ಶಾಮಣ್ಣ – ೩

ತೃತೀಯಾಸ್ವಾಸಂ

ನನಗೆ ಶಾಮ ಇಷ್ಟವಾಗಲಿಕ್ಕೆ ಕಾರಣ ಅವನು ಹೆಚ್ಚು ಗಲಿಬಿಲಿಗೊಳ್ಳುತ್ತಿದ್ದುದು. ಗಲಿಬಿಲಿಯ ಕಾರ್ಯ ಕಾರಣ ಹೆಚ್ಚು ಅಸ್ಪಷ್ಟವಾಗಿತ್ತು. ಲೇಕಖ ಸಹಜ ಸ್ವಭಾವದಿಂದ ಅವನ ಗೊಂದಲಪೂರ್‍ಣ ವ್ಯಕ್ತಿತ್ವದ ಮಹತ್ವದ ಅನ್ವೇಷಕನಾಗಿದ್ದೆ. ಸ್ತ್ರೀಲಿಂಗವಾಚಕ ನುಡಿದ ಕಡೆ ಪುಲ್ಲಿಂಗ ನುಡಿದುಬಿಡುತ್ತಿದ್ದ; ಕರ್‍ತು ಇರಬೇಕಾದ ಕಡೆ ಕರ್ಮವೋ; ಕರ್ಮ ಇರಬೇಕಾದ ಕಡೆ ಕರ್ತೃ ಪ್ರಯೋಗವಾಗಿಬಿಡುತ್ತಿತ್ತು. ಕೂಡ್ರ ಬೇಕಾದ ಕಡೆ ನಿಲ್ಲುತ್ತಿದ್ದ ನಿಲ್ಲಬೇಕಾದ ಕಡೆ ಕೂಡ್ರುತ್ತಿದ್ದ. ಇನ್ನೊಂದು ವಿಚಿತ್ರವೆಂದರೆ ಅಳ್ಬೇಕಾದ ಕಡೆ ನಗುತ್ತಿದ್ದುದು ನಗಬೇಕಾದ ಕಡೆ ವಿಷಾದದ ಕವಚದೊಳಗೆ ಮುಖವನ್ನು ಮರೆಮಾಚಿಕೊಳ್ಳುತ್ತಿದ್ದನು. ಸಾರ್ವಜನಿಕವಾಗಿ ಅವನು ನಗೆಪಾಟಲಿಗೀಡಾಗಿ ಬಿಡುತ್ತಿದ್ದುದು ನನಗೆ ಅಸಹನೀಯವಾಗುತ್ತಿತ್ತು. ಇತರರಂತೆ ನಾನು ಅ ವನನ್ನು ವಿಕ್ಷಿಪ್ತರ ಪಟ್ಟಿಗೆ ಸೇರುಸಿತ್ತಿರಲಿಲ್ಲ. ದೋಸೆಗೆ ರಘು ಮಹಾಶಯ ಐತಿಹಾಸಿಕ ಮಹತ್ವ ನೀಡಲು ಕಾರಣವಾಗಿದ್ದ ಉಡುಪಿ ಶ್ರೀಕೃಷ್ಣಭವನಕ್ಕೋ; ಜಠರ ಸಂಬಂಧೀ ವ್ಯಾದಿಗಳ ತವರಾದ ವಗ್ಗರಣೆ, ಮೆಣಸಿನ ಖ್ಯಾತಿಯ ನಾಗಣ್ಣನ ಚಹಾದಂಗಡಿಗೋ; ಗುಹ್ಯ ಸಂಬಂಧೀ ರೋಗಗಳನ್ನು ತೊಡೆ ನಡುವಿರಿಸಿಕೊಂಡು ನರಳಿ ಸಜೀವ ಸಮಾಧಿಯಾಗಿದ್ದ ಜಗದ್ಗುರುವಿನ ಹೆಸರಲ್ಲಿದ್ದ ಉದ್ಯಾನವನಕ್ಕೋ ಕರೆದೊಯ್ದು ಅಂಟಿಕೊಂಡಂತೆ ಕೂತು ಸಾಹಿತ್ಯದ ಆಗುಹೋಗುಗಳ ಕುರುತಿ ಚರ್ಚಿಸುತ್ತಿದ್ದೆ. ಆರಂಭದಲ್ಲಿ ಅನಕ್ಷಸ್ಥರಂತೆ ತೇಜೋಹೀನನಂತೆ ವರ್ತಿಸುತ್ತಿದ್ದ ಅವನು ಕ್ರಮೇಣ ಚರ್ಚೆಯಲ್ಲಿ ಪಾಲ್ಗೊಳ್ಲುತ್ತಿದ್ದ. ಮುಖ್ಯವಾಗಿ ಕಾವ್ಯದ ಫಾರಂ ಬಗ್ಗೆ ಪ್ರಖರವಾಗಿ ಮಾತಾಡುತ್ತಿದ್ದ. ಕುವೆಂಪು ಕವಿತೆಗಳನು ಓದಲಿಷ್ಟಪಡುತ್ತಿದ್ದ. ಬೇಂದ್ರೆ ಕವಿತೆಗಳನ್ನು ಹಾಡುವ ರೀತಿಯಲ್ಲಿ ಗೊಣಗುತ್ತಿದ್ದ. ಕುಮಾರವ್ಯಸನ ನಂತರ ಕನ್ನದದಲ್ಲಿ ಮಹತ್ವದ ಕವಿ ಹುಟ್ಟಲಿಲ್ಲ ಎಂದು ಮಿದುಕುತ್ತಿದ್ದ; ಅನೇಕ ಪಾಶ್ಚಿಮಾತ್ಯ ಕವಿಗಳ ಮೂಲಕ ಕುವೆಂಪುರವರು ಯಾಗೆ ಗ್ರೇಟೂ ಅಂತ ನಾನು ವಾದಿಸಲು ಪ್ರಯತ್ನಿಸುವ ಭರದಲ್ಲಿ ಇಂಗ್ಲೀಷ್ ಕವಿತೆಯ ಚೂರುಗಳನ್ನು ಕೋಟ್ ಮಾಡಿದ್ನೆಂದರೆ ಅವನು ಜೀವ ಕಳೆದುಕೊಂಡವನಂತೆ ಕೂತು ಬಿಡುತ್ತಿದ್ದ. ಪರಾವರ್ತಿತ ಕ್ರಿಯೆಯಿಂದ ಹೊರಬಂದು ನಾನು ಡೈರೆಕ್ಟಾಗಿ ಬೇಂದ್ರೆ ಎಂಬ ಕಿನ್ನರ ಲೋಕಕ್ಕೆ ಹೋಗಿಬಿಡುತ್ತಿದ್ದೆ. ಅವನು ಚೇತರಿಸಿಕೊಳ್ಳುತ್ತಲೇ ಇರಲಿಲ್ಲ. ಅದಕ್ಕೆ ತುಂಬ ಸಮಯ ಹಿಡಿಯುತ್ತಿತ್ತು. ಆ ಅವಧಿಯಲ್ಲಿಯೇ ಅವನು ತನಗರಿಯದಂತೆ ಮಾತು ಮತ್ತು ಬರಹದಲ್ಲಿ ಪರಪಾಟುಗಳನ್ನು ಮಾಡುತ್ತಿದ್ದುದು. ಈ ಅವಧಿಯಲ್ಲಿಯೇ ನಾನು ಫ್ರಾಯ್ಡನನ್ನು ಮೊರೆ ಹೋಗಿದ್ದು. ಸ್ಲಿಪ್ ಆಫ್ ಟಂಗ್, ಸ್ಲಿಪ್ ಆಫ್ ರೈಟಿಂಗ್; ಸ್ಲಿಪ್ ಆಫ್ ರೀಡಿಂಗ್ ಹೀಗೆ ಅನೇಕ ರೀತಿಯಲ್ಲಿ ಫ್ರಾಯ್ಡ್ ವ್ಯಾಖ್ಯಾನಿಸಿದ್ದು ನನಗೆ ಓದಲು ಸಾಧ್ಯವಾಗಿದ್ದು ಶಾಮನ ನಡುವಳಿಕೆಯ ಪ್ರೇರಣೆಯಿಂದಲೇ. ಈ ರೀತಿಯ ಭಾವನೆಗಳ ಪರಾವರ್ತಿತ ಸ್ಖ್ಲಲನಗಳಿಗೆ ಮೂಲ ಕಾರಣ ಹುಡುಕುವ ಪ್ರತ್ನದಿಂದಲೇ ಅವನಿಗೆ ನಾನು ಮತ್ತಷ್ಟು ಹತ್ತಿರವಾದದ್ದು. ಶಾಮನ ಮಾನಸಿಕ ಅಸಮತೋಲನ ಹೆಚ್ಚುತ್ತಿರುವುದನ್ನು ಗುರುತಿಸಿಯೇ ನಾನವನನ್ನು ಅದೇ ಇನ್ನು ವಾರಪತ್ರಿಕೆಯೊಂದನ್ನು ಆರಂಭಿಸಿದ ಡಾಕ್ಟರ್ ಕಮಲಾಕರನಿಗೆ ಪರಿಚಯಿಸಿದ್ದು. ಆಂಧ್ರ ಮೂಲದವನದ ಕಮಲಾಕರ ಚೆನ್ನಾರೆದ್ದಿ ನೇತೃತ್ವದ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಭಾಗವಹಿಸಿ, ಹೋರಾಡುತ್ತಲೇ ತ್ರಿಪುರನೇನಿ ಶ್ರೀನಿವಾಸ್‌ರವರ ‘ಗಾಯಂ ಪಡ್ಡ ಗುಲಾಬಿ’ ಕವಿತಾ ಸಂಕಲನವನ್ನು ಕಆಂಕುಳಲ್ಲಿಟ್ಟುಕೊಂಡುನಕ್ಸಲೈಟಾಗುವ ಕನಸು ಕಾಣುತ್ತ, ಕನಸಿನೊಳಗೆ ಪೋಲಿಸರಿಗೆ ಅರೆಸ್ತಾಗುತ್ತಾ; ತಪ್ಪಿಸಿಕೊಳ್ಳುತ್ತ; ಪ್ರತಿನಿತ್ಯ ಪೋಲೀಸ್ ಎನ್‌ಕೌಂಟರಲ್ಲಿ ಸಾಯುತ್ತ, ಇನ್ನೇನು ಕ್ರಾಂತಿಯ. ಸಂಪೂರ್ಣ ಸಮಾಜ ಬದಲಾವಣೆಯ ಹುಚ್ಚು ಹಿಡಿದು ತೆಲಂಗಾಣದ ಪ್ರತಿ ಬೀದಿ ಬೀದಿಯಲ್ಲಿ ನಿರ್ನಾಮವಾಗುತ್ತಾನೆ ಎನ್ನುವಾಗ ಸದರಿ ಗ್ರಾಮದ ತನ್ನ ಒಡಹುಟ್ಟಿದ ಅಕ್ಕನ ಮನೆಗೆ ಸೇರಿಕೊಂಡು ಬಿಟ್ಟಿದ್ದ. ತನ್ನ ಮಗಳನ್ನು ಮದುವೆ ಮಾಡಿಕೊಂಡರೆ ಕೋಟಿ ಗಾಯಾಲ ವೀಣಾ ತೆಲಂಗಾಣ ತಮ್ಮನ ಮನಸ್ಸಿನಿಂದ ಉದುರಿ ಹೋಗಬಹುದೆಂಬ ಆಸೆಯಿಂದ ಒಡಹುತ್ತಿದ ಅಕ್ಕ ಗತಿಸಿದ ತನ್ನ ಗಂಡನ ಗ್ರಾಚ್ಯೂಟಿ, ಪಿಎಫೂ ವಗೈರೆಯನ್ನೆಲ್ಲ ತಮ್ಮನ ಮುಂದಿಟ್ಟು ಸ್ವಂತ ಉದ್ಯೋಗ ಆರಂಭಿಸಿ ನಿನ್ನ ಕಾಲ ಮೇಲೆ ನೀನು ನಿಂತುಕೊಂಡು ಕನ್ಯಾದಾನ ಸ್ವೀಕರಿಸು ಎಂದು ಗೋಗರೆದಿದ್ದ್ದ್ದಳು. ಆ ಹಣವನ್ನು ಬಂಡವಾಳವಾಗಿರಿಸಿಕೊಂಡು ‘ಕಮಲಾಕರ ಖಡ್ಗ’ ಎಂಬೊಂದು ವಿಚಿತ್ರ ಹೆಸರಿನ ವಾರಪತ್ರಿಕೆಯನ್ನು ಶುರು ಮಾಡಿದ್ದ. ಭ್ರಷ್ಟರಿಗೆ ಸಿಂಹಸ್ವಪ್ನ, ಕ್ರಾಂತಿಯ ಕೈಗನ್ನಡಿ ಇತ್ಯಾದಿ ಘೋಷಣೆಗಳಿಂದಾಗಿಸದರೀ ನಗರದ ಉಳ್ಳವರು ಪರ್ಸಿನೊಂದಿಗೆ ಪತ್ರಿಕೆಯನ್ನು ಇರಿಸಿಕೊಳ್ಳತೊಡಗಿ ಅದಕ್ಕೊಂದು ನೆಲೆ ಕಲ್ಪಿಸಿದ್ದರು. ಪ್ರತಿ ಪತ್ರಿಕೆಯೊಂದಿಗೆ ಆತ ತನ್ನ ಬಗ್ಗೆ ತಾನೇ ಒಂದೊಂದು ರೀತಿಯ ಗಾಸಿಪ್ ಹಬ್ಬಿಸಿಕೊಳ್ಳುತ್ತಿದ್ದ. ಪೋಲಿಸರನ್ನೇ ಕೊಂದಿರುವನೆಂದೋ ಹೀಗೆ ಒಂದಲ್ಲಾ ಒಂದು ಮುದ್ರಿಸಿದ ಪತ್ರಿಕೆಯ ಪ್ರತಿಯೊಂದುಸಂಚಿಕೆಯೂ ಜನರ ಜೇಬಿನೊಳಗೆ ಆಶ್ರಯ ಪಡೆಯುತ್ತಿದ್ದವು. ಸಮಾಜದ ಭಯ ಮತ್ತು ಕೀಳಭಿರುಚಿಯನ್ನೇ ಬಂಡವಾಳವಾಗಿಟ್ಟುಕೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡ. ಳು ಸಾವಿರ ರೂಪಾಯಿ ಬೆಲೆ ಬಾಳುವ ಕೂಲಿಂ ಗ್ಲಾಸ್ ಧರಿಸಿಕೊಂಡೇ ಶೌಚ ಇತಾದಿ ಕೆಲಸ್ ಕಾರ್ಯ ಪೂರೈಸುತ್ತಿದ್ದ. ಅಂಬಾಸಾಡರ್ ಕಾರು ಖರೀದಿಸಿದ್ದ. ನಾಕು ಮಂದಿ ಕಣ್ಣಿಗೆ ಹುಳ್ಳಗೆ ಬೆಳ್ಳಗೆ ಕಾಣುತ್ತಿದ್ದ.. ಅನಸೂಯಾ, ರಘು, ಶಾಮನನ್ನು ಕೇಂದ್ರವಾಗಿರಿಸಿಕೊಂಡು ರೋಮಾಂಟಿಕ್ಕಗಿರೋ ಕಾದಂಬರಿ ಬರೆದುಕೊಡು ಎಂದೂ, ಕೈತುಂಬ ಸಂಭಾವನೆ ಕೊಡುವೆನೆಂದೂ ನನಗೆ ಪುಸಲಾಯಿಸುತ್ತಿದ್ದ. ಅಂಬರೀಷ್, ಲಕ್ಷ್ಮೀ, ವಿಷ್ಣುವರ್ಧನ್ ಹಾಕ್ಕೊಂಡು ತಾನೇ ಸಿನಿಮಾ ಮಾಡುವುದಾಗಿಯೂ ಆಸೆ ತೋರಿಸುತ್ತಿದ್ದ. ನಾನೀ ವಸ್ತುವನು ಇಟ್ಟುಕೊಂಡು ಕಾದಂಬರಿ ಬರೆಯುವ ಪ್ರಯತ್ನ ಮಾಡಿದ್ದುಂಟು. ಆದರೆ ಕೈ ನನಗರಿವಿಲ್ಲದಂತೆ ಕಮಲಾಕರನ ಬಗ್ಗೆ ಬರೆಯಲು ಮುನ್ನುಗ್ಗುತ್ತಿತ್ತು. ಗಣೇಶನನ್ನು ಮಾಡಲು ಹೋಗಿ ಅವರ್ಪ್ಪನನ್ನು ಮಾಡಿದರೆ ಎಂಬ ಫಜೀತಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಗ್ಯಾಅರಂಟಿ ಅಂತ ನಾನು ಬರೆದ ಹಾಳೆಗಳನ್ನು ಚೂರು ಚೂರು ಮಾಡಿ ನಮ್ಮ ಓಣಿಯ ಇಥಿಹಾಸ ಪ್ರಸಿದ್ಧ ಬಸವನ ಬಾವಿಯಲ್ಲಿ ಹಾಕಿ ನಿರಮ್ಮಳವಾಗಿದ್ದು ಬಿಟ್ಟೆ. ಶಾಮ ತನ್ನ ಬಗ್ಗೆ ತಾನೆ ಬರೆಯಲೆಂಬ ಇರಾದೆ ನನಗಿತ್ತು. ಆದರೆ ಶಾಮನನ್ನು ಅವನಿಗೆ ಪರಿಚಯಿಸಲು ನಾನೆಂದೂ ಪ್ರಯಿತ್ನಿಸ್ದಿದವನಲ್ಲ. ತುರ್ತು ಪರಿಸ್ಥಿತಿ ವಿರೋಧಿ ಕವಿ ಸಮ್ಮೇಳನದಲ್ಲಿ ಶ್ರೀಶ್ರೀಯವರ ಕವಿತೆಯೊಂದನ್ನು ಅನುವಾದಿಸಿ ಓದಲಿಕೆಂದು ಬಂದಿದ್ದ ಕಮಲಾಕರ ಪುಣ್ಯಕ್ಕೆ ಶಾಮನ ಪಕ್ಕದಲ್ಲಿ ಕೂತಿದ್ದ. ಬೆಕ್ಕಿನ ಮಗ್ಗುಲು ಕೂತ ಇಲಿಯಂತೆ ಜಾಗ ಬದಲಾಯಿಸಲು ಶಾಮ ಪ್ರಯತ್ನಿಸುತ್ತಿರುವುದನ್ನು ನೂರಕ್ಕೆ ನೂರರಷ್ಟು ರಾಜಕಾರಣಿಯಾಗಿದ್ದ ಗೊಬ್ಬರದಂಗಡಿ ಜಲಜಾಕ್ಷಿ ಗಮನಿಸುತ್ತ ನನ್ನ ಕಿವಿಯಲ್ಲಿ ಪಿಸಿಪಿಸಿ ಗುನುಗಿ ಕಿಸಕ್ಕನೆ ನಕ್ಕಳು. ನಾನು ಜಲಜಾಕ್ಷಿಯೊಡನೆ ಸೇರಿಕೊಂಡು ತನ್ನ ವಿರುದ್ಧ ಮಸಲತ್ತು ಮಾಡುತ್ತಿರುವನೆಂದು ಅನಗತ್ಯ ಅರ್ಥಮಾಡಿಕೊಂಡು ಶಾಮ ಕವಿತೆ ಇದ್ದ ಹಾಳೆಯನ್ನು ತಿರುಗುಮುರುಗಾಗಿ ಹಿಡಿದುಕೊಂಡಿದ. ಕವಿತೆ ಸಾದರ ಪಡಿಸುವಾಗಲೂ ಹಾಳೆಯಲ್ಲಿ ತಲೆಕೆಳಗಾಗಿರುವ ಅಕ್ಷರಗಳಿಗೆ ತಾನೆ ಬೆರಗಾದನೆ ಹೊರತು ಸರಿಪಡಿಸಿಕೊಳ್ಳುವ ಸಾಮಾನ್ಯ ಜ್ಞಾನ ಅವನಿಗೆ ಹೊಳೆಯಲಿಲ್ಲ. ಅವನು ಆ ಒದ್ದಾಟದಲ್ಲಿರುವಾಗಲೇ ತಲೆಯಿಂದ ಮೂಡಿದ ಬೆವರು ಅಕ್ಷರಗಳ ಮೇಲೆ ಬಿದ್ದು ಅಸ್ಪಷ್ಟತೆಯನ್ನು ದ್ವಿಗುಣಗೊಳಿಸಿದವು. ಇದರಿಂದ ಕಾವ್ಯ ರಸಿಕರು ರೋಸಿ ಹೋ ಹೋ ಅಂದರು. ಸಿಳ್ಳೆ ಕೇಕೆ ಹಾಕಿದರು. ಜೇಬಲ್ಲಿದ್ದ ಕರವಸ್ತ್ರ ತೆಗೆದು ಬೆವರೊರೆಸಿಕೊಳ್ಳುವ ನೆಪದಲ್ಲಿ ಗಲಭೆ ಪೀಡಿತ ಮುಖ ಮರೆಮಾಚಿಕೊಳ್ಳಬೇಕೆಂಬ ಸಾಮಾನ್ಯ ಜ್ಞಾನದಿಂದ ವಂಚಿತನಾಗಿ ಮತ್ತೆ ಇಲಿಯಂತೆ ಮುದುಡಿ ಕಮಲಾಕರನ ಮಗ್ಗುಲು ಕುಳಿತುಕೊಂಡ. ತನ್ನೊಳಗಿನ ಸಾಹಿತ್ಯ ಸೃಜನಶೀಲತೆಯನ್ನು ನಿರ್ನಾಮ ಮಾಡುವ ಮಸಲತ್ತು ಗುಟ್ಟಾಅಗಿ ನಡೆದಿರುವುದೆಂದೂ; ನಾನೇ ಆ ಮಸಲತ್ತಿನ ನೇತೃತ್ವ ವಹಿಸಿರುವುದಾಗಿಯೂ ಅನುಮಾನಿಸಿದ. ಇದನ್ನು ಪೂರ್ವಭಾವಿಯಾಗಿ ಅರ್ಥಮಾಡಿಕೊಂಡು ನಾನಲ್ಲಿಗೆ ಎದ್ದುಹೋದೆ. ನನ್ನೊಂದಿಗೆ ಗರಿಗರಿ ಖಾದಿ ಸೀರೆ ಉಟ್ಟಿದ್ದ ಜಲಜಾಕ್ಷಿಯೂ ಎದ್ದುಬಂದಳು. ಕಮಲಾಕರನ ಮಾತಿಗೆ ಕಟ್ಟುಬಿದ್ದು ಕವಿ ಸಮ್ಮೇಳನವನ್ನು ಅದರ ಪಾಡಿಗೆ ಅದನ್ನು ಬಿಟ್ಟು ನಾವು ನಾಲ್ಕು ಮಂದಿ ಒಂದೆರಡು ಗುಟುಕು ಚಹ ಕುಡಿದು ನಮ್ಮ ನಮ್ಮ ತನುವ ಸಂತೈಸಿಕೊಳ್ಳಲೆಂದು ನಾಗಣ್ಣನ ‘ಈರಸೈವ ತೀ ಕಾಫಿ ಕ್ಲಬ್ಬಿ’ಗೆ ಹೋದೆವು. ಕ್ರಾಂತಿಯ ಆತ್ಮ ಕಾವ್ಯವೆಂದೋ, ಕಾವ್ಯದ ಆತ್ಮ ಕ್ರಾಂತಿಯೆಂದೋ ಕಮಲಾಕರನೂ; ಕಾವ್ಯದ ಸೂಕ್ಷ್ಮ ಶರೀರದೊಳಗೆ ರಾಕ್ಷಾಕಾರದ ಕ್ರಾಂತಿಯನ್ನು ತುರುಕಿ ಕಾವ್ಯವನ್ನು ಕುರೂಪ ಗೊಳಿಸಿರುವುದು ಸಲ್ಲದೆಂದು ವಾದಮಾಡತೊಡಗಿದೆವು. ಕವ್ಯದ ಎರಡು ನಮೂನೆಗಳು ತಾವೇ ಎಂಬಂತೆ ಜಲಜಾಕ್ಷಿ ಮತ್ತು ಶಾಮ ಮಿಕಿ ಮಿಕಿ ನೋಡುತ್ತಿದ್ದರು.ಟೇಬಲ್ ಕೆಳಗೆ ಒಂದು ಕಾಲಿನಿಂದ ಶಾಮನನ್ನೂ; ಇನ್ನೊಂದು ಕಾಲಿನಿಂದ ಕಮಲಾಕರನನ್ನೂ ತುರಿಸಿ ಸುಪ್ತ ಬಯಕೆಗಳನ್ನು ಉದ್ದೀಪಿಸುವ ತುಂಟ ಪ್ರಯತ್ನದಲ್ಲಿದ್ದ ಜಲಜಾಕ್ಷಿ ಮಮ್ಮಟ, ಆನಂದವರ್ಧನ, ಕುಂತಕರೇ ಸ್ತ್ರೀ ವೇಶ ದರಿಸಿರುವಂತೆ, ಲೌಕಿಕ ಮಹಾಕವ್ಯವೇ ಸ್ತ್ರೀ ರೂಪ ಧರಿಸಿರುವಂತೆ; ಅಪುರ್ವ ತೇಜಸ್ಸಿನಿಂದ ಗೋಚರಿಸುತ್ತಿದ್ದಳು. ಪಾದ ಸ್ಪರ್ಶದಿಂದ ಉತ್ತೇಜಿತನಾದ ಸಂಪಾದಕ ಆಕೆಯ ಮಗ್ಗುಲು ಬಂದು ಕೂತ. ನಾನು ಮಾಡೋ ಕೇಟಿ ಮುಂದೆ ಕವಿತೆ ಏನು ಮಹಾ ಎಂಬ ಅಹಂಕಾರದಿಂದ ನಾಗಣ್ಣ ಮಾತಾಡುತ್ತಿದ್ದ. ಹೀಗಾಗಿ ವಾತಾವರಣ ಗೋಜಲಾಯಿತು. ಪೋಲೀಸರೇ ನಾಗಣ್ಣನ ರೂಪದಲ್ಲಿರುವರೇನೋ ಎಂಬ ಅನುಮಾನದಿಂದಾಗಿ ಚಹದಂಗಡಿ ಮಾಲಿಕನ ಮಾತನ್ನು ಸಾರಾ ಸಗಟು ತಿರಸ್ಕರಿಸುವುದು ಸಧ್ಯವಿರಲಿಲ್ಲ. ಹೀಗಾಗಿ ಎದ್ದು ಬಂದೆವು. ಸಂಪಾದಕ ಮಿತ್ರ ಶಾಮನನ್ನು ತಮ್ಮ ಪತ್ರಿಕೆಗೆ ಏನಾದರೂ ಬರೆದುಕೊಡುವಂತೆ ಕೇಳಿಕೊಂಡ. ಬೆವರಿನಿಂದ ಒದ್ದೆಯಾದ ಕವಿತೆಯನ್ನು ಪರಿಷ್ಕರಿಸಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಇಸಿದುಕೊಂಡ. ಕಮಲಾಕರನೂ; ಜಲಜಾಕ್ಷಿಯೂ ಕಥೆ, ಕಾದಂಬರಿಗಳಂತೆ ಅತ್ತ ಹೊರಟರೆ ತಾನೂ ಶಾಮನೂಎರಡು ದುರ್ಬಲ ಕವಿತೆಗಳಂತೆ ಇತ್ತ ಹೊರೆತೆವು. ದಾರಿ ಉದ್ದಕ್ಕೂ ಅವನು ಮಂಕಾಗಿದ್ದ. ಆ ಮಂಕನ್ನು ಭೇದಿಸುವ ಪ್ರಯತ್ನದಲ್ಲಿ ನಾನು ಏನೇನೋ ಮಾತಾಡುತ್ತಿದ್ದೆ. ಬಹಳ ಹೊಟ್ಟಿನ ತನಕ ಮೌನವಾಗಿದ್ದ. ಅವನು ಇದ್ದಕ್ಕಿದ್ದಂತೆ ಕಮಲಾಕರನಿಗೂ , ಜಲಜಾಕ್ಷಿಗೂ ನಡುವೆ ಅನೈತಿಕ ಸಂಬಂಧ ಇರುವುದಂತೆ ನಿಜವಾ ಎಂಬೊಂದು ಅದ್ಬುತ ವಾಕ್ಯ ಉದುರಿಸಿದ. ಶಾಕ್ ಆದರೂ ನಾನದನ್ನು ತೋರಗೊಡಲಿಲ್ಲ. ಆದ್ದರಿಂದ ನನಗೆ ಆಶ್ಚರ್ಯವ್ವಗಲೀ; ಬೇಸರವಾಗಲೀ ಆಗಲಿಲ್ಲ. ನಾನು ಮೌನವಹಿಸಿದೆ. ಅವನು ಗ್ರಾಮಫೊನ್ ರಿಕಾರ್ಡಿನಂತೆ ಕಾನೂನು ಬಾಹಿರ ಲೈಂಗಿಕ ಚಟುವಟಿಕೆಗಳಿಂದ ಸಮಾಜ ಹಾಳಾಗುತ್ತಿರುವ ಬಗ್ಗೆ ಮಾತಾಡತೊಡಗಿದ. ಕನಿಷ್ಟ ನನ್ನಿಂದ ಆತ ಹ್ಹಾಂ … ಹ್ಹೂ… ಬಯಸಿದ್ದ. ನಾನು ಗೊಂಬೆಯಂತೆ ನಡೆದೆ.

ವಾರೊಪ್ಪತ್ತಿನಲ್ಲಿ ‘ಕಮಲಾಕರ ಖಡ್ಗ’ ಪತ್ರಿಕೆಯಲ್ಲಿ ಶಾಮನ ‘ಊಸರವಳ್ಳಿ’ ಎಂಬೊಂದು ಕಥೆ ಪ್ರಕಟವಾಯಿತು. ಊರಿನ ಪ್ರತಿಯೊಬ್ಬ ಗಣ್ಯ ವ್ಯಕ್ತಿ ಇದು ತನ್ನ ಕುರಿತು ಬರೆದದ್ದೆ ಎಂದು ಆರೋಪಿಸಿಕೊಳ್ಳತೊಡಗಿದ. ನಂತರವೇ ನಾನದನ್ನು ಗಮನಿಸಿದ್ದು. ಒಂದೇ ಉಸುರಿಗೆಓದಿಸಿಕೊಂಡಿತು. ಸೀತಾರಾಮನ ಪಾತ್ರದಲ್ಲಿ ನಾನಿದ್ದೇನೆ ಅಂತ ಒಂದು ಕ್ಷಣ ಅನ್ನಿಸಿಬಿಟ್ಟಿತು. ಎಷ್ಟೊಂದು ಒಳ್ಳೆಕಥೆ ಬರೆಯಲು ಸಾಧ್ಯವಾಗಿದೆ ಈ ಕುಂಬಾರ ಹುಳು ಮನಸ್ಸಿನ ಶಾಮನಿಗೆ ಅಂತ ಅಂದುಕೊಂಡೆ. ಕವಿಗೆ ಕವಿ ಮುನಿವಂ ಅನ್ನುವಂತೆ ಅವನ ಬಗ್ಗೆ ಹೊಟ್ಟೆ ಎಂಬ ಹುಲ್ಲುಮೆದೆಯೊಳಗೆ ಈರ್ಷೆ ಒಂಬ ಬೆಂಕಿಯ ಚೂರು ಕಾಣಿಸಿಕೊಂಡಿತು. ನನ್ನ ಬಗ್ಗೆ ನನಗೇ ಅಸಹ್ಯ ವಾಯಿತು. ಪೊಡೆಯೊಳ್ ಪಂಕ ತುಂಬಿಟ್ಟು ಕೊಂಡು ಅವನ ಬಳಿಗೆ ಹೋಗುವುದು ಅಭಿನಂದಿಸುವ ನಾಟಕವಾಡುವುದು ಸರಿ ಕಾಣಲಿಲ್ಲ. ಅವನು ಅಪರೂಪಕ್ಕೆ ಬರೆದಿರುವ ಒಳ್ಳೆಯ ಕಥೆ, ಸೃಜನಶೀಲತೆಗೆ ಪ್ರೇರಣೆ ನೀಡುವುದೇ ಅದರ ದೊಡ್ಡ ಗುಣ. ನಾನೂ ಒಂದು ಕಥೆ ಬರೆಯಬೇಂದುಕೊಂಡೆ. ಇಂಥ ಪತ್ರಿಕೆಯಲ್ಲಿ ಇಂಥದೊಂದು ಕಥೆ ಬಂದಿದೆ ಗಮನಿಸಿ, ಚರ್ಚಿಸಿಅಂತ ಅನೇಕ ಬರಹಗಾರ ಮಿತ್ರರಿಗೆ ಪತ್ರ ಬರೆದೆ. ದೊಡ್ಡ ಮನಸ್ಸಿನ ಕೆಲವರು ಓದಿ ಅವನಿಗೂ; ನನಗೂ ಪತ್ರ ಬರೆದರು. ಅಂಥ ಕೆಲವು ಪ್ರಶಂಸಾ ಪತ್ರಗಳನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದ. ನಾನು ಅಭಿನಂದಿಸಿದೆ. ಇದು ಅವರ ಬಗ್ಗೆ ಇರಬೌದಾ? ಇವರ ಬಗ್ಗೆ ಇರಾಬೌದಾ? ಅಂತ ಕೇಳಿದೆ ಚಪಲಚಿತ್ತನಾಗಿ. ಜ್‌ಆಡರ ಗೋವಿಂದ, ಸಣ್ರುದ್ರ, ಮಾಜಿ ಛೇರ್ಮನ್ನು ವೆಮ್ಕಟೇಶ ಇಂಥ ಕೆಲವರು ಅಟ್ಯಾಕ್ ಮಾಡಲು ಪ್ರಯತ್ನಿಸಿದರೆಂದೂ; ಲೌಕಿಕ ಕಥೆ ಬರೆದುದಕ್ಕೆ ಮತ್ತು ಮುಂದೊಮ್ದು ದಿನ ತನ್ನ ಬಗ್ಗೇಗೆ ಬರೆದುಬಿಡಬಹುದೆಂದೂ ತಾತನವರು ಬೇಸರ ಮಾಡೊಕೊಂಡಿರುವರೆಂದೂ ವಿವರಿಸಿದ. ಯಾವುದೇ ಒಂದು ಒಳ್ಳೆಯ ಕಥೆಯ ಯಶಸ್ಸು ಇದೇ ಎಂದು ಮತ್ತೆ ಅಭಿನಂದಿಸಿದೆ. ಕಮಲಾಕರನನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಕಥೆಯೇ ‘ಊಸರವಳ್ಳಿ’ ಎಂದು ಶಾಮ ನನ್ನ ಕಿವಿಯಲ್ಲಿ ಪಿಸುಗುಟ್ತಿದ. ಓದಿದ ಕಥೆ ಮತ್ತೊಂದು ಕಣ್ಣೊಳಗೆ ಬಿಚ್ಚಿಕೊಂಡಿತು. ಅವನು ಹೇಳಿದ್ದು ಸರಿ ಅನ್ನಿಸಿತು. ಕಮಲಾಕರ ಮತ್ತು ಜಲಜಾಕ್ಷಿಯ ನಡುವೆ ಅನೈತಿಕ ಸಮ್ಬಂಧ ಇರುವುದೆಂಬ ಕಲ್ಪನೆಯೇ ಒಂದು ಕಥೆಯನ್ನು ಹುಟ್ಟು ಹಾಕಿತ್ತು. ತಾನು ಯಾರ ಬಗ್ಗೆ ಬರೆದಿರುವೆನೋ ಅವನೇ ತನ್ನ ಪತ್ರಿಕೆಯಲ್ಲಿ ಪ್ರಕತಿಸಿ ನೂರೈವತ್ತು ರುಪಾಯಿ ಸಂಭಾವನೆ ಕಳುಹಿಸುರುವನೆಂದಮೇಲೆ ಇದು ಶಾಮನ ದೊಡ್ಡ ಸಾಧನೆಯೇ ಸರಿ ಅಂದುಕೊಂದೆ. ನಂತರ ಗೊತ್ತಾಯಿತು. ಬೇರೆ ಬೇರೆ ಉಪನಾಮಗಳನ್ನಿಟ್ಟುಕೊಂಡು ನಾಡಿನ ಹತ್ತಾರು ಲೈಂಗಿಕ ಕಾಮ ಪ್ರಚೋದಕ ಮಾಸ ಪತ್ರಿಗೆಗಳಿಗೆ ಲೇಖನಗಳನ್ನು ಅವನು ಬರೆಯುತ್ತಿದ್ದುದು. ಕೆಲವನ್ನು ಓದಿದೆ. ನಿಸ್ಸಂದೇಹವಾಗಿ ಕಾಮ ಪ್ರಚೋದಿಸುವಂತಿದ್ದವು. ನನಗೆ ತಿಳಿದಮಟ್ಟಿಗೆ ಅವನು ಒಮ್ಮೆ ಕೂಡ ಸಂಭೋಗ ಮಾಡಿದವನಲ್ಲ. ಬೆಳಕಿನಲ್ಲಿ ತನ್ನ್ ಶಿಶ್ನವನ್ನು ತಾನು ನೋಡಿ ಆನಂದಿಸುತ್ತ ಮುಷ್ಟಿಮೈಥುನ ಮಾಡಿಕೊಂಡವನಲ್ಲ. ಅಂಥವನು ಕಾಮದ ಬಗ್ಗೆ ಇಷ್ಟೊಂದು ಕರಾರುವಾಕ್ಕಾಗಿ ಆಲೋಚಿಸಿ ಬರೆಯುವುದೆಂದರೇನು? ಯವುದರ ಬಗ್ಗೆ ತನಗೆ ಗೊತ್ತಿಲ್ಲವೋ? ದೌರ್ಬಲ್ಯವಿರುವುದೋ? ಪೂರ್ವಾಗ್ರಹ ಭಾವನೆ ಇರುವುದೋ? ಅದನ್ನು ಮರೆಮಾಚಲೋಸುಗ ಮನುಷ್ಯ ಪ್ರಪಂಚಕ್ಕೆ ಪೋಜು ಕೊಡುತ್ತಿರುವನೆಂಬ ಅನುಮಾನ ಬಂತು. ಅವನು ಅಶ್ಲೀಲವನ್ನು ವೈಭವೀಕರಿಸಿ ಬರೆಯುತ್ತಿದ್ದಾಗ ತನ್ನನ್ನೂ; ತನ್ನ ಹೆಸರನ್ನೂ ಮರೆಮಾಚುತ್ತಿದ್ದಾನೆಂದು ತದನಂತರ ಗ್ರಹಿಸಿದೆ. ಸಂಭೋಗದ ಸುಖ ಅನುಭವಿಸಿದನೆಂದರೆ ನಿರಮ್ಮಳವಾಗಿರುತ್ತಾನೆಂದುಕೊಂಡೆ. ಜುಟ್ಟು ಜನಿವಾರವನ್ನು ಅದುಮಿಡುವ ರೀತಿಯಲ್ಲಿ ಅದೂ ಆಗಿತ್ತು. ಹೇಗಾದರೂ ಮಾಡಿ ಅವನನ್ನು ಸಂಭೋಗಕ್ಕೆ ತೊಡಗಿಸಬೇಕೆಂದು ನಿರ್ಧರಿಸಿದ ಮರುದಿನವೇ ಪೋಸ್ಟ್‌ಮ್ಯಾನ್ ತನಾ ಲಟುಕಾಪುಟುಕಾ ಸೈಕಲ್ ಮೇಲೆ ಏದುಸಿರು ಬಿಡುತ್ತ ಬಂದ. ಯಾವುದಾರೊಂದು ಪತ್ರಿಕೆಯವರು ನನ್ಗೆ ಕಥೆ ಕೇಳಿದ್ಯಾರೇನಂತ “ಏನ್ರಾಮಣ್ಣ? ಯಾವಾರ ಲೆಟರ್ಸು, ಅದಾವಂತ” ಕೇಳಿದೆ. ಕೂಡಲೆ ಚಂದಾ ಸಂದಾಯ ಮಾಡತಕ್ಕದ್ದು. ಈ ನೋಟೀಸು ಮುಟ್ಟಿದ ಹದಿನೈದು ದಿನಗಳೊಳಗಾಗಿ ನಿಮ್ಮಿಂದ ಚಂದಾಹಣವಾಗಲೀ; ಬಿಟ್ಟಿಯಾಗಿ ಪತ್ರಿಕೆ ಓದುತ್ತಿರುವುದರ ಬಗ್ಗೆ ಹೇಳಿಕೆ ಓಳಗೊಂಡ ಪತ್ರವಾಗಲೀ ಬಾರದಿದ್ದ ಪಕ್ಷದಲ್ಲಿ ನೀವು ಈ ಭೂಮಿಮೇಲಿಲ್ಲವೆಂದು ಪತ್ರಿಕೆಯ ಆಡಳಿತ ವರ್ಗ ಭಾವಿಸಿ ಪತ್ರಿಕೆ ಕಳುಹಿಸುವುದನ್ನು ನಿಲ್ಲಿಸಲಾಗುವುದೆಂದು ಒಕ್ಕಣಿಕೆ ಇದ್ದ ಚಂದಾದಾರರ ಪತ್ರವನ್ನು ಅವನ ಕೈಗಿತ್ತ. ಅದರಲ್ಲಿರುವ ಒಕ್ಕಣಿಕೆಯನ್ನು ಓದಿರದ ರಾಮಣ್ಣನ ಕಡೆ ಕೃತಜ್ಞತಾಪೂರ್ವಕವಾಗಿ ನೋಡುತ್ತಿರಲು ಅವನು “ಎಲ್ಲಿ ಸಾರ್ ನಿಂ ಫ್ರೆಂಡು ಕವಿಗಳು ಕಾಣಿಸ್ತಿಲ್ಲ …” ಅಂತ ಕೇಳಿದ. ಆಗಲೇ ಮನೆಗೆ ಹೋಗಿ ಬಂದಿರಬಹುದಾಗಿದ್ದ ಅವನನ್ನು “ಯಾಕಪ್ಪಾ ಏನ್ಸಮಾಚಾರ” ಎಂದು ಕೇಳಿದೆ. ಅರ್ಧ ಕೇಟಿ ಕುಡಿಸಿದರೆ ಯಾರ ಪತ್ರವನ್ನಾದರೂ ಯಾರಿಗಾದರೂ ಕೊಡುವ ಸ್ವಭಾವದ ಅವನು ಸದರೀ ಗ್ರಮದಲ್ಲಿ ಗುಟ್ಟಗಿ ನಡೆಯುತ್ತಿದ್ದ ಅನೇಕ ಪ್ರೇಮ ಪ್ರಕರಣಗಳನ್ನು ಬಟಾಬಯಲು ಮಾಡಿದ್ದ. ಹೀಗಾಗಿ ಯಾವ ಪ್ರೇಮಿಯೂ ತಲೆಎತ್ತಿ ನಿಸೂರಗಿ ಅಡ್ಡಾಡುವುದು ಅಸಾಧ್ಯವಾಗಿತ್ತು. ಅಂಥ ಅವನು ಪಂಚರಂಗೀ ಲಕೋಟೆಯನ್ನು ತನ್ನ ಬತ್ತಳಿಕೆಯಿಂದ ಝಳಪಿಸಿದ. ಅವನಿಗೆ ಯಾರೂ ಪ್ರೆಮಪತ್ರ ಬರೆಯಲಾರರು ಎಂಬ ಖಾತ್ರಿಯಿಂದಲೂ; ಅದು ಸರ್ಕಾರಿ ದಫ್ತರೊಳಗಿಂದ ಎದ್ದು ಬಂದಂತಿರುವುದೆಂಬ ನಂಬಿಕೆಯಿಂದ ನಾನೇ ಪಡೆದುಕೊಂಡೆ. ಬಾಲ ವಿಧವೆಯೂ, ಸಕೇಶಿಯಾದ, ಶಿಕ್ಷಕಿಯೂ ಆದ ರಮಾಬಾಯಿಗೆ ಬಂದಂಥ ಪ್ರೇಮಪತ್ರವನ್ನು ಅದನ್ನು ಬರೆದವನ ಹೆಂದತಿಯೂ; ಆರು ಮಕ್ಕಳ ತಾಯಿಯೂ ಆದಫ ದಕ್ಷಾಣಮ್ಮನಿಗೆ ಕೊಟ್ಟು ಗಂಡ ಹೆಂದಿರೆ ಶೋಭನದ ಮಂಚವನ್ನು ಇಬ್ಬಾಗ ಮಾಡಿ ಈಗ ಒದೆಯಿಸಕೊಳ್ಳಬಹುದು. ಆಗ ಒದೆಯಿಸಿಕೊಳ್ಳಬಹುದೆಂಬ ಚಿಂತೆಯಿಂದಲ್ಲೇ ಪ್ರತಿಕ್ಷಣಗಳನ್ನು ದೂಡುತ್ತಿದ್ದ ರಾಮಣ್ಣ, “ಕಟ್ಟೇಮನಿ ಕೊತ್ರೇಶಿಗೊಂದೀಟು ಬುದ್ಧಿ ಹೇಳ್ರಿ … ” ಎಂದು ಪ್ರತಿಯಾಗಿ ಹೇಳಿದನು. “ನನ್ನೆಂಡ್ತೀನ ನನ್ನಿಂದ ದೂರ ಮಾಡಿರೋ ರಾಮಣ್ಣೀ ಊರಾಗಿರ್ಬೇಕೊಂದು, ಇಲ್ಲಾ ನಾವಿರ್ಬೇಕೊಂದು” ಎಂದು ಪ್ರತಿಜ್ಞೆ ಮಾಡುವ ಪೂರ್ವದಲ್ಲಿ ಮಧ್ಯ ವಯಸ್ಕ ಕೊಟ್ರೇಶಿ ತನ್ನ ಶ್ವೇತವರ್ಣದ ಮೀಸೆ ತಿರುವಿದ್ದ ನನ್ನೆದುರಿಗೆ. “ಯಾರು ಯಾರಿಗಾದ್ರೂ ಲವ್ ಲೆಟ್ಟ್ರು ಬರ್‍ಕೊಳ್ಳಿ? … ಈ ರಾಮಣ್ಣ ಯಾಕ ಇಉದ್ರಾಗ ತಲೆತೂರಿಸೋದು” ಅಂತ ಊರ ಮಂದಿ ಕನಿಷ್ಟ ಮಟ್ಟದ ಅನುಕಂಪ ವ್ಯಕ್ತಪಡಿಸದಿದ್ದಾಗಲೇ ರಾಮಣ್ಣ ನನಗೀ ಮಾತು ಹೇಳಿದ್ದು. “ಎಂಥೆಂಥ ಲವ್ ಲೆಟ್ಟ್ರು ಬರ್ತಾವಂತೀರಿ? … ಒಂದೊಂದು ಲೆಟ್ಟ್ರೋದಿ ಒಂದೊಂದ್ಕಥಿ ಬರೆದು ಬಿಡ್ತೀರಿ ನೋಡ್ರಿ … ಬೇಕಂದ್ರೆ ತಂದು ತೋರಿಸ್ತೀನಿ” ಎಮ್ದು ಹೇಳಲು ನಾಚಿಕೆ ಪಟ್ಟಿರದ ರಾಮಣ್ಣಗೆ ಧೈರ್ಯ ಃಏಳಿಕಳುಹಿಸಿದೆ.

ಶಾಸ್ತ್ರಿಗಳ ಒತ್ತಾಯಕ್ಕೆ ಪ್ರಾಣಾಯಾಮ ಕಲಿಯಲು ಎರಡು ದಿನಗಳ ಹಿಂದೆಯೇ ಹತ್ತಿರದ ವೆಂಕಟಾಪುರಕ್ಕೆ ಹೋಗಿದ್ದ ಶಾಮ ಇವತ್ತು ಸಂಜೆಯ ಹೊತ್ತಿಗೆ ಬರಬಹುದೆಂದು ಅಲುಮೇಲಮ್ಮ ನವರು ಆರು ಮೊಳ ದೂರದಿಂದಲೆ ಹೇಳುತ್ತಲೆ ವಾಪಸಾದೆ. ಮಹಿಳಾ ಸಂಘಟನೆ ಪುರುಷ ಚೈತನ್ಯದ ಸಹಕಾರವಿಲ್ಲದಿದ್ದರೆ ದುರ್ಬಲವಾಗುತ್ತದೆ ಎಂದು ಧೃಡವಾಗಿ ನಂಬಿದ್ದ ಜಲಜಾಕ್ಷಿ ತಾಲೂಕು ಮಟ್ಟದ ಕಾರ್ಯಕ್ರಮವೋಂದರಲ್ಲಿ ಬೋರ್ಡ್‌ಮೆಂಬರಾಗಿ ಭಾಗವಹಿಸಿ ಅದೇ ತಾನೆ ಬಂದಿಳಿದಿದ್ದಳು. ತಾನು ಭಾಷಣ ಮಾಡ್ತಿರೋ ಫೋಟೋ ಕೊಡಲಿಕ್ಕೇಂತ ‘ಖಡ್ಗ’ದ ಪತ್ರಿಕೆಯ ಕಛೇರಿಗೆ ಬಂದಾಗಲೇ ಅಲ್ಲಿದ್ದ ನನ್ನನ್ನು ಭೇಟಿಯಾಗಿದ್ದು. ಪುರುಷ ಮತ್ತು ಸ್ತ್ರೀ ಚೈತನ್ಯವೊಂದರ ಎರಡು ಮುಖಗಳು ಎಂದು ವಾದಿಸುತ್ತಲೆ ನನ್ನ ಕೈಲಿದ್ದ ಲಕೋಟೆ ನೋಡಿ ‘ಹೊಸ್ದೇನೋ ಬರ್‍ಕೊಂಡು ಬಂದಂಗದೀರಿ?… ಅದೇ ನಮ್ಮಿಂದ್ರಾ ಗಂಧೀನ ಬಯ್ದು ಕವಿತಾ ಬರೆದಂಗಿದೀರಿ ಹೌದಲ್ಲೊ’ ಎಂದು ಇಸಿದುಕೊಂಡು ‘ಓಹ್ … ರಸಿಕ ರಾಜ ಶಾಮನ್ದು’ ಎಂದು ಉದ್ಗರಿಸಿದಳು. “ಹೆಣ್ಣಿನ ಮನಸ್ಸು ಅರ್ಥ ಮಾಡ್ಕೊಳ್ಳದವನು ಅದೆಂಗ ಬ್ಯಾಂಕನಲ್ಲಿ ರೊಕ್ಕ ಎಣಿಸ್ತಾನ್ರಿ” ಎಂದು ಮತ್ತೆ ಲಕೋಟೆ ತುಂಬಿಸಿದಳು. ಆಕೆಯ ಮಾತು ಒಂಚಣ ಗಲಿಬಿಲಿ ಗೊಳಿಸಿತು. ಯೋಚಿಸಿದ್ದಷ್ಟು ಅರ್ಥ ಪರಂಪರೆ ಬಿಚ್ಚಿಕೊಳ್ಳುವಷ್ಟು ಮಾತು. ಆಕೆ ಹೇಳಿದ್ದು ನಿಜ. ಹೆಣ್ಣು ತಟ್ಟಿದರೆ ತಡೆಯಲಾರದ ಬಾಗಿಲುಳ್ಳವನು, ಹೆಣ್ಣಿನ ಹೃದಯದವರೆಗೆ ಹೋಗಿ ವಾಪಸ್ಸು ಬಂದು ಬಿಡುವ ಸಂಚೋಚ ಪ್ರವೃತ್ತಿಯವನು ನಮ್ಮ ಶಾಮ … ತಮ್ಮ ಮೊಮ್ಮಗ ಅಪ್ಪಟ ಬ್ರಹ್ಮಚಾರಿ ಎಂದೇ ನಂಬಿರುವ ಶಾಸ್ತ್ರಿಗಳು ಪ್ರಕಾಂಡ ಪಂಡಿತರೇನೋ ನಿಜ. ಆದರೆ ಬ್ರಹ್ಮಚಾರಿ ಎಂಬ ಪದದ ಸುಳುಹು ಹೊಳಹುಗಳೇ ತಿಳಿದಿಲ್ಲವಲ್ಲ ಅವರಿಗೆ. ಃಡಿಚಿhmಚಿಛಿhಚಿಡಿಥಿಚಿ meಚಿಟಿs sexuಚಿಟ ಚಿbsಣiಟಿeಟಿಛಿe ಎಂದೇ ನಂಬಿರುವ ಅನೇಕರಂತೆ ಅವರೂ ಕೂಡ, ಃಡಿಚಿhmಚಿಛಿhಚಿಡಿಥಿಚಿ meಚಿಟಿs veಜಚಿ, ವೇದವನ್ನು ಕರಗತ ಮಾಡಿಕೊಂಡಿರುವವನೆಂಬುದು ಒಂದು ಅರ್ಥವಾದರೆ, ಅದರ ಇನ್ನೊಂದು ಅರ್ಥ ಆಯುರ್ವೇದದಲ್ಲಿ ಅರ್ಥಪೂರ್ಣವಾಗಿ ಹೇಲಲ್ಲಗಿದೆ.ಹೆಂಡತಿಯೊಂದಿಗೆ ಮಾತ್ರ ಆಕೆಯ ಫಲವಂತಿಕೆ ಸಮಯದಲ್ಲಿ ಸಂಭೋಗಿಸುವುದು. ಆದರೆ ಪ್ರತಿರಾರಿ ಸಂಭೋಗದ ಕನಸು ಕಾಣುತ್ತ, ಹೊಸಕಾಡುತ್ತ, ಸ್ಖಲಿಸುತ್ತ ಆನಂದಿಸು ಶಾಮ ಅದು ಹೇಗೆ ಬ್ರಹ್ಮಚಾರಿಯಾದಾನು!

ಯಾವ ನಾಯಕನನ್ನು ಆ ದೇಶದ ಯಾವ ಯಾವ ಸೆರೆಮನೆಗಳಲ್ಲಿರಿಸಿದ್ದಾರೆ ಎಂಬ ವಿವರ ಪಡೆಯಲು ಕಮಲಾಕರ ಹೋದೊಡನೆ ಜಲಜಾಕ್ಷಿ ತುಟಿ ಚಲಿಸಿದಳು, ಸಣ್ಣ ಪತ್ರಿಕೆಯ ಸಂಪಾದಕನ ಕೊಠಡಿಯಂತೆಯೇ ಗೊಂದಲದಿಂದ ತುಂಬಿರುವ ಆಕೆ ಮತ್ತು ನಾನು.
“ಅವನು ಇಂಟರ್ವ್ಯೂ ಹೇಗೆ ಫೇಸ್ ಮಾಡ್ತಾನೋ ಆ ದೇವ್ರಿಗೇ ಗೊಟ್ಟು? ಯಾರಾದ್ರು ದೃಷ್ಟಿಸಿ ನೋಡಿದ್ರೆ ಎದುರಿಸಲಾರ್ದೋನವ್ನು ಅಲ್ಲೊಂದೇ ಅಲ್ಲ … ಎಲ್ಲೂ ಸಕ್ಸಸ್ಸಾಗೋಲ್ಲ ನೋಡ್ತಿರಿ” ಎಂದಳು.
“ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಹೊರಗಡೆ ಬಂದ್ರೆ ಇದೆಲ್ಲ ಸಾಧ್ಯವಾಗುತ್ತೆ” ಎಂದೆ.
“ಈದೇಶದಲ್ಲಿ ಈ ಕಾಂಪ್ಲೆಕ್ಸಿರೋದೆ ಎರಡು ನಮೂನಿ ಮಾಂದಿಗೆ ಮಾತ್ರ. ಒಂದನೆಯದಾಗಿ ಬ್ರಹ್ಮಚಾರತ್ವದ ಸೋಗಿನಲ್ಲಿ ಮುಷ್ಟಿಮೈಥುನ ಮಾಡ್ಕೊಳ್ತಿರೋರ್ಗೆ ಎರಡನೆಯದಾಅಗಿ ಇಂಗ್ಲೀಷ್‌ನಲ್ಲಿ ಮಾತಾಡ್ಲಿಕ್ಕಾಗದವರಿಗೆ. ಇವೆರಡು ಅವನಿಗೆ ಅಪರಿಚಿತ” ಎಂದಳು.
“ಮತ್ತೆ ಅವನನ್ನು ಹೇಗೆ ಸರಿಪಡಿಸಬೌದಂತೀಯಾ?”
“ನನ್ಜೊತೆ ಅವನೊಂದ್ನಾಲ್ಕು ದಿನ ಇರ್ಲಿ ನೋಡು … ಮೈಚಳಿ ಬಿಡಿಸಿ ಕಳಿಸ್ತೀನಿ” ಎಂದು ನಕ್ಕಳು.
ಎಂಎಲ್ಲೆ ಮಸಾಲೆಯವರು ಇಂಥ ಚಾಣಾಕ್ಷೆಯನ್ನು ಕಟ್ಟಿಕೊಂದು ಅದು ಹೇಗೆ ಏಗುತ್ತಿರುವರೋ ಎಂದಿತ್ಯಾದಿ ನಮ್ಮಂಥ ಮಧ್ಯಮವರ್ಗದ ಮಂದಿ ಯೋಚಿಸುವುದು ಸುಲಭ.
ಅವನು ಹೋಮೋ ಸೆಕ್ಸುಯಲ್ಲಂಥ ಏನೋ ಹೇಳುತ್ತಿರುವಾಗ ಅಮ್ಮಾವ್ರೇ ಅಂತ ಕಾರಿನ ಚ್ಚಲಕ ಕಂಚುಕೋಟಿ ಬಂದ. ಕೂಲಿಂಗ್ ಗ್ಲಾಸ್ ಧರಿಸುತ್ತ “ನೋಡಿ … ನೀವು ಹುಶಾರಾಗಿರ್ರಿ … ನಿಮ್ಮಿಬ್ರ ಸಂಬಂಧದ ಬಗ್ಗೆ ಮಂದಿ ಏನೇನೋ ಆದ್ಕೋತಾರೆ … ಒಟ್ನಲ್ಲಿ ನೀವು ಅವನ್ನ ದಾರೀಗೆ ತರ್ತೀರೋ … ದಾರಿ ತಪ್ಪಿಸ್ತೀರೋ … ಕಾದು ನೋಡ್ತೀವಿ …” ಎಂದು ಭಾರಿ ಜಘನದ ಆಕೆ ಹೋದಳು.
ಆಕೆಗೆ ಶಾಮನಿಗೊಂದೇ ಅಲ್ಲದೆ ಮಾತಿನ ಬುತ್ತಿಯನ್ನು ನನ್ನ ಬುಡಕ್ಕೂ ಇಟ್ಟಿದ್ದಳು. ಸದಾ ಮುದುಡಿಕೊಂಡಿರುವ ಮನುಷ್ಯನನ್ನು ಹಚ್ಚಿಕೊಳ್ಳುವುದು ಬೇರೆಯವರಿಗೊಂದೇ ಅಲ್ಲ … ನನಗೂ ಇಷ್ಟವಿರಲಿಲ್ಲ … ಆದರೆ ಬೇರ್ಪಡಿಸಲಾಗದಂಥ ಕಕ್ಕುಲಾತಿ ಬೆಳೆದುಬಿಟ್ಟಿರುವುದು. ಯಾರ್ಯ್ ಏನೇ ಅನ್ನಲಿ? ಏನೇ ಅರ್ಥ ಕಲ್ಪಿಸಿಕೊಳ್ಳಲಿ? ಅವನಲ್ಲಿ ಮನೆಮಾಡಿಕೊಂಡಿರುವ ಹಿಂಜರಿಕೆ ಹೋಗಲಾಡಿಸಿದ ಕೀರ್ತಿಯ ಭಾಜನಕ್ಕೆ ನಾನು ಪಾತ್ರನಾಗಲೇಬೇಕೆಂದು ನಿರ್ಧರಿಸಿದೆ.
ಕೈಯಲ್ಲಿ ಒಂದಿಷ್ಟು ಹಾಳೆ ಹಿಡಿದುಕೊಂಡು ಬಂದು “ಬರೋ ಸಂಚಿಕೆಯ ಗುಪ್ತ ಸಮಾಲೋಚನೆ ಸೆಕ್ಷನ್ನ ಸ್ವಲ್ಪ ನಿಭಾಯಿಸ್ತೀಯಾ? ಜಲಜಾಕ್ಷಿ ಇದ್ದಿದ್ರೆ ಆಕೆಗೆ ವಹಿಸಬೌದಿತ್ತು.” ಎಂದು ಶುರು ಮಾಡಿದ ಕಮಲಾಕರನಿಗೆ ಗುದ್ದುವಷ್ಟು ಸಿಟ್ಟು ಬಂತು.
ಬರುವಾಗ ಒಂಥರಾ ಇದ್ದು ಹೋಗುವಾಗ ಇನ್ನೊಂಥರಾ ಆಗಿದ್ದ ನಾನು ತಲೆ ಸಿಡಿಯುತ್ತಿರುವ ನೆಪ ಹೇಳಿ ಜಾರಿಕೊಂಡೆ.

ಜಲಜಾಕ್ಷಿ ವ್ಯಕ್ತಪಡಿಸಿದ ಸ್ವಚ್ಛ ಅಭಿಪ್ರಾಯಗಳನ್ನು ಉಗುಳಲಾರದೆ; ನುಂಗಲಾರದೆ ವಿಲವಿಲ ಒದ್ದಾಡುತ್ತಿದ್ದ ’ಸಿಂಹಮಂ ಮೊಲ ಕೊಂದ ಕಥೆ’ ಓದಲಿಕ್ಕಾಗಲಿಲ್ಲ. ಜಗತ್ತಿನ ಏಕಾಗ್ರತೆಯನ್ನು ಕದಡಲಿಕ್ಕೆಂದೇ ಹುಟ್ಟುರುವಂತಿದ್ದ ನಮ್ಮಜ್ಜಿ ಒಂದೇ ಸಮನೆ ವಟವಟ ಹಚ್ಚಿಬಿಟ್ಟಿತ್ತು. ಕಳೆದ ಮೂವತ್ತು ವರ್ಷಗಳಿಂದ ತಾನು ಜೋಪಾನ ಮಾಡಿಕೊಂಡು ಬಂದಿದ್ದ ಸೂಜಿಯನ್ನು ಆಕೆಯ ತಂಗಿ ಅಂದರೆ ನಮ್ಮ ತಾಯಿಯ ತಾಯಿ ಎದುರು ಮನೆಯ ಜಮ್ಬೂರು ನಾಗವ್ವೆಗೆ ಕೊಟ್ಟದ್ದು ಮತ್ತು ಆಕೆ ಅದನ್ನು ಮುರಿದು ಎರಡು ತುಂಡು ಮಾಡಿಕೊಟ್ಟುದ್ದುದೆಲ್ಲ ಆಕೆ ಕೆರಳುವುದಕ್ಕೆ ಕಾರಣವಾಗಿತ್ತು. ಅನೇಕಾನೇಕ ಜೀವಂತ, ನಿರ್ಜೀವಂತ ಅವಶೇಷಗಳಿಂದಲೇ ತುಂಬಿರುವ ನಮ್ಮನೆಯ ಛೀಫ್ ಕ್ಯೂರೇಟರ್ ನಿಂಗವ್ವಜ್ಜಿಯನ್ನು ನಮ್ಮ ದೊಡ್ಡವ್ವ ಪುರಾತನ ಸೀರಣಿಗೆ ವಿಚಾರ ಪ್ರಸ್ತಾಪಿಸಿ ಮತ್ತಷ್ಟು ಕೆರಳಿಸಿದಳು… ಮಾತಿಗೆ ಮಾತು ಬೆಳೆದು ಒಬ್ಬೊಬ್ಬರು ಒಂದೊಂದು ಮೂಲೆ ಹಿಡಿದು ಕುಳಿತುಕೊಳ್ಳಲು ಬೆಕ್ಕು ಒಲೆಯ ಬೂದಿಯನ್ನು ಮುಂಗಾಲುಗಳಿಂದ ಕೆರೆಯತೊಡಗಿತು. ವಿವಿಧ ಹಂತಗಳಲ್ಲಿ ತಲುಪಿದ್ದ ಮೂರು ಕಥೆಗಳ ಹಸ್ತಪ್ರತಿಗಳು ಹಲಗೆ ಸಂದಿಯಿಂದ ಬೀಸಿದ ಗಾಳಿಗೆ ಕೋಣೆ ತುಂಬ ಚಲ್ಲಾಪಿಲ್ಲಿಯಾದವು. ಅವುಗಳೊಳಗಿನ ಪತ್ರಗಳೆಲ್ಲ ತಮ್ಮ್ ಅಬಗ್ಗೆ ಕಥೆಗಾರ ಇಷ್ಟೊಂದು ತಿರಸ್ಕಾರ ಭಾವನೆ ಉಳ್ಳವನಾಗಿದ್ದಾನಲ್ಲ … ನಾವೇ ಇರದಿದ್ದರೆ … ಬ್‌ಏಕಾದ ಹಾಗೆ ಬಾಗದೆ ಹೊಗಿದ್ದಿದ್ದರೆ ಇವನನ್ನು ಯಾರು ಮೂಸುತ್ತಿದ್ದರು ಎಂದಾಲೋಚಿಸುತ್ತ ಎದ್ದು ಬಂದು ನನ್ನ ಸುತ್ತ ಮಂಡಿಯೂರಿ ಕೂತು ಹಿಡಿ ಹಿಡಿ ಶಾಪ ಹಾಕುತ್ತಿರುವಂತೆ ಭಾಸವಾಯಿತು. ಕೂಡಲೆ ಆ ಕಥೆಯೊಳಗೆ ಈ ಕಥೆ ಸೇರಿಸಿ ಈ ಕಥೆ ಕಥೆಯೊಳಗೆ ಆ ಕಥೆ ಸೇರಿಸಿಟ್ಟು ಅದರ ಮೇಲೆ ಮ್ಯಾಕ್ಡ್ವ್‌ವ್ಲು ವ್ಹಿಸ್ಕಿಯ ಪೇಪರ್ವೇಟ್ ಇರಿಸಿದೆ. ಅದೇ ಹೊತ್ತಿಗೆ ಸರಿಯಾಗಿ ಕಂಕುಳಲ್ಲಿ ‘ಯಾಜ್ಞವಲ್ಕ್ಯ ಸ್ಮೃತಿ’ಯ ಹೆಬ್ಬೊತ್ತಿಗೆ ಇರಿಸಿಕೊಂದು ಶಾಮ ‘ಇದಾನೇನಜ್ಜಿ’ ಅಂತ ಬಂದ.ಅವನೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಗೌರವ. ಮಗ ಅಂದ್ರೆ ಶಾಮನಂತಿರಬೇಕು. ಎಂದು ನನ್ನ ವಾರಿಗೆ ಹುಡುಗರಿಗೆಲ್ಲ ಹೇಳುತ್ತಿತ್ತು. ಉಳ್ಳವರು ಶಿವಾಲಯ ಮಾಡುವರೆಂಬುದು ಆ ಪ್ರಾಚೀನ ಅವಶೇಷಕ್ಕೆ ಹೇಗೆ ಗೊತ್ತಾಗಬೇಕು? ತಾತ, ಮೊಮ್ಮಗ ಮಂತ್ರಿಸಿ ಕೊಟ್ಟಿರುವ ತಾಯಿತಗಳನ್ನು ಸೊಂಟಕ್ಕೂ; ರಟ್ಟೆಗೂ ಏಕಪ್ರಕಾರವಾಗಿ ಕಟ್ಟಿಕೊಂಡಿರುವ ಮುದುಕಿ “ಬಾ ಸ್ವಾಮಿ ಬಾ …” ಅಂತ ಕರೆದು ಕರಿ ಕಂಬಳಿ ಹಾಸಿ ಕುಂಡ್ರಿಸಿ ನನ್ನನ್ನು ಕೂಗಿ ಕರೆಯಿತು. ತಗಲಿಕೊಂತುಂತ ಹೊರಬಂದು ನನ್ನ ಪ್ರಾಣ ಮಿತ್ರನನ್ನು ನಖಶಿಖಾಂತ ನೋಡಿದೆ. ಪ್ರಾಣಾಯಾಮವನ್ನು ಗಾಯತ್ರೀ ಮಂತ್ರೊಚ್ಚರಣೆ ಮೂಲಕ ಕಲಿಯಲು ಪ್ರಯತ್ನಿಸೀ ಪ್ರಯತ್ನಿಸಿ ಸೊರಗಿ ಅಂಗ ವಿಕೃತಿ ಮಾಡಿಕೊಂಡು ಬಂದಿದ್ದ. ಅಂಗಿ ಚಲ್ಲಾಣ ಸಿಕ್ಕಿಸಿಕೊಂಡು ಒಂದೊಂದು ಗಳಿಗೇಗೆ ಒಂದೊಂದು ನಮೂನಿ ವರ್ತಿಸುತ್ತಿದ್ದ. ಅವನೊಡನೆ ಅಂಗಳ ದಾಉವ ಮೊದಲು ಲಕೋಟೆಇದ್ದ ಜೇಬು ಮುಟ್ತಿಕೊಂಡೆ. “ಗಂಡಹೆಂಡ್ರಂಗೆ ಹೊಂಟ್ರಪ್ಪ ಹೊರಾಗೆ” ಅಂತ ಆಡಿಕೊಳ್ಳುತ್ತಿರುವವರಂತೆ ನಮ್ಮ ಮನೆಗಳನ್ನು ದಾಟೀ ದಾತೀ ಊರಮ್ಮನ ಬಯಲೀಚೆ ಬೀದಿಗೆ ಬಂದೆವು … ಹಂಗ ಹೋಗೋದು ಬ್ಯಾಡ … ಈ ಕಡೆಯಿಂದ ಹೋಗೋಣ ಎಮ್ದ ಶಾಮು … ಅನಸೂಯಾಳ ಮನೆ ಆ ಕಡೆ ಇದ್ದುದರಿಂದ ಹಾಗೆ ಹೇಳಿದನೆಂದುಕೊಂಡೆ. ಅದೂ ಅಲ್ಲದೆ ಆಕೆ ಗಂಡನೊಡನೆ ಬಂದು ಎರಡು ದಿನಗಳೇ ಕಳೆದಿರುವವಂತೆ. ತನ್ನನ್ನೆಲ್ಲಿ ಆಕೆಯಾಗಲೀ ಆಕೆಯ ಗಂಡನಾಗಲೀ ಮಾತಾಡಿಸಿ ಬಿಡುವರೋ ಎಂಬ ಹಿಂಜರಿಕೆಯಿಂದಾಗಿಯೇ ಅವನು ತಾತನ ಮಾತಿಗೆ ಮಣೆ ಹಾಕಿ ಪ್ರಾಣಾಯಾಮದ ತರಗತಿಗೆ ತಗುಲಿಕೊಂಡಿದ್ದಂತೆ… ತುಂಬು ತೊಡೆಯ ಗಾಯತ್ರಿ ಎಂಬ ಶ್ರೀಮಂತ ತರುಣಿಯ ವಕ್ಷಸ್ಥಳದ ಏರಿಳಿತಕ್ಕೆ ಬೆವರಿಳಿದು ಶಾಮ ಒಂದು ದಿನ ಮೊದಲೇ ಬಂದುಬಿಟ್ಟಿರುವನಂತೆ. ಅನಸೂಯಳೂ … ಆಕ್ಜೆಯ ಗಂದನೂ ಮಾತಾಡಿಸಿಕೊಂದು ಹೋಗುವುದಕ್ಕೆ ಬೃಂದಾವನದ ಬಳಿ ಕಾಣಿಸಿಕೊಳ್ಳುತ್ತಲೆ ಶಾಮ ಹಿತ್ತಿಲ ಬಾಗಿಲ ಮೂಲಕ ತಪ್ಪಿಸಿಕೊಂಡು ಬಂದುಬಿಟ್ಟಿರುವನಂತೆ… ತಪ್ಪಿಸಿಕೊಳ್ಳುವುದನ್ನೇ ಬದುಕಿನ ಪರಮ ಮೌಲ್ಯವೆಂದು ಭಾವಿಸಿರುವ ಶಾಮ ಬಜಾರ ಸಮೀಪಿಸಿದಂತೆ ಕ್ರಾಪಿನೊಳಗೆ ಜುಟ್ಟನ್ನೂ; ಅಂಗಿಯೊಳಗೆ ಜನಿವಾರವನ್ನೂ ಮರೆಮಾಚಿಕೊಂಡ. ಚಿಂಪಾಂಜಿಯನು ಚುಂಬಿಸುತ್ತಿರುವ ಬೋಡೆರೆಕ್‌ಳ ನಗನ ದೃಶ್ಯದ ಪೋಸ್ತರ್ ಕಡೆಗೆ ಕಳ್ಳನೋಟ ಬೀರಿ ಎಡವಿದ. ಮತ್ತೆ ಸಾವರಿಸಿಕೊಂಡು ನಡೆಯತೊಡಗಿದ.

ಗ್ರಾಮದ ಹತ್ತಾರು ನಾಯಿಗಳು ಹಿಂಗಾಲೆತ್ತಿ ಉಚ್ಚೆ ಹೊಯ್ದು ನೆಲ ಗೆಬರಿ ಹೋಗುವ ಜಾಗವನ್ನು ಒಂದುವರೆ ಕಿಲೋಮೀತರ್ ನಡೆದು ತಲುಪುವ ಹೊತ್ತು ನೆಟ್ಟಗಿರಲಿಲ್ಲ. ಅವರು ತಮ್ಮನ್ನು ಗಮನಿಸುತ್ತಿರಬಹುದೇ/ ಇವರು ನಮ್ಮನ್ನು ಗಮನಿಸುತ್ತಿರಬಹುದೇ? ಎಂದು ಯೋಚಿಸುವುದರ ಜೊತೆಗೆ ತಾನು ಎಲ್ಲರನ್ನು ಗಮನಿಸುತ್ತ ನನ್ನೊಂದಿಗೆ ನವ ವಧುವಿನಂತೆ ಲಜ್ಜಾಭರಣಾಲಂಕಾರ ಮಾಡಿಕೊಂಡು ನಡೆಯುತ್ತಿದ್ದ ಶಾಮ ಮಾತಾಡುವ ಶಾಸ್ತ್ರಕ್ಕೆ ಅದು ಇದು ಪ್ರಸ್ತಾಪಿಸಲು ಪ್ರಯತ್ನಿಸಿದ. ಗ್ರಾಮದ ಕಳ್ಳ ಪ್ರೇಮ ವ್ಯವಹಾರಗಳ ಬಗೆಗೋ ಅಥವಾ ಬಂಡಾಯದ ಬಗ್ಗೆ ಹೀಗೆ ಏನಾದರೊಂದು ಅವನು ಮಾತಾಡಲಿರುವುದನ್ನು ಅದಕ್ಕೂ ಮೊದಲೇ ಅವನ ಮುಖ ಹೇಳಿಬಿಡುತ್ತಿತ್ತು. ಆದ್ದರಿಂದ ಅವನ ಮಾತುಗಳಲ್ಲಿ ನನಗೆ ಆಸಕ್ತಿ ಇರದಿದ್ದರೂ ಸುಮ್ಮನೆ ಹೂಂಗುಟ್ತುತ್ತಿದ್ದೆ. ಮದುವೆ ಆಗಿರೋರೂ ಕಳ್ಳ ವ್ಯಭಿಚಾರ ಮಾಡ್ತಿದ್ರೆ ದೇಶ ಉಳಿದೀತಾ ಅಂತಂದ. “ಅದು ಅವರವರ ವೈಯಕ್ತಿಕ ವಿಷಯ … ಅದ್ರ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳೋದು ಬಿಡಯ್ಯ” ಅಂತಂದುದಕ್ಕೆ ಅವನು ಮುಖವನ್ನು ಇಷ್ಟಗಲ ಮಾಡಿಕೊಂಡ. “ಹಾಗಿದ್ರೆ ನೀನು ಯಾರ್ನಾದ್ರೂ ಪ್ರೇಮಿಸಿದ್ದೀಯಾ” ಎಂದು ಪ್ರಶ್ನೆ ಹಾಕಿದ. “ಹೂಂ ಅಂತ ಇಟ್ಕೋ ಅದ್ರಲ್ಲಿ ತಪ್ಪೇನೀಗ” ಎಂದೆ ಬೇಸರದಿಂದ, ನಿಟ್ಟುಸಿರು ಬಿಟ್ಟ. ಅವನಿಗೆ ಬೇಸರವಾಯಿತೆಂದುಕೊಂಡು, “ಪ್ರೇಮ, ಕಾಮ ಇವೆಲ್ಲ ಮನುಷ್ಯರ ಸಹಜ ವ್ಯಾಪಾರಗಳು ಕಣಯ್ಯಾ … ಅದಿರ್ಲಿ … ನಿನ್ಗೆ ಗೊತ್ತು ಮಾಡಿರೋ ಹುಡುಗಿ ಮನೆಗೆ ಏನಾದ್ರೂ ಹೋಗಿದ್ಯಾ?” ಎಂದು ಕೇಳಿದೆ. ಇದ್ಯಾಕೆ ಇವನಿಗೆ ಬೇಕಿತ್ತು ಎಂಬಂತೆಯೋ; ಇಂಥ ಪ್ರಶ್ನೆಯನ್ನು ಕೇಳಲು ಯಾಕಿಷ್ಟು ತಡ ಮಾಡ್ದಿ ಎಂಬಂತೆಯೋ ಮಖ ಮಾಡಿಕೊಂಡು ನನ್ನ ಕಡೆ ನೋಡಿ ಕ್ರಮೇಣ ಪ್ರಕಾಶ ಹೆಚ್ಚಿಸಿಕೊಳ್ಳುವ ದೀಪದಂತೆ ಗೆಲುವಾದ. “ಹೋಗಿದ್ದೆ ಆದ್ರೆ ಮನೆ ಒಳಗಡೆ ಮತ್ರ ಹೋಗಲಿಕ್ಕಾಗದೆ ವಾಪಸಾಗಿಬಿಟ್ಟೆ.” ಎಂದು ಮತ್ತೊಂದು ನಿಟ್ಟುಸಿರು ಬಿಟ್ಟ. “ಹಾಗಿದ್ರೆ ನೀನು ಹುಡುಗಿನಾದ್ರು ಬೆಟ್ಟಿ ಆದ್ಯಾ” ಎಂದು ಅಡ್ಡ ಪ್ರಶ್ನೆ ಹಾಕಿದೆ. “ಇಲ್ಲಪ್ಪಾ … ನನ್ ಪುಣ್ಯಕ್ಕೆ ಆಕೆ ಅಂಗಳದಲ್ಲಿ ರಂಗೋಲಿ ಹಾಕ್ತಿದ್ಳು … ಮಾತಾಡಿಸಿದ್ರೆ ಏನಾದ್ರಂದ್ಕ್ಕೊಂಡಾಳಂತ ಬಂದುಬಿಟ್ಟೆ” ಎಂದ. ನನಗೆ ಅಯ್ಯೋ ಎನಿಸಿತು. “ಹೋಗ್ಲಿ ಒಂದು ಪತ್ರವನ್ನಾದರು ಹಾಕ್ಬೇಕಿತ್ತು” ಎಂದು ಕೇಳಿದೆ. ಜೇಬಿನಿಂದ ಒಂದು ಲಕೋಟೆ ತೆಗೆಯುತ್ತ ” ಇನ್ನೂ ಪೂರ್ಣಗೊಳಿಸ್ಲಿಕ್ಕಾಗದೆ ಇಟ್ಕೊಂಡು ತಿಂಗಳ ಮೇಲಾತು” ಎಂದು ಕೊಟ್ಟ. ಓದಲು ಹಿಂಜರಿದ ನಾನುಅವನ ಒತ್ತಾಯಕ್ಕೆ ಮಣಿದು ನೋಡ್ತೀನಿ … ಕೇವಲ ‘ಪ್ರೀತಿಯವರೂ’ ಅಂತ ಮಾತ್ರ ಇರುವುದು ಕಂಡು ಆಶ್ಚರ್ಯವಾಯಿತು. ಎರಡು ಶಬ್ದಗಳನ್ನೂ ಸ್ಪಷ್ಟವಾಗಿ ಬರೆಯಲಾಗಿಲ್ಲ. ಕಾಟು ಹೊಡ್ದೂ ಹೊಡ್ದೂ ಅಂತು ಅಷ್ಟು ಬರೆದಿದ್ದ “ಉಳಿದಿದ್ಯಾಕ ಬರೆದಿಲ್ಲ?” ಅಂತ ಕೇಳಿದ್ದಕ್ಕೆ ಉಗುಳು ನುಂಗಿದ. ಕವರ್ ಕೊಟ್ಟೆ. ಹೃದಯವೆಂಬಂತೆ ಜೋಬಲ್ಲಿ ಭದ್ರಪಡಿಸಿದ.

ಹೀಗೆ ಮಾತಾಡ್ತಾ ಮಾತಾಡ್ತಾ ಅಂತೂ ಇಂತೂ ನಮ್ಮ ನಿರ್ದಿಷ್ಟ ಜಾಗ ತಲುಪಿದೆವು. ಅಲ್ಲಿ ಆಗಲೆ ಕೆಲವು ಕಾಲೇಜು ವಿದ್ಯಾರ್ಥಿಗಳು ಕೂತುಕೊಂಡಿದ್ದರು. ಅವರು ಬೇಗ ಇಲ್ಲಿಂದ ಕದಲಬಾರದೆ! ಎಂಬಂತೆ ಅವರತ್ತ ನೋಉತ್ತಿದ್ದ. ಅವರು ನಗುತ್ತಿದ್ದುದು, ಮಾತಾಡುತಿದ್ದುದು, ನೋಡುತ್ತಿದ್ದುದು ತನ್ನ ಕುರಿತೇ ಎಂದು ಭಾವಿಸಿದಂತಿತ್ತು. ಹೊತ್ತು ಪೂರ್ತಿ ಮುಳುಗಿ ಬೆಳಕು ಬಟಾಬಯಲಾಗುತ್ತಲೆ ಅವರು ಶಿಳ್ಳೆ ಹಾಕುತ್ತ ಹೋದರು. ಅವರು ಸೆಕ್ಸ್ ಬಗ್ಗೆ ಚರ್ಚಿಸಿರಬಹೆದೆಂದುಕೊಂದ. ಶೈಕ್ಷಣಿಕ ವ್ಯವಸ್ತೆ ಕೆಟ್ಟು ಹೋಯ್ತುಂತ ನಿಟ್ಟುರು ಶ್ರೀನಿವಾಸರಾಯರ ಥರ ಗೊಣಗಿದ. ನಾನು ಪ್ರತಿಕ್ರಿಯಸದಿದ್ದಾಗ ರಾಮಣ್ಣ ಹೇಳ್ದಾ ಅಂದ … ಕೈಚಾಚಿದ. ಅವರಿವರ ಗುಪ್ತ ವ್ಯವಹಾರಗಳನ್ನು ಚರ್ಚಿಸಲಿಕ್ಕೆ ತಕ್ಕ ವ್ಯಕ್ತಿ ಶಾಮಶಾಸ್ತ್ರಿ ಎಂದುಕೊಂಡಿರಬಹುದಾದ ರಾಮಣ್ಣ ಹೇಳಿದ್ದರಲ್ಲಿ ಆಶ್ಚರ್ಯವಿಲ್ಲವೆಂದುಕೊಂಡೆ. ಯಾವುದೇ ಲಕೋಟೆಯನ್ನು ಭೇದಿಸದೆ ಓದುವ ನಿಷ್ಣಾತ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಮಣ್ಣನೂ; ಒಂದು ಎಳೆ ದೊರಕಿದ ಕೂಡಲೆ ಅದಕ್ಕೆ ಅದ್ಭುತ ರೀತಿಯಲ್ಲಿ ದ್ಡೆಕೊರೇಟ್ ಮಾಡಿಬಿಡುವ ಶಾಮಾಶಾಸ್ತ್ರಿಯೂ …

ಓದುತ್ತಿದ್ದಂತೆಯೇ ಶಾಮ ಕಂಪನಕ್ಕೀಡಾದ … ಬರೋ ಹನ್ನೊಂದಕ್ಕೆ ಇಂತ್ರು ಇರುವುದರಿಂದ ಹಾಗೆ ಅವನಲ್ಲಿ ನಡಕ ಹುಟ್ಟಿದ್ದು. ಅವತ್ತು ತ್ರಯೋದಶಿ ಬೇರೆ. ಆದಿನ ತಾನು ಅಂಗಳ ತುಳಿಯುವಂತಿಲ್ಲ. ತಾತ ಏನಂತಾರೋ ಏನೋ? … ಪಂಚಾಂಗವೇ ಪ್ರಪಂಚವೆಂದು ಭಾವಿಸಿರುವ ಆ ಸನಾತನಿಯನ್ನು ಹೇಗೆ ಒಪ್ಪಿಸುವುದು? ಒಂದು ಪಕ್ಷದಲ್ಲಿ ಅವರು ಒಪ್ಪಿದರೆಂದಿಟ್ಟುಕೊಂಡರೆ ಬಳ್ಳಾರಿಯಂಥ ದೂರದ ದೇಶಕ್ಕೆ ಹೋಗಿಬರುವುದಾದರೂ ಹೇಗೆ> ಒಂದು ಪಕ್ಷದಲ್ಲಿ ಹೋದೆ ಅಂತ ಇಟ್ಟುಕೊಂಡರೆ ನಡೆಯುವ ಸಂದರ್ಶನ್ವನ್ನು ಹೇಗೆ ಎದುರಿಸುವುದು?

“ನಮ್ಮ ಮನೆಯವರ್ನ ನೀನೆ ಒಪ್ಪಿಸಬೇಕು” ಎಂದು ಶರತ್ತು ವಿಧಿಸಿದ. ಚೂರುಪಾರು ಸಂಸ್ಕೃತ ಸ್ಲೋಕಗಳನ್ನು ಉದುರುಸುತ್ತಿದ್ದ ನನ್ನ ಮಾತಿಗೆ ಶಾಸ್ತ್ರಿಗಳು ಬೆಲೆ ಕೊಡುವರೆಂಬ ಭರವಸೆ ನನಗಿದ್ದುದರಿಂದ ನೀನೇನು ಯೋಚ್ನೆ ಮಾಡಬೇಡವೆಮ್ದು ಹೇಳಿ ಧೈರ್ಯ ತುಂಬಿದೆ.

ಶವಸಂಸ್ಕಾರ ಮುಗಿದೊಡನೆ ಊರ ಕಡೆ ಹೆಜ್ಜೆ ಹಾಕುತ್ತಾರಲ್ಲ ಹಾಗೆ ನಾವಿಬ್ಬರು ದಾರಿ ಎಂಬ ಸರಳರೇಖೆ ಗುಂಟ ಹೆಜ್ಜ ಹಾಕಿ ಊರಮ್ಮನ ಬಯಲ ಕವಲ ಕವಲ ಹಾದಿ ತಲುಪಿದೆವು. ನಿಯಾನ್ ದೀಪದ ಬೆಳಕಿನಲ್ಲಿ ಸುಂಕ ವಸೂಲಿ ಮಾಡುವವರಂತೆ ಸಣ್ಣೀರವ್ವನ ಮೊಂಡು ಬಾಲದ ನಾಯಿ ನಮ್ಮನ್ನು ಅಡ್ಡ ತರುಬಿ ಗುರ್ ಗುಟ್ಟತೊಡಗಿತು. ಹೆದರಿ ನನ್ನ ಬೆನ್ನ ಹಿಂದೆ ಅವಿತುಗೊಳ್ಳುವ ಪ್ರಯತ್ನದಲ್ಲಿದ್ದ ಅವನನ್ನೀಚೆಗೆ ಎಳೆದು ಕಲ್ಲು ತಗೊಂಡು ಹಾಕು ಎಂದು ಇಷ್ಟಲಿಂಗೋಪಾದಿಯಲ್ಲಿ ಬಿದ್ದದ್ದ ಕಲ್ಲನ್ನು ತಗೊಂಡು ಅವನ ಕೈಗೆ ಕೊಟ್ಟೆ. ಹೀಗೆ ಹೊಡೆಯುವುದು ಅಹಿಂಸೆ ಎಂದೋ? ನಾಯಿಯ ರೋಷ ಹನ್ನೆರಡು ವರ್ಷ ಎಂದೋ! ಯೋಚಿಸುತ್ತ ನಿಂತಿದ್ದ ಅವನತ್ತ ದುರುಗುಟ್ಟಿ ಗುರ್‍ಗುಡತೊಡಗಿತು. ಪಾಪ – ಪುಣ್ಯ ಧರ್ಮ – ಕರ್ಮಗ್ಳ ಸೂಕ್ಷ್ಮ ಅರಿತಿರುವ ನಾನಿರುವಾಗ ಅವನ್ಯಾಕೆ ಯಃಕಶ್ಚಿತ್ ಶ್ವಾನೋಪಸುಂದನಿಗೆ ಹೆದರುವುದು! ಮನಸ್ಸಿನಲ್ಲಿ ಇಷ್ಟ ದೈವ ಪ್ರಾರ್ಥಿಸಿ ಅಭಿಮಂತ್ರಿಸಿ ಎಸೆದುಬಿಟ್ಟ. ಶರವೇಗದಲ್ಲಿ ಎರಗಿದ ಕಲ್ಲಿನೇಟು ಡುಬ್ಬಕ್ಕೆ ತಗಲಲು ಅದು ಕುಯ್ಯೊ ಮರ್ರೊ ಎಂದು ರಾಗಾಲಾಪನೆ ಮಾಡುತ್ತ ಪುರಸಭಾ ಗಟಾರಕ್ಕೆ ಮೂತ್ರ ವಿಸರ್ಜನೆ ಮಾಅಲು ಕುಳಿತಿದ್ದ ಬಾಯಿ ಬಡುಕಿ ಸಣ್ಣೀರವ್ವನ ಬಳಿಗೆ ‘ಪಾಹಿಮಾಂ’ ಅಂತ ದೂರು ಕೊಂಡೊಯ್ದಿತು. ತನ್ನ ನಾಯಿ ತನ್ನ ಸಣ್ಣಕರುಳೊಳಗೆ ಸಮ್ಕಟಕ್ಕೆ ಈಡಾಗಿರುವುದೆಂದು ಭಾವಿಸಿದ ಆಕೆ “ಯಾವಾನಲೋ ನನ್ನಾಟಗಳ್ಳ … ನನ್ನಾಯಿ ಹೊಡ್ದೋನು?” ಎಂದು ಗರ್ಜಿಸುತ್ತ ಬದ್ಧ ಭ್ರುಕುಟಿಯಾಗಿ ನಮ್ಮೆದರು ನೆಲಮುಗಿಲಿಗೇಕಾಗಿ ನಿಂತಳು. ಬೊಂಬಾಯಿಗಿಂತಲೂ ಅಗಲವುಳ್ಳ ಬಾಯಿಗೆ ಒಡತಿಯಾದ ನಿಂಗಮ್ಮಜ್ಜಿಯ ಮೊಮ್ಮಗ ಇವನೆಂತಲೂ; ನವಗ್ರಹಗಳನ್ನು ಅಂಗೈಯಲ್ಲಿತ್ತುಕೊಂಡಿರುವ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಅವನೆಂತಲು ಭಾವಿಸಿ ತಣ್ಣಗಾಗಿ … “ನಾಯಿ ನಾರಾಯಣಿದ್ದಂಗ್ರಪ್ಪಾ … ಹೊಡೀಬಾರ್ದು” ಎಂದು ಹಿತವಚನ ನುಡಿದು ನಮ್ಮನ್ನು ಬೀಳ್ಕೊಟ್ಟಳು.

ನಾಯಿ ಹೊಡೆಯುವುದರ ಮೂಲಕ ವಂಚೂರು ಆತ್ಮವಿಸ್ಜ್ವಾಸದಿಂದ ಗೆಲುವಾದ ಶಾಮ ಖಚಿತವಾದ ಹೆಜ್ಜೆ ಇಡುತ್ತ ತನ್ನ ಮನೆ ಕಡೆಗ್ರ್ ತಾನೂ; ಶಿಲ್ಪಗಳಿಗೆ ಕುಷ್ಟರೋಗ ಎಂಬ ಸಚಿತ್ರ ಲೇಖನವನ್ನು ಪೂರ್ಣಗೊಳಿಸಬೇಕೆಂದಿದ್ದ ನಾನೂ ನಮ್ಮ ದಾರಿ ಹಿಡಿದೆವು.

ಕೋರಿಶೆತ್ರು ಸಣ್ಣೀರಜ್ಜ ದೆವ್ವವಾಗಿ ತಾನು ಹೂತಿಟ್ಟಿರೋ ಗುಪ್ತಧನವನ್ನು ಕಾಯುತ್ತಿದ್ದಾನೆಂಬ ವದಂತಿಗಳಿಂದಲ್‌ಏ ತುಂಬಿರುವ ಪಾಳುಮನೆ ಸಂದಿಯಲ್ಲಿ ತುರುಗುವಾಗ್ಗೆ ನಿಂಗಮ್ಮಜ್ಜಿ ಕಚ್ಚೆ ಬಿಕ್ಕೋತ ಎದುರಾಗಿ “ನನ್ನಾಟಗಿತ್ತಿ ಕುಂಟ್ನಳ್ಳಿ ಸಣ್ಣಿ ನಿನ್ತಡವಿದಂಳಂತಲ್ಲೆಲೋ … ನಿಂಗೇನಂದ್ಲಾ ನನ ಗಂಡನ ಸೂಳೆ” ಎಂದು ನನ್ನನ್ನು ಕಕ್ಕಾವಿಕ್ಕಿ ಗೊಳಿಸಿತು. ಅದರವು ನಾಯಿ ಕಿವಿ ಅಂದುಕೊಂಡೆ. “ಆಕೆ ನಂಗೇನು ಅಂದಿಲ್ಲ ಬಿಟ್ಟಿಲ್ಲ … ಸುಮ್ಮನ್ಯಾಕೆ ಕಾಲ್ಕೆದರಿ ಜಗಳಾಓಕೆ ಹೊಂಟಿ. ನಡೆಯಬೇ ನಡೆ” ಎಂದು ರಟ್ಟೆ ಹಿಡಿಯಲು ಹೋದರದು ಕೊಸರಿ, “ಎಮ್ಥ ಸೂಗದಿಯಲ್ಲೋ …ರಂಡೆ ಮುಂಡೇರ ಕೂಡಾ ಅನಬಾರ್ದು ಅನ್ನಿಸಿಕೊಂಡು ಬಂದ್ ಬಿಟ್ಯಾ … ಕೇರು ಬಡಿಯೋದು ಬಿಟ್ಟು … ನನ ಬಿಡು … ಈ ಓಣ್ಯಾಗ ಆಕೆ ಇರಬೇಕೊಂದು ಇಲ್ಲ್ ನಾವಿರಬೇಕೊಂದು … ಈ ಎಲ್ಲಾರಿಗೊಂದು ಪೈಸಲ್ಲು ಆಗ್ಲ್ರ್ಬೇಕು ಇವತ್ತು” ಎಂದು ಹಠವಂ ಮಾಡುತ್ತಿರಲು ಆಕೆಯ ಗೂನು ಬೆನ್ನು ತಂಗಿ “ಹ್ಹಾ … ಹ್ಹಾ … ಜಗಳಾಡೋಕೆ ಹೊಂತಾಳ … ಪರಾಕ್ರಮಿ… ಕೈಯ ಹಿಡ್ದ ಗಂಡನ್ನ ನುಂಗಿ ನೀರ್ಕುಡ್ದ್ದಾಕಿ. ಇನ್ನಾ ತಾಟಗಿತ್ತಿ ಸಣ್ಣೀನ ಬಿಟ್ಟೀಯ ನೀನು … ನಿನ ಬೊಂಬಾಯಿ ಬಂದ್ ಮಾಡ್ಕೊಂಡು ಮನೀಗೆ ಹೊಂಡವ್ವ ಹೊಂಡು … ಉದುಕಾ ಮುದ್ದಿ ತಣ್ಣಗಾತತೆ” ಎಂದು ಸಮ್ಮೋಹನಾಸ್ತ್ರ ಬೀರಿತು. ಉದುಕಾ ಮುದ್ದೆ ಎಂದರೆ ಮೂಗು ಕುಯ್ಯಿಸಿಕೊಳ್ಳುವ ನಿಂಗಮ್ಮಜ್ಜಿ ಬಾಯಿ ತುಂಬಿದ ಜೊಲ್ಲನ್ನು ಪಿಚಕ್ಕಂತಾಚೆ ಉಗುಳಿ ಎದೆ ಸೆಟಿಸಿ ಮುಖ ಮುಗಿಲಿಗೆತ್ತಿ “ಲ್ಯೇ ಸಣ್ಣಿ … ಇವತ್ತು ನೀ ಬದ್ಕೊಡಬೇ … ಇನ್ನೊಂದ್ಸಾರಿ ನನ್ನ ಮೊಮ್ಮಗನ ತಂಟೆಗೆ ಬಂದಿ ಅಂದ್ರ ನಿನ ಸಾಮಾನಿಗೆ ಕೇಉ ಬಡ್ಡೇನು” ಎಂದು ಹೇಷಾರವ ಮಾಡಲು ನಮ್ಮ ಷೇಕ್ಯಾಂಡ್ನಾಯಿ ಕಲ್ಡಿ ಬೊವ್ವೋ ಅಂತ ಬೊಗುಳಿ ಮೆಚ್ಚಿಗೆ ಸೂಚಿಸಿತು. ಬೀಸತೊಡಗಿದ ಗಾಳಿಗೆ ಕೂಲಾಗುತ್ತ ಇಡೀ ಸತಮಾನದ ತಾಳೆಗರಿ ಗ್ರಂಥಗಳಿಂದ ಆ ಇಬ್ಬರು ಜ್ಞಾನ ವೃದ್ಧೆಯರೊಂದಿಗೆ ನಾನು ಕಾಲು ಹಾಕಿದೆ.

ಕುಂಟ್ನಳ್ಳಿ ಸಣ್ಣಿಗೂ, ಕುಂಬಾರ ನಿಂಗಮ್ಮಜ್ಜಿಗೂ ಫೈಟಿಂಗು ನಡೆಯುತ್ತದೆ ಎಂಬ ಭರವಸೆಯಿಂದ ಅಂಗಳದ ತುಂಬ ನಿಂತಿದ್ದ ಕುಂಟು ಬಸವಿ, ಅಂಬೂರಿ ಸಿದ್ದಿ; ಸುಡುಗಾಡು ರುದ್ರಿಯೇ ಮೊದಲಾದ ಓಣಿಯ ಶಾಕಿಣಿ, ಡಾಕಿಣಿಯರು ಒಲ್ಲದ ಮನಸ್ಸಿನಿಂದ ನಮ್ಮ ನಿಂಗಮ್ಮಜ್ಜಿಯನ್ನು ಸ್ವಾಗತಿಸುತ್ತ, :ಓಣ್ಯಾಗ ಆ ಸಣ್ಣೀದುರುವಣ್ಗಿ ಹೆಚ್ಚಾಗೇತಿ … ಆಕೀದು ಉದುರು ಬಡ್ಡು ಬರ್ಬೇಕಿತ್ತಬೇ … ಆವಾಗ ಸೈ ಅಂತಿದ್ವಿ. ಗಂಡ ಉಳ್ಳ ಮಗ್ಳೂನ ತುರುಕ್ರೋನ್ಗೆಮಲಗಾಕಿರೋದಲ್ದೆ ಈಗ ನಮ್ಮಿಬ್ಬರಬದ್ರೀಗೆ ಕಲೆ ಬಿದ್ದಾಳೇನು! … ಬಸವನ ಬಾವಿಗೆ ನೀರಿಗೋದಾಗ ಏನೋ ಗುಸುಗುಸು ಮಾತಾಡ್ತಿದ್ನೇ ಮುಂದುಮಾಡ್ಕೊಂಡು … ಏನೋ ಹರೇದ ಹುಡುಗಿ ಮಾತಾಡಿಸ್ತೂಂತ ನಮ್ಮೋನು ಮಾಡಿರಬೌದು ಬಿಡು”… ಎಂದು ನಿಂಗಮ್ಮಜ್ಜಿ ಸಿಟ್ಟಿಗೆ ಹೊಸ ಆಯಾಮ ನೀಡಿದರು… “ಏನಲೋ ಔದಾ” ಅಂತ ಮೂರನೇ ಕಣ್ಣನ್ನು ನನ್ನತ್ತ ತಿರುಗಿಸಿತು. ಮಹಿಳಾ ಮಣಿಗಳ ಪತ್ತೆ ತರದೂದು ಅರ್ಥವಾಗದೆ ನಾನು ಬಾಯಿ ಬಾಯಿ ಬಿಟ್ಟೆ. ಸಣ್ಣಿರವ್ವನ ಮಗಳು ಸರಸಿಯನ್ನು ನಾನು ಮೂರನೆ ಇಯತ್ತೆ ಓದುವಾಗ ಗುಟ್ಟಗಿ ಲವ್ ಮಾಡುತ್ತಿದ್ದುದೇನೊ ಖರೆ, ಆಕೆಯೂ ಅಷ್ಟೆ. ಮಾದರ ಶಿವಣ್ಣ ಕಪಲಿ ಭಾವಿಯಲ್ಲಿ ಲಂಗ ಮೇಲಕ್ಕೆತ್ತಿ ‘ಮಾಡಲೇ ಮಾಡು’ ಎಂದು ಪುಸಲಾಯಿಸಿದಾಗ ನಾನು ಇಷ್ತಗಲ ಕಂಣು ಬಿಟ್ಟುಕೊಂಡು ಆ ಜಾಗ ನೋಡಿ ಅಲ್ಲಿ ಏನೂ ಕಾಣದಿದಾಗ ಜಲಜಲ ಬೆವತು ವಲ್ಲೆವ್ವೋ ವಲ್ಲೆ ಎಂದು ಕೂಗುತ್ತ ವಾಪಸಾಗಿದ್ದೆ. ಆ ಒಂದು ಘಟನೆ ಬಿಟ್ಟರೆ ಸರಸಿಯೊಂದಿಗೆ ನನ್ನ ಯಾವುದೇ ಅನೈತಿಕ ಸಂಭಂದ ಮಾನಸಿಕವಾಗಿ; ದೈಹಿಕವಾಗಿ ಇಲ್ಲ. ಲೈಗಿಕವಾಗಿ ದುರ್ಬಲ ಇರುವ ಕಂಪ್ಲಿ ಲಿಂಗಮೂರುತಿಯನ್ನು ಮದುವೆ ಮಾಡಿಕೊಂಡಿರುವ ಆಕೆ ದೇಹದ ತಣುವಿಕೆಗಾಗಿ ಯಾರೊಂದಿಗಾದರೂ ಮಲಗಿಕೊಳ್ಳಲಿ! ಅದು ಇವರಿಗೇಕೆ ಬೇಕು? ಒಂತಿಯಾಗಿ ಸಿಕ್ಕ ಸಂದರ್ಭದಲ್ಲಿ ನಾವಿಬ್ಬರು ಮಾತಾಡುತ್ತಿದ್ದ ಮಾತ್ರಕ್ಕೆ ಸಂಬಂಧ ಕಲ್ಪ್[ಇಸುವುದೇ? … ಈ ಪ್ರಕಾರವಾಗಿ ಕಕ್ಕಾಬಿಕ್ಕಿಯಾಗಿರುವ ನನ್ನನ್ನು ಕಾಪಾಡಲೆಂದು ಅಡುಗೆಮನೆಯಲ್ಲಿ ಮುದ್ದೆ ತಟ್ಟುತ್ತಿದ್ದ್ದ ದೊಡ್ಡವ್ವ ರವುಷದಿಮ್ದ ಹೊರಬಂದು ‘ನನ ಮಗ ಗಂಡ್ಸು ಯಾರತ್ರಾರ ಮಕ್ಕಂಬ್ಲಿ … ನಿಮಗ್ಯಾಕ ಬೇಕ್ರಬೇ ನೀವೇನು ಸುದ್ದಾ” ಎಂದು ಆರ್ಭಟಿಸಲು ಅವರೆಲ್ಲ ತಂತಮ್ಮ ಹಾದಿ ಹಿಡಿದರು… ರುಚಿಯಾಗೇ ಇದ್ದರೂ ನಾನು ಒಂದು ಮುದ್ದೆ ನುಂಗಿ ಕೈತೊಳೆದುಕೊಂಡು ನನ್ನ ರೂಮು ಸೇರಿಕೊಂಡೆ. ಹಾಳೆಗಳ ,\ಮೇಲೆ ಮುಂಗಾಲು ನೆಕ್ಕಿಕೊಳ್ಳುತ್ತ ಮಲಗಿದ್ದ ಬೆಕ್ಕು ಹಲೋ (ಮ್ಯಾಂವ್) ಅಂತು. ಎದುರುಗಡೆ ನೇತುಹಾಕಿದ್ದ ಹೆಮಮಾಲಿನಿ ಫೋಟೊ ಸಣ್ಣಿರವ್ವನ ಫೋಟೋ ಆದಂಗಾಯಿತು. ಅದರ ಪಕ್ಕದಲ್ಲಿ … ಇನ್ನೊಂದು ಪಕ್ಕದಲ್ಲಿ; ಹಿಂದುಗಡೆ ಹೀಗೆ ಅನೇಕ ಕಡೆಗಳಲ್ಲಿದ್ದ ರೇಖಾ, ಮ್ರ್ಲಿನ್ ಮನ್ರೋ; ಸೊಫಿಯಾ ಇವರೆಲ್ಲ ಓಣಿಯ ಹೆಂಗಸರ ಮುಖವಾಡ ಧರಿಸಿರುವಂತೆ ಭಾಸವಾಯಿತು. ಅವಿವಾಹಿತ ತರುಣ ರಾಜಕುಮಾರ್ವನೋರ್ವನಿಗೆ ಸಾರ್ವಜನಿಕರ ಸಮಕ್ಷಮ ಚುಂಬಿಸಿ, ಎದೆಗಾರಿಕೆ ಪ್ರಕಟಿಸಿ ದಿನಬೆಳಗಾಗುವುದರೊಳಗೆ ಅಂತರಾಷ್ಟ್ರೀಯಖ್ಯಾತಿ ಗಳಿಸಿದ ಮಧ್ಯಮ ವರ್ಗದ ಹದಿಹರೆಯದ ಹುಡುಗಿ ಶಶಿಕಲಾಳ ಒಳಗಿಂದ ಸರಸ್ವತಿ ಒಡಮೂಡುತ್ತಿರುವಳೆಂದು ಭಾವಿಸಿ ಚಾಪೆ ಮೇಲೆ ಮೈಚೆಲ್ಲಿ ಕಣ್ಣು ಮುಚ್ಚಿದೆ. ನನ್ನ ಮತ್ತು ನನ್ನಂಥವರ ಅಂತರಂಗ ಮತ್ತು ಬಹಿರಂಗಗಳ ಎಲ್ಲ ಮಗ್ಗುಲುಗಳ ಮೇಲೆ ಸದಾ ನಿಗಾ ಇಟ್ಟು ಸದುವು ಸಿಕ್ಕರೆ ಆಕ್ರಮಣ ಮಾಡಲು ಓಣಿಯ ಅನೇಕರು ಹೊಂಚು ಹಾಕಿರುವರೆಂದು ಅಚಾನಕ್ ಅಂದುಕೊಂಡೆ. ಗಲಿಬಿಲಿಗೀಡಾದೆ. ’ಬಗಸಿ ನುಗ್ಗೆಸೊಪ್ಪಿನ ಉದುಕಾ ಮಾಡಿದ್ರು ಉಣ್ಣಿಲ್ವಲ್ಲೋ ನೀನು’ ಎಂದು ದೊಡ್ಡವ್ವ ಕಲ್ಡಬತ್ತದೊಳಗೆ ಎಲೆಅಡಿಕೆ ಹಾಕಿ ಕುಟ್ಟತೊಡಗಿದ. ಸದ್ದು ಕೇಳಿಸಿಕೊಳ್ಳುತ್ತಲೆ ಈ ಊರು ಯಾವಾಗ ಬಿಡುವೆನೋ ಎಂದೆನಿಸಿತು. ಊರನ್ನು ಶಾಮ ಬಿಟ್ಟರೂ ನನ್ನೊಳಗೆ ಬೆಚ್ಚಗಿರುವ ಉರಿನಿಂದ ಬಿಡುಗಡೆಯಾಗಬೇಕಲ್ಲ! ಪರಿತ್ಯಕ್ಕ್ತತೆ ಎಂಬುದೇ ಭ್ರಮೆ ಎನಿಸಿತು. ಆ ಭ್ರಮೆಯೊಳಗೆ ಕರಗಿ ಹೋದೆ … ಕವಿದ ನಿದ್ದೆಯೊಳಗೆ ಕಂಡ ಕನಸಿನಲ್ಲಿ ಸರಸಿಯೊಂದಿಗೆ ಸಂಭೋಗ ಮಾಡಿದಂಥ ಕನಸು ಬಿದ್ದಿತೆಂದು ಅರ್ಥವಾದಾಗ ಒದ್ದೆಯಿಂದ ಊರುಗಳೊಂದು ಬೆಸೆದುಕೊಂಡಿದ್ದವು. ಅದರ ವಾಸನೆಗೆ ಮೂಗು ಹಿಗ್ಗಲಿಸಿಕೊಂಡು ಮಹಾ ಮಳ್ಳಿಗನಂತೆ ಮೈಹೊಸಕುತ್ತ ಬಂದ ಬೆಕ್ಕು ಅಂಗಾಲಿಗೆ ತಗುಲಿದಾಗ ಮೃತ್ಯು ಸ್ಪರ್ಶಿಸಿದಂತೆ ದಿಗ್ಗನೆಚ್ಚರಗಿ ಅದನ್ನಾಚೆ ಜಾಡಿಸಿದೆ. ಅದು ನಾನು ಸ್ಖಲಿಸಿಕೊಂಡ ಸಮಾಚಾರವನ್ನು ಬಿತ್ತರಿಸುವ ರೀತಿಯಲ್ಲಿ ಅರಚುತ್ತ ಹೋಯಿತು.

“ಬೆಕ್ಕನ್ಯಾಕೆ ಹೊಡ್ದ್ಯೋ … ದೇವ್ರಿದ್ದಂಗದು … ಅದು ನೊಂದ್ಕೊಂಡ್ರೆ ಪಾಪ ಬರತೈತಿ” ಎಂದು ಸಿದ್ದಮ್ಮಜ್ಜಿ ಬಾಯಲ್ಲಿ ಮುಂಗೈ ಇಉ ಕೂತಲ್ಲಿಂದ ಕೂಗಿತು.
ಮಲಗುವುದೋ! ಏಳುವುದೋ ! ಎಂಬ ಗೊಂದಲದಲ್ಲಿದ್ದ ನಾನು ಮಲಗುವುದು ಸಾಧ್ಯವಿಲ್ಲವೆಂಬಂತೆ ಹೊತ್ತು ಮಾರುದ್ದ ಏರಿತ್ತು; ಮೈ ಮುರಿದೆದ್ದು ಆಕಳಿಸುತ್ತ ಕೋಣೆಯೊಳಗಿಂದೀಚೆ ಬಂದೆ.

ಬೆಳಗಿನ ಸಮಯವನ್ನು ನಮ್ಮೋಣಿಯ ಹೆಂಗಸರು ಅನುಭವಿಸುವುದನ್ನು ನೋಡುವುದೇ ಒಂದು ಸೋಜಿಗದ ಸಂಗತಿ. ಸಿದ್ದವ್ವ ಕಾಲು ಕಿಸಿದು ಕೂತುಕೊಂಡು ಎಡಗೈಯ ಅರ್ಧ ಭಾಗ ಗಂಅಲ ಮಟ ತೂರಿಸಿ ಕಫ ಕಿತ್ತು ಸಾರಣೆ ಮಾಡತೊಡಗಿದ್ದುದು ಅರ್ಧ ಊರಿಗೆ ಕೇಳಿಸುತ್ತಿತ್ತು. ಇನ್ನೊಂದು ಕಡೆ ಗಂಡಸತ್ತ ಆರು ತಿಂಗಳಿಗೆ ಹುಟ್ಟಿದ ತನ್ನ ಮೂರು ವರ್ಷದ ಮಗನನ್ನು ಅಂಗಳದ ಕಲ್ಲ ಮೇಲೆ ಕೂಡ್ರಿಸಿಕೊಂಡು ಬಸವಿ ಇಟ್ಟಿಗೆ ಹುಡಿಯಿಂದ ಹಲ್ಲುಜ್ಜುವ ಬಗ್ಗೆ; ನಾಲಿಗೆ ಕೆರೆಯುವ ಬಗ್ಗೆ; ಗಂಟಲಿನಿಂದ ಕಫ ಕೀಳುವ ಬಗೆ ಬಗ್ಗೆ ಎಂದಿನಂತೆ ತರಬೇತಿ ಕೊದಲಾರಂಭಿಸಿದ್ದಳು. ಉರಿಸಿಕೊಂಡು ತಿಂದು ಸತ್ತ ಗಂಡನ ಮೇಲಿನ ಕೋಪವನ್ನು ಆ ನೆಪದಲ್ಲಿ ತನ್ನ ಮಗನ ಮೇಲೆ ತೀರಿಸಿಕೊಳ್ಳುತ್ತಿದ್ದಳು. ಇನ್ನೊಂದು ಕಡೆ ಇನ್ನೊಂದು ನಮೂನಿ ಸೀನು … ಇಂಥಪ್ಪ ಹಲವು ಸೀನುಗಳನ್ನು ತಂತಮ್ಮ ನಿಗದಿತ ಜಾಗಗಳಲ್ಲಿ ಕೂತುಕೊಂಡು ಆನಂದಿಸುತ್ತಿದ್ದ ನಾಯಿಗಳು; ಕಾಗೆಗಳು ಇತ್ಯಾದಿ … ಮುಖ ತೊಳೆದುಕೊಳ್ಳುವವರ ವಕ್ಷ ಸ್ಥಳಗಳನ್ನು ಕಳ್ಳ ಕಿಂಡಿಂದಿಣುಕಿ ನೋಡುತ್ತಿದ್ದ ಕನ್ನಡ ಪಂಡಿತರು ಪಕ್ಕದ ಮನೆ ಜಾಲರಿ ಮರೆಯಲ್ಲಿ; ಹಿತ್ತುಲಲ್ಲಿ ಹೆಂಡತಿ ತಮ್ಮನ್ನು ಸಾಪಳಿಸುತ್ತ ಇರುವಳು ಎಂಬ ಪರಿವೆಯ್ ಇಲ್ಲದೆ.

ಚಾವತ್ತು ಪೂರ್ಣ ಪ್ರಮಾಣದಲ್ಲಿ ಕೋಣೆ ಬಿಟ್ಟು ಹೊರ ಬರಲಾಗಲಿಲ್ಲ. ಕನಸು ಕಂಡಿರೋ ಅಳುಕು. ನಾನು ಕಂಡಿರೋ ಕನಸು ಅವರಿಗೆ ಗೊತ್ತಾಗಿದೆ ಎಂಬ ಅಳುಕು, ಊರುಗಳ ನಡುವಿನ ಅಂಟನ್ನು ಬೆಕ್ಕು, ನಾಯಿಗಳು ಘ್ರಾಣಿಸಿವೆ ಎಂಬ ಅಳುಕು, ಶಾಮನ ವ್ಯಕ್ತಿತ್ವ ನನ್ನಲ್ಲಿ ಪುನರಾವರ್ತನೆಯಾಗುತ್ತಿರುವ ಅನುಮಾನ ಬಂತು, ಎಲ್ಲ ಬಿಟ್ಟುಕೊಟ್ಟು ಓಡಬೇಕು, ವಾಯು ಮತ್ತು ಮನಸ್ಸಿಗಿಂತ ಮಿಗಿಲಾಗಿ … ಅಸಹನೀಯವದದ್ದನ್ನು; ಅಶ್ಲೀಲವಾದುದನ್ನು ಎಲ್ಲವನ್ನು ಕೂಡಲೆ ವಿಸರ್ಜಿಸಿ ನಿರುಮ್ಮಳತೆ ಸಾಧಿಸಬೇಕೆಂಬ ಉತ್ಕಠೇಚ್ಛೆ … ಹೊರಟೆ … ಪವಿತ್ರ ಗಂಗಾಜಲದೊಂದಿಗೆ. ಹಸಿರು ಮೊಗೆಯುತ್ತಿರುವ ಗದ್ದೆಗಳ ನಡುವೆ ಮೇರೆಗಳ ಮೇಲೆ; ಪಾರ್ಥೇನಿಯಂ ಮರೆಯಲ್ಲಿ ಕೆಮ್ಮುತ್ತ ಕ್ಯಾಕರಿಸುತ್ತ ವಿಸರ್ಜನಾಸೀನರಾಗಿರುವ ತರಾವರಿ ಮಂದಿ … ಮೂವ್ವತ್ತೆರಡು ವರ್ಷದ ಮಗನ ತಂದೆಯಾಗಿದ್ದು ಒಂದೂವರೆ ವರ್ಷದ ಮಗನಿಗೂ ತಂದೆಯಾಗಿರುವ ಹಾಯಸ್ಕೂಲು ಕಿಲಾರ್ಕು ಗುರುಸಿದ್ದಪ್ಪ್ಪ ವಿಸರ್ಜನಾಂಗದಿಂದ ಮೊಳೆ ವ್ಯಾಧಿಯನ್ನೂ; ಬಾಯಿಂದ ಶ್ವಾಸಕೋಶದ ವ್ಯಾದಿಯನ್ನೂ ಏಕ ಕಾಲಕ್ಕೆ ಪ್ರಕಟಿಸುತ್ತ ಕೂತು ಎಷ್ಟು ಹೊತ್ತಾಗಿರುವುದೋ! ಆತ ಎದ್ದು ಬರುವುದು ಸೆಕೆಂಡ್ ಬೆಲ್ ಹೊಡೆಯುವ ಮೇಲೆಯೇ; ಪರಮೇಶ್ವರ ಶಾಸ್ತ್ರಿಗಳು ಆತನನ್ನು ಕಲಿಯುಗದ ಧೃತರಾಷ್ಟ್ರನಿಗೆ ಹೋಲಿಸಿರುವುದ ಸಮಂಜಸವಾಗೇ ಇದೆ. ಎಲ್ಲಾ ಸೈರಿಸಿಕೊಂಡು …

ಹೇಗೋ ಒಂದು ಮುಗಿದಿ ಬುಡ್ಡೇಕಲ್ಲು ದಾಟಿ ಕೋಟೆ ಗೋಡೆ ಏರಿ ಮೇಲೆ ಬರುವುದಕ್ಕೂ ಶೂದ್ರತ್ವ ಬ್ರಾಹ್ಮಣತ್ವಗಳನ್ನು ಏಕಕಾಲಕ್ಕೆ ಪ್ರಕಟಿಸುತ್ತ ಉಗ್ಗು ನಾರಾಣಿ ಎದುರಿಗೆ ಬರುವುದಕ್ಕೂ ಸರಿಹೋಯಿತು. ಜೋಕುಮಾರನನ್ನು ಬಚ್ಚಿಡುವ ಹಾಸುಗಲ್ಲಿನ ಯಜಮಾನ ವೆಂಕೋಬನ ಹಿರೇಮಗನಾದ ನಾರಾಣಿ ಶಾಸ್ತ್ರಿಗಳ ಮನೆ ಮೈಲಿಗೆ ಸಹವಾಸ ಮಾಡಿದಂದಿನಿಂದ ತುಸು ಗ್ರಾಂಥಿಕವಾಗಿ ಮಾತಾಡುವುದನ್ನು ಅಭ್ಯಾಸ ಮಾಡಿಕೊಂಡಿರುವಂಥ ಸಭ್ಯಸ್ಥ “ಏನ್ರೀ ಶೋಮಿ … ಯಶ್ಟು ಹೊಟ್ತಿನಿಂದ ತಮ್ಮನ್ನು ಹುಡುಕುವುದು? ಮನೆಗೆ ಹೋಗಿದ್ದೆ ಮನೆಯಲ್ಲಿರಲಿಲ್ಲ … ಅಜ್ಜಿ ಮಾತು ಕಟ್ಟಿಕೊಂಡು ಕೋಣೆಯಲ್ಲಿಣುಕಿದೆ. ನಿಮ್ಮ ಲುಂಗಿ ನೆಕ್ಕುತ್ತಿದ್ದ ಬೆಕ್ಕು ದುರುಗುಟ್ಟಿ ನೋಡಲು ಹೆದರಿ ಬಸವನ ಬಾವಿ ಕಡೆ ಬಂದೆ. ಅಲ್ಲಿ ಕೂತಿರುವುದು ನೀವೆ ಅಂದುಕೊಂಡು ಕಾದೆ ಕಾದೆ. ಅಂತೂ ದೇವರ ದಯೆಯಿಣ್ದ ಎದ್ದು ಬಂದಿರಿ … ದೇವರು ದೊಡ್ಡವನು… ಯಾಕೆಂದರೆ ನೀವು ಕೂತಿದ್ದ ಜಾಗದಲ್ಲಿ ನಾನು ಹಿಂದೊಮ್ಮೆ ಘಟಸರುಪ ನೋಡಿದ್ದೆ … ಅದರ ಮೈ ಮೇಲೆ ಗೇಣುದ್ದದ ಕೂದಲಿದ್ದವು… ಅಬ್ಬಾ! ಅದರ ಸೀಳು ನಾಲಿಗೆ …” ಮಾತಿಂದಲೇ ನನ್ನ ಕೊಲೆ ಮಾಡಲಿಕ್ಕೆಂದೇ ಬಂದಿರುವನೆನ್ನಿಸಿ “ಅದೇನು ಹೇಳಬೇಕೆಂದಿದ್ದೀಯೋ ಅದ್ನೆರ್ಡು ಮಾತ್ನಲ್ಲಿ ಹೇಳಿ ಪುಣ್ಯ ಕಟ್ಕೋ ಮಾರಾಯ …ತಲೆ ತಿನ್ಬೇಡ” ಎಂದು ಕೇಳಿದೆ. ಕೂಡಲೆ ಶಾಸ್ತ್ರಿಗಳನ್ನು ಕಾಣಬೇಕಂತೆ ಎಂದು ಹೇಳಿದ. “ಬರ್ತೀನಿ ನೀನು ಹೋಗು!” ಎಂದೆ. ಅವನು ಹೋದ. ಒಂದೇ ಪ್ರಮಾಣದಲ್ಲಿರದ ಎರಡು ಕಾಲುಗಳಿಂದ ಅವನು ಬೀಸು ಹೆಜ್ಜು ಹಾಕಿದ.

ನಾನು ಬಂದೊಡನೆ ಕೂಡಲೆ ಕೋಣೆಗೆ ನುಗ್ಗಿ ನೋಡುತ್ತೇನೆ. ಹಾಳಾದ ಬೆಕ್ಕು ಲುಂಗಿಯೊಡನೆ ಚಿನ್ನಾಟ ಆಡುತ್ತಿರುವುದು.ಲುಂಗಿಯನ್ನು ಬಚ್ಚಲಿಗೆಸೆದು ಜಗಳ ಮಾಡುತ್ತಿದ್ದಾಗ ಮುದುಕಿ “ಲೋ ನೀನಿವತ್ತು ಹುಟ್ಟಿದ್ದಿನ … ಐದು ನಮೂನಿ ಎಣ್ಣ್ಯಾಗ ಮಾರಿ ನೋಡಿಕ್ಯಾ … ಹಂಗೆ ಹನ್ಮನ್ನ ಗುಡಿಗೋಗಿ ತುಪ್ಪ ದೀಪ ಹಚ್ಚಿ … ಸಣ ಮಾಡಿಕ್ಯಾ… ನಿನ್ನ ಗ್ರಹಗತಿ ಸುದ್ದಿಲ್ಲಾಂತೆ … ಹಿರೇರ ಮಾತ್ನ ಮೀರಬೇಡ… ಎಂದಾರಂಭಿಸಿ ಯಾವ ಯಾವ ನಮೂನಿ ಎಣ್ಣೆಯನ್ನು ಎಲ್ಲೆಂದ ಜೋಡಿಸಿಕೊಂಡು ಬಂದುದರ ಬಗ್ಗೆ ಹೊಸ ವ್ಯಾಖ್ಯಾನ ಮಂಡಿಸಿತು. ಒಂದೊಂದು ಎಣ್ಣೆಗೆ ಸಂಭಂದಿಸಿದ ಒಬ್ಬೊಬ್ಬ ವ್ಯಕ್ತಿಯ ಕುಲಗೋತ್ರ ಜಾಲಾಇಸಿತು. ನಿರಂತರವಾಗಿ ಮಾತಾಡುತ್ತಿದ್ದ ಅದನ್ನು ಅದರಪದಿಗೆ ಬಿಟ್ಟು ನಾನು ನನ್ನ ಕೆಲಸ ಮುಗಿಸಿಕೊಂಡು ಹೊರಗೆ ಬಿದ್ದೆ.

ಸರಸಿ ಕಣ್ಣಿಗೆ ಬಿದ್ದಾಳೆಂಬ ಭಯದಿಂದ; ಅಂತೂ ಕನಸಿನಲ್ಲಾದ್ರೂ ನನ್ನ ಸಂಭೊಗಿಸಿದೀಯಲ್ಲ ಎಂದು ಕಂಣಿಂದ ಕೇಳ್ಯಾಳೆಂಬ ಆತಂಕದಿಂ, ಅವರ ಸಾಕು ನಾಯಿ ಗುರುಗುಟ್ಟಿ ಸಣ್ಣಿರವ್ವನ ಗಮನವನ್ನು ನನ್ನ ಕಡೆಗೆ ಸೆಳೆದೀತೆಂಬ ಅಂಜಿಕೆಯಿಂದ … ಇನ್ನೇನು ಊರಮ್ಮನ ಬಯಲು ಪ್ರವೇಶಿಲಿದ್ದ ನಾನು ಹೊರಳಿ ನನ್ನ ಜವಳಾಕಾರ್ಯ ಮಾಡಿದ್ದ ಕೆಲಸೇರ ಗುರವಪ್ಪನ ಮೂರು ಗೋಡೆ ಮನೆಯ ಮುಂದೇಸಿನಿಂದ ಹಾದು ರುದ್ರ ನಾಯಕನ ಆಟವಾಳಿಗೆ ಮನೆ ಮುಂದೆ ತೇಲಿ ನಡುಗೆ ಮಂದಗೊಳಿಸಿದೆ. ನಾನೆಂದೂ ಮಾತಾಡಿಸಿರದಿದ್ದರೂ ಮುಖ ಪರಿಚಯವಿರುವ ಅನಸೂಯಳ ಗಂಡನಾದವನು ಹೇಗಿರುವನೆಂಬ ಕುತೋಹಲದಿಂದ ಹಾಗೇ ವಾರೆಗಣ್ಣಿನಿಂದ ನೋಡಿದೆ. … ಬಾಯಿತುಂಬ ನೊರೆ ಇಟ್ಟುಕೊಂಡು ಬ್ರಷ್ ಮಾಡುತ್ತಿರುವ ಮಟ್ಟಸ ವ್ಯಕ್ತಿಯೇ ಆಕೆಯ ಗಂಡನಿರಬೇಕೆಂದುಕೊಂಡೆ… ಆತನೂ ಚಿರಪರಿಚಿತನಂತೆ ನನ್ನತ್ತ ನೋಡಿದ. ಅದೇ ಹೊತ್ತಿಗೆ ಹಿತ್ತಲ ಲಘು ಬೆಳಕಿನಲ್ಲಿ ತಲೆ ಒಣಗಿಸಿಕೊಂದು ಹೊರಗಡೆ ಬಂದ ಅನಸೂಯಾ “ರ್ರೀ… ರ್ರೀ…” ಎಂದು ಕೂಗಿದ್ದು ಕೇಳಿಸಿತು. ನನ್ನನ್ನೇ ಆಕೆ ಕೂಗಿದ್ದು ಎಂದು ಖಾತ್ರಿ ಮಾಡಿಕೊಂಡ ನಂತರ ನಿಂತೆ. ಒಳಗೆ ಕರೆದಳು. ಹೋದೆ. ಕೂಡ್ರಲು ಕುರ್ಚಿ ತೋರಿಸಿದಳು. ಕೂತೆ…. ಮುಖ ತೊಳೆದುಕೊಂಡು ಬಂದ ಗಂಡನನ್ನು ಪರಿಚಯಿಸಿದಳು. ಕೈ ಕುಲುಕಿದ… ನಾನೂ ಅಷ್ಟೆ. ಬೆಂಗಳೂರಲ್ಲಿ ಒಂದು ಸ್ವಂತ ಚಿಕ್ಕ ಉದ್ದಿಮೆ ಸ್ಥಾಪಿಸಬೇಕೆಂದಿರುವುದು ಮತ್ತು ಅದು ದೋಸೆಗೆ ಸಂಬಂಧಪಟ್ಟಿದ್ದೇ ಆಗಿರಬಹುದೆಂದು ಇತ್ಯಾದಿ ಕಲ್ಮಷವಿಲ್ಲದೆ ಹೇಳಿದ. ನಾನು ನನ್ನ ಬಗ್ಗೆ ಏನು ಹೇಳಿಕೊಳ್ಳುವುದು? ಅಷ್ಟರಲ್ಲಿ ಅನಸೂಯಾ ಕಳೆದ ಮಾಹೆಯ ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಕಥೆಯೊಂದರ ಬಗ್ಗೆ ಗಂಡನ ಗಮನ ಸೆಳೆದು ನೆನಪಿಸಿದಳು. ಆತ ‘ಹೊ’ ಎಂದ. ..ನನ್ನ ಕಥೆಯ ನಾಯಕನೊಂದಿಗೇ ಮಾತಾಡಬೇಕಾಗಿ ಬಂದಿದ್ದರಿಂದ ಮಾತುಗಳಿಗಾಗಿ ತಡವರಿಸಿದೆ. ಕ್ರಾಂತಿ ಎಂಬ ಶೀರ್ಷಿಕೆಯಡಿ ಉಡುಪಿ ಹೋಟಲ ಮಾಸಾಲೆ ದೋಸೆ ಕಡೆ ಗ್ರಾಮದ ಗಮನವನ್ನು ಸೆಳೆಯುವುದರ ಮೂಲಕ ಬದಲಾವಣೆಗೆ ಕಾರಣನಾಗುವ ಯುವಕ ಪಾತ್ರ ಅದ್ದಗಿತ್ತು.

“ಶಿವ ಪೂಜೆ ಕೊಟ್ರ ಗೌಡ್ರು ಜೀವ ಬಿಡೋ ಒಂದು ಗಳಿಗೆ ಮೊದಲು ಹೋಟ್ಲಿಂದ ಮಸಾಲೆ ತರಿಸ್ಕೊಂಡಿದ್ರಂತೆ ಹೌದೆ?” ಎಂದು ರಘು ನನ್ನ ಕೇಳಿದ.

ನನಗೆ ಆಶ್ಚರ್ಯವಾಯಿತು.

ಶಿವಪೂಜೆ ಕೊಟ್ರ ಗೌಡ ನಮ್ಮ ಮನೆತನಕ್ಕೆ ಅಷ್ಟು ದೂರದವನೇನೂ ಅಲ್ಲ. ಆಸ್ತಿ ಅಂತಸ್ತು ಕಾರಣದಿಂದ ಊರಿಗಿಂತ ಭಿನ್ನವಾಗಿ ಊಳಿದ ಅವರು ತಮ್ಮ ಇಳಿವಯಸ್ಸಿನಲ್ಲಿ ಹೆಂಡತಿ ಮಕ್ಕಳು ಸೊಸೆಯರಿಂದ ಬೇಬಿಷ್ಠೆಗೊಳಗಾಗಿದ್ದರೆಂದು ಕೇಳಿದ್ದೆ. ಲಕ್ವಾ ಹೊಡೆದು ಮಂಚಕ್ಕೆ ಸೋಪ್ತಿಯಾಗುವ ಮೊದಲು ಅವರು ಸಂಜೆಯಾಯಿತೆಂದರೆ ಜೀತದಾಳಿನಿಂದ ಬಾಡಿಗೆ ಪಡೆದ ಗೊಂಗಡಿಯೊಳಗೆ ಮರೆ ಮಾಚಿಕೊಂಡು ಉಡುಪಿ ಹೋಟಲನ್ನು ಹಿಂಬಾಗಿಲಿಂದ ಪ್ರವೇಶಿಸಿ ಗುಟ್ಟಾಗಿ ದೋಸೆ ತಿಂದು ಉದ್ರಿ ಬರೆಸಿ ಹೋಗುತ್ತಿದ್ದರೆಂಬುದು ಗೊತ್ತಾದದ್ದೇ ಅವರು ಲಿಂಗೈಕ್ಯರಾದ ಮೇಲೆ …

” ನಿಮ್ಮ ತಂದೆಯವರು ಇಷ್ಟು ದೋಸೆ ತಿಂದದ್ದು ಇಷ್ಟು ಕೊಡಬೇಕಾಗಿದೆ ಮಹಾರಾಯ್ರೇ” ಎಂದು ಮನೇ ಬಾಗಿಲಿಗೇ ಬಂದ ಭಟ್ಟರನ್ನು ಗೌಡರ ಮನೆಮಂದಿಎಲ್ಲ ಭೂತ ಬಿಡಿಸಿದ್ದು ಜಗಜ್ಜಾಹಿರಾದ ಮೇಲೆಯೇ. ಜೀತದಾಳು ಲಸುಮ ದೊಡ್ಡ ಗೌಡರಿಗೆ ತನ್ನ ಗೊಂಗಡಿ ಬಾಡಿಗೆ ಕೊಟ್ಟಿದ್ದ ಮೊತ್ತವನ್ನು ಹೇಗೆ ವಸೂಲು ಮಾಡುವುದಪ್ಪಾ ಎಂಬ ಚಿಂತೆಯಲ್ಲಿದ್ದಾಗ ಭಟ್ಟರು ಕೋರ್ಟಿನಲ್ಲಿ ದಾವೆ ಹಾಕಿರುವರಂತೆ… ಐನೂರು ಚಿಲ್ಲರೆ ಮುಖದ ಮೇಲೆ ಎಸೆಯದಿದ್ದರೆ ಈ ಪೀಕಲಾಟವೇ ಇರುತ್ತಿರಲಿಲ್ಲವೆಂದು ಪ್ರತಿವಾದಿಗಳಿಗೆ ವಕೀಲರು ಬುದ್ಧಿ ಹೇಳಿದ್ದೂ ಉಂಟಂತೆ… ಕೊಡಗಿನ ಅಂತಿಮ ಅರಸ ಚಿಕ್ಕವೀರ ರಾಜೇಂದ್ರ ತಾನು ಭ್ರಷ್ಟನಾದ ಮೇಲೆ ಈಸ್ಟ್ ಇಂಡಿಯಾ ಕಂಪನಿ ಮೇಲೆ ಹೂಡಿದ್ದ ಖಟ್ಲೆಗೂ ಇದಕ್ಕೂ ಅಷ್ಟು ವ್ಯತ್ಯಾಸವಿಲ್ಲವೆಂದು ವಾದ ವಿವಾದ ಕೇಳುವಾಗ ಮುನಸೀಫರು ಸ್ವತಃ ಅಭಿಪ್ರಾಯ ಪಟ್ಟರಂತೆ… ಖಟ್ಲೆ ನಡೆಯುತ್ತಿರುವಾಗ ಶಿವಪೂಜೆ ಗೌಡರೂ; ಮಸಾಲ ದೋಸೆಯೂ ಎಂಬೊಂದು ಲೇಖನವನ್ನು ಕಮಲಾಕರ ಖಡ್ಗ ಪ್ರಕಟಿಸಿ ಸದರೀ ಗ್ರಾಮದಲ್ಲಿ ಹೊಸ ಜಿಜ್ಞಾಸೆಯನ್ನೇ ಸೃಷ್ಟಿಸಿತು ಎಂಬುದು ಗಮನಾರ್ಹ ಸಂಗತಿ. ಐಬಿ ಹತ್ತಿರ ಡ್ರಾಗನ್ ಹಾರ್ಟ್ ಬಾರಂಡ್ರೆಸ್ಟೋರೆಂಟ್ ಸುರು ಮಾಡಿದ ಮೂರನೆ ವಾರದಲ್ಲಿಯೇ ಶಿವಪೂಜಾ ಸುರೇಶ ಗೌಡರು “ಲೇ ಕಮಲಾಕರ… ನಮ್ತಂದ್ಯೋರು ಮಸಾಲೆ ತಿಂತಿದ್ರೂಂತ ಸುಳ್ಳು ಬರ್ದು ಮರ್ಯಾದೆ ಕಳಿತೀಯೇನೊ… ಡೆಫಮೇಷನ್ ಕೇಸ್ ಹಾಕಿ ಸೊಂಟ ಮುರೀತೀನಿ ನೋಡ್ತಿರು” ಎಂದು ರೋಫ್ ಹಾಕಿ ಹೋದನು. ಅದಕ್ಕೆ ಕಮಲಾಕರ ಎಳ್ಳಷ್ಟೂ ವಿಚಲಿತನಾಗಲಿಲ್ಲ. ಮರುದಿನ … ಖಡ್ಗದ ಮುಖಪುಟದಲ್ಲಿ ಬಳ್ಳಾರಿ ಬ್ರೀಜ್ ಹೋಟಲಲ್ಲಿ ಶಿವಪೂಜೆ ಸುರೇಶ್ ಗೌಡರು ಬೀಫ್ ತಿನ್ನುತ್ತಿರುವ ಫೋಟೋ ಪ್ರಕಟವಾಗಿ ಬಿಡಬೇಕೆ? ಆ ಫೋಟೊ ಇದ್ದ ಸಂಚಿಕೆ ಕಾಳಸಂತೆಯಲ್ಲಿ ಮಾರಾಟವಾಗಿದ್ದೊಂದು ಸಣ್ಣ ಪತ್ರಿಗೆಗಳ ಇತಿಹಾಸ ಸಂಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಸಂಗತಿ. ಅವನಿಗೆ ಹೆಣ್ಣು ಕೊಟ್ಟ ಮಾವ ಮುನ್ನೂರು ಮೈಲಿ ದೂರದೂರಿಂದ ಬಿರುಗಾಳಿಯಂತೆ ಬಂದು ಅತ್ತು ರಂಪಾಟ ಮಾಡುತ್ತಿದ್ದ ನಾಲ್ಕು ಮಕ್ಕಳ ತಾಯಿಯಾದ ತಮ್ಮ ಮಗಳನ್ನು ಸಂತೈಸುತ್ತ “ನೀನೂದ್ಕೊಂಡಿದ್ದುದು ನೋಡಿ ಕೋಳಿ ತಿಂತಿರ್ಭವುದೆಂದ್ಕೊಂಡಿದ್ನೇ ಹೊರ್ತು ಈ ದೇಶದ ಪವಿತ್ರ ಪ್ರಾಣಿಯನ್ನೂ ತಿಂತಿ ಅಂತ ಅಂದ್ಕೊಂಡಿರ್‍ಲಿಲ್ವೋ ಅಳಿಯನೆಂಬ ಮುಠ್ಥಾಳ, ನಿನ್ ತಂದೆಯವರು ಭಟ್ರೋಟ್ಳ ಮಸಾಲೆ ತಿಂತಿದ್ಕೇನೆ ಅಷ್ಟು ಎಗರಾಡ್ತಿದ್ಯಲ್ಲಾ… ಈಗವ್ರು ಬದುಕಿದ್ರೆ ನಿಂಗ್ಯಾವ ಶಿಕ್ಷೆ ಕೊಡ್ತಿದ್ರೋ… ಇನ್ನು ನಿನ್ಗೂ ನನ್ ಮಗ್ಳಿಗೂ ಯಾವ ಸಂಬಂಧ ಇಲ್ಲ… ದೈವರ್ಸ್ ಫಾರಂ ಕಳಿಸ್ತೀನಿ ಮುಕ್ಳಿಬಾಯಿ ಮುಚ್ಕೊಂಡು ಸೈನ್ ಹಾಕಿ ಕಳಿಸು…” ಎಂದು ಮೊದಲೇ ರಾಜಕೀಯ ವರ್ಚಸ್ಸಿನ ವ್ಯಕ್ತಿಯಾದ ಅವರು ಮಗಳು; ಮೊಮ್ಮಕ್ಕಳೊಂದಿಗೆ ಪ್ರಾಯಶ್ತಿತ್ತಕ್ಕೆಂದು ಲಿಂಗಾನಂದ ಸ್ವಾಮಿಗಳ ಆಶ್ರಮವಿರುವ ಕಲಘಟಗಿ ಕಡೆಗೆ ಹೋದರು.

ಇದೆಲ್ಲ ನಡೆಯುವುದಕ್ಕೂ ಮೊದಲೇ ಅಂದರೆ ಕೊಟ್ರಗಊಡರು ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿರುವಾಗ ಎಷ್ಟು ಹೊತ್ತಾದರೂ ಪ್ರಾಣ ಹೋಗಲಿಲ್ಲವೆಂಬುದಾಗಿ ಕೇಳಿದ್ದೆನೆಯೆ ಹೊರತು ಅಂತಿಮ ಕ್ಷಣದಲ್ಲಿ ಮಸಾಲೆ ಬಯಸಿದ್ದರೆಂಬುದಲ್ಲ… ಕೇವಲ ಮುನ್ನೂರಾ ನಲವತ್ತೆಂಟು ಗಜಗಳಷ್ಟು ದೂರವಿರುವ ಮನೆಯ ವಿದ್ಯಮಾನಗಳು ಭೂತಗನ್ನಡಿ ಹಿಡಿದುಕೊಂಡು ಕೂತಿರುವ ನನಗೆ ಗೊತ್ತಾಗುವುದಕ್ಕಿಂತ ಮೊದಲು ನೂರಾರು ಮೈಲಿ ದೂರದ ನಗರದಲ್ಲಿರುವ ನವ ವಿವಾಹಿತ ತರುಣನಾದ ರಘುರಾಮನೆಂಬ ಮಹಾಶಯನಿಗೆ ಹೇಗೆ ತಿಳಿಯಲು ಸಾಧ್ಯ? ಎಂದು ಮಂಡೆ ತುರಿಸಿಕೊಂಡೆ.

ಅನಸೂಯ ತಂದುಕೊಟ್ಟ ಕಾಫಿ ಕುಡಿಯುತ್ತಿರುವಾಗ್ಗೆ ಅವನೆ ದೋಸೆಯನ್ನು ತನ್ನ ಚಪ್ಪಟೆ ಆತ್ಮಕ್ಕೆ ಹೋಲಿಸಿಕೊಂಡ. ಈ ದೇಶದ ದುಡಿಯುವ ಪ್ರತಿಯೊಬ್ಬರಿಗೆ ಕಡಿಮೆ ಬೆಲೆಯ ರುಚಿರುಚಿಯಾದ ಮಸಾಲೆ ದೋಸೆಯನ್ನು ಸಪಲೈ ಮಾಡುವಂಥ ಘನ ಸರಕಾರ ಎಂದು ಬರುವುದೋ ಎಂದು ನಿಟ್ಟುಸಿರು ಬಿಟ್ಟ. ಅನಸೂಯ ಒಳಗೆ ಹೋದೊಡನೆ ಹತ್ತಿರ ಜರುಗಿ … “ನಿಮ್ಗಿನ್ನು ಗೊತ್ತಿಲ್ಲ… ದಿನಕ್ಕೊಂದು ಮಸಾಲೆ ತಿನ್ನೋರ್ಗೆ ಕಾಯಿಲೆ ಕಸಾಲೆ ಬರೊಲ್ಲ … ಶೀಘ್ರ ಸ್ಖಲನ, ಸ್ವಪ್ನಸ್ಖಲನ ಮೊದಲಾದ ಲೈಂಗಿಕ ದೌರ್ಬಲ್ಯಗಳು ದೂರ ಆಗ್ತವೆ” ಎಂದು ಪಿಸುಗುಟ್ಟಿದ.
ಅದನ್ನು ಕೇಳಿ ನನಗೊಂಥರಾ ಆಯಿತು. ನನಗರಿವಿಲ್ಲದಂತೆ ನಾನು ಉಗುಳು ನುಂಗಿದ್ದನ್ನು ಗ್ರಹಿಸಿದ ಆ ಸೂಕ್ಷ್ಮಮತಿ ” ಅನೂ … ಅನೂ … ಅರ್ಧ ಕೇಜೀದು ದೋಸೆ ಪಾಕೆಟ್ ತಗೊಂದ್ಬಾ” ಎಂದು ಕೂಗಿದ… ಓಣಿಗೆಲ್ಲ ಕೇಳಿಸುವಂತೆ…
ಆಕೆ ತಂದುಕೊಡುತ್ತ, “ಸರಿ ಹೋಯ್ತು ತಗೊಳ್ಳಿ” ಎಂದಳು.
ಅದೊಂದು ಆಕರ್ಷಕವೂ ಬಣ್ಣ ಬಣ್ಣದ ಪಾಕೆಟ್ಟೂ ಅದಾಗಿತ್ತು… :ಎಚ್ಚರಿಕೆಯಿಂದ ಓದ್ಕೊಳ್ಳಿ ದೋಸೆ ತಯಾರಿಕೆಗೆ ಸಂಬಂಧಪಟ್ಟ ಲಿಟರೇಚರ್ ದಕ್ಷಿಣ ಭಾರತದ ಐದು ಭಾಷೆಗಳಲ್ಲಿದೆ …” ಎಂದು ಸೂಚಿಸಿದ.
ಓದುತ್ತಿದ್ದಂತೆ ನನಗೆ ಆಶ್ಚರ್ಯವಾಯಿತು.
ಅನಸೂಯ ಹೊಸ ಸೀರೆ ಉಟ್ಟು ಲಕ್ಷ್ಣಣವಾಗಿ ಗಂಡನ ಪಕ್ಕ ಕೂತುಕೊಂಡು-
“ಹೇಗಿದ್ದಾನ್ರೀ? … ನಿಮ್ಮ ಫ್ರೆಂಡು … ನಮ್ಮೆಜಮಾನರನ್ನು ಪರಿಚಯ ಮಾಡಿಸೋಣಾಂದ್ರೆ ಅವನು ಸಿಕ್ಕೇ ಇಲ್ಲ … ಕದ್ದು ಮುಚ್ಚಿ ಓಡಾಡ್ತಿದ್ದಾನೆ. .. ಬೆಂಗಳೂರಿಗೆ ಬಂದ್ರೆ ಬಂದು ನಮ್ಮನೇಲಿರೊದಕ್ಕೆ ಹೇಳಿ … ನೀವೂ ಅಷ್ಟೆ … ಸುಮ್ನೆ ಲಾಡ್ಗಿಗೆ ಹಣ ಸುರಿಯೋದ್ಯಾಕೆ?” ಎಂದು ಹೇಳಿ ವಿಳಾಸ ಇರೋ ಕಾರ್ಡು. ಫೋನು ನಂಬರು ಕೊಟ್ಟಳು.
ಶಾಮನ ಬಗ್ಗೆ ಏನೂಂತ ಪ್ರತಿಕ್ರಿಯಿಸುವುದು? ಉತ್ತರ ರೂಪದಲ್ಲಿ ನಿಟ್ಟುಸಿರು ಬಿಟ್ಟೆ.
ಹನ್ನೊಂದು ಗಂಟೆಯ ಬಸ್ಸಿಗೆ ಹೊರಡಲಿದ್ದ ಅವರಿಗೆ ಶುಭ ಹಾರೈಸಿ ದೋಸೆ ಪಾಕೆಟ್ಟಿನೊಂದಿಗೆ ಮನೆ ದಾಟಿದೆ.
ರಘುರಾಮ ವೆರ್ರಿ ಇಂಟರೆಸ್ಟಿಂಗ್ ಅಂಡ್ ಜನರಸ್ ಪರ್ಸನ್ ಅನಿಸಿತು. ದೋಸೆಯ ಕಲ್ಪನೆ ಆತನ ಭವಿಷ್ಯವನ್ನು ಹೇಗೆ ರೂಪಿಸುವುದೋ ಕಾದು ನೋಡಬೇಕು! ಒಟ್ಟಿನಲ್ಲಿ ಅನಸೂಯಳಿಗೆ ಒಳ್ಳೇ ಗಂಡ ದೊರಕಿದ್ದಾನೆ… ದೇವರು ಅವರಿಬ್ಬರನ್ನು ಸುಖವಾಗಿಡಬೇಕು…
ಬೃಂದಾವನ ದಾಟುತ್ತಿರುವಾಗ ಎದುರಾದ ಶಾಮ ನನ್ನ ಕಡೆಗೊಮ್ಮೆ; ಕೈಲಿದ್ದ ದೋಸೆ ಪಾಕೆಟ್ಟಿನ ಕಡೆಗೊಮ್ಮೆ ನೋಡಿ ನಿಟ್ಟುಸಿರುಬಿಟ್ಟ. ನಿಷೇದಿತ ಪ್ರದೇಶಕ್ಕೆ ಹೋಗಿ ಬಂದಿರುವೆಯಲ್ಲ ಎಂಬಂತೆ ದುರುಗುಟ್ಟಿನೋಡಿದ. ಮೌನವಾಗಿ ಒಳಗೆ ಕರೆದೊಯ್ದ.
ವ್ಯಾಸಪೀಠದ ಮೇಲಿದ್ದ ಕಂದುವರ್ಣದ ಹೆಬ್ಬೊತ್ತಿಗೆಯಲ್ಲಿ ಕಣ್ಣಿಟ್ಟಿದ್ದ ಶಾಸ್ತ್ರಿಗಳು ಮುಖ ಎತ್ತದೇನೆ ಕೂಡ್ರುವಂತೆ ಸೂಚಿಸಿದರು. ಕೂತುಕೊಂಡೆ. ಅನತಿ ದೂರದಲ್ಲಿದ್ದ ಬಾಗಿಲ ಮರೆಯಲ್ಲಿ ಅಲುಮೇಲಮ್ಮ ನಾರುಮಡಿಯೊಳಗೆ ತಮ್ಮಿಡಿ ದೇಹ ಮರೆಮಾಚಿ ಪಿಳಿಪಿಳಿ ಕಣ್ಣು ಬಿಡುತ್ತ ಕೂತುಕೊಂಡರರು. ಇನ್ನೊಂದು ಮೂಲೆಯಲ್ಲಿ ಶಾಮ ಸದ್ವಿನಯಶಾಲಿಯಂತೆ ನ್ಯಾಯಾಧೀಶನೆದುರು ಆರೋಪಿಯಂತೆ ನಿಂತುಕೊಂಡ. ಅಲ್ಲೆ ಒಂದು ಪಕ್ಕ ಬ್ಯಾಂಕ್ ರಿಕ್ರೂಟ್‌ಮೆಂಟ್ ಕಮಿಟಿಯಿಂದ ಬಂದಿದ್ದ ಕವರು ದೇಹವನ್ನರುಸುವ ದ್ರೋಣಾಚಾರ್ಯರ ಆತ್ಮದಂತೆ ವಿಲವಿಲನೆ ಒದ್ದಾಡುತ್ತಿತ್ತು.

ತೆಂಗಿನಕಾಯಿ ಅಭಿಮಂತ್ರಿಸಿ ಕಟ್ಟಿದ್ದ ಮಾಡಿನಡಿ ಕೂತಿದ್ದ ಬೆಕ್ಕು ಮ್ಯಾಂವ್ (ಮಾತಾಡ್ರಯ್ಯ ಯಾಕೀ ಮೌನ?) ಎಂದಿತು. ಅಲುಮೇಲಮ್ಮ ನಿಮಿಷಕ್ಕೊಂದಾರ್ತಿ ಬಿಡುತ್ತಿದ್ದ ನಿಟ್ಟುಸಿರು ಗೋಡೆಗಳಿಗೆಟೆದು ಮಾರ್ದನಿಸುತ್ತಿತ್ತು. ಶಾಮ ಕ್ರಮೇಣ ಕಂಪನಕ್ಕೀಡಾದುದನ್ನು ಗ್ರಹಿಸಿದೆ. ಇಂಥ ಹಲವು ಚಕ್ಕುಬಂದಿಗಳ ನಡುವೆ ಮ್ಲಾನವದನರಾಗಿದ್ದ ಶಾಸ್ತ್ರಿಗಳ ನೋಡಿದೆ… ಚರ್ಮ ಮಡಚಿಕೊಂಡು ಮೂಳೆಗಟ್ಟಿರುವ ಕೃಶ ಶರೀರದ ಮೇಲೆ ವೃದ್ಧಾಪ್ಯದ ಕೇತುಗಳಂತೆ ಮಿಸುಗುತ್ತಿರುವ ರೋಮಾವಳಿ. ಗ್ರಂಥ ಪುಟವನ್ನು ಖಚಿತವಾಗಿ ತೆರೆಯಲಾಗದ ದುರ್ಬಲ ಬೆರಳುಗಳು… ಕಂಣನ್ನು ಕಿರಿದಾತಿ ಕಿರಿದು ಮಾಡಿಕೊಂಡು ಅಕ್ಷರಗಳನ್ನು ಗುರುತಿಸುವ ರೀತಿಯೇ ಅನನ್ಯವಾಗಿ ಕಂಡಿತು. ಸೊಸೆಗಾಗಿಯೋ; ಮೊಮ್ಮಗನಿಗಾಗಿಯೋ ಮೃತ್ಯುವನ್ನು ನೂಕುತ್ತಿರುವವರಂತೆ ಕಂಡರು.
“ಯಾಕೆ ಶಾಸ್ತ್ರಿಗಳೇ ಬರ್ಹೇಳಿದಿರಂತೆ!: ಮೌನ ಅಸಹನೀಯವಾಗಿ ನಾನೇ ನುಡಿದೆ.
ನೀನು ಹೀಗೆ ಮಾತಾಡಿ ಯಜಮಾನರ ಮೌನ ಕದಡಬಾರದಿತ್ತೆಂಬಂತೆ ಶಾಮ ನನ್ನ ಕಡೆ ವಾರೆಗಣಿಂದ ನೋಡಿದ.
ನೀನು ಮಾಡಿದ್ದು ಸರಿ ಎಂಬಂತೆ ಪರದೆ ಮರೆಯಿಂದ ಅಲುಮೇಲಮ್ಮನವರು ನನ್ನ ಕಡೆ ನೋಡಿದರು.
ಶಾಸ್ತ್ರಿಗಳು ನಿಧಾನವಾಗಿ ಹೊತ್ತಿಗೆಯಿಂದ ಮುಖ ಎತ್ತಿ ನನ್ನ ಕಡೆ ವಶೀಕರಣ ಮಾಡಲಿರುವವರಂತೆ ಒಂಚಣ ನೋಡಿದರು. ನಿಡುಸುಯ್ದರು. ವರ್ತಮಾನದ ಮೂರು ತಿಂಗಳ ಮಗುವಿನಂತಿರುವ ಅವರು ಏನು ನುಡಿವರೋ? ಏನೋ?
“ಯಾವ ಘನಂದಾರಿ ಕೆಲಸ ಕಡಿಯೋಕೆ ಲಾಂಗ್ ಲೀವ್ ಹಾಕ್ತಿದ್ದೀಯಯ್ಯಾ? … ಕೈ ಕಾಲು ಸುಮ್ನೆ ಇಟ್ಕೊಳ್ಳೊ ಹುಡುಗನಲ್ಲ ನೀನು! ಇಷ್ಟೇ ಇಷ್ಟು ತಲೆನೋವಾದೋನು ನೀನು ಇನ್ನು ಊರಿಗೆ ಹೋದಮೇಲೆ ಏನೇನು ಮಾಡ್ತೀಯೋ! ಯಾರಾರ್ನ ಎದುರಾಕ್ಕೊಳ್ತೀಯೋ ಆ ದೇವ್ರಿಗೇ ಗೊತ್ತು!”… ಎಂದು ಬಿಡಿಸಿ ಸಾಹೇಬರು ಪಿತೃ ಸ್ತಾನದಲ್ಲಿ ಕುಂತು ಹಿತವಚನ ನುಡಿದು ರಜೆ ಮುಂಜೂರು ಮಾಡಿದ್ದು ನೆನಪಾಯಿತು.
“ಮಾ ಬಡಿನಿ ಮಾಲಮಾದಿಗೋಳ್ಳು ಉಂಡೇ ಕೇರಿಕಿ ತೀಸ್ಕೋ ಪೋಯಿನವಾಡು ಮಾ ಚೇತಿಕಿ ದೊರಕ್ಕ ಪೋತಾಡಾ… ವಾಡಂತು ಚೂಸ್ಕೊಂಟಾಮು… ರೇಪೋ ಎಲ್ಲುಂಡೊ ವಾಡಿಕಿ ಪೂಜಾಲು ಪುನಸ್ಕಾರಾಲು ಜರಿಪಿಸ್ತಾಮು” ಎಂದು ಊರಿನ ಮುಖಿಯಾ ಜಗನ್ನಾಥ ರೆಡ್ಡಿ ಶಪಥ ಮಾಡಿದ್ದರಿಂದಲ್ಲವೆ ತಾನು ಅವರಿವರ ಮಾತಿಗೆ ಕಟ್ಟು ಬಿದ್ದು ಲಾಂಗ್ ಲೋವ್ ಅಪ್ಲೆ ಮಾಡಿದ್ದು.
ಅಲ್ಲಿಯದು ಒಂದು ನಮೂನಿ ಬದುಕು! ಇಲ್ಲಿಯದು ಇನ್ನೊಂದು ನಮೂನಿ ಬದುಕು. ಸನಾತನತೆಯನ್ನು ಪೊರೆದು ಪೊಷಿಸುತ್ತಿರುವ ಆ ಜಮೀನ್ದಾರರ ಊರುಗಳಲ್ಲಿದ್ದಿದ್ದರೆ ಶಾಸ್ತ್ರಿಗ್ಳು ಇಲ್ಲಿಗಿಂತ ಹೆಚ್ಚು ಸುಖವಾಗಿರುತ್ತಿದ್ದರೆಂದುಕೊಂಡೆ.
ಕಣ್ಸನ್ನೆಗೆ ಮಣಿದು ಶಾಮ ಲಕೋಟೆಯನ್ನು ಅವರ ಕೈಗೆ ಕೊಟ್ಟ.
ಅದರಲ್ಲಿದ್ದುದು ಅವರಿಗೆ ಅರ್ಥವಾದರೆ ತಾನೆ!
ನನಗೆ ಓದಿ ಹೇಳುವಂತೆ ಸೂಚಿಸಿದರು. ಓದಿ ಟೀಕಾತಾತ್ಪರ್ಯ ಸಹಿತ ವಿವರಿಸಿದೆ. ದಿನಾಂಕ ಸಮಯ ಸಮಯ ಎಲ್ಲವನ್ನು ಪಂಚಾಂಗದ ಭಾಷೆಗೆ ಪರಿವತಿಸಿ ಗುಣಿಸಿ ಭಾಗಿಸಿ ಕೂಡಿ ಕಳೆದು ಒಂದು ನಿಟ್ಟುಸಿರು ಬಿಟ್ಟರು.
ಲಕೋಟೆ ಕೈಗೆಟಗಿದ ತೇದಿ ಸಮಯ ಇತ್ಯಾದಿ ಎಲ್ಲವನ್ನೂ ಸಹ ಬೇರೆ. ದಿನಕ್ಕೆ ಹೋದರಾಗದೆ? ಆ ದಿನವೇ ಹೋಗಬೇಕೆ? ಒಂದು ದಿನ ಮೊದಲು ಹೋಗಿ ಬಂದರಾಗದೆ? ಇತ್ಯಾದಿ ಇತ್ಯಾದಿ ಪ್ರಶ್ನೆಗಳು, ಸಂದೇಹಗಳು! ಅವಕ್ಕೆಲ್ಲ ಏನೆಂದು ಉತ್ತರಿಸುವುದು! ಆ ದಿನ ಹಾಜರಿರಬೇಕಾದ ಅಗತ್ಯ ತಿಳಿಸಿದೆ. ಇರಲಿಕ್ಕೊಂದು ಮನೆ ಬಿಟ್ಟರೆ ಬೇರೆ ಇರುವುದಾದರೂ ಏನು? ಚರಾಸ್ತಿ ಎಂದರೆ ಇದೊಂದೆ ಚಿರಾಸ್ತಿ ಎಂದರೆ ಇದೊಂದೆ. ಮದುವೆ ಆಗಲಿರುವ ಹುಡುಗನಿಗೊಂದು ನೌಕರಿ ಇರದಿದ್ದರೆ ಹೇಗಂತ.

ಅದಕ್ಕೂ ಒಂದೆರಡು ದಿವಸ ಮೊದಲು ಹೊಸಪೇಟೆಯ ಹೆಣ್ಣಿನ ಕಡೆಯವರಿಂದಲೂ ಬಂದಿದ್ದ ಪತ್ರದಲಿ ಇದನ್ನೇ ಪ್ರಸ್ತಾಪಿಸಲಾಗಿತ್ತಂತೆ.
ಸರ್ಕಾರಿ ನೌಕರಿ ಸೇರೋದು ನಿನಗಿಷ್ಟ ಇದೆಯಾ ಎಂದು ಶಾಸ್ತ್ರಿಗಳು ಶಾಮನನ್ನು ವಿಚಾರಿಸಿದರು. ಅವನೆ ತಲೆ ಅಲ್ಲಾಡಿಸಿದ್ದು ಕಂಡು ಕೋಪಗೊಂಡರು. ಒಂದಿಷ್ಟು ವೈದಿಕ ಕಲ್ತುಕೊಂಡಿದ್ದ್ರೆ ಗೌರವದಿಂದ ಬದುಕಬಹುದಿತ್ತಾ? ಎಂದು ಶುರು ಮಾಡಿದರು. ಗತಕಾಲವನ್ನು ಕೆದರುತ್ತಲೇ ಹೋದರು. ಕೆದರಿದ ಆಳದಲ್ಲಿ ಶಾಮನನ್ನು ಹೂತು ಹಾಕುತ್ತಿರುವವರಂತೆ ಕಂಡರು. ರಾಹು ವಾಸ ಮಾಡುತ್ತಿರುವ ದಿಕ್ಕಿನಲ್ಲಿರೋ ನಗರಕ್ಕೆ ಹೇಗೆ ತಮ್ಮ ಮೊಮ್ಮಗನನ್ನು ಕಳಿಸುವುದೆಂದೂ; ಅದೂ ಅಲದೆ ನಾಮ ನಕ್ಷತ್ರ ಇರೋ ದಿನ ತ್ರಯೋದಶಿ ಕೂಡ … ಅಪ್ಪಿತಪ್ಪಿ ಹಿರಿಯರೂ; ಜ್ಯೋತಿಷ್ಯಾಸ್ತ್ರವೇ ಮೊದಲಾದ ಗ್ರಂಥಗಳು ಖಡಾಖಂಡಿತವಾಗಿ ಹೇಳಿರುವುದೆಂದು ಅವರು ಮಂಡಿಸಿದ ಹೊಸ ವ್ಯಾಖ್ಯಾನದಿಂದಾಗಿ ನಖಶಿಖಾಂತ ಕಂಪಿಸಿದೆ. ಇನ್ನು ಇವರನ್ನು ಒಪ್ಪಿಸುವುದು ಅಸಾಧ್ಯವೆಂಬ ಭಾವನೆ ಮೂಡಿತು.

“ಶಾಸ್ತ್ರಿಗಳೇ ನೀವು ದೊಡ್ಡವರು … ತಿಳಿದಂಥೋರು … ಇವೆಲ್ಲದರ ಜೊತೆಗೆ ಅವನ ಭವಿಷ್ಯದ ಬಗ್ಗೆ ಯೋಚಿಸೋದೂ ಮುಖ್ಯ … ಮತ್ತೊಂದು ಇಂಟ್ರೂ ಬರ್ತದೆಂದು ನಂಬ್ಲಿಕ್ಕಾಗದು … ನೀವು ಮಾಡಿದ ಪುಣ್ಯದಿಂದ ಹೇಗೋ ಬಂದಿದೆ… ಇದರ ಮೇಲೆ ನಿಮ್ಮಿಷ್ಟ” ಎಂದು ನಾನು ನಿಟ್ಟುಸಿರು ಬಿಟ್ಟೆ.
“ಲೋ ಈ ಸಾರಿ ಏನಾದ್ರು ಪಂಚಾಂಗ ಗಿಂಚಾಂಗಾಂತ ಮಿಸ್ ಮಾಡ್ಕೊಂಡಿ ಅಂದ್ರೆ ನೀನು ಜನ್ಮದಲ್ಲೇ ಉದ್ಧಾರಾಗೋಲ್ಲ” ಎಂದು ನಾನು ಅವನಿಗೆ ಹಿಂದಿನ ದಿನವೇ ಹೇಳಿದ್ದನ್ನು ಕಣ್ಸನ್ನೆ ಮೂಲಕ ನೆನಪಿಸಿಕೊಟ್ಟೆ.
ದೇಹದ ಸಮಸ್ತ ಶಕ್ತಿಯಾನ್ನು ನಾಲಿಗೆಗೆ ತಂದುಕೊಂಡಂತವನಂತೆ ಅವನು –
” ಇಲ್ಲ ತಾತ… ಇದೊಡ್ಸಾರಿ ಒಪ್ಕೊಂಡು ಸಹಕರಿಸಿ … ನಾನು ಇಂಟ್ರೂಗೆ ಹೊಗ್ಲೇಬೇಕು” ಎಂದು ಅವನು ನುಡಿದಿದದ್ದು ನನಗೆ ಆಶ್ಚರ್ಯ ಮತ್ತು ಗಾಬರಿ ಒಟ್ಟೊಟ್ಟೊಗೆ ಆದವು.
ಶಾಸ್ರಿಗಳು ಅಸಹಾಯಕತೆಯಿಂದ ನೋಡಿದರು.
ಪರದೆಯಿಂದೀಚೆ ಬಂದು ಅಲುಮೇಲಮ್ಮ ಮಾವನವ್ರೇ … ಕಾಲ ಬದಲಾಗಿದೆ … ಅದ್ಕೆ ತಕ್ಕಂತೆ ಹೊಂದ್ಕೊಂಡ್ರೇನೆ ಬದುಕು. … ದಯವಿಟ್ಟು ತುಂಬು ಹೃದಯದಿಂದ ಮಗೂಗೆ ಆಶೀರ್ವಾದ ಮಾಡಿ ಕಳಿಸಿ … ನನ್ ಮಗ್ನೂ ನಾಲ್ಕು ಮಂದಿ ಮಕ್ಳಂಗೆ ಸುಖವಾವಿ ಬಾಳಬೇಕು… ದೇವರಿಟ್ಟಂತಾಗ್ತದೆ” ಎಂದದ್ದು ಕೂಡ ಬಹುದೊಡ್ಡ ಪವಾಡವೇ ಎಂದುಕೊಂಡೆ …
“ಆಯ್ತು” ಎಂದವರೆ ಶಾಸ್ತ್ರಿಗಳು ಸೀದ ಒಳಗಡೆ ನಡೆದು ಮಂಚದ ಮೇಲೆ ಒರಗಿಕೊಂಡರು. ಅವ್ರು ಮರುಗುವಾಗ ಕೀರ್ಕು ಕೀರ್ಕು ಎಂಬ ಸದ್ದು ಬಂತು.
ಶಾಸ್ತ್ರಿಗಳು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟಿರುವುದರಿಂದ ಅವರಿಬ್ಬರ ಪೈಕಿ ಯಾರ ಮುಖವೂ ಗೆಲುವಾಗಿರಲಿಲ್ಲ … ಆತಂಕದ ಕ್ಷಣಗಳನ್ನು ಎಣಿಸುತ್ತಿರುವವರಂತೆ ಅವರು ಗೋಚರಿಸಿದರು. ಶಾಮನ ಭುಜದ ಮೇಲೆ ಕೈಯಿಟ್ಟು ಧೈರ್ಯ ಹೇಳಿದೆ.
ಬೃಂದಾವನ ಕಟ್ಟೆ ದಾಟುವಾಗ ಬೇರೊಂದು ಬಾಗಿಲಿಂದ ಬಂದ ಅಲುಮೇಲಮ್ಮ ನನ್ನ ಕೈ ಹಿಡಿದು ಕಂಣಲ್ಲಿ ನೀರು ತಂದುಕೊಂಡರು.
“ನೀನೂ ನನ್ನ ಮಗ ಇದ್ದಂಗೆ ಕಣಪ್ಪ … ಶಿವ ಅಂದುಕೊಂಡಂತಾಗಲಿ … ಸರ್ಕಾರಿ ನೌಕರಿ ಸಿಗದಿದ್ರೆ ಅವನು ಸಂಸಾರ ತೂಗಿಸೋದಾದ್ರು ಹ್ಯಾಗೆ?” ಎಂದು ಕಣ್ಣೊರೊಸಿಕೊಂಡು,
ಇನ್ನೊಬ್ಬ ಮಗ ಇದ್ದಿದ್ರೆ ವೈದಿಕ ಕಲಿಸಬೌದಿತ್ತಪ್ಪಾ … ಆದ್ರೆ ಏನು ಮಾಡೋದು ಹೇಳು!” ಎಂದು ಗದ್ಗದಿತಳಾದಳು.
ಮಂಗಳಾರತಿ ಕೊಟ್ಟರೆ ಉಷ್ಣ; ತೀರ್ಥ ಕೊಟ್ಟರೆ ನೆಗಡಿ ಎಂಬ ಸ್ವಭಾವದ ನಾನು ಒಂದು ಕ್ಷಣ ವಿಚಲಿತನಾದೆ. ಕಂಠ ಕಟ್ಟಿ ಬಂದು
“ನೀವೇನು ಚಿಂತೆ ಮಾಡ್ಬೇಡ್ರಮ್ಮಾ … ದೇವ್ರಿದ್ದಾನೆ” ಎಂದು ಅವರ ಭಾಷೆಯಲ್ಲಿ ಹೇಳಿದೆ.

ಅಷ್ಟು ದೂರದವರೆಗೆ ಶಾಮ ನನ್ನ ಜೊತೆಗೆ ಬಂದ. “ನನ್ನ ಜೊತೆ ನೀನೂ ಬರಬೇಕು” ಎಂದು ನನ್ನನ್ನು ಪೇಚಿನಲ್ಲಿ ಸಿಕ್ಕಿಸಿದ. ಉತ್ತರಿಸಲಾಗದೆ ಉಗುಳು ನುಂಗಿದೆ. ತ್ರಯೋದಶಿ ದಿನವೇ ನಾನು ನನ್ನ ಮೇಲಿನ ಸಂಪೂರ್ಣ ಅಧಿಕಾರದಿಂದ ದೂರವಾಗುತ್ತಿರುವುದು. ರಜೆ ಅಂದಿಗೆ ಮುಗಿಯುತ್ತಿದೆ. “ಆ ರೋಜು ನುವ್ವು ಡ್ಯೂಟಿಕಿ ರಿಪೋರ್ಟ್ ಚೇಸುಕುಂಟೇನೇ ತೆಸರಿ. ಲೇಕಪೋತೆ ಉದ್ಯೋಗಂ ಪೋಗೊಟ್ಟುಕೊಂಟಾವು… ಉಪ್ಪು ತಿನ್ನೋಡು ನೀಳ್ಳು ತ್ರಾಗವಲಸಿಂದೇ” ಎಂದು ಬಿಡಿಓ ಸಾಹೇಬರು ಕಡ್ಡಿ ಮುರಿದಂತೆ ಹೇಳಿದ್ದು ನೆನಪಾಯಿತು. ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡರೆ “ನೀ ಅಂತು ಚೂಸ್ಕುಂಟಾನು” ಎಂದು ಶಪಥ ಮಾಡಿರುವ ಜಗನ್ನಾಥ ರೆಡ್ಡಿ ನೆನಪಾದ. ಯಾವ ಕಡೆಗಂತ ಸಾಯುವುದು? ಇದನ್ನೆಲ್ಲ ಬಿಡಿಸಿ ಹೇಳಿದರೆ ಶಾಮ ಅರ್ಥ ಮಾಡಿಕೊಳ್ಳುವ ಪೈಕಿಯಲ್ಲ. ಒಂದು ನಮೂನಿ ಮನುಷ್ಯ.

“ಶಾಮ ನನಗವತ್ತು ಬರ್ಲಿಕ್ಕಾಗ್ತದೋ ಇಲ್ವೋ?… ಅವತ್ತು ನಾನು ಡ್ಯೂಟಿಗೆ ರಿಪೋರ್ಟ್ ಮಾಡ್ಕೊಳ್ಳದಿದ್ದ್ರೆ ಮತ್ತೆ ಅಂತರ್ ಪಿಶಾಚಿ ತರ ಅಲೆಯಬೇಕಾಗುತ್ತೆ. ಕಟ್ಟಿದ ಬುತ್ತಿಯಂಥವನು ನಾನು. ಜೊತೆಗೆ ಜಲಜಾಕ್ಷಿಯನ್ನು ಕರೆದುಕೊಂಡು ಹೋಗು… ನೀನು ಒಂದು ಕಡೆ ಸೆಟಲ್ ಆಗಬೇಕೂಂತ ಅವಳಿಗೂ ಆಸೆ ಇದೆ…” ಎಂದೆ.
“ಆಕೆ ಬೇಡ” ಒಂದು ನಿಟ್ಟುಸಿರು ಬಿಟ್ಟು ಹೇಳಿದ. “ಸರೆ ಬಿಡು… ನಾನೊಬ್ನೆ ಹೋಗಿ ಬರ್ತೀನಿ… ಏನಾಗ್ಬೇಕೋ ಅದಾಗ್ತದೆ ಅಷ್ಟೆ” ಎಂದು ದುರ್ದಾನ ತೆಗೆದುಕೊಂಡವನಂತೆ ಹೋಗಿಬಿಟ್ಟ.
ಅವನು ಮರೆಯಾಗುವವರೆಗೆ ನಿಂತಿದ್ದು ನಾನು ಮನೆಗೆ ವಾಪಸಾದೆ…

ಸಾವಿರ ಸಾವಿರ ಕಥೆ ಕಾದಂಬರಿಗಳಿಗೆ ಒಮ್ಮೆಗೆ ಜೀವ ಬಂದು ಮಾತಾಡಲಾರಂಭಿಸಿದರೆ ಕೇಳುಗರ ಪರಿಸ್ಥಿತಿ ಹೇಗಾಗಬೇಡ? ನಮ್ಮ ಓಣಿಯ ಜಾಯಮಾನವೇ ಅಂಥಾದ್ದು. ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಎಂಬ ಬೃಹತ್ಕಾದಂಬರಿಯ ಎಲ್ಲ ಪಾತ್ರಗಳನ್ನು ಸಮಗ್ರವಾಗಿ ಪ್ರಕಟಿಸುತ್ತಿರುವ ರೀತಿಯಲ್ಲಿ ನಮ್ಮ ನಿಂಗಮ್ಮಜ್ಜಿಯ ವರ್ಣನೆ, ಓಣಿಯ ಸಚರಾಚರ ಕ್ರಿಯೆಗಳ ಮೇಲೆ ಸದಾ ಹತೋಟಿ ಸಾಧಿಸಿ ವಟಗುಟ್ಟುತ್ತಲೇ ಇರುತ್ತದೆ… ಸಮಾಜದ ಬದುಕನ್ನೇ ನಿರ್ದೇಶಿಸುವ ಅದರ ವರ್ತನೆ ವಿಸ್ಮಯಕರವಾದುದು. ಇವರನ್ನೆಲ್ಲ ಅವರವರ ಪಾಡಿಗೆ ಬಿಟ್ಟುಕೊಟ್ಟು ನೂರಾರು ಮೈಲಿ ದೂರದ ಆ ಊರಿಗೆ ನಾನು ಓಡಿಬಿಡಬೇಕು. ಬದುಕುವುದಾದರೆ ಅಲ್ಲೆ ಬದುಕಬೇಕು. ಸಾಯುವುದಾದರೆ ಅಲ್ಲೆ ಸಾಯಬೇಕು… ಹೋಗಿ ಹೆಚ್ಚಲು ನಾನು ಸವತೆಕಾಯಿಯಲ್ಲ ಎಂಬುದನ್ನು ಹಲಾಲ್‌ಟೋಪಿ ಜಗನ್ನಥ ರೆಡ್ಡಿಗೆ ಮನವರಿಕೆ ಮಾಡಿಕೊಡಬೇಕು. ಕನಸಿನಲ್ಲಿ ಮನಸ್ಸಿನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುವ ಸಿಂಬಳಗೊಣ್ಣಿ ಮಕ್ಕಳನನ್ನು ಸಂತೈಸಬೇಕು… ಇಲ್ಲಿ ಬದುಕುವುದಕ್ಕಿಂತ ಅಲ್ಲಿ ಸಾಯುವುದು ಎಷ್ಟೋ ಮೇಲು ಎಂದುಕೊಂಡೆ.

ಅಲ್ಲಿದ್ದ ಎರಡು ಮೂರು ದಿನಗಳಲ್ಲಿ ಯಾವುದೇ ಕರೆ ಶಾಸ್ತ್ರಿಗಳ ಮನೆಯಿಂದ ಬರಲಿಲ್ಲ. ಶಾಮನೂ ನನ್ನನ್ನು ಕಾಣುವ ಪ್ರಯತ್ನ ಮಾಡಲಿಲ್ಲ… ಬಾಂಬೆ ಟೈಲರಿಮಾಮು “ಕ್ಯಾಜಿ ಮಾಸ್ತರು … ನಿಮ್ ಜಿಗ್ರಿ ದೋಸ್ತು ಶಾಮರಾವ್ ಪ್ಯಾಂಟ್ ಶರ್ಟೂ ಹೊಲಿಯಾಕ ಕೊಟ್ಟಿರುವರೆ’ಂದು ಹೇಳಿದ. “ಯಾರಿಗೂ ಹೇಳಬೇಡ ಸಾಬು” ಎಂದು ಹೇಳಿರುವುದಾಗಿಯೂ ಹೇಳಿದ… ಆ ಉಡುಪಿನಲ್ಲಿ ಅವನನ್ನು ಕಲ್ಪಿಸಿಕೊಂಡು ಸಂತೋಷಪಟ್ಟೆ, ಆಧುನಿಕವಾಗಿ ಸಮಾಜಕ್ಕೆ ಗೋಚರಿಸಲು ಅವನು ಪ್ರತ್ನಿಸುತ್ತಿರುವುದೇ ಸಂತೋಷದ ಸಂಗತಿ. ಬಾಯಾರಿದ ಕುದುರೆ ತಾನೇ ನೀರು ಹುಡುಕಿಕೊಂಡು ಹೋಗಬೇಕೆ ಹೊರತು ನೀರೇ ಬಾಯಾರಿದ ಕುದುರೆಯನ್ನು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ. ಅವನು ತನ್ನ ಬದುಕನ್ನು ತಾನು ರೂಪಿಸಿಕೊಳ್ಳುತ್ತಾನೆ… ಸದ್ಯದ ಪ್ರಪಂಚದಲ್ಲಿ ತನ್ನ ಅಸ್ತಿತ್ವವನ್ನು ತಾನು ಭದ್ರಪಡಿಸಿಕೊಳ್ಳುವುದು ಅವನಿಗೆ ಅನಿವಾರ್ಯ. ನನ್ನಂಥವರು ಹತ್ತಿರವಿದ್ದಷ್ಟೂ ಅವನಿಗೆ ತೊಂದರೆ! “ಅವನ ಬಗ್ಗೆಯಾಕೆ ಅಷ್ತೊಂದು ಹಚ್ಕೊಂತಿ… ಅವನ ಪಾಡಿಗೆ ಅವನನ್ನು ಬಿಟ್‌ಬಿಡು… ಜುಟ್ಟು ಮರೆಮಾಚಲಿಕ್ಕೆ ಕ್ರಾಪು ಬಿಡು ಅಂತ ನಾವ್ಯಾರಾದ್ರು ಅವನಿಗೆ ಹೇಳಿದ್ವಾ? ಇಂಥ ಇಬ್ಬಂದಿ ಮನುಷ್ಯರು ಹೆತ್ತವರ ಬೆನ್ನಿಗೆ ಭಾರಾಗ್ತಾ ಹೋಗ್ತಾರಯ್ಯಾ… ಒಂದು ಸಾರಿ ಅನುಕಂಪದ ರುಚಿ ನೋಡ್ದೋರು ಮತ್ತೆ ಮತ್ತೆ ಅದನ್ನೇ ನಿರೀಕ್ಷಿಸ್ತಾ ಇರ್ತಾರೆ… ಅನುಕಂಪ ಸೂಚಿಸೋದೇ ಕ್ಷಮಿಸಲಾರದ ಅಪರಾದ” ಎಂದು ಕಮಲಾಕರನೂ ನಿಷ್ಠುರವಾಗಿ ಹೇಳಿದ… “ಇಂಥವರು ತಾವಿರೋ ವ್ಯವಸ್ಥೇನ ಸ್ಪಿಲ್ಟ್ ಮಾಡ್ತಾನೇ ಇರ್ತಾರೆ… ಇಂಥೋರಿಂದಲೇ ಲೆಫ್ಟ್ ಮೂವ್‌ಮೆಂಟ್ಸು ಯಾರ್ಗೂ ಅರ್ಥ ಆಗದಂಗಾಗಿರೋದು… ಈ ಸಮಾಜಕ್ಕೆ ಅಗತ್ಯ ಇರೋದು ಇಂಥ ಮೃದ್ವಂಗಿಗಳೇ ಹೊರತು ನನ್ನಂಥೋರು ನಿನ್ನಂಥೊರಲ್ಲ … ನೋಡ್ತಿರು, ಮುಂದೆ ನಮ್ಮೆಲ್ಲರಿಗಿಂತ ಶಾಮ ಸಮಾಜದ ಎಲ್ಲ ವರ್ಣಗಳ ಜನರಿಗೆ ಬೇಕಾದೋನಾಗಿ ಸುಖವಾಗಿರ್ತಾನೆ… ಅಂದರಿಕೆ ಮಂಚೋಡು ಅಂತ ಅನ್ನಿಸ್ಕೋತಾನೆ… ಇದ್ನೆಲ್ಲ ಬಿಟ್ಟುಕೊಟ್ಟು ನೀನು ನಿನ್ನ ಕೆಲಸ ಮಾಡ್ತಿರೋ ಊರಿಗೆ ಬದುಕಾದ್ರೂ ಬದುಕು. ಇಲ್ಲಂದ್ರೆ ಕೊಲೆ ಆದ್ರು ಆಗು…ನನ್ ಪತ್ರಿಕೆಗೆ ಒಂದೊಳ್ಳೆ ನ್ಯೂಸಾದ್ರು ಸಿಗ್ತದೆ… ಸಾಯ್ಲಿಕ್ಕಿಷ್ಟ ಇರದಿದ್ದ್ರೆ … ಇಲ್ಲದ ರಿಸ್ಕ್ ತಗೊಂಡು ಬದುಕಲಿಕ್ಕೆ ಇಷ್ಟ ಇರದಿದ್ರೆ ರಾಜಿನಾಮೆ ಬಿಸಾಕಿ ಬಂದುಬಿಡು… ನನ್ ಪತ್ರಿಕೇಲಿ ವಾರಕ್ಕೊಂದಿಷ್ಟು ಬರೆವಂತೆ. ಹೆಚ್ಚಿನರದಿದ್ರೂ … ನೀನು ಸಾಯದ ಹಾಗೆ ನೋಡ್ಕೋತೀನಿ… ಹ್ಹ…ಹ್ಹ… ಹ್ಹ…” ಎಂದು ನಗಾಡಿದ…ಕಮಲಾಕರ ಶಾಮನ ಉತ್ತರಾರ್ಧದ ಬದುಕಿಗೆ ಪೂರ್ವ ಪೀಠಿಕೆ ಬರೆಯುತ್ತಿದ್ದಾನೆಂದುಕೊಂಡೆ… ಆದರೆ ಶಾಮನನ್ನು ಆತ ಮೃದ್ವಂಗಿ ಹೋಲಿಸಿದ್ದು ನನಗೆ ಅಷ್ಟು ಸರಿ ಕಾಣಲಿಲ್ಲ… ಇನ್ನೊಬ್ಬರು ಅವನಲ್ಲಿ ಸುಲಭವಾಗಿ ಅವಿತುಕೊಳ್ಳಬಹುದಿತ್ತು… ಆದರೆ ಅದು ಸುರಕ್ಷಿತ ತಾಣವಲ್ಲವೆಂಬುದು ಸುಸ್ಪಷ್ಟ.

ಅದೇ ಹೊತ್ತಿಗೆ ಹೇಳಿಕಳಿಸಿದಂತೆ ಜಲಜಾಕ್ಷಿ ಬಂದಳು. ಮಹಿಳಾ ಮತ್ತು ಮಕ್ಕಳ ಸಂಕ್ಷೇಮಾಭಿವೃದ್ಧಿಯ ಜಿಲ್ಲಾ ಮೆಂಬರಾಗಿ ಕಳೆದ ವಾರವಹ್ಟೆ ನೇಮಕಗೊಂದಿದ್ದ ಆಕೆ ಹೆಚ್ಚು ಲವಲವಿಕೆಯಿಂದಿದ್ದಳು. ಅಭಿನಂದಿಸಿದ್ದೂ ಆಯಿತು. ಸ್ವೀಕರಿಸಿದ್ದೂ ಆಯಿತು. ಊರಿಗೆ ಹೊರಟಿದ್ದೀಯಂತೆ ಅಂದಳು. ಹ್ಹೂಂ ಅಂದೆ. ಮತ್ತೆ ಎಂದು ಬರ್ತೀಯಾ? ಎಂದಳು. ಬದುಕಿದ್ರೆ ದಸರೆ ರಜೆಗೆ ಎಂದೆ. “ಯಾಕೆ ಡೌಟಾ” ಅಂದಳು. “ಹ್ಹೂಂ” ಅಂದೆ. “ಯಾಕಪ್ಪಾ” ಅಂದಳು… ಅದೆಲ್ಲ ಒಂದೆರಡು ಮಾತ್ನಲ್ಲಿ ಹೇಳಕ್ಕಾಗೊಲ್ಲ ಮಾರಾಯ್ತಿ” ಅಂದೆ. “ಅಷ್ಟು ಡೇಂಜರಸ್ಸಾ ನೀನಿರೋ ವಿಲೇಜು” ಅಂದಳು…. “ಇಡ್ನಾಪ್ ಮಾಡೋರ ಥರಾ ಆಡ್ಡಾಡ್ತಿರೋ ಮಂದಿಯಿಂದ್ಲೇ ತುಂಬಿರೋ ಟಿಪಿಕಲ್ ವಿಲೇಜು ಕಣಮ್ಮಾ” ಅಂದೆ. “ನಿಮ್ಮಂಥ್ರು ಎಲ್ಲೂ ಉದ್ಧಾರಾಗೊಲ್ಲ… ರಿಜೈನ್ ಮಾಡ್ಬಿಟ್ಟು ಲೋಕಲ್ ಪಾಲಿಟಿಕ್ಸ್ ಸೇರ್ಕೋ” ಅಂದಳು… ನಾನು ನಕ್ಕೆ. ‘ಅದಿರ್ಲಿ … ನನ್ನ ಜೊತೇಲಿ ಕರ್ಕೊಂಡು ಹೋಗೂಂತ ಆ ಪುಕ್ಕಲಿಗೆ ನೀನೆ ಹೇಳಿದೆಯಂತೆ ಹೌದಾ’ ಎಂದು ಕೇಳಿದಳು. ‘ಹೌದು ಇದ್ನ ನಿನಗ್ಯಾರು ಹೇಳಿದ್ರು?’ ಅಂದೆ.

‘ಅವ್ನೆ ಊರ್ತುಂಬ ಹೇಳ್ಕೊಂಡು ಅಡ್ಡಾಡ್ತಿದಾನೆ’ ಎಂದಳು. “ಕರೆದ್ರೆ ಹೋಗಿಬಾ ಜಲಜಾಕ್ಷಿ…” ಎಂದೆ. ಮೈಚಳಿ ಬಿಟ್ಟು ಕರೀಲಿ ಹೋಗಿ ಬರ್ತೀನಿ… ಹೇಗೋ ನನ್ಗೂ ಕೆಲಸ ಇದೆ ಅಲ್ಲಿ’ ಎಂದಳು. ಅವನು ಅಷ್ಟು ಸುಲಭವಾಗಿ ಕರೆಯುವ ಪೈಕಿ ಅಲ್ಲ ಅಂದುಕೊಂಡೆ. ಕರೆಯುವಂತೆ ಪ್ರೇರೇಪಿಸುವ, ಅಂಥ ಮಾನಸಿಕ ಸ್ಥಿತಿಯನ್ನು ನಿರ್ಮಾಣ ಮಾಡುವುದು ಕೂಡ ಅಷ್ಟು ಸುಲಭ ಸಾಧ್ಯವಿಲ್ಲವೆಂದುಕೊಂಡೆ.

ಪತ್ರಿಕಾ ಕಛೇರಿಯಿಂದ ಹೊರಗಡೆ ಬಂದಾಗ ಶಿವಪೂಜೆ ಸುರೇಶ್ಗೌಡ ಸಿಕ್ಕು “ಎಷ್ಟು ಜನರನ್ನ ಹಾಳುಮಾಡ್ಬೇಕೂಂತ ಮಾದ್ಯಾನ್ರಿ ಆ ನಿಮ್ಮ ಫ್ರೆಂಡು… ನಾನು ಬೇಯ್ಸಿದ ಗೆಣಸು ತಿಂಥಾ ಇದ್ದುದ್ನೇ ಫೋಟೊ ತೆಗೆಸಿ ಬೀಫ್ ತಿಂತಿದ್ದೇಂತ ಅಪಪ್ರಚಾರ ಮಾಡಿದ ಅವನ್ನ ನಾನು ಸುಮ್ನೆ ಬಿಟ್ಟೇನಾ… ನೋಡ್ತಿರಿ ಏನು ಮಾಡ್ತೀನಂತ…” ಎಂದು ಹಲ್ಲು ಕಡಿದ. ಮಿಲಿಟರಿ ಹೋಟಲಲ್ಲಿ ಬೇಯಿಸಿದ ಗೆಣಸೂ ಮಾರಾಟಮಾಡುವರೆಂಬ ಅಪರೂಪದ ಸಂಗತಿ ತಿಳಿಸಿದ ಆ ಮಹಾಶಯನಿಗೆ ಮನದಲ್ಲಿ ಧನ್ಯವಾದಗಳನ್ನು ಅರ್ಪಿಸಿ ಹೇಳಿದೆ. “ಹಾಗೇನಾದ್ರೂ ಅವನ ತಂಟೆಗೆ ಹೋದೀರಾ ಗೌಡ್ರೆ… ಅವನು ಮೊದಲೇ ಮಾಜಿ ನಕ್ಸಲೈಟು… ಇಂಥದ್ನೆಲ್ಲ ಕೇರ್ ಮಾಡೊ ಮನುಷ್ಯನಲ್ಲ… ಪ್ರಾಯಶ್ಚಿತ್ತ ಮಾಡಿಸಿಕೊಂಡು ಹೆಂಡ್ತೀನ ಕರ್ಕೊಂಡು ಬಂದು ಸುಖವಾಗಿರ್ರಿ” ಎಂದೆ. ಮತ್ತೆ ಕಿಡಿಕಿಡಿ ಆದ… “ಅದೊಂದು ಮಾತ್ನ ಮಾತ್ರ ಹೇಳ್ಬೇಡ್ರಿ … ಮೇಸ್ಟ್ರೇ… ಉಗುಳಿದ ತಂಬೂಲಾನ ಮತ್ತೆ ಬಾಯಲ್ಲಿಟ್ಕೊಂಡು ನಮ್ಮ ಸಿವ ಪೂಜೆ ಮನತನಕ್ಕೆ ಅವಮಾನ ಮಾಡೋನಲ್ಲ ಈ ಸುರೇಶಗೌಡ…” ಎಂದು ಮೀಸೆ ತಿರುವಿದ… “ಇಂಥೋರ ಸಾವಾಸ ನಿಮ್ಮಂಥೋರಿಗೆ ಸರಿ ಅಲ್ಲ…

ದೂರ ಇದ್ದು ಬಿಡಿ… ಈ ಕಮಲಾಕರ ನಿಮ್ಮ ಮೇಲೂ ಏನಾದ್ರೂ ಬರೀಬೌದು…” ಎಂದು ಬುದ್ಧಿ ಹೇಳಿ ಗರಂ ಮಸಾಲೆ ದಿನಸಿಗೆ ಹೆಸರಾದ ನಾಅಣೆಕೇರಿ ಶೆಟ್ರು ಅಂಗಡಿ ಕಡೆ ಹೋದ…

ನಾನು ಹೊರಡುವ ದಿನ ಹತ್ತಿರವಾದಂತೆ ನನ್ನ ನೌಕರಿಯ ಸ್ಥಳವಾದ ವಾಗಿಲಿ ಗ್ರಾಮದ ಸಾವಿರಾರು ಮುಖಗಳು ಕನಸಿನಲ್ಲಿ ಪ್ರಕಟವಾಗತೊಡಗಿದವು. ಕಾಲು ಹಾದಿಯಲ್ಲಿ ಕೆಸರಲ್ಲಿ ಬಲಗಾಲ ಬಾಟಾ ಕಳೆದುಹೋದಂತೆ, ರಿಜರು ಜಾಲಿ ಮರೆಯಿಂದ ಐದಾರು ಮಂದಿ ಒಮ್ಮೆಗೆ ಮುಗಿಬಿದ್ದಂತೆ, ಸಣಕಲು ನಾಯಿ ಅಟ್ಟಿಸಿಕೊಂಡು ಬಂದಂತೆ…ಜಗನ್ನಾಥ ರೆಡ್ಡಿಯ ಗುಳಾಪು ಕಂಣುಗಳ ಝಳಪಿಗೆ ಹಾದಿ ಮಂಕಾಗಿ ತಡವರಿಸಿದಂತೆ… ಬುರ್ರ ಕಥೆಯ ಬಾಬಯ್ಯ ಮತ್ತು ಸಂಗಡಿಗರುಬಿದ್ದು ಬಿದ್ದು ನಗುತ್ತಿರುವಂತೆ. ನಾನೇ ನನ್ನ ಚದುರಿಹೋದ ಅಂಗಾಂಗಗಳನ್ನು ಜೋಡಿಸಿ ಒಪ್ಪ ಓರಣ ಮಾಡುತ್ತಿರುವಂತೆ… ಸಮುದ್ರದ ಪೆಟ್ರೋಲಿಯಂ ರಾಡಿಯೊಳಗೆ ಹಾರಲಾಗದೆ ಒದ್ದಾಡುತ್ತಿರುವ ಭಾರಿ ರೆಕ್ಕೆಯ ಹಕ್ಕಿಯಂತೆ…

ಅತ್ತ ಹೊರಗಡೆ ಚುಮು ಚುಮು ನಸುಕಿನಲ್ಲಿ ಹನುಮಕ್ಕ ಹುಂಜವನ್ನು ಅಷ್ಟು ದೂರ ಅಟ್ಟಿಸಿಕೊಂಡು ಹೋಗಿ ಬಂದ ದಣಿಕೆಯಲ್ಲಿ ತನ್ನ ಮೊಮ್ಮಗನಾದ ಇನ್ನು ಗೃಹಸ್ತಾಶ್ರಮದ ಬಗ್ಗೆ ಅದೇ ತಾನೆ ಕಕ್ಕಸ್ಸು ಮುಗಿಸಿಕೊಂಡು ಬಂದಿದ್ದ ಶಂಬಯ್ಯನವರ ಬಳಿ ಉದ್ದೋಕೆ ಅಡ್ಡ ಬಿದ್ದು ಪ್ರವರಾಲಾಪನೆ ಶುರು ಮಾಡಿತ್ತು. “ಅದ್ನ ತೋರ್ಸಿದ್ರೆ ಅದನ್ನೊಪ್ಪಕೊಳ್ಳವಲ್ಲ…ಇದ್ನ ತೋರ್ಸಿದ್ರೆ ಇದನ್ನೊಪ್ಪಕೊಳ್ಳವಲ್ಲ… ಇವ್ನೀಗೆ ಹೆಂಡ್ತಿ ಆಗೋಳು ಈ ದೇಸದಾಗ ಯಾವ ಮೂಲ್ಯಾಗದಾಳಾ ಸೋಮಿ… ಸಣ್ಣೀಯ ಗಂಡನ ಬಿಟ್ಟ ಮಗ್ಳು ಗಂಟು ಬಿದ್ದಾಳಂತ… ದಿನಾಲು ಸವತ್ತಿಗೆ ಬಂದು ಮಕ್ಕಂಡು ಸಿಂಬಳದಾಗ ಬಿದ್ದ ನೊಣ ಒದ್ದಾಡದಂಗ ಒದ್ದಾಡ್ತಾನೆ ಸೋಮಿ… ಸರ್ಯಾಗಿ ಉಂಬುವಲ್ಲ… ಸರ್ಯಾಗಿ ನಿದ್ದೆ ಮಾಡುವಲ್ಲ… ಇವಂದೊಂದೂ ಅರ್ಥವಾಗವಲ್ದು. ರವ್ವೋಟು ಗ್ರಹಗತಿ ಇಚಾರಿಸಿ…ಹೊತ್ತುಟ್ಟುತ್ಲೇ ಜಾತಕ ಕುಂಡ್ಲಿ ತಗಂಬಂದು ತೋರಿಸ್ತೀನಿ…” ಎಂದೆಂದೇ ಸಮನೆ ನಾಲಗೆ ಬಡಕೊಳ್ಳತೊಡಗಿತ್ತು. ಅದಕ್ಕೆ ಪ್ರತಿಯಾಗಿ ಶಂಬಯ್ಯನವರು ನಿಟ್ಟುಸಿರುಬಿಟ್ಟು… “ನೀನೂ ನಾನೂ ಮಾಡೊದಿದರಾಗೇನೈತೆ ನಿಂಗವ್ವಾ… ಒಂದು ದೇವರ ನಂಬವೊಲ್ಲ… ಒಂದು ದಿಂಡರು ನಂಬುವಲ್ಲ… ಗುರಿ ಹಿರೇರ ಮೇಲೆ ಭಕುತಿ ಎಂಬುದು ಮೊದಲೇ ಇಲ್ಲ… ಇಂಥೊರ್ಗೆ ಹೇಳೇದು ಕೇಳೋದು ಉಂಟೇನು… ನಾಳೆ ಅಮ್ಮಾಸ್ಯೆ ಒಳ್ಗೆ ಬೆಳ್ಳಿ ಆಕಳ ಮಾಡಿಸಿ ನಮ್ಗೆ ದಾನ ಕೊಡು ಎಲ್ಲ ಸರಿಹೋಗತೈತಿ… ನೀನು ಎಮ್ಮೆ ಕರ ತೋರಿಸಿದ್ರು ಕಣ್ಮುಚ್ಚಿ ತಾಳಿ ಕಟ್ತಾನೆ ಹೇಳಿಲ್ಲಾಂದಿ ಕೇಳಿಲ್ಲಾಂದಿ ಮತ್ತೆ.. ಹ್ಹಾಂ!” ಎಂದಂದರು. ಅದಕ್ಕೆ ಮುದುಕಿ ಸಂತೋಷದಿಂದ ಉಬ್ಬಿ ಹೋಗಿ “ಹಂಗೆ ಮಾಡು ಶಿವಾ… ಅವನಂಗ ತಾಳಿ ಕಟ್ಟಿದಾಂದ್ರೆ ಬೆಳ್ಳೀದು ಯಾಕೆ ಬಂಗಾರದ್ದು ಮಾಡಿಸಿಕೊಟ್ಟೇನು!… ಹೆಂಗಾರ ಮಾಡಿ ನಮ್ಮ ಗಾಳೆಪ್ಪನ ಮಗ್ಳು ಚಂಬಸ್ವೀನ ಮದ್ವೆ ಆಗೋಂಗ ಮಾಡಿಬಿಡ್ರಿ… ಅದು ಕೈಯಿಗೆ ಬಂದು ಬರೋಬ್ಬರಿ ಎಳ್ಡು ತುಂಬಿ ಮೂರು ತಿಂಗಳಾಗ ಬಿದ್ದೈತಿ… ಎಲ್ಡು ಮೂರು ಸಾವ್ರ ಖರ್ಚು ಮಾಡಿ ಮನಿ ಮುಂದ ಕನ್ಯಾದಾನ ಮಾಡಿಕೊಡ್ತೀನಂತ ಒಂದೇ ಸಮ್ನೆ ಗಂಟು ಬಿದ್ದೈತಿ ನಮ್ ಗಾಳೆಪ್ಪ…” ಎಂದು ರಾಗ್ ಎಳೆಯಿತು. ಅದಕ್ಕಿದ್ದು ಶಂಭಯ್ಯನವರು “ಯಾರು ಬೇಡಂತಾರ ನಿಂಗವ್ವಾ… ಇನ್ನು ಒಳ್ಳೆದಾತಲ್ಲ… ಏನು ಬಿಟ್ರು ಕಳ್ಳುಬಳ್ಳಿ ಬಿಡಬಾರ್ದು ನೋಡು… ಅವನ್ಗೆ ಜಳಕಾಪಳಕಾ ಮಾಡ್ಸಿ ನಮ್ಮತ್ರ ಕರ್ಕೊಂಡ್ಬಾ…ನವಗ್ರಹದ ಅಂತ್ರ ಮಂತ್ರಿಸಿ ಕಟ್ಟಿ ನಾಕು ಬುದ್ಧಿ ಮಾತು ಹೇಳ್ತೀನಿ…” ಎಂದು ಅಪ್ಪಣೆ ಮಾಡಿ ಮತ್ತೆ ಕಕ್ಕಸ್ಸು ಜೋರಾಗಿ ಬರಲು ವಿಸರ್ಜನೆಗೆಂದು ಮತ್ತೆ ಬಸವನ ಬಾವಿ ತಗ್ಗಿನ ಕಡೆ ಓಡಿದರು. ನಮ್ಮ ಓಣಿಯ ಗಡಿಯಾರವೆಂದೇ ಹೆಸರಾಗಿರುವಾಸಿಯಾಗಿರುವ ಅವರು ಒಂದೊಂದು ವರ್ತನೆ ದಿನದ ನಿರ್ದಿಷ್ಟ ಸಮಯವನ್ನು ಟಾಂ ಟಾಂ ಹಾಕುವುದು. ನಸುಕಿನಲ್ಲಿ ಜಿರಕೂ ಪುರಕೂ ಸದ್ದು ಮಾಡುತ್ತ ತಂಬಿಗೆಯೊಡನೆ ಹೋಗುವುದು ಬೆಳ್ಳಿ ಚುಕ್ಕಿ ಉದಿಸಿದ ಸೂಚನೆಯನ್ನು ನೀಡಿದರೆ ರಾತ್ರಿ ಲಿಂಗಮುದ್ರೆ ಕಲ್ಲಿಗೆ ಎರಉ ಕೈಗಳನ್ನೂರಿ ಬಲವಾಗಿ ತಿಣುಕಿ ಡರ್ರೋಽಽ ಎಂದು ಜಘನಗಳಿಂದ ಭುಂಗಾ ಊದಿದರೆ ಹತ್ತು ಗಂಟೆ ದಾಟಿದೆ ಎಂದೇ ಅರ್ಥ. ಹೀಗೆ ಒಂದೊಂದು ಸಮಯಕ್ಕೆ ಒಂದೊಂದು ಸವಂಡು ಮಾಡುತ್ತ ಓಣಿಯ ದಿನಚರಿಯನ್ನು ನಿರ್ದೇಶಿಸುವ ಅವರೆಂದರೆ ನಮ್ಮ ನಿಂಗಮ್ಮಜ್ಜಿಯೇ ಮೊದಲಾಗಿ ಎಲ್ಲರಿಗೂ ವಿಶೇಷ ಗೌರವ. ಆದರೆ ನಾನು ಮಾತ್ರ ಮಂಡೆ ಸೋರೆ ಕಾಯಿಗೆ ಬುದ್ಧಿ ಬಂದಂದಿನಿಂದ ನನ್ನ ಪವಿತ್ರ ಮಸ್ತಿಷ್ಟವನ್ನುಅಂಟಿಸಿದವನಲ್ಲ… ಊರಿಗೆ ಬಂದವನು ನೀರಿಗೆ ಬಾರದಂಗಿರ್ತೀಯಾ ಎಂದು ಅವರೂ ಕಾಯುತ್ತಿರುವರು… ಅದಕ್ಕೆ ನಮ್ಮಜ್ಜಿಯ ಸಪೋರ್ಟು ಬೇರೆ…

ಇವರ ಡೈಲಾಗುಗಳಿಂದಾಗಿ ಕನಸುಗಳೆಲ್ಲ ಚದುರಿ ಹೋಗಿ ಎಷ್ಟೋ ನಿರುಮ್ಮಳವಾದೆ… ಇಲ್ಲಿ ಬದುಕುವುದಕ್ಕಿಂತಾ ಅಲ್ಲಿ ಕೊಲೆಯಾಗುವುದನ್ನೇ ಚಲೋ ಎಂದು ಮತ್ತೆ ಅಂದುಕೊಂಡೆ… ತನ್ನಾಯುಷ್ಯದ ಕಾಲು ಭಾಗವಿರುವ ನನ್ನ ಸಂಸ್ಕಾರ ಕೈಯಾರ ನೆರವೇರಿಸಿದ ನಂತರವೇ ಮುದುಕಿ ತನ್ನ ನಾಲಿಗೆಯನ್ನು ಲಾಕರಿನಲ್ಲಿ ಭದ್ರಪಡಿಸುವುದು. ಸತಿ ಹೋಗುವ ಮಹಿಳೆ ಚಿತೆ ಏರುವ ಪೂರ್ವದಲ್ಲಿ ವರ್ತಿಸುತ್ತಾಳಲ್ಲ ಹಾಗೆ ನಾನು ನನ್ನ ಕಿವಿತಳ ತಮಟೆಗೆ ಅಟೆಯುತ್ತಿದ್ದ ಯಾವ ಶಬ್ದಕ್ಕೂ ಪ್ರತಿಕ್ರಿಯಿಸುವ ಗೋಜಿಗೆ ಹೋಗದೆ ಮಠದಲ್ಲಿ ಎರಡನೆ ಪೂಜೆ ಮುಗಿವ ವೇಳೆಗೆ ನನ್ನ ಯಾವತ್ತೂ ಕಾರ್ಯಕ್ರಮಗಳನ್ನು ಪೂರೈಸಿದೆ… ಮುವ್ವರು ಮನೆಯ ಒಂದೊಂದು ಮೂಲೆ ಹಿಡಿದು ಬಿಸಿಯುಸಿರು ಬಿಡತೊಡಗಿದ್ದರು.

“ಲೋ ಸೋಮೇರ್ಗೆ ಅಡ್ಡಬಿದ್ದು ಹೋಗೋ… ಹೋಗೋದು ಹೋಗ್ತಿ” ಎಂದು ನಿಂಗಮ್ಮಜ್ಜಿ ಪರಪರ ತಲೆ ತುರಿಸಿಕಂತು.
“ಸುಮ್ನಾಗಿರಾಕ್ನು ಗಂಟ್ತಗಂತೀಯಬೇ ನಮ್ಮವ್ವಾ, ಆ ಹುಡುಗನ ಜೀವ ಯಾಕ ತಿಂತೀ?” ಎಂತು ಅದರ ತಂಗಿ…
“ಹೋಗಿ ಹೋಗಿ ಆ ಘನವಾದಾಕೀನ್ಯಾಕ ತಡವ್ತೀಯೇ…ಆಕೆಂಗಾರ ಮಾತಾಡ್ಕಳ್ಳಿ… ನೀನೊಂದೆ ಬಾಯಿ ಬಡ್ಕಂಡಿರು” ಅಂತಂದಳು ನಮ್ಮ ದೊಡ್ಡವ್ವ…
ಕೆರೆದು ಕೇರು ಬಡಿಸಿಕೊಂಡಂತಾಗಿ ನಿಂಗಮ್ಮಜ್ಜಿ ದಿಗ್ಗನೆದ್ದು ಬದ್ಧಭ್ರುಕುಟಿಯಾಗಿ ನನ್ನ ಮೇಗಣ ಸಿಟ್ಟನ್ನೆಲ್ಲ ಕ್ರೋಡೀಕರಿಸಿ ” ನನ್ನೇ ಘನುವಾದಾಕಿ ಅಂತಿ ಏನಬೇ” ಎಂದು ಖಾಸಾ ತಂಗಿಯ ಮೇಲೆ ಏರಲು ಹೋಗಲು ಧರ್ಮರಕ್ಷಣೆಗಾಗಿ ಕುರುಕ್ಷೇತ್ರ ಆರಂಭವಾಯಿತೆಂದೂಹಿಸಿ ನಾನು ಬ್ಯಾಗೆಂಬ ಬೇತಾಳವನ್ನು ಹೆಗಲಿಗೆ ನೇತು ಹಾಕಿಕೊಂದು ಸಿಂಹದ ಗವಿಯೊಳಗಿಂದ ಹರಿಣ ಓಡುವಂತೆ ಮನೆಯಿಂದ ಹೊರಬಿದ್ದೆ. ಕಣಗಿಲೆ ಮತ್ತು ದಾಸವಾಳ ಗಿಡಗಳ ನಡುವೆ ಶತಪಥ ಹಾಕುತ್ತಿದ್ದ ಶಂಬಯ್ಯರನ್ನು ಹಾದು ಶರಣ ಗುರುಬಸವ ಮಗುವಾಗಿ ಆಡಿ ಬಂಜೆಯೋರ್ವಳ ತಾಯ್ತನ ಪೊರೆದನೆನ್ನಲಾದ ತೊಟ್ಟಿಲು ಮಠದ ಮುಂದಿನಿಂದ ಕರಗಲ್ಲು ದಾಟಿ ತೇರು ಬೀದಿಯಲ್ಲಿ ತೇಲಿದಾಗ ಊರಿಗೆ ತಲೆನೋವಾಗಿರುವ ಕೆರೆಕಟ್ಟೆ ಪಕ್ಕೀರ ರಂಗಾರಿಯರ ಹುಡುಗಿಯನ್ನು ಚುಡಾಯಿಸಿ ಬೀದಿಜಗಳಕ್ಕಿಳಿದಿರುವ ದೃಶ್ಯ ಎದುರಾಯಿತು. ಬಾಯಿ ಸತ್ತ ಪಾಂಡುರಂಗ “ಇಂಥೋರೆ ಊರಲ್ಲಿದ್ರೆ ನಮ್ಮಂಥೋರು ಬಾಳುವೆ ಮಾಡುವುದಾದ್ರು ಹೆಂಗ್ರೀ… ನೀವಾರ ಆ ಲುಚ್ಛಾಗೆ ಬುದ್ಧಿ ಹೇಳ್ರಿ ಎಂದು ಕಲೆ ಬಿದ್ದ…” ನನ್ನನ್ನು ಊರಿಗೆ ಹೋಗದ ಹಾಗೆ ತಡೆದು ನಿರ್ನಾಮ ಮಾಡುವ ಸಂಚೊಂದು ನಡೆಯುತ್ತಿರುವುದೆಂದು ಭಾವಿಸಿ “ನಿಮ್ಗೆ ನೀವು ಮೆಡುವ ಚಡಾವು ಎಲ್ಲಿವರ್ಗೂ ಅರ್ಥ ಆಗಲ್ವೋ ಅಲ್ಲಿವರ್ಗೆ ನೀವು ಎದೆ ಸೆಟ್‌ಎಸಿ ಬದುಕಲಾರಿರಿ” ಎಂದು ನಾನಾದರೂ ಯಾಕೆ ಹೇಳಬೇಕು? ಎಂದು ಅವನನ್ನು ತಳ್ಳಿಕೊಂಡು ದಲಿತ ಮಹಿಳೆ ಶರಣೆಗೆ ತುಪ್ಪದಾರತಿ ಬೆಳಗುವ ಬಯಲಿಗೆ ಬಂದಾಗ ರೈತರ ದಾಂಧಲೆಯಲ್ಲಿ ನಡೆದ ಗೋಲಿ ಬಾರಿನಲ್ಲಿ ಎಡಗಾಲನ್ನು ಕಳೆದುಕೊಂದಿರುವ ಸ್ವಾತಿ ಸ್ಟೋರಿನ ಚಂಬಸಪ್ಪ “ರೀ ಸಾರೂ…ಎಲ್ಲೋ ಹೊಂಟಂಗೈತೆ” ಬರುವುದು ಕಂಡು ಎದೆ ಧಸಕ್ಕಂತು. ಅರೆ ಇವನು ಬಾಕಿ ಕೇಳ್ತಾನೆಂದುಕೊಂಡು ಕೇಳಿಸಿಯೂ ಕೇಳದವನಂತೆ ಲಗುಬಗೆಯಿಂದ ಹೆಜ್ಜೆ ಹಾಕಿ ಹೇಗೋ ಒಂದು ರೀತಿ ಗುಜರೀ ಸ್ವರೂಪ ತಳೆದಿದ್ದ ಬಸ್‌ಸ್ಟ್ಯಾಂಡ್ ತಲುಪಿ ನೆಮ್ಮದಿಯ ಉಸಿರು ಬಿಟ್ಟೆ… ಬಸ್ಸು ಹೋಗದಿದ್ದರೆ ಎಂಬಾತಂಕ ಮರುಕ್ಷಣ ಆವರಿಸಿಬಿಟ್ಟಿತು… ಪುರ್ವ ದಿಕ್ಕಿನ ಕಡೆ ಹೊರಡುವ ಯಾವುದೇ ಬಸ್ಸು ಹತ್ತಿ ಕೊಂಕಣ ಸುತ್ತಿಯಾದರೂ ಮೈಲಾರ ತಲುಪಿ ಕೊಡಲಿ ಕುಡುಗೋಲುಗಳಿಗೆ ಎದೆಯೊಡ್ಡಿ ನಿಲ್ಲಬೇಕೆಂದು ನಿರ್ಧರಿಸಿದೆ. ಯಾರಾದರೂ ಬಂದು ನಿನ್ನ ಕೊನೆಯಾಸೆ ಏನೆಂದು ಕೇಳಿಯಾರೆಂಬ ಭಯದಿಂದ ಅವರು ಬಂದರೆ ಇತ್ತ ತಿರುಗಿದೆ. ಇವರು ಬಂದರೆ ಅತ್ತ ತಿರುಗಿ ಹೇಗೋ ಒಂದು ರೀತಿ ಬಚಾವಾಗುತ್ತಿರುವಾಗ ಮುಗಿಲು ಮಟ ಧೂಳೆಬ್ಬಿಸಿಕೊಂಡು ಬಂದ ಬಸ್ಸನ್ನು ಅದು ನನ್ನಪ್ಪನ ಮನೆಯ ಆಸ್ತಿ ಎಂದು ಭಾವಿಸಿ ಒಂದರಲ್ಲಿ ನುಗ್ಗಿ ಮೂಲೆಯಲ್ಲಿ ಅಡಗಿ ಕೂತೆ. ನೈರುತ್ಯ ವಲಯದ ಯೂನಿಯನ್ನವರು ಕಳೆದೆಂಟು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹದ ಬಗ್ಗೆ ಡ್ರೈವರು ಡ್ರೈವರುಗಳೊಂದಿಗೆ; ಕಂಡಕ್ಟರು ಕಂಡಕ್ಟರುಗಳೊಂದಿಗೆ ಚರ್ಚಿಸುತ್ತಿರುವಾಗ ಚಾಕಲಿ ನಾರಾಣಿ ಕಣ್ಣವಪೆ ಒದ್ದೆಗೆ ಬೀದಿ ಧೂಳು ಅಂಟಿಸಿಕೊಂದು ಬಂದು ಅಂತೂ ಇಂತೂ ನನ್ನನ್ನು ಪತ್ತೆ ಹಚ್ಚಿ “ಇಂಥ ಸಮಯದಲ್ಲಿ ನಿಮಗೆ ಹೇಗೆ ಮನಸು ಬಂತು ಮಾರಾಯರೆ; ಯಜಮಾನರು ಅನ್ನ ಮುಟ್ಟುವಲ್ಲರು; ನೀರು ಮುಟ್ಟುವಲ್ಲರು. ಹಾಸಿಗೆ ಹಿಡಿದು ಮಲಗವರೆ… ಮೃತ್ಯುಂಜಯ ಮಂತ್ರ ಜಪಿಸಿರೆಂದು ಅಮ್ಮ ಹೇಳಿದರೆ ಕಿವಿಮೇಲೆ ಹಾಕ್ಕಳ್ಳರು… ಒಂದೊಂದು ಕ್ಷಣ ಬದುಕುತ್ತಿರುವ ತಪ್ಪಿಗೆ ನಿಟ್ಟುಸಿರು ಇಡುತ್ತಿರುವರು… ಶಾಮಣ್ಣರನ್ನು ತಡೆಯಬಾರ್ದೇನು? ಪಾಲನೆ ಪೋಷಣೆ ಮಾಡಿದ ತತನವರಿಗಿಂತ ಅವರಿಗೆ ನೌಕರಿ ಸೇರುವ ಹಂಬಲವೇ ಹೆಚ್ಚಾಗರುವಂತಿದೆ ಸ್ವಾಮಿ… ನಿಮ್ಮ ಮೈಲಿಗೆ ಮಡಿ ಮಾಡಿ ನಿಮ್ಮ ಋಣ ತೀರಿಸೇನು! ದಯವಿಟ್ಟು ಬಸ್ಸು ಇಳಿದುಬಿಡಿ ನನ್ನಪ್ಪಾ… ನಾನು ಹೇಳುತ್ತಿರುವುದು ಸತ್ಯ… ಸತ್ಯವನ್ನಲ್ಲದೆ ಬೇರೇನೂ ಹೇಳುತ್ತಿಲ್ಲ… ದೇವರ ಮೇಲೆ…”

ಬಸ್ಸು ಒಮ್ಮೆಗೆ ವೇಗ ಹೆಚ್ಚಿಸಿಕೊಂಡು ಹೊರಟು ಬಿಟ್ಟಿತು. ಕಿಟಕಿಯಲ್ಲಿ ತಲೆ ಚಾಚಿ ಹಿಂತಿರುಗಿ ನೋಡಿದೆ. ಕುಲು ಕಣಿವೆಯ ಬೆಳಗ ಮಬ್ಬಿನೊಳಗೆ ಬಿರಿದ ಪುಷ್ಪ ನೆಲದ ಪಾಲಾಗಿರುವಂತೆ, ಪಾರಿಜಾತ ವೃಕ್ಷದ ತರಗೆಲೆಯಂತೆ ವ್ಯಾವಹಾರಿಕ ಲಾಭ ಕಳೆದುಕೊಂಡಿರುವ ಅನುನಾಸಿಕ ವಿಸರ್ಗ್ರಾಕ್ಷರದಂತೆ.
ಹುಚ್ಚು ಸೂಳ್ಯಾ ಮಕ್ಕಳು… ಇವರಿಗೂ ಕೆಲಸ ಬೊಗುಸೆ ಇಲ್ಲವೆಂದರೆ ನನಗೂ ಇಲ್ಲವೆಂದು ತಿಳಿದುಕೊಂಡಿದ್ದಾರೆ… ಎರವಲು ತಂದ ಸ್ವಾಂತನದ್ ಮೇಲೆ ಬದುಕುವ ಬದುಕೆ? ನಿಟ್ಟುಸಿರುಬಿಟ್ಟೆ.
*
*
*
ನ ಕಾಲಸ್ಯ ಪ್ರಿಯಃ ಕಶ್ಚಿನ್ನ ದ್ವೇಷಃ ಕುರುಸತ್ತಮ
ನ ಮಧ್ಯಸ್ಥಃ ಕ್ವಚಿತ್ ಕಾಲಃ ಸರ್ವಂಕಾಲಃ ಪ್ರಕರ್ಷತಿ||
ಎಂಬೊಂದು ಮಾತು ಮಹಾಭಾರತದಲ್ಲಿ ಬರುತ್ತದೆ. ಕಾಲನಿಗೆ ಪ್ರಿಯರೆಂಬುದಾಗಲೀ ಶತ್ರುಗಳೆಂಬುವವರಾಗಲೀ ಇರುವುದಿಲ್ಲ. ಅವನೆಂದೂ ಮೀಡಿಯೇಟರು ಕೆಲಸ ಮಾಡುವುದಿಲ್ಲ… ಎಲ್ಲರನ್ನೂ; ಎಲ್ಲವನ್ನೂ ತೆಕ್ಕೆಗೆಳೆಕೊಂಡು ಹೋಗುತ್ತಿರುತ್ತಾನೆ.
*
*
*
ಈ ದೇಶದಲ್ಲಿ ಒಳ್ಳೆಯದಾಗಲೀ; ಕೆಟ್ಟದ್ದಾಗಲೀ ಅರ್ಥಪೂರ್ಣವಾಗಲೀ ಏನೊಂದೂ ನಡೆಯಲು ಸಧ್ಯವಿಲ್ಲವೆಂಬುದಕ್ಕೆ ವಾಗಿಲಿ ಸೇರಿಕೊಂಡು ಹಲವು ದಿನಗಳು ಕಳೆದರೂ ನನ್ನ ದೇಹದ ಒಂದೇ ಒಂದು ರೋಮ ಕೊಂಕದಿರುವುದೇ ನಿದರ್ಶನ. ನಾನು ದೀರ್ಘಾವದಿ ರಜೆಯ ಮೇಲೆ ಹೋದ ಕೆಲವು ದಿನಗಳಲ್ಲಿ ವಾಗಿಲಿ ಮತ್ತು ಪುಲಿಕುರ್ತಿ ಬೆಸೆಯದ ಹಳ್ಳಗಳ ಕೊರಕಲಲ್ಲಿ ಕೊಳೆತು ಊದಿಕೊಂಡು ಬಿಸಿಲಿಗೆ ಡಮಾರೆಂದು ಒಳಗಿನದೆಲ್ಲ ಹೊರಗಡೆ ಬಂದು ಅಕರಾಳವಿಕರಾಳವಾಗಿದ್ದ ಹೆಣವೊಂದು ಪತ್ತೆಯಾಯಿತಂತೆ… ಕಳ್ಳ ಸಂಭೋಗಕ್ಕೆ ಅನುವಾದ ಜಾಗ ಅರಸಿಕೊಂಡು ಪರಗುಣಿ ಮಾಗಿಯ ನವಣೆ ಸಾಲಿನೊಳಗಿಂದ ಕವುರಟ್ಲು ನಿಂಗಿಯೂ; ತರಗುಣಿ ಬೋಗಿಯ ಬಿಳಿ ಜೋಳದ ಬೆಳಸೆ ಸಾಲಿನೊಳಗಿಂದ ಪರುವುಟ್ಲು ಸಾಂಬಿಯಾನೂ ಚತುಷ್ಪಾದಿಗಳಂತೆ ತೆವಳುತ್ತ ಬಂದು ಹಳ್ಳ ತಲುಪಿ ನಿಸೂರಾದರು… ಇಲ್ಲಿ ಮಲಿಕ್ಕೊಂಡ್ರೆ ಅವರಿಗೆ ಕಾಣಬೌದು. ಅಲ್ಲಿ ಮಲಿಕ್ಕೊಂಡ್ರೆ ಇವರಿಗೆ ಕಾಣಬೌದಂತ ರಿಜರಿ ಜಾಲಿ ಅಡೀಕೆ ತೆವಳುತ್ತ ಸಾಗಿರಲು ನಿಂಗಿ ಮೂಗುನಿಗರಿಸಿಕೊಂಡು ಇಲ್ಲೆಲ್ಯಾರೋ ಬುತ್ತಿ ಇತ್ತಂಗೈತೆ ಹುಳಿ ಮೊಸ್ರು ಬಾನ ಕಲಸಿಟ್ಟಂಗೈತೆ… ಬದ್ನೆಕಾಯಿಪದಾರ್ರ; ಹುಂಚ್ಕಾಯಿ ಸಟ್ಟಣಿ ಅದರೊಟ್ಟಿಗಿಟ್ಟಂಗೈತೆ ಅಂಬಲು ಸಾಂಬಿಯಾನು ದೋತರ ಮೇಲೆತ್ತಿ ಈ ಸುಡುಗಾಡಾಗ್ಯಾರು ಅದ್ನೆಲ್ಲೆ ತಂದಿಟ್ಟಿದ್ದಾರೋ ಮೂಳಿ… ಸುಮ್ಕೆ ಮಲಿಕ್ಕ ಎಂದು ಗದರಿ ಕೆಳಗೆ ಕೆಡವಿಕೊಂಡನು. ಅದಕ್ಕೆ ಅರಳದೆ ನಿಂಗಿಯು “ನಾನು ಸುಳ್ಳೇಳಿದ್ರು ನನ್ ಮೂಗು ಸುಳ್ಳೇಳಲ್ಲೆಲ್ಲೋ ಸಾಂಬಿ… ಖರೇವಂದ್ರು ಬುತ್ತಿ ವಾಸಣೆ ಬರಲಿಕ್ಕತ್ತೈತೆ… ಅದ್ಯಾರ್ಯಾರ ಆಗಿರ್ಲಿ… ಮೊದ್ಲುಂಬಾಂಣು… ಹೊಟ್ಟೆ ಹಸಿದೈತೆಲೋ… ಬಾಡ್ಕಾವ್ ಅದ್ಯಾಕಂಗವಸ್ರ ಮಾಡ್ತಿ… ನೀನೇನು ಉಂಬಾಕ್ಕಿಡ್ತೀಯಾ… ತಿಂಬಕಿಡ್ತೀಯಾ… ಬಡ್ಕೊಂಡ್ ಹೋತಿ… ನನ್ ಕಸ್ಟ ನೊಂಗೊತ್ತು?… ನಿಂಗೇನು ಸೆಂಟ ಗೊತ್ತಾತ್ತೈತಿ?… ಮದ್ಲೆನದಂತ ನೋಡ್ಕಬರಾಣು…”

ಬಾಯಾಗಿಟ್ಕಂಬಾದಾಗಿದ್ರೆ ಉಂಡು ಬಿಡಾಣು… ಒಡ್ಲಾಗ ಕೂಳಿದ್ರೆ ಏನು ಮಾಡಿದ್ರು ಛಂದಿರತೈತಿ… ನಾನು ಹೆಣ ಮಲಿಕ್ಕಂಡಂಗೆ ಮಲಿಕ್ಕಂಬಾದು… ನಿಂದು ನೀನು ತೀರಿಸ್ಕೊಂಡು ಪೆಂಟೆ ಕಿತ್ತೋದಂದ್ರೆ ಹೆಂಗೆ?…” ಅಂತ ಎದ್ದು ಕುಂತು ಕಂಣಿಗೆ ನೀರು ತಂದುಕೊಂಡು ಬತ್ತಿದ್ದ ಹಳ್ಳದ ಗೌರವ ಕಾಪಾಡಿಕೊಂಡಳು.
ಆಕೆ ಯಾವತ್ತೂ ಹಿಂಗ ಮಾಡಿದಾಕಿಯಲ್ಲ… ಒಡಲಾಗೆ ಕೂಳಿಲ್ಲದ್ದು ಹಿಂಗೆ ಮಾತಾಡಿಸ್ತದೆ… ನಾನೆಂದೂ ಒಂದು ಹಿಡಿ ಬಾನ ಕೊಟ್ಟು ಒಡಲು ಕೈ ಹಿಡಿದು ನಡಿಸಿದೋನಲ್ಲ… ಈಕೆ ಮಾತಿಗೆ ಗೌರವ ಕೊಡೋಣಂದರೆ ಬುತ್ತಿ ವಾಸಣೆ ಒಂಚೂರು ಮೂಗಿಗಟೀವಲ್ಲದು…
“ವಯ್… ಬುತ್ತಿ ವಾಸಣೆ ಯಲ್ಲೈತಭೇ ನಿನ್ನೌವ್ನ… ಏನೋ ನೆವತಕ್ಕೋಡು ಸವದೋತನ್ನಂಗೆ ಮಾಡ್ತಿಯಲ್ಲೆ…” ಎಂದು ಮೂಸಿ ಮೂಸಿ ಹೇಳಿದನು…
“ಯಯ್ ಹಿಂಗಾಕಾಯ್ತಲೋ ನಿನ್ಮೂಗು… ಅದನ್ನ ಕುಯ್ದು ಕುರ್‍ಕುಂದಿ ನಾಗ್ನೀಗೆ ಕೊಡು… ಒಂದ್ ಜತಿ ಕಾಲ್ಮರಿ ಕೊಡ್ತಾನೆ…” ಎಂದು ಸೋಟಿ ತಿವಿದಳು.
“ನಗಡ್ಯಾಗಿ ಮೂಗು ಕಟ್ಕೊಂಡೈತಿ ಬಿಡು… ಅದ್ಕೆ ವಾಸ್ಣೆ ಹಿಡಿವಲ್ದು ಹಾಳಾದ್ದು… ಬೇಕಾರ ಮೂಗ ತೊಗ್ಲು ಕುಯ್ದು ಕಾಲ್ಮರಿ ಮಾಡ್ಸಿ ನಿಂಗೇ ತೊಡಿಸ್ತೀನಿ… ಬಾಯಿ ಮುಚ್ಕೊಂಡು ಬಿದ್ಕ… ಇಂಥೊತ್ನಾಗೆ ಬುತ್ತಿ ಯಾಕ ಬಗಸ್ತಿ… ಜ್ವಾಳದ ಬೆಳ್ಸಿ ಸುಟ್ ಕೊಡ್ತೀನಂತ ಅಮ್ಯಾಕ” ಎಂದು ಆಕೆಯ ಮೊಲೆಗಳನ್ನು ಎಲ್ಡು ಕಯ್ಯಿಗಳಿಂದ ಹಿಚುಗಲತ್ತಿ ಕಿಪ್ಪ್ಪೊಟ್ಟೆ ಮೇಲೆ ಕೂಕಂಡನು…

ಬಲವಾದ ಮನುಶ್ಯೋಳಾದ ನಿಂಗಿ ಒಮ್ಮೆಗೆ ಜಾಡಿಸಿ ತಳ್ಳೂತ್ತಲೆ ಅವನು ಅಷ್ಟು ದೂರ ಅಂಗಾತಲೆ ಬಿದ್ದನು.
“ನೀನೇನೋ ಮಣುಸೋನೋ…ರಾಕ್ಷಸನೋ… ಬುತ್ತಿ ವಾಸಣೆ ಬಡುದ್ರೆ ನಂಗೊಂದ ನಮೂನಿ ಆಕೈತೆಲೋ ಬಾಡ್ಯಾ… ಉಂಡರೆ ಸೈ… ಇಲ್ಲಾಂದ್ರಿಲ್ಲ” ಎಂದು ಎದ್ದು ನಿಂತು ಪರಪರಾಂತ ತೊಡೆ ಸಂದಿ ಕೆರೆದುಕೊಂಡಳು.

ಅಷ್ಟುದ್ದ ಇದ್ದೋನು ಇಷ್ಟುದ್ದದವನಾಗಿ ಅವನು ಮಕ್ಕಂಡಲ್ಲಿಂದ ಎದ್ದು ಬಂದು… ಆಯ್ತಲೇ ಆತು… ನಿನ ಮಯ್ಯಿ ಬೆವರ ವಾಸಣೆಯಂಥ ಇನ್ನೊಂದು ವಾಸಣೆ ಮೂಗಿಗೆ ತಗುಲವಲ್ದು… ನಿನಂದಂಗಾಗ್ಲಿ ಹುಡುಕೋಣು ನಡೆ” ಎಂದು ಆಕೆಯ ‘ಸೆಗಲ ಬಂಟಕ್ಕೆ’ ಕಯ್ಯಿ ಹಾಕಿದನು.
ಅವರೀರ್ವರು ಬೇಟೆಗಾರರಂತೆ ದೇಹವೆಂಭೋ ದೇಹಗಳನ್ನು ತುಸುವೇ ಬಗ್ಗಿಸಿ ನಾಟ್ಯಗತಿಯಲ್ಲಿ ಹೆಜ್ಜೆಹಾಕತೊಡಗಿದರು ಮುಂದು ಮುಂದಕ… ಅವರೀರ್ವರ ಮೂಗುಗಳೆಂಭೋ ಮೂಗುಗಳು ರಾಯಲಪಾಡು ಜಾತಿ ನಾಯಿಗಳಂತೆ ಅವರನ್ನು ಬಿಟ್ಟು ಮುಂದು ಮುಂದಕ ಹೋಗಿದ್ದವು…
ಒಂದೊಂದೆ ಹೆಜ್ಜೆಗೆ ವಾಸನೆ ಎಂಬೋದು ಒಂದೊಂದು ರೂಪ ಧಾರಣ ಮಾಡತೊಡಗಿತು. ಒಂದೊಂದು ನಾಡಿ ಬಡಿತಕ್ಕೆ ಒಂದೊಂದು ನಮೂನಿ ಸಂವೇದನೆ ರವಾನಿಸತೊಡಗಿತು… ಅರಳಿದ್ದ ಮೂಗುಗಳನ್ನು ಅಕುಂಚನಗೊಳಿಸಬೇಕೆಬುವಷ್ಟರಲಿ ನರಿಗಳೆರಡು ಹೋ ಹೋ ಹೋ ಎಂದರಚುತ್ತ ಆಕ್ರಮಣ ಮಾಡುವಂತೆ ಎದುರಿಗೆ ಸಾಮು ತೆಗೆಯತೊಡಗಿದವು. ಸಾಂಬಿಯಾ ನಿನ್ನೌವ್ನ ಅಂತ ಕಯ್ಯಿಗೆ ಸಿಕ್ಕ ಕಲ್ಲೊಂದನ್ನು ಎತ್ತಿ ಪ್ರಯೋಗ ಮಾಡಲು ಅವು ಹ್ಹೋ ಹ್ಹೋ ಹ್ಹೋ “(ನಮ್ಮಾಟು ತಿಂಬಲಾಕ ಬಂದೀರ… ನಿಮ್ಮ ಕಳ್ಳೆವವಾರಾನ ಯಲ್ರಿಗೂ ಟಾಂಟಾಂ ಹಾಕ್ತೀವಿ” ಎಂಬಂತೆ) ತಂತಮ್ಮ ಮುಕುಳಾಗ ಬಾಲ ತುಂಬಿಕೊಂಡು ಓಡಿ ರಿಜರಿ ಪೊದೆಯೊಳಗೆ ಅಂತರ್ಧಾನವಾದವು.

ಇದೇನು ಕರುಮವೋ ಅಂತ ಮೂಗುಗಳನ್ನು ಮುಚ್ಚಿಕೊಳ್ಳುವಷ್ಟರಲ್ಲಿ ರಣ ಹದ್ದೊಂದು ಬಾಯಲ್ಲಿ ಎಂಥದೋ ಒಂದು ಕಚ್ಚಿಕೊಂಡು ಕೇಕಕಣ ಅಂತ ಸಬುದ ಮಾಡುತ್ತ ವಿಮಾನದಂಗೆ ರೆಕ್ಕೆ ಬಿಚ್ಚಿಕೊಂಡು ಮುಗುಲಿಗೆ ನೆಗೆಯಿತು.
ಸಾಮಾನು ಮುದುಡಿ ಹಿಂಗಿ ಹೋಗಿ ಎದೆ ಮೂಲಕ ಬಾಯಿಗೆ ಬಂದಂದಾಗಿ ಸಾಂಬಿಯು “ನನ್ನೆದಿ ಬಡಕಂತತಿ… ಓಗ್ಗಿ ಬಿಡಾಣು ಬಾರೇ ನಿಂಗಿ” ಎಂದು ಒಂದೆರಡು ಹೆಜ್ಜೆ ಹಿಂದೆ ಇಟ್ಟ.
“ಅದ್ಕಾರ ಎದಿ ಬಡ್ಕಳ್ಳಲ್ಲ… ಇದಕಾರ ಬಡಕಂತತ… ನೋಡೇ ತಿರಾಣು… ಮುಕ್ಕಿ ಮುಚ್ಕೊಂಡು ಬಾರಲೋ ನನ್ನಾಟಗಳ್ಳ” ಎಂದು ನಿಂಗಿ ಗದರಿಸಿದೇಟಿಗೆ ಹಿಂದೆ ಬಂದನು…

ಅವರು ಹಂಗೆ ಸಪ್ತಪದಿ ತುಳಿದು ಮುಂದೆ ಹೋಗಿ ನೋಡಲು ಹೆಣವೆಂಬುದು ಹೊಟ್ಟೆ ಹೊಡಕಂಡು ಬಕಬಾರಲೆ ಬಿದ್ದಿತ್ತು… ಅಲ್ಲಲ್ಲಿ ಹರಕೊಂಡಿದ್ದ ತವುಜರೊಳಗಿಂದ ಮಿಡಿ ನಾಗರ ಬುಸ್ಸಂತ ಹೆಡೆ ಬಿಚ್ಚುತ್ತಲೆ ಬುಳ್ಳಂತ ಮೂತ್ರ ವಿಸರ್ಜಿಸಿಕೊಂಡು ಅರ್ಧಬಲ ಓಡಿದರು.

ನೀವಿಬ್ಬರು ಯಾಕ ಹೋಗಿದ್ದೀರಿ ಎಂಬ ಪ್ರಶ್ನೆ ಕೇಳುವುದರ ದ್ವಾರ ಯಾರಾದರು ತಮ್ಮ ಹಾದರ ಬಟಾ ಬಯಲ ಮಾಡ್ಯಾರೆಂಬ ಅದುರಿಕೆಯಿಂದ ನಿಂಗಿ ಬಾಯಿಗೆ ಅರಿವೆ ಇಟ್ಟುಕೊಂಡಿರಲು ಸಾಂಬಿಯಾನು “ಕಟ್ರಳ್ಳದಾಗ ಹೆಣ ಬಿದ್ದೈತಿ” ಎಂದು ಕೂಗುತ್ತಾ ಕರಗಲ್ಲಿನಿಂದ ಚಾವಡಿ ಕಟ್ಟೆವರೆಗೆ ಹೋಗಲು…
ವಾಗಿಲಿ ಮಂದಿ ಕಿವಿ ಬಾಯಿಗೆ ತಂದುಕೊಂಡೋ; ಕಿವಿಗೆ ಬಾಯಿ ತಂದುಕೊಂಡೋ ಹುಟ್ಟು ಮಾರ್ಗದರ್ಶೀಲೆ ಕಟ್ರಳ್ಳ ಎಲ್ಲೈ ತೆಲ್ಲೈತಂತ ಓಡಿ ಹೆಣದ ದರುಶನ ಪಡೆದು ಅದರ ಕುರಿತು ತರಾವರಿ ಕಥೆ ಪೇರಿಸಿ ಘನವಾದ ಭವನ ನಿರ್ಮಿಸಿತು. ಕ್ರಮೇಣ ಕಟ್ಟುದ ಕಟ್ಟಿ ಅದರೊಳಗೆ ವೀರಭದ್ರಪ್ಪನೆಂಬಭಿದಾನದ ನನ್ನನ್ನು ಪ್ರತಿಷ್ಟಾಪನೆ ಮಾಡಿತು.

ಅಂತು ಚೂಸುಕುಂಟಾನು ಎಂಬ ಭೀಷ್ಮ ಪ್ರತಿಜ್ಞೆ ಮಾಡಿದ್ದ ಜಗನ್ನಾಥರೆಡ್ಡಿಯು ತಲೆ ಮರೆಸಿಕೊಂಡು ಅಂತರ್ಧಾನನಾದನು. ಕುಲಕರ್ಣಿ ರಾಘಪ್ಪ; ಬಡಿಗೇರ ಮಾನಪ್ಪ; ಕುಂಟುಗೌಡರೆಂಬುವರೇ ಮೊದಲಾದವರ ಸಮಕ್ಷಮದಲ್ಲಿ ಎಸೈ ಮಾರ್ತಾಂಡ ಸಾಹೇಬನು ಪಂಚನಾಮೆ ನಡೆಸಿ ಅದರ ನಕಲುಪ್ರತಿಗಳನ್ನು ಹತ್ತು ತೆಗೆಸಿ ಹತ್ತು ಕಡೆ ಕಳುಹಿಸಿದನು…
ಅಸಿಸ್ಟೆಂಟು ಟೀಚರು ತಿಮ್ಮಯ್ಯ ಶೆಟ್ಟಿ ಗಹಗಹಿಸಿ ನಗುತ್ತ ನಡೆಸಿದ ಸಂತಾಪ ಸೂಚಕ ಸಭೆಯಲ್ಲಿ ನನ್ನ ಗುಣಗಾನ, ಸೊಕ್ಕು, ಸೆಡವು ವರ್ಣಿಸಿದ್ದೇ ವರ್ಣಿಸಿದ್ದಂತೆ…

ಅಡ್ಡ ದಾರೀಲಿ ಕೆಂಪು ಬಸ್ಸಿನಿಂದಿಳಿದು ನಡೆದು ಬರುವಾಗ ದಾಸರಯಂಕೋಬ ‘ಇಂಕಾ ಮೀರು ಬ್ರತಿಕೇ ಉನ್ನಾರಾ’ ಎಂದು ಪ್ರಶ್ನೆ ಕೇಳಿದ್ದಕ್ಕೂ ಮೊದಲು ಬಿಡಿಓ ಪರಂಧಾಮಯ್ಯ ‘ಪೀಡೆ ಕಳೀತಂತ ಇಟ್ಕೊಂಡು ಎಲ್ರಿಗೂ ಒಳ್ಳೆಯವನಾಗಿ ಕೆಲಸ ಮಾಡ್ಕೊಂಡು ಹೋಗಪ್ಪಾ’ ಎಂದು ಆಶೀರ್ವಾದ ಮಾಡಿದ್ದ. ದಾಸರವ ಹಿಂಗ್ಯಾಕ ಕೇಳುತ್ತಿರುವನೆಂದೊಂದು ಕ್ಷಣ ಅರ್ಥವಾಗದೆ ಮಿಕಿಮಿಕಿ ನೋಡಿ ಮುಂದುವರಿದಿದ್ದೆ. ನಾನು ಬದುಕಿರುವ, ಮತ್ತು ಬದುಕಿರುವ ಸಂಗತಿ ಕಿವಿಗೆ ಬೀಳುತ್ತಲೆ ತಳವಾರ ಗುರುವನ ಮೂಲಕ ರಿಂದಮ್ಮ ನನ್ನನ್ನು ಉಪ್ಪರಿಗೆ ಮನೆಗೆ ಕರೆಸಿಕೊಂಡು ಕಾಫಿ ಕೊಟ್ಟು ಸನ್ಮಾನ ಮಾಡಿ ದೇವರು ದೊಡ್ಡವನೆಂದು ವೆಂಕಟರಮಣನ ಪಟದ ಮುಂದೆ ತುಪ್ಪದ ದೀಪ ಹಚ್ಚಿ ಕೈ ಮುಗಿದಳು. ಆಕೆಯ ತವರೂರಿನ ಮೂರು ಹರಿದಾರಿ ವಿಸ್ತೀರ್ಣದ ಹೊಲದ ನಡುವೆ ಬವಣೆಯೊಳಗೆ ಮನೆ ಮಾಡಿಕೊಂಡು ತಲೆಮರೆಸಿಕೊಂಡಿದ್ದ ತನ್ನ ಪತಿ ಪರಮೇಶ್ವರ ಜಗನ್ನಾಥ ರೆಡ್ಡಿಯನ್ನು ಕರೆತರಲು ಸಾರೋಟನ್ನು ಕಳಿಸುವ ವ್ಯವಸ್ಥೆ ಮಾಡಿದಳು. ಅವತ್ತು ರಾತ್ರಿಯೇ ಜೀವಾವಧಿ ಕೈದಿತನ ಅನುಭವಿಸಿದವನಂತೆ ಮೊಳವರೆ ಗಡ್ಡ ಬಿಟ್ಟುಕೊಂಡು ಬಂದ ಜಗನ್ನಾಥ ರೆಡ್ಡಿಯ ಕರ್ಮಕ್ಕೆ ನಾದಿರ ಗೋವಿಂದ ಬೇರೆ ಹೆಂಡತಿ ನೋವು ತಿಂಥಿದ್ದಾಳೆಂದು ಕೈರುಪ್ಪಳಿಗೆ ಹೋಗಿದ್ದ. ಅವನು ಬಂದು ಬೋಳಿಸಿದ ನಂತರವೇ ರೆಡಿ ಚಾವಡಿ ಕಟ್ಟೆ ಮೇಲೆ ಸಮಾಧಾನದ ಉಸಿರು ಬಿಡುತ್ತ ವಿರಾಜಮಾನನಾಗಿದ್ದು. “ಯಾವೋನು ಯಾವ ಬಾವಿಗಾದ್ರು ಬಿದ್ಕಳ್ಳಿ… ನನ್ನ ಗಂಟೇನು ಹೋಗ್ತದೆ?” ಎಂದು ಸ್ವಇಚ್ಚೆಂದ ನುಡಿದದ್ದಲ್ಲದೆ ಬೇಕು ಬೇಕಾದವನ್ನು ಕರೆಸಿ ಹೋಳಿಗೆ ಊಟ ಹಾಕಿಸಿದ್ದು..

ನಿಂಗಿಯೂ ಸಾಂಬಿಯೂ ದಿನಗಳ ಮೇಲೆ ಕಟ್ರಳ್ಳದಲ್ಲಿ ಕಾಣಿಸಿಕೊಂಡ ಶವ ನನ್ನ ಕನಸಿನಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡಿತು. ಅದು ನನ್ನದೇ ಯಾಕಾಗಿರಬಾರದು ಎಂಬ ಅನುಮಾನ ಕಾಡತೊಡಗಿದ ಏಳನೆ ದಿನಕ್ಕೆ ನನ್ನ ಸ್ವಾಸ್ಥಿಯಿಂದ ಜಲಜಾಕ್ಷಿ ಬರೆದ ಸುದೀರ್ಘ ಪತ್ರ ಬಂತು. ಬರಲಿರುವ ಶಾಸನ ಸಭಾ ಚುನಾವಣೆಯಲ್ಲಿ ತನಗೇ ಟಿಕೆಟ್ ಕೊಡುವುದೆಂದು ಹೈಕಮಾಂಡು ನಿರ್ಧರಿಸಿರುವ ಬಗ್ಗೆ; ಸುರೇಶ ಗೌಡ ಬೀಫ್ ತಿನ್ನುವ ಹುಡುಗಿಯನ್ನು ಮದುವೆಯಾಗಿ ಜಾಗ ಖಾಲಿ ಮಾಡಿರುವ ಬಗ್ಗೆ; ಖಡ್ಗದ ಸಂಸ್ಥಾಪಕ ಸಂಪಾದಕ ಕಮಲಾಕರಗೆ ಪತ್ರಿಕಾ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿರುವ ಬಗ್ಗೆ; ಲೈಂಗಿಕ ಪುಷ್ಟಿಗೆ ‘ಅರ’ ಅನಸೂಯಾ ರಘುರಾಮ) ಕಂಪನಿಯ ದೋಸೆ ತಿನ್ನಿರಿ ಎಂದು ವೃತ್ತ ಪತ್ರಿಗೆಗಳಲ್ಲಿ ಪ್ರಕಟವಾಗುತ್ತಿರುವ ಜಾಹಿರಾತುಗಳ ಬಗ್ಗೆ; ಮಾತಾಡಿಸುವ ನೆಪದಲ್ಲಿ ಶಾಮ ಮನೆಗೆ ಹೋಗಿ ಅನಸೂಯಾ ದಂಪತಿಗಳ ಬೆಂಗಳೂರು ವಿಳಾಸ ಬೆದಕಾಡಿ ಪಡೆದುಕೊಂಡಿರುವ ಬಗ್ಗೆ; ಪರಮೇಶ್ವರ ಶಾಸ್ತ್ರಿಗಳು ಪಾರ್ಶವಾಯು ಪೀಡಿತರಾಗಿಮಲಗಿರುವ ಬಗ್ಗೆಸುದೀರ್ಘವಾಗಿ ಬರೆದ ನಂತರ ಮೂಲೆಯಲ್ಲಿ ಚಿಕ್ಕದಾಗಿ ಶಾಮನಿಗೆ ಪ್ರಸಿದ್ಧ ಬ್ಯಾಂಕೊಂದರಲ್ಲಿ ಅಪಾಂಟ್ಮೆಂಟ್ ಆಗಿದ್ದು ಅವನು ಸದ್ಯಕ್ಕೆ ಇಪ್ಪತ್ತೊಂದೂವರೆ ಕಿಲೋಮೀಟರು ದೂರದಲ್ಲಿರುವ ಕೊತ್ತಲಿಗೂ ಕೊಟ್ಟೂರಿಗೂ ಡೇಲಿ ಅಪ್ ಅಂಡ್ ಡೌನು ಮಾಡುತ್ತಿರುವನೆಂದೂ; ಎಷ್ಟೇ ಕೆಲಸವಿದ್ದರೂ ಒಂದೆರಡು ದಿನಗಳಮಟ್ಟಿಗಾದರೂ ಬಿಡುವುಮಾಡಿಕೊಂಡು … ತೇದಿಯಂದು ನಡೆಯಲಿರುವ ‘ಸ್ತ್ರೀಶಕ್ತಿಯೇ ದೇಶದ ಶಕ್ತಿ’ ಎಂಬ ಮಹಾಸಮ್ಮೇಳನದಲ್ಲಿ ಬಂದು ಭಾಗವಹಿಸಿ ವಂದನಾರ್ಪಣೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದೂ ಬರೆದಿದ್ದಳು.

ಹೆಲ್ತು ವರ್ಕರು ಇಮಾಮನಿಂದಾಗಿ ಇಂಗ್ಲೀಷಿನ ಸಾಂಕ್ರಾಮಿಕಕ್ಕೆ ತುತ್ತಾಗಿದ್ದ ಮಕ್ಕಳಿಗೆ ‘ಕಮಲಳ ಊಟ, ಬಸವನ ಆಟ’ ಹತ್ತು ಸಲ ಬರೆಯುವಂತೆ ಸೂಚಿಸಿ ಹರಳೆಣ್ಣೆ ಮುಖದ ತಿಮ್ಮಯ್ಯ ಶೆಟ್ಟಿಗೆ ಅದರ ಉಸ್ತುವಾರಿ ವಹಿಸಿ ಜಲಜಾಕ್ಷಿಯ ಪತ್ರವನ್ನು ಒಂದೊಂದು ನಮೂನಿ ಅರ್ಥಮಾಡಿಕೊಳ್ಳುತ್ತ ಕೂತೆ… ಹುಣುಸೆಹಣ್ಣು ಗೊತ್ತಿರದ ಹುಡುಗರು ಎಪಿಪಿಎಲ್‌ಇಯಾಪಿಲ್ ಬರೆದಂತೆ ಕಟ್ಟಾಜ್ಞೆ ವಿಧಿಸುವ ನೆಪದಲ್ಲಿ ಹಿಂದೆ ಮುಂದೆ ತಿರುಗಾಡುತ್ತಾ ಶೆಟ್ಟಿ ನಾನು ಓದುತ್ತಿದ್ದ ಪತ್ರದಲ್ಲಿ ಇಣುಕಿ ನೋಡುತ್ತಿದ್ದ. ಮಧ್ಯರಾತ್ರಿಯಲ್ಲಿ ಎದ್ದು ಬಂದು ತನ್ನ ಮುಖದ ಒಂದು ಭಾಗವನ್ನು ಬಳಪ ಮಾಡಿಕೊಂಡು ಶಾಲಾ ಗೊಡೆಯ ಮೇಲೆ ಜಲಜಾಕ್ಹಿಗೆ ವೀರಭದ್ರಪ್ಪ ಎಂದು ಬರೆದಾನೆಂಬ ಭಯದಿಂದ ಬಂದಿದ್ದ ಪತ್ರವನ್ನು ನಿಸ್ಸಂಕೋಚವಾಗಿ ಓದುವಂತೆ ಅವನಿಗೆ ಕೊಟ್ಟೆ, “ನಿಮ್ಮ ಪರ್ಸನಲ್ ಮ್ಯಾಟ್ರು” ಎಂದು ಮೊದಮೊದಲು ಹಿಂಜರಿದ ಅವನು ಕೊನೆಗೂ ಇಸಿದುಕೊಂಡು ಓದಲು ಪ್ರತ್ನಿಸಿದ. ಈಸ್ಟ್ ಇಂಡಿಯಾ ಕಂಪೆನಿ ಕಾಲದ ದಸ್ತಾವೇಜು ಓದುತ್ತಿರುವ ರೀತಿಯಲ್ಲಿ ಅಂತೂ ಇಂತೂ ಓದಿ ಮುಗಿಸಿ ಮುಖದಿಂದ ಮತ್ತಷ್ಟು ಎಣ್ಣೆ ಬಸಿದು ನಿರಾಶನಾಗಿ ಹಿಂದಿರುಗಿಸಿ ಜೀವ ಕಳೆದುಕೊಂಡವನಂತೆ ಸ್ಟೂಲಿನ ಮೇಲೆ ಹೋಗಿ ಕೂತುಕೊಂಡ.

ಆ ಪತ್ರದಲ್ಲಿದ್ದ ಯಾವ ಪಾಯಿಂಟ್ ಬಗ್ಗೆ ಆಲೋಚಿಸುವುದು ಮತ್ತು ಬರೆಯುವುದು! ಮಂಕಾಗಿ ಒಂದು ಕ್ಷಣ ಊರುಕುಂದಿ ಮಗಳು ತಿಮ್ಮಿಯ ಸಿಂಬಳ ತುಂಬಿಕೊಂಡಿದ್ದ ಮೂಗನ್ನೇ ಶೂನ್ಯವೆಂದು ಭಾವಿಸಿ ನಿಟ್ಟಿಸುತ್ತ ಕೂತುಕೊಂಡೆ.

“ಸಾಲ್ಯಾಗ ಯಸ್ರು ಬರಿಸಿ ಬರೋಬ್ಬರಿ ಮೂರ್ತಿಂಗ್ಳು ತುಂಬ್ಕಂತು… ಯಲ್ಡಕ್ಕಸರ ಕಲಿಸಿದ್ದೊಂದು ಬುಟ್ರೆ … ಗೊರುಮೆಂಟಿನೋರು ಕಡೀಲಿಂದ ಏನು ಬಾನ ಕೊಡಿಸಿದ್ದು ಅರಿವೇ ಕೊಡಿಸಿದ್ನಾ… ಇಲ್ಲದ್ನೇಳಿ ಕರ್ಕಂಡ್ಬಂದು ಸೇರಿಸ್ಕೊಂಡ್ನಲ್ಲ… ಪಿಳ್ಳೇನ ಗೋಡ್ರು ವಲಕೆ ಗುಬ್ಬಿ ಕಾಯಲಾಕ ಕಳಿಸಿದ್ದಿದ್ರೆ ಯಲ್ಡೊಪ್ಪತ್ತು ಪಿಳ್ಳೇಗೆ ಬಾನನಾರ ಸಿಕ್ತಿತ್ತು…” ಹೊರಗಡೆ ಊರಮ್ಮನ ಬೇವಿನ ಮರದ ಬುಡದಲ್ಲಿ ಉದ್ದೋಕೆ ನಿಂತ್ಕಂಡು ಉರುಕುಂದಿ ನನ್ಗೆ ಕೇಳಿಸ್ಲೀ ಅಂತ ಗಟ್ಟಿಯಾಗಿ ಮಾತಾಡುತ್ತಿದ್ದ…

“ಸಾಲೆ ಬ್ಯಾಡ ಕಸಾಲೆ ಬೇಡ… ಸಿಲೇಟು ವಕ್ಕಟ್ಟು ಬಂದ್ಬಿಡೆವ್ವೋ ಥಾಯಿ… ಸಾಲಿ ಕಲ್ತು ನೀನೇನಾಫೀಸರಾಗೋದೈತಿ” ಎಂದು ನನ್ನ ಪಿತಾಶ್ರೀ ಧಮಕಿ ನೀಡುತ್ತಿದ್ದುದಕ್ಕೆ ಪ್ರತಿಯಾಗಿ ಅಕ್ಕಸರ ತಲೀಗೆ ಹತ್ತುವುದೆಂಗ? ಈ ಹೊತ್ಗೆ. ಕುಡ್ದು ಬಂದೈತೆ ಮೂಳ ನಾಡ ಮೂಳ” ಎಂದು ಗೊಟಗುಟ್ಟುತ್ತ ತಿದ್ದುತ್ತಿತ್ತು.

ಸೋಲೂಪ ಹೊತ್ತಿನಲ್ಲಿ ಸುಂಕಲಿ ತನ್ನ ಬೀಸೋ ಕಲ್ಲು ಗಾತ್ರದ ತುರುಬನ್ನು ಎತ್ತೆತ್ತಿ ಕುಣಿಸುತ್ತ “ವ್ಯೋನೇ… ಗೋಡನತ್ರ ಅಯವತ್ತಿಸ್ಕಂಡ್ಬಂದು ಕುಡುದ್ರಿಂದ ಬಾಯಿಗೆ ಬಂದಂಗ ಅನಲಾಕತ್ತಿಯಲ್ಲ… ಅಯಪ್ಪಾದ್ರ ಸುಮಕದಾನ… ನಾನಾದ್ರ ಬಾಯಾಗ ಉಚ್ಚೆ ವಯ್ತಿದ್ದೆ… ಮಗು ಸಾಲಿ ಕಲೀಲಿ… ಅದ್ನ ನೋಡಿ ಸಂತೋಷಪಡೋದು ಬಿಟ್ಟು ಬಾನ್ ಕ್ವಡ್ಲಿಲ್ಲ… ಬಟ್ಟೆ ನೋಡ್ಲಿಲ್ಲ… ಅನಲಕತ್ತೀಯಲ್ಲ… ಅಯಪ್ಪೇನು ನಿನಗಂಟ್ತಿಂದಾನೇನು?” ಇವೇ ಮೊದಲಾದ ವಾಗ್‌ಪಾಶಗಳಿಂದ ತನ್ನ ಗಂಡನನ್ನು ಹೆಡ ಮುರಿಗೆ ಕಟ್ಟಿಎಳೆದೊಯ್ದಳು.
ಇಂಥ ಕುಸುಮ ಬಾಲೆಯರು ಎಷ್ಟೋ? ಕುಡಿದಾಗೊಂದು ನಮೂನಿ; ಕುಡಿಲಿಲ್ಲದಾಗೊಂದು ನಮೂನಿ… ಯಾರಾದರೂ ಹಚ್ಚಿಕೊಟ್ಟಾಗೊಂದು ನಮೂನಿ; ತಮ್ಮ ಪಾಡಿಗೆ ತಾವು ನಿಸೂರಿಕಿದ್ದಾಗೊಂದು ನಮೂನಿ…

ನನ್ನೀ ವಾಲಿಗ್ರಾಮ ಈ ದೇಶದ ನೂರು ವಿಶ್ವವಿದ್ಯಾಲಯಗಳಿಗೆ ಸಮ… ಒಂದು ವಿಶ್ವವಿದ್ಯಾಲಯದಲ್ಲಿ ಒಬ್ಬ ಮನುಷ್ಯ ನೂರು ವರ್ಷ ಕಲಿಯುವುದನ್ನು ಈ ಸುಗ್ರಾಮ ಕೇವಲ ಹತ್ತೇ ದಿನಗಳಲ್ಲಿ ಗ್ರಾಮ ಭಾರತದ ವಿರಾಟ್ರೂಪವನ್ನು ತೋರಿಸಿಬಿಡುತ್ತದೆ. ಅಬ್ಸರ್ವೇಷನ್ ಕೆಪೇಸಿಟಿ ಇರುವವರ್ಯಾರೇ ಆಗಲಿ ಬಂದೀ ಸದರೀ ಗ್ರಾಮದಲಿದ್ದ ಪಕ್ಷದಲ್ಲಿ ಬರಹಗಾರ ಅಥವಾ ಸಮಾಜ ಶಾಸ್ತಜ್ಞ; ಅಥವಾ ಮಾನವ ಶಾಸ್ತ್ರಜ್ಞ ಅಥವಾ ಜಾನಪದ ವಿದ್ವಾಂಸ… ಹೀಗೆ ಯಾವುದೊಂದಾದರೊಂದು ಜ್ಜಾನ ಶಾಖೆಯಲ್ಲಿ ಪ್ರಭುತ್ವ ಸಾಧಿಸಬಹುದು…. ಒಂಚೂರಾಗಲೀ ಯಾವುದೇ ಮಾಲಿನ್ಯವಿರದೀ ಪ್ರದೇಶದಲ್ಲಿದ್ದು ಆರೋಗ್ಯವಂತನಾಗಬಹುದು.. ಅಥವಾ ಕಂದಾರೆಮ್ಮನ ಗುಡಿಯೊಳಗಿರುವ ಕಲ್ಲು ಗುಂಡುಗಳನ್ನೆತ್ತಿ ಬಾಡಿ ಬಿಲ್ಡರಾಗಿಬಿಡಬಹುದು ಅಥವಾ ಆಯತಪ್ಪಿ ರೂಕ್ಷ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ಅತ್ಯುತ್ತಮ ಕೊಲೆಗಾರನಾಗಿ ಬಿಡುವ ಅವಕಾಶವನ್ನು ತಳ್ಳಿಹಾಕುವಂತಿಲ್ಲ.

“ಯಂಥೋಥೋರ್ಗೆ ಇಲ್ಲಿ ಎಂಟ್ದಿನ ಇರಲಿಕ್ಕಾಗಿಲ್ಲ… ನೀನಿಲ್ಲಿದ್ದು ಸಾಲೆ ಹೇಳಿಂದೇನು ಕಡ್ದು ಗುಡ್ಡ ಹಾಕ್ತೀಯೋ ನಾ ಬೇರೆ ಕಾಣೆ. ಸುಮ್ನೆ ಗೌಡ್ರು ಜೊತೆ ಇಸ್ಪೀಟಾಡ್ತಾ ಕಾಲ ಕಳೆ… ಸಾಲಿ ಹೇಳೊ ಮನಸ್ಸಿದ್ದ ಪಕ್ಷದಲ್ಲಿ ಗೌಡ್ರು ಮಕ್ಕಳಿಗೊಂದೆ ಸಾಲೆ ಹೇಳಿ ಶಾಣೇರ್ನ ಮಾಡು ಬ್ಯಾಡನ್ನಲ್ಲ… ಇದು ಮೊದ್ಲೇ ರೌಡಿ ಕೊಂಪೆ… ಒಂದು ಹೋಗಿ ಇನ್ನೊಂದಾಗಬಾರ್ದು. ನೀನಿನ್ನು ಮುಂದೆ ಮದ್ವಿ ಪದ್ವಿ ಆಗಿ ಸಂಸ್ಕಾರ ಮಾಡೋ ಹುಡುಗ… ಕಾಟಿಗ್ರು ಮುಂಡೇವ್ಕೆ ಇದ್ಯೆ ಹೊತ್ತೋದಿಲ್ಲ… ಹತ್ತಿದ್ರೆ ಅವು ದೊಡ್ಡೋರು ಸಣ್ಣೋರನ್ನದಂಗೆ ತಲೆಮ್ಯಾಲತ್ತಿಕುಂಡ್ರುತಾವ” ಎಂದು ಕಲಕರ್ಣಿ ಸಾಂಪ್ರತು ಹೇಳಿದ್ದ ಮಾತು ನೆನಪಾಗುವುದು.

ಅದಕ್ಕೆ ಪ್ರತಿಯಾಗಿ ಜಗ್ನಾತ್ರೆಡ್ಡಿ “ನಾನು ಬಡ್ಕೊಂಡೆ ರಾಘವಪ್ಪ… ಮೇಸ್ಟ್ರೂನ ಹಾಕಂಗಿದ್ರೆ ಬ್ರಾಂಬ್ರೂನ ಹಾಕ್ರೀಂತ ಬಿಡಿಓಗೆ ಹೇಳ್ದೆ… ಅವ್ನು ಕೇಳಿದ್ನಾ… ಇರ್ಲಿ… ಇರ್ಲಿ… ಅದೆಷ್ಟು ದಿನ ಉರೀತಾನೋ ಉರೀಲಿ… ನೋಡೋಣು” ಎಂದು ಬಿಸಿಯುಸಿರೆಂಬ ಸರುಪಾಸ್ತ್ರ ಬಿಟ್ಟಿದ್ದ.

ಇಂಥ ತರಾವರಿ ಮಾರಕಾಸ್ತ್ರಗಳಿಂದ ತಪ್ಪಿಸಿಕೊಳ್ಳುತ್ತ ಹೇಗೋ ಒಂದು ರೀತಿಯಲ್ಲಿ ಬದುಕಿರುವ ಬದುಕುತ್ತಿರುವ ಇಂಥ ಹಳ್ಳಿಗಲಿದ್ದರೆ ಮಾತ್ರ ಜಲಜಾಕ್ಷಿಯಂಥವರು ಮಾಡುವ ಸಂಘಟನೆಗಳಿಗೆ ಅರ್ಥ ಬರುತ್ತದೆ. ತಲೆಗೊಂಚೂರು ಎಣ್ಣೆ ಕಾಣದೆ, ಹೊಟ್ಟೆಗೊಂಚೂರು ಬೆಣ್ಣೆ ಕಾಣದೆ ಅಬಡಾ ದಬಸ್ಡಾ ಪಶುಗಳಿಂದತತ್ತ ಬದುಕುತ್ತಿರುವ ಗ್ರಾಮೀಣ ಮಹಿಳೆಯರನ್ನು ದೂರ ಇಟ್ಟು ಅದ್ಯಾವ ಸಂಘಟನೆ ಮಾಡ್ತಾಳೋ ನಾಬೇರೆ ಕಾಣೆ! ಇಂಥ ಕ್ಷುದ್ರ ಬದುಕಿನೊಂದಿಗೆ ಒಡನಾಡಿರುವ ನನ್ನಂಥವರಿಂದ ಒಂದುಪನ್ಯಾಸ ಕೊಡಿಸಲಿಕ್ಕೇನಾಗಿತ್ತು ಧಾಡಿ ಅಂತ. ನನಗೆ ವಂದನಾರ್ಪಣೆ ಕೆಲಸಕ್ಕೆ ಆಕೆ ಸೋಪ್ತಿ ಮಾಡಿರುವುದು ಕಂಡು ನಗಬೇಕೋ? ಅಳಬೇಕೋ? ಒಂದೂ ಅರ್ಥವಾಗಲಿಲ್ಲ. ಬರಲಿರುವ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲಿಕ್ಕೆ ಸಂಘಟನೆ; ಸಮ್ಮೇಳನದಂಥ ಗಿಮಿಕ್ ಶುರು ಮಾಡಿದಾಳೆಂದು ಅರ್ಥಮಾಡಿಕೊಳ್ಳಲು ತ್ರಾಸು ಪಡಬೇಕಾಗಿಲ್ಲ.

ಅದೇ ಹೊತ್ತಿಗೆ ಹೆಲ್ತುವರ್ಕಮಾಮು “ಹೆಲ್ಲೋ ಗುಡ್‌ಮಾರ್ನಿಂಗೂ… ಹೌ ಆರ್ ಯು” ಎಂದು ತನ್ನ ಮಾಮೂಲು ಇಂಗ್ಲೀಷು ವರಸೆಯಿಂದ ವಕ್ಕರಿಸುತ್ತ ನನ್ನ ಕೈಲಿದ್ದ ಪತ್ರದೊಳಗಿಣುಕಿ ನೋಡಿದ… ಲವ್ವು ಲೆಟರಸ್ಸೂನ ಬರೆಯೋಕೆ ಇಂಗಲೀಸು ಲ್ಯಾಂಗವೇಜೇ ಚಲೋ ಐತೆ ನೋಡ್ರಿ… ಈ ಇಲೇಜರ ಸೂ ಥೆಪ್ಟ್ ಮಾಡಿದ್ರೆ ನಿಮ್ಮಂಥೋರ ಕರಿಯರ್ರೇ ಹಾಳಾಗಿ ಬಿಡ್ತದೆ ನೋಡ್ರಿ…” ಎಂದು ತಲೆ ತಿನ್ನ ತೊಡಗಿದ ಅವನ ಮುಖಕ್ಕೆ ಉಗಿದು ಓಡಿಸುವ ಆಸೆ ಆಯಿತು. ದುರುಗುಟ್ಟಿ ನೋಡಿದೆ. ಆಗ ಅವನು ಉಗುಳು ನುಂಗಿ “ಹೆಲೋ ಮೈ ಡಿಯರ್ ರಿಕೆಟ್ಟೂ; ಹೆಲ್ಲೊ ಮೈ ದಿಯರ್ ಬೆರ್ರಿ ಬೆರ್ರಿ” ಎಂದುಮಕ್ಕಳಿಗೆ ರೋಗಗಳ ಹೆಸರಿಟ್ಟು ಹೆಲ್ತು ಚೆಕಪ್ಪಿಗೆ ತೊಡಗಿದ. ಅವನು ತಮ್ಮನ್ನು ಇಂಗ್ಲೀಷ್ ಭಾಷೆಯಿಂದ ಗುರುತಿಸುತ್ತಿದ್ದುದರಿಂದ ಮಕ್ಕಳು ರೋಮಾಂಚನಗೊಂಡು ಪ್ರತಿಕ್ರಿಯಿಸುತ್ತಿದ್ದೆವು.

“ನೋಡು ಇಮಾಮು… ರೋಗಗಳ ಹೆಸರಿಟ್ಟು ಹುಡುಗರ್ನ ಕರೀಬ್ಯಾಡಾಂತ ಎಷ್ಟ್ ಸಾರಿ ಹೇಳ್ಬೇಕು: ಎಂದು ಗದರಿದೆ.
ತಮ್ಮಕ್ಕನನ್ನು ಬಿಡಿಓಗೆ ಅಡ್ಡ ಹಾಕಿರುವ ಅವನ ವರ್ತನೆಯನ್ನು ವಿರೋಧಿಸುವ ಗೋಜಿಗೆ ಹೊಗುತ್ತಿರಲಿಲ್ಲ.
“ವಾಡ್ ದೂ ಯು ಮೀನ್?” ಅಂದ.
“ವಾಟು ಇಲ್ಲ ಮೀನೂ ಇಲ್ಲ ಕಣಪ್ಪಾ… ನಿನ್ನೆಲ್ತು ಚೆಕ್ಕಪ್ ಸಾಕು ಮಾಡಿ ಹೊರಗ್‌ಹೋಗು” ಅಂದೆ. ಎಲ್ಲ ಇದ್ದೂ ಇಲ್ಲದಂತಿರುವ ಅಥವ ಇರದಿದ್ದರೂ ಇದ್ದಂತೆ ವರ್ತಿಸುವ ಹೆಡ್ಲಾಂಗ್‌ಫೆಲೋ (ಇಮಾಮ ಇಟ್ಟಿರುವ ವಿಶೇಷಣ) ಲಕ್ಹ್ಮಿರೆಡ್ಡಿ ಇದ್ದ ಎರಡು ಹಲ್ಲುಗಳ ನಡುವೆ ಒಂದು ಕೋರೆ ಗಣೇಶ ಸಿಕ್ಕಿಕೊಂಡು ಬಂದ ರವುಡೂರು ಲಕ್ಷ್ಮಿ ರೆಡ್ದಿ “ಹೋಗ್ಲಿ ಬುಡ್ರಿ ಮೇಷ್ಟರೇ… ಯಲ್ತಿಲ್ದಿದ್ರೆಂಗ ವುಡ್ರು ಥೇಲೀಗೆ ಓದು ಅತ್ತತೈತಿ” ಎಂದು ಅಡ್ಡ ಬಾಯಿ ಹಾಕಿದ.
ಊರಾಳುವ ಜಗನ್ನಾಥರೆಡ್ಡಿಯ ಸಾರೋಟಿನ ಸಾರಥಿಯಾಗಿ ಕಾರ್ಯನಿರ್ವಹಿಸುತ್ತ ಇಪ್ಪತ್ತಾರು ವರ್ಷಗಳನ್ನು ನುಲಿ ಮುಪ್ಪಾಗಿರುವ ಆತಗೆ ಟವುಜರು ಹಾಕಿಕೊಂಡು ಟಸ್ಸಾಪುಸ್ಸಾಂತ ಇಂಗ್ಲೀಶು ಮಾತಾಡುವವರೆಂದರೆ ಎಲ್ಲಿಲ್ಲದ ಮೋಜು.
“ಲಕ್ಷ್ಮೀ ರೆಡ್ಡಿ … ಸ್ವಲ್ಪ ಬಾಯ್ಮುಚ್ಕೊಂಡೋಗ್ತೀಯಾ…” ಎಮ್ದು ಗದರಿಸಿದೆ.
ತನ್ನ ಏಕಮಾತ್ರ ಅಭಿಮಾನಿಯಾದ ಲಕ್ಷ್ಮಿರೆಡ್ಡಿಯನ್ನು ಗದರಿಸಿದ್ದು ಇಮಾಮನಿಗೂ ಹನುಮಂತ ದೇವರಂತಿರುವ ತನ್ನನ್ನು ಗದರಿಸಿದ್ದರಿಂದ ಲಕ್ಷ್ಮೀರೆಡ್ಡಿಗೂ ಏಕಕಾಲಕ್ಕೆ ಸರಿಬರಲಿಲ್ಲ.
ಎಲಾ ನಿನ್ನ ನೋಡ್ಕೋತೀವಿ ಎಂಬಂತೆ ಮುಖ ಮಾಡಿಕೊಂಡರು.
ಸಹ ಶಿಕ್ಷಕರು, ಮಕ್ಕಳು ಬೆರಗಿನಿಂದ ನೋಡುತ್ತಿದ್ದಂತೆಯೇ ಆ ದಮನಕ, ಕರಟಕರು ಪರಸ್ಪರ ಕೈ ಹಿಡಿದುಕೊಂಡು ದಪ್‌ದಪ್ ಹೆಜ್ಜೆ ಹಾಕುತ್ತ ಅಲ್ಲಿಂದ ಕದಲಿದರು.
ನಾವು ಕೆಲಸ ಮಾಡುತ್ತಿರುವುದೇ ಪನಿಷ್ಮೆಂಟ್ ಪ್ಲೇಸಾದ್ದರಿಂದ ಯಾರಿಗೆ ಯಾಕೆ ಸೊಪ್ಪು ಹಾಕುವುದು? ಅದೂ ಅಲ್ಲದೆ ನಾನು ದೋಂಟ್ ಕೇರ್ ಮಾಸ್ಟರೆಂದೇ ಹೆಸರಾಗಿರುವವನು ಬೇರೆ! ಆದ್ದರಿಂದ ಅಸ್ಟು ಸುಲಭವಾಗಿ ಇಂಥಿಂಥ ಕಂಟಕ ಎದುರಾಗುತ್ತದೆ ಎಂದು ಬುದ್ಧಿ ಹೇಳುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ.

ಜಗನ್ನಥರೆಡ್ಡಿಯಿಂದ ಬುಲಾವ್ ಮಾಡಿಸಿ ಲಕ್ಷ್ಮಿರೆಡ್ಡಿ ತಕ್ಕಶಾಸ್ತಿ ಮಾಡಿಸುತ್ತಾನೆ ಲಕ್ಷ್ಮೀರೆಡ್ಡಿ ಎಂದೇ ನನ್ನ ಸಹೋದ್ಯೋಗಿಗಳೆಲ್ಲ ಪರಿಭಾವಿಸಿದರು. ಊರ ಕರಗಲ್ಲಿನಂತಿರುವ ಲಕ್ಶ್ಮೀರೆಡ್ಡಿ ಮಾಡಬಾರದ್ದನೆಲ್ಲವನ್ನು ಮಾಡಿ ರವಡೂರು ತ್ಯಜಿಸಿ ವಾಲಿಗೆ ಬಂದು ಆಶ್ರಯ ಪಡೆದಿರುವಂಥ ವ್ಯಕ್ತಿ, ಸಕಲ ಜೀವಂಗಳಿಗೆ ಸದಾ ಕೇಡು ಬಯಸುವ ಆತ ಗುಣಸ್ವಭಾವದಲ್ಲಿ ಸರ್ಪಕ್ಕಿಂತಲೂ ಮಿಗಿಲು, ಜಗನ್ನಥರೆಡ್ಡ್ಡಿಯನ್ನು ಎದುರು ಹಾಕ್ಕೊಂಡು ಬದುಕಬಹುದಾದರೂ ಲಕ್ಷ್ಮೀರೆಡ್ಡಿಯನ್ನು ಎದುರು ಹಾಕಿಕೊಂಡರೆ ತಾಪತ್ರಯಗಳ ಸರಮಾಲೆಯನ್ನೇ ಎದುರು ಹಾಕಿಕೊಂಡಂತೆಯೇ ಲೆಕ್ಕ. ನನ್ನ ಎದೆಯ ಬಾಂಡಲೆಯೊಳಗೆ ಲಕ್ಷ್ಮೀರೆಡ್ಡಿ ಎಂಬ ದ್ವಿದಳ ಧಾನ್ಯ ಬೇಯುವುದೋ ಇಲ್ಲವೋ ನೋಡೇ ಬಿಡಬೇಕು ಎಂದು ನಿರ್ಧರಿಸಿದೆ.

ಮತ್ತೆ ಮತ್ತೆ ಓದಿಸಿಕೊಂಡಿತು ಜಲಜಾಕ್ಷಿಯ ಪತ್ರ. ಒಂದೊಂದು ಒಂದೊಂದು ಕಥಾ ಸಂಕೀರ್ತನ ಮಾಡುವ ಪತ್ರ. ಬರುವಾಗ ಶಾಸ್ತ್ರಿಗಳನ್ನು ಮಾತಾಡಿಸಿ ಬಂದಿದ್ದರೆ ಹಗುರಾಗಿ ಬದುಕಬಹುದಿತ್ತು. ಶಾಮ ಪ್ರಥಮಬಾರಿಗೆ ಅವರ ಮಾತು ಉಲ್ಲಂಘಿಸಿ ಇಂತ್ರೂ ಹೋಗಿದ್ದು; ನೌಕರಿ ಸಿಕ್ಕಿದ್ದು ಇತ್ಯಾದಿ ಅವನ ವರ್ತನೆ ವಿವರದಲ್ಲಿ ನನ್ನ ಪಾತ್ರವಿದೆ ಎಂದು ನಂಬಿದ್ದರೆ ಅದು ನನ್ನ ಕರ್ಮ. ಅದಕ್ಕೆ ನಾನು ಹೇಗೆ ಕಾರಣ?
ನನಗೆ ಎರಡು ಕೋಣೆಯ ಮನೆ ಬಾಡಿಗೆಗೆ ಕೊಟ್ಟಿರುವ ಗುರುವಪ್ಪ ಆತಂಕದಿಂದ ಬಂದು “ವ್ಯೊನ್ರಿ ಮೇಷ್ಟ್ರೆ ಆ ಮೂಳ ಲಚ್ಚಿಮೀ ರೆಡ್ಡೀನ ಯಾಕೆ ತಡುವಾಕೋದ್ರಿ… ಅವನೊಂದಿದ್ರೆ ನಾಕು ವ್ಯೋಳೋ ಮನುಸ್ಯಾ… ಪೀಡೆ ಬಗೆ ಅರೀತು… ಆರಾಮಿರ್ತೀರಿ ಅಂದ್ಕಂಡಿದ್ದೆ… ಯೀಗ್ನೋಡ್ರಿ ಮತ್ತೊಂದ್ತಲಿನವ್ವು ತಂದ್ಕಂಡೀರಿ” ಎಂದು ನಿಟ್ಟುಸಿರು ಬಿಟ್ಟ.

ನನಗೆ ಮತ್ತೆ ತಲೆ ಚಿಟ್ಟಂತು. ಈ ಗುರಪ್ಪನೂ ಅಷ್ಟೆ, ಇಲೀನ ಹುಲಿ ಅನ್ನೋ ಮನುಷ್ಯ… ಅದು ಯಾವ ಧೈರ್ಯದಿಂದ ಕಪಟ್ರಾಳ್ ವೆಂಕಟರೆಡ್ಡೀನ ಕಡಿದನೋ ಏನೋ?…

“ಏನು ಗುರಪ್ಪಾ… ಅದೇನಾಯ್ತೂಂತ ಹಿಂಗ ಮಾತಾಡ್ತಿದ್ದೀ… ಆ ಲಕ್ಷ್ಮೀರೆಡ್ಡಿಯ ತಳಬುಡ ಎಲ್ಲ ಗೊತ್ತು ನನ್ಗೆ… ಇಂಥ ಕೊಂಪೇಲಿ ಆ ಧೈರ್ಯ ಇರೋದ್ರಿಂದ್ಲೇ ನಾನು ಕೆಲಸ ಮಾಡ್ತಿರೋದು… ಅದೇನಾಯ್ತು? ಹೇಳು” ಅಂದೆ… ಉಸ್ತಾದನೆಂಬ ಗೌರವ ಕೊಟ್ಟು.
ಬರೀ ಮನಸ್ಸೊಂದೆ ಪೆಡಸಿದ್ರೆ ಇಂಥಲ್ಲೆಲ್ಲ ಜೀವ್ನ ಮಾಡೋದು ಕಷ್ಟ ಮೇಷ್ಟ್ರೇ… ನಿಮ್ಮೆತ್ರಕ್ಕೆ ಸರಿಯಾಗಿ ಮೈನೂ ಗಟ್ಟಿಮುಟ್ಟಾಗಿ ಮಾಡ್ಕೋಬೇಕು ಎಂದು ಬಂದ ಹೊಸತರಲ್ಲಿ ನನ್ನಿಂದ ಬಗೆಬಗೆ ಕಸರತ್ತು ಮಾಡಿಸಿದ್ದ; ಹೊಟ್ಟೆ ಸೊಂಟದ ಮಾಂಸವನ್ನು ತೋಳಿಗೆ ರವಾನಿಸಿದ್ದ… ಅಂಥವನು ಏಳರ ಜ್ವರ ಹುಟ್ಟಿಸುವುದೆಂದರೇನು.

ಅರ್ಜುನ ನೆಲಮೂಸುತ್ತ ಬಂದು ನಮ್ಮಿಬ್ಬರ ನಡುವೆ ಮೈಚಾಚಿ ಮಲಗಿಕೊಂಡಿತು. ಅದರ ಮೈ ನೇವರಿಸುತ್ತ ಗುರಪ್ಪ “ಅದೇನೆಂಬುದು ನಂಗೊಂದು ಗೊತ್ತಿಲ್ಲ ಮೇಷ್ಟ್ರೇ… ರೆಡ್ಡಿ, ಗೌಡ, ಕುಲಕರ್ಣಿ ಎಲ್ಲಾರು ಕಾಯಾಕ ಹತ್ಯಾರಂತೆ… ನೀವು ಲಗೂನ ಹೋಗ್ಬೇಕಂತೆ…” ಎಂದೊಂದು ನಿಟ್ಟುಸಿರುಬಿಟ್ಟು ನಿಮ್ಮ ಯಿಂದಕ ನಾನೂ ಬರ್ತೀನಿ. ಯದರ್ಕೋಬೇಡ್ರಿ” ಎಂದ ಧೈರ್ಯ ತುಂಬುವವನಂತೆ.
“ಕರ್ಯೋರಾದ್ರು ಯಾರು?”
“ಲಚ್ಚುಮೀರೆಡ್ಡಿ”
“ಎಲ್ಲಿದಾನೆ”
“ಬಚ್ಚಲ ಕಟ್ಟೆತಾವ”
“ನೀವೇ ವಾದ್ರೆ ಬೇಷಿತ್ತು?”
“ಗುರಪ್ಪ… ಹೇಳ್ದಷ್ಟು ಮಾಡು” ಎಂದೆ ನಿಷ್ಟುರತೆಯಿಂದ…
ಆತ ಒಲ್ಲದ ಮನಸ್ಸಿನಿಂದ ಹೋದ, ಚಾವತ್ತಿನಲ್ಲಿ ಲಕ್ಷ್ಮೀರೆಡ್ಡಿಯೊಂದಿಗೆ ಬಂದ. ಏನ್ಸಮಾಚಾರವೆಂಬಂತೆ ಆ ಮಾಜಿ ಜಮೀನ್ದಾರನ ಕಡೆ ನೋಡಿದೆ.
“ಬರ್ಬೇಕಂತೆ ಮೇಷ್ಟ್ರೆ” ಎಂದ ಗಡುಸು ಧ್ವನಿಯಿಂದ
“ಬರ್ತೀನಿ ನೀನು ಹೋಗು” ಎಂದೆ ಅಷ್ಟೇ ಗಡುಸಿನಿಂದ. ಅವನು ಹತ್ತು ಹೆಜ್ಜೆಗೊಮ್ಮೊಮ್ಮೆ ಕ್ಯಾಕರಿಸಿ ಉಗುಳಿ ಒಂದೊಂದು ಮೈಲಿಗಲ್ಲು ಸೃಷ್ಟಿಸುತ್ತ ಹೋದ.
ಕನಸಿನಲ್ಲಿ ಬಸುರಾಗಿ ಬೆಳಗಾಗುತ್ತಲೆ ಹಡೆಯಲು ಕೌದಿ ಹುಡುಕಾಡುವ ಗ್ರಾಮದ ಅನೇಕರ ಪೈಕಿ ಇವನೂ ಒಬ್ಬ.
ಗುರಪ್ಪನನ್ನು ಅಲ್ಲೆ ಕುಂಡ್ರಿಸಿ ನಾನೊಬ್ಬನೆ ಹೊರಟೆ… ಓಣಿಯ ಜನ ಆಯಕಟ್ಟಾದ ಜಾಗದಲ್ಲಿ ನಿಂತು ನೋಡುತ್ತಿದ್ದರು.
ಜಗನ್ನಾಥ ರೆಡ್ಡಿಒಯ ಉಪ್ಪರಿಗೆ ಮನೆಯನ್ನು ಹೊರ ವಲಯದ ಐದು ಕಿಲೋಮೀಟರು ದೂರದಿಂದಲೇ ಗುರುತಿಸುವುದು ಸುಲಭ. ನೂರಾರು ಮಂದಿ ಏಳೆಂಟು ವರ್ಷ ಕಷ್ಟಪಟ್ಟು ಕಟ್ಟಿರುವ ಮನೆಯಂತೆ ಅದು.
ಐದುಮಂದಿ ತುಂಬು ಗರ್ಭಿಣಿಯರನ್ನು ಬಲಿಕೊಟ್ಟು ಅದನ್ನು ಶಾಂತಿ ಮಾಡಲಾಗಿರುವುದಂತೆ. ಹೀಗೆ ಎಷ್ಟೆಷ್ಟೋ ಕಥೆಗಳನ್ನು ಒಳಗೊಂಡಿರುವ; ಸೃಷ್ಟಿಸುತ್ತಿರುವ ಆ ಮನೆ ಕೈ ಬೀಸಿ ಕರೆಯುತ್ತಿರುವಂತೆ ಹತ್ತಿರವಾದೆ.
ಮನೆಯ ಮಹಾದ್ವಾರದ ಮುಂದೆ ಏಳೆಂಟು ಮಂದಿ ಕಟ್ಟಾಳುಗಳು ತಲಾ ಒಂದೊಂದು ಬಡಿಗೆ ಹಿಡಿದುಕೊಂಡು ಕೆಕ್ಕರಿಸಿ ನೋಡುತ್ತಿದ್ದುದರ ಕಡೆ ಕೇರು ಮಾಡದೆ ಬಾಗಿಲು ದಾಟಿದೆ.
ಜಗನಾಥರೆಡ್ಡಿ ಪಡಸಾಲೆ ಮೇಲಿದ್ದ ಆ ಮನೆಯಷ್ಟೆ ಹಳೆಯದಾದ ಸಾಗುವಾನಿ ಮರದ ಕುರ್ಚಿಯಲ್ಲಿ ಕೂಕಂಡಿದ್ದ. ಗೋಡೆ ಮೇಲೆ ಅಲಂಕಾರಕ್ಕೆ ನೇತು ಹಾಕಿದ್ದ ಕತ್ತಿ ಗುರಾಣಿ, ತುಪಾಕಿಗಾಳು… ಅವುಗಳನ್ನು ಬಳಸಿ ಎಷ್ಟು ದಿನವಾಯಿತೋ ಏನೋ? ಗಿರಿಜಾ ಮೀಸೆಯ ಮುಖದ ತಾತ ಮುತ್ತಾತಂದಿರ ಫೋಟೋಗಳು ಅಷ್ಟೇ ಜೇಡೆಣೆದು ಬೇಬಿಷ್ಟೆಗೆ ಒಳಗಾಗಿದ್ದವು.

ಕೆಳಗಡೆ ಅಲ್ಲಲ್ಲಿ ಊರು ಮಡುವ ಗೌಡ, ಕುಲಕರ್ಣಿ ಮುಂತಾದವರು ಮುಖ ಬಿಕ್ಕೊಂಡು ಅಲ್ಲಲ್ಲಿ ಕೂತಿದ್ದರು. ನನ್ನ ಕಡೆ ದುರುಗುಟ್ಟಿ ನೋಡಿದರು. ಲಕ್ಷ್ಮೀರೆಡ್ಡಿ ಜೋಡು ನಳಿಗೆಯ ಬಂದೂಕೇ ತಾನೆಂಬಂತೆ ಒಂದು ಮೂಲೆಯಲ್ಲಿ ಕೂತುಕೊಂಡ.

ನಾನು ಸೀದ ಪಡಸಾಲೆ ಮೇಲೇರಿ ರೆದ್ದಿಯ ಪಕ್ಕದಲ್ಲಿ ಮತ್ತೊಂದು ಕರಿಮತ್ತಿ ಕುರ್ಚಿಮೇಲೆ ಕೂತುಕೊಂಡೊಡನೆಎಲ್ಲರ ಹೃದಯಗಳ ಬಡಿತ ದ್ವಿಗುಣಗೊಂಡಿತು. ಎಷ್ಟು ಸೊಕ್ಕಿದ್ದೀತಪ್ಪಾ ಇವ್ನೀಗೆ… ಮೇಷ್ಟ್ರಾಗೆ ಇಷ್ಟು ಧಿಮಾಕು ತೋರ್ಸ್ತಿದಾನೆ. ಇನ್ನು ಕಲೆಕ್ಟ್ರು ಆಗಿದ್ರೆ ಇನ್ನೆಷ್ಟು ಧಿಮಾಕು ತೋರಿಸ್ತಿದ್ನೋ ಎಂಬಂತೆ ನನ್ನ ಕಡೆ ನೋಡುತ್ತಿದ್ದವರು ವಾಸ್ತವಾಗಿ ಅಂಥವರಲ್ಲ. ರೆಡ್ಡಿ ಸಮಕ್ಷಮ ಹಾಗೆ ವರ್ತಿಸುತ್ತಿದ್ದರೋ?
ಧಡೂತಿ ಬೆಕ್ಕೊಂದು ರೆಡ್ಡಿಯ ಕಾಲಸಂದಿಯಲ್ಲಿ ಹೊಸೆಯುತ್ತ ಮ್ಯಾಂಗುಟ್ಟತೊಡಗಿದಾಗ ಪರದೆ ಆಚೆಕಡೆ ‘ಬಾ ಕೋಶ್’ ಎಂದು ಹೆಣ್ಣು ಬಹುಳಃ ಅವರ ಅವಿವಾಹಿತ ಮಗಳು ಮೂವತ್ತು ವಯಸ್ಸಿನ ಪುಷ್ಪವತಿ ಇರಬಹುದು. ಬಾಗಿಲ ಮರೆಯಲ್ಲಿ ತಲೆತುಂಬ ಸೆರಗು ಹೊದ್ದು ಕೂತಿರುವ ತುಂಬು ಗರ್ಭಿಣಿ ಹೆಂಗಸು ಬಹುಶಃ ರೆಡ್ಡಿಯ ಐದನೆ ಪತ್ನಿ ಇರಬಹುದು. ಅದೇ ತಾನೆ ಕೆಮ್ಮುತ್ತ; ಮೀಸೆಗಂಟಿದ್ದನ್ನು ನಾಲಿಗೆಯಿಂದ ಒರೆಸಿಕೊಳ್ಳುತ್ತ ಬಂದ ಮೂವತ್ತೆಂಟು ವಯಸ್ಸಿನ ವ್ಯಕ್ತಿ ರೆಡ್ಡಿಯ ದ್ವಿತೀಯ ಸುಪುತ್ರ ಪುರುಷೋತ್ತಮ ರೆಡ್ಡಿ ವಿಧೇಯತೆಯಿಂದ ಒಂದು ಮೂಲೆಯಲ್ಲಿ ಕೂತುಕೊಂಡ. ಕರ್ಚಿಕಾಯಿ ಕಡಿಯುತ್ತ ತೊದಲುಗಾಲು ಇಡುತ್ತ ಬಂದ ರೆಡ್ಡಿಯವರ ಹದಿಮೂರನೆಯ ಸುಪುತ್ರ ರಘುನಂದನರೆಡ್ಡಿ ತಳವಾರನ ಮೇಲೆ ಬುಳ್ಳನೆ ಉಚ್ಚೆ ಹೊಯ್ದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ.

ಮೇಷ್ಟ್ರನ್ನ ಇಲ್ಲೆ ಜೀವ ಸಮಾಧಿ ಮಾಡಿಬಿಡುವುದೇ? ಅಂಗ ಊನ ಮಾಡಿ ಹೊರಗೆ ಸಾಗಹಾಕುವುದೆ? ಎಂಬಂತೆ ಪರಸ್ಪರ ಮುಖ ನೋಡಿಕೊಳ್ಳುವುದರಿಂದ ಬೇಸತ್ತು “ಏನ್ರೆಡ್ಡಿಯವ್ರೆ ಬರಹೇಳಿದ್ದರಂತೆ” ಎಂದು ನಾನೆ ಮೌನ ಮುರಿದೆ.
ರೆಡ್ಡಿ ನನ್ನತ್ತ ದುರುಗುಟ್ಟಿ ಒಂಚಣ ನೋಡಿ ಮರುಕ್ಷಣ ಕಣ್ಣಾಲಿ ಸಡಿಲಿದರು. “ನಿಮ್ಮೂರ್ಯಾವುದಂದ್ರಿ?” ಎಂದು ಕೇಳಿದರು.
“ಕೊಟ್ಟೂರು! ಯಾಕೆ?” ಎಂದೆ ಆಶ್ಚರ್ಯದಿಂದ.
“ಬಳ್ಳಾರಿ ತಾಲ್ಲೂಕು ಕೂಡ್ಲಿಗಿ ಜಿಲ್ಲೇಲಿರೋ ಕೊಟ್ಟುರು ತಾನೆ?” ಎಂದು ಕೇಳಿದ ಮಾನಪ್ಪಾಚಾರಿ ಸಾಮಾನ್ಯನಲ್ಲ. ದೇವಿ ಪುರಾಣ ನಾಲಿಗೆ ತುದಿ ಮೇಲಿಟ್ಟುಕೊಂಡಿರುವ ಪ್ರಚಂಡ ವ್ಯಕ್ತಿ.
“ಅಲ್ಲ… ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕ್ನಲ್ಲಿರೋ ಕೊಟ್ಟುರು” ಎಂದು ವ್ಯಂಗ ಸರಿಪಡಿಸಿದೆ.
“ನಿಮ್ಮೂರಾಗ ಯಾರೋ ಬ್ಯಾಂಬ್ರು ವಳ್ಳೆತ್ನಾಗ ಜೋತಿಷ್ಯ ಹೇಳ್ತಾರಂತಲ್ಲ”ಎಂದು ಕೆಳಗೇರಿ ಮುಖಿಯಾ ಚೌಡಪ್ಪ ತಾನು ಕೂತಿದ್ದ ಚಪ್ಪಲಿ ಗೂಡಿನಿಂದ ನುಡಿದ.
“ಇರಬೌದು!” ಎಂದೆ ಆಸಕ್ತಿ ತೋರದೆ…
“ನೀನೂ ಅವ್ರ ಮೊಮ್ಮಗ್ನೂ ಗೆಣೆಕಾರರಂತೆ!” ಎಂದು ಸೊಟ್ಟ ಮೂತಿ ನಾಗಪ್ಪ ಬಗೆದ. ನನ್ನ ಪೂರ್ವಾಪರ ತಿಳಿದುಕೊಂಡೇ ಚರ್ಚೆಗೆ ಆರಂಭಿಸಿರುವರೆಂದು ಊಹಿಸಿದೆ. ಆಷ್ಟರಲ್ಲಿ ಗುರುವಪ್ಪ ಬಂದು ಒಂದು ಕಡೆ ಕೂತುಕೊಂಡ. ಅವನ ಆಗಮನದಿಂದ ನನಗೆ ಬಲಬಂದಂತಾಯಿತು.
“ಇರಬೌದು” ಎಂದೆ.
ಮತ್ತೆ ಅವರೆಲ್ಲ ಪರಸ್ಪರ ಮೂತಿ ನೋಡಿಕೊಂಡರು.
“ನಿಮ್ಮ ಗೆಣೆಕಾರ ಕೊತ್ತಲಗಿ ಬ್ಯಾಂಕಿನಾಗ ಅದಾನಂತೆ…” ಎಂದ ಸುರವತ್ತಿ ಸಿದ್ರಾಮಜ್ಜ.
“ಇರಬೌದು!” ಅಂದೆ…
“ಇರಬೌದಿರಬೌದಂದ್ರೆ ಹೆಂಗ ಮೇಸ್ಟ್ರೇ ಸೊಲೂಪ ಬುಡುಸಿಯ್ಯೋಳ್ರಲ್ಲ!” ಎಂದು ಪುರುಷೋತ್ತಮರೆಡ್ಡಿ ಕೂಕಂಡಲ್ಲಿಂದ ಘೀಂಕರಿಸಿದ.
ಅವರ ಉಡಾಫೆ ಪ್ರಶ್ನೆಗಳಿಂದ ಮೊದಲೇ ರೋಸಿದ್ದ ನಾನು –
“ಹಿಂಗೆಲ್ಲ ಸುತ್ತೀಬಳ್ಸ್ ಕೇಳಿ ಕೇಳಿ ನನ್‌ತಲೆ ತಿನ್‌ಬ್ಯಾಡ್ರಿ… ಅದೇನು ನಿಮ್ ಮನಸ್ನಲ್ಲೈತೋ ನೇರವಾಗಿ ಕೇಳಿಬಿಡ್ರಿ” ಎಂದು ಒಂದೇ ಏಟಿಗೆ ಅವರನ್ನು ಅವಕ್ಕಾಗಿಸಿದೆ.

ಮಾನಪ್ಪಚಾರಿಯೇ ಕೂಕಂಡಲ್ಲಿಂದ ಎದ್ದು ಬಂದು ಸುತ್ತಾನ್ನಾಕಡೆ ಪರೀಕ್ಷಾರ್ಥವಾಗಿ ನೋಡಿ ಗುಟ್ಟುರಟ್ಟಾಗಬಾರಲೆಂದು ಖಚಿತಪಡಿಸಿಕೊಂಡು ಒಂದು ಕ್ಷಣ ಕಣ್ಣುಮುಚ್ಚಿ ದೇವಿಕುರಿತು ಧೇನಿಸಿ ತೆರದ.
“ನೋಡಪ್ಪಾ ಮೇಸ್ಟ್ರೇ… ನೀನು ಮಾಡಿದ್ದೆಲ್ಲ ನಾವು ಹೊಟ್ಟೇಲಿ ಹಾಕ್ಕಂತಿವಿ… ನಾವು ಮಾಡಿರೋದೆಲ್ಲ ನೀನೂ ಹೊಟ್ಟೇಲಿ ಹಾಕ್ಕೊಂಡು ನಮ್ ಸಾವ್ಕಾರ್ರಿಗೆ ಒಂದ್ ಸಾಯ್ ಮಾಡ್ಬೇಕಪ್ಪಾ” ಎಂದ.
“ಆಯ್ತು…ಬಿಡ್ಸಿ ಹೇಳ್ರಿ?” ಅಂದೆ.
“ಈವ್ಯವಹಾರ ಬಲು ಸೂಕ್ಷ್ಮ ಐತೆ ಮೇಸ್ಟ್ರೇ… ನಿಮ್ಗೆ ಹೆಂಗ ಹೇಳ್ಬೇಕೋ ಅರ್ಥ ಅಗುವಲ್ದು… ನಮ್ಮ ಸಾವುಕಾರ್ರು ಜಗ್ನಾಥ್ರೆಡ್ಡಿ ಎಂಥೋರಂತ ನಿಮ್ಗೆ ಬಿಡಿಸಿ ಹೇಳಬ್ಕಾಗಿಲ್ಲ… ತಲೆಮಾರಿನಿಂದ ನಡೆದ ಮನ್ತನೆ… ಇವ್ರು ತಂದೆಯೋರು ಸೀತಾರಾಮ್ರೆಡ್ಡಿಯೋರು ಕೆಮ್ಮಿದ್ರೂಂದ್ರೆ ಊರಿಗೆ ಊರೇ ಗಪ್ಚಿಪ್… ಅವ್ರು ಸಾರೋಟನಾಗೆ ಬಂದ್ರೂ ಅಂದ್ರ ಮನುಷ್ಯರೊಂದೆ ಯಾಕೆ ನಾಯಿ ಬೆಕ್ಕು ಕೂಡ ಓಡಿ ತಲೆ ಮರೆಸ್ಕೊಂಡ್ತಿದ್ವೂಂದ್ರೆ ನೀವೇ ಲೆಕ್ಕ ಹಾಕಿ… ಇನ್ನಿವರ ತಾತ ಸರ್ದಾರ್ ಪಾಪಿರೆಡ್ಡಿಯವರಂತೂ ತಮ್ ಮೀಸೆಮ್ಯಾಲೆ ಮೂರ್ಮೂರುನಿಂಬೆ ಹಣ್ಣು ಕುಂದ್ರಿಸುತ್ತಿದ್ರು… ಅವ್ರು ಇಪ್ಪತ್ತೂರ್ನ ಆಳ್ತಿದ್ದಿದ್ನ ನೋಇ ಕುಂಪಿಣಿ ಸರಕಾರ ಮೂಗಿನ ಮೇಲೆ ಬೆರಳಿಟ್ಟ್ಕೊಂಡ್ತು ಅಂದ್ರೆ ನೀವೇ ಲೆಕ್ಕ ಹಾಕ್ರಿ… ಎಡಗೈಲಿ ತಗಂತಿದ್ರು ಬಲಗೈಲಿ ಕೊಡ್ತಿದ್ರು. ಎಷ್ಟ್ ಜನ್ರ ತಲೆ ಕಡಿಸಿದ್ರು ಏನ್ಕಥೆ?…”

ರಾಘಪ್ಪ ಮುಂದೇನೋ ಹೇಳ್ಬೇಕೆಂದಿರುವಾಗ ರೆಡ್ಡಿ ಕೆಮ್ಮಿ ಮಾತು ದಾರಿ ತಪ್ದಿದೆ ಎಂದು ಸೂಚಿಸಿದರು.
“ಆ ಕಾಲಾನೇ ಹಂಗಿತ್ತು… ನೀವ್ ನೋಡ್ರಿ… ಗೋಡೆ ಮೇಲೆ ಹೆಂಗದಾರೆ…” ಎಂದು ಒಂದೊಂದು ಸ್ಥಿರ ಚಿತ್ರಗಳ ಪರಿಚಯ ಮಾಡಿಕೊಟ್ಟ.
ನಾನು ಕೂತಿದ್ದ ಕುರ್ಚಿಗೆ ಮುಳ್ಳು ಮೂಡುತ್ತಿರುವಂತೆ ಭಾಸವಾಗಿ ಮಿಸುಕಾಡತೊಡಗಿದೆ.
ಅಷ್ಟರಲ್ಲಿ ನಪುಂಸಕಲಿಂಗಕ್ಕೆ ಹೆಸರಾಗಿದ್ದ ಶಿವಲಿಂಗಯ್ಯ ವಯ್ಯಾರದಿಂದ ಒಳಗಡೆ ಬಂದು ಎಲ್ಲರಿಗೂ ಕೊಟ್ಟ, ನನಗೂ ಸಹ.
ರೆಡ್ಡಿಯ ಸೂಚನೆಯಂತೆ ಮಾನಪ್ಪಾಚಾರಿ
“ಲೇ ಗುರುವ… ಪರಗುಣಿ ಮಾಗಿ ಹೊಲಕ್ಕೋಗಿ ಆಳುಗಳೇನೇನು ಮಾಡ್ತಾರನೋಡ್ಕೊಂಡ್ಬಾ ಹೋಗು” ಎಂದು ಹೇಳಿದ.
ಅವನೊಂಚೂರು ಮಿಸುಕಾಡಲಿಲ್ಲ.
“ಆತ ನಮ್ಮವ… ಇರ್ಲಿ… ನೀವು ಹೇಳೋದು ಹೇಳ್ರಿ ಪರವಯಿಲ್ಲ…”ಎಂದೆ.
ರಾಘಪ್ಪಾಚಾರಿ ಒಂದು ದಮ್ಮು ಬುಡ್ಡಾ ವಂಶಾವಳಿಯನ್ನು ವರ್ಣನೆ ಮಾಡಿ ಹೇಳಿದ್ದಾದ ಮೇಲೆ ಮುಖ್ಯ ವಿಷಯಕ್ಕೆ ಬಂದ.

ಬುಡ್ಡಾ ಜಗನ್ನಾಥರೆಡ್ಡಿಯವರಿಗೂ ತಂಗರಡೋಣಿ ತಮ್ಮಾರೆಡ್ಡಿಯವರಿಗೂ ತಲೆತಲೆ ಮಾರುಗಳಿಂದ ಇರುವ ದ್ವೇಶದ ಬಗ್ಗೆ, ತಮ್ಮಾರೆಡ್ಡಿಯ ಭಾವಮೈದುನ ತಿರುವೆಂಗಳರೆಡ್ಡಿ ಆಳುವ ಪಕ್ಷದ ಎಮ್ಮೆಲ್ಲೆಯಾಗಿರುವ ಬಗ್ಗೆ; ಅವನ ವಶೀಲಿಯಿಂದ ತಮ್ಮ ದೂರದ ಸಂಭಂದಿಯಾದ ರಾಮಕ್ರಿಷ್ಣಾರೆಡ್ಡಿ ಎಂಬ ಸಬ್‌ಇನ್ಸ್ಪೆಕ್ಟರನ್ನು ತಂದು ಕೂಡಿಸಿರುವ ಬಗ್ಗೆ; ಒಂದು ಚಿಕ್ಕ ಅಪರಾಧ ಸಿಕ್ಕರೆ ಸಾಕು ಜಗನ್ನಾಥರೆಡ್ಡಿಯನ್ನು ಅರೆಸ್ಟ್ ಮಾಡಿ ದರ ದರ ಎಳೆದೊಯ್ದು ಲಾಕಪ್ಪಿಗೆ ಕೂಡುವುದಾಗಿ ಆ ಎಸೈ ಶಪಥ ಮಾಡಿರುವ ಬಗ್ಗೆ, ದೊಡ್ಡ ಜಮೀನ್ದಾರರಾಗಿ ಜಗನ್ನಥರೆಡ್ಡಿ ಅಪರಾಧ ಮಾಡದೆ ಹೇಗೆ ಇರಲು ಸಾಧ್ಯ ಎಂಬ ಬಗ್ಗೆ; ತಮ್ಮಾರೆಡ್ಡಿ ಕರ್ನೂಲಿನಿಂದ ಐದುಮಂದಿ ಬಾಡಿಗೆ ಕೊಲೆಗಾರರನ್ನು ಕರೆಸಿ ಜಗನ್ನಾಥರೆಡ್ಡಿಯನ್ನು ಮುಗಿಸಲು ಸಂಚು ಮಾಡಿರುವ ಬಗ್ಗೆ ಎಲ್ಲವನ್ನು ಸೂರು ಕಡಿಮೆ ಮಾಡಿಕೊಂಡು ರಾಘಪ್ಪ ವರ್ಣನೆ ಮಾಡಿ ಹೇಳಿ ಮುಗಿಸಿದ.

ಜಗನ್ನಾಥರೆಡ್ಡಿ ತನ್ನ ಹೃದಯವೆಂಬ ಅಗ್ಗಿಷ್ಟಿಕೆಯಲ್ಲಿ ತಮ್ಮಾರೆಡ್ಡಿಯನ್ನು ಜೀವಂತ ದಹಿಸುತ್ತ ಉಸಿರಮೇಲೆ ಉಸಿರು ಬಿಟ್ಟ.
ವಾಗಿಲಿಯ ಬುಡ್ಡಾ ಕುಟುಂಬಕ್ಕೂ; ತಂಗರದೋಣಿ ಪೊಬ್ಬಾತ್ತಿ ಕುಟುಂಬಕ್ಕೂ ಎಣ್ಣೆ ಸೀಗೇಕಾಯಿ ಸಂಬಂಧವಿದೆ ಎಂದು ನನಗೆ ಗೊತ್ತಿತ್ತು.
ನಾನು ದೀರ್ಘಾವದಿ ರಜೆ ಮೇಲೆ ಊರಿಗೆ ಹೋಗಿದ್ದಾಗ ನಾನೇನಾದರೂ ತಂಗರದೋಣಿ ರೆಡ್ಡಿಯವರಿಂದ ಸಹಾಯ ಯಾಚಿಸಿರಬಹುದೇ ಎಂದು ಇವರು ತಮ್ಮ ಜವಾರಿ ಪತ್ತೆದಾರರಿಂದ ವಿವರ ತಿಳಿದುಕೊಂಡಿರುವುದೂ ಗೊತ್ತಿತ್ತು.

ರೆಡ್ಡಿ ಯಕಶ್ಚಿತ್ ಕೊಲೆಯೊಂದರ ಪಂಚನಾಮೆಗೆ ಹೆದರಿ ಬೀಗರೂರರ ಬಣವೆಯೊಳಗೆ ತಲೆ ಮರೆಸಿಕೊಂಡಿದ್ದಾಗ ಗುರವಪ್ಪ ಪಕಪಕ ನಗಾಡಿ ಇವನು ಇವನು ನಿಜವಾಗಿ ಸೀತಾರಾಮರೆಡ್ಡಿಗೆಹುಟ್ಟಿದವನಲ್ಲವೆಂದೂ, ಅವನ ತಾಯಿ ಅಗಸರ ಯಂಕೋಬಿಯನ್ನು ಇಟ್ಟುಕೊಂಡಿದ್ದಳೆಂದೂ ಹೇಳಿದ್ದು ನೆನಪಾಗಿ ತಲೆ ಎತ್ತಿ ಸೀತಾರಾಮರೆಡ್ಡಿಯವರ ಫೋಟೊದಲ್ಲಿ ಮಗ್ಗುಲಿದ್ದ ಮಧ್ಯವಯಸ್ಕ ಮಹಿಳೆಯ ಫೋಟೊ ಕಡೆ ನೋಡಿ ತಲೆ ತಗ್ಗಿಸಿದೆ.
ಜಗನ್ನಾಥರೆಡ್ಡಿಯವರಿಗೂ ತಮ್ಮ ಜನನದ ಪೂರ್ವಾಪರ ಇವನಿಗೆ ಗೊತ್ತಾಗಿರಬಹುದೇ? ಪ್ರಚಂಡ ಗುರುವನೇನಾದರೂ ಗುಟ್ಟು ಬಿಟ್ಟುಕೊಟ್ಟಿರಬಹುದೇ ಎಂದು ಯೋಚಿಸಿ ನಮ್ಮಿಬ್ಬರ ಕಡೆ ಒಮ್ಮೆ ನೋಡಿ ಮುಖದ ಬಿಗುವು ಸಡಲಿಸಿಕೊಂಡು ಮೆಲ್ಲಗೆ ಕೈ ಚಾಚಿ ನನ್ನ ಬೆನ್ನು ಸವರಿದ.
ಇದರಿಂದ ನನಗೆ ಒಂಥರಾ ಇರುಸು ಮುರುಸಾಯಿತು. “ಏನು ಮಾಡೋದಪ್ಪಾ… ನಿಮ್ಮಂಥ ಸಾಮಾನ್ಯ ಮನುಷ್ಯರಾಗಿ ಹುಟ್ಟಿದ್ರೆ ಇಂಥ ಸಮಸ್ಯೇನೇ ಇರ್ತಿರ್ಲಿಲ್ಲ… ಅದೂ ಅಲ್ದೆ ಈ ದೇಶಕ್ಕೆ ಸ್ವಾತಂತ್ರ ಬಂದು ಕೊಡಬಾರ್ದಕಷ್ಟ ಕೊಡ್ತಿದೆ. ಈ ಇಂದ್ರಾಗಾಂಧಿ ಎಂಭೋಳು ಸುಡುಗಾಡು ಕಾಯ್ದೆ ಮಾಡಿ ನಮ್ಮ ಹಿರೇರು ಸಂಪಾದಿಸಿದ ಭೂಮೀನೆಲ್ಲ ಕಿತ್ಕೊಳ್ಳೊಕೆ ಶುರು ಮಾಡ್ಯಾಳ… ನೀನೂ ನನ್ ಮಗ ಇದ್ದಂತೆ… ನನ್ ಯೋಗಕ್ಷೇಮ ಬಯಸೋದು ಕೂಡ ನಿನ್ ಕರ್ತವ್ಯ ತಾನೆ?” ಎಂದು ಮುಂತಾಗಿ ಆತ ಮಾತಾಡತೊಡಗಿದ್ದು ನನಗೆ ಆಶ್ಚರ್ಯವಾಯಿತು.

ಜಮೀನ್ದಾರಿ ವ್ಯವಸ್ತ್ಥೆಯ ತರಾವರಿ ನಡುವಳಿಕೆಗಳ ಬಗ್ಗೆ ಸದಾ ಅನುಮಾನ ಇಟ್ಟುಕೊಂಡಿರುವ ಮನುಷ್ಯನಾದ ನಾನು ನೀಚಸ್ಥಾನದಲ್ಲಿ ಕುಳಿತಿದ್ದವರ ಕಡೆ ಒಮ್ಮೆ ನೋಡಿದೆ. ಅವರೆಲ್ಲ ವಿಶೇಷ ವಿಧೇಯತೆ ತುಳುಕಿಸುತ್ತ ಕೂಕಂದಿದ್ದರು.
ಮಾನಪ್ಪಾಚಾರಿ ಮೆಲ್ಲಗೆ ಮುಖ ತಿರುವಿ “ಸಾಹುಕಾರ್ರು ಹೇಳೆದು ಖರೇವು ಮೇಸ್ಟ್ರೇ. ಸತ್ಯವನ್ನು ನುಂಗ್ಲಿಕ್ಕಾಗ್ದೆ ಉಗುಳಿಕ್ಕಾಗ್ದೆ ಒದ್ದಾಡೋದ್ರ ಬಗ್ಗೆ ನೀನಾಗಲೀ, ನೀವಾಗ್ಲೀ ತಪ್ ತಿಳಿಬಾರ್ದು ನೋಡು…” ದ್ವನಿ ಸ್ವಲ್ಪ ತಗ್ಗಿಸಿ “ಆ ತಮ್ಮಾರೆಡ್ಡಿ ಎಂಥ ನೀಚ ಅದಾನ ಗೊತ್ತಾ ಮೇಸ್ಟ್ರೇ?”… ಕರನುಲಿನ ಆ ನಾಕುಮಂದಿಯಿಂದ ಉಳ್ಕೊಂಡ್ರೆ ಮಾಟ ಮಾಡಿಸಿಯಾದ್ರು ಮುಗಿಸ್ಬೇಕಂತ ಉಯ್ಯಲವಾಡದಿಂದ ಮಂತ್ರ ಮಾಡೊರ್ನ ಕರೆಸ್ಯಾನಂತೆ… ಆಯ್ತವಾರ ಅಮಾಸೆ ಬಂದಿತ್ತು ನೋಡು… ಅವತ್ರಾತ್ರಿ ಸುಡುಗಾದ್ನಾಗೆ ಅವ್ರೆಲ್ಲ ಏನೇನೋ ಮಾಡಿದ್ರಂತೆ… ಸಾಹ್ಕಾರ್ರ ಗೊಂಬಿ ಮಾಡಿ ಇಲ್ಲೆಲ್ಲೋ ಉಗಿದಿಟ್ಟಾರ. ಅದೆಲ್ಲಿ ಎಂಬುದೇ ತಿಳಿವಲ್ದು?” ಎಂದು ತಲೆ ಕೆರೆದುಕೊಂಡ.
ರಾಘಪ್ಪ ತಾನೇನು ಕಡಿಮೆ ಎಂಬಂತೆ ಎದ್ದು ನಿಂತು ಸುತ್ತ ಒಮ್ಮೆ ನೋಡಿದನು. “ನಿಮ್ಮೂರಲ್ಲಿ ಪರಮೇಶ್ವರ ಶಾಸ್ತ್ರಿಗಳೆಂಭೋರು ಅದಾರಂತಲ್ಲ…” ಎಂದು ಆತ ಹೇಳುತ್ತಲೆ ಮುಂದಿನದೆಲ್ಲ ಅರ್ಥವಾಗಿ ನೆಮ್ಮದಿ ಉಸಿರುಬಿಟ್ಟೆ.
ನನಗೆ ನಗಬೆಕೋ ಅಳಬೆಕೋ ತಿಳಿಯಲಿಲ್ಲ. ಅವರಿಗೆ ಶಾಸ್ತ್ರಿಗಳು ಲಕ್ವ ಹೊಡೆದು ಮಲಗಿದ್ದಾರೆಂಬ ಸಂಗತಿಯನ್ನು ಹೇಗೆ ಹೆಳುವುದು?
ಒಂದು ದಿನ ಹೋಗೋಣವೆಂದರು. ಆಗಲಿ ಎಂದೆ.

ಬೇಡ… ಅಡುಗೆ ಮಾಡಿಕೊಂಡಿದ್ದೀನೆಂದರೂ ರೆಡ್ಡಿಯವರು ಊಟ ಮಾಡೇ ಹೋಗುವಂತೆ ಬಲವಂತ ಮಾಡಲು ನನ್ನನ್ನು ಬಚ್ಚಲು ಮನೆಗೆ ಕರೆದೊಯ್ದರು. ಬಚ್ಚಲು ಮನೆ ಅಂದರೆಬಚ್ಚಲು ಮನೆಯದು. ಐವತ್ತು ಮಂದಿ ಏಕಕಾಲಕ್ಕೆ ಜಳಕ ಮಾದುವಷ್ತು ವಿಶಾಲವಾಗಿತ್ತು. ಸದಾ ಉರಿಯಾಡುತ್ತಿರುವ ಒಲೆ ಮೇಲೆ ಬಾವಿಯನ್ನು ಹೋಲುವ ಐದಾರು ತಂಬಿಗೆಗಳು.

ಶಿವ್ಲಿಂಗಯ್ಯ ವೈಯ್ಯಾರದಿಂದ ಬಂದು ಬಿಸಿನೀರಿಗೆ ತಂಣ್ನೀರು ಬೆರೆಸಿಕೊಡುತ್ತ “ನೀರು ಕಾದದ ಜಳಕ ಮಾಇ ಬಿಡ್ಬೇಕ್ರಿ… ದೊಡ್ಸಾವ್ಕಾರ್ರು ಒಂದೊಂದು ತಾಸು ಜಳಕ ಮಾಡ್ತಿದ್ದ್ರು… ನೀವೂ ಜಳಕಾ ಮಾಡ್ನೋಡ್ರಿ ಗಪ್ಪಂತ ನಿದ್ದೆ ಬಂದು ಬಿಡ್ತದೆ” ಎಂತು ಮುಂತಾಗಿ ಕೊರೆದ, ನಾನು ಕಿವಿಮೇಲೆ ಹಾಕ್ಕೊಳ್ದದೆ ಕೈ ಕಾಲು ಮುಖ ತೊಳೆದುಕೊಂಡು ಹೊರಗಡೆ ಬಂದೆ. ನನಗಾಗಿ ಕಾಯುತ್ತಿದ್ದ ಆಸ್ತಮಾ ರೋಗಿ ಪುರುಶೋತ್ತಮರೆಡ್ಡಿ ನನ್ನನ್ನು ಕರೆದೊಯ್ದು ಮನೆಯನ್ನೆಲ್ಲ ತೋರಿಸಿಕೊಂಡು ಬಂದ. ಬರುವ ಹೊತ್ತಿಗೆ ವಿಶಾಲವಾದ ಊತದ ಮನೆಯಲ್ಲಿ ಮಾನಪ್ಪ, ರಾಘಪ್ಪ ರೆಡ್ಡಿಯವರೇ ಮೊದಲಾದ ಇಪ್ಪತ್ತಾರು ಮಂದಿ ಊಟಕ್ಕೆ ಕೂತಿದ್ದರು. ಸೂಚನೆ ಮೇರೆಗೆ ನಾನು ರೆಡ್ಡಿಯವರ ಪಕ್ಕದಲ್ಲಿದ್ದ ಅಡ್ಡಣಿಗೆ ಮುಂದೆ ಕೂತುಕೊಂಡೆ. ತಮ್ಮೀ ಮನೆಯೊಳಗೆ ಆ ಕಾಲದಲ್ಲಿ ಅಷ್ಟು ಜನ ಉಂಬಿದ್ರು… ತಮ್ಮ ತಾನವರ ಕಾಲದಲ್ಲಿ ವಿಕ್ಟೋರಿಯಾ ರಾಣಿಯೇ ಊಟಕ್ಕೆ ಬರ್ತೀನಂತ ಹೇಳಿ ಕಳಿಸಿದ್ಲು… ಎಂದು ಮುಂತಾಗಿ ರೆಡ್ಡಿಯವರು ಹೇಳುತ್ತಿರುವಷ್ಟರಲ್ಲಿ ಊಟ ಬಡಿಸುವ ಪ್ರಕ್ರಿಯೆ ಆರಂಭವಾಯಿತು. ಗೌಡ್ರಿ ಮತ್ತಾಕೆಯ ಹೆಣ್ಣು ಮಕ್ಕಳು, ಗಂಡು ಮಕ್ಕಳು ಮೊಮ್ಮಕ್ಕಳು ತಲಾ ಒಂದೊಂದು ತಿನಿಸಿನ ಗುತ್ತಿಗೆ ಹಿಡಿದು ಬಡಿಸಲಾರಂಬಿಸಿದರು. ಊಟ ಮಾಡಿ ಮುಗಿಸುವ ಹೊತ್ತಿಗೆ ಅರ್ಧ ತಾಸು ಹಿಡಿಯಿತು. ನಂತರ ಹಣ್ಣು ಹಂಪಲು, ತಾಂಬೂಲ ಇತ್ಯಾದಿ ಸಮಾರಾಧನೆ.

ನಾನು ಹೊರಡುವುದಾಗಿ ಎದ್ದೆ… ಬೀಳ್ಕೊಡುತ್ತ ರೆಡ್ಡಿಯವರು “ನಾವು ಹೇಳಿದ್ನ ಮನಸ್ಸಿನಲ್ಲಿಟ್ಕೊಳ್ಳಪ್ಪಾ… ಆದಷ್ಟು ಬೇಗ ಕೊಟ್ಟೂರಿಗೆ ಹೋಗಿ ಶಾಸ್ತಿಗಳನ್ನು ಕಂಡು ಬಂದ್ರೆ ಒಳ್ಳೆಯದು” ಎಂದು ಹೇಳಿ ಬೀಳ್ಕೊಟ್ಟರು.

ಗುರಪ್ಪನೊಂದಿಗೆ ಹೊರಟ ನನ್ನ ಹಿಂದೆಯೇ ಅಷ್ಟು ದೂರದವರೆಗೆ ಬಂದ ಮಾನಪ್ಪ, ರಾಘಪ್ಪ “ನಿಮ್ಮಂಥ ಅದೃಷ್ಟವಂತ್ರು ಈ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ ಮೇಸ್ಟ್ರೇ” ಎಂದರು. ನಾನು ಯಾಕೆ ಅನ್ನಲು ರಾಘಪ್ಪ “ಜಗನ್ನಾಥರೆಡ್ಡಿಯವರ ಪಕ್ಕದಲ್ಲಿ ಕೂತುಕೊಂಡು ಊಟ ಮಾಡೋದೆಂದ್ರೆ ಸಾಮಾನ್ಯ ಸಂಗತಿಯೇ. ಎಂಥೆಂಥ ಕಲೆಕ್ಟರಿಗೇ ಇದು ಸಾಧ್ಯವಾಗಿಲ್ಲ. ಅಂಥದ್ರಲ್ಲಿ ನೀವು…” ಎಂದು ಮೆಚ್ಚಿಗೆ ವ್ಯಕ್ತಪಡಿಸಿದ.
“ಹೆಂಗಾರ ಮಾಡಿ ಆ ತಮ್ಮಾರೆಡ್ಡಿ ನೆಗ್ದು ಬೀಳೋ ಹಂಗ ಪರಮೇಶ್ವರ ಶಾಸ್ತ್ರಿಗಳಿಂದ ಮಾಟ ಮಾಡಿಸ್ಲೇ ಬೇಕಪ್ಪಾ ಮೇಸ್ಟ್ರೇ, ಉಂಡಿದ್ದು, ಹಾಲುಮುಟ್ಟಿ ಪ್ರಮಾಣ ಮಾಡ್ದಂಗೆ ಎಂಬೋದ್ನ ಮರಿಬ್ಯಾಡ.” ಎಂದು ಮಾನಪ್ಪಾಚಾರಿ ಕಿವಿಯಲ್ಲಿ ಪಿಸುಗುಟ್ಟಿದ.

ಅವರಿಬ್ಬರು ಕವಲು ದಾರಿಯಲ್ಲಿ ತಲಾ ಒಂದು ದಿಕ್ಕು ಆಯ್ದುಕೊಂಡು ಹೋದರು. ನನ್ನ ಜೊತೆಯಲ್ಲಿ ನಿರಮ್ಮಳವಾಗಿ ಹೆಜ್ಜೆ ಹಾಕುತ್ತಿದ್ದ ಗುರಪ್ಪ “ಈ ಪರಪಂಚ್ದಾಗ ಯಾರನ್ನಂಬಿದ್ರು ಓ ಯಿಬ್ರೂನ್ನ ಮಾತ್ರ ನಂಬಾರ್ದು ನೋಡ್ರಿ… ಇವರ್ನ ನಂಬ್ದೋರ್ಯಾರೂ ಉದ್ಧಾರಾಗಿಲ್ಲ…” ಎಂದು ಶುರು ಮಾಡಿದ, ರೆಡ್ಡಿ ಮಗ್ಗುಲ ಕೂತು ಉಂಡಿದ್ದು ಒಂದು ಪೂರ್ವ ಜನ್ಮದ ಸುಕೃತ ಎಂಬ ಮಾತಿಗೆ “ಸೂಳ್ಯಾಮಗ, ಮಾದಿಗ್ರು, ಬ್ಯಾಗೇರು ಮುಂಡೇರ ಸಂಗಾಟ ಒಂದೇ ತಟ್ಟೇಲಿ ಅವ ಉಂಭೋದು ಯಾರ್ಗಾರ ಗೊತ್ತಿಲ್ಲಾಂತ ತಿಳ್ಕೊಂಡಾವ…” ಎಂದು ಹೇಳುತ್ತ ಹೆಜ್ಜೆ ಹಾಕಿದ.

ಪರಮೇಶ್ವರ ಶಾಸ್ತ್ರಿಗಳ ಕೀರ್ತಿ ಇಷ್ಟು ದೂರದವರೆಗೆ ಹೇಗೆ ಹಬ್ಬಿತು ಎಂಬುದರ ಬಗ್ಗೆ ಶೋದಿಸಿದಾಗ ಪಾಮುಲಕುರ್ತಿಯ ಸಿದ್ದಾರೆಡ್ಡಿ ಬೊಮ್ಮಲಾಟಪಲ್ಲಿಯಲ್ಲಿ ತೊಗಲುಗೊಂಬೆ ಆಟದ ಉದ್ಘಾಟನೆಗೆಂದು ಹೋಗಿದ್ದಾಗ ಕುಂಟಲಗಿತ್ತಿ ದುರ್ಗಮ್ಮೋರು ಎಂಬಾಕೆಯ ಪರಿಚಯವಾಗಿ ತಮ್ಮೂರಾದ ಕೊತ್ತಲಗಿಯಲ್ಲಿ ಬಗೆಬಗೆಯ ಬೆಲೆವೆಣ್ಣುಗಳಿರುವುದರ ಸುಳಿವು ನೀಡಿ ಆಮಂತ್ರಿಸಿದಳಂತೆ… ಬೆನ್ನು ಭಾಗದಲ್ಲಿ ಮಾಯ ಹುಣ್ಣಿನಿಂದ ನರಳುತ್ತಿರುವ ಸಿದ್ದಾರೆಡ್ಡಿ ಒಂದು ಸುಂದರವಾದ ಬ್ರೀಫ್ ಕೇಸಿನೊಂದಿಗೆ ಕೊತ್ತಲಗಿಗೆ ಮರುದಿನವೇ ಪ್ರಯಾಣ ಬೆಳೆಸಿದನಂತೆ. ತನ್ನ ವಯಸ್ಸಿನ ಕಾಲುಭಾಗದಷ್ಟು ವಯಸ್ಸಿನ ಮತ್ತು ಅಭಿಮನ್ಯುವಿನ ಕಾಳಗದಲ್ಲಿ ಉತ್ತರೆ ಪಾತ್ರ ವಹಿಸುತ್ತ ಕಲಿಯುಗದ ಉತ್ತರೆ ಎಂದೇ ಖ್ಯಾತಳಾಗಿರುವ ರಂಗಮ್ಮ ರತಿಕ್ರೀಡೆಯ ಸಮಯದಲ್ಲಿ ರೆಡ್ಡಿಯ ಬೆನ್ನುದಡವುದಾಗ ಕೈಗೆ ಲೋಳೆಲೋಳೆಯಂಥದು ಹತ್ತಿ ಮುಖ ಕಿವಿಚಿಕೊಂದು ಸ್ರವಿಸುವುದನ್ನು ಪೂರ್ತಿ ನಿಲ್ಲಿಸಿ ಅನಾನುಕೂಲತೆಯನ್ನುಂಟು ಮಾಡಿದಳಂತೆ.
ಅಷ್ಟಿಷ್ಟಿದ್ದಾದ್ದಾನ್ನು ಇಷ್ಟು ಮಾಡಿಕೊಂಡು ಮನೆದೇವರಾದ ಚಿನ್ನೋಬಿಲದ ನರಸಿಂಹದೇವರ ನಾಮಸ್ಮರಣೆ ಮಾಡುತ್ತ ಅಂಗಳದ ಕಟ್ಟೆ ಮೇಲೆ ಬೋರಲು ಮಲಗಿದ್ದಾಗ ಹೆಣ್ಣು ನಾಯಿಯೊಂದು ದುಪ್ಪಟಿಯೊಳಗೆ ಮೂತಿ ತೂರಿಸಿ ಹುಣ್ಣು ನೆಕ್ಕ ತೊಡಗಿದಾಗ ದಿಗ್ಗನೆ ಎಚ್ಚರಗೊಂಡು ಲಬೋ ಲಬೋ ಬಾಯಿ ಬಡಿದುಕೊಂಡನಂತೆ. ಆಗ ಕೋಮಟಿಗರ ರಾಘವೇಂದ್ರಶೆಟ್ಟಿಯು ಡುಬ್ಬದ ಮೇಲೆ ಕಾಲು ಹಾಕಿಕೊಂಡು ಮಲಗಿದ್ದ ರಂಗಮ್ಮ ಎಡಪಾರ್ಶದ ಕೋಣೆಯಿಂದಲೂ; ಚಂದ್ರಶೀಲಾ ಮಿಲಿಟರಿ ಹೋಟಲ್ಲಿನ ವಿಠೋಬನ ಮೇಲೆ ರೊಟ್ಟಿ ಮುಗಚಿದಂತೆ ಮಲಗಿದ್ದ ಆಕೆಯ ತಾಯಿಯಾದ ವೆಂಕಮ್ಮನು ಬಲಪಾರ್ಶ್ವದ ಕೋಣೆಯಿಂದಲೂ, ಸ್ವತಂತ್ರ್ಯ ಹೋರಾಟಗಾರನೂ, ಗಾಂಧೀಜಿಯ ಚಿತಾಭಸ್ಮ ಸ್ಮಾರಕದ ರುವಾರಿಯೂ ಆದ ಕಸ್ತೂರೆಪ್ಪ ತೊಡೆ ಸಂಧಿಯೊಳಗೆ ಮುಖ ಹುದುಗಿಸಿಮಲಗಿದ್ದ ಆಕೆಯ ಅಜ್ಜಿಯಾದ ಬಸಮ್ಮನು ಮಾಳಿಗೆ ಮೇಲಿಂದ ದಡ ಬಡ ಇಳಿದುಬಂದು ವಾಸ್ತವ ಅರ್ಥ ಮಾಡಿಕೊಂಡು “ಅಯ್ಯೋ ಮೂಳ… ಆಂಧ್ರದೋನಾಗಿ ಈ ಹೆಣ್ನಾಯಿ ನೆಕ್ಕಿದ್ಕೆ ಹೆದ್ರಿ ಬಾಯಿ ಬಡ್ಕೊಳ್ಳೋದೇನು?” ಎಂದು ಉದ್ಗರಿಸಿದಳಂತೆ.

ಇದ್ಯಾವುದೋ ತಾಟಗಿತ್ತಿಯು ಮಾಡಿಸಿರಬಹುದಾದ ಮಾಟವೆಂದೇ ವರ್ಣಿಸಿ ಇದಕ್ಕೊಂದು ಪರಮೇಶ್ವರ ಶಾಸ್ತ್ರಿಗಳ ಕೈಯಿಂದ ಅಂತ್ರ ಕಟ್ಟಿಸಬೇಕೆಂದು ನಿರ್ಧರಿಸಿದರಂತೆ. ಬಂದ ಕೆಲವೇ ದಿನಗಳಲ್ಲಿ ಲಲಿತಕಲೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಶಾಮಣ್ಣನ ಸಹಾಯದಿಂದ ಶಾಸ್ತ್ರಿಗಳ ಕೈಯಿಂದ ಅಥವಾ ಅವರನ್ನೇ ಹೋಲುವ ಬೆಣ್ಣೆಹಳ್ಳಿ ಚಂಡ್ರಯ್ಯ ಶಾಸ್ತ್ರಿಗಳಿಂದ ಮಂತ್ರಿಸಿ, ತಂತ್ರಿಸಿ ಕಟ್ಟಿಸಿತಂದ ಅಂತ್ರವನ್ನು ಶಿಶ್ನಕ್ಕೆ ಬಡಿಯುವಂತೆ ಕಿಪ್ಪೊಟ್ಟೆ ಕೆಳಗಿನ ಬೆಳ್ಳಿ ಉಡುದಾರಕ್ಕೆ ಕಟ್ಟಿ ಲೋಬಾನದ ಹೊಗೆ ಹಾಕಿದರಂತೆ. ಎಂಟೇ ದಿನದಲ್ಲಿ ಹುಟ್ಟಿದಾರ್ಭ್ಯ ಬೆನ್ನ ತ್ವಚೆಯಲ್ಲಿ ಮನೆಮಾಡಿಕೊಂಡಿದ್ದ ಹುಣ್ಣು ಮಂಗಮಾಯವಾಯಿತಂತೆ.

ತಮ್ಮಾರೆಡ್ಡಿಯನ್ನು ಹಾಡುಹಗಲೆ ಮುನಸೋಬನ ಕೋರ್ಟು ಎದುರುಗಡೆ ಕಡಿದು ಚೆಲ್ಲಾಡುವಂಥ ಮಹಾನುಭಾವರಿಗಾಗಿ ಹುಡುಕಾಡುತ್ತ ಜಗನ್ನಾಥ ರೆಡ್ಡಿ ಪಾಮುಲಪರ್ತಿಗೆ ಹೋಗಿದ್ದಾಗ ಸಿದ್ದಾರೆಡ್ಡಿಯನ್ನು ಬೆನ್ನುಮೇಲಿದ್ದ ಹುಣ್ಣಿಸ್ಪರ್ಶಿಸಲು ತಡಕಾಡಿದರಂತೆ, ಆ ಜಾಗದಲ್ಲಿ ಆಸ್ಟ್ರೇಲಿಯಾ ಖಂಡದಷ್ಟು ಇದ್ದ ಮಾಯ್ದಜಾಗ ನೋಡಿ ಅಚ್ಚರಿ ಪ್ರಕಟಿಸಿದ ಈ ರೆದ್ದಿಯವರಿಗೆ ಆ ರೆಡ್ಡಿ ಇದಿಷ್ಟು ಕಥೆ ಹೇಳಿದನಂತೆ, ಹಾಗೆಯೇ ತಾನು ಅಲ್ಲಿದ್ದಷ್ಟು ದಿನ ಪರಮೇಶ್ವರ ಶಾಸ್ರ್ತಿಗಳ ಬಗ್ಗೆ ಕೇಳಿಕೊಂಡುಂಡ ಘಟನೆಗಳನ್ನೂ ಸಹ, ಅಲ್ಲಿಂದ ಬಂದಮೇಲೆ ತನ್ನ ಗುಪ್ತಚಾರರ ತಂದ ನೀದಿದ ವರದಿಗಳ ಆಧಾರದ ಮೇಲೆ ನಮ್ಮೂರಿನಲ್ಲಿ ಸ್ಥಾವರಲಿಂಗೋಪಾದಿಯಲ್ಲಿ ನೆಲೆಗೊಂಡಿರ್ವ ಮೇಸ್ಟ್ರೇ ಯೊಗಕ್ಷೇಮ ವಹಾಮ್ಯಂ, ಅಂತ್ರ ಮಾಡಿಸಿ ಕಟ್ಟಿಸಲಿಕ್ಕೆ ಅರ್ಹ ವ್ಯಕ್ತಿ ಎಂಬ ನಿರ್ಧಾರಕ್ಕೆ ಬಂದಿದ್ದಂತೆ, ಅಲ್ಲಿಂದ ಮರಳಿದ ಅವರ ಕೈಗೆ ಭಗಿನಿ ತುಂಬಿದ ಗಳಾಸನ್ನು ನೀಡುತ್ತ ರವುಡೂರು ಲಕ್ಷ್ಮಿ ರೆಡ್ಡಿ “ಆ ಮೇಸ್ತ್ರ ನಾಲಿಗೆ ತುಂಡು ಮಾಡಿ ಕರಗಲ್ಲಿಗೆ ನೈವೆದ್ಯ ಮಾಡಬೇಕೆಂದು ಹೇಳಿದನಂತೆ, “ಲೇ ಭೊಸೂಡಿಮಗ್ನೇ ಹಂಗೇನಾದ್ರು ಆ ಸೂಳ್ಯಾಮಗ್ನಿಗೆ ಮಾಡಿದ್ದೀ ಅಂದ್ರ ನಾವು ಊರಾಗೆರೋದು ಕಷ್ಟ ಆಗೀತು. ಈಗ್ನಿಂದೀಗ್ಲೆ ಹೋಗಿ ಅತಿಜಾಗ್ರತೆಯಿಂದ ಕರ್ಕೊಂಡು ಬಾ” ಎಂದು ಅಟ್ಟಿದನಂತೆ.

ನಾನು ಉಪ್ಪರಿಗೆ ಮನೇಲಿ ರೆಡ್ದಿಯವರ ಪಕ್ಕ ಕೂತು ಉಂಡು ಸತ್ಕಾರಗೊಂಡು ಬಂದನಂತರ ಒಂದೊಂದು ದಿನ ಒಂದೊಂದು ಅನುಭವವಾಯಿತು. ಕಾಟಿಗ್ರು ಮಂದಿ ಪೈಕಿ ಸುಂಕ, ಗಾದಿಗರೇ ಮೊದಲಾದವರು ಹೆಂಗೆ ಕೂಕಂಡಿದ್ರಿ… ಹೆಂಗೆ ಉಂಡ್ರಿ… ಯ್ಯೋನ್ಯೋನುಂಡ್ರಿ? ಸಾವ್ಕಾರ್ಗೆ ಎಲೆ ಅದ್ಕೆ ಮಡ್ಚಿ ಕೊಟ್ಳಂತೆ ಖರೇವಾ ಎಂಬಿವೇ ಮೊದಲಾದ ಪ್ರಶ್ನೆಗಳನ್ನು ಕೇಳುವವರೆ? ಇಷ್ಟಕ್ಕೆ ಇಷ್ಟು ಪುಲಕಿತಗೋಳ್ಳುವ ಮಂದಿ ಇನ್ನು ತಾನೇನಾದರೂ ದಸರೆಗೆ ಮೈಸೂರಿಗೆ ಹೋಗಿ ಹತ್ತು ಸಾವಿರ ರೂಪಾಯಿ ಫೀಜು ತೆತ್ತು ಯುವರಾಜರು ನಡೆಸುವ ದಾವತ್ತಿನಲ್ಲಿ ಕೂತು ಕೂಳು ತಿಂದೆನೆಂದರೆ ಇನ್ನೆಷ್ಟು ಸಂಭ್ರಮ ಪಡುವರೋ? ಎಂದುಕೊಂಡೆ.

ಅವತ್ತಿನಿಂದ ನಾನು ನನ್ನ ಕೈಯಾರ ಶುದ್ಧ ಅಡುಗೆ ಮಾಡಿಕೊಂಡು ಉಂಬಲಾಗಲಿಲ್ಲ. ಉಪ್ಪರಿಗೆ ಮನೆಯಿಂದ ಒಂದು ಹೊತ್ತು ಶಿವ್ಲಿಂಗ ಊಟ ತಂದು ಕೊಡುವುದು! ಇನ್ನೊಂದು ಹೊಟ್ಟು ಗೌಡರ ಮಗಳು ಮೈನೆರೆದು ಹದಿನಾರು ವರ್ಷ ದಾಟಿರುವ ಪುಷ್ಪಾವಾತಿ ಆಳುಗಳಿಂದ ಊಟ ಹೊರಿಸಿಕೊಂಡು ಬರುವುದು, ಹೆಂಗೆ ಸಲಿಗೆ ಬೆಳೆದು ಕನ್ನಡದ ತ್ರಿವೇಣಿಯವರ ತೆಲುಗು ಅನುವಾದಿತ ಕಾದಂಬರಿಯಾದ “ವೆಂಡಿಮಬ್ಬುಲು” (ಬೆಳ್ಳಿಮೋಡ) ಇಸಿದುಕೊಂಡು ಹೋಗಿ ಒಂದೇ ರಾತ್ರಿಗೆ ಒಂದೇ ಏಟಿಗೆ ಓದಿ ಮುಗಿಸಿಕೊಂಡು ಬೆಳೆಗ್ಗೆ ತಂದುಕೊಟ್ಟು ಮತ್ತ್ಯಾವುದಾರ?… ಎಂದು ರಾಗ ತೆಗೆದಳು… ಯುದ್ದನಪೂಡಿಸುಲೋಚನಾರಾಣಿಯ ಕಾದಂಬರಿಗಳನ್ನೆಲವನ್ನು ಓದಿ ಮುಗಿಸಿರುವುದಾಗಿಯೂ, ತಾನು ಅಲ್ಪಸ್ವಲ್ಪ ಕೂಚಿಪುಡಿ ಅಭ್ಯಾಸ ಮಾಡಿರುವುದಾಗಿ ಹೇಳಿಕೊಳ್ಳುವಷ್ಟರಮಟ್ಟಿಗೆ ಸಲಿಗೆ ಬೆಳೆಸಿದಳು. ನನಗಿಂತ ನಾಲ್ಕೈದು ವರ್ಷ ಹಿರಿಯಳ್ಳೆನ್ನಬಹುದಾದ ಆಕೆ ಹೆಚ್ಚು ತನ್ನ ವಕ್ಷ ಸ್ಥಳ ತೋರಿಸುತ್ತ, ನಾನು ಮಹಾ ಸಭ್ಯಸ್ಥನಂತೆ ಕದ್ದು ಮುಚ್ಚಿ ನೋಡಿದಾಗ ರೋಮಾಂಚನಗೊಳ್ಳುತ್ತ “ನಮ್ಮಪ್ಪ ಒಳ್ಳೆಯವರಲ್ಲ… ಎಲ್ಲಿಗಾದ್ರು, ಓಡಿಹೋಗೋಣವೇನು?” ಎಂದು ಇದ್ದಕ್ಕಿದ್ದಂತೆ ಕೇಳಿಬಿಟ್ಟಳು. ನಾನು ‘ಹ್ಹಾಂ’ ಎಂದು ಆಶ್ಚರ್ಯ ಪ್ರಕಟಿಸಿದಾಗ “ಸುಮ್ನೆ ಜೋಕ್ ಮಾಡ್ದೆ… ತಪ್ಪು ತಿಳ್ಕೋಬೇದ್ರಿ” ಎಂದು ಮುಂಗೈ ಅದುಮಿದಳು. ಮರು ದಿನ ಆಕೆಯ ಆಮಂತ್ರಣದ ಮೇರೆಗೆ ಅವರ ಬಿಳಿಜೋಳದ ಹೊಲದ ಕಡೆ ಹೊರಡಬೇಕೆಂದಿದ್ದಾಗ “ಗುರಪ್ಪ ನಿಮ್ಗೆ ಬುದ್ಧಿ ಐತೋ ಇಲ್ವೋ” ಎಂದು ತಡೆದ. ಆಕೆ ಮಾತುಕಟ್ಟಿಕೊಂಡೇನಾದರೂ ಹೋಗಿದ್ದಲ್ಲಿ ಪಾಕಶಾಸ್ತ್ರ ಪ್ರವೀಣ ಶಿವ್ಲಿಂಗಯ್ಯಗೆ ಆದ ಗತಿಯೇ ನನಗೂ ಆಗುತ್ತಿತ್ತು ಎಂಬುದರಲ್ಲಿ ಸಂದೇಹವಿರಲಿಲ್ಲ. ಅನಂತರ ನನಗೆ ಪುಷ್ಪಾವತಿಯ ಮುಖಾರವಿಂದ ಗೋಚರಿಸಲಿಲ್ಲ ಎಂಬುದು ಬಿಡಿಸಿ ಹೇಳಬೇಕಾಗಿಲ್ಲ.

ಗುರುವಾರದಂದು ಚಾವಡಿ ಕಟ್ಟೆ ಮೇಲಿದ್ದ ಜಗನ್ನಥರೆಡ್ಡಿಯವವರು ಸ್ಕೂಲಿನಲ್ಲಿ ಐದನೆ ತರಗತಿ ಮಕ್ಕಳಿಗೆ ದೊಡ್ಡ ಮಗ್ಗಿ ಕಲಿಸುತ್ತಿದ್ದ ನನ್ನ ಕರೆಯಿಸಿಕೊಂದು “ನೀವು ಹಿಂಗ ಹೋಗ್ರಿ… ನಾವು ಹಂಗೆ ಬರ್ತೀವಿ. ನಾವು ಪಾರ್ಟಿ ಮನುಷ್ಯೋರು… ಒಂದ್‌ಹೋಗಿ ಒಂದು ಆಗ್ಬಾರ್ಧು… ಹೋಗಿ ಮುಂಗಡ ಕಂಡು ಪರಮೇಶ್ವರ ಶಾಸ್ತ್ರಿಗಳಿಗೆ ನಮ್ಮ ಬಗ್ಗೆ ಒಂದ್ಮಾತು ಹೆಚ್ಗೇ ಹೇಳಿಟ್ಟಿರ್ರಿ…” ಎಂದು ಹೇಳಿದರು. ತಾಂಬೂಲದೊಂದಿಗೆ ಉತ್ತರ ಭಾರತದ ಪರಿಷ್ಕೃತ ಹೊಗೆಸೊಪ್ಪಿನ ಸೇವನೆಯನ್ನು ಅಭ್ಯಾಸ ಮಾಡಿಕೊಂಡಿದ್ದ ಅವರು ಎರಡು ಬಾರಿ ಎರಡು ದಿಕ್ಕಿಗೆ ಉಗುಳಿ ‘ಹೋಬ್ಬ’ ಎಂದು ಡೇಗಿದರು. ಅದು ಸದರೀ ಗ್ರಾಮಕ್ಕೆಲ್ಲ ಕೇಳಿಸಿತು. ಕಾಟಿಗ್ರ ಮಕ್ಕಳುಮರಿ ರೋಮಾಂಚನಗೊಂಡವು.

ಅಂದುಕೊಂಡ ದಿನ ನಾನು ದೊಗಳೆಚೀಲ ಹೆಗಲೇರಿಸಿ ಹೊಂಟಾಗ ಹಾದಿ ನಡುವೆ ಕರಿಸಿದ್ದೇಶ್ವರನ ಕಟ್ಟೆಗೆ ವಿಶೇಶ ಪೂಜೆ ಸಲ್ಲಿಸಲು ಬಂದಿದ್ದ ಪುಷ್ಪಾವತಿ ಪ್ರಸಾದ ಕೊಡುವ ನೆಪದಲ್ಲಿ ನನ್ನ ತುರುಬಿ “ಜ್ವಾಳದ ಹೊಲಕ್ಕೆ ಬರ್ಲಿಕ್ಕಾಗದಿದ್ರೆ ನವಣೆ ಹೊಲಕ್ಕೆ ಬರಬಹುದಿತ್ತು” ಎಂದು ಗೊಣಗಿದಳು. ಕೊಬ್ಬರಿಯ ಒಂದು ತುಂಡನ್ನು ಕೈಲಿಡುತ್ತ “ಯಾವ ಅಂತ್ರ ಕಟಿಸಿದ್ರೂ ನಮ್ಮಪ್ಪ ಉಳಿಯೋದು ಕಷ್ಟ ಇದರಲ್ಲಿ ತಮ್ಮಾರೆಡ್ಡಿದೇನು ತಪ್ಪಿಲ್ಲ, ಒಬ್ಬ ಹೆಂಡರನ್ನ ಇನ್ನೊಬ್ರು ಮುಟ್ಟಿದ್ರೆ ಯಾರು ಸುಮ್ಕಿರ್ತಾರೆ ಹೇಳು? ನಮ್ಮಪ್ಪ ಸತ್ರೆ ನನ್‌ಮದ್ವೆ ಆದ್ರು ಆಗತೈತೆ… ಯಾರ ಜೊತೆಗಂತೀಯಾ? ಅದೇ ತಮಾರೆಡ್ಡಿ ಮಗನ ಕಥೆ ಕಾದಂಬರಿ ಮನುಷ್ಯನಾದ ನಿಂಗೆ ಗೊತ್ತಿರ್ಲಿ ಅಂತ ಹೇಳ್ದೆ ಅಷ್ಟೆ” ಎಂದು ತೆಲಂಗಾಣದ ಶೈಲಿಯ ತೆಲುಗಿನಲ್ಲಿ ಗುನುಗುಟ್ಟಿದಳು.
ಒಂದು ಹುತ್ತದಲ್ಲಿ ಎಷ್ಟೊಂದು ನಮೂನಿ ಹಾವುಗಳು! ನನಗೆ ಒಂದು ಕ್ಷಣ ಕಾಲಲ್ಲಿ ನಡುಕ ಹುಟ್ಟಿತು. ಶ್ರೀಕಾಕುಳಂ ಅದಿಲಾಬಾದ್ ಕರೀಂನಗರದ ಕಡೆಯ ಕಾದಂಬರಿಗಳ ಪಾತ್ರಗಳು ವಲಸೆ ಬಂದು ವಾಗಿಲಿ ಗ್ರಾಮದಲ್ಲಿ ತಲೆಮರೆಸಿಕೊಂದಿವೆ ಎನ್ನಿಸಿತು. ಒಂದೊಂದು ವ್ಯಕ್ತಿಯೊಳಗಿಂದ ಆಯಾ ಪಾತ್ರಗಳನ್ನು ಬೇರ್ಪಡಿಸಿ ಅವುಗಳನ್ನು ಅವುಗಳ ಮೂಲ ಸ್ವರೂಪ ಕೊಟ್ಟು ಓದುವ ಚೌಕಟ್ಟಿನ ಕಾರ್ಯಕ್ಷೇತ್ರಕ್ಕೆ ಓಡಿಸಬೇಕೆನ್ನಿಸಿತು. ಒಬ್ಬೊಬ್ಬ ವ್ಯಕ್ತಿಯಲ್ಲಿ ಒಂದೊಂದು ಸನ್ನಿವೇಶಕ್ಕೆ ಅನುಗುಣವಾಗಿ ಪ್ರಕಟವಾಗುವ ಪ್ರತಿಕ್ರಿಯಿಸುವ ಪಾತ್ರಗಳು ಒಂದೇ ಎರಡೇ! ಇದು ಆಗದ ಮಾತು ಎಂದುಕೊಂಡು ಕುರುಕಂದಿ ನಾಗಿಯ ಬೈತಲೆಯಂತೆ ಉದ್ದೋಕೆ ಬಿದ್ದಿದ್ದ ಹಾದಿ ಕಡೆ ನೋಡಿ ನಿಟ್ಟುಸಿರುಬಿಟ್ಟೆ.
*
*
*
“ಅಯ್ಯೋ ಬಂದೇನಪ್ಪಾ… ನನ್ಮೊಗ್ನೇ… ಅಂತೂ ಬಂದೆಲ್ಲ… ಒಂದು ಪತ್ತುರ ಗಿತ್ತುರನಾರ ಅಕಾಕಗೇನಾಗಿತ್ತಂತೀನಿ… ಹಂಗ ಸೆಟಗಳ್ಳಾಕೆ ನಾವು ಮಾಡಿರೋದಾದ್ರೇನಂತ?…” ಎಂದು ಮುಂತಾಗಿ ಮನೆಯೊಳಗೆ ಕಾಲಿಡುತ್ತಲೆ ನಂಗಮ್ಮಜ್ಜಿ ಪ್ರವರ ಆರಂಭಿಸಿತು. “ನೀನೋದ್ಮೇಲೆ ನಾವು ಅನುಭೊಗಿಸಿದ್ದು ಒಂದೇ ಯಲ್ಡೇ… ಅಲಲಲಲಾ… ನಿಮ್ಮಪ್ಪೆಂಭೋನದಾನಾವ್ನೂ… ಜೀವನ್ದಾಗ ಒಂದೇ ಒಂದ್ಸಾರಿ ದೇವ್ರಿಗೆ ಕಯ್ಯೆತ್ತಿ ಮುಗಿದಿದ್ದ ನಿಮ್ಮಪ್ಪ ತನ್ ಸೂಳೆ ಚಿಮಣಿ ಅರಕೆ ಬೇಡ್ಕೊಂಡಿದ್ಲೂಂತ… ಗಜಪ್ರದಾಗ ಈಸೂರ ದೇವರ್ಗುಡಿ ಕಟ್ಟಿಸಿದಾನಲ್ಲೋ… ಮನಿ ಯಿರೇಮಗ್ನಾಗಿ ನೀನವ್ನ ಕೊಳ್ಳಪಟ್ಟಿ ಹಿಡ್ದು ಹಿಂಗಲ್ಲ ಹಂಗ ಅಂತ ಕೇಳ್ದೆ ವಾಗ್ಲೀಲಿಗೆ ವೋಗಿಬುಟ್ಟೆಲ್ಲಾ… ನೀನೊಂದು ಗಂಡ್ಸೇನು?…” ಎಂದು ಮುನುಸೋಬನಧರ ಕೈಕುಟ್ಟಿ ಕುಟ್ಟಿ ಹೇಳುತ್ತಿರಲು,

ಮಣಕದ ಕೆಚ್ಚಲು ತುರಿಸುತ್ತ ಅದಕ್ಕೆ ರೋಮಾಂಚನ ಮಾಡುತ್ತಿದ್ದ ಅದರ ತಂಗಿ ಸಿದ್ದಮ್ಮಜ್ಜಿ ಚಿಟಿಕೆಯಲ್ಲಿ ಉಣ್ಣೆ ಹಿಡಿದುಕೊಂಡೇ ಬಂದು “ಅಲಲಲಾ ಅದೇನು ಬಾಯಿ ಕೊಟ್ಟಾನ ಆ ದೇವ್ರು ನಿಂಗೆ ಅಂತೀನಿ… ಆತ ಬರೋದೊಂದೇ ತಡ ಓಣಿಗೆಲ್ಲ ಕೆಳಿಸೋಂಗ ಸುರುವು ಮಾಡಿಬಿಟ್ಟೆಲ್ಲ ರಾಮಾಯಣಾನ… ನನ್ನಳಿಯಬೇಕಾದ್ದು ಮಾಡ್ತಾನ… ಅದ್ನೆಲ್ಲ ಯಾಕೆ ಆ ಹುಡುಗನ್ತಲೆ ತುಂತೀ ಅಂತ, ಯಂಗಿದ್ದೀ ಏನ್ಲಥೀಂತ ಕೇಳಿದ್ರೆ ಸೈಯವ್ವಾ…” ಎಂದು ಕ್ರಾಸ್ ಕ್ವಶ್ಚೆನ್ನು ಹಾಕಲು…

ಅದರ ಅಕ್ಕ, ನಿಂಗಮ್ಮಜ್ಜಿ ಬದ್ಧ ಭ್ರುಕುಟಿಯಾಗಿ ಕುಪ್ಪಳಿಸಿ ಎದೆಗೆ ಎದೆಯಾನಿಸಿ ನಿಂತುಕೊಂಡು “ಯ್ಯೋನಲೇ ಸಿದ್ದೀ… ನೀನೇ ಬಲು ಹಡದಾಕಿ ಅನ್ನಂಗೆ ಮಾತಾಡ್ತೀಯಲ್ಲ… ನನ್ನೊಟ್ಯಾಗೂ ಒಂದ್ಮಗು ಆಗಿದ್ರೆ ಹಿಂಗ ಮಾತಾಡ್ತಿದ್ಯಾ?… ಮಯ್ಯಿ ನೆರೆಯೋಕೂ ಮೊದ್ಲೆ ಗಂಡಂಭೋನು ನೆಗ್ದು ಬೀಳ್ದಿದ್ರೆ ನಾನು ಒಂದ್ಯಾಕ ಹತ್ತಡೀತ್ತಿದ್ನೆ ಭೇ ಹತ್ತು…” ಎಂದು ಹೇಳುತ್ತ ನನ್ನ ಕಡೆ ತಿರುಗಿ, “ಯ್ಯೋನಲೋ… ನಾನೇನು ನಿಂಗೆ ಕಡೇಲಕಿ ಆದಿನ್ಯಾ…ನೀನು ಮಲಿತಿಂಬುವಾಗ ತೊಡೆ ಮೇಲಿಂದ ಕೆಳಕ್ಕಿಸ್ತಿರಲಿಲ್ಲವೋ… ತುಪ್ಪದಾಗ ಉತ್ತುತ್ತಿ ಹಣ್ ತೇದು ಡಬರಿ ಡಬರಿ ನೆಕ್ಕಿಸ್ತಿದ್ನೆಲ್ಲೋ… ಹ್ಹಾಂ ಅಂದಬಾಯಿ ಮುಚ್ತಿರ್ಲಿಲ್ಲ ನೀನು… ತೊಟ್ಲಾಗ ಹಾಕಿ ರಟ್ಟೆ ಅಂಬೋದು ಬೀಳೋ ಮಟ ಬೆಳ್ಳಂಬೆಳಗು ತೂಗುತಿದ್ನೆಲ್ಲೋ… ಅದೆಲ್ಲ ಮಾಡ್ದೇ ನೀನಿಷ್ಟಿದ್ಯೋನು ಅಷ್ಟೆತ್ತರಾದ್ಯಾ!” ಎಂದು ಭೂತಕಾಲ ಎಂಬ ತಿಪ್ಪೆಯನ್ನು ಕೆದರಲು; ಸಿದ್ದಮ್ಮಜ್ಜಿ “ಸೈ ಬಿಡವ್ವಾ… ಕಾಲುಕೆದ್ರಿ ಜಗಳಾ ತೆಗೆಯಾಕೆ ಏನಾದ್ರಂತಿ… ಅದ್ನೇನು ನಾವೆಲ್ಲ ಅಂತೀವಾ.. ಇನ್ನೂ ಹುಡ್ಗ ಮಕಾ ತೊಳ್ಕೊಂಡು ಒಂದ್ಕಪ್ಪು ಕಾಪಿ ಕುಡಿಯಾಕೆ ಗತಿಯಿಲ್ಲ.. ಆಗ್ಲೆ ಸುರುವು ಮಾಡ್ದೆಲ್ಲ.. ಇದು ತಪ್ಪಂದ್ವಿ… ಅದು ಬಿಟ್ಟು…”ಎಂದು ಮುಂದೇನೋ ಹೇಳುತ್ತಿರಲು…
ನಿಂಗಮ್ಮಜ್ಜಿ ಕಣ್ಣೊರೆಸಿಕೊಳ್ಳುತ್ತ; ಸೆರಗಿನಿಂದ ಎದೆಯ ಮೆಲೆ ಗಾಳಿ ಹಾಕಿಕೊಳ್ಳುತ್ತ; ಸಿಂಬಳ ಸೀದು ಮಾರು ದೂರ ಎಸೆಯುತ್ತ… “ಎಲವೋ ಕುಂಟಲಗಿತ್ತಿ ಸಿದ್ದೀ… ಬಾಯಿ ಮುಚ್ಚಲೇ, ಬಾಯಿ ಮುಚ್ಚು… ನಾನುರ್ಲು ಹಾಕ್ಕೊಂಡು ಸಾಯ್ತೀನಿ… ಅದೆಂಗ ಬದುಕ್ತೀರೋ ಬದುಕ್ರಿ” ಎಂದು ಹಗ್ಗ ಹುಡುಕಲು ಒಳಗಡೆ ಹೋಗಿ ನಗಂದಿ ಕಡೆ ಕೈ ಚಾಚಿತು.

ಸಿದ್ದಮ್ಮಜ್ಜಿ ಅದನ್ನು ತಡೆದು “ನೀನ್ಯಾಕ ಸಾಯ್ತಿಯವ್ವಾ… ದಿಕ್ಕು ದೆಸೆ ಇಲ್ದೋರು… ನಾವು ಸಾಯ್ತೀವಿ… ಕೂಳಿಗೆ ಭಿದ್ದಿರೋದ್ರಿಂದ್ಲಲ್ಲ ನೀನಂಗ ಮಾತಾಡ್ತಿರೋದು… ನನ್ಗಂಡೆಂಭೋನು ಪೀಲೇಗು ಬಂದು ನೆಗ್ದು ಬೀಳ್ದಿದ್ರೆ ನಾವು ಎಲ್ಲರಂಗೆ ರೆಟ್ಟಿಮುರ್ದು ದುಡ್ಡು ಉಂಬ್ತಿದ್ವಿ…ಆ ದೇವ್ರು ಆವಾಗ್ಲೆ ನಮ್ಮನ್ನೆಲ್ಲ ತಿಂದು ತೇಗ್ಬಾರ್ದಾಗಿತ್ತೆ… ಅಯ್ಯಯ್ಯೋ ಮಕ್ಳುಮರಿ ಕಟ್ಕೊಂಡು ಏಟೊಂದ ವನ್ವಾಸ ಪಟ್ನೇ ಅವ್ವಾ… ಎತ್ತಿನ ಬೂದಾಳಾಗ ಹೆಂಗೋ ಕೂಲಿನಾಲಿ ಮಾಡ್ಕೊಂಡು ಹೊಟ್ಟೆ ಹೊರೀತಿದ್ನೋಳ್ನ ನೀನೇ ಅಲ್ಲ ಕರ್ಕೊಂದು ಬಂದು ಮನೇಲಿಟ್ಕಂಡಿದ್ದು… ನಮ್ಮ ಪಾಡಿಗೆ ನಾವು ಇದ್ದಿದ್ದ್ರೆ ನೀನ್ಯಾಕೆ ಹಿಂಗ ಅಂಗಿಸ್ತಿದ್ದೀ… ಅಯ್ಯಯ್ಯೋ… ಎಂದು ಸುಡ್ಗಾಡಿಗಿಕ್ತೀಯಪ್ಪಾ ಸಿವ್ನೇ… ಅನಬಾರ್ದು ಅನ್ನಿಸ್ಕೊಂದು ಭೂಮಿಗೆ ಭಾರಾಗಿ ಇನ್ನೂ ಬುದುಕ್ಬೇಕಾ… ಎಂಥೆಂಥೋರ್ಗೆ ಆ ಸಿವ ಸಾವು ಕೊಡ್ತಾನೆ. ನನ್ನನ್ನು ಕೂಡ್ಲೀಗಿ ರೋಡ್ಗೆ ಕರ್ಕೊಂಡೋಗುವಲ್ಲ…” ಎಂದು ಮುಂತಾಗಿ ನಸೀಬ ಹಳಿಯುತ್ತ ಕುಕ್ಕುರುಗಾಲೀಲೀಲೆ ಕೂತು ಮೂಗು ಕಂಣಿಂದ ಒಂದೇಸಮನೆ ಹಳ್ಳ ತೆಗೆಯುತ್ತ ಅಳತೊಡಗಿದಳು.

ನಮ್ಮ ದೊಡ್ಡವ್ವ ಇಂಥದೆಲ್ಲ ಮಾಮೂಲೆಂಬಂತೆ ತನ್ನ ಪಾಡಿಗೆ ತಾನು ನೀರು ತರುತ್ತಿದ್ದಾಕಿ ನನ್ನನ್ನು ಬಚ್ಚಲಿಗೆ ಕಳುವಿ ಒಲೆ ಮುಂದೆ ಚಾ ಡಬರಿ ಇಟ್ಟಳು.
ಅಷ್ಟರಲ್ಲಿ ನಿಂಗಮ್ಮಜ್ಜಿ ತನ್ನ ತಂಗಿ ಸಿದ್ದಮ್ಮಜ್ಜಿಯನ್ನು ಬಗೆಬಗೆಯ ಮಾತುಗಳಿಂದ ರಮಿಸಿ ಒಂದು ಹದಕ್ಕೆ ತಂದಿತು. ನೋಡುನೋಡುವಷ್ಟರಲ್ಲಿ ಆ ‘ಅಪೂರ್ವ ಸೋದರಿಂಗಳ್’ ಕುಲುಕುಲು ನಗುತ್ತ ಒಂದಾಗಿ ಆಕೆಗೆ ಈಕೆ ತೊಂಬಲ ಕುಟ್ಟಿಕೊಟ್ಟಳು. ಈಕೆಗೆ ಆಕೆ ತೊಂಬಲ ಕುಟ್ಟಿಕೊಟ್ಟಳು. ಅವರು ಗುದ್ದಾಡುವುದಾಗಲೀ; ಒಂದಾಗುದಾಗಲೀ ತಡವಾಗುತ್ತಿರಲಿಲ್ಲ. ಅವರು ಜಗಳವಾಡುವರೆಂದರೆ ಅದು ಓಣಿಯ ಸೌಭಾಗ್ಯವೆಂದೇ ಓಣಿಯ ಜನರು ಭಾವಿಸುತ್ತಿದ್ದರು. ಅವರೀರ್ವರ ಜಗಳ ಬಿಡಿಸಲೆಂದೇ ಹೋಗಿದ್ದ ಸಣ್ಣಿ ನಿಂಗಮ್ಮಜ್ಜಿಯ ಆಜನ್ಮ ಶತ್ರುವಾಗಿ ರೂಪಗೊಂಡಿದ್ದುದು ಇತಿಹಾಸದ ಬಹು ದೊಡ್ಡ ವ್ಯಂಗವೇ ಸರಿ.

ಸಿದ್ದಮ್ಮಜ್ಜಿ ತಂದು ಕೊಟ್ಟ ಕಾಫಿ ಕುಡಿದಾದ ಮೇಲೆ-ಸಮಶೀತೋಷ್ಣವಲಯದಂತಾಗಿ ತಾನು ಕಂಡ ಕನಸಿನ ಟಾಪಿಕ್ಕು ಎತ್ತಿಕೊಂಡಳು- “ನೀನೋಗಿದ್ದೇ ವೋಗಿದ್ದು… ನಿನ್ನಕಡೀಕೆ ಬಲು ದ್ಯಾಸ ಆಗಿಬಿಟ್ತಪ್ಪೋ… ಹೊಟ್ಟ್ಯಾಗ ಒಂದ್ನಮೂನಿ ಸಂಕಟ ಆಗಲಿಕ್ಕತ್ತು ಕಣಪ್ಪಾ… ನೀನು ನಗಿಚಾಟಕಿ ಅನ್ಕೋಬೌದಪ್ಪ, ಎತ್ತಿ ಬೆಳಿಸ್ದ ಒಡ್ಲು ಕನಪ್ಪಾ… ಎತ್ತಿ ಆಡಿಸಿದ ಕಯ್ಯಿವು… ನೀನು ಸುಳ್ಳೇಳಿದ್ರು ಕೇಳ್ತಿ… ಖರೇನೇಳಿದ್ರೂ ಕೇಳ್ತಿ… ಕಣ್ರೆಪ್ಪೀಗ್ರೆಪ್ಪಿ ಅಂಟಿಸಿಲ್ಲ… ಮಕ್ಕಂಡ್ವೀಂದ್ರ ಕಣಸಿನ ಮ್ಯಾಲೆ ಕಣಸು… ಒಂದೊಂದು ಕಣಸಿನಾಗ ನೀನೊಂದೊಂದು ರೂಪ ಪಡಕೋತ್ತಿದ್ದಿ… ಅಯ್ಯಯ್ಯೋ… ಈನಾಲಿಗಿಂದ ಅದೆಂಗ ಹೇಳ್ನಲ್ಲಪ್ಪ?… ಮೇರಾಲಮು ಬಸ್ಸಿಗೆ ಹೆಣ ಏರ್ಕೊಂಡು ಬಂದ್ರು… ಹಿಂದೊಂದಾರು ಮಂದಿ …ಮುಂದೊಂದ್ನಾರು ಮಂದಿ ಆತಗೋತ ಬಂದ್ರು… ನೀನು ನಗು ನಗ್ತಾ ಸತ್ತೋದವರಂಗೆ ಮಲಕ್ಕೊಂಡಿದ್ದೀ… ಅಯ್ಯೊ ಮೊಮ್ಮಗ್ನೇ ನಮ್ಮನ್ನ ನಡೋ ನೀರ್ನಾಗೆ ಬಿಟ್ಟೊಂಟೋದ್ಯಾ… ಅಂತ ನಾನು ಚೀರಿಕೊಂಡಿದ್ಕೆ ಎಲ್ರೂ ಎಚ್ಚರಾಗಿ ಓಡಿಬಂದ್ರು… ಏನೇನು ಅಂತ ಕೇಳಿದ್ರು ಎಲ್ಲ ಹೇಳ್ಬಿಟ್ಟೆ… ಕನಸಿನಾಗ ಸತ್ರ ಒಳ್ಳಿದಾಗ್ತದ ತಗಾ ಅಂತ ಸಂಬಯ್ನೋರು ಹೇಳಿದ್ರು… ಯಾಕಿದ್ದೀತಪ್ಪಾ?… ಕಾಲ ಸುಮಾರೈತೆ… ನಮ್ಮನ್ಯಾವಾಗ ಆ ಸಿವಾ ಸುಡುಗಾಡಾಗ ಇಕ್ತಾನೋ ಹೇಳ್ಲಿಕ್ಕೆ ಬರೋದಿಲ್ಲ… ನಿಮ್ಮ ಗಾಳೆಪ್ಪ ಮಾವನ ಮಗ್ಳೂನ ಮದ್ವಿ ಆಗಿಬಿಡು… ಹತ್ತಾಳಿಗೆ ಅಡ್ಗೆ ಮಾಡಿ ರೊಟ್ಟಿ ಬುತ್ತಿ ಕಟ್ಟತೈತೆ ಅದು ಈ ವಯಸ್ಸಿಗೆ…” ಎಂದು ಆಡುತ್ತಿದ್ದ ಅದನ್ನು ಅದರ ಪಾಡಿಗೆ ಬಿಟ್ಟು ನಾನು ಶಾಮ ಪಾಲೀಷು ಮಾಡಿ ಅನಸೂಯಾಳ ಬೆಂಗಳೂರು ವಿಳಾಸ ಒಯ್ದಿರುವನೆನ್ನಲಾದ ಕೋಣೆಗೆ ಬಂದೆ… ಲೋಹಿಯಾರ ಕ್ಲಾಸ್ಟ್ ಸಿಸ್ತಂ ಪುಸ್ತಕದಲ್ಲಿ ಎರಿಕ್ ಫ್ರಾಮ್‌ರ ೧ದ ಆರ್ಟ್ ಆಫ್ ಲವ್ವಿಂಗ್’ ಪುಸ್ತಕದಲ್ಲಿ ಡ್ಶಾಂಗೇರ ಭಗವದ್ಗೀತೆ ಕುರಿತಂಥ ಪುಸ್ತಕದಲ್ಲಿ; ನನ್ನ ಹಲವು ಹಸ್ತಪ್ರತಿಗಳಲ್ಲಿ, ಅವರಿಂದ ಬಂದ ಪತ್ರಗಳಲ್ಲಿ… ನನ್ನ ಹ್ಯಾಪ್ ಮೋರೆ ಇರುವ ಸ್ಥಿರ ಚಿತ್ರಗಳಲ್ಲಿ, ಅಂಬೇಡ್ಕರ, ಶಂಕರಾಚಾರ್ಯರ ಫೋಟೋಗಳ ಹಿಂದುಗಡೆಯಲ್ಲಿ; ಪಂಚಾಂಗ ಜ್ಯೋತಿಷ್ಯವೇ ಮೊದಲಾದ ಪುಸ್ತಕಗಳಲ್ಲಿ, ಗೂಳೂರು ಸಿದ್ದೋಣ್ಣೊಡೆಯರ ಶೂನ್ಯ ಸಂಪಾದನೆ ತಾಳೆಗರಿ ಗ್ರಂಥದಲ್ಲಿ, ಹೀಗೆ ಎಲ್ಲೆಂದರಲ್ಲಿ ಹುಡುಕೀ ಹುಡುಕೀ ಸುಸ್ತಾದೆ. ಅದು ಸಿಗದಿರಲು ಜಲಜಾಕ್ಷಿ ಬರೆದಿರುವುದು ಸರೆ ಎಂದುಕೊಂಡೆ. ಶಾಮನ ಕೈಗೆ ಅದು ಸಿಕ್ಕಿರಬೇಕು? ಅದನ್ನು ತೆಗೆದುಕೊಂಡೊಯ್ದು ಅವನು ವರ್ತಮಾನದ ದುರ್ಬೀನಿನ ಮೂಲಕ ಭೂತಕಾಲವನ್ನು ಯಾವ ರೀತಿ ಪರಿಗ್ರಹಿಸಿರಬಹುದೆಂಬುದರ ಬಗ್ಗೆ ಕುತೋಹಲ ಮೇರೆ ಮೀರಿತು. ಇದಕ್ಕೆ ಪುಷ್ಟಿ ನೀಡುವಂತೆ ದೊಡ್ಡಪ್ಪ ಬಂದು ಅವರಿವರಿಂದ ಬಂದಿರುವ ಪತ್ರಗಳನ್ನು ನನ್ನ ಕೈಗೆ ಕೊಡುತ್ತ ಶಾಮಣ್ಣನು ಬಂದಿದ್ದ ಮತ್ತು ಅವನ ಮದುವೆ ಇಷ್ಟರಲ್ಲಿ ಇರುವ ಮತ್ತು ಜಲಜಾಕ್ಷಿ ತನ್ನ ಮಹಿಳಾ ಸಂಘಟನೆಯ ವೃದ್ಧ ಮಹಿಳೆಯರ ವಿಭಾಗದ ಮುಖ್ಯಸ್ಥೆಯನ್ನಾಗಿ ನಿಂಗಮ್ಮಜ್ಜಿಯನ್ನು ನೇಮಕ ಮಾಡಿರುವ ಇಂತಪ್ಪ ಅನೇಕ ಸಂಗತಿಗಳ ಬಗ್ಗೆ ಎರಡೇ ಮಾತಿನಲ್ಲಿ ಹೇಳಿ ಮುಗಿಸಿದಳು. ಆ ಧಿಮಾಕಿನಲ್ಲಿ ನಿಂಗಮ್ಮಜ್ಜಿ ತನ್ನ ನಾಲಿಗೆಯನ್ನು ಉದ್ದ ಮಾಡಿಕೊಂಡಿರುವುದಾಗಿ ಭಾವಿಸುತ್ತ ಬಂದಿದ್ದ ಕಾರ್ಡು ಅಂತರ್ದೇಶೀಯ ಪತ್ರ, ಲಕೋಟೆ, ಬುಕ್‌ಪೋಸ್ಟ್‌ಗಲನ್ನು ಒಂದೊಂದಾಗಿ ತಿರುವಿ ಹಾಕ ತೊಡಗಿದೆನು. ಚಂದ್ರಶೇಖರ ಪಾಟೀಲರು ಪುಕ್ಕಟೆ ಸಂಕ್ರಮಣ ಪತ್ರಿಕೆ ಓದುವುದು ಘೋರ ಪಾಪ, ಕೂಡಲೆ ಚಂದಾ ಸಂದಾಯ ಮಾಡಿ ಪುಣ್ಯವಂತರಾಗುವುದು ಎಂದೊಂದು ಕಾರ್ಡಿನಲ್ಲಿ ಬರೆದಿದ್ದಾರೆ, ಬಾಚಿಗೊಂಡನಹಳ್ಳಿಯ ವಿರೂಪಾಕ್ಷಗೌಡರು… ಖಡ್ಗದಲ್ಲಿ ಪ್ರಕಟವಾಗಿದ್ದ ನನ್ನ ಕೆಟ್ಟ ಕವಿತೆ ಓದಿ ನೀನು ಕೊಟ್ಟೂರಿನ ಕುಮಾರವ್ಯಾಸನೆಂದು ಹೆಸರಾಗುವ ದಿನ ದೂರವಿಲ್ಲವೆಂದು ಬರೆದಿದ್ದರು. ನಿಮ್ಮ ಕವಿತೆಗಳಿಗೆ ಮುನ್ನುಡಿ ಬರೆಯಲು ನಾನು ಮಾಡಿರುವ ಅಪರಾಧವಾದರೂ ಏನೂಂತ ಕಾಳೇಗೌಡರು ಬರೆದಿದ್ದರೆ ಮೈಸೂರಿನ ಪುಟ್ಟಸ್ವಾಮಿ ಎಂಬ ವಕೀಲರು ಕೂಡಲೆ ನೂರು ರೂಪಾಯಿ ಚಂದಾಕಟ್ಟಿ ತಮ್ಮ ಅಖಿಲ ಭಾರತ ಚುಟುಕು ಕಾವ್ಯ ಪರಿಷತ್ತಿನ ಮೆಂಬರಾಗಬೇಕೆಂದು ಬರೆದಿದ್ದರು. ನನಗೆ ಅನೇಕ ಪ್ರಣಯ ಪತ್ರಗಳನ್ನು ಬರೆದಿರುವ ಪಿ.ಯು.ಸಿ ಓದುತ್ತಿರುವ ವಿದ್ಯಾರ್ಥಿನಿಯಾದ ಕು. ಸರೋಜ ನೀನೇ ಯಾಕೆ ಆಗಿರಬಾರದು ಎಂದು ಮಂಗ್ಳೂರು ವಿಜಯ ಎಂಬ ಕ್ರಾಂತಿಕಾರಿ ಪತ್ರ ಬರೆದಿದ್ದರೆ ಕಾಳಮುದ್ದನದೊಡ್ಡಿಯಿಂದ ಸರಸ್ವತಿ ವರಪುತ್ರ ಎಂಬ ಕಾವ್ಯನಾಮದಿಂದ ಪ್ರಸಿದ್ಧನಾಗಿರುವ ಹಳೇಕೋಟೆ ದೊಡ್ಡೇಗೌಡರ ಶಿವರಾಮೇಗೌಡ ಎಂಬುವರು ‘ಮನುಕುಲದ ಮಹಾಕಾವ್ಯ’ ಎಂಬೊಂದು ಮಗ್ಗೀಪುಸ್ತಕ ಕಳಿಸಿದ್ದನು. ಸುಲೋಚನಾ ಎಂಬ ಹೆಸರಿನಲ್ಲಿ ಬಂದಿದ್ದ ಪ್ರೇಮಪತ್ರವನ್ನು ಧಾರವಾಡದ ಪೀಜಿ ಮೆನ್ಸ್ ಹಾಸ್ಟಲ್ಲಿನ ಗಂಡು ಹುಡುಗರೇ ಬರೆದಿರಬೇಕೆಂಬ ಸಂಶಯ ಕಾಡತೊಡಗಿತು. ಅಥವಾ ಪೋಸ್ ಮ್ಯಾನ್ ರಾಮಣ್ಣನ ಸಹಾಯದಿಂದ ಶಾಮನೇ ಬರೆದಿರಬೇಕೆಂಬ ಸಂದೇಹ ಕಾಡತೊಡಗಿತು. ವಾಗಿಲಿ ಜಗನ್ನಾಥ ರೆಡಿ ಎಂಬ ಜಮೀನ್ದಾರನೂ; ಡಾ.ಕಮಲಾಕರನೆಂಬ ಮಾಜಿ ನಕ್ಸಲೈಟನೂ ಎಂಬ ಶೀರ್ಷಿಕೆಯ ಅಡಿ ಬರೆದಿದ್ದ ಕಥೆ ಕಳಿಸಿದ್ದ ಪತ್ರಿಕೆಯಿಂದ ತಿರಸ್ಕೃತಗೊಂಡು ಮನೆಗೆ ಮುಟ್ಟುವ ಹಾದಿಯಲ್ಲಿ… ಖಡ್ಗ ಪತ್ರಿಕೆಯ ಸಂಪಾದಕನ ಕೈಗೆ ಎಟುಕಿಗೆ ಬಂದಿರಬಾರದೇಕೆ ಎಂಬ ಅನುಮಾನ ಕಾಡತೊಡಗಿತು. ಆ ಆರು ಹಾಳೆಯ ಗಾತ್ರದ ಪುಟ್ಟ ಕಥೆಯನ್ನು ಏಳು ಮಡಿಕೆ ಮಡಚಿ ಕಿಟ್ಟೆಲ್ ಡಿಕ್ಷನರಿ ಅಡಿ ತಳ್ಳಿದೆ. ಇದೆಲ್ಲ ನೋಡಿ ಆದ ಮೇಲೆ ಆ ಪತ್ರಗಳು ಸೃಷ್ಟಿಸಿದ ತಲ್ಲಣ ಅನುಭವಿಸುತ್ತಲೇ ಗಂಡಸಾದರೆ ನನ್ನ ಓಪನ್ ಮಾಡಿ ಓದಬಲ್ಲೆ ಏನು? ಎಂದು ಸವಾಲು ಹಾಕುವಂತೆ ಇಷ್ಟಗಲ; ಅಷ್ಟುದ್ದ ಬಿದ್ದುಕೊಂಡಿದ್ದ ಲಕೋಟೆಯನ್ನು ಬಹಳ ಹೊತ್ತಿನವರೆಗೆ ಮುಟ್ಟಬೇಕೆಂಬ ಭಾವನೆ ಬರಲೇ ಇಲ್ಲ. ಬೇರೆಯವರಿಗೆ ಬಂದ ಪತ್ರಗಳು ಒತ್ತಟ್ಟಿಗಿರಲಿ. ನನಗೆ ಬಂದ ಪತ್ರಗಳನ್ನು ನನಗೇ ಓದಲಿಕ್ಕೆ ಹಿಂದೆಗೆತ, ಒಂದೊಂದು ಪತ್ರ ವಿಶೇಷ ಅರ್ಥ ಪ್ರಕಟಿಸುತ್ತ ಹೋಗಿ ಅಸ್ವಸ್ಥತೆಯನ್ನು ಉದ್ದೀಪಿಸುತ್ತದೆ. ಯಾವ ಪುರುಷಾರ್ಥಕ್ಕೆ ನಾವು ಅಕ್ಷರ ಕಲಿಯಬೇಕಾಯಿತು.

ಅಚ್ಚ ಶೇಂಗಾ ಬೀಜದ ವರ್ಣದ ಆ ಲಕೋಟೆಯನ್ನು ಕೈಗೆತ್ತಿಕೊಂಡು ಅನುಭವಿ ಪೋಸ್ಟ್‌ಮಾಸ್ತರನ ಥರ ತೂಗಿ ನೋಡಿದೆ. ಬಹುಶಃ ಒಳಗಡೆ ಐದಾರಾದರೂ ಹಾಳೆಗಳಿರಬಹುದು? ವಿಳಾಸವನ್ನು ಬೇಕೆಂದೇ ಹಿಂದುಮುಂದು ಬರೆದಿರುವಂತಿದೆ. ಓಳಗಡೆ ಯಾವ ಗ್ರಹಚಾರ ತುಂಬಿಕೊಂಡಿರುವುದೋ? ಯಾಕಿದ್ದೀತು? ನೋಡದೆ ಇರುವುದೆ ಚಲೋ ಎಂದುಕೊಂಡು ಅದನ್ನು ಮೂಲೆಗೆಸೆದೆ.

ಕರ್ನೂಲಿನ ಪಾಪುಲರ್ ಷೂಸ್ ಮಾರ್ಟಿನಲ್ಲಿ ಕೊಂಡಿದ್ದ ಬ್ರಿಟಿಷರ ಕಾಲದಲ್ಲಿ ಅಂಚೆ ಪೇದೆಗಳು ಉಪಯೋಗಿಸುತ್ತಿದ್ದರೆನ್ನಲಾದ ಬೆಲ್ಟ್ ಚಪ್ಪಲಿಗಳನ್ನು ಮೆಟ್ಟಿಕೊಂಡು ಅಂಗಳಕ್ಕಿಳಿದು ಊರಮ್ಮನ ಬಯಲ ಕಡೆ ಹೆಜ್ಜೆ ಹಾಕಿದೆ. ಶಾಸ್ತ್ರಿಗಳ ಮನೆಗೆ ಹೋಗಿ ಅವರ ಕ್ಷೇಮ ಸಮಾಚಾರ ವಿಚಾರಿಸಬೇಕಿತ್ತು. ಹಾಗೆ ಬ್ಯಾಂಕಲ್ಲಿ ಉದ್ಯೋಗಿಯಾಗಿರುವ ಶಾಮನ ಬಗೆಗೂ ಸಹ. ಇನ್ನೇನು ಎಡಗಡೆ ಹೊರಳಬೇಕೆನ್ನುವಷ್ಟರಲ್ಲಿ ಅಚಾನಕ್ಕಾಗಿ ನನ್ನ ದೃಷ್ಟಿ ಹೆಂಚಿನ ಮನೆ ಕಡೆ ಹೋಯಿತು. ಕಟ್ಟೆ ಮೇಲೆ ಸಣ್ಣವ್ವ ನಶ್ಶೆಪುಡಿ ತಿಕ್ಕುತ್ತ ಕೂತಿದ್ದರೆ, ಆಕೆಯ ಮಗಳು ತನ್ನ ದುಂಡನೆಯ ಜಘನಗಳನ್ನು ಅತ್ತಿತ್ತ ಹೊರಳಾಡಿಸುತ್ತ ಕಸಗುಡಿಸುತ್ತಿದ್ದಳು. ಆಕೆಯ ದೃಷ್ಟಿ ಅಷ್ಟೇ ಅಚಾನಕ್ಕಾಗಿ ನನ್ನತ್ತ ಹೊರಳಿಬಿಟ್ಟಿತು. ಎಲ್ಲಿ ತನ್ನನ್ನು ಮಾತಾಡಿಸಿ ನಾನು ಕಂಡಿದ್ದ ಕನಸಿಗೆ ನನಸಿನ ವ್ಯಾಖ್ಯೆ ಬರೆಯುವಳೋ ಎಂದು ಅಳುಕಿನೊಂದಿಗೆ ಓದಲಾರದೆ ಬಿಟ್ಟುಬಂದಿದ್ದ ಲಕೋಟೆ ಓಪನ್ ಮಾಡಿ ಓದುವ ಆಸೆ ದ್ವಿಗುಣಗೊಂಡಿತು. ಆಕೆ ಏನಾದರೂ ಬಯ್ಕೊಳ್ಳೀ ಅಂತ ನಾನು ಮತ್ತೆ ಮನೆಗೆ ಹೋದೆ. ತಿಪ್ಪೇರುದ್ರಸ್ವಾಮಿಯಿಂದ ಅದೇ ತಾನೆ ಇಳಿದುಬಂದಿದ್ದ ನನ್ನ ತಂಗಿ ವೀರಮ್ಮ ತನ್ನ ಅತ್ತೆ ತನ್ನನ್ನು ಉರಿಸಿಕೊಂಡು ತಿನ್ನುತ್ತಿರುವ ಬಗ್ಗೆ ಮತ್ತು ಕೂಡಲೆ ಬಂದು ತೋಳ್ಬಲ ಝಳಪಿಸಿ ಆಕೆಯ ಬಾಯಿಯನ್ನು ಮುಚ್ಚುವಂತೆ ಮಾಡು ಎಂಬ ಬಗ್ಗೆ ವರಾತ ಶುರು ಮಾಡಿದಳು. ದೊಡ್ಡ ತುರುಬನ್ನು ಈ ಇಳಿವಯಸ್ಸಿನಲ್ಲಿ ವಿಶೇಷ ವಿನ್ಯಾಸದಿಂದ ಕಟ್ಟಿಕೊಳ್ಳುವ ಅತ್ತೆಯ ಮಗನಿಗೆ ತಂಗಿಯನ್ನು ಕೊಟ್ಟು ಮದುವೆ ಮಾಡಬೇಡವೆಂದು ನಾನು ನಮ್ಮಪ್ಪನಿಗೆ ಬಡಿದುಕೊಂಡಿದ್ದುಂಟು. ಮದುವೆಯಾದ ನಂತರವೂ ತಾಯಿಯ ಸೆರಗಿಗೆ ಜೋತು ಬೀಳುವ ಅಳಿಯ ಈ ಹತ್ತು ವರ್ಷದವಧಿಯಲ್ಲಿ ಒಮ್ಮೆಯೂ ಹೆಂಡತಿಯೊಡನೆ ಆತ್ಮಗೌರವದಿಂದ ವರ್ತಿಸುದುದಿಲ್ಲ. ಅಂಥವನನ್ನು ಕಟ್ಟಿಕೊಂಡ ಮೇಲೆ ತಾಪತ್ರಯ ಅನುಭವಿಸದೆ ಇರಲು ಸಾಧ್ಯವಿಲ್ಲ. ನನ್ನ ಮಾತುಗಳು ನಮ್ಮ ಕೌಟುಂಬಿಕ ಪರಿಸರದಲ್ಲಿ ಚಲಾವಣೆಯಾಗುವುದಿಲ್ಲಾಂತ ಗೊತ್ತು! ನಾನು ಏನು ಹೇಳುವುದು?

ನಾನು ಲಗುಬಗೆಯಿಂದ ಕೋಣೆಯೊಳಗೆ ನುಗ್ಗಿ ಮೂಲೆಯಲ್ಲಿ ಪ್ರಶ್ನಾರ್ಥಕ ಚಿನ್ಹೆ ಹೊತ್ತು ಬಿದ್ದಿದ್ದ ಲಕೋಟೆಯನ್ನು ಕೈಗೆತ್ತಿಕೊಂಡೆ! ಡವಡವ ಗುಡುವ ಎದೆಯೊಡನೆ ಅವಸರ ಬವಸರದಿಂದ ಓಪನ್ ಮಾಡಿದೆ. ನಿರೀಕ್ಷಿಸಿದಂತೆ ಐದಾರು ಹಾಳೆಗಳಿದ್ದವು. ಯಾರಾದರೂ ಉದಯೊನ್ಮುಖರು ಇನ್ನೊಬ್ಬ ನನ್ನಂಥ ಉದಯೊನ್ಮುಖರಿಗೆ ಓದಲಿಕ್ಕೆಂದು ಕಳಿಸಿದ ಕಥೆ ಇರಬಹುದೆಂದುಕೊಂಡಿದ್ದು ಬಿಚ್ಚಿ ನೋಡಿದೊಡನೆ ಸುಳ್ಳಾಯಿತು. ಒಂದು ಆಶ್ಚರ್ಯವೆಂದರೆ ಬೆಂಗಳೂರಿಂದ ಅನಸೂಯ ಬರೆದಿದ್ದ ಸುದೀರ್ಘ ಪತ್ರ ಅದಾಗಿತ್ತು. ಕಿಟಿಕಿ ಬಾಗಿಲು ಮುಚ್ಚಿ ಬೆಡ್ಲ್ಯಾಂಪ್ ಬೆಳಕಿನಲ್ಲಿ ಅದನ್ನು ಓದಲಾರಂಭಿಸಿದೆ.
ಪ್ರೀತಿಯ ಸಹೋದರ ಶ್ರೀಯುತ….ರವರಿಗೆ

ದೂರದ ಬೆಂಗಳೂರಿನಲ್ಲಿರುವ ನಾನು ನಿಮಗೆ ಅಷ್ಟು ಪರಿಚಯವಿಲ್ಲದಿದ್ದರೂ ಈ ಪತ್ರದ ಮೂಲಕ ನಮಸ್ಕರಿಸುತ್ತ ಕೆಲವು ವಿಷಯಗಳನ್ನು ಸಾದರಪಡಿಸಲಿಚ್ಛಿಸಿರುವೆ, ನಮ್ಮ ತಂದೆ ರುದ್ರನಾಯಕ (ಕಾನಾಲಿಯ ಪಾಳೆಗಾರರ ವಂಶದವರೆಂಬ ನೆಪಕ್ಕೆ ನಾಯಕ ಎಂಬ ವಿಶೇಷಣವನ್ನು ತನಗೆ ತಾನೆ ಹಚ್ಚಿಕೊಂಡಿದ್ದ. ಪ್ರಾಥಮಿಕ ಶಾಲೆಗೆ ಸೇರಿಸುವಾಗ ನನ್ನ ಹೆಸರಿನ ಉತ್ತರಾರ್ಧದಲ್ಲಿ ನಾಯಕ ಎಂದು ಸೇರಿಸಿದ್ದ. ಕಾಲ ಗತಿಸಿದಂತೆ ಅದು ನನ್ನ ಹೆಸರಿನಿಂದ ಉದುರಿ ಹೋಯಿತು. ಅದೊಂದು ದೊಡ್ಡ ಕಥೆ, ಮುಂದೆ ನೀವು ಕಥೆಗಾರರೆಂದು ಹೆಸರು ಮಾಡಿದಾಗ ಇಂಥ ವಿಶೇಷಣಗಳು ಉದುರಿ ಹೋಗುವ ಪ್ರಕ್ರಿಯೆ ಬಗ್ಗೆ ಸೃಜನಶೀಲವಾಗಿ ಯೋಚಿಸುವರಂತೆ) ಇದ್ದಕ್ಕಿದ್ದಂತೆ ಅಂತರ್ಧಾನವಾದದ್ದು ನಿಮಗೆ ಗೊತ್ತೇ ಇದೆ. ನನ್ನನ್ನು ಕಟ್ಟಿಕೊಂಡು ಏಗಿದ ನನ್ನ ತಾಯಿ ಅನೇಕ ಅಪಾದನೆಗಳ ನಡುವೆಯೂ ನನಗೆ ಶಿಕ್ಷಣದ ಸಂಸ್ಕಾರ ಕೊಟ್ಟು ದೊಡ್ಡವಳನ್ನಾಗಿ ಮಾಡಿದ್ದೂ ಒಂದು ದೊಡ್ಡ ಕಥೆಯೆ, ನೀವು ಕೋಡಿಹಳ್ಳಿಯಿಂದ ಕೊಟ್ಟೂರಿಗೆ ವಲಸೆ ಬರುವ ಮೊದಲೆ ನಾನು ಗೊಬ್ಬರದಂಗಡಿ ಜಲಜಾಕ್ಷಿ, ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗನಾದ ಶಾಮಾ ಪರಸ್ಪರ ಆಕರ್ಷಿತರಾದೆವೋ ದೇವರಿಗೇ ಗೊತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ನನಗೆ ಇಷ್ಟವಾದದ್ದು ಶಾಮನ ಮನೆ ಮಾಡಿಕೊಂಡಿದ್ದ ಸಂಕೋಚ, ಆಮೆಯಂತೆ ಅಂಗಾಂಗಗಳನ್ನು ಒಳಗೆ ಎಳೆದುಕೊಳ್ಳುವಂಥ ಮುದುಡು ಗುಣ, ತನ್ನ ಮನೆಯ ಸಾಂಪ್ರದಾಯಿಕ ವಾತಾವರಣದ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸುವಂತೆ ನಾನು ಅನೇಕ ರೀತಿಯ ಪ್ರೇರಣೆಗಳನ್ನು ನೀಡುತ್ತಿದ್ದುದು ಮಾತ್ರ ನಿಜ. ಅಂಥ ರೇಖೆಗಳ ಮೇಲೆ ಕಾಲು ಎತ್ತಿ ಇಟ್ಟು ಹಾಗೇ ಹಿಂದೆ ತೆಗೆದುಕೊಂಡು ಬಿಡುತ್ತಿದ್ದ. ಭುಜಕ್ಕೆ ತಗುಲಿಸಿಕೊಂಡು ಅಡ್ಡಾಡುತ್ತಿದ್ದುದೇ ಸಂಪೂರ್ಣ ಕ್ರಾಂತಿ ಎಂದು ತಿಳಿದುಕೊಂಡುಬಿಡುತ್ತಿದ್ದ. ಹಾಗೆ ಒಳಗೊಳಗೆ ಕೋಕಾ; ವಾತ್ಸಾಯನರೇ ಮುಂತಾದವರನ್ನು ಕಲ್ಪಿಸಿಕೊಂಡು ಗುಟ್ಟಾಗಿ ಸ್ಖಲಿಸುತ್ತಿದ್ದ ಎಂಬುದನ್ನು ನಾನು ಊಹಿಸುತ್ತಿದ್ದೆ. ಸಾಮೀಪ್ಯದಿಂದ ಸ್ಪರ್ಶ; ಸ್ಪರ್ಶದಿಂದ ಪಾಣಿಗ್ರಹಣ ಸಂಭವಿಸಿ ಮಹತ್ತರವಾದ ಬದಲಾವಣೆಗೆ ನಾವು ಕಾರಕರಾಗಬಹುದೆಂದುಕೊಂಡಿದ್ದೆವು. ಮುಖ್ಯವಾಗಿ ನಾನು, ವಾಲ್ಮೀಕಿ ರಾಮಾಯಣದಲ್ಲಿ ದಶರಥ ತನ್ನ ಪ್ರೀತಿಯ ಮಗ ರಾಮನಿಗೆ ಪಟ್ಟ ಕಟ್ಟಬೇಕೆಂದಾಗ ಮಂಥರೆ ಕೈಕೆಗೆ ಸನ್ನಿಕರ್ಷಾತ್ ಚ ಸೌಹಾರ್ದಂ ಜಾಯತೇ ಸ್ಥಾವರೇಷ್ಟಪಿ ಎಂಬೊಂದು ಅರ್ಥಪೂರ್ಣವಾದ ಮಾತೊಂದನ್ನು ಹೇಳುತ್ತಾಳೆ, ದಶರಥಗೆ ಸಾಮೀಪ್ಯವಿರುವ ರಾಮನ ಮೇಲೆ ಪ್ರೀತಿ ಇದ್ದಷ್ಟು ದೂರದ ಸೋದರ ಮಾವನ ಮನೆಯಲ್ಲಿರುವ ಭರತನ ಮೆಲೆ ಪ್ರೀತಿ ಇಲ್ಲಾಂತ. ಹತ್ತಿರದ ಮನೆಯವರಾದ ಶಾಮನ ಬಗ್ಗೆ ನನ್ನಲ್ಲಿ ಅದಾವ ಆಕರ್ಷಣೆ ಇತ್ತೋ? ಅವನು ಲಘುಸ್ಪರ್ಶಕ್ಕೆ ಸದರಿ ಹಾತೊರೆಯುತ್ತಿದೆನೇ ಹೊರತು ಪೂರ್ಣಪ್ರಮಾಣದ ಒಳಗೊಳ್ಳುವಿಕೆ ಬಗ್ಗೆ ಅವನೆಂದೂ ಹಾತೊರೆಯಲೇ ಇಲ್ಲ. ಅವನೊಳಗಿದ್ದ ಸಂಕೋಚ ಭೇದಿಸಲು ಜಲಜಾಕ್ಷಿ ಆತದ ಮೈದಾನದಲ್ಲಿ ಕೆಲವೊಮ್ಮೆ ಪ್ರಯತ್ನಿಸಿದ್ದುಂಟು. ಕದ್ದು ಮುಚ್ಚಿ ಸ್ಪರ್ಶಿಸಲು ಪ್ರಯತ್ನಿಸುವ ಮಾತು ಆಮೂಲಕ ತಾದ್ಯಾತ್ಮ ಹೊಂದುವ ಅವನ ಬಗ್ಗೆ ತಲೆಕೆಡಿಸೋ ಬೇಡ ಎಂದು ಆಕೆ ಅನೇಕ ಸಾರಿ ನನಗೆ ಪರಿಪರಿಯಾಗಿ ಹೇಳಿದ್ದುಂಟು. ಸ್ಪರ್ಶದ ಸವಲತ್ತುಗಳಿಂದ ವಂಚಿತರಾದವರ ಬಗ್ಗೆ ನನಗೆ ಮೊದಲಿಂದಲೂ ಒಂದು ರೀತಿಯ ಕುತೋಹಲ. ಯಾಕೆಂದರೆ ಈ ದೇಶದ ಹಣೆ ಬರಹವೇ ಅಂಥಾದ್ದು. ಈ ಸಮಾಜದಲ್ಲಿ ಯಾರಿಗೆ ಯಾರನ್ನು ಸ್ಪರ್ಶಿಸುವ ಅಧಿಕಾರವಿದೆ ಹೇಳಿ? ಕೇವಲ ಮುಟ್ಟಲಿಕ್ಕೆ ಪ್ರಯತ್ನಿಸುವವರನ್ನು ನಾವು ಅನೇಕ ಕಡೆ ನೋಡುತ್ತಲೇ ಇದ್ದೇವೆ. ಈ ದೃಷ್ಟಿಯಿಂದ ನನ್ನಂಥೋರು ಮೋಹಿನಿ ಭಸ್ಮಾಸುರ ಕಥೆಯನ್ನು ಅರ್ಥ ಮಾಡಿಕೊಳ್ಳುವುದೇ ಬೇರೆ ಥರ. ಇದಕ್ಕಿಂಥ ಹೆಚ್ಚಿನದೇನನ್ನೂ ಮಾಡಲು ಶಾಮನಿಗೆ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಅವನ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಲೇ ಹೋದೆ. ಕೊನೆಗೆ ನಾನು ಅಂದುಕೊಂಡಂತೆಯೇ ಆಯ್ತು. ಅವನು ನನಗೆ ಕೈಕೊಟ್ಟ ಎಂದು ಹೇಳುವ ಅಪರಾಧ ಮಾಡಲಾರೆ, ಎಲ್ಲ ಹೆಂಗಸರು ಹೊಟೆಕಿಚ್ಚು ಪದುವಂಥ ರಘು ಗಂಡನಾಗಿ ನನಗೆ ದೊರಕಿದ್ದಾನೆ. ಈ ದೂರದೂರಿನಲ್ಲಿ ನನ್ನನ್ನು ಸಾಧ್ಯವಾದಷ್ಟು ಸುಖವಾಗಿಡಲು ಪ್ರಯತ್ನಿಸುತ್ತಲೇ ಇದ್ದಾನೆ. ಗೃಹಕರ್ಮಗಳಿಗೆ ಅಗತ್ಯವಾದ ಎಲ್ಲ ಸವಲತ್ತುಗಳನ್ನು ನನಗೆ ಕಲ್ಪಿಸಿಕೊಟ್ಟಿದ್ದಾನೆ. ನನ್ನ ತಾಯಿಯೂ ಇಲ್ಲಿ ನಮ್ಮೊಂದಿಗಿದ್ದು ಮೊಮ್ಮಗನನ್ನೋ; ಮೊಮ್ಮಗಳನ್ನೋ ಎತ್ತಿಕೊಳ್ಳುವ ಸಂಭ್ರಮವನ್ನು ಪ್ರತಿ ತಿಂಗಳಿಗೊಮ್ಮೆ ಪ್ರಕಟಿಸುತ್ತಲೇ ಇದ್ದಾಳೆ, ರಘು ಇತ್ತೀಚೆಗೆ ನನ್ನ ಹೆಸರಿನಲ್ಲೇ ಒಂದು ಪುಟ್ಟ ಕೈಗಾರಿಕೆ ಸ್ಥಾಪಿಸಿದಾನೆ. ಒಂದು ಕಾಲದಲ್ಲಿ ಇವನೊಂದಿಗೆ ಎಡಪಂಥೀಯ ಚಟುವಟಿಕೆಯಲ್ಲಿದ್ದು ಈಗ ಬಲಪಂಥೀಯರಾಗಿ ಆಳುವ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಅನೇಕರು ಆರ್ಥಿಕ ಸಹಾಯ ಕೊಡಿಸಿ ಗೃಹ ಕೈಗಾರಿಕೆ ಗಟ್ಟಿಮುಟ್ಟಾಗುವಂತೆ ನೋಡಿಕೊಳ್ಳುತ್ತಿದ್ದ್ದಾರೆ. ಲೈಂಗಿಕ ಶಕ್ತಿ ಸಂವರ್ಧನೆಗೆ ಯಾವಾಗಲೂ ‘ರಅ’ ಬ್ರಾಂಡಿನ ಇನ್‌ಸ್ಟಾಂಟ್ ದೋಸೆ ಹಿಟ್ಟನ್ನೇ ಉಪಯೋಗಿಸಿ ಎಂಬ ಜಾಹಿರಾತು ದಕ್ಷಿಣ ಭಾರತದ ಎಲ್ಲ ನಿಯಮಿತ ಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದನ್ನು ನೀವು ನಾಳೆಯಿಂದ ಗಮನಿಸಬಹುದೆಂದು ಕೊಂಡಿರುವೆ. ಕೆಲವೇ ದಿನಗಳಲ್ಲಿ ಎಲ್ಲ ಪ್ರಮುಖ ನಗರಗಳಲ್ಲಿ ಅದರ ಹೋಲ್‌ಸೇಲ್ ಏಜೆಂಟ್ಸ್ ಹುಟ್ಟಿಕೊಂಡಿದ್ದಾರೆ. ಮುಖ್ಯವಾಗಿ ಮಧ್ಯಮ ವರ್ಗದವರನ್ನು ನಮ್ಮ ಕಂಪನಿಯ ದೋಸೆಹಿಟ್ಟು ಆಕರ್ಷಿಸುತ್ತಿರುವುದು ಹೆಚ್ಚಿರುವ ಬೇಡಿಕೆಯನ್ನು ನಿಭಾಯಿಸುವುದೇ ನಮಗೆ ಕಷ್ಟವಾಗಿದೆ. ರಾಜ್ಯ ಸರಕಾರದ ಆರೋಗ್ಯ ಖಾತೆಯ ಮಂತ್ರಿಗಳಾದ ತಿಂದಪ್ಪ ಮೆಣಸಿನಕಾಯಿಯವರ ಲೈಂಗಿಕ ಶಕ್ತಿ ಪಕ್ಷಾಂತರ ತಲೆ ನೋವಿನ ನಡುವೆ ಕಡಿಮೆಯಾಗಿತ್ತಂತೆ… ಅವರು ‘ರಅ’ ಬ್ರಾಂಡಿನ ದೋಸೆ ತಿಂದ ಮೇಲೆ ಸುಧಾರಿಸಿರುವುದಂತೆ. ಯಾವ ದೇಶದಲ್ಲಿ ಲೈಂಗಿಕ ಶಕ್ತಿ ಸಮತೋಲವಾಗಿರುವುದೋ ಆ ಸಮಾಜ ಆರೋಗ್ಯಕರವಾಗಿರುತ್ತದೆಂದೂ… ಸಮಾಜದ ಎಲ್ಲರೂ ಜಾತಿ, ಲಿಂಗ, ವಯಸ್ಸು ಪರಿಗಣನೆಗೆ ತೆಗೆದುಕೊಳ್ಳದೆ ‘ರಅ’ ಬ್ರಾಂಡಿನ ಮಸಾಲದೋಸೆಯನ್ನು ವಾರಕ್ಕೆ ಮೂರು ಬಾರಿಯಾದರೂ ಸೇವಿಸಲೇಬೇಕೆಂದೂ; ಇದಕ್ಕೆ ಅಗತ್ಯವಾದ ಅರ್ಥಿಕ ನೆರವನ್ನು ಸಬ್ಸಿಡಿಯೊಂದಿಗೆ ಸರಕಾರ ನೀಡುವುದೆಂದೂ ಫರ್ಮಾನ್ ಹೊರಡಿಸಿದಾರೆ ಎಂದು ಹೇಳಿದರೆ ನೀವು ನಗಬಹುದು., ನಗರದಲ್ಲಿರುವ ವಿಶ್ವವಿಖ್ಯಾತ ಲೈಂಗಿಕ ತಜ್ಞ್ದರಾದ ಡಾ. ಇಬ್ರಾಹಿಂ ಸೂದ್‌ರವರು ‘ರಅ’ ಬ್ರಾಂಡಿನ ದೋಸೆಹಿಟ್ಟನ್ನು ಪರೀಕ್ಷೆಗೊಳಪಡಿಸಿ ಲೈಂಗಿಕ ಶಕ್ತಿಯನ್ನು ಉದ್ದೀಪಿಸುವ ನಿಘೂಡ ವಸ್ತುಗಳು ಅದರಲ್ಲಿ ಅಡಕವಾಗಿರುವವೆಂದು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾ; ಪೂರ್ವ ಚೈನಾ ಮತ್ತು ದಕ್ಷಿಣ ಅಮೇರಿಕಾದ ಕಾಡುಗಳಲ್ಲಿ ದೊರಕುವ ಗಿಡಮೂಲಿಕೆಗಳನ್ನು ಬಳಸಿಕೊಂದು ದೋಸೆಹಿಟ್ಟನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ನಮ್ಮ ರಘು ಸೂದ್‌ರವರು ಏರ್ಪಡಿಸಿದ್ದ ಅಖಿಲ ಭಾರತ ಲೈಂಗಿಕ ತಜ್ಞ್ರರ ಸಮ್ಮೇಳನದಲ್ಲಿ ಒಂದೂವರೆ ತಾಸು ಭಾಷಣ ಮಾಡಿ ತಲೆದೂಗುವಂತೆ ಮಾಡಿದ್ದೊಂದು ಉಲ್ಲೇಖಾರ್ಹ ಸಂಗತಿ.

ಸಮ್ಮೇಳನದಲ್ಲಿ ನಮ್ಮ ದೋಸೆ ಹಿಟ್ಟನ್ನು ರಿಯಾಯಿತಿ ಬೆಲೆಯಲ್ಲಿ ವಿತರಿಸಲಾಯಿತು. ವೈದ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಅದನ್ನು ಕೊಂಡರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಅವರು ತಮ್ಮ ಮಖಗಳನ್ನು ಮತ್ತು ಅಭಿಪ್ರಾಯಗಳನ್ನು ಜಾಹಿರಾತು ಮತ್ತಿತರ ವ್ಯಾವಹಾರಿಕ ಸಂದರ್ಭಗಳಲ್ಲಿ ಧಾರಾಳವಾಗಿ ಬಳಸಿಕೊಳ್ಳಲು ನಮ್ಮ ಕಂಪನಿಗೆ ಪರವಾನಗಿ ಕೊಟ್ಟಿದ್ದಾರೆ. ಜಾತಿವಿನಾಶ, ವರ್ಗವಿನಾಶ ಕುರಿತಂಥ ಭೂಗತ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಸಾಕಷ್ಟು ಪಳಗಿರುವ ನಮ್ಮ ರಘುಗೆ ಎಲ್ಲರೂ; ಎಲ್ಲಾದ್ದೂ ಸುಲಭವಾಗಿ ನಿಲುಕುತ್ತದೆ. ನನ್ನ ಮದುವೆಯಾಗದಿದ್ದರೆ ಅವನು ಬಾಹ್ಯ ಮತ್ತು ವ್ಯಾವಹಾರಿಕ ಜಗತ್ತಿಗೆ ಕಾಣಿಸಿಕೊಳ್ಳುತ್ತಿರಲಿಲ್ಲವೆಂದರೂ ಸರಿಯೇ. ಅಂತರ್ಗತ ಮತ್ತು ಬಾಹಿರ್ಗತ ಜಗತ್ತುಗಳ ನಡುವೆ ಇರುವ ಸರಳ ರೇಖೆಯ ಮೇಲೆ ಅಂಗುಲು ಹುಳುವಿನಥರ ಮೈ ಹೊಸೆಯುತ್ತ ಇತ್ತಿಂದಿತ್ತ ಅತ್ತಿಂದಿತ್ತ ತೆವಳುತ್ತಲೇ ಇದ್ದು ಬಿಡುತ್ತಿದ್ದ ಎಂಬುದನ್ನು ನೆನಪಿಸಿಕೊಂದರೆ ನನಗೆ ಭಯವಾಗುತ್ತದೆ. ಇಂಥದೊಂದು ಉದ್ದಿಮೆ ಸ್ಥಾಪಿಸಲು ನಾನು ಯಾವ ಪ್ರೇರಣೆ ನೀಡಿದೆನೋ ಅರ್ಥವಾಗುತ್ತಿಲ್ಲ. ಸೂಡಿ, ಕೋಡಿ; ಚಾಡಿಯೇ ಮೊದಲಾದ ಮಠಗಳ ಮಠಾಧೀಶರ ಬಗ್ಗೆ ನಿನಗೆ ಗೊತ್ತಿರಲಿಕ್ಕೂ ಸಾಕು. ಈ ದೇಶದ ಯಾರೇ ಪ್ರಧಾನ ಮಂತ್ರಿ, ರಾಷ್ಟ್ರಪತಿಗಳು ನಮ್ಮ ರಾಜ್ಯಕ್ಕೆ ಬಂದಾಗಲೆಲ್ಲ ಈ ಮಠಗಳಿಗೆ ಹೋಗಿ ವಿಶೇಷ ಅರ್ಚನೆ ಮಾಡಿಸಿ ಸ್ವಾಮಿಗಳ ಆಶೀರ್ವಾದ ಪಡೆದು ಪುನೀತರಾಗುತಾರೆಂಬುದು ಸರ್ವವೇದ್ಯ ಸಂಗತಿ. ಇಂಥ ಪ್ರಭಾವಶಾಲಿ ಮಠದ ಸ್ವಾಮಿಗಳು ಒಂದು ಒಪ್ಪಂದಕ್ಕನುಗುಣವಾಗಿ ನಾಡಿನ ಪ್ರಸಿದ್ಧ ಇನ್‌ಸ್ಟಾಂಟ್ ಫುಡ್ ತಯಾರಿಕಾ ಕಂಪನಿಗಳಿಗೆ ಆಶೀರ್ವಾದದ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಚೆಟ್ನಿ, ಗುಲಬ್ ಜಾಮೂನು, ಪುಳಿಯೋಗರೆ ಬಿಸಿಬೇಳೆಬಾತಿವೇ ಮೊದಲಾದ ಮಿಕ್ಸುಗಳ ಉತ್ಪಾದನೆಗೆ ಅವರ ಬೆಂಬಲವಿದ್ದೇ ಇರುತ್ತದೆ. ನಮ್ಮ ರಘು ದೋಸೆ ಹಿಟ್ಟಿನ ಫಾರ್ಮುಲಾ ತಯಾರಿಸಿದ್ದಾನೆಂಬ ಸುಳಿವು ಸಿಗುತ್ತಲೆ ಪಟ್ಟಭದ್ರರು ತಂದ ಅಡ್ಡಿ ಆತಂಕಗಳು ಒಂದೇ ಎರಡೇ? ರಘುನಂಥ ಶೂದ್ರ ಮುಂಡೇದು ಇನ್ಸ್‌ಸ್ಟಾಂಟ್ ಫುಡ್ ಘಟಕ ಸ್ಥಾಪಿಸುವುದೆಂದರೇನು? ಎಂದು ಮಠಾಧೀಶರ ಬಳಿಗೆ ದೂರು ಒಯ್ದರಂತೆ.

ಆ ಶೂದ್ರ ಮುಂಡೇಗಂಡ ಬಂದರೆ ನಾವು ಯಾರೂ ಆಶೀರ್ವದಿಸಬಾರದೆಂದು ಅಖಿಲ ಕರ್ನಾಟಕ ಮಠಾಧೀಶರ ಸಂಘ (ರಿ) ತೀರ್ಮಾನಿಸಿತಂತೆ. ಹಾಗೆ ತೀರ್ಮಾನಿಸದಿದ್ದಲ್ಲಿ ನಮ್ಮ ರಘು ಈ ಉದ್ದಿಮೆಯಲ್ಲಿ ಯಶಸ್ಸು ಸಾಧಿಸುತ್ತಿರಲಿಲ್ಲ. ಲೈಂಗಿಕ ಸಮಸ್ಯೆಗಳ ನಿವಾರಣೆ ಎಂಬ ಆಲೋಚನೆ ಹೊಳೆಯುತ್ತಿರಲಿಲ್ಲ. ಯಾರು ಎಷ್ಟು ಅಡ್ಡಗಾಲು ಹಾಕಿದರೂ ನಮ್ಮ ಉದ್ದಿಮೆಯ ಬೆಳವಣಿಗೆಯನ್ನು ಕುಂಠಿತಗೊಳಿಸಲು ಸಾಧ್ಯವಿಲ್ಲ.. ಮುಂದಿನ ಕೆಲವೇ ದಿನಗಳಲ್ಲಿ ’ರಅ’ ಮಾರ್ಕಿನ ದೋಸೆಯ ಮಿಕ್ಸ್ ಪಾಕೆಟ್‌ಗಳು ಈ ದೇಶದ ಪ್ರತಿಯೊಂದು ಮನೆ ಮನೆಯಲ್ಲಿ ಕಾಣಸಿಗುತ್ತವೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಘಂಟಾ ಘೋಶವಾಗಿ ಹೇಳಬಲ್ಲೆ. ಇದು ಎಷ್ಟು ಎಷ್ಟರ ಮಟ್ಟಿಗೆ ಬೋಗಸ್ ಎಂಬುದು ಎಲ್ಲಾ ಲೈಂಗಿಕ ದುರ್ಬಲರಿಗೆ ಗೊತ್ತಿರದಿದ್ದರೂ ಲೇಖಕರಾದ ನಿಮಗೂ ಗೊತ್ತು ಎಂದು ಭಾವಿಸುವೆ. ಬರೆಯುವ ಕ್ರಿಯೆಯೊಳಗೆ ಲೇಖಕ ತನ್ನನ್ನು ತಾನು ಎಷ್ಟೋ ಸಂಧರ್ಬದಲ್ಲಿ ಮರೆಮಾಚುತ್ತಾನೆ. ನೀವು ಬರಹದ ಮೂಲಕ ಅನಾವರಣಗೊಳ್ಳುವ ಹಾದಿಯಲ್ಲಿರುವ ಮನುಷ್ಯರೆಂದೇ ಸ್ಪಷ್ಟವಾಗಿ ಬರೆಯುತ್ತಿರುವೆ. ಒಂದು ಆಶ್ಚರ್ಯವೆಂದರೆ ನಮ್ಮ ಉದ್ದಿಮೆ ಮಹಾ ಬೊಗಸ್ಸೆಂಬುದು ನನಗೂ ಗೊತ್ತು. ಆದರೆ ಎಲ್ಲರಂತೆ ನಾವೂ ಸಮಾಜದ ದೌರ್ಬಲ್ಯದ ಎಳೆಯನ್ನೇ ಬಂಡವಾಳ ಮಾಡಿಕೊಂಡು ಬದುಕಬೇಕಲ್ಲವೆ? ಈ ಸಮಾಜದಲ್ಲಿ ಜಾತಿ ಅಥವ ಹಣ ಎರಡರ ಪೈಕಿ ಒಂದು ಇರಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದೇವೆ. ಈಗಿನ ಸ್ಥಿತಿಯಲ್ಲಿ ಇದು ಅನಿವಾರ್ಯ. ನನ್ನ ಗಂಡ ನನಗೆ ಯಾವ ವಿಷಯದಲ್ಲೂ ಕಡಿಮೆ ಮಾಡಿಲ್ಲವೆಂಬುದನ್ನು ಮಾತ್ರ ಮತ್ತೆ ಮತ್ತೆ ನಿಮಗೂ, ನಿಮ್ಮ ಅಂಜುಬುರುಕ ಶಾಮನಿಗೂ ಸ್ಪಷ್ಟಪಡಿಸುತ್ತಿರುವೆ. ನಿಜ ಹೇಳಬೇಕೆಂದರೆ ಅವನು ಇಲ್ಲಿಗೆ ಬರದಿದ್ದಲ್ಲಿ ನಾನು ನಿಮಗೆ ಇಷ್ಟು ಸುಧೀರ್ಘವಾದ ಪತ್ರ ಬರೆಯುತ್ತಲೇ ಇರಲಿಲ್ಲ. ಒಂದು ಒಳ್ಳೆಯ ಮನೆ, ಮನೆಯಲ್ಲಿ ಕೆಲಸ ಮಾಡಲು ಆಳುಕಾಳು, ಒಡವೆ ವಸ್ತ್ರ ಅಲ್ಲದೆ ಮುಕ್ತ ಮನಸ್ಸಿನ ಚರ್ಚೆ; ಅಂದುಕೊಂಡಿದ್ದನ್ನು ನಿರ್ಭಿಡೆಯಿಂದ ಪಡೆಯುವ ಅಧಿಕಾರ ಕೊಡುವ ಶಕ್ತಿ ರಘುಗಲ್ಲದೆ ಬೇರೆ ಯಾವ ಗಂಡಸಿಗೆ ಇದೆ ಹೇಳಿ? ನಮ್ಮ ಮಿತಿಯೊಳಗೆ ನಾವು ಸುಖವಾಗಿದ್ದೇವೆ. ಭೂತಕಾಲದಲ್ಲಿ ಉದುರಿಹೋಗಿರುವ ವಿಶೇಷಣಗಳನ್ನು ಮತ್ತೆ ಧರಿಸಲು ಸಂಕೋಚಪಡದಂಥ ವಾತಾವರಣ ನಿರ್ಮಾಣವಾಗಿದೆ. ಇಷ್ಟು ಪೀಟಿಕಾ ಸ್ವರೂಪದಲ್ಲಿ ನಿಮಗೆ ಯಾಕೆ ಬರೆಯಬೇಕಾಗಿ ಬಂತೆಂಬುದು ನಿಮಗೀಗಾಲೇ ಅರ್ಥವಾಗಿರಬೇಕು. ಶಾಮ ಇಲ್ಲಿಗೆ ಬಂದಿದ್ದ. ಅವನು ಒಮ್ಮೆ ಬಂದು ನಾಲ್ಕು ದಿನವಿದ್ದು ವ್ವೈವಾಹಿಕ ಬದುಕಿನ ಸೂಕ್ಷ್ಮಗಳನ್ನು ವಿಶಾಲತೆಯನ್ನು ಅರ್ಥ ಮಾಡಿಕೊಳ್ಳಲೆಂದೇ ಅಲ್ಲವೆ! ನಾನು ನಿಮಗೆ ನಮ್ಮ ವಿಳಾಸ ಕೊಟ್ಟಿದ್ದು? ಅವನು ಹಳೆಗೆಳೆಯನಂತೆ ಬಂದು ಕಾಲಿಂಗ್ ಬೆಲ್ ಒತ್ತಿದ್ದರೆ ನನಗೆ ಅಷ್ಟು ಬೇಸರವಾಗುತ್ತಿರಲಿಲ್ಲ. ಆದರೆ ಅವನು ಮಗುಚಿದ ಕೆಟ್ಟ ಪುಟ ಮತ್ತೆ ಮತ್ತೆ ತೆರೆದುಕೊಂಡಂತೆ ಬಂದು ಕಾಣಿಸಿಕೊಂಡದ್ದೇ ಬೇಸರದ ಸಂಗತಿ.

ಒಂದು ದಿನವೆಂದರೆ ಸುಮಾರು ಹದಿನೈದು ದಿನದ ಹಿಂದೆ ಒಂದು ಬೆಳೆಗ್ಗೆ ಕಾಂಪೌಂಡೊಳಗೆ ಕ್ರೋಟಾನ್ ಗಿಡಗಳ ನಡುವೆ ಆಳೆತ್ತರ ಬೆಳೆದಿರುವ ದುಂಡುಮಲ್ಲಿಗೆ ಬಳ್ಳಿಯನ್ನು ತಂದು ಹಚ್ಚಿದ್ದು ಕೊಟ್ಟೂರಿನ ನಮ್ಮ ಮನೆಯ ಹಿತ್ತಲಿಂದಲೇ. ಬಾಡಿಗೆದಾರರ ದಿಕ್ಕಲ್ಲಿದೆ ಬೀಗ ಜಡಿದಿರುವ ನಮ್ಮ ಮನೆಯ ಹಿತ್ತಲಲ್ಲಿ ಅಂದರೆ ಬಚ್ಚಲ ಕಟ್ಟೆಯ ಪಕದಲ್ಲಿ ಅದರ ಮಾತೃಬಳ್ಳಿ ಈಗಲೂ ಹಚ್ಚಗೆ ಅನನ್ಯ ಸದೃಶವಾಗಿರಬಹುದು. ಅದು ಈ ವಾತಾವರಣ ಇಷ್ಟು ಬೇಗ ಹೊಂದಿಕೊಂಡು ಕ್ರೋಟಾನ್ಗಳನ್ನು ಮೀರಿಸುವಂತೆ ಬೆಳೆಯಬಹುದೆಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ. ಹಚ್ಚಿದ್ದೂ ತಡವಾಗಲಿಲ್ಲ. ಅದು ಬೆಳೆದಿದ್ದೂ ತಡವಾಗಲಿಲ್ಲ. ನಮ್ಮ ಬಡಾವಣೆಯವರೆಲ್ಲ ಅದರ ಸಮೃದ್ಧ ಬೆಳವಣಿಗೆ ಕಂಡು ಈಗಲೂ ಆಶ್ಚರ್ಯಪಡುತ್ತಾರೆ. ಕೆಳಗಡೆ ಸ್ಟೂಲು ಹಾಕಿಕೊಂದು ಅದರ ಮೇಲೆ ಸುಮಾರು ಎರಡು ಗಂಟೆ ಹೊತ್ತು ನಿಂತ ರಘು ಉದಯಪುರ್‍ದಿಂದ ತಂದಿರುವ ಬುಟ್ಟಿಯಲ್ಲಿ ಹೂವು ಬಿಡಿಸಿ ತುಂಬುವುದೆಂದರೆ ನಮ್ಮ ತಾಯಿಗೆ ಎಲ್ಲಿಲ್ಲದ ಸಂತೋಷ. ಒಂದೊಂದು ಹೂವು ಬಿಡಿಸುತ್ತ ತನ್ನ ಗಂಡ ಎಲ್ಲಿಯಾದರೂ ಕಾಣಿಸಬಹುದೆಂದು ಬೀದಿ ಕಡೆ ನೋಡುವುದು ಆಕೆಗೆ ಅಭ್ಯಾಸವಾಗಿ ಹೋಗಿದೆ. (ನನಗೂ ಹಾಗೆ ಅನ್ನಿಸುತ್ತದೆ. ಒಮ್ಮೊಮ್ಮೆ. ಮಧ್ಯವಯಸ್ಕರ್ಯಾರಾದರೂ ಕಂಡರೆ ಅವರು ಅಥವಾ ಅವರಲ್ಲಿ ನನ್ನ ತಂದೆಯಾಕಿರಬಾರದು? ಆತನ ವ್ಯಕ್ತಿತ್ವದ ಒಂದಂಶವಾದರೂ ಯಾಕಿರಬಾರದು? ಎಂದು ನೋಡುತ್ತಲೇ ಅನೇಕ ಪರಪಾಟುಗಳನ್ನು ಅನುಭವಿಸಿದ್ದೇನೆ. ಆದರೂ ನಮ್ಮ ತಂದೆ ಮುಂದೆ ಒಂದಲ್ಲಾ ಒಂದು ದಿನ ಬಂದೇ ಬರುತ್ತಾರೆ ಎಂಬ ಭರವಸೆ ನಮಗಿದೆ. ಕಥೆಗಾರನಾದ ನಿಮಗೆ ಈ ಮಹಾಶಯನನ್ನು ಖಂಡಿತ ಪರಿಚಯಿಸುತ್ತೇನೆ) ಪಟ್ಟಣದ ರೀತಿ ರಿವಾಜು ಅಷ್ಟಾಗಿ ಗೊತ್ತಿಲ್ಲದ ನಮ್ಮ ತಾಯಿ ಅರ್ಧ ಬುಟ್ಟಿ ಹೂವು ಬಿಡಿಸಿದ ನಂತರ ಎದುರಿಗೆ ರಸ್ತೆ ಆಚೆ ಬದಿಯಲ್ಲಿದ್ದ ವ್ಯಕ್ತಿಯ ಕಡೆಗೆ ಅಚಾನಕ್ಕಾಗಿ ನೋಡಿದಳು. ಎಲ್ಲೋ ನೋಡಿದಂಥ ನೆನಪು ಕಾ‌ಇತು. ಸ್ಪಷ್ಟವಾಗಿ ನೋಡಿ ಗುರುತಿಸಬೇಕೆಂದರೆ ಆ ವ್ಯಕ್ತಿ ತನ್ನ ಮುಖ ಸರಿಯಾಗಿ ತೋರಿಸುತ್ತಿರಲಿಲ್ಲ. ನೋಡಿದ ಕೂಡಲೆ ಮೆಡಿಚಲ್ ಶಾಪಿನಲ್ಲಿ ಏನೋ ಖರೀದಿಸುವವನಂತೆ ನಿಂತುಕೊಂಡು ಬಿಡುವುದೋ? ಅಥವಾ ಎತ್ತರಿಕ್ಕಿದ್ದ ಅಂಚೆ ಡಬ್ಬಿಯ ಹಿಂದೆ ಅವಿತಿಟ್ಟುಕೊಳ್ಳುವುದೋ ಮಾಡುತ್ತಿದ್ದ?

ಅದರಿಂದ ಕ್ರಮೇಣ ಗಾಬರಿ ಹೆಚ್ಚಿ ಓಡಿ ಬಂದಳು ಒಳಗಡೆ. ಆಕೆ ಹಿಂದೆಂದೂ ಅಷ್ಟು ಗಾಬರಿಯಿಂದ ವರ್ತಿಸಿದುದಿಲ್ಲ. ಆ ತಂಪಿನಲ್ಲೂ ಆಕೆ ಅಷ್ಟು ಬೆವಯುತ್ತಿದ್ದುದನ್ನು ನೋಡಿ “ಏನು ಯಾಕಮ್ಮಾ?” ಎಂದು ಕೇಳಿದೆ. ಆಕೆ ‘ಹಿಂಗಿಂಗೆ’ ಅಂತ ಹೇಳಿದಳು. ನಾನು ಕುತೋಹಲದಿಂದ ಆಕೆಯನ್ನು ಮುಂದೆ ಕಳಿಸಿ ನಾನು ಹಿಂದೆಯೇ ಬಂದೆ. ಆಳೆತ್ತರವಿದ್ದ ಎರಡುಕ್ಯಾಕ್ಟಸ್ ಗಿಡಗಳ ಮರೆಯಿಂದ ಆ ಕಡೆ ನೋಡಿದೆ. ಸಫಾರಿ ತೊಟ್ಟು ತಲೆಗೆ ಹ್ಯಾಟ್ ಹಾಕ್ಕೊಂಡಿದ್ದ ಆ ವ್ಯಕ್ತಿ ಎಷ್ಟು ಪ್ರಯತ್ನಿಸಿದರೂ ತನ್ನ ಮುಖ ತೋರಿಸಲಿಲ್ಲ. “ಯಾರಾದ್ರು ತಮ್ಮನ್ನು ವಾಚ್ ಮಾಡಬಹುದು ಹುಷಾರಿಂದ ಇರಿ” ಎಂದು ರಘು ಹಿಂದಿನ ದಿನವೇ ಹೇಳಿದ್ದು ನೆನಪಾಯಿತು. ಸರಕಾರಿ ಗೂಢಚರ್ಯೆ ಕಡೆಯವರು ಇದ್ದಿರಬಹುದು, ಅಥವಾ ತುರ್ತುಪರಿಸ್ಥಿತಿ ಬಗ್ಗೆ ರೋಸಿ ಯಾರಾದರೂ ಸರಕಾರದ ವಿರುದ್ಧ ಪಿತೂರಿ ನಡೆಸಿರಬಹುದೆಂದು ನಿಗಾ ಇಟ್ಟವರಿರಬೇಕೆಂದೂ, ಅವರು ಮೊದಲಿಯಾರ್ ಕುಟುಂಬಕ್ಕೆ ಸೇರಿದವರೆಂದು ಖುಷಿಯಿಂದ ಬಂದು ಹೇಳುತ್ತಿದ್ದುದನ್ನು ಕಿವಿ ಮೇಲೆ ಹಾಕಿಕೊಳ್ಳದೆ ನಾನು “ನಿಗೂಢ ವ್ಯಕ್ತಿಯೊಬ್ಬ ಬೆಳಗಿನಿಂದ ನಮ್ಮ ಮನೆ ಕಡೆ ನಿಗಾ ಇಟ್ಟಿರುವನೆಂದು ಹೇಳಿದೆ. ಅವನು ಒಳ್ಳೆ ಶೆರ್ಲಾಕ್ ಹೋಮ್ಸ್ ಥರ ಇರುವನೆಂದು ಹೇಳಿದೆ. ಬಿಡುತ್ತಿದ್ದ ಪ್ಯಾಂಟನ್ನು ಮತ್ತೆ ಏರಿಸಿಕೊಂಡು ರಘು ಆ ಕಡೆ ಹೋದ, ಅಲ್ಲಿ ಅಂಥ ಅನುಮಾನಾಸ್ಪದ ವ್ಯಕ್ತಿ ಕಾಣ್ದಿದಿದ್ದಾಗ, ತಮ್ಮ ಬ್ರಾಂಡಿನ ದೋಸೆಯನ್ನು ಎರಡು ದಿನಕ್ಕೊಪ್ಪತ್ತಾದರೂ ತಿಂದು ಸುಖವಾಗಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದ ತಿಟ್ಟೆವೆಂಕಟರತ್ನಂರವರನ್ನು ಕೇಳಿದ. ಒರುಮನಿಷಿ ಉದಯಂ ನುಂಡಿ ಪತ್ತು ಮಣಿವರಿಕ್ಕೆ ನಿಂತಿದ್ದುದಾಗಿಯೂ ಪೇರು ಕೇಳಿದರೆ ರಾಜಾರಾವ್ ಎಂದೂ; ಎಂದ ಊರು ಎಂದು ಕೇಳಿದರೆ ತಿರುಮನ ಕೂಡಲು ಎಂದೂ, ಇನ್ನೂ ವಿವರ ಕೇಳಲು ತಮ್ಮ ತಂದೆ ತಾತ ಮುತ್ತಾತ ನವರು ವಿಶ್ವವಿಖ್ಯಾತ ಮೃದಂಗ ವಾದಕರೆಂದೂ; ತಾನು ಇಂಥ ವಂಶದಿಂದ ಬಂದವನೆಂದೂ ಹೇಳಿದನೆಂದು ರತ್ನಂ ವಿವರಿಸಿದನು. ಕಂಣಿಗೆ ಕಪ್ಪು ಕರ್ಣದ ಕೂಲಿಂಗ್ ಗ್ಲಾಸ್ ಧರಿಸಿದ್ದರಿಂದ ಸಹಜಗಣ್ಣೋ ಮೆಳ್ಳೆಗಂಣೋ ಎಂದು ಗುರುತಿಸಲಾಗಲಿಲ್ಲವೆಂದೂ ಹೇಳಿದನು. ಅಲ್ಲಿಂದ ರಘು ಯಾರೋ ತಲೆಕೆಟ್ಟವನಿರಬೇಕೆಂದು ಹೇಳಿ ನಮ್ಮನ್ನು ಸಹಜಸ್ಥಿತಿಗೆ ತಂದ. ಊಟವಾದ ನಂತರ ಕೆಲವು ಡಾಕ್ಯುಮೆಂಟಿಗೆ ನನ್ನ ಸಹಿ ಹಾಕಿಸಿಕೊಂಡು “ಇದು ಹೇಳಿ ಕೇಳಿ ಬೆಂಗಳೂರು ಸಿಟಿ… ಜನ ಒಂದೊಂದು ನೋಟಕ್ಕೆ ಒಂದೊಂದು ರೀತಿ ಕಾಣಿಸ್ತಿರ್ತಾರೆ? ಧೈರ್ಯದಿಂದಿರಿ” ಎಂದು ಹೇಳಿ ದಿನದ ಗುತ್ತಿಗೆ ಮೇಲೆ ತಂದಿದ್ದ ಬೂದುಬಣ್ಣದ್ ಕಾರಿನಲ್ಲಿ ಹೊರಟು ಹೋದ ಆಫೀಸಿಗೆ.

ನಾವೇನೋ ನಿರುಮ್ಮಳವಾಗಿ ಇರಬೇಕೆಂದು ನಿರ್ಧರಿಸಿದೆವು. ಆದರೆ ನಮ್ಮ ತಾಯಿಯು ಆಗಾಗ್ಗೆ ಹೊರಗಡೆ ಹೋಗುವುದು. ಯಾವುದಾದರೊಂದು ಗಿಡದ ಮರೆಯಲ್ಲಿ ನಿಂತು ಆಕೆ ಅಲ್ಲಿ ನೋಡುವುದು, ಕಂಡ ಪ್ರತಿಯೊಬ್ಬರೂ ಆ ನಿಘೂಡ ವ್ಯಕ್ತಿಯೇ ಎಂದು ಪರಿಭಾವಿಸುವುದು. ಹೀಗೆ ನಡೆದಿತ್ತು. ‘ಆರಾಮಾಗಿರಮ್ಮಾ’ ಎಂದರೂ ಆಕೆ ಕೇಳುತ್ತಿರಲಿಲ್ಲ. ಆ ಬಡಾವಣೆಯ ಆಚೆ ಈಚೆ ಮೂಲೆಯಲ್ಲಿರುವ ಮೂರು ನಾಲ್ಕು ಮನೆಗಳನ್ನು ಕಳ್ಳರು ಹಾಡುಹಗಲೆ ನುಗ್ಗಿ ದೋಚಿಕೊಂಡು ಹೋಗಿದ್ದರು. ಕಳ್ಳರು ನೋಡಲು ಕಳ್ಳರಂತೆ ಇರುವುದಿಲ್ಲವೆಂದೂ ಅವರು ಯಾವುದೇ ವೇಷದಲ್ಲಿ ಬಂದು ತಮ್ಮನ್ನು ಮರುಳುಗೊಳಿಸಬಹುದೆಂದೂ ವಾದಿಸತೊಡಗಿದಳು. ಅನಾವಶ್ಯಕವಾಗಿ ತೆರೆದುಕೊಂಡಿವೆ ಎಂದು ಭಾವಿಸಿ ಕೆಲವು ಉಪಯುಕ್ತ ಕಿಟಿಕಿ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಿ ಬಂದಳು. ಆಕೆಯದು ಅನುಚಿತ ವರ್ತನೆ ಎಂದು ನಾನು ಭಾವಿಸುವುದು ಸಾಧ್ಯವಿಲ್ಲವೆಂಬಂತೆ ಕೆಲಸದ ಹುಡುಗಿ ರಾಧಮ್ಮಾಳ್ ಬಂದವಳೆ “ಯಾರೋ ಒಬ್ಬಾತ ನನ್ನ ಮರೆಗೆ ಕರೆದೊಯ್ದು ಎನೇನೋ ಕೇಳಿದ್ನಮ್ಮ” ಎಂದು ಸಮಸ್ಯೆಗೆ ಪೂರ್ವ ಪೀಠಿಕೆ ಹಾಕಿದಳು.

ನಾವು ವಿಚಾರಿಸಲಾಗಿ ಆಕೆ ಎಲ್ಲ ಹೇಳಿದಳು. ನಿಘೂಡವ್ಯಕ್ತಿ ಮುಖ್ಯವಾಗಿ ನನ್ನ ಬಗೆಗಂತೆ. ಮನೆಯಲ್ಲಿ ಯಾರ್ಯಾರಿತಾರೆ? ತಾಯಿಯನ್ಯಾಕೆ ತಂದಿಟ್ಟುಕೊಂದರು? ಗಂಡ ಹೆಂಡತಿ ದಿನಂಪ್ರತಿ ಜಗಳ ಆದುವರೋ ಇಲ್ಲವೋ? ಗಂಡನೊಂದೇ ಅಲ್ಲದೆ ಬೇರೆಯಾರಾದರೂ ಗಂಡಸರು ಮನೆಗೆ ಬಂದು ಹೋಗುವುದುಂಟಾ? ಅನಸೂಯ ಎಂಬ ಹೆಸರನ್ನು ಆಕೆಯ ಗಂಡ ಷಾರ್ಟ್‌ಫಾರಂನಲ್ಲಿ ಏನೆಂದು ಕರೆಯುತ್ತಾನೆ? ಆಕೆ ರಾತ್ರಿ ಹೊತ್ತು ನೈಟಿ ಉಡುವಳೋ ಇಲ್ಲವೋ? ಹೊರಗಡೆ ಎಲ್ಲಿಗಾದರೂ ಹೋಗಿ ಬರುವಾಗೇನಾದರೂ ಪಂಜಾಬಿಡ್ರೆಸ್ಸು ಉಡುವಳೋ? ಗಂಡ ಹೆಂಡತಿ ಒಟ್ಟಿಗೆ ಮಲಗುವರೋ? ಇಲ್ಲ ಬೇರೆ ಕೋಣೆಯಲ್ಲೋ? ರಾತ್ರಿ ಮಲಗುವಾಗ ಯಾವ ಯಾವ ಕೋಣೆಗೆ ಅಲಿಘರ್ನಲ್ಲಿ ತಯಾರಿಸಲಾದ ವಿಶೇಷ ಪತ್ತಗಳನ್ನು ಹಾಕುವರೋ ಇಲ್ಲವೋ? ರಾತ್ರಿ ಹೊತ್ತಿನ ಪಹರೆಗೆ ತುಂಬ ವಯಸ್ಸಾದ ಘೂರ್ಕಾನನ್ನು ನೇಮಿಸಿಕೊಂಡಿದ್ದರೆ ಚೆನ್ನಾಗಿತ್ತು?” ಎಂದು ಮುಂತಾಗಿ ಹುಚ್ಚಾಪಟ್ಟೆ ಪ್ರಶ್ನೆಗಳನ್ನು ಕೇಳಿದನಂತೆ. ರಾಧಮ್ಮಾಳ್ ಹೇಳಿದ್ದನ್ನು ಕೇಳಿ ನನಗೆ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬಂತು. ಅವನನ್ನು ಹಿಡಿದು ತದಕಬೇಕೆಂದುಕೊಂಡೆ. ಆದರೆ ಅವನು ಕೈಗೆ ಸಿಗಬೇಕಲ್ಲ ಎಂದುಕೊಂಡು ಸುಮ್ಮನಾದೆ. ಇಷ್ಟೆಲ್ಲವನ್ನು ಪ್ರಮಾಣಿಕವಾಗಿ ಹೇಳಿದ ಆ ಹನ್ನೊಂದು ವರ್ಷದ ಹುಡುಗಿಯನ್ನು ಮೈದಡವಿ ಅಭಿನಂದಿಸಿದೆ. ರಘು ಬಂದ ಮೇಲೆ ಇದನ್ನೆಲ್ಲ ಚಾಚೂ ತಪ್ಪದೆ ಹೇಳಿದೆ. “ಇವನ್ಯಾರೋ ಚಂಬಲ್ ಕಡೆಯ ಮನುಷ್ಯನಿರಬೇಕೆ”ಂದು ನಗೆಯಾಡುತ್ತ ಕ್ರಮೇಣ ಗಂಭೀರನಾಗಿ ಬಲಗೈಯ ತೋರು ಬೆರಳಿಂದ ಎಡಗೆನ್ನೆಯನ್ನು ತುರಿಸಿಕೊಂಡ.
ಆ ರಾತ್ರಿ ಎಷ್ಟು ಹೊತ್ತಾದರೂ ನಮಗೆ ಮಾಡಲು ಸಾಧ್ಯವಾಗಲಿಲ್ಲ. ಫೋನಿನ ಮೂಲಕವೂ ವ್ಯಕ್ತಿ ನಮಗೆ ತೊಂದರೆ ಕೂಡ ತೊಡಗಿದ. ಹನ್ನೆರಡು ಗಂಟೆಯೊಳಗೆ ಸುಮಾರು ಹತ್ತು ಸಾರಿಯಾದರೂ ಫೋನು ಬಡಿದುಕೊಂಡಿರಬಹುದು. ನಾವು ಹಲೋ ಅನ್ನುತ್ತಿದ್ದೆವಾದರೂ ಆ ಕಡೆಯಿಂದ ಉತ್ತರವಿರುತ್ತಿರಲಿಲ್ಲ. ಕೊನೆಗೊಮ್ಮೆ ಸಿಟ್ಟು ಬಂದು ಫೋನ್ ಎತ್ತಿಕೊಂಡು “ಯಾರೋ ನೀನು… ರ್‍ಯಾಸ್ಕ್ಲ್… ಬಾಸ್ಟರ್ಡ್… ಹೀಗೆ ಸುಮ್ನೆ ತೊಂದ್ರೆ ಕೊಡ್ತಿದ್ದೀಯಲ್ಲ… ನಿನ್ಗೆ ನಾಚ್ಕೆ ಹೇಸ್ಗೆ ಆಗ್ತಿಲ್ವೇ… ನಿನ್ನಂಥ ಸ್ಯಾಡಿಸ್ಟನನ್ನು ಜೈಲಿಗೆ ಹಾಕಿ ಒದ್ದಾಗಲೇ ಬುದ್ಧಿ ಬರೋದು! ನಿನ್ಗೆ ಅಕ್ಕ ತಂಗೇರ್ಯಾರೂ ಇಲ್ವೇನೋ ಕೈಗೊಂದೆ ಸಿಕ್ರೆ ನೀನು ಕೈಕಾಲು ಮುರಿಸ್ಕೊಂಡು ಹ್ಯಾಂಡೀಕ್ಯಾಪ್ಡಾಗ್ತೀಯಾ ಹುಷಾರ್” ಎಂದು ಆವೇಷದಲ್ಲಿ ಜೋರಾಗಿ ಮಾತಾಡಿ ಬಿಟ್ಟೆ. ಆ ಕಡೆಯಿಂದ ನಿಟ್ಟುಸಿರು ಬಿಟ್ಟು ರಿಸೀವರ್ ಇಟ್ಟ ಸದ್ದು ಕೇಳಿಸಿತು. “ಹೀಗೆ ಮಾತಾಡಬಾರ್ದಿತ್ತೂಂತ” ರ್ಘು ಸಮಾಧಾನ ಮಾಡಿದ. ಮರುದಿನ ತಾನು ಎಲ್ಲಿಗೂ ಹೋಗದೆ ಆ ವ್ಯಕ್ತಿಯನ್ನು ಕಂಡು ಹಿಡಿಯುವುದಾಗಿ ಧೈರ್ಯ ಹೇಳಿದ.
ಹೇಲಿದ್ದಂತೆ ರಘು ಮರು ದಿನ ಎಲ್ಲಿಗೂ ಹೊಗಲಿಲ್ಲ. ಕೆಲವು ಮಾಜಿ ಪಿತೂರಿಗಾರರನ್ನು ಇಟ್ಟುಕೊಂಡು ನಿಘೂಡ ವ್ಯಕ್ತಿಯ ಪರಿಶೋಧನಾ ಕೆಲಸದಲ್ಲಿ ಇದೀ ದಿನ ಕಳೆದ, ದಣಿದು ಕೊಂಡನೇ ಹೊರತು ಆ ವ್ಯಕ್ತಿಯ ಬಗ್ಗೆ ಯಾವ ಸುಳಿವೂ ದರಕಲಿಲ್ಲ. ಆ ರಾತ್ರಿ ಅಂಥ ಯಾವುದೇ ಘಟನೆ ಫೋನ್ ಠ್ರಿಣ್ ಗುಡುವ ಮೂಲಕವಾಗಲೀ ಅಥವಾ ಬಾಗಿಲು ತಟ್ಟುವ ಅಥವ ಕಾಲಿಂಗ್‌ಬೆಲ್ ಒತ್ತುವುದರ ಮೂಲಕವಾಗಲೀ ಸಂಭವಿಸಲಿಲ್ಲವಾದರೂ ನನ್ನೆದೆಯ ಬಡಿತ ನಮ್ಮವರಿಗೆ ಕೇಳಿಸುತ್ತಿತ್ತು. ನಮ್ಮವರ ಎದೆಬಡಿತ ನನಗೆ ಕೇಳಿಸುತ್ತಿತ್ತು. ಆದರೆ ನಮ್ಮ ತಾಯಿಯ ಎದೆ ಬಡಿತ ಮಾತ್ರ ನಮ್ಮಿಬ್ಬರಿಗೂ ಕೇಳಿಸುತ್ತಿತ್ತು. ಇಂಥದೊಂದು ವಿಚಿತ್ರ ಬೇಗೆಯಲ್ಲಿ ಬೇಯುತ್ತ ನಾವ್ಯಾರೂ ತುಂಬ ಹೊತ್ತಿನ ತನಕ ನಿದ್ದೆ ಮಾಡಲಾಗಲಿಲ್ಲವೆಂಬುದನ್ನು ನಿಮಗೆ ತಿಳಿಸಬಯಸುವೆ.
ಯಾರು ನಿದ್ದೆ ಹೋದರೋ ಇಲ್ಲವೋ ನಾವೆಲ್ಲರೂ ಪರಸ್ಪರ ಪರಿಶೀಲಿಸುತ್ತಿದ್ದೆವು. ಅರೆ ಮಂಪರಿನಲ್ಲಿ ನಾನೊಂದು ಹೇಳುವುದು! ಅದನ್ನು ರಘು ಬೇರೆ ಥರ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುವುದು. ವರಾಂಡದಲ್ಲಿ ಮಲಗಿದ್ದ ನಮ್ಮ ತಾಯಿ ಮಾತ್ರ ಆ ರಾತ್ರಿ ಕಿಟಿಕಿ ಬಾಗಿಲುಗಳ ಪ್ರತಿಯೊಂದು ಸದ್ದನ್ನು ಮರೆಯಲಾರದಷ್ಟು ಅರ್ಥ ಮಾಡಿಕೊಂಡಳು.
“ನಾನು ಹೇಳ್ಲಿಲ್ಲ್ವೇ ಅನೂ… ಅಂಥಾದ್ದೇನು ನಡೆಯೊಲ್ಲಂತ! ಸಮಜಕ್ಕೆ ಆತಂಕಕಾರಿಯಲ್ಲದ ನಮ್ಮ ಬಗ್ಗೆ ಯಾರು ಗುಟ್ಟಾಗಿ ಹೊಂಚುವುದು ಸಾಧ್ಯ? ಹಾಗೇನಾದ್ರು ಹೊಂಚಿದ್ದರೆ ಅಂಥವರ ತಲೆ ನೆಟ್ಟಿಗಿಲ್ಲದಿರಬೌದು. ಇದು ಹೇಳಿ ಕೇಳಿ ಬೆಂಗಳೂರು ನಗರ… ನಮ್ಮ ಹಾಗೆ ಎಂಥೆಂಥವರು ಬಂದು ಸೇರ್ಕೊಂಡಿದ್ದಾರೋ ಏನೋ? ತಕ್ಷಣ ಮಾಡಲಿಕ್ಕೆ ಒಂದು ಉದ್ಯೋಗ ದೊರಕದಿದ್ದಲ್ಲಿ ಹೊತ್ತು ಹೋಗಲು ಯಾರಾದ್ರು ಹೀಗೆ ಅಪಾಯಕಾರಿಯಲ್ಲದ ರೀತಿಯಲ್ಲಿ ಹಿಂಸೆ ಕೊಡುತ್ತಿರಬಹುದು? ಇನ್ನೇನು ಸಿಕ್ಕೇ ಬಿಟ್ಟೆ ಎನ್ನುವಷ್ಟರಲ್ಲಿ ಆ ಮನುಷ್ಯನಿಗೆ ಯಾವುದಾದರೊಂದು ಕೆಲಸ ಸಿಕ್ಕಿ ನೆಮದಿ ಲಭಿಸಿರಬೌದು. ನೆನ್ನೆದಿನ ಮರೆತು ಇಂದಿನ ಬಗ್ಗೆ ಯೋಚಸು ಅಷ್ಟೆ. ಬಹಳ ದಿನಗಳಿಂದ ನೀನು ಒಂದು ಸಿನಿಮಾ ನೋಡಬೇಕೆಂದಿದ್ದೆಯಲ್ಲ, ನಾವೆಲ್ಲ ಒಟ್ಟಿಗೆ ಕೂತು ನೋಡಬಹುದಾದಂತ ಸಿನಿಮಾ ಒಂದು ಬಹಳ ದಿನಗಳ ನಂತರ ಈ ನಗರದ ಮೂಲೆಯಲ್ಲಿರುವ ತಾಕೀಸಿನಲ್ಲಿ ಕಾಣಿಸಿ ಕೊಂಡಿದೆ. ಈ ಸಂಜೆ ಹೋಗೋಣ. ಸಾಧ್ಯವಾದ್ರೆ ಒಂದು ಹೋಟೆಲ್ಲಿಗೆ ಹೋಗಿ ಊಟ ಮಾಡ್ಕೊಂಡು ಬರೋಣ. ರೆಡಿಯಾಗಿರು. ಹಾಗೇ ನಿಮ್ಮ ತಾಯಿ ಅಂದ್ರೆ ನಮ್ಮ ಅಕ್ಕನವರನ್ನೂ ಸಹ” ಎಂದು ಮುಂತಾಗಿ ಹೇಳುತ್ತಲೆ ರಘು ಕಂಪನಿಯ ಆಫೀಸಿಗೆ ಹೋದ. ವ್ಯವಹಾರ ಹೆಚ್ಚು ಕುದುರಿದಂತೆಲ್ಲ ಅವನ ಭಾಷೆ ತುಂಬ ಸುಧಾರಿಸಿದೆ ಎಂದು ಹೇಳಲು ನನಗೆ ಹೆಚ್ಚು ಸಂತೋಷವಾಗುತ್ತಿದೆ.

ಬೆಳೆಗ್ಗೆ ಹತ್ತು ಗಂಟೆ ಸಮಯದಲ್ಲಿ ಮತ್ತೆ ನಮ್ಮ ತಾಯಿ ಆ ವ್ಯಕ್ತಿಯ ಹಿಂಭಾಗವನ್ನು ನೋಡಿದಳಂತೆ. ಕಂಣಿಗೆ ಕಪ್ಪ್ಪು ಚಾಳೇಸ ಧರಿಸಿದ್ದ ಅವನನ್ನು ಅಷ್ಟು ದೂರದಿಂದ ಗುರುತಿಸುವುದು ಸಾಧ್ಯವಾಗಲಿಲ್ಲವೆಂದು ಹೇಳಿದಳು. ಮೆಡಿಚಲ್ ಶಾಪಿನ ತಿಟ್ಟೆ ವೆಂಕಟರತ್ನಂರವರು ಹತ್ತು ಅಡಿ ದೂರದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ತರಬಲೋಸುಗ “ರ್ರೀ… ಏನ್ರೀ ಮೃದಂಗವಾದಕ ಮೊಮ್ಮಗಂದಿರೇ ಬನ್ನಿ ನಿಲ್ಲಿ ಸ್ವಲ್ಪ” ಎಂದು ಜೋರಾಗಿ ಕೂಗಿದರಂತೆ. ಹೋಗಿ ಹಿಡಿಯಬೇಕೆಂದಾಗ ಎರಡು ಭಯಗಳು ಕಾಡಿದವಂತೆ. ಒಂದನೆಯದಾಗಿ ನಾನು ಅತ್ತ ಹೋಗಲು ಅಂಗಡಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿರುವ ಪದವೀಧರ ಯುವಕ ಗಲ್ಲಾಪೆಟ್ಟಿಗೆಯಲ್ಲಿರುವ ಹಣವನ್ನು ಲಪಟಾಯಿಸಿದರೆ? ಎಂಬುದು. ಎರಡನೇದಾಗಿ ಮೃದಂಗವಾದಕನ ಮೊಮ್ಮಗನೆಂದು ಹೇಳಿಕೊಂಡ ವ್ಯಕ್ತಿ ಕೇಂದ್ರ ಗುಪ್ತಚಾರರ ದಳದ ಉದ್ಯೋಗಿಯಾಗಿದ್ದರೆ ಎಂಬುದು. ಹೀಗೆ ಆತ ತನ್ನ ಅಸಹಾಯಕತೆ ತೋಡಿಕೊಂಡ ಸ್ವಲ್ಪ ಹೊತ್ತಿಗೆ ರಘು ಬಂದ. ಆತ ಹಿಂದೆಂದೂ ಅಷ್ಟೊಂದು ಬೇಸರಗೊಂಡಿರಲಿಲ್ಲ. “ಆ ಬೋಳಿಮಗ ನನ್ನ ಕೈಗೊಂದ ಸಿಕ್ಲಿ…” ಎಂದು ಮುಂತಾಗಿ ಸಿದಿಮಿಡಿಗುಟ್ಟಿದ. ಕಾರಣವಿಲ್ಲದೆ ರಘು ಸಿದಿಮಿಡಿಗುಟ್ಟುವ ಜಾಯಮಾನದವನಲ್ಲ ಅದಕ್ಕೆ ಕಾರಣವಿಷ್ಟೆ.

ಹಿಂದಿನ ದಿನ ನಮ್ಮ ಮನೆಯ ಆಜುಬಾಗಿನಲ್ಲಿ ಸುಳಿದಾಡಿದ ಹ್ಯಾಟಿನ ವ್ಯ್ಕ್ತಿಯೇ ಕಂಪನಿಯ ಕಛೇರಿ ಕಡೆ ಮತ್ತು ಉದ್ದಿಮೆ ಸ್ಥಳಕ್ಕೆ ಹೋಗಿದ್ದನಂತೆ, ಗುಟ್ಟಾಗಿ ಕೆಲಸ ಮಾಡುವವರನ್ನು ಬೈಟು ಕಾಫಿ ಕುಡಿಸಿ ಬೇಕು ಮಾಡಿಕೊಂಡನಂತೆ, ತಾನು ಮುದಕರನ್ನು ಯುವಕರನ್ನಾಗಿ ಮಾಡುವ ಇಡ್ಲಿ ಮಿಕ್ಸ್ ತಯಾರಿಸುವ ಉದ್ದಿಮೆ ಸ್ಥಾಪಿಸುವುದಾಗಿಯೂ, ಉತ್ತರ ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿಯಾದ ಓಂ ಪ್ರಾಕಶ್ ಗ್ರೋವರ್ ಅವರು ದಕ್ಷಿಣ ಭಾರತ ಪ್ರವಾಸ ಮಾಡುತ್ತಿದ್ದಾಗ ಬಂಡೀಪುರದಲ್ಲಿನ ಖ್ಯಾತ ನರ್ತಕಿ ಮಂಜು ಬಾಷಿಣಿಯನ್ನು ಗಾಂಧರ್ವ ವಿವಾಹವಾದನೆಂದೂ, ತನ್ನ ಗೈರುಹಾಜರಿಯಲ್ಲಿ ಸದಾ ನೋಡುತ್ತ ಇರುವ ಸಲುವಾಗಿ ವಜ್ರದುಂಗುರವನ್ನು ಆಕೆಯ ಬಲಗೈಯ ತೋರು ಬೆರಳಿಗೆ ತೊಡಿಸಿದನೆಂದೂ; ಅದನ್ನು ನೋಡುತ್ತಲೆ ಆಕೆ ಗರ್ಭಧರಿಸಿ ತನ್ನನ್ನು ಶುಭ ಮುಹೂರ್ತದಲ್ಲಿ ಹೆತ್ತು ತನಗೆ ಶಾಂಪ್ರಕಾಶ್ ಗ್ರೋವರ್ ಎಂದು ನಾಮಕರಣ ಮಾಡಿ ಬೆಳೆಸಿ ದೊಡ್ಡವನನ್ನಾಗಿ ಮಾಡಿರುವಳೆಂದೂ; ಕಳೆದ ಮಾಹೆ ಇಪ್ಪತ್ತೆಂಟರಂದು ಹರಿದ್ವಾರದ ಬಳಿ ಹರಿವ ಪವಿತ್ರ ಗಂಗಾ ನದಿಯಲ್ಲಿ ದೇಹತ್ಯಾಗ ಮಾಡಿರುವ ಪಿತಾಶ್ರೀ ಗ್ರೋವರ್ ಬರೆದಿಟ್ಟಿರಬಹುದಾದ ಉಯಿಲಿನಲ್ಲಿ ತನ್ನ ಹೆಸರಿಗೆ ಕೋಟ್ಯಂತರ ರುಪಾಯಿ ಆಸ್ತಿ ಬರೆದಿಟ್ಟರಬಹುದೆಂದೂ ತಾನು ಅದನ್ನು ವಶಪಡಿಸಿಕೊಳ್ಳಲೋಸುಗ ಬರುವ ಮಾಹೆಯ ಕೃಷ್ಣ ಪಕ್ಷದಂದು ವಿಂದ್ಯಾಚಲ ದಾತಲಿರುವುದಾಗಿಯೂ ಹೇಳಿಕೊಂಡನಂತೆ. ಹಾಗೆ ಮಾತಾಡುತಾ ರಘು ದೋಸೆ ಮಿಕ್ಸಿನಲ್ಲಿ ಮಹದೇಶ್ವರ ಬೆಟ್ಟದಲ್ಲಿ ಹೇರಳವಾಗಿ ವಾಸಿಸುವ ಸುಗ್ರೀವ ಜಾತಿಯ ಕಪಿಗಳ ತರಡು ಬೀಜಗಳನ್ನು ಮಿಕ್ಸ್ ಮಾಡುತ್ತಿರುವನಂತೆ ಎಂಬ ಪ್ರಶ್ನೆ ಹಾಕಿದನಂತೆ, ಹಳದಿ ವರ್ಣದ ಪಾಕೆಟ್‌ಗಳಲ್ಲಿನ ಪುಡಿ ಮಂಗಗಳ ತರ‌ಉ ಬೀಜದ್ದಿರಬಹುದೆಂದು ಕಾರ್ಮಿಕರು ಅನುಮಾನಿಸುವುದರ ಮೂಲಕ ಅವನಿಗೆ ಅನ್ಯೋನ್ಯವಾದರಂತೆ. ಹಾಗೆಯೇ ಆ ನಿಗೂಧ ವ್ಯಕ್ತಿ ರಘುಯ್ ಆಗಲೀ. ಅವನ ಪತ್ನಿ (ನಾನು) ಯಾಗಲೀ ವಿವಾಹೇತರ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಹಾಕುವ ಮೊದಲು ಕೆಲವು ದೃಷ್ಟಾಂತಗಳನ್ನು ನೀಡಿದನಂತೆ. ಅವನ ಮಾತಿಗೆ ಚಿತ್ರಕ ಶಕ್ತಿಗೆ ಬೆರಗಾಗಿ ಕಾರ್ಮಿಕರು ದೊಡ್ಡವರು ಸ್ವಾಮಿ ಅವರು ದೊಡ್ಡವರು, ಅವರು ಗೊತ್ತಿದ್ದೋ ಅಥವಾ ಊಹಿಸಿಯೋ ಮಾತಾಡಿದರೆ ಮಣ್ಣು ತಿನ್ನಬೇಕಾಗುತ್ತದೆ ಎಂದು ನಿಟ್ಟುಸಿರು ಬಿಟ್ಟರಂತೆ, ಇಷ್ಟೆಲ್ಲ ಹೇಳಬಾರದನ ಹೇಳಿ! ಎಷ್ಟೆಲ್ಲ ಕೇಳಬಾರದನ್ನೆಲ್ಲ ಕೇಳಿ ಅವನು ಗೋಲ್ಡನ್ ಜುಬ್ಲಿ ಗ್ಯಾರೇಜಿನಲ್ಲಿ ಬಿಟ್ಟು ಬಂದಿರುವ ತನ್ನ ಕಂಟೆಸ್ಸಾ ಕಾರು ರಿಪೇರಿಯಾಗಿರುವುದೋ ಇಲ್ಲವೋ ಎಂದು ಗೊಣಗುತ್ತ ಅಲ್ಲಿಂದ ಕದಲಿದನಂತೆ.

ಇದನ್ನೆಲ್ಲ ಹೇಳಿ ರಘು ಕಂಣು ಕೆಂಪಗೆ ಮಾಡಿಕೊಂಡ. ಅವನನ್ನು ಸಂತೈಸುವ ಅವಕಾಶ ನನಗೆ ದೊರಕಬಹುದೆಂದು ನಾನು ಕನಸು ಮನಸಲ್ಲೂ ಯೋಚಿಸಿರಲಿಲ್ಲ ಕಥೆಗಾರರೇ! ಸಂತೈಸುವ ಅವಕಾಶದ ಅನುಭವ ಎಷ್ಟೊಂದು ಸುಂದರ ಗೊತ್ತೆ? ಆದರೆ ಅಂಥ ಅವಕಾಶ ಜೀವನದಲ್ಲಿ ಒಂದೆರಡು ಬಾರಿ ಮತ್ತೆ ದೊರಕಲೆಮ್ದು ಆಷಿಸುತ್ತೇನೆ. ಇದರ ಬಗ್ಗೆ ಫ್ರಾಯ್ಡೂ-ಗೀಯ್ಡೂ; ಪ್ರಾಮೂ-ಗೀಮೂ ಚೆನ್ನಾಗಿ ಓದಿಕೊಂಡಿರಬಹುದಾದ ನಿಮಗೆ ವರ್ಣಿಸಿ ತಲೆ ತಿನ್ನದೆ ಮುಂದೇನಾಯ್ತೂಂತ ಹೇಳುತ್ತೇನೆ ಕೇಳಿ, ಮುಂದಿನ ಘಟನೆಯನ್ನು. ನೀವು ಯಾವ ರೀತಿ ಪರಿಗ್ರಹಿಸುವಿರೋ? ಅದು ನಿಮಗೆ ಬಿಟ್ಟಿದ್ದು.

ಸಿನಿಮಾಕ್ಕೆ ಅವನೇ ಬಲವಂತದಿಂದ ಒಪ್ಪಿಸಿದೆ. ಆಗಲೆ ಅವನು ಮೂರು ದಿನಗಳ ಹಿಂದೆಯೇ ಟಿಕೆಟ್ ಖರೀದಿಸಿ ಗುಟ್ಟಾಗಿ ಇಟ್ಟಿದ್ದ. ಅದೂ ಅಲ್ಲದೆ ನನ್ನ ಮನಸ್ಸು ಚೆನ್ನಾಗಿಲ್ಲ ಎಂದರೂ ಕೇಳದೆ ಅವನಿಗೆ ನಾನೇ ಸಫಾರಿ ಡ್ರೆಸ್ಸ್ ತೊಡಿಸಿ ಜೇಬಿನಲ್ಲೊಂದು ಗುಲಾಬಿ ಹೂವು ಸಿಕ್ಕಿಸಿದೆ. ರಘು ಆ ಉಡುಪಿನಲ್ಲಿ ಅಷ್ಟು ಆಕರ್ಷಕವಾಗಿ ಕಾಣಿಸಬಹುದೆಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ! ಬೇಸರದಿಂದ ಮುಖ ಬಿಕ್ಕೊಂಡಿದ್ದುದೂ ಅದಕ್ಕೆ ಕಾರಣವಿರಬಹುದು. ಆದರೆ ಅದರಲ್ಲಿ ನಿವು ಮಾತ್ರ ಸಫಾರಿ ಡ್ರೆಸ್ ಹೊಲಿಸಿ ತೊಡಬೇಡಿ. ಸಫಾರಿ ಡ್ರೆಸ್ ತೊಟ್ಟಿರುವ ಕಥೆಗಾರರ ಬರಹಗಳನ್ನು ನಮ್ಮ ಕರ್ನಾಟಕದ ಓದುಗರು ಅನುಕಂಪದ ಆಧಾರದ ಮೇಲೂ ಓದಲಾರರು. ಆದ್ದರಿಂದ ಸಫಾರಿ ಹೊಲಿಸುವುದಿದ್ದರೆ ಮರು ಯೋಚಿಸಬೇಕೆಂದು ನಿಮ್ಮ ಅಭಿಮಾನಿ ಓದುಗಳಾಗಿ ಹೇಳುತ್ತಿರುವುದಕ್ಕೆ ತಪ್ಪು ತಿಳಿಯಬೇಡಿ. ಎಷ್ಟಿದ್ದರೂ ನನ್ನ ಗಂಡ ಸಫಾರಿ ಡಧರಿಸಿದರೆ ಸುಂದರವಾಗಿ ಕಾಣಿಸುತ್ತಾರೆ ಎಂದರೆ ತಪ್ಪೇನು ಇಲ್ಲ.

ಒಂದು ರೀತಿ ಹೇಳಬೇಕೆಂದರೆ ನಾವು ಹೊರಟಾಗ ಇವರು ಸಿನಿಮಾ ನೋಡಲಿಕ್ಕೆ ಹೊರಟಿರುವರೆಂದು ಊಹಿಸಲು ಎಂಥವರಿಗೂ ಸಾಧ್ಯವಿರಲಿಲ್ಲ. ನೋಡುಗರಿಗೆ ಇವರು ಶವ ಸಂಸ್ಕಾರ ಮುಗಿಸಿಕೊಂಡು ಹೊರಟಿರುವರೇನೋ ಎಂಬಂತೆ ಕಾಣುತ್ತಿದ್ದೆವು ಎಂದರೆ ದಯವಿಟ್ಟು ನಗಬೇಡಿ.

ಮನೆಗೆ ಹಾಕಿದ್ದ ಬೀಗದ ಬಗ್ಗೆ; ಕಾವ್ಲಿರುವ ಸುರ್ಜಿತ್‌ಸಿಂಗ್‌ನ ಗುಣಧರ್ಮಗಳಬಗ್ಗೆ; ಅಪರಿಚತರೊಡನೆ ಸಲಿಗೆಯಿಂದ ಬಾಲ ಅಲ್ಲಾಡಿಸುವ ಪೊಮೆರಿಯನ್ ನಾಯಿ ಬಗ್ಗೆ ನಮ್ಮ ತಾಯಿ ಚಿಂತಿಸುತ್ತಿದ್ದರೆ; ನನ್ನ ಗಂಡ ರಘು ಮಹದೇಶವರ ಬೆಟ್ಟದ ತಪ್ಪಲಲ್ಲಿರುವ ಮಂಗಗಳ ತರಡು ಬೀಜದ ಹುಡಿಯನ್ನು ದೋಸೆ ಮಿಕ್ಸಿಗೆ ಬೆರೆಸಿದರೆ ತಿಂದವರ ಲೈಂಗಿಕ ಶಕ್ತಿ ಹೆಚ್ಚಬಹುದೇ ಎಂದು ಯೋಚಿಸುತ್ತಾ ಮಂಕಾಗಿದ್ದನು. ನಾನು ಮಾತ್ರ ಆ ನಿಘೂಡ ವ್ಯಕ್ತಿ ಸತತ ಎರಡು ದಿನಗಳಿಂದ ಕೊಡುತ್ತಿರುವ ತೊಂದರೆಗಳು ಬದುಕಿಗೆ ಅವಶ್ಯಕವೋ? ಅನಾವಶ್ಯಕವೋ? ಎಂದು ಚಿಂತಿಸುತ್ತ ಮಂಕಾಗಿದ್ದೆನು.
ನಾವು ಚಿತ್ರಮಂದಿರ ತಲುಪುವ ಹೊತ್ತಿಗೆ ಚಲನಚಿತ್ರ ಶುರುವಾಗಿ ಹದಿನೈದು ನಿಮಿಷಕ್ಕೂ ಹೆಚ್ಚಾಗಿತ್ತು. ಮಧ್ಯ ವಯಸ್ಕರಿಂದ ಕಿಕ್ಕಿರಿದಿದ್ದ ಚಿತ್ರಮಂದಿರದೊಳಗಡೆ ನಾಯಕಿ ತಿರುಪತಿ ವೆಂಕಟೇಶ್ವರ ಸ್ವಾಮಿಯ ಮೂರ್ತಿಯನ್ನು ಪೂಜಿಸುತ್ತ ಭಕ್ತಿ ಪರವಶಳಾಗಿ ಹಾಡುತ್ತಿದ್ದಳು. ಆಕೆಯ ಒಂದು ಪಕ್ಕದಲ್ಲಿ ತೊನ್ನು ರೋಗದಿಂದ ನರಳುತ್ತಿದ್ದ ಆಕೆಯ ಅತ್ತೆಯೂ; ಇನ್ನೊಂದು ಪಕ್ಕದಲ್ಲಿ ಕುಷ್ಠವ್ಯಾಧಿ ಪೀಡಿತನಾಗಿದ್ದ ಆಕೆಯ ಗಂಡನೂ ಅರೆ ನಿಮೀಲಿತ ನೇತ್ರರಾಗಿ ತಲೆ ಅಲ್ಲಾಡಿಸುತ್ತಿದ್ದರು. ಸಾಮಾನ್ಯವಾಗಿ ಉತ್ತರಾರ್ಧದಲ್ಲಿ ಬರಬೇಕಿದ್ದ ದೃಶ್ಯಗಳು ಆರಂಭದಲ್ಲಿ ನಿರ್ದೇಶಕ ಜಾಣತನದಿಂದ ಅಳವಡಿಸಿದ್ದರಿಂದಾಗಿ ಆ ಚಿತ್ರವು ಮಧ್ಯ ವಯಸ್ಕ ಗೃಹೋಪಜೀವಿಗಳನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸತೊಡಗಿತ್ತು. ಕಿರು ಟಾರ್ಚಿನ ಮಂಕು ಬೆಳಕಿನಲ್ಲಿ ಚಿತ್ರಮಂದಿರದ ನೌಕರ ತೋರಿಸಿದ ಆಸನಗಳಲ್ಲಿ ನಾವು ಮುವ್ವರು ಕೂತುಕೊಂಡೆವು. ಪರಪುರುಷನ ಪಕ್ಕದಲ್ಲಿ ಕೂತಿದ್ದ ನನ್ನ ತಾಯಿಯೂ; ಪರಸ್ತ್ರೀಯ ಪಕ್ಕದಲ್ಲಿ ಕೂತಿದ್ದ ನನ್ನ ಗಂಡನೂ ಸಾಕಷ್ಟು ಇರಸು ಮುರಸು ಅನುಭವಿಸುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ನಾನು ಸ್ತ್ರೀಯ ಪಕ್ಕ ಹೋಗಲು ಗಂಡ ರಘು ಈ ಪಕ್ಕ ಬಂದನು. ಅದು ಹೇಳಿ ಕೇಳಿ ಪತಿ ಭಕ್ತಿಯನ್ನು ಸಾರಿ ಸಾರಿ ಹೇಳುತ್ತಿದ್ದ ಚಲನಚಿತ್ರ ಅದಾಗಿತ್ತು. ರಘು ಇಂಥದೊಂದು ಚಿತ್ರ ತೋರಿಸಬಹುದೆಂದು ನಾನು ಅಂದುಕೊಂಡಿರಲಿಲ್ಲ. ನನ್ನ ಗಂಡನ ಬಗ್ಗೆ ಆ ಕ್ಷಣ ನನ್ನಲ್ಲಿ ಒಂದಿಷ್ಟು ಬೇಸರ ಮೂಡಿ ಮರೆಯಾಯಿತು. ವಿವಾಹಿತ ಗೃಹಿಣಿ ವಿವಾಹೇತರ ಸಂಬಂಧ ಇಟ್ಟುಕೊಳ್ಳುವ ವಸ್ತು ಆಧರಿಸಿ ಚಲನಚಿತ್ರ ನಿರ್ಮಿಸುವ ಯೋಜನೆ ವಿವರಿಸಿ ಜಲಜಾಕ್ಷಿಯಿಂದ ನಗೆಪಾಟಲಿಗೀಡಾಗಿದ್ದ ನಾನು ಹೆಚ್ಚು ಕಡಿಮೆ ತನ್ಮಯತೆಯಿಂದಲೇ ಚಿತ್ರ ನೋಡತೊಡಗಿದೆ. ಇಂಟರ್ವೆಲ್ಗೆ ಅರ್ಧ ಗಂಟೆ ಇರುವಂತೆ ಹಿಂದಿನ ಸೀಟಿನಲ್ಲಿ ಕೂತಿದ್ದವನಿಂದ ಕಿರುಕುಳ ಆರಂಭವಾಯಿತು. ಅದು ಅಕಸ್ಮಿಕ ಎಂದುಕೊಳ್ಳುವಂತಿರಲಿಲ್ಲ. ಕಾಲಿನ ಬೆರಳುಗಳಿಂದ ಜಘನ ಮೀಟುವುದು; ಕೈಯಿಂದ ಭುಜ ಸವರುವುದು ಮಾಡುತ್ತಿದ್ದ. ತಿರಸ್ಕರಿಸಲಾರದಂಥ ಸ್ವೀಕರಿಸಲಾರದಂಥ ಅಂತಹ ಅನುಭವವನ್ನು ಎಷ್ಟು ಹೊತ್ತು ಸಹಿಸಲು ಸಾಧ್ಯ? ನಾನು ಹಿಂದಕ್ಕೆ ಮುಂದಕ್ಕೆ ಅಕ್ಕ ಪಕ್ಕ ಸರಿದರೂ ಅವನು ಕೊಡುತ್ತಿದ್ದ ಕಿರುಕುಳ ನಿರ್ವಿರಾಮವಾಗಿ ಮುಂದುವರಿಯಿತು. ನಾನು ಹಿಂದಕ್ಕೆ ತಿರುಗಿ ನಿನಗೇನು ಅಕ್ಕ ತಂಗಿಯರಿಲ್ವೇ ಎಂದು ಮಾಮೂಲು ಡೈಲಾಗು ಹೊಡೆಯಬೇಕೆಂದು ಎರಡುಮೂರು ಬಾರಿ ಪ್ರಯತ್ನಿಸಿದೆ. ಅವನು ಮಹಾತ್ಮಗಾಂಧಿ ವಿಗ್ರಹದಂತೆ ಕೂತುಕೊಂಡಿರುತ್ತಿದ್ದ. ಮತ್ತೆ ಬೆರಳುಗಳನ್ನು ತಾಕಿಸುತ್ತಿದ್ದ. ಇಂಟರ್ವಲ್ ಬಿಟ್ಟಾಗ ಅವನಿಗೆ ರಘುನಿಂದ ಕಪಾಳ ಮೋಕ್ಷ ಮಾಡಿಸಬೇಂದು ನಿರ್ಧರಿಸಿದೆ. ಹಿಂದೆ ಕೂತಿರುವವನನ್ನು ಸ್ವಲ್ಪ ವಿಚಾರಿಸಿಕೊಳ್ಳಿ ಎಂದು ನಾನು ಹೇಳುವಷ್ಟರಲ್ಲಿ ಇಂಟರ್ವಲ್ ಬಿಟ್ಟಿತು. ನಾವು ಹಿಂತಿರುಗಿ ನೋಡಿದೆವು… ಆದರೆ ಅವನು ಆಗಲೆ ಬಾಗಿಲ ಜಂಗುಳಿಯ್ಲ್ಲಿದ್ದ. ನಮ್ಮ ತಾಯಿಯಂತೂ “ಅವ್ನೇ ಕಣೇ. ಅಲ್ಲಿರೋದು ಅವ್ನೇ” ಎಂದು ಚೀರಿದಳು. ನಮ್ಮ ರಘು ಕೂಡಲೆ ರಟ್ಟಿ ಏರಿಸಿ ಅಲ್ಲಿಗೆ ಹೋಗುವಷ್ಟರಲ್ಲಿ ಆ ಮಹಾಶಯ ತಪ್ಪಿಸಿಕೊಂಡು ಬಿಟ್ಟ. “ಸೂಳ್ಯಾಮಗ ಸಿಕ್ಕಬೇಕಿತ್ತು” ಎಂದು ರಘು ರೆಟ್ಟಿ ಇಳಿಸಿದ. ಚಲನಚಿತ್ರ ಮುಗಿಯುವವರೆಗೆ ಅವನು ಕೂತಿದ್ದ ಜಾಗ ಖಾಲಿ ಇತ್ತು.
ನಾವು ಸಿನಿಮಾ ಬಿಟ್ಟ ಮೇಲೆ ಮನೆ ತಲುಪುವಷ್ಟರಲ್ಲಿ ಹತ್ತೂ ಮುಕ್ಕಾಲು ಮೇಲಾಗಿತ್ತು. ನಾವು ಹೋದೊಡನೆ ಸಿಂಗ್ ಯಾರೋ ಒಬ್ಬ ಬಂದು ಕೊಟ್ಟಿದುದಾಗಿ ಹೇಳಿ ಒಂದು ಲಕೋಟೆಯೊಂದನ್ನು ಕೈಗಿತ್ತ. ನಾವು ಆತಂಕಾಶ್ಚರ್ಯದಿಂದ ಬಿಚ್ಚಿ ನೋಡಿದರೆ ಒಂದೂ ಅಕ್ಷರ ಮೂಡಿರದ ಬಿಳಿಹಾಳೆಗಳೆರಡು ಅದರಲ್ಲಿದ್ದವು. ಅದರಿಂದ ನಮಗೆ ಒಂದು ರೀತಿಯ ನಿರಾಸೆ ಆಯಿತೆಂದೇ ಹೇಳಬೇಕು. ಆ ನಂತರದ ದಿನಗಳಲ್ಲಿ ದಿನಕ್ಕೊಮ್ಮೆಯಾದರೂ ಈ ಮತ್ತು ಇಂಥ ಘಟನೆಗಳ ಬಗ್ಗೆ ನೆನಪಿಸಿಕೊಳ್ಳುತ್ತಿದ್ದೆವು. ಈ ಘಟನೆ ನಮ್ಮ ಬದುಕಿನ ಅಂತರ್ ವಲಯದಲ್ಲಿ ಒಂದು ಪ್ರಾಚೀನ ಶಾಸನದಂತೆ ನಿಂತು ಬಿಟ್ಟಿದೆ.

ಈ ಘಟನೆಗಳ ಕೇಂದ್ರ ಪಾತ್ರ ಖಂಡಿತವಾಗಿ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಶಾಮನೆಂದೇ ಊಹಿಸಿ ಹೇಳಬಲ್ಲೆ. ಚಿತ್ರಮಂದಿರದ ಮಸುಕು ಕತ್ತಲೆಯಲ್ಲಿ ಸ್ಪರ್ಶ್ದ ಮೂಲಕ ತಾನು ಶಾಮನೆಂದೇ ಸುಳಿವು ನೀಡಿದನೆಂದು ಭಾವನೆ. ಆದರೆ ನನ್ನ ಊಹೆಯನ್ನು ರಘುನ ಕಿವಿಯಲ್ಲಿ ಬಿಚ್ಚುವ ಗೋಜಿಗೆ ಹೋಗಿಲ್ಲ. ಖಂಡಿತ ಅವನು ಶಾಮನೇ. ಆದರೆ ಅಂಜುಬುರುಕನಾದ ಅವನು ವೇಷ ಮತ್ತು ಭಾಷೆ ಮರೆ ಮಾಚಿಕೊಂಡು ಬಂದು ವರ್ತಮಾನ ತಲ್ಲಣಿಸುವಂತೆ ವರ್ತಿಸಿ ಹೋದದ್ದೇ ಆಶ್ಚರ್ಯ. ಖಂಡಿತ ಅವನೊಳಗೆ ಅವನಿಲ್ಲ. ಅಂತರಂಗದಲ್ಲಿ ನಮ್ಮ ಕಲ್ಪನೆಗೆ ನಿಲುಕದ ಎಲ್ಲವನ್ನು ಬಚ್ಚಿಟ್ಟುಕೊಂಡು ಮಹಾಮಳ್ಳಿಗನಂತೆ ವರ್ತಿಸುತ್ತಿದ್ದಾನೆಂದು ಅರ್ಥಪೂರ್ಣವಾದ ಕಥೆ ಬರೆಯಬಹುದಾದ ನೀವು ಅರ್ಥಮಾಡಿಕೊಳ್ಳಬೇಕು. ನಾನು ಈ ಪತ್ರದಲ್ಲಿ ಪ್ರಸ್ತಾಪಿಸಿರುವ ಲಕ್ಷಣಗಳನ್ನು ಆಧರಿಸಿ ಶಾಮ ಹೌದೋ? ಅಲ್ಲವೋ? ಎಂಬುದನ್ನು ಖಚಿತ ಪಡಿಸಿಕೊಂಡು ನೀನು ನನಗೆ ಪತ್ರ ಬರೆಯಬೇಕೆಂದು ಕೋರುತ್ತೇನೆ. ನಮ್ಮ ಶಾಮ ಹಾಗೆ ಮಾಡಲು ಸಾಧ್ಯವಿಲ್ಲವೆಂದು ನೀವು ಪತ್ರ ಬರೆದರೆ ನನಗೆ ಆಗುವ ನಿರಾಶೆ ಅಸದಳ. ಹಾಗೆಂದು ತಪ್ಪು ವರದಿಕೊಡಬೇಕೆಂದೇನೂ ಇಲ್ಲ. ಬರೆಯುವಿರಿ ಎಂದು ಭಾವಿಸುವೆ.
ಒಂದು ಶತಮಾನವೇ ಮನುಷ್ಯ ರೂಪದಲ್ಲಿ ಜೀವಿಸುತ್ತಿದೆ ಎಂಬಂತೆ ನಮ್ಮ ಓಣಿಯಲ್ಲಿ ಅದೂ ನಮ್ಮ ಮನೆಗೆ ಹತ್ತಿರದಲ್ಲಿರುವ ಪರಮ ಪೂಜ್ಯ ಪರಮೇಶ್ವರ ಶಾಸ್ತ್ರಿಗಳ ಆರೋಗ್ಯ ಚೆನ್ನಾಗಿರುವುದೆಂದು ಭಾವಿಸುವೆ. ಅವರ ನೊಸಲಿಗೆ ನೀಲಗಿರಿ‌ಎಣ್ಣೆ ಲೇಪಿಸುವ ಅವಕಾಶ ನನ್ನ ಜೀವನದಲ್ಲಿ ಮುಂದೆಂದೂ ಸಿಗಲಾರದಷ್ಟು ಅವರೆಲ್ಲ ತುಂಬ ಸರಿದಿದ್ದಾರೆ. ಇರಲಿ; ಅವರೆಲ್ಲರ ಬಗ್ಗೆ ನನಗೆ ಎಂದೆಂದೂ ಗೌರವ ಇರುತ್ತದೆ.

ಜಲಜಾಕ್ಷಿ, ಕಮಲಾಕರ ಮೊದಲಾದವರಿಗೆ ನನ್ನ ನೆನಪು ತಿಳಿಸುವುದು. ನಮಗೆ ಪತ್ರ ಬರೆಯುವಿರಿ ತಾನೆ?
ನಿಮ್ಮ ವಿಶ್ವಾಸಿ,
ಅನಸೂಯಾ.

ಸುಧೀರ್ಘ ಪತ್ರ ಒಂದೇ ಏಟಿಗೆ ಓದಿಸಿಕೊಂಡಿತು. ನೂರಾರು ಪುಸ್ತಕಗಳ ಅನುಭವವಾಯಿತು. ಅನಸೂಯಾ ಅಧ್ಭುತವಾಗಿ ನನ್ನೊಳಗೆ ಬೆಳೆದು ನಿಂತುಬಿಟ್ತಿದ್ದಳು. ಪತ್ರ ಓದಿದ ನನ್ನಂಥ ಕುಬ್ಜ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ ಎನ್ನಿಸಿತು. ಅರಿವಿನ ಪರಿಧಿ ಹೆಚ್ಚಿಸುವಂತೆ ಬರೆದ ಆಕೆಗೆ ಕೃತಜ್ಞತೆಗಳನ್ನು ಅರ್ಪಿಸಿದೆ. ಅದಿರಲಿ ಆಕೆ ಸುಧೀರ್ಘ ಪ್ರಸ್ತಾಪಿಸಿದ ವ್ಯಕ್ತಿ ಶಾಮ ಹೌದೇ? ಅಲ್ಲವೇ? ಬಾಯಲ್ಲಿ ಬೆರಳಿಟ್ಟರೆ ಕಡಿಯಲಾರದ ಮುಗ್ಧ ಬೆಂಗಳೂರಿನಂಥ ನಗರಕ್ಕೆ ಹೋಗುವುದೆಂದರೇನು? ಹಾಗೆ ವರ್ತಿಸುವುದೆಂದರೇನು! ದೇವರೆ ಆ ವ್ಯಕ್ತಿ ಶಾಮ ಅಲ್ಲವಾಗಿರಲಿ? ದೇವರೇ ಪತ್ರದಲ್ಲಿನ ಸಂಗತಿ ಈ ಅಡ್ನಾಡಿ ಗ್ರಾಮದ ಮೂರನೆ ವ್ಯಕ್ತಿಗೆ ತಿಳಿಯದಿರಲಿ? ಒಂದಿಷ್ಟು ಓದಲು ಬಲ್ಲ, ಬರೆಯಲು ಬಲ್ಲ ನನ್ನ ತಂಗಿಗೆ ಈ ಪತ್ರ ಸಿಕ್ಕರೆ ಕಷ್ಟ! ಲಗುಬಗೆಯಿಂದ ಪತ್ರವನ್ನು ಲಕೋಟೆಯೊಳಗಿರಿಸಿ ಕಪಾಟಿನೊಳಗಿಟ್ಟು ಬೀಗ ಹಾಕಿ ನೆಮ್ಮದಿಯ ಉಸಿರು ಸುಯ್ದೆ.
“ನೋಡ್ದೇನವ್ವಾ ನಿಮ್ಮಣ್ಣನ ಧಿಮಾಕು… ಒಂದೀಟು ತಂಗಿ ಬಂದಾಳಂಥ ಕುಂತೂ. ನಿಂತೂ ಮಾತಾಡಿದ್ನೇನವ್ವಾ… ಓದು ಕಲ್ತೋರ ಹಣೆ ಬರಾನೆ ಇಷ್ಟು. ನಾ ನಮ್ಮಪ್ಬ್ರ್ ಬಡ್ಕೊಂಡೆ ನಮ್ಮ ಜನ್ದಾಗೆ ಈಟು ಓದಿದ್ದು ಸಾಕು. ಮುಂದೊದಿಸ್ಬೇಡಾಂತ… ಕೇಳಿದ್ನೇ ಅವ್ನು. ಕುಣಕಂತ ಓದಿಸ್ಬಿಟ್ಟ. ಈಗ್ನೋಡು ಈ ಓದ್ದೋನು ನನ್ನೋರು ತನ್ನೋರನ್ದಂಗೆ ಏಟು ಮೆರೀತಾನೆ.” ಎಂದು ಒಂದರೊಳಗೆ ಇನ್ನೊಂದು ಬೆರೆಸಿ ರಂಪಾಟ ಆರಂಭಿಸಿ ನನ್ನ ಪ್ರೀತಿಯ ತಂಗಿಯ ಕಿವಿ ಚುಚ್ಚಲಾರಂಭಿಸಿದ್ದ ನಿಂಗಮ್ಮಜ್ಜಿ ಮುಂದುವರೆದು ಹೇಳಿತು ” ಎಲೋ… ಅದೇನು ರೂಮ್ನಾಗೆ ಕೂಕೊಂಡು ಕಡಿತ್ತಿದ್ದೀಯಲೋ … ಹೊಂಡ್ಬಾರ್ದೇನೋ ರವ್ವೋಟು ಹೊರಕ… ನಿನ್ತಂಗ್ನು ನಿನ್ ಸಿರಿ ಸಮ್ಪತ್ತು ಕೇಳಾಕೆ ಬಂದಿಲ್ಲೆಲ್ಲೋ… ನಿಮ್ಮತ್ತಿ ಉರುವಣಿಗೀಗೆ ರೋಸಿ ಬಂದಾಳ… ಬಂದೀಟು ಕಷ್ಟ ಸುಖ ಕೇಳಲೋ… ನೀನು ಜಮಡಿ ಬಿಟ್ಟ ಮಲಿ ಕುಡ್ದು ಬೆಳ್ದ ಹುಡ್ಗಿ ಮ್ಯಾಲ ರವ್ವೋಟು ಕನಿಕರ ತೋರ್ಸು… ನೀನು ಹೆಣ್ಣಾಗಿ ಹುಟ್ಟಿದ್ರೆ ಗೊತ್ತಾಗ್ತಿತ್ತು.” ಇನ್ನೂ ನಾನು ಬೆಕ್ಕಿಗೆ ಹೆದಸ್ರುವ ಇಲಿಯಂತೆ ಬಿಲದ ಹೊರಗಡೆ ಕಾಲಿಡದಿದ್ದಾಗ “ಲೇ ಸಿದ್ದಿ ಆ ನಿನ್ ಮೊಮ್ಮಗ್ನ ಹೊರಗೆಳ್ಕಂಡ್ಬಾರೆ. ಏನು ನೋಡ್ಕೊಂತ ಕೂಕ್ಕಂಡಿದ್ದೀ… ಮಾ ಮಳ್ಳಿಯಂಗ” ಎಂದು ತನ್ನ ಒಡಹುಟ್ಟಿದ ತಂಗಿ ಮೇಲೆ ಹರಿಹಾಯಿತು. “ಅಲಲಲಾ… ಅದೇನು ಬಾಯವ್ವ ನಿಂದು. ತಂದೆ ಮಕ್ಳೂನ ಬೇರೆ ಮಾಡಿದ್ದಲ್ದೆ ಈಗ ಒಡಹುಟ್ದೋರ್ನ ಅಗಲಸಾಕ ಹೊಂಟೀಯಲ್ಲವ್ವಾ ಪರಾಕ್ರಮಿ. ಆ ಹುಡ್ಗ ಬಂದ್ ರವ್ವೋಟೋತ್ತಾಗಿಲ್ಲ. ಆಗ್ಲೇ ಸುರುವು ಮಾಡ್ಬುಟ್ಟೀಯಲ್ಲ… ನಿಂದೇನು ನಾಲ್ಗೇನೂ ನಾಗರಾವೋ? ಆ ಹುಡುಗ ನಿನ್ ಬಾಯಿಗೆ ಹೆದರಿ ಊರಿಗೆ ಬರ್ಬೇಕೋ ಬ್ಯಾಡವೋ…” ಎಂದು ಮುಂತಾಗಿ ಪ್ರತ್ಯುತ್ತರಾಸ್ತ್ರಗಳನ್ನು ‘ನಭೂತೊ ನಭವಿಷ್ಯತಿ’ ಎಂಬಂತೆ ಪ್ರಯೋಗಿಸುತ್ತ ಕೋಣೆ ಬಾಗಿಲಲ್ಲಿ ನಿಂತು “ನೀನಿಲ್ಲೆ ಬರೋದು ಬ್ಯಾಡ ಬಾಯಿಗ್ಬಂದಂಗೆ ಅನ್ನಿಸ್ಕೊಳ್ಳೋದು ಬ್ಯಾಡಪ್ಪಾ… ನಿನ್ನನ್ನ ಉಂಡು ನಿನ್ ಬಟ್ಟೆ ನೀನ್ತೊಟ್ಟು ಇನ್ನೊಬ್ರು ಕುಟಾಗೆ ಯಾಕನ್ನಿಸ್ಕಂತಿ. ಎತ್ಲಾಗಾದ್ರು ಹೋಗ್ಬಿಡು ಕಂಣಿಗೆ ಕಾಣ್ದಂಗೆ…” ಎಂದು ಗೂನು ಬೆನ್ನು ಸೆಟೆಸಿ ನಿಂತುಕೊಂಡಳು. ಒಡಹುಟ್ಟಿದ ತಂಗಿಯ ಸ್ವಂತ ಮೊಮ್ಮಕ್ಕಳಾಗಿರೋದಲ್ಲವೆ ಅಗಲಿಸಲು ಪ್ರಯತ್ನ ಮಾಡುತ್ತಿರುವುದು? ಸ್ವಾಭಿಮಾನಧನಿಕಳಾದ ನಿಂಗಮ್ಮಜ್ಜಿ ಕಚ್ಚೆ ಬಿಗಿದು “ಏನಲೇ ಭೋಸೂಡಿ. ಈಗಲೆ ನಿನ್ನ ಕಡ್ದು ಚೂರು ಮಾಡಿ ಈ ನೆಲದಾಗೂತಿಡ್ಲಿಲ್ಲಾಂದ್ರೆ ನಾನು ಗೂಳೆಪ್ನ ಹೆಂಡ್ತಿ ನಿಂಗಿಯೇ ಅಲ್ಲ! ಎಂದು ಶಪಥ ಮಾಡಿ ಕುಪ್ಪಳಿಸಲು ನಾನು ನಿರ್ವಿಕಾರ ಚಿತ್ತದಿಂದ ಹಾಳು ಬಾವಿಗೆ ಬಿದ್ಕಳ್ಳಿ” ಎಂದು ಹೊರಗೆ ಹೊಂಟೆ. ಕಾಳಗ ಕದನ ರಣತುಂಗಳಿಗೆ ನಮ್ಮ ಮನೆತನ ಸ್ವಾತಂತ್ರ್ಯ ಸಂಗ್ರಾಮದಿಂದಲೂ ಹೆಸರುವಾಸಿ. ಪ್ರಥಮ ಸ್ವಾತಂತ್ರ್ಯ ಸಮರದ ಕಲಿಗಳೇ ಮರುಜನ್ಮ ತಾಳಿ ನಿಂಗಮ್ಮಜ್ಜಿ ಸಿದ್ದಮ್ಮಜ್ಜಿ ಹುಟ್ಟಿರುವರೆಂಬುದು ನನ್ನ ಭಾವನೆ, ಇವರೇ ಮುಂದೆ ಎಲ್‌ಇಟಿ‌ಇ ಮುಖ್ಯಸ್ಥ ಟೈಗರ್ ಪ್ರಭಾಕರನಾಗಿ ಹುಟ್ಟಿರಲೂ ಬಹುದು ಕೂಡ. ಕಾಲು ಕೆದರಿ ಜಗಳ ತೆಗೆಯ ಬಹುದಾದ ಇಂಥವರು ಗಂಟಲಲ್ಲಿಟ್ಟುಕೊಂಡ ಬಿಸಿ ತುಪ್ಪದ ಥರ. ಉಗುಳುವುದು ಕಷ್ಟ, ನುಂಗುವುದಂತೂ ಮೊದಲೇ ಕಷ್ಟ, ಕಾಡ ತೂಸಿನಲ್ಲಿ ಹಸಿನೆಣ ತುಂಬಿರುವ ಈ ಪಿರಂಗಿಗಳು ಸ್ಪೋಟಕ್ಕೆ ಮೊದಲು ಮಾಡುವ ಗಲಾಟೆಯೇ ಜಾಸ್ಟಿ ಎಂದು ಮುಂತಾಗಿ ಯೋಚಿಸಿದ್ದು ತೊಟ್ಟಿಲು ಮಠದ ಗಡಿ ದಾಟುವವರಿಗೆ ಮಾತ್ರ. ಆ ಕೂಡಲೆ ಶ್ರೀಮತಿ ಅನಸೂಯ ತನ್ನ ಪತ್ರದಲ್ಲಿ ಪ್ರಕಟಿಸಿದ್ದ ಶಾಮನ ಉಪದ್ವಾಪಿ ಕಾಡಲು ಶುರುಮಾಡಿತು.
ಶಾಮ ನಿಘೂಡ ವ್ಯಕ್ತಿಯಾಗಿ ಕಾಡಿದ್ದರ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಅನಸೂಯಳಿಗಿದೆಯೋ ಇಲ್ಲವೋ? ಆದರೆ ನನಗೆ ಮಾತ್ರ ಇದೆ ಎಂದುಕೊಂಡೆ. ಮಾನಸಿಕವಾಗಿ ಆರೋಗ್ಯದಿಂದಿರಬೇಕಾದರೆ ಅಂತರಂಗದಲ್ಲಿ ಯಾವುದೇ ವ್ಯಕ್ತಿ ಬೇರೆ ಬೇರೆ ರೂಪ ತಾಳಬಾರದು! ತಾಳುತ್ತಿರುವನೆಂದರೆ ಕೂಡಲೆ ಸರಿಪಡಿಸಿಕೊಳ್ಳಬೇಕು. ಎಲ್ಲದಕ್ಕೂ ಮೊದಲು ಅವನು ಸಫಾರಿ ಸೂಟ್ ಹೊಲಿಸಿರುವನೋ ಇಲ್ಲವೋ ಎಂಬುದನ್ನು ಪತ್ತೆ ಮಾಡಲು ಬಾಂಬೆ ಟೈಲರಿಮಾಮನ ಬಳಿಗೇ ಹೋಗಬೇಕೆಂದು ನಿರ್ಧರಿಸಿದೆ. ಕುರಾನಿನಲ್ಲಿ ಬಳಕೆಯಾಗಿರುವ ಭಾಷೆ ಮೇಲೆ ಸಂಸ್ಕೃತದ ಪ್ರಭಾವ ನಿಚ್ಚಳವಾಗಿ ಕಾಣಿಸುತ್ತಿದೆ ಎಂದು ಹೇಳಲು ಶುರು ಮಾಡಿದ ನಂತರವೇ ಇಮಾಮ ಶಾಮನಿಗೆ ಹತ್ತಿರವಾಗಿದ್ದನಂತೆ. ಯಾಜ್ಞವಲ್ಕ ಸ್ಮೃತಿ ಮತ್ತು ಕುರಾನು ಪರಸ್ಪರ ನೆಂಟಸ್ತನ ಬೆಳೆಸಿದರೆ ಹೇಗಿರುತ್ತದೋ ಹಾಗೆಯೇ ಶಾಮ ಮತ್ತು ಇಮಾಮರ ನಡುವೆ ಇದ್ದ ಗೆಳೆತನ. ಅವನ ಟೈಲರಂಗಡಿಗೆ ಶಾಮ ಬೆಟ್ಟಿಕೊಡದ ದಿನವೇ ಇಲ್ಲ ಎನ್ನಬಹುದು. ಅವನು ನಾರುಮಡಿಯುಟ್ಟು ಸಾಂಪ್ರದಾಯಿಕವಾದ ಜುಟ್ಟು ಬಿಟ್ಟು ಆಧುನಿಕ ಉಡುಪು ಹೊಲಿಸಲು ಹೆಸರಾಗಿರುವ ಆ ಅಂಗಡಿಯೊಳಗೆ ಸ್ಟೂಲಿನ ಮೇಲೆ ಕೂಡುವುದು, ಪ್ಯಾಂಟು ಹೊಲಿಯುವಾಗ ಕಾದಂಬರಿ ಪ್ರಕಾರದ ಬಗೆಗೂ, ಬುಷ್ಷರ್ಟು ಹೊಲಿಯುವಾಗ ಕಥಾಪ್ರಕಾರದ ಬಗೆಗೂ; ಸುಸ್ಕಿಕ್ಷಿತ ಯುವತಿಯರ ಬ್ಲವುಜು ಹೊಲಿಯುವಾಗ ಕಾವ್ಯ ಪ್ರಕಾರದ ಬಗೆಗೂ; ಅಶಿಕ್ಷಿತ ಹಳ್ಳಿ ಮಹಿಳೆಯರ ಕುಬುಸ ಹೊಲಿಯುವಾಗ ಜಾನಪದ ತ್ರಿಪದಿ ಸಾಹಿತ್ಯದ ಬಗೆಗೂ ಇಮಾಮು ಶಾಮನೊಡನೆ ಚರ್ಚೆ ಆರಂಭಿಸುತ್ತಿದ್ದುದನ್ನು ನಾನು ಕೆಲವೊಮ್ಮೆ ನೋಡಿರುವುದುಂಟು. ಚರ್ಚೆಯಲ್ಲಿ ಭಾಗವಹಿಸಿರುವುದೂ ಉಂಟು. ಕೆಲವೊಮ್ಮೆ ನನ್ನ ತರ್ಕ ಒಪ್ಪಿಕೊಂಡರೂ ಶಾಮನಷ್ಟು ನಾನು ಇಮಾಮನಿಗೆ ಹತ್ತಿರವಾಗಿಲ್ಲ.

ನಾನಲ್ಲಿಗೆ ತಲುಪುವ ಮೊದಲು ಇಮಾಮನ ಹಿನ್ನೆಲೆ ಕುರಿತು ತುಸು ಹೇಳುವುದು ಒಳ್ಳೆಯದೆಂದುಕೊಳ್ಳುತ್ತೇನೆ. ಬಾಂಬೆ ಟೈಲರನೆಂದು ಕೊಟ್ಟೂರು ಮತ್ತದರ ಕಂದಾಯ ಹಳ್ಳಿಗಳ್ಲ್ಲೆಲ್ಲ ಹೆಸರು ಮಾಡಿರುವ ಇಮಾಮ ಅಥವಾ ಮಹಮ್ಮದ್ ಇಮಾಮುದ್ದೀನ್ ಸದರೀ ಗ್ರಾಮದಲ್ಲಿ ಏಕ್ ಮೀನಾರ್ ಮಸೀದಿಕಟ್ಟಿಸಿದ ಮಹಮದ್ ಸಲಾವುದ್ದೀನ್ ಸಾಹೇಬರ ಏಕಮಾತ್ರ ಪುತ್ರನು. ಮಕ್ಕಳಿಲ್ಲದೆ ಕೊರಗುತ್ತಿದ್ದ ಸಲಾವುದ್ದೀನ್ ಸಾಹೇಬರು ಉತ್ತರ ಭಾರತದ ಅಜ್ಮೀರಿಗೆ ಹೋಗಿ ಹಜರತ್ ಖ್ವಾಜಾ ಮೊಹಿದ್ದೀನ್ ಚಿಸ್ತಿಯವರ ದರಗಾ ಷರೀಫ್ ಬಳಿ ಎರಡು ರಾತ್ರಿ ಮಲಗಿದರೂ ಶರಣರು ಕನಸಿನಲ್ಲಿ ಕಾಣಿಸಿಕೊಂದು ಸಂತಾನದ ಬಗ್ಗೆ ಭರವಸೆ ಕೊಡಲಿಲ್ಲ. ಆ ದಂಪತಿಗಳು ದೆಹಲಿಗೆ ಬಂದು ನಿಜಾಮುದ್ದೀನ್ ಔಲಿಯಾರವರ ದರಗಾದ ಬಳಿ ವಸ್ತಿ ಮಾಡಿದರು. ಮೂರನೆ ರಾತ್ರಿ ಹಜರತ್ ಫಕೀರನ ವೇಷದಲ್ಲಿ ಕಾಣಿಸಿಕೊಂಡು ಏಕ್ಮಿನಾರ್ ಮಸೀದಿ ಕಟ್ಟಿಸಿದಲ್ಲಿ ಪುತ್ರ ಸಂತಾನವಾಗುದೆಂದು ಅಪ್ಪಣೆ ಕೊಡಿಸಿದರು. ಅದನ್ನು ಅವರು ತಾವು ಪ್ರಯಣಿಸುತ್ತಿದ್ದ ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್‌ನಲ್ಲಿ ತಮ್ಮ ಗಂಡನಿಗೆ ಹೇಳಿದರು. ಆಸ್ತಿ ಐಶ್ವರ್ಯಕ್ಕಿಂತ ಪುತ್ರ ಸಂತಾನವೇ ಹೆಚ್ಚೆಂದು ಭಾವಿಸಿದ ಸಲಾವುದ್ದೀನ ಸಾಹೇಬರು ಊರಿಗೆ ಮರಳಿದೊಡನೆ ಇದ್ದ ಬದ್ದ ಆಸ್ತಿಯನ್ನೆಲ್ಲ ಮಾರಿ ಮುಸ್ಲಿಮರ ಕೇರಿಯೊಳಗೆ ಮಸೀದಿ ಕಟ್ಟಿಸಿದರು. ಕೆಲ ತಿಂಗಳಲ್ಲೇ ಅವರಿಗೆ ಪುತ್ರ ಸಂತಾನವಾಯಿತು. ನಿಜಾಮುದ್ದೀನ್ ಎಂದು ನಾಮಕರಣ ಮಾಡಿದ್ದರೂ ಅದು ಹುಟ್ಟಿದೋಡನೆ ತಂದೆಯನ್ನು ನುಂಗಿ ನೀರು ಕುಡಿದು ಇಮಾಮು ಎಂಬ ಹೊಸ ಹೆಸರು ಧರಿಸಿ ಬಡತನದ ಬೇಗೆಯಲ್ಲಿ ಬೆಳೆಯಿತು. ಅದು ಕರೀಮನ ಸೈಕಲ್ ಶಾಪಿನಲ್ಲಿ ಹಗಲೆಲ್ಲ ದುಡಿದು ತನ್ನ ತಂದೆ ಕಟ್ಟಿಸಿದ್ದನೆಂಬ ಅಭಿಮಾನದಿಂದ ಏಕ್‌ಮಿನಾರ್ ಮಸೀದಿಯಲ್ಲಿ ಮಲಗುವುದು ಮಾಡುತ್ತಿತ್ತು. ಅದನ್ನು ಸಂತೂಕ್ಚಂದ್‌ನ ಜವಳಿ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ಮೌಲಾಲಿ ಸಾಹೇಬ ಸಹಿಸಲಿಲ್ಲ. ಮಾತಿಗೆ ಮಾತು ಬಂದು ಇಮಾಮನೆಂಬ ಬಾಲಕನನ್ನು ಒದ್ದು ಮಸೀದಿಯಿಂದ ಹೊರಹಾಕಿ ಮುಸ್ಲಿಂ ಭಾಂದವರಿಂದ ಸೈ ಅನ್ನಿಸಿಕೊಂಡರು. ಅದರಿಂದ ಕ್ರುದ್ಧನಾದ್ ಇಮಾಮನು ತಾನು ಹಣ ಗಳಿಸಿಕೊಂಡೇ ಊರಲ್ಲಿ ಕಾಲಿಡುವುದಾಗಿ ಶಪಥ ಮಾಡಿದನು. ವೃದ್ಧ ಮಾತೆ “ನಕ್ಕೊ ಬೇಟಾ ನಕ್ಕೋ ಬೇಟಾ” ಎಂದು ತಡೆದರೂ ಕೇಳದೆ ಇಮಾಮು ಕೊತ್ತಲಿಗಿಗೆ ಹೋಗುವುದಾಗಿ ಹೇಳಿ; ಗುಂತಕಲ್ ಮೂಲಕ ದಾದರ್ ಎಕ್ಸ್‌ಪ್ರೆಸ್‌ನ ಕಕ್ಕಸ್ಸುಕೋಣೆಯಲ್ಲಿ ಅವಿತು ಪಯಣಿಸಿ ಬೊಂಬೈ ತಲುಪಿದನು. ಅಲ್ಲಿ ಕೆಲವು ತಿಂಗಳ ಭೂಗತ ದೊರೆ ಹಾಜಿ ಮಸ್ತಾನ್ ಸಾಹೇಬರ ಆಪ್ತ ವಲಯದಲ್ಲಿ ಕೆಲಸ ಮಾಡಿ ಅಲ್ಲಿಂದ ದುಬಾಯ್‌ಗೆ ಪ್ರಯಾಣ ಬೆಳೆಸಿದನು. ದುಬೈಯಲ್ಲಿ ಕೆಲವು ತಿಂಗಳಿದ್ದು ಅಲ್ಲಿಂದ ಇರಾನ್‌ಗೆ ಪ್ರಾಯಣ ಬೆಳೆಸಿದನು. ಇರಾನಿಗಿಂತ ಇರಾನನ್ನು ಆಳುತ್ತಿದ್ದ ಷಾ ತುಂಬ ಸೊಗಸಾಗಿ ಕಂಡಿದ್ದರಿಂದ ಅಲ್ಲೇ ಇದ್ದು ಬಿಟ್ಟನು.

ಷಾ ರವರು ಮುವ್ವರು ಪುತ್ರಿಯರಿಗೆ ಪಂಜಾಬಿ ಡ್ರೆಸ್ ಹೊಲಿದು ಕೊಡುವಷ್ಟರ ಮಟ್ಟಿಗೆ ಅವನು ದರ್ಜಿಯಾಗಿ ಪ್ರಸಿದ್ಧನಾಗಿದ್ದನಂತೆ. ತಮ್ಮ ತರುಣಿಯರು ಬುರುಖಾದೊಳಗೆ ಪಂಜಾಬಿ ಡ್ರೆಸ್ ತೊಟ್ಟುಕೊಂಡು ಅದ್ದಾಡುತ್ತಿರುವುದು ಅಯತುಲ್ಲಾ ಖೋಮೇನಿಯ ಬಂಧು ಬಳಗದವರಿಗೆ ತಿಳಿಯುವ ಹೊತ್ತಿಗೆ ಅವನು ಲಕ್ಷಾಂತರ ದೀನಾರುಗಳನ್ನು ಸಂಪಾದಿಸಿಬಿಟ್ಟಿದ್ದನಂತೆ. ಅಪಾದನೆ ಹೊರಿಸಲು ನಂತರ ಮರಣದಂಡನೆ ವಿಧಿಸಲು ಇನ್ನೊಂದೈದು ತಿಂಗಳು ಇದೆ ಎನ್ನುವಾಗ ಅವನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಭಾರತಕ್ಕೆ ನುಸುಳಿದನಂತೆ. ಸಾವಿರ ಮೈಲಿಯೊಳಗೆ ಎರಡು ನಮೂನಿ ಕಳ್ಳತನಕ್ಕೆ ತುತ್ತಾಗಿ ಕೊಟ್ಟೂರು ಸೇರಿ ಇಂಥ ಎಷ್ಟೋ ಕಥೆಗಳಳನ್ನು ಹೇಳುತ್ತ ‘ಬಾಂಬೆ ಟೈಲರ್’ ಎಂದು ಹೊಸ ಗಿರಾಕಿಗಳನ್ನು ಆಕರ್ಷಿಸಿದನಂತೆ. ಪೋಸ್ಟ್‌ಮ್ಯಾನ್ ರಾಮಣ್ಣನ ಮೂಲಕ ಇಂಥ ಇಮಾಮನನ್ನು ಪರಿಚಯ ಮಾಡಿಕೊಂಡ ಶಾಮು ದಿನಾಲು ಅಲ್ಲಿ ಒಂದು ತಾಸಾದರೂ ಕುತುಕೊಳ್ಳುವುದು, ಇರಾನಿನ ತರುಣಿಯರ ಲೈಂಗಿಕ ಆಸಕ್ತಿ ಕುರಿತಂತಹ ಕಥೆಗಳನ್ನು ಕೇಳಿ ಆನಂದಿಸುವುದನ್ನು ಅಭ್ಯಾಸ ಮಾಶಿಕೊಂಡನಂತೆ. ಸಧ್ಯಕ್ಕೆ ಮೂವರು ಪತ್ನಿಯರೊಂದಿಗೆ ಹನ್ನೆರಡು ಮಂದಿ ಮೊಮಕ್ಕಳೊಂದಿಗೆ ಸುಖವಾಗಿರುವ ಇಮಾಮನೆಂದರೆ ಗ್ರಾಮದ ಎಲ್ಲರಿಗೂ ಅಚ್ಚುಮೆಚ್ಚು.

ಇಂಥ ಇಮಾಮ ನಾನು ಹೋದಾಗ ಗ್ರಾಮದ ಮಾಜಿ ಎಮ್ಮೆಲ್ಲೆ ದಮ್ಮಡಿ ಮೂಗವ್ವನ ಮಗ ಕುಂಟಿರಯ್ಯನ ಮೂರನೆ ಮಗಳಾದ ಅಂಬಿಕಾಳ ಓಳ ಉಡುಪುಗಳಿಗೆ ಗುಂಡಿ ಹಚ್ಚುವುದರಲ್ಲಿ ಮಗ್ನನಾಗಿದ್ದ. ನಾನು ಹೋದೊಡನೆ ‘ಆಯಿಯೇ…ಸಾಬ್ ಆಯಿಯೇ ಬೈಠಿಯೇ ಸಾಬ್ ಬೈಠಿಯೇ…’ ಎಂದು ತೋರಿಸಿದ ಮೂರು ಕಾಲಿನ ಕುರ್ಚಿಯ ಮೇಲೆ ಹುಷಾರಿಂದ ಕುಳಿತುಕೊಂಡೆ. “ಅರೆ ಹೋ ಕರೀಂ ಕಾ ಬಚ್ಚಾ ಸುಲೇಮಾನ್.. ಶೆಟ್ಟಿ ಹೂಟ್ಲೂಕು ಹೋಗಿ ಎರಡರ್ಧ ಜಾಕ್‌ಪಾಟ್ ಮಡಿಸ್ಕೊಂಡು ಬಾರ್ಲೇ… ನಮ್ಮ ಶಾಮಣ್ಣಾಕಿ ದೋಸ್ತು ಭಾಳ ದಿನ್ಕೆ ಬಂದಾರೆ” ಎಂದು ಹೇಳಿ ಗದುಮಿದ.

“ಅಲ್ಲಾ ದೊಡ್ಡೋನು… ಅವನ ದಯೆಯಿಂದ ನೀವು ಬಹುತ್ ಅಚ್ಚಾ ಆದೀರಿ… ನೀವು ಒಂದು ಕಡೆಯಿಂದ ನೋಡಿದ್ರೆ ಹೋಸ್ಲಿ ಮುಬಾರಕ್ ಸಾಹೆಬ್ರು ಕಂಡಂಗೆ ಕಾಣ್ತಿದೀರಿ. ಅಂದ ಹಾಗೆ ನಿಮ್ಮ ಖೂನ್ ಅಗೈತೆಂಬ ಸುದ್ದಿ ಹಬ್ಬಿತ್ತಲ್ಲ ಮಾರಾಯ್ರೆ. ಯಾರು ಹೇಳಿದ್ದಂತೀರಿ? ಅದೇ ನಿಮ್ಮ ದೋಸ್ತು ಶಾಮಣ್ಣೋರು. ಅವರ್ಗೆ ಯಾರು ಹೇಳಿದ್ದಂತೀರಿ? ಅದೇ ಪೋಸ್ಟ್‌ಮನ್ ರಾಮಣ್ಣೋರು… ಅವರ್ಗೆ ಯಾರು ಹೇಳಿದ್ದಂತೀರಿ… ಅದೇ” ಎಂದು ಹೇಳತೊಡಗಿದ್ದು ನನಗೆ ಆಶ್ಚರ್ಯ ಮತ್ತುಭಯ ಏಕಕಾಲ್ಕಕುಂಟಾದವು.
ಎದುರಿಗಿದ್ದ ನಿಲುವುಗನ್ನಡಿಯಲ್ಲಿ ನನ್ನ ಪ್ರತಿಬಿಂಬ ನನ್ನನ್ನು ನೋಡಿ ಪಕಪಕ ನಗಾಡಿದಂತೆ ಭಾಸವಾಯಿತು. ಇಲ್ಲಿಗೆ ಬಂದ ತಪ್ಪಿಗೆ ಎಕ್ಕಡದಿಂದ ಹೊಡೆದುಕೊಳ್ಳುವಷ್ಟು ಸಿಟ್ಟು ಬಂತು.

“ಹಂಗಲ್ಲ ಇಮಾಮು, ನಾನು ಯಾಕೆ ಬಂದೇ ಅಂದ್ರೆ…” ಎಂದು ಹೇಳುವಷ್ಟರಲ್ಲಿ ಅವನೇ ಒಳ ಉಡುಪಿನ ದಾರ ಕಡಿದು ಸೂಜಿ ಬೇರ್ಪಡಿಸುತ್ತ “ಆರಾಮಶೀರು ಬೈಠೀಯೆ ಜನಾಬ್… ನೀವು ಯಾಕ ಬಂದಿದೀರಂತ ನಂಗೊತ್ತು. ಅದೇ ವಿಶಯ ತಿಳ್ಕೊಳ್ಳಿಕ್ಕೆ ತಾನೆ” ಎನ್ನಲು ನಾನು ಸುಡುವ ಭೂಮಿಗೆ ಬಿದ್ದ ಒಂದು ಹಿಡಿ ನೀರಿನಂತಾಗಿ ಬಿಟ್ಟೆ.
ಬಾಯಿ ಒಣಗಿ ಮುಂದೇನು ಮಾತಾಡಬೇಕೆಂದು ತೋಚದಾಗಿ ಅವನತ್ತ ಒಂದುಕ್ಷಣ ಮಿಕಿಮಿಕಿ ನೋಡಿದೆ. ಅವನು ಮಾತ್ರ ನೀರೋ ಚಕ್ರವರ್ತಿಯಂತೆ ತನ್ನಪಾಡಿಗೆ ತಾನು ಪಿಟೀಲು ಬಾರಿಸುತ್ತಲೇ ಇದ್ದ.

ಇವರೆಲ್ಲರಿಗೆ ವಾಗಿಲಿ ಗ್ರಾಮದಲ್ಲಿ ನನ್ನ ಸುತ್ತ ನಡೆದಿರುವ ಘಟನೆಗಳ ಪೂರ್ವ ಪರಿಚಯ ಇರುವಂತಿದೆಯಲ್ಲಾ? ಪ್ರಾಯಶಃ ಅಲ್ಲಿಂದ ಯಾರಾದರೂ ಬಂದು ಹೋಗಿರಬೇಕು? ಇಲ್ಲವೆ ಪತ್ರ ಬರೆದಿರಬೇಕು. ಅದು ಈ ಅಲಾಲುಕೋರರ ಕೈಗೆ ಸಿಕ್ಕಿ ಹಲವುಬಣ್ಣ ಧರಿಸಿರಬಹುದು? ಆದರೆ ನಮ್ಮ ಮನೆಯಲ್ಲಿ ನಿಂಗಮ್ಮಜ್ಜಿಯೇ ಮೊದಲಾದವರ್ಯಾರೂ ಚಕಾರ ಎತ್ತದಿದ್ದುದು ಎಂಥ ದುರಂತ? ಮುಂದೆಂದಾದರು ಸತ್ತರೆ ಈ ಊರಲ್ಲಿ ಮಾತ್ರ ಹೆಣ ದಫನ್ ಆಗದಂತೆ ಮುಂಜಾಗ್ರತೆ ವಹಿಸಬೇಕೆಂದು ಕೃತು ನಿಶ್ಚಯ ಕೈಗೊಂಡೆ.

ಅದೇ ಹೊತ್ತಿಗೆ ಸುಲೇಮಾನು ಎಂಬ ಕರೀಂ ಕಾ ಬೇಟಾ ಜಾಕ್ಪಾಟ್ ತಂದು ನೆಗ್ಗಿ ನುಜ್ಜಾಗಿದ್ದ ಗಿಲಾಸಿನಲ್ಲಿ ಹಾಕಿಕೊಟ್ಟ. ಶೆಟ್ಟಿ ಹೋಟಲ್ಲಿನ ಸಮಸ್ತ ಹೊಗೆಯೇ ಅದರಲ್ಲಿ ತುಂಬಿಕೊಂಡಿತ್ತು. ಕುಡಿಯಲು ನಿರಾಕರಿಸಿದರೆಲ್ಲಿ ಏನು? ಎತ್ತ? ಎಂಬ ಗುಟ್ಟುಗಳಿಗೆ ಒಂದು ದಾರಿ ತೋರಿಸಲಾರನೋ ಎಂಬ ಆತಂಕದಿಂದ ಕುಡಿದು ಮುಗಿಸಿದೆ.

“ಶೆಟ್ಟಿಕಾ ಹಾಥ್ ಕಾ ಸಫಾಯಿ ಖೂಬ್ ಸೂರತ್ ಹೈ” ಎಂದು ಹೊಗಳುತ್ತ ಗಿಲಾಸನ್ನು ಹಿಂದಿರುಗಿಸಿದ. “ಈ ಸುವ್ವರ್ ಕಾ ಬಚ್ಚಾ ಶೆಟ್ಟಿ ಏನಾದ್ರು ಇರಾನಿನಲ್ಲಿ ಹೋಟ್ಲಿಟ್ತು ಇಂಥ ಜಾಕ್ಪಾಟ್ ಸೋಸಿದ್ದೂಂದ್ರೆ ಸಿರಫ್ ಏಕ್ ಸಾಲ್ ಮೇ ಲಾಖೋಂರುಪ್ಯಾ ಕಮಾಯಿ ಬಿಡ್ತಾನೆ ನೋಡ್ರಿ ಮಾಸ್ತರ್ ಸಾಬ್” ಎಂಬೊಂದು ಸಳ್ವಿಪಿಕ್ಟು ಕೊಟ್ಟ.
ಇಷ್ಟೊಂದು ಇವನು ಮಾತಾಡಬಹುದೆಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಕಿರು ನಾಟಕದೊಳಗೆ ಸಮಸ್ತ ಇರಾನನ್ನು ಬೆರೆಸಿ ತಲೆ ತಿನ್ನುವ ಕಲೆಯನ್ನು ಕರಗತ ಮಾಡಿಕೊಂಡಿರುವುದು ಪ್ರಾಯಶಃ ಇತ್ತೀಚಿನ ದಿನಗಳಲ್ಲಿರಬೇಕು.ಜನವರಿಯಿಂದಿಚ್ಚೀಗೆ ಇರಬೇಕು. ಶಾಮ ನಿರ್ಭಿಡೆಯಿಂದ ಬಳ್ಳಾರಿ, ಬೆಂಗಳುರಿಗೆ ಹೋಗಿ ಪ್ರೈವೇಟ್ ಡೆಟೆಕ್ಟಿವ್ ಥರ ವರ್ತಿಸುವುದನ್ನು ಕಲಿಯಬೇಕಾದರೆ ಇಮಾಮನಂಥವರು ಕೊಟ್ಟೂರೊಳಗೆ ಇರಾನನ್ನು ಬೆರಸಿ ಮಾತಾಡದೆ ಇರಲು ಹೇಗೆ ಸಾಧ್ಯ?
“ಯಾಕೆ ಬಂದ್ದಿದ್ದೀನಿ ನಂಗೊತ್ತೂ ಅಂತಿದ್ದಾನಲ್ಲ ಈ ಬಡವಾ!”
ಉಗುಳು ನುಂಗಿಕೊಂಡೆ.

“ಇಮಾಮು ನಾನು ಬಂದಿದ್ದು ಯಾಕಂದ್ರೆ?… ಎಂದು ಮಾತು ಆರಂಭಿಸುವಷ್ಟರಲ್ಲಿ ಅವನೇ ಪಾನನ್ನು ಒಂದು ದವಡೆಗೆ ತುರುಕಿ “ಮುಝುಕು ಮ್ಮಲುಂ ಹೈ…” ಇರಾನಿನಲ್ಲಿ ಇಂಥಾದೆಲ್ಲ ಮಾಮೂಲೈತೆ… ಅದಿರ್ಲಿ… ನಿಮ್ದು ಖೂನ್ ಅಗೈತಂತ ಸುದ್ದಿ ಹಬ್ಬಿ ಬಿಟ್ಟಿತ್ತಲ್ಲಾ… ಎಂಥೋರ್ಗೆ ಎಂಥ ಗತಿ ಬಂತಲ್ಲಪ್ಪಾ ಅಂತ ಮಾತಾಡ್ಕೊಂಡ್ವಿ ನೋಡ್ರಿ. ನಮ್ಮ ಶಾಮಣ್ಣ ನಗುನಗುತಾ ಹೇಳ್ದಾಗ ಎಂಥ ದೋಸ್ತಪ್ಪಾ ಈತಾಂತ ಅನ್ನಿಸಿಬಿಟ್ತುನೋಡ್ರಿ. ಅಲ್ಲಾ ಅದೆಂಗ ಖೂನಾತು ಏನ್ಕಥೆ? ಇದು ಸುಳ್ಳೋ ನಿಜವೋ? ನಿಮ್ಮನ್ನ ಖುದ್ಧ ಬೆಟ್ಟಿಯಾಗಿ ಕೇಳಬೇಕೆಂದ್ಕೊಂಡಿದ್ವಿ ನೋಡ್ರಿ… ಹೆಂಗೋ ನೀವೇ ಬಂದಿದ್ದೀರಿ. ನಿಂದು ಖೂನ್ ಯಾವಾಗಾಯ್ತು? ಹೆಂಗಾಯ್ತು? ಒಂಚೂರು ಬಿಡಿಸಿ ಹೇಳ್ರಲ್ಲಾ?… ನನಗಂತೂ ಖೂನು ಗೀನೂ ಆಗೋ ಸಿನ್ಮಾಗಲೆಂದ್ರೆ ಬಲು ಖಯಾಲು ನೋಡ್ರಿ…” ಎಂದು ಮಾತಾಡುತ್ತಲೇ ಅಂಬಿಕಾಳ ಉಡುಪುಗಳನ್ನು ಮಡಚಿ ಗಿಲಾಸಿನ ಬೀರುದೊಳಗೆ ಪೇರಿಸಿಟ್ಟ.

“ಅಲ್ಲ ಇಮಾಮು… ಯಾರೋ ಮೂರ್ಖರು ಈ ಸುದ್ದಿ ಹಬ್ಬಿಸಿರ್ಬೇಕು! ಖೂನಿ ಆಗಿದ್ರೆ ನಾನೆಂಗ ಜೀವಂತ ಬರ್ತಿದ್ದೆ ಹೇಳು!” ಎಂದೆ.
“ಅರೆ ಹೌದಲ್ಲ!… ಜೀವಂತ ಬಂದಿರೋರು ಅದೆಂಗ ಖೂನಿ ಆಗ್ತಾರೆ ಹೇಳ್ರಿ. ಇದು ನಂಗೆ ಯಾಕೋ ಹೊಳಿಲೇ ಇಲ್ಲವಲ್ಲಾಂತ…” ಎಂದು ಹಣೆ ಹಣೆ ಚಚ್ಚಿಕೊಂಡ.
“ಅದಿರ್ಲಿ ಸಾಬೂ… ನಾನಿಲ್ಲಿಗೆ ಬಂದಿದ್ದು…” ಎನ್ನುವಷ್ಟರಲ್ಲಿ ಅವನೆ ಅಡ್ಡಬಾಯಿ ಹಾಕಿ “ನೀವು ಯಾಕೆ ಬಂದೀರಂತ ಮುಝ್ಕು ಮಾಲುಂ ಹೈಜೀ… ಸಿರ್ಫ್ ಮುಝ್ಕೋಭಿ ನಹೀಂ ಯೆ ಗಾಂವ್ ಕಾ ಸಬ್ ಲೋಗೋಂಕು ಮಾಲುಂ ಹೈ… ಶಾಮಣ್ಣ ಬೂದು ಬಣ್ಣದ ಸಫಾರಿ ಸೂಟ್ ಹೊಲಿಸಿದ್ದಾನೋ ಇಲ್ವೋ ಅಂತ ತಾನೆ ನೀವು ಕೇಳೋಕೆ ಬಂದಿರೋದು?” ಎಂದು ನನಗೆ ಮರು ಪ್ರಶ್ನೆ ಹಾಕಿದೊಡನೆ ನಾನು ಪಾತಾಳಕ್ಕೆ ಇಳಿದು ಹೋಗಿಬಿಟ್ಟೆ.

“ಕೈಸಾ ಮಾಲುಂ ಹುವಾ ಇಮಾಂಭಾಯ್” ಎಂದರೆ ಆತ “ಬೆಕ್ಕುಕಣ್ಮುಚ್ಚಿ ಹಾಲು ಕುಡಿದ್ರೆ ತನ್ನನ್ಯಾರು ನೊಡಲ್ಲಾಂತ ತಿಳಿದುಕೊಂಡಿರುತ್ತದೆ” ಎಂಬ ಆಯಕಟ್ಟಾದ ಗಾದೆ ಮಾತನ್ನು ಎದೆಗೆ ಒದ್ದಂತೆ ಸೇರಿಸಿದ.

ಈಗೊಂದೆರಡು ತಿಂಗಳು ಹಿಂದೆ ಕೊತ್ತಲಗಿ ವಂಕದಾರಿ ಗೋವಿಂದ ಶೆಟ್ಟರ ಜವಳಿ ಅಂಗಡಿಯಿಂದ ಸಫಾರಿ ಶೂಟ್‌ಗೆ ಬಟ್ಟೆ ಹರಿಸಿ ಕಂಕುಳಲ್ಲಿ ತಂದು ಎಂದಾದ್ರು ಸಫಾರಿ ಶೂಟ್ ಹೊಲಿದಿದ್ದೀಯಾ? ಎಂಬ ಪ್ರಶ್ನೆಯನ್ನು ಮೆತ್ತಗೆ ಹಾಕಿದನಂತೆ. ಅದೆಂಗ ಕೇಳ್ತಿದ್ದೀಯಾ ಶಾಮಣ್ಣ ಶಾ ಚಕ್ರವರ್ತಿ ನಾನು ಹೊಲಿದು ಕೊಟ್ಟ ಸಫಾರಿ ಡ್ರೆಸ್ ತೊಟ್ಟುಕೊಂಡೇ ವಿಷ್ವಸಂಸ್ಥೆಯ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದರು. ಮಾರಾಯ್ರೇ” ಎಂದು ಇಮಾಮು ಹೇಳಿದನಂತೆ. ಅದಕಿದ್ದು ಶಾಮಣ್ಣಗೆ ಏನು ತಿಳಿತೋ ಏನೋ ಹಾಗೆ ಹೊರಟು ಹೋಗಿ ಬಿಟ್ಟನಂತೆ.

“ನಾನೇನಂತ ಅನ್ಯಾಯ ಮಾಡಿದ್ದೀವಿ ಹೇಳ್ರಿ ಮಾಸ್ತರ್ ಸಾಬ್… ಅವರಿಲ್ಲಿಗೆ ಬರ್ದೆ ಎಷ್ಟೊ ದಿನಗಳಾದ್ವು ಸ್ವಾಮಿ. ನೌಕ್ರಿ ಸಿಕ್ಕ ಮೇಲೆ ಒಂದು ಸಾರಿಯಾದ್ರು ಬಂದು ಬಾಯ್ನ ಮೀಠಾ ಮಾಡಬಾರ್ದೆ ಅವ್ರು. ಷಾದಿಗಾದ್ರು ಕರೀತಾರೋ ಇಲ್ವೋ, ಅದ್ರ ಮದ್ವಿ ಶೂಟ್ ಹೊಲಿಯಬೇಕಂಭಾಸೆ ತುಂಬ ಇತ್ರೀ ಸಾಹೇಬ್ರೆ” ಎಂದು ಹೇಳುತ್ತಲೆ ಇಮಾಮು ಗದ್ಗದಿತನಾಗಿ ಬಿಟ್ಟ. ಆತನ ಕಂಣಿಂದ ಎರಡು ಮೂರು ಹನಿ ಇರಾನಿನಿಂದ ತಂದಿರಬಹುದಾದ ಕತ್ತರಿ ಮೇಲೆ ಬಿತ್ತು.
ನನಗೆ ಒಂಥರಾ ಆಯಿತು. ಅರಿವಿಲ್ಲದಂತೆ ಎದ್ದು ಆತನನ್ನು ಬರಸೆಳೆದು ಸಮಾಧಾನ ಹೇಳಿದೆ.ನೋಡ್ರಿ. ಇಲ್ಲಾಂದ್ರೆ ನಂಗೆ ಬಲು ದುಕ್ಕಾಗ್ತದೆ. ನಿಮ್ಮನ್ನೆಲ್ಲ ಕಳ್ಕೊಂಡು ನಾನ್ಯಾಕೆ ಈ ಊರಲ್ಲಿರಬೇಕು ಹೇಳ್ರಿ” ಎಂದು ಮತ್ತೆ ಗದ್ಗದಿತನಾದ.

ನಾನು ಆತನಿಗೆ ಆ ಭರವಸೆ ನೀಡಿ ಅಲ್ಲಿಂದ ಹೊರಗೆ ಬಂದೆ, ಅದೇ ಹೊತ್ತಿಗೆ ಶೆಟ್ಟಿ ಹೋಟೆಲ್ಲು ಮತ್ತು ದ್ವಾರಕ ಹೋಟಲ್ಲುಗಳಿಂದ ಒಂದ್ನಾಲ್ಕು ಮಂದಿ ಹೊರಗಡೆ ಬಂದು ನನ್ನ ಕಡೆ ಮಿಕಿ ಮಿಕಿ ನೋಡುತ್ತ ತಮ್ಮಷ್ಟಕ್ಕೆ ತಾವೆನೇನೋ ಮಾತಾಡಿಕೊಳ್ಳುತ್ತ ನಗುವರು ನಕ್ಕು; ನಿಟ್ಟುಸಿರು ಬಿಡುವವರು ಬಿಟ್ಟು ನನ್ನ ಕಡೆ ಹೆಜ್ಜೆ ಹಾಕಿದರು, ಮಫ್ತಿಯಲ್ಲಿದ್ದು ಅರೆಸ್ಟ್ ಮಾಡುವ ಸಿಬಿಐ ಇಲಾಖೆಯವರಂತೆ. ಪ್ರಾಯಶಃ ಅವರು ನಡೆದಿರಬಹುದಾದ ನನ್ನ ಖೂನಿ ಕುರಿತು ಪ್ರಸ್ತಾಪಿಸಬಹುದೆಂದೂಹಿಸಿ ನಾನು ಬಿರಬಿರನೆ ಹೆಜ್ಜೆ ಹಾಕಿ ತೇರು ಬೀದಿಯಲ್ಲಿ ತೇಲಿ ನಿರುಮ್ಮಳತೆಯಿಂದ ಉಸಿರಾಡತೊಡಗಿದೆ.

…ಖಡ್ಗದ ಪತ್ರಿಕಾ ಕಛೇರಿಗೆ ಹೋಗಬೇಕನ್ನುವಷ್ಟರಲ್ಲಿ ಕ್ರಿಸ್ಟೋಫರ್ ರೀವ್ ಮೋಟಾರ್ ಬೈಕಿನ ಮೇಲೆ ಬರ್ತಾನಲ್ಲ ಹಾಗೆ ಪೋಸ್ತ್‌ಮ್ಯಾನ್ ರಾಮಣ್ಣ ಮತ್ತಷ್ಟು ಲತಗೂ ಪುಟಗೂ ಬೈಸಿಕಲ್ ತುಳಿಯುತ್ತ ವಾಯುವೇಗದಿಂದ ಬಂದು ನನ್ನೆದುರಿಗೆ ನಿಲ್ಲಿಸಿ ಠ್ರಿಣ್ ಠ್ರಿಣ್ ಬೆಲ್ ಮಾಅಡಿನನ್ನ ಗಮನ ಸೆಳೆದು ದೇಶಾವರಿ ನಗೆ ನಕ್ಕ. ತಲೆಗೆ ಮಫ್ಲರ್ ಸುತ್ತಿ ಮಹಾ ಅಸ್ವಸ್ಥನಂತಿದ್ದರೂ ಕರ್ನಾಟಕ ರಮಾರಮಣನಂತೆ ತುಂಬಾ ಗೆಲುವಾಗಿದ್ದ. ನಡೆ ನುಡಿಯೆರಡರಲ್ಲೂ ಸಾಕಷ್ಟು ಬದಲಾವಣೆಯಾಗಿರುವುದನ್ನು ಒಂದು ಕ್ಷಣದಲ್ಲಿ ಗಮನಿಸಿದೆ. ನನ್ನ ಊಹೆ ಸರು ಎಂಬಂತೆ ಅವನು “ಏನ್ಮೇಷ್ಟ್ರೇ ಎಂಥಾ ಛಾನ್ಸ್ ಹೊಡೆದುಬಿಟ್ರಿ ಏನ್ಕಥೆ” ಎಂದು ಖೇದಾರಗೌಳ ದಲ್ಲಿ ಕೇಳಿದ. ನಾನು ಕೊಲೆಯಾದ ಸುದ್ದಿ ತಾನೆ?” ಅಂದೆ. “ಅದಿರ್ಲಿ… ಎಂಥೆಂಥೋರೊ ಕೊಲೆಯಾಗ್ತಾರೆ ಬಿಡ್ರಿ…” ಎಂದ. ನಾನು “ಮತ್ತೇನಪ್ಪಾ ರಾಮಣ್ಣ ಅಂಥಾ ವಿಷ್ಯ” ಎಂದೆ. “ಹ್ಹಿ..ಹ್ಹಿ..ಹ್ಹಿ..ಏನೂ ಬ್ಯಾಡ…” ಎಂದು ಮತ್ತೊಂದು ಕ್ಷಣ ಮಿಕಿಮಿಕಿ ನೋಡಿ (ಮಾಂತ್ರಿಕನ ಥರ) “ಅಲ್ರೀ ಈ ಊರಾಗ ನೀವೊಬ್ರೆ ಸಾಚಾ ಅಂದ್ಕೊಂಡಿದ್ದೆ…” ಎಂದು ಹೇಳಿ ಒಂದೆರಡು ಹೆಜ್ಜೆ ಮುಂದೆ ಹೋಗಿ ಹಿಂತುರಿಗಿ ಬಂದು “ಹೀಗೆ ಹೇಳ್ತಿದೀನಂತ ತಪ್ಪು ತಿಳಿಯಬೇಡಿ… ನಾನಿಮಿಗಿಂತ ವಯಸ್ಸಿನಲ್ಲಿ ಹಿರಿಯ. ಅದೂ ಅಲ್ದೆ ಈ ಊರಿನ ಹಣೆ ಬರಹ ಬಲ್ಲೋನಾದ್ರಿಂದ ಹ್ಳ್ತಿದೀನಿ. ಹಿಂದೆ ಹೆಂಗಿದ್ರೋ ಹಂಗಿರೋದು ಕಲ್ತೊಳ್ಳಿ. ಹೆಣ್ಣು ಅಂದ್ರೆ ಬೆಂಕಿ ಕಣ್ರೀ ಬೆಂಕಿ. ಅದ್ರ ಸಮೀಪ ಹೋದ್ರೆ ಸುಟ್ಟು ಬೂದಿ ಆಗ್ತಾರೆ ಅಷ್ಟೆ. ಕಥೆ ಕಾದಂಬರಿ ಬರೆಯೋ ನಿಮ್ಗೆ ಹೇಳೋದೇನಿದೆ? ಬರ್ತೀನಿ” ಎಂದು ಹೇಳಿ ಹೊರಟು ಹೋದ.

ಅವನು ಬಿಕ್ಕಿ ಮರ್ಡಿ ಭರಮಜ್ಜನ ದಬ್ಬಿ ಅಂಗಡಿ ಸಂದಿಯಲ್ಲಿ ತಿರುಗಿ ಮರೆಯಾಗುವವರೆಗೆ ಕಣ್ತುಂಬ ನೋಡಿದೆ. ಹರಿವಾಣದ ಚಿದಾನಂದಾವಧೂತರೇ ರಾಮಣ್ಣ್ನ ಮೈಯೊಳಗೆ ಓಡಮೂಡಿ ಮಾತಾಡಿದರೆಂದೆನಿಸಿತು. ನನಗೇನು ರಾಮಣ್ಣನು ನಿನ್ನೆ ಮೊನ್ನೆಯ ವ್ಯಕ್ತಿಯಲ್ಲ್. ಆರನೆ ಇಯತ್ತೆಯಿಂದ ನೋಡುತ್ತಿರುವ ವ್ಯಕ್ತಿ. ಮೊದಲು ವಿಳಸಗಳನ್ನು ತಪ್ಪು ತಪ್ಪಾಗಿ ಓದಿಕೊಂಡು ಯಾರ ಯಾರ ಪತ್ರಗಳನ್ನು ಯಾರು ಯಾರಿಗೋ ಕೊಡುತ್ತ ಪಜೀತಿ ಗೀಡಾಗುತ್ತಿದ್ದನು. ಪ್ರಮೋಷನ್ ಮತ್ತು ರಿಸರ್ವಷನ್ ಆಧಾರದ ಮೇಲೆ ಸುಟ್ಟುಕೋಡಿಹಳ್ಳಿಯ ಬ್ರಾಂಚ್ ಪೋಸ್ಟಾಫೀಸ್ ನೋಡಿಕೊಳ್ಳುತ್ತಿದ್ದಾತ ಪೊಸ್ಟ್ಮ್ಯಾನ್ ಪದವಿಗೇರಿ ಅಕ್ಷರ ಕಲಿಯುವ ನಿಮಿತ್ತ ಅವರಿವರ ಪತ್ರಗಳನ್ನು ಕದ್ದು ಓದುತ್ತಾ ಓದುತ್ತಾ ಜೈಮಿನಿ ಭಾರತ ಕುಮಾರವ್ಯಸ ಭಾರತ ಓದುವಷ್ಟರ ಮಟ್ಟಿಗೆ ವಿದ್ಯಾವಂತನಾದನು. ತೆರೆಯದೇನೆ ಇಂಥ ಲಕೋಟೆಯೊಳಗೆ ಇಂಥ ವಿಷಯವೇ ಅಡಕವಾಗಿದೆ ಎಂದು ಹೇಳುವಷ್ಟರ ಮಟ್ಟಿಗೆ ತಾಂತ್ರಿಕ ಪರಿಣಿತಿಯನ್ನು ಸಾಧಿಸಿದನು!

ಕರ್ನಾಟಕದ ಎಲ್ಲಾ ಮೂಲೆಗಳಿಂದ ಬರುತ್ತಿದ್ದ ಪತ್ರಗಳನ್ನು ಎರಡುವರೆ ದಶಕಗಳ ಕಾಲ ಓದೀ ಓದೀ ಎಲ್ಲಾ ಉಪ ಭಾಷೆಗಳನ್ನು ಸಹಜ ರೀತಿಯಲ್ಲಿ ಮಾತಾಡಬಲ್ಲವನಾಗಿದ್ದನು. ಸಾಮಾನ್ಯವಾಗಿ ಎಲ್ಲರ ಗುಟ್ಟುಗಳನ್ನು ಬಲ್ಲವನಾಗಿದ್ದ ಅವನನ್ನು ಯಾರೂ ಎದುರು ಹಾಕಿಕೊಳ್ಳುತ್ತಿರಲಿಲ್ಲ. ಸಂಸ್ಕೃತ ಭಾಷೆಯಲ್ಲಿ ಯಾರೊಬ್ಬರೂ ಪತ್ರ ಬರೆಯುತ್ತಿಲ್ಲವಲ್ಲ ಎಂಬ ಕಾರಣಕ್ಕೆ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿದ್ದ ಶಾಮನನ್ನು ಹಚ್ಚಿಕೊಲ್ಲುವುದಕ್ಕೆ ಪ್ರಾಯಶಃ ಇದೇ ಕಾರಣವಿರಬಹುದು. ಅವನು ಅನಸೂಯಾಳಿಂದ ಬಂದ ಲಕೋಟೆಯನ್ನು ಕರಚಳಕದಿಂದ ಬಿಚ್ಚಿ ಓದುವ ಪ್ರಯತ್ನ ಮಾಡಿರಬಹುದು. ಪ್ರೀತಿಯ ಎಂಬ ವಿಶೇಷಣವನ್ನಷ್ಟೆ ತಾನು ಓದಿ ಉಳಿದ ಉಪಸರ್ಗಗಳನ್ನು ಬೇರೆಯವರ ಕೈಯಿಂದ ಓಡಿಸಿರಲೂಬಹುದು. ಇವು ಮತ್ತು ಇಂಥವರು ಶವಗಳನ್ನು ಕುಯ್ದು ಪರೀಕ್ಷಿಸುವ ಸರಕಾರಿ ವೈದ್ಯರಿಗಿಂತ ಬೇರೆ ಅಲ್ಲ ಎಂದೆನಿಸಿತು. ಇಷ್ಟೊಂದು ಸಂದಿಗ್ಧತೆಗಳನ್ನು ಹುಟ್ಟು ಹಾಕಿರುವ ಸ್ರೀಮತಿ ಅನಸೂಯ್ಳ ಪತ್ರದ ಸುಳಿವು ಶಾಮನಿಗೊಂದೇ ಅಲ್ಲದೆ ಜಲಜಾಕ್ಷಿ, ಕಮಲಾಕರ ಮೊದಲಾದವರಿಗೆ ತಿಳಿದಿರಲಿಕ್ಕೆ ಸಾಕು. ಶಾಮ ವ್ಯಕ್ತಪಡಿಸಲಿರುವ ಭಾವನೆಗಳಿಂದ ರಾಜಕೀಯ ಮತು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳ ಅಭಿಪ್ರಾಯಗಳು ಭಿನ್ನವಾಗಿರುತ್ತವೆ ಎಂಬ ಭಾವನೆಯಿಂದ… ಖಡ್ಗ ಪತ್ರಿಕೆಯ ಕಛೇರಿ ಕಡೆ ಹೆಜ್ಜೆ ಹಾಕಿದೆ.

ಕಮಲಾಕರ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಶಸ್ತಿ ಪಡೆದ ಅಮಲಿನಲ್ಲಿ ಸಾಮಾನ್ಯವಾಗಿ ಇರಲಿಕ್ಕಿಲ್ಲ್ಲದಿರಬಹುದು. ಮಹಿಳಾ ಸಂಘಟನಾ ಸಮಾವೇಶದ ಗಡಿಬಿಡಿಯಲ್ಲಿರುವ ಜಲಜಾಕ್ಷಿ ಈ ಕ್ಷಣ ದೊರಕಿ, ಬಂದಿರುವ ಪತ್ರದ ಬಗೆಗಾಗಲೀ; ನನ್ನ ಕೊಲೆಯಾಗಿದೆ ಎನ್ನಲಾದ ವದಂತಿ ಬಗ್ಗೆ ಪ್ರಸ್ತಾಪಿಸದಿರಬಹುದು. ಸುರೇಶಗಊಡ ಈಗಾಗಲೇ ‘ರಅ’ ಬ್ರಾಂಡಿನ ದೋಸೆಮಿಕ್ಸ್ ಏಜೆನ್ಸಿ ಪಡೆಯಲು ಹೋರಾಟ ನಡೆಸಿರಬಹುದು. ನೌಕರಿಯ ಅಮಲಿನಲ್ಲಿರುವ ಶಾಮ ನನ್ನನ್ನು ಕಂಡರೂ ಕಾಣದಂತೆ ಹೊಗಬಹುದು. ಅಂಚೆಯ ಅನ್ನ, ಪತ್ರಕರ್ತ, ರಾಜಕಾರಣಿ, ವ್ಯವಹಾರಸ್ಥ ಇವರೆಲ್ಲ ಒಂದೇ ಜಾಯಮಾಅನದ ಹಲವುಮುಖಗಳು. ಮನುಷ್ಯನ ಚಿಕ್ಕ ದೌರ್ಬಲ್ಯದ ಎಳೆಯೊಡನೆ ರತ್ನಗಂಬಳಿ ನೆಯ್ದು ಅದರ ಮೇಲೆ ಪವಡಿಸಿ ಬದುಕಿನ ಚರಮಸೀಮೆ ಅನುಭವಿಸುವಂತ ನಿಷ್ಣಾತರಿವರು, ಇವರ ಪೈಕಿ ಯಾರೊಬ್ಬ್ರನ್ನು ಎದುರು ಹಾಕಿಕೊಳ್ಳುವುದು ಕಷ್ಟ, ಏಗುವುದು ಕಷ್ಟತಮ, ಇವರಿಗೆ ನಿಲುಕದಹ್ಟು ದೂರ ಉಳಿಯಲೂ ಆಗುತ್ತಿಲ್ಲ.

ಕ್ಷೇತ್ರದ ಉದಯೋನ್ಮುಖ ರಾಜಕಾರಣಿ ಎಂದೂ ಭಾವಿ ಎಮ್ಮೆಲ್ಲೆ ಎಂದೂ ಜಲಜಾಕ್ಷಿಯ ಪ್ರಮುಖ ಪ್ರತಿಸ್ಪರ್ಧಿ ಎಂದೂ ಹೆಸರು ಮಾಡಿರುವ ಗುಲಾಂ ನಬಿಯವರ ಸಂದರ್ಶನವನ್ನು ಆಂಗ್ಲರು ಕಟ್ಟಿಸಿದರೆಂದು ಹೇಳಲಾದ ಪ್ರವಾಸಿಮಂದಿರದಲ್ಲಿ ಯಶ್ಸ್ವಿಯಾಗಿ ನಡೆಸಿ ಧನಿಗೆ ಅಕ್ಷರ ರೂಪ ಕೊಡುವುದರಲ್ಲಿ ಮಗ್ನನಾಗಿದ್ದ ಡಾ.ಕಮಲಾಕರ ‘ಓಹೋಹೋ’ ಎಂದು ಉದ್ಗರಿಸಿ ಎದ್ದು ಬಂದು ಆಲಿಂಗಿಸಿ ಸ್ನೇಹ ಮೆರೆದು ನಿನ್ನೆ ಮೊನ್ನೆ ಕೊಂಡಿರಬಹುದಾದ ಕುರ್ಚಿಯಲ್ಲಿ ಕುಂಡ್ರಿಸಿ “ನೀನು ಬಂದ್ ಬರ್ತೀಯಾ ಅಂತ ನಂಗೊತ್ತಿತ್ತು. ಕಣಯ್ಯಾ, ಸೈಕೋಲಾಜಿಸ್ಟ್‌ಥರ ಊಹಿಸಿರಬೌದಂದ್ಕೋ ಬ್ಯಾಡ… ಬಂದೊಡನೆ ಮ್ಲೊಆನವದನನಾಗ್ತೀಯಾ ಅಂತಲೂ ನಂಗೊತ್ತಿತ್ತು. ಮಾರಾಯ. ಈ ವಯಸ್ಸಿನಲ್ಲಿ ಇದೆಲ್ಲಾ ಮಾಮೂಲೆ, ಜಸ್ಟ್ ರಿಲಾಕ್ಸ್, ನ್ತಗೋತೀ. ಕಾಫಿ ಟಿ ಅಥವಾ ಸ್ಮಾಲ್ ಪೆಗ್ ಹಾಕ್ತೀಯಾಂದ್ರೂ ನಂಗೆ ಸಂತೋಷಾನೇ” ಎಂದ. “ಬಹು ಸಂಖ್ಯಾತ ಕೋಮುಗಳ ನಡುವೆ ಅಲ್ಪ ಸಂಖ್ಯಾತಕೋಮುಗಳು ಬದುಕಿರ್ತಿರೋ ಸಂದರ್ಭದಲ್ಲಿ ಭಾವೀ ಶಾಸಕನಾಗಿ ನಾನು ಹೇಳ್ತಿರೋದೇನೆಂದ್ರೆ… ಗುಲಾಂ ನಬಿಯವರ ಮಾತುಗಳನ್ನು ಹೊತ್ತ ದ್ವನಿಸುರುಳಿ ತನ್ನ ಪಾಡಿಗೆ ತಾನು ಬಿಚ್ಚಿಕೊಳ್ಳ ತೊಡಗಿತ್ತು. ಮಾಜಿ ಮತ್ತು ಭಾವೀ ಮುಖ್ಯಮಂತ್ರಿ ಏಳುಕೊಳ್ಳದ ಭಗವಂತರಾವ್ ದೇಶಪಾಂಡೆಯವರ ಅದುಗೆಮನೆಗೆ ಪ್ರಮುಖವಾಗಿ ತರಕಾರಿ ಸರಬರಾಜು ಮಾಡುವುದು ಮತ್ತು ದೋಬಿ ದೇಶ್ಮುಖ್‌ರವರಿಗೆ ಇಸ್ತ್ರಿಗೆಂದು ಕೊಡುವ ವಿದೇಶಿ ಉಡುಪುಗಳನ್ನು ಎಣಿಸುವುದು ಇವೇ ಮೊದಲಾದ ಕಿಚನ್ ಸೆಕ್ರೇಟರೇಟ್ ಕಾರ್ಯ ನಿರ್ವಹಿಸುತ್ತಿರುವ ಗುಲಾಂ ನಬಿ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ ‘ಮೂಮುಮಂ’ ರವರ ಕಿಚನ್ನಲ್ಲಿದ್ದುಕೊಂಡೇ ಇಷ್ಟೊಂದು ಅದ್ಭುತವಾದ ಗ್ರಾಂಥಿಕ ಭಾಷೆಯಲ್ಲಿ ಮಾತಾಡುವ ವ್ಯಕ್ತಿ ಇನ್ನು ಯಾವುದಾದರೂ ವಿಶ್ವವಿದ್ಯಾಲಯ ಪ್ರ್ವೇಶಿಸಿ ಕ್ಯಾಲಿಕೋ ಪುಸ್ತಕಗಲನ್ನು ಮುಗುಚಾಡಿದ್ದರೆ ಇನ್ನೆಷ್ಟು ಚಂದ ಮಾತಾಡುತ್ತಿದ್ದನೋ?

ಚಹ ಕುಡಿದಾದ ಮೇಲೆ ಕಮಲಾಕರ ತನಗೆ ಸಂದ ಪ್ರಶಸ್ತಿ ಬಗ್ಗೆ, ಪತ್ರಿಕೆಯನ್ನು ರಾಜಧಾನಿವರೆಗೆ ವಿಸ್ತರಿಸುವುದಾದರೆ ಆರ್ಥಿಕ ಸಹಾಯ ನೀಡುವುದಾಗಿ ಹಾಲಿ ಮುಖ್ಯಮಂತ್ರಿ ವೆಂಕಟಾಚಲಪತಿ ಗೌಡರು ಅಶ್ವಾಸನೆ ನೀಡಿರುವ ಬಗ್ಗೆ, ಆಳುವ ಮತ್ತು ವಿರೋಧ ಪಕ್ಷಗಳೆಂಬ ಎರಉ ತುಂಡು ದೋಣಿಗಳಲ್ಲಿ ತನ್ನೆರಡೂ ಕಾಲಿರಿಸಿ ಪತ್ರಿಕೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಬಗ್ಗೆ, ತನ್ನ ವಿರುದ್ಧ ಹಲ್ಲು ಮಸೆಯುತ್ತಿದ್ದ ಶಿವಪೂಜೆ ಸುರೇಶ್ಗಊಡ ಬೀಫ್ ಪ್ರಿಯೆ ಸತ್ಯಭಾಮೆಯನ್ನು ಹಂಪೆ ವಿರೂಪಾಕ್ಷ ಮಂದಿರದಲ್ಲಿ ಮದುವೆಯಾಗಿ ‘ಅರ’ ಬ್ರಾಂಇನ ದೋಸೆಮಿಕ್ಸ್‌ನ ಏಜೆನ್ಸಿ ಪಡೆದು ಅದನ್ನು ಜಿಲ್ಲೆಯ ಪ್ರತಿಯೊಂದು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಪರಿಚಯಿಸಬೇಕೆಂದು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದ.

ನಂತರ ಪ್ರಮುಖ ವಿಶಯಗಳ ಪೈಕಿ ಇದೂ ಒಂದೆಂಬಂತೆ ನನ್ನ ಕೊಲೆ ವದಂತಿ ಬಗ್ಗೆ ಪ್ರಸ್ತಾಪಿಸಿ ಹ್ಹ.. ಹ್ಹ.. ಎಂದು ನಗಾಡಿದ. ನಂತರ ಇದು ನನ್ನಲ್ಲಿ ಹೇಗೋ ಬಂತೂ ಅಂತ ಮಾತ್ರ ಕೇಳಬೇಡ

ಇಂಥ ಸಂಪನ್ಮೂಲಗಳಿದ್ರೆ ನಮ್ಮಂಥೋರ್ಗೆ ಪತ್ರಿಕೆ ನಡೆಸೋದ್ಕೆ ಸಾಧ್ಯವಾಗೊದಿಲ್ಲ ಎಂದು ಹೇಳಿ ನನ್ನ ಮುಂದೆ ನನಗೆ ಬಂದಿದ್ದ ಅನಸೂಯಾಳ ಸುಧೀರ್ಘ ಪತ್ರದ ಝೆರಾಕ್ಸ್ ಪ್ರತಿಯನು ಪ್ರತಿಷ್ಟಾಪಿಸಿದ. ಅದನ್ನು ನೋಡಿ ನನಗೆ ಉಸಿರುಕಟ್ಟಿದ ಅನುಭವವಾಯಿತು. ಅದನ್ನು ಗಮನಿಸಿದ ಅವನು ಹೆದರ್ಕೋಬೇಡ. ಪೋಸ್ಟ್‌ಮ್ಯಾನ್ ಓದಿರೋದು ಈ ಪತ್ರದ ಆರಂಭ ಶಬ್ದವನ್ನು ಮಾತ್ರ. ರಾಮಣ್ಣನನ್ನು ಕೈಗೊಂಬೆ ಮಾಡ್ಕೊಂಡಿರೋ ನಿಘೂಡ ವ್ಯಕ್ತಿ ಜೆರಾಕ್ಸ್ ಮಾಡಿಸಿ ಹತ್ತಾರು ಕಡೆ ಹಂಚಿದ್ದಾನೆ. ಆ ನಿಘೂಡ ವ್ಯಕ್ತಿ ನಿನಾಗಿರಬೌದು? ನಾನಾಗಿರಬೌದು? ಸುರೇಶ್‌ಗೌಡ, ಜಲಜಾಕ್ಷಿ, ಶಾಮ ಹೀಗೆ ಯಾರಾದ್ರು ಆಗಿರಬೌದು? ಅಥವಾ ಇನ್ಯಾರೋ ಆಗಿರಬೌದು? ಈ ಗ್ರಾಮದ ಮತ್ತಿಗಿನ ನಾಗರಿಕ ಪ್ರಪಂಚದಲ್ಲಿ ಇಂಥದೆಲ್ಲ ನಡೆಯುತ್ತದೆ ಎಂಬುದೇ ಹೆಮ್ಮೆಯ ಸಂಗತಿ. ಈಗ ಅದಲ್ಲ ಮುಖ್ಯ. ಸಹೋದರಿ ಅನಸೂಯಾ ತನ್ನ ಪತ್ರದಲ್ಲಿ ಪ್ರಸ್ತಾಪಿಸಿರುವಂತೆ ಕಿರುಕುಳ ನೀಡಿದಾತ ಶಾಮ ಹೌದೋ ಅಲ್ಲವೋ? ಈ ಬಗ್ಗೆ ನೀನೂ ಯೋಚಿಸಿರಬೌದು. ನಿನ್ಗೆ ಯಾಕೆ ತೊಂದರೆ ಅಂತ ನಾನೇ ಕೆಲವು ಮೂಲಗಳಿಂದ ಶಾಮನ ಬಗ್ಗೆ ವಿಷಯ ಸಂಗ್ರಹಿಸಿದೆ. ಗುಲಾಂ ನಬಿಗೆ ತುಂಬಾ ಬೇಕಾಗಿರುವ ಅವನು, ತನ್ನ ಮದುವೆ ಬಗ್ಗೆ ಸೀರಿಯಸ್ಸಾಗೆ ಅಡ್ಡಾಡುತ್ತಿರುವ ಅವನು ಬೆಂಗಳುರಿಗೆ ಹೋಗಿರಬೌದಾದ್ರು ಹೀಗೆ ವರ್ತಿಸಿರ್ಲಿಕ್ಕಿಲ್ಲವೆಂಬುದು ನನ್ನ ಅನಿಸಿಕೆ. ಆದ್ರೆ ಒಂದು ಮಾತು ಮಾತ್ರ ಸತ್ಯ. ಅವ್ನೀಗ ಸಫಾರಿಸೂಟ್ ಇಲ್ದೆ ಹೊರಗಡೆ ಕಾಣಿಸಿಕೊಳ್ತಿಲ್ಲ. ಜುಟ್ಟು ಪೂರ್ತಿ ಮರೆಯಾಗುವಷ್ಟರ ಮಟ್ಟಿಗೆ ತಲೆ ಗೂದಲು ಬೆಳೆಸಿದ್ದಾನೆ. ಸಚ್ತ್ರ ಲೇಖನಗಳನ್ನು ಬರೆಯಬೇಕೆಂದು ನಿರ್ಧರಿಸಿ ಒಂದು ಹಳೆಯ ಕೊಡಕ್ ಕೆಮೆರಾವನ್ನು ಕೇಂದ್ರಗ್ರಂಥಾಲಯ ಪಕ್ಕದಲ್ಲಿರೋ ಪಾನ್ ಬ್ರೋಕರ್ ರಿಕಬ್‌ಚಂದ್‌ನ ಅಂಗಡಿಯಿಂದ ಖರೀದಿಸಿತುಕೊಂಡಿದ್ದಾನೆ. ನಿನ್ಗೆ ಹೇಳಿದ್ರೆ ಆಶ್ಚರ್ಯವಾಗಬೌದು. ಕೊತ್ತಲಿಗಿಯ ರಮ್ಗಕಲಾವಿದೆಯರ ಬಣ್ಣದ ಬದುಕಿನ ಬಗ್ಗೆ ಒಂದು ಸಚಿತ್ರ ಲೆಖನ ಬರೆದುಕೊ
ಟ್ಟಿದ್ದಾನೆ. ಓದ್ತೀಏನು?” ಎಂದು ಕೇಳುತ್ತ ಮಾತು ನಿಲ್ಲಿಸಿದ. ನಾನು ನಕಾರಾತ್ಮಕವಾಗಿ ತಲೆ ಅಲ್ಲಾಡಿಸಿದೆ.
ಲೇಖನವನ್ನು ನಾನು ನೋಡಿ ಮಾಡಲು ಉಳಿದಿರುವುದಾದರೂ ಏನು>
ಹೇಳಲಿಕ್ಕೆ ಉಳಿದಿರುವುದೇನು?
ಕೇಳಲಿಕ್ಕೆ ಉಳಿದಿರುವುದೇನು?
*
*
*
ಪತ್ರಿಕೆಯ ಕಛೇರಿಯಿಂದ ಮರಳುವಾಗ್ಗೆ ಸ್‌ಉಜನಶೀಲ ಕಥೆ, ಕವಿತೆಗಳಿಗಿಂತ ವೇಶ್ಯಾವಾಟಿಕೆ ಕುರಿತು ಸಚಿತ್ರ ಲೇಖನಗಳ್‌ಏ ಮುಖ್ಯ ಎಂದು ಭಾವಿಸಿರುವಂತಿದ್ದ ಅವನು ಮಾಮೂಲಿನಂತೆ ಯಾವುದಾದ್ರೊಂದು ಕಥೆ ಕೊಡಯ್ಯಾ ಎಂದು ಕೇಳಲೂ ಇಲ್ಲ, ಕೊಡುವೆನೆಂದು ನಾನೂ ಹೇಳಲಿಲ್ಲ. ಆದರೆ ಅವನು ಹೇಳಿದ್ದು ಇಷ್ಟು. ತಾವೈದು ಮಂದಿ ಶಾಸ್ತಿಗಳ ಆರೋಗ್ಯ ಪರಾಂಬರಿಸಲು ಹೋಗುತ್ತಿರುವುದಾಗಿಯೂ; ಅವರ ಬದುಕಿನ ಗತ ವೈಭವ ಏಳುಬೀಳುಗಳನ್ನು ಕುರಿತ ಲೇಖನಮಾಲೆಯನ್ನು ಪ್ರಕಟಿಸಲು ಯೋಚಿಸಿರುವುದಾಗಿಯೂ, ನೀನು ಬಂದರೆ ಮುಂದೊಂದು ದಿನ ಕಾದಂಬರಿಗೆ ಸಾಮಗ್ರಿಯಾಗುವುದೆಂದು ಹೇಳಿದ. ಮುಂದಿನ ಸಂಚಿಕೆಯಲ್ಲಿ ಪ್ರಾಯಶಃ ನನ್ನದೇ ಇರಬಹುದಾದ ‘ಸತ್ತವನು ಎದ್ದು ಬಂದಾಗ’ (ಲೆಖಕ-ಅನಾಮಿಕ) ಎಂಬೊಂದು ಕಥೆಯ ಜೊತೆಗೆ ಗುಲಾಂನಬಿ ಸಂದರ್ಶನ ಓದಲು ಮರೆಯಬೇಡಿ ಎಂದು ಪ್ರಕಟಣೆ ಕೊಟ್ಟಿರುವ ಅವನು ಅನಸೂಯಾಳ ಪತ್ರ ಪ್ರಕಟಿಸುವುದಾಗಿ ಆತಂಕ ಹುಟ್ಟಿಸಿದರೂ ಆಸ್ಚರ್ಯವಿಲ್ಲೆಂದೆನಿಸಿತು. ಇತ್ತೀಚಿನ ದಿನಗಳಲ್ಲಿ ಹೋಚಿಮಿನ್ ಗಡ್ಡದೊಂದಿಗೆ (ಕ್ರಾಂತಿಕಾರಿ ಕವಿತೆಯಾಕಾರದ) ಮುಖದ ಗೆಟ್‌ಅಪ್ ಬದಲಾಯಿಸಿ ಕೊಂಡಿರುವ ಅವನೊಂದಿಗೆ ಹೋಗುವುದಕ್ಕಿಂತ ನಾನೇ ಹೋಗಿ ಶಾಸ್ತ್ರಿಗಳ ಆರೋಗ್ಯ ವಿಚಾರಿಸಿಕೊಂಡು ಬರುವುದೆಂದು ನಿರ್ಧರಿಸಿದೆ.

ಪರಸ್ಪರ ದೋಷಾರೋಪಣೆಗೆ ಕಾರಣವಾದೀತೆಂಬ ಕಾರಣದಿಂದ ನಿಂಗಮ್ಮಜ್ಜಿ ಸಿದ್ದಮ್ಮಜ್ಜಿಯರೆಂಬ ಸುಂದೋಪ ಸುಂದರು ತಲಾ ಒಂದೊಂದು ಮುಖ ಮಾಇರಲು ಏಕರಿಕೆ ಧೇಖರಿಕೆಗೆ ಸಂಬಂಧಿಸಿದಂತೆ ದೊಡ್ಡವ್ವನೊಡನೆ ವ್ಯವಹರಿಸಿದೆ. ರಾತ್ರಿ ಬಿದ್ದ ಕನಸಿನಲ್ಲಿ ವಾಗಿಲಿಯ ಜಗನ್ನಾಥರೆಡ್ಡಿ ತನ್ನ ಹೇಮಿ ಸಂಗಇಗರೊಡನೆ ಕೊಟ್ಟೂರಿಗೆ ಇಳಿದಿದ್ದ. ಕೊಟ್ಟೂರಿಗರು ತೆಲುಗು ಸಿನೆಮಾದ ವಿಲನ್ ಪಾತ್ರಧಾರಿಗಳೇ ಬಂದಿರುವರೆಂಬಂತೆ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಪರಮೇಶ್ವರ ಶಾಸ್ತ್ರಿಗಳು ಹೆಚ್ಚು ಲವಲವಿಕೆಯಿಂದ ತ್ರಿಕಾಲ ಸಂಧ್ಯಾವಂದನೆ ಮಾಡಿ ಮುಗಿಸಿ ಹೆಚ್ಚು ಗೆಲುವಿನಿಂದಿದ್ದರು. ಪಾದಾಭಿವಂದನೆ ಸಲ್ಲಿಸಿದ ರೆಡ್ಡಿ ಮತ್ತವರ ಸಂಗಡಿಗರಿಗೆ ಕೋಸುಂಬರಿ ಪಾನಕ ಕೊಟ್ಟು ಸತ್ಕರಿಸಿದರು. ರೆಡ್ಡಿ ತನ್ನ ಪ್ರಾಣಕ್ಕೆ ಅಪಾಯ ಇರುವುದಾಗಿಯೂ, ಪ್ರಾಣ ರಕ್ಷಣೆ ಯಂತ್ರ ದಯಪಾಲಿಸಬೇಕೆಂದೂ, ಅದರ ಜೊತೆಗೆತನ್ನ ಅಜನ್ಮ ವೈರಿಯು ದುರ್ಮರಣವನ್ನು ಅಪ್ಪುವಂಥ ಯಂತ್ರವನ್ನು ಜೊತೆಗೆ ದಯಪಾಲಿಸಬ್‌ಏಕೆಮ್ದೂ ಕೈ ಮುಗಿದು ಬೇಡಿಕೊಂಡ. ಅಂಥ ಬೇಡಿಕೆಯಿಂದ ಪ್ರಸನ್ನವದನರಾದ ಶಾಸ್ತ್ರಿಗಳು ಅಂದೇ ಆದಿತ್ಯವಾರ ಅಮವಾಸ್ಯೆ ಬಂದಿದ್ದರಿಂದ ಮಧ್ಯರಾತ್ರಿಯಲ್ಲಿ ತಕ್ಕ ಪರಿಕರಗಳೊಂದಿಗೆ ಮಸಣಕ್ಕೆ ಹೋಗಿ ಬೆಳಗಾಗುವ್ವರೆಗೆ ಪೂಜೆ ಪುನಸ್ಕಾರ ಮಾಡಿದರು. ಒಂದು ಯಂತ್ರವನ್ನು ಮಂತ್ರಿಸಿ ಜಗನ್ನಾಥ ರೆಇಯ ಸೊಂಟಕ್ಕೆ ಕಟ್ಟಿದರು. ಇನ್ನೊಂದು ಗೊಂಬೆಯನ್ನು ಮಂತ್ರಿಸಿಕೊಡುತ್ತ ಅದನ್ನೊಯ್ದು ವೈರಿಯ ಊರಿನ ಕರಗಲ್ಲಿನ ಬುಡದಲ್ಲಿ ಹೂತಿಡಬೇಕೆಂದು ಹೇಳಿದರು. ಅದನ್ನು ತೆಗೆದುಕೊಂಡು ಹೋಗುವಾಗ್ಗೆ ಜಗನ್ನಾಥ ರೆಡ್ಡಿ ಮತ್ತು ಕಮಲಾಕರ ಮುಖಾಮುಖಿಯಾದರು. “ನಮ್ಮ ಮನೆಯನ್ನು ದೊಚಿದ ನಕ್ಸಲೈಟರಲ್ಲಿ ನೀನೂ ಇದ್ದಿ ಅಲ್ವೆ?” ಎಂದು ರೆಡ್ಡಿಯೂ “ಬಡವರ ಶ್ರಮ ಕೊಳ್ಳೆ ಹೊಡೆಯುತ್ತಿರುವವರಲ್ಲಿ ಅಗ್ರಗಣ್ಯನಾದ ನೀನಿನ್ನೂ ಬದುಕಿದ್ದೀಯಲ್ವೇ” ಎಂದು ಕಮಲಾಕರನೂ ಹೂಂಕರಿಸಿದನು.

ಅದೇ ಹೊತ್ತಿಗೆ ಬೆಳಕು ಹರಿದು ಎಚ್ಚರಾಗಿ ನಾನೂ ಹಾಸಿಗೆಯಿಂದೆದ್ದೆ. ಮರುದಿನವೇ ಅಮವಾಸ್ಯೆ ಬಂದಿರುವ ಆದಿತ್ಯವಾರ ಎಂಬುದನ್ನು ದೊಡ್ಡವ್ವನಿಂದ ಖಚಿತಪಡಿಸಿಕೊಂಡೆ. ಪೋಸ್ಟ್ ಬರುವ ವೇಳೆಗೆ ಸರಿಯಾಗಿ ನಾನೂ ರೆಡಿಯಾದೆ. ಒಂದೆರಡು ದಿನದ ಮಟ್ಟಿಗಾದರೂ ಯಾರ ಕಂಣಿಗೆ ಬೀಳಬೇಡವೆಂದು ಕಮಲಾಕರಗೆ ಚೀಇ ಬರೆದು ಪೋಸ್ಟಾಫೀಸಿಗೆ ಹೋಗುವ ದಾರಿಯಲ್ಲಿ ಅದನ್ನು ಹರಿದು ಹಾಕಿದೆ. ಬರಬಹುದಾದ ಪತ್ರಗಳು ರಾಮಣ್ಣನ ಮೂರನೆ ಕಂಣಿಗೆ ಬೀಳುವ ಮೊದಲೆ ಪಡೆಯಬೇಕೆಂಬ ಉದ್ದೇಶದಿಂದ ಲಗುಬಗೆಯಿಂದ ಹೆಜ್ಜೆಹಾಕಿ ಪೊಸ್ಟಾಫೀಸು ತಲುಪಿದೆ. ‘ಬೆಂಗ್ಳೂರಿಂದೇನಾದ್ರು ಲೆಟರ್ಸ್ ಬರ್ಬೇಕಿತ್ತ ಮೇಸ್ಟ್ರೇ’ ಎಂಬ ಪ್ರಸ್ನೆ ಹಾಕಿಸ್ವಾಗತ ಕೋರಿದ ಪೋಸ್ಟ್ ಮಾಸ್ಟರ್ ದೇವದಾಸನ ಎದೆಗೆ ಝಾಡಿಸಿ ಒದೆಯುವಸ್ಟು ಸಿಟ್ಟು ಬಂತು. ಹುಳ್ಳಗೆ ಮುಖ ಮಾಡಿಕೊಂಡು ಬಂದಿದ್ದ ಕೆಲವು ಪತ್ರಗಳನ್ನು ನನ್ನ ಕೈಗಿತ್ತ. ಅದನ್ನು ಕಂಕುಳಲ್ಲಿರಿಸಿಕೊಂಡು ಹೋಗಿ ಉಡುಪಿ ಹೋಟಲ್ಲಿನ ಮೂಲೆಯಲ್ಲಿ ಕೂತು ಒಂದೊಂದಾಗಿ ಪರಾಮರ್ಶಿಸಿದೆ.

ತುರ್ತು ಪರಿಸ್ಥಿತಿ ವಿರೋಧಿ ವೇದಿಕೆಯವರು ತರಬೇಕೆಂದಿರುವ ‘ಅಯ್ಂಟಿ ಫ್ಯಾಸಿಸ್ಟ್ ಸ್ಕ್ವಾಡ್’ ಎಂಬ ವಾರ ಪತ್ರಿಕೆಗೆ ಸಾವಿರ ರುಪಾಯಿ ಕಳಿಸಿ ಆಜೀವ ಸದಸ್ಯತ್ವ ಪಡೆಯಬೇಕೆಂದು ಒಂದು ಪತ್ರ.

ಕಥೆ ಪ್ರಕಟಣೆಗೆ ಸ್ವೀಕರಿಸಲಾಗದಿದ್ದುದಕ್ಕೆ ವಿಶಾದಿಸುತ್ತೇವೆ ಎಂದೋರ್ವ ಸಂಪಾದಕರುಹಿಂದಿರುಗಿಸುತ್ತ ಬರೆದಿರುವ ಲಕೋಟೆ.
ಹಸ್ತ ಪ್ರತಿ ಕಲಿಸಿ ತಿಂಗಳಾದರು ಮುನ್ನುಡಿ ಬರೆದಿಲ್ವಲ್ಲ, ನೀವೇನು ಈ ಭೂಮಿ ಮೇಲೆ ಇರುವಿರೋ ಇಲ್ಲವೋ ಎಂದೋರ್ವ ಉದಯೋನ್ಮುಖ ಕವಿ ಖಾರವಾಗಿ ಬರೆದಿರುವ ಪತ್ರ.
ಅವ್ನ್ನೆಲ್ಲ ಚೂರುಚೂರು ಮಾಡಿ ಒಲೆಗೆ ತುರ್ಕಲು ಭಟ್ಟರಿಗೆ ಕೊಡಲು ಅವರು ಎಂಥದು ಮಾರಾಯ್ರೆ ಎಂದು ಇಸಿದುಕೊಂಡು ಅಡುಗೆ ಮನೆಗೆ ಹೋದ. ನನ್ನ ಬೇಜವಾಬ್ದಾರಿತನಕ್ಕೆ ಪಕ್ಕಾಗಿ ಭಟ್ರೆ.. ಅವುಗಳ್ನ ಕೊಡಿ ಸ್ವಲ್ಪ ಎಂದು ಕೇಳಿದ್ದಕ್ಕೆ ಆತ “ಆಗ್ಲೆ ಉರಿಯೋ ಒಲೆಗೆ ಹಾಕಿದ್ದಾಯ್ತಲ್ಲ ಮಾರಾಯ್ರೆ” ಎಂದ.

ಈ ರೀತಿಯ ಅನಿಶ್ಚಿತ ನಡುವಳಿಕೆಯನ್ನು ತಿದ್ದಿಕೊಳ್ಳಬೇಕಾದ್ರೆ ಈಗಿಂದಲೇ ಹೋಗಿ ಪರಮೇಶ್ವರ ಶಾಸ್ತ್ರಿಗಳ ಆರೋಗ್ಯ ಪರಾಮರ್ಶಿಸಬೇಕೆಂದು ನಿರ್ಧರಿಸಿ ಅಲ್ಲಿಂದ ಕಾಲು ಕಿತ್ತೆ.
ಅಷ್ಟು ವೇಗದಿಂದ ನಡೆದು ಶಾಸ್ತ್ರಿಗಳ ಮನೆ ತಲುಪುವೆನೆಂದು ನಾನು ಅಂದುಕೊಂಡಿರಲಿಲ್ಲ. ಹತ್ತಾರು ಮಂದಿ ಹೆಂಗಸರು, ಗಂಡಸರು ತಲಾ ಒಂದೊಂದು ಕೆಲಸದಲ್ಲಿ ತೊಡಗಿ ಸಂಭ್ರಮ ಪ್ರಕಟಿಸಬಹುದೆಂದುಕೊಂಡಿರಲಿಲ್ಲ. “ಏನಪ್ಪಾ, ಈಗ ನೆನಪಾಯ್ತೇ ನಮ್ಮ ಮನೆ? ನೀನು ಬಂದು ಹೋಗಿ ಎಷ್ಟು ದಿನಗಳಾದ್ವು? ನಿನ್ನ ಸ್ನೇಹಿತನ ಮದುವೆ ಇರೋ ಸಂಗತಿ ಮರೆತು ಬಿಟ್ಟಿರುವೆ ಏನಪ್ಪಾ? ಅಂತ್‌ಊ ಜ್ಞಾಪಿಸಿಕೊಂಡು ಬಂದೆಯಲ್ಲ! ಬಾ… ಲಗ್ನಪತ್ರಿಗೆಗಳಿಗೆ ವಿಳಾಸ ಬರೆದು ನೀನೇ ಪೋಸ್ಟ್ ಮಾಡೊದಿದೆ. ಅಂದ ಹಾಗೆ ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಮಹಾ ಪ್ರಭುಗಳಿಗೆ ದುಂಡಗೆ ಬರೆಯೋದ್ನ ಮಾತ್ರ ಮರೀಬೇಡ. ಅವರಹಿರಿಯರು ನಮ್ಮ ಹಿರಿಯರಿಗೆ ತುಂಬ ಬೇಕಾಕಿದ್ದವರು ಕಣಪ್ಪಾ.ಅವರು ಯಾರನ್ನಾದ್ರೂ ಕಳಿಸಿ ಆಶೀರ್ವಾದ ತಗೋತಾರೆ” ಎಂದು ಹೇಳುತ್ತ ಅಲುಮೇಲಮ್ಮ ನನ್ನ ಮುಂದೆ ಒಂದು ಕುಪ್ಪೆ ಲಗ್ನ ಪತ್ರಿಕೆಗಳನ್ನು ಪೇರಿಸಿಡಬಹುದೆಂದು ಅಂದುಕೊಂಡಿರಲಿಲ್ಲ. “ಯಾರದು? ಓಹ್ ಅವನಾ… ಹೇಗಿದ್ದೀಯಪ್ಪಾ? ಏನೋ ತೊಂದರೆಯಾಗಿತ್ತಂತೆ ಅಲ್ಲಿ. ಹೌದಾ?… ಈ ದೇಹ ನಶ್ವರ! ಎಂದು ಹೋಗುವುದೋ ಏನೋ? ನನ್ನ ಮೊಮ್ಮಗ ಅಂದ್ರೆ ನಿನ್ನ ಜೀವದ ಗೆಳೆಯ ಶಾಮಾಶಾಸ್ತ್ರಿಗಳ ಮದುವೇನ ನೀವೆಲ್ಲ ನಿಂತಿದ್ದು ಮಾಡಬೇಕಪ್ಪಾ” ಎಂದು ಲಕ್ವಾ ಸ್ಥಿತಿಯಲ್ಲಿ ಮಲಗಿದ್ದಲ್ಲಿಯೇ ಪರಮಪೂಜ್ಯರಾದ ಶಾಸ್ತ್ರಿಗಳು ಅಸ್ಪಷ್ಟವಾಗಿ ನುಡಿಯಬಹುದೆಂದು ನಾನು ಅಂದುಕೊಂಡಿರಲಿಲ್ಲ. ಆಧ್ವನಿಯಿಂದ ಪರವಶನಾಗಿ ನಾನು ಪರಿವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ದುಡು ದುಡನೆ ಹೋಗಿ ಅವರ ಕೃಶ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನನ್ನೇ ತಮ್ಮ ಶಾಮನೆಂದು ಪರಿಭಾವಿಸಿ ಶಾಸ್ತ್ರಿಗಳು ತದಡವಿ ಆಶೀರ್ವದಿಸಬಹುದೆಂದುಕೊಂಡಿರಲಿಲ್ಲ. ನಾನದರಿಂದ ಹ್‌ಒಸಕನಸು ಪಡೆದವನಂತೆ ಅರ್ದತಾಸೊಪ್ಪತ್ತಿಗೆ ನೂರಾರು ಲಗ್ನಪತ್ರಿಗೆಗಳ ಮೇಲೆ ನೂರಾರು ವಿಳಾಸಗಳನ್ನು ಬರೆದು ಅಂಚೆ ಚೀಟಿ ಹಚ್ಚಬಹುದೆಂದುಕೊಂಡಿರಲಿಲ್ಲ. ಅವುಗಳ್ನ್ನೆಲ್ಲ ಒಂದುಕಡೆ ಸೇರಿಸಿಟ್ಟು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಡ್ಯೂಟಿ ಮುಗಿಸಿಕೊಂಡು ಶಾಮ ಬಂದವನೆ ನನ್ನ ಕಡೆ ದುರುಗುಟ್ಟಿ “ನೀನ್ಯಾಕೆ ಬಂದೆಯೋ ಬೋಳ್ಮಗ್ನೆ” ಎಂಬರ್ಥ ಬರುವಂತೆ ನೋಡಬಹುದಂತೆ ಅಂದುಕೊಂಡಿರಲಿಲ್ಲ. ನಾನು ಅದನ್ನೆಲ್ಲ ಅಪಾರ್ಥ ಮಾಡಿಕೊಳ್ಳದೆ “ಏನು ಶಾಮ ಚೆನ್ನಾಗಿದ್ದೀಯಾ ನಿನ್ನ ಮದ್ವೆ ವಿಷ್ಯ ನಂಗೆ ಗೊತ್ತೇ ಇಲ್ವಲ್ಲೋ… ನಿಂಗೆ ನೌಕರಿ ದೊರಕಿದ್ದು, ಮದುವೆ ಇರೋದು ಇದ್ನೆಲ್ಲ ಪತ್ರ ಬರೆದು ತಿಳಿಸೋದು ಬೇಡವೇನೋ?” ಎಂದು ಉಗುಳು ನುಂಗುತ್ತ ಅವನ ಕೈ ಕುಲುಕಬೇಕೆಂದುಕೊಂಡಿರಲಿಲ್ಲ. ಅವನು ನನ್ನ ಸ್ಪರ್ಶದಿಂದ ಕೂಲಾಗಿ ನಿಟ್ಟುಸಿರುಬಿಟ್ಟು ಬಿಡಬಹುದೆಂದುಕೊಂಡಿರಲಿಲ್ಲ. ನಂತರ ನನಗೂ ಒಂದು ಕಪ್ಪು ಮಜ್ಜಿಗೆ ಕೊಟ್ಟು ತಾನೂ ಒಂದು ಕಪ್ಪು ಕುಡಿದು ಅಪರಾಧೀ ಪ್ರಜ್ಞೆಯಿಂದ ನನ್ನ ಮಗ್ಗುಲುಕೂರಬಹುದೆಂದು ಕೊಂಡಿರಲಿಲ್ಲ. ನನಗೆಂದೇ ಬರೆದಿದ್ದ ಮೂರು ಅಪೂರ್ಣ ಪತ್ರಗಳನ್ನು ಕಿಸೆಯಿಂದ ತೆಗೆದು ತೋರಿಸಬಹುದೆಂದು ಕೊಂಡಿರಲಿಲ್ಲ. ಅಂದುಕೊಂಡಿರದಿದ್ದ ಎಷ್ಟೋ ಸಂಗತಿಗಳು ಆ ಒಂದೂವರೆ ತಾಸಿನಲ್ಲಿ ತಾನೇ ತಾನಾಗಿ ತಮ್ಮ ಪಾಡಿಗೆ ತಾವು ನಡೆದು ನನ್ನ ಚಕಿತಗೊಳಿಸಿದವು.

ಸ್ವಲ್ಪ ಹೊತ್ತು ನಮ್ಮಿಬ್ಬರ ಎದೆಯೊಳಗೆ ಎಷ್ಟೊ ಪ್ರಸ್ತಾಪಿಸಬೇಕಿದ್ದ ಸಂಗತಿಗಳು ಇದ್ದರೂ ಗಂಟಲು ದಾಟಿ ಹೊರ ಬರದೆ ಅವನ ಮುಖವನ್ನು ನಾನೂ; ನನ್ನ ಮುಖವನ್ನು ಅವನೂ ಕದ್ದು ಕದ್ದು ನೋಡುತ್ತ ಕುಳಿತುಕೊಂಡಿದ್ದೆವು, ತಪ್ಪು ಮಾಡಿರುವವರಂತೆ.

ಗ್ರಾಮದ ಅನೇಕರು ಬಂದು ಪರಮೇಶ್ವರ ಶಾಸ್ತ್ರಿಗಳ ಯೋಗಕ್ಷೇಮ ವಿಚಾರಿಸುವುದರ ಜೊತೆಗೆ ಮದುವೆ ಏರ್ಪಾಡಿನ ಅನೇಕ ಸಂಗತಿಗಳನ್ನು ವಿಚಾರಿಸಿಕೊಂಡು ಹೋಗುತ್ತಿದ್ದರು. ಅರಸನ ಬಟ್ಟೆ ಅಗಸನ ಮೈ ಮೇಲೆ ಎಂಬ ನಾಣ್ಣುಡಿಯಂತೆ ಚಾಕಲಿ ನಾರಾಣಿಯಂತೂ ತಾನೇ ಮಧು ಮಗನಂತೆ ಗ್ರಾಂಥಿಕವಾಗಿ ಮಾತಾಡುತ್ತ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತಿದ್ದುದು ನಯನ ಮನೋಹರವಾಗಿತ್ತು. ಮಾವಂದರ ಪಂಚೇಂದ್ರಿಯಗಳಿಗೆ ತಾನೇ ಅಧಿಕೃತ ವಕ್ತಾರಳಂತೆ ಅಲುಮೇಲಮ್ಮ ಅವರ ಅನೇಕ ಸಂಜ್ಞೆಗಳಿಗೆ ಹೊಸ ಹೊಸ ವ್ಯಾಖ್ಯಾನಗಳನ್ನು ಬರೆಯ ತೊಡಗಿದ್ದು ತುಂಬ ಅರ್ಥಗರ್ಭಿತವಾಗಿತ್ತು.

ಇಂಥ ಬದಲಾವಣೆ ತನ್ನಲ್ಲಿ ಹುಟ್ಟಿದಂದಿನಿಂದಲೇ ಇತ್ತೆಂಬಂತೆ ಶಾಮ ನಿರಮ್ಮಳವಾಗಿ ಕೂತಿರುವಾಗ ಮಾತಾಡಲು ನನ್ನಲ್ಲಿ ಉಳಿದಿರುವುದಾದರೂ ಏನು? ಹೆಚ್ಚು ಆಧುನಿಕವಾಗಿ ಮತ್ತು ಹೆಚ್ಚು ಅಥೆಂತಿಕ್ ಎನಿಸಿದರು. ಕೋಣೆಯಲ್ಲಿ ಇನ್ನೇನು ಒಬ್ಬರೇ ಉಳಿದಿರುವರು ಎಂದು ಕೈ ಹಿಡಿದು ಜಗ್ಗಿದ, “ನಾಳೆ ಮಾತಾಡಿಸ್ಬೇಕಂದ್ರೆ ಸಿಕ್ಕಾರೆಯೇ? ಇದು ನನ್ನ ಮಾನಸಿಕ ಸ್ವಾಸ್ಥ್ಯದ ಪ್ರಶ್ನೆ ಕಣಯ್ಯಾ!” ಎಂಬಂತೆ ಕೊಸರಿಕೊಂಡು ಒಳಗಡೆ ಹೋಗಿ ವಿನಮ್ರತಾ ಭಾವದಿಂದ ಮಂಚದ ಮಗ್ಗುಲು ಕೂತುಕೊಂಡೆ.

ನಿರೀಕ್ಷೆಗೆ ಮೀರಿ ಕೃಶರಾಗಿದ್ದ ಅವರು ನನ್ನನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೋ ಎಂಬಂತೆ ನೋಡಿದರು. ಹೆಬ್ಬಾರರ ಸರಳರೇಖೆಂತಿದ್ದ ಅವರು ಏನನ್ನೋ ಮಾತಾಡಲು ಪ್ರಯತ್ನಿಸಿದರಾದರೂ ಸ್ಪಷ್ಟ ನುಡಿಕಟ್ಟು ತುಟಿಯಿಂದೀಚೆಗೆ ಹೊರಡಲಿಲ್ಲ. ನಾನೇ ಅವರ ಬಲಗಿವಿಗೆ ಹತ್ತಿರಹೋಗಿ ನನ್ನ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದೆ. ಜಗನ್ನಾತಹ್ ರೆಡ್ಡಿ ಬರ್ಲಿಲ್ಲವಲ್ಲ ಎಂದು ಕೇಳಿರಬಹುದೆಂದುಕೊಂಡು ರೆಡ್ಡಿ ಬಗೆಗೂ ಒಂಚೂರು ವಿವರಿಸಿದೆ. ಶಾಮನ ಮದುವೆಯನ್ನು ನಿಂತಿದ್ದು ಮಾಡಿ ಮುಗಿಸಬೇಕು ಎಮ್ದು ಕೇಳಿದರೆಂದುಕೊಂಡು ಶಾಮನ ಮದುವೆ ಮುಗಿಸಿಯೇ ಹೊರಡುವುದೆಂದು ಹೇಳಿದೆ. “ನಿನ್ ಮದುವೆ ಯಾವಾಗಯ್ಯ, ನಿನ್ತಲೆ ಮೇಲೂ ಅಕ್
ಷತೆ ಹಾಕಿ ಇಹಲೋಕ ತ್ಯಜಿಸಬೇಕೆಂದಿದ್ದೇನೆ” ಎಂದು ಕೇಳಿದರೆಂದೂಹಿಸಿ “ಮದವೆ ಆಗೋ ಯೋಚನೆ ಸದ್ಯಕ್ಕಿಲ್ಲ ಪೂಜ್ಯರೆ” ಎಂದು ಉತ್ತರಿಸಿದೆ. ಶಾಮನ ಗಣಾವಗುಣಗಳನ್ನು ಕೇಳಿದರೆಂದೂಹಿಸಿ “ಶಾಮಾಶಾಸ್ತ್ರಿಯಂಥ ಸದ್ಗುಣವಂಥರು ಸದ್ಯಕ್ಕೆ ನಮ್ಮೂರಲ್ಲಿ ಇನ್ನೊಬ್ರಿಲ್ಲ” ಎಂದೂ ಹೇಳಿದೆ.

ಅವರ ಮುಖದಲ್ಲಿ ನೆಮ್ಮದಿ ಮೂಡಿತು. ಸಾರ್ಥಕ ರೀತಿಯಲ್ಲಿ ಮಾತಾಇದೆ ಎಂದುಕೊಂಡು ನಾನೂ ನೆಮ್ಮದಿಯಿಂದ ಉಸಿರುಬಿಟ್ಟೆ. ಅಲ್ಲಿವರೆಗೆ ಬಾಗಿಲ ಮರೆಯಲ್ಲಿ ಕದ್ದು ಕೇಳಿಸಿಕೊಳ್ಳುತ್ತಿದ್ದ ಶಾಮ ದಿಢೀರನೆ ಒಳಗೆ ಬಂದವನೆ “ಕರೆದಿರಾ ತಾತ”, ಎಂದು ನನ್ನ ಕಡೆ ನೋಡಿ ‘ಎಲಾ ನನ ಮಗ್ನೇ’ ಎಂಬಂತೆ ನೋಡಿದ. ನಾನು ನಿರ್ವಿಕಾರ ಚಿತ್ತದಿಂದ ಆ ನೋಟ ಎದುರಿಸಿದೆ. ಶಾಸ್ತ್ರಿಗಳು ನಮ್ಮನ್ನು ಹತ್ತಿರ ಕರೆದರು. ಅವನ ಕೈಯೊಳಗೆ ನನ್ನ ಕೈಯನ್ನೂ; ನನ್ನ ಕೈಯೊಳಗೆ ಅವನ ಕೈಯನ್ನೂ ಇರಿಸಿ ತಮ್ಮ ಸಂಕಲ್ಪ ಶಕ್ತಿಯ ಕಿಂಚತು ಅಂಶವನ್ನು ಧಾರೆ ಎರೆದರು. ತದನಂತರ ಇಲ್ಲಿಂದ ಕದಲು ಎಂಬಂತೆ ಶಾಮ ನನ್ನತ್ತ ನೋಡಿದ. ನಾನು ಅಲ್ಲಿಂದ ಹೊರ ಬಿದ್ದೆ.
*
*
*
ಅಲ್ಲಿಂದ ಎರಡನೆ ದಿನದಂದು ಆ ಸೀರೆ ಉಟ್ಕಾ… ಈ ಸೀರೆ ಉಟ್ಕಾ ಎಂದು ಸಿದ್ದಮ್ಮಜ್ಜಿ ತನ್ನ ಒಡಹುಟ್ಟಿದ ಅಕ್ಕ ನಿಂಗಮ್ಮಜ್ಜಿಗೆ ತಾರೀಫು ಮಾಡುತ್ತಿರುವಾಗಲೇ ಮಹಿಳಾ ಸಮ್ಮೇಳನ ನಡೆಯಲಿರುವ ಸಂಗತಿ ನನ್ನ ಅರಿವೆಗೆ ಬಂದದ್ದು. “ಏನಯ್ಯಾಅ ಅವನು ಅಷ್ಟೊಮ್ದು ತಿರಸ್ಕಾರದಿಂದ ಕಾಣುತ್ತಾನೆಂದು ಗೊತ್ತಿದ್ದು ನೀನ್ಯಾಕೆ ಶಾಸ್ತ್ರಿಗಳ ಮನೆಗೆ ಹೋಗಿದ್ದಿ” ಎಂದು ಕಮಲಾಕರ ನನ್ನನ್ನು ಪತ್ರಿಕೆಯ ಕಛೇರಿಗೆ ಬರಮಾಡಿಕೊಂಡು ವಿಲಕ್ಷಣವಾದ ಪ್ರಶ್ನೆಕೇಳೆದ್ದು ನೆನ್ನೆ ಮಧ್ಯಾನ್ನ ಸುಮಾರು ಎರಡು ಗಂಟೆ ಸುಮಾರಿಗೆ. “ಅವನೇನು ನನ್ನ ತಿರಸ್ಕಾರದಿಂದ ಕಾಣಲಿಲ್ಲ…ಇರ್ಲಿ ಇದ್ನ ನಿನ್ಗೆ ಯಾರು ಹೇಳಿದ್ದು” ಎಂದು ಸಮ್ಮೇಳನದ ಪೂರ್ವಭಾವಿ ಸಿದ್ಧತೆಯ ವರದಿಯನ್ನು ಓದುತ್ತ ಕೇಳಿದೆ. ಹ್ಹ… ಹ್ಹ… ಹ್ಹ…ಎಂದು ನಕ್ಕು ಆ ಪತ್ರಕರ್ತ “ಇನ್ಯಾರು ಹೇಳ್ತಾರೆ. ಆ ಶಾಮನೆ” ಎಂದು ಹೇಳಿದ ಸ್ವಲ್ಪ ಹೊತ್ತಿಗೆ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದ ಜಲಜಾಕ್ಷಿ ಒಳಗಡೆ ಬಂದಿದ್ದಳು. ಬಂದವಳೆ ಕೈಲಿದ್ದ ಫೈಲ್ ತೇಬಲ್ ಮೇಲೆ ಕುಕ್ಕಿ “ಏನಪ್ಪಾ… ನಿನ್ನ ಎಲ್ಲಂಥ ಹುಡ್ಕೋದು? ಬಂದಿಷ್ಟು ದಿನಾದುರ್ ಫೋನಾದ್ರು ಮಾಡೊದು ಬೇದೇನು? ನಾಳೆ ಫಂಕ್ಷನ್ನಿಗೆ ಎಮಿನಿಯಂಟ್ಸ್ ಪರ್ಸನಾಲಿಟೀಸೆಲ್ಲ ಬರ್ತಿದ್ದಾರೆ. ನಿಮ್ಮ ನಿಂಗಮ್ಮಜ್ಜಿಯ ಅಧ್ಯಕ್ಷತೆಯಲ್ಲಿ ನಡೆಯೋದು ನೆನಪಿಟ್ಕೋ… ವರದಕ್ಷಿಣೆ ವಿರುದ್ಧ ಹೋರಾಡ್ತಿರೋ ಜಾಗಟೆ ತಿಮ್ಮಕ್ಕ; ಇಂಡಿಯಾದ ವೈವಾಹಿಕ ವ್ಯವಸ್ಥೆ ವಿರುದ್ಧ ಹೋರಾಡುತ್ತಿರುವ ಪ್ರೊಫೆಸರ್ ರುದ್ರಮುನೆಮ್ಮ, ಚಾತುರ್ವರ್ಣ ವ್ಯವಸ್ಥೆ ವಿರುದ್ಧ ಹೋರಾಡ್ತಿರೋ ಕುಲಕರ್ಣಿ ಖಾಸಿಮಮ್ಮ ಮೊದಲಾದವರೆಲ್ಲ ಬರ್ತಿದಾರೆ… ಅವರ್ಗೆ ಇರೋದ್ಕೆ ವ್ಯವಸ್ಥೆ ಮಾಡೊ ಹೊತ್ಗೆ ಸಾಕು ಸಾಕಾಗಿ ಹೋಯ್ತು ಕಣಪ್ಪ. ನಿಮ್ಮಂಥ ಗೆಳೆಯರು ಸಕ್ರಿಯವಾಗಿ ದುಡಿದಿದ್ರೆ ಹೇಗೆ? ಇಲ್ಲಿ ಹೇಗೋ ಸಿಕ್ಕಿದೆಯಲ್ಲಾ? ಸ್ವಾಗತ ಭಾಷಣಾನ ನಮ್ಮ ಮಸಾಲೆ ಮಾಡ್ತಾರೆ. ನೀನು ಮಾತ್ರ ಅದ್ಭುತವಾಗಿ ವಂದನಾರ್ಪಣೆ ಮಾಡ್ಬೇಕು ನೋಡು…” ಎಂದು ಒಂದೇ ಉಸುರಿಗೆ ಹೇಳಿ ಮುಗಿಸಿದಳು. ಉಪನ್ಯಾಸಕಾರರೆಲ್ಲ ನನಗೇನು ಅಪರಿಚಿತರೇನಲ್ಲ. ಅಧ್ಯಕ್ಷತೆ ವಹಿಸುವ ನಿಂಗಮ್ಮಜ್ಜಿಯಂತೂ ನನ್ನ ತಾಯಿಯ ಸದ್ಯ್ ದೊಡ್ಡ್ಡಮ್ಮ. ತಾಯ್ಲೆತ್ ರೂಮಿಗೆ ಹೋಗಿ ಬಾಗಿಲು ಮುಚ್ಚಿಕೊಂಡು ಗಟ್ಟಿಯಾಗಿ ತೃಪ್ತಿಯಾಗುವವರೆಗೆ ನಗಬ್‌ಏಕೆನ್ನಿಸಿತು. ಇಂಥ ಸಮ್ಮೇಳನ ನಡೆಯುವುದರ ಮ್ಲಕ ಅದು ಹೇಗೆ ಜಲಜಾಕ್ಷಿ ತನ್ನ ಓಟಿನ ಬ್ಯಾಂಕನ್ನು ದೃಢಗೊಳಿಸುವಳೇನೋ? ಈಕೆಯ ಪ್ರತಿಸ್ಪರ್ಧಿ ಗುಲಾಂನಬಿ ಸಾಮಾನ್ಯ ವ್ಯಕ್ತಿಯಲ್ಲ. ಬರುವವರನ್ನೆಲ್ಲ ಬರದಂತೆ ಮಾಡುವುದರಲ್ಲಿ ನಿಷ್ಣಾತ. ಆಕೆ ನಡೆಸುವ ಸಮ್ಮೇಳನದಲ್ಲಿ ಭಾಗವಹಿಸಿದರೆ ಗಂಡಸರು ಹೆಂಗಸರು ಗಂಡಸರಾಗುವರೆಂದೂ ಹೇಳಿ ನಾನು ಭಾಗವಹಿಸದಂತೆ ಮಾಡಿರುವನಂತೆ.

ದೇವದಾಸಿ ಪದ್ಧತಿ ವಿರುದ್ಧ ಅಹರ್ನಿಶಿ ದುಡಿಯುತ್ತಿರುವ ಬ್ಯಾಡರ ಭುವನೇಶ್ವರಿಗೂ ಅತಗೂ ಇದೇ ವಿಶಯದಲ್ಲಿ ಜಟಾಪಟಿಯಾಯಿತಂತೆ. ಆತನ ಬೆದರಿಜೆಗೆ ಮಣಿಯದೆ ಭುವನೇಶ್ವರಿ “ನೀನು ಏನೇ ಹೇಳು ನಾನು ಭಾಗವಹಿಸೇ ತೀರ್ತೇನೆ?” ಎಂದು ಘಂಟಾ ಘೋಷವಾಗಿ ಹೇಳಿಬಿಟ್ಟಳಂತೆ. ಆಗ ಸಿಟ್ಟಿಗೆದ್ದು ಗುಲಾಂ ನಬಿ “ಎಲೆ ಮುಂಡೆ… ಎಲ್ಲೋ ಮೂಲೆಲಿದ್ದು ಹಮಾಲಿಗಳ ಮಲಿಕ್ಕೊಳ್ತಿದ್ದೋಳ್ನ ಕರ್ಕೊಂಡು ಬೆಂಗ್ಳೂರು, ಮಡ್ರಾಸೂ, ಡೆಲ್ಲೀಗೆಲ್ಲ ಕರ್ಕೊಂಡೋಗಿ ದೊಡ್ ದೊಡ್ಡೋರ್ನೆಲ್ಲ ಪರಿಚಯ ಮಾಡಿಕೊಟ್ನಲ್ಲೆ ಭೋಸೂಡಿ. ತ್ರಿಸ್ತಾರ್ ಫೈವ್ವು ಸ್ಟಾರ್ ಹೋಟ್ಲಲ್ಲೆಲ್ಲ ಉಳ್ಳಾಡ್ಸಿದೆಲ್ಲೆ…” ಎಂದು ನಾಲಿಗೆಗೆ ಕೈ ಜೋಡಿಸಿದನಂತೆ. ಅದಕ್ಕೆ ಕೇರು ಮಾಡದೆ ಆಕೆ, “ಇದ್ ಏ ಮತ್ನ ನಾಕು ಮಂದಿಗೆದ್ರು ಅನ್ನು. ಆಗ ಗೊತ್ತಾಗ್ತದೆ ಈ ಮೇಲ್ ಡೋಮಿನೇಟೆಡ್ ಸೊಸೈಟೀಗೆ ನಿನ್ ಬಂಡ್ವಾಳ ಏನೂಂತ?… ನಾನೇನು ಕರೆದಿದ್ದೆನೋ… ನನ್ನ ಕರ್ಕೊಂಡೊಯ್ದು ಇಂಥಿಥೊರತ್ರ ಮಲಗ್ಸೂಂತ… ನಿನ್ನ ಪೆಂಡಿಂಗ್ ಕೆಲಸಾಗೋದಿದ್ವು ಮಲಗಿಸಿದ್ದೀ… ನೀನು ನನ್ನೊಂದೆ ಏನು ಈ ದಾರಿಗೆಲೆದಿರೋದು. ಕಂಪಿಲರಾಯನ ವಂಶದವಳಾದ ಕಮಲಿ; ಪಾಳ್ಳೆಗಾರ ವಂಶದ ಪಾರ್ವತಿ; ನಿಜಾಮನ ವಂಶದವಳಾದ ನಳಿನಿ… ಗುಡೇಕೋಟೆ ಪದ್ಮ ಜರುಮಲಿಯ ಜಾನಕಿ; ಕೊಟ್ಟುಊರಿನ ಬೆಣ್ಣೆ ಬಸವ್ವ… ಲಿಸ್ಟ್ ಕೊಡ್ಲೇನು ಲಿಸ್ಟ್… ನಾಳೆ ಸಮ್ಮೇಳನದಾಗ ನಿನ್ನ ಬಣ್ಣ ಬಟಾ ಬಯಲು ಮಾಡದಿದ್ರೆ ನಾನು ಅಮ್ಮನಕೇರಿ ಹಾಲವ್ವನ ಮಗ್ಳು ತಿಮ್ಮಾವ್ವ ಉರುಫ್ ಭುವನೇಶ್ವರೀನೆ ಅಲ್ಲ” ಎಂದು ಶಪಥ ಮಾಡಿಬಿಟ್ಟಳಂತೆ. “ಲೇ ಮುಂಡೆ ಕೈಯಲ್ಲಿ ಒಂದಿಷ್‌ಉ ಗಂಟು. ಮೈಯಲ್ಲೊಂದಿಷ್ಟು ನೆಣ ಐತಂಥ ಬಾಯಿಬಂದಂಗೆ ಹೋಗಿ ಹೇಗೆ ಭಾಗವಹಿಸುತ್ತೀಯೋ ನಾನೂ ನೋಡೇ ಬಿಡ್ತೀನಿ” ಎಂದು ಮೈಗೆಲ್ಲ ಸಿಟ್ಟು ಮೆತ್ತಿಕೊಂಡು ನಬಿ ಅಲ್ಲಿಂದ ಹೋದನಂತೆ. ಪ್ರಚಲಿತ ರಾಜಕಾರಣಿಗಳ ಹಾಸಿಗೆ ಹಂಚಿಕೊಂಡಿರುವ ಚತುರ್ವೇದಿಗಳಿಗೂ ಮಿಗಿಲಾದ ವ್ಯವಹಾರ ಜ್ಞಾನ ಹೊಂದಿರುವ ಭುವನೇಶ್ವರಿ ದೇವದಾಸಿ ಪದ್ಧತಿ ನಿರ್ಮೂಲನಾ ವೇದಿಕೆ ರಚಿಸಿದ್ದೇ ಜಲಜಾಕ್ಷಿ ಸಹಾಯದಿಂದ.ಅದಕ್ಕೆ ಮಹಿಳಾ ಸಂಕ್ಷೇಮ ನಿಧಿಯಿಂದ ಲಕ್ಷಾಂತರ ರುಪಾಯಿಗಳು ಹರಿದು ಬರುವಂತೆ ಮಾಡಿರುವುದೂ ಮಸಾಲೆಯವರ ಸಹಾಯದಿಂದಜಲಜಾಕ್ಷಿಯೆ. ದೇವದಾಸಿಯರನ್ನು ಮದುವೆಯಾಗಲು ಯುವಕರನ್ನು ಪ್ರೇರೇಪಿಸಿ ವೇದಿಕೆಯನ್ನು ಸದೃಡಗೊಳಿಸಿರುವುದೂ ಜಲಜಾಕ್ಷಿಯೇ. ನಾನೇನಾದ್ರು ಮಂದೆ ಎಮ್ಮೆಲ್ಲೆ ಆದ್ರೆ ನಿನ್ನನ್ನು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯನ್ನಾಗಿ ಮಾಡುವುದಾಗಿ ಭುವನೇಶ್ವರಿಗೆ ವಚನವಿತ್ತಿರುವುದೂ ಜಲಜಾಕ್ಷಿಯೇ. ಇಂಥ ಜಲಜಾಕ್ಷಿಯಾದ ತನ್ನ ಮಾತನ್ನು ಹೇಗೆ ಂಇರುವುದು ಸಾಧ್ಯ? ಎಂಬುದು ಏಕೆಯ ತರ್ಕ. ಕೊತ್ತಲಗಿಯ ಅಂಡರ್ರ್ವರ್ಲ್ಡ್ ಪರಿಚಯ ಸಾಕಷ್ಟಿರುವ ಭುವನೇಶ್ವರಿ ಸಮ್ಮೇಲನದಲ್ಲಿ ಭಾಗವಹಿಸುತ್ತಾಳೆಂಬುದು ಜಲಜಾಕ್ಷಿಯ ಸಧ್ಯದ ವಿಶ್ವಾಸ.

ಕಾರಿನಲ್ಲಿ ನನ್ನನ್ನು ಕೂರಿಸಿಕೊಂಡು ತಾನೇ ಡ್ರೈವ್ ಮಾಡುತ್ತ ಗ್ರಾಮದ ಮೂಲೆಯಲ್ಲಿ ತಿರುಗಾಡಿಸುತ್ತ ಮೇಲ್ಕಾಣಿಸಿದ ವಿಷಯಗಳನ್ನು ಪ್ರಸ್ತಾಪಿಸಿದಳು. ಹಾಗೆ ಒಂದು ರೌಂಡು ಪ್ರವಾಸಿ ಬಂಗಲೆ ಕಡೆ ಹೋಗಿ ಬಂದೆವು. ಆಗಲೆ ಬಂದು ಇಳಿದುಕೊಂಡಿದ್ದ ಕೆಲವು ಉಪನ್ಯಾಸಕಾರಿಣಿಯರಿಗೆ “ಇವ್ರೇ ನಾಳೆ ವಂದನಾರ್ಪಣೆ ಮಾಡೋದು” ಎಂದು ಪರಿಚಿಯಿಸಿದಳು. ಅವರೆಲ್ಲ ಹಾಗೋ ಎಂದು ಉದ್ಗರಿಸಿ ತಂತಮ್ಮ ಸಾಧನೆ ವಿವರ ಸರ್ಟಿಫೈಡ್ ಕಾಪಿಗಳನ್ನು ಕೊಡುತ್ತ ಸಾಧ್ಯವಾದ್ರೆ ವಂದನಾರ್ಪಣೆ ಮಾಡುವಾಗ ಪ್ರಸ್ತಾಪಿಸಿ ಮಹಿಳಾ ವಿಮೋಚನಾ ಹೋರಾಟ ಬೆಂಬಲಿಸಿ ಎಂದು ಮುಗುಳ್ನಕ್ಕೂ ಕೊಟ್ಟರು. “ವಂದನಾರ್ಪಣೆಗೆ ಇದೆಲ್ಲಾ ಬೇಕಾಗಿಲ್ಲ” ಎಂದು ವಾಪಸು ಕೊಡಲು ಹೋದಾಗ ಜಲಜಾಕ್ಷಿ “ಎಂಥಾ ಮಾತಾಡ್ತೀಯಾ? ಇವ್ರೆಲ್ಲ ಮಾತಾಡೋದು ಒಂದು ತೂಕವಾದ್ರೆ ವಂದನಾರ್ಪಣೆಯೇ ಒಂದು ತೂಕ ತಗೋ ಎಂದಳು. ನಾನು ನಗುತ್ತ ಹೋತದ ಕೊರಳಲ್ಲಿನ ಮೊಲೆ ಗಂಡಸಿನ ಜೋಲು ಎದೆಗಳಷ್ಟೆ ನಿಷ್ಪ್ರಯೋಜಕ. ವಂದನಾರ್ಪಣೆ ಎಂದು ಮಹಾನುಭಾವ ಬೀಚಿ ಹೇಳಿರುವನೇನೆಂದು ಆಕೆಗೆ ನೆನಪಿಸಿದೆ. ಅದಕ್ಕೆ ಎಲ್ಲರೂ ಬಿದ್ದು ಬಿದ್ದು ನಕ್ಕರು. ಅವರ ಒತ್ತಾಯಕ್ಕೆ ಕಟು ಬಿದ್ದು ವಿವರದ ಕಟ್ಟುಗಳನ್ನು ಕಂಕುಳಲ್ಲಿಟ್ಟುಕೊಂಡೆ. ಒಬ್ಬರ್ ಸಂಡಾಸ್ ಕಡೆಗೆ, ಒಬ್ಬರು ಬಾತ್ರೂಮಿಗೆ ಒಬ್ಬರು ಪ್ರಸಾಧನ ಕೋಣೆಗೆ ಹೋಗಲು ನಾನು “ಅಲ್ಲ ಜಲಜಾಕ್ಷಿ, ನಮ್ಮ ನಿಂಗಮ್ಮಜ್ಜಿ ಅಧ್ಯಕ್ಷತೆ ಎಂದರೇನು? ಇವ್ರೆಲ್ಲ ಭಾಷಣ ಮಾಡೊದೆಂದ್ರೇನು? ಭುವನೇಶ್ವರಿ ಕಾಷ್ಟ ಕೋಟಲೆ ಎದುರಿಸೋಣವೆಂದರೇನು…” ಎಂಬಿವೇ ಮೊದಲಾದ ಪ್ರಶ್ನೆಗಳು ಹಾಕಿದೆ. ಜವಾರಿತನ ಮತ್ತು ತಾಜಾನುಭವಗಳಿಂದ ಮಾತ್ರ ಸಮಾಜ ಕಂನು ತೆರೆಯಲು ಸಾಧ್ಯವೆಮ್ದು ಹೇಳಿದಳು. ಭುವನೇಶ್ವರಿಯನ್ನು ಗುಲಾಂ ನಬಿ ವಿರುದ್ಧ ಎತ್ತಿಕಟ್ಟುವುದಕ್ಕೇಂದೇ ಆಕೆ ಈ ಸಮ್ಮೇಳನ ರೂಪಿಸಿಕೊಂಡಿರುವಳೆಂದುಕೊಂಡೆ. ಈ ವಿಚಿತ್ರದ ಬೆರಗಿನೊಂದಿಗೆ ನಾನು ನಡೆದುಕೊಂಡೇ ಮನೆ ತಲುಪಿದ್ದು ಹಿಂದಿನ ದಿನದ ಮಾತು.
ಅದಕ್ಕಿಂತ ಮೊದಲೆ ನಮ್ಮ ಮನೆಗೆ ದಟ್ಟಂಡಿ ದಾರಂಡಿ ಅಡ್ಡಾಡಿ ನಿಂಗಮ್ಮಜ್ಜಿಯಲ್ಲಿ ಹುರುಪು ತುಂಬಿದ್ದಳೆಂದು ತಿಳಿಯಿತು. ಸಿನಿಮಾ ನೋಡುವುದೆಂದರೆ ಮೂಗು ಕುಯ್ಯಿಸಿಕೊಳ್ಳುವ ನಿಂಗಮ್ಮಜ್ಜಿ ಕೂಡ ತನ್ನ ವಾಗ್ ವೈಖರಿ ಪ್ರದರ್ಶಿವ ಸಲುವಾಗಿ ಇಂಥದೊಂದು ಛಾನ್ಸಿನ ನಿರೀಕ್ಷೆಯಲ್ಲಿದ್ದಳು. ಅಂಥದೊಮ್ದು ಅವಕಾಶ ತಾನ್‌ಏ ತಾನಾಗಿ ಒದಗಿ ಬಂದಿರುವುದನ್ನು ಆಕೆ ಹೇಗೆ ನಿರಾಕರಿಸಲು ಸಾಧ್ಯ.

ಹೊಟ್ಟೆ ಹುಣ್ಣು ಇಲಾಜಿಗೋಸ್ಕರ ಧಾರವಾಅದ ಲೂರ್ಧಾ ಆಸ್ಪತ್ರೆಯಲ್ಲಿರದಿದ್ದರೆ “ಯ್ ಮುದುಕೀ ಹೊಸ್ತಿಲು ದಾಟ್ದೀ ಅಂದ್ರೆ ಕಾಲು ಮುರೀತೀನಿ” ಅಂತಿದ್ದ. “ಅದ್‌ಏನು ತಲಿ ಬಡಕೊಂಡೈತವ್ವಾ. ಈ ವಯಸ್ನಾಗೆ ನಿಂಗೆ . ಯೇನಾದ್ರು ಯೇಳಿದ್ರೆ ಯೆಗ್ರಿ ಬೀಳ್ತೀಯಾ. ಅದೇನು ಮಾಡ್ತೀಯ ಮಾಡು” ಎಂದು ತನ್ನಕ್ಕನೆಂಬ ಬ್ರಹ್ಮಪುತ್ರ ಪ್ರವಾಹದೆದುರು ಈಜಲಾರದೆ ಸಿದ್ದಮ್ಮಜ್ಜಿ ನಿಂಗಮ್ಮಜ್ಜಿಯ ನರ್ತನಕ್ಕೆ ಒಪ್ಪಿಗೆ ಸೂಚಿಸಿತು.

ನಾನು ಕೋಣೆಯೊಳಗಿದ್ದೇ ೧೯೦೫ರ ಮಾಡೆಲ್ ತಂಗಿಯೋರ್ವಳು ೧೯೦೩ರ ಮಾಡೆಲ್ ಅಕ್ಕ ಓರ್ವಳಿಗೆ ಸಿಂಗಾರ ಮಾಡುತ್ತಿದ್ದುದನ್ನು ಗಮನಿಸುತ್ತಿದ್ದೆ. ಸಿಂಗರಿಸುವ ಪ್ರಕ್ರಿಯೆ ಮಧ್ಯಾಹ್ನ ಮೂರುಗಂತೆ ಹದಿನಾರು ನಿಮಿಷಕ್ಕೆ ಆರಂಭವಾಗಿದ್ದು ಸಾಯಂಕಾಲ ನಾಲ್ಕು ಗಂಟೆ ನಲವತ್ತೆರಡು ನಿಮಿಷಕ್ಕೆ ಮುಕ್ತಾಯವಾಯಿತು. ತನ್ನ ಸೇನಾಧಿಪತಿ ಈ ಪ್ರಕಾರವಾಗಿ ಅಲಂಕೃತಗೊಂಡು ಪುರುಷ ಪ್ರಪಂಚದ ವಿರುದ್ಧ ಸೆಡ್ಡು ಹೊಡೆಯಲುಸಜ್ಜಾಗುತ್ತಿರುವುದನ್ನು ಓಣಿಯ ಸಿದ್ದವ್ವ ರುದ್ರವ್ವ ನಂಜವ್ವ, ಕೊಟ್ರವ್ವ, ತಾಯವ್ವ, ಸಿವವ್ವ ಇವರೇ ಮೊದಲಾದ ಬಿರುಗಾಳಿ, ಸುಂಟರಗಾಳಿ ಕಣ್ತುಂಬ ವೀಕ್ಷಿಸಿದ್ದವು. ಆಕೆಯ ನಡಿಗೆಯ ನೇತೃತ್ವ ವಹಿಸಿರುವ ಕರ್ಮಕ್ಕೆ ಹೆದರಿ ನಾನು ವಮ್ದನಾರ್ಪಣೆಗಷ್ಟೆ ಸೀಮಿತವಾಗಿ ಅಲಂಕರಿಸಿಕೊಂಡು ಅಲ್ಲಿಂದ ಹೊರಟು ಜಲಜಾಕ್ಷಿಯ ಕಾರ್ಯ ಕ್ಂದ್ರವಾದ… ಖಡ್ಗ ಪತ್ರಿಕಾಲಯದ ಕಟ್ಟಡ ತಲುಪಿದೆ. ಸಂಘಟಕಿಯ ನಿರ್ದೇಶನದಂತೆ ಕಮಲಾಕರ ಕುರ್ತಾಪಾಯಿಜಾಮ ಧರಿಸಿ ನನಗಾಗಿ ಕಾಯುತ್ತಿದ್ದ. ಒಬ್ಬ ಕಾಮೆರಾಮನ್ನು; ಒಬ್ಬ ವರದಿಗಾರನನ್ನು ಸಮ್ಮೇಳನದ ಜಾಗಕ್ಕೆ ಅಟ್ಟಿದ. ಪ್ರಶಸ್ತಿಯ ಹಣದಲ್ಲಿ ಮತ್ತು ಸುರೇಶಗೌಡ ಕೊಟ್ಟಿದ್ದ ಹಫ್ತಾ ವಸೂಲಿ ಹಣದಲ್ಲಿ ಅವನು ಹದಿನೈದು ದಿನದ ಹಿಂದೆಯಷ್ತೆ ಕೊಂಡಿದ್ದ ಬುಲೆಟ್ ಮೇಲೆ ಕೂಕಂಡು ಸುತ್ತೀ ಬಲಸೀ ಸಮ್ಮೇಅಳನ ವ್ಯವಸ್ಠೆಯಾಗಿದ್ದ ಲೆನಿನ್ಗ್ರಾಡ್ ಮೈದಾನ ತಲುಪಿದೆವು.

ಕೊಟ್ಟೂರಿನ ಲೆನಿನ್ ಗ್ರಾ ಮೈದಾನ ನಾಡಿನಲ್ಲೆಲ್ಲ ಚಿರಪರಿಚಿತ. ೧೯೩೯ರಲ್ಲಿ ಗಾಂಧಿ ಮಹಾತ್ಮರು ಕೊಟ್ಟುರಿಗೆ ಬಮ್ದಾಗ ಅಲ್ಲಿ ಭಾಷಣ ಮಾಡಲು ಬಿಲ್‌ಕುಲ್ ಒಪ್ಪದೆ ಹರಿಜನ ಕೇರಿಗಂಟಿಕೊಂಡಂತಿರುವ ಅರಳಿಕಟ್ಟೆ ಮೇಲೆ ಸ್ವತಂತ್ರ್ಯ ಸಮರದ ಕಹಳೆ ಊದಿ ಸತ್ಯ ಮತ್ತು ಅಹಿಂಸೆ ಕುರಿತು ಒತ್ತಿ ಹೇಳಿ ಹೋಗಿದ್ದರು. ಸ್ವಯಂ ಗಾಂಧೀಜಿಯವರಿಂದಲೇ ಬೇಬಿಷ್ಟೆಗೆ ಒಳಗಾದ ಸದರೀ ಮೈದಾನಕ್ಕೆ ಲೆನಿನ್ ಗ್ರಾ ಎಂಬ ಹೆಸರು ಬಂದುದು ಕಾಮ್ರೇಡ್ ಮಾಯಾಪುರಂ ಅಬ್ದುಲ್ ಘನಿಯವರಿಂದ. ದಕ್ಷಿಣ ಭಾರತದಲ್ಲಿ ಅವರೋರ್ವರೆ ಸೋವಿಯತ್ ಲ್ಯಾಂಡ್‌ಗೆ ಹೋಗಿ ಲೆನಿನ್‌ರವರ ಕೈಕುಲುಕಿದರಂತೆ, ಅವರೇ ಸದರೀ ಮೈದಾನದಲ್ಲಿ ಹಿಂಸೆಯ ಮೂಲಕ ಸ್ವಾತಂತ್ರ್ಯ ಸಂಪಾದಿಸಬೇಕೆಂದು ಭಾಷಣ ಮಾಡಿ ಮುಂದೊಂದು ದಿನ ಕೊಟ್ಟೂರಿನ ಅಹಿಂಸಾವಾದಿಗಳಿಂದಲೇ ಒದೆ ತಿಂದು ಸತ್ತನಂತೆ., ಸದರೀ ಗ್ರಾಮದ ಹಿಂಸಾವಾದಿಅಹಿಂಸಾವಾದಿಗಳ ನಡುವೆ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘರ್ಷಣೆ ಸ್ಥಳ ನಾಮೆಯಲ್ಲೆಲ್ಲೂ ಉಲ್ಲೆಖವಾಗಿಲ್ಲ. ಅಹಿಂಸಾವಾದಿಗಳಿಗಿಂತ ಹಿಂಸಾವಾದಿಗಳೆ ಕ್ರಮೇಣ ಜನಪ್ರಿಯಗೊಂಡು ಸದರೀ ಮೈದಾನಕ್ಕೆ ಲೆನಿನ್ ಗ್ರಾಡ್ ಎಂಬ ಹೆಸರು ಬಂದಿರಬಹುದೆಂದು ಜನರ ಅಂಬೋಣ.

೧೯೮೪ರಲ್ಲಿ ಹುತಾತ್ಮರಾದ ಸ್ರೀಮತಿ ಇಂದಿರಾಗಾಂಧಿಯವರು ೧೯೭೫ರಲ್ಲಿ ವಿಧಿಸಿದ್ದ ತುರ್ತು ಪರಿಸ್ಥಿತಿ ವಿರೋದಿಸಿ ಅನೇಕರು ಭಾಷಣ ಮಾಡಿದ್ದು ಇಲ್ಲಿಯೇ. ದೊಡ್ಡಾಟ, ಸಣ್ಣಾಟ, ನಾಟಕಗಳಿವೇ ಮೊದಲಾದ ರಂಗ ಚಟುವಇಕೆಗಳಿಗೆ ಹೆಸರಾದ ಈ ಮೈದಾನ ಜನರ ಆಡುಮಾತಿನಲ್ಲಿ ಲೆಂಗ್ಯಾಡು ಆಗಿದೆ. ಸ್ವಾತಂತ್ರ್ಯ ಪೂರ್ವದ ಲೆಂಗು ಎಂಬ ಆಟ ಆಡುತಿದ್ದರಾದ್ದರಿಂದ ಲೆಂಗ್ಯಾಡು ಎಂಬ ಹೆಸರು ಬಂದಿರುವುದೆಂದು ಸ್ಥಳೀಯ ಹವ್ಯಾಸಿ ಸಂಶೋಧಕ ಉಳ್ಳಾಗಡ್ದೆ ಈರೇಶ ಅಭಿಪ್ರಾಯ ಪಟ್ಟಿರುತ್ತಾನೆ. ಈ ಪ್ರಕಾರವಾಗಿ ತನ್ನದೇ ಆದ ವೈಶಿಷ್ಟ್ಯಪೂರ್ಣ ಹಿನ್ನೆಲೆಯುಳ್ಳ ’ಲೆಂಗ್ಯಾಡು’ ಮೈದಾನವನ್ನು ನಮ್ಮ ಬುಲೆಟ್ಟು, ಅಟ್ಟೆಟ್ಟಟ್ಟು, ಉಟ್ಟುಟ್ಟುಟ್ಟು ಎಂದು ಭಯಂಕರ ಸದ್ದು ಮಾಡುತ್ತ ಪ್ರವೇಶಿಸಿತು. ಜನರು ಹೋಹೋ! ಹ್ಹಾ…ಹ್ಹಾ ಎಂದು ಉದ್ಗರಿಸಿ ಸ್ವಾಗಸುತ್ತಿರಲು ನಾವು ಹೋಗಿ ನಮ್ಮ ನಮ್ಮ ಉಚಿತಾಸನದಲ್ಲಿ ಕೂಕಂಡೆವು.

ಲಾರಿಗಳು, ಟ್ರಿಪ್ಪರುಗಳು ಸುತ್ತಮುತ್ತ ಹಳ್ಳಿಗಳಿಂದ ಜನರನ್ನು ಹೊಡೆದಿಳಿಸುವುದರಲ್ಲಿ ಮಗ್ನವಾಗಿದ್ದವು. ನೋಡು ನೋಡುವಷ್ಟರಲ್ಲಿ ಎಲೆ ಅಡಿಕೆ, ತಂಬಾಕು, ನೆಶ್ಶೆ ಪುಡಿಗಳಿಂದ ಮೈದಾನ ತುಂಬಿ ಹೋಯಿತು. “ನನ್ನ ಗಂಡ ಕುಡ್ಕೊಂಡು ಬಂದು ದಿನಾಲು ಹೊಡಿ ತಾನೆ ನಮ್ಮವ್ವ್ವ” ಎಂದೋ, ಹಡ್ದೂ ಹಡ್ದೂ ಸಾಕಾಗಿ ಹೋಗೈಟೆ ದೊಡ್ಡವ್ವ” ಎಂದೋ; ಪಂಚಮಿ ಹಬ್ಬಕ ನಮ್ಮಣ್ಣ ಕರಿಯಾಕೆ ಬರ್ಲಿಲ್ಲೆ” ಎಂದೋ; “ಈ ನಮ್ಮಮ್ಮ ಜಲ್ಜಾಕ್ಚಿ ನಮ್ಗೇನಾರ ಒಂದಿಕ್ಕು ತೋರಿಸ್ತಾಳೇನೋ ನೋ ಡಾಮ ಎಂದೋ” ಗೊಣಗಾಡುತ್ತಿದ್ದರು. ಅಷ್ಟರಲ್ಲಿ ಮಿನಿ ಬಸ್ಸಿನಲ್ಲಿ ಬೆವತು ಮುದ್ದೆಯಾಗಿದ್ದ ಆ ಲಿಪ್‌ಸ್ತಿಕ್ಕು; ನಶ್ಶೆಪುಡಿ ತೊಂಬಲ ಮಂತಾದ ನೂರತ್ತು ಮಂದಿ ವೀರ ಮಹಿಳೆಯರು ಇಳಿಯುತ್ತಿದ್ದಂತೆ “ಭುವನೇಶ್ವರಿ ಜಿಂದಾಬಾದ್ ಗುಲಾಮ ನಬಿ ಮುರ್ದಾಬಾದ್” ಒಂದು ಕೂಗುತ್ತ ಸಮ್ಮೇಳನದಮುಖ್ಯದ್ವಾರ ಪ್ರವೇಶಿಸಿದರು. ಪತಿವ್ರತೆಯರೂ; ಗಂಡ ಬಿಟ್ಟವರೂ, ರಂಡ ಮುಂಡೆಯರೆಲ್ಲರೂ ಒಗ್ಗಟ್ಟಾಗಿ ಕೊತ್ತಲಗಿಯಿಂದಿಳಿದ ವೃತ್ತಿಪರ ವೇಶ್ಯೆಯರ, ದೇವದಾಸಿಯರ ವಿರುದ್ಧ ವಾಗ್ಯುದ್ಧಕ್ಕಿಳಿದರು. ಸಮ್ಮೇಳನದ ಮುಖ್ಯ ಸಚೇತಕನಾದ ಗುಡ್ತಿಂದಪ್ಪ ಮತ್ತು ಮುಖ್ಯ ವಖ್ತಾರನಾದ ಯಂಕೋಬಿಯವರು ಅವರ ನಡುವೆ ಶಾಂತಿ ಸ್ಥಾಪಿಸಲು ಶ್ರಮಿಸಿ ಕೊನೆಗೂ ಯಶಸ್ವಿಯಾದರು. ಕೊತ್ತಲಗಿಯ ಮಿನಿ ಬಸ್ ತಂದ ಲೇಟೆಸ್ಟ್ ನ್ಯೂಸ್ ಪ್ರಕಾರ ಭುವನೇಶ್ವರಿಯನ್ನು ಬಿಡಿಓ ಭರಮಪ್ಪನ ಕುತಂತ್ರದಿಂದ ಊರಹೊರಗಿರುವ ಪ್ರವಾಸಿ ಬಂಗಲೆಗೆ ನಬಿ ಬರಮಾಡಿಕೊಂಡನಂತೆ. ಆಕೆಗೂ ಆತನಿಗೂ ಮುಷ್ಟಿ ಯುದ್ದ್ಧ್, ಮಲ್ಲ ಯುದ್ಧ ರಾತ್ರಿ ಇಡೀ ನಡೆಯಿತಂತೆ. ಗುಲಾಮನ ಗೂಂಡಾಗಳು ಆಕೆಯನ್ನು ಅಮೇರಿಕನ್ ಶೈಲಿಯ ಶೌಚಾಲಯದಲ್ಲಿ ಕೂಡಿ ಹಾಕಿ ಬಿಟ್ಟರಂತೆ. ಇದು ಹೇಗೋ ತಿಳಿದ ದೇವದಾಸಿ ನಿರ್ಮೂಲನಾ ಸಂಘದ ಗೌರವ ಸದಸ್ಯೆಯರಾದ ನೂರಾರು ಮಂದಿ ತಂತಮ್ಮ ಕೈಯಲ್ಲಿ ಹಳೆಪಳೆ ಕೆರಗಳನ್ನು ಹಿಡಿದುಕೊಂಡು ಪ್ರವಾಸಿ ಬಂಗಲೆಯನ್ನು ಮುತ್ತಿದರಂತೆ. ಅವರ ಹೊಡೆತಗಳನ್ನು ತಾಳಲಾರದೆ ಗುಲಾಮನೂ ಆತನ ಗೂಂಡಾಗಳು ಕಾಲಿಗೆ ಬುದ್ಧಿ ಹೇಳಿ ಸರ್ಕಿಲ್ಲನ ನೆರವು ಪಡೆದರಂತೆ, ಸರ್ಕಿಲ್ ಸರೂಪಾನಂದ ರಾತ್ರಿ ಇಡೀ ಢಾಂಢೂಂ ಅಂತ ಭುವನೇಶ್ವರಿ ಮತ್ತಾಕೆಯ ಅಭಿಮಾನಿ ಬಳಗದ ಮೇಲೆ ದೈಹಿಕಾಕ್ರಮಣ ಮಾಡಿದನಂತೆ. ಪಿಂಪ್ ಕಲ್ಲರಿನ ಪರಮೇಶಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪುರುಶೋತ್ತಮೈಂಗಾರ್ರವರಿಗೆ ಫೋನ್ ಮಾಡಿ ವಸ್ತು ಸ್ಥಿತಿ ವಿವರಿಸಿದನಂತೆ. ರಾಕಾರವರು ಜಿಲ್ಲೆಯ ಎಸ್ಪಿಯವರಿಗೂ; ಎಸ್ಪಿ ಸರ್ಕಿಲ್ಗೂ ಫೋನ್ ಮಾಡಿ ಭುವನೇಶ್ವರಿ ಬಿಡುಗಎಯಾಗುವ ಹೊತ್ತಿಗೆ ಅಕೆಯದೇ ಆದ ಹನ್ನೆರಉ ಹುಂಜಗಳು ಪಾಂಜಜನ್ಯ ಮೊಳಗಿಸಿದುವಂತೆ… ಆದರೂ ಗುಲಾಮನ ಅಟಾಟೋಪ ಕಡಿಮೆಯಾಗಲಿಲ್ಲವಂತೆ… ಒನಕೆ ಓಬವ್ವಗಿಂತಲೂ ಸುಸ್ತಾಗಿರುವ ಭುವನೇಶ್ವರಿ ಯಾವ ಮೇಕಪ್ಪಿಲ್ಲದೆ ಒಂದು ಸಮ್ಮೇಳನದಲ್ಲಿ ಭಾಗವಹಿಸುತ್ತಾಳೆ ಎಂದು ಕೊತ್ತಲಗಿಯ ವೀರರಮಣಿಯರು ಸಾರಿ ಸಾರಿ ಹೇಳಿದರು.

ಓಂದೇ ಸಮನಾಗಿ ಗುಜುಗುಜು ಎದ್ದು ಸಭೆಗೆ ಸಭೆಯೇ ತಂಗನತಿಟ್ಟಾಯಿತು. ಕೈಮಗ್ಗದ ಸೀರೆ ರವಿಕೆ ಉಉ ಸಾಕ್ಷಾತ್ ಸೋನಿಯಾ ಗಾಂಧಿಯವರನ್ನು ನೆನಪಿಸುವಂತಿದ್ದ ಜಲಜಾಕ್ಶಿ ಓಹೋ… ಹ್ಹಾ… ಹ್ಹಾ… ಅಂತ ಬಂದು ನಮ್ಮ ನಮ್ಮ ಅಂಗಿಗಳಿಗೆ ಬ್ಯಾಡ್ಗ್ ಅಂಟಿಸಿ ಹೋದಳು. ಆಕೆಯ ಬಲಗೈ ಎಂದೇ ಹೆಸರಾಗಿರುವ ಜೋಗರ ಗೋಣಿ ಬಸವ್ವಗೂ; ಎಡಗೈ ಎಂದೇ ಹೆಸರಾಗಿರುವ ಕರೆಕಟ್ಟೆ ಕರೆವ್ವಗೂ ಮೈಕ್‌ಟೆಸ್ಟಿಂಗ್ ಒನ್‌ಟೂತ್ರಿ ಎಂದು ಹೇಳುವ ಸಲುವಾಗಿಜಗಳವಾಯಿತು. ಅದೇ ಹೊತ್ತಿಗೆ ಆಗಮಿಸಿದ್ ಭಾಶಣಗಾರ್ತಿಯರಾದ ಜಾಗಟೆ ತಿಮ್ಮಕ್ಕ; ಪ್ರೊ.ರುದ್ರಮುನೆಮ್ಮ, ಕುಲಕರ್ರ್ಣಿ ಖಾಸೀಮಮ್ಮ ಮೊದಲಾದವರೆಲ್ಲ ಬ್ಯೂಟಿಪರ್ಲೆರ್‍ಗಳೇ ಮಹಿಳೆಯರ ವೇಶಧರಿಸಿರುವುವೇನೋ ಎಂಬಂತೆ ಬಂದು ತಲಾ ಒಂದೊಂದು ರವಂಡು ಸಿಂಹಿಣಿಯಾವಲೋಕನ ಮಾಡಿ ತೊಂಕದ ಮೇಲೆ ಕೈ ಇಟ್ಟುಕೊಂಡು ವೇದಿಕೆ ಮೇಲೆ ಶತಪಥ ಹೆಜ್ಜೆ ಹಾಕ ತೊಡಗಿದರು. ತರುಣಿಯೋರ್ವಳು ನೋಡುತ್ತಲೆ ನಮ್ಮ ಬಳಿಗೆ ಓಡಿಬಂದು ” ನೀವೇ ಅಲ್ವೇನ್ರಿ ವಾಗ್ಲೀಲಿ ಮೇಶ್ಟ್ರು ಕೆಲ್ಸ ಮಾಡ್ತಿರೋದು” ಎಂದು ಕೇಳಿದಳು. ನಾನು ಆಶ್ಚರ್ಯದಿಂದ ಮತ್ತು ಹೆಮ್ಮೆಯಿಂದ ‘ಹೂ’ ಅಂದೆ. ಆಕೆ ಕೂಡಲೆ ದನಿ ಎತ್ತರಿಸಿ “ಏಯ್ ಯವ್ವೋ ಬಾರೆ… ಯ್‌ಏಮ್ ಮ್ಮೋ ಬಾ..” ಎಂದು ಕೂಗುತ್ತಲೆ (ಕಾಗೆಯೊಂದಗಗುಳ ಕಂಡರೆ ಕರೆಯುವ ತನ್ನ ಬಲಗವನು) ಬಂದಿಬ್ಬರು ಹೆಂಗಸರು ಸಿಕ್ಕವರಿಗೆ ಸಿವ್ಲಿಂಗ ಅಂತ ಬಂದರು. “ಈಕೆ ನಮ್ಮವ್ವ” ಎಂದು ಒಬ್ಬಾಕೆಯನ್ನೂ “ಈಕೆ ನಮ್ಮಮ್ಮ” ಎಂದು ಮುದುಕಿಯನ್ನೂ ಪರಿಚಯ ಮಾಡಿಸಿದಳು. ಅಮ್ಮ “ಯೇಯ್ ಅವುದಾ… ಅಂತಾ ” ರೆಡ್ಡೇರು ಗವುಡರಿರೋ ಊರಾಗಿದ್ದೆ… ಒಂದ್ಸಾರಿ ಆದ್ರು ಬರಬಾರ್ದಾ?” ಎಂದು ನನ್ನ ಸೋಟಿಗೆ ತಿವಿದು ವಿಶ್ ಮಾಡಿದ್ರೆ … ಅವ್ವ ಎಂಬಾಕೆಯು “ನೀನು ಸತ್ತೀ ಅಂತ ಮಾತಾಡ್ಕಂತಿದ್ರಲ್ಲ ಅವುದಾ … ನಮ್ಮೂರ್ಗೆ ಬಂದು ಕೊತ್ಲಯ್ಯಗೊಂದು ತುಪ್ಪದ್ದೀಪ ಹಚ್ಚಬಾರ್ದಾ” ಎಂದು ನನ್ನ ಮುಖಕ್ಕೆ ಎರಡೂ ಕೈಹಚ್ಚಿ ಲಟ್ಟಿಗೆ ತೆಗೆದಳು. ಅನಂತರ ಗೊತ್ತಾಯಿತು ನನಗೆ ಇವರು ಒನಕೆ ಬಸೆಟ್ಟಮ್ಮನ ವಂಶಸ್ಥರೂ; ಪಾಮಲ ಕುರ್ತಿ ಸಿದ್ದಾರೆಡ್ಡಿಯ ಬೆನ್ನು ಹುಣ್ಣು ವಾಸಿ ಮಾಡಿದವರೂ ಆದ ಪ್ನಕೆ ಬಸಮ್ಮ; ಮತ್ತಾಕೆಯ ಮಗಳು ವೆಂಕಮ್ಮ; ಮತ್ತಾಕೆಯ ಮೊಮ್ಮಗಳು ರಂಗಮ್ಮಾಂತ. ನಾನು ಒಂದು ಕ್ಷಣ ಮುಖವನ್ನು ಹುಣುಸೆ ತೊಕ್ಕು ಮಾಡಿಕೊಂಡು ಹ್ಹಿ…ಹ್ಹಿ… ಅಮ್ದೆನು. ಆಗವರು ತಂತಮ್ಮ ಮುಖದ ಸ್ಟೇಷನ್ ಛೇಂಜು ಮಾಡಿ “ಯೇಮ್ ನಮ್ಮ ಶಾಮಣ್ಣ ಕಾಣ್ತಿಲ್ಲಲ್ಲೇ…” ಎಂದು ಹುಡುಕಾಡುತ್ತ ಮುಂದಿನ ಸಾಲಿನ ಬೆಂಚ್ ಕಡೆ ಹೋದರು. ಕೇಳಿಸಿಕೊಂಡಿದ್ರೆ ಒಳ್ಳೆರ್ಯದೂಂತ ಪಕ್ಕ ನೋಡಿದೆ. ಕಮಲಾಕರ ಸ್ವಲ್ಪ ದೂರದಲ್ಲಿ ಯಾರೊಂದಿಗೋ ಮಾತಾಡುತ್ತ ನಿಂತಿದ್ದವನು ಕೂಡಲೆ ಹೊರಟು ಬಂದು ” ಯಾರೋ ಹೆಂಗಸರು ಮಾತಾಡಿಸ್ದಂಗಿತ್ತಲ್ಲ?” ಎಂದು ಕೇಳಿ ನಂತರ ಓಹ್ “ಅವ್ರಾ!” ಎಂದು ಮೀಸೆ ಗಡ್ಡದ ನಡುವೆ ನಕ್ಕ.

“ಓಯ್ ಜಲ್‌ಜಲ್ದಿ ಸುರುವು ಮಾಡ್ತೀರೋ… ಇಲ್ಲ ವಂಟೋಗೋಣ” ಎಂದೊಬ್ಬಾಕಿ ಗಟ್ಟಿಯಾಗಿ ಕೂಗಿದ್ದು ಕೇಳಿಸಿತು, ಹಿಂದಿರುಗಿ ನೋಡಿದರೆ ಸರಸಿ ಯಾರದೋ ಮಗುವನ್ನು ತೊಡೆಮೇಲಿಟ್ಟುಕೊಂಡು ಲೊಚಲೊಚ ಮುದ್ದು ಕೊಡುತ್ತಿರುವುದು ಕಂಡಿತು. ಆಕೆಗೂ ಹಿಂದಿದ್ದ ಸಾಲಿನಲ್ಲಿ ಗದ್ದಲ ಗವುಜ ಎದ್ದಿದ್ದರಿಂದ ನೋಡದೆ ಗತ್ಯಂತರವಿರಲಿಲ್ಲ. ಆಕೆಯ ವಕ್ಷಸ್ಥಳ ಮಿರಿಮಿರಿ ಮಿಂಚುತ್ತ ನನ್ನ ನೋಟದ ಸರಳರೇಖೆ ಗುಂಟ ಹಾದು ಹೋಗಲು ಅಲ್ಲಿ ಗಂಡನೊಬ್ಬ ತನ್ನ ಹೆಂಡತಿಯ ತುರುಬು ಹಿಡಿದು ಎಳೆದಾಡುತ್ತ “ಕತ್ತಿ ರಂಡೆ ಮನಿ ಹೊಸ್ತಿಲು ದಾಟಿ ಇಲ್ಲಿವರ್ಗೂ ಬಂದು ಆ ಮುಂಡೇರು ಭಾಷ್ಣ ಕೇಳೋಟರ ಮಟ್ಟಿಗೆ ಕೊಬ್ಬಿದ್ದೀಯಾ, ಮನೀಲಿ ಅಡ್ಗೇನ ನಿಮ್ಮಮ್ಮ ಮಿಂಡ ಮಾಡ್ತಾನೇನೇ ಭೋಸೂಡಿ. ನಿನ್ನ ಮನೀಗೆಳ್ಕೊಂಡೊಯ್ದು ಕಾಲ್ಮುರ್ದು ಕುಂಡ್ರಿಸ್ಲಿಲ್ಲ ನಾನು ಮೆಣಸಿನ ಕಾಯಿ ಮರೆಪ್ಪ ಮಗ ಅಪಾರೀನೇ ಅಲ್ಲ” ಎಂದು ಕೂಗಾಉತ್ತಿರುವುದು ಕಂಡಿತು. ಸರ್ವ್ ಸಾಮಾನ್ಯ ಮಹಿಳೆಯಲ್ಲದ ಆಕೆ “ಬಿಡಲೋ ಬಾಯಾ… ಕುಂತನಿಂತ ಸಬಾದಾಗ ನನ್ನ ತುರುಬಿಡ್ದು ಎಳೀತಿಯಾ… ಇನ್ನು ದುಡ್ದಿಕ್ಕೋನಾಗಿದ್ರೆ ಇನ್ನೇಟಾರಾಡ್ತಿದ್ಯೋ… ನಾನು ದುಡ್ದಿಕ್ಕದಿದ್ರೆ ನೀನೆಲ್ಲಿರ್ತಿದ್ಯೋ…” ಎಮ್ದು ಲಭೋ ಲಭೋ ಬಾಯಿ ಬಡಿದುಕೊಳ್ಳಲು ಸುತ್ತ ಹೋ ಎಂದು ವಿಮೋಚನಾ ಸಂಘದ ಸದಸ್ಯರು ಜಮಾಯಿಸಿ ಜಟಾಪಟಿಗಿಳಿದರು. ತನ್ನೆಂಡ್ರೂನ ತಾನೆಂಗಾರ ಹೊಡ್ಕೊಂತಾನ ಎಂದು ಕೆಲ ಗಂಡಸರು ಅವರ ಇಗೆ ದೋತರ ತಂಪು ಮಾಡಿಕೊಂಡು ಯಾಕಿದ್ದೀತಪ್ಪಾ ಎಂದು ಸ್ವಸ್ಥಾನಕ್ಕೆ ಹಿಂದಿರುಗಿದರು. ಅಲ್ಲಿ ಅಳಿದುಳಿದಿದ್ದ ಪೋಲೀಸರು ಲಾಠಿ ಚಾರ್ಜು ಮಾಡದಿದ್ದಲ್ಲಿ ಆ ಗಂದ ಹೆಂದರ ಜಗಳ ಉಂದು ಮಲಗಿಕೊಂದರೂ ಮುಗಿಯುತ್ತಿರಲಿಲ್ಲ. ಆ ಗಲಾಟೆ ಗಮನವನ್ನು ತನ್ನ ಕಡೆಗೆ ಸೆಳೆಯುವ ರೀತಿಯಲ್ಲಿ ಹತ್ತಿರದಲ್ಲೆಲ್ಲೋ ಬ್ಯಾಂಡು ಬಜಂತ್ರಿ ಸದ್ದು ಕೇಳಿ ಬಂತು. ಎಲ್ಲರಂತೆ ನಾನೂ ಎದ್ದು ನಿಂತು ದಾಂತೋಂತಲೆ ಉಂಗ್ಲಿ ದಬಾನ ಮಾಡಿದೆ.
ಕಾಳಾಪುರದ ಡೊಳ್ಳು, ಕೋಡಿಹಳ್ಳಿಯ ತಮಟೆ, ಹೊಸಹಳ್ಳಿಯ ರುಮ್ಮಿ, ಹ್ಯಾಳ್ಯಾದ ಕಹಳೆ, ಚಪ್ಪರದಳ್ಳಿಯ ನಮ್ದಿಕೋಲು,; ಉತ್ತಂಗಿಯ ಸಮಾಳ, ಹಡಗಲಿಯ ಬ್ಯಾಂಡು, ಬಸಾಪುರದ ಬಜಂತ್ರಿ ಇವೇ ಮೊದಲಾದ ವಾದ್ಯಗಳ ವಾದನದ ನಡುವೆಯೂ; ಸುಟ್ಟಳ್ಳಿಯ ಕೋಲಾತ, ನಾಯ್ಕನಳ್ಳಿಯ ಭಜನೆ, ಗಜಾಪುರದ ಭೂತಕುಣಿತ, ಗುಡೇ ಕೋಟೆಯ ಕೀಲುಕುದುರೆ, ಜರುಮಲಿಯ ಮರಗಾಲು ಕುಣಿತ ಇದೇ ಮೊದಲಾದ ಜಾನಪದ ಕಲಾತಂಡಗಳ ನಡುವಯೂ; ನೂರಾರು ಜನರ ಜಯ ಘೋಶದ ನಡುವೆಯೂ; ದಿನ ತುಂಬಿದ ಬ್ಸುರಿಯಂತೆ ಚಲಿಸುತ್ತಿದ್ದ ಲಾರಿ ಅಟ್ಟದ ಮೇಲೆ ನಭೂತೋ ನಭವಿಷ್ಯತಿ ಎಂಬಂತೆ ನೆಲಮುಗಿಲಿಗೇಕಾಗಿ, ಬೆಂಗಳುರು ಹಾರ, ಮಡ್ರಾಸ್ ಹಾರಗಳಿಂದ ಅಲಂಕೃತಳಾಗಿ ನಿಂತಿದ್ದ ನಿಂಗಮ್ಮಜ್ಜಿ ಕಸ್ತೂರಿಬಾ ಗಾಂಧಿಯಂತೆ ಎಲ್ಲರಿಗೂ ಕೈಎತ್ತಿ ಮುಗಿಯುತ್ತಿದ್ದುದು ಕಂಡು ಸೋಜಿಗ ಪಟ್ಟೆನು. ಆ ಕೊಟ್ಟುರಿಯನ್ ವಿಕ್ಟೋರಿಯಾ ರಾಣಿಯ ವಾಮಭಾಗದ ಪಕ್ಕ ಜಲಜಾಕ್ಷಿಯೂ; ಬಲಭಾಗದಲ್ಲಿ ಆಕೆಯ ಪತಿಪರಮೇಶ್ವರರಾದ ಶ್ರೀಮಾನ್ ಮಸಾಲೆಯವರೂ ತಂತಮ್ಮೆರಡು ಕೈಗಳನ್ನು ಮುಗಿಲಿಗೆ ಎತ್ತಿದ್ದರು. ಸಮ್ಮೇಳನಾಧ್ಯಕ್ಷೆ ನಿಂಗಮ್ಮಜ್ಜಿಗೇ ಎಂದೆಂದು ಗುಂಪೂ ಜಯವಾಗಲಿ ಎಂದು ಇನ್ನೊಂದು ಗುಂಪೂ ಕೂಗುತ್ತಿದ್ದುದನ್ನು ದೇವಾನುದ್ವತೆಗಳೆಲ್ಲ ಕೇಳಿ ತಮ್ಮ ಪದವಿಗೆಲ್ಲಿ ಸಂಚಕಾರ ಬರುತ್ತದೋ ಎಂದು ಹೆದರಿದರು. ಈ ಪ್ರಕಾರವಾಗಿ ಹತ್ತಿರವಾದ ಮೆರವಣಿಗೆ ಕಡೆಗೆ ಹಾಕ್ಕೊಂದು ಬಿದ್ದರೆಲ್ಲಿ ತಾವು ಅಪ್ಪಚ್ಚಿ ಆಗುವೆವೋ ಎಂದು ಹೆದರಿ ಸದರೀ ಗ್ರಾಮದ ಪೈಲ್ವಾನರೆಲ್ಲ ಹಿಂದೆ ಮುಂದು ನೋಡುತ್ತಿರಲು ನಿಂಗಮ್ಮಜ್ಜಿ ಲೀಲಾಜಾಲವಾಗಿ ವಾಹನದಿಂದ ಕೆಳಕ್ಕಿಳಿದು”ಹೋಗೋ ನಮ್ಮವ್ವ” ಎಂದು ಉದ್ಗರಿಸಿತು.
ಕನ್ನಡನಾಡಿನ ವೀರರಮಣಿಯರು… ಹಾಡು ಮಾರ್ಮಲೆಯುತ್ತಿರುವಾಗಲೇ ನಿಂಗಮ್ಮಜ್ಜಿಯನ್ನು ಮಸಾಲೆ ದಂಪತಿಗಳು ವೇದಿಕೆ ಕಡೆ ಕರೆದೊಯ್ದರು. ಒಂದೊಂದು ಮೆಟ್ಟಿಲನ್ನು ಒಂದೊಂದು ದೇವರ ನಾಮೋಚ್ಚಾರಣೆ ಮಾಡುತ್ತ ಮೇಲೇರಿ ಭೋಜರಾಜನ ಸಿಂಹಾಸನವನ್ನು ಹೋಲ್ವಂಥ ಕುರ್ಚಿ ಮೇಲೆ ನಿಂಗಮ್ಮಜ್ಜಿ ಸುಖಾಸೀನಳಾಗಲು ನಿಂಗಮ್ಮಜ್ಜಿ ಜಿಂದಾಬಾದ್; ಜಯಲಕ್ಷ್ಮಿ ಜಿಂದಾಬಾದುಗಳೆಂಬ ಹರ್ಷೋದ್ಗಾರ ಮೊಳಗಿತು.

ಕಾರ್ಯಕ್ರಮ ನಿರೂಪಕಿಯರಾದ ಗೋಣಿ ಬಸವ್ವಗೂ ಕರಿಯವ್ವಗೂ ಮತ್ತೊಮ್ಮೆ ಜಟಾಪಟಿಯಾಗಿ ತಲಾ ಒಂದೊಂದು ಮೈಕು ಹಿಡಿದುಕೊಂಡು ಅನ್ನ ತಮ್ಮಂದಿರೇ; ಅಕ್ಕತಂಗಿಯರೇ ಎಂದು ಆರಂಭಿಸಿ ಬಿಟ್ಟರು. ಹಂಪಾ ಪಟ್ಟಣದ ಗೊಮ್ದಲಿಗರ ರುಕ್ಕೂಮಾಯಿ ಮತ್ತು ಸಂಗಡಿಗರಿಂದ ಪ್ರಾರ್ಥನಾಗೀತೆ ಆದ ಮೇಲೆ ಸ್ವಾಗತ ಭಾಶಣದ ಸಲುವಾಗಿ ಮಸಾಲೆ ದಂಪತಿಗಳ ನಡುವೆ ತಿಕ್ಕಾಟ ಶುಯ್ರುವಾಯಿತು. ಕೊನೆಗೇ ಜಲಜಾಕ್ಷಿಯೇ ಅದರಲ್ಲಿ ಗೆದ್ದು ಮೈಕಿನೆದುರು ನಿಂತುಬಿಟ್ಟಳು. ಸಮ್ಮೇಳನದ ಗೊತ್ತು ಗುರಿ ವಿವರಿಸಿ ಇಂಥಿಂಥೋರು ಬಂದು ವೇದಿಕೆಯನ್ನಲಂಕರಿಸಬೇಕೆಂದು ಸ್ವಾಗತ ಭಾಷಣ ಮಾಡಿದಳು. ಆಕೆ ಹೆಸರು ಹಿಡಿದು ಕರೆಯಲು ಇಂಥಿಂಥೋರು ಬಂದು ವೇದಿಕೆಯ ಮೇಲೆ ಕೂತುಕೊಂಡರು.

ರಾಜಿಸೂತ್ರದಂತೆ ಗೋಣಿ ಬಸವ್ವ ಭಾಷಣಗಾರ್ತಿಯರನ್ನು ಹೆಸರಿಸುವುದು ಕರೆವ್ವ ಅವರ ಪರಿಚಯ ಮಾಡಿಕೊಡುವುದು ಮಾಡಿದರು. ಪ್ರೊಫೆಸರ್ ರುದ್ರಮುನೆವ್ವನವರು ಇಂಡಿಯಾದ ವೈವಾಹಿಕ ವ್ಯವಸ್ಥೆ ಕುರಿತು ಮಾತಾಉವ ಆರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ನಿಂಗಂಂಅಜ್ಜಿ ರುದ್ರರಮಣೀಯ ಬದುಕನ್ನೇ ಮುಖ್ಯ ಟಾಪಿಕ್ಕಾಗಿ ಎತ್ತಿಕೊಂಡಳು. ಆಕೆ ಎಂಅನೆ ವಯಸ್ಸಿಗೆ ಮದುವೆಯಾಗಿದ್ದು; ಒಂಬತ್ತನೆ ವಯಸ್ಸಿಗೆ ಗಂಡ ತೀರಿಕೊಂಡಿದ್ದು; ಹನ್ನೆರಡನೆ ವಯಸ್ಸಿಗೆ ಋತುಮತಿಯಾಗಿದ್ದು; ಜೀವನುದ್ದಕ್ಕೂ ಪರಪುರುಷರ ಕಡೆ ಕಣ್ಣೆತ್ತಿ ನೋಡದೆ ಗಂಡಸಿನಂತೆ ದುಡಿದಿದ್ದು ಹೀಗೆ… (ಆಕೆ ಅಷ್ಟೊಂದು ವಿಷಯವನ್ನು ಎಲ್ಲಿಂದ ಸಂಗ್ರಹಿಸಿದ್ದಳೊ ಏನೋ… ನಮ್ಮಜ್ಜಿ ಮಾತ್ರ ಪ್ರತಿಮಾತಿಗೂ ಮೀಸೆ ತಿರುವಿದ್ದೇ ತಿರುವಿದ್ದು.) ಕೊನೆಗೆ ಜಲಜಾಕ್ಷಿಯ ರಾಜಕೀಯ ಸಾಧನೆ ಕುರಿತು ಮಾತಾಇ ಭಾಷಣ ಮುಗಿಸಿದಳು.
ನಂತರ ಜಾಗಟೆ ತಿಮ್ಮಕ್ಕ ವರದಕ್ಷಿಣೆ ಪಿಗಿನಿಂದಾಗಿ ತಾನಿನ್ನೂ ಮದುವೇನೇ ಅಗಿಲ್ಲ ಎಂದು ಮಾರ್ಮಿಕವಾಗಿ ಮಾತಾಡಿದರೆ ಕುಲಕರ್ಣಿ ಖಾಸೀಮಮ್ಮರವರಂತೂ ಚಾತುರ್ವರ್ಣದ ರೂವಾರಿ ಮನುವಿನ ಮೇಲೆ ನಿಗಿನಿಗಿ ಕೆಂಡ ಕಾರಿದರು. ಅಷ್ಟರಲ್ಲಿ ವೇದಿಕೆಗೆ ನುಗ್ಗಿದ ಆಟವಾಳಿಗೆ ಈರಯ್ಯನವರು ಹೆಂಗಸ್ರೂ ತಂತಮ್ಮ ಗಂಡಂದರನ್ನು ಶೋಷಿಸ್ತಿದಾರೆ. ಇದ್ಕೆ ನಾನೇ ನಿದರ್ಶನ್ ಎಂದು ಮುಂತಾಗಿ ಮಾತಾಡಲು ಪ್ರಯತ್ನಿಸಿ ಸ್ವಯಂ ಸೇವಕಿಯರಿಂದ ಬಯ್ಯಿಸಿಕೊಂದು ಕೆಳಕ್ಕಿಳಿದು ಸಭಾತ್ಯಾಗ ಮಾಡಿದರು.

ಇನ್ನೇನು ಅಧ್ಯಕ್ಷೆ ಭಾಷನವನ್ನು ನಿಂಗಮ್ಮಜ್ಜಿ ಶುರು ಮಾಡಬೇಕೆಂದಿದ್ದಾಗ ಸಭೆಯ ಒಂದು ಕಡೆ ದೊಡ್ಡ ಗಲಾಟೆ ಕೇಳಿ ಬಂತು. ಹರಿದಿದ್ದ ಬಟ್ಟೆಗಳಿಂದಲೂ; ಕೆದರಿದ್ದ ತಲೆಯಿಂದಲೂ ಅಸ್ತಸ್ವ್ಯಸ್ತಳಾಗಿದ್ದ ಭುವನೇಶ್ವರಿ “ಗುಲಾಮ್ನಬಿ ಮುರ್ದಾಬಾದ್… ಆ ತಲೆಹಿಡುಕನಿಗೆ ಧಿಕ್ಕಾರ” ಎಂದು ಕೂಗುತ್ತ ವೇದಿಕೆ ಮೇಲೇರಲು ಮಿಂಚಿನ ಹೊಳೆ ತುಳುಕಾಡಿತು. ತನ್ನ ತಂತ್ರ ಫಲಿಸಿದ ಹೊಸ ಹುಮ್ಮಸ್ಸಿನಲ್ಲಿ ಜಲಜಾಕ್ಷಿ ಆಕೆಗೊಂದು ಲಿಂಬೂ ಶರಬತ್ತು ಕೊಟ್ಟಳು. ಅದನ್ನು ಕುಡಿದು ಜಲಜಾಕ್ಷಿ ನಿಂಗಮ್ಮಜ್ಜಿ ಕೈಯಿಂದ ಮೈಕನ್ನು ಕಸಿದುಕೊಂಡು ಬಿರುಗಾಳಿಯನ್ನೇ ಉಸಿರಾಡುತ್ತಿರುವಳೋ ಎಂಬಂತೆ ಸಭೆ ಎದುರು ನಿಂತುಕೊಳ್ಳಲು ಜನ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿ ಬೆಂಬಲಿಸಿದರು.

ಭುವನೇಶ್ವರಿ ಏಕ್‌ಧಂ ಗುಲಾಮನಬಿಯ ಜಾತಕ ಜಾಲಾಡಲಾರಂಭಿಸಿದಳು. ಹೀಗೆ ಒಂದ್ತಾಸು ಮಾತಾಡಿ ವೇಶ್ಯಾವಾಟಿಕೆ ಸೃಷ್ಟಿ ಮತ್ತು ಪೋಷಣೆಗೆ ಗುಲಾಮನಂಥ ಹಲ್ಕಾಕೋರ ರಾಜಕಾರಣಿಗಳೇ ಕಾರಣ ಎಂದು ಭಾಷಣ ಮುಗಿಸಿ ಮೆದಿಕಲ್ ಚೆಕಪ್ಪಿಗೆಂದು ಕೂಡಲೆ ಅಲ್ಲಿಂದ ಹೋಗಿ ಬಿಟ್ಟಳು.

ನಿಂಗಮ್ಮಜ್ಜಿ ತನ್ನ ಅಧ್ಯಕಾಹೀಯ ಭಾಷಣದಲ್ಲಿ ಕೆಮ್ಮಿ ಕ್ಯಾಕರಿಸಿ ಹೆಣಮಕ್ಳಿಲ್ದಿದ್ರೆ ಈ ಗಂಡಸ್ರೆಲ್ಲಿರ್ತಿದ್ರೂ… ನನ್ನಾಟಗಳ್ರು ಡುಡಿಯಲ್ಲ ದುಕ್‌ಪಡಿಯಲ್ಲ ಎಂದು ಮುಂತಾಗಿ ಮಾತಾಡುತ್ತಿರಲು ಜಲಜಾಕ್ಷಿ ವೇದಿಕೆಗೆ ಬರುವಂತೆ ನನ್ನತ್ರ ಸಂಜ್ಞೆ ಮಾಡಿದಳು. ನಾನು ಅಂಜುತ್ತ ಅಳುಕುತ್ತ ವಂದನಾರ್ಪಣೆ ಭಾಹಣವನ್ನು ಕಂಠಪಾಠ ಹಾಕುತ್ತ ವೇದಿಕೆಗೆ ಬಂದೆ. ಅದ್‌ಏ ಹೊತ್ತಿಗೆ ನಿಂಗಮ್ಮಜ್ಜಿ ಭಾಷಣ ಮುಗಿಸಿ “ಅದೇನು ಮಾತಾಡ್ತಿ ಮಾತಾಡೆಲೋ” ಅಂತು.

ಇನ್ನೇನು ನಾನು ಶುರು ಮಾಡಬೇಕೆನ್ನುವಷ್ಟರಲ್ಲಿ ಎಲ್ಲಿಂದಲೋ ಬಂದು ನನ್ನ ಮತ್ತು ನಿಮ್ಮ ಶಾಮಾಶಾಸ್ತ್ರಿ ಪ್ರತ್ಯಕ್ಷವಾಗಿ ಬಿಡುವುದೇನು? ಅವನು ಯಾರ ಪರವಾನಿಗಿಗೂ ಕಾಯದೆ ಇಂದಿನ ಶಭೆಯ ಅಧ್ಯಕ್ಷತೆ ವಹಿಸಿರತಕ್ಕಂಥ … ಎಂದು ಶುರು ಮಾಡೇ ಬಿಟ್ಟ. ಆಗ ನಾನು ಇಂಗು ತಿಂದ ಮಂಗನಂತಾಗಿ ಜಲಜಾಕ್ಹಿ ಪಾರಿತೋಷಕ ರೂಪದಲ್ಲಿ ಕೊಡಮಾಡಿದ ಗಜಲಿಂಬೆ ಹಣ್ಣನ್ನು ಪಡೆದು ಅದನ್ನು ಮೂಸುತ್ತ ವಾಪಸಾಗಿ ಬಿಟ್ಟೆ.
*
*
*
ಏನಲೋ ಸೂಗಾಽಽ… ಅವ್ನು ನಿನ್ನ ಕೈಯಾಗಳಂದು ಕಿತ್ಕೊಂಡ್ನಲ್ಲ ಆಗ್ನೀನೇನು ಮಾಡ್ತಿದ್ದೆಲೋ.. ತಗ್ದು ವಂದ್ಕೊಡಬೇಕಾಗಿತ್ತು. ಆ ಜಲಜಾಕ್ಷಿ ಅದಾಳವ್ಳೂ.. ಮಾಭಿನ್ನಾಣಗಿತ್ತಿ… ಒಂದೂ ಮಾಡ್ಲಿಲ್ಲಿಲ್ಲಿ… ಬಾಯಾಗ ಗೆಂಡೆ ಇಟ್ಕೊಡಿದ್ಳಾಂತೀನಿ… ಅಲಲಾ” ಎಂದು ಒಂದೇ ಸಮನೆ ಶುರುಮಾಡಿಬಿಟ್ಟಿತು. ಆ ಶಾಮನ ಮದುವೆಗೆ ಯಾರೂ ಹೋಗಕೂಡದೆಂದು ಸುಗ್ರೀವಾಜ್ಞೆ ವಿಧಿಸಿ ಇಡೀ ಕುಟುಂಬವನ್ನು ಅಲ್ಲೋಲ ಕಲ್ಲೋಲ ಮಾಡಿತು.

“ಅಲಲಾ ಭಪ್ಪರೆ ನಮ್ಮವ್ವ… ಅವ್ನೂ ಇವ್ನೂ ಪೆಂಡ್ಸವ್ವಾ… ಬುಟ್ಕೊಟ್ಟಿದ್ರೂ ಕೊಟ್ಟಿದ್ನೂ… ಇದ್ರಿಂದ ನಮ್ಮೊಮ್ಮಗ್ನ ಕಿರೀಟೇನು ಕಮ್ಮಿ ಆತ.. ಇವ್ನೀಗಿಲ್ಲದ ರೋಸ ನಿಂಗೆ ಯಾಕಂತೀನಿ?” ಎಂದು ಸಿದ್ದಮ್ಮಜ್ಜಿ ಎದುರು ಕೊಚ್ಚೆನ್ನು ಹಾಕಿತು.
ಅದರಿಂದ ಕಿಡಿಕಿಡಿ ಆದ ನಿಂಗಮ್ಮಜ್ಜಿ
ಲೇ…ಯ್ ಸಿದ್ದಿ… ಬಾಯ್‌ಮುಚ್ಕಾ… ತಗದೀ ಅಂದ್ರ ಅಲ್ಲುದುರ್ತಾವ ನೋಡು ಮತ್ತೆ… ಪ್ರೆಂಡ್ಸಂತೆ ಪ್ರೆಂಡ್ಸು… ಸುಡ್ಗಾಡಗಿಲ್ಲದ ಪ್ರೆಂಡ್ಸು… ನಾನಾಡಿದ ಮ್ಯಾಕೆ ಮುಗಿತು… ಹೋಗ್ಕೂಡ್ಡಂದ್ರೆ ಹೋಗ್ಕೂಡ್ದು ಅಷ್ಟೇಯಾ… ಹ್ಹಾಂ…” ಎಂದು ಗುಡುಗಿತು.
“ಆ ತಾಟಗಿತ್ತಿ ಜಲಜಾಕ್ಷಿ ನಿನ್ನೊಯ್ದು ಮ್ಯಾಲ ಕುಂಡ್ರಿಸಿದ್ಕೆ ಕೋಡು ಬಂದ್ವಲ್ಲೆ ಕೋಡು.. ಇದು ಓಣಿ ಮಾತವ್ವಾ ಓಣಿ ಮಾತು. ಒಬ್ರಿಗೊಬ್ರು ಹೋಗಾದೈತಿ ಬರಾದೈತಿ. ಮನಸ್ಸಾಂದ ಮ್ಯಾಕೆ ಲಗ್ಣಕ ಮರಣಕ ಹೋಗದಂಗ ಇರಕಾಗಲ್ಲೆವ್ವೋ.. ಹೋಗ್ಲಿಲ್ಲಾಂದ್ರ ನೋಡ್ದೋರಾರ ಏನಂದಾರು?” ಎಂದು ಸಿದ್ದಮ್ಮಜ್ಜಿ ನುಡಿದ ತತ್ವ ನಿಂಗಮ್ಮಜ್ಜಿಯ ಕಿವಿ ತೂರುವುದು ಸಾಧ್ಯವಿರಲಿಲ್ಲ.
“ಉಗುರಿಲೆ ಹೋಗುದಕ ಕೊಡಲಿ ತಗಂತಾವಿವು. ನಾನ್ಯಾರ ಮದ್ವಿಗಾರ ಹೋಗ್ತೀನಿ ಹೋಗದಂಗಿರ್ತೀನಿ.. ಅದ್ನೆ ಕೇಳೋಕಿವರ್ಯಾರು?” ಎಂದು ಗೊಣಗಿಕೊಂಡೆ.
ನೋಡು ನೋಡುವಷ್ಟರಲ್ಲಿ ಆ ಅಪೂರ್ವ ಸಹೋದರಿಯರೀರ್ವರು ಪೂರ್ವ ಜರ್ಮನಿ, ಪಶ್ಚಿಮ ಜರ್ಮನಿ ಆದಂತಾಗಿ ಕೂಳು ನೀರು ಮಾತಿವೇ ಮೊದಲಾದ ಸಂಬಂಧ ವಾಚಕಗಳನ್ನು ತ್ಯಜಿಸಿ ದಿಕ್ಕು ದಿಕ್ಕಿಗೊಂದು ಮುಖ ಮಾಡಲು ಮನೆಯೊಳಗೆ ಸ್ಮಶಾನ ಮೌನ ಕವಿಯಿತು.

ಗುಲಾಮನಬಿಯಂಥ ಪ್ರಬಲ ರಾಜಕಾರಿಣಿಯ ಕಟ್ಟಾಗ್ಞೆ ಉಲ್ಲಂಘಿಸಿ ಶಾಮನೆಂಬ ಮಹಾನುಭಾವನು ವಂದನಾರ್ಪಣೆ ಮಾಡುವ ಮೂಲಕ ಜಲಜಾಕ್ಷಿಗೆ ಬೆಂಬಲ ಸೂಚಿಸಿದ್ದರಿಂದ ನನಗೆ ಹೆಚ್ಚು ಸಂತೋಷ ಮತ್ತು ನೆಮ್ಮದಿ ಮೂಡಿತ್ತು.

ಶಾಮನನ್ನು ಬಿಡೆ ಎಂದು ಗುಲಾಂ ನಬಿಯೂ; ಶಾಮನನ್ನು ಕೊಡೆ ಎಂದು ಭುವನೇಶ್ವರಿಯೂ ಎಳೆದಾಡುವುದರಲ್ಲಿ ಸಂದೇಹವಿಲ್ಲ ಎಂದುಕೊಂಡೆ. ಸುರಸುಂದರಿಯರೆಂಬ ಅಸ್ತ್ರಗಳನ್ನು ಕುಪ್ಪಸವೆಂಬ ಬತ್ತಳಿಕೆಯಲ್ಲಿ ಇಟ್ಟುಕೊಡಿರುವ ಭುವನೇಶ್ವರಿ ಕಡೆ ಅವನು ವಾಲಿದ್ದು ಹೆಚ್ಚು ಅರ್ಥ ಪೂರ್ಣ ಕೂಡ. ಅಲ್ಪ ಕಾಲದಲ್ಲಿಯೇ ಅವನು ಹೆಚ್ಚು ವ್ಯಾವಹಾರಿಕನಾಗಿರುವ ಸಂತೋಷವನ್ನು ಹೀಗೆ ವ್ಯಕ್ತಪಡಿಸುವುದು? ಸಾಯುವವರೆಗೆ ಮದುವೆಯನ್ನು ಮುಂದೂಡುತ್ತಲೆ ಹೋಗುವುದಾಗಿ ಹೇಳುತ್ತಿದ್ದ ಅವನು ಪಕ್ಷ ಒಪ್ಪತ್ತಿನಲ್ಲಿಯೇ ಗೃಹಸ್ಥಾಶ್ರಮ ಪ್ರವೇಶಿಸಲು ಒಪ್ಪಿದ್ದು ಕೂಡ ಅಭಿನಂದನೀಯವಾದುದು. ಪ್ರಾಯಶಃ ಅದು ವೇಶ ಮರೆಸಿಕೊಂಡು ಬೆಂಗಳೂರಿಗೆ ಹೋಗಿ ಅನಸೂಯಾ ಗಂಡನೊಡನೆ ಸುಖವಾಗಿರುವುದನ್ನು ನೋಡಿ ಅದರಿಂದ ಪ್ರೇರಣೆ ಪಡೆದಿರಬೆಕೆಂದೆನಿಸುವುದು. ಇಂಥದೊಂದು ಅದ್ಭುತವಾದ ಬದಲಾವಣೆಗೆ ಕಾರಣೀಭೂತಳಾದ ಮಹಾತಾಯಿ ಅನಸೂಯಳಿಗೆ ಕೂಡಲೆ ಒಂದು ಪತ್ರ ಬರೆದು ಸಂಶಯ ಹೋಗಲಾಡಿಸುವುದರ ಜೊತೆಗೆ ಮದುವೆ ಫಂಕ್ಶನ್ನು, ನಿಂಗಮ್ಮಜ್ಜಿ ಇತ್ಯಾದಿ ಮಾಹಿತಿ ಒದಗಿಸಬೇಕೆಂದು ನಿರ್ಧರಿಸಿದೆ. ಪತ್ರ ಬರೆಯಲೆಂದು ಐದಾರು ಹಾಳೆಗಳನ್ನು ದಂಡ ಮಾಡಿದಾಗಲೆ ನಾನು ಒಳಗೊಳಗೆ ಮಹಾ ಗಿಲ್ಟಿ ಇರುವೆನೆಂದು ಅರ್ಥವಾದದ್ದು. ಕ್ರಮೇಣ ಗಿಲ್ಟಿನೆಸ್ಸನ್ನು ಗಾಳಿಗೆ ತೂರಿ, ಪ್ರೀತಿಯ ಸಹೋದರಿ ಅನಸೂಯಾರವರಿಗೆ… ಎಂದು ಸಂಭೋದಿಸುತ್ತ ಶುರು ಮಾಡಿದೆ. ನಿಮಗೆ ತೊಂದರೆ ಕೊಟ್ಟನೆನ್ನಲಾದ ವ್ಯಕ್ತಿ ಶಾಮನಲ್ಲವೆಂದೂ ಬೇರೆ ಯಾರೋ ಇರಬೇಕೆಂದೂ ಇಲ್ಲಿನ ಬುದ್ಧಿಜೀವಿಗಳು, ರಾಜಕೀಯ ವ್ಯಕ್ತಿಗಳು ಆ ವ್ಯಕ್ತಿಯು ನಾನೇ ಇರಬಹುದೆಂದು ಅನುಮಾನಿಸಿರುವರೆಂದು ಇತ್ಯಾದಿ ಬರೆದಾದ ಮೇಲೆ ನಿನ್ನೆ ದಿನ ನಡೆದ ಸಮ್ಮೇಳನದ ವೈಷಿಷ್ಟ್ಯ ಸರಾಗವಾಗಿ ವಿವರಿಸಿ ಬರೆದೆ. ಶಾಮನ ಪರವಾಗಿ ಅವನ ಲಗ್ನ ಪತ್ರಿಕೆಯನ್ನು ಪತ್ರದೊಂದಿಗೆ ಲಗತ್ತಿಸಿ ಲಕೋಟೆಯಲ್ಲಿರಿಸಿ ಅಂಟು ಹಚ್ಚಿದೆ. ಫ್ರಂ ಅಡ್ರಸ್ ಬರೆಯದೆ ಆಕೆಯ ವಿಳಾಸ ಮಾತ್ರ ಬರೆದು ಅಂಚೆ ದಬ್ಬಿಯೊಳಗೆ ಹಾಕಿದೆ.

ಅವನು ಹಚ್ಚಿಕೊಳ್ಳುತ್ತಿಲ್ಲವೆಂದ ಮೇಲೆ ಮದುವೆಗೆ ಹಾಜರಿರುವುದಾದರೂ ಯಾಕೆ ಎಂದು ಯೋಚಿಸಿ ವಾಗಿಲಿಗೆ ಹೊರಡಲು ನಿರ್ಧರಿಸಿದೆ. ಜಗನ್ನಾಥ ರೆಡ್ಡಿಯವರಿಂದ ಪತ್ರ ಬಾರದೆ ಇದ್ದದ್ದೂ ಹೊರಡಲು ಕುಮ್ಮಕ್ಕು ನೀಡಿತ್ತು. ಆದರೆ ನಾರಾಣಿ ಮೂಲಕ ನನ್ನನ್ನು ಕರೆಸಿಕೊಂಡ, ಬಲವಾಗಿ ಅಪ್ಪಿಕೊಂಡ, ಭುಜದ ಮೇಲೆ ಎರಡು ಹನಿ ಕಣ್ಣೀರು ಸುರಿಸಿದ, ನಿನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಕ್ಷಮಿಸು ಅಂದ. ಮದುವೆ ಮುಗಿಸಿಕೊಂಡು ಹೋಗು ಮಾರಾಯ ಅಂದ. ಸರೆ! ಆಗಲಿ ಅಂದೆ, ಟೊಂಗುಟುಸುಕು ಹಸಿಮುನಿಸು ಎಲ್ಲ ಬಿಟ್ಟು ಶಾಮ ನನ್ನೊಂದಿಗೆ ರಾಜಿ ಆದನಲ್ಲ ಅಷ್ಟೆ ಸಾಕು. ಇಲ್ಲಿ ಇವನನ್ನು ಕಳೆದು ಕೊಳ್ಳುವೆನೋ ಎಂಬ ಭಯ ಇತ್ತು.

ಶಾಮನ ಮದುವೆ ಮುಗಿಸಿಕೊಂಡೇ ನಾನು ವಾಗಿಲಿಗೆ ಹೊರಡುವುದಾಗಿ ನಿಂಗಮ್ಮಜ್ಜಿಗೆ ಹೇಳಿಯೇ ಬಿಟ್ಟೆ. ಅದು ಕೇಳಿದ್ದರಿಂದ ಓ ಹಂಗಾ… ಹಂಗಾದ್ರೆ ನೀನು ನನ್ನ ಮಮ್ಮಗ ಅಲ್ಲ… ನಾನು ನಿನ್ನ ಅಜ್ಜಿಯಲ್ಲ.. ಎಂದು ಹೇಳಿಬಿಟ್ಟಿತು. ಸಂಬಂಧ ತ್ಯಜಿಸುವ ಇಂಥ ಮಾತುಗಳನ್ನದು ಸಾವಿರ ಸಾರಿ ಆಡಿರಬಹುದು. ಅದಕ್ಕೆಲ್ಲ ತಲೆಕೆಡೆಸಿಕೊಂಡರೆ ಹುಚ್ಚಾಸ್ಪತ್ರೆ ಸೇರೋದೊಂದೇ ಬಾಕಿ, ಆದ್ದರಿಂದ ನಾವ್ಯಾರೂ ‘ಹೀಗಂತಲ್ಲಾ’ ಅಂತ ತಲೆಕೆಡೆಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ನಿಂಗಮ್ಮಜ್ಜಿ ಎಂಬ ವಿಶ್ವಾಮಿತ್ರ ರಾಜರ್ಷಿಯೂ ಸಿದ್ದಮ್ಮಜ್ಜಿ ಎಂಬ ವಶಿಷ್ಟ ಬ್ರಹ್ಮರ್ಷಿಯೂ ಒಟ್ಟಿಗೆ ವಾಸಿಸುತ್ತಿರುವ ಪರ್ಣಕುಟಿಯಲ್ಲಿ ಅನೇಕ ಪವಾಡ ಕಂಟಕಗಳನ್ನೆದುರಿಸುತ್ತ ಬದುಕುಳಿದಿರುವುದೇ ಬಹು ದೊಡ್ಡ ಸೋಜಿಗ. ಇಂಥ ಸೊಜಿಗದ ಮೂರ್ತಿಯಾದ ನಾನು ಯಾವ ಪ್ರಕಾರವಾಗಿ ಯಾವುದೇ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಳ್ಳುವುದಿಲ್ಲವೋ ಹಾಗೆಯೇ ಇಂಥ ಮಾತನ್ನು ಕೂಡ, ಆರು ಮೂರಾಗಲಿ ಮೂರು ಆರಾಗಲಿ… ಶಾಮನ ಮದುವೆ ಮಾಡಿ ಮುಗಿಸಿಕೊಂಡೇ ಹೋಗುವುದಾಗಿ ನಿರ್ಧರಿಸಿಬಿಟ್ಟೆ.

ಆ ವಾರದ ಖಡ್ಗ ಸಂಚಿಕೆಯನ್ನು ಶಾಮಾಶಾಸ್ತ್ರಿಯ ಫೋಟೋದೊಂದಿಗೆ ವಿವಾಹ ಎಂಬ ವಿಶೇಷಾಂಕವಾಗಿ ಕಮಲಾಕರ ಮಾರ್ಪಡಿಸಿದ. ಯಾವ ಯಾವ ದೇಶಗಳಲ್ಲಿ ಯಾರ್ಯಾರು ಹೇಗೆ ಮದುವೆಯಾಗುತ್ತಾರೆ ಮತ್ತು ಆಗಿದ್ದಾರೆ ಎಂಬ ಕುರಿತು ಸುಧೀರ್ಘವಾಗಿ ಚರ್ಚಿಸಿದ. ಆ ಖಡ್ಗದ ಮದುವೆ ವಿಷೇಶಾಂಕ ಬಿಡುಗಡೆಗೊಂಡೆರಡುದಿನಗಳೊಪ್ಪಾತ್ತಿನಲ್ಲಿ ಮಾರಾಟವಾಗಿ ಅದರ ಸಂಪಾದಕನಿಗೆ ಹೆಚ್ಚು ಲಾಭ ತಂದುಕೊಟ್ಟಿತು.
ಪತ್ರಿಕೆಯಿಂದಾಗಿ ಹೆಚ್ಚು ಬ್ಯುಜಿ ಇದ್ದ ಕಮಲಾಕರನೂ; ರಾಜಕಾರಣದಲ್ಲಿ ಅತಿ ಹೆಚ್ಚು ಬ್ಯುಜಿ ಇದ್ದ ಜಲಜಾಕ್ಷಿಯೂ… ಅವರೊಂದಿಗೆ ನಾನು ಧಗಧಗಿಸುವ ಒಲೆಯೊಂದರ ಮೂರು ಗುಂಡುಗಳಂತೆ ಶಾಮನ ಮದುವೆಯ ಮೂರು ದಿನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದುಡಿದೆವು.

ಮಹೂರ್ತದ ಹಿಂದಿನ ದಿನ ನಿಗದಿತ ವೇಳೆಗೆ ಒಂದು ಗಂಟೆಗೂ ಮೊದಲೆ ಹೊಸಪೇಟೆಯ ಬೀಗರುಬಿಜ್ಜರು ವೇದಾಂತಿ ರಾಜಗೋಪಾಲಾಚಾರ್ಯರ ನೇತೃತ್ವದಲ್ಲಿ ಬಂದು ಇಳಿದುಬಿಟ್ಟರು. ಇಳಿದೊಡನೆ ಸ್ವಾಗತ, ಸತ್ಕಾರ ಮತ್ತಿತರ ವಿಷಗಳಿಗೆಂದು ಬಿಡದಿ ಮನೆಗೆ ಹೋದ ನಮ್ಮನ್ನು ಆಚಾರ್ಯರು ನೀವ್ಯಾರು? ನೀವ್ಯಾರು? ಎಂದು ಕೇಳಿದರು. ಇಂತಿಂಥವರೆಂದು ನಾವು ಹೇಳಲು “ಹೌದೇ ನಮ್ಮ ಪರಮೇಶ ಈ ಇಳಿವಯಸ್ಸಿನಲ್ಲಿ ಬರೀ ಶೂದ್ರರ್‍ನೇ ತುಂಬಿಟ್ಟುಕೊಂಡಿದ್ದಾನಲ್ಲ… ಕನಿಷ್ಟ ಮಾಧ್ವರಾದ್ರು ಸಿಗಲಿಲ್ಲ್ವೆ ಇವನಿಗೆ” ಎಂದು ಗೊಣಗಿದರು. ಪಕ್ಕದಲ್ಲಿದ್ದ ಅವರ ಷಡ್ಡಕ “ಎಲ್ಲ ಅಂಗೈಯಲ್ಲಷ್ಟೆ ನಿಚ್ಚಳವಾಗಿದೆ? ಈ ಗ್ರಾಮದ ಮಾಧ್ವರೂ ಸ್ಮಾರ್ತರೆಲ್ಲ ಮದುವೆಗೆ ಹೋಗಲೇಬಾರದೆಂದು ನಿರ್ಧರಿಸಿದ್ದಾರಂತೆ! ಅದ್ಕೆ ಒಬ್ಬ ಬ್ರಾಹ್ಮಣನೂ ಕಾಣಿಸ್ತಿಲ್ಲ” ಎಂದು ಬೆನ್ನತುರಿ ತುರಿಸಿಕೊಂಡ.

ಊರಿಗಿಳಿದೊಡನೆ ಅವರ ಷಡ್ಡಕರಾದ ತ್ರಯಂಬಕಾಚಾರ್ಯ ದುಡುದುಡನೆ ಅಗ್ರಹಾರಕ್ಕೆ ಹೋಗಿದ್ದರು. ಬ್ರಾಹ್ಮಣ ಮಹಾ ಸಂಘದ ಕೊಟ್ಟೂರು ಶಾಖೆಯ ಗೌರವಾಧ್ಯಕ್ಷರಾದ ಭಾಷ್ಯಂ ಶ್ರೀಕರಾಚಾರ್ಯರು ರಾಘವೇಂದ್ರ ಮಠದ ಬಳಿಯೇ ತರುಬಿ ಓಹೋ… ನೀವು ಹೊಸಪೇಟೆ ಅಗ್ರಹಾರದ ಹೆಣ್ಣಿನ ಕಡೆಯವ್ರೋ… ಎಂದು ವ್ಯಂಗವಾಡಿ ಸ್ವಾಗತಿಸಿದರಂತೆ, ಅಲ್ಲೇ ಕೂಡ್ರಿಸಿ ವಿಶ್ವತೀರ್ಥನ ಮನೆಯಿಂದ ಒಂದು ತಂಬಿಗೆನೀರು ತರಿಸಿಕೊಟ್ಟು ಕುಡಿಸಿ ಹೇಳಿದರಂತೆ, “ಯಾವಾಗ ಅಮೇಧ್ಯ ತಿನ್ನುವವರ ಓಣಿ ಸೇರಿ ಬ್ರಾಹ್ಮಣ್ಯ ಹಾಳು ಮಾಡಿಕೊಂಡನಾ ಮುದುಕ.” ಎಂದೇ ಮೊದಲಾಗಿ ಆರಂಭಿಸಿ ‘ಆ’ ದಿನದಿಂದ ಹಿಡಿದು ಕ್ಷತ್ರಜ್ಞದವರೆಗೆ ಎಲ್ಲ ಹೇಳಿಬಿಟ್ಟು ಕೊನೆಗೆ ಆ ವಾಮಾಚಾರಿ ರುದ್ರನಾಯಕನ ಮಗ್ಳು ಅನಸೂಯಾಳ ಸೆರಗು ಹಿಡ್ಕೊಂಡು ಅಡ್ಡಾಡುತ್ತಿದ್ದ ಆ ಶಾಮನಿಗೆ ಆ ರಾಘವ ತನ್ನ ಮೊಮ್ಮಗಳ್ನ ಕೊಟ್ಟಿದ್ದಾನಲ್ಲ… ಬುದ್ಧಿ ಇದೆಯೇ ಈ ಮುಠ್ಠಾಳನಿಗೆ…” ಎಂದು ಹೇಳಿದನಂತೆ.
ಅದಕ್ಕಿದ್ದು ತ್ರಯಂಬಕರು “ಹಾಗಲ್ಲ ರಾಯ್ರೆ… ಹುಡ್ಗ ಗುಣವಂತ… ಮೇಲಾಗಿ ಸರ್ಕಾರಿ ನೌಕರಿ ಬೇರೆ ಸಿಕ್ಕಿದೆ ಈ ಮೀಸಲಾತಿ ಕಾಲದಲ್ಲಿ” ಎಂದು ಗೊಣಗಿದರಂತೆ.
“ಆಪದ್ಗತಂ ಹಸಸಿ ಕಿಂ ದ್ರವಿಣಾಂಥ ಮೂಢ… ನಾವೆಲ್ಲ ಸರ್ಕಾರಿ ನೌಕರಿ ಮಾಡೇ ಬದುಕಿದಿವೇನ್ರಿ… ಬ್ರಾಹ್ಮಣ್ಯಕ್ಕೆ ತಿಲತರ್ಪಣ ಕೊಟ್ಟವರು ಏನುಬೇಕಾದರೂ ಆಗುತ್ತಾರೆ ಎಂಬುದಕ್ಕೆ ಆ ಮದುಮಗನೇ ನಿದರ್ಶನ ನೋಡಿ” ಎಂದು ಆ ಹಿರಿಯರು ಬೇಸರ ವ್ಯಕ್ತ ಪಡಿಸಿದರು.

ಷಡ್ಡಕರಾದ ತ್ರಯಂಬಕರು ಇದೇ ಸವುಡು ಎಂದು ಕೊಂಡರು. ಅವರು ಅಂಥದೇ ಉತ್ತರದ ನಿರೀಕ್ಷೆಯಲ್ಲಿದ್ದರು. ಅವರು ತಮ್ಮ ಹೆಂಡತಿಯ ಸಂಭಂದಿಯೋರ್ವರಿಗೆ ವರಲಕ್ಷ್ಮಿಯನ್ನು ಕೊಡಿಸಲು ಪ್ರಯತ್ನ ಮಾಡಿದ್ದುಂಟು. ಅವನು ನಾಲ್ಕನೆ ಸಂಬಂಧಕ್ಕಾಗಿ ಕನ್ಯಾನ್ವೇಷಣೆಯಲ್ಲಿರುವ ನಲವತ್ತೊಂದು ವರ್ಷ ಪ್ರಾಯದವನು ಎಂಬ ಸಂಗತಿಯನ್ನು ಹೇಗೋ ತಿಳಿದುಕೊಂಡು ಆಚಾರ್ಯರು “ನನ್ನ ಮೊಮ್ಮಗಳಂದ್ರೆ ಏನು ತಿಳ್ಕೊಂಡೀಯೋ ತ್ರಂಬ್ಯಕ… ಇನ್ನೊಮ್ಮೆ ಅಂಥವರ ಪ್ರಸ್ತಾಪಿದಿ ಅಂದ್ರ… ಅನ್ನ ನೀರು ಸಿಗದಂತೆ ಮಾಡಿ ಬಿಡ್ತೀನಿ” ಎಂದು ಗದರಿಸಿರುವುದುಂಟು. ಅಷ್ಟೆಲ್ಲವನ್ನು ತನ್ನ ವಾತಾಪಿಯಲ್ಲಿಟ್ಟುಕೊಟ್ಟಿರುವ ತ್ರಯಂಬಕರು ಹೇಗಾದರು ಮಾಡಿ ಈ ಮದುವೆ ಮುರಿದು ಬಿದ್ದರೆ ವರಲಕ್ಶ್ಮಿಯನ್ನು ಮದುವೆಯಾಗುವವರಾದರೂ ಯಾರು? ಕೊನೆಗೆ ತಾವು ಸೂಚಿಸಿದ ವರಮಹಾಶಯನಿಗೆ ಕೊಟ್ಟು ಮದುವೆ ಮಾಡದೆ ಮುದುಕನಿಗೆ ಗತ್ಯಂತರವಿಲ್ಲವೆಂಬುದಾಗಿ ಯೋಚಿಸಿ ಎಲ್ಲ ವಿಷಯ ಸಂಗ್ರಹಿಸಿಕೊಂಡು ಬಿಡದಿ ಮನೆಗೆ ದಯಮಾಡಿಸಿದ್ದರು.

“ಶಾಮಾಶಾಸ್ತ್ರಿಗಳ ಮದುವೆಗೆ ಅಗ್ರಹಾರದೋರೆಲ್ಲ ಬಹಿಷ್ಕಾರ ಹಾಕಿದ ಮಾತಾಡ್ತಿದಾರಲ್ಲ… ಅಣ್ಣಾವ್ರೆ… ಈ ಮದುವೆ ನಿರ್ವಿಘ್ನವಾಗಿ ನಡೆಯೋದಾದ್ರು ಹೇಗೆ?” ಎಂದು ತ್ರಯಂಭಕರು ಆಚಾರ್ಯರ ಕಿವಿ ಚುಚ್ಚಿದರು.
ಅದನ್ನು ಕೇಳುತ್ತಲೆ ಆ ವೃದ್ಧರು ತಲೆ ಮೇಲೆ ಕಾಂಚನಗಂಗಾ ಕಳಚಿಬಿದ್ದಂತೆ ವಿಲವಿಲನೆ ಒದ್ದಾಡಿದರು.
“ಹೋ ಹೋ ಹಾಗೋ ಸಮಾಚಾರ! ಅದ್ಕೇನೆ ಒಬ್ಬ ಬ್ರಾಹ್ಮನನೂ ಕಾಣಿಸ್ತಿಲ್ಲ. ಬರೀ ಶೂದ್ರಜನರೇ ಪರಾಂಬರಿಸ್ತಿದ್ದಾರೆ. ಪ್ರಾಣತ್ಯಾಗ ಮಾಡಿದರೂ ಸರೆ, ಜಾತಿಗೆ ಅಪಚಾರ ಮಾಡಬಾರ್ದೂಂತ ಪೂರ್ವೀಕರು ಹೇಳಿದ್ದಾರೆ…” ಎಂದು ಉತ್ತರೀಯವನ್ನು ಹೆಗಲಮೇಲಿಳಿ ಬಿಡುತ್ತ “ಈ ಸಮಸ್ಯೆ ಪರಿಹಾರ ಆಗದ ಹೊರತು ಮಾಂಗಲ್ಯಧಾರಣೆ ಆಗದಂತೆ ನೊಡ್ಕೋಬೇಕು… ಹೊಂಡಲೇ ತ್ರಂಬಕ…” ಎಂದು ಎದ್ದು ನಿಂತರು.

ಅವರ ವರ್ತನೆಯಿಂದಾಗಿ ನಾವು ಅಸಹಾಯಕತೆಯಿಂದ ಒದ್ದಾಡಿದೆವು. ನಾವು ಎಷ್ಟು ಹೇಳಿ ನೋಡಿದರೂ ಅವರು ಮಾಗಲಿಲ್ಲ.
ಅಚಾರ್ಯ ಹಿಂದೆ ಶಕುನಿ ಸ್ವರೂಪಿಯಾದ ತ್ರಯಂಭಕಾಚಾರ್ಯರು, ಗಜೇಂದ್ರ, ಶ್ರೀನಿವಾಸ, ಗುರುರಾಜ, ಕಾಶೀ ವಿಶ್ವನಾಥರಾಯರು, ಪಾಲುಪರ್ತಿ ಶಿವರಾಮರಾಯರು, ಕೃಷ್ನಮೂರ್ತಿ ಶರ್ಮರು, ಸುಬ್ರಮಣ್ಯ ಶಾಸ್ತ್ರಿಗಳು ಇವರೇ ಮೊದಲಾದ ಬಂಧು ಬಳಗದವರು ಪ್ರಳಯ ಮುನ್ಸೂಚನೆ ನೀಡಲಿರುವವರಂತೆ ಹೊರಟರು. ಕೇಶವಿಹೀನೆಯಾದ ಶಾರದಮ್ಮನವರು “ಏನೋ ರಾಜಗೋಪಾಲ, ಈ ನಿನ್ನ ಅತ್ತೆಯನ್ನೆ ಬಿಟ್ಟು ಹೊರಡ್ತಿದ್ದೀ ಏನೋ? ಗಂಡಸರು ಗಂಡಸರ ಹತ್ರ ಮಾತಾಡ್ಲಿಕ್ಕಾಯ್ತು… ಆದ್ರೆ ಹೆಂಗಸರತ್ರ ಮಾತಾಡ್ಲಿಕ್ಕೆ ನಾನು ಬರೋದುಬೇಡವೇನೋ?… ಮಗು ಇಲ್ಲಿ ಅಳಲಿಕ್ಕತ್ತದೆಯಪ್ಪಾ” ಎಂದು ಕೋಲಿನಾಸರೆಯಿಂದ ಮೇಲೆ ಏಳುತ್ತ ಕೂಗಿದರು.
ತಮಗೆ ಅಕಾಲ ಮರಣಕ್ಕೀಡಾದ ಮಗಳನ್ನು ಹೆತ್ತು ಕೊಟ್ಟು ಇಚ್ಚಾಮರಣಿಯಂತೆ ಬದುಕಿರುವ ತಮ್ಮತ್ತೆ ಕೂಗಿಕೊಳ್ಳುವುದರೆಂದರೇನು!
ಆಚಾರ್ಯರು ಜಮದಗ್ನಿ ಮಹರ್ಷಿಗಳಾಗಿ ದುರುಗುಟ್ಟಿ ನೋಡಿದರು.

“ಅಲ್ಲಿ ಹೆಂಗಸರಿಗೇನಿದೆ ಕೆಲಸ? ಅದೂ ಅಲ್ಲದೆ ಕೇಶವಿಹೀನೆ ಬೇರೆ! ಇಲ್ಲೇ ಇದ್ದು ಮಂಗಳಕರವಾದ ವಸ್ತುಗಳನ್ನು ಮುಟ್ಟದೆ ಮಗುಗೆ ಧೈರ್ಯಹೇಳಿ” ಎಂದವರೆ ದಪದಪ ಹೆಜ್ಜೆ ಹೊರಗಿಟ್ಟು ಬಿಟ್ಟರು.

ಪರಮೇಶ್ವರ ಶಾಸ್ತ್ರಿಗಳಿಗಿಂತ ವಯಸ್ಸಿನಲ್ಲಿ ಹಿರಿಯರಿದ್ದರೂ ಎಷ್ಟೊಂದು ಗಟ್ಟಿಮುಟ್ಟಾಗಿದ್ದಾರಲ್ಲ ಈ ಆಚಾರ್ಯರು, ಅವರಿಗೆ ಹೆಣ್ಣುಕೊಟ್ಟ ಅತ್ತೆ ಶಾರದಮ್ಮನವರು ಮೂರುಪೋಗು ನೋಡಿರುವರೆಂದರೆ ಸಾಮಾನ್ಯರೆ! ಅವರ ‘ಪಾಲುಟ್ಲಿ’ ವಂಶದವರಾರೂ ನೂರು ವರ್ಷಗಳ ಒಳಗೆ ಇಹಲೋಕ ತ್ಯಜಿಸಿಯೇ ಇಲ್ಲವಂತೆ! ಅವರ ಮಗಳು ಅಂದರೆ ವಿಶಾಲಕ್ಷಮ್ಮನವರು ಅಂದರೆ ಆಚಾರ್ಯರ ಧರ್ಮಪತ್ನಿಯವರು; ಅಂದರೆ ಸಂಸಾರದಿಂದ ಬೇಸತ್ತು ವೈರಾಗ್ಯ ತಾಳಿ ಹರಿದ್ವಾರದ ವೀರಭದ್ರಾಶ್ರಮದಲ್ಲಿ ವರ್ಷಗಟ್ಟಲೆ ದೇವೀ ಉಪಾಸನೆ ಮಾಡಿ ಹಿಮವತ್ಕೇದಾರದಲ್ಲಿ ದೇಹತ್ಯಜಿಸಿದ ವಿದ್ಯಾವಾಚಸ್ಪತಿ ಡಮರುಗಾಚಾರ್ಯರ ತಾಯಂದಿರು; ಅಂದರೆ ಗಂಡನಿಲ್ಲದ ಚಿಂತೆಯಿಂದ ಕೊರಗುತ್ತ ಮತಿಭ್ರಮಣೆಯಾಗಿ ಋಷ್ಯಮೂಕ ಪರ್ವತ ಶ್ರೇಣಿಯಲ್ಲಿ ಕಾಣೆಯಾದ ರೇಣುಕಾಬಾಯಿಯವರ ಅತ್ತೆಯಂದಿರಾದ ಶಾರದಮ್ಮನವರು ಅಳಿಯ ನಾಡಿದ ಮಾತಿಗೆ ತಿಲಮಾತ್ರ ಬೆಲೆಕೊಡದೆ ಕೋಲು ಹಿಡಿದುಕೊಂಡು ಅರ್ಧ ಫರ್ಲಾಂಗು ಅಂತರದಲ್ಲಿ ಹಿಂದೆ ಬರತೊಡಗಿದರು.

ಓಣಿಯ ಜನ ಹನ್ನೊಂದಾದರೂ ಮಲಗಿರದೆ ಕೂಸು ಕಂದಯ್ಯಗಳೊಡನೆ ಅಂಗಳಕೈತಂದು ಅವರೇ ನೋಡು ಇವರು, ಇವರೇ ನೋಡು ಅವರು ಎಂದು ತಮ್ಮ ತಮಗೇ ಮಾರ್ಗದರ್ಶನಮಾಡುತ್ತ ಸಂತೋಷಪಡುತ್ತಿದ್ದರು. ಬಂದಿದ್ದ ಬೀಗರು ಬಿಜ್ಜರು ಪೈಕಿ ಯಾರೂ ಕುಬ್ಜರಿರಲಿಲ್ಲ. ಪ್ರತಿಯೊಬ್ರೂ ಆಜಾನುಬಾಹುಗಳು… ಇವರಹಾಗೆ ಕುಳ್ಳಗಿರಲಿಕ್ಕೆ ನಾವೇನು ಮೂಲತಃ ದಕ್ಷಿಣಾತ್ಯರೇನು? ನಮ್ಮ ಪೂರ್ವೀಕರು ಉತ್ತರ ಭಾರತದಿಂದ ವಲಸೆ ಬಂದವರು. ಕಣ್ರೀ… ಕನೌಜದ ಹರ್ಷವರ್ಧನ, ಛತ್ತರಪುರದ ಛತ್ತರಸಾಲ, ಇವರೇ ಮೊದಲಾದ ರಾಜಾಧಿರಾಜರ ಆಸ್ಥಾನದಲ್ಲಿ ಜ್ಯೋತಿಷಿಗಳಾಗಿದ್ದವರು. ಏನೋ ಅವರ ಪೈಕಿ ಒಬ್ಬರು ತಿಮ್ಮರಸರ ಮಾತು ಮೀರಲಾರದೆ ದಕ್ಷಿಣಕ್ಕೆ ಬಂದು ವಿಜಯನಗರದ ಕೃಷ್ಣರಾಯನ ಆಸ್ಥಾನದಲ್ಲಿ ವೈದಿಕಕ್ಕೆ ನಿಂತರು. ಕಮಲಾಪುರದ ಕೆರೆ ಪಕ್ಕದಲ್ಲಿರುವ ಶಿಲಾಶಾಸನದಲ್ಲಿ ನಮ್ಮ ಪೂರ್ವೀಕರಾದ ವೇದವ್ಯಾಸ ಮಹತ್ಪಾದರ ವರ್ಣನೆ ಮಾಡಲಾಗಿದೆ. ಬೇಕಾದರೆ ಹೋಗಿ ಓದಿಕೊಳ್ಳಿ ಎಂದು ಆಚಾರ್ಯರು ದಿನಂ ಪ್ರತಿ ಅವರಿವರಿಗೆ ಹೇಳುತ್ತಿರುವುದುಂಟಂತೆ.
ಅವರನ್ನು ನೋಡಿದರೆ ಅದೇನು ಉತ್ಪ್ರೇಕ್ಷೆ ಅಲ್ಲ ಎನ್ನಿಸಿತು.

ಬ್ರಾಹ್ಮಣರೆಂದರೆ ಹೀಗಿರಬೇಕು ಎಂದು ನೋಡಿದ ಎಂಥವರಿಗೂ ಅನ್ನಿಸದಿರಲಿಲ್ಲ. ಅಷ್ಟ ದಿಗ್ಗಜಗಳೇ ಮನುಷ್ಯರೂಪದಲ್ಲಿ ನಡೆಯುತ್ತಿರುವರೇನೋ ಎಂಬಂತೆ ಅವರು ನಡೆಯುತ್ತಿದ್ದರು. ಅಕ್ಕಪಕ್ಕದಲ್ಲಿ ಅಬ್ರಾಹ್ಮಣರ ಮನೆಗಳಿರುವವೆಂದು ಭಾವಿಸಿ ಮೂಗು ಬಾಯಿಗಳ ಮೇಲಿರಿಸಿದ್ದ ಅಂಗವಸ್ತ್ರವನ್ನು ಅವರು ತೆಗೆಯಲೇ ಇಲ್ಲ.

ಅಷ್ಟರಲ್ಲಿ ನಾನು ತಿಪ್ಪಜ್ಜಿಯವರೋಣಿಯಿಂದ ಹೋಗಿ ಶಾಸ್ತ್ರಿಗಳಿಗೆ ವಸ್ತುಸ್ಥಿತಿ ವಿವರಿಸಲು ಪ್ರಯತ್ನಿಸಿದೆ. ಅವರ ಪರವಾಗಿ ಬಂದಿದ್ದವರು ‘ರಾಜಗೋಪಾಲಚಾರ್ಯರು ಧರ್ಮಕರ್ಮಗಳ ಸೂಕ್ಷ್ಮಗಳು ಮರೆತಿರುವರೇನು?’ ಎಂದು ಪ್ರಶ್ನಿಸಿದರು. ಆ ಪಂಚವಿಂಶತಿ ನೆಂಟರಲ್ಲಿ ನಂಜನಗೂಡಿಂದ ಬಂದಿದ್ದ ನರಹರಿ ಶಾಸ್ತ್ರಿಗಳು; ಬೇಲೂರು ಅಗ್ರಹಾರದಿಂದ ಬಂದಿದ್ದ ಅಳಸಿಂಗಾಚಾರ್ಯರು; ತಲಕಾಡಿಂದ ಬಂದಿದ್ದ ರಾಮಾಚಾರ್ಯರು ಗೇರುಸೊಪ್ಪೆಯಿಂದ ಬಂದಿದ್ದ ವೆಂಕಣ್ಣಾಚಾರ್ಯರು ಆ ಬೀಗರಿಗೆ ಬುದ್ಧಿ ಹೇಳುವುದಾಗಿ ನಿರ್ಧರಿಸಿದರು. ಬೆಂಗಳೂರಿಂದ ಬಂದಿದ್ದ ರಿಟೈರ್ಡ್ ಅಮಲ್ದಾರರಾದ ಹಯವದನರಾಯರಂತೂ ಈ ಮದುವೆ ಮುರಿದು ಬಿದ್ದ ಪಕ್ಷದಲ್ಲಿ ತಮ್ಮ ಪಂಚಮ ಸುಪುತ್ರಿಯಾದ ರುಕ್ಮಿಣಿಯನ್ನು ಇದೇ ಹಂದರದಲ್ಲಿ ಇದೇ ಮುಹೂರ್ತನಲ್ಲಿ ಕೊಟ್ಟು ಧಾರೆ ಎರೆದು ಬಿಡಬಹುದೆಂದು ಲೆಕ್ಕ ಹಾಕಿದರು. ಕೂಡಲೆ ಅವರು ಒಳಗೆ ಜೋಗಿ ತಮ್ಮ ಧರ್ಮಪತ್ನಿ ಜಯಲಕ್ಷಮ್ಮನವರನ್ನು ಗುಟ್ಟಾಗಿ ಕಂಡು “ದೇವರದಯಯಿಂದ ಮದುವೆ ಮುರಿದು ಬಿದ್ದರೆ ರುಕ್ಮಿಣಿಯನ್ನು ಕೊಟ್ಟಿ ಧಾರೆ ಎರೆದು ಬಿಡೋಣ… ಕೋಟೆ ಆಂಜನೇಯನಿಗೆ ಬೆಣ್ಣೆ ಅಲಂಕಾರ ಮಾಡಿಸೋಣ” ಎಂದು ಪಿಸುಗುಟ್ಟಿದರು. ಜಯಲಕ್ಷಮ್ಮನವರು ತಮ್ಮ ಕೈಯಲ್ಲಿರುವ ಚಪಾತಿ ತುಪ್ಪದಲ್ಲಿ ಬೀಳಲಿದೆ ಎಂದು ಭಾವಿಸಿ ತಮ್ಮ ಮಗಳ ಬಳಿಗೆ ಹೋಗಿ ಆಕೆಯ ಕಿವಿಯಲ್ಲಿ ವಸ್ತುಸ್ಥಿತಿ ಸೂಚ್ಯವಾಗಿ ಹೇಳಿದರು. ಕೂಡಲೆ ರುಕ್ಮಿಣಿ ಕೋಣೆಗೆ ಹೋಗಿ ಒಳಗಿದ್ದವರನ್ನೆಲ್ಲ ಹೊರಗೆ ಕಳಿಸಿ ಧರ್ಮಾವರಂ ಕಲಾಪತ್ತಿನ ಸೀರೆ ಉಟ್ಟು ನೀಟಾಗಿ ಡ್ರೆಸ್ ಮಾಡಿಕೊಂಡು ವಟುವಿನೋದಾಪಾದಿಯಲ್ಲಿ ಮಂಕಾಗಿ ಕೂತಿದ್ದ ಶಾಮಣ್ಣನ ಹಿಂದೆ ಮುಂದೆ ಸುಳಿಯ ತೊಡಗಿದಳು. ಕಾಂಪೌಂಡಿನಾಚೆ ಹೋ ಎಂದು ಹರ್ಷೋದ್ಗಾರ ಮಾಡತೊಡಗಿದ ಗ್ರಾಮದ ಸಮಸ್ತ ನಾಯಿಗಳನ್ನು ನಾರಾಣಿ ಕೈಯಲಿದ್ದ ಬೆತ್ತದಿಂದ ಓದಿಸುವ ಪ್ರಯತ್ನ ಮಾಡತೊಡಗಿದನು. ಗ್ರಾಮದ ಪ್ರಮುಖರೆಂದು ಹೆಸರು ಮಾಡಿರುವ ಹಲ್ಕುಂದಿ ರಾಮಣ್ಣ; ಮಾಜಿ ಪುರಸಭಾ ಅಧ್ಯಕ್ಷ ಚನ್ನಬಸಪ್ಪ; ಜಾಟಗೆರೆ ಸತ್ಯಪ್ಪ; ಗವುಳೇರ ಕ್ರಿಷ್ಟಪ್ಪ; ಕಟುಕರ ವಿಠೋಬ; ಕೊಲ್ಮಿ ಹಸನ್ ಸಾಹೇಬ ಮುಂತಾದವರು ಇದು ತಮ್ಮ ಊರಿನ ಮರ್ಯಾದೆ ಪ್ರಶ್ನೆ ಎಂದುಕೊಂಡು ಬಂದರು. ರುಗ್ಣಶಯ್ಯೆಯಲ್ಲಿದ್ದ ಶಾಸ್ತ್ರಿಗಳಿಗೆ ನಮಸ್ಕರಿಸಿದರು. ಕಣ್ಣಿನ ನೀರನ್ನು ಸೆರಗಿಗೆ ಬಸಿಯುತ್ತಿದ್ದ ಅಲುಮೇಲಮ್ಮನವರಿಗೆ “ನೀವೇನು ಹೆದರ್ಬೇಡಿ ತಾಯಿ… ಬೀಗರ ವಿಷಯ ನಮಗೆ ಬಿಟ್ಟು ನೀವು ನಿಶ್ಚಿಂತೆಯಿಂದಿರ್ರಿ” ಎಂದು ಸಮಾಧಾನ ಹೇಳಿದರು. ಅಷ್ಟು ಹೇಳಿ ಅವರಿನ್ನೂ ಉಸುರು ಬಿಟ್ಟು ತೆಗೆದುಕೊಂಡಿರಲಿಲ್ಲ. ಅಷ್ಟರೊಳಗೆ ವೇದಾಂತಿ ರಾಜಗೋಪಾಲಚಾರ್ಯರು ಮತ್ತವರ ದಂಡು ಬಂದೇಬಿಟ್ಟಿತು.

ಬಂದವರೆಲ್ಲ ಮೊದಮೊದಲು ಶಾಸ್ತ್ರಿಗಳ ದೈಹಿಕ ಪರಿಸ್ಥಿತಿ ಕಂಣಾರೆಕಂದು ಕರಗಿಹೋದವರಂತೆ ಕಂಡುಬಂದರಾದರೂ ಕ್ರಮೇಣ ದ್ವನಿ ಎತ್ತರಿಸಿ ಮಾತಾಡ ತೊಡಗಿದರು. ಸದರೀ ಗ್ರಾಮದ ಅಗ್ರಹಾರದವರು ಬಹಿಷ್ಕಾರ ಹಾಕಿರುವರೆಂದ ಮೇಲೆ ಮಂಗಳ ಕಾರ್ಯಗಳು ಸುಸೂತ್ರವಾಗಿ ಹೇಗೆ ನಡೆಯುತ್ತವೆ ಎಂಬುದಾಗಿ ತ್ರಯಂಬಕರು ನಾಂದಿ ಹಾಡಿದರು. ಉಳಿದವರು ಅದಕ್ಕೆ ದನಿಗೂಡಿಸಿದರು. ತಾವು ಏನಾದ್ರು ಹೇಳುವ ದೊಡ್ಡ ಮನಸ್ಸು ಮಾಡಬೇಕು ಬುದ್ಧಿ ಎಂದು ಹೇಳಿದ ಕಟುಕರ ವಿಠೋಬಗೆ ಎಲ್ಲ ಹಕ್ಕು ದಯಪಾಲಿಸಿತ್ತು. ಸಭೆ ವಿಠೋಬನ ಗಿರಿಜಾ ಮೀಸೆ ನೋಡಿ ಆಚಾರ್ಯರ ಹಳ್ಳೊಳಗಿದ್ದ (ವಯಸ್ಸು ತೊಂಭತ್ತರ ಮೇಲಾಗಿದ್ದರು ಮುವ್ವತ್ತೆರದರ ಪೈಕಿ ಎರಡು ಹಲ್ಲು ಮಾತ್ರ ಉಸುರಿದ್ದವು) ನಾಲಗೆಯನ್ನು ಸರಿಪಡಿಸಿಕೊಂಡು ಮೊದಲು ಬೆಣ್ಣೆಯಲ್ಲಿ ಹರಳು ಕರಗುವಂತೆ ಮಾತಾಡಿದ ನಂತರ “ಈ ಸಮಸ್ಯೆ ಸೂಕ್ಷ್ಮ ಅದೆ. ಅಗ್ರಹಾರದ ಕುಲ ಬಾಂಧವರು ಬಹಿಷ್ಕಾರ ಹಾಕಿದ್ದಾರಂತಲ್ಲ…” ಎಂದಷ್ಟೆ ಹೇಳಿದರು. ಆಚಾರ್ಯರ ಮಾತು ಕೇಳಿ ಚನ್ನಬಸಪ್ಪ ಗಹಗಹಿಸಿ ನಗಾಡಿದ “ಅಲ್ರೀ ಬುದ್ದಿ… ಬಹಿಷ್ಕಾರ ಹಾಕಿದ್ದೀವಂತ ಅವರೇನು ಬಂದ ತಮ್ಗೆ ಹೇಳಿದ್ರಾ?” ಎಂದ. ತ್ರಯಂಬಕರು ಬುದಕ್ಕನೆ ಎದ್ದು ನಿಂತು “ನಾವೇ ಖುದ್ಧ ಹೋಗಿದ್ವಿ” ಎಂದು ಹೇಳಿದರು. ಕೊಲ್ಮಿಹಸನ್ಸಾಬು (ಹಿಂದೆ ಕುಸ್ತಿ ಪಂದ್ಯಾವಳಿಗಳಲ್ಲಿ ಮೂರು ಸಾರಿ ಚಿನ್ನದ ಪಡೆದ ವ್ಯಕ್ತಿ) ಹೇಳಿಕೆ ಮಾತು ಕೇಳಬಾರದೆಂದೂ ಅಗ್ರಹಾರದವರನ್ನೇ ಖುದ್ದು ಕರೆಸಿಕೇಳಬೇಕೆಂದೂ ಹೇಳಿದನು. ಇದು ಸರ್ವಥಾ ಒಪ್ಪಿಗೆ ಆಯಿತು. ಅಗ್ರಹಾರದ ಭಾಷ್ಯಂ ಶ್ರೀಕರಾಚಾರ್ಯರೇ ಮೊದಲಾದ ಹಿರಿಯರನ್ನು ಕೂಡಲೆ ಕರೆಸಿ ವಿಚಾರಿಸುವುದೆಂದು ನಿರ್ಧರಿಸಿದರು. ತಾನೇ ಹೋಗಿ ಕರೆದುಕೊಂಡು ಬರುವುದಾಗಿ ಕಟುಕರ ವಿಠೋಬ, ಗೌಳೇರ ಕ್ರಿಷ್ಟಪ್ಪನೊಡನೆ ಅಗ್ರಹಾರದ ಕಡೆ ಯಜ್ದಿ ಮೇಲೆ ಹೋದನು. ಕೊಟ್ಟೂರಿನ ಕಟುಗರು, ಗೌಳೀಯೆಂದರೆ ಅಗ್ರಹಾರಕ್ಕೆ ಅಗ್ರಹಾರವೇ ಥರಥರ ನಡುಗಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು. ಅವರಿಗೆ ಒಳ್ಳೆಯವರಾದರೆ ಇವರಿಂದಲೆ, ಕೆಟ್ಟವರಾಗಿದ್ದರೂ ಇವರಿಂದಲೇ. ಅವರು ಇವರಿಗೆ ಬಹಿಷ್ಕಾರ ಹಾಕಿದರೆಂದರೆ ಇವರು ಅವರಿಗೆ ಬಹಿಷ್ಕಾರ ಹಾಕಿ ಕೂಳಿಗೆ ಕೂಳು, ನೀರಿಗೆ ನೀರು ಸಿಗದಂತೆ ಮಾಡುವುದು. ಭಾಷ್ಯಂ ಮನೆತನದವರಿಗೂ ಕಟುಗರಿಗೂ ಲಗಾಯ್ತಿನಿಂದ ಲೇವಾದೇವಿಯುಂಟು. ತಗೊಳ್ಳುವುದರಲ್ಲಿ ಕೊಡುವುದರಲ್ಲಿ ಒಂಚೂರು ಹೆಚ್ಚು ಕಡಿಯಾದುದಿಲ್ಲ. ಕುರಿ, ಮೇಕೆ, ಕೋಳಿ ಕಡಿದು ಬಣ್ಣ ಬಣ್ಣದ ಮಾಂಸಗಳನ್ನು ತೂಗಿ ಬಿಡುವ ಕಡೆ ಹೋಗಲು ಅಗ್ರಹಾರದವರು ಹಿಂದೇಟು ಹಾಕುವುದುಂಟು. ಯಾರಿಂದಲಾದರೂ ಹೇಳಿ ಕಳಿಸಿದೊಡನೆ ವಿಠೋಬ ಒಂದೇ ಮಾತಿಗೆ ಹೋಗಿ ಬಾಯಿ ಮಾತೀಲೆ ಕೊಡುವನು,. ಕೇವಲ ಬಾಯಿ ಮಾತೀಲೆ ವಾಪಾಸು ಪಡೆಯುವನು. ಶೇಕಡ ಮೂರಿದ್ದುದು ಎರಡು ಮಾಡುವನು. ಎರಡು ಇದ್ದುದು ಒಂದು ಮಾಡುವನು. ಅಪ್ಪಟ ಮಾಂಸಾಹಾರಿಯಾದ ಮತ್ತು ಗ್ರಾಮದ ಏಳೆಂಟು ನೂರು ಮನೆಗೆ ಮಾಂಸಾಹಾರ ಸರಬರಾಜು ಮಾಡುವ ಐವತ್ತೆಂಟು ಕಟುಗರ ಕುಟುಂಬಗಳಿಗೆ ಮುಖ್ಯಸ್ತನಾದ ಅವನು, ಪ್ರಾಣಿಹಿಂಸೆಯಿಂದ ಪಾಪಕಟ್ಟಿಕೊಳ್ಳುತ್ತೇವೆ ಎಂದು ಸದಾ ಹಪಹಪಿಸುವ ಅವನು; ಪೊಗದಸ್ತಾದ ಮೀಸೆಯನ್ನೂ; ದಡೂತಿ ಕಾಯವಂದಿಗನಾದ ಅವನು ಇವರು ತಮ್ಮ ಪಾಪದ ಮಟ್ಟವನ್ನು ಕಿಂಚತ್ತಾದರೂ ಕಡಿಮೆ ಮಾಡುತ್ತಾರೆ ಎಂದು ನಂಬಿಕೆ ಇಟ್ಟುಕೊಂಡೇ ಅಗ್ರಹಾರದವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಅವನ ಜೊತೇಲಿ ಹೊಂಟ ಗೌಳೇರ ಕ್ರಿಷ್ಟಪ್ಪನೇನು ಕಡಿಮೆ? ಅಗ್ರಹಾರವೆಂಭೊ ಅಗ್ರಹಾರಕ್ಕೆನೇ ಹಾಲು ಹೈನ ಸರಬರಾಜು ಮಾಡುವುದು ಒತ್ತಟ್ಟಿಗಿರಲಿ, ಸದರಿ ಗ್ರಾಮದ ಜಮಾತೆ ಇಸ್ಲಾಮಿನ ಮುಖಂಡನಾದ ದಾದಾ ಖಲಂದರನು ಅಗ್ರಹಾರದ ರಾಮದೇವರ ದೇವಸ್ಥಾನದ ಪಕ್ಕದಲ್ಲಿ ಮಸೀದಿ ಕಟ್ಟುವುದಾಗಿ ಎಗರಾಡಿದಾಗ ಈ ಕ್ರಿಷ್ಟಪ್ಪ ಅವನನ್ನು ಒಂದುಮಟ್ಟಹಾಕಿ ಅವನು ಮುಂದೆಂದೂ ಅಗ್ರಹಾರದ ಗಡಿದಾಟದಂತೆ ನೋಡಿಕೊಂಡಿದ್ದಂಥ ಪುಣ್ಯಾತ್ಮನು. ಅಗ್ರಹಾರದವರು ತಲೆ ಎತ್ತಿ ಅಡ್ಡಾಡುತ್ತಿರುವರೆಂದರೆ ಈ ಕ್ರಿಷ್ಟಪ್ಪ ಮತ್ತು ವಿಠೋಬರ ಬೆಂಬಲದಿಂದಾಗಿಯೇ.

ಅವರು ಮೊದಲಿಂದಲೂ ಒಂದಾಗಿ ಇದ್ದವರಲ್ಲ. ಕ್ರಿಷ್ಟಪ್ಪ ಒಂದು ಪಾರ್ಟಿಯಾದರೆ ವಿಠೋಬ ಇನ್ನೊಂದು ಪಾರ್ಟಿ. ರಾಜಕೀಯ ವಿಕೇಂದ್ರಿಕರಣ ಆದಂತೆಲ್ಲಾ ಆದಂತೆಲ್ಲಾ ಅವರಿಬ್ಬರ ನಡುವೆ ಟಗ್ ಆಫ್ ವಾರ್ ತಿಂಗಳಿಗೊಂಡು ಸಾರಿಯಾದರೂ ನಡೆಯುತ್ತಲೇ ಇರುವುದು, ಇವರಿಬ್ಬರನ್ನು ಒಂದು ಮಾಡಲು ಸಾಕ್ಷಾತ್ ಮುಖ್ಯಮಂತ್ರಿಗಳೇ ಗ್ರಾಮಕ್ಕೆ ಬಂದು ಒಬ್ಬರು ಎಂಜಲು ಮಾಡಿದ ಹಾಲನ್ನು ಇನ್ನೊಬ್ಬರು ಕುಡೀರಯ್ಯ ಎಂದು ಹೇಳಿ ರಾಜಿ ಮಾಡಲು ಪ್ರಯ್ತ್ನಿಸಿ ವಿಫಲರಾದದ್ದುಂಟು. ಶಾಮಣ್ಣ ಮದುವೆ ಸುಸಂದರ್ಭದಲ್ಲಿ ದಿಡೀರನೆ ಹುಟ್ಟಿಕೊಂಡ ಸಮಸ್ಯೆ ಅಂಥ ಅವರಿಬ್ಬರನ್ನು ಒಂದು ಮಾಡಿ ಬೀದುಗುಂಟ ನಡೆಸಿತು ಎಂದರೆ ಸಾಮಾನ್ಯ ಸಂಗತಿಯೇ?
ವಿಠೋಬ ಕ್ರಿಷ್ಟಯ್ಯರೆಂಬ ಎರಡು ಧ್ರುವಗಳು ಒಂದಾಗಿ ಅಗ್ರಹಾರಕ್ಕೆ ಬರುತ್ತಿದೆ ಎಂಬ ಸುದ್ದಿ ಹವ್ಯಾಸಿ ಪತ್ತೆದಾರನಾದ ಮಾಧವಾಚಾರ್ಯನಿಂದ ಎಲ್ಲರಿಗೂ ತಿಳಿದುಬಿಟ್ಟಿತು. ಆ ನಡುರಾತ್ರಿಯಲ್ಲಿ ಭಾಷ್ಯಂರವರ ಪುರಾತನ ಮನೆ ಮುಂದೆ ಅಗ್ರಹಾರದ ಹಿರಿಕಿರಿಯರೆಲ್ಲ ಸೇರಿ ಉಸಿರು ಬಿಗಿಹಿಡಿದು ಕೂತಿದ್ದರು. ಆಗಲೆ ರಾಹುಕೇತುಗಳೋಪಾದಿಯಲ್ಲಿ ದಯಮಾಡಿಸಿದ ಅವರನ್ನು “ಓಹೋಹೋ ಬರ್ಬೇಕು… ಏನು ಇಷ್ಟು ಹೊತ್ನಲ್ಲಿ ದಯಮಾಡಿಸೋಣವಾಯ್ತು!” ಎಂದು ಸ್ವಯಂ ಶ್ರೀಕರಾಚಾರ್ಯರೇ ಎದ್ದು ಹೋಗಿ ಸ್ವಾಗತಕೋರಿ ಒಂದು ಕಡೆ ಕೂಡ್ರಿಸಿ “ಪಂಚಾಂಗ ಕೇಳೊದಿತ್ತಾ?” ಎಂದು (ತಾವು ತುಂಬ ಮುಗ್ಧರು, ಅಮಾಯಕರು ಎಂಬರ್ಥದಲ್ಲಿ) ವಿಚಾರಿಸಿದರು. “ನಿಮ್ಮ ಪಂಚಾಂಗಕ್ಕಿಷ್ಟು ಬೆಂಕಿ ಹಾಕ್ಲಿ… ಊರಲ್ಲೇನು ಒಳ್ಳೇದು ನಡೀಬೇಕೋ ಬೇಡ್ವೋ ಅಷ್ಟು ಹೇಳ್ರಿ” ಎಂದು ವಿಠೋಬ ಏಕ್‌ದಂ ಗುಂಡು ಹಾರಿಸಿ ಅವರನ್ನು ಥರಥರ ನಡುಗಿಸಿದನು. “ನಿಮ್ಗೆ ಹೇಳೋರು ಕೇಳೋರು ಯಾರೂ ಇಲ್ಲೇನು… ಇವತ್ತು ಯಲ್ಡರಾಕೊಂದು ತೇಲೇಬೇಕು” ಎಂದು ಕ್ರಿಷ್ಟಪ್ಪ ಗೇಣುದ್ದದ ಚುಟ್ಟದ ಹೊಗೆಯನ್ನು ಭಾಷ್ಯಂರವರ ಮುಖಕ್ಕೆ ಬಿಟ್ಟನು. ಅದರಿಂದ ಶ್ರೀಕರಾಚಾರ್ಯರ ಜಂಘಾಬಲ ಉಡುಗಿಬಿಟ್ಟಿತು. ಅವರನ್ನು ಅವರಿಬ್ಬರು ಅಶ್ವಥ್‌ಕಟ್ಟೆಯ ಮರೆಗೆ ಕರೆದು ಐದು ಚಿಂತನ ಮಂಥನ ನಡೆಸಿದರು. ಸ್ರಿಕರಾಚಾರ್ಯರು ಬೆವರು ಒರೆಸಿಕೊಳ್ಳುತ್ತ ಹೊರ ಬಂದವರೆ ಅಗ್ರಹಾರದ ಕೆಲವರೊಂದಿಗೆ ಅವರಿಬ್ಬರ ಹಿಂದೆ ಹೆಜ್ಜೆ ಹಾಕಿದರು. ನಾನ್ ಬ್ರಾಹ್ಮಿನ್ ಪತ್ತೆದಾರನಾದ ಚೇಕರನು ಮನೋವೇಗದಿಂದ ಶಾಸ್ತ್ರಿಗಳ ಮನೆ ತಲುಪಿ ವರ್ತಮಾನ ಪಿಸುಗುಟ್ಟಿದನು. ಅದನ್ನು ಊಹಿಸಿಕೊಂಡು ಕೊರಚರ ಎಲುಗ ಕಹಳೆ ಮೊಳಗಿಸಿದನು. ದೊಬಿ ನಾರಾಣಿಯ ನಾಯಿ ಹೋ ಎಂದು ಬೊಳಗಿತು.

ಆ ಸದ್ದು ಪ್ರತಿದ್ವನಿಸುತ್ತಿರುವಾಗಲೆ ವಿಠಪ್ಪ ಕ್ರಿಷ್ಟಪ್ಪ ಅಗ್ರಹಾರದವರೊಡನೆ ಬಂದೆ ಬಿಟ್ಟರು. ಬಂದೊಡನೆ ಶ್ರೀಕರಾಚಾರ್ಯರು ರುಗ್ಣಶಯ್ಯೆ ಬಳಿಗೆ ಹೋಗಿ ಶಾಸ್ತ್ರಿಗಳನ್ನು ಮಾತಾಸ್ಡಿಸಲು ಪ್ರಯತ್ನಿಸಿವಿಫಲರಾದರು.

ಸ್ವಲ್ಪ ಹೊತ್ತು ಬಹಿಷ್ಕಾರ ಎಂಬ ಟಾಪಿಕ್ಕಿನ ಮೇಲೆ ಚರ್ಚೆ ನಡೆಯಿತು. ಪರಸ್ಪರ ಶಾಮೀಲಾಗಿದ್ದ ಹಯವದನರು, ತ್ರಿಯಂಬಕರು ಬಹಿಷ್ಕಾರ ಕುರಿತಂತೆ ಮಂಡಿಸಿದ ಗೊತ್ತುವಳಿ ಕ್ರಮೇಣ ಬಿದ್ದುಹೋಯಿತು. “ಯಾವ ಮುಠ್ಠಾಳ ಹೇಳಿದ ನಿಮ್ಗೆ ನಾವು ಬಹಿಷ್ಕಾರ ಹಾಕಿದೀವಂತ” ಶ್ರೀಕರಾಚಾರ್ಯರು ಘಂಟಾ ಘೋಷವಾಗಿ ಹೇಳಿದ್ದೇ ಗೊತ್ತುವಳಿ ಬಿದ್ದು ಹೋಗಲು ಕಾರಣ? ಈ ಮದುವೆಯಲ್ಲಿ ಭಾಗವಹಿಸಿದರೆ ತಾವೂ ಬ್ರಷ್ಟರಾಗಿ ಹೋಗುವುದಾಗಿಯೂ; ಆದ್ದರಿಂದ ತಾವು ತಂತಮ್ಮ ಹೆಂಡಿರು ಮಕ್ಕಳನ್ನು ಕರೆದುಕೊಂಡು ಸಭಾತ್ಯಾಗ ಮಾಡುವುದಾಗಿಯೂ ಸಂಸಿದ್ಧರಾದ ಹಯವದನರು, ತ್ರಯಂಬಕರು “ಕೈಸೆ ಜಾತೆ ಜಾಜಿ ದೇಖ್ತಾ” ಎಂದು ಕೊಲ್ಮಿಹಸನ್ಸಾಬ ಗತ್ತು ಹಾಕುತ್ತಲೆ ನಿಂತುಬಿಟ್ಟರು.
ಹಲ್ಕಂದಿ ರಾಮಣ್ಣ; ಭದ್ರಣ್ಣ ತಲಾ ಒಂದೊಂದು ಸುಗ್ರಾಸ ಭೋಜನದ ಖರ್ಚನ್ನು ಭರಿಸುವುದಾಗಿಯೂ ವಯೋಭೇದವಿಲ್ಲದೆ ಲಿಂಗಭೇದವಿಲ್ಲದೆ ಎಲ್ಲರೂ ಊಟ ಮಾಡಬೇಕೆಂದು ಆಯಾ ಮುಖಂಡರಿಗೆ ಮನವಿ ಸಲ್ಲಿಸಲು ಅವರೆಲ್ಲ ಯಾಕಾಗಬಾರದೆಂದರು?

ದೊಡ್ಡದೊಂದು ಕಂಟಕ ಪರಿಹಾರವಾಯಿತೆಂದು ಸಮಾಧಾನದ ಉಸಿರುಬಿಡುತ್ತ ಅಲುಮೇಲಮ್ಮನವರು ಅಣ್ಣಂದಿರಾ ಅಂತ ಎಲ್ಲರಿಗೂ ಕೃತಜ್ಞತೆ ಸೂಚಿಸಿದರು. ಸಭೆ ಬರಖಾಸ್ತಾಗಿ ಎಲ್ಲರೂ ಮದುವೆಗೆ ಸಂಭಂದಿಸಿದ ತಲಾ ಒಂದೊಂದು ಕಾರ್ಯ ವಹಿಸಿಕೊಳ್ಳಲು ಆತ ಶಾಮಣ್ಣನನ್ನು ದೇವರಕೋಣೆಗೆ ತುಪ್ಪದ ದೀಪ ಹಚಲು ಕರೆದೊಯ್ಡಳು.
ಅದು ಹೇಳಿ ಕೇಳಿ ಕಟ್ಟಾ ಸಂಪ್ರದಾಯಸ್ಥರ ನೇತೃತ್ವದಲ್ಲಿ ನಡೆಯುವ ಮದುವೆಯಾದ್ದರಿಂದ ನಾವ್ಯಾರೂ ಎಲ್ಲ ಕಡೆ ಮೂಗು ತೂರಿಸುವಂತಿರಲಿಲ್ಲ. ಕಂಪ್ಲಿಯಿಂದ ಬಂದಿದ್ದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೆನ್ನ ಹುಸೇನ ಸಾಹೇಬರಮತ್ತವರ ಸಂಗಡಿಗರ ನಾದಸ್ವರವಾದನಕ್ಕೆ ಎಲ್ಲರೂ ತಲೆ ಅಲ್ಲಾಡಿಸುತ್ತ ಒಂದಲ್ಲ ಒಂದು ಕೆಲಸವನ್ನು ಹುಡುಕಿ ಮಾಡುತ್ತಿದ್ದೆವು. ಆಚಾರವಿಚಾರ ಶಾಸ್ತ್ರ ಸಂಪ್ರದಾಯಗಳು ರಾತ್ರಿ ಇಡೀ ನಡೆದವು. ಸೂರ್ಯ ಇನ್ನೂ ಸ್ವಲ್ಪ ತಡಮಾಡಿ ಹುಟ್ಟಿದ್ದರೆ ಗಂಟೇನು ಕಳೆದುಕೊಳ್ಳುತ್ತಿದ್ದ ಎಂದು ಗೊಣಗುತ್ತಿರುವಷ್ಟರಲ್ಲಿ ಒಳಗಿನ ಕೋಣೆಯಲ್ಲಿ ಮಾಂಗಲ್ಯಧಾರಣೆಯಂಥ ಮಂಗಳಕಾರ್ಯ ನಡೆದೇಬಿಟ್ಟಿತು. ಕ್ರಮೇಣ ಹೊತ್ತೇರಿದಂತೆ ಶಾಸ್ತ್ರಿಗಳ ಕಡೆಯವರು, ಅಲಮೇಲಮ್ಮನವರ ಕಡೆಯವರು, ಶಾಮಣ್ಣನ ಬ್ಯಾಂಕು ಸಹೋದ್ಯೋಗಿಗಳು; ಗ್ರಾಮದ ಮೂಲೆ ಮುರುಕಟ್ಟಿನಲ್ಲಿ ಉಳಿದುಕೊಂಡಿದ್ದಂಥವರು ಎಲ್ಲರೂ ತಂತಮ್ಮ ಶಕ್ತ್ಯಾನುಸಾರ ಬರಲಾಗಿ ಮದುವೆ ಮನೆಯ ಆ ಬೀದಿಯಿಂದ ಈ ಬೀದಿಯವರೆಗೆ;ಈ ಬೀದಿಯಿಂದ ಆ ಬೀದಿಯವರೆಗೆ ಗಿಜಿಗಿಜಿ ಗುಟ್ಟತೊಡಗಿ ಪುಟ್ಟ ಜಾತ್ರೆಯ ಶೋಭೆಯನ್ನು ತಂದಿತು. ನೀವ್ಯಾರು? ನೀವ್ಯಾರು? ನೀವ್ಯಾವಕಡೆಯವ್ರು: ನೀವ್ಯಾವಕಡೆಯವ್ರು? ಎಂಬಂಥ ಪ್ರಶ್ನೆಗಳಿಗೂ; ನಾವಿಂಥವರು! ನಾವಿಂಥವರು ನಾವಿಂಥ ಕಡೆಯಿಂದ ಬಂದಿದ್ದೀವಿ! ನಾವಿಂಥ ಕಡೆಯಿಂದ ಬಂದಿದ್ದೀವಿ! ಎಂಬ ಉತ್ತರಗಳು; ಹೋಽಽ.. ಹ್ಹಾಂ! ಸಂತೋಷ.. ಎಂಬ ಉದ್ಗಾರಗಳು ಎಲ್ಲಿ ನೋಡಿದರೂ! ಎಲ್ಲಿ ಕಿವಿಚಾಚಿದರೂವೆ, ಬಸ್‌ಸ್ಟಾಂಡು, ರೈಲ್ವೆ ನಿಲ್ದಾಣಗಳಂಥ ಪುಣ್ಯಸ್ಥಳಗಳ ನಿವಾಸಿಗಳಾದ ಕೆಲವೊಂದು ಭಿಕ್ಷಕರೂ ಬಂದು ಯಪ್ಪಾ! ಯಮ್ಮಾ ಅಂಥ ಕೈ ಚಾಚದಿರಲಿಲ್ಲ. ಅವರಿಗೆ ಚಿಕ್ಕಾಸು ಕೊಡುತ್ತಿದ್ದವರೂ, ಕೊಡದೆ ಗದರಿಸುತ್ತಿದ್ದವರೂ ಭಾರತದ ರಾಜಕೀಯ ಆರ್ಥಿಕ ಸ್ಥಿತಿಗತಿಗಳಬಗೆಗೆ ಚರ್ಚಿಸುತ್ತಲೇ ತಮ್ಮ ಕೌಟಿಂಬಿಕ ಸಮಸ್ಯೆಗಳ ಬಗ್ಗೆ ಮಾತು ಎತ್ತಿಕೊಳ್ಳದೆ ಇರುತ್ತಿರಲಿಲ್ಲ. ಭಾರತದ ಆರ್ಥಿಕ ದುಸ್ಥಿತಿ ಬಗ್ಗೆ ಶ್ವೇತಪತ್ರ ಪ್ರಕಟಿಸಬೇಕೆಂದು ಪಟ್ಟು ಹಿಡಿದಿರುವ ವಿರೋಧಿ ಧುರೀಣ ಡೆಂಗರ್ಪೂರ್ ಕಡೆಗೆ ಕೆಲವರೂ; ಆಡಳಿತ ಪಕ್ಷದ ಆರ್ಥಿಕ ಮಂತ್ರಿ ಕೇವಲ್‌ನಾಥ್ ಸಿಂಗ್ ಕಡೆ ಕೆಲವರೂ ವಕಾಲತ್ತು ವಹಿಸಿ ಏರು ದನಿಯಲ್ಲಿ ಮಾತಾಡುತ್ತಿದ್ದುದು ಆ ನಾದಸ್ವರ ವಾದನಕ್ಕಿಂಥ ಒಂದು ಕೈ ಮಿಗಿಲಾಗಿತ್ತು. ಚರ್ಚೆ ಕಾವೇರಿದ್ದಾಗಲೀ ಕೈಯಲ್ಲಿ ಒಂದು ಪೆಂಡೆಹಾಳೆಯನ್ನು ಹಿಡಿದುಕೊಂಡು ಬಂದ ಯುವಕನೋರ್ವ ಕುಂಡಿ ಕಡೆ ಹರಿದಿದ್ದ ಪ್ಯಾಂಟಿನ ಕಡೆ ಷರ್ಟ್ ಎಳೆದುಕೊಳ್ಳುತ್ತಾ ಹಂಚತೊಡಗಿದ. ಅದು ‘ಆರ’ ಕಂಪನಿಯವರ ದೋಸೆಮಿಕ್ಸ್‌ಗೆ ಸಂಬಂಧಿಸಿದಾಗಿತ್ತು.

ಕೊಟ್ಟೂರು ಪ್ರಾಂತದ ಮುಖ್ಯ ಏಜೆಂಟನಾಗಿ ಸುರೇಶಗೌಡ ರೂಪಗೊಂಡಿರುವ ಸಂಗತಿ ಅದರಿಂದ ತಿಳಿದುಬಂತು. ಕರಪತ್ರ ಹಂಚುತ್ತಿದ್ದ ಹುಡುಗನ ತಾಯಿ ಗತಿಸಿದ ಶಿವಪೂಜೆ ಗೌಡರ ಗುಪ್ತ ಪ್ರೇಯಸಿಯಾಗಿದ್ದಳೆಂದು ಮಂದಿ ಗೊಣಗಿಕೊಂಡರು. ಕೊರಿಯಾ; ಚೀನಾ; ಜಪಾನ್ ದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಪ್ರತಿ ಸಾವಿರ ಚದುರ ಕಿಲೋಮೀಟರಿಗೊಂದರಂತೆ ಸಿಗುವ ಝನ್‌ಸಂಗ್ ಮೊದಲಾದ ದಿವ್ಯ ಔಷಧೀಯ ಸಸ್ಯ ಬೇರುಗಳ ಒಂದಂಶವನ್ನು ಬೆರೆಸಿರುವ ಈ ಹಿಟ್ಟಿನಿಂದ ದೋಸೆ ಮಾಡಿ ತಿಂದು ಹೊಸ ಯೌವನ ಪಡೆಯಿರಿ ಎಂಬುದನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸಲಾಗಿತ್ತು. ಅದನ್ನು ಓದಿ ಕೆಲವರು ಎಸೆದರೆ ಮತ್ತೆ ಕೆಲವರು ಅದನ್ನು ಮಡಚಿ ಕರೆನ್ಸಿ ನೋಟುಗಳ ನಡುವೆ ಇಟ್ಟುಕೊಂಡರು. ಅನಂತರ ಚರ್ಚೆ ಇನ್‌ಸ್ಟಂಟ್ ಫುಡ್ ಜನಪ್ರಿಯಗೊಳ್ಳುತ್ತಿರುವುದರ ಬಗ್ಗೆ ತಿರುಗಿತು. ಅಷ್ಟರಲ್ಲಿ ಧೂಳೆಬ್ಬಿಸಿಕೊಂಡು ಬಂದ ಕಾರಿನಿಂದ ಇಳಿದು ಸ್ಲೋ ಮೋಷನ್ನಿನಲ್ಲಿ ತಮ್ಮತ್ತ ಬಂದವರು ಅನಸೂಯ ಮತ್ತು ರಘುರಾಂ ಎಂದು ತಿಳಿಯಲು ಬಹಳ ಹೊತ್ತು ಹಿಡಿಯಲಿಲ್ಲ. ನೋಡಲಿಕ್ಕೆ ಹುದ್ದೆಯ ಸತಿಪತಿಗಳಂತಿದ್ದ ಅವರು ಮುಗುಳ್ನಗುತ್ತ ಹಲೋ ಹಲೋ ಅಂತ ಕೈಬೀಸುತ್ತ ಅವರಿಬ್ಬರನ್ನು ಮಾತಾಡಿಸುತ್ತ ಕ್ರಮೇಣ ತ್ರಿಮೂರ್ತಿಗಳಾದ ನಮ್ಮನ್ನು ಸೇರಿಕೊಂಡರು. ಆ ದಂಪತಿಗಳನ್ನು ನೋಡಿ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಪರಸ್ಪರ ಕ್ಷೇಮ ಹಂಚಿಕೊಂಡೆವು. ಬೀಗರು ಬಿಜ್ಜರನ್ನು ಕರೆತರಲು; ಬಿಟ್ಟು ಬರಲು ರಘು ತನ್ನ ಕಾರನ್ನು ಬಿಟ್ಟು ಕೊಟ್ಟ. ಅದು ಬೇಸರವಿಲ್ಲದಂತೆ ಊರತುಂಬ ತಿರುಗಾಡತೊಡಗಿತು. ‘ಅರ’ ಕಂಪನಿಯ ಪ್ರಧಾನ ನಿರ್ದೇಶಕರು ಬಂದಿರುವರೆಂಬ ಸುದ್ದಿ ತಿಳಿದು ಉಜ್ಜನಿ, ಹಡಗಲಿ, ಕೂಡ್ಲಿಗಿ, ಕೊತ್ತಲಗಿ ಕಡೆಯಿಂದ ಅದರ ಹಂಚಿಕೆದಾರರು ಬಂದಿದ್ದರು. ಪ್ರಾಡಕ್ಟನ್ನು ಜನಪ್ರಿಯಗೊಳಿಸುವ ಬಗ್ಗೆ, ಠೇವಣಿ ಬಗ್ಗೆ,; ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಅನುಲಕ್ಷಿಸಿ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ರಘು ಮತ್ತು ಠೇವಣಿದಾರರು ಚರ್ಚಿಸುವುದರಲ್ಲಿ ಮಗ್ನರಾದರು. ಅನಸೂಯ ತನ್ನ ಮನೆಗೆ ಹೋಗಿ ನೋಡಿಕೊಂಡು ಬಂದಳು. ಮಾಟಗಾರ ರುದ್ರನಾಯಕನ ಮನೆ ಎಂಬ ಕಾರಣಕ್ಕಾಗಿ ಅದು ಚಲಾವಣೆ ಕಳೆದುಕೊಂಡಿತ್ತು. ತಾವು ಓದಿಕೊಂಡ ನೆನಪಿಗೆ ಗಚ್ಚಿನಮಠ ಶಾಲೆಗೆ ಬಿಟ್ಟು ಕೊಡಬೇಕೆಂದು ದಂಪತಿಗಳು ನಿರ್ಧರಿಸಿ ಪತ್ರಬರೆದಿದ್ದರು ಎಂದು ಕಾಣುತ್ತದೆ. ಶಾಲೆಯ ಮೇನೇಜರಾದ ಹೊನ್ನೂರು ಸಾಹೇಬರು “ಏನಮ್ಮಾ ತಾಯಿ ಚೆನ್ನಾಗಿದ್ದೀಯಾ?” ಎಂದು ಬಂದು ಮಾತಾಡಿಸಿದರು. ಅವರಿಂದ ತಪ್ಪಿಸಿಕೊಂಡರೆ ಇನ್ನೊಬ್ಬರು! ಇನ್ನೊಬ್ಬರಿಂದ ತಾಪ್ಪಿಸಿಕೊಂಡರೆ ಮತ್ತೊಬ್ಬರು ಹೀಗಾಗಿ ಅನಸೂಯಾಗೆ ನಮ್ಮನ್ನು ಹೆಚ್ಚು ಮಾತಾಡಿಸಲು ಅವಕಾಶ ಸಿಗಲೇ ಇಲ್ಲ. ಸಿಕ್ಕ ಅವಕಾಶದಲ್ಲಿ ಕಥೆಗಳ ಬಗ್ಗೆ, ಒಮ್ಮೆಯಾದರೂ ಬೆಂಗಳೂರಿಗೆ ಬಂದು ಮಾತಾಡಿಸದಿರುವುದರ ಬಗ್ಗೆ ಮಾತಾಡಿದಳು. ಆ ಪಾದರಸದಂಥ ದಂಪತಿಗಳನ್ನು ಹೆಂಣಿನ ಕಡೆಯವರಾಗಲೀ ಗಂಡಿನ ಕಡೆಯವರಾಗಲೀ ಮಾತಾಡಿಸುವ ಸೌಜನ್ಯ ತೋರಿಸದಿದ್ದುದರಿಂದ ನಮಗೆಲ್ಲ ಬೇಸರವಾಯಿತು. ಮಧು ಮಕ್ಕಳನ್ನು ಕೂಡ್ರಿಸಿದ ಮೇಲೆ ದಂಪತಿಗಳೀರ್ವರೂ ಹೋಗಿ ಅಕ್ಷತೆ ಹಾಕಿದರು. ಕಾದ ಹೆಂಚಿನ ಮೇಲೆ ಚಡಪಡಿಸುವ ಚುಬ್ಬಿಯಂತೆ ತಲೆತಗ್ಗಿಸಿಕೊಂಡು ಕೂತಿದ್ದ ಶಾಮಣ್ಣ ಅವರನ್ನು ಮಾತಾಡಿಸುವ ಗೋಜಿಗೆ ಹೋಗಲಿಲ್ಲ. ಅನಸೂಯ ಅವನಿಗೊಂದು ಉಂಗುರವನ್ನು ಹಾಗೂ ವಧುವಿಗೆ ಒಂದು ರೇಶಿಮೆ ಸೀರೆಯನ್ನು ಆಯಿರು ಮಾಡಿ ಬಂದಳು. ಆದ ಬೇಸರ ಹೇಳದಿದ್ದರೂ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ತಮಗೆ ಕಾಟ ಕೊಟ್ಟ ನಿಘೂಡ ವ್ಯಕ್ತಿ ಶಾಮನೇ ಇರಬಹುದೆಂದು ಆಕೆ ಯೋಚಿಸಲಿಕ್ಕೆ ಅನುಕೂಲವಾಗುವಂತೆ ಶಾಮ ಸಫಾರಿ ತೊಟ್ಟಿದ್ದುದೂ ಆಕೆಯ ಬೇಸರಕ್ಕೆ ಒಂದು ಕಾರಣವಿರಬಹುದೆಂದುಕೊಂಡೆ. ನನ್ನ ಪತ್ರ ಓದಿ ಇದು ಹಿಪೋಕ್ರಿಟಿಕ್ನೊಬ್ಬ ಬರೆದದ್ದು ಎಂದು ಭಾವಿಸಿರುವಳೆಂದುಕೊಂಡೆ. ಆ ದಂಪತಿಗಳು ಊಟ ಮಾಡುವುದೊತ್ತಟ್ಟಿಗಿರಲಿ ಮದುವೆಮನೆಯಲ್ಲಿಒಂದು ಕಪ್ಪು ನೀರು ಸಹ ಕುಡಿಯದೇ ಕಾರು ಹತ್ತಿದರು. ಅವರು ಅದಕ್ಕೆಲ್ಲ ಕರೆದರೆ ತಾನೆ? ಇದರಿಂದ ತ್ರಿಮೂರ್ತಿಗಳಾದ ನಮಗೂ ಬೇಸರವಾಯಿತು. ಒಬ್ಬೊಬ್ಬರು ಒಂದೊಂದು ನೆಪ ಹೇಳಿ ತಪ್ಪಿಸಿಕೊಂಡು ಹೊರಟು ನಮ್ಮ ನಮ್ಮ ಮನೆ ಸೇರಿದೆವು.

ಮದುವೆ ಆಯಿತು ಎಲ್ಲಾ ಆಯಿತು. ಇನ್ನು ನನಗೇನು ಕೆಲಸ ಕೊಟ್ಟೂರಿನಲ್ಲಿ? ಅಲ್ಲದೆ ಜಗನ್ನಾಥರೆಡ್ಡಿಯವರು ಹೇಳಿದ ಪ್ರಕಾರ ಬಂದಿದ್ದರೆ ಜೀವಕ್ಕೆ ಒಂದಿಷ್ಟು ನೆಮ್ಮದಿ ಇರುತ್ತಿತ್ತು. ಮದುವೆ ಮನೆಯಲ್ಲಿ ಊಟ ಮಾಡದೆ ಬಂದಿದ್ದ ನನ್ನ ಬಗ್ಗೆ ನಿಂಗಮ್ಮಜ್ಜಿಗೆ ತುಸು ಗೌರವ ಹೆಚ್ಚಿ ನನ್ನ ಮೊಮ್ಮಗ ಅಂದ್ರೆ ಹೀಗಿರಬೇಕು ಎಂಬಂಥ ಮಾತುಗಳನ್ನು ಆಡಿಕೊಂಡಿತು. ಜೊತೆಗೆ “ನಿನ್ನ ಮದ್ವಿ ನೋಡ್ತೀನೋ ಇಲ್ಲಾ ಹಂಗೇ ಕಣ್ಮುಚ್ತೀನೋ” ಎಂದು ನಿಟ್ಟುಸಿರು ಬಿಟ್ಟಿತು. ನಾನು ಅವರನ್ನು ಅವರ ಪಾಡಿಗೆ ಬಿಟ್ಟು ಒಂದು ದಿನ ಬಳ್ಳಾರಿ ಕಡೆ ಹೋಗುವ ಬಸ್ಸು ಹತ್ತಿದೆ.

*
*
*
ನನ್ನ ಗೈರುಹಾಜರಿಯಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ವಾಗಿಲಿ ಎಂಬ ಗ್ರಾಮವು ನೀರಲ್ಲಿ ಅದ್ದಿದ ಸುಣ್ಣದ ಭಟ್ಟಿಯಂತಾಗಿತ್ತು. ಆ ಘಟನೆಗಳಿಂದ ಯಾರೊಬ್ಬರು ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಯಾರ ಎದೆಯಲ್ಲಿ ಏನಿಟ್ಟುಕೊಂಡಿದ್ದಾರೋ ಎಂಬ ಭಯ ನಿರ್ಭಯವಾಗಿ ತಾಂಡವವಾಡತೊಡಗಿತ್ತು. ಯಾರೂ ಒಂಟಿಯಾಗಿ ಮಲಮೂತ್ರ ವಿಸರ್ಜನೆಗೆಂದು ಹೊರಗೆ ಹೋಗುತ್ತಿರಲಿಲ್ಲ. ಸಂಜೆಯಾಯಿತೆಂದರೆ ಕೂಡಲೆ ಎಲ್ಲರೂ ತಂತಮ್ಮ ಗೂಡುಗಳನ್ನು ಸೇರಿಕೊಂಡು ಬಿಡುತ್ತಿದ್ದರು. ಜಗನ್ನಾಥರೆಡ್ಡಿಯವರ ಪ್ರೇತ ಊರಲ್ಲಿ ತಿರುಗಾಡುತ್ತಿದೆ ಎಂಬುದೇ ಅವರ ಭಯಕ್ಕೆ ಕುಮ್ಮಕ್ಕು ಕೊಟ್ಟಿತ್ತು. ಅಮವಾಸೆಯ ಹಿಂದಿನ ದಿನವೇ ರೆಡ್ಡಿಯವರು ಬಡಗೇರ ಚನ್ನಪ್ಪಾಚಾರಿ ಮತ್ತು ರಾಗಪ್ಪನವರಿಗೆ ಒಂದು ಜೀಪು ಹತ್ತುವಂತೆ ಹೇಳಿದರಂತೆ. ಅವರಿಬ್ಬರು ಅಸ್ವಸ್ಥತೆಯ ಕಾರಣ ಹೇಳಿ ತಪ್ಪಿಸಿಕೊಂಡರಂತೆ. ಅದರ ಬದಲಿಗೆ ತಾನು ಬರುವುದಾಗಿ ಹೇಳಿದ ರಾಮಕ್ರಿಷ್ಣಾರೆಡ್ಡಿಗೆ ಮನೆಯ ಉಸ್ತುವಾರಿ ವಹಿಸಿಕೊಟ್ಟು ತನ್ನ ಬಲಗೈ ಭಂಟನಾದ ಅಕ್ಬರು, ಚಂದ್ರರ, ಲಸುಮರನ್ನು ಕರೆದುಕೊಂಡು ಜೀಪು ಹತ್ತಿದರಂತೆ. ಇವತ್ತೊಂದಿನ ಮನೆ ಬಿಟ್ಟು ಹೋಗಬೇಡಿ ನನಗ್ಯಾಕೋ ಭಯಾ ಅಗ್ತಿದೆ ಎಂದು ತಡೆಯಲೆತ್ನಿಸಿದ ಹೆಂಡತಿಗೆ ತಮ್ಮ ಸೊಂಟದಲ್ಲಿ ತುಂಬಿರುವ ಪಿಸ್ತೂಲಿರುವಾಗ ಯಾಕೆ ಭಯ? ಎಂದು ಧೈರ್ಯ ಹೇಳಿದರಂತೆ.

ಸಾಮಾನ್ಯವಾಗಿ ರೆಡ್ಡಿಯವರು ಎಲ್ಲಿಗೇ ಹೊಗಲಿ ಎಲ್ಲಿಂದಲೇ ಬರಲಿ ಇಂಥ ಕಡೆ ಹೋಗುತ್ತೇವೆ, ಇಂಥ ಕಡೆಯಿಂದ ಬರುತ್ತೇವೆ ಎಂದು ಯಾರಿಗೂ ಹೇಳುವುದಿಲ್ಲ. ಅದೇ ರೀತಿ ಅವರು ಕರ್ನೂಲಿಗೆ ಹೋಗುತ್ತಿರುವುದಾಗಿ ಕಳೆದೆರಡು ದಿನಗಳಿಂದ ಸುದ್ದಿ ಮಾಡಿದ್ದವರು ಅವರು ಹೊರಟಿದ್ದು ಪುಲಿವೆಂದುಲದ ಮೂಲಕ ಬಳ್ಳಾರಿ ಕಡೆಗೆ. ಸಾಮಾನ್ಯವಾಗಿ ಅವರು ದೂರ ಹೋಗಬೇಕೆಂದಾಗ ತಮ್ಮ ಕುಲ ದೈವವಾದ ಚಿನ್ನೋಬಳಂನ ನರಸಿಂಹ ಸ್ವಾಮಿ ದೇವರಿಗೆ ಕಾಯಿ ಕರ್ಪೂರ ಮಾಡಿಸದೇ ಇರುವುದಿಲ್ಲ. ತಮ್ಮ ಹಿರಿಯರೇ ಕಟ್ಟಿಸಿದ್ದ ಗೋಪುರದ ಹಿಂಭಾಗದ ಗರ್ಭಗುಡಿಯಲ್ಲಿ ಓರಂಗಲ್ ಪ್ರತಾಪರುದ್ರ ಗಜಪತಿ ಮಹಾರಾಜರ ಕಾಲದಿಂದಲೂ ನೆಲೆಗೊಂಡಿರುವ ನರಸಿಂಹದೇವರೆಂದರೆ ಹಿರಣ್ಯಕಶ್ಯಪನನ್ನು ಕೊಂದ ವಿಷ್ಣುವಿನ ನರಸಿಂಹಾವತಾರವಲ್ಲ, ಕ್ರಿಸ್ತಶಕ ಹದಿನಾಲ್ಕುನೂರು ತೊಂಬತ್ತರಲ್ಲಿ ಕೇರಳದಿಂದ ಆದಿವಿಷ್ಣುವಿನ ದರ್ಶನಾಕಾಂಕ್ಷಿಯಾಗಿ ಶ್ರೀಕಾಕುಳಂ ಕಡೆ ಪಾದಯಾತ್ರೆ ಹೊರಟಿದ್ದ ಶ್ರೀಮಂತ ಬ್ರಾಹ್ಮಣನೋರ್ವನ ಮೇಲೆ ಮತ್ತಾತನ ಕುಟುಂಬ ವರ್ಗದ ಮೇಲೆ ದರೋಡೆಕಾರರ ತಂಡವೊಂದು ಮರಣಾಂತಿಕವಾಗಿ ಧಾಳಿ ಮಾಡಿತು. ಎಲ್ಲರೂ ಕೊಲೆಯಾದರು. ಆದರೆ ಕೊನೆ ಉಸಿರು ಬಿಡುವ ಮುನ್ನ ಬ್ರಾಹ್ಮಣ ಪುಟ್ಟ ಪೆಟ್ಟಿಗೆಯಿಂದ ಒಂದು ಸಾಲಿಗ್ರಾಮವನ್ನು ಹೊರತೆಗೆದು ದರೋಡೆಕಾರರ ಗುಂಪಿನ ನಾಯಕನ ಕೈಗೆ ಕೊಡುತ್ತ ಇದನ್ನು ಭಕ್ತಿ ಶ್ರದ್ದೆಯಿಂದ ದಿನಂಪ್ರತಿ ಪೂಜೆ ಮಾಡು ಸಕಲ ಪಾಪ ಪರಿಹಾರವಾಗುತ್ತದೆ ಎಂದುಹೇಳಿ ಕೊಟ್ಟು ಪ್ರಾಣ ಬಿಟ್ಟನಂತೆ. ಆದರೆ ಆ ನಾಯಕ ಆ ಸಾಲಿಗ್ರಾಮವನ್ನು ಬೆಟ್ಟದ ತುದಿಯಿಂದ ಪೂರ್ವ ದಿಕ್ಕಿನತ್ತ ಎಸೆಯಲು ಅದು ಗಾಳಿಗುಂಟ ಐವತ್ತು ಹರದಾರಿ ಪ್ರಾಯಾಣ ಮಾಡಿ ಚಿನ್ನೋಬಳಂ ಬಳಿ ಜುಳು ಜುಳು ಹರಿಯುತ್ತಿದ್ದ ಹಂದ್ರಿ ನದಿಯ ದಡದಲ್ಲಿ ಬಿದ್ದಿತಂತೆ. ಅದು ಒಂದೊಂದು ಸಂದರ್ಭದಲ್ಲಿ ಒಂದೊಂದು ರೂಪ ಪ್ರಕಟಗೊಳ್ಳುತ್ತಿರಲು ಚಿನ್ನೊಬಳಂನ ಶತಾವಧಾನಿ ಶಿವರಾಮ ಶರ್ಮರು ಅದನ್ನು ಪ್ರತಿಷ್ಟಾಪಿಸಿ ಚಿಕ್ಕ ಗುಡಿ ಕಟ್ಟಿಸಿ ಸೇವಾಕೈಕರ್ಯ ಮಾಡಿದರಂತೆ. ನಂತರ ಚಕ್ರವರ್ತಿಗಳು; ಸಾಮಂತರು ಗುಡಿ ಗುಂಡಾರ ಕಟ್ಟಿಸಿ ನರಸಿಂಹದೇವರೆಂದು ಕರೆದು ಅದನ್ನು ಪ್ರಸಿದ್ಧಿಗೆ ತಂದರಂತೆ. ತನ್ನ ಮೆಚ್ಚಿನ ಭಕ್ತನ ಕೊಲೆ ಮೇಲಿನ ಸೇಡು ತೀರಿಸುವುದಕ್ಕೆಂದೋ ಏನೋ ನರಸಿಂಹ ದೇವರು ಇದುವರೆಗೆ ನಡೆದುಕೊಂಡವರನ್ನೂ ಬಿಟ್ಟಿಲ್ಲ, ನಡೆದುಕೊಳ್ಳದವರನ್ನೂ ಬಿಟ್ಟಿಲ್ಲ . ಅವರಿಗೆ ಅವರನ್ನು ಇವರಿಗೆ ಇವರನ್ನು ಬಲಿ ಕೊಡುತ್ತ ರಕ್ತ ತರ್ಪಣ ಮಾಡಿಸಿಕೊಳ್ಳುತ್ತ ಆಳುವ ವರ್ಗಗಳಲ್ಲಿ; ಜಮೀನ್ದಾರಿ ವರ್ಗಗಳಲ್ಲಿ ಹೆಚ್ಚು ಜನಪ್ರಿಯಗೊಂಡಿರುವ ನರಸಿಂಹದೇವರ ದರ್ಶನಾಕಾಂಕ್ಷಿಗಳಾಗಿ ವಾಗಿಲಿಯ ಜಗನ್ನಾಥ ರೆಡ್ಡಿಯವರು ಹೋದರೆಂದರೆ ಆಶ್ಚರ್ಯ ಪಡಬೇಕಿಲ್ಲ ಹಾಗೆ ಹೋಗಿ ಪೂಜೆ ಮಾಡಿಸಿ ಮಂಗಳಾರತಿ ತಟ್ಟೆಗೆ ನೂರು ಒಂದು ದಕ್ಷಿಣೆ ಹಾಕಲು ನರಸಿಂಹ ದೇವರು ಬಲ ಭುಜದ ಮೇಲಿಂದ ಆಶೀರ್ವದಿಸಿ ಶುಭ ಹಾರೈಸಿದರಂತೆ. ಇದರಿಂದ ಸುಪ್ರೀತರಾದ ಜಗನ್ನಾಥ ರೆಡ್ಡಿಯವರು ತಂಗರದೋಣಿಯ ತಮ್ಮಾರೆಡ್ಡಿ ತಿಂಗಳೊಪ್ಪತ್ತಿನಲ್ಲಿ ಸತ್ತರೆ ರುದ್ರಾಭಿಷೇಕ ಮತ್ತು ಅನ್ನ ಸಂತರ್ಪಣೆ ಮಾಡಿಸುವುದಾಗಿ ಕೈ ಮುಗಿದು ಬೇಡಿಕೊಂಡು ಪ್ರಾಯಣ ಬೆಳೆಸಿದರಂತೆ, ಕೊಂಡವೀಡು ಪರ್ವತ ಶ್ರೇಣಿಯ ಕಲ್ಲುದುಂಡೆಗಳನಡುವೆ ಹೋಗುತ್ತಿದ್ದಾಗ ಯಾರೋ ನಾಡಬಾಂಬುಗಳನ್ನೆಸದರಂತೆ, ತಮ್ಮಾರೆಡ್ಡಿ ಮೇಸೆ ತಿರುವುತ್ತಿರುವುದನ್ನು ನೋಡುತ್ತಲೆ ಜಗನ್ನಾಥರೆಡ್ಡಿ ಪ್ರಾಣ ಬಿಟ್ಟರಂತೆ.

ಇಷ್ಟೆಲ್ಲ ಹೇಳಿ ಗುರಪ್ಪ ನಿಟ್ಟುಸಿರು ಬಿಟ್ಟ. ನನಗೆ ಒಂದೆರಡು ದಿನ ಕೂಳು ನೀರು ಸೇರಲಿಲ್ಲ. ರೆಡ್ಡಿಯವರ ಮಗಳು ಪುಷ್ಪಾವತಿ ತಮ್ಮಾರೆಡ್ಡಿಯ ಮಗ ವೆಂಕಟರೆಡ್ಡಿಯೊಂದಿಗೆ ಹೋಗಿರುವಳಂತೆ. ಮಾನಪ್ಪಾಚಾರಿ, ರಾಘಪ್ಪಾಚಾರಿ ತಂಗರದೋಣಿಗೆ ಹೋಗಿ ತಲೆಮರೆಸಿಕೊಂಡಿರುವರಂತೆ. ರೆಡ್ಡಿಯವರ ಹಿರಿಯ ಮಗ ಪುರುಷೋತ್ತಮರೆಡ್ಡಿ ತಮ್ಮ ತಂದೆಯವರ ಸಮಾಧಿ ಮೇಲೆ ಉಡುದಾರ ಬಿಚ್ಚಿಟ್ಟು ತಾನು ತಮ್ಮಾರೆಡ್ಡಿಯನ್ನು ಕಡಿಯುವವರೆಗೆ ಉಡುದಾರ ಕಟ್ಟುವುದಿಲ್ಲ ಮತ್ತು ಗಡ್ಡ ಮೀಸೆ ತೆಗೆಯುವುದಿಲ್ಲವೆಂದು ಶಪಥ ಮಾಡಿರುವನಂತೆ. ಇಂಥ ಸುದ್ದಿಗಳಿಂದಾಗಿ ಇಡೀ ಗ್ರಾಮವೇ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡಿರುವುದು. ಸಹಜ ಬದುಕನ್ನು ಮರೆ ಮಾಚಿರುವುದು, ಊರೊಳಗೆ ಹತ್ತೆಂಟು ಮಂದಿ ಪೋಲೀಸರು ಟೆಂಟ್ ಹಾಕಿ ಗಸ್ತು ತಿರುಗುತ್ತಿರುವುದರಿಂದ ಮಕ್ಕಳು ಮರಿ ಬಾರದೆ ಸ್ಕೂಲೆಂಭೋ ಸ್ಕೂಲು ಬಿಕೋ ಎನ್ನುತ್ತಿರುವುದು. ಇಂಥ ಬಿಕೋ ವಾತಾವರಣದಲ್ಲಿ ಉಸಿರುಗಟ್ಟಿ ಕೂತಿದ್ದ ನನ್ನನ್ನು ಪೀಸಿ ಸಲೀಮ್ ಕರೆದು ಕೊಂಡು ಹೋಗಿ ಎಸೈಯವರಿಗೆ ಪರಿಚಯ ಮಾಡಿಸಿದ. ಮಾತಾಡ್ತಾ ಮಾತಾಡ್ತಾ ಅವರು “ನೀವು ಲೇಖಕರೆಂದರೆ ಯಾವ ನಮೂನೆ ಲೇಖಕರು, ಎಡಾನೋ ಬಲಾನೋ? ಎಂದು ಮಂಕಾಗಿ ಕೇಳಿದರು. ತಾವೂ ಒಂದಾನೊಂದು ಕಾಲದಲ್ಲಿ ನಕ್ಸಲೈಟರ ಗುಂಪಿನಲ್ಲಿದ್ದು ಕೆಲಸ ಮಾಡಿದುದಾಗಿ ಹೇಳಿದರು. ನಾನೂ ಹ್ಹೂಂ ಗುಟ್ಟುತ್ತ ಕೇಳುತ್ತಿದ್ದೆ. ಕಾಮ್ರೇಡ್ ಗಣಪತಿ ಫ್ಯಾನ್ ಕಣ್ರೀ ನಾನು ಅವ್ರೆಲ್ಲಿದ್ದಾರಂತ ನಿಮ್ಗೇನಾದ್ರು ಗೊತ್ತಿದ್ರೆ…” ಎಂದು ರಾಗ ಎಳೆದರು. ಗಣಪತಿಯನ್ನು ನಾನು ಒಂದೆರಡು ಬಾರಿ ಬೆಟ್ಟಿಯಾಗಿದ್ದೆ. ಆತ ಲಕ್ಷ್ಮಿ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಕಥೆಗಳೆಂದರೆ ನನಗೆ ತುಂಬ ಇಷ್ಟ. ಆತ ಆಂಧ್ರದ ಪೋಲಿಸ್ ವ್ಯವಸ್ಥೆಗೆ ತಲೆನೋವಾಗಿವವನು. ಆತನ ತಲೆಗೆ ಒಂದು ಲಕ್ಷ ಬಹುಮಾನವನ್ನು ಸರಕಾರ ಘೋಷಿಸಿರುವುದು. ಎಸೈ ನನ್ನ ಮೇಲೆ ಬೀಸಲೆತ್ನಿಸಿದ ಬಲೆಗಳೆಲ್ಲ ವಿಫಲವಾದವು. ಏನೋ ಒಂದು ಹೇಳಿ ತಪ್ಪಿಸಿಕೊಂಡು ಹೊರಬಂದೆ. ನಾವಿಲ್ಲಿ ಈ ಪ್ರಕಾರವಾಗಿ ಗೋಳಾಡುತ್ತಿರುವ ಸಂಧರ್ಬದಲ್ಲಿ ಶಾಮ ನೆನಪಾಗದೆ ಇರಲಿಲ್ಲ. ಅವನು ಹೆಂಡತಿಯೊಂದಿಗೆ ಹನಿಮೂನ್‌ಗೆ ಹೋಗಿಬಂದಿರಬಹುದು ಈಗಾಗಲೆ ಎಂದುಕೊಂಡೆ. ಒಟ್ಟಿನಲ್ಲಿ ಅವನು ಒಂದು ರೀತಿ ಸಂತೃಪ್ತ ಬದುಕು ಅನುಭವಿಸುತ್ತಿದ್ದರಷ್ಟೆ ಸಾಕು ಎಂದುಕೊಂಡೆ. ಬಹಳ ದಿನ ನಾನು ಊರಕಡೆ ಸುಳಿಯಲಿಲ್ಲ. ವರ್ಗಾವಣೆಗೆ ಅವರಿವರ ಕೈ ಕಾಲು ಕಟ್ಟಿ ಅಂತೂ ಯಶಸ್ವಿಯಾದೆ. ವಾಗಿಲಿಯಿಂದ, ಈ ಕಾದಂಬರಿ ಬರೆಯುತ್ತಿರುವ ಗ್ರಾಮಕ್ಕೆ ವರ್ಗವಾಗಿ ಬಂದು ಹತ್ತು ವರ್ಷದ ಮೇಲಾಯಿತು ಎಂಬಲ್ಲಿಗೆ ಕುಂವೀ ಎಂಬ ಹುಲುನರವಿರಚಿತ ಶಾಮಣ್ಣ ಎಂಬ ಕಥಾನಕದ ತೃತೀಯಶ್ವಾಸಂ ಸಮಾಪ್ತಿಯಾದುದು.

ಜಯಮಂಗಳಂ ನಿತ್ಯ ಶುಭ ಮಂಗಳಂ
*****
ಮುಂದುವರೆಯುವುದು

ಕೀಲಿಕರಣ: ಎಂ ಎನ್ ಎಸ್ ರಾವ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.