ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […]
ಚೇಳಿಗೊಂದೇ ಬಸಿರು
ಮುಖದ ಎಡಬಲಕ್ಕೆರಡು ಚೂಪಾದ ಚಿಮುಟ ಬಾಲಕ್ಕೆ ವಿಷದ ಮುತ್ತನ್ನೆತ್ತಿ ಮೆರೆಯುವ ಕೊಂಡಿ. ಮೆಲ್ಲಗೆ ಗೋಡೆ ಬದಿ ಹಿಡಿದು ಹೊರಟಾಗ ತಟ್ಟನೆ ಕಂಡು ಮೆಟ್ಟಿ ಬೀಳುತ್ತೇವೆ. ಈ ಭಯೋತ್ಪಾದಕನೆಲ್ಲಿ ಅಡಗಿದ್ದ? (ಶಿಲಾಬಾಲಿಕೆಯ ಸೀರೆಯ ನಿರಿಗೆಯಲ್ಲೀ ಇದ್ದ.) […]
ಬೆಳದಿಂಗಳಾಟ
ಎಷ್ಟು ಮಿದುವೇ ತಾಯಿ, ಇದರ ರೆಕ್ಕೆ-ಪುಕ್ಕಬೆಳುದಿಂಗಳನೆ ಮುಟ್ಟಿದಂತಾಯಿತಕ್ಕ. ಬೆಳಗು ಮುಂಜಾವದಲಿ ಕೇಳಿಸಿದ ಹಾಡುಇದರದೇ ಇರಬಹುದು, ಎಲ್ಲಿದರ ಗೂಡು? ಮಾಡಬೇಡವೆ ಹಾಗೆ ಹಿಚುಕಿ ಗಾಸಿ ಬೀಸಿ,ಯಾಕೊ ನನ್ನೆದೆಯೊಳಗೆ ಒಂಥರಾ ಕಸಿವಿಸಿ. ತಾ ನನಗು ಒಂದಿಷ್ಟು ಈ […]
ಏಕರೂಪತೆಯಿಲ್ಲದ ‘ಕನ್ನಡ’ ಸಾಧನಗಳು
ಎಲ್ಲರೂ ಕ್ಷಮಿಸಬೇಕು- ತಾಂತ್ರಿಕತೆಯ ಸಂದರ್ಭದಲ್ಲಿ ಕನ್ನಡ ಭಾಷೆ ಅಂತರ್ಜಾಲದಲ್ಲಿ ಎದುರಿಸುತ್ತಿರುವ ಅಡಚಣೆಗಳನ್ನು ಕುರಿತಂತೆ ಬರೆಯುತ್ತಿದ್ದೇನೆ. ಬಹಶಃ ಅಪ್ರಸ್ತುತವಾಗಲಾರದು ಎಂಬ ಹುಂಬ ಧೈರ್ಯವೂ ಇದೆ. ಚುಚ್ಚು ಮಾತುಗಳನ್ನಾಡದಿದ್ದರೆ- ಚರ್ಚೆ ಮುಂದುವರಿದು ’ಬೇಕು – ಬೇಡಗಳು’ ನಿರ್ಣಯವಾಗುವುದಾದರು […]
ಜೋಕುಮಾರಸ್ವಾಮಿ – ೨
ಋತುಮಾನದ ಹಕ್ಕಿ [ಸೂಳೆ ಹೊಲೇರ ಶಾರಿಯ ಮನೆಯಂಗಳ. ಗೌಡ್ತಿ ಸೀರೆಯ ಸೆರಗಿನಿಂದ ಅಂಗಳ ಗುಡಿಸುತ್ತ ಬರುವಳು] ಗೌಡ್ತಿ: ಅವ್ವಾ ಸೂಳೆವ್ವ ತಾಯಿ ಸೂಳೆವ್ವ ಅದಿಯೇನ ಮನೆಯಾಗ || ಬಂಜಿ ಬಂದ ಕರಿಯುತೇನ ಕರುಣಾ ಇಲ್ಲೇಳ […]
ಜೋಕುಮಾರಸ್ವಾಮಿ – ೧
ಗಣ್ಣ ಪದ ಶರಣು ಹೇಳೇನ್ರಿ ಸ್ವಾಮಿ ನಾವು ನಿಮಗ ಸದ್ದು ಗದ್ದಲ| ಮಾಡಬ್ಯಾಡ್ರಿ ಆಟದೊಳಗ ಸಣ್ಣ ಹುಡುಗರು ನಾವು ಬಣ್ಣಕ ಹೆದರವರು ಚೆನ್ನಾಗಿ ಕೇಳರಿ ನಮ್ಮ ಕೂತೀರಿ ಹೆಣ್ಣು ಗಂಡು ಭರ್ತಿಸಭಾ ಇರಲಿ ಬುದ್ಧಿವಂತರ […]
ಬೊಮ್ಮಿಯ ಹುಲ್ಲು ಹೊರೆ
“ಓ ಹುಲ್ಲು ಚೋಳಿ…ಹುಲ್ಲು ಚೂಳೀ ಕೊಡೋದೇ?”“ಐದಾಣೆಗೆ ಆಗೋದಾದರೆ ತರ್ತೆನೋಡೀ.”“……”“ಓ ನೀನು~ ಸಣ್ತಂಗಿ ಮಗು ಅಲ್ಲವೇನೆ? ಗುರುತೇ ಇಲ್ಲದ ಹಾಗೆ ಹೋಗ್ತೀಯಲ್ಲವೆ…ಯಪ್ಪಾ ಯಪ್ಪಾ ಯಪ್ಪಾ! ಹುಲ್ಲು ಹ್ಯಾಗೆ ತುಂಬೀಯೇ!! ನಿಮಗೆ ದೇವರು ಗನಾಕೆ ಮಾಡೋನಲ್ಲವೆ..? ಅರ್ಧಾ […]
ಕಳ್ಳ ಗಿರಿಯಣ್ಣ
ಐದಾರು ದಿನಗಳ ಹಿಂದಿನ ಮಾತು. ನಮ್ಮ ಊರಿಗೆ ಹೋಗಿದ್ದೆ. ಅನೇಕ ವರುಷಗಳ ನಂತರ. ಆ ಈ ಮಾತುಗಳ ನಂತರ ಹರಟೆ ಗಿರಿಯಣ್ಣನತ್ತ ಹೊರಳಿತು. ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತು ಏಕೋ ನನ್ನನ್ನು ಇಡೀ […]
ಸುಖವಾಗಿದ್ದೀಯಾ..
ಸೀತಮ್ಮ ಅಮೆರಿಕಾದಲ್ಲಿ ಮಗನ ಮನೆಗೆ ಬಂದು ಒಂದು ತಿಂಗಳಾಗಿತ್ತಷ್ಟೆ. ಮನಸ್ಸಿಗೆ ಒಗ್ಗಿದ ಪರಿಸರ, ಹೃದಯಕ್ಕೆ ಒಗ್ಗಿದ ಸಂಸ್ಕೃತಿಯಿಂದ ದೂರಾಗಿ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದ ಅವರ ಜೀವಕ್ಕೆ ತಂಪೆರೆಯುವಂತೆ ಬಂದಿತ್ತು ಅವರ ಸ್ನೇಹಿತೆ ಶಾರದೆಯ […]