ಗೃಹಭಂಗ – ೧

ಅಧ್ಯಾಯ ೧ – ೧- ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕಂಬನಕೆರೆ ಹೋಬಳಿ ರಾಮಸಂದ್ರ ಗ್ರಾಮದ ಶ್ಯಾನುಭೋಗ್ ರಾಮಣ್ಣನವರು ಫೌತಿಯಾದಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಗಂಡು ಮಕ್ಕಳು […]

ಗೃಹಭಂಗ – ಮುನ್ನುಡಿ

ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, ‘ಇದೊಂದು ಪ್ರಾದೇಶಿಕ ಕಾದಂಬರಿ’ ಎಂಬ ಆತುರದ ಕ್ಲಾಸ್‌ರೂಮು […]

ಇನ್ನೂ ಒಂದು

ಗಡಿ ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು […]

ತಾಯಿ

“…ರಾತ್ರಿ ಆಯ್ತು ಅಂದ್ರೆ ದುಷ್ಟ ಮೃಗಗಳ ಸಂಚಾರ….. ಆದ್ರೂನು ಆ ಕ್ರೂರಿ ತಾಯಿ ಮಗು ಇಡೀ ರೊಟ್ಟಿ ಬೇಕು ಅಂತ ಹಠ ಮಾಡ್ತದೆ ಅಂತ ಸಿಟ್ಟುಗೊಂಡು, ಆ ಪುಟ್ಟ ಮಗೂನ ಅಂಗ್ಳಕ್ಕೆ ದಬ್ಬಿ, ಅಗ್ಳಿ […]

ಕವಿಯ ಪೂರ್ಣಿಮೆ

ತುಂಬು ಗರ್ಭಿಣಿ ಅತ್ತಿಗೆಯ ತೇಜಃಪುಂಜ ನೋಟ ಕಸೂತಿ ನೂಲಿನ ಜೊತೆ ಏನೋ ಕನಸು ನೇಯುತ್ತಿತ್ತು. ಅಣ್ಣನ ದೃಷ್ಟಿ ಕಿಟಿಕಿಯ ಹೊರಗೆಲ್ಲೋ ಶೂನ್ಯವನ್ನು ತಡವರಿಸುತ್ತಿತ್ತು. ಕೋಣೆಯ ಒಳಗೆ ತುಂಬಿ ತುಳುಕುವ ಬೆಳಕು. ಅತ್ತಿಗೆಯ ಮುಡಿಯಿಂದ ಒಯ್ಯೊಯ್ಯನೆ […]

ದಿವ್ಯ

‘ಈ ಅಕ್ಕನಿಗೆ ಮಕ್ಕಳೆಂದರೆ ನಾವು ಮೂರು ಜನ. ಕುಂಟೆಕೋಣನ ಹಾಗೆ ಬೆಳೆದಿರೋ ಈ ತಮ್ಮನಾದ ನಾನು, ಅಲ್ಲಿ ಆಡಿಕೊಂಡಿರೋ ಎರಡು ಹೆಣ್ಣುಮಕ್ಕಳು. ನಮ್ಮ ಅಮ್ಮ ಸತ್ತಮೇಲೆ ಅವಳ ಮದುವೆ ಆಗೋತನಕ ನನ್ನನ್ನ ಬೆಳೆಸಿದಳು; ಆ […]

ಯೋಗಣ್ಣ, ಕಾರ್ಡಿಯಾಲಜಿ, ವಿಷ್ಣುಸಹಸ್ರನಾಮ ಇತ್ಯಾದಿ

ಮೈ ಮೇಲೆ ಸಹಸ್ರ ಟನ್ನಿನ ಟ್ರಕ್ಕು ಹೋದರೂ ಅರಿಯದೆ ಸತ್ತ ಹಾವಿನಂತೆ ಬಿದ್ದಿರುವ ನುಣುಪಾದ ಕಪ್ಪು ರಸ್ತೆ, ಎಪ್ಪತ್ತು ಮೈಲಿ ವೇಗದಲ್ಲಿ ಹೋದರೂ ಮೈ ಅಲುಗದ ಮರ್ಸೀಡಿಸ್, ಅಕ್ಕಪಕ್ಕ ಒಣಗಿದ ಮರಗಿಡಗಳ ಮೇಲೆ ನಿಲ್ಲಲೂ […]

ಲಂಗರು

-೧- ಒಲ್ಲದ ಮನಸ್ಸಿನಿಂದ ಮನೆ ಬಿಟ್ಟು ಹೊರಟ ಮೇಲೆ ರಘುವೀರನಿಗೆ ರಾಮತೀರ್ಥಕ್ಕೆ ಹೋಗಿ ಧಾರೆಯಾಗಿ ಧುಮುಕುವ ನೀರಿನ ಕೆಳಗೆ ತಲೆಯೊಡ್ಡಿ ನಿಲ್ಲಬೇಕೆನಿಸಿತು. ಬಂದರಿಗೆ ಹೋಗಿ ದೋಣಿಗಳು ಹೊಯ್ದಾಡಿ ದಡ ಸೇರುವುದನ್ನು ನೋಡಬೇಕೆನಿಸಿತು. ಅಣ್ಣನ ಅಂಗಡಿಗೆ […]

ಅಮ್ಮಚ್ಚಿಯೆಂಬ ನೆನಪು

ಹೇಳಲು ಹೋದರೆ ಪುಟಪುಟವಾಗಿ ಎಷ್ಟೂ ಹೇಳಬಹುದು. ಆದರೆ ಅಮ್ಮಚ್ಚಿಯನ್ನು ಹಾಗೆ ವಿವರವಿವರವಾಗಿ ನೆನೆಯುತ್ತ ಹೋದಷ್ಟೂ ಆಯಾಸಗೊಳ್ಳುತ್ತೇನೆ. ಇಂತಹ ಆಯಾಸ ಏನೆಂದು ತಿಳಿದವರಿಗೆ ನಾನು ಹೆಚ್ಚು ವಿವರಿಸಬೇಕಾದ್ದೇ ಇಲ್ಲ ಅಲ್ಲವೆ? ಕೆಲವರನ್ನು ನೆನೆಯುವಾಗ ಮನಸ್ಸು ದಣಿಯುವ […]

ಆಕಾಶ ಮತ್ತು ಬೆಕ್ಕು

ಜಯತೀರ್ಥ ಆಚಾರ್ಯರು ರಾತ್ರೆ ಒಂಬತ್ತು ಗಂಟೆಯ ತನಕ ಗೋವಿಂದನ್ ನಾಯರ್ ಆಡುವ ಮಾತುಗಳನ್ನು ಕೇಳಿಸಿಕೊಂಡು, ಆಮೇಲೆ ನಿದ್ದೆ ಹೋಗಿ, ಬೆಳಿಗ್ಗೆ ಐದು ಗಂಟೆಗೆ ಗರಗಸದಿಂದ ಕುಯ್ದಂಥ ಶಬ್ದ ಮಾಡಿ ಸತ್ತದ್ದು. ಅವರು ಹಾಸಿಗೆ ಹಿಡಿದು […]