ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […]
ವರ್ಗ: ಪದ್ಯ
ಓಹ್ ನಮ್ಮ ಬೆಂಗಳೂರು
ಒಹ್! ನಮ್ಮ ಬೆಂಗಳೂರು. ಸಂಪ್ರದಾಯಸ್ಥ ಸುಂದರಿಗೆ ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ ಇಲ್ಲೊಂದು ಮಲ್ಲೇಶ್ವರವಿದೆ. ವ್ಯಾಕ್ಸಿಂಗ್ ಮಾಡಿ ಮಾಡಿ ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ. ಶಿವಾಜಿನಗರ, ಕಳಾಸಿಪಾಳ್ಯಗಳ ಮೈ ಇನ್ನೂ ನೆರೆತಿಲ್ಲ. ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ ಹುಟ್ಟುವಾಗಲೇ […]
ದೂಧ್ ಸಾಗರ್
(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) ಕ್ಷೀರ ಸಾಗರವ ಸುಮನಸ ವೃಂದ ಬಾನಿಂ ಕಟ್ಟಿರೆ ಸಡಲಿತೆ ಬಂಧ? […]
ಅಚ್ಚರಿಯ ಪರಿ
ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […]
ಹಿತ್ತಲಿನ ಗಿಡ
ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. *****
ಗುಣದ ಗರಿಮೆ
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****