ಟಿ.ವಿ.ಯಲ್ಲಿ ಟಾಪ್ ಒನ್ ಆಗಲು ಓಡುತ್ತಿವೆ ಸಿನಿಮಾ ಕುದುರೆಗಳು

೨೦೦೦ ಬಂದದ್ದೇ ತಡ ಸಿನಿರಂಗದವರ ಬುಡಗಳು ಅಲ್ಲಾಡತೊಡಗಿವೆ. ಸ್ಟುಡಿಯೋಗಳು ನೊಣ ಹೊಡೆಯುತ್ತಿವೆ. ಉಪವಾಸವಿದ್ದ ಚಿತ್ರ ನಟ-ನಟಿಯರು ಮೆಗಾ ಧಾರಾವಾಹಿಗಳನ್ನು ಒಪ್ಪಿ-ಅಪ್ಪಿ-ತಬ್ಬಿ ಮುದ್ದಾಡುತ್ತಿದ್ದಾರೆ. ‘ನಮ್ಮ ಆಜನ್ಮ ಶತ್ರು ದೂರದರ್ಶನ’ ಎಂದು ಬಡಬಡಿಸಿದ ಮಂದಿಯೇ ಇಂದು ಮೆಗಾ […]

ಬಸಳೆ – ನಾನು

ನನ್ನ ಪ್ರೀತಿಯ ಹಿತ್ತಲಲ್ಲಿ ಅಮ್ಮ ನೆಟ್ಟು ತೊನೆಸಿದ ಬದನೆಯ ಬಳಿಯೇ ತಂದು ಸ್ಥಾಪಿಸಿದ್ದೇನೆ ಬಸಳೆ ಸಾಮ್ರಾಜ್ಯ ಚಪ್ಪರಿಸಿದ್ದೇನೆ ಬೇಗ ಬೇಗ ಊರು ಕೊಟ್ಟಿದ್ದೇ ತಡ ಹಬ್ಬಿದ್ದೇ ಹಬ್ಬಿದ್ದು ತಲೆ ತಗ್ಗಿಸಿ ಮನತುಂಬಿ ಚಪ್ಪರ ತಬ್ಬಿದೇ […]

ಕಾಲಾತೀತ

‘ಬಿಡುವಿಲ್ಲ, ಅರ್‍ಜಂಟು!’ ಟಾರುಬೀದಿಯ ತುಡಿತ! ಕಾರು ಮೋಟಾರು ಸೈಕಲ್ಲು ಟಾಂಗಾ ಟ್ರಕ್ಕು ಉಸಿರು ಕಟ್ಟುವ ತೆರದಿ ಬಟ್ಟೆಯಲ್ಲಿ ಹಾಸು ಹೊಕ್ಕು! ಗಡಿಯಾರದೆಡೆಬಿಡದ ಟಕ್ಕುಟಕ್ಕಿನ ಬಡಿತ! ಅಫೀಸು ಶಾಲೆ ಕಾಲೇಜು ಅಂಗಡಿ ಬ್ಯಾಂಕು ಎಳೆಯುತಿಹವಯಸ್ಕಾಂತದೋಲು ಜೀವಾಣುಗಳ […]

ಅಭಾವ

ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲುಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದುಅದೇ ಹಿಂದಿನ ಸಲಿಗೆಯಿಂದಲೋ? ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ:ಅಲ್ಲಲ್ಲಿ ಬೆಳ್ಳಿಗೂದಲು;ಕೋಮಲವಾದ, ಈಗ ಕೊಂಚ […]

ಮರೆಯಾದವರು

“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ […]

ನೆರಳು

ನಿಟ್ಟುಸಿರನೆಳೆದು ದಾಟಿತು ಕೊನೆಯರೈಲು : (ತಕ್ಕೊ ಕೈಮರದ ಕರಡೀಸಲಾಮು !) ಕೈಯ ಚಾಚಿದ ನೆರಳು ಚಲಿಸುತ್ತಿದೆ…..! ಮೆಲ್ಲಮೆಲ್ಲನೆ ಸಂಜೆ ಹಿಂಬಾಲಿಸುತ ಬಂತು! ಅಸ್ಥಿ ಪಂಜರದೊಡಲ ತುಂಬುತ್ತಿದೆ! ಕೈಯಕೋಲನು ಮೀಟಿ ಸೇತುವೆಯ ದಾಟಿ ಕೈಯ ಚಾಚಿದ […]

ಋತುಸಂಸಾರ

-೧-ಮೂರು ತಿಂಗಳುಬೇಸರವ ನೀಗಿಕೊಳ್ಳಲು ಬಂದು ತಂಗಿದಳುಮಗಳ ಮನೆಯೊಳು ಮುದುಕಿ ಮೋಜುಗಾರ್‍ತಿ.ಮೊದಲೆರಡು ದಿನ ಕ್ಷೇಮಸಮಾಚಾರದ ಸುದ್ದಿ,ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈಹಾಗೆಯೇ ನಾಲ್ಕು ದಿನ ಸೈ ;ಸುರುವಾಯ್ತು ರಗಳೆಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ … …ಲಟಿಕೆ […]

ಚಿಂತನ

೧ ತೆರಳಿದರು ಅತಿಧಿಗಳು ಮರಳಿದರು ಮನೆಗೆ ನನ್ನ ಮನೆ (ಗುಬ್ಬಿ ಹೆರವರ ಮನೆಗೆ ತನ್ನ ಮನೆ ಎಂದಂತೆ) ಬರಿದಾಯ್ತು ಕೊನೆಗೆ! ಎದೆಯೊಲವನರಳಿಸುತ ಕೆರಳಿಸುತ ಬಂದು ಒಂದು ದಿನ ನಿಂದು, ಏನೆಲ್ಲವನು ಒಮ್ಮೆ ಹೊಳಹಿನಲಿತಂದು ಎದೆಯ […]

ಸೊಳ್ಳೆ

೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […]