ಎಂದಿನ ಹಾಗೆಯೇ ದೂರ, ಪೂರ್ವ ದಿಕ್ಕಿನಲ್ಲಿ, ಮುರ್ಕುಂಡಿ ದೇವಸ್ಥಾನವನ್ನು ಹೊತ್ತುನಿಂತ ಗುಡ್ಡದಾಚೆಯ ಆಕಾಶ ಕೆಂಪೇರುವ ಮೊದಲೇ ಭರತನು ಎದ್ದ. ಪ್ರಾತರ್ವಿಧಿಗಳನ್ನು ಮುಗಿಸಿ, ರಸ್ತೆಯಂಚಿನ ದೊಡ್ಡ ಅಶ್ವತ್ಥಕ್ಕೆ, ಅಂಗಳದಲ್ಲಿಯ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಹಿತ್ತಲ […]
ಅಜ್ಜೀ ಕವಿತೆ
ಮೊನ್ನೆ ರಜದಲ್ಲಿ ಕುತೂಹಲಕ್ಕೆಂದೇ ಮಲೆನಾಡ ಮೂಲೆಯ ಒಬ್ಬಂಟಿ ಅಜ್ಜಿಮನೆಗೆ ಹೋಗಿದ್ದೆ ಸುತ್ತಲೂ ಒಸರುವ ತೇವ ಹಸಿರು ಹೊಗೆ ಜಿಗಣೆ ತನ್ಮಧ್ಯೆ ಅಜ್ಜಿ ಸುಟ್ಟ ಹಲಸಿನ ಹಪ್ಪಳ ಹದಾ ಮೆಲ್ಲುತ್ತಿರುವಾಗ ಮೆತ್ತಗೆ ಕೇಳಿದಳು- ಏನೋ ಮರೀ […]
ಕಥೆಯ ಜೀವಸ್ವರ
ಜಾದೂಗಾರ, ಬಣ್ಣಬಣ್ಣದ ಕಾಗದಗಳ ಚೂರುಗಳನ್ನು ಬಿಡಿಬಿಡಿಯಾಗಿ ಜಗಿದು ನುಂಗುತ್ತಾನೆ. ನಂತರ ಬಾಯಿಂದ ಎಳೆಯೊಂದನ್ನು ಹಿಡಿದು ಸರಸರ ಎಳೆದಾಗ ಮೀಟರುಗಟ್ಟಲೆ ಬಣ್ಣದ ಚಂದದ ಕಾಗದದ ಸುರುಳಿ ಹೊರಬರುತ್ತಲೇ ಹೋಗುತ್ತದೆ. ಬರವಣಿಗೆಯ ವಿಸ್ಮಯವೂ ಇಂಥದೇ. ಅಂತಃಕರಣವನ್ನು ಕಲಕಿದ, […]
ಗಿರಿಗಿರಿ ಗಿಂಡಿ
೧ ಗಿರಿಗಿರಿ ಗಿಂಡಿ ಇಬತ್ತಿ ಉಂಡಿ ಸಂಜೆಯ ಗಾಳಿ ತಂಪೊಳು ತೇಲಿ ಗರಿಗರಿ ಮೋಡ ಬಾನಿನ ಕೂಡ ಮೈಮರೆತೋಟ ಚಕ್ಕಂದಾಟ; ಬಣ್ಣದ ಹಕ್ಕಿ ಕೊರಳಲ್ಲು ಕ್ಕಿ ಸುವ್ವೀ ಚವ್ವಿ, ಹಾಡಿದೆ ‘ಟುವ್ವಿ’, ಬನ ಬನದಲ್ಲಿ […]
ಅಯ್ಯೋ ಪಾಪ, ಮತ್ತೇನು ಹೇಳಿಯಾನು?
ಇತ್ತೀಚೆಗೆ ಪ್ರಸಿದ್ಧ ಚಿತ್ರನಿರ್ದೇಶಕ ಎಂ.ಎಸ್. ಸತ್ಯು ಅವರ ಜೊತೆ ಮಾತಾಡುವಾಗ, ಕನ್ನಡದ ಸಣ್ಣ ಕತೆಗಳನ್ನು ಆಧರಿಸಿ ತಾವು ಮಾಡಿದ ಒಂದು ಟೆಲಿಸಿರಿಯಲ್ ಬಗ್ಗೆ ಹೇಳುತ್ತ, ಮಾಸ್ತಿಯವರ ‘ಆಚಾರವಂತ ಆಚಾರ್ಯರು’ ಎಂಬ ಕತೆಯನ್ನು ಓದಿದ್ದೀರಾ? ಎಂದು […]
ಈ ಮಲ್ಲಿಗೆ ಈ ಗುಲಾಬಿ…!
ಈ ಮಲ್ಲಿಗೆ ಈ ಗುಲಾಬಿ ಚೆಲುವಿನೆರಡು ಕಣ್ಣು-ಗೊಂಬೀ! ರಾಗದಾ ಪರಾಗ ತುಂಬಿ ಬದುಕು ಬಣ್ಣ ಪಡೆಯಿತಂಬಿ- ನಸುಕು ತುಟಿಯ ತೆರೆದಿದೇ ಜೀವರಸವನೆರೆದಿದೆ! ಸ್ವರ್‍ಣಕಿರಣದರುಣ ಕಂದ ಈ ಸುಗಂಧದಲ್ಲಿ ಮಿಂದ; ಗಾಳಿ ತೀಡೆ ಮಂದ ಮಂದ […]
ಮಣ್ಣಿನ ಮಕ್ಕಳು
“ಹಿಡಿ ಸಿವುಡೋ ಕುಡಗೋಲೋ ಮಕ ಬಾಡ್ಯೊ ಮೈ ಬಾಡ್ಯೋ ಜಡನಾದ್ಯೊ ಮೈಯೊ ಹಾರಿ ಜಡದಂಗೊ………… ಹೋ!” ಮಲ್ಲಪ್ಪನ ಹಂತಿಯ ಹಾಡು ಸುತ್ತು ಮುತ್ತಲಿನ ಹೊಲದಲ್ಲಿದ್ದವರಿಗೂ ಕೇಳಿಬರುತಿತ್ತು. ಮೇಟಿಯ ಸುತ್ತಲೂ ದನಗಳು ತಿರುಗಾಡಿದಂತೆ ಅವುಗಳ ಕಾಲ್ತುಳಿತಕ್ಕೆ […]
