ಪೂರ್ವ ದಿಙ್ಮಂಡಲದಿ ಪುಣ್ಯವವತರಿಸುತಿದೆ- ಪೂರ್ಣ ಚಂದ್ರೋದಯದ ರೂಪದಲ್ಲಿ; ಪೂರ್ಣತೆಯು ಸಂಪೂರ್ಣ ಸಾಕಾರಗೊಳ್ಳುತಿದೆ- ಪೌರ್ಣಿಮೆಯ ಪೂರ್ಣೇಂದು ವೇಷದಲ್ಲಿ. ಬೈಗುಗೆಂಪಿನ ಬಣ್ಣ ಕಡಲಾಳ ತಳದಿಂದ ಬುರುಬುರನೆ ಮೇಲೆದ್ದ ಗುಳ್ಳೆಯಂತೆ, ತಂಗದಿರನುದಯಿಸಿದ, ಶಾಂತಿಮತಿ ಬಿಂಬಿಸಿದ ತಪಗೊಂಡ ಮೌನವ್ರತಧಾರಿಯಂತೆ. ಹೊನ್ನ […]
ವರ್ಗ: ಪದ್ಯ
ಕಾಡ ಮಲ್ಲಿಗೆ
ಮಾಮರದ ಆಸರದಿ ಮೇಲೇರಿ ಕುಡಿಚಾಚಿ ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, ಗರಿಗೆದರಿ […]
ಪಕ್ಷಿಗಾಗಿ ಕಾದು
ಮೊದಲೊಂದು ಪಂಜರ ಬರಿ ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ ಏನನ್ನೋ ಪಂಜರದಲ್ಲಿ ಬಿಡಿಸು ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. […]
ನುಡಿಯ ಏಳಿಗೆ
ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. *****
ಅಮರ ತೇಜಃಪುಂಜಿ
ಓ ತಂದೆ! ನಿನಗಿದೋ ಈ ನೆಲದ ಕಣಕಣವು ಕಣ್ಣೀರ ಸುರಿಸುತಿದೆ, ಹಲುಬಿ ಹಂಬಲಿಸುತಿದೆ; ಭಾರತದ ಬೀರಸಿರಿ ನಿನ್ನೊಡನೆ ಸಾಗುತಿದೆ. ಸತ್ಯತೆಯ ಪಂಜಿಗಿದೆ ನಿನ್ನೆದೆಯ ಪೌರುಷವು, ವಿಶ್ವದೆದೆಯಾಳವನೆ ಕಡೆದುಂಡ ಕರುಣಾಳು ಪ್ರೇಮದಮಲಜ್ಯೋತಿ, ಜಗದ ಸುಂದರ ಮೂರ್ತಿ […]