೧ ಇವನ ಹಾಲ್ದುಟಿಯಂಚಿನಲ್ಲಿ ಮಿಂಚುವ ನಗೆಯು ತುಂಬುಗಣ್ಣುಗಳಲ್ಲಿ ಹೊಳೆವ ಬದುಕು, ಧ್ವನಿತರಂಗದಲೆದ್ದು ತೇಲಿ ಬರುತಿಹ ನಾದ ಚಂದ್ರ-ದೋಣಿಯನೇರಿ ಹುಟ್ಟು ಹಾಕು- ಹೂವಿಗೆರಗಿದ ತುಂಬಿ, ಸಿಂಪಿಗೊರಗಿದ ಮುತ್ತು ತಂಪುಗಾಳಿಗೆ ಬಿರಿದ ಸಂಪಿಗೆಯ ಮೊಗ್ಗು, ತೆಂಗಿನೊಳಗಿನ ತಿಳಿಲು, […]
ವರ್ಗ: ಕವನ
ನನ್ನ ಕನಸಿನ ನಾಡು
ಸಿಗಲಿ ಪ್ರತಿಯೊಬ್ಬನಿಗೊಂದು ಗಟ್ಟಿ ತಲೆದಿಂಬು ಅಥವಾ ದಿಂಬಿದ್ದವನಿಗೊಂದು ಗಟ್ಟಿತಲೆ ಗಟ್ಟಿಯೆಂದರೆ ಗಟ್ಟಿ ಮುಟ್ಟಾದ ತಲೆ ಕಲ್ಲಿನಂಥಾ ಖರ್ಚಾದ ಬ್ಯಾಟರಿ ಸೆಲ್ಲಿನಂಥಾ ತಲೆ ಮತ್ತೆ ಹಾಸಿರಲಿ ಮೆತ್ತನೆ ಮೆತ್ತೆ ಮಂಚ ಸುತ್ತಾ ಹಾಯಾಗಿ ತೂಗಿ ಬಿದ್ದಿರಲಿ […]
ಮಣ್ಣಿನ ಮೆರವಣಿಗೆ
೧ ತಿರುಗುತ್ತಿದೆ, ಎಂದೋ ಸಿಡಿದಾರಿದ ಅಗ್ನಿಯ ಪಿಂಡ; ಆರಿದೆಯೆಂದವರಾರೊ, ಇನ್ನೂ ನಿಗಿ ನಿಗಿ ಉರಿಯುತ್ತಿದೆ ಅದರೆದೆಯಾಳದ ಕುಂಡ! ಹರಿಯುತ್ತಿವೆ ಬೆಂಕಿಯ ಹೊಳೆ ತಣ್ಣನೆ ಕಡಲೊಳಗೆ; ಹೊಗೆಯಾಡುತ್ತಿದೆ ಸುಮ್ಮನೆ ನುಣ್ಣನೆ ಬಾನೊಳಗೆ. ಬಿದ್ದಿವೆ ಒಡ ಮುರಿದದ್ದಿವೆ […]
ನನ್ನವಳೀ ಶರದೃತು
ನನ್ನವಳೀ ಶರದೃತು- ನನ್ನೆದಯೊಳೋಲಾಡಿದವಳು. ಅವಳ ಕಾಲಂದಿಗೆಯ ಹೊಳೆವ ಗೆಜ್ಜೆಗಳು ನನ್ನ ನರನರಗಳಲಿ ಝಣಿರು ಝಣಿರು! ಅವಳ ಮಂಜಿನ ಮುಸುಕು ಪಟಪಟಿಸಿತೆನ್ನುಸಿರೊಳು. ನನ್ನ ಕನಸುಗಳಲ್ಲಿ ಅವಳ ತಲೆಗೂದಲಿನ ಮೃದುಲ ಸೋಂಕು. ನನ್ನ ಬಾಳನು ತುಡಿದು ಕಂಪಿಸುವ […]
ನುಗ್ಗಿ ಬಂದಿತು ಎಲ್ಲ ಲೋಕದಾನಂದವದು
ನುಗ್ಗಿ ಬಂದಿತು ಎಲ್ಲ ಲೋಕದಾನಂದವದು ನನ್ನ ದೇಹದ ಗೇಹ ರಚನೆಗೆಂದು, ಮುದ್ದನಿಟ್ಟವು ಬಾನ ಬೆಳಕು ಬಿಟ್ಟೂ ಬಿಡದೆ ಅವಳು ಎಚ್ಚರಗೊಂಡು ಏಳುವರೆಗು. ತ್ವರೆಯಿಂದ ಬಂದ ಬೇಸಗೆ ತಂದ ಹೂವುಗಳು ಅವಳ ಉಸಿರಾಟದಲಿ ಉಸಿರಿಟ್ಟವು. ಹರಿವ […]
ಅವಳು ನನ್ನವಳಾಗಿ
ಆಕಾಶ-ಅಲ್ಲಿರುವ ಎಲ್ಲ ನಕ್ಷತ್ರಗಳು ಜಗವು-ಮುಗಿಯದ ಅದರ ಎಲ್ಲ ಸಂಪದವು ನನ್ನ ವಶವಾದರೂ ನಾನು ಇನ್ನಿಷ್ಟು ಬಯಸಬಹುದು; ಆದರೆ ನಾನು ಸಂತೃಪ್ತ, ನೆಲದ ಮೇಲಿನ ಸಣ್ಣ ಮೂಲೆ ಸಾಕು- ಅವಳು ನನ್ನವಳಾಗಿ ಮಾತ್ರ ದೊರೆಯಬೇಕು. (Lover’s […]