೆ. ನನ್ನ ಕ್ಯಾಬಿನ್ ಬಿಡುವ ಮೊದಲು-‘I mಚಿಥಿ be ಣoo ಛಿಡಿuಜe, buಣ beಟieve me, ಥಿou ಚಿಡಿe ಣhe oಟಿಟಥಿ oಟಿe iಟಿ ಣhis oಜಿಜಿiಛಿe ತಿhom I ಚಿಜoಡಿe,’ ಎನ್ನುವಾಗ ನಿನ್ನ ದನಿ ನಡುಗಿದಂತೆ ಕೇಳಿಸಿತು. ಆ ರಾತ್ರಿ ನಿನ್ನ ಆಯುಷ್ಯದ ಬಗ್ಗೆ ಪ್ರಾರ್ಥಿಸಿದ್ದೆ, ಗೌರೀ: ನೀನು ನಂಬಬೇಕು. ಹೆಂಡತಿಯ ಇದಿರು ನಾನು ಆತನಕ ನಿನ್ನ ಬಗ್ಗೆ ತಳೆದ ಭಾವನೆಗಳನ್ನು ಒಪ್ಪಿಕೊಳ್ಳುವಾಗ ಕಣ್ಣುಗಳಲ್ಲಿ ನೀರು ತುಂಬಿತ್ತು, ಗೌರಿ. ನಂಬು: ಜೊತೆಗೇ ನಾನು ಕಳಕೊಂಡ, ನಾನು ಎಂದಿನಿಂದಲೂ ಹುಡುಕುತ್ತಿದ್ದ ನನ್ನ ತಮ್ಮನನ್ನು ಫಕ್ಕನೆ ತಿರುಗಿ ಪಡೆದಷ್ಟು ಖುಶಿಯಾಗಿತ್ತು. ಆಮೇಲೆ ನೀನು ನನ್ನ ಕ್ಯಾಬಿನ್ನಿಗೆ ಬಂದದ್ದು ನೀನು ಕಂಪನಿಯನ್ನು ಬಿಟ್ಟುಹೋದ ದಿನವೇ. ಮತ್ತೆ ಧುತ್ ಎಂದು ನನ್ನ ಬದುಕಿನಲ್ಲಿ ಹಾಜರಾದದ್ದು ಮೂರು ವರ್ಷಗಳ ಹಿಂದೆ: ಹೇಳದೇ ಕೇಳದೇ ಬಂದೆ. ಊಟಕ್ಕೆ ನಿಲ್ಲುತ್ತೇನೆ ಎಂದೆ. ನನಗೆ, ನನ್ನ ಹೆಂಡತಿಗೆ ಆದ ಖುಶಿ ಅಷ್ಟಿಷ್ಟಲ್ಲ. ಆದರೆ ಕೊನೆತನಕ ಈ ಅಚಾನಕ ಭೇಟಿಯ ಉದ್ದೇಶ ತಿಳಿಯಲೇ ಇಲ್ಲ. ಈಗಲೂ ಈ ಭೇಟಿ ಒಂದು ಯಕ್ಷಪ್ರಶ್ನೆಯಾಗಿಯೆ ಉಳಿದಿದೆ. ಆದರೆ ನನ್ನ ದಿಗ್ಭ್ರಮೆಗೆ ಕಾರಣವಾದ ಸಂಗತಿ: ನಮ್ಮಲ್ಲಿ ಊಟಮಾಡಿ ಹೋದ ಎಂಟೇ ದಿನಗಳಲ್ಲಿ ನನಗೆ ಹಣ ಕೊಡಲು ಮಾಡಿದ ನಿನ್ನ ಧಾರ್ಷ್ಟ್ಯ. ಆ ಸಂಜೆಯನ್ನು ನಾನು ಬದುಕಿರುವವರೆಗೂ ಮರೆಯಲಾರೆ. ನಿನ್ನನ್ನು ಕ್ಷಮಿಸಲೂ ಆರೆ. ನಿನ್ನ ಮಾತು, ಮಾತಿಗಿಂತ ಮಾತನಾಡಿದ ರೀತಿ ನೆನೆದಷ್ಟೂ ಸಿಟ್ಟು ತಡೆಯುವುದು ಅಸಾಧ್ಯವಾಗುತ್ತದೆ. ನೆನಪಿದೆಯೆ ಗೌರಿ: ನನ್ನ ಪರಿಚಯವೇ ಇಲ್ಲದವನಹಾಗೆ ನನ್ನನ್ನು ‘ಮಿಸ್ಟರ್ ಪೋಚಖಾನಾವಾಲಾ’ ಎಂದು ಸಂಬೋಧಿಸಿದ್ದು? ನಿನ್ನ ಹೊಸ ಹುದ್ದೆಯ ಗರ್ವದಿಂದ ‘ನಾನು ಎಕ್ಸ್‌ಪ್ರೆಸ್ ಪತ್ರಿಕೆಯ ಅಗರವಾಲ್,’ ಎಂದು ನಿನ್ನ ಪರಿಚಯ ಹೇಳಿದ್ದು? ಯಾಕಪ್ಪಾ ಒಮ್ಮೆ ಹೀಗೆ ಇನ್ನೊಮ್ಮೆ ಹಾಗೆ ಆಗಿ ಸತಾಯಿಸುತ್ತೀ? ನಿನ್ನೆಯ ಕೊಲೆಗೂ ನಿನ್ನ ಜಾಹೀರಾತಿಗೂ ಸಂಬಂಧ ಇಲ್ಲವೆನ್ನುತ್ತೀಯಾ? ಸತ್ತವನು ಕರುಣಾಕರನ್ ಅಲ್ಲ ತಾನೆ? ಹೋದ ಸಾರೆ ಅವನ ಬಗ್ಗೆ ಫೋನ್ ಮಾಡಿದ್ದಕ್ಕೇ ನನ್ನ ಮೇಲಿನ ಸಿಟ್ಟಿನಿಂದ-‘ಊe is ಜeಚಿಜ,’ ಎಂದೆ, ಅಮಾನುಷವಾಗಿ. ನಾನು ಕೆಟ್ಟವನೋ ಒಳ್ಳೆಯವನೋ ಅನ್ನುವುದು ಈಗ ಮುಖ್ಯವಲ್ಲ. ನನಗೀಗ ೬೦ ವರ್ಷ ವಯಸ್ಸು. ಇನ್ನೆರಡು ತಿಂಗಳಲ್ಲಿ ನಾನು ನಿವೃತ್ತನಾಗುವವನು. ಒಮ್ಮೆಯಾದರೂ ಕಿರಿಯ ತಮ್ಮನ ಹಾಗೆ, ತಮ್ಮನಾಗಿ…”

ಬೆಹರಾಮನಿಗೆ ಕೊರಳು ಬಿಗಿದುಬಂದಿತು. ಅಪ್ಪನನ್ನು ಆಗಿನಿಂದಲೂ ನೋಡುತ್ತ ನಿಂತ ಶಿರೀನ್ ಏನನ್ನೋ ಊಹಿಸಿ ಭಯಪಟ್ಟವಳ ಹಾಗೆ ಸರಕ್ಕನೆ ಅಪ್ಪನ ಕೈಯಿಂದ ರಿಸೀವರ್ ಅನ್ನು ಕಸಿದುಕೊಂಡು ಕಿವಿಗೆ ಹಚ್ಚಿ ನೋಡಿದಾಗ ಆ ಬದಿಯಲ್ಲಿ ಯಾರೂ ಇದ್ದಂತೆ ತೋರಲಿಲ್ಲ. “ಹೆಲ್ಲೋ ಹೆಲ್ಲೋ,” ಎಂದಳು. “ಅಗರವಾಲ್ ಸಾಬ್,” ಎಂದಳು. ಯಾರೂ ಉತ್ತರ ಕೊಡಲಿಲ್ಲ. ಟೆಲಿಫೋನ್ ಕೆಳಗಿಟ್ಟು ಅಪ್ಪನನ್ನು ಸಂತೈಸಲು ಹೊರಟ ಶಿರೀನಳಿಗೇ ಅಳು ಬರುವಂತಾಯಿತು. ಅಮ್ಮನನ್ನು ಕರೆದಳು. ಟೆಲಿಫೋನ್-ಮೂಲೆಯಲ್ಲಿಯ ದೀಪ ಹಾಕಿಸಿದಳು. ಹಲ್ಲು ಕಡಿಯುತ್ತ-“ಊe ಜiಜ ಟಿoಣ ಜeseಡಿve ಣhis shಚಿbbಥಿ ಣಡಿeಚಿಣmeಟಿಣ,” ಎಂದಳು: “ನಾಳೆ ನಾನೇ ಫೋನ್ ಮಾಡುತ್ತೇನೆ. We ತಿiಟಟ ಟಿoಣ ಣಚಿಞe ಣhis ಟಥಿiಟಿg ಟoತಿ.”

ತಾಯಿ-ಮಗಳು ಇಬ್ಬರೂ ಬೆಹರಾಮನನ್ನು ಕುಳಿತಲ್ಲಿಂದ ಎಬ್ಬಿಸಿ ಮಲಗುವ ಕೋಣೆಗೆ ಹೋಗುವಂತೆ ಮಾಡಿದರು. ಗಾಢನಿದ್ದೆಯಿಂದ ಅದೇ ಎಚ್ಚತ್ತವನ ಹಾಗೆ, ಕೆಂಗನಸನ್ನು ಕಂಡು ಬೆದರಿದವನ ಹಾಗೆ ಕಾಣುತ್ತಿದ್ದ ಗಂಡನ ಮೋರೆ ನೋಡಿ ಮುದುಕಿಗೆ ಕರುಳು ಕಿವುಚಿದಂತಾಯಿತು: “ಇಂಥ ಸ್ಥಿತಿಯಲ್ಲಿ ಊಟ ಮಾಡದಿದ್ದರೇನೆ ಓಳಿತೇನೋ. ಹಾಲು ತಂದುಕೊಡುತ್ತೇನೆ. ಅರ್ಧ ಕಾಂಪೋಜ್ ಗುಳಿಗೆಯನ್ನೂ ಬೇಕೆನಿಸಿದರೆ ತೆಗೆದುಕೊಳ್ಳುವಿಯಂತೆ,” ಎನ್ನುತ್ತ ಗಂಡನ ಭುಜ ತಟ್ಟಿ-“ಸದ್ಯ ಡ್ರೆಸ್ ಬದಲಿಸಿ ಹೊರಗೆ ಬಾ,’ ಎಂದಳು. ಹಾಸಿಗೆಯ ಅಂಚಿನಲ್ಲಿ ಕೂತ ಬೆಹರಾಮ್ ದಡಬಡಿಸಿ ಎಚ್ಚತ್ತವನ ಹಾಗೆ “ಅರೆ! ನೀವೆಲ್ಲ ನನ್ನ ಸುತ್ತಲೂ ಯಾಕೆ? ನಾನು ಸರಿಯಾಗಿದ್ದೇನೆ. ನಾನು ಬಟ್ಟೆ ಬದಲಿಸಿ ಹೊರಗೆ ಬರುತ್ತೇನೆ. ಊಟಕ್ಕೆ ಕೂರೋಣ. ನನಗೆ ಹೊಟ್ಟೆ ಚೆನ್ನಾಗಿ ಹಸಿದಿದೆ.” ಅಪ್ಪನಲ್ಲಿ ಒಮ್ಮೆಲೇ ಆದ ಈ ಬದಲಿನಿಂದ ಶಿರೀನಳಿಗೆ ಆಶ್ಚರ್ಯವಾಯಿತು. ಸಂತೋಷವಾಯಿತು. ಆಮೇಲೆ ಅಮ್ಮನ ಒಟ್ಟಿಗೆ ಹೊರಗೆ ಬರುವಾಗ ಆತಂಕವಾಯಿತು: ಕೆಲವೇ ಕೆಲವು ಕ್ಷಣಗಳ ಮಟ್ಟಿಗೇ ಆಗಲೊಲ್ಲದೇಕೆ, ಬೇರೆಯೆ ಒಂದು ಕಾಲವನ್ನು ಹೊಕ್ಕ ಅಪ್ಪ ಇದೇ ಈಗ ಅಲ್ಲಿಂದ ಹೊರಗೆ ಬರುತ್ತಿದ್ದಾನೆ ಎನ್ನುವಂಥ ಭಾವನೆಯಿಂದ ಬಿಡಿಸಿಕೊಳ್ಳುವುದು ಅಸಾಧ್ಯವಾಯಿತು. ನಾಳೆ ಅಗರವಾಲನಿಗೆ ಫೋನ್‌ಮಾಡುವುದೇ ಆದಲ್ಲಿ ಅಪ್ಪ ಸ್ನಾನಕ್ಕೆ ಹೋದಾಗ ಮಾಡುವುದೇ ಸರಿಯೇನೋ. ಮಾಡಲೇ ಬೇಕೇ? ಕೆಲವೇ ಕ್ಷಣಗಳ ಮೊದಲು ಮಾಡಿದ ನಿರ್ಧಾರ ಹೊಯ್ದಾಡಹತ್ತಿತು.

ಮಕ್ಕಳೆಲ್ಲ ಮಲಗುವ ಕೋಣೆಗೇ ಪ್ಲೇಟುಗಳನ್ನೆತ್ತಿಕೊಂಡು ಹೋಗಿ ಊಟದ ಆಟ ನಡೆಸಿದ್ದುವು. ಡಾಯ್ನಿಂಗ್ ಟೇಬಲ್ ಮೇಲೆ ದೊಡ್ಡವರ ಊಟ ಮೌನದಲ್ಲಿ ಸಾಗಿತ್ತು. ಬಹಳ ಹಸಿದವನ ಹಾಗೆ ಬೆಹರಾಮ್ ರುಚಿಯಿಂದ ಊಟ ಮಾಡುವುದನ್ನು ಕಂಡು ಹೆಂಡತಿಗೆ ಸಂತೋಷವಾಗುವ ಬದಲು ಬೇಡ ಬೇಡಾದ ವಿಚಾರಗಳಿಂದ ಮನಸ್ಸು ತಲ್ಲಣಿಸಹತ್ತಿತು. ಊಟ ಮುಗಿದ ಕೂಡಲೇ, “ನಾಳೆ ಬೆಳಗಿಗೇ ಮಾತನಾಡೋಣ. ಈಗ ನಿದ್ದೆ ಅನಾವರವಾಗಹತ್ತಿದೆ. ಹೋಗಿ ಹಾಸಿಗೆ ಸೇರುತ್ತೇನೆ. ನಾನು ಆರಾಮ ಇದ್ದೇನೆ, ಕಾಳಜಿ ಮಾಡಬೇಡಿ. ನೀನು ಅಮ್ಮ ಏನೆಲ್ಲ ಯೋಚಿಸಿ ಹೆದರಿಕೊಂಡಂತಿದೆ,” ಎಂದು ಮಗಳತ್ತ ನೋಡಿ ಸುಂದರವಾಗಿ ಮುಗುಳ್ನಕ್ಕ. ಹೆಂಡತಿ-ಮಗಳು ಇಬ್ಬರ ಕಡೆಗೂ ನೋಡಿ ‘ಗುಡ್‌ನಾಯ್ಟ್’ ಎಂದು ಮಲಗುವ ಕೋಣೆಗೆ ನಡೆದೇಬಿಟ್ಟ. ಕಾಂಪೋಜ್ ಗುಳಿಗೆಯನ್ನು ಸೇವಿಸಿದೇನೆ ಹಾಸಿಗೆಯ ಮೇಲೆ ಅಡ್ಡವಾದವನು ಹೆಂಡತಿ-ಮಗಳು ಕೋಣೆಗೆ ಬಂದು ನೋಡುವಷ್ಟರಲ್ಲಿ ಗಾಢ ನಿದ್ದೆಹೋಗಿ ಗೊರಕೆ ಹೊಡೆಯುತ್ತಿದ್ದ. ಯಾರಿಗೆ ಗೊತ್ತು: ಟೆಲಿಫೋನ್ ಮೇಲೆ ಮಾತನಾಡುತ್ತಿದ್ದಂತೆ ಏನೋ ಒಂದು ಅದ್ಭುತವಾದ ಘಟನೆ ಅಂತರಂಗದಲ್ಲಿ ನಡೆದುಹೋಗಿರಬಹುದು, ಎನ್ನುವ ಭಾವದಿಂದ ಪರಸ್ಪರರನ್ನು ನೋಡಿ ತಾಯಿ-ಮಗಳು ತಾವೂ ನಿದ್ದೆ ಮಾಡುವ ಸಿದ್ಧತೆಗೆ ತೊಡಗಿದರು.

ಮರುದಿನ ಬೆಳಿಗ್ಗೆ, ರಾತ್ರಿ ಮಲಗುವಾಗಲೇ ಮಾತನಾಡಿಕೊಂಡವರ ಹಾಗೆ ಬೆಹರಾಮ್, ಶಿರೀನ್ ಹಾಗೂ ಅವಳ ತಾಯಿ ಒಂದೇ ಕಾಲಕ್ಕೆ ಎದ್ದು ಸೀದಾ ಬಾಲ್ಕನಿಗೇ ಬಂದರು. ಬೆಹರಾಮನೇ ಎಲ್ಲಿಲ್ಲದ ಉತ್ಸಾಹದಿಂದ ಬಾಲ್ಕನಿಯ ಗಾಜಿನ ಕದಗಳನ್ನು ಬದಿಗೆ ಸರಿಸಿದ. ಆಗಿನ್ನೂ ಆರು ಗಂಟೆ. ಅದೇ ಕಣ್ಣು ಬಿಡುವ ಹವಣಿಕೆಯಲ್ಲಿದ್ದ ನಸುಕಿನ ಮಬ್ಬುಗತ್ತಲೆಯಲ್ಲಿ ಮೆಲ್ಲಗೆ ಸ್ಪಷ್ಟವಾಗತೊಡಗಿದ ಸಮುದ್ರದ ನೀರಿನ ಮೇಲಿಂದ ಹಾದುಬಂದ ತಂಪು ಗಾಳಿ ಮೋರೆಗೆ ಬಡೆದದ್ದೇ ಜೀವಕ್ಕೆ ಆಹಾ! ಅನ್ನಿಸಿತು. ಒಬ್ಬರೂ ಮಾತನಾಡಲಿಲ್ಲ. ಪರಸ್ಪರರ ಮನಸ್ಸಿನೊಳಗಿನ ವಿಚಾರಗಳನ್ನು ಓದುವ ಪ್ರಯತ್ನ ಮಾಡಲಿಲ್ಲ, ಪರಸ್ಪರರನ್ನು ನೋಡಲಿಲ್ಲ ಕೂಡ. ಕಣ್ಣಪರದೆಯ ಮೇಲೆ ಪ್ರತಿಕ್ಷಣಕ್ಕೆ ಬದಲಿಸುವ ಪ್ರತಿಬಿಂಬವಾಗುತ್ತ ನಡೆದ ಸಮುದ್ರ ಇಂಥ ಯಾವ ಕ್ರಿಯೆಗೂ ಆಸ್ಪದ ಕೊಡುತ್ತಿರಲಿಲ್ಲ: “ಚಹ ಮಾಡುತ್ತೀಯಾ? ಇಲ್ಲೇ ಕೂತು ಕುಡಿಯೋಣ. ಆಮೇಲೆ ಪ್ರಾತರ್ವಿಧಿಗಳನ್ನು ಮುಗಿಸಿ ಮೊನ್ನೆ ಕಂಡ ಜನ ಕಂಡರೆ ಅವರ ಜೊತೆಗೆ ಹೀಗೇ ತಿರುಗಾಡಿ ಬರುತ್ತೇನೆ,” ಎಂದ, ಬೆಹರಾಮ್. “ಅಪ್ಪಾ, ನಾನೂ ಬರುತ್ತೇನೆ ಆ ಜನ ಬರದಿದ್ದರೂ ಅಡ್ಡಿಯಿಲ್ಲ. ನಾವಿಬ್ಬರೂ ‘ಲ್ಯಾಂಡ್ಸ್ ಎಂಡ್’ ತನಕ ಹೋಗಿಬರೋಣ,” ಎಂದು ಶಿರೀನ್ ಸೂಚಿಸಿದಳು.

ಚಹ ಕುಡಿದಾದಮೇಲೆ ಪ್ರಾತರ್ವಿಧಿಗಳನ್ನು ಮುಗಿಸಿ, ಹೊರಗೆ ಹೋಗುವ ಉಡುಪು ತೊಟ್ಟು ಅಪ್ಪ-ಮಗಳು ಬೆಳಗಿನ ವಿಹಾರಕ್ಕೆ ಹೊರಟ ಸುಂದರ ದೃಶ್ಯವನ್ನು ಬಾಲ್ಕನಿಯಲ್ಲಿ ನಿಂತು ನೋಡುತ್ತ ಶಿರೀನಳ ತಾಯಿ ಸಂತೋಷಪಟ್ಟಳು. ಅವಳು ಹಾಗೆ ನಿಂತ ಸುಮಾರು ಅರ್ಧ ಗಂಟೆಯ ನಂತರ ಕಟ್ಟಡದ ಗೇಟಿನ ಇದಿರು ಕಾರೊಂದು ಬಂದು ನಿಂತುದನ್ನು ಕಂಡಳು. ಇಷ್ಟು ಬೆಳಗ್ಗೆ ಯಾರು ಬರುತ್ತಿರಬಹುದೆಂಬ ಕುತೂಹಲದಿಂದ ನೋಡುತ್ತಿದ್ದಾಗ ನಸು ಕಂದು ಬಣ್ಣದ ಸಫಾರಿ ಸೂಟಿನಲ್ಲಿದ್ದ ಐವತ್ತು ದಾಟಿದ ಗೃಹಸ್ಥರೊಬ್ಬರು ಕೈಯಲ್ಲಿ ಸುಂದರವಾದ ಕೆಂಪು ಗುಲಾಬೀ ಹೂವುಗಳ ಗುಚ್ಛವನ್ನು ಹಿಡಿದು ಇಳಿಯುವುದನ್ನು ಕಂಡಳು. ಡ್ರಾಯ್ವರ್ ಸರಿಯಾದ ಜಾಗದಲ್ಲೆ ಗಾಡಿಯನ್ನು ನಿಲ್ಲಿಸಿದ್ದಾನೆ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಲೆಂಬಂತೆ ಗೇಟಿನಲ್ಲಿ ನಿಂತು ಕಾರಿನ ಕಡೆಗೊಮ್ಮೆ ನೋಡಿದ. ಮೋರೆ ಸರಿಯಾಗಿ ಕಾಣಲಿಲ್ಲ. ಆದರೂ ದೇಹದ ಒಟ್ಟೂ ಆಕೃತಿಯಿಂದ ಎಲ್ಲೋ ಈ ಮೊದಲು ನೋಡಿದ ವ್ಯಕ್ತಿಯೆಂದು ತೋರಿತು. ತಮ್ಮ ಮನೆಗೇ ಬರುತ್ತಿರಬಹುದೆ? ಎಂಬ ಅನುಮಾನ ಮನಸ್ಸನ್ನು ತಟ್ಟಿಹೋದರೂ ಅದು ಒಂದು ಖುಶಿಯ ಮೂಡಿನಲ್ಲಿರುವಾಗ, ಆತಕ್ಕಾಗಿ ಮಾಡುವ ಊಹೆಯ ಸ್ವರೂಪದ್ದಾಗಿತ್ತು. ಬಂದವನು ಕಟ್ಟಡವನ್ನು ಹೊಕ್ಕ ಕೆಲವು ನಿಮಿಷಗಳಲ್ಲೇ ಕರೆಗಂಟೆ ಸದ್ದು ಮಾಡಿದಾಗ ಮಾತ್ರ ಅವನು ಬಂದದ್ದು ತಮ್ಮ ಮನೆಗೇ ಎಂಬುದರಲ್ಲಿ ಸಂಶಯವೇ ಉಳಿಯಲಿಲ್ಲ. ಇಷ್ಟು ಬೆಳಗಿಗೇ ಬಂದು ಕದ ತಟ್ಟಿದ ಅಪರಿಚಿತ ಆಗಂತುಕ ಒಂದೇ ಕ್ಷಣದ ಮಟ್ಟಿಗೆ ದಿಗಿಲಿಗೆ ಕಾರಣನಾದರೂ ಅವನು ಕೈಯಲ್ಲಿ ತಂದ ಹೂವಿನ ಗುಚ್ಛ ನೆನಪಿಗೆ ಬರುತ್ತಲೇ: ಯಾರಾದರೇನಂತೆ, ಒಳ್ಳೇ ಕಾರಣಕ್ಕಾಗಿಯೆ ಬಂದಿರಬೇಕು ಅನ್ನಿಸಿ ದುಡುದುಡು ಹೆಜ್ಜೆಯಿಟ್ಟು ಬಾಗಿಲು ಸಮೀಪಿಸಿ ಕದ ತೆರೆದಳು: “ಗುಡ್ ಮಾರ್ನಿಂಗ್. ಮಿಸ್ಟರ್ ಪೋಚಖಾನಾವಾಲಾರ ಮನೆಯಲ್ಲವೆ?” ಎಂದು ಕೇಳಿದ ವ್ಯಕ್ತಿಯ ದನಿ ಕೇಳಿಸಿ ಮೈಯ ಕೂದಲು ನಿಮಿರಿನಿಂತಾಗ ಮುದುಕಿಗೆ ಸಂಶಯವೇ ಉಳಿಯಲಿಲ್ಲ: ಅಗರವಾಲ್! ಆದರೆ ಮೋರೆ ಮಾತ್ರ ಪರಿಚಿತ ದನಿಯೊಡನೆ ಸರಿಹೋಗುತ್ತಿರಲಿಲ್ಲ ಅಥವಾ ನಸುಕಿನ ಬೆಳಕಿನಲ್ಲಿ ತನಗೇ ಸರಿಯಾಗಿ ಕಾಣಿಸುತ್ತಿಲ್ಲವೋ? ಕಳೆದ ಮೂರು ವರ್ಷಗಳಲ್ಲಿ ಇಷ್ಟೊಂದು ಬದಲಿಸಿರಬಹುದೆ?-“ನೀವು ಅಗರವಾಲ್ ಅಲ್ಲವೆ?” ಎಂದು ಕೇಳಿಯೇಬಿಟ್ಟಳು, ಅನುಮಾನಿಸುತ್ತ. “ಹೌದು, ಒಳಗೆ ಬರಲೇ?” ಎಂದು ಅವನು ಕೇಳುವುದಕ್ಕೂ, “ಒಳಗೆ ಬನ್ನಿ,” ಎಂದು ಇವಳು ಹೇಳುವುದಕ್ಕೂ ಸರಿಬಿದ್ದಿತ್ತು. ಒಳಗೆ ಬರುತ್ತಿರುವಾಗ, “ನಾನು ನಿಮಗೆಲ್ಲ ಪರಿಚಯವಿದ್ದ ಅಗರವಾಲನಲ್ಲ, ಅವನ ಅಣ್ಣ,” ಎಂದ. “ನನಗೂ ಸಂಶಯ ಬಂದಿತ್ತು. ನಿಮ್ಮ ದನಿ ಮಾತ್ರ ಹುಬೇಹೂಬ್ ನಿಮ್ಮ ತಮ್ಮನದೇ,” ಎನ್ನುತ್ತ ಹಾಲಿನೊಳಗಿನ ದೀಪ ಹಾಕಿದಳು. ಅದನ್ನು ಕಂಡು, “ಇಷ್ಟು ನಸುಕಿನಲ್ಲೇ ಎದ್ದು ಬಂದದ್ದಕ್ಕೆ ಕ್ಷಮೆ ಕೋರುತ್ತೇನೆ. ನನಗೆ ಇಂದಿನ ಬೆಳಗಿನ ಫ್ಲಾಯ್ಟ್‌ಗೇ ಕಲಕತ್ತೆಗೆ ಹೋಗಬೇಕಾಗಿದೆ. ಆದರೆ ಪೋಚಖಾನಾವಾಲಾ ಅವರನ್ನು ಭೇಟಿಯಾಗುವ ಮೊದಲು ವಿಮಾನನಿಲ್ದಾಣಕ್ಕೆ ಹೋಗಲು ಮನಸ್ಸು ಸಿದ್ಧವಾಗಲೇ ಇಲ್ಲ. ನೀವು ಅವರ ಪತ್ನಿ ಇರಬೇಕು ಅಲ್ಲವೇ? I hಚಿve ಛಿome heಡಿe ಣo ಣeಟಿಜeಡಿ mಥಿ ಚಿಠಿoಟogies ಣo ಥಿouಡಿ husbಚಿಟಿಜ-ನನ್ನ ವತಿಯಿಂದ, ನನ್ನ ತಮ್ಮನ ವತಿಯಿಂದ ಕೂಡ. ನಿಮ್ಮ ಗಂಡ ಇನ್ನೂ ಎದ್ದಿರಲಿಕ್ಕಿಲ್ಲ…”
“ಇಲ್ಲ-ಎದ್ದಿದ್ದಾರೆ. ಮಗಳ ಜೊತೆಗೆ ಹೀಗೇ ತಿರುಗಾಡಲು ಹೋಗಿದ್ದಾರೆ. ಈಗ ಬರುವುದಾಯಿತು. ಕೂತಿರಿ, ಚಹ ಮಾಡಿ ತರುತ್ತೇನೆ. ಚಹ ನಡೆಯುತ್ತದೆ, ಅಲ್ಲವೆ?”
“ಖಿhಚಿಟಿಞs, I ತಿiಟಟ ಟove iಣ,” ಅಗರವಾಲ ಕೈಯಲ್ಲಿ ತಂದ ಹೂವಿನ ಗುಚ್ಛವನ್ನು ಟೀಪಾಯಿಯ ಮೇಲೆ ಇಡುತ್ತಿರುವಷ್ಟರಲ್ಲಿ ಕದದ ಗಂಟೆ ಕೂಗಿತು. “ಅದೊ! ಹೊರಗೆ ಹೋದವರು ಬಂದೇಬಿಟ್ಟರು,’ ಎನ್ನುತ್ತ ಮುದುಕಿ ಲಗುಬಗೆಯಿಂದ ಕದ ತೆರೆಯಲು ಹೋದಳು. ಅಗರವಾಲ ಕೂಡಲೇ ಎದ್ದುನಿಂತು, ಪುಷ್ಪಗುಚ್ಛವನ್ನು ಕೈಗೆ ಎತ್ತಿಕೊಂಡು ಒಳಗೆ ಬಂದವರ ಹಾದಿ ಕಾಯಹತ್ತಿದ. “ನಿನ್ನನ್ನು ಕಾಣಲು ಯಾರು ಬಂದಿದ್ದಾರೆ-ಊಹಿಸಿ ಹೇಳು, ನೋಡೋಣ?” ಎಂದು ಹೆಂಡತಿ ಆಹ್ವಾನಿಸಿದಾಗ, “ನಿನ್ನ ಮೋರೆಯನ್ನು ನೋಡಿದರೆ ಯಾರೋ ನಿನಗೆ ಬೇಕಾದವರೇ ಬಂದಿರಬೇಕು,” ಎನ್ನುತ್ತ, ಬೆಹರಾಮ್ ಅತ್ಯಂತ ಆತುರದಿಂದ ಹಾಲಿಗೆ ಬಂದ. ಅವನ ಹಿಂದೆಯೆ ಶಿರೀನಳೂ ಒಳಗೆ ಬಂದಳು. “ನೀವು ಮಾತನಾಡಿಕೊಳ್ಳಿ. ನಾನು ಚಹ ಮಾಡಿ ತರುತ್ತೇನೆ,” ಎಂದ ಮುದುಕಿ ಅಡುಗೆಯ ಮನೆಗೆ ಹೊರಟುಹೋದಳು.

ಅಗರವಾಲ ಬೆಹರಾಮನನ್ನು ಸಮೀಪಿಸಿ,”ಬೆಹರಾಮ್ ಪೋಚಖಾನಾವಾಲಾ ಅಲ್ಲವೆ? ಇವಳು ನಿಮ್ಮ ಮಗಳು ಶಿರೀನ್ ಇರಬೇಕು,” ಎಂದು ಹೂವಿನ ಗುಚ್ಛವನ್ನು ಬೆಹರಾಮನ ಕೈಗೆ ಒಪ್ಪಿಸುತ್ತ, ಇಬ್ಬರೊಡನೆಯೂ ಕೈಕುಲುಕಿ ತನ್ನನ್ನೇ ತಬ್ಬಿಬ್ಬಾಗಿ ನೋಡುತ್ತಿದ್ದವರ ಕುತೂಹಲವನ್ನು ನಿವಾರಿಸಲೆಂಬಂತೆ: “ನಾನು ಅಗರವಾಲ, ನಿಮಗೆ ಪರಿಚಯವಿದ್ದ ಗೌರೀ ಪ್ರಸಾದನ ಅಣ್ಣ. ಕೂರೋಣ ಅಲ್ಲವೆ? ನಿಮ್ಮ ಹೆಂಡತಿಗೆ ನಾನಾಗಲೇ ಇಷ್ಟು ನಸುಕಿನಲ್ಲಿ ಬಂದ ಕಾರಣ ತಿಳಿಸಿದ್ದೇನೆ,” ಎಂದು ಅವಳ ಇದಿರು ಆಡಿದ ಮಾತುಗಳನ್ನೇ ಮತ್ತೊಮ್ಮೆ ಆಡಿತೋರಿಸಿದ. ಅವನ ಮೋರೆಯಲ್ಲಿ, ಕಣ್ಣುಗಳಲ್ಲಿ, ಒಟ್ಟೂ ಮಾತಿನ ಧಾಟಿಯಲ್ಲಿ ಪ್ರಕಟಗೊಂಡ ಏನೋ ಅಪ್ಪ-ಮಗಳು ಇಬ್ಬರೂ ಅಗರವಾಲನನ್ನು ತಕ್ಷಣ ಮೆಚ್ಚಿಕೊಳ್ಳುವಂತೆ ಮಾಡಿತು. ಶಿರೀನ್ ಅಪ್ಪನ ಕೈಯಿಂದ ಹೂವುಗಳನ್ನು ಎತ್ತಿಕೊಂಡು ಡಾಯ್ನಿಂಗ್ ಟೇಬಲ್‌ಮೇಲೆ ಇರಿಸುತ್ತ, “ನಿಜಕ್ಕೂ ಸುಂದರವಾದ ಹೂವುಗಳು,” ಎಂದಳು. ಹೂದಾನಿ ತರಲೆಂದು ಒಳಗೆ ಹೋದಳು.
“ಈ ಕ್ಷಮಾಪಣೆ ಗಿಮಾಪಣೆಯ ಮಾತುಗಳನ್ನು ಬಿಟ್ಟುಬಿಡಿ. ನಿಜಹೇಳುವುದಾದರೆ, ನಿನ್ನೆ ನಾನು ಗೌರಿಯ ಜೊತೆ ಮಾತನಾಡಿದ ರೀತಿಯಿಂದ ನನ್ನ ಬಗ್ಗೆ ನನಗೇ ನಾಚಿಕೆಯೆನಿಸತೊಡಗಿದೆ. ಇಷ್ಟೆಲ್ಲ ವಯಸ್ಸಾಗಿಯೂ ನಾನೇ ಒಬ್ಬ ಅಣ್ಣನ ಹಾಗೆ ನಡೆದುಕೊಳ್ಳಲಿಲ್ಲ. ಗೌರಿ ನಿಮ್ಮನ್ನು ಕಳುಹಿಸುವ ಬದಲು ಸ್ವತಃ ಬಂದಿದ್ದರೆ ನಾನೇ ಅವನಲ್ಲಿ ಕ್ಷಮೆ ಬೇಡುತ್ತಿದ್ದೆ. ಹೇಳಿ, ಹ್ಯಾಗೆ ಇದಾನೆ ನಮ್ಮ ಪುಂಡ ಗೌರೀಪ್ರಸಾದ?” ತನ್ನ ಮಾತಿನಲ್ಲಿ ಒಡಮೂಡಿದ ಸಹಜತೆಯಿಂದ ಬೆಹರಾಮನಿಗೆ ಸಮಾಧಾನವೆನಿಸಿತು.

ಬೆಹರಾಮನ ಹೆಂಡತಿ ನಾಲ್ಕೂ ಜನರಿಗಾಗಿ ಚಹ ತಂದಳು. ಹೂವುಗಳಿಗಾಗಿ ಹೂದಾನಿಯನ್ನು ಹುಡುಕಿ ಒಳಗೆ ಹೋದ ಶಿರೀನ್ ಇನ್ನೂ ಹೊರಗೆ ಬಂದಿರಲಿಲ್ಲ. “ನಿಮ್ಮ ಮಗಳೂ ಬರಲಿ,” ಎಂದು ಅಗರವಾಲ್ ಆರಂಭಿಸುವಷ್ಟರಲ್ಲಿ ಶಿರೀನ್ ಹೂದಾನಿಯೊಂದಿಗೆ ಹೊರಗೆ ಬಂದಳು:
“ಏರ್‌ಪೋರ್ಟಿಗೆ ಹೋಗುವ ಮೊದಲು ನನ್ನ ಬಳಿಯಿದ್ದ ಅಲ್ಪಸಮಯದಲ್ಲಿ ಒಂದು ಮಾತನ್ನು ತಿಳಿಸಿಯೇ ಹೋಗಬೇಕು ಅನ್ನಿಸಿತು. ಹಾಗೆಂದು ಈಗಲೇ ಬಂದೆ. ಮುಜುಗರಕ್ಕೆ, ತಪ್ಪು ಭಾವನೆಗಳಿಗೆ ಎಡೆಯಾಗದಿರಲಿ ಎಂದು ನೇರವಾಗಿ, ತಿಳಿಸಲು ಬಂದ ಮಾತಿಗೇ ಬರುತ್ತೇನೆ: ನನ್ನ ತಮ್ಮ ಗೌರೀಪ್ರಸಾದ ಇನ್ನಿಲ್ಲ. ಅವನು ಸತ್ತು ಈಗ ಮೂರು ವರ್ಷಗಳ ಮೇಲೆಯೇ ಆಗಿದೆ. ಊe ತಿಚಿs muಡಿಜeಡಿeಜ. ಇದೇ ಬಾಂದ್ರಾದಲ್ಲಿ. ಈ ಸಂಗತಿ ನಿಮಗೆ ಈವರೆಗೂ ಹೇಗೆ ಗೊತ್ತಾಗಲಿಲ್ಲ: ಅವನು ಮತ್ತೆಮತ್ತೆ ಪ್ರೀತಿಯಿಂದ ನೆನೆಯುತ್ತಿದ್ದ-‘ಒಥಿ ಜಿಡಿieಟಿಜ ಜಿಡಿom ಃಚಿಟಿಜಡಿಚಿ,’ ನೀವೇ ಆಗಿದ್ದಿರಿ; ಅವನು ಸಾಯುವ ಮೊದಲು ಕೊನೆಯ ಊಟ ಮಾಡಿದ್ದು ನಿಮ್ಮ ಮನೆಯಲ್ಲಾಗಿತ್ತು ಎನ್ನುವ ಸಂಗತಿ ನನಗೆ ನಿನ್ನೆಯವರೆಗೂ ಹೇಗೆ ಗೊತ್ತಾಗಲಿಲ್ಲ-ಇವೆಲ್ಲಾ ನಾವು ನಮ್ಮಷ್ಟಕ್ಕೇ ವಿಚಾರಮಾಡಿಕೊಳ್ಳಬೇಕಾದ ವಿಷಯಗಳು. ಯಾಕೆಂದರೆ ಇವು ನಮ್ಮ ಹಿಂದಿನ ಬದುಕಿನ ರೀತಿಗೆ ಸಂಬಂಧಪಟ್ಟವುಗಳಾಗಿವೆ.”

ಸುತ್ತಲೂ ಕೂತವರು ತಮ್ಮ ಕಿವಿಗಳನ್ನು ನಂಬದವರ ಹಾಗೆ ಕಣ್ಣರಳಿಸಿ, ಉಸಿರು ಬಿಗಿಹಿಡಿದು ಕೇಳುತ್ತಿದ್ದ ರೀತಿ ಮೊದಲೇ ಊಹಿಸಿಕೊಂಡಂತಹದೇ ಆಗಿರುವಾಗಲೂ ಅಗರವಾಲನ ಮುಜುಗರಕ್ಕೆ ಕಾರಣವಾಯಿತು:
“ಆರುವ ಮೊದಲೇ ಚಹ ತೆಗೆದುಕೊಳ್ಳೋಣ,” ಎಂದು ಕಪ್ಪನ್ನು ಎತ್ತಿಕೊಂದು, “ದಯಮಾಡಿ ನೀವೂ ತೆಗೆದುಕೊಳ್ಳಿ. ನಂಬಿ. ಯಾವುದೇ ಬಗೆಯ ದೂರು ಹೊತ್ತು ಬಂದಿಲ್ಲ. ನಿನ್ನೆ ಟೆಲಿಫೋನ್ ಮೇಲೆ ಕೇಳಿದ ಮಾತುಗಳಿಂದ ಚಕ್ಕನೆ ಸ್ಪಷ್ಟವಾದ ಕೆಲವು ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಂಡಾಗ ಮನಸ್ಸು ಹಗುರವಾದೀತು. ತಮ್ಮನ ಆತ್ಮಕ್ಕೂ ಶಾಂತಿ ದೊರಕೀತು ಎಂಬ ಆಸೆಯಿಂದ ಹೊತ್ತಿನ ಪರಿವೆ ಮಾಡದೇನೆ ಈಗ ಬಂದಿದ್ದೇನೆ. ಯಾವುದೇ ಬಗೆಯ ನಾಟಕೀಯತೆ ಬೇಡ. ನೀವೂ ಚಹ ತೆಗೆದುಕೊಂಡರೆ ನನಗೆ ಹೇಳಲು ಸುಲಭವಾದೀತು. ಇನ್ನೊಂದು ಮಾತು: ನನ್ನ ಮಾತು ಮುಗಿದದ್ದೇ ಇಲ್ಲಿಂದ ಓಡಿಹೋದರೆ ತಪ್ಪು ತಿಳಿಯಬೇಡಿ. ಏರ್‌ಪೋರ್ಟಿಗೆ ಹೋಗಬೇಕು. ಈಗಾಗಲೇ ತಡವಾಗಿದೆ. ಇನ್ನೊಮ್ಮೆ ಭೆಟ್ಟಿಯಾಗೋಣ. ಯಾವುದೇ ಬಗೆಯ ಉತ್ಪ್ರೇಕ್ಷೆಯಿಲ್ಲದೆ ಒಂದು ಸಂಗತಿಯನ್ನು ನಾನು ಕೂಡಲೇ ಒಪ್ಪಿಕೊಳ್ಳುತ್ತೇನೆ: ಅವನ ಸ್ವಭಾವದ ಹಲವು ವೈಚಿತ್ರ್ಯಗಳು ನನಗೇ ಯಾಕೆ, ಮನೆಯಲ್ಲಿಯ ಯಾರಿಗೂ ಅರ್ಥವಾಗದೇ ಉಳಿದವು. ಇವುಗಳಲ್ಲಿ ಒಂದು-ಉಳಿದವರ ನಂಬಿಕೆಗಳನ್ನು ಪ್ರಶ್ನಿಸುವ ತುಂಟತನ! ಚುಡಾಯಿಸುತ್ತಾನೆ ಎಂದು ಗೊತ್ತಿದ್ದೂ ನಾವು ಸಿಟ್ಟಿಗೆದ್ದರೆ ನಕ್ಕುಬಿಡುತ್ತಿದ್ದ. ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ನೋವು ಅನುಭವಿಸಿದವಳು ನನ್ನ ಹೆಂಡತಿಯೆ. ಇಷ್ಟಾಗಿಯೂ ಅತ್ತಿಗೆಯೆಂದರೆ ದೇವತೆಯೆಂಬಂತೆ ಅವಳನ್ನು ಪೂಜ್ಯಭಾವನೆಯಿಂದ ಕಾಣುತ್ತಿದ್ದ. ಅವಳ ಮನಸ್ಸನ್ನು ನೋಯಿಸಿದ್ದೇನೆ ಎಂದು ಗೊತ್ತಾದಾಗೆಲ್ಲ ಹೂವಿನ ಗುಚ್ಛ ಕೊಟ್ಟು ಕ್ಷಮೆ ಬೇಡುತ್ತಿದ್ದ. ಅವರಿಬ್ಬರ ನಡುವಿನ ಭಾಷೆಯಾಗಿತ್ತು, ಹೂವಿನ ಗುಚ್ಛ. ಅದನ್ನೇ ನೆನೆದು ಇವಳು ಇಂದಿಗೂ ಕಣ್ಣೀರು ಹಾಕುತ್ತಾಳೆ. ಮನೆಯಲ್ಲಿ ಅವನ ಸಾವನ್ನು ಎಲ್ಲರಿಗಿಂತ ಹೆಚ್ಚು ಹಚ್ಚಿಕೊಂಡವಳೂ ಇವಳೇ. ನೀವೇ ವರ್ಣಿಸಿದ ಹಾಗೆ ಪುಂಡ. ದುಷ್ಟನಲ್ಲ. ನೀವು ಅವನ ಬಗ್ಗೆ ಮಾಡಿಕೊಂಡ ಕಲ್ಪನೆಗೆ ಭಂಗ ತಂದಿದ್ದು ನಾನು-ತಮ್ಮ ಸತ್ತ ದುಃಖದ ಭರದಲ್ಲಿ ಅವನ ಕೊಲೆಯ ಬಗ್ಗೆ ಮಾಹಿತಿ ದೊರಕಿಸಲು ನಿಮಗೆ ಹಣ ಕೊಡಲು ಮಾಡಿದಾಗ, ಆಗ ನಾನು ಹುಚ್ಚನಾಗಿದ್ದೆ. ಈ ಕೊಲೆಯ ಹಿಂದಿನ ಗುಟ್ಟು ತಿಳಿಯಲು ನಾನು ಏನೂ ಮಾದಲು ಸಿದ್ಧನಿದ್ದೆ. ನಿಮ್ಮನ್ನು ‘ನನ್ನ ಬಾಂದ್ರಾದ ಗೆಳೆಯ’ನೆಂದು ಕರೆಯುತ್ತಿದ್ದನೇ ಹೊರತು ಹೆಸರು ಹೇಳಿರಲಿಲ್ಲ. ಹೇಗೆ ಪರಿಚಯ ಎಂದು ತಿಳಿಸಿರಲಿಲ್ಲ. ನಿಮ್ಮ ಕೆಲಸವೇನು ವಯಸ್ಸೇನು-ಒಂದೂ ಗೊತ್ತಾಗಲಿಲ್ಲ. ಅಷ್ಟೇಕೆ, “ಙou meಚಿಟಿ ಥಿouಡಿ giಡಿಟ ಜಿಡಿieಟಿಜ ಜಿಡಿom ಃಚಿಟಿಜಡಿಚಿ?” ಎಂದು ಅತ್ತಿಗೆ ಚೇಷ್ಟೆ ಮಾ/ದಿದರೆ ನಕ್ಕುಬಿಡುತ್ತಿದ್ದ! ಅವನ ಸಮವಯಸ್ಕರೆಂದೇ ಭಾವನೆಯಾಗಿತ್ತು. ಮಾತನಾಡುತ್ತಿದ್ದ ರೀತಿಯಿಂದ ಅವನಿಗೆ ತುಂಬ ಬೇಕಾದವರೆನ್ನುವಷ್ಟು ಗೊತ್ತಿತ್ತು. ಕೊಲೆಯ ಸಂಜೆ, ಅಮ್ಮನ ಹತ್ತಿರ-‘ಅಮ್ಮಾ, ನನ್ನ ಬಾಂಅನೊನ್ಯ್ಮೌಸ್ ತೆಲೆಫೊನೆ ಚಲ್ಲ್ ಬಂತು. ಈ ಟೆಲಿಫೋನ್ ಕರೆ ಬಂದದ್ದು ನಾನು ಪತ್ರಿಕೆಯೊಂದಕ್ಕೆ ಸಂಬಂಧಪಟ್ಟ ವ್ಯಕ್ತಿಯಾಗಿದ್ದರಿಂದ ಹೊರತು ಕೊಲೆಯಾದವನ ಅಣ್ಣನೆಂದಲ್ಲ ಎಂದು ನನ್ನ ತಿಳಿವಳಿಕೆ. ನಮ್ಮ ದಂಧೆಯಲ್ಲಿ ಇದು ತೀರ ಸಾಮಾನ್ಯ ಸಂಗತಿ. ಆದರೂ ಎಂಥ ಕ್ರೂರ ಆಕಸ್ಮಿಕ, ನೋಡಿ. ಫೋನ್ ಮಾಡಿದವರು ನಿಮ್ಮ ಟೆಲಿಫೊನ್ ನಂಬರು ಕೊಟ್ಟರು, ಪೋಚಖಾನಾವಾಲಾ ಎಂದು ಹೆಸರು ಕೊಟ್ಟರು ಹಾಗೂ ನಿಮ್ಮ ಮನೆಯಲ್ಲಿ ಕೆಲಸ ಮಾಡುವ ಹುಡುಗನಿಗೆ ಈ ಕೊಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇದೆಯೆಂದು ತಿಳಿಸಿದರು. ಅವರು ಯಾರೆಂಬುದು ಕೊನೆಗೂ ತಿಳಿಯಲಿಲ್ಲ. ಇನ್ನು ಕರುಣಾಕರನ್: ನಮ್ಮಿಬ್ಬರ ಭಾವನಾಲೋಕದಲ್ಲೂ ಈ ಹುಡುಗ ಎಬ್ಬಿಸಿದ ಕೋಲಾಹಲವನ್ನು ನಾನು ಬಲ್ಲೆ. ಅವನಿಗೆ ಈ ಕೊಲೆಯಲ್ಲಿದ್ದ ಆಸ್ಥೆ ನನಗಿನ್ನೂ ಬಿಡಿಸಲಾಗದ ಒಗಟಾಗಿಯೆ ಉಳಿದಿದೆ. ಹುಡುಗ, ಪಾಪ! ಹೇಗೋ ಯಾಕೋ ಮೂರು ವರ್ಷಗಳ ಹಿಂದೆ ಕೊಲೆಯಾದವನು ತನ್ನ ಅಣ್ಣನೆಂದೇ ತಿಳಿದಹಾಗಿದೆ. ಸತ್ತವನು ನನ್ನ ತಮ್ಮನೆಂದು ಹೇಳಲು ನನಗೆ ನಾಲಗೆಯೆ ಏಳದಾಯಿತು. ಅವನು ಒಟ್ಟು ಮಾಡಿದ ಮಾಹಿತಿ ಈ ಕೊಲೆಗೆ ಸಂಬಂಧಪಟ್ಟದ್ದೆಂದು ನಂಬಲು ಇಂದಿಗೂ ಮನಸ್ಸು ಒಪ್ಪದಾಗಿದೆ. ಮೇಲಾಗಿ, ‘ನನ್ನ ತಮ್ಮ ಕೊಲೆಯಾದ,’ ಎಂದು ನಾನಾಗಿ ಈವರೆಗೂ ಯಾರಿಗೂ ಹೇಳಿದ್ದೇ ಇಲ್ಲ. ಈಹೊತ್ತು ನಿಮಗೆ ಹೇಳಿದ್ದೇ ಮೊದಲ ಬಾರಿ ‘ನನ್ನ ತಮ್ಮ’ ಹಾಗೂ ‘ಕೊಲೆಯಾದ’ ಈ ಪದಗಳ ಜೊಡಣೆಯೇ ಅಸಹ್ಯವೆನಿಸುತ್ತದೆ, ಏನೇ ಹೇಳಿ, ತಮ್ಮನಂಥ ಮೌಲಿಕ ವಸ್ತು ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ಕರುಣಾಕರನ್ನನ ರಿಪೋರ್ಟು ಓದುವಿರಂತೆ. ಪ್ರತಿಯೊಬ್ಬನೂ ಓದಬೇಕಾದದ್ದು ಅದು. ಪ್ರಕಟವಾಗುತ್ತದೆ. ಕನಿಷ್ಠ ಕರುಣಾಕರನ್ನನ ಸಲುವಾಗಿಯಾದರೂ ಪ್ರಕಟವಾಗಲೇಬೇಕು. ಹೆದರಬೇಡಿ, ಅವನು ಸುರಕ್ಷಿತವಾಗಿದ್ದಾನೆ. ನಾನೇ ವಿಮಾನದ ಟಿಕೆಟ್ಟು ತೆಗೆಸಿಕೊಟ್ಟು ವಿಮಾನ ಹತ್ತಿಸಿ ಬಂದಿದ್ದೇನೆ-ಕೊಯಮತ್ತೂರಿಗೆ. ಅಲ್ಲಿಂದ ಮುಂದೆ ಬಸ್ಸಿನ ಪ್ರಯಾಣವಂತೆ. ವಿಮಾನನಿಲ್ದಾಣಕ್ಕೆ ಹೋಗುತ್ತಿದ್ದಾಗ, ಅಣ್ಣನನ್ನು ಮನಸ್ಸಿನಲ್ಲಿ ತುಂಬಿಕೊಂಡು, ಕಾರಿನಲ್ಲಿ, ನನ್ನ ಬದಿಯಲ್ಲಿ ಕೂತ ಹುಡುಗ ನನ್ನನ್ನು ಕಾಡಿದ ರೀತಿಯನ್ನು ಬಣ್ಣಿಸಲಾರೆ. ಎಲ್ಲರನ್ನೂ ಬಿಟ್ಟು ಈ ಹುಡುಗ ನನ್ನನ್ನೇ ಹುಡುಕಿಕೊಂಡು ಬಂದದ್ದೇಕೆ? ಅರಿಯದವನಾಗಿದ್ದೇನೆ. ಎಲ್ಲವೂ ಅಸ್ಪಷ್ಟ, ಅನಿಶ್ಚಿತ. ಯಾವುದೂ ಒಂದಕ್ಕೊಂದು ಸಕಾಲದಲ್ಲಿ ಹೊಂದುವುದಿಲ್ಲ. ಮನಸ್ಸನ್ನು ಗಾಸಿಗೊಳಿಸುತ್ತಿದ್ದುದಕ್ಕೆ ಸಂಬಂಧಪಟ್ಟ ಎಲ್ಲ ಸಂಗತಿಗಳೂ ಒಂದೇ ಕಾಲಕ್ಕೆ ಒಂದೇ ಜಾಗದಲ್ಲಿ ನೋಡಲು ಸಿಗುವಂತಿದ್ದರೆ! ಆ ದಿನವೂ ಸಹ ಇಂತಹದೇ ಒಂದು ಹತಾಶಭಾವದಿಂದ ಬಳಲುತ್ತಿರುವಾಗಲೇ ನಿಮ್ಮ ಟೆಲಿಫೋನ್ ಕರೆ ಬಂದಿತ್ತು, ಕರುಣಾಕರನ್ನನ ವಿಳಾಸ ಕೇಳಲು. ನೀವು ಯಾರೆಂದು ತಿಳಿಯಲಿಲ್ಲ. ನನ್ನ ತಮ್ಮನನ್ನು ಗೌರೀ ಎಂದು ಕರೆಯುವ ವ್ಯಕ್ತಿಗೆ ಗೌರಿ ಸತ್ತು ಮೂರು ವರ್ಷಗಳಾದದ್ದು ಕೂಡ ಗೊತ್ತಿಲ್ಲವಲ್ಲ ಎಂದು ಮನಸ್ಸು ರೋಸಿಹೋಯಿತು. I ತಿಚಿs ಚಿಟmosಣ hಥಿsಣeಡಿiಛಿಚಿಟ. ‘ಗೌರಿ ಸತ್ತುಹೋದ’ ಎನ್ನಬೇಕೆಂದುಕೊಂಡದ್ದನ್ನು ‘ಕರುಣಾಕರನ್ ಸತ್ತುಹೋದ’ ಎಂದು ಚೀರಿ ಹೇಳಿದ್ದೆ. ನೆನಪಿದೆ. ಹಾಗೇಕಾಯಿತೆಂದು ವಿವರಿಸಲಾರೆ. ಸದ್ಯ, ದಯಮಾಡಿ ನನ್ನನ್ನು, ನನ್ನ ತಮ್ಮನನ್ನು ಕ್ಷಮಿಸಿಬಿಡಿ. ಕಲಕತ್ತೆಯಿಂದ ಹಿಂತಿರುಗಿ ಬಂದಮೇಲೆ ಮತ್ತೆ ಬಂದು ಕಾಣುತ್ತೇನೆ. ಈಗ ಓಡಬೇಕು. ಇಲ್ಲವಾದರೆ ಪ್ಲೇನು ತಪ್ಪೀತು. ಗುಡ್‌ಬಾಯ್!”

ಬೆಹರಾಮನ ಮನೆಯಲ್ಲಿ ಯಾರೂ ಇಂಥ ಭೇಟಿಗೆ ಸಿದ್ಧವಾಗಿರಲೇ ಇಲ್ಲ. ಇಷ್ಟು ನಸುಕಿನಲ್ಲೇ ಎದ್ದುಬಂದು, ತನ್ನ ಹೆಸರು ಅಗರವಾಲ್ ಎಂದು ಹೇಳಿ ಯಾರಾದರೂ ಭೆಟ್ಟಿಕೊಟ್ಟದ್ದಾದರೂ ಹೌದೆ? ಅಥವಾ ಬರಿಯ ಭ್ರಮೆಯೆ? -ಎಂಬ ಸಂಶಯ ಪ್ರತಿಯೊಬ್ಬರ ಮನಸ್ಸಿನ ಮೇಲೂ ತನ್ನ ಹಿಡಿತವನ್ನು ಸ್ಥಾಪಿಸಹತ್ತಿದಾಗ ಪರಸ್ಪರರ ಮೋರೆಗಳೇ ಈ ಸಂಶಯ ನಿರಾಧಾರವೆಂದು ಸಾರುತ್ತಿದ್ದುವು. ಡಾಯ್ನಿಂಗ್ ಟೇಬಲ್ ಮೇಲಿನ ಹೂವುಗಳು ಕೂಡ ಅದನ್ನೇ ಹೇಳುತ್ತಿದ್ದವು. ತಾವು ಮೂವರೂ ಆಗಿನಿಂದಲೂ ದಂಗುಬಡೆದವರ ಹಾಗೆ ಕುಳಿತುಬಿಟ್ಟಿದ್ದೇವೆ ಎನ್ನುವುದು ಲಕ್ಷ್ಯಕ್ಕೆ ಬಂದಾಗ-ಅರೆ! ಹಾಗಾದರೆ ಅಗರವಾಲ ಹೊರಗೆ ಹೋಗುವಾಗ ತಮ್ಮಲ್ಲಿಯ ಯಾರೂ ಎದ್ದು ಬಾಗಿಲವರೆಗೆ ಹೋಗಿ ಅವನನ್ನು ಬೀಳ್ಕೊಡಲಿಲ್ಲ ಎಂಬುದು ಹೊಳೆದು, ಶಿರೀನ್ ಧಡಕ್ಕನೆ ಎದ್ದು ಬಾಗಿಲ ಕಡೆಗೆ ಧಾವಿಸಿದಳು. ಸೀತೆ ಕದವನ್ನು ಮುಚ್ಚಿ ಅಗಳಿ ಹಾಕುತ್ತಿದ್ದಳು. ‘ನೀನು ಹೇಗೆ?’ ಎಂದು ಕೇಳುವವಳ ಹಾಗೆ ಶಿರೀನ್ ನೋಡಿದಾಗ-“ಇದೇ ಈಗ ಹೊರಗೆ ಹೋದವರು, ಕದ ಹೇಗೆ ತೆರೆಯಬೇಕೋ ತಿಳಿಯದೆ ಪೇಚಾಡುತ್ತಿದ್ದರು. ನಾನು ಸದ್ದು ಕೇಳಿ ಹೊರಗೆ ಬಂದು ತೆರೆದುಕೊಟ್ಟೆ,” ಎಂದಳು. ಶಿರೀನಳಿಗೆ ತಮ್ಮ ಕೈಯಿಂದಾದ ತಪ್ಪು ತಿಳಿದಾಗ ಅರರೇ! ಅನ್ನಿಸಿತು. ಲಗುಬಗೆಯಿಂದ ಬಾಲ್ಕನಿಗೆ ಬಂದು ನೋಡುವಷ್ಟರಲ್ಲಿ ಕಾರೂ ಹೊರಟುಹೋಗಿತ್ತು.

ಹೇಳದೇ ಕೇಳದೇ ಬಂದ. ನನ್ನ ತಮ್ಮ ಇನ್ನಿಲ್ಲ, ಮೂರು ವರ್ಷಗಳ ಹಿಂದೆಯೇ ಅವನು ಸತ್ತ ಎಂದು ಸುದ್ದಿ ಕೊಟ್ಟ. ತಮ್ಮನಷ್ಟು ಮೌಲಿಕವಾದದ್ದು ಈ ಜಗತ್ತಿನಲ್ಲಿ ಇನ್ನೊಂದಿಲ್ಲ ಎಂದು ತತ್ವಜ್ಞಾನಿಯಂತೆ ಸಾರಿದ. ಹೊರಟುಹೋದ; ಅವನು ಹಾಗೆ ಹೊರಟುಹೋದದ್ದೇ ಶಿರೀನಳಿಗೆ ತನ್ನೊಳಗಿನ ಸತ್ವಪೂರ್ಣವಾದದ್ದೇನೋ ಕಳೆದುಹೋದಂಥ ಅನುಭವವಾಯಿತು. ನಿಂತಲ್ಲೇ ಕಾಲು ಸೋತುಬಂದಂತಾಗಿ ಹತ್ತಿರವಿದ್ದ ಆರಾಮಕುರ್ಚಿಯಲ್ಲಿ ಕುಸಿದಳು. “ಇನ್ನು ಮುಂದೆ ನನ್ನ ಮಟ್ಟಿಗಂತೂ ಈ ಮನೆಯಲ್ಲಿ ‘ಪಾತ್ರಾನೂಮಚ್ಛಿ’ ವರ್ಜ್ಯ,” ಎನ್ನುತ್ತ ತನ್ನ ಮುಂದಿನ ಕುರ್ಚಿಯಲ್ಲಿ ಬಂದು ಕುಳಿತ ಅಮ್ಮನ ಮನಸ್ಸಿನಲ್ಲಿ ಮೂಡಿದ ಚಿತ್ರವನ್ನು ಶಿರೀನ್ ಸುಲಭವಾಗಿ ಊಹಿಸಿದ್ದಳು. ಅಮ್ಮನ ಕಡೆಗೆ ನೋಡಿದಾಗ, ಅವಳ ಬಾಯಿಂದ ಸುಸ್ಕಾರ ಹೊರಟಿದ್ದು ಕೇಳಿಸಿತು. ಬೆಹರಾಮ್ ಸೋಫಾದಲ್ಲಿ ಕುಳಿತಲ್ಲಿಂದ ಎದ್ದು ಹೆಂಡತಿ-ಮಗಳು ಕುಳಿತಲ್ಲಿಗೆ ಬಂದ. ಹೆಂಡತಿಯ ಕಡೆಗೊಮ್ಮೆ, ಮಗಳ ಕಡೆಗೊಮ್ಮೆ ನಿದ್ದೆಗಣ್ಣಿನಲ್ಲಿದ್ದವನ ಹಾಗೆ ಮಿಕಿಮಿಕಿ ನೋಡುತ್ತ ನಿಂತ. ಆಮೇಲೆ ತನ್ನ ಬಾಯಿ ಕೂತವರ ಕಿವಿಗಳಿಗೆ ಹತ್ತಿರವಾಗುವಂತೆ ಬಗ್ಗಿ, ಅನುಮಾನಿಸುತ್ತ, “ನಸುಕಿನಲ್ಲಿ ಇಲ್ಲಿ ಯಾರೋ ಬಂದುಹೋದರು, ಅಲ್ಲವೆ?” ಎಂದು ಕೇಳಿದ. ಶಿರೀನ್ ಅಪ್ಪನ ಮೋರೆಯ ಕಡೆಗೆ ನೋಡದೆ, “ಹೌದು,” ಎಂದಳು. ತುಸು ಹೊತ್ತಿನ ಮೇಲೆ, “ಆರು ಗಂಟೆಗೇ ಎದ್ದಿದ್ದೆ. ಮಲಗುವ ಕೋಣೆಗೆ ಹೋಗಿ ತುಸು ಅಡ್ಡವಾಗಲ್ಲ. ಈ ಹೊತ್ತು ಹೇಗೂ ಆಫೀಸಿಗೆ ಹೋಗುವುದಿಲ್ಲ ಅನ್ನುತ್ತಿದ್ದೆ. ಬ್ರೇಕ್‌ಫಾಸ್ಟಿಗೆ ಎಬ್ಬಿಸುತ್ತೇನೆ,” ಎಂದಳು. ಬೆಹರಾಮ್ ಇದೇ ಸೂಚನೆಗೆ ಕಾಯುತ್ತಿದ್ದವನಹಾಗೆ, ಮಿನಿಟಿಗೆ ಒಂದು ಹೆಜ್ಜೆ ಇಡುತ್ತ ನಿಧಾನವಾಗಿ ಮಲಗುವ ಕೋಣೆಗೆ ನಡೆದ. ಸೀತೆ ಅದಾಗಲೇ ದಿನದ ಪದ್ಧತಿಯ ಪ್ರಕಾರ ಹಾಸಿಗೆಯ ಬಟ್ಟೆಗಳನ್ನು ತೆಗೆದು ಮೇಲುಹೊದಿಕೆಯನ್ನು ಹಾಕಿಯಾಗಿತ್ತು. ಕಿಡಕಿಯ ಪರದೆಗಳನ್ನೂ ಬದಿಗೆ ಸರಿಸಿಟ್ಟಿದ್ದಳು. ಆದರೆ ಇದಾವುದೂ ಲಕ್ಷ್ಯಕ್ಕೆ ಬಾರದವನ ಹಾಗೆ, ಬಂದರೂ ಅದರ ಪರಿವೆ ಮಾಡದವನ ಹಾಗೆ ಹೊರಗೆ ಹೋಗುವಾಗ ತೊಟ್ಟ ಉಡುಪಿನಲ್ಲೇ ಹಾಸಿಗೆಯಲ್ಲಿ ಒರಗಿದ. ಹಾಗೆ ಒರಗಿದ ಕೆಲವೇ ನಿಮಿಷಗಳಲ್ಲಿ ಬಾಗಿಲಲ್ಲಿ ಕಾಣಿಸಿದ ಸೀತೆಗೆ ಶಿರೀನಳನ್ನು ಕರೆಯುವಂತೆ ಕೇಳಿಕೊಂಡ. ಶಿರೀನ್ ಒಳಗೆ ಬಂದಮೇಲೆ-“ಗೌರೀಪ್ರಸಾದ ಬಂದಮೇಲೆ ಎಬ್ಬಿಸಲು ಮರೆಯಬೇಡ,” ಎಂದು ತಾಕೀತು ಮಾಡುವ ಧಾಟಿಯಲ್ಲಿ ಹೇಳಿ, ಅವಳ ಒಪ್ಪಿಗೆಯ ಹಾದಿ ಕಾಯದೇಯೆ ಕಣ್ಣು ಮುಚ್ಚಿದ.

ಸ್ವತಃ ತಾನೇ ಅಂತಹದೇ ಮೂಡಿನಲ್ಲಿದ್ದ ಶಿರೀನಳಿಗೆ ಅಪ್ಪನ ಮಾತಿನಲ್ಲಾಗಲಿ, ಮಲಗಿದ ರೀತಿಯಲ್ಲಾಗಲಿ ವಿಶೇಷವೇನೂ ಕಾಣಲಿಲ್ಲ. ಅಡುಗೆ ಮನೆಯಲ್ಲಿದ್ದ ತಾಯಿಯನ್ನು ಕೂಡುತ್ತ, “ಈ ಅಚಾನಕ ಭೇಟಿಯಿಂದ ಚೇತರಿಸಿಕೊಳ್ಳಲು ನಮಗೆ ಬಹಳ ಕಾಲ ಹಿಡಿದೀತು,” ಎಂದಳು, ಹಾಗೆ ಹೇಳಿದರೆ ಅಪ್ಪ ಯಾಕೆ ಕರೆದಿದ್ದ ಎನ್ನುವುದು ಅಮ್ಮನಿಗೆ ಗೊತ್ತಾಗುತ್ತದೆ ಎಂದು ಬಗೆದವಳ ಹಾಗೆ. ತುಸು ತಡೆದು, “ಅಗರವಾಲನ ಅಣ್ಣ ಇನ್ನೊಮ್ಮೆ ಭೇಟಿಯಾದರೆ ವಾಸುದೇವನ್ ಬಿಟ್ಟುಹೋದ ಹಕ್ಕಿಯ ಗರಿಯನ್ನು ಕರುಣಾಕರನ್‌ಗೆ ಮುಟ್ಟಿಸುವಂತೆ ಕೇಳಿಕೊಳ್ಳಬೇಕು. ವಾಸುದೇವನ್ ನಿಜಕ್ಕೂ ಅವನ ಅಣ್ಣನಾದರೆ ಬಂದು ಹುಡುಕಲಿ…ಯಾರಿಗೆ ಗೊತ್ತು, ಈಗಾಗಲೇ ಭೇಟಿಯಾಗಿರಲೂಬಹುದು,” ಎಂದಳು. ಇನ್ನೂ ತಡೆದು, “ಅಮ್ಮಾ, ರಾತ್ರಿ ಕೇಕೀಗೆ ಫೋನ್ ಮಾಡೋಣವೆ?” ಎಂದು ಕೇಳಿದಳು. ಮೊಟ್ಟಮೊದಲ ಬಾರಿಗೇ ಎನ್ನುವಂತೆ ಶಿರೀನಳಿಗೆ ಅಳು ಬಂದುಬಿಟ್ಟಿತ್ತು: ನೀರಿನಿಂದ ತುಂಬಿಕೊಂಡ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಹಿಂದೆ ನೋಡಿದಾಗ, ಬಾಗಿಲ ಚೌಕಟ್ಟಿನ ಮೇಲೆ ಎರಡೂ ಕೈಗಳನ್ನಿಟ್ಟು ನಿಂತ ಅಪ್ಪನ ಮೊರೆ ನೋಡಿದ್ದೇ ‘ಅಪ್ಪಾ’ ಎಂಬ ಚೀತ್ಕಾರ ತಂತಾನೆ ಅವಳ ಬಾಯಿಂದ ಹೊರಟಿತು. ಶಿರೀನಳ ತಾಯಿಯೂ ಆ ಮೋರೆ ನೋಡಿ ಗಾಬರಿಯಾದಳು: ಇಬ್ಬರೂ ಅವನ ಕೈರಟ್ಟೆಗಳನ್ನು ಹಿಡಿದು ಮತ್ತೆ ಮಲಗುವ ಕೋಣೆಗೆ ಕರಕೊಂಡುಹೋದರು. ಹಾಸಿಗೆಯ ಮೇಲೆ ಅಡ್ಡವಾಗುವಷ್ಟರಲ್ಲಿ-“ಅವನು ಬಂದರೆ ಎಬ್ಬಿಸಲು ಮರೆಯಬೇಡಿ,” ಎಂದು ಕೇಳಿಕೊಂಡ. ಮಾತು ಸ್ಪಷ್ಟವಾಗಿತ್ತು. ಹೆಂಡತಿ “ಯಾರು?” ಎಂದು ಕೇಳಿದಾಗ, ಒಮ್ಮೆ “ಗೌರಿ” ಎಂದ. ಇನ್ನೊಮ್ಮೆ “ಕರುಣಾಕರನ್” ಎಂದ. ವಾಸುದೇವನ್-ಕೇಕಿಯರ ಹೆಸರುಗಳನ್ನೂ ಉಚ್ಚರಿಸುವಷ್ಟರಲ್ಲಿ ಕಣ್ಣುಗಳು ಬಾಡತೊಡಗಿದುವು.

ಭಾಗ: ಐದು
ಅಧ್ಯಾಯ ಹನ್ನೊಂದು

ಬೆಹರಾಮನನ್ನು ಅಂದು ಇಡಿಯ ದಿನ ಕಾಡಿದ ಹಲವು ಸಂಗತಿಗಳು, ಆಮೇಲೆ ಪ್ರಕಟವಾದ ಕರುಣಾಕರನ್ನನ ರಿಪೋರ್ಟಿನಲ್ಲಿ ಸೇರಿಕೊಂಡ ಹಲವು ವಿವರಗಳು -ಇವೆಲ್ಲವುಗಳ ಆಕೃತಿ ಅವನಿಗೇ ಸ್ಪಷ್ಟವಾಗಲು ಮುಂದೆ ಬಹಳ ದಿನಗಳು ಹಿಡಿದುವು. ಆದರೆ ಅದು ಸ್ಪಷ್ಟವಾಗಲು ತೊಡಗಿದಹಾಗೆ ಈ ಎಲ್ಲದಕ್ಕೆ ಜನ್ಮವಿತ್ತ ವಾಸ್ತವವೇ ಗ್ರಹಿಕೆಯಲ್ಲಿ ಬಿರುಕುಬಿಡುತ್ತ ನಡೆದಹಾಗಿತ್ತು: ಒಂದು ದಿನ ಮಧ್ಯರಾತ್ರಿಯ ಹೊತ್ತಿಗೆ, “ಕೋಯೀ ಬಚಾವ್,” ಎಂದು ಅವನ ಬಾಯಿಂದ ಹೊರಟ ಚೀತ್ಕಾರ ಮನೆಯವರನ್ನು ಮಾತ್ರವಲ್ಲದೆ ಇಬ್ಬದಿಯ ನೆರೆಯವರನ್ನೂ ಎಚ್ಚರಿಸಿತ್ತು. ಅವರೆಲ್ಲ ಅವನ ಸುತ್ತಲೂ ನೆರೆದು ಏನಾಯಿತೆಂದು ವಿಚಾರಿಸುವ ಹೊತ್ತಿಗೆ ತನ್ನ ಸುತ್ತಲಿನ ದರೋಡೆಯ ಸಂಬಂಧವನ್ನೇ ಅವನು ಕಳಚಿಕೊಂಡಂತಿತ್ತು; ಪಿಳಿಪಿಳಿ ನೋಡಿದನೇ ಹೊರತು ಮಾತಾಡಲಿಲ್ಲ. ಶಿರೀನಳೇ ಪುಸಲಾಯಿಸಿ ಕಾಂಪೋಜ್ ಗುಳಿಗೆಯನ್ನು ನೀರಿನೊಂದಿಗೆ ಕೊಟ್ಟು ಮಲಗಿಸಿದಳು. ಕೆಟ್ಟ ಕನಸನ್ನು ಕಂಡು ಬೆಚ್ಚಿರಬೇಕೆಂದುಕೊಂಡರೂ ಅವನು ನೋಡುತ್ತಿದ್ದ ರೀತಿಯನ್ನು ನೆನೆದಾಗ ಶಿರೀನಳಿಗೆ ಆ ಧೈರ್ಯ ಉಳಿಯುತ್ತಿರಲಿಲ್ಲ. ಬೆಳಿಗ್ಗೆ, ಡಾಕ್ಟರರ ಸಲಹೆ ಪಡೆಯುವುದು ಒಳ್ಳೆಯದು, ಎಲ್ಲ ಸರಿಯಾಗುತ್ತದೆ ಎಂದು ಸಮಾಧಾನ ತಂದುಕೊಂಡರೂ ಶಿರೀನಳಿಗಾಗಲಿ, ಅವಳ ತಾಯಿಗಾಗಲಿ ಹಾರಿಹೋದ ನಿದ್ದೆ ಬೇಗ ತಿರುಗಿ ಬರಬಹುದೆಂದು ತೋರಲಿಲ್ಲ: ಇಬ್ಬರೂ ಬೆಹರಾಮನ ಕೋಣೆಯ ದೀಪವನ್ನು ಆರಿಸಿ ಕದವನ್ನು ಮುಂದೆ ಮಾಡಿ ದಿವಾಣಖಾನೆಯ ಸೋಫಾದಲ್ಲಿ ಬಂದು ಕುಳಿತರು: ಮುಂದಿನ ವಾರವೇ, ಬೆಹರಾಮನಿಗೆ ಅವನ ಆಫೀಸಿನಲ್ಲಿ, ಮುವ್ವತ್ತಾರು ವರ್ಷಗಳಷ್ಟು ಕಾಲ ಅವನು ಗೈದ ಸುದೀರ್ಘ ಹಾಗೂ ಸಮರ್ಥ ಸೇವೆಯನ್ನು ನೆನೆದು ವಿದಾಯ ಹೇಳುವ ‘ಪಾರ್ಟಿ’ ಬೇರೆ ಇತ್ತು. ಅಮ್ಮನಿಗೂ ಆಹ್ವಾನವಿತ್ತು. ಕಲ್ಕತ್ತಾ, ದಿಲ್ಲಿ, ಮದ್ರಾಸ್, ಬೆಂಗಳೂರು ಆಫೀಸುಗಳಿಂದಲೂ ಜನ ಬರುವವರಿದ್ದರು. ಬೆಳಗಾಗುತ್ತಲೇ ಮಾಡಬೇಕಾದ ಮೊಟ್ಟಮೊದಲ ಕೆಲಸವೆಂದರೆ ಅಪ್ಪನ ಆಫೀಸಿಗೆ ಫೋನ್ ಮಾಡಿ ಈ ಪಾರ್ಟಿಯನ್ನು ರದ್ದುಪಡಿಸಲು ಕೇಳಿಕೊಳ್ಳುವುದು ಎಂದು ಯೋಚಿಸುವಷ್ಟರಲ್ಲಿ ತಾವು ಕಲಕತ್ತೆಗೆ ಹೋಗುವ ವಿಮಾನದ ಟಿಕೆಟ್ಟುಗಳನ್ನೂ ಅಲ್ಲಿಂದ ಮುಂದೆ ಜಮ್‌ಶೇದ್‌ಪೂರಕ್ಕೆ ಹೋಗುವ ಟ್ರೇನು ಟಿಕೆಟ್ಟುಗಳನ್ನೂ ರದ್ದುಮಾಡಿಸಬೇಕಾದೀತೇನೋ ಎಂಬ ವಿಚಾರ ತಲೆಯಲ್ಲಿ ಬಂದಾಗ ಮಾತ್ರ ತಾವು ಸಿಲುಕಿಕೊಂಡ ಪರಿಸ್ಥಿತಿಯ ನಿಜವಾದ ಸ್ವರೂಪ ಹೊಳೆಯದೇ ಇರಲಿಲ್ಲ. ಆದರೂ ಅದನ್ನು ಕೂಡಲೇ ಇದಿರಿಸಲು ಸಿದ್ಧರಿಲ್ಲದವರ ಹಾಗೆ-ಕಾಂಪೋಜ್ ಗುಳಿಗೆಯಿಂದ ನಿದ್ದೆ ಹತ್ತಿದರೆ ಬೆಳಗಾಗುವ ಹೊತ್ತಿಗೆ ಎಲ್ಲವೂ ತಿಳಿಯಾಗುತ್ತದೆ; ಕೆಟ್ಟ ಕನಸನ್ನು ಕಂಡದ್ದೇ ಅವನು ಹಾಗೆ ಚೀರಿಕೊಳ್ಳಲು ಕಾರಣವಾಗಿದೆ, ಎಂದು ಸಮಾಧಾನ ತಂದುಕೊಳ್ಳುವ ಪ್ರಯತ್ನ ಮಾಡುತ್ತ ತಮ್ಮ ತಮ್ಮ ಮಲಗುವ ಕೋಣೆಗೆ ಹೋಗಲು ಎದ್ದರು. ಇಬ್ಬರ ಮನಸ್ಸಿನಲ್ಲೂ ಆಗ ಬಂದ ವಿಚಾರ ಬೆಹರಾಮನ ಬಾಯಿಂದ ಹೊರಟ ಚೀತ್ಕಾರವನ್ನು ಕುರಿತದ್ದಾಗಿರುವಾಗಲೂ ಅದನ್ನು ವ್ಯಕ್ತಪಡಿಸುವ ಧೈರ್ಯವಾಗದೆ “ಬೆಳಿಗ್ಗೆ ಮಾತನಾಡೋಣ,” ಎಂದು ಚುಟುಕಾಗಿ ಹೇಳಿ ತಮ್ಮ ಮಲಗುವ ಕೋಣೆ ಸೇರಿದರು.

ಬೆಹರಾಮನ ಬಾಯಿಂದ ಹೊರಟ ‘ಕೋಯೀ ಬಚಾವ್’ ಎನ್ನುವ ಚೀತ್ಕಾರ ಅವನು ಮನೆಯಲ್ಲಿ ಆಡದ ಹಿಂದೀ ಭಾಷೆಯಲ್ಲಾಗಿತ್ತು. ಮೂರು ವರ್ಷಗಳ ಹಿಂದೆ ರುಂಡವಿಲ್ಲದ ಹೆಣವನ್ನು ನೋಡಿ ಬಂದು ಮನೆ ಹೊಕ್ಕ ರಾತ್ರಿ ವಾಸುದೇವನ್ ಬೊಬ್ಬೆಹಾಕಿದ್ದು ಕೂಡ ಇವೇ ಶಬ್ದಗಳಲ್ಲಾಗಿತ್ತು. ಅಮ್ಮ ತನ್ನ ಕೋಣೆಗೆ ಹೋಗುವ ಮೊದಲು ತನ್ನತ್ತ ನೋಡಿದ ರೀತಿಯನ್ನು ನೆನೆದು ಹಾಸಿಗೆಯಲ್ಲಿ ಒರಗಿದಲ್ಲೇ ಶಿರೀನ್‌ಗೆ-ಅಮ್ಮ ಕೂಡ ಅಗರವಾಲನ ಹೆಣವನ್ನು ಕುರಿತೇ ಯೋಚಿಸುತ್ತಿರಬೇಕು, ಅನ್ನಿಸಿತು. ಅಪ್ಪನ ಈಗಿನ ಮಾನಸಿಕ ಸ್ಥಿತಿಗೆ ಕಾರಣವಾಗಿರಬಹುದಾದ ಭಾವನಾಕ್ರಮವನ್ನು ಕೇವಲ ಊಹಿಸುವುದರಿಂದಲೇ ಹೊಟ್ಟೆ ಹೊರಳಿಬಂದಂತಾಯಿತು. ಕರುಣಾಕರನ್-ವಾಸುದೇವನ್‌ರ ಸುರಕ್ಷಿತತೆಯ ಬಗ್ಗೆ ಇಷ್ಟೊಂದು ತೀವ್ರವಾಗಿ ಮಿಡುಕಾಡಿದ ಮನಸ್ಸು ಅಗರವಾಲನ ಬಗೆಗಿನ ವಿವೇಕಶೂನ್ಯವಾದ ದ್ವೇಷವನ್ನು ಬಿಟ್ಟುಕೊಟ್ಟು ಮಿದುವಾಗಿರುವ ಗಳಿಗೆಯಲ್ಲೇ ಪ್ರಕಟಗೊಂಡ ದುರ್ಧರ ಸತ್ಯವನ್ನು ತಾಳುವ ತಾಕತ್ತು ಮಾತ್ರ ಅಪ್ಪನಿಗೆ ಇದೆಯೋ ಇಲ್ಲವೋ! ಬೆಳಗಾಗುವುದರಲ್ಲಿ ಎಲ್ಲ ಸರಿಯಾಗುತ್ತದೆಯೆಂದು ಬಗೆದವಳಿಗೆ, ನಿದ್ದೆ ಬಾರದೇ ಇದ್ದಾಗ, ಅಪ್ಪನ ಕೋಣೆಗೆ ಹೋಗಿ ತಾನೂ ಒಂದು ಕಾಂಪೋಜ್ ಗುಳಿಗೆಯನ್ನು ತೆಗೆದುಕೊಳ್ಳುವ ಮನಸ್ಸಾಯಿತು. ಆದರೆ ಅಪ್ಪನ ಕೋಣೆಗೆ ಹೋಗುವ ಧೈರ್ಯವಾಗಲಿಲ್ಲ. ಬಹಳ ಹೊತ್ತಿನವರೆಗೆ ನಿದ್ದೆ ಬಾರದೆ ತಳಮಳಿಸಿದಳು. ಆಮೇಲೆ ಹಾಸಿಗೆಯಲ್ಲಿ ಎದ್ದೇ ಕುಳಿತಳು. ಮಂಚದ ಬದಿಯಲ್ಲಿಯ ಸ್ಟೂಲಿನ ಮೇಲಿಟ್ಟ ನೀರಿನ ಗ್ಲಾಸನ್ನೆತ್ತಿ ನೀರುಕುಡಿದಳು. ಕತ್ತಲೆಯಲ್ಲೇ ಕಣ್ಣು ಮುಚ್ಚಿ ಅಪ್ಪನ ಬಗ್ಗೆ, ಕರುಣಾಕರನ್-ವಾಸುದೇವನ್ನರ ಬಗ್ಗೆ, ಅಗರವಾಲನ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದಳು.

ಬೆಹರಾಮ್ ಆ ದಿನ ರಾತ್ರಿ ಹೊಕ್ಕ ಸ್ಥಿತಿಯಿಂದ ಸಂಪೂರ್ಣವಾಗಿ ಹೊರಗೆ ಬರಲೇ ಇಲ್ಲ. ಹೊರಗೆ ಬರುವ ಭರವಸೆಯನ್ನು ಡಾಕ್ಟರರೂ ಕೊಡಲಿಲ್ಲ. ವಯಸ್ಸೂ ಕೂಡ ಅವರು ಮಾಡಬಹುದಾದ ಪ್ರಯತ್ನಗಳಿಗೆ ಸಹಕಾರಿಯಾಗಿರಲಿಲ್ಲ. ‘ಸಿಡೇಟೀವ್ಸ್’ಗಳ ಗಾಢ ಗುಂಗಿನಿಂದ ಹೊರಗೆ ಬಂದಾಗ ಒಂದು ದಿನ ತುಸು ಚೇತರಿಸಿಕೊಂಡ ಲಕ್ಷಣಗಳು ಕಂಡಿದ್ದುವು: ತನ್ನತ್ತ ನೋಡುವವರ ಗುರುತು ಹಿಡಿದವನ ಹಾಗೆ ಒಂದೆರಡು ಸಾರೆ ಕ್ಷೀಣವಾಗಿ ನಕ್ಕಿದ್ದ -ಅಷ್ಟೆ. ಅಗರವಾಲನ ಅಣ್ಣ ಬಂದು ಭೇಟಿಯಾದ. ಅವನ ಪ್ರಯತ್ನದ ಮೂಲಕವೇ ಒಂದು ದಿನ ರಾತ್ರಿಯ ಹೊತ್ತಿಗೆ ಕರುಣಾಕರನ್ ಮನೆಗೆ ಬಂದ. ಅವನ ಜೊತೆಯಲ್ಲಿ ವಾಸುದೇವನ್‌ನೂ ಇದ್ದ. ಕರುಣಾಕರನ್‌ನ ರಿಪೋರ್ಟು ಝೋಪಡಪಟ್ಟಿಗಳಿಗೆ ಸಂಬಂಧಪಟ್ಟ ಜಗತ್ತಿನಲ್ಲಿ ಎಬ್ಬಿಸಿದ ಕೋಲಾಹಲ ಇನ್ನೂ ಸಂಪೂರ್ಣವಾಗಿ ಶಾಂತವಾಗಿರದಾಗ ಅವರು ಮುಂಬಯಿಯಲ್ಲಿರುವುದು ಗಂಡಾಂತರದ್ದಾಗಿತ್ತು. ಆದ್ದರಿಂದ ವಿಮಾನದಿಂದ ಬಂದವರು ಮರುದಿವಸ ವಿಮಾನದಿಂದಲೇ ಮರಳಿ ಹೋಗುವವರಿದ್ದರು. ಬೆಹರಾಮನ ಕೋಣೆಯೊಳಗಿನ ಈ ದೃಶ್ಯವನ್ನು ಕಂಡು ಅವನ ಹೆಂಡತಿಯ ಕಣ್ಣುಗಳು ನೀರಿನಿಂದ ತುಂಬಿಕೊಂಡಿದ್ದುವು. ಗುರುತು ಹಿಡಿದನೋ ಇಲ್ಲವೋ ಇಬ್ಬರನ್ನೂ ಬೆಹರಾಮ್ ಕಣ್ಣುಬಿಟ್ಟು ನೋಡಿದ್ದ. ಮನೆಯಲ್ಲಿ ಇದ್ದವರಿಗೆಲ್ಲ ಅಷ್ಟರಿಂದಲೇ ತೃಪ್ತಿಯಾಗಿತ್ತು. ಶಿರೀನ್ ಮಾತ್ರ ಒಂದು ಅರ್ಧ ಕ್ಷಣದ ಮಟ್ಟಿಗೆ ತನಗಾದ ಭಾಸದಿಂದ ತೀವ್ರ ತಳಮಳಕ್ಕೆ ಒಳಗಾದಳು: ಅಪ್ಪ, ಕರುಣಾಕರನ್-ವಾಸುದೇವನ್‌ರನ್ನು ನೋಡುತ್ತಿದ್ದಾಗ ಅವರ ಬದಿಯಲ್ಲಿ ಇನ್ನೊಬ್ಬನನ್ನು ಹುಡುಕುತ್ತಿರುವ ಹಾಗೆ ಕಂಡಿತ್ತು!

ಇದಾದ ಕೆಲವು ದಿನಗಳ ಮೇಲೆ ಅವರನ್ನೆಲ್ಲ ಜಮ್‌ಶೇದ್‌ಪೂರಕ್ಕೆ ಕರೆದೊಯ್ಯಲು ಶಿರೀನಳ ಗಂಡ ಬಂದ. ಅವನ ಹಾಗೂ ಕುಟುಂಬದ ಡಾಕ್ಟರ್‌ರ ನೆರವಿನಿಂದ ಬೆಹರಾಮನನ್ನು ಅವನು ಇದ್ದ ಸ್ಥಿತಿಯಲ್ಲೇ ಜಮ್‌ಶೇದ್‌ಪೂರಕ್ಕೆ ಸಾಗಿಸಲಾಯಿತು. ಕೇಕೀ ಮೂರು ಸಾರೆ ಫೋನ್ ಮಾಡಿದನಾದರೂ ಸ್ವತಃ ಬರಲು ಸಾಧ್ಯವಿಲ್ಲವೆಂದು ತಿಳಿಸಿದ. ಬೆಹರಾಮ್ ಮುಂದೆ ಬಹಳ ದಿನ ಬದುಕಿ ಉಳಿಯಲಿಲ್ಲ. ಸಾಯುವ ಹೊತ್ತಿಗೆ ಮಗನೊಬ್ಬ ಹತ್ತಿರವಿರಲಿಲ್ಲ ಎಂಬ ಒಂದು ಕೊರತೆಯನ್ನು ಬಿಟ್ಟರೆ ಕೊನೆ ಸಮಾಧಾನವುಳ್ಳದ್ದಾಗಿತ್ತು. ಬೆಹರಾಮ್ ಸತ್ತ ಎರಡು ವರ್ಷಗಳಲ್ಲೇ ಹೆಂಡತಿಯೂ ತೀರಿಕೊಂಡಳು. ಆಗಲೂ ಮಗನು ಬಂದಿರಲಿಲ್ಲ. ಸದ್ಯವೇ ತಾನು ಹೊಸ ಕೆಲಸಕ್ಕೆ ಸೇರಿದ್ದೇನೆಂದೂ, ಇನ್ನು ಮೂರು ವರ್ಷಗಳವರೆಗಾದರೂ ತನಗೆ ಭಾರತಕ್ಕೆ ಬರಲು ಸಾಧ್ಯವಿಲ್ಲವೆಂದೂ, ಮುಂಬಯಿಯ ಮನೆ, ಉಳಿದ ಆಸ್ತಿಪಾಸ್ತಿಗಳ ಮೇಲೆ ತನಗೆ ಯಾವ ಆಸೆಯೂ ಇಲ್ಲವೆಂದೂ ಫೋನ್ ಮೇಲೆಯೆ ತಿಳಿಸಿದ್ದ.

ಮುಂಬಯಿಯ ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ. ಅದನ್ನು ಬೀಗ ಹಾಕಿಯೇ ಇಡುವುದು ಸುರಕ್ಷಿತತೆಯ ದೃಷ್ಟಿಯಿಂದಾಗಲಿ, ಹಣದ ದೃಷ್ಟಿಯಿಂದಾಗಲಿ ಉಚಿತವಾಗಿ ತೋರಲಿಲ್ಲ. ಬೆಹರಾಮನ ಆಫೀಸಿನ ಜನಕ್ಕೇ ಬಾಡಿಗೆಗೆ ಕೊಡುವುದನ್ನು ನಿಶ್ಚಯಿಸಿ ಶಿರೀನ್ ಹಾಗೂ ಅವಳ ಗಂಡ ಮನೆಯೊಳಗಿನ ಸಾಮಾನನ್ನು ಬೇರೆಯೆಡೆ ಸಾಗಿಸಲು ಒಂದು ದಿನ ಮುಂಬಯಿಗೆ ಬಂದರು.

ಅಪ್ಪ-ಅಮ್ಮ ಇಬ್ಬರೂ ಇಲ್ಲದೆ ಅನಾಥವಾದ ಮನೆಯ ಬೀಗ ತೆಗೆದು ಒಳಗೆ ಹೋಗುವಾಗ ಅತ್ಯಂತ ಭಾವನಾವಶಳಾದಳು. ಅವಳ ಗಂಡ, ಜತೆಗೆ ಬಂದ ಅವನ ಇಬ್ಬರು ಗೆಳೆಯರು ಲಗುಬಗೆಯಿಂದ ಒಳಗೆ ಹೋಗಿ ಮೇನ್‌ಸ್ವಿಚ್ ಒನ್‌ಮಾಡಿ ಹಾಲಿನಲ್ಲಿಯ ದೀಪ ಹಾಕಿದರು. ಬಾಲ್ಕನಿಗೆ ಹೋಗುವ ದೊಡ್ಡ ಕದ ತೆರೆದು ಹೊರಗಿನ ಬೆಳಕು ಬರುವಂತೆ ಮಾಡಿದರು. ಹಾಲಿನ ಎಲ್ಲ ಕಿಡಕಿಗಳ ಪರದೆಗಳನ್ನು ಸರಿಸಿ, ಕದಗಳನ್ನು ತೆರೆದು ಉಸಿರುಗಟ್ಟಿಸುತ್ತಿದ್ದ ಮನೆಯಲ್ಲಿ ಹೊರಗಿನ ಸ್ವಚ್ಛ ಗಾಳಿ ಬರುವಂತೆ ಮಾದಿದರು. ಈ ಎಲ್ಲ ಚಟುವಟಿಕೆಗಳು ನಡೆಯುತ್ತಿದ್ದಾಗ ಪ್ರವೇಶದ್ವಾರದ ಹತ್ತಿರದ ಟೆಲಿಫೋನ್-ಮೂಲೆಯಲ್ಲಿ ಸ್ಟೂಲಿನ ಮೇಲೆ ಕೂತೇ ಉಳಿದ ಟೆಲಿಫೋನ್-ಶಿರೀನಳ ಕಣ್ಣಿಗೆ ಬೀಳುತ್ತಲೇ ಹಲವು ನೆನಪುಗಳು ಒಮ್ಮೆಲೇ ಮನಸ್ಸನ್ನು ಆವರಿಸಿ ನಿಂತ ರಭಸಕ್ಕೆ ಭಡಕ್ಕನೆ ಎದ್ದುನಿಂತು ನೇರವಾಗಿ ಗಂಡ, ಅವನ ಗೆಳೆಯರು ನಿಂತ ಹಾಲಿಗೆ ಬಂದಳು. ಅವರೊಟ್ಟಿಗೆ ಮನೆಯಲ್ಲವನ್ನೂ ಸುತ್ತಾಡಿ ಮತ್ತೆ ಮುಂದಿನ ಬಾಲ್ಕನಿಗೆ ಬರುವಷ್ಟರಲ್ಲಿ ತುಂಬ ಭಾವುಕಳಾಗಿದ್ದಳು. ಬಾಲ್ಕನಿಯಲ್ಲಿ ನಿಂತದ್ದೇ ಅಪ್ಪನ ನೆನಪು ಅನಾವರವಾಗಿ ಕಣ್ಣುಗಳು ತಟಕ್ಕನೆ ನೀರಿನಿಂದ ತುಂಬಿಕೊಂಡುವು. ಕರ್ಚೀಫಿನಿಂದ ಕಣ್ಣು ಒರೆಸಿಕೊಳ್ಳುತ್ತ ಅಪ್ಪನಿಗೆ ಪ್ರಿಯವಾದ ಸಮುದ್ರದತ್ತ ಕಣ್ಣುಹಾಯಿಸಿದಳು. ಕಣ್ಣಿಗೆ ಎದುರಾದದ್ದು ಎಲ್ಯೂಮಿನಿಯಮ್ ಚೌಕಟ್ಟು ಉಳ್ಳ ಗಾಜಿನ ದೊಡ್ಡ ಕದಗಳು. ಹಿಂದೆಯೇ ನಿಂತ ಗಂಡ ದೊಡ್ಡಕ್ಕೆ-“ಜೋಕೆ! ಗಾಜು ಒಡೆದಿದೆ,” ಎಂದ. ಯಾರೋ ನಿಷ್ಕಾರಣ ಕ್ರೌರ್ಯದಿಂದ ಬೀಸಿದ ಕಲ್ಲಿನಿಂದಾಗಿ ಗಾಜು ಒಡೆದು ಸೀಳು ಬಿಟ್ಟಿತ್ತು. ಕಲ್ಲುಗಳು ನೇರವಾಗಿ ಬದಿದ ಒಂದೆರಡು ಕಡೆಗಳಲ್ಲಿ ಉಂಟಾದ ದೊಡ್ಡ ತೂತುಗಳಲ್ಲಿ ಜೇಡರ ಬಲೆಗಳು ಬೆಳೆದುಕೊಂಡಿದ್ದುವು. ಈ ಜೇಡರಬಲೆಗಳು, ಬಿರುಕುಬಿಟ್ಟ ಕಾಚು ಇವುಗಳೊಳಗಿಂದ ಹೊರಗೆ ನೋಡಿದಾಗ ಹೊರಗಿನ ಸಮುದ್ರ, ನೀರ ಮೇಲೆ ತೇಲುತ್ತಿದ್ದ ಹಾಯಿದೋಣಿಗಳು, ಮೇಲಿನ ಆಕಾಶ, ಎಲ್ಲ ಕಣ್ಣಿಗೆ ಬಿದ್ದ ವ್ಯಸ್ತ ಬಗೆಯಿಂದಾಗಿ, ಆ ದುರ್ಧರ ರಾತ್ರಿ, ಅಪ್ಪನಿಗೆ ಕೂಡ ಸುತ್ತಲ ಜಗತ್ತು ಹೀಗೆಯೆ ಕಂಡಿರಬಹುದೆ?-ಎಂದು ಅನ್ನಿಸತೊಡಗಿದ ಗಳಿಗೆಯಲ್ಲೇ, ‘ಕೋಯೀ ಬಚಾವ್,’ ಎನ್ನುವ ಉದ್ಗಾರ ತಂತಾನೆ ಬಾಯಿಗೆ ಬರಹತ್ತಿದಾಗ, ಚಿಟ್ಟನೆ ಹೆದರಿ ಕಂಗಾಲಾದ ಶಿರೀನ್, ಅವಸರ‌ಅವಸರವಾಗಿ ಬಾಲ್ಕನಿಯನ್ನು ಬಿಟ್ಟು, ಈಚೆಗೆ ಬಂದಳು.
*****
ಮುಗಿಯಿತು