ಮಾತಿನ ಗುಟ್ಟು

`ಮಯೂರ’ ಕ್ಕಿಂತ `ಸುಧಾ’ ವಾಸಿಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟುಅಂದ್ಕೊಂಡೆ: ಆಸಾಮಿ ಗಟ್ಟಿ.ಆಮೇಲೆ ಅರಿತೆ ಶೆಟ್ರು ಆ ದಿವ್ಸಆಡಿದ ಮಾತಿನ ಗುಟ್ನ_“ಅನುಭವದ ಮಾತು ನಾನಂದದ್ದು:ಕಟ್‌ಬಹುದು ದೊಡ್ಡ ದೊಡ್ಡ ಪೊಟ್ನ”.*****

ಗುರುತು

ಅಲ್ಲಿ ರಸ್ತೆಯ ಮೇಲೆ ಸಿಕ್ಕಾಗ ಹಲೋ ಎಂದೆವು ಅಲ್ಲೇ ನಾವು ನಂತರ ನಕ್ಕೆವಿರಬೇಕು ಈಗ ಮರೆಯುತ್ತಿದ್ದೇವೆ ಭಾವಗಳನ್ನು ಕ್ಲಿಷ್ಟ ಸ್ವಭಾವಗಳನ್ನು ಸುಪ್ತ ಅಭಾವಗಳನ್ನು ತಿರುವುಗಳಲ್ಲಿ ನೀವೆಲ್ಲ ಸಿಗರೇಟು ಹಚ್ಚಿದ್ದು ನನಗೆ ಬಲವಂತ ಮಾಡಿದ್ದು ನಾನು […]

ಅಂಟಿಗ

ಬಾಲು ಬೀದೀಲಿ ಸಿಕ್ಕಾಗ ಬೀಳ್ತಾನೆ ದುಂ ಬಾಲು. ಮಾಡ್ತಾನೆ ಚಾಲು ಕೊರೆಯೋಕೆ ಸೊಲ್ಲಿನ ಜೊತೆ ಜೊಲ್ಲು ಎರೆಯೋಕೆ. ಕಳಚಿಕೊಳ್ಳೋಕೆ ಬಿಡ ಈ ನರರೂಪಿ ಉಡ. ಅದಕ್ಕೇ ಅವನಿಗನ್ನೋದು ನಾವೆಲ್ಲ: “ಬಾಲು, ನೀನು ಮನುಷ್ಯ ಅಲ್ಲ, […]

ನನ್ನ ಕನಸಿನ ನಾಡು

ಸಿಗಲಿ ಪ್ರತಿಯೊಬ್ಬನಿಗೊಂದು ಗಟ್ಟಿ ತಲೆದಿಂಬು ಅಥವಾ ದಿಂಬಿದ್ದವನಿಗೊಂದು ಗಟ್ಟಿತಲೆ ಗಟ್ಟಿಯೆಂದರೆ ಗಟ್ಟಿ ಮುಟ್ಟಾದ ತಲೆ ಕಲ್ಲಿನಂಥಾ ಖರ್‍ಚಾದ ಬ್ಯಾಟರಿ ಸೆಲ್ಲಿನಂಥಾ ತಲೆ ಮತ್ತೆ ಹಾಸಿರಲಿ ಮೆತ್ತನೆ ಮೆತ್ತೆ ಮಂಚ ಸುತ್ತಾ ಹಾಯಾಗಿ ತೂಗಿ ಬಿದ್ದಿರಲಿ […]

ವಕ್ರ

ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****

ಉಡುಪಿ

ಮಣಿಪಾಲದ ಗುಡ್ಡದಾಸ್ಪತ್ರೆಯಿಂ ದಿಳಿದು ತೇಲಿ ಬರುವ ಘಂ ಘನ ಗಂಭೀರ ಸ್ಪಿರಿಟ್‌’ ಲೈಸಾಲ್‌ ವಾಸನೆಗೂ ಮೂಗು ಮುರಿದು ತೆಕ್ಕೆ ಮುದುಡಿ ಮುದುಡಿ ಮಲಗಿ ಪಕ್ಕಾಗುವ ಅನಾದಿ ರೋಗಿ: ಉಡುಪಿ ಈ ಉಡುಪಿಯಲ್ಲಿ ನಾನಾ ಉಡುಪಿನಲ್ಲಿ […]

ಸ್ವರ

ಬಿಟ್ಟ ನಿಟ್ಟುಸಿರ ಸ್ವರ ಸಮ್ಮಿಳಿಸಿ ಸಂ ಯೋಜಿಸಿ ಮಿಡಿ ಮಿಡಿ ದು- ಹೂ ಹಾ ರ ತರಂಗ ಮೀಟುವ ಕೊಳಲೇ ನಿನ್ನ ದನಿಯೊಡಲ ಬೇರು ಬಿಟ್ಟಿರುವುದು ಇಲ್ಲೇ ಈ ನನ್ನ ಗಟ್ಟಿಗಂಟಲ ಒಳಪೆಟ್ಟಿಗೆಯಲ್ಲೇ ಆದರೆ […]

ಜ್ವರ-ಒಂದು ಆಕ್ರಮಣ

೧ ಬಿಸಿ ಬಿಸಿ ಜ್ವರ ಹೊದ್ದು ಕುದಿಯುತ್ತ ಮಲಗಿದ್ದೆ ಹೊರಗೆ ಐಸ್‌ ಕ್ಯಾಂಡಿಯವನು ಕೂಗಿಕೊಳ್ಳುತ್ತಿದ್ದ ಈಗೆಲ್ಲ ಕಣ್ತುಂಬ ಫಕ್ತ ಚಿನ್ಹೆಗಳು ಕಪ್ಪು ಅವಕಾಶ ಮೋಡ ಮುಚ್ಚಿದ ಗಗನ ರೂಹು ತಾಳದೆ ಬಿದ್ದ ಬೆನಕನ ಮಣ್ಣು […]