ಎಚ್ಚರಕ್ಕೊಂದು ಎಚ್ಚರ

ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ ಒಡ್ಡಿನಲ್ಲಿ ಕಟ್ಟಿಡುವುದು ಹೇಗೆಂಬ ಯೋಚನೆಯೇ ನದಿ ಕಿನಾರೆಯ ಈ ಸಂಜೆಯನ್ನು ಮತ್ತಷ್ಟು ಕಠಿಣವಾಗಿಸಿತ್ತು. ಏಳೂವರೆಯಾದರೂ ಅದು ಎಳೆವೆಯಲ್ಲಿದ್ದಂತಿತ್ತು. ಎಷ್ಟಾದರೂ ದಕ್ಷಿಣಾಯನದ ಹಗಲು. ಮಂಡಿ ಮಟ್ಟದ ನೀರಿನಲ್ಲಿ ಕತ್ತಲಿನ ಪ್ರಾಯವನ್ನಳೆಯುತ್ತ ತೋಳು ಮೇಲಕ್ಕೆ ಚಾಚಿ ಮೈಮುರಿದೆ. ಹಿಂದೆ ಕ್ಯಾಂಪ್‌ಫಯರಿಗೆ ಅಣಿಗೊಳ್ಳುತ್ತಿದ್ದ ಮಳಲಿನ ಹಾಸಿನಲ್ಲಿ ತುಸುವೇ ಮಬ್ಬಡರಿತ್ತು. ವಾರುಣಿ ಎತ್ತರದ ದನಿಯಲ್ಲಿ ಆಷ್, ರ್‍ಯಾಡ್ಸ್, ಮೋನ್ಸ್, ಡೀಪ್ಸ್, ಪ್ರ್ಯಾಟ್ಸ್ – ಅಂತೆಲ್ಲ ಆಗಾಗ್ಗೆ ಕೂಗಿ ಬೆಂಕಿ ಸಜ್ಜಿಕೆಯನ್ನು ನಿರ್ದೇಶಿಸುತ್ತಿದ್ದ. ಈ ಅಶ್ವಿನಿ ಕಾರಿಯಪ್ಪ, ರಾಧಿಕ ಸೋಮಣ್ಣ, ಮೋನಾ ಪಟೇಲ್, ದೀಪಾಲಿ, ಪ್ರೊತಿಮಾ ಬೋಸ್‌ಗಳು ಹನ್ನೆರಡು ವರ್ಷಗಳ ಬಳಿಕವೂ ಅವನನ್ನು ಸುತ್ತುಗರೆಯುವುದನ್ನು ಬಿಟ್ಟಿಲ್ಲವಲ್ಲ ಅಂದುಕೊಂಡೆ. ವಾರುಣಿ ಮೋನಾಳಿಗೆ ಮೋಜಿಗೆಂದು ಏನೋ ಹೇಳಿದಾಗ ಉಳಿದ ಹೆಣ್ಣುಗಳು ಗುಟುರಿಟ್ಟು ನಕ್ಕವು. ಮುಸ್ಸಂಜೆಯ ಮರದಲ್ಲಿ ಕೇಕೆ ಗಲಗಲಿಸಿತು. ವಾರುಣಿ ಮತ್ತೆ ಕೆಣಕಿ ನಕ್ಕ. ಅವಳು ಅವನನ್ನು ಅಟ್ಟಿಸಿಕೊಂಡು ಓಡಿದವಳು ಉಸುಕು ತೊಡರಿ ಧೇಯ್ಡೆಂದು ಬಿದ್ದಳು. ‘ಹೇ ಮೋನ್ಸ್! ಙou hಚಿveಟಿ’ಣ ಡಿemಚಿiಟಿeಜ ಜಿiguಡಿಥಿ – ಣhe bomb oಜಿ ಇighಣಥಿ ಓiಟಿe- ಔ‌ಏ! ಙou ಟಿeeಜ ಣo ಞಟಿoತಿ ಥಿouಡಿ ಟimiಣಚಿಣioಟಿs!!’ – ಎಂದು ಅವಳತ್ತ ಹೋಗಿ ಎತ್ತಲು ತೊಡಗಿದವನ ಕಿಬ್ಬೊಟ್ಟೆಗೆ ಮೋನ ಮುಷ್ಟಿಯಿಂದ ತಿವಿದಳು. ವಾರುಣಿ ಆಯ ತಪ್ಪಿ ಅವಳ ಮೇಲೆ ಬಿದ್ದ. ಉಳಿದ ಹೆಣ್ಣು ಮತ್ತೆ ಗುಟುರಿಟ್ಟವು. ಬಾಬಿ, ಅಮಿತ್, ಘೋಷ್ ಎಲ್ಲಿಂದಲೋ ಮಬ್ಬನ್ನು ಸೀಳಿಕೊಂಡು ಬಂದವರು ಕೇಕೆಯಲ್ಲಿ ಹುದುಗಿಕೊಂಡರು. ಇರುಳು ಸದ್ದಿರದೆ ದಟ್ಟಯಿಸತೊಡಗಿತ್ತು. ನಿಂತಲ್ಲೇ ಬಗ್ಗಿ ತಳದಿಂದ ಕಲ್ಲೊಂದನ್ನೆತ್ತಿ ತೋಳು ಜೀಕಿ ತೂರಿದೆ. ಅದು ಮನಸ್ಸಿನ ಆಳದಲ್ಲೆಲ್ಲೋ ಗುಳುಮ್ಮೆಂದಿತು.

ಇಂದಿರಾನಗರದ ಕ್ಲಬ್ಬಿನ ಸೆಕ್ರೆಟರಿ ಹೋದ ತಿಂಗಳಿನ ಸೋಮವಾರ – ಆರನೇ ತಾರೀಖಿರಬೇಕು, ಮೊಬೈಲಿಗೆ ಕರೆದು ಮರುಸಂಜೆ ಕ್ಲಬ್ಬಿಗೆ ಆಮಂತ್ರಣವಿತ್ತಿದ್ದು. ‘ಕ್ಲಬ್ಬಿಗೆ ಮುಂದಿನ ವರ್ಷಕ್ಕೆ ಇಪ್ಪತ್ತೈದು ತುಂಬುತ್ತೆ, ಸರ್. We iಟಿಣeಟಿಜ ಣo ಠಿuಣ uಠಿ ಚಿ Siಟveಡಿ ಎubiಟee ಊಚಿಟಟ. ಅದಕ್ಕೆ ನಾವು ಹದಿನೈದು ಆರ್ಕಿಟೆಕ್ಟ್‌ಸನ್ನ ಇನ್ವೈಟ್ ಮಾಡ್ತಾ ಇದ್ದೀವಿ… ಜಿoಡಿ ಚಿಟಿ oಠಿeಟಿ ಛಿomಠಿeಣiಣioಟಿ ಜಿoಡಿ ಣhe ಜesigಟಿ oಜಿ ಣhe sಚಿme.’ ಮಂಗಳವಾರದ ಮೀಟಿಂಗಿಗೆ ಒಂದು ತಾಸು ತಡವಾಗಿಯೇ ಹೋಗಿದ್ದೆ. ಆಹ್ವಾನಿತರಲ್ಲಿ ಮುಕ್ಕಾಲು ಮಂದಿ ನನ್ನ ಓರಗೆಯವರೇ ಇದ್ದರು. ಅದೂ ಬೀಯೆಮ್ಮೆಸ್‌ನವರು. ಹನ್ನೆರಡು ವರ್ಷಗಳ ಬಳಿಕ ಆಕಸ್ಮಿಕ ಪುನರ್ಮಿಲನ! ಸಭೆ ಮುಗಿದ ಮೇಲೆ ಈಜುಕೊಳದ ಮಗ್ಗುಲಿನ ಮೈತ್ರಿವನದಲ್ಲಿ ಊಟದ ಕೂಟ. ಬಿಯರು ಗುಟುಕುಗಳ ನಡುವೆ ಅನೂಪ ಈ ರೆಯೂನಿಯನ್ನಿನ ಪ್ರಸ್ತಾಪವೆತ್ತಿದ್ದ. ವಿನ್ನೂ ಅನುಮೋದಿಸಿದ್ದ. ಬಳಿಕದ ಒಂದೇ ವಾರದಲ್ಲಿ ಅದರ ಸಮಗ್ರ ಕರಡು ಸಿದ್ಧಗೊಂಡು ಈಮೇಲ್ ಬಂದಿತ್ತು. ‘ಓಚಿgಚಿmಚಿಟಿ! ಙou ರಿusಣ ಛಿಚಿಟಿ’ಣ miss ಣhis – ಥಿou ಞಟಿoತಿ. ಙou ಚಿಡಿe ಣhe ಠಿivoಣಚಿಟ eಟಿಣiಣಥಿ ಜಿoಡಿ ಣhis meeಣ!!’ – ಎಂದು ಅನೂಪ ಮತ್ತೆ ಮತ್ತೆ ಫೋನಿಸಿ ನನ್ನನ್ನು ಕಟ್ಟಿಹಾಕಿದ್ದ. ಬಿಜಾಯ್ ಮುಂಬಯಿ, ಡೆಲ್ಲಿ, ಕೊಚಿನ್, ಚೆನ್ನೈ, ಕೊಲ್ಕೋತಾಗಳಿಂದೆಲ್ಲ ಹಳೆಯ ಸಹಪಾಠಿಗಳನ್ನು ಕಲೆಹಾಕಿದ್ದ. ಅರ್ಕಾವತಿಯ ತಟದಲ್ಲಿ ಅಟಚಿss oಜಿ ಇighಣಥಿ ಓiಟಿe – ನಿನ್ನೆಯಿಂದ ಒಟ್ಟುಗಟ್ಟಿದ್ದು ಹೀಗೆ.

ನಿನ್ನೆ ಹನ್ನೊಂದರ ಸುಮಾರಿಗೆ ನನ್ನ ಬೊಲೇರೋ ಅರ್ಕಾವತಿ ಆರ್ಚರ್ಡ್ಸ್ ತಲುಪಿದಾಗ ನನ್ನನ್ನು ಕೂಡಲೇ ಯಾರೂ ಗುರುತಿಸಲಿಲ್ಲ. ಕಾಲೇಜಿನ ದಿನಗಳಿಗೂ ಈಗ್ಗೂ ನಾನು ಸಂಪೂರ್ಣ ಬದಲಾಗಿದ್ದೇನೆಂದು ವಿಲ್ಸ್ ವಾರುಣಿ ಹೇಳಿದ. ಸಂಚಾಲಿ ನನ್ನನ್ನು ನೋಡಿ ‘ಓಚಿgಚಿmಚಿಟಿ – ಡಿeಜeಜಿiಟಿeಜ!’ ಎಂದು ನಕ್ಕಿದ್ದಳು. ‘I ರಿusಣ ಛಿಚಿಟಿ’ಣ beಟieve ಣhಚಿಣ ಥಿou hಚಿve ಡಿemoಜeಟಟeಜ ಥಿouಡಿseಟಜಿ ಟiಞe ಣhis. ಟೋಟಲ್ಲಾಗಿ ಇಮೇಜ್ ಬದಲಾಯಿಸಿಬಿಟ್ಟಿದ್ದೀಯ!!’ – ಧರಣಿ ಅಂದಿದ್ದ. ನನಗೂ ಕೆಲವರ ಗುರುತು ಹತ್ತಿರಲಿಲ್ಲ. ಉದ್ದಿಮೆಯ ಒತ್ತಡ, ಮೂವತ್ತರ ನಡುವೆಲ್ಲೋ ಮಡುಗಟ್ಟಿದ ದೇಹ, ಎಷ್ಟೆಷ್ಟೋ ಹೊಸ ವಸ್ತುನಿಷ್ಠೆಯನ್ನು ರೂಢಿಸಿಕೊಂಡಿರುವ ಊರು… ಎಲ್ಲಕ್ಕಿಂತ ತನ್ನ ಹೊರಳುಗಳಲ್ಲೆಲ್ಲ ಉರುಳಿಸುವ ಕಾಲ – ಹೀಗೆ ಚರ್ಯೆಗಳನ್ನೇ ಬದಲಿಸಬಹುದೆ ಅನ್ನಿಸಿತ್ತು. ಗಡಿಬಿಡಿಯ ದಿನಚರಿಯಲ್ಲಿ ಕಟ್ಟುನಿಟ್ಟಿನ ಗರಡಿ, ಪಥ್ಯಗಳನ್ನು ಅಳವಡಿಸಿಕೊಂಡಿರುವುದರಿಂದ ನನ್ನನ್ನಿನ್ನೂ ಬೊಜ್ಜು ಸೆಣಸಿಲ್ಲ. ಪ್ರತಿ ಬೆಳಗಿನ ಕನ್ನಡಿಯಲ್ಲಿ ಎಲ್ಲರೂ ನಮ್ಮನ್ನು ನಾವು ಬಿಂಬಿಸಿಕೊಳ್ಳುವುದರಿಂದ ನಮಗೆ ನಮ್ಮ ಶಾರೀರಿಕ ಮಾರ್ಪಾಟುಗಳು ನೇರ ತಿಳಿದಾವೆಲ್ಲಿ? ನನಗೂ ಹಾಗೆಯೇ ಆಯಿತು. ಎದೆ ಸೊಂಟಗಳ ನಡುವೆ ಅರವತ್ತರ ಸುತ್ತಳತೆಯನ್ನು ಕಂಡಿರುವ ನರೇನ್, ಮೂರು ಮಕ್ಕಳನ್ನು ಹೆತ್ತು ಜೋಲಾಗಿರುವ ಮೋರೆಯ ವೈಶಾಲಿ, ವಿರಳಗೊಂಡಿರುವ ನೆತ್ತಿಯ ಅಭಿ….. ಇವರನ್ನು ನೋಡಿದಾಗ – ಅರೆ! ನನಗೂ ಕಮ್ಮಿಯೇನಿಲ್ಲ! ಆಗಲೇ ಮೂವತ್ತಾರು ತೀರಿದೆ!! – ಅಂತನ್ನಿಸಿ ಒಂದು ಖಾಸಗೀ ಕ್ಷಣದಲ್ಲಿ ಕಳೆದುಹೋಗಿದ್ದೆ.

ಮಧ್ಯಾಹ್ನದ ಊಟದ ಸಮಯದಲ್ಲಿ ಅನೂಪ ‘ಎಂಭತ್ತೊಂಭತ್ತರ ತರಗತಿ’ ಎಂಬ ಹೆಸರಿನ ಸಮಾವೇಶಕ್ಕೆ ವಿಧಿವತ್ತಾದ ಚಾಲನೆಯನ್ನು ಕೊಟ್ಟ. ಅದನ್ನೊಂದು ಸಂಘಟನೆಯೆಂಬಂತೆ ಕಟ್ಟುಬಹುದೆಂದು ಅಮಿತ್ ವೈದ್ಯ ಪ್ರಸ್ತಾಪಿಸಿದ್ದ. ಬಿಜಾಯ್ ಈ ಮುಂದೆ ಪ್ರತಿ ಆಗಸ್ಟಿನ ಕೊನೆಯ ವಾರ ಈ ಹಬ್ಬವನ್ನು ನಡೆಸಬಹುದೆಂದು ಮಂಡಿಸಿದ. ಒಂದು ನಮೂನೆ ಮಸೂದೆಯೆಂಬಂತೆ ಅದು ಅಂಗೀಕೃತವಾಯಿತು. ಪದಾಧಿಕಾರಿಗಳನ್ನು ಸದ್ಯಕ್ಕಂತೂ ನೇಮಿಸುವ, ಮುಂದಿನ ವರ್ಷದಿಂದ ಚುನಾಯಿಸುವ ಮಾತೂ ಆಯಿತು. ಚಿನ್ನಪ್ಪ ಮತ್ತು ಶರ್‍ಲೀ ಬಂದ ಮೇಲೆ ಅದನ್ನು ಚರ್ಚಿಸುವುದು ಸೂಕ್ತವೆಂದು ಪುರವಾರ್ ಹೇಳಿದ. ನಾಲಕ್ಕರ ಸುಮಾರಿಗೆ ಮೂವತ್ತೆರಡು ಸದಸ್ಯರ, ಇನ್ನಿಪ್ಪತ್ತು ಅವರಿವರಿರುವ ಕೂಟ ಚದುರುವ ಮೊದಲು – ಮತ್ತೆ ಏಳಕ್ಕೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೇರುವ ಘೋಷಣೆಯೊಂದಿಗೆ ಮುಗಿದಿತ್ತು. ಎಲ್ಲರೂ ರೆಸಾರ್ಟಿನಲ್ಲಿ ತಂತಮ್ಮ ಕೊಠಡಿಗಳಿಗೆ ಹೋದಾಗ ನಾನು ಹೊಳೆಯ ದಂಡೆಯುದ್ದ ಒಂದೆರಡು ಮೈಲು ಅಡ್ಡಾಡಿದ್ದೆ. ವಾಪಸು ಬರುವಾಗ ಜೇನ್ ಸಿಕ್ಕಿದ್ದಳು. ‘ಹಾಯ್! ಇಷ್ಟು ವರ್ಷ ಆದ ಮೇಲೆ ನಿನ್ನನ್ನು ನೋಡ್ತಿರೋದು ಒಂದು ಥರಾ ಖುಷಿ ಕೊಡುತ್ತೆ!!’ ಬೆರಗೆನಿಸಿತ್ತು. ಅವಳು ಅದೇ ಮೊದಲ ಸಲ ನನ್ನನ್ನು ಮಾತಾಡಿಸಿದ್ದು. ತರಗತಿಯಲ್ಲಿ ಯಾರೊಟ್ಟಿಗೂ ಹೆಚ್ಚಾಗಿ ಬೆರೆಯದಿದ್ದವಳು. ತಾನು, ತನ್ನ ಡ್ರಾಯಿಂಗ್ ಬೋರ್ಡ್ – ಅಷ್ಟೇ ಅವಳ ಪ್ರಪಂಚವಿದ್ದದ್ದು. ನೀರಿನ ನೇರ ಬಾಗಿ ಹಬ್ಬಿದ್ದ ಮರದ ಬೊಡ್ಡೆಯ ಮೇಲೆ ಕುಳಿತವಳನ್ನು ನಾನು ನೋಡಿ ನಕ್ಕೆ ಅಷ್ಟೆ. ‘ನೀನು ಇಲ್ಲಿಗೆ ಬರುತ್ತೀ ಅಂದುಕೊಂಡಿರಲಿಲ್ಲ.’ – ಅಂದಳು. ‘ಇಲ್ಲ. ಇವೆಲ್ಲ ನನಗೆ ಒಗ್ಗೋ ಅಂಥದ್ದಲ್ಲ. ಂs suಛಿh, I ಜoಟಿ’ಣ beಟoಟಿg ಣo ಣhis ಛಿಟಚಿss ಚಿs muಛಿh ಚಿs ಥಿou ಚಿಟಟ!. ಅನೂಪ್ ಫೋರ್ಸ್ ಮಾಡದೇ ಇದ್ದರೆ ಬರ್ತಾ ಇರ್ಲಿಲ್ಲ.’ – ಅಂದೆ. ‘ನೀನು ಏಯ್ಟೀ ಏಯ್ಟ್ ಬ್ಯಾಚ್‌ನವನು ಅಂತ ನಿಂಗಿದು ಒಗ್ಗೋಲ್ಲ. ನನ್ನದು ಇದೇ ಬ್ಯಾಚ್ ಆದರೂ ಇವರೆಲ್ಲ ನಂಗೆ ಸೇರೋದಿಲ್ಲ ನೋಡು!’ ಅವಳಿಗೆ ಈಗ ಬೀಯೆಮ್ಮೆಸ್‌ನಲ್ಲೇ ಕೆಲಸವಂತೆ. ಹಿಸ್ಟರಿ ಮತ್ತು ಕನ್‌ಸ್ಟ್ರಕ್ಷನ್ ಬೊಧಿಸುತ್ತಾಳಂತೆ. ಹಾಗಾಗಿ ಇಲ್ಲಿಗೆ ಬರುವುದು ಅನಿವಾರ್ಯವಾಯಿತಂತೆ. ಹಾಗಂತ ಈ ತರಗತಿಯ ಬಗ್ಗೆ ಯಾವ ಮುಲಾಜೂ ಇಲ್ಲವೆಂತಲೂ ಹೇಳಿದ್ದಳು. ಅವಳು ಗವಿಪುರಂ ದೇಗುಲ ಸಂಕೀರ್ಣದ ಜೀರ್ಣೋದ್ಧಾರವನ್ನು ಕುರಿತಾದ ನನ್ನ ಥೀಸಿಸನ್ನು ನೆನಪಿಸಿಕೊಂಡಳು. ಅದು ಇಂದಿನ ಎಷ್ಟೆಷ್ಟೋ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಅಂತಲೂ ಹೇಳಿದ್ದಳು. ಅಷ್ಟರಲ್ಲಿ ಬಂಕು ಬಂದಿದ್ದರಿಂದ ಮಾತು ಮೊಟಕುಗೊಂಡಿತ್ತು. ‘ಹಾಯ್ ಬಂಕೇಶ್ವರಿ ದೇವಿ!’ ಎಂದು ನಾನು ನಕ್ಕಿದ್ದೆ. ‘ನಾಗಮ್ಯಾನ್! ನಿಮಗೆ ಇನ್ನೂ ಅದು ನೆನಪಿದೆಯಾ?!’ – ಎಂದವಳು ಅರ್ಚನಾ ಬಂಕು ಎಂದು ನನ್ನಿಂದ ಅಭಿದೇಯಗೊಂಡದ್ದನ್ನು ನೆನಪಿಸಿಕೊಂಡಳು. ‘Iಣ is so ಜಿಡಿusಣಡಿಚಿಣiಟಿg. ಅನೂಪ್ ಸಹ ನನ್ನ ಹಾಗೇ ಕರೀತಾನೆ. ಇveಟಿ mಥಿ ಜಿive ಥಿeಚಿಡಿ oಟಜ ಟiಣಣಟe oಟಿe!!’ ಅನೂಪನಿಗೂ ಬಂಕೂಗೂ ಕಾಲೇಜು ಮುಗಿದ ಆರು ವರ್ಷಗಳ ಬಳಿಕ ಪ್ರೀತಿ ಆಯಿತಂತೆ. ನಂತರ ಮದುವೆ. ಈಗೆರಡು ಮಕ್ಕಳು….

ಕಿನಾರೆಯ ಕೇಕೆ ನದಿಯ ಗುಂಟ ಕೇಳುತ್ತಿತ್ತು. ಸಾಕಷ್ಟು ಮಂದಿ ಬೆಂಕಿಯ ಸುತ್ತ ನೆರೆದಿದ್ದರು. ಅಮಿತ್ ರಿಕಿ ಮಾರ್ಟಿನ್ನಿನ ಹೊಸ ನಂಬರನ್ನು ಹಾಡುತ್ತಿದ್ದ. ಎಲ್ಲರೂ ಚಪ್ಪಾಳೆ ತಟ್ಟುತ್ತ ತೂಗುತ್ತಿದ್ದರು. ಬಿಜಾಯ್ ಎಲ್ಲಿಂದಲೋ ಬಂದವನು ನೀರಿಗಿಳಿದು ನನ್ನನ್ನು ಕರೆದ. ‘ಓಚಿgಚಿmಚಿಟಿ! ಙou ಚಿಡಿe ತಿಚಿಟಿಣeಜ ಣheಡಿe.’ ನಾನು, ‘ಒe?! Whಚಿಣ ಜಿoಡಿ?!!’ – ಅಂದೆ. ನನ್ನನ್ನು ಬಲವಂತದಿಂದ ಭುಜ ಹಿಡಿದು ಗುಂಪಿನವರೆಗೆ ಕರೆದೊಯ್ದ. ಕೆಲವರು ನನಗೆ ಹಾಡಲಿಕ್ಕೆ ಹೇಳಿದರು. ಇಲ್ಲವೋ – ಬಂಕುವಿನ ಹಾಡಿಗೆ ಕುಣಿಯುವಂತೆ ಒತ್ತಾಯ. ಹಾಡು ಮತ್ತು ಕುಣಿತ ನನಗೆ ಒಗ್ಗದಂಥವು. ನಾನು ಒಪ್ಪಲಿಲ್ಲ. ಂಣ ಟeಚಿsಣ ಚಿ ಠಿoem! – ಅಂತ ಕೊನೆಗೆ ದುಂಬಾಲು. ನಾನು ನನ್ನದೇ ಖioಣ oಜಿ ಅoಟouಡಿs-ಅನ್ನು ನೆನಪಿದ್ದಷ್ಟು ಒಪ್ಪಿಸಿದೆ. ಆಚಿತಿಟಿiಟಿg ಜಿoಡಿ ಣhe eveಟಿಣuಚಿಟ sಣಡಿoಞe I ಚಿssimiಟಚಿಣe ಚಿ ಆeಛಿmbeಡಿ ಜusಞ, ಖioಣ oಜಿ ಅoಟouಡಿs, ಥಿou ಠಿಡಿoಜಿiಟe ಣhe ಛಿಚಿuse! – ನಾನು ಹೇಳಿ ಮುಗಿಸಿದಾಗ ಬಾಬ್ಬಿ, ವಾರುಣಿ, ಮೀನಾಕ್ಷಿ ಭಾವುಕರಾಗಿ ಮಾತನಾಡಿದರು. ‘ನಾವು ಹೀಗೆ . . . ನಮಗೆ – ಚಿತ್ರಣವೆಂದರೆ ಬಣ್ಣದ ದಂಗೆ. ಬಣ್ಣನೆಯೆಂದರೆ ಉತ್ಕಟ ಚಕಮಕಿ. ನಿಮ್ಮ ಕನಸುಗಳನ್ನು ನಮಗೆ ಕಾಣಲು ಹೇಳುತ್ತೀರಿ ನೀವು. ನಿಮ್ಮದೇ ಟಿighಣmಚಿಡಿe-ಗಳಲ್ಲೂ ಬೆರಗು ಹೆಕ್ಕಿ ನಿಮ್ಮ ಕನವರಿಕೆ ಗಾಢಯಿಸುತ್ತೇವೆ ನಾವು!’ ಪದ್ಯವನ್ನು ಕನ್ನಡದಲ್ಲೂ ಹೇಳಿದಾಗ ಮೀನಾಕ್ಷಿಯ ಕಣ್ಣುಗಳು ಉಕ್ಕಿದವು. ಅದೇ ಭಾವೋನ್ಮಾದದಲ್ಲಿ ನನ್ನನ್ನು ಅಪ್ಪಿಕೊಂಡಳು. ಬಿಯರಿನ ಹರಿವಿನಲ್ಲಿ ಆಗಸ್ಟಿನ ಅರ್ಕಾವತಿಗಿಂತ ಗಮ್ಮತ್ತಿತ್ತು. ಹತ್ತರವರೆಗೆ ಎಲ್ಲರೂ ತೊನೆಯುತ್ತಿದ್ದರು. ಕೆಲವರು ಮತ್ತೊಂದು ಗುಂಪಿನಲ್ಲಿ ತಮ್ಮ ಮಕ್ಕಳೊಟ್ಟಿಗೆ ಫ್ರಿಸ್ಬೀಯಲ್ಲಿ ತೊಡಗಿದ್ದರು. ಅಭಿಯ ಹೆಂಡತಿ ವರುಣ್, ‘ನಾನು ಅಭಿಗೆ ಒಂದು ಕಂಡೀಷನ್ ಹಾಕಿಯೇ ಇಲ್ಲಿ ಬಂದದ್ದು. ಮತ್ತೆ ನೀವೆಲ್ಲ ಬೀಮ್, ಲಿಂಟಲ್, ಕಾಲಮ್, ಫುಟಿಂಗ್ ಅಂತ ಮಾತಿಗಿಳಿಯೋ ಹಾಗಿದ್ದರೆ ನಾನು ಬರೋಲ್ಲ ಅಂತ. ಸದ್ಯ! Iಣ’s ಟಿoಣ ಚಿಟಿಥಿ oಜಿ ಣhose. I ಚಿm eಟಿರಿoಥಿiಟಿg.’ – ಎಂದಳು. ಈವರೆಗೆ ಮಾತು ಎಲ್ಲೂ ಗಂಭೀರ ವಿಷಯಗಳನ್ನು ಕುರಿತು ನಡೆದೇ ಇಲ್ಲ ಅಂದುಕೊಂಡೆ. ಪುರುವಾರ್ ಗಡದ್ದಾಗಿ ಬಿಯರಿಸುತ್ತಿದ್ದವನು ಇದ್ದಕ್ಕಿದ್ದಂತೆ ಮಂಜುಳ, ಮಮತಾ ಮ್ಯಾಮ್‌ಗಳನ್ನು ಕುರಿತು ಮಾತನಾಡೋಣ ಅಂತ ಸಲಹೆ ಕೊಟ್ಟ. ಕೆಲವು ಕೊರಳುಗಳು ವಾರುಣೀ. . .!! ಅಂತ ಒಮ್ಮೆಲೆ ಒರಲಿದವು. ನಮಗೆ ಮೊದಲ ಮೂರು ವರ್ಷ ಬೋಧಕಿಯರಾಗಿದ್ದ ಮಂಜುಳ, ಮಮತಾ, ಅನಿತಾ ಧರಮ್‌ಪಾಲರನ್ನು ವಾರುಣಿ ಅಣಕಿಸಿ ಅಣಕಿಸಿ ಖುಷಿ ಕೊಟ್ಟ. ಕೇಕೆಯ ಬೆರಳು ಕತ್ತಲ ಕಂಕುಳಿನಲ್ಲಿ ಕಚಗುಳಿಯಿಡುತ್ತಿತ್ತು. ಮಾತು ಅನಿಲ್ ದುಬೆಯವರನ್ನು ಕುರಿತು ಹಬ್ಬಿದಾಗ ನಗು ನಾಚಲಿಲ್ಲ. ವಾರುಣಿ ದುಬೆಯನ್ನು ಅಣಕಿಸತೊಡಗಿದ. ಒಂದು ಶನಿವಾರ ಎಂಟೂವರೆಯ ವೇಳೆಗೆ ನಮ್ಮ ಮೊದಲ ತರಗತಿಗೆಂದು ದುಬೆ ಬಂದಿದ್ದರಂತೆ. ಲಿಫ್ಟಿನಿಂದ ಕಾರಿಡಾರಿಗೆ ಸರಿದಾಗ ವಸೀಮ್ ಮತ್ತು ನಂದಾ ಎಂಬ ಇಬ್ಬರು ಉಪನ್ಯಾಸಕಿಯರು ಅವರಿಗೆ ಎದುರಾದರಂತೆ. ಇಬ್ಬರೂ ಗರ್ಭಿಣಿಯಾಗಿದ್ದರಿಂದ ಹೊಟ್ಟೆ ಸಾಕಷ್ಟು ತೋರುತ್ತಿತ್ತಂತೆ. ದುಬೆ ನಮ್ಮ ತರಗತಿಯತ್ತ ಬರುವಾಗ ಅನಿತಾ ಧರಮ್‌ಪಾಲ್ ಕಂಡಿದ್ದರಂತೆ. ಆಕೆಯೋ ಭಾರೀ ಗಾತ್ರದ ಹೆಣ್ಣು. ಹೊಕ್ಕುಳಿನ ಸಾಕಷ್ಟು ಕೆಳಗೆ ನೆರಿಗೆ ಕಟ್ಟುತ್ತಿದ್ದ ಆಕೆ ನಮ್ಮೆದುರು ನಿಂತು ಬೋಧಿಸುವಾಗಲೆಲ್ಲ ಮುಂದಿನ ಬೆಂಚಿನ ವಾರುಣಿ, ಅಮಿತ್ ಕಸಿವಿಸಿಯಿಂದ ದಿನಾಲೂ ಮುಸಿಮುಸಿ ನಡೆಸುತ್ತಿದ್ದುದುಂಟು. ದುಬೆ ಒಳಕ್ಕೆ ಬಂದವರೇ – ‘ಈoಡಿ ಚಿ ತಿhiಟe I ಣhoughಣ I eಟಿಣeಡಿeಜ ಚಿ mಚಿಣeಡಿಟಿiಣಥಿ ತಿಚಿಡಿಜ – ಥಿou ಞಟಿoತಿ! ಂಟಿiಣಚಿ ಆhಚಿಡಿಚಿmಠಿಚಿಟ eಟಿಜoಡಿseಜ iಣ!!’ – ಎಂದಾಗ ನಗು ತರಗತಿಯ ಮೇರೆ ಮೀರಿತ್ತು. ವಾರುಣಿ ಕೀರಲು ಧ್ವನಿಯ ದುಬೆಯನ್ನು ಅನುಕರಿಸಿದ್ದು ಅವರು ಹೇಳಿದ್ದಕ್ಕಿಂತ ತಮಾಷೆಯೆನಿಸಿ ಎಲ್ಲರೂ ಹೋ….! ಎಂದು ಘೀಳಿಟ್ಟರು. ಗುಂಪಿನಲ್ಲಿದ್ದರೂ ಮೌನವಾಗಿದ್ದ ನನ್ನನ್ನುದ್ದೇಶಿಸಿ ಮೋನಾ, ‘ಓಚಿgಚಿmಚಿಟಿ! ಓoತಿ iಣ’s ಥಿouಡಿ ಣuಡಿಟಿ!!’ ಎಂದು ದುಂಬಾಲು ಬಿದ್ದಳು. ನಾನು ಮಾತಿಗೆ ತೊಡಗಿದೆ. ‘ನಾನು ನನ್ನ ಹಳೆಯ ಕ್ಲಾಸಿನ ಒಂದು ಜೋಕು ಹೇಳ್ತೀನಿ. ನೀನು ಸಿಟ್ಟಾಗಬಾರದು.’ ಅಂತ ಮೋನಾಳಿಗೆ ಹೇಳಿದೆ. ಅವಳು ಸರಿಯೆಂದಳು. ‘ಆಚಿಥಿ bಥಿ ಜಚಿಥಿ ಒoಟಿಚಿ’s ಣoಠಿs ಚಿಡಿe ಛಿomiಟಿg ಜoತಿಟಿ ಚಿಟಿಜ boಣಣoms ಚಿಡಿe goiಟಿg uಠಿ ಚಿಟಿಜ ತಿe ಚಿಡಿe ತಿಚಿiಣiಟಿg ಜಿoಡಿ ಚಿ ಜಚಿಥಿ ತಿheಟಿ ಣhose ಣತಿo meeಣ! ಇದು ನಿಮ್ಮ ಸೀನಿಯರ್ ಲಕ್ಷ್ಮಿ – ಲಕ್ಷ್ಮೀನಾರಾಯಣ್ ನಿನ್ನ ಬಗ್ಗೆ ಹೇಳ್ತಾ ಇದ್ದಿದ್ದು!!’ ಎಂದಾಗ ಮೋನಾ, ‘ಊe is ಚಿ bಚಿsಣಚಿಡಿಜ!!’ ಎಂದು ಕನಲಿದಳು. ಎಲ್ಲರೂ ಅವಳ ವೆಚ್ಚದಲ್ಲಿ ಮತ್ತೆ ನಕ್ಕರು. ಹನ್ನೊಂದಾದರೂ ಹಲವರಿಗೆ ಇರುಳು ಮುಪ್ಪೆನಿಸಿರಲಿಲ್ಲ. ನನಗೆ ಈ ಸಂಜೆ ನಿನ್ನೆಯಷ್ಟು ಬೇಸರ ತರಲಿಲ್ಲ. ಅಲ್ಲೇ ಊಟದ ಶಾಸ್ತ್ರ ಮುಗಿಸಿ ಹನ್ನೆರಡರ ಸುಮಾರಿಗೆ ಕೆಲವಷ್ಟು ಮಂದಿ ಕಳಚಿಕೊಂಡರು. ನಾನೂ ಹೊರಟು ನಿಂತಾಗ ಅನೂಪ ತಡೆದ. ‘ಇರು ಮಾರಾಯ! ನಿನ್ನೊಟ್ಟಿಗೆ ಒಂದಷ್ಟು ಮಾತಾಡೋದಿದೆ.’

ಹೊತ್ತಲ್ಲದ ಹೊತ್ತಿನಲ್ಲಿ ಅಮಿತ್, ಬಿಜಾಯ್, ಪುರುವಾರ್ ಮತ್ತು ವಿನ್ನೂರ ಜೊತೆ ದಡದ ನೇರ ಸುಮಾರು ಎರಡು ಕಿಲೋಮೀಟರುಗಳು ನಡೆದೆ. ‘ನಾಗಮ್ಯಾನ್! ನಾಳೆ ಶರ್ಲೀ ಮತ್ತೆ ಚಿನ್ನಪ್ಪ ಬರ್‍ತಾರೆ. ನಾವು ಈ ಕೂಟಕ್ಕೊಂದು ವರ್ಷಾವರಿ ರೂಪ ಕೊಡಬೇಕು. ಙou shಚಿಟಟ be ಚಿ ಞeಥಿ ಜಿiguಡಿe iಟಿ ಣhis.’ ಅನೂಪ ಹೇಳಿದಾಗ ನಾನು ಹೌಹಾರಿದೆ. ನಾನು ನಾಲ್ಕನೇ ವರ್ಷದಲ್ಲಿ ನಪಾಸಾದ ದೆಸೆಯಿಂದ ಎಂಭತ್ತೊಂಭತ್ತರ ಈ ತರಗತಿಯಲ್ಲಿ ಸೇರ್ಪಡೆಯಾದದ್ದು. ಹಾಗಂತ ನಾನು ನನ್ನ ಹಳೆಯ ತರಗತಿಯೊಟ್ಟಿಗೆ ಸಂಪರ್ಕವಿತ್ತೆಂತೇನಲ್ಲ. ಹಾಗಾಗಿ ಅಳುಕು. ‘ಙou ಚಿಡಿe ಚಿಟಿ ಚಿsseಣ ಜಿoಡಿ us. ನೀನು ಒಬ್ಬನೇ ಮಾಡಿರುವ ಕೆಲಸವನ್ನು ನೋಡಿದರೆ ಯಾರಾದರೂ ಮೆಚ್ಚಬಹುದು. ಇದು ನಿನಗಲ್ಲ, ನಿನ್ನ ಕೆಲಸಕ್ಕೆ ನಾವು ಕೊಡುತ್ತಿರೋ ಗೌರವ. ನೀನು ಈ ಯೂನಿಯನ್ನಿನ ಪ್ರೆಸಿಡೆನ್ಸೀ ವಹಿಸಿಕೊಳ್ಳಬೇಕು.’ ಅವರಲ್ಲಿ ಒಬ್ಬರೂ ನನಗೆ ಬೇರೆ ಮಾತಾಡಲು ಬಿಡಲಿಲ್ಲ. ಹಾಗಂತ ನಾನು ಸಮ್ಮತಿಸಲೂ ಇಲ್ಲ. ನಾನು ಯೋಚಿಸಿ ಹೇಳುವುದಾಗಿ ಹೇಳಿದೆ. ರೂಮು ಹೊಕ್ಕಾಗ ಮೂರೂವರೆ ಕಳೆದಿತ್ತು. ಈ ನಿರ್ಧಾರಕ್ಕೂ ಶರ್ಲೀ ಮತ್ತು ಚಿನ್ನಪ್ಪರ ಬರುವಿಕೆಗೂ ಸಂಬಂಧ ಹುಡುಕುತ್ತ ಹೋದಂತೆಲ್ಲ ಏನೋ ತೊಡರಿದಂತಾಗಿ ಪದೇ ಪದೇ ಕೈ ಚೆಲ್ಲಿದ್ದೆ. ಐದೂವರೆಯ ಸುಮಾರಿಗೆ ಚುಮುಚುಮು ಬೆಳಗಿನಲ್ಲೂ ನಿದ್ದೆಯ ಮಂಪರು ತುಂಬಿತ್ತು.

ಏಳುವ ಹೊತ್ತಿಗೆ ಹೊತ್ತೇರಿಬಿಟ್ಟಿತ್ತು. ರೂಮು ನಿಸರ್ಗದ ಹಿತ್ತಲಿನಲ್ಲಿ ತೆರೆದುಕೊಳ್ಳುವ ಕಡೆಯಿಂದ ಗಮ್ಮತ್ತಿನ ಗದ್ದಲ ಕೇಳಿ ಬರುತ್ತಿತ್ತು. ‘ಏನು ಕಂಡೀ? ಏನು ಕಂಡೀ? ಕಂಡೆ ಕಿಂಡಿ ಕುಂಡೀ!!’ ಅದು ಚಿನ್ನಪ್ಪ ಬಂದಿರುವುದರ ಘೋಷಣೆಯಂತಿತ್ತು. ಮಾತೇ ಮಾತಿನ, ಲವಲವಿಸುವ ಹುಮ್ಮಸ್ಸಿನ ಚಿನ್ನಪ್ಪ ಬೀಯೆಮ್ಮೆಸ್ಸ್‌ನಲ್ಲಿ ನಡೆದಾಡಿದಲ್ಲೆಲ್ಲ ಗುಂಪಿನಲ್ಲಿ ಈ ಮಾತು ಕೇಳಿ ಬರುತ್ತಿತ್ತು. ಒಮ್ಮೆ ಪರೀಕ್ಷಾ ಕೊಠಡಿಯಲ್ಲಿ ಇದನ್ನು ಕೂಗಿದನೆಂದು ಅವನನ್ನು ಹೊರಹಾಕಲಾಗಿತ್ತು. ಆ ಬಳಿಕ ಅವನನ್ನು ಕಾಲೇಜಿನಲ್ಲಿ ನೋಡಿದ್ದೇ ಕಡಿಮೆ. ಓದು ಮುಗಿಸಿದನೋ ಇಲ್ಲವೋ ಗೊತ್ತಿಲ್ಲ. ಮೂರು ವರ್ಷದ ಬಳಿಕವಷ್ಟೇ ನಾನು ಅವನನ್ನು ಎಮ್ಟೀವೀಯಲ್ಲಿ ನೋಡಿದ್ದು. ಇಂದು ಅವನು ಪಡ್ಡೆ ಪಡೆಗಳಲ್ಲಿ ಬಲು ದೊಡ್ಡ ಹೆಸರು. ನಿಖಿಲ್ ಚಿನ್ನಪ್ಪ! – ಣhe ಒಖಿಗಿ veeರಿಚಿಥಿ!!…..!! ಕಿಟಕಿಯ ಪರದೆ ಸರಿಸಿದೆ. ಅರಳೀಯಂತಹ ಮರದ ಕೆಳಗೆ ಕಟ್ಟೆಯ ಮೇಲೆ ಚಿನ್ನಪ್ಪ ಕುಳಿತಿದ್ದ. ಬದಿಯ ಬೆಂಚುಗಳ ಮೇಲೆ ಉಳಿದವರು. ಎಂಥದೋ ವಿಚಿತ್ರ ಹೇರ್‌ಸ್ಟೈಲ್‌ನಲ್ಲಿ ಅವನಿದ್ದ. ಎಲ್ಲಿಂದಲೋ ಬಂದ ಅವಳು ‘ವ್ಹಾವ್ಹಾವ್! ಖಿhe ಃuಜhಜhಚಿ ಚಿಟಿಜ ಣhe ಃoಜhi ಣಡಿee!!’ ಎಂದು ಉದ್ಗರಿಸಿದಳು. ಚಿನ್ನಪ್ಪ ಎದ್ದವನು ಅವಳನ್ನು ತಬ್ಬಿ, ಅನಾಮತ್ತು ಎತ್ತಿಕೊಂಡು ಗಿರಿಗಿರಿ ತಿರುವಿ ಕೆಳಕ್ಕೊಗೆದ. ಮುಂದಿದ್ದ ಮಂದಿ ಶರ್ಲೀ! ಶರ್ಲೀ!! – ಎಂದು ಕೂಗು ಹಾಕಿದರು.

ರೂಮಿಗೇ ಕಾಫಿ ತರೆಸಿ ಕುಡಿದು ಹೊಳೆಯ ದಂಡೆಗೆ ಬಂದೆ. ಬೆಳಿಗ್ಗೆ ಮಳೆಯಾದಂತಿತ್ತು. ನೀರಿಗೆ ತೂರಿಕೊಂಡಿದ್ದ ನೆಲದ ಕೊಲ್ಲಿಯ ತುಂಬ ನಿನ್ನೆಯ ಅವಶೇಷವಿತ್ತು. ಬೆಡಗಿನ ರಾತ್ರಿಯ ಹೊಲಸಿನ ಬೆನ್ನು ಅಲ್ಲಿ ತೆರೆದುಕೊಂಡಿತ್ತು. ಚೆಲ್ಲಾಪಿಲ್ಲಿ ಬಾಟಲಿಗಳು, ಸಿಗರೇಟಿನ ತುಣುಕುಗಳು, ಪ್ಲಾಸ್ಟಿಕ್ಕಿನ ತಟ್ಟೆ ಲೋಟಗಳು, ಬೂದಿ, ಬೂದಿಯಾಗದ ಇದ್ದಿಲು….. ನಾಗರಿಕತೆಯ ಭ್ರಷ್ಟ ರಿವಾಜುಗಳನ್ನು ತೋರುವಂತಿದ್ದವು. ಅಯ್ಯೋ! ಮನುಷ್ಯ ಜನ್ಮವೇ?! ನಾಲ್ಕು ಮಂದಿ ಕೂಡಿದಲ್ಲೆಲ್ಲ ಹೊಲಸೇ? – ಅಂದುಕೊಂಡೆ. ಅಸಹ್ಯವೆನಿಸಿತು. ನಾನು ಕೊಲ್ಲಿಯನ್ನು ದಾಟಿ ನೀರಿಗಿಳಿಯುವಾಗ ಹಿಂದಿನಿಂದ ಜೇನ್ ಕೂಗಿದಳು. ಅವಳ ಚರ್ಯೆಯಲ್ಲಂತೂ ಅವಳು ನನ್ನನ್ನು ಹುಡುಕಿಕೊಂಡು ಬಂದ ಕುರುಹಿರಲಿಲ್ಲ. ‘ಇದನ್ನೆಲ್ಲ ನೋಡಿದರೆ ಎಷ್ಟು ಬೇಜಾರಾಗುತ್ತೆ ಅಲ್ಲವಾ? ನಾಗರಿಕತೆಯ ಹೆಸರಿನಲ್ಲಿ ನಾವು ಪ್ರಕೃತಿಯಿಂದ ಎಷ್ಟು ದೂರ ಬಂದು ಬಿಟ್ಟಿದ್ದೇವೆ ನೋಡು!!’ ನಾನು ಕೂಡಲೆ ನನ್ನ ಅನಿಸಿಕೆಗಳನ್ನು ಮಾತಿನಲ್ಲಿ ಕಟ್ಟಲಿಲ್ಲ. ‘ಯಾಕೆ ಏನೂ ಮಾತಾಡ್ತಾ ಇಲ್ಲ?’

‘ನೀನು ಹೇಳಿದ್ದು ಸರಿ. ಈ ಭೂಮಿಯ ಮೇಲಿನ ಜೀವಸಂಕುಲದಲ್ಲಿ ನಾವು ಈ ನೆಲಕ್ಕೆ ಮಾಡುತ್ತಿರುವಷ್ಟು ಅತಿಕ್ರಮವನ್ನು ಇನ್ಯಾರೂ ಮಾಡೋಲ್ವೇನೋ! ಇನ್ನುಳಿದ ಎಲ್ಲ ಪ್ರಾಣಿಗಳೂ ಬದುಕುತ್ತವೆ. ನಮ್ಮ ಹಾಗೇ ಮಕ್ಕಳು ಮೊಮ್ಮಕ್ಕಳುಗಳ ಸಂತತವನ್ನು ಕಟ್ಟುತ್ತವೆ. ಆದರೆ ನಮ್ಮ ಹಾಗೆ ಅವು ಈ ನೆಲದ ಭೌತ ಅಭೌತ ಸ್ವರೂಪವನ್ನು ಬದಲಾಯಿಸೋದಿಲ್ಲ. ಇಲ್ಲಿ ಬದುಕುವ ನಾವು ಒಬ್ಬೊಬ್ಬರೂ ನಮ್ಮ ಅಸ್ತಿತ್ವಕ್ಕೆ ಒಂದು ಮೂರ್ತ ರೂಪವನ್ನು ಕೊಡ್ತೀವಿ. ನಮ್ಮ ಪ್ರತಿಯೊಂದು ಚಟುವಟಿಕೆಯೂ ಮೂರ್ತಗೊಳ್ಳುತ್ತ ಹೋಗುತ್ತೆ. ಇveಡಿಥಿ ಚಿಛಿಣ oಜಿ ouಡಿs mಚಿಟಿiಜಿesಣs…. Iಣ ಜeಟibeಡಿಚಿಣes iಟಿಣo ಚಿ ಠಿhಥಿsiಛಿಚಿಟ ಜಿoಡಿm!! ಕೂರುವುದು ಅಂದರೆ ಕುರ್ಚಿ. ಮಲಗುವುದು ಅಂದರೆ ಮಂಚ, ಹಾಸಿಗೆ. ತಿನ್ನುವುದು ಅಂದರೆ ತಟ್ಟೆ. ನಡೆಯುವುದು ಅಂದರೆ ಚಪ್ಪಲಿ, ಶೂಸು. ಹೀಗೆ! ಇರುವುದು ಅನ್ನಲಿಕ್ಕೆ ಒಂದು ಮನೆ. ಇದನ್ನು ಉಳಿದ ಪ್ರಾಣಿಗಳೂ ಮಾಡುತ್ತವೆ. ಆದರೆ ಅವು ಮಾಡೋದರಲ್ಲಿ ನಮ್ಮಷ್ಟು ಸದ್ದು ಗದ್ದಲ ಇರೋದೇ ಇಲ್ಲ. ಅವುಗಳು ಇದ್ದರೂ ಇರೋದೇ ಗೊತ್ತಾಗೋಲ್ಲ. ಆದರೆ ನಾವು ಹಾಗಲ್ಲ. ಎಲ್ಲವೂ ಶಾಶ್ವತ ಅಂದುಕೊಂಡು ಬದುಕ್ತಾ ಇರ್ತೀವಿ. ತಲೆಯ ಮೇಲಿನ ಸೂರು ಚಿರಂತನ ಅಂದುಕೊಂಡು ಏನೇನೆಲ್ಲ ಮಾಡ್ತೀವಿ. We ಠಿಡಿoಜಿess eಣeಡಿಟಿiಣಥಿ! ಎಲ್ಲಕ್ಕಿಂತ ನಮ್ಮ ಪ್ರೊಫೆಷನ್ ನೋಡು! ನಾವು ಕಟ್ಟುತ್ತೇವೆ. ನಮ್ಮ ಹತ್ತಿರ ಬರೋ ಪ್ರತಿ ಕ್ಲಯಂಟೂ ಗೋಡೆ ಭದ್ರವಿದೆಯಾ? ಸೂರು ಗಟ್ಟಿಯಾ? – ಅಂದುಕೊಂಡೇ ಬರ್ತಾನೆ. ನಾವು ಕಟ್ಟುವ ಕ್ರಿಯೆಯಲ್ಲಿ ಈ ನೆಲವನ್ನೇ ಬಲಿಕೊಡ್ತೀವಿ…..!!’ ನಾನು ಅಗತ್ಯಕ್ಕಿಂತ ಹೆಚ್ಚು ಭಾವುಕನಾದೆನೆ ಅನ್ನಿಸಿತು. ಜೇನ್ ಕಣ್ಣರಳಿಸಿ ನಿಂತುಬಿಟ್ಟಿದ್ದಳು. ‘ಆದರೆ ವೃತ್ತಿ ಅನ್ನೋದು ನಮಗೆ ಅನಿವಾರ್ಯ ಅಲ್ಲವೆ? We shouಟಜಟಿ’ಣ be ಚಿಠಿoಟegeಣiಛಿ ಣo buiಟಜ. ನಾವು ಮುಲಾಜಿಗೋಸ್ಕರ ಕಟ್ಟುತ್ತಾ ಇಲ್ಲ. We ಜoಟಿ’ಣ ಟeಚಿve ಣhis ತಿoಡಿಟಜ iಟಿ ಚಿಟಿಥಿ beಣಣeಡಿ shಚಿಠಿe ಣhಚಿಟಿ ತಿe iಟಿheಡಿiಣ!! ಹಾಗಾಗಿ ಆದಷ್ಟು ಕಮ್ಮಿ ಹಾನಿ ಮಾಡೋಣ. ನಾವು ಕಟ್ಟುವ ಯಾವುದರಲ್ಲೂ ನಮ್ಮ ಜೀವಿತವನ್ನು ಮೀರಿದ ಬಾಳಿಕೆಯನ್ನು ಯೋಜಿಸುವುದು ಬೇಡ… ಅಷ್ಟೆ!! ’ ಜೇನ್ ಹೆಪ್ಪಿ ನಿಂತಿದ್ದಳು. ‘ಹೇ!! ವಾಪಸು ಹೋಗೋಣ. ನಾನು ಹೇಳಿದ್ದು ನನ್ನ ಭಾವನೆಗಳನ್ನ ಅಷ್ಟೆ. ನಾನು ಇವನ್ನ ಯಾರ ಮೇಲೂ ಹೇರೋದಿಲ್ಲ.’

ರೂಮಿಗೆ ಬಂದಾಗ ನನಗೆಂದು ನಾಲ್ಕು ಮೆಸೇಜುಗಳಿದ್ದವು. ಮೂರು ಅನೂಪನದು. ಮೂರರ ಸುಮಾರಿಗೆ ಕ್ಲಬ್ ಹೌಸ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭೆಟ್ಟಿಯಾಗುವುದು ಅಂತ. ಮತ್ತೊಂದು ಅಪರ್ಣೆಯ ಫೋನಿತ್ತು ಎಂದು. ಅವಳೊಟ್ಟಿಗೆ ಮಾತನಾಡಿ ನಾಲ್ಕು ದಿನಗಳಾಗಿವೆ. ನಾನು ಫೋನು ಮಾಡಿದಾಗಲೆಲ್ಲ ಅವಳು ಬ್ಯುಸಿ. ಅವಳಿಗೆ ಮಾಡಲು ಮೊಬೈಲ್ ಇಲ್ಲಿ ಸಿಗುತ್ತಿಲ್ಲ. ಸಂಜೆ ಐದಕ್ಕೆ ಮತ್ತೆ ಮಾಡುತ್ತೇನೆ ಅಂತ ರಿಸೆಪ್ಷನ್ನಿನಲ್ಲಿ ಹೇಳಿದ್ದಾಳೆ ಮುದ್ದಿನ ಮಡದಿ. ಏನೇ ಆದರೂ ಫ್ರಂಟ್ ಆಫೀಸಿನಲ್ಲಿ ಐದಕ್ಕೆ ಇರಲೇಬೇಕೆಂದು ಮೊಬೈಲಿನಲ್ಲಿ ನಾಲ್ಕೂ ಮುಕ್ಕಾಲಿಗೆ ಅಲಾರ್‍ಮ್ ಸೆಟ್ ಮಾಡಿಕೊಂಡೆ.

ನಾನು ಸ್ನಾನ ಮುಗಿಸಿ ಸಿದ್ಧನಾದಾಗ ಎರಡೂ ಇಪ್ಪತ್ತಾಗಿತ್ತು. ಊಟವೆಂದು ಸ್ಯಾಂಡ್‌ವಿಚ್, ಹಣ್ಣು ತರಿಸಿಕೊಂಡು ತಿಂದೆ. ಬ್ಯಾಂಕ್ವೆಟ್ ಹಾಲಿನ ಪೋರ್ಟಿಕೋದಲ್ಲಿ ಅನೂಪ್ ಮತ್ತು ಬಿಜಾಯ್ ನನಗೆ ಕಾಯುತ್ತಿದ್ದರು. ‘ಎಲ್ಲಿ ಹೋಗಿದ್ದೆ ಮಾರಾಯ? ಮೂರು ಸಲ ನಿನ್ನನ್ನು ಹುಡುಕಿಕೊಂಡು ಬಂದಿದ್ದೆ.’ ನಾನು ಉತ್ತರಿಸುವ ಮೊದಲೇ ಬಿಜಾಯ್ ಅವಸರಿಸಿದ. ‘ಬೇಗ. ಅವರೆಲ್ಲ ಕಾಯ್ತಾ ಇದ್ದಾರೆ.’ ಒಳಗೆ ಕಣ್ಣೆಣಿಕೆಗೆ ಒದಗುವ ಹಾಗೆ ಒಟ್ಟು ಹತ್ತು ಮಂದಿ ಇದ್ದರು. ಶರ್ಲೀ ಮತ್ತು ಚಿನ್ನಪ್ಪ ಬಲ ಮೂಲೆಯ ಕಿಟಕಿಯ ಬಳಿ ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದರು. ಅವಳು ಏನೋ ಹೇಳಿ ನಕ್ಕಾಗ ಚಿನ್ನಪ್ಪ ಅವಳ ಕೆನ್ನೆ ತಡವಿ ತಬ್ಬಿಕೊಂಡ. ಬಿಜಾಯ್, ಅನೂಪ್, ಪುರುವಾರ್, ವಾರುಣಿ, ಅಮಿತ್ ಯಾವತ್ತಿದ್ದರೂ ಈ ಎಂಭತ್ತೊಂಭತ್ತರ ತರಗತಿಯ ವಾರಸುಗಳಂತೆ. ಆಗಲೂ ಅವರಿರದೆಯೆ ಏನೂ ನಡೆಯುತ್ತಿರಲಿಲ್ಲ. ಈಗಲೂ ಹಾಗೆಯೇ. ಅವರಲ್ಲದೆ ಅಲ್ಲಿ ವಿವೇಕ್, ಸೌರಭ್, ವಿನ್ನೂ, ಶಶಾಂಕ್, ಅಖ್ತರ್….. ಮುಖ್ಯ ಸಂಗತಿಯೆಂದರೆ ತರಗತಿಯ ಯಾವ ಹೆಣ್ಣೂ ಇಲ್ಲದಿದ್ದುದು. ಶರ್ಲೀಯನ್ನು ಇವರು ಯಾರೂ ಹೆಣ್ಣು ಅಂತ ಪರಿಗಣಿಸುವುದೇ ಇಲ್ಲ! ಆ ಮಾತು ಬೇರೆ. ಅವಳ ನಡೆವಳಿಗಳೇ ಹಾಗೆ. ಅವಳನ್ನು ಹಿಂಜರಿಸಬಲ್ಲ ಸಂಗತಿಯೇ ಇಲ್ಲ ಈ ಸೃಷ್ಟಿಯಲ್ಲಿ ಅನ್ನುವುದು ವಾಡಿಕೆ. ‘ಏನಾಗುತ್ತಯ್ಯ? ನೋಡೇ ತೀರುತ್ತೇನೆ.’ – ಅನ್ನುವ ಸೆಡ್ಡು ಅವಳದ್ದು. ಎಲ್ಲದರಲ್ಲೂ. ಆ ದಿನಗಳಲ್ಲಿ ಓದಂತೂ ಅಷ್ಟಕ್ಕಷ್ಟೆ. ಹತ್ತು ಗಂಟೆಯಾಯಿತೆಂದರೆ ಕೆಲವು ಗಂಡುಗಳ ಜತೆ ಕ್ಯಾಂಟೀನ್ ಸೇರಿದಳೆಂದರೆ ಮತ್ತೆ ಕ್ಲ್ಯಾಸಿನಲ್ಲಿ ಸಿಗುತ್ತಿರಲಿಲ್ಲ. ಒಮ್ಮೆ, ಸೆಕೆಂಡ್ ಯಿಯರ್‌ನಲ್ಲಿರಬೇಕು – ಸತತವಾಗಿ ದುಬೆಯವರ ಕನ್‌ಸ್ಟ್ರಕ್ಷನ್ ತರಗತಿಗಳಿಗೆ ಚಕ್ಕರ್ ಹೊಡೆದು ಇಂಟರ್ನಲ್ಸ್‌ನಲ್ಲಿ ಸೊನ್ನೆ ಹೊಂದಿದ್ದರೂ ಮಾರ್ಕ್ಸ್ ತನ್ನ ಹಕ್ಕು ಎಂಬಂತೆ ಜಗಳವಾಡಿದ್ದಳು. ಫೈನಲಿಯರ್‌ನಲ್ಲಿ ಶ್ರೀರಂಗಪಟ್ಟಣಕ್ಕೆ ಪ್ರವಾಸ ಹೋದಾಗ ಯಾರೊಟ್ಟಿಗೋ ಕಟ್ಟಿದ ಬಾಜಿಯ ಸಲುವಿನಿಂದ ರಾತ್ರಿ ಹನ್ನೊಂದರ ಹೊತ್ತಿನಲ್ಲಿ ಒಬ್ಬಳೇ ಕಾವೇರಿಯಲ್ಲಿ ಧುಮುಕಿ ಎದ್ದು ಬಂದಿದ್ದಳು! ಒಟ್ಟಾರೆ ಬಹದ್ದೂರ್ ಹೆಣ್ಣು!!

ಬಿಜಾಯ್ ಕುಳಿತಲ್ಲಿಂದಲೇ ಅವರಿಬ್ಬರಿಗೆ ಕೂಗು ಹಾಕಿದ. ಶರ್ಲೀ ನನ್ನನ್ನು ಕಂಡವಳೇ ‘ನಾಗಮ್ಯಾನ್!!’ ಎಂದು ಚೀರುತ್ತ ಓಡಿ ಬಂದು ಟಾಂಗ್ ಕೊಟ್ಟಳು. ‘ಊoತಿ is ಥಿou ಓಚಿgs??’- ಎಂದಳು. ಚಿನ್ನಪ್ಪ ‘ಹಾಯ್!’ ಎಂದು ಕೈ ಕುಲುಕಿದ. ಸಭೆ ಸುರುಗೊಂಡಿತು. ಮೊನ್ನೆ ಮಾಡಿದ ಪ್ರಸ್ತಾಪವನ್ನೇ ಮತ್ತೆ ಮಾಡಲಾಯಿತು. ಪ್ರತಿವರ್ಷವೂ ಇಂತಹ ಮಿಲನ ಸಮಾವೇಶವನ್ನು ಆಯೋಜಿಸುವುದು, ಅದಕ್ಕೊಂದು ಸಂಘಟನೆಯ ರೂಪು ಕೊಡುವುದು, ಅದಕ್ಕಾಗಿ ಸಮಿತಿಯನ್ನು ರಚಿಸುವುದು, ಸಂವಿಧಾನವನ್ನು ಬರೆಯುವುದು….. ಇತ್ಯಾದಿ. ನನಗೆ ಇದೇಕೋ ರಾಜಕೀಯದ ಸ್ವರೂಪ ಪಡೆಯುತ್ತಿದೆ ಅನ್ನಿಸಿತು. ಶರ್ಲೀ ಮತ್ತು ಚಿನ್ನಪ್ಪ ಗಹನವಾಗಿ ಚರ್ಚೆಯಲ್ಲಿ ತೊಡಗಿಸಿಕೊಂಡರು. ಸಾಕಷ್ಟು ಸಲಹೆಗಳನ್ನು ಕೊಟ್ಟರು. ಚಿನ್ನಪ್ಪ ತನ್ನ ಸಂಪರ್ಕಗಳಿಂದ ಸಮಾವೇಶಕ್ಕೊಂದು ಭರ್ಜರಿ ರೂಪ ಕೊಡಬಹುದೆಂದು ಹೇಳಿದ. ಮನರಂಜನಾ ಕ್ಷೇತ್ರದ ಭಾರೀ ಹೆಸರುಗಳನ್ನು ದಾಳಕ್ಕಿಡುವಂತೆ ಮಾತನಾಡಿದ. ಹೃತಿಕ್, ಸೊನಾಲಿ, ಫರ್ದೀನ್, ಸಯಫ್, ರಾನೀ…. ಅಂತ ಅವರೆಲ್ಲ ತನ್ನ ಕಿಸೆಯಲ್ಲಿರುವವರು ಎಂಬಂತೆ ಉದುರಿಸಿದ. ನನಗೇಕೋ ಇದು ಒಗ್ಗದ್ದೆನ್ನಿಸಿತು. ಶರ್ಲೀ ಎಂದಿಗಿಂತ ಹೆಚ್ಚು ಗಂಭೀರದಿಂದ ತೋರಿ ಬಂದಳು. ಅವಳ ನೋಟದಲ್ಲಿ, ಆಲಿಕೆಯಲ್ಲಿ ಎಂಥದೋ ಅನುಭವಸ್ಥ ತಾದಾತ್ಮ್ಯ ಕಂಡುಬಂತು. ‘I ಛಿಚಿಟಿ’ಣ beಟoಟಿg ಣo ಚಿಟಟ ಣhis mಚಿಟಿ!’ – ಎಂದು ಮಗ್ಗುಲಿಗೆ ಕುಳಿತಿದ್ದ ಅನೂಪನಿಗೆ ಹೇಳಿದೆ. ಅವನು ನಕ್ಕ. ಒಂದೇ ತರಗತಿಯ ಫಸಲಾದ ನಾವೆಲ್ಲ ಆರ್ಕಿಟೆಕ್ಟುಗಳು ನಮ್ಮ ವೈಯಕ್ತಿಕ ಉದ್ದಿಮೆ, ವಹಿವಾಟುಗಳನ್ನು ಕುರಿತಂತೆ, ವೃತ್ತಿಯ ಸೃಜನಪ್ರಜ್ಞೆಯನ್ನು ಕುರಿತಂತೆ ಮಾತನಾಡಲೇ ಇಲ್ಲವಲ್ಲ ಅಂದುಕೊಂಡೆ. ಮೊದಲಿನಿಂದಲೇ ಈ ನಿಟ್ಟಿನಲ್ಲಿನ ಸಹಜ ಕಾಳಜಿಗಳಿಂದ ಯಾವತ್ತೂ ದೂರವಿದ್ದ ಶರ್ಲೀ ಮತ್ತು ಚಿನ್ನಪ್ಪ – ಇವರಿಬ್ಬರಿಗೆ ಯಾಕೆ ಇಷ್ಟು ಎಲ್ಲಿಲ್ಲದ ಉಸಾಬರಿ ಅನ್ನಿಸಿತು. ಎಲ್ಲಕ್ಕಿಂತ ಈ ಚರ್ಚೆಗೆ ಇವರಿಗೋಸ್ಕರ ಕಾಯಬೇಕಿತ್ತೆ?…. ಉತ್ತರ ಸಿಗಲಿಲ್ಲ. ಸಿಕ್ಕರೂ ನೇರವಿರುವುದಿಲ್ಲ. ನಾನಂತೂ ಇವುಗಳಿಂದ ಹೊರತಾಗಿರಬೇಕು ಅಂದುಕೊಂಡೆ.

ಒಂದು ತಾಸಿನ ಚಕಮಕಿಯ ನಂತರ ಎಲ್ಲರೂ ಒಂದು ಸಹಮತಕ್ಕೆ ಬಂದರು. ವಿನ್ನೂ ಎಲ್ಲವನ್ನೂ ದಾಖಲಿಸಿಕೊಳ್ಳುತ್ತಿದ್ದ. ನಾನು ಬೇಕೆಂದೇ ಮಾತನಾಡಿರಲಿಲ್ಲ. ಚಿನ್ನಪ್ಪನ ಮುಖವನ್ನು ಗಹನವಾಗಿ ದಿಟ್ಟಿಸಿದೆ. ಎಡಗಿವಿಯಲ್ಲಿ ಆರು, ಬಲ ಹುಬ್ಬಿನ ಮೇಲೆ ಮೂರು ಕಡೆಗಳಲ್ಲಿ ಚುಚ್ಚಿಕೊಂಡು ಚಿಕ್ಕ ಚಿಕ್ಕ ಕಿಡಿ, ಲೋಲಾಕುಗಳನ್ನು ತೊಟ್ಟಿದ್ದ. ‘ಇವನು ಇನ್ನೂ ಎಲ್ಲೆಲ್ಲಿ ಚುಚ್ಚಿಕೊಂಡಿದ್ದಾನೋ!!’ ಅಂತ ಬದಿಗಿದ್ದ ವಿವೇಕನಗಷ್ಟೇ ಕೇಳುವ ಹಾಗೆ ಹೇಳಿದೆ. ಅವನು ಕಿಸಕ್ಕೆಂದು ನಕ್ಕ. ‘ನಿನಗೆ ಗೊತ್ತಾ? ಎರಡು ವರ್ಷದ ಹಿಂದೆ ಕಂಠೀರವಾದಲ್ಲಿ ಒಂದು ಹರಾಜು ನಡೆಯಿತು. ಆಗ ದತ್ತಾನಿಯ ನಾಟಕದ ಮ್ಯಾನಸ್ಕ್ರಿಪ್ಟೂ, ಇವನ ಬೆರಳಿನ ಉಂಗುರಗಳೂ ಎಷ್ಟು ಹಣಕ್ಕೆ ಬಿಕರಿಯಾದವು ಅಂತ!!’ ಅವನು ಪಿಸುಗುಟ್ಟಿದ. ‘ಬಿಟ್ಟರೆ ಅಂಡೀಸ್, ಕಾಂಡೊಮ್ಸ್‌ನೂ ಹರಾಜಿಗೆ ಇಟ್ಟುಬಿಡುತ್ತಾನೆ!!’ ಈಗ ನಾನು ಕಿಸಕ್ಕೆಂದೆ. ಅನೂಪ ನನಗೆ ತಿವಿದು ಸಭೆಯಲ್ಲಿ ತೊಡಗಿಸಿದ. ವಿನ್ನೂ ದಾಖಲಿಸಿಕೊಂಡಿದ್ದನ್ನು ಸಶಬ್ದವಾಗಿ ಓದಿದ. ಬಿಜಾಯ್ ಬರೆದುದರಲ್ಲಿ ಕೆಲವು ತಿದ್ದುಪಡಿ ಹೇಳಿದ. ನಾನು ಉದಾಸದಿಂದ ಮೊಬೈಲನ್ನು ನೋಡಿಕೊಂಡೆ. ನಾಲ್ಕೂ ಹತ್ತು. ಇದರಲ್ಲಿ ಪಾಲುಗೊಳ್ಳಲು ಒಪ್ಪಲೇಬಾರದಿತ್ತು ಅಂದುಕೊಂಡೆ. ಅಖ್ತರ್ ಎದ್ದು ನಿಂತು ಸಮಿತಿಯ ಅಧ್ಯಕ್ಷತೆಯನ್ನು ನಾನು ವಹಿಸಿಕೊಳ್ಳಬೇಕೆಂದು ಮಂಡಿಸಿದ. ನನಗೆ ಒಂದು ನಮೂನೆ ಘಾಸಿಯಾಯಿತು. ಅದೆಂತಹ ಕಸಿವಿಸಿ ಗೊತ್ತೆ? ‘We ಚಿs ಚಿಡಿಛಿhiಣeಛಿಣs hಚಿve beಣಣeಡಿ ಣhiಟಿgs ಣo ಜo ಣhಚಿಟಿ ಣhis!!’ ಎಂದು ಕಡ್ಡಿ ಮುರಿದಂತೆ ಹೇಳಿದೆ. ನಾವು – ಊರು ಕಟ್ಟುವವರು ಊರಿನ ನಿಟ್ಟಿನಲ್ಲಿ ಏನು ತಾನೇ ಮಾಡುತ್ತಿದ್ದೇವೆ? ಊರಿನ ಹೆಸರಿನಲ್ಲಿ ನೆಲದ ಮೇಲೆ ಎಷ್ಟೆಲ್ಲ ಅತ್ಯಾಚಾರ ನಡೆಯುತ್ತಿದೆ. ಊರು ತನ್ನ ನೆಲದೊಟ್ಟಿಗಿನ ನಿಷ್ಟೆಯನ್ನೆಲ್ಲ ಕಳಚಿಕೊಳ್ಳುತ್ತಿದೆ. ಸರ್ಕಾರದ ನೀತಿ – ಆರ್ಥಿಕ ಉದಾರೀಕರಣ ಈ ನೆಲವನ್ನೇ ಜಾಗತಿಕ ಮಟ್ಟದಲ್ಲಿ ಗಿರವಿಯಿಟ್ಟಿದೆ. ಇಲ್ಲಿನ ಕಟ್ಟಡಗಳಿಗೂ, ದುಬೈನ ಕಟ್ಟಡಗಳಿಗೂ ಏನಾದರೂ ವ್ಯತ್ಯಾಸ ಕಾಣುತ್ತದೆಯೆ? ಊರು ಅಂದರೆ ಬರೇ ಕಾಂಕ್ರೀಟು! ಹಸಿರು ಅಂದರೆ ಆಮದು ಹುಲ್ಲು!! ರಸ್ತೆ ಅಂದರೆ ಪಾರ್ಕಿಂಗ್ ಲಾಟು!!! ಇವೆಲ್ಲ ಈ ಶತಮಾನದ ನಮ್ಮದೇ ಕೊಡುಗೆಯಲ್ಲವೆ? ಕಳೆದ ಹತ್ತು ವರ್ಷದಲ್ಲಿ ಎಷ್ಟು ಹೊಸ ಕಾರುಗಳು, ಎಷ್ಟು ಹೊಸ ಕಟ್ಟಡಗಳು, ಎಷ್ಟು ಗಾಜು, ಎಷ್ಟು ಕಾಂಕ್ರೀಟು? ಇಂತಹ ನಮ್ಮ ಪೀಳಿಗೆಗೆ ಧಿಕ್ಕಾರವಿರಲಿ!!

‘ಐeಣ us ಜಚಿmಟಿ ouಡಿ geಟಿಡಿe!!!’ ಎಂದು ನಾನು ಕೂಗಿದ್ದು ಎಲ್ಲರನ್ನೂ ಕಂಗೆಡಿಸಿರಬೇಕು. ಎರ್ರಾಬಿರ್ರಿ ಮಾತಿದ್ದ ಕಡೆ ಈಗ ಒಮ್ಮೆಲೇ ಕಕ್ಕಾವಿಕ್ಕಿ. ಕೆಲಕಾಲ ಯಾರೂ ಮಾತನಾಡಲಿಲ್ಲ. ‘We ಟಿeeಜ ಠಿoಟiಣiಛಿಚಿಟ ತಿiಟಟ, ಓಚಿgಚಿmಚಿಟಿ! ಇದಕ್ಕೆಲ್ಲ ರಾಜಕೀಯ ಮನೋಬಲ ಬೇಕು!!’ ಅನೂಪ ಮೆಲ್ಲನೆ ಹಿಂಜರಿಕೆಯಿಂದಲೇ ಉಸುರಿದ. ನಾನು ಊರೆಂದರೆ ಎಲ್ಲರ ಒಟ್ಟು ಮನೋಬಲದ ಕೃತ್ಯ ಅಂತ ವಾದಿಸಿದೆ. ಚಕಮಕಿ ನಿಲ್ಲಲಿಲ್ಲ. ಚಿನ್ನಪ್ಪ ದಂಗು ಬಡಿದವನಂತೆ ಕುಳಿತಿದ್ದ. ಶರ್ಲೀ ಈಗ ಮಾತಿಗೆ ತೊಡಗಿದಳು. ‘ಬರೇ ಮಾತಿನಿಂದ ಏನೂ ಆಗೋದಿಲ್ಲ ನ್ಯಾಗ್ಸ್! ನಿನ್ನ ಹಾಗೆ ಯೋಚನೆ ಮಾಡುವವರು ನಮ್ಮಲ್ಲಿ ಎಷ್ಟು ಇದ್ದೇವೆ ಹೇಳು? ನಿಮ್ಮಂತಹವರು ಇದ್ದರೂ ನೀವಾಯಿತು, ನಿಮ್ಮ ಕೆಲಸವಾಯಿತು ಅಂತ ಇದ್ದುಬಿಡ್ತೀರಿ. ಯಾರೂ ಮುಂದೆ ಬರೋಲ್ಲ. We shouಜ beಛಿome ಚಿಛಿಣivisಣs. ನಿನ್ನಂತಹವರು ಫೋರ್‌ಫ್ರಂಟ್ ಲೀಡರ್ಸ್ ಆಗಬೇಕು. ಆದರೆ ನೀನು ಇದನ್ನು ಮಾಡೋಲ್ಲ. ನಿನ್ನನ್ನು ಬಿಟ್ಟು ಉಳಿದವರೆಲ್ಲ ಮೂರ್ಖರು ಅಂತ ಯಾವ ಉಸಾಬರಿಯೂ ಇಲ್ಲದೆ ನಿನ್ನಷ್ಟಕ್ಕೆ ನೀನು ಇದ್ದುಬಿಡ್ತೀಯ. ನೀನು ಯಾಕೆ ಮುಂದಾಳತ್ವ ವಹಿಸಬಾರದು? ನಾವು ನಿನಗೆ ಬೆಂಬಲ ಕೊಡುತ್ತೇನೆ. ನಾನೂ ಮುಂದಿನ ಕಾರ್ಪೊರೇಟರ್ ಎಲೆಕ್ಷನ್ ಕಂಟೆಸ್ಟ್ ಮಾಡಬೇಕು ಅಂತ ಇದ್ದೀನಿ. ಐeಣ us ಜo someಣhiಟಿg ಛಿoಟಟeಛಿಣiveಟಥಿ!!……..’ ನನಗೆ ಈಗ ಶರ್ಲೀ ಸಂಪೂರ್ಣ ವಿಭಿನ್ನವಾಗಿ ಕಾಣತೊಡಗಿದಳು. ಅವಳು ಕೊಚಿನ್‌ನಲ್ಲಿ ತಾನು ಹಮ್ಮಿಕೊಡಿರುವ ಕಾರ್ಯಕ್ರಮಗಳನ್ನು ಹೇಳಿದಳು. ಅವಳು ಅಲ್ಲಿನ ಪ್ರಮುಖ ಕಂಟ್ರಾಕ್ಟರುಗಳಲ್ಲಿ ಒಬ್ಬಳಂತೆ. ತಾನು ನಡೆಸುತ್ತಿರುವ ಉದ್ದಿಮೆಯ ವಿವರಗಳನ್ನು ಕೊಟ್ಟಳು. ಅಲ್ಲಿನ ಸರ್ಕಾರದೊಟ್ಟಿಗೆ ಚರ್ಚಿಸಿ ತೆಗೆದ ಊರಿನ ಬೆಳವಣಿಗೆಯನ್ನು ಕುರಿತಾದ ಯೋಜನೆಗಳ ರೂಪುರೇಷೆಗಳ ಬಗ್ಗೆ ಹೇಳಿದಳು. ‘ನ್ಯಾಗ್ಸ್! ನೀನು ನಮ್ಮಂಥವರ ಕಡೆಯೂ ನೋಡಬೇಕು!! ಸ್ವಲ್ಪ… ಒಂದು ಸ್ವಲ್ಪ ನಿನ್ನ ನೈತಿಕ ಹಮ್ಮನ್ನು ಬದಿಗಿಟ್ಟು ನೋಡಬೇಕು. ನಾವು ನಿನ್ನಷ್ಟು ವಿಚಾರ ಮಾಡದಿದ್ದರೂ ನಮಗಾಗುವಷ್ಟು ಏನನ್ನಾದರೂ ಮಾಡ್ತಾ ಇರ್ತೀವಿ….. ನಾನು ಅನೂಪ್‌ಗೆ ಹೇಳುತ್ತಾ ಇದ್ದೆ. ನಿನ್ನನ್ನು ಒಮ್ಮೆ ಕೊಚಿನ್‌ಗೆ ಕರೆಸಿ ಅಲ್ಲಿನ ಮೇಯರ್ ಜೊತೆ ಒಂದು ಭೇಟಿ ಮಾಡಿಸಬೇಕು ಅಂತ.’ ನನ್ನಿಂದ ಮಾತೇ ಹೊರಳಲಿಲ್ಲ. ಈ ಅಧ್ಯಕ್ಷತೆಯನ್ನು ಒಪ್ಪುವುದೋ, ಬೇಡವೋ ಎಂದು ಯೋಚಿಸುತ್ತಿರುವಾಗಲೇ ಮೊಬೈಲಿನ ಅಲಾರ್‍ಮ್ ಬೀಪಿಸತೊಡಗಿತು. ಎಚ್ಚರವೇ ಎಚ್ಚರವಾದ ಹವೆಯ ಮೋಡವೊಂದು ನನ್ನ ಸುತ್ತ ಈಸತೊಡಗಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.