ಒಮ್ಮೆ ’ಮರ್ಮ’ದ ರಾತ್ರಿ ಸ್ಶೂಟಿಂಗ್ ಮುಗಿಸಿ ಬಂದು ರೂಂನಲ್ಲಿ ಮಲಗಿದ್ದೆ. ಮಲಗಿನ್ನೂ ಎರಡು ತಾಸಾಗಿಲ್ಲ ಬಾಗಿಲು ಧಡಧಡ.. ಚಿತ್ರರಂಗದಲ್ಲಿ ಅವಕಾಶ ಯಾವ ಹೊತ್ತಿನಲ್ಲಿ ಬೇಕಾದರೂ ಬಂದು ಬಾಗಿಲು ತಟ್ಟಬಹುದು. ನಿದ್ದೆ ಕೆಟ್ಟಿದ್ದಕ್ಕೆ ಬೇಸರವಿಲ್ಲ. ಬಾಗಿಲು ತೆಗೆದೆ. ಬಿ.ವಿ.ರಮೇಶ್ ನಿಂತಿದ್ರು.. ಕನ್ನಡಪರ ಹುಟ್ಟು ಹೋರಾಟಗಾರ ಬೆಂಗಳೂರು ಜಯನಗರದ ಅಘೋಷಿತ ಡಾನ್, ತನ್ನನ್ನು ಸ್ನಾನ ಮಾಡಿ ರೆಡಿಯಾಗು ಗುರುವೇ. ಒಂದು ಕಡೆ ಹೋಗೋದಿದೆ’ ರಮೇಶ್ ಅಪ್ಪಣೆ ಕೊಟ್ಟರು. ನನ್ನನ್ನು ಹೇರಿಕೊಂಡ ಆಟ್ಫ಼ೋ ’ಚಾಲುಕ್ಯ ಹೋಟೇಲ್’ ಮುಂದೆ ನಿಲ್ಲುತ್ತೆ. ಬಿ.ವಿ. ರಮೇಶ್ ನನ್ನನ್ನು ದಬ್ಬಿಕೊಂಡು ಒಂದು ರೂಮಿನ ಬಳಿ ಬರ್ತಾರೆ. ನನಗೆ ಗೊತ್ತು ಆ ರೂಮ್ ಯಾರದೂಂತ. ಒಬ್ಬ ನಿರ್ದೇಶಕ ಮಹಾಶಯ ಆ ರೂಂನ ಪರ್ಮನೆಂಟ್ ನಿವಾಸಿ. ಏನ್ ರಮೇಶ್ ಇವ್ರ ಹತ್ರ ಬಂದಿದ್ದು.. ನಾನು ಯಾಕೆ ಬೇಕಿತ್ತು..ನನ್ನ ಪ್ರಶ್ಫ಼್ನೆ. ’ಈಗ ’ಮರ್ಮ’ ಮಾಡ್ತಿದ್ದೀರಲ್ಲಾ ಕೊನೇ ರೀಲ್‍ವರ್ಗೂ ಮರ್ಮ ಗೊತ್ತಾಯ್ತದಾ.. ಇದೂ ಹಾಗೇ ಗುರುವೇ..’ ಉತ್ತರಭೂಪ ರಮೇಶ್. ಒಳಗೆ ಚೀಟಿ ಕಳಿಸಿದರು. ಹೊರಗಡೆ ಕಾಯುತ್ತಾ ಕೂತೆವು. ಎರಡು ಗಂಟೆಗಳು ನನಗೆ ಕನಸಿನಂತೆ ಕಳೆದುಹೋದವು. ಒಳಗಿನಿಂದ ಕೊನೆಗೂ ಕರೆ ಬಂತು. ರಮೇಶ ನನ್ನನ್ನು ಎಬ್ಬಿಸಿಕೊಂಡು ರೂಂ ಒಳಗೆ ನುಗ್ಗಿದರು. ನಿರ್ದೇಶಕನನ್ನು ಕಂಡೊಡನೆ.. ಇವತ್ತು ನಿನ್ನ ಮುಖ ಸಿಗಲ್ಲ ಅಂದ್ಕೊಂಡಿದ್ದೆ.. ಏನೇ ಆದರೂ ತುಂಬಾ ಕಾಯೊಸಿಬಿಟ್ಟೆ ನೀನು ಎಂದು ಆರೋಪಿಸುತ್ತಲೇ ನಿರ್ದೇಶಕರು ಕೂರೋಕೆ ಹೇಳದಿದ್ದರೂ ಕೂತೇಬಿಟ್ಟರು.. ನನ್ನನ್ನೂ ಕೂರುವಂತೆ ಹೇಳಿದರು. ಏನಾಗ್ತಿದೆ ಅತ ನನಗೆ ಆಗ ಅರಿವಿಗೆ ಬರ್ತಾ ಹೋಯ್ತು. ಹಿದಿನ ದಿನ ಆ ನಿರ್ದೇಶಕ ಕನ್ನಡದಲ್ಲಿ ಕಥೆಗಳಿಲ್ಲ ಕಥೆಗಾರರಿಲ್ಲ ಅಂತ ಯಾವುದೋ ಪ್ರೆಸ್‍ಮೀಟ್‍ನಲ್ಲಿ ಹೇಳಿದ್ದಾನೆ. ಪೇಪರ್‍ನೋರು ಅದನ್ನೇ ಕ್ಬರ್ದಿದ್ದಾರೆ. ರಮೇಶ್ ಅದನ್ನು ಓದಿದುಡನೆ ಕನ್ನಡಾಂಬೆಗಾದ ಅವಮಾನವನ್ನು ಸರಿಪಡಿಸಲಿಕ್ಕೆ ಇಲ್ಲಿಗೆ ಬಂದಿದ್ದಾರೆ. ರಮೇಶ್ ಕಡೆಯಿಂದ ನಿರ್ದೇಶಕನಿಗೆ ಏಕವಚನದ ನಿರರ್ಗಳ ನಿಮ್ದಾಸ್ತುತಿ, ’ಡೈರೆಕ್ಟ್ರೂ, ಕನ್ನಡದಲ್ಲಿ ಕಥೆಗಳಿಲ್ಲ, ಕಥೆಗಾರರಿಲ್ಲ ಅಂತ ಜ್ಡ್ಜ್‍ಮೆಂಟ್ ಕೊಡೋಕೆ ನೀನ್ಯಾವನೋಲೋ.. ನಿನ್ ಕೆಲ್ಸ ನೀನ್ ಮಾಫ಼್ಡ್ಕೊಂಡು ಹೋಯ್ತಾ ಇರು.. ಕನ್ನಡದ ಅನ್ನ ತಿಂತಿದೀ, ಹುಡುಕೋ ಯೋಗ್ಯತೆ ಇದ್ರೆ ಸಾವಿರ ಕಥೆ ಸಿಗ್ತವೆ. ರಾತ್ರಿ ಎಲ್ಲಾ ಎಣ್ಣೆ ಹೋಕ್ಕೊಂಡು ಮಜಾ ಮಾಡ್ಕೊಂಡು ಬುಕ್ ಓದದೇ.. ಊರು ಸುತ್ತದೇ, ಬರೀ ರೀಲ್ ಸುತ್ತಿದ್ರೆ.. ಕಥೆ ಹುಟ್ತವಾ.. ತಪಸ್ ಬೇಕು ತಪಸ್ಸು.. ನೋಡಿಲ್ಲೀ, ಈ ಹುಡ್ಗನ್ನ ಕರ್ಕೊಂಡ್ವಂದಿದ್ದೀನಿ.. ಅದೇನ್ ಕಥೆ ಬೇಕು ಹೇಳ್ ನಿಂಗೆ..ಆಕ್ಷನ್ನಾ..ಫ಼್ಯಾಮಿಲಿ ಸೆಂಟಿಮೆಂಟಾ..ಕಾಮಿಡೀನಾ..ದೇವ್ರದಾ..ದೆವ್ವದ್ದಾ ನೀನ್ ಸಬ್ಜೆಕ್ಟ್ ಹೇಫ಼್ಳು.. ಒನ್ ಅವರ್ ಟೈಮ್ ಕೌ.. ಕಥೆ ಬರ್ಕೊಡ್ತಾನೆ.. ಅದಕ್ಕೊಂದು ಫ಼ಸ್ಟ್ ಹಾಫ಼್..ಇಂಟರ್‍ವಲ್..ಕ್ಲೈಮ್ಯಾಕ್ಸ್ ಎಲ್ಲಾ ಇರ್ತವೆ.. ಆಯ್ತ್ರಾ..’ ಘೋಷಿಸಿಬಿಟ್ಟರು ರಮೇಶ್.
ನಿದ್ದೆಯಲ್ಲಿದ್ದ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಕರ್ಕೊಂಡ್ಬಂದು ಇಂಜೆಕ್ಷನ್ ಹಾಫ಼್ಕ್ಸಿದ್ರೆ ಆಗುತ್ತಲ್ಲ ಮಗೂಗೆ ಶಾಕು.. ಹೆಚ್ಚೂ ಕಡಿಮೆ ಅದೇ ಪರಿಸ್ಥಿತಿ ನಂದೂ…
’ಸರಿ.. ರಾಮಾಯಣದಲ್ಲಿ ಇಲ್ಲದ ರಾಮನ ಒಂದು ಸನ್ನಿವೇಶಾನ ಬರ್ಕೊಂಡ್ಬನ್ನಿ.. ನೋಡ್ತೀನಿ. ಆಮೇಲೆ ಮಾತಾಡ್ದ್ಫ಼ೋಣ..’ ನಿರ್ದೇಶಕರ ನಿಲುವು. ದಿನಕ್ಕೆ ಕ್ನಮ್ಮಂಥವರು ಸಾವಿರ ಆ ನಿರ್ದೇಶಕರಿಗೆ. ನಮ್ಮನ್ನ ಹ್ಯಾಂಡಲ್ ಮಾಡೋದು ಅವರಿಗೆ ದೊಡ್ಡ ವಿಷ್ಯ ಆಗಿರ್ಲಿಲ್ಲ.
ಮತ್ತೆ ಅದೇ ವೇಹದಲ್ಲಿ ರಂಏಶ್ ನನ್ನನ್ನೆಳೆದುಕೊಂಡು ಭಾರತೀಯ ವಿದ್ಯಾ ಭವನದ ಕಲ್ಲುಹಾಸಿನ ಮೇಲೆ ಕೂರಿಸಿಫ಼್ ಓಡಿ ಹೋಗಿ ಪ್ಯಾಡ್, ಪೇಪರ್, ಪೆನ್ ತಂದು ನನ್ನ ಕೈಲಿಟ್ಟು, ಕಾಫ಼ಿ ತರಿಸಿ ಕುಡಿದ್ಸಿ ಸಿಗರೇಟು ಹಚ್ಚಿ ಕೈಗಿಟ್ಟು ’ಬರ್ಯಮ್ಮಾ.. ಕಥೆ ಸೂಪರ್ ಆಗಿರಬೇಕು.. ನಿನ್ನ ಕೈಲಿ ಆಯ್ತದೆ..’ ಎನ್ನುತ್ತಲೇ ನನ್ನ ಮೊಬೈಲ್ ಕಿತ್ತುಕೊಂಡು ’ಯಾವ ಡಿಸ್ಟರ್ಬೆನ್ಸೂ ಬೇಡಾ..’ ಅನ್ನುತ್ತಾ ನನ್ನ ಕಾವಲಿಗೆ ನಿಂತು ನನಗೆ ಬಂದ ಕಾಲ್‍ಗಳಿಗೆ ಅವರೇ ಉತ್ತರಿಸಲಾರಂಭಿಸಿದರು. ಏನು ಬರ್ಯೋದು ಅಂತಾ ಚಿಂತಿಸುತ್ತಲೇ ಪ್ಯಾಡ್‍ನಲ್ಲಿನ ಹಾಳೆಗಳ ಮೇಲೆ ನೆಟ್ಟಿದ್ದ ನನ್ನ ದೃಷ್ಟಿ ಕಿತ್ತು ರಮೇಶ್ ಕಡೆ ಒಮ್ಮೆ ನೋಡಿದೆ. ಇದನ್ನು ಗಮನಿಸಿದ ರಮೇಶ್ ’ಕಾನ್‍ಸನ್‍ಟ್ರೇಷನ್ ಮಡ್ಗಿ ಬರ್ಯಮ್ಮಾ.. ಇಲ್ಲೇನ್ ನೋಡ್ತಿ.. ಕನ್ನಡಾಂಬೆ ಪ್ರೆಸ್ಟೀಜ್ ಈಗ ನಿನ್ನ ಕೈಲಿದೆ..’ ಸೂಚಿಸಿದರು.
ಒಟ್ಟಿನಲ್ಲಿ ಕನ್ನಡಾಂಬೆಯ ಮಾನ ಕಾಪಾಡೋ ದೊಡ್ಡ ಜವಾಬ್ದಾರಿಯ ಮೂಟೆಯನ್ನು ನನ್ನ ತಲೆಯ ಮೇಲೆ ಇರಿಸಿದ್ದರಿದಲೋ ಏಫ಼್ನೋ ಆ ಭಾರಕ್ಕ ನಾನು ತಲೆಯನ್ನು ಪ್ಯಾಡ್ ಕಡೆಗೇ ನೆಡಲೇಬೇಕಾಯಿತು.
ಒಂದು ಆರೋಗ್ಯಕರ ಸವಾಲಿಗೋ, ನಿರ್ದೇಶಕನ ಉಡಾಫ಼ೆಯ ಸ್ಟೇಟ್‍ಮೆಂಟ್ ಮೇಲಿನ ಸಿಟ್ಟಿಗೋ, ಬಿ.ವಿ.ರಮೇಶ್ ರಂಥ ಕನ್ನಡಾಭಿಮಾನಿಯ ಉತ್ಸಾಹಕ್ಕೋ ನನ್ನೊಳಗಿದ್ದ ಕಥೆಗಾರ ಅರಳಿ ನಿಂತಿದ್ದ. ಕೆರಳಿ ನಿಂತಿದ್ದ. ಒಮ್ದು ತಾದ್ಯತ್ಮದಲ್ಲಿ ಕಥೆ ಬರೆದು ಮುಗಿಸಿದೆ. ರಮೇಶ್‍ಗೆ ಓದಿ ಹೇಳಿದೆ. ರಮೇಶ್ ರೋಮಾಂಚಿತ ’ನಮಗೆ ಗೊತ್ತಮ್ಮಾ.. ಯಾರ ದ್ಯೋಗ್ಯತೆ ಏನೂಂತಾ. ಬಾ, ಅವ್ನ ನುಖಕ್ಕೆ ನೀರು ಕಿಳ್ಸಿ ಬರುವಾ..’ ನಿರ್ದೇಶಕನ ರೂಮಿಗೆ ಮರು ಧಾಳಿ. ಹ್/ಎದ್ರೆ ಅಲ್ಲೇನಿತ್ತು. ನಿರ್ದೇಶಕರು ಚಿಕ್ಕಮಗಳೂರಿಗೆ ಶ್ದ್ಫ಼ೂಟಿಂಗ್‍ಗೆ ಹೋಗಿದ್ದಾರೆ.. ಬರೋದು ಐದು ದಿನ ಆಗುತ್ತೆ ಅನ್ನೋ ಮೆಸೇಜು..
ಇದಾದ ಹದಿನೈದು ಇಪ್ಪತ್ತು ದಿನ ನಾನು ನನ್ನ ಸೂಟಿಂಗ್‍ನಲ್ಲಿ ಬ್ಯುಸಿಯಾದೆ. ರಮೇಶ್ ಸಿಕ್ಕಿರಲಿಲ್ಲ. ಒಂದು ದಿನ ಬೆಳ್ಳಂಬೆಳಗ್ಗೆ ಮತ್ತೆ ಪ್ರತ್ಯಕ್ಷ..’ಏನ್ ರಮೇಶ್, ಸಿಕ್ರಾ ನಿರ್ದೇಫ಼್ಶಕರು.. ಇಳಿಸಿದಿರಾ ನೀರು..?ಛೇಡಿಸಿದೆ. ರಮೇಶ್ ನಕ್ಕು ’ಅಲ್ಲಾ ಗುರುವೇ ನಾನು ಹ್ದಿನೈದು ಇಪ್ಪತ್ತು ದಿನದಿಂದ ಅವನ ಆಫ಼ೀಸ್, ಮನೆಗೆ ಅಲೀತಾನೇ ಇದ್ದೀನಿ ಯಾವಾಗ್ ಹೋದ್ರೂ ಶೂಟಿಂಗ್‍ಗೆ ಹೋಗವ್ರೇ.. ಶುಟಿಂಗ್‍ಗೆ ಹೋಗವ್ರೇ ಅಂತಾರೆ..ಮನೇಲಿ, ಆಫ಼ೀಸಿನಲ್ಲಿ. ಕಥೆ ಇಲ್ಲಾ.. ಕಥೆ ಇಲ್ಲಾಮ್ತಾಫ಼್ನೆ ತಿಂಗಳು ಪೂರ್ತಿ ಶೂಟ್ಫ಼ಿಂಗ್ ಮಾಡ್ತಿರ್ತಾನೆ. ಹೆಂಗೆ ಅಂಥಾನೇ ಅರ್ಥ ಆಗಲ್ಲ ದೇವ್ರು. ಅವನ ಕಥೆಯಿಲ್ಲದ ಸೆನೆಮಾನ ದೇವರೇ ಕಾಪಾದಬೇಕು..’ ನಗು ಮುಮ್ದುವರೆಸಿದರು. ಅವರ ನಗುವಿನಲ್ಲಿದ್ದ ವ್ಯಂಗ್ಯ ಕನ್ನಡಾಂಬೆಗೂ ತಲುಪಿರಲಾರದಾ..?
ನಿರ್ದೇಶಕನ ಅವಲೋಕನಕ್ಕೆ ಸಿಗದ ಆ ಅಪ್ರಕಟಿತ ಕಥೆ ಫ಼ಿಂದು ನಿಮ್ಮ ಮುಮ್ದೆ..ಓದಿ ಹೇಗಿದೆ ಹೇಳಿ.
** ** **
ಶ್ರೀರಾಮಜಯಂ
ಶ್ರೀ ರಾಮಚಂದ್ರರ ಆಡಳಿತಾವಧಿ. ಅಯೋಧ್ಯೆಯ ಜನತೆ ಪರಮ ಸುಖಿಗಳು. ರಾಮರಾಜ್ಯದ ಸುಖದಲ್ಲಿ ಮುಳುಗಿ ಹೋಗಿದ್ದಾರೆ. ಲಕ್ಷ್ಮಣ, ಭರತ, ಹನುಮಂತ, ಪ್ರಧಾನ ಮಂತ್ರಿಗಳ ಮೇಲ್ವಿಚಾರಣೆಯಲ್ಲಿ ಯಾವ ಕುಂದು ಕೊರತೆಗಳಿಲ್ಲ. ಲವಕುಶರ ವ್ಯಾಸಂಗ ನಿರಾತಂಕ. ದಿನನಿತ್ಯ ರಾಮನು ಸೂರ್ಯೋದಯಕ್ಕೆ ಮುಂಚೆಯೇ ಎದ್ದು ತಮ್ಮ ಪ್ರಾತಃವಿಧಿ ಪೂಜೆಯನ್ನೆಲ್ಲಾ ಜ್ಮುಗಿಸಿ ಆಸ್ಥಾನಕ್ಕೆ ತೆರಳುವುದು ದಿನಚರಿ. ಇಂದೇಕೋ ರಾಮರು ತುಂಬ ತಡವಾಗಿ ಏಳ್ತಾರೆ. ದೇಹದಲ್ಲಿ ಏನೋ ಆಲಸ್ಯ. ಎಂಥದೋ ವಾಂಛೆ. ಸೂರ್ಯನ ಎಳೆ ಕಿರಣಗಳು ಕೊಠಡಿಯ ತುಂಬೆಲ್ಲಾ ಪಸರಿಸಿದೆ. ಬೆಳಗಿನ ತಂಗಾಳಿ ಬಂದು ರಾಮರನ್ನು ತಬ್ಬುತ್ತಿವೆ. ಮಲಗೇ ಇದ್ದಾರೆ ರಾಮರು.. ಏಳಲು ಮನಸ್ಸಿಲ್ಲದೇ ಹಾಸಿಗೆಯಲ್ಲೇ ಹೊರಳಾಟ. ಎಂಥದೋ ಕಾಮನೆಗಳ ಭರಾಟೆ.
ರಾಮರ ಕೊಠಡಿ ಸ್ವಚ್ಛ ಮಾಡಲು ಎಂದಿನಂತೆ ಶ್ಯಾಮಲೆ ಮತ್ತು ಸಹಸೇವಕಿಯರು ಬರುತ್ತಾರೆ. ಅವಳ ಮೋಹಕ ಮಾತು ಮತ್ತು ನಗು ರಾಮರ ಕಿವಿ ತುಂಬುತ್ತವೆ. ಪರಿಣಾಮ ತೀಕ್ಷ್ಣಗೊಂಡ ಕಾಮನೆಗಳ ಆಟ. ರಾಮರಿಗೆ ಎಂದಿಗೂ ಹೀಗಾಗಿಲ್ಲ. ಶ್ಯಾಮಲೆಯ ಧ್ವನಿಯಲ್ಲಿನ ಮಾದಕತೆ ಪದೇ ಪದೇ ಅವಳ ಮಾತು ಕಿವಿಗೆ ಬೀಳಲಿ ಎಂಬ ಆಸೆಫ಼್ಯನ್ನು ರಾಮರಲ್ಲಿ ಜಾಗೃತ ಮಾಡುತ್ತದೆ. ರಾಮರಿಗೆ ಮೈ ಬಿಸಿಯಾಗಿ ಬೆವರು ಮೂಡುತ್ತಿರುವುದು ಗೊತ್ತಾಗುತ್ತದೆ. ಹಾಗೇ ಸಣ್ಣಗೆ ನಡುಕ. ಶ್ಯಾಮಲೆ ಪೂಸಿಕೊಂಡಿದ್ದ ಸುಗಂಧ ಜ್ದ್ರವ್ಯ ರಾಮರ ಮೂಗಿಗೆ ಅಲೆಅಲೆಯಾಗೆ ಬಂದು ತಾಡಿಸುತ್ತದೆ ಮೃದುವಾಗಿ. ಇದನ್ನೆಲ್ಲಾ ಆನಂದಿಸು ಅಂತ ಒಳಗಿನಿಂದ ಯಾವುದೋ ಶಕ್ತಿಯ ಪ್ರೇರಣೆ. ನನಗೆ ಹೀಗೆಲ್ಲಾ ಆಗಬಾರದು. ಏಕಪತ್ನೀವ್ರತಸ್ಥ ನಾನು.. ಇವತ್ತು ಯಾಕೆ ಹೀಗಾಗುತ್ತಿದೆ..? ರಾಮರ ಬುದ್ಧಿಯನ್ನು ಮೋಹ ಆವರಿಸಲಾರಂಭಿಸುತ್ತದೆ ಯೋಚಿಸಲು ಬಿಡದಂತೆ. ಎದ್ದು ಕುಳಿತುಕೊಳ್ತಾರೆ ಹಾಸಿಗೆಯ ಮೇಲೆ.. ಶ್ಯಾಮಲೆ ಕೊಠಡಿ ಶುಚಿಗೊಳಿಸುವುದರಲ್ಲಿ ತಲ್ಲೀನ. ತಾವು ಎಂದೂ ಕಂಡಿರದ ಒಂದು ಸೌಂದರ್ಯವನ್ನು ಇಂದು ಶ್ಯಮಲೆಯಲ್ಲಿ ಗುರುತಿಸುತ್ತಾರೆ. ಆಗ ಶ್ಯಾಮಲೆ ರಾಮರನ್ನು ನೋಟದಿಂದ ಕೊಲ್ಲುತ್ತಾಳೆ. ಶ್ಯಾಮಲೆಯಿಂದ ಯಾಕೆ ಇಮ್ದು ಈ ಪರಿಯ ಆಹ್ವಾನ? ನನ್ನ ಪತ್ನೀವ್ರತದ ಪರೀಕ್ಶ್ಫ಼್ಹೆಯೋ? ಸೀತೆಗೆ ಅಗ್ನಿಪರೀಕ್ಷೆಗೆ ಒಳಪಡಿಸಿದ್ದರಿಂದ ಸೀತೆಯ ಪರಮ ಸೇವಕಿ ಶ್ಯಾಮಲೆ ನೊಂದು ನನ್ನನ್ನು ಈ ರೀತೆ ಪರೀಕ್ಷಿಸುತ್ತಿರಬಹುದೇ..? ಅವಳ ನೋಟದಲ್ಲಿ ಕುತಂತ್ರವಿದ್ದಂತೆ ತೋರುತ್ತಿಲ್ಲ. ನಿಶ್ಚಯವಾಗಿ ಕಾಮನೆಗಳಿವೆ.. ಆಹ್ವಾನವಿದೆ. ಆ ನೋಟದಲ್ಲಿ ಸೀತೆಗೇ ಸವತಿಯಾಗುವಂತಹ ಶಕ್ತಿಯೂ ಇದೆ. ಇಂದೇಕೆ ಹೀಗೆ? ರಾಮರು ಇದೆಲ್ಲವನ್ನೂ ಚಿಂತಿಸುತ್ತಿರುವಂತೆಯೇ ತಮ್ಮ ನೋಟ ಅವಳ ಮೇಲೇ ನೆಟ್ಟಿರುವುದನ್ನು ಅರಿತು ದೃಷ್ಟಿ ಬದಲಿಸ್ತಾರೆ. ಇದೆಂಥ ಪರೀಕ್ಷೆ ಇಂದು..? ಅಥವಾ ನನ್ನ ನೋಟವನ್ನು ಅರ್ಥಮಾಡಿಕೊಳ್ಳದ ರಾಮ ರಾಜ್ಯವನ್ನೇನು ಅರ್ಥಮಾಡಿಕೊಂಡು ಆಳಿಯಾಫ಼್ನು ಎಂಬ ಭಾವ ಶ್ಯಾಮಲೆ ವ್ಯಕ್ತಪಡಿಸುತ್ತಿರುವಳೇ..? ಅಥವಾ ರಾಮನಾದ ನಾನು ಯಾವುದೋ ಮೋಹದ ಪ್ರೇರಣೆಯಿಂದ ಅವಳ ಬಳಿ ಸಾರಿ ನನ್ನ ಮನಸ್ಸಿನ ಬಯಕೆಯನ್ನು ವ್ಯಕ್ತಪಡಿಸಿಬಿಟ್ಟರೆ ಅದನ್ನಾಗ ಅವಳು ತಿರಸ್ಕರಿಸಿ ರಾಮನನ್ನೇ ಜಯಿಸಿದ ಹೆಣ್ಣಾಗಿ ಸೂರ್ಯ ಚಂದ್ರರಿರುವವರೆಗೆ ಖ್ಯಾತಲಾಗುವ ತಂತ್ರವೇ..? ಆದರೆ ನಾನೆಂದೂ ಅವಳನ್ನು ಆ ಭಾವನೆಯಿಂದ ನೋಡಿಲ್ಲವಲ್ಲ.. ತಾನೇ ಬಂದು ಇಲ್ಲಸಲ್ಲದ ಪಟ್ಟು ಹಾಕಿ ನನ್ನನ್ನು ಸಮ್ಮೋಹನಗೊಳಿಸಿ ಆನಂತರ ನನ್ನನ್ನು ತಿರಸ್ಕರಿಸಿ ನನಗೆ ಕೆಟ್ಟ ಹೆಸರು ತರುವ, ಪ್ರಪಂಚದಲ್ಲಿ ರಾಮನೆಂದರೆ ಹೀಗೇ ಎಂದು ಎಲ್ಲ ವಾದಿಸುವಾಗ.. ಇಲ್ಲ ನನಗೆ ಗೊತ್ತು ರಾಮನೇನೂಂತ. ನನ್ನನ್ನೇ ಒಮ್ಮೆ ಪ್ರೇಮಭಿಕ್ಷೆ ಕ್ಳಿದ್ದ. ನಾನು ತಿರಸ್ಕರಿಸಿದ್ದೆ.. ರಾಮನನ್ನೇ.. ಎಂಬ ಒಮ್ದು ತುಂಬ ವೈಯಕ್ತಿಕ ಪೈಶಾಚಿಕ ಆನಂದವನ್ನು ಜೀವನಪೂರ್ತಿ ಅನುಭವಿಸಲಿಕ್ಕೋ.. ತಾಯೇ ಗಾಯತ್ರೀ ಯಾಕಿಂತ ಶೋಧನೆ ಇಂದು ನನಗೆ? ರಾಮರು ಪೇಚಾಡಿಕೊಳ್ತಾರೆ.
ತಾಯಿ ಶ್ಸೀತಾಮಾತೆ ಆಗ ಸ್ನಾನನದ ಮನೆಯಿಂದಲೇ ಕೂಗಿ ಹೇಳುತ್ತಾರೆ. ’ಸ್ನಾನ.. ಸ್ನಾನಕ್ಕೆ ನೀರು ತಯಾರಿದೆ.. ಬೇಗ ಸ್ನಾನ ಮುಗಿಸಿಬಿಡಿ.’ ಇದು ರಾಮರಿಗೆ ಮತ್ತೊಂದು ಆಘಾತ. ಇದುವರೆವಿಗೆ ಸೀತಾದೇವಿ ಇಂದಿಗೂ ತನ್ನ ಕರ್ತವ್ಯಗಳ ಬ್ಗಗ್ಗೆ ಎಚ್ಚರಿಸಿಲ್ಲ. ಇಂದೇಕೆ ಹೀಗೆ? ಆಗ ರಾಮರ ಅರಿವಿಗೆ ಗೋಚರಿಸುತ್ತದೆ ಸೀತೆಯ ಮಾತಿನಲ್ಲಿ ಮೂಡಿ ಬಂದ ’ಸ್ನಾನ’ ಎಂಬೆ ಪದ ದೇಹದ ಸ್ನಾನಕ್ಕಲ್ಲ.. ಮನಸ್ಸಿನ ಸ್ನಾನಕ್ಕೇಂತ. ರಾಮರು ಕಣ್ಮುಚ್ಚಿಕುಳಿತುಕೊಳ್ತಾರೆ. ಪದ್ಮಾಸನ ಹಾಕಿಕೊಳ್ತಾರೆ. ಮನಸ್ಸನ್ನು ಕೇಂದ್ರೀಕರಿಸಿಕೊಳ್ತಾರೆ. ಪದೇ ಪದೇ ಗಾಯತ್ರೀಮಂತ್ರವನ್ನು ಜಪಿಸಿಕೊಳ್ತಾ ಧ್ಯಾನಸಮಾಧಿಗೆ ಹೋಗ್ತಾರೆ.
ತಮ್ಮ ಮನಸ್ಸಿನೊಳಗಿಂದ ತಮ್ಮನ್ನು ಕೆಣಕಿದ ಆ ಮೋಹಕ ನೋಟವನ್ನು, ತಮ್ಮ ಕಿವಿಗೆ ಬಂದಪ್ಪಳಿಸಿದ ಆ ಹುಡುಗಿಯ ಮಾದಕ ಧ್ವನಿಯನ್ನೂ, ಮೂಗಿಗೆ ಬಂದು ಅಪ್ಪಳಿಸಿ ಕಾಮನೆಯನ್ನು ಕೆರಳಿಸಿದ್ದ ಸುವಾಸನೆಯನ್ನೂ ತಮ್ಮ ಮುಂದುಗಡೆ ಜೋಡಿಸಿಕೊಳ್ತಾರೆ. ಮೋಹದಿಂದ ಉಚ್ಛಾಟಿಸಿದ ಸಕಲ ವಸ್ತುಗಳನ್ನೂ ಬೆರೆಸಿ ಅದಕ್ಕೊಂದು ಮೂರ್ತರೂಪ ಕೊಡೋದಿಕ್ಕೆ ಪ್ರಯತ್ನಿಸ್ತಾರೆ. ಅವರು ಎಷ್ಟೇ ಪ್ರಯತ್ನಿಸಿದರೂ ಆ ಸಾಮಗ್ರಿಗಳನ್ನು ಬಳಸಿ ಒಂದು ಮೂರ್ತರೂಪ ಕೊಡೋದಿಕ್ಕೆ ಸಾಧ್ಯವಾಗೋದೇ ಇಲ್ಲ ಅವರಿಗೆ. ಆಗೆ ಅದಕ್ಕೊಂದು ಹೆಸರನ್ನುಇಡ್ತಾರೆ.’ಅನಂಗ’ ಅತ. ಅಂದರೆ ’ಅಂಗ’ ವಿಲ್ಲದವನು…ಅಂದರೆ ಮನ್ಮಥ.. ಅಂದ್ರೆ ಕಾಮ.
ಹೀಗೆ ರಾಮನ ಮಗ ಕಾಮನಾಗ್ತಾನೆ. ಲಯದ ಅಧಿದೇವತೆ ಶಿವ ಹಿಂದೆ ಮನ್ಮಥನನ್ನು ಸುಟ್ಟಿರ್ತಾನೆ. ಮತ್ತೆ ಕಾಮ ಯಾವುದಾದರೊಂದು ರೀತಿಯಲ್ಲಿ ಜಗತ್ತಿಗೆ ಬರಲೇಬೇಕಿರುತ್ತೆ. ಅದಕ್ಕಾಗಿಯೇ ಅವನು ರಾಮನ ದೇಹವನ್ನು ಆಕ್ರಮಿಸಿರ್ತಾನೆ ಹದಿನೈದು ಗಳಿಗೆಗಳು ಮಾತ್ರ. ಕಾಮನಿಗೆ ಗೊತ್ತಿರುತ್ತೆ..ಬೇರೆ ಯಾವುದೇ ದೇಹ-ಮನಸ್ಸನ್ನು ಆತ ಆಕ್ರಮಿಸಿದ್ದರೂ ತನ್ನ ಮರುಹುಟ್ಟು ಸಾಧ್ಯವಾಗ್ತಿರ್ಲಿಲ್ಲ. ರಾಮನ ಏಕಪತ್ನೀವ್ರತಸ್ಥ ಮನಃಸ್ಥಿತಿ ಎಷ್ಟು ಶಕ್ತಿಯುತವಾದದ್ದೆಂದು ಮನ್ಮಥನಿಗೆ ಚೆನ್ನಾಗಿ ಗೊತ್ತಿರುತ್ತೆ. ಯಾರ ಮೇಲಾದರೂ ತನ್ನ ಆಟ ತೋರಿಸಬಲ್ಲ ಕಾಮ ತನ್ನ ಅಪ್ಪನಂಥ ರಾಮನನ್ನು ಬಿಟ್ಟು.
ಜಯ್ ಶ್ರೀರಾಮ್.
ಶ್ಯಾಮಲೆಯ ವೇಷದಲ್ಲಿದ್ದ ಮನ್ಮಥನ ಹೆಂಡತಿ ರತೀದೇವಿ ಮನ್ಮಥನ ಜತೆಯಲ್ಲಿ ರಾಮನ ಪಾದಾರವಿಂದಗಳಿಗೆ ಅಡ್ಡಬಿದ್ದು ಆಸೀರ್ವಾದ ಪಡೆದುಕೊಂಡು ಕೃತಜ್ಞತೆಗಳನ್ನು ಅರ್ಪಿಸಿ ಅಂತರ್ದಾನರಾಗುತ್ತಾರೆ. ರಾಮರು ತಮ್ಮ ಧ್ಯಾನ ಸಮಾಧಿಯಿಂದ ಏಳ್ತಾರೆ.. ಸ್ನಾನದ ಮನೆಯ ಕಡೆಗೆ.. ತಮ್ಮ ಎಂದಿನ ದಿನಚರಿಯ ಕಡೆಗೆ. ರಾಮರಾಜ್ಯದ.. ಆಸ್ಥಾನದ ಕಡೆಗೆ..
ಶ್ರೀರಾಮ ಜಯಂ.. ಶ್ರೀರಾಮ್ ಜಯಂ.. ಶ್ರೀರಾಮಜಯಂ.
*****