ದುರವಸ್ಥೆ

ಯಾರಿಗಿತ್ತು ಧೈರ್‍ಯ ಆಗ ಹೇಳಲೆಮ್ಮ ಖಾಜಿಗೆ? ಎಲ್ಲ ಅರಿತ ಧರ್‍ಮದರ್‍ಶಿ! ಹೋಗಲುಂಟೆ ಗೋಜಿಗೆ? ಇದ್ದುದೆಲ್ಲವನ್ನು ಚೆಲ್ಲಿ ಹೆಣ್ಣ ಮೈಯ್ಯ ಮೋಜಿಗೆ, ಹಾಗೇ ಕುದುರೆ ಜೂಜಿಗೆ, ಕೊನೆಗೆ ಹಳೆಯ ಮನೆಯು ಕೂಡ ಬಂದಿತೋ ಹರಾಜಿಗೆ ಕಂಡ […]

ಕರುಬು

ಪಕ್ಕದ ಮನೆಯ ಜಿರಾಫಿಣೀನ ಶಪಿಸ್ತಾ ಕುಳ್ಳಿ ಕಮ್ಲು: “ಹೊಟ್ಟುರಿಸ್ತೀಯಾ ಹಾಳಾದೋಳೆ ಏರಿದೆ ತಲೆಗೆ ಅಮ್ಲು. ಒಂದೇ ತಿಂಗ್ಳು ಸುಮ್ನಿರು ಸಾಕು, ಹೆರಿಗೆ ಭಾರ ತಪ್ಲಿ_ ನಿನ್ನ ಹಾಗೇನೇ ಮೆರೀತೀನ್ ನಾನೂ ಕೊಂಡ್ಕೊಂಡ್ ಹೈಹೀಲ್ಡ್ ಚಪ್ಲಿ.” […]

ಮರುಕ

ಗಡಗಡ ನಡುಗಿ ಬತ್ತಲೆ ಮೈಯಲ್ಲಿ ಕೂಲಿ ಹುಡುಗ ಅಂಗಡಿ ಎದುರು ಸತ್ತ; ಎತ್ತಿರಲಿಲ್ಲ ಗಲ್ಲಾ ಪೆಟ್ಟಿಗೆಯಿಂದ ಕತ್ತ. ಒಮ್ಮೆ ಊರಾಚೆ ಹೋದಾಗ ಮಳೆ ಬಂದು ದೂರದ ಬೆಟ್ಟ ಕಂಡು “ನೆಂದ್ಹೊಯ್ತು, ನೆಂದ್ಹೊಯ್ತು” ಅಂತ ಶೆಟ್ಟಿ […]

ಕೊನೆಯ ಬಯಕೆ

“ಏ! ಮುದಿ ಮುಲ್ಲಾ, ಕೇಳಿಕೋ ಏನುಬೇಕೋ ಎಲ್ಲ, ಸಂಜೆಗೆ ಏರಬೇಕಿದೆ ಗಲ್ಲು!” “ಪೀಪಾಯಿಯಷ್ಟು ಕಳ್ಳು ಒಬ್ಬ ಹೆಣ್ಣು : ನೋಡೋಕೆ ಬ್ಯೂಟಿಫುಲ್ಲು, ಹಾಗೇ ಕಡಿಯೋಕೆ ಕೊನೇ ಸಲ ಮೂಳೆ ಕಟ್ಟಿಸಿಕೊಡು ಮುವತ್ತೆರಡು ಹಲ್ಲು!” *****

ಸವಾಲು-ಜವಾಬು

“ಹಳೆ ನೆನಹ ಗೀರಿ ಉರಿಯದಿರು ಪೋರಿ, ತೋರಿಸುವ ನಗೆಯ ದಾರಿ” – ಹಿಂದೊಮ್ಮೆ ಕಂಡು ಒಪ್ಪದ ಬಿ.ಇ. ಗಂಡು ಬಂದಿದ್ದ ಮದುವೆ ಕೋರಿ. ಹೇಳಿದಳು ಗೌರಿ: “ಡಿಯರ್, ಐಯಾಮ್ ಸಾರಿ, ಎಷ್ಟು ಕೊಡುತೀರಿ ಡೌರಿ?” […]

ವಿಮರ್‍ಶಕ

ಸುತ್ತಿಗೆ ಕೈಯ್ಯಲ್ಲಿರುವವನಿಗೆ ಸುತ್ತ ಎಲ್ಲೆಲ್ಲು ಕಾಣಿಸುತ್ತವೆ ಭರ್‍ಜರಿ ಮೊಳೆ; ವಿಮರ್‍ಶೆ ಕೈಗೆತ್ತಿಕೊಂಡವನಿಗೆ ಗೋಚರಿಸುತ್ತವೆ ಬರೀ ದೋಷಪೂರ್‍ಣ ಕೃತಿಗಳೆ. *****

ಪ್ರಸ್ನೆ – ಹುತ್ತರ

“ಹಲ್ಪ ಪ್ರಾಣ ಮ‌ಆ ಪ್ರಾಣ ಹೇನೆಂಬುದರ ಹರಿವಿಲ್ಲದ ಹಿವನೊಬ್ಬ ಕೋಣ. ಸಿಸ್ಯನಾಗಿ ಹನುಗ್ರಯಿಸಿ ನೀಡಿ ಹೊಳ್ಳೆಯ ಸಿಕ್ಸಣ.” “ಆಗೆಯೇ ಹಾಗಲಿ, ಎದರಬೇಡ ಹೀವೊತ್ತಿನಿಂದಲೇ ಹೋದು ಹಾರಂಬಿಸೋಣ.” *****

ಅಂಗಾರಿ

ಕಣ್ಣು ಸಿಡಿಲಿನ ಮಡಿಲು ದನಿ ಗುಡುಗೋ ತಡಸಲು ಏದುಸಿರು ಬಿರುಗಾಳಿ ಬಸಿರು ಮೊಗದಲ್ಲಿ ಕಾರ್‍ಮಿಂಚು ಮನಸ್ಸಲ್ಲಿ ಕೊಚ್ಚಿ ಹಾಕೋ ಸಂಚು; ಬಂತೋ ಕೋಪ ಎದುರು ನಿಂತೋನು ಬೇಕೂಫ: ಬಂಗಾರಿ ಆಗ್ತಾನೆ ಮಲೆನಾಡಿನ ಮುಂಗಾರಿ. *****

ಮುಯ್ಯಿ

ಬಾಪೂಜಿಯನ್ನು ಮುಗಿಸಿ ವರ್‍ಷಗಳು ಗತಿಸಿದ್ದರೂ ಇನ್ನೂ ಮುಗಿದಿಲ್ಲ ಕೇಡು, ಕ್ರೋಧದ ‘ಮೂಡು’; ಬೇಕಾದರೆ ನೀವೇ ಹೋಗಿ ಪ್ರತ್ಯಕ್ಷ ಪರೀಕ್ಷಿಸಿ ಅಂಚೆ ಕಛೇರಿಯಲ್ಲಿ ದಿನವೂ ತೀರಿಸಿಕೊಳ್ಳುವ ಸೇಡು! *****

ಅಡ್ಡ ವೈಸು

“ಗೀತಾ, ಮನೆ ಮುಗೀತಾ? ಯಾವಾಗ ಗೃಹಪ್ರವೇಶ?” “ಮುಗೀತೂರಿ, ಆದ್ರೆ ಕಂಟ್ರಾಕ್ಟರ್ ಮಾಡ್ದ ಸಖತ್ ಮೋಸ”. “ಯಾಕೆ? ಏನಾಯ್ತು ಅಂಥದ್ದು? ಪೀಕಿಸಿದ್ನ ದುಡ್ಡು ಜಾಸ್ತಿ?” “ಅವನ ಮನೆ ಹಾಳಾಗ, ಕರಗಿಸಿಬಿಟ್ಟ ಕಣ್ರಿ ಇದ್ದ ಬದ್ದ ಆಸ್ತಿ”. […]