ದೂರದಿ೦ದ Posted on ಜನವರಿ 1, 2007ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಶಿಕಾರಿ ಪುರದ ದಾರಿಯ ಬಿಳಿ ಮನೆಯ ಹೆಂಚಿನ ಮೇಲೆ ರಾಶಿರಾಶಿ ಕೆಂಪು ಮೆಣಸಿನ ಕಾಯಿ ಮೊಲ ಕಚ್ಚಿದ ನಾಯಿ ಬಾಯಿ. *****
ಹನಿಗವನ ಪವಾಡ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ಶಿಲ್ಪಿಯೋಗಿಯ ಕೈಗೆ ಸಿಕ್ಕಿದ ಒರಟು ಕಲ್ಲು ಕೇವಲ ಕಲೆಯಲ್ಲ, ಅತ್ಯದ್ಭುತ ಮಿರಾಕಲ್ಲು. *****
ಹನಿಗವನ ಹಿತೋಪದೇಶ ನಿಸಾರ್ ಅಹಮದ್ ಕೆ ಎಸ್ ಫೆಬ್ರವರಿ 6, 2023 0 ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. *****
ಹನಿಗವನ ಸಂಸ್ಕಾರ ಜಯಂತ ಕಾಯ್ಕಿಣಿ ಜುಲೈ 26, 2024 0 ಬಿಸಿಲಿಗೆ ಕರಗಿದ ಡಾಂಬರಿನಲ್ಲಿ ಮಣ್ಣು ಹೂತುಕೊಳ್ಳುತ್ತದೆ ರೋಡು ಕಾಯುತ್ತದೆ *****