ಅನಾವರಣ

ಹುಬ್ಬಿನಂಚಿನಲಿ
ಹೊಕ್ಕಳಿನ ಸುರುಳಿಯಲಿ
ಚುಚ್ಚಿ ಕೆಣಕುವ ರಿಂಗು.
ವಿಷಕನ್ಯೆಯಂತೆ ತುಟಿ
ನೀಲಿ ರಂಗು.
ಬ್ರಹ್ಮಾಂಡ ಜಾರಿಸಲು
ಇನ್ನೇನು ಜಾರುವಂತಿದೆ,
ಹೆಜ್ಜೆ ಒಂದಿರಿಸಿದರೆ
ಪರ್ಸಂಟೇಜ್ ಸೀರೆ.

ಇಂಥವಳ ಅನಿರೀಕ್ಷಿತ
ಲೇಸರ್ ನೋಟಕ್ಕೆ
ತಿರುಗಿದ ಆಸೆಬುಗುರಿ
ಕಣಕಣದಲಿ ಸ್ಥಾಪಿಸಿತು
ಅಣುಸ್ಥಾವರ.

ಅಭಿಸಾರಕ್ಕೆ ಹಾತೊರೆದು
ಅವನಿಲ್ಲದ ಹೊತ್ತು ಅವಳ ಮನೆಯಲ್ಲಿ
ನಗ್ನ ಪರಿಪೂರ್ಣ
ಅನುಭೂತಿಗೋ
ಏಕೋ
ತಾಳಿ ತೆಗೆದಿಟ್ಟು
ನನ್ನೆದುರು
ಅವಳು ಬಯಸಿದ
ಹ್ಯಾಂಡಿಕ್ಯಾಮ್ ಹನಿಮೂನು
ದೇಶ-ವಿದೇಶದಲಿ ಅನಾವರಣ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ