ನಿದ್ರಾಹೀನ ರಾತ್ರಿ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಡೀ ಲೋಕ ನಿದ್ರೆಯಲ್ಲಿದೆ, ನನಗೆ ಮಾತ್ರ ನಿದ್ರೆಯಿಲ್ಲ ಭಗ್ನ ಹೃದಯಿ ನಾನು, ಇಡೀ ರಾತ್ರಿ ಬರೀ ನಕ್ಷತ್ರದೆಣಿಕೆ ಮರಳಿ ಬಾರದ ಜಾಗಕ್ಕೆ ಹಾರಿದೆ ಕಂಗಳಿಂದ ನಿದ್ರೆ ವಿರಹದ […]

‘ಶ್ರೀ’ಯವರನ್ನು ನೆನೆದು

ಕಂನಾಡ ಬಾನಿನಲಿ ಶ್ರೀಕಾರ ಬರೆದಂತೆ ‘ಶ್ರೀ’ ಬೆಳ್ಳಿ ಚಿಕ್ಕೆ ಲಕಲಕಿಸಿ ಬೆಳ್ಳಂಗೆಡೆಯೆ ನಾಡ ನಾಡಿಗಳಲ್ಲಿ ಚೈತನ್ಯ ಸೆಲೆಯೊಡೆಯೆ ಬಾವುಟವನೆತ್ತಿ ದಿಗ್ವಿಜಯಮಂ ಪಡೆದಂತೆ ದಂಡಯಾತ್ರೆಯ ಗೈದ ವಾಗ್ಮಿಭವದುನ್ನತಿಯು! ತುಂಬು-ವಿದ್ಯೆಯ ತುಂಬುಗಾಂಭೀರ್‍ಯದಲಿ ಮೆರೆದು ಕನ್ನಡದ ಸಾರ ಸರ್‍ವಸ್ವ […]

ಷೆಲ್ಲಿ ಕವಿಯನ್ನು ಕುರಿತು

ಭೋರ್‍ಗರೆವ ಕಡಲು ನಿನ್ನೊಡಲ ನುಂಗಿತೆ ಷೆಲ್ಲಿ? “ನಿನ್ನ ಮುಳುಗಿಸಿದ ನೀರಿನ ಬಲವನೊಂದು ಕೈ ನೋಡಿ ಬಿಡುವೆನು” ಎಂದ ಬೈರನ್-ಕವಿಯೆ ಸೈ! ನೂರು ನೋವನ್ನುಂಡ ಕವಿಜೀವ ನಿನಗೆಲ್ಲಿ ವಿಶ್ರಾಂತಿ? ಶಾಂತಿಯೆಂಬುದೆ ಭ್ರಾಂತಿ! ಚಿರಕಾವ್ಯ- ನಂದನದ ಮಂದಾರ! […]

“ಶ್ರೀ ಕವಿರತ್ನಂ”

ಸಾವಿರದ ಸಾಸಿರಂಬರಿಸ ಪೂರ್‍ವದಲಿ ಭುವ- ನದ ಭಾಗ್ಯದಿಂ ಪುಟ್ಟಿ ಮುದುವೊಳಲ ಬಳೆಗಾರ ಬೀರ ಕಡಗವ ತೊಟ್ಟು ಇಹಪರದ ರಸಸಾರ- ವೆನೆ ನಿಮಿರ್‍ಚಿದ ಕಾವ್ಯ ರನ್ನಕೃತಿ! ಪರಿಕಿಸುವ- ಗಂಟೆರ್‍ದೆಯೆ? ಒಂದರಲಿ ಶಾಂತ ಮತ್ತೊಂದರಲಿ ವೀರ ರಸಮೊತ್ತರಿಸಿ […]

ನಿನ್ನೆ ರಾತ್ರಿ

ನಿನ್ನೆ ರಾತ್ರಿ ನಮ್ಮ ಐರಾವತಕ್ಕೆ ನೆನಪಾಗಿ ಭಾರತ ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು ಉಕ್ಕಿ ಚೆಲ್ಲಿದವು ನಿನ್ನೆ ರಾತ್ರಿ ಹೆಂಡದ ಗಿಂಡಿ ಆ ರಾತ್ರಿಯಂತೆ ಸಾಗಬಾರದೆ ಜೀವನ ಪುನರುತ್ಥಾನದತನಕ? ನೊರೆಯುಕ್ಕಿ ಹರಿದಿತ್ತು […]

ಬುದ್ಧೋದಯ

ಜಗದ ದುಃಖದ ಕಡಲ ಕಡೆಯಲೊಗೆತಂದ ಶಶಿ ಕಳೆಯಂತೆ, ಬೆಳುದಿಂಗಳಿನ ಶಾಂತಿ ಮಡುಗಟ್ಟಿ ಹರಿದಂತೆ, ಮೌನ ಗಂಭೀರತೆಯೆ ಕೆನಗಟ್ಟಿ ನಿಂದಂತೆ ಬುದ್ಧಸ್ಮಿತಂ! ಕರುಣೆ ನಳನಳಿಸಿ ದಳದಳವನರೆತೆರೆದಂತೆ ಕಣ್ಮಲರ ಕಾಂತಿ! ಹಿಂಸಾರತಿಯ ಕೆಸರ ತೊಳೆವ ಬಿತ್ತರದ ಹಣೆ […]

ಚಿರಂತನ ದಾಹ

೧ ದಿನದಿನವು ಮೂಡಣದ ಬಾನ ಕರೆಯಂಚಿನಲಿ ಚೆಂಬೆಳಕು ಉಬ್ಬರಂಬರಿಯುತಿಹುದು; ನೂರು ಕಾರಂಜಿಗಳು ತೆಕ್ಕನೆಯೆ ಪುಟಿದಂತೆ ಲೋಕಲೋಕಂಗಳನು ತೊಳೆಯುತಿಹುದು. ೨ ಬೊಗಸಗಂಗಳ ತೆರೆದು ಮೊಗೆಮೊಗೆದು ಕುಡಿದರೂ ಈ ಪುರಾತನ ದಾಹ ತೀರದಲ್ಲಾ! ಏನೊ ಅಸಮಾಧಾನ ಹೃದಯಾಂತರಾಳದಲಿ […]