ಕಟ್‌ಸೀಟ್

ಮಧ್ಯಾಹ್ನ ಒಂದೂವರೆ ಗಂಟೆಯ ಬೆಂಗಳೂರಿನ ಬಿಸಿಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೇರಿದ್ದ ಬದುಕಿನ ನಾನಾ ಸ್ತರದ ಜನರ ಅಂತರ್ಜಲವನ್ನ ಅವರವರ ಮೇಲೆ ಪ್ರೋಕ್ಷಣೆ ಮಾಡಿತ್ತು. ಕಪ್ಪುಕಲ್ಲುಬೆಂಚಿನ ಮೇಲೆ ಕುಳಿತಿದ್ದ ಹಸಿರು ಸೀರೆಯ ಹೆಂಗಸಿನ ಕಂಕುಳಲ್ಲಿರುವ […]

ಅಚ್ಚರಿಯ ಪರಿ

ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […]

ಆ ಮರ-ಈ ಮರ

ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. *****

ಹಿತ್ತಲಿನ ಗಿಡ

ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. *****

ಗುಣದ ಗರಿಮೆ

ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****

ಕವಿ ಪತ್ನಿ

ಪದ್ಯ ಗಿದ್ಯ ಎಂದು ಮೈ ಮರೆತು ಸ್ಕೂಟರ್ ಕೊಳ್ಳಲಿಲ್ಲ, ಸ್ವಂತ ಮನೆ ಮಾಡಿಕೊಳ್ಳಲಿಲ್ಲ, ನಿಮ್ಮ ಕಟ್ಟಿಕೊಂಡು ನಾನು ಕೆಟ್ಟೆ ಎಂದೇನೇನೋ ಗೊಣಗುತ್ತಿದ್ದವಳು – ಸರ್ಕಸ್ಸಿನ ಒಂಟೆಯ ಬಳಿ ತಂದೆಗೆ ಕುತೂಹಲದ ಪ್ರಶ್ನೆ ಕೇಳುತ್ತಿದ್ದ ಕುರುಡು […]

ಕವಿ-ಲೋಕ

ಲೋಕವೇ, ನಿನಗಂಟಿಕೊಂಡಿರುವನಕ ನನ್ನ ಚಟುವಟಿಕೆ. ಬೇರ್ಪಟ್ಟೆನೆ? ನಿರರ್ಥಕ: ಕೆಟ್ಟು ಹೋದ ಬಲ್ಬಿನ ಥರ. ನಾನಿರಲಿ ಇರದಿರಲಿ ನಿನಗಾವ ಬಾಧಕ? ನಡೆಯುತ್ತಲೇ ಇರುವೆ ನಿನ್ನಷ್ಟಕ್ಕೆ ಸುಮ್ಮನೆ. ಆದರಿಷ್ಟೆ: ನಾನಿದ್ದರೆ ನಿನ್ನೊಂದಿಗೆ, ಮಂದಿಗೆ ನಿನ್ನ ಚಲನವಲನದ ಸೂಚಕ: […]