ವಾಕ್ ಹೋಗಿ

ವಾಕ್ ಹೋಗಿ
ಬದುಕು ಕಲೆಯಂತೆ ಸಮಾನಾಂತರ ಸಾಗಿದ
ದೀಪದ ತಂತಿಗಳಲ್ಲೊಂದರಿಂದ
ಯಾವುದೋ ಅಪ್ರಖ್ಯಾತ ಪಕ್ಷಿಯ
ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು
ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ
ಬರೀ ಅನಾಥ ಸಂಜೆ.
*****