ಟಿ.ವಿ ಚಾನೆಲ್‌ಗಳು ವಿ/ಎಸ್ ಸಿನಿಮಾ

ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು […]

ನನಸಿನ ಕನಸು

ಹೋದೆ ಹೋದೆನು ದೂರ ನಡೆದೆನು ಕನಸು ಕೈಹಿಡಿದಾಚೆಗೆ, ಊರಿನಾಚೆಗೆ ಗಿರಿಯ ಶೃಂಗಕೆ ಚೆಲುವು ಚಿಮ್ಮುವ ಕಾಡಿಗೆ; ಕಾಡಗಿಡಗಳು ಮುಗಿಲ ಮುತ್ತಿಡೆ ಈರ್ಷೆ ತೋರಿಸುವಲ್ಲಿಗೆ, ಹಚ್ಚ ಹಸುರಿನ ಪಚ್ಚ ಪಯಿರಿನ ನಿಚ್ಚಸುಂದರ ಬೀಡಿಗೆ ಏರಿ ಗಿರಿಯನು, […]

ಏನೋ ಸಾವೆನ್ನುವ

ಏನೋ ಸಾವೆನ್ನುವ ‘ಅದು’ ನಿರೀಕ್ಷಿಸುತ್ತಾ ಇರೋದು ಎಲ್ಲೋ, ಮುಂದೆಂದೋ ಈಗಂತೂ ಅಲ್ಲ. ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು, ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ […]

ಕೋವಿ ಮನೆ

`ನಂದೀ ತೀರ್ಥದ ಗಣಪತಿಗೆ ಪಂಚಕಜ್ಜಾಯ ಹರಕೆ ಹೇಳಿ ಅಂದ್ರೆ ಕೇಳೋದಿಲ್ಲ . ರಾತ್ರಿಯೆಲ್ಲ ಕೆಂಪು ಕಣ್ಣಲ್ಲಿ ದೀಪ ಇಟ್ಕೊಂಡು ಡಿಡಿಟಿ ಬಳೀರಿ… ‘ ನಾಗಿ ಮಟಗುಟ್ಟುತ್ಲೇ ಅಂಗಾಲಲ್ಲಿ ಕಚ್ಕೊಂಡಿದ್ದ ಇರುವೆಗಳ ಆಯ್…ಎನ್ನುತ್ತಾ ಹೊಸಕಿ ಎರಡು […]

ಹೀಗೊಂದು ದಿನ ಕಾಯುತ್ತಾ

ನೆನಪಿನಾಳದಿಂದ ಘಂ ಎಂದಿತ್ತು ಬೆಳ್ಳಿ ನೀಲಾಂಜನದ ಸುಟ್ಟ ತುಪ್ಪದ ಬುತ್ತಿ ಬಾದಾಮಿ, ಖರ್ಜೂರ, ದ್ರಾಕ್ಷಿ, ಗೋಡಂಬಿ ಚಿಗುಳಿ, ಎಳ್ಳುಂಡೆ; ತಟ್ಟೆ ತುಂಬ ತಿಂಡಿ ಬಟ್ಟಲಲಿ ಕಾದ ಕೇಸರಿ ಹಾಲು….. ಹನಿ ಹನಿ ಮಳೆ ಬಿದ್ದು […]

ಚಂದ್ರೋದಯ

ಪೂರ್ವ ದಿಙ್ಮಂಡಲದಿ ಪುಣ್ಯವವತರಿಸುತಿದೆ- ಪೂರ್ಣ ಚಂದ್ರೋದಯದ ರೂಪದಲ್ಲಿ; ಪೂರ್ಣತೆಯು ಸಂಪೂರ್ಣ ಸಾಕಾರಗೊಳ್ಳುತಿದೆ- ಪೌರ್ಣಿಮೆಯ ಪೂರ್ಣೇಂದು ವೇಷದಲ್ಲಿ. ಬೈಗುಗೆಂಪಿನ ಬಣ್ಣ ಕಡಲಾಳ ತಳದಿಂದ ಬುರುಬುರನೆ ಮೇಲೆದ್ದ ಗುಳ್ಳೆಯಂತೆ, ತಂಗದಿರನುದಯಿಸಿದ, ಶಾಂತಿಮತಿ ಬಿಂಬಿಸಿದ ತಪಗೊಂಡ ಮೌನವ್ರತಧಾರಿಯಂತೆ. ಹೊನ್ನ […]

ಘೋಷಣೆ

“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […]

‘ಸಿನಿ ಪತ್ರಕರ್ತರೆ – ಫಾರಿನ್ ಷೂಟಿಂಗ್‌ಗೆ ಬರ್ತೀರಾ?’

ಮುಂಚೆ ವಾಮನನಂತೆ ಮೋಟು ಮೆಣಸಿನಕಾಯಿನಂತಿದ್ದ ಕನ್ನಡ ಚಿತ್ರರಂಗ ಈಗ ತ್ರಿವಿಕ್ರಮನಂತೆ ಬ್ರಹ್ಮಾಂಡವಾಗಿ ಬೆಳೆದು – ಫಾರಿನ್ ಷೂಟಿಂಗ್ ಕಾಮನ್ ಮಾಡಿಕೊಂಡಿದೆ. ಮುಂಚೆ ದ್ವಾರಕೀಶ್ ಸಿಂಗಾಪೂರ್‌ನಲ್ಲಿ ಆಫ್ರಿಕಾದಲ್ಲಿ ಷೂಟಿಂಗ್ ಮಾಡಿ ಬಂದಾಗ ಆತನನ್ನು ಮಹಾ ಕುಳ್ಳ […]

ಅಧಿಕಾರ

ನನ್ನ ಹಗುರು ಕಣ್ಣುಗಳಿಂದ ತಟತಟ ಉದುರುವ ಕಂಬನಿಯೇ ಮಂಡಿ ತರಚಿದಾಗೆಲ್ಲ ಬ್ಲೇಡು ಕುಯ್ದಾಗೆಲ್ಲ ಧಳ್ಳೆಂದು ಚಿಮ್ಮುವ ಕಡುರಕ್ತವೇ ತೆಪ್ಪಗೆ ಜಿನುಗುವ ಬೆವರೇ ಹೇಳಿ, ನಿಮ್ಮ ನಡುವೆಯೂ ಎಲ್ಲಿಗೆಲ್ಲಿಯ ಸಂಬಂಧ ನಿಮ್ಮ ಮೇಲಿಲ್ಲವೆ ನನಗೂ ಒಂದಿಷ್ಟು […]