ನಾನು-ನೀನು

ಕಾಗದದ ಪುಟ್ಟ ದೋಣಿಯ ಈ ತುದಿಯಲ್ಲಿ ನಾನು ಆ ತುದಿಯಲ್ಲಿ ನೀನು ನಿನ್ನ ಕಣ್ಣ ನಿಮ್ನ ನೋಟದಲಿ ಮುಳುಗಿದ ನನ್ನೀ ಮೌನ ಒಳಕ್ಕೂ ಹೊರಕ್ಕೂ ನಮ್ಮಿಬ್ಬರ ನಡುವೆ ತಿರುವು ಮುರಿವಿನ ಡೊಂಕು ಡೊಂಕಿನ ನದಿಯ […]

ಪ್ರಕೃತಿ-ಪುರುಷ

-೧- (ಈಕೆ) ಹೂ. ಹಸಿ ಹೂ. (ದತ್ತ ಹೇಳಿಧಾಂಗ) ಇದೀಗ ಬಿಸಿಯಾಗುತ್ತಿರುವ, ಸಸಿಯ ಹೂ, ಹಗುರು, ನವಿರು. ಆತ ಮಧ್ಯಕಾಲೀನ ಪುರುಷ. ಎಳಸು. ಮುಖವಾಡದವ. ಸೋಕಿತವನ ದುರಾಸೆಯ ನಖ! ನಿಗಿಕೆಂಡದಿ ಕಾದ ಸಲಾಕೆಯ ಮುಖ! […]

ಸದ್ದುಗದ್ದಲದ ನಡುವೆ ಒಂದು ಕವನ

ಹೀಗೆ, ಆಳೆಯ ಮೇಲೆ ಹಾಡು ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ……..ಹಾಡು! ಈಗ ಹಾಳೆಯ ಮೇಲೆ ಹಾಡು – […]

ನದಿ ಹಾಡು

ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […]

ಅಮ್ಮನಿಗೆ – ೨

ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. *****

ಅಮ್ಮನಿಗೆ – ೧

ನಾನು ನನ್ನಮ್ಮನ ಹಾಗೆ. ಪೀಚು ದೇಹ, ಎಲುಬು ಕಾಣುವ ಕೆ, ಕಣ್ಣ ಕೆಳಗೆ ಹರಡಿದ ಕಪ್ಪು ಒಳಗೆ ಹೊರೆಹೊರೆ ದುಃಖ ಹೊತ್ತ ಎದೆ ಭಾರ ಹೊರಲಾರದ ಚಿಂತೆ ಮನಸ್ಸಿಗೆ ಮೇಲೊಂದು ಮುಗುಳ್ನಗೆ. ನಾನು ನನ್ನಮ್ಮನ […]

ಸ್ವಾತಂತ್ರ್ಯ ೪೦

ಕಾಲೇಜು ಹುಡುಗ ನಾನಂದು ಅನುಭವಿಸಿದ್ದೆ ಮಧ್ಯ ರಾತ್ರಿಗೆ ಮಿಂಚು ಹೊಡೆದದ್ದು -ಮೈ ತುಂಬ, ಬಾನಿಗೇರಿದ ಮೂರು ಬಣ್ಣ -ಬಾವುಟದಿಂದ ಕನಸು- ಹುಮಳೆ ಸುರಿದು. ಒಂದು ಕ್ಷನ ಮಿನುಗಿದ್ದೆ, ಸಂಘರ್ಷ ಶತಮಾನ ಹಿಂಸೆಗೆದೆಗೊಟ್ಟಿರುವ ತ್ಯಾಗದಾವಿರ್ಭಾ, ತೇಲಿ […]

ನೀಲಾಂಬಿಕೆ

೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […]

ನಂಬಿಕೆ

ಅನಂತವೆಂದರೂ ಆಕಾಶಕೊಂದು ಆಕೃತಿಯುಂಟು, ನೀಲವೆಂದರೂ ನೂರು ಬಣ್ಣದ ಲೀಲಗವಕಾಶವುಂಟು. ಭೂಮಿಯ ಮೇಲೆ ಕಾಲೂರಿ ನಡೆದಿದ್ದರೂ ಇದರ ಸ್ತರಗಳ ನಡುವೆ ಸ್ಥಿರಗೊಂಡ ಒಡನಾಟ, ನಿರಂತರ ನಂಟು. ಹಗಲೆಲ್ಲ ಹಸುರಾಗಿ, ತುಂಬು ಕೆಂಪಾಗಿ, ರೆಂಬೆ – ಕೊಂಬೆಗಳೆಲ್ಲ […]

ಲಾಲ ಬಹಾದ್ದೂರ ಶಾಸ್ತ್ರಿ

ನಮ್ಮ ಮಧ್ಯೆ ಇವನಿದ್ದನೆಂದರೆ ನಂಬುವೆಯ ಇಷ್ಟು ಸಾದಾ ಸೀದಾ ಮನುಷ್ಯ? ಬಡತನದ ಪಲ್ಲಕ್ಕಿ ಹೊತ್ತು ಮೆರೆಸಿದ ಪ್ರಾಮಾಣಿಕತೆಯ. ಹೆಂಡತಿ ಮಕ್ಕಳಿಗೆ ಆಸ್ತಿ ಸಂಪಾದಿಸಿದ ಮನೆಯಿರದ ಪ್ರಧಾನಿ: ಇವನೆಂಥ ಭಾರತೀಯ?! ಬಂದದ್ದು ಹಂಜಿಯ ಮಾಡಿ ರಾಟ […]