ಈಡಾಪಿಂಗಳ ಸುಷುಮ್ನನಾಳ ಮಧ್ಯದ ಕೂಗು

ನನಗೆ ದಿಕ್ಕೇ ತೋಚದಾಯಿತು.

ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್‍ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ ಮಾತುಗಳನ್ನು ಕೇಳಲು ಅಲ್ಲಿ ಯಾರೂ ತಯಾರಿರಲಿಲ್ಲ. ಅವರೆಲ್ಲರೂ ತಮ್ಮದೇ ಆದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಅದಕ್ಕೆ ಪ್ರತಿಕ್ರಿಯಿಸಲಾಗದೆ ಮನಸ್ಸು ಬಗ್ಗಡವಾಗಿರಬಹುದು. ನಿರ್ವಾತ ಪ್ರದೇಶವನ್ನು ವಾತಾವರಣ ತನ್ನ ಹತ್ತು ದಿಕ್ಕುಗಳಿಮದ ಅಮುಕುತ್ತಿರುವ ರೀತಿಯಲ್ಲಿ ಕುಬ್ಜವಾಗಿರುವುದು ಹೃದಯ. ಅದಕ್ಕೆ ಸಾಂತ್ವನ ಹೇಳುವ ಚೈತನ್ಯ ಉಡುಗಿ ಹೋಗಿತ್ತು. ಕೂತಲ್ಲಿಂದಲೇ ನೀರು ತಂದು ಕೊಡಬಲ್ಲವರಿಗಾಗಿ ಕಣ್ಣಾಡಿಸಿದೆ. ಕಣ್ಣಿಗೆ ಅಡ್ಡಗೋಡೆ ಇಟ್ಟಂತೆ ಸ್ಥೂಲ ಕಾಯದ ವ್ಯಕ್ತಿ ಹಾಯುತ್ತಿರುವನು. ಆತನೇ ಬೆಳಿಗ್ಗೆ ಬಂದು ನನ್ನನ್ನು ಎಚ್ಚರಿಸಿದ್ದು. ಬಾಗಿಲು ಮುರಿದ ರೀತಿಯಲ್ಲಿ ಧಡ ಧಡ ಬಡಿದಿದ್ದ…. ಸಮಸ್ತ ಓಣಿಗೆ ಕೇಳಿಸುವಂತೆ ಕೂಗಿದ್ದ. ರಜೆ ದಿನವಾಗಿದ್ದರಿಂದ ಮೇಲೇಳಬಾರದೆಂದು ನಿದ್ದೆ ಹೋಗಿದ್ದೆ; ಎದ್ದು ಬಾಗಿಲು ತೆರೆಯುವುದು ಅನಿವಾರ್ಯವಾಗಿತ್ತು. ಅಸ್ತವ್ಯಸ್ತ ಉಡುಗೆಯಲ್ಲಿದ್ದ ನನ್ನ ಮುಂಗೈ ಹಿಡಿದು ಎಳೆದೊಯ್ದಿದ್ದ. ಸರವೊತ್ತಿನಲ್ಲಿ ಸ್ವಪ್ನಸ್ಖಲನಕ್ಕೀಡಾಗಿ ಒಳಚಡ್ಡಿ ಕಟುಗಿಟ್ಟು ಹೆಜ್ಜೆ ಹೆಜ್ಜೆಗೆ ಇರುಸು ಮುರುಸಾಗುತ್ತಿತ್ತು. ಹರೆರೆಗೆಗೆಂದು ತವರಿಗೆ ಹೋಗಿದ್ದ ಹೆಂಡತಿ ಹೆಜ್ಜೆಹೆಜ್ಜೆಗೆ ನೆನಪಾದಳು. ಗುಡಿಗೆ ಸಮೀಪಿಸಿದ ನಂತರವೇ ನಾರಾಣಿಯ ಕೊಲೆಯಾಗಿರುವ ವಿಷಯ ತಿಳಿದು ದೇಹದ ಶಕ್ತಿ ಉಡುಗಿತು. ನಾರಾಣಿಯ ಹೆಣ ದೇವಾಲಯದ ಅಂಗಳದಲ್ಲಿ ಉದ್ದೋಕೆ ಬಿದ್ದಿರುವುದು ಕಂಡಿತು. ಕಪ್ಪಗೆ ಊದಿಕೊಮಡಿರುವುದು ಅದರ ಮುಖ….. ನಿಸ್ಸಂದೇಹವಾಗಿ ನಾರಾಣಿಯ ಕೊಲೆ ಆಗಿದೆ. ಭಯದಿಂದ ಕಂಪಿಸಿದ ದೇಹದ ಮೂಲೆಯಲ್ಲಿ ಸಂತೋಷದ ಎಳೆ ಮತ್ತಷ್ಟು ಭಯಾನಕವಾಗಿ ಕಾಣಿಸಿಕೊಂಡಿತು.

ಗುಂಪಿನಲ್ಲಿ ಗೌಡ ಕುಲಕರ್ಣಿ ಕಾಣಿಸಿಕೊಂಡಿರುವರು. ತಳವಾರರೆಂದರೆ ತಳವಾರರು! ಕುರಿಯೊಂದನ್ನು ಕಾಯಲು ನಾಲ್ಕು ತೋಳಗಳು. ಮೊನ್ನೆ ನಡೆದ ಘಟನೆಯನ್ನು ಅನುಲಕ್ಷಿಸಿ ಕೊಲೆಯ ಪಟ್ಟಿ ನನ್ನ ತಲೆಗೆ ಕಟ್ಟಿರುವುದು ಅಂಗೈಯಷ್ಟೆ ಸ್ಪಷ್ಟ. ನಾನು ಆವತ್ತು ತಾಳ್ಮೆಯನ್ನು ಸಂದರ್ಭಕ್ಕೆ ಬಲಿಕೊಡಬಾರದಿತ್ತು; ಆಗುವುದು ಆಗಿ ಹೋಗಿದೆ! ಉಳಿದಿರುವುದೆಂದರೆ ಈ ಅಪವಾದಿಂದ ಮುಕ್ತನಾಗುವ ಮಾರ್ಗ ಹುಡುಕುವುದು. ಮಾರ್ಗ ಸರಳವಾಗಿಲ್ಲ. ಅಲ್ಲದೆ ಇದು ಮಾತೃರಾಜ್ಯವಲ್ಲ. ಹತ್ತಿರದಿಂದ ಬಲ್ಲವರೊಬ್ಬರೂ ಈ ನಾಲ್ಕು ಸಾವಿರ ಮನೆಗಳಲ್ಲಿಲ್ಲ. ನಾನಿದ್ದ ಎರಡು ವರ್ಷದವಧಿಯಲ್ಲಿ ಊರೊಳಗೆ ಅಡ್ಡಾಡಿ ಕಾಲಕ್ಷೇಪ ಮಾಡಿರಲಿಲ್ಲ. ಆದ್ದರಿಂದ ಜನ ನನಗೆ ಹತ್ತಿರ ಹೇಗಾದಾರು! ಊರ ರಾಜಕೀಯದ ಬಗ್ಗೆ ಮಾತಾಡಲು ನಾನು ಕುಲಕರ್ಣಿ ರಾಮಣ್ಣನ ಹಿಂದೆ ತಿರುಗಲಿಲ್ಲ. ವೀರನಗೌಡ ನಡೆಸುತ್ತಿರುವ ಕ್ಲಬ್ಬಿನಲ್ಲಿ ಕೂತು ಇಸ್ಪೀಟು ಆಡಲಿಲ್ಲ. ಗ್ರಾಮದ ಕೆಲವು ಹಿರಿಯರೂ ಅಷ್ಟೆ; ನನ್ನನ್ನು ಹೆಣದೊಂದಿಗೆ ಸಮೀಕರಿಸಿ ಮಾತಾಡತೊಡಗಿದರು. ಗಾಯತ್ರಿ ಮಂತ್ರವನ್ನು ನಡು ನೀರಿನಲ್ಲಿ ಕೈಬಿಟ್ಟು ಬಂದ ನಮ್ಮ ಹೆಡ್‌ಮಾಸ್ಟರ್‍ ಲಕ್ಷ್ಮೀ ನರಸಯ್ಯನನ್ನು ಗೌಡ ಕುಲಕರ್ಣಿ ಆದರದಿಂದ ಬರಮಾಡಿಕೊಂಡರು. ಮೊದಲೇ ನಮ್ಮ ಹೆಚ್ಚೆಮ್ ಅಂಗಿಯೊಳಗೆ ಹಲ್ಲಿ ತೂರಿದಂತೆ ಶತಪದಿಯಂತೆ ವರ್ತಿಸುವ ಗೊಂದಲ ಮನಸ್ಸಿನಾತ…. ಈತನನ್ನು ನೋಡಿ ಎರಡು ವರ್ಷದ ಹಿಂದೆಯೇ ಮುಂದೆ೩ ಹೀಗೆ ನಡೆಯಬಹುದೆಂದುಕೊಂಡಿದ್ದೆನೆಂದು ಬೀಡಿ ಹಚ್ಚಿಕೊಂಡ. ತಮ್ಮ ಶಿಕ್ಷಣ ಸಂಸ್ಥೆಗೆ ಅಂತೂ ಕೆಟ್ಟ ಹೆಸರು ತಂದೆಯಲ್ಲೋ ಎಂದು ಶಪಿಸಿದ. ಪೊಲೀಸರು ಬಂದು ಒಳಗೆ ಹಾಕಿ ಒದೆಯುತ್ತರೆಂದು ಜನರು ಮೆಚ್ಚುವಂತೆ ಮಾತಾಡುವಾಗ ನನ್ನ ಸಹೋದ್ಯೋಗಿ ಶೀನಪ್ಪ ಬಂದದ್ದು. ಬಂದಕೂಡಲೆ ಸರಕಾರಿ ನೌಕರರಾದ ನಾವೆಲ್ಲಾ ಒಂದೇ; ನೀವು ಊರವರ ಪರ ವಹಿಸಿ ಮಾತಾಡುವಿರಲ್ಲಾ ಎಂದು ಹೆಚ್ಚಮ್‌ನನ್ನು ತರಾಟೆಗೆ ತೆಗೆದುಕೊಂಡ. ಅವರಿಬ್ಬರು ಪರಸ್ಪರ ವಾದಿಸಿದರು. ಸೀನಿಯಾರಿಟಿ ಪ್ರಕಾರ ನೊಡಿದರೆ ಶೀನಪ್ಪ ನಮ್ಮ ಹೈಸ್ಕೂಲು ಹೆಚ್ಚೆಮ್ಮಾಗಬೇಕಿತ್ತು. ಊರಿನ ರಾಜಕೀಯದಿಮದಾಗಿ ಅದು ಅವನ ಕೈತಪ್ಪಿತ್ತು. ಅವರಿವರ ಮಧ್ಯೆ ಏನೇ ಇರಲಿ ಒಬ್ಬರಾದರೂ ನನ್ನ ಪರವಾಗಿ ಮಾತಾಡುವವರಿರುವರಲ್ಲ. ಎಂಬುದಷ್ಟೇ ನನಗೆ ಸಮಾಧಾನವಾಗಿತ್ತು. ಶೀನಪ್ಪ ಇರದಿದ್ದರೆ ಅಥವಾ ಇದ್ದೂ ಆಸ್ಥೆ ವಹಿಸಿ ಬಾರದಿದ್ದಲ್ಲಿ ನಾನು ಕೂತಲ್ಲಿಯೇ ನಾಮಾವಶೇಷವಾಗುತ೫ತಿದ್ದೆನೇನೋ? ನಾನು ಬರೀ ಬನಿಯನ್; ಲುಂಗಿ ಮೇಲಿರುವುದು ಕಂಡು ಶೀನಪ್ಪ ತುಂಬ ಕನಿಕರ ಪಟ್ಟ. ನೀವು ಕೊಲೆ ಮಾಡಿರಬಹುದು ಅಥವಾ ಮಾಡದಿರಬಹುದೆಂದು ಪಲ್ಲವಿ ಶುರು ಮಾಡಿದ. ಸ್ಥೂಲಕಾಯದ ವ್ಯಕ್ತಿಯಿಂದ ಬೀಗದ ಚಾವಿ ಪಡೆದು ಮನೆಗೆ ಹೋಗಿ ತೆಳು ಗುಲಾಬಿ ಬಣ್ಣದ ಶರ್ಟ್ ತಂದ. ಮುಖಮಾರ್ಜನ ಮಾಡಿದ್ಡೂ ಆತನ ಸಹಾಯದಿಮದಲೇ. ಕೇವಲ ತಾಸಿನೊಳಗಾಗಿ ಮಣ ಪ್ರಮಾಣದ ಋಣಭಾರ ಹೇರಿದ. ಹೆಣದ ಸರಹದ್ದಿನಲ್ಲಿ ನನಗೆ ಆತ ತರಿಸಿದ ತಿಂಡಿ ತಿನ್ನಲಾಗಲಿಲ್ಲ. ಬರೀ ಚಹ ಸೇವಿಸಿದೆ. ನಂತರ ಹೊಟ್ಟೆ ತೊಳಸಲಾರಂಭಿಸಿತು. ಗಂಟಲವರೆಗೆ ನುಗ್ಗಿ ಬಂದು ಎಷ್ಟೋ ಸಾರಿ ವಾಪಸು ಹೋಯಿತು ಅದು. ಇನ್ನೇನು ವಾಂತಿ ಮಾಡಿ ಬಿಡುತ್ತೇನೆನ್ನಿಸಿ ಕೆಲವೊಮ್ಮೆ ತಲೆಯನ್ನು ಬಿಗಿ ಹಿಡಿದೆ. ತಲೆಯೊಳಗೆ ಸುಂಟರಗಾಳಿಯೇ ಎದ್ದಿತ್ತು. ಸುಂಟರಗಾಳಿಯ ತುಂಬ ನೆನಪುಗಳು; ಎಲ್ಲವೂ ಚಲ್ಲಾ ಪಿಲ್ಲಿ, ವೆಟರ್‍ನರಿ ಕಾಂಪೌಂಸ್ರು ಮಲ್ಲನ್ನ ಮತ್ತು ಗ್ರಾಮೀಣ ಬ್ಯಾಂಕಿನ ಅರವಿಂದರ ಜೊತೆ ತೇರುಗಡ್ಡೆಯ ಬಳಿ ನಿಮತು ಶೀನಪ್ಪ ಮಾತಾಡುತ್ತಿರುವುದರ ಕಡೆ ನನ್ನ ಗಮನ ಅಷ್ಟಾಗಿ ಇರಲಿಲ್ಲ. ನನಗಿದ್ದ ಭಯವೆಂದರೆ ನಾರಾಣಿಯ ಹೆಣದ್ದು, ಕೊಲೆ ಎರಡನೆ ಸಿನಿಮಾ ಬಿಟ್ಟ ನಂತರ ನಡೆದಿರಬೇಕೆಂದು ಕೆಲವರು ಊಹಿಸಿದ್ದರು ಆಗಲೆ. ಕೊಲೆ ಮಾಡಿದವರು ಹೆಣವನ್ನು ದೇವಸ್ಥಾನದ ಮುಂದೆಯೇ ಬಿಟ್ಟು ಹೋಗಿರುವುದರಿಂದ ಇಷ್ಟೆಲ್ಲ ತೊಂದರೆ. ಹೀಗೆ ನಡೆಯುವುದೆಂದು ಮೊದಲೆ ಗೊತ್ತಿದ್ದರೆ ಊರಿಗೆ ಹೋಗಿಬಿಡಬಹುದಿತ್ತು! ಅಥವಾ ನೂರಿನ್ನೂರು ಕೊಟ್ಟು ನಾರಾಣಿಯನ್ನು ದುರ ಸಾಗು ಹಾಕಬಹುದಿತ್ತು! ಆ ಪೈಕಿಯಲ್ಲ ನಾರಾಣಿ. ಅಷ್ಟು ಪರಿಚಯ; ಇಂಥೋನ್ನ ಪರಿಚಯ ಆದ ಬಗೆ ನೆನೆಸಿಕೊಮಡರೆ ಈಗಲೂ ಮೈ ಜುಂ ಎನ್ನುವುದು; ಅಷ್ಟೇ ವಿಚಿತ್ರವೆನಿಸುವುದು. ನಾನು ನಾರಾಣಿಯನ್ನು ಪ್ರಪ್ರಥಮವಾಗಿ ನೋಡಿದ್ದು ಸುಮಾರು ಆರು ವರ್ಷ ಹಿಂದೆ. ಆಗ ನಾನು ಪೆದ್ದು ಕಡಬೂರಿನಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದೆ. ಪೆದ್ದಕಡಬೂರು ಎಂದರೆ ಅಂಡಮಾನ್ ಎಂತಲೇ ಕರೆಯುವುದು. ಆದವಾನಿ ಮತ್ತು ಪತ್ತಿಕೊಂಡದ ನಡುವೆ ಒಂಭತ್ತನೆ ಮೈಲಿಕಲ್ಲಿಗೆ ದಕ್ಷಿಣ ದಿಕ್ಕಿನಲ್ಲಿ ಮೂರುವರೆ ಮೈಲಿ ದುರದಲ್ಲಿರುವ ಪುಟ್ಟ ಗ್ರಮ. ಮನೆಗಳ ಸಂಖ್ಯೆ ಮುನ್ನೂರು ಚಿಲ್ಲರೆ; ಜನಸಂಖ್ಯೆ-ಸುಮಾರು ಹನ್ನೆರಡು ನುರು ಚಿಲ್ಲರೆ. ಆ ಉರಿನ ಸರಹದ್ದಿನಲ್ಲಿ ಕೊಲೆ ಸುಲಿಗೆಗಳು ಸರ್ವೇಸಾಮಾನ್ಯ. ನಮಗೆ ಏನಾದರೂ ಬೇಕಿದ್ದರೆ ಆರು ಮೈಲಿ ದೂರದ ಹೊಳಗುಂದಿಗೆ ನಡೆದೇ ಹೋಗಬೇಕಿತ್ತು. ಅದು ಆಷಾಡ ಮಾಸ, ಯಾವ ಹೊಲದಲ್ಲೂ ನರಮಾನವರ ಸುಳಿವಿರುವುದಿಲ್ಲ. ಒಂದು ಮಧ್ಯಾಹ್ನ ನಡೆದು ಹೊಳಗುಂದಿಯ ಕಡೆ ಹೆಜ್ಜೆ ಹಾಕುತ್ತಿದ್ದೆ. ನೆತ್ತಿಯನ್ನು ಚುಚುವ ಸೂರ್ಯನ ಬಿಸಿಲು. ನನಗೆ ಜೊಗೆಯಾಗಿ ಯಾರೂ ಇರಲಿಲ್ಲ. ಕಡದಮ್ಮನಹಳ್ಳ ದಾಟಿ ದಿಬ್ಬದ ಮೇಲೆ ಬಂದಿದ್ದೆ. ಕಡದಮ್ಮ ಎಂಬ ಮಹಿಳೆ ಎಂದೋ ಆತ್ಮಹತ್ಯೆ ಮಾಡಿಕೊಂಡಳೆಂಬ ಕಾರಣಕ್ಕೆ ಅದು ಕಡದಮ್ಮನ ಹಳ್ಳವಾಗಿತ್ತು. ಎರಡು ಫರ್ಲಾಂಗ್ ದುರದಲ್ಲಿ ಹುಲುಲಿ ಹಳ್ಳ. ಆ ಹಳ್ಳದಲ್ಲಿ ಇಕ್ಕೆಲಗಳಲ್ಲಿ ಆಳೆತ್ತರದ ರಿಜರಿಮುಳ್ಳಿನ ಪೊದೆಗಳಿದ್ದವು. ಹುಲುಲಿ ಹಳ್ಳ ಪ್ರವೇಶಿಸಿದ ಕೂಡಲೆ ಒಂದು ಮಾನವಾಕೃತಿ ಗೋಚರಿಸಿತು; ಅದೂ ಧುತ್ತನೆ, ಆರಡಿ ಎತ್ತರದ ಮನುಷ್ಯ ಆತನಾಗಿದ್ದ. ಕುರುಚಲು ಗಡ್ಡ; ಗೆಬರು ಮೀಸೆ, ಕೆಂಡವಾಗಿದ್ದ ಕಣ್ಣುಗಳಿಂದಾಗಿ ಆತನ ಮುಖ ವ್ಯಗ್ರವಾಗಿ ಕಾಣುತ್ತಿತ್ತು. ಹರಕು ಕಂಬಳಿಯೊಳಗೆ ತನ್ನ ಮೈಮುಚ್ಚಿಕೊಂಡಿದ್ದ. ಕೈಯಲ್ಲಿ ಕಟ್ಟಿಗೆಯ ತುಂಡು ಹಿಡಿದುಕೊಮಡಿದ್ದ. ಹಾದಿ ಬಡಿಯುವ ಮನುಷ್ಯನಂದು ಕೂಡಲೇ ಅರ್ಥವಾಯಿತು. ಅವನ್ನನು ಎದುರಿಸುವಂಥ ತಕ್ಕ ಮೈಕಟ್ಟು ನನಗೂ ಇತ್ತು. ಹೆದರಿಕೆಯಾದರೂ ಸಹಿಸಿಕೊಂಡೆ. ಮೊದಲಿಗೆ ಬೀಡಿ, ಕಡ್ಡಿ ಕೇಳಿದ. ಸೇದುವುದಿಲ್ಲೆಂದು ಉತ್ತರಿಸಿದೆ. ಅನತಿ ದೂರದಲ್ಲಿ ಆತ ನನ್ನೊಂದಿಗೆ ಹೆಜ್ಜೆ ಹಾಕತೊಡಗಿದ್ದ. ಪುಟ ೨೯ ೨ನೇ ಸಾಲು. ನನ್ನ ಮೈತುಂಬ ಕಣ್ಣಿದ್ದವು. ಮೌನವಾಗಿ ನಡೆಯುವುದು ಅಸಹನೀಯವೆನ್ನಿಸಿತು. ಯಾವೂರು ಅಂತ ಮೌನ ಮುರಿದೆ. ದುರುಗುಟ್ಟಿ ನೋಡಿದ. ಕೂಡಲೇ ಉತ್ತರ ಕೊಡಲಿಲ್ಲ. ಬನ್ನಿ ಮಂಕಾಳಮ್ಮನ ಕಟ್ಟೆ ಬಂದಿತು, ಅದಕ್ಕೆ ನಮಸ್ಕರಿಸಿದೆ. ನಂತರ ಅವನು ಮಾತು ಆಡತೊಡಗಿದ. ವಾರ-ಹತ್ತು ದಿನಗಳ ಹಿಂದೆ ದೇವಿ ಕ್ಯಾಂಪ್‌ನಲ್ಲಿ ನಡೆದ ಆಕೆಳ್ಳ ವೆಂಕಟೇಶ್ವರರಾವ್ ಕೊಲೆ ಕಡೆಗೆ ನನ್ನ ಗಮನ ಸೆಳೆದ. ಆ ಕೊಲೆ ಮಾಡಿದ ವ್ಯಕ್ತಿ ತಾನೆಂದು ಬಾಳೆಹಣ್ಣು ಸುಲಿದಂತೆ ನುಡಿದ. ಸಾಕ್ಷಿಯಾಗಿ ಬಟ್ಟೆ ಮೇಲಿದ್ದ ರಕ್ತದ ಕಲೆಗಳನ್ನು ತೋರಿಸಿದ. ನಾನು ನಂಬಲಿಲ್ಲೆಂದು ಗ್ರಹಿಸಿ ಟೊಂಕದ ಸಂಧಿಯಿಂದ ಬಾಕು ತೆಗೆದು ಘಳಪಿಸಿದ. ಆತನ ಮಾತಿಗಾಗಲಿ; ತೋರಿಸಿದ ಬಾಕಿಗಾಗಲೀ ನಾನು ಹೆದರಲಿಲ್ಲ (ಹೆದರಬೇಕಿತ್ತು ಅಂತ ಅನಂತರ ಅನ್ನಿಸಿತು). ಅದಕ್ಕೆ ಆತನಿಗೆ ಆಶ್ಚರ್ಯವಾಗಿರಬೇಕು. ತಾನು ಮಾಡಿರುವ ನಾಲ್ಕು ಕೊಲೆಗಳ ಬಗ್ಗೆ ಸವಿವರವಾಗಿ ಹೇಳಿದ, ಸಹೃದಯದಿಂದ ಕೇಳುವವರಿಗಾಗಿ ಆವತ್ತಿನವರೆಗೆ ತಡಕಾಡುತ್ತಿದ್ದವನಂತೆ. ಆತ ಬಾಡಿಗೆ ಕೊಲೆಗಾರನೆಂದು ನನಗೆ ಹೊಳೆಯಿತು. ಒಂದೊಂದಾಗಿ ಹೇಳುತ್ತ ಆತ ಉದ್ವಿಗ್ನಗೊಂಡ, ಸಿಟಟಿನಿಮದ ಮುಖ ಬಿಗಿದ. ಆಗಾಗ್ಗೆ ದುಂಖದಿಂದ ಕಂಪಿಸಿದ. ತನ್ನ ಹೆಂಡಿರು ಮಕ್ಕಳ ಬಗ್ಗೆ ಹೇಳುವಾಗ ನನ್ನೆರಡು ಕೈಗಳನ್ನು ಬಲವಾಗಿ ಹಿಡಿದುಕೊಮಡ. ನನ್ನ ಮುಂಗೈಗೆ ಹಣೆ ಹಚ್ಚಿ ಅಲತೊಡಗಿದ; ಚಿಕ್ಕ ಮಗುವಿನಂತೆ. ನನ್ನ ಮುಂಗೈ ಆತನ ಕಣ್ಣೀರಿನಿಂದ ತೇವಗೊಂಡಿತ್ತು. ಆ ಅಶ್ರುತಾರ್ಪಣಕ್ಕೆ ನಾನು ಕರಗಿಹೋದೆ. ಆತ ಅಂದರೆ ನಾರಾಣಿ ತನ್ನ ಬಗ್ಗೆ ಸುಮಾರು ದೂರ ಹೇಳಿದ. ನಾನೂ ಅಷ್ಟೆ, ನಾನೂ ಹೇಳಿಕೊಂಡೆ. ಹೊಳಗುಂದಿ ಸಮೀಪಿಸಿದ್ದೆವು. ಸ್ವಲ್ಪ ದೂರ ಕ್ರಮಿಸಿದರೆ ಹಾದಿ ಪಕ್ಕ ಪೊಲೀಸ್ ಠಾಣೆ ಬರುತ್ತಿತ್ತು. ನನ್ನಿಂದ ಆತ ಅಗಲಿಹೋಗುವುದು ಒಳ್ಳೆಯದೆನಿಸಿತು. ಎಲ್ಲಿಯಾದರೂ ಆಹಾರ ಕೊರಕಿಸಿಕೊಂಡ ತಿನ್ನಲು ಹೇಳಿ ಹತ್ತು ರೂಪಾಯಿ ಕೊಡಲು ಹೋದೆ. ಎಷ್ಟು ಒತ್ತಾಯಿಸಿದರೂ ಅದನ್ನು ಪಡೆಯಲು ನಾರಾಣಿ ನಿರಾಕರಿಸಿದ ಮತ್ತು ಎಡಕ್ಕಿದ್ದ ಕಾಲು ಹಾದಿಗುಂಟ ಕೆರೆ ಹಾದಿಗುಂಟ ಕೆರೆ ಅಂಗಳದ ಕಡೆ ನಡೆದು ಮರೆಯಾಗಿ ಹೋದ.

ಅವನು ನನಗೆ ಬೆನ್ನು ಮಾಡಿ ನಡೆದ ಶೈಲಿ; ಅವನು ಕ್ರಮಿಸಿದ ದಿಕ್ಕು; ನನಗಿನ್ನೂ ಚೆನ್ನಾಗಿ ನೆನಪಿರುವುದು. ಪೊಲೀಸರಿಗೆ ಬೇಕಾಗಿರುವ ಒಬ್ಬ ಕ್ರಿಮಿನಲ್ ಅಪರಾಧಿಯ ಜೊತೆ ಒಂದೂವರೆ ತಾನು ಕಳೆದದ್ದು ಅವಿಸ್ಮರಣೀಯ ಅಂತ ಭಾವಿಸಿದ್ದೆ. ಅವನ ಕಲ್ಲೆದೆಯನ್ನು ಸೀಳಿ ಹರಿದ ಕಣ್ಣೀರು ನನ್ನನ್ನು ಪರವಶನನ್ನಾಗಿ ಮಾಡಿತ್ತು. ಅಲ್ಲದೆ ಆತ್ಮೀಯನೊಬ್ಬನಿಗಾಗಿ ತಡಕಾಡುತ್ತಿದ್ದೆ. ನನಗಿದ್ದ ನೂರಾರು ಗೆಳೆಯರಲ್ಲಿ ಯಾರಿಗೂ ಸಹೃದಯತೆ ಕೇಳುವ; ಅಥವಾ ಹೇಳುವ ಆತ್ಮೀಯ ಗುಣ ಇರಲಿಲ್ಲ. ಹೆಂಡತಿಯಲ್ಲೂ ಅಷ್ಟೇ; ಹುಟ್ಟಿದಂದಿನಿಂದ ತಂದೆ-ತಾಯಿಯರ ಒಡಹುಟ್ಟಿದವರ ಪ್ರೀತಿ ಮಮತೆಯಿಂದ ವಂಚಿತನಾಗಿ ಬೆಳೆದ ನಾನು ನಾರಾಣಿಯಲ್ಲಿ ಅಂಥ ಆತ್ಮೀಯ ಸೆಲೆ ಗುರುತಿಸಿದಲ್ಲಿ ತಪ್ಪೇನು?

ನನ್ನ ಕಣ್ಣುಗಳು ಹನಿಗೂಡಿದವು. ಒರೆಸಿಕೊಂಡೆ. ಇಲ್ಲ….ಇಲ್ಲ….ನಾನು ಹಾಗೆ ಪರಿಭಾವಿಸಿದ್ದು ತಪ್ಪು…. ಮರುಭೂಮಿಯ ಮೇಲೆ ನದಿ ಹರೆಇದು ಕಣ್ಮರೆಯಾದಂತಾಗಿತ್ತು ನನ್ನ ಹೃದಯ. ಕೊನೆ ಕ್ಷಣದಲ್ಲಿ ಕೈಕೊಟ್ಟ ಆತ್ಮೀಯತೆ ಎಷ್ಟನೆಯದೋ? ಹೆಣದ ಕಡೆ ನೋಡಿ ನಿಟ್ಟುಸಿರಿಟ್ಟೆ.

ಏನೋ ನಿರ್ಧರಿಸಿರುವವನಂತೆ ಶೀನಪ್ಪ ಬಂದ. ಹಣ ಎಷ್ಟಿದೆ ಎಂದು ಕೇಳಿದ. ಅದು ಇರಲಿಲ್ಲ. ಯಾಕಂತ ಕೇಳಿದೆ. ನಿಮ್ಮೂರ್‍ಗೆ; ನಿಮ್ಮಿಸ್ಸೆಸ್ಗೂ ಟೆಲಿಗ್ರಾಂ ಮಾಡಿ ಸುದ್ದಿ ಮುಟ್ಟಿಸ್ತೀನಿ ಅಂದ. ಈ ಅವಸ್ಥೆಯಲ್ಲಿ ನಾನು ಯಾರಿಗೂ ಕಾಣಿಸಿಕೊಳ್ಳುವುದು ಇಷ್ಟವಿರಲಿಲ್ಲ. ನನ್ನವರು ತನ್ನವರು ಗ್ರಾಮಸ್ಥರಿಗಿಂತ ಭಿನ್ನರೇನಲ್ಲ. ಅವರ ಪೈಕಿ ಯಾರೊಬ್ಬರೂ ನನ್ನನ್ನು ಅರ್ಥಮಾಡಿಕೊಂಡ ಸಂದರ್ಭ ನನಗೆ ನೆನಪಾಗುವುದು ಸಾಧ್ಯವಿಲ್ಲ. ಆದ್ದರಿಂದ ನನಗ ಈ ವಿಷಯದಲ್ಲಿ ಗಲ್ಲಾದರೂ ಚಿಂತೆ ಇಲ್ಲ… ಅವರಾರೂ ಬರುವುದು ಬೇಡ ಅಂತ ಖಂಡಿತವಾಗಿ ಹೇಳಿದೆ. “ನಿಮ್ಮ ಮಿಸೆಸ್ಸಾದ್ರೂ ಬರೋದು ಬೇಡ್ವಾ” ಎಂದು ಶೀನಪ್ಪ ಪ್ರಶ್ನಿಸಿದ. ನನ್ನ ಹೆಂಡತಿಯ ಸೂಕ್ಷ್ಮ ಹೃದಯ ಈ ಪ್ರಕರಣದಿಂದಾಗಿ ಹೋಲಾಗಬಹುದು. ಆಕೆಯೂ ಬರುವುದು ಬೇಡ ಅಂಎ. “ಏಯ್ ನಿನ್ ಕುಟಾಗೇನು’ ಒಬ್ನೇ ಜೈಲ್ನಲ್ಲಿ ಕೊಳೀಬೇಕಂತ ಮಾಡೀ ಏನು…. ನಿನ್ ಮರ್ಯಾದೆ ಹೋದ್ರೂ ಒಂದೆ ನಮ್ ಮರ್ಯಾದೆ ಹೋದ್ರೂ ಒಂದೆ” ಎಂದು ಶೀನಪ್ಪ ಮಲ್ಲನನ್ನು, ಅವರಿಂದರನ್ನು ಹಿಂದಿಟ್ಟುಕೊಂಡು ಅಂಚೆ ಕಛೇರಿಗೆ ಹೋದ. ಅವನತ್ತ ಕಲ್ಲು ತೂರಬೇಕೆನ್ನಿಸಿತು. ಅಷ್ಟೊತ್ತಿಗೆ ಹೆಚ್ಚೆಮ್ ಗೌಡ ಕುಲಕರ್ಣಿಯವರ ಜೊತೆ ಸಮಾಲೋಚಿಸುತ್ತಿದ್ದ. ಅವರ ಮಾತಿನ ವರಸೆ ಗಮನಿಸಿ ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಪೊಲೀಸರು ಬರಬಹುದೆಂದು ಊಹಿಸಿದೆ. ನಾನು ಮೃತ್ಯುವಿಗಿಂತ ಹೆದರುವುದು ಪೊಲೀಸರಿಗೆ. ಪೊಲೀಸರ ಕ್ರೌರ್ಯದ ಬಗ್ಗೆ ಪತ್ರಿಕೆಗಳಲ್ಲಿ ಓದಿ ತಿಳಿದಿರುವುದೊಂದೇ ಅಲ್ಲ; ವಕೀಲ ಗೆಳೆಯ ಪಂಡತಾರಾಧ್ಯ ಪೊಲೀಸರ ಬಗ್ಗೆ ದೃಷ್ಟಾಂತ ಸಹಿತ ವಿವರಿಸಿರುವನು. ಅದೂ ಸಾಲದೆಂಬಂತೆ ನಾರಾಣಿಯ ಜೈಲಿನ ಅನುಭವಗಳೇ ಸಾಕಷ್ಟಿರುವವಲ್ಲ.

ಅವತ್ತು ಮುಂಗೈ ತೇವ ಮಾಡಿಹೋದ ನಾರಾಣಿಯನ್ನು ಮರೆಯಲಿಕ್ಕೆ ನನ್ನಿಂದ ಸಾಧ್ಯವಾಗಲೇ ಇರಲಿಲ್ಲ. ನಂತರ ಅವನನ್ನು ಒಂದೆರಡು ಬಾರಿ ಆದೋನಿಯಲ್ಲಿ ನೋಡಿದ್ದುಂಟು. ಎಲ್ಲ ರಾದ್ಧಾಂತಗಳಿಂದ ಮುಕ್ತನಾಗಿರುವವನಂತೆ ಯಾವ ಗೌಡರಿಗೂ ಕಡಿಮೆ ಇಲ್ಲದವನಂತೆ ಗೋಚರಿಸಿದ್ದ. ಆನಂದ ಭವನದಲ್ಲಿ ನನಗೆ ಕಾಫಿ ತಿಂಡಿ ಕೊಡಿಸಿ ನನ್ನ ಸುತ್ತ ಅನ್ನದ ಬಲೆ ನೇಯಲೆತ್ನಿಸಿದ್ದ. ನಾನು ಯಾವ ಋಣದಲ್ಲಿ ಸಿಲುಕಿಕೊಂಡೇನು! ಆದರೆ ಅನ್ನದ ಋಣದಲ್ಲಿ ಮಾತ್ರ ಯಾವ ಕಾರಣಕ್ಕೂ ಸಿಲುಕಲಾರೆನೆಂದು ಅವಿದ್ಯಾವಂತನೂ, ಅಸಂಸ್ಕೃತನೂ ಆದ ನಾರಾಣಿ ಹೇಗೆ ಗ್ರಹಿಸಿಯಾನು! ಅವನು ಮನಸ್ಸಿನೊಳಗೊಂದು ಹೊರಗೊಂದು ಇಟ್ಟುಕೊಳ್ಳದೆ ಜುಲಾಬಿ ಮಾತ್ರೆ ನುಂಗಿದವನಂತೆ ಜಾಡಿಸುತ್ತಿದ್ದ. ಆದ್ದರಿಂದ ಅವನೊಂದಿಗೆ ಇದ್ದಗ ಹತ್ತರದ ಬಂಧುವಿನೊಂದಿಗೆ ಇದ್ದ ಅನುಭವವಾಗುತ್ತಿತ್ತು.

ನಂತರ ನಾರಾಣಿ ನನಗೆ ಭೆಟ್ಟಿಯಾಗಿದ್ದು ತಮ್ಮ ಮೇಲೆ ಕಾದಂಬರಿ ಬರೆದೀ ಏನಲೇ ಅಂತ ಪೆದ್ದ ಕಡಬೂರಿನ ಜಂಗಮರು ನನ್ನ ಮೇಲೆ ಸೆಡ್ಹೊಡೆದಿದ್ದಾಗ ಅವನು ಪೆದ್ದ ಕರಬೂರಿನ ನನ್ನ ಮನೆಗೆ ಸೀದ ಬಂದು ಪರಾಂಬರಿಸಿದ. “ಯಾರು ನಿಮ್ಮನ್ನು ಅವಮಾನಗೊಳಿಸಿದ್ದು ಅವರ ದೇಹದ ಯಾವ ಅಂಗಗಳೆಂದರೆ ನಿಮಗೆ ಇಷ್ಟ, ಹೇಳಿರಿ ಮೇಷ್ಟೆರ ಈಗಲೆ ತಂದು ಕೊಡುವೆನು” ಮಾಯಾಬಜಾರ್‌ನ ಘಟೋತ್ಕಜನಂತೆ ನುಡಿದ. ಅದೇ ಊರಲ್ಲಿ ಕುಖ್ಯಾತ ಕೊಕ್ಕಬುಕ್ಕ ನಾರಾಣಿಯು ಹಾಕಿದ ಉಗುಳನ್ನು ಯಾವ ಕಾರಣ ದಾಟಲಾರನಂತೆ. ಅವನು ಅವನನ್ನು ಪರಿಚಯಿಸಿ ನನಗೆ ಒಳ್ಳಯದು ಮಾಡಲು ಹೇಳಿ ಸಂಜೆ ಹೇಳದೆ ಕೇಳದೆ ಕಾಣೆಯಾಗಿಬಿಟ್ಟ.

ಅದೇ ನಾರಾನಿ ಕೊಲೆಯಾದನೆಂದರೆ ಇನ್ನೂ ನಂಬಲಾಗಲಿಲ್ಲ ನನಗೆ. ತಲೆ ಎತ್ತಿದೆ, ಏರಿದ್ದ ಬಿಸಿಲಿಗೆ ಅದರ ಮುಖ ಮತ್ತಷ್ಟು ಕಪ್ಪಾಗಿದೆ. ಅದರ ಮೈಮೇಲೆ ಹತ್ತಾರು ರಕ್ತದ ಕಲೆಗಳು, ಕನಿಷ್ಠ ಮುವ್ವರಾದರೂ ಅವನನ್ನು ಚೂರಿಯಿಮದ ಇರಿದಿರಬಹುದು. ಕಲ್ಲು ಬಂಡೆಗಳ ಮೇಲೂ ರಕ್ತದ ಗುರುತುಗಳಿರುವವು. ಸಾಯುವಾಗೇನಾದರೂ ನಾರಾಣಿ ನನ್ನನ್ನು ನೆನೆದಿರಬಹುದೆ! …. ಇಲ್ಲ…. ಅವನು ಹಾಗೆ ನೆನೆಯುವ ಪೈಕಿಯಲ್ಲ. ಉಪ್ಪಿಕ್ಕಿದವರ ಮನೆಯಲ್ಲಿ ಎಷ್ಟೆಷ್ಟು ತೊಲೆ ಜಂತಿಗಳಿವೆ ಎಂದು ಕರಾರುವಾಕ್ಕಾಗಿ ಹೇಳಬಲ್ಲವನಾಗಿದ್ದ ನಾರಾಣಿ. ಮತ್ತೆ ಮನಸ್ಸು ನೆನಪುಗಳ ಬಗ್ಗಡವಾಗುವುದು…. ಎರಡು ಮೂರು ಕಡೆ ಟೆಲಿಗ್ರಾಂ ಕೊಟ್ಟು ಬಂದಿದ್ದ ಶೀನಪ್ಪ ಊಟಕ್ಕೇಳಲು ನನ್ನನ್ನು ಒತ್ತಾಯಿಸಿದ. ತಳವಾರರ ಕಾವಲಲ್ಲಿ ಹೋಟೆಲ್ಲಿಗೆ ಹೋಗಿ ನಾನು ಊಟ ಮಾಡಬಹುದಿತ್ತು. ಯಾವ ಸಮುದ್ರ ಹೊಕ್ಕರೂ ಪಾಪಿಗೆ ಮೊಣಕಾಲ ಮಟ್ಟ ನೀರು…. ನನ್ನ ಪಂಚೇಂದ್ರಿಯಗಳನ್ನೆಲ್ಲ ನಾರಾಣಿಯ ಹೆಣ ವ್ಯಾಪಿಸಿದೆ. ಮನಸ್ಸಿಗಷ್ಟೇ ಅಲ್ಲ… ಹೊಟ್ಟೆಯಲ್ಲೂ ಸಹ. ಆದ್ದರಿಂದ ಕೆಟ್ಟ ಹಸಿವೆಯಲ್ಲೂ ಹೆಣದ ವಾಸನೆಯ ಕಮರು ಡೇಗುಗಳನ್ನು ಡೇಗಿದೆ; ಎರಡು ಮೂರು ಬಾರಿ…. ತನಗೂ ಊಟ ಇಳಿಯುವುದಿಲ್ಲೆಂದ ಶೀನಪ್ಪ “ಪೊಲೀಸರ ಕೈ ಬೆಚ್ಚಗೆ ಮಾಡಲು ಹಣ ಬೇಕಲ್ಲ… ಎಷ್ಟಿಟ್ಟಿರುವೆ” ಎಂದು ಪಿಸು ನುಡಿದ. ನಾನು ಇಲ್ಲೆಂದೆ. ನಂತರ ಹೆಚ್ಚೆಮ್ ಬಳಿ ಚರ್ಚಿಸಿ ಮುಂಗಡವಾಗಿ ಸಂಬಳ ಅಕ್ವಿಟೆನ್ಸಿಗೆ ಸಹಿ ಹಾಕಿಸಿಕೊಂಡ ನನ್ನಿಂದ…. ಅದರ ಆಧಾರದಿಂದ ಈಡಿಗರ ವೆಂಕಟಸ್ವಾಮಿ ಬಳಿ ಹಣ ಪಡೆಯಲು ಶೀನಪ್ಪ ಹೋದನು. ಎಲ್ಲರ ಲೇವಾದೇವಿ ಅಲ್ಲಿಯೇ, ಆದರೆ ನನ್ನದು ತಡವಾಗಿ ಶುರುವಾಯಿತು. ಅಷ್ಟೇ ವ್ಯತ್ಯಾಸ, ನನಗೂ ಇತರರಿಗೂ ನಡುವೆ; ದುಡ್ಡು ಕೊಟ್ಟು ದುರ್ಜನರಿಂದ ದೂರವಿರಬೇಕೆಂದು ಹಿರಿಯರು ಹೇಳಿದ್ದಾರೆ. ಅದು ನನಗೂ ಗೊತ್ತು! ಹಾಗೆ ನಾನು ಎಷ್ಟು ಸಾರಿ ಪ್ರಯತ್ನಿಸಲಿಲ್ಲ. ಆದರೆ ನಾರಾಣಿ ದುರ್ಜನರ ಪೈಕಿ ದುರ್ಜನ. ಹುಲಿ ಚರ್ಮ ಕಳಚಿದ ಆಕಳು ಎಂದು ಮಾರು ಹೋಗಿದ್ದೆ; ಅವನ ವ್ಯಕ್ತಿತ್ವಕ್ಕೆ…. ಆದರೆ ನನ್ನ ಭ್ರಮೆಯ ಆಕಳೊಳಗೆ ಏಳು ಪಟ್ಟೆಯ ಹುಲಿ ಇತ್ತು…. ಅದರ ಅರಿವಾಗುವ ಹೊತ್ತಿಗೆ ಅದರ ಸೂಕ್ಷ್ಮಾತಿಸೂಕ್ಷ್ಮ ಬಲೆಯೊಳಗೆ ನಾನು ಬಂಧಿಯಾಗಿದ್ದೆ….

ಕವಿತಾಳದ ಜಟ್ಟಿ ನಾರಾಯಣ ರೆಡ್ಡಿಗೆ ಬಡೇಲಡುಕು ದುಗ್ಗಾ ನಾರಾಣಿಯ ಬಗ್ಗೆ ಸರ್ವಗೊತ್ತು; ನಿಮ್ಮಂಥೋರು ಇಂಥವರ೫ ಸಹವಾಸ ಮಾಡಬಾರದೆಂದು ಸೂಕ್ಷ್ಮ ಹೇಳಿದ್ದೆ. ಅದಕ್ಕೆ ನಾನು ನಕ್ಕಿದ್ದೆ. ಒಂದೆರಡು ತಿಂಗಳಲ್ಲಿ ನಡೆಯಲಿರುವ ನನ್ನ ಮದುವೆಗೆ ನಾರಾಣಿಯನ್ನು ಖುದ್ದು ಆಹ್ವಾನಿಸಲೆಂದು ಅದೋನಿಯ ಜಮಾ ಮಸೀದಿವರೆಗೆ ಹುಡುಕಾಡಿದ್ದೆ. ಅವನು ಸಿಕ್ಕಿರಲಿಲ್ಲ…. ತದನಂತರ ನಾನು ಪೆದ್ದ ಕಡಬೂರಿನ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡದೆ. ನಂತರ ಎರಡು ವರ್ಷದಲ್ಲಿ ನಡೆದ ಕೆಲ ಘಟನೆಗಳಿಮದಾಗಿ ನಾನು ಸುಣ್ಣದಂತೆ ಅರಳಿದೆ…. ಬ್ರಮೆಗಳ ಚಿಪ್ಪಿನಿಂದ ಹೊರ ಬಂದೆ.

ಈ ಪಂದಿಕೊನೆ ಗ್ರಾಮದಲ್ಲಿ ಹೊಸದಾಗಿ ಹೈಸ್ಕೂಲು ಸುರುವಾಗಿತ್ತು. ಕನ್ನಡ ಹೇಳುವವರು ಬೇಕಾಗಿದ್ದರು. ಅರ್ಜಿ ಹಾಕಿಕೊಂಡೆ. ಕೆಲಸ ಸಿಕ್ತು ಸೇರಿಕೊಂಡೆ. ಇನ್ನೊಂದು ನಮೂನೆಯ ಜೀತವೇ ಸರಿ. ಜೀತಕ್ಕೆ ಕೆಲವೇ ತಿಂಗಳಲ್ಲಿ ಒಗ್ಗಿ ಹೋಗಿದ್ದೆ. ಶಾಲೆ ಬಿಟ್ಟರೆ ಮನೆ; ಮನೆ ಬಿಟ್ಟರೆ ಶಾಲೆ; ಹೀಗಾಗಿ ನಾನು ಆರಕ್ಕೇರುವುದಾಗಲೀ ಮೂರಕ್ಕಿಳಿಯುವುದಾಗಲೀ ಮಾಡಿರಲಿಲ್ಲ. ಇಂಥ ನಾನು ನಾರಾಣಿನನ್ನು ಮತ್ತೆ ನೋಡಿದ್ದು ತೀರಾ ಆಕಸ್ಮಿಕ. ಅವತ್ತು ನಾನು ಅಮಾವಾಸ್ಯೆಯ ಜನರ ನಡುವೆ ಶಾಲೆ ಕಡೆಗೆ ನಡೆದೆ. ಸ್ವಲ್ಪ ದೂರದಲ್ಲಿ (ಅಂದರೆ ಈಗ ಹೆಣ ಮಲಗಿರುವುದಲ್ಲ! ಅಲ್ಲಿ) ನಾರಾಣಿ ಗುಂಪಲ್ಲಿ ಗೋವಿಂದ ಅಂತ ನಿಂತಿರುವುದು ಕಮಡಿತು. ಮೊದಲಿಗೆ ಅವನನ್ನು ಗುರುತಿಸಲಾಗಲಿಲ್ಲವಾದರೂ ಆಮೇಲೆ ಹೆಚ್ಚೆಮ್‌ರಿಂದ ಪರವಾನಗಿ ಡೆದು ಕಣ್ಣಳತೆಯಿಂದ ತಪ್ಪಿಸಿಕೊಂಡಿದ್ದ ಅವನನ್ನು ಹುಡುಕಲೆಂದು ಹೊರಟೆ. ಹೋಟೆಲ್‌ಗಳಲ್ಲಿ; ತೇರುಗಡ್ಡೆಯ ನೆರಳಲ್ಲಿ; ಅರಳೆ ಮರದ ಬಳಿ ಎಲ್ಲ ಕಡೆ ಹುಡುಕಿದ ನನಗೆ ಅವನು ಗುಡಿಯ ಹಿಂದೆ ಸಿಕ್ಕನು. ನಾನು ಅವನನ್ನು ನಾರಾಣಿ ಅಂತ ಗುರುತಿಸಿದೆ. ಅವನು ನನ್ನನ್ನು ಮೇಸ್ಟ್ರೇ ಅಂತ ಗುರುತಿಸಿದನು. ಮೊದಲ ನೋಟಕ್ಕೆ ಅವಧೂತನಂತೆ ಅರ್ಥವಾದ ಅವನೊಂದಿಗೆ ಮಧ್ಯಾಹ್ನದ ಊಟ ಮಾಡಿದೆ. ಅವನು ಸೂತ್ರ ಬದ್ಧ ಗೊಂಬೆಯಂತೆ ಅದು ಮಾಯೆ; ಇದು ಮಾಯೆ ಅಂತ ಮಾತಾಡಿದನು. ತಾನು ಭಾಷೆಯನ್ನು ಇಷ್ಟು ಸ್ವಚ್ಫವಾಗಿ ಮಾತಾಡಲು ಸಾಧ್ಯವಾದದ್ದು ಗುತ್ತಿ ಜೈಲಿನಲ್ಲಿ ಆರು ತಿಂಗಳ ಸಜೆ ಅನುಭವಿಸುತ್ತಿರುವಾಗ ಎಂದು ಹೇಳಿದನು. ಕೂಡ್ರುವಾಗ, ನಿಲ್ಲುವಾಗ, ತಿನ್ನುವಾಗ, ಕುಡಿಯುವಾಗ, ಮಲಗುವಾಗ ಹೀಗೆ ಪ್ರತಿಯೊಂದು ಕೆಲಸಕ್ಕೆ ಮೊದಲು ಅವನು ಶಿವನಾಮಸ್ಮರಣೆ ಮಾಡುವುದು ಕಂಡು ಪೂರ್ಣ ಪ್ರಮಾಣದ ನಾಸ್ತಿಕನಾದ ನಾನು ಅಚ್ಚರಿಗೊಂಡೆನು. ಒಟ್ಟಿನಲ್ಲಿ ಪೂರ್ಣ ಬದಲಾಯಿಸಿರುವನಲ್ಲ ನಾರಾಣಿ ಎಂದೇ ನನಗೆ ಸಂತೋಷ. ಅವನು ಮತ್ತು ನಾನು ದಿನಕ್ಕೊಮ್ಮೆಯಾದರೂ ಪರಸ್ಪರ ಸಂಧಿಸುತ್ತಿದ್ದೆವು; ಕಷ್ಟ ಸುಖದ ಬಗ್ಗೆ; ಬಡತನ ಸಿರಿತನದ ಬಗ್ಗೆ; ಒಳ್ಳೆಯದು ಕೆಟ್ಟದ್ದರ ಬಗ್ಗೆ; ಲೌಕಿಕ ಅಲೌಕಿಕದ ಬಗ್ಗೆ ಚರ್ಚಿಸುತ್ತಿದ್ದೆವು. ಅವನು ನನ್ನ ಅಭಿಪ್ರಾಯವನ್ನು ಅಲ್ಲಗಳೆಯುತ್ತಿದ್ದನು. ನಾನು ಅವನ ಅಭಿಪ್ರಾಯವನ್ನು ನಿರ್ದಾಕ್ಷಿಣ್ಯದಿಂದ ತಳ್ಳಿ ಹಾಕುತ್ತಿದ್ದೆನು. ಪರಸ್ಪರ ಯಾರು ಯಾರ ಮೇಲೂ ಕೋಪಿಸಿಕೊಂಡಿದ್ದಿಲ್ಲ. ಬದಲಾಗಿ ಪರಸ್ಪರ ಗೌರವ ಹೆಚ್ಚಿಸಿಕೊಂಡಿದ್ದೆವು. ಆದರೆ ಅವನು ಏನು ತಿನ್ನುತ್ತಿದ್ದನೋ? ಎಲ್ಲಿ ಮಲಗುತ್ತಿದ್ದನೋ? ಅಂತೂ ಅವನು ಗುಡಿಯ ಸಾಧು ಸಜ್ಜನರೊಂದಿಗೆ ಸದಾ ಬೆರೆತಿರುತ್ತಿದ್ದನು ಎಂದು ಮಾತ್ರ ಬಲ್ಲೆ.

ಒಂದು ರಾತ್ರಿ ಹೆಂಡತಿ ಬಳಿ ಅವನ ಬಗ್ಗೆ ಮಾತಾಡುತ್ತಿದ್ದೆ. ಬಹಳ ವರ್ಷಗಳಿಂದ ಬೀಳು ಬಿದ್ದಿರುವ ಎಂಟೆಕೆರೆ ಹೊಲದ ಬಗ್ಗೆ ಅವಳಿಗೆ ಚೆನ್ನಾಗಿ ಗೊತ್ತು. ಸಿರಿಯಾಗಿ ಹೊಲದ ದೇಕರಿಕೆ ನೋಡುವ ಮಹಾನುಭಾವರಿರಲಿಲ್ಲ. ಮಾಡಿದರೆ ಮನೆ; ಹೂಡಿದರೆ ಹೊಲ ಎಂಬ ಗಾದೆಯೇ ಇದೆ. ಹೊಲಕ್ಕೆ ಬಾವಿ ತೋಡಿಸಿ; ಎತ್ತು ಬಂಡಿ ಅಣಿಮಾಡಿ ಅದರ ಉಸ್ತುವಾರಿ ನೋಡಿಕೊಳ್ಳಲು ನಾರಾಣಿಯನ್ನು ಬಿಟ್ಟರೆ ಹೇಗೆ ಎಂದು ಅವಳೊಂದಿಗೆ ಚರ್ಚಿಸಿದೆ. ಅವಳೂ ನನ್ನ ಅಭಿಪ್ರಾಯವನ್ನು ಅನುಮೋದಿಸಿದ್ದಳು. ಸೂಕ್ತಕಾಲ ಬಂದಾಗ ನಾರಾಣಿಗೆ ಯೋಜನೆಯನ್ನು ವಿವರಿಸಬೇಕೆಂದು ನಿರ್ಧರಿಸಿದೆ.

ನಾಲ್ಕು ದಿನಗಳ ನಂತರ ನಾರಾಣಿ ದೈನ್ಯತೆಯೇ ಮೂರ್ತಿವೆತ್ತಂತೆ ಹತ್ತು ರೂಪಾಯಿಗಾಗಿ ಅಂಗಲಾಚಿದ. ಅವಶ್ಯಕತೆ ಬಿದ್ದಾಗ ನಿಸ್ಸಂಕೋಚದಿಂದ ಹಣ ಕೇಳಿ ಪಡೆಯಲು ಹೇಳಿ ಹತ್ತು ರೂಪಾಯಿ ಕೊಟ್ಟೆನು. ಮರಳಿ ಕೊಡುವುದಾಗಿ ಹೇಳಿ ಹೊರಟುಹೋದನು. ಹೀಗೆಯೇ ಅವನು ಆಗಾಗ್ಗೆ ನನ್ನಿಂದ ಐದೋ, ಹತ್ತೋ ಪಡೆಯುತ್ತಿದ್ದುದುಂಟು. ಅವನು ಕೇಳಿದಾಗಲೆಲ್ಲ ಕೊಡ್ತೀರಲ್ಲ…. ನೀವೇನು ಹಣದ ಗಿಡವನ್ನು ಮನೆಯ ಹಿತ್ತಲಲ್ಲಿ ನೆಟ್ಟಿರುವಿರೇನು ಎಂದು ಸಹೋದ್ಯೋಗಿ ಶೀನಪ್ಪ ಛೀಡಿಸಿದಾಗ ನಾನು ಮುಗುಳ್ನಕ್ಕಿದೆ. ನನ್ನಿಂದ ಪಡೆದ ಹಣವನ್ನು ಅವನು ಯಾವ ಕೆಲಸಕ್ಕೆ ಉಪಯೋಗಿಸುತ್ತಿರಬಹುದೆಂಬ ಅನುಮಾನ ಬಂತು. ಒಂದು ದಿನ ಅವನು ಕುಡಿದು ತೂರಾಡುತ್ತಿದ್ದುದ್ದನ್ನು ದೂರದಿಂದಲೇ ನೋಡಿ ಮನಸ್ಸಿಗೆ ತುಂಬ ನೋವು ಮಾಡಿಕೊಂಡೆ. ಈ ಸಾರಿ ಏನಾದರೂ ಕೇಳಲು ಬಂದರೆ ಚೆನ್ನಾಗಿ ಉಗಿದು ಕಳಿಸಬೇಕೆಂದು ನಿರ್ಧರಿಸಿದೆ. ಕೇವಲ ಎರಡು ದಿನಗಳಲ್ಲಿ ಸ್ಕೂಲಲ್ಲಿದ್ದ ನನ್ನ ಬಳಿಗೆ ಬಂದ. ಐದು ರೂಪಾಯಿ ಕೊಡಿ ಅಂತ ಸವಿನಯದಿಂದ ಕೇಳಿದ. ನಾನು ಕೆಂಡಮಂಡಲವಾಗಿ ಬಯ್ದೆ; ತಪ್ಪಾಯ್ತು ಮೇಷ್ಟ್ರೆ ಕುಡಿಯೋದಿಲ್ಲ ಎಂದು ಕಾಲಿಗೆ ಬಿದ್ದು ಬೇಡಿಕೊಮಡ. ನನ್ನ ಕರುಳು ಕಲಕಿದ. ಐದು ರೂಪಾಯಿ ಪಡೆದೊಯ್ದ.

ನಂತರ ಸುಮಾರು ದಿನಗಳು ಅವನನ್ನು ನಾನು ನೋಡಲಿಲ್ಲ. ಹೆಂಡತಿಯನ್ನು ಊರಿಗೆ ಕಳಿಸಿ ಬಂದು ಮನೆಯಲ್ಲಿ ಒಂಟಿಯಾಗಿ ಇದ್ದೆ. ಏನಾದರೂ ಬರೆಯಲೆಂದರೆ ಪೆನ್ನೊಳಗೆ ನಾರಾಣಿ ತುಂಬಿಬಿಡುತ್ತಿದ್ದ.

ಒಂದು ದಿನ ಸ್ಕೂಲಿಗೇ ಅಂತ ತೇರುಗಡ್ಡೆಯವರೆಗೆ ಬಂದಿದ್ದೆ, ಆಗ ಒಮ್ಮೆಗೆ ಅವನು ಎದುರಿಗೆ ಪ್ರತ್ಯಕ್ಷನಾಗಿ ‘ಭಲಲಲೈ ಸಾರಥಿ….ಬದುಕು ಅತಿ ಜಾಗೃತಿ’ ಎಂದು ಕೇಕೆ ಹಾಕಿದ. ಗಾಬರಿಯಾಯಿತು. ಕುಡಿದಿದ್ದ ವಾಸನೆ ಮುಖಕ್ಕೆ ರಾಚಿತು. ನಾರಾಣಿಯ ಮೈಯೊಳಗೆ ಪಿಶಾಚಿ ಏನಾದರೂ ಹೊಕ್ಕೊಂಡಿದಿಯಾ? “ಕುಡಿದೀನಿ ನೋಡೋ…. ಹರ್‍ಕೊಳ್ಳೋ ಹರ್‍ಕೋ” ಎಂದು ಮತ್ತೆ ಕೆಕ್ಕರಿಸಿದ. ಸುತ್ತ ಜನ ನರೆರೆಯಲಾರಂಭಿಸಿದರು…. ಸಹಿಸಿಕೊಂಡೆ…. ಕ್ಯಾಕರಿಸಿ ಕಫ ಉಗುಳಿದ ನಾರಾಣೀ ಕೆಕ್ಕರಿಸಿ ನೋಡಿದ. ಅಲ್ಲಿಂದ ತೊಲಗಿದ.

ನಾರಾಣಿಯ ಕಾಟ ನಿಜವಾಗಿ ಆವತ್ತಿನಿಂದ ಶುರುವಾದದ್ದು… ಅದನನ್ನು ನೆನೆಪಿಸಿಕೊಂಡರೆ ಈಗಲೂ ಮೈ ಜುಂ ಎನ್ನುವುದು…. ಆತ್ಮೀಯತೆ ಪಾತಾಳ ಸೇರಿ ಏಕಾಕಿತನದ ಭಯಂಕರ ಸಾಕ್ಷಾತ್ಕಾರವಾಗಿತ್ತು, ನಿಟ್ಟುಸಿರಿಟ್ಟೆ. ಬೀಸಿದ ಗಾಳಿಗೆ ಚದುರಿದ ತಲೆಗೂದಲು ಕೈಉಇಂದ ಸರಿಪಡಿಸಿಕೊಂಡೆ. ನಾರಾಣಿಯಂಥವರು ಬದುಕಿರುವಾಗಲೂ ಅಪಾಯಕಾರಿ; ಸತ್ತಾಗಲೂ ಅಪಾಯಕಾರಿ…. ಬೀಸಿದ ಕಡೆ ಹಾರುವ ತರಗಲೆಯಂತೆ ಕೂತಿರುವ ನಾನೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ…. ಸತ್ತವನ ಗುಣಾವಗುಣಗಳನ್ನು ಹಂಚಿಕೊಂಡವರಂತೆ ಸುತ್ತ ನೋಡುತ್ತ ನಿಂತಿರುವ ಜನ. ಅವನ ನೆಟ್ಟ ನೋಟವನ್ನು ಎದುರಿಸಲಾಗಲಿಲ್ಲ. ಇನ್ನೂ ಪೋಲೀಸರು ಬರಲಿಲ್ಲ ಎಂದು ಮಿಡುಕುತ್ತಿರುವ ಗೌಡ ನನಗೆ ದೂರವಿರಲಿಲ್ಲ. ಈ ಮೇಷ್ಟ್ರು ಮಾಡಿರೋ ಕೆಲಸಕ್ಕೆ ನಾವು ಉಪವಾಸ ವನವಾಸ ಸಾಯಬೇಕಾಗಿದೆ ಎಂದು ಕುಲಕರ್ಣಿ-ರಾಮಣ್ಣ ಮಾತಾಡಿದ್ದೂ ಕೇಳಿಸಿತು. ಮೊತ್ತೊಂದು ಕಡೆ ಹೆಚ್ಚೆಮ್ ತಲೆಗೆ ಕೈಹೊತ್ತು ಕೀತಿದ್ದನು. ಶೀನಪ್ಪ ನನ್ನ ಬಳಿಗೆ ಬಂದು ನಮ್ಮೂರಿನಿಮದ ಪಂದಿಕೊನೆಗೆ ಇರುವ ಬಸ್ಸುಗಳ ಬಗ್ಗೆ ವಿಚಾರಿಸತೊಡಗಿದದ. ಕೊಟ್ಟೂರನ್ನು ಎಷ್ಟು ಗಂಟೆಗೆ ಬಿಟ್ಟರೆ ಪಮದಿಕೊನೆಯನ್ನು ಎಷ್ಟು ಗಂಟೆಗೆ ಸೇರಬಹುದು ಎಂದು ಆತ ಕೇಳಿದ ಪ್ರಶ್ನೆಗೆ ಉತ್ತರಿಸುವ ಮೊದಲು ಉಗುಳು ನುಂಗಲು ನೋಡಿದೆ, ಅದು ಬಾಯೊಳಗೆ ಇರಲಿಲ್ಲ. ಗುಡಡೆ ಕಡೆಯಿಮದ ಬಂದ ಸೈಕಲ್ ಸವಾರ ಸಿವ್ಲಿಂಗ ಪೋಲೀಸರ ಜೀಪು ಸುಳುವಾಯಿ ಬಳಿ ಇರುವ ಹಳ್ಳದ ಹುದುಲಲ್ಲಿ ಸಿಗಿಬಿದ್ದಿರುವುದಾಗಿ ಸುದ್ದಿ ತಂದನು. ಇದರಿಂದ ಗೌಡ ಗಲಿಬಿಲಿಗೊಂಡ. ಗ್ರಾಮಕ್ಕೂ ಪೋಲೀಸರಿಗೂ ನಡುವೆ ಸೇತುವೆಯಂತಿರುವಾತ. ಸೇತುವೆ ಬದುಕಿರಬೇಕಾದರೆ ಅದರ ಎರಡು ದಡಗಳೂ ಆರೋಗ್ಯವಾಗಿರುವುದು ಮುಖ್ಯ. ಪೋಲೀಸರನ್ನು ಕರೆತರಲು, ಜೀಪನ್ನು ಕೆಸರಿನಿಂದ ಮೇಲೆತ್ತಲು ಕೆಲವು ಜನರಿಗೆ ಎತ್ತು ಬಂಡಿಕೊಟ್ಟು ಕಳಿಸಿದನು. ಊಟಗೀಟ ಮಾಡೋದಿದ್ರೆ ಮಾಡಿ ಬಿಡಪ್ಪ. ಪೋಲೀಸ್ರು ಬರೋದ್ಕಿಂತ ಮೊದ್ಲೆ ಎಂದು ಹೆಚ್ಚೆಮ್ ಲಕ್ಷೀನರಸಯ್ಯ ನನ್ನ ಕಿವಿಯ ಬಳಿ ಕಡ್ಡಿ ಮುರಿದನು. ನಾನು ಹೆಣದ ಸಮಕ್ಷಮ ಊಟ ಮಾಡುವ ತಪ್ಪು ಮಾಡುವುದು ಸಾಧ್ಯವಿರಲಿಲ್ಲ. ಹೆಣ ಅನ್ನದ ರೂಪದಲ್ಲಿ ದೇಹ ಸೇರಿಬಿಡಬಹುದೆಂಬ ಭಯವಿತ್ತು. ಸೂರ್ಯನ ಬಿಸಿಲು ಲಂಬವಾಗಿ ಬಿದ್ದಿತ್ತು. ಹೆಣ ತೆರೆದ ಕನ್ನಡಿಯಂತೆ ಸ್ಪಷ್ಟವಾಗಿ ಕಾಣುತ್ತಿತ್ತು. ನನಗೆಗೊತ್ತಿರುವಂತೆ ನಾರಾಣಿಯ ಪೊದೆ ಹುಬ್ಬುಗಳ ಕೆಳಗೆ ಕಣ್ಣುಗಳು ತುಂಬ ಆಳದಲ್ಲಿದ್ದವು. ಆದರೆ ಈಗ ಹಾಗಿದಲ್ಲ, ಕೊಲೆ ನಡೆದಾಗ ಅವನು ಭಯದ ಮೊಟ್ಟೆ ಸೇರಿಕೊಂಡಿರಬಹುದಾದ ಕಾರಣಕ್ಕಾಗಿ ಕಣ್ಣು ಗುಡ್ಡೆಗಳು ತೀರಾ ಮೇಲೆ ಬಂದು ಬಿಟ್ಟಿದ್ದವು. ನಾರಾಣಿಯ ಆತ್ಮ ತನ್ನ ಹೆಣ ನೋಡಿ ಭ್ರಮನಿರಸಗೊಮಡಿರಬಹುದು….

ಎಂದೋ ಮರೆತಿದ್ದ ನಾನು ಮತ್ತೆ ಅವನನ್ನು ನೆನಪು ಮಾಡಿಕೊಂಡಿದ್ದು ಮೊದಲ ದೊಡ್ಡ ತಪ್ಪು. ಮಾಡಿದ್ದುಣ್ಣೋ ಮಾರಾಯ ಎಂಬ ನಾಣ್ಣುಡಿಯಂತೆ ನಾನು ಅನುಭವಿಸದೆ ವಿಧಿ ಇರಲಿಲ್ಲ. ನಾರಾಣಿ ಅವತ್ತು ಕುಡಿದು ಒಂದು ಸಲಕ್ಕೆ ಮಾತ್ರ ಮುಖಾಮುಖಿಯಾಗಿರಲಿಲ್ಲ. ಕುಡಿದು ವಾರಕ್ಕೆರಡು ಬಾರಿಯಾದರೂ ನನ್ನನ್ನು ಸಂಧಿಸುತ್ತಿದ್ದ. ಸಂಧಿಸಿದಾಗೆಲ್ಲ ತನ್ನ ಪ್ರಹರ ಶುರು ಮಾಡುತ್ತಿದ್ದ. ತಾನು ಸಿಕ್ಷೆ ಅನುಭವಿಸಿದ ಜೈಲುಗಳ ಬಗ್ಗೆ ರೈಲು ಬಿಡುತ್ತಿದ್ದ. ನಾನು ತಾಳ್ಮೆಯಿಂದ ಕೇಳುತ್ತಿದ್ದೆ. ತಾಳಿದವನು ಬಾಳಿಯಾರು ಎಂದು ನಂಬಿದ್ದೆ. ಐದು ಕೊಡು ಅಂತ ಜಬರ್ದಸ್ತಾಗಿ ಕೇಳುತ್ತಿದ್ದ. ತೊಲಗಿದರೆ ಸಾಕು ಅಂತ ಕೊಟ್ಟು ಬಿಡುತ್ತಿದ್ದೆ. ಅದು ಕೇವಲ ತಾತ್ಕಾಲಿಕ ಉಪಸಮನ ಮಾತ್ರ. ಐದು ಕೇಳುತ್ತಿದ್ದವನು ಕಾಲ ಕಳೆದಂತೆ ಹತ್ತು ಕೇಳಲು ಶುರು ಮಾಡಿದ…. ನನಗೆ ಭೂತದರ್ಶನ ಕೊಡುತ್ತ ಅಲೆಯತೊಡಗಿದ ನಾರಾಣಿ…. ಕೊಡದಿದ್ದರೆ ಹೀನಾಮಾನವಾಗಿ ಬಯ್ಯುವನು. ಅವನಿಗೆ ನಾನು ಮಾಡಿರುವ ದ್ರೋಹ; ಅನ್ಯಾಯ ಏನೂ ಇರಲಿಲ್ಲ…. ಗೆಳೆಯ ಶೀನಪ್ಪ ನನ್ನ ಪರವಾಗಿ ಒಮ್ಮೆ ನಾರಾಣಿಯನ್ನು ಸಂಧಿಸಿ ಗೌರವಸ್ಥರು ಹೇಗೆ ಗೌರವದಿಂದ ಬದುಕಲು ಸಾಧ್ಯ ನೀನು ಹೀಗೆಲ್ಲ ಬಯ್ಯುತ್ತಿದ್ದರೆ ಎಂದು ಹೇಳಿದನಂತೆ. ಅದಕ್ಕೆ ನಾರಾಣಿ ಆಟಾಟೋಪ ಪ್ರದರ್ಶಿಸಿದನಂತೆ. “ನಾನು ಯಾರ್‍ನಾದ್ರು ಬಯ್ತೀನಿ…. ಏನಾದ್ರೂ ಮಾಡ್ತೀನಿ… ಯಾರ್‍ನೀನು ಕೇಳೋಕೆ… ಬರೇಲಡಕು ದುಗ್ಗಾ ನಾರಾಣಿ ಎಂದರೆ ಏನಂತ ತಿಳ್ಕೊಂಡೀರಿ ನೀವೆಲ್ಲ…. ನನ್ನ ಹೆಸರು ಹೇಳಿದ್ರೆ ಹರಿಯೋ ಹಾವು ನಿಲ್ಲಬೇಕು…. ತಿಳೀತಾ…. ಕೈಕಾಲು ಮುರಿದ್ರೆ ಮೂರ್‍ತಿಂಗ್ಳು…. ಕಡಿದ್ರೆ ಮೂರು ವರ್ಷ ಶಿಕ್ಷೆ ಆಗ್ತದೆ ಅಷ್ಟೆ…. ಅವ್ನ ಬಗ್ಗೆ ನನಗೆಲ್ಲ ಗೊತ್ತೈತೆ…. ಯಾರು ಏನು ಹೇಳೋದು ಬೇಕಾಗಿಲ್ಲ….” ಶೀನಪ್ಪ ಇಂಥ ಮಾತುಗಳನ್ನು ತಡೆದುಕೊಂಡಿರುವುದೇ ಹೆಚ್ಚು. ನನಗೆ ಆತ ಸವಿವರವಾಗಿ ವರ್ಣಿಸಿದ. ನನಗೆ ನಿಜವಾಗಲೂ ಭಯವಾಯಿತು. ಆವತ್ತಿನಿಂದ ನನಗೆ ನಿದ್ದೆಯಾಗಲೀ ಊಟವಾಗಲೀ ಸೇರದಾಯಿತು. ಕನಸಿನಲ್ಲೂ ಅಷ್ಟೆ; ಹೆಂಡತಿಗೆ ಬದಲು ನಾರಾಣೀ ಕಾಣಿಸಿಕೊಳ್ಳುತ್ತಿದ್ದ. ಒಂದು ದಿನ ನಾನೇ ನಿರ್ಧರಿಸಿದೆ. ನಾರಾಣಿಯನ್ನು ತರುಬಿ ನನ್ನನ್ನು ಯಾಕೆ ಹೀಗೆ ಕಾಡ್ತೀಯಾ…. ನಾನು ನಿನಗೆ ಮಾಡಿರೋ ಅನ್ಯಾಯವಾದರೂ ಏನೂ ಅಂತ ಹಾಗೆ ಅಂದುಕೊಂಡಂತೆ ಒಮ್ಮೆ ಕೇಳಿಯೇ ಬಿಟ್ಟೆ. ಅದಕ್ಕೆ ಆತ ಉತ್ತರಿಸಲಿಲ್ಲ ಸೌಮ್ಯ ಮುಖ ಪ್ರಕಟಿಸಿದ. ತಾನು ಕಣ್ಣಿಗೆ ಬೀಳದಿರಲು ನೂರುಪಾಯಿ ಕೇಳಿದ. ನನಗೆ ತುಂಬ ಅಸಹ್ಯವೆನಿಸಿತು. ಪೀಡೆ ತೊಲಗಲಿ ಕೊಡುವುದೆಂದು ನಿರ್ಧರಿಸಿದೆ. ಮರುದಿನ ಹೇಳಿದ ಟೈಮಿಗೆ ಬಂದ. ಮತ್ತೊಮ್ಮೆ ಕೇಳುವುದಿಲ್ಲವೆಂದೂ, ಕಾಡಿಸುವುದಿಲ್ಲೆಂದು ಅವನಿಂದ ಆಣೆ ಪ್ರಮಾಣ ಮಾಡಿಸಿ ನೂರು ರೂಪಾಯಿ ಕೊಟ್ಟು ಸಾಗು ಹಾಕಿದೆ. ಪೀಡೆ ಮತ್ತೆಂದು ಕಾಡಲಾರದೆಂದುಕೊಂಡೆ. ನಾನು ನಿರಮ್ಮಳವಾಗಿದ್ದುದು ಕೇವಲ ಹದಿನೈದು ದಿನಗಳು ಮಾತ್ರೆ. ಹದಿನಾರನೆಯ ದಿನ ಗುಡಿಯ ಎದುರಿಗೇ ವಕ್ರಿಸಿಬಿಟ್ಟ ನಾರಾಣಿ. ನನಗೆ ಸಿಟ್ಟು ನರನರದಲ್ಲೂ ಪ್ರವಹಿಸಿತು. ನೂರು ಕೇಳಿದ. ಕೊಡೊಲ್ಲಂದೆ, ಎಪ್ಪತ್ತೈದು ಅಂದ ಕೊಡಲ್ಲ ಅಂದೆ, ಐವತ್ತೂ ಅಂದ…. ಕೊಡೊಲ್ಲ ಅಂದೆ…. ಕೊನೆಗೆ ಇಪ್ಪತ್ತೈದಾದ್ರೂ ಕೊಡ್ತೀಯೋ ಇಲ್ಲ ಎಂದು ಕೇಳಿದ. ನನಗೆ ತಡೆಯಲಾಗಲಿಲ್ಲ… ಏನಲೇ ಸಾಲ ಕೊಟ್ಟೋನಂಗೆ ಕೇಳ್ತೀ… ನಾನು ನಿನ್ಗೆ ಬಾಕಿಯಾ; ನಿಮ್ಮಪ್ಪಗೆ ಬಾಕಿಯಾ… ಎಂದು ರೆಟ್ಟೆ ಏರಿಸಿದೆ. ಸುತ್ತ ಜನ ಸೇರಿದ್ದರು. ನಮ್ಮ ಹೆಚ್ಚೆಮ್ಮೂ ಇದ್ದ. ಬಂದ ಜಗಳ ಬಿಡಿಸಲು, ಬೀದೀಲಿ ನೀಂತು ಗಟ್ಟಿಯಾಗಿ ಮಾತಾಡಿ ನಮ್ಮ ಇನ್‌ಸ್ಟಿಟ್ಯೂಷನ್ ಮರ್ಯಾದೆ ಕಳೀತಿಯಲ್ಲಪ್ಪಾ, ಆತೇನು ಕೇಳ್ತಾನೋ ಅದ್ನ ಕೊಟ್ಟು ಬಿಡು ಎಂದು ಉಪದೇಶಿಸಿದ. ಏನ್ಸಾರ್‍ ನೀವೂ ಈ ಥರ ಮಾತಾಡೋದೇನು ಅಂದೆ…. ಹೌದು…. ಆತ ನಮ್ಮನ್ಯಾಕೆ ಕೇಳಬಾರದು… ನಿನ್ನನ್ನೇ ಯಾಕೆ ಕೇಳಬೇಕು ಎಂದಾಡಿದ ಹೆಚ್ಚೆಮ್ಮನ ಮಾತು ಕೇಳಿ ಜನ ಹೌದೆಂದರು. ನನಗೆ ವಿಚಿತ್ರವೆನಿಸಿತು. ಜನರ ಸ್ವಭಾವ…. ನನ್ನ ಬಲ ಜಗ ಬಲ….. ಇಪ್ಪತ್ತೈದು ಕೊಡ್ತಿಯೋ ಇಲ್ಲೋ ಅಂತ ನಾರಾಣಿ ಹಾದಿಗೆ ಅಡ್ಡ ನಿಂತ. ಕೊಡಲ್ಲ ಹೋಗಲೇ ಎಂದೆ ಎಲ್ಲದಕ್ಕೂ ತಯಾರಾಗಿ. ನಾಳೆ ಸಂಜೆ ಹೊತ್ತಿಗೆ ಐವತ್ತೂ ಕೊಡಬೇಕಾಗ್ತದೆ ಹುಷಾರ್‍ ಎಂದ. ಎದೆಮೇಲೆ ಬಂದ ಅವನನ್ನು ಜಾಡಿಸಿ ತಳ್ಳಿದೆ. ಅವನು ಅಷ್ಟು ದೂರ ಜೋಲಿ ಹೋದ…. ನಾನು ಸೀದ ಮನೆಗೆ ಹೋದೆ. ಏನಪ್ಪಾ ಮಾಡುವುದು ಅಂತ ಯೋಚಿಸಿದೆ. ರಜೆ ಇಟ್ಟುಬಿಟ್ಟರೆ ಹೇಗೆನ್ನಿಸಿತು. ಇಡಲು ರಜಗಳು ಬೇರೆ ಇರಲಿಲ್ಲ…. ನಾಳೆ ಮಟ್ಟಿಗೆ ಅವನಿಮದ ಕಣ್ಮರೆಯಾಗಿ ಹೋಗುವುದೆಂದು ನಿರ್ಧರಿಸಿದೆ.

ಮರುದಿನ ಸೂರ್ಯೋದಯಕ್ಕೆ ಮೊದಲೆ ಮನೆಗೆ ಬೀಗ ಜಡಿದು ಬಳ್ಳಾರಿ ಕಡೆ ಹೊರಟೆ. ನಾಳೆಯೋ ನಾಡಿದ್ದೋ ಸಾಯಲಿರುವ ಮುದುಕನಂತೆ ಬಳ್ಳರಿಯಲ್ಲಿ ವರ್ತಿಸಿದ್ದೆ. ತಿನ್ನಬಾರದನ್ನು ತಿಂದೆ; ಕುಡಿಯಬಾರದನ್ನು ಕುಡಿದೆ; ನೋಡಬಾರದನ್ನು ನೋಡಿದೆ. ಹೀಗೆ ಅಡ್ಡಾದಿಡ್ಡಿ ಕಾಲಕ್ಷೇಪ ಮಾಡಿ ರಾತ್ರಿ ಎಂಟರ ಹೊತ್ತಿಗೆ ಪಂದಿಕೊನೆ ಬಸ್ಸು ಹತ್ತಿದೆ. ನಾರಾಣಿ ಕೊಟ್ಟಿರುವ ಅವಧಿ ಮೀರಿತಲ್ಲ ಎಂಬ ಸಂತೋಷದಿಂದ ಬಸ್ಸಿನ ತುಂಬ ಅರಳಿದ್ದೆನು. ಮನಸ್ಸು ತುಂಬ ಹಗುರವಾಗಿತ್ತು. ಬಸ್ ಪಂದಿಕೊನೆ ಸೇರಿದಾಗ ರಾತ್ರಿ ಹತ್ತೂಕಾಲಾಗಿತ್ತು. ಇಡೀ ಊರೆಗೆ ಊರೇ ಮಲಗಿತ್ತು. ಬಸ್ಸಿನಿಮದ ಇಳಿದವರು ನಾವು ಕೆಲವೇ ಜನ. ನಾನು ಅಷ್ಟು ಠೀವಿಯಿಮದ ಮನೆ ಕಡೆ ನಡೆದದ್ದು ಅದು ಎರಡನೇ ಸಲವಿರಬೇಕು. ಊಟ ಸೊನ್ನೆ, ಅವಲಕ್ಕಿ ಹಸಿ ಕೊಬ್ಬರಿ ತಿಂದು ತುಂಬಿಗೆ ನೀರು ಕುಡಿದು ಮಲಗಿಬಟ್ಟರಾಯಿತೆಂದು ಯೋಚಿಸುತ್ತ ಬೀಗ ತೆಗೆದು ಮನೆ ಪ್ರವೇಶಿದೆ. ಒಳಗೆಲ್ಲ ಕತ್ತಲು ದಟ್ಟವಾಗಿ ಕವಿದಿತ್ತು. ಸ್ವಿಚ್‌ಗಾಗಿ ಗೋಡೆಗುಂಟ ತಡಕಾಡಿದೆ. ಕೊನೆಗೂ ಸಿಕ್ಕಿತು ಹಾಕಿದೆ. ಬೆಳಕು ಕೋಣೆಯ ತುಂಬ ಚಿಲ್ಲನೆ ಹರಿಯಿತು. ಮೂಲೆ ಕಡೆ ನೋಡಿದ ಕೂಡಲೆ ಎದೆ ಧಸಕ್ಕೆಂದಿತು, ಅಲ್ಲಿ ಆರಾಂ ಕುರ್ಚಿಯಲ್ಲಿ ಮೈಚೆಲ್ಲಿ ಒಬ್ಬ ವ್ಯಕ್ತಿ ಕೂತಿರುವನು. ಅವನು ನಿಜಕ್ಕೂ ನಾರಾಣಿಯೇ ಹೌದು! ಮೈ ಬೆವೆತರೂ ಚೇತರಿಸಿಕೊಂಡೆ ಮರು ಕ್ಷಣ. ಅವನು ನಗುತ್ತಿರುವನು. ನನಗೆ ಸಿಟ್ಟು. ಅವನು ಒಳಗೆ ಬಂದ ಹೇಗೆ! ಮುಚ್ಚಿದ ಬಾಗಿಲು ಮುಚ್ಚಿದಂತೆಯೇ ಇದೆ. ಹಾಕಿದ ಬೀಗ ಹಾಕಿದಂತೆಯೇ ಇದೆ.

‘ನೀನೇನು ಮನುಷ್ಯನೋ ರಾಕ್ಷಸನೋ’ ಮುಂದೆ ಮಾತಾಡಲಾಗಲಿಲ್ಲ. ಕಂಠ ಕಟ್ಟಿತು. ಪೋಲೀಸ್‌ಗೆ ಕಂಪ್ಲೈಂಟ್ ಕೊಡಲಾ ಅನ್ನಿಸಿತು. ಪ್ರಯೋಜನವಿಲ್ಲೆನಿಸಿತು. ಸರಸರ ಒಳಗೆ ಅಡ್ಡಾಡಿ ನೋಡಿದೆ. ಅಡುಗೆ ಮನೆಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುವವು. ಅವಲಕ್ಕೆ, ಕೊಬ್ಬರಿ, ಸಕ್ಕರೆ, ದ್ರಾಕ್ಷಿ, ಗೋಡಂಬಿ ಎಲ್ಲ ತಿಂದು ಮುಗಿಸಿರುವನು. ಬೋರ್ನ್‌ವಿಟಾ ಡಬ್ಬಿಯಲ್ಲಿ ಆ ಪುಡಿಯೇ ಇರಲಿಲ್ಲ. ತಲೆಯನ್ನು ಪರಪರ ಕೆರೆದುಕೊಂಡೆ. ಹೊರಗೆ ಬಂದೆ.

ಇಲ್ಲಿಂದ ಹೋಗ್ತಿಯೋ ಅಥ್ವ ಕುತ್ತಿಗೆ ಹಿಡಿದು ತಳ್ಳಲೋ ಎಂದು ಗದರಿಸಿದೆ. ತಾಕತ್ತು ಇದ್ರೆ ತಳ್ಳು ನೋಡೇಬಿಡ್ತೀನಿ ಎಂದು ಸವಾಲು ಹಾಕಿದ. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವನಿಗೆದುರು ಕುರ್ಚಿ ಹಾಕಿಕೋಮಡು ಕುಳಿತೆ. ಆತ ನನ್ನನ್ನು; ನಾನು ಆತನನ್ನು ಪರಸ್ಪರ ಮಿಕಿಮಿಕಿ ನೋಡತೊಡಗಿದೆವು; ಹೀಗೆ ಸ್ವಲ್ಪೊತ್ತು.

“ನಿನಗೆ ಬೇಕಾಗಿರೋದಾದ್ರೂ ಏನು ಬೊಗ್ಳೋ” ನಾನು ಅವುಡುಗಚ್ಚಿದೆ.
“ನನಗೆ ಏನು ಬೇಕೆಂದು ನಿನ್ಗೆ ಗೊತ್ತೈತಿ” ನಿರ್ವಿಕಾರದಿಂದ ನುಡಿದ.

ಜೀಬಿನಿಂದ ತೆಗೆದು ಇಪ್ಪತ್ತೈದು ಕೊಡಹೋದೆ… ಹೂಹ್ಹು! ಬಿಲ್ಕುಲ್ ನಿರಾಕರಿಸಿದೆ. ಕಾಡಿದೆ, ಕೊನೆಗೆ ಬೇಡಿಕೊಮಡೆ. ಆತ ಕರಗಲಿಲ್ಲ. ಸುಮಾರು ಅರ್ಧ ತಾಸಿನ ನಂತರ ನಾನೇ ಸೋತುಹೋದೆ. ಕೊನೆಗೆ ಇನ್ನು ಇಪ್ಪತ್ತೈದು ಕೊಟ್ಟೆ. ಅಲಕ್ಷೆಯಿಮದ ಕಿತ್ತುಕೊಮಡ. ಈ ನೋಟು ಹರಿದಿದೆ ಬೇರೆ ಕೊಡು ಎಂದು ಆಜ್ಞೆ ಮಾಡಿದ. ಸರಿ ಕೊಟ್ಟೆ. ಗಂಭೀರವಾಗಿ ಅಲ್ಲಿಂದ ಕದಲಿಹೋದ. ನನ್ನೆದೆಮೇಲಿಂದ ಹೆಬ್ಬಂಡೆ ಸರಿದ ಹಾಗೆ. ಅವನು ಒಳಗೆ ಬಮದ ಬಗೆ ಹೇಗೆ? ಗವಾಕ್ಷಿಯಿಂದಲೋ! ಕಿಟಕಿಯಿಂದಲೊ! ಅರ್ಥವಾಗಲಿಲ್ಲ (ಇವತ್ತಿನವರೆಗೂ).

ಆ ಘಟನೆಯನ್ನು ಯಾಕಾದರೂ ನೆನಪು ಮಾಡಿಕೊಂಡೆನೋ ಏನೋ! ಎದೆ ಮೇಲೆ ಬೆವರು ಕಾಣಿಸಿಕೊಮಡಿತು. ಹೊಟ್ಟೆಯೊಳಗೆ ಉರಿಯುತ್ತಿರುವ ಹಸಿವೆ. ಹೊಟ್ಟೆಯ ಆ ಕಿಚ್ಚಿಗೆ ಹೆಣವೂ ಬೆಂದಲ್ಲಿ ಆಶ್ಚರ್ಯವಿಲ್ಲ ಆಗಾಗ್ಗೆ ತಲೆತಿರುಗಿದಂತೆ; ಚಿತ್ರಸ್ವಾಸ್ಥ್ಯ ಕಳೆದುಕೊಳ್ಳುತ್ತಿರುವಂತೆ.

ಸಿವ್ಲಿಂಗ್ ಸೈಕಲ್ ಮೇಲೆ ರೆವ್ವ್ ಅಂತ ಬಂದ. ಎತ್ತಿನಬಂಡೀಲಿ ಪೊಲೀಸ್ರು ಬರ್‍ತಿದಾರೆ ಎಂಬ ಸುದ್ದಿ ಬಿತ್ತರಿಸಿದ. ಕೂಡಲೆ ಜನ ಅದರಲ್ಲೂ ಗೌಡ ಕುಲಕರ್ಣಿ ಕುಂಡಿ ಮೇಲೆ ಬಡಿದಂತೆ ಕ್ರಿಯಾಶೀಲರಾದರು. ಶೀನಪ್ಪ ಬಂದು ನಿಂತು ನನ್ನ ಭುಜ ತಟ್ಟಿದ. ಧೈರ್ಯವಾಗಿರು ಅಂದ. ನನಗೆ ಕಣ್ಣೀರು ತುಂಬಿ ಬಂದವು. ನನಗ್ಯಾಕೋ ಭಯ ಆಗ್ತದೆ ಎಂದು ಗದ್ಗದಿತನಾದೆ. ಟೆಲಿಗ್ರಾಂ ಕೊಟ್ಟಿರುವ ಫಲವಾಗಿ ಹೆಂಡತಿ, ಅಜ್ಜಿ ಬರಬಹುದು; ಬಂದವರು ನನ್ನನ್ನು ತಬ್ಬಿಕೊಂಡು ಧೈರ್ಯ ಹೇಳಬಹುದು…. ಹೆಂಡತಿಗೆ ಮುಟ್ಟು ನಿಂತದ್ದು ಫೆಬ್ರುವರೆಇಯಲ್ಲೋ ಮಾರ್ಚಿನಲ್ಲೋ…. ಈಗ ಆರೇಳು ತಿಂಗಳ ವಯಸ್ಸಿನ ಗರ್ಭವಿರಬಹುದು; ಹೊಟ್ಟೆಯೊಳಗೆ ಭೆಳೆಯುತ್ತಿರುವುದು ಗಂಟೋ ಹೆಣ್ಣೋ! ಯಾವುದೋ ಒಂದು!…. ಆಕೆ ಮಾತ್ರ ಆರೋಗ್ಯದಿಂದಿದ್ದೆ ಅಷ್ಟೆ ಸಾಕು? ಮೊದಲೇ ಆಕೆ ಸೂಕ್ಷ್ಮ ಮನಸ್ಸಿನವಳು…. ನನ್ನೀ ಸ್ಥಿತಿ ಕಂಡು ಅಪಘಾತವಾದರೆ ಆಕೆಗೆ!…. ಗರ್ಭಪಾತವಾದರೆ! ನನ್ನ ಮನಸ್ಸು ಹೊಯ್ದಾಡಿತು.

ಪೋಲೀಸರಿದ್ದ ಬಂಡಿ ಪೂರ್ವ ದಿಕ್ಕಿನಲ್ಲಿ ಕಂಡಿತು. ನಡುಗಿದೆ. ಪೋಲೀಸರೊಂದಿಗೆ ಅಪರಾಧಿ ಸ್ಥಾನದಲ್ಲಿರುವ ನಾನು ಹೇಗೆ ವರ್ತಿಸಬೇಕೆಂಬುದರ ಬಗ್ಗೆ ಓನಾಮ ಗೊತ್ತಿಲ್ಲ. ವಿದ್ಯಾವಂತನೂ, ಸುಸಂಸ್ಕೃತನೂ ಆದ ನಾನು ಯಾಕೆ ಹೆದರುವುದು! ಉಪ್ಪು ತಿಂದಿದರೆ ನೀರು ಕುಡಿಯಲು ಸೈ ಸತ್ಯಮೇವ ಜಯತೆ! ದೇಹದ ಸಮಸ್ತ ಶಕ್ತಿಯನ್ನು ನಾಲಗೆಗೆ ತಂದುಕೊಂಡೆ.

ಬಂದು ನಿಂತ ಬಮಡಿಯಿಮದ ಪೊಲೀಸರೂ; ಇನ್ಸ್‌ಪೆಕ್ಟರೂ ಕೆಳಕ್ಕಿಳಿದರು. ವೀರನಗೌಡ ಇನ್ಸ್‌ಪೆಕ್ಟರಿಗೆ ನನ್ನನ್ನು ಪರಿಚಯ ಮಾಡಿಸಿದ. ಎಜ್ಯುಕೇಟೆಡ್ ಅಂತ ಕೈಗೆ ಹಗ್ಗ ಕಟ್ಟಿಲ್ಲವೆಂದು ಹೇಳಿದ. ಇನ್ಸ್‌ಪೆಕ್ಟರ್‍ ಐಸೀ ಅಂದ. ಆತ ತುಂಬ ಸ್ಮಾರ್ಟಾಗಿದ್ದ. ವಯಸ್ಸು ನನ್ನಷ್ಟೇ ಇರಬಹುದು…. ಜನ ಕಿಕ್ಕಿರಿಯಲಾರಂಭಿಸಿದ್ದರು…. ನಾನು ಏನೋ ಹೇಳಲು ಬಾಯಿ ತೆರೆದೆ… ಕೇವಲ ಬಿಕ್ಕಿದೆ…. ನನ್ನ ಪರವಾಗಿ ಎಂಬಂತೆ ಹೆಚ್ಚೆಮ್ ಇನ್ಸ್‌ಪೆಕ್ಟರ್‍ ಬಳಿ ಏನೋ ಉಸುರುತ್ತಿದ್ದ; ತನ್ನ ಮಾಮೂಲಿ ಆಕ್ಸ್‌ಫರ್ಡ್ ಶೈಲಿಯಲ್ಲಿ. ಪೋಲೀಸರು ನನ್ನನ್ನು ಕಣ್ಣಿಂದ ಅಳೆಯುತ್ತಿದ್ದರು.

ಮಾಡುವ ಮಹಜರೆಲ್ಲ ಮುಗಿಸಿದರು…. ಹೆಣದ ಬಳಿ ಪೋಲೀಸರನ್ನು ಕಾವಲಿರಿಸಿ ನನ್ನನ್ನು ತಮ್ಮೊಂದಿಗೆ ಚಾವಡಿ ಕಡೆ ಕರೆದೊಯ್ದರು. ವಲ್ಲೆಸಾರ್‍ ಎಂದರೂ ಕೇಳದೆ ನನಗೂ ತಿಂಡಿ ಕಾಫಿ ಕೊಟ್ಟರು… ಅವರ ಸದ್ವರ್ತನೆ ಕಂಡು ನಾನು ಆಶ್ಚರ್‍ಯ ಚಕಿತನಾದೆ… ಪೋಲೀಸ್ ಇಲಾಖೆಯಲ್ಲೂ ಇಂಥ ಒಳ್ಳೆಯವರುಂಟಾ ಎನ್ನಿಸಿತು.

ಇನ್ಸ್‌ಪೆಕ್ಟರ್‍ ನನ್ನೊಂದಿಗೆ ಸ್ನೇಹದಿಂದಲೇ ಮಾತುಕತೆ ಪ್ರಾರಂಭಿಸಿದರು. ಯಾವೂರು; ಏನ್ಕತೆ; ಅಲ್ಲಿಂದ ಇಲ್ಲಿಗೆ ಯಾಕೆ ಬಂದ್ರೀ? ತಂದೆ ತಾಯಿ ಇದ್ದಾರ? ಸತ್ತಿದ್ದಾರ? ಶಿಕ್ಷಣ ಎಲ್ಲಾಯ್ತು? ಎಲ್ಲಿಯವರೆಗೆ? ಮದುವೆಯಾಗಿದೆಯಾ? ಮಕ್ಕಳೆಷ್ಟು?…. ಇತ್ಯಾದಿ ಇತ್ಯಾದಿ ಬಗ್ಗೆ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ನಾನು ಶಾಂತಚಿತ್ತದಿಮದ ಉತ್ತರ ಕೊಟ್ಟೆ…. ಅಂತೂ ಬಚಾವಾಗ್ತೀನಿ ಅಂತ ಒಳಗೊಳಗೆ ಖುಷಿಪಟ್ಟೆ.

ಸುಳುವಾಯಿಯ ಹುದಲಿಂದ ಜೀಪು ಸಂಜೆಗೆ ಬಂತು. ಇನ್ಸ್‌ಪೆಕ್ಟರ್‍ ಹೆಣದ ಜೊತೆಗೆ ನನ್ನನ್ನೂ ಅಮೃತಾಪುರಕ್ಕೆ ಕರೆದೊಯ್ದರು. ಠಾಣೆಯಲ್ಲಿ ಅವತ್ತು ರಾತ್ರಿ ಕಳೆಯಬೇಕಾಯಿತು; ಅದು ಮನೆಗಿಂತ ಹೆಚ್ಚು ಭಾವಿಸಿದೆ…. ನಿದ್ದೆ ಹೋದಾಗ ಸುಂದರವಾದ ಕನಸುಗಳನ್ನು ಕಂಡೆ.

ಸೂರ್ಯೋದಯಕ್ಕೂ ಮೊದಲೆ ಠಾಣೆ ಕಿಚಗುಡತೊಡಗಿತು. ಕರ್ನಾಟಕದ ನನ್ನೂರಿನಿಮದ ನನ್ನ ತಮ್ಮ, ನಿಂಗಮ್ಮಜ್ಜಿ ಮತ್ತು ಹೆಂಡತಿ ಬಂದಿದ್ದರು. ಅವರೆಲ್ಲ ನನ್ನ ಸುತ್ತ ನೆರೆದು ಎಂಥಾ ಕೆಲಸ ಮಾಡಿಬಿಟ್ಟೆಲ್ಲೋ…. ಇಂಥ ಕೆಲಸನ ನಮ್ ವಂಶದಲ್ಲಿ ಯಾರು ಮಾಡಿರಲಿಲ್ವಲ್ಲೋ ಎಂದು ಒಮ್ಮೆಗೆ ತಾರಕಕ್ಕೇರಿದರು. ನಾನು ಮಾಡಿಲ್ಲ, ಈ ಕೆಲಸ. ಬಾಯಿಮುಚ್ಚಿಕೊಮಡು ಸುಮ್ಕಿರ್‍ರಬೇ ಎಂದರೂ ಅವರು ಕೇಳಬೇಕಲ್ಲ? ನೀವಿಂಥೋರಂತ ಮೊದ್ಲೆ ತಿಳಿದಿದ್ರೆ ನಾನ್ ನಿಮ್ಮನ್ ಮದ್ವೆ ಆಗ್ತಿರಲಿಲ್ಲ ಎಂದು ಹೆಂಡತಿ ಅಬ್ಬರಿಸಿದಳು….. ಹುಟ್ಟುಓ ಮಗು ಕೊಲೆಗಾರನ ಮಗು ಎಂದು ಕರೆಸಿಕೊಳ್ಳುವುದಲ್ಲ ಎಂದು ಹಲುಬಿದಳು ನನ್ನ ಪ್ರೀತಿಯ ಹೆಂಡತಿ. ಆಕೆ ಹೀಗೆ ಯೋಚಿಸದೆ ನುಡಿಯಬಹುದೆಂದುಕೊಂಡಿರಲಿಲ್ಲ. ನನ್ನ ತಮ್ಮ ದುರ್ಧಾನ ತೆಗೆದೊಮಡವನಂತೆ ಗುಲ್ ಮೊಹರ್‍ ಮರದಡಿ ಕೂತಿದ್ದ. ನನಗೆ ಇವರೆಲ್ಲರಿಗಿಂತ ನಾರಾಣಿಯೇ ಆತ್ಮೀಯ ಬಂಧುವೆನಿಸಿದನು, ನಿಟ್ಟುಸಿರಿಟ್ಟೆನು. ನಿಂಗಮ್ಮಜ್ಜಿ ತನ್ನ ಪಾಡಿಗೆ ತಾನು ಸಂಸಾರದ ಪ್ರಹರ ಹೇಳತೊಡಗಿತ್ತು. ಇನ್ಸ್‌ಪೆಕ್ಟರ್‍ ಬರುವ ಹೊತ್ತಾಯ್ತು ಅಂತ ಅವರೆಲ್ಲರನ್ನು ಹೊರಗೆ ಕಳಿಸಿದ ಪೇದೆ.

ಸರಿ ಸುಮಾರು ಹತ್ತು ಗಂಟೆಗೆ ಎಸೈ ಬಂದರು. ಸೂಕ್ಷ್ಮವಾಗಿ ಗಮನಿಸಿದರು. ಪಂದಿಕೊನೆಯಿಂದ ಗೌಡ, ಕುಲಕರ್ಣಿ, ಹೆಚ್ಚೆಮ್ ಲಕ್ಷ್ಮೀನರಸಿಂಹಯ್ಯ, ಶೀನಪ್ಪ ಮತ್ತಿತರರು ಬಂದಿದ್ದರು. ನನ್ ಮೊಮ್ಮಗನ್ನ ಬಿಡ್ರಪೋ ಅಂತ ನಿಂಗಜ್ಜಿಯೂ; ನನ್ನ ಗಂಡನ್ನ ಬಿಟ್ಟು ಪುಣ್ಯ ಕಟ್ಟಿಕೊಳ್ರಿ ಅಂತ ನನ್ನ ಹೆಂಡತಿಯೂ; ಎಸೈಗೆ ಕನ್ನಡ ಅರ್ಥವಾಗುವುದು ಸಾಧ್ಯವಿರಲಿಲ್ಲ. ಸೆಲ್‌ನಲ್ಲಿದ್ದ ನಾನು ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಿದ್ದೆ. ಎಸೈ ಜೊತೆ ಎಲ್ಲರೂ ಅಲಾಯದವಾಗಿ ಮಾತಾಡಿದರು. ನಮ್ಮ ಸೀನಪ್ಪನೂ ಸಹ….

ನಂತರ ನನ್ನನ್ನು ತಮ್ಮ ಟೇಬಲ್ ಬಳಿಗೆ ಬರಮಾಡಿಕೊಮಡರು ಎಸೈ…. ನಿಜ ಹೇಳಿ ಮೇಷ್ಟ್ರೇ…. ನೀವು ಅವನ್ನ ಕೊಲೆ ಮಾಡಿದ್ದು ನಿಜ ತಾನೆ! ಅವರು ತಲುಗಿನಲ್ಲಿ ಮಾತಾಡಿದರು. ನಾನು ಆಪಾದನೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಗ್ರಾಮಸ್ಥರಿಗೆ ನಿಮ್ಮ ಬಗ್ಗೆ ಅನುಮಾನವಿರುವುದಲ್ಲ, ಇದಕೇನು ಹೇಳುವಿರಿ ಎಂದವರು ಕೇಳಿದಾಗ ನಾನು ನಿರ್ವಂಚನಿಯಿಂದ ಆದಿಯಿಂದ ಅಂತ್ಯದವರೆಗೆ ಹೇಳಿದೆ.

ನಾರಾಣಿ ನಮ್ಮ ಮನೆಯಿಂದ ಕದಲಿದ ಮೇಲೆ ಸುಮ್ಮನಿರಲಿಲ್ಲ…. ಬುತ್ತಿ ಹಲ್ಲು ಹತ್ತಿದ ನಾಯಿಯಂತೆ…. ಪದೇ ಪದೇ ಅಟಕಾಯಿಸಿದನು. ಮತ್ತೊಂದು ದಿನ ಗುಡಿ ಎದುರು ಲೇ ಮೇಷ್ಟ್ರೇ ಇಪ್ಪತ್ತು ಕೊಡ್ತೀಯೋ ಇಲ್ಲೋ ಎಂದು ಜಬರ್ದಸ್ತಾಗಿ ತರುಬಿದನು. ಯಾವ ಕಾರಣಕ್ಕೂ ಹಣ ಕೊಡಬಾರದೆಂದು ನಾನು ಅವತ್ತೇ ನಿರ್ಧರಿಸಿದ್ದೆ. ಆದ್ದರಿಂದ ಅವನ ಬೆದರಿಕೆಗೆ ಮಾಗಲಿಲ್ಲ. ಒದೆಯುವಷ್ಟು ಸಿಟ್ಟು ಬಂದು ಅವನ ಮೈಗೆ ಕೈಹಚ್ಚಿದೆ ಅವನೂ ಅಷ್ಟೆ! ಆದರೆ ನನ್ನ ಕೈಯೇ ಹೆಚ್ಚಾಗಿತ್ತು. ಜನ ಸುತ್ತು ನಿಮತು ನೊಡುತ್ತಿದ್ದರೇ ಹೊರತು ಜಗಳ ಬಿಡಿಸುವ ನರಮಾನವರಿರಲಿಲ್ಲ.

“ಲೇ ಕೆಲವು ದಿನದೊಳಗಾಗಿ ನಿನಗೊಂದು ಗತಿ ಕಾಣಿಸ್ಲಿಲ್ಲ ನನ್ನ ಹೆಸ್ರು ದುಗ್ಗಾ ನಾರಾಣೀನೇ ಅಲ್ಲ” ಅವನು ಶಪಥ ಮಾಡಿದನು.

“ನಾನೇನು ಕೈಗೆ ಬಳೆ ತೊಟ್ಕೊಂಡಿಲ್ಲಲೇ…. ನಿನ್ನ ಕಾಲಾಗೇನಾಗ್ತದೆ…. ನಾನೂ ನಿನ್ನ ಹುಟಟಿಲ್ಲ ಅನ್ನಿಸ್ತೀನಿ….” ಇಷ್ಟೆ ನಾನು ಸಿಟ್ಟಿನ ಕೈಗೆ ಬುದ್ಧಿಕೊಟ್ಟು ಮಾತಾಡಿದ್ದು. ಅದನ್ನೆಲ್ಲ ಜನ ಕೇಳಿಸಿಕೊಂಡಿದ್ದರು.

ಇದನ್ನೆಲ್ಲ ಸವಿವರವಾಗಿ ಎಸೈಗೆ ಹೇಳಿದೆ…. ಅಲ್ಲದೆ ನನ್ನ ಪರವಾಗಿ ಶೀನಪ್ಪ ಮತ್ತಿತರರು ವಿನಂತಿಸಿದ್ದರು. ಅಲ್ಲದೆ ಎಸೈಗೆ ಏನು ಮೋಡಿ ಮಾಡಿದ್ದರೋ ಏನೋ ಆತ ಅವತ್ತು ಸಂಜೆ ನನ್ನನ್ನು ಬಿಡುಗಡೆ ಮಾಡಿದರು.

ನಾರಾಣಿಯೊಮದಿಗೆ ನನ್ನ ಒಡನಾಟದ ಘಟನೆ ನನಗೆ ದೊಡ್ಡ ಪಾಠವನ್ನೇ ಕಲಿಸಿತ್ತು. ನಮ್ಮ ಅಜ್ಜಿ, ಹೆಂಡತಿ ಮತ್ತಿರರು ಕೆಲಸ ಬಿಡಬೇಡ…. ಹೊಟಟೆಗೆ ಮಣ್ಣು ತಿನ್ನೋದಾ ಅಂತ ಎಷ್ಟು ಹೇಳಿದರೂ ಕೇಳದೆ ನಾನು ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದೆ. ನನ್ನ ಹುಟ್ಟಿದ ಊರಲ್ಲಿ ಕೈಲಾದಷ್ಟು ಕೆಲಸ ಮಾಡಿ, ಹಿಂಡಿ ರೊಟ್ಟಿ ಉಂಡು ನಿಶ್ಚಿಂತೆಯಿಂದಿರುವೆ.
* * *
ಕೀಲಿಕರಣ ದೋಶ ತಿದ್ದುಪಡಿ: ರಾಮಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.