ನದಿಯ ನೀರಿನ ತೇವ – ಮುನ್ನುಡಿ

ನಾನು ಹೇಳಬೇಕಾದ್ದು ನನ್ನ ಮೊದಲ ಕವನ ಸಂಕಲನ ‘ಕಾಡನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾದ ನಂತರ ನಾನು ಕವನ ಕಟ್ಟಲು ಬಳಸುತ್ತಿದ್ದ ಬರವಣಿಗೆಯ ಶೈಲಿಯನ್ನು ತೊರೆದು ಬೇರೆಯೇ ರೀತಿಯಲ್ಲಿ ಪದ್ಯ ಬರೆಯಬೇಕೆಂದು ಪ್ರಯತ್ನಿಸುತ್ತಿದ್ದೆ. ಬಹಳ skillful […]

………. – ೧೩

ಹೀಗೆ, ಹಾಳೆಯ ಮೇಲೆ ‘ಹಾಡು’ ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ….. ಹಾಡು! ಈಗ ಹಾಳೆಯ ಮೇಲೆ ಹಾಡು […]

………. – ೧೨

ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ ‘ತಿಳಿ’ ನೀರು ತಳ ಕಾಣುವ ಹಾಗೆ ‘ಝುಳು-ಝುಳು’ ಅದರ ಸದ್ದು, ‘ಚಿಮ್ಮುವ’ ಅಲೆ, ‘ತಣ್ಣಗೆ’ ಗಾಳಿ. ನದಿಗೆ ನೆರಳು ದಡದ ಮರ, ನೀರ ಜೊತೆ ನಿಂತಲ್ಲೇ ಹರಿವ […]

ಹೊಳೆ ಬಾಗಿಲಲ್ಲಿ ಒಂದು ಹುಣ್ಣಿಮೆಯ ರಾತ್ರಿ

ಕಣ್ಣಂತೆ, ಅಲ್ಲೊಂದು ಹರಿಯೊ ನದಿಯಂತೆ ಬಣ್ಣ ಬಣ್ಣದ ಕನಸು ಮೀನಂತೆ ಕಪ್ಪು ನದಿಯ ಎದೆಯಲ್ಲಿ ಫಳ ಫಳ ನಕ್ಷತ್ರ ಜಾತ್ರೆ ತಾರೆ ಸಹಿತ ಧುಮುಕಿ ನದಿ ಸೇರಿದ್ದಾನೆ ಚಂದ್ರ ಆಕಾಶಕ್ಕೇ ಹುಟ್ಟು ಕೊಟ್ಟು ಚಂದ್ರನ […]

………. – ೧೧

ನೀರಿನ ತುಂಬ ಮೋಡ ಮೋಡದ ಮೇಲೆಲ್ಲ ಅಲೆ ಅಲೆಯಾಗಿ ಹರಿವ ಮೀನು ಮೋಡದೊಳಗೆ ಗುಡುಗು, ನೀರಲ್ಲಿ ಸುಳಿ ಮಿಂಚು ನದಿಯ ತಳದಲ್ಲೊಂದು ಕಥೆ ನದಿಯ ಮುಖದಲ್ಲಿ ನಗುವ ತರಂಗಗಳು. *****

ಆನ್ ಓಡ್ ಟು ಸಾಸ್ಯೂರ್‍ ಅಂದರೆ,

ಸಸ್ಯೂರ್‌ನಿಗಾಗಿ ಬರೆದ ಕಿರುಗೀತೆ ಎಂದಲ್ಲ ‘ಮರ’ಕ್ಕೆ ಮರವೆನ್ನದೆ ಸುಮ್ಮನೆ ಬೇರೇನೋ ಕರೆದಿದ್ದರೆ, ‘ಮರ’ ಬೇರೇನೋ ಆಗಿರುತ್ತಿತ್ತು. ಅದನ್ನು ‘ಆಕಾಶ’ ಎಂದು ಕರೆದಿದ್ದರೆ, ಅದು ಮೂರಕ್ಷರದ ಮರವಾಗಿ; ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. ಹುಡುಗಿಯರಿಗೆ ಸುಮ್ಮನೆ […]

………. – ೧೦

ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****

………. – ೯

ಸೂರ್‍ಯ ಬಲ್ಬಿನ ಯುಗದಲ್ಲೂ ದೀಪಾವಳಿಗೊಮ್ಮೆ ಮಣ್ಣಿನ ಹಣತೆ ಮನೆಸುತ್ತ; ಬಣ್ಣ ಬಣ್ಣದ ಮೋಂಬತ್ತಿ ಸಾಲು ಹಬ್ಬ ಹಳೆಯದಾದರೂ ಬೆಳಕು ಮಾತ್ರ ವಸಾಹತುಶಾಹಿಗೆ ಬದ್ಧ. *****

………. – ೮

ಹನ್ನೆರಡು ಅಂಕಿಗಳ ಮಂಡಲದಲ್ಲಿ ಹಿಡಿದಿಟ್ಟ ಹಗಲು ರಾತ್ರಿಗಳು ಕತ್ತಲೆ ಬೆಳಕು ನೆನ್ನೆ ನಾಳೆಗಳಿಗೆ ಅವಕಾಶ ಗೋಲಾಕಾರ ಸಮಯ ಕಾಲಾತೀತ. ಡಿಜಿಟಲ್ ಗಡಿಯಾರದಲ್ಲಿ ಕಾಲಕ್ಕೆ ರೂಪವೇ ಬೇರೆ. *****