ಹುಲ್ಲು

ಈ ಜುಲೈ ತಿಂಗಳ ಜಿಟಿ ಜಿಟಿ ಮಳೆ – ಗಟಗಟ ಕುಡಿದು ಧುತ್ತೆಂದು ಬೆಳೆದು ನಿಂತಿದೆ ಹುಲ್ಲು. ಎಲ್ಲಾದರೂ ಸ್ವಲ್ಪ ಪಡುವು ಸಿಕ್ಕರೆ ಸಾಕು : ಸಿಮೆಂಟುಗೋಡೆಯ ಬಿರುಕು, ಟಾರುಬೀದಿಯ ಒಡಕು – ಎಂಥ […]

ಗುಬ್ಬಿ

ಗೋಡೆಗೆ ತೂಗುಹಾಕಿದ ಫೋಟೋದ ಹಿಂದೆ ಗುಬ್ಬಿ ಗೂಡು ಕಟ್ಟಿದೆ. ಹುಲ್ಲು, ಹತ್ತಿಯಚೂರು, ದಾರ ಮೆತ್ತಗೆ ಒಟ್ಟಿದೆ. ಈ ಪುಕ್ಕಲು ಪ್ರಾಣಿಯ ಧೈರ್ಯಕ್ಕೆ ಬರೀ ಎರಡು ರೆಕ್ಕೆ ಅಡಿಗೆಯ ಮನೆಗೂ ಬಂದು ಕುಟುಕುತ್ತದೆ ಅನ್ನದ ಅಗಳು- […]

ಈಗ ಕವಿತೆ ಬರೆಯಲು….

ಈಗ ಕವಿತೆ ಬರೆಯಲು ನಾನು ಹೊರಟಿಲ್ಲ ; ಹೊರಟೀದ್ದು ಆಫೀಸಿಗೆ: ಉಂಡು ಅವಸರದಿಂದ- ಸಿಕ್ಕರೆ ಬಸ್ಸು ಹಿಡಿದು, ಇಲ್ಲ, ಮೆಲ್ಲಗೆ ನಡೆದು ; ಸಡಿಲಾಗಿರುವ ಕೋಟು ಪ್ಯಾಂಟುಗಳನ್ನು ಇದ್ದು – ದರಲ್ಲಿ ಸರಿಪಡಿಸಿಕೊಂಡು. ಎಷ್ಟೋ […]

ದೀಪಾವಳಿ

೧ ಅಲ್ಲಲ್ಲಿ ಹುಲ್ಲು ಹಳದಿಗೆ ತಿರುಗಿ, ಗದ್ದೆಯಲಿ ನೆಲ್ಲು ತೆನೆಹಾಯ್ದು ಗಾಳಿಯುದ್ದಕು ಬಾಗಿ ಬಾಚುತ್ತ ಬಿಸಿಲಿನಲಿ ಮಿರಿಮಿರಿ ಮಿಂಚಿ; ಆಕಾಶದಲ್ಲಿ ಸ್ವಾತಿಯ ಮೋಡ ಸುರಿದು ಹಿಂಜರಿದು ಕ್ಷಿತಿಜದಂಚಿನಲಿ ಸಂಜೆಯ ಸೂರ್ಯ ಝಗಝಗಿಸಿ ಅಲ್ಲೊಂದು ಇಲ್ಲೊಂದು […]

ಅಡ್ಡಮಳೆ

ಅಡ್ಡಮಳೆ ಹೊಡೆದು ಹೋಯಿತು- ಗುಡ್ಡದಾಚೆಗೆ, ಹೊಲಗದ್ದೆಗಳ ದಾಟಿ, ಬೇರೂರಿಗೆ. ಅಲ್ಲಿಯೂ ನಮ್ಮಂತೆ ಚಡಪಡಿಸಿ, ಉಸಿರು ಕಟ್ಟಿ ಕುಳಿತಿರಬಹುದು ಜನರು : ಹೊಚ್ಚ ಹೊಸ ಮಳೆಗೆ. ಉತ್ತರದ ಕಡೆಯಿಂದ ಬೀಸಿಬಂದಿರು ಗಾಳಿ ದಕ್ಷಿಣಕ್ಕೆ, ಮೋಡದೊಳಗೊಂದು ಮೋಡ […]

ಶಿಶಿರದಲ್ಲಿ ಬಂದ ಸ್ನೇಹಿತ

ಚಳಿಗಾಲದಲ್ಲಿ ಒಬ್ಬನೇ ಬೆಚ್ಚಗೆ ಹೊದ್ದು ಕುಳಿತಾಗ ಮುಪ್ಪು ಮಾತಾಡಿಸಿತು,ತೀರ ಹತ್ತಿರಕೆ ಬಂದು : “ಏನಪಾ, ಎಲ್ಲ ಸೌಖ್ಯವೆ? ಇತ್ತೀಚೆ ಮತ್ತೆ ಬರವಣಿಗೆ? ಷಷ್ಟ್ಯಬ್ದಿಗೂ ನಾನು ಬಂದಿದ್ದೆನಲ್ಲ, ನೆನಪಿರಬಹುದು. ವಿಶ್ರಾಂತ ಜೀವನದಲ್ಲು ಬಿಡುವಿಲ್ಲವೆಂದರೆ ಹೇಗೆ? ಮಾತಾಡು, […]

ಶಬ್ದ-ನಿಶ್ಯಬ್ದ

‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […]

ಒಂದು ಬೆಳಗು

ನಸುಕಿನಲ್ಲಿ ಎಲ್ಲರಿಗಿಂತ ಮೊದಲೇ ಎಲ್ಲಿಂದಲೋ ಕೂಗಿದ್ದು ಕೋಗಿಲೆಯೇ- ಎಂದು ಕಿವಿ ನಂಬದಾಯ್ತು. ಮನೆಯ ಪಕ್ಕದಲಿ ಹಕ್ಕಿ ಚಿಲಿಪಿಗುಟ್ಟಿದಾಗ- ನಾಭಿ ಮೂಲದಿಂದ ಕಹಳೆಯ ಪಾಂಗಿನಂತೆ ಹೊಮ್ಮಿದ ‘ಕುಹೂ’ ಅದೇ ಅದೇ ಎಂದು ಖಾತ್ರಿಯಾಯ್ತು. ಮಬ್ಬುಗತ್ತಲೆಯನ್ನು ಭೇದಿಸಿ […]

ಕವಿತೆ

ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […]

ಚೇಳಿಗೊಂದೇ ಬಸಿರು

ಮುಖದ ಎಡಬಲಕ್ಕೆರಡು ಚೂಪಾದ ಚಿಮುಟ ಬಾಲಕ್ಕೆ ವಿಷದ ಮುತ್ತನ್ನೆತ್ತಿ ಮೆರೆಯುವ ಕೊಂಡಿ. ಮೆಲ್ಲಗೆ ಗೋಡೆ ಬದಿ ಹಿಡಿದು ಹೊರಟಾಗ ತಟ್ಟನೆ ಕಂಡು ಮೆಟ್ಟಿ ಬೀಳುತ್ತೇವೆ. ಈ ಭಯೋತ್ಪಾದಕನೆಲ್ಲಿ ಅಡಗಿದ್ದ? (ಶಿಲಾಬಾಲಿಕೆಯ ಸೀರೆಯ ನಿರಿಗೆಯಲ್ಲೀ ಇದ್ದ.) […]