ಗೃಹಭಂಗ – ೯

ಅಧ್ಯಾಯ ೧೫ – ೧ – ಈಗ ಎಂಟು ವರ್ಷದಲ್ಲಿ ಊರ ಹೊರಗಡೆ ಸರ್ಕಾರದವರು ಹೊಸ ಪ್ರೈಮರಿಸ್ಕೂಲಿನ ಕಟ್ಟಡ ಕಟ್ಟಿಸಿದ್ದರು. ಶಿವೇಗೌಡನಿಗೆ ಸ್ಕೂಲು ಕಟ್ತಡದ ಬಾಡಿಗೆ ಬರುವುದು ನಿಂತು ಹೋಗಿತ್ತು. ಹೊಸ ಸ್ಕೂಲಿಗೆ ಹೊಂದಿಕೊಂಡು […]

ಗೃಹಭಂಗ – ೮

– ೪ – ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಕುರುಬರಹಳ್ಳಿಯಿಂದ ಎರಡು ಗಾಡಿ ಸೋಗೆಯ ಜೊತೆಗೆ ಇಬ್ಬರು ಗಂಡಾಳುಗಳು ಬಂದರು. ಅವರು ಈ ಬಿಟ್ಟ ಊರಿನೊಳಗೆ ಬರಲಿಲ್ಲ. ರಾಮಸಂದ್ರದ ಕುಳವಾಡಿ ಶ್ಯಾನುಭೋಗರ ಮನೆಯ ಮುಂದಿದ್ದ […]

ಗೃಹಭಂಗ – ೭

– ೬ – ಮದುವೆ ನಿಶ್ಚಯವಾಯಿತು. ಲಗ್ನ ಗೊತ್ತು ಮಾಡಿ ಮದುವೆ ಮಾಡಿಸಲು ಪುರೋಹಿತರ ಸಹಾಯ ಬೇಕು. ಸ್ಥಳಪುರೋಹಿತರಿಬ್ಬರೂ ಸೇರಿ ತನ್ನ ಮೆಲೆ ಬಹಿಷ್ಕಾರ ಹಾಕಿದ್ದಾರೆ. ತನ್ನ ತಂದೆಯ ಸಹಾಯ ಕೇಳಲು ಅವರು ಕೋಪಿಸಿಕೊಂಡು […]

ಸಂಪರ್ಕ

ಅರೇ ಅರೇ ಅನ್ನುತ್ತ ಇಬ್ಬರೂ ಪರಸ್ಪರ ಗುರುತು ಹಿಡಿದರು. ರಾಧಿಕಾಳನ್ನು ಈವತ್ತು….ಹೀಗೆ….ಇಷ್ಟೊಂದು ಆಕಸ್ಮಿಕವಾಗಿ ನೋಡುತ್ತೇನೆಂದು ಅಶೋಕ ಎಂದೂ ಅಂದುಕೊಂಡಿರಲಿಲ್ಲ. ಏನೂ ಮಾತಾಡಲು ತೋಚದೆ ತನ್ನ ಕೈಚಾಚಿ ಅವಳ ಅಂಗೈ ಹಿಡಿದು ಮೆಲ್ಲಗೆ ಅಮುಕಿದ. ತಾನು […]

ಸೈರನ್

ಸಾಯಂಕಾಲ ಐದೂವರೆ ಹೊತ್ತಿಗೆ ಸೋಂಪಗೌಡರ ಮನೆಯ ಸೈರನ್ ಕಿವಿ ತೂತಾಗುವಂತೆ ‘ಕೊಂಯ್ಯೋ…’ಎಂದು ಕೂಗತೊಡಗಿದಾಗ ಕಾಡೆಮನೆ ಲಿಂಗಪ್ಪಣ್ಣನ ಮನಸ್ಸು ವ್ಯಗ್ರವಾಗಿ ಸಿಟ್ಟು ಏರುತ್ತಾ ಏರುತ್ತಾ ತಾರಕಕ್ಕೆ ಮುಟ್ಟಿ ಮುಖ ಕೆಂಪೇರಿ ಗಂಟಲುಬ್ಬಿತು! ಸೈರನ್ ಕೂಗಿನಿಂದ ಸ್ಪೂರ್ತಿ […]

ದಾಳಿ

ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. […]

ಖೋಜರಾಜ

“ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” -ಗೀತೆ ರಾತ್ರಿಯ ಕತ್ತಲಿನಲ್ಲಿ ಯಾರ ಕಣ್ಣಿಗೂ ಬೀಳದೆ ಎಲ್ಲೆಲ್ಲಿಂದಲೂ ಹೊಲಸು ಕೊಚ್ಚೆ ಗುಂಡಿಗಳಿಂದ ಗೊಟರು ಹಾಕುವ ಗೊಂಟರು ಕಪ್ಪೆಗಳ ಶ್ವಾಸಕೋಶ ಎಂಥದಿರಬೇಕೆಂದು ಯೋಚಿಸುತ್ತ ನಿದ್ದೆ ಬಾರದ ರಾಜಣ್ಣ […]

ಹರಿಕಾಂತರರ ಸಣ್ಣಿ

ಮಹಾಬಲೇಶ್ವರ ದೇವಸ್ಥಾನದ ಹಿಂಬದಿಯಲ್ಲೇ ಸಮುದ್ರ, ಸಮುದ್ರಕ್ಕೂ ದೇವಸ್ಥಾನಕ್ಕೂ ನಡುವೆ ಮರಳ ದಂಡೆ. ಊರಿನಿಂದ ಸಮುದ್ರಕ್ಕೆ ಹೋಗುವ ಕಾಲುದಾರಿ; ದೇವಸ್ಥಾನದ ಮಗ್ಗುಲಲ್ಲೇ ಇರುವುದರಿಂದ, ಈ ದಾರಿಯಲ್ಲಿ ಓಡಿಯಾಡುವ ಜನ ಬಹಳ. ದೇವಸ್ಥಾನಕ್ಕೆ ಬರುವ ಭಕ್ತರಂತೂ ಸಮುದ್ರ […]

ಡಾ|| ವಿನಾಯಕ ಜೋಷಿಯ ಮುನ್ನೂರ ಅರವತ್ತೈದನೆ ಒಂದು ವರ್ಷ

ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […]

ಹಿತ್ತಲಮನಿ ಕಾಶೀಂಸಾಬ

ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. […]