ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. *****
ಗುಣದ ಗರಿಮೆ
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
ಕಾಡಿನ ಕತ್ತಲಲ್ಲಿ
ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […]
ಸಂಭ್ರಮಕ್ಕೆ ನೂರಾರು ಕಾರಣಗಳು..
ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ […]