ಕುಮಟೆಗೆ ಬಂದಾ ಕಿಂದರಿಜೋಗಿ

ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು […]

ಪೀಜೀ

ಆಫೀಸು ಬಿಟ್ಟವನೇ ಅನಂತ ಫ್ಲೋರಾಫೌಂಟನ್ ಹತ್ತಿರದ ಬಸ್ ಸ್ಟ್ಯಾಂಡಿನಲ್ಲಿ ಕ್ಯೂದಲ್ಲಿ ನಿಂತು `ಎಚ್’ ರೂಟ ಬಸ್ಸಿಗಾಗಿ ಕಾಯುತ್ತಿದ್ದ, ಚೌಪಾಟಿಗೆ ಹೋಗಲು. ಆದರೆ ಕ್ಯೂದಲ್ಲಿ ನಿಂತು ಅದಾಗಲೇ ೧೫ ಮಿನಿಟುಗಳಾದರೂ ಒಂದೂ ಬಸ್ಸು ಬರದೇ ಮನಸ್ಸು […]

ಶಿಕಾರಿ – ೫

ಇದ್ದಕ್ಕಿದ್ದಂತೆ ಒಂದು ಬಗೆಯ ಜಿಗುಪ್ಸೆ. ನಿರುತ್ಸಾಹ, ದಣಿವು ಕೂಡಿದಂತಿದ್ದ ನಾಗಪ್ಪನ ದನಿ ದಸ್ತೂರನ ಉಕ್ಕುತ್ತಿದ್ದ ಉತ್ಸಾಹಕ್ಕೆ ಭಂಗ ತಂದಿತು. ಆದರೂ ಹಾಗೆಯೇ ತೋರಗೊಡದೆ, ತನಿಖೆಯನ್ನು ಆರಂಬಿಸಿದ ರೀತಿಯಲ್ಲಿಯ ಅವನ ಜಾಣ್ಮೆಯನ್ನು ಮೆಚ್ಚಿಕೊಂಡ ಫಿರೋಜ್ ಹಾಗೂ […]

ಶಿಕಾರಿ – ೪

“ಬೋಳೀಮಗನೇ, ಬೋಳೀಮಗನೇ, ಈಗ ನಾನು ಕೇಳುತ್ತೇನೆ : ಹೀಗೆ ಹಿಂದಿನದೆಲ್ಲವನ್ನು ಅಗೆದು ಅಗೆದು ತನ್ನನ್ನೇಕೆ ಸತಾಯಿಸುತ್ತೀಯೋ ? ಹೇಳೋ. ನಿನ್ನ ಇರಾದೆಯನ್ನಾದರೂ ತಿಳಿಸೋ. ಆ ಸೀತಾರಾಮ_ಅವನೊಬ್ಬ ಹಜಾಮ ! ಬರೀ ಅವರಿವರ ಶಪ್ಪಾ ಕೆತ್ತುವುದರಲ್ಲೇ […]

ಶಿಕಾರಿ – ೩

ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ […]

ಶಿಕಾರಿ – ೨

ಹೊರಗೆ ರಿಕ್ಷಾವಾಲ ಗದ್ದಲ ಮಾಡಹತ್ತಿದ. ನಾಗಪ್ಪ ಮೊದಲು ಅದೇ ರಿಕ್ಷಾ ಹತ್ತಿ ಯಾವುದಾದರೂ ಹೊಟೆಲ್ಲಿಗೆ ಹೋಗಿ ಊಟ ಮಾಡೋಣ. ಬರುವಾಗ ಟ್ಯಾಕ್ಸಿಯಿಂದ ಬಂದರಾಯಿತು ಎಂದುಕೊಂಡಿದ್ದ. ಆದರೆ ಇದೀಗ ಫೋನ್ ಮೇಲೆ ತಿಳಿದ ಸುದ್ದಿಯಿಂದ ಊಟದ […]

ಶಿಕಾರಿ – ೧

ಅಧ್ಯಾಯ ಒಂದು : ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ […]

ತಮ್ಮಣ್ಣೋಪಾಖ್ಯಾನ

ಇವತ್ತು-ಸರ್ವೋತ್ತಮನನ್ನು ಅವನ ಮನೆಯಲ್ಲಿ ಹಿರಿಯರೆಲ್ಲ ತಮ್ಮನೆಂದು ಕರೆಯುತ್ತಿದ್ದರಾದರೆ ಕಿರಿಯರು ತಮ್ಮಣ್ಣನೆಂದು ಕರೆಯುತ್ತಿದ್ದರು. ಕಿರಿಯರು ಕರೆಯುತ್ತಿದ್ದ ಹೆಸರೇ ಊರ ಜನರ ಬಾಯಲ್ಲೂ ನಿಂತು ಅವನು ಎಲ್ಲರ ಪಾಲಿಗೆ ತಮ್ಮಣ್ಣನೇ ಆದ. ಈ ಹೆಸರು ಮುಂಬಯಿಯಲ್ಲಿ ಮಾತ್ರ […]

ವಿಸರ್ಜನೆ

ಭಾಗ: ಒಂದು ಕೆಲವು ತಿಂಗಳ ಹಿಂದೆ ನಾನು ಸೇವಾ ನಿವೃತ್ತನಾದ ಮೇಲೆ ಹೀಗೇ ಊರಿನ ಕಡೆಗೆ ಕೆಲವು ದಿನ ಸುತ್ತಾಡಿ ಬಂದರೆ ಹೇಗೆ ಎಂದು ವಿಚಾರ ಮಾಡುತ್ತಿದ್ದ ಹೊತ್ತಿಗೇ ಕುಮಟೆಯಲ್ಲಿ ಸದ್ಯವೇ ಹೊಸ ಮನೆ […]

ಹೀಗೊಂದು ದಂತಕಥೆ

“ಇನ್ನೂ ಎಷ್ಟು ಹೊತ್ತೆಂದು ಅವರ ಹಾದಿ ಕಾಯುತ್ತೀರಿ? ಮುಖ್ಯಮಂತ್ರಿಗಳ ಬಳಿಗೆ ಹೋದಲ್ಲಿ ಅದೆಂಥ ತೊಡಕಿನ ಕೆಲಸದಲ್ಲಿ ಸಿಕ್ಕಿ ಹಾಕಿಕೊಂಡರೋ. ನೀವು ಇನ್ನೊಮ್ಮೆ ಬನ್ನಿ. ನೀವು ಸರಿಯಾಗಿ ಅವರು ಹೇಳಿದ ಹೊತ್ತಿಗೇ ಬಂದಿದ್ದಿರಿ ಎಂದು ನಾನೇ […]