ಶಬ್ದದ ಲಜ್ಜೆ ನೋಡಾ

ಹೇಳಿದರ ಕತಿಗಿತಿ ಅಂದೀರಿ ದೇವರೂಶಾಸ್ತ್ರ ಸಂಪದನೀತ, ನಮ್ಮ ನಿಮ್ಮಂಥಪೋಸ್ಟಿನ ವಿಳಾಸವಂತ, ಮತಿವಂತ ಹಾಗಂತಅರಸೀಕನಲ್ಲ, ಕಿಟ್ಟಲ್‌ಕೋಶವಿನಾ ಹಳಗನ್ನಡಪದಾರ್ಥ ಮಾಡಬಲ್ಲ; ಹೊಸೆಯಬಲ್ಲಚುಟುಕಗಿಟಕ ಮುಕ್ತಕ, ಹೇಳಬಲ್ಲ ಸಂಸ್ಕೃತದಲ್ಲಿಮಾರುದ್ದದ ಸಮಸ್ತಪದಗಳ ಪ್ರಾಸಾನುಪ್ರಾಸಗಳಪನ್ನು ಜೋಕುಗಳ ಕಟ್ಟಬಲ್ಲ.ಹೇಳಿದರ ಕತೆಗಿತಿ ಅಂದೀರ ದೇವರೂಕಿವಿಗೊಟ್ಟು ಕೇಳಿರಿ […]

ಚಕೋರಿ – ೪

ಕೇಳಕೇಳುತ್ತ ಮೈಮರೆತಿದ್ದ ನಮ್ಮಿರವುಹಗುರವಾಗಿ ನಿಧಾನವಾಗಿಲೋಕಾಂತರಕೆ ಸಂಯಮಿಸಿದಂತಾಗಿಪರಿಚಯವಿಲ್ಲದ ಹೊಸಲೋಕದ ಹವಾಮಾನದಲ್ಲಿತೇಲುತ್ತಿರುವಂತೆ,-ಹಾಡಿನಿಂದಿಡೀ ಬಯಲು ಭರಿತವಾಗಿಭರಿತವಾದದ್ದು ಬಿರಿತುತೂಬು ತೆಗೆದ ಕೆರೆಯಂತೆಹಾಡಿನ ಮಹಾಪೂರ ನುಗ್ಗಿತು ನೋಡುಆಹಾಹಾ ಮುಳುಗಿದೆವೆಂದು ನೋಡಿದರೆ ತೇಲುತ್ತಿದ್ದೇವೆ! ಅರೆ‌ಅರೇತೇಲುವವರು ನಾವಲ್ಲಚಕೋರಿ ಎಂಬ ಯಕ್ಷಿ!ಬಿಳಿಯ ಮೋಡದ ಹಾಗೆ ಹಗುರಾಗಿಕಣ್ಣೆದುರು […]

ಚಕೋರಿ – ೩

ಅದಕ್ಕೇ ಹೇಳಿದೆ: ಯಾರಾದರೊಬ್ಬರುಕಾಯಬೇಕಿದೆ ನಿನ್ನ ತೋಟವ. ಅದಕ್ಕೇಎಲ್ಲಿದ್ದರೆ ಅಲ್ಲಿಂದಮಗನೇ ನೀ ಬೇಗನೆ ಬಾ–ಎಂದು ಹೇಳುತ್ತ ಮಣ್ಣಿನಾಟಿಗೆಯ ಹಿಡಿದುಕೊಂಡು ಗೋಳು ಗೋಳೆಂದತ್ತಳು ಅಬ್ಬೆ. ಕೈಯಲ್ಲಿ ಆಟಿಗೆಯಾಯ್ತು. ದಿನಾ ಕಣ್ಣಲ್ಲಿ ಕಂಬನಿಯಾಯ್ತು.ಎಷ್ಟು ದಿನ ಕಾದರೂ ಮಗ ಬಾರದೆ, […]

ಚಕೋರಿ – ೨

ಸಂಗೀತ ಕಲಿಸಿದವನು.ಆವಾಗ ಥೂ ಎಂದು ಕುಲಗುರುವಿನ ಮುಖದ ಕಡೆಗೆ ಉಗಿದು ಹೀಂಕಾರವಾಗಿ ಜರಿದು ನುಡಿದಳು ನೋಡು, ಯಾರು? ಹೊತ್ತಿಕೊಂಡುರಿವ ಕಣ್ಣಿನ ಆಕೊಳಕು ಮುದುಕಿ-ಮುದಿಜೋಗ್ತಿ : ಥೂ ನಿನ್ನ ಮುದಿ ಯೋಗ್ಯತೆಗೆ ಬೆಂಕಿ ಹಾಕಇಂಥ ಕಚಡ […]

ಚಕೋರಿ – ೧

೧. ಪ್ರಾರ್ಥನೆ ಓಂ ಪ್ರಥಮದಲ್ಲಿಆದಿಗಾಧಾರವಾದ ಸಾವಳಗಿ ಶಿವಲಿಂಗನ ನೆನೆದುನಾದದಲಿ ಹುರಿಗೊಂಡ ತನ್ನ ನಿಜವ ತೋರಲಿ ಸ್ವಾಮಿಎಂದು ಬೇಡಿಕೊಂಡು ಕಥಾರಂಭ ಮಾಡುತ್ತೇವೆ. ನಾವು ಕನಸುಗಳು,ಎಲ್ಲ ಕಾಲ ಎಲ್ಲ ಸೀಮೆಗೆ ಸಲ್ಲುವಎಲ್ಲಾ ವಯಸ್ಸಿನ, ಎಲ್ಲಾ ಮನಸ್ಸಿನ,ಆದಿಮ ಕಾಲದಿಂದ […]