ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****
ವರ್ಗ: ಹನಿಗವನ
ಕನ್ನಡ ಮಾಧ್ಯಮ
ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
ಬುದ್ಧಿ ಮಾತು
“ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****