ನನಗೆ ಗುರು ಇಲ್ಲ

ಈತ ನನ್ನೂರಿನ ಬಾಂಧವ. ಒಂದೇ ಒಂದು ಮುಖ್ಯ ರಸ್ತೆ ಇರುವ ಆ ಊರಿಗೆ ಎರಡೋ ಮೂರೋ ಸಣ್ಣ ರಸ್ತೆಗಳು. ದೊಡ್ಡ ಬೀದಿ ಅಂತನ್ನಿಸಿಕೊಂಡಿರುವ ರಸ್ತೆಯಲ್ಲಿ ಬರೀ ಲಿಂಗಾಯಿತರ ಪಾಳಿ. ಊರಿಗೆ ಒಂದು ದೇವಸ್ಥಾನ ಅಂತ […]

ಸೂತ್ರದ ಬೊಂಬೆಗಳು ಮತ್ತು ಚಲನಚಿತ್ರ ನಟರು

ಮಿ. ವೆಂಕಣ್ಣ ‘ಚಲನಚಿತ್ರ ನಟರೂ ಒಂದು ರೀತಿ ಸೂತ್ರದ ಬೊಂಬೆಗಳೆ?’ ಎಂಬ ಹೇಳಿಕೆಯಿಂದ ತನ್ನ ಸಿನಿಲೇಖನ ಆರಂಭಿಸಿದ್ದ. ತೆರೆಯ ಹಿಂದೆ ನಿಂತ ಸೂತ್ರಧಾರ-ಸೂತ್ರ ಹಿಡಿದು ತನಗೆ ಬೇಕಾದಂತೆ ಬೊಂಬೆ ಕುಣಿಸುತ್ತಾ ಹೋಗುತ್ತಾನೆ. “ಆದರೆ ನಟರನ್ನು […]

ಎಲ್ಲಿಂದಲೋ ಬಂದವರು – ಏನನ್ನೋ ಅಂದವರು

ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […]

ದೂಧ್ ಸಾಗರ್

(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) ಕ್ಷೀರ ಸಾಗರವ ಸುಮನಸ ವೃಂದ ಬಾನಿಂ ಕಟ್ಟಿರೆ ಸಡಲಿತೆ ಬಂಧ? […]

ಆಘಾತಗಳ ನಡುವೆ ಹಾಗು ಆಚೆಗಿನದು..

ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ […]

ಕಟ್‌ಸೀಟ್

ಮಧ್ಯಾಹ್ನ ಒಂದೂವರೆ ಗಂಟೆಯ ಬೆಂಗಳೂರಿನ ಬಿಸಿಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೇರಿದ್ದ ಬದುಕಿನ ನಾನಾ ಸ್ತರದ ಜನರ ಅಂತರ್ಜಲವನ್ನ ಅವರವರ ಮೇಲೆ ಪ್ರೋಕ್ಷಣೆ ಮಾಡಿತ್ತು. ಕಪ್ಪುಕಲ್ಲುಬೆಂಚಿನ ಮೇಲೆ ಕುಳಿತಿದ್ದ ಹಸಿರು ಸೀರೆಯ ಹೆಂಗಸಿನ ಕಂಕುಳಲ್ಲಿರುವ […]

ಅಚ್ಚರಿಯ ಪರಿ

ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […]

ಆ ಮರ-ಈ ಮರ

ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. *****