ಶ್ರಾವಣದ ಲಾವಣ್ಯ

೧ ಬಾನ ಸಾಣಿಗೆ ಹಿಟ್ಟು ಸಣ್ಣಿಸಿ- ದಂತೆ ಜಿನುಗಿದೆ ಸೋನೆಯು; ಬಿಳಿಯ ತೆಳು ಜವನಿಕೆಯನೆಳೆದಿಹ ಇಳೆಯು ಸುಂದರ ಮೇಣೆಯು! ಹುಲ್ಲು ಹಾಸಿದೆ, ಹೂವು ಸೂಸಿದೆ ಗಾಳಿ ಮೂಸಿದೆ ಕಂಪನು ಶ್ರಾವಣದ ಲಾವಣ್ಯ ಕುಣಿದಿದೆ ಮಳೆಯು […]

ಸೃಷ್ಟಿ ನೋಂತು ನಿಂತಿದೆ!

೧ ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ! ಹೊಸತು ಆಸೆ ಮೂಡಿದೆ ಹರುಷ ಲಾಸ್ಯವಾಡಿದೆ ಓ! ವಸಂತ ನಿನಗನಂತ ಆಲಿಂಗನ ಸಂದಿದೆ ಸೃಷ್ಟಿ ನೋಂತು ನಿಂದಿದೆ! […]

ಪಂಜರಬಿಟ್ಟು ಹಾರಿದ ಹಕ್ಕಿಗಳೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪಂಜರ ಬಿಟ್ಟು ಹಾರಿದ ಹಕ್ಕಿಗಳೆ ಬಂದು ಒಂದು ಕ್ಷಣ ಮುಖದೋರಿರೆ ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು ಮಾಡು ಮುರಿದು […]

ಬಂತು ಭಾರತ ಹುಣ್ಣಿವೆ!

ಬಂತು ಭಾರತ ಹುಣ್ಣಿವೆ! ತೆರೆದು ಲೋಕದ ಕಣ್ಣೆವೆ!! ಕನಸು ಮನಸೂ ಹೊಂದಿವೆ ಜೇನು ಬಟ್ಟಲು ತಂದಿವೆ ಇಂಥ ಸಮಯದಿ ಬಂಧವೆ? ಏನು ಗೈದರು ಚೆಂದವೆ! ಬಾನಿನುದ್ದಕು ಭೂಮಿಯಗಲಕು ಎಲ್ಲಿಯೂ ಸ್ವಚ್ಛಂದವೆ! …..ಬಂತು! ಗಾಳಿ ತಣ್ಣನೆ […]

ಹೂಬೇಲಿ

ಎಂದಿನಂತೆಯೆ ದಿನದ ದಾರಿಯಲಿ ಸಾಗುತಿರೆ ಅನಿರೀಕ್ಷಿತಂ ಬಳ್ಳಿ ಗೊಂಚಲವು ಕೈಚಾಚಿ ಬಣ್ಣ ಬಣ್ಣದ ಹೂಗಳನುರಾಗದಲಿ ನಾಚಿ ಗಾಳಿ ಸುಳಿಯಲಿ ಬಂದು ಕಿವಿಮಾತನುಸುರುತಿರೆ ನಿಂತು ಬಿಡುವೆನು ನಾನು. ಈ ಪರಿಯ ಸೊಬಗಿನಲಿ ಅರಸದಿದ್ದರು ಕಾಲ ತೊಡಕುವೀ […]

ಸಾಕ್ಷಿ

ಹತ್ತಾರು ರಸ್ತೆಗಳು ಒಂದನ್ನೊಂದು ಕತ್ತರಿಸುತ್ತ ಕೂತರೆ ಹೋಗುವುದೆಲ್ಲಿಗೆ ಹೇಳು ಹತ್ತೂ ಕಡೆ ಕನ್ನಡಿ ಹಿಡಿದು ನೀ ಕೂತರೆ ನಾ ಬತ್ತಲಾಗದೆ ಉಪಾಯವಿದೆಯೆ? *****

ಪಥಿಕ

೧ ಯಾವ ಋತುವಿನೊಳಿಂತು ಕನಸು ಕಂಡಳೊ ಪೃಥಿವಿ ಆಶೆ ಬೀಜಗಳೆನಿತೊ ಮಡಿಲೊಳಿರಿಸಿ ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ ಹೊತ್ತು ನಿಂತಿಹಳಮಿತ ವೃಕ್ಷರಾಶಿ. ೨ ಮಾವು ಬೇವೂ ತೆಂಗು ಕೌಂಗು ನೇರಿಳೆ ಹಲಸು ಹುಣಿಸೆ […]