ಒಂದೆ ಉಸಿರಿಗೆ ಹಸಿರ ಹೊಮ್ಮಿಸುವ; ನೂರು ಬಗೆ ಭಾವ ಕುಸುಮವನೆತ್ತಿ ಗಾಳಿಸುಳಿಯಲಿ ಹೀಗೆ ನರುಗಂಪ ತೇಲಿಸುವ; ಹಂಬಲದ ಸವಿದನಿಗೆ ತುಂಬಿ ಆಲಿಸುವ; ಮನಸಿನ ಮಧ್ಯಬಿಂದುವಿಗೆ ಕನಸು-ಕಾಮನಬಿಲ್ಲು ವರ್‍ತುಳವ ರಚಿಸಿ, ನೆಲ- ಮುಗಿಲನೊಂದು ಸಲ ಬಂಧಿಸಿ […]
ಲೇಖಕ: ಚನ್ನವೀರ ಕಣವಿ
ವಿದ್ಯಾಭವನದ ಗೋಪುರದಿಂದ
ಅತ್ತ ಬೆಳುವೊಲ, ಇತ್ತ ಮಲೆನಾಡ ಜರಿ ಸೆರಗು. ಸುತ್ತು ಪರ್‍ವತ ನೀಲಿ. ಗುಡ್ಡ ಕೊಳ್ಳವ ಇಳಿದು- ಏರಿ ಚಿಗುರಿದ ಹಸಿರು. ಕೆಲದಿ ಕನ್ನಡಿ ಹಿಡಿದು ನಿಂತ ಕೆಲಗೇರಿ ಕೆರೆ. ಗೆರೆ ಕೊರೆದು ಬರುವ ಜುಗು- […]
ಅರುವತ್ತರೈಸಿರಿ
ಎತ್ತರದ ನಿಲವು; ಮನದಲಿ ನೂರು ನಕ್ಷತ್ರ- ಗಳ ವಿಲಕ್ಷಣ ಹೊಳವು. ವಿಸ್ತಾರದನುಭವದ ಸ್ವಸ್ತಿ ಬಿತ್ತರದ ಹಣೆ; ಸುಸ್ಥಿರನೋಟ ಬಲಿದ ಯೋಧೃವಾಣಿಯ ನಿಷ್ಠೆ. ಕೃತಿ ಮಹೋನ್ನತ ಪಾತ್ರ. ದೊಡ್ಡ ಮಳೆ ಜಡಿದು, ನೆಲವೆಲ್ಲ ನೀರನು ಕುಡಿದು, […]
ಏನಾಗಬೇಕಿಹುದೊ….
ಏನಾಗಬೇಕಿಹುದೊ ಎಲ್ಲ ಆಗಲೆ ಬೇಕು: ಆವರೆಗು ತೂಗುವದು ಮನದ ತಕ್ಕಡಿ ಪರಡಿ. ಅದಕಿಲ್ಲ ಕಾಣಿ, ಸಮದಂಡಿಗೆಯ ತೂಕ ಬರೆ ತೆರಬೇಕು ತಕ್ಕ ಬೆಲೆ. ಪೇಟೆಧಾರಣಿ ಬೇರೆ. ಕೂಡಿಸುವದು, ಕಳೆದು, ಗುಣಿಸಿ, ಭಾಗಿಸಿ ನೋಡಿ ತೂಗಿ […]
ಕಣ್ಣಿರುವಷ್ಟು ನೋಟ
ಕಣ್ಣಿರುವಷ್ಟು ನೋಟ, ಕಾಲು ಸೋಲುವ ತನಕ ಓಟ, ಹೊಟ್ಟೆಯಲಿ ಡೊಂಬರಾಟ, ಮನಕೆ ಬಿರುಕು ಬಿದ್ದಲ್ಲೆಲ್ಲ ಎಲುವಿನ ತುಂಡು-ಬೇಟ. ಹರಕು ಚಿಂದಿಗೆ ಮುರುಕು ಕೋಲಿನ ಕೂಡ ಕುಣಿವ ತವಕ. ಅಸ್ತಿಪಂಜರದೊಳಗೆ ಕುಸ್ತಿ ನಡೆದಿದೆ ಬನ್ನಿ: ಚಡ್ಡಿಯಿಲ್ಲದೆ […]
ಕತ್ತಲೆ-ಬೆಳಕು
ಈ ಮನಸಿನೊಳಗೊಬ್ಬ ಸೂರ್‍ಯ ಸುತ್ತಲು ಕಿರಣ ತೂರಿಹನು. ಇಲ್ಲ ಉದಯಾಸ್ತಮಾನಗಳವಗೆ, ಹೃದಯ ಕಮಲದಿ ಸದಾ ನಿಗಿನಿಗಿ ಕೆಂಡ ಸುರಿವ. ಕೆಂಡವರಳಿದ ಹೂವು, ಮುಡಿದು ನಿಂತಿವೆ ಹರಣ. ನೂರು ಗುಹೆಗಳ ಹೊಕ್ಕು ಹುಡುಕುತಿವೆ ಸಾವಿರದ ಕಿರಣ. […]
