ಕ್ಲಾಸ್ಟ್ರೋಫೋಬಿಕ್

ಚೌಕಟ್ಟು ಅಡಿಗೆ ಮನೆ, ಹಾಲು, ಮಲಗುವ ಕೋಣೆ ನೀಟು ಚೌಕಟ್ಟು ಮಂಚ…ಹಾಸಿಗೆ…ಹೊದಿಕೆ. ಚಚ್ಚೌಕ ಓದುವ ಪುಸ್ತಕ ಮೇಜು ಕುರ್ಚಿ ….ಆಲೋಚನೆಯಧಾಟಿ! ಎಲ್ಲಕ್ಕೂ ಒಂದೊಂದು ಚೌಕಟ್ಟು. ಬಾಗಿಲು, ಸೂರು, ಗೋಡೆ…. ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು […]

ಬರಬಾರದು ಹೀಗೆ ನೀವು

ಬರಬಾರದು ಹೀಗೆ ನೀವು ನಮ್ಮೊಳಗೆ, ನವಿಲ ಗರಿಯೊಳಗೆ ಬಂದ ನೀಲಿ ಕಣ್ಣಂತೆ. ಮಾತನಾಡಲಿಲ್ಲ ನಾವು ಎಂದೂ ಹತ್ತಿರ ಕೂತು ಹೊತ್ತು ಕಳೆದಿಲ್ಲ ಆದರೂ ಕೇಳುತ್ತದೆ ಎದೆಬಡಿತ ಮಳೆಗೆ ಮುಂಚೆ ಸಿಡಿಲು ಹೊಡೆದಂತೆ. ಮೋಹಕ್ಕೆ ಸಾವಿರ […]

ಅಂಥವರಲ್ಲ ಇಂಥವರು

ಅವರು ಹೀಗಿರುವುದು ನಮ್ಮ ಅದೃಷ್ಟ, ಹೀಗಿರದೇ ಹಾಗೆ – ’ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! ಬೇಕಾದ್ದು ಮಾಡಬಹುದು ಎಂದೂ ಏನೂ ಅಂದಿಲ್ಲ. ಅದನ್ನೆಲ್ಲ ತಿಳಿಯವ ಆಸಕ್ತಿಯೂ ಅವರಿಗಿಲ್ಲ, ಪುರಸೊತ್ತ೦ತು ಮೊದಲೇ ಇಲ್ಲ. […]

ಅಹಮದಿಗೆ

ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ ನಿಟ್ಟುಸಿರು ಬಿಟ್ಟಹಾಗೆ ಮುಸುಮುಸು ಅಳುವ ಗಾಳಿ. ಬಾಗಿಲಿಂದಾಚೆ ಅವನು ಹೋಗುತ್ತಾನೆ. ಮತ್ತದೇರೀತಿ; ಕತ್ತಲಾಗುತ್ತದೆ. ಎಂದಿನಂತೆ ಅಂದೂ, ಕೈತೋಟದ ಹೂಗಳರಳಿ, ಏನೋ ಹೊಸದು ಆಗೇಬಿಡುವುದೋ […]

ಕಿವಿ ಮಾತು

ನಿನ್ನ ಕಿವಿಯಾಗೊಂದು ತುರ್ತು ಮಾತು ಹೇಳಿರತೀನಿ ಏನ ಮಾತು ತೆಗೆ ಅಂತ ಅನಬ್ಯಾಡಣ್ಣಾ. ಅಂದರೂ ಅನವೊಲ್ಲ್ಯಾಕೆ ಕಿವಿಬಾಗಲಾ ಕಾಯತಿರಲಿ ಬಿಟ್ಟು ಬಿಡು ಅಲ್ಲೇ ಅದನ್ನ ಅರ್ಧ ತಾಸ. ಜಾಸ್ತಿ ಹೊತ್ತು ಬಿಟ್ಟಿರಬ್ಯಾಡ ತೂಕಡಿಸೀತು ಏನ […]

ಕನ್ನಡಿಯೇ ಕನ್ನಡಿಯೇ

ಕನ್ನಡಿಯೆ ಕನ್ನಡಿಯೆ ಕಣ್ಣಿವೆಯೆ ನಿನಗು? ಇಲ್ಲವೆ|ಕನ್ನಡಿಯಾಗಿವೆಯೆ ನನ್ನ ಕಣ್ಣು? ನೀ ನೋಡುತಿರುವೆಯ ನನ್ನ? ಇಲ್ಲವೆ| ನಾ ನೋಡುತಿರುವೆನೆ ನಿನ್ನ? ನಾ ನಿನ್ನ ಬಿನ್ಬವೋ? ನೆರಳೊ? ಇಲ್ಲವೆ|ನೀ ನನ್ನ ಬಿಂಬವೊ? ನೆರಳೊ? ನಾನಿರದೆ ನೀನಿಲ್ಲ ಹೌದೆ? […]

ನೀರು

ಗೆರೆಯಿಂದ ಕೊರೆದಿಡಲಾದೀತೇ ನೀರನ್ನ? ಗೆರೆಯ ಬರುವುದರೊಳಗೆ, ನೀರು ಕರಗಿ ಸ್ಪೇಸಾಗಿ ತೇಲಿ, ಮಳೆಯಾಗಿ ಸುರಿದು, ನದಿಯಾಗಿ ಹರಿದು, ಕಾಲನ ಇರಿದು ಅಲೆ‌ಅಲೆ ರಿಪೀಟಾಗಿ ಹಾಳು ಹಾಳಿನ ಮೇಲೆ ಹಾಡಿನ ಬಳ್ಳಿ ಹಬ್ಬಿಸುತ್ತ ಮತ್ತೆ ನೀರಾಗುವುದರೊಳಗೆ […]

ಕಾಂತನಿಲ್ಲದ ಮ್ಯಾಲೆ

ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ ಗಂಧಲೇಪನವ್ಯಾತಕೆ! ಈ ದೇಹಕೆ|| ಮಂದಮಾರುತ ಮೈಗೆ ಬಿಸಿಯಾದವೇ ತಾಯಿ ಬೆಳದಿಂಗಳೂ ಉರಿವ ಬಿಸಿಲಾಯಿತೇ ನನಗೆ ಹೂಜಾಜಿ ಸೂಜಿಯ ಹಾಗೆ| ಚುಚ್ಚುತಲಿವೆ|| ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ ಉಸಿರಿನ ಬಿಸಿ ಅವಗೆ ತಾಗದೆ […]

ಕರಿ ಹೈದ

– ೧ – ಮೊದಮೊದಲು ಹೀಗಿರಲಿಲ್ಲ ಈ ಕರಿಹೈದ. ತುಂಬ ಸಂಕೋಚದವ. ನೋಡಿದರೆ ಬಾಡಿ ಮೂಲೆಯಲ್ಲಿ ಮುದುಡುತ್ತಿದ್ದ. ಮಾತಿಗೊಮ್ಮೆ ತಪ್ಪಿತಸ್ಥರ ಹಾಗೆ ಹಸ್ತ ಹೊಸೆಯುತ್ತಿದ್ದ. ಯಾರೋ ನೆಂಟರ ಪೈಕಿ; ಕೈತುಂಬ ಕೆಲಸದ, ತಲೆತುಂಬ ಯೋಚನೆಯ […]

ಆಮೇಲೆ ಗೋಡ್ಸೆ ಹೇಳಿದ್ದು

ನೀನು ರಾಕ್ ಹಕ್ಕಿಯೆಂದು ನನಗೆ ಗೊತ್ತಾಗಿತ್ತು. ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹಕದೃಷ್ಟಿ ಬೀಳದಲ್ಲಿ ಜೋಪಾನ ಬಚ್ಚಿಟ್ಟು ಬಲಿತು ನಡೆವನಕೆ ಕಾಪಿಟ್ಟು ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ ಪವಾಡ ಮಾಡುವಿಯೆಂದು ತಿಳಿದಿತ್ತು. ಹಳೆಜಿಡ್ಡು ಕಳೆದ ಹೊಸ […]