ಬೇರು – ಚಿತ್ರಕತೆ-ಸಂಭಾಷಣೆ

ದೃಶ್ಯ – ೧ / ಹಗಲು / ಹೊರಾಂಗಣ / ದೇವಸ್ಥಾನ

ಒಂದು ದೇವಸ್ಥಾನದ ಮುಂಭಾಗ. ಗೊರವಯ್ಯ ಹುಡುಗಿಗೆ -ಗೌರಿ-ದೀಕ್ಷೆ ಕೊಡುವ ಕಾರ್ಯಕ್ರಮ.
ಅವಳ ಎದೆ ತೋಳು, ಹಣೆ, ಕಣ್ಣಿಗೆಲ್ಲಾ ವಿಭೂತಿ ಹಚ್ಚುತ್ತಾ ಕೆಳಗಿನ ಮಾತುಗಳನ್ನು ಹೇಳಿಕೊಡುತ್ತಾರೆ.

ಗೊರವಯ್ಯ : ಸುಳ್ಳುತನದ ಮಾತಾಡುವುದಿಲ್ಲ.
ಗೌರಿ : ಸುಳ್ಳುತನದ ಮಾತಾಡುವುದಿಲ್ಲ.
ಗೊರವಯ್ಯ : ಕಳ್ಳತನ ಎಂದೆಂದಿಗೂ ಮಾಡಲಾರೆ
ಗೌರಿ : ಕಳ್ಳತನ ಎಂದೆಂದಿಗೂ ಮಾಡಲಾರೆ
ಗೊರವಯ್ಯ : ತಂದೆ ಶಿವನ ಹೆಸರು ಹೇಳಿ, ಭಿಕ್ಷಕ್ಕೆ ಹೋಗಿ
ಗೌರಿ : ತಂದೆ ಶಿವನ ಹೆಸರು ಹೇಳಿ, ಭಿಕ್ಷಕ್ಕೆ ಹೋಗಿ
ಗೊರವಯ್ಯ : ತಂದ ಭಿಕ್ಷವ ಹಂಚಿಕೊಂಡು ತಿನ್ನುತ್ತೇನೆ.
ಗೌರಿ : ತಂದ ಭಿಕ್ಷವ ಹಂಚಿಕೊಂಡು ತಿನ್ನುತ್ತೇನೆ.
ಅವರ ವಿಧಿಗಳು ಮುಗಿದ ನಂತರ ೪-೫ ಗೊರವರು ಸೇರಿ ಹಾಡು ಹೇಳುತ್ತಾ ಕುಣಿಯುತ್ತಾರೆ.
ಏಳ್ಕೋಟಿ ಉಘೇ ಉಘೇ
ಏಳ್ಕೋಟಿ ಉಘೇ ಉಘೇ

ಮೈಲಾರ ಮೈಲಾರ ಮೈಲಾರ ಲಿಂಗಯ್ಯ
ನಿನ ಪಾದಕ್ಕೆ ಶಿರವಿಟ್ಟೆ ಕರಿಗುಡ್ಡದಯ್ಯ
ಕಷ್ಟಕಾಲಕೆ ನಿಜದ ಕಾರ್ಣೀಕ ನುಡಿಸಯ್ಯ
ಎಳೆಬಾಲೆ ಕೈಹಿಡಿದು ಕಾಪಾಡು ಮಲ್ಲಯ್ಯ

ಕರಡಿ ಗೊರವರು ನಾವು ಧರಣೀಲಿ ಆಡುವೆವು
ಮೈದೋರೆ ಮೈಲಾರ ಮೈ ಮರೆವೆವು
ಊರ ದೇವರು ನೀನೆ ಕಾಡು ಮಲ್ಲೇಶನೆ
ನಾಲಗೆಯ ತಟವಟವ ತಪ್ಪಿಸೋ ಶಿವನೆ

ಬಡವರ ಮನೆ ಬೆಳಕು ಬಲ್ಲಿದರ ಮನೆಬೆಳಕು
ಎಲ್ಲೆಲ್ಲೂ ಬೆಳಕಾದ ಪರಂಜ್ಯೋತಿ ನೀ ತಾಯೆ
ನುಡಿವಂತೆ ನಡೆವುದನು ನಡೆದಂತೆ ನುಡಿವುದನು
ಎಡೆಬಿಡದೆ ಭಕುತಿಯನು ನೀಡವ್ವ ಮಾಳವ್ವ

ಸೋಮವಾರದ ಭಿಕ್ಷೆಯ ಹಂಚಿತಿನ್ನುವೆನಯ್ಯ
ಬಂದ ಬಂಗವ ಬಿಡಿಸಿ ಕಾಪಾಡೋ ಶಿವನೇ
ಆದಿ ಬಂಡಾರ ಭಕ್ತಿ ಕವಡೆಯೇ ನಿಜಶಕ್ತಿ
ಮಾಳವ್ವ ಮಾತಾಯೆ ಕೊಡಿಸವ್ವ ನೀ ಮುಕ್ತಿ ಏಳ್ಕೋಟಿ ಉಘೇ ಉಘೇ

ದೃಶ್ಯ – ೨ / ಹಗಲು / ಒಳಾಂಗಣ / ಸರ್ಕಾರಿ ಕಛೇರಿ

ಸರ್ಕಾರಿ ಕಛೇರಿಯ ಒಳಗೆ ಟೈಪ್‌ರೈಟರ್‌ನ ಕ್ಲೋಸ್ ಷಾಟ್‌ನಿಂದ ದೃಶ್ಯ ಪ್ರಾರಂಭವಾಗುವುದು.
ಬಿಳಿಯ ಹಾಳೆಯ ಮೇಲೆ ಕೆಳಗಿನ ಅಕ್ಷರಗಳು ಮೂಡತೊಡಗುವವು.

‘ಸರ್ಕಾರಿ ಆದೇಶ’
‘ಸಂಖ್ಯೆ: ಎ‌ಇ‌ಒ೩೪/೧೫.೧೦.೨೦೦೪’

ಟೈಪ್‌ರೈಟರ್‌ನ ಕಟ ಕಟ ಸದ್ದು ಇಡೀ ಕಛೇರಿಯನ್ನು ವ್ಯಾಪಿಸಿದೆ.
ಟೈಪ್ ಮಾಡುತ್ತಿರುವ ಹೆಂಗಸಿನ ವಯಸ್ಸು ಸುಮಾರು ನಲವತ್ತು ವರ್ಷ. ದಪ್ಪ ಗಾಜಿನ ಕನ್ನಡಕ ಹಾಕಿದ್ದಾಳೆ.
ಆಕೆ ಟೈಪ್‌ರೈಟರ್‌ನ ಸದ್ದಿನಲ್ಲಿ ಉಳಿದವರ ಮಾತು ಕೇಳುತ್ತಿಲ್ಲ.

ಯಾರೋ ಕ್ಲರ್ಕ್ ಮುಂದೆ ಕುಳಿತ ವ್ಯಕ್ತಿ ಕುಳಿತಿದ್ದಾನೆ.
ವ್ಯಕ್ತಿ ಒಂದಿಷ್ಟು ಹಣ ಕ್ಲರ್ಕ್ ಕೈಗೆ ಕೊಡುತ್ತಾನೆ.
ಕ್ಲರ್ಕ್ ತೀರ ಕೆಳಗಿದ್ದ ಯಾವುದೋ ಫೈಲ್‌ನ ಧೂಳು ತೆಗೆದು ಮೇಲೆ ಎತ್ತಿಡುತ್ತಾನೆ.

ಯಾರೋ ಫೋನಿನಲ್ಲಿ ಹರಟೆ ಹೊಡೆಯುತ್ತಿದ್ದಾನೆ.

ಮೂಲೆಯಲ್ಲಿ ಜೇಡ ಬಲೆ ಹೆಣೆದಿದೆ.
ಅಲ್ಲೇ ಕೆಳಗೆ ಗಾಂಧೀಜಿಯ ಫೋಟೋ ಇದೆ. ಅದರ ಮೇಲೆ ಧೂಳು ಕುಳಿತಿದೆ.
ಅದರ ಕೆಳಗೆ ಲಕ್ಷ್ಮೀ ಫೋಟೋ ಇದೆ. ಅದನ್ನು ಕೈ ಒಂದು ಒರೆಸಿ ಹೂ ಮುಡಿಸುತ್ತದೆ.

ಇತ್ಯಾದಿ ಮಾಂಟೇಜ್‌ಗಳನ್ನು ತೋರಿಸಲಾಗುವುದು.

ಕಟ್ ಟು…

ದೃಶ್ಯ – ೩ / ಹಗಲು / ಗೊರವಯ್ಯನ ಮನೆ

ಗೊರವಯ್ಯ ಗೌರಿಯ ಕೈ ಹಿಡಿದು ರಸ್ತೆಯಲ್ಲಿ ನಡೆದು ಬರುತ್ತಿದ್ದಾನೆ.
ಅವನ ವಯಸ್ಸು ಸುಮಾರು ೭೫ ವರ್ಷ, ಗೌರಿಯ ೮-೯ ವರ್ಷದ ಹುಡುಗಿ.
ಇವನು ತನ್ನ ಮನೆಯ ಬಳಿ ಬಂದಾಗ ಪಕ್ಕದ ಮನೆಯ ಹೆಂಗಸು ಹೊರಗೆ ಏನೋ ಕೆಲಸ ಮಾಡುತ್ತಾ ಕುಳಿತಿದ್ದವಳು.

ತಾಯವ್ವ : ಇದೇನಜ್ಜ… ಯಾವುದೋ ಹೆಣ್ಣು ಮಗ ಕರಕಂಡ ಬತ್ತಾ ಇದ್ದೀಯ?

ಗೊರವಯ್ಯ : ಇದು ನಮ್ಮ ಮೈಲಾರನಿಂಗನ ಜಾತ್ರೇಲಿ ತಿರಕಂಡ್ ತಿನ್ತಿತ್ತು… ನನ್ನ ಬದ್ಕೂ ತಿರಕಂಡ್
ತಿನ್ನಾದೇ ಅಲ್ವ… ಜೊತೆಯಾತದೆ ಅಂತ ಕರಕಂಡ ಬಂದೆ ಕಣವ್ವ… ಗೌರವ್ವ ತಗೋ ತಾಯಕ್ಕಂಗೆ ಈ ಭಂಡಾರ ಕೊಟ್ಟು ಬಾ.

ಎಂದು ತನ್ನ ಜೋಳಿಗೆಯಿಂದ ಭಂಡಾರ ತೆಗೆದು ಕೊಡುತ್ತಾನೆ.
ಗೌರಿ ತಾಯವ್ವನಿಗೆ ಭಂಡಾರ ಒಯ್ದು ಕೊಡುತ್ತಾಳೆ.

ತಾಯವ್ವ : ಏನವ್ವಾ ನಿನ್ನ ಎಸ್ರು?

ಗೌರಿ : ಗೌರಾ…

ಅವಳು ಮಾತನಾಡುವಾಗ ಗೊರವಯ್ಯ ತನ್ನ ಮುರುಕಲು ಮನೆಯ ಬೀಗ ತೆಗೆಯುತ್ತಾನೆ.
ಗೌರಿ ಓಡಿ ಬಂದು ಜೊತೆಯಾಗುತ್ತಾಳೆ.
ಗೊರವಯ್ಯ ತನ್ನ ಗೊರವಯ್ಯನ ವೇಷವನ್ನು ತೆಗೆದು ಗೂಟಕ್ಕೆ ನೇತು ಹಾಕಲು ಹೋಗುತ್ತಾನೆ.
ಆಗ ಅವನ ಕಣ್ಣಿಗೆ ಗೋಡೆಯಲ್ಲಿ ಸಣ್ಣ ಬಿರುಕು ಕಾಣುತ್ತದೆ.
ಅವನ ದೃಷ್ಟಿ ಬಿರುಕಿನ ಮೂಲವನ್ನು ಹುಡುಕುತ್ತಾ ಬಂದಾಗ
ಅದು ನೆಲದ ಮಟ್ಟದಿಂದ ಹೊರಟಿರುವುದು ಕಾಣಿಸುತ್ತದೆ. ಅಲ್ಲೇ ಬಿರುಕಿನಿಂದ ಸಣ್ಣ ಬೇರು ಹೊರ ಬಂದಿದೆ.
ಅದನ್ನು ಕೈಯಲ್ಲಿ ಮುಟ್ಟಿ ಪರೀಕ್ಷಿಸುತ್ತಾನೆ. ಬದಿಯ ಕಿಟಕಿಯಿಂದ ಹೊರಕ್ಕೆ ಮರದತ್ತ ನೋಡುತ್ತಾನೆ.
ಮನೆಯಿಂದ ಹೊರಬರುತ್ತಾನೆ.
ಇವನ ಮನೆಯ ಗೋಡೆಗೂ ಕಾಡುಮರಕ್ಕೂ ಸುಮಾರು ಐದಾರು ಅಡಿಯ ಅಂತರವಷ್ಟೇ ಇದೆ.
ಅದನ್ನು ಕೊಂಚ ನಿಂತು ಗಮನಿಸಿದವನಿಗೆ ಅಲ್ಲೂ ಗೋಡೆಯ ಬಿರುಕು ಕಾಣಿಸುತ್ತದೆ.

ಅಷ್ಟರಲ್ಲಿ ಹುಡುಗಿ ಮನೆಯ ಒಳಗಿನಿಂದ ಹೊರ ಬರುತ್ತಾಳೆ.

ಹುಡುಗಿ : ಏನಜ್ಜ ಅಂಗ್ ನೋಡ್ತಿದ್ದೀಯ?

ಗೊರವಯ್ಯ : ಬಿರುಕು ಕಣವ್ವ… ಈ ಮರದ ಬೇರು ಅದಿ ಕೊರೀತಾ ಐತೆ. ಗ್ವಾಡೆ ನೋಡು,
ಎಂಗ್ ಬಿರುಕ್ ಬಿಟ್ಟೈತೆ…

ಹುಡುಗಿ : ಬಿರುಕ್ ಬಿಟ್ರೆ ಏನಾಗುತ್ತಜ್ಜ?

ಗೊರವಯ್ಯ : ಇಂಗೇ ಇದು ದೊಡ್ಡದಾದ್ರೆ ಒಂದಿನ ಗ್ವಾಡೇನೆ ಬಿದ್ದೋಗುತ್ತೆ…

ಹುಡುಗಿ : ಗ್ವಾಡೆ ಬಿದ್ರೆ?

ಗೊರವಯ್ಯ : ಮಾಡು ಬಿದ್ದೋಗುತ್ತೆ…

ಹುಡುಗಿ : ಮಾಡು ಬಿದ್ರೆ?

ಗೊರವಯ್ಯ : ಮನೇನೆ ಬಿದ್ದೋದಂಗಲ್ವ…

ಹುಡುಗಿ : ಮನೇ ಬಿದ್ರೆ ?

ಗೊರವಯ್ಯ : (ರಾಗವಾಗಿ) ಸಂಭೋ ಸಂಕರ…

ಹುಡುಗಿ : (ಹುಸಿನಗುತ್ತಾ) ಸಂಭೋ ಸಂಕರ…(ಒಟ್ಟಿಗೇ) ಸಂಭೋ ಸಂಕರ

ಕಟ್ ಟು…

ದೃಶ್ಯ – ೪ / ಬೆಳಗ್ಗೆ / ವೆಂಕಟೇಶಯ್ಯನ ಮನೆ

ಇದು ತಾಲ್ಲೂಕು ಕೇಂದ್ರದಲ್ಲಿರುವ ಸಾಧಾರಣ ಮನೆ.
ಈ ಮನೆಯ ಯಜಮಾನ ವೆಂಕಟೇಶಯ್ಯ. ಈತನ ವಯಸ್ಸು ಸುಮಾರು ೫೫ ವರ್ಷ.
ಈತ ಸರ್ಕಾರಿ ಉದ್ಯೋಗಿ.
ದೃಶ್ಯ ಆರಂಭವಾದಾಗ ಆಫೀಸಿಗೆ ಹೋಗಲು ತಯಾರಿ ನಡೆಸುತ್ತಿದ್ದಾನೆ.

ಭವಾನಿ : (ಮೆಲ್ಲನೆ) ಅಪ್ಪಾ…

ವೆಂಕಟೇಶಯ್ಯ : ಇನ್ನು ಯಾಕಮ್ಮ ಅಪ್ಪಾ ಅಂತ ರಾಗ ಎಳೀತೀಯ? ಮುಂದೆ ಓದಿಸೋಕ್ ಅಗಲ್ಲ ಅಂತ
ನಾನು ಆವತ್ತೇ ಹೇಳಲಿಲ್ಲವೇನಮ್ಮ? ನಿಮ್ಮಕ್ಕನ ಮದ್ವೇ ಸಾಲಾನೇ ಜೇಬುತುಂಬ ಇದೆ! ಇನ್ನು ನಿನ್ನ ಓದಿಗೆಲ್ಲಿ ದುಡ್ಡು ತರಲಿ?

ಅಷ್ಟರಲ್ಲಿ ಒಳಗಿನಿಂದ ಅವನ ಹೆಂಡತಿ ಊಟದ ಕ್ಯಾರಿಯರ್ ತಂದು ಕೊಡುತ್ತಾ,

ಹೆಂಡತಿ : ನಿನ್ನ ಹಿಂದೆ ಇನ್ನೂ ಒಬ್ಳ್ರು ಇದ್ದಾಳೆ ಅನ್ನೋದನ್ನ ಮರೀಬೇಡ ಕಣೆ. ಓದಿದ್ದು-ಗೀದಿದ್ದು
ಎಲ್ಲಾ ಸಾಕು ಇವಳಿಗೆ ಒಂದು ಗಂಡು ಹುಡುಕಿ.

ಮಗಳು : ನಂಗೆ ಈಗ್ಲೇ ಮದ್ವೆ(ಅಳುವಿನ ಧ್ವನಿ) ಬೇಡ. ನಾನು ಇನ್ನೂ ಓದಬೇಕು.

ವೆಂಕಟೇಶಯ್ಯ ಅವಳ ಹತ್ತಿರ ಬಂದು ತಲೆ ನೇವರಿಸಿ,

ವೆಂಕಟೇಶಯ್ಯ : ನೀನು ಓದಲಿ ಅನ್ನೋ ಆಸೆ ನಂಗೂ ಇದೆಯಮ್ಮ. ಆದ್ರೆ ಕೈ ನಡೀಬೇಕಲ್ಲ!
ಮೂರೂವರೆ ಸಾವಿರ ರೂಪಾಯಿ ಬೇಸಿಕ್ ಇಟ್ಕೊಂಡು ಇಷ್ಟು ಮಾಡಿರೋದೇ ಹೆಚ್ಚು. ಇನ್ನು ಒಂದ್ ವರ್ಷಕ್ಕೆ ರಿಟೈರ್ ಆಗಿ ಮನೇಗ್ ಬರೋ ನಿಮ್ಮ ಅಪ್ಪನಿಗೆ ಸಾಲನೂ ಹುಟ್ಟಲ್ಲ.

ಅಷ್ಟರಲ್ಲಿ ಮನೆಯ ಹೊರಗೆ ಡಮರುಗ ಬಡಿದ ಸದ್ದು.

ಧ್ವನಿ : ಯಾರಣ್ಣಿ ಮನೆ ಒಳಗೆ, ಲಿಂಗ ಬಿಕ್ಷೆ ನೀಡಿ, ಜಂಗಮನ ಪಾದ ಕಟ್ಟಿ…

ವೆಂಕಟೇಶಯ್ಯ: ನೋಡೋಗು,…

ಮಗಳು ಹೊರಗೆ ಬಂದು ಭಿಕ್ಷೆ ಹಾಕುತ್ತಾಳೆ. ಭಿಕ್ಷೆ ಸ್ವೀಕರಿಸಿದ ಆತ,

ಗೊರವಯ್ಯ : ಸಕಲ ಭಾಗ್ಯ ಕೊಟ್ಟು ಕಾಪಾಡು ಪಾರ್ವತೀ ರಮಣಾ….

(ಎಂದು ಆಶೀರ್ವದಿಸಿ ಮನೆ ಒಳಕ್ಕೆ ಕತ್ತು ಚಾಚಿ ನೋಡುತ್ತಾನೆ)

ಗೊರವಯ್ಯ : ತಾಯೀ, ಅಟ್ಟಿವಳಗೆ ಅಪ್ಪಾವರು ಅವರಾ?

ಮಗಳು : ಹುಂ, ಇದ್ದಾರೆ…

ಗೊರವಯ್ಯ : ವಸಿ ಅವರನ್ನ ಕರದರೇ?

ಅಷ್ಟರಲ್ಲಿ ರೆಡಿಯಾದ ವೆಂಕಟೇಶಯ್ಯ ತಾನೇ ಆಚೆ ಬರುತ್ತಾನೆ. ಅವನನ್ನು ನೋಡಿದ ಗೊರವಯ್ಯ ಅತಿ ವಿನಯದಿಂದ,

ಗೊರವಯ್ಯ : ಅಡ್ಡಬಿದ್ದೆ ಸ್ವಾಮಿ…

ವೆಂಕಟೇಶಯ್ಯ : ಹುಂ,

ಎಂದು ಹೇಳಿ ಹೆಚ್ಚಿನ ಮಾತಿಗೆ ನಿಂತರೆ ಬಟ್ಟೆ ಬೇಡಬಹುದು ಎಂದು ಅವನನ್ನು ನಿರ್ಲಕ್ಷಿಸಿ
ಬಾಗಿಲಬಳಿ ಇದ್ದ ತನ್ನ ಸೈಕಲ್ ತೆಗೆಯುತ್ತಾನೆ.

ಗೊರವಯ್ಯ : ಸ್ವಾಮೀ ಮರದ ಬೇರು ಮನೇ ಬೀಳಸ್ತಾ ಐತೆ, ಮರ ತೆಗ್ಸಿ ಮನೆ ಉಳಿಸಿಕೊಡಬೇಕು

ವೆಂಕಟೇಶಯ್ಯ : ಏನ್ ತತ್ವಪದ ಹೇಳ್ತಾ ಇದ್ದೀಯಾ?

ಗೊರವಯ್ಯ : ಯಾವ ತತ್ವಾನೂ ಇಲ್ಲ ಬುದ್ಧಿ… ಮರದ ಬೇರಿಂದ ಮನೆ ಬೀಳ್ತಾ ಅದೆ… ಮರ
ಕಡೀಬೇಕಾಗದೆ ಅಷ್ಟೇ…

ವೆಂಕಟೇಶಯ್ಯ : ನಿಂಗ್ ಪರ್ಮಿಷನ್ ಬೇಕಾ?

ಗೊರವಯ್ಯ : ಹುಂ, ಆಪೀಸ್‌ತಾವ ಓಗಿದ್ದೆ ಬುದ್ಧಿ, ತಾವು ಬರಬೇಕೂಂದ್ರು …

ವೆಂಕಟೇಶಯ್ಯ : ಅಲ್ಲೇ ಇದ್ರೆ ಬರತಿದ್ದೆ…
ಗೊರವಯ್ಯ ತನ್ನ ಹೆಗಲಿನಲ್ಲಿದ್ದ ಎರಡು ತೆಂಗಿನಕಾಯಿಗಳನ್ನು ಅವನ ಮುಂದೆ ಹಿಡಿಯುತ್ತಾನೆ.
ವೆಂಕಟೇಶಯ್ಯ : ಬ್ಯಾಡ …

ಗೊರವಯ್ಯ : ನಾನೇನ್ ದುಡ್ಡು ಕೇಳಿದ್ನಾ ಬುದ್ಧಿ. ತಗಳವ್ವಾ….

ಭವಾನಿ ಗೊರವಯ್ಯನಿಂದ ಕಾಯಿ ಪಡೆಯುತ್ತಾಳೆ.
ವೆಂಕಟೇಶಯ್ಯ ಸೈಕಲ್ ಏರಿ ಹೊರಡುತ್ತಾನೆ.
ಗೊರವಯ್ಯ ಸೈಕಲ್ ಹೋದ ಹಾದಿ ಬಿಟ್ಟು ಸಂದು ರಸ್ತೆಯಲ್ಲಿ ನಡೆಯುತ್ತಾನೆ.
ಕಟ್ ಟು…

ದೃಶ್ಯ – ೫ / ಹಗಲು / ಹೊರಾಂಗಣ-ಒಳಾಂಗಣ/ ಕಛೇರಿ

ವೆಂಕಟೇಶಯ್ಯ ಕಚೇರಿಯ ಬಳಿಗೆ ಸೈಕಲ್ ಏರಿ ಬರುತ್ತಾನೆ.
ಅಲ್ಲೇ ಜೀಪು ನಿಂತಿದೆ… ಡ್ರೈವರ್ ಗಾಳಿ ಪಂಪ್ ಮಾಡುತ್ತಿದ್ದಾನೆ. ವೆಂಕಟೇಶಯ್ಯನಿಗೆ ವಿಶ್ ಮಾಡುತ್ತಾನೆ.
ಬಾಗಿಲಲ್ಲಿ ನಿಂತಿದ್ದ ಜವಾನ, ವೆಂಕಟೇಶಯ್ಯ ಬಂದದ್ದನ್ನು ನೋಡಿ
ಓಡಿ ಹೋಗಿ ಅವನಿಂದ ಸೈಕಲ್ ಪಡೆದು ಅದನ್ನು ಸ್ಟ್ಯಾಂಡ್‌ನತ್ತ ಒಯ್ಯುತ್ತಾನೆ.
ವೆಂಕಟೇಶಯ್ಯ ಮೆಟ್ಟಿಲು ಹತ್ತುತ್ತಾನೆ.
ಅಲ್ಲಿ ಆಗಲೇ ಗೊರವಯ್ಯ ಬಂದು ಕುಳಿತಿದ್ದಾನೆ.
ಇಬ್ಬರೂ ಪರಸ್ಪರ ಒಂದು ಕ್ಷಣ ನೋಡುತ್ತಾರೆ.

ಫೋನ್‌ನಲ್ಲಿ ಮಾತಾಡುತ್ತಿದ್ದ ಗುಮಾಸ್ತನೊಬ್ಬ ವೆಂಕಟೇಶಯ್ಯನನ್ನು ನೋಡಿ ಮಾತು ನಿಲ್ಲಿಸಿ ಫೋನ್ ಕೆಳಗಿಡುತ್ತಾನೆ.
ಟೈಪ್‌ರೈಟರ್‌ನ ಸದ್ದು ಕೇಳುತ್ತಲೇ ಇದೆ.
ವೆಂಕಟೇಶಯ್ಯ ಬಂದು ತನ್ನ ಜಾಗದಲ್ಲಿ ಕೂರುತ್ತಾನೆ.
ಜವಾನ ಇವನ ಮುಂದೆ ಕೆಲವು ಫೈಲ್‌ಗಳನ್ನು ಇಡುತ್ತಾನೆ.

ಜವಾನ : ಮೈಸೂರ್‌ನಿಂದ ಫೋನ್ ಬಂದಿತ್ತು…

ವೆಂಕಟೇಶಯ್ಯ : ಯಾರು?

ಜವಾನ : ಹೊಸಾ ಸಾಹೇಬ್ರಂತೆ…

ವೆಂಕಟೇಶಯ್ಯ : ಏನಂತೆ?

ಜವಾನ : ಎಲ್ಡು ಮೂರು ದಿನದಲ್ಲಿ ಬಂದು ಚಾರ್ಜ್ ತಗಾತರಂತೆ.

ವೆಂಕಟೇಶಯ್ಯ : ಸರಿ…

ಎಂದು ಯಾವುದೋ ಫೈಲ್ ತೆರೆಯುತ್ತಾನೆ.
ಗೊರವಯ್ಯ ವೆಂಕಟೇಶಯ್ಯನ ಮುಂದೆ ಬಂದು ನಿಲ್ಲುತ್ತಾನೆ.
ವೆಂಕಟೇಶಯ್ಯ ‘ಏನು?’ಎಂಬಂತೆ ನೋಡುತ್ತಾನೆ.

ಗೊರವಯ್ಯ : ಸ್ವಾಮೀ, ನಮ್ಮಟ್ಟಿ ಗ್ವಾಡೆಗೆ ಒಂದು ಮರ ಬೇರು ಬಿಟ್ಕಂಡದೆ….

ವೆಂಕಟೇಶಯ್ಯ: ಮರ ಕಡಿಯಾದು ಅಂದ್ರೆ ಸುಮ್ನೆ ಅಲ್ಲ. ಅದಕ್ಕೆ ಜಾಗ ನೋಡಬೇಕು, ಇನ್ಸ್‌ಪೆಕ್ಷನ್
ಆಗಬೇಕು. ಆಮೇಲೆ ಪರ್ಮಿಶನ್ನು. ಎಲ್ಲಾದ್ರು ಅದು ಗಂಧದ ಮರ ಆಗಿ, ನಾವೂ ನೋಡ್ದೆ ನೀನು ಅದನ್ನ ಕತ್ರಸಾಕಿ ಬಿಟ್ರೆ, ನಮ್ಮ ಕುತ್ಗೆಗೆ ಬರುತ್ತೆ …

ಗೊರವಯ್ಯ : ಗಂಧದ ಮರ ಅಲ್ಲ ಬುದ್ಧೀ, ಕಾಡುಮರ….

ವೆಂಕಟೇಶಯ್ಯ : ಸರಿ, ನಾಕು ದಿನ ಬಿಟ್ಟು ಬಾ…

ಗೊರವಯ್ಯ ಮೌನವಾಗಿ ಹೋಗುತ್ತಾನೆ. ಆತ ಸತ್ಯವತಿಯ ಮುಂದೆ ಹಾಯುವಾಗ,

ಸತ್ಯವತಿ : ಗೊರವಯ್ಯ, ಮನೇಲಿ ಮಗೂ ತುಂಬಾ ಹೆದರಿಕೋತಾ ಇದೆ…

ಗೊರವಯ್ಯ : (ತನ್ನ ಕೈಚೀಲದಿಂದ ತೆಗೆದು) ತಗಾಳಿ. ಇದನ್ನ ಕಟ್ಟಿ ಸರಿ ಓಯ್ತದೆ.

ಆಕೆ ಅವನಿಗೆ ತನ್ನ ಪರ್ಸ್‌ನಿಂದ ಹಣ ತೆಗೆದು ಕೊಡುತ್ತಾಳೆ.
ಅದನ್ನ ಪಡೆದು ಕೊಳಲೂದಿ ಒಂದು ಕಾಂಡ ಅಲ್ಲೇ ಕುಣಿದು,

ಗೊರವಯ್ಯ : ಬಂದ ಕಷ್ಟ ಬಯಲಾಗಿ, ಸಕಲ ಭಾಗ್ಯ ಕೊಟ್ಟು ಕಾಪಾಡು ಪಾರ್ವತೀರಮಣಾ…

ಎಂದು ಆಶೀರ್ವದಿಸುತ್ತಾನೆ. ಈ ಶಬ್ದ ವೆಂಕಟೇಶಯ್ಯನನ್ನು ಕೆರಳಿಸುತ್ತದೆ.

ವೆಂಕಟೇಶಯ್ಯ : ಏಯ್, ಇಲ್ಲೇ ನಿನ್ನ ಆಟ ಕಟ್ಟಿಬಿಟ್ಟಲ್ಲಯ್ಯಾ, ಸುಮ್ಮನೆ ಆಚೆ ಹೋಗಿ ಕುಣಿ ಹೋಗು…
ಮನೇಗು ಆಪೀಸ್‌ಗೂ ವ್ಯತ್ಯಾಸ ಇಲ್ವಾ ಇವುನ್ಗೆ…

ಅಷ್ಟರಲ್ಲಿ ಫೋನ್ ರಿಂಗಾಗುತ್ತದೆ.
ಗೊರವಯ್ಯ ಆಚೆ ಹೊರಡುತ್ತಾನೆ.
ವೆಂಕಟೇಶಯ್ಯ ಸತ್ಯವತಿ ಕಡೆ ದುರುಗುಟ್ಟಿ ನೋಡಿ ಫೋನ್ ತೆಗೆದುಕೊಳ್ಳುತ್ತಾನೆ.

ವೆಂಕಟೇಶಯ್ಯ : ಹಲೋ… ವೆಂಕಟೇಶಯ್ಯ ಮಾತಾಡೋದು….
ಧ್ವನಿ : ನಾನ್ ರಘುನಂದನ್ ಅಂತ, ನಂಗೆ ನಿಮ್ಮಲ್ಲಿಗೆ ಪೋಸ್ಟಿಂಗ್ ಆಗಿದೆ.
ವೆಂಕಟೇಶಯ್ಯ : ನಮಸ್ಕಾರ ಸಾರ್… ಆಗಲೇ ಫೋನ್ ಮಾಡಿದ್ರಂತೆ ನಾನು ಸರ್ವೇಗೋಗಿದ್ದೆ ಸಾರ್.
ಧ್ವನಿ : ಸರಿ… ಭಾನುವಾರ ಬರತಿದ್ದೀನಿ. ಜೊತೇಲಿ ನನ್ನ ಫ್ಯಾಮಿಲಿ ಇರುತ್ತೆ…
ವೆಂಕಟೇಶಯ್ಯ : ಇಲ್ಲಿ ಉಳ್ಕಳೋಕೆ ಏನೂ ಯೋಚ್ನೆ ಮಾಡಬೇಕಿಲ್ಲ ಸಾರ್. ಕ್ವಾರ್ಟರ್ಸ್ ಇದೆ, ಹಿಂದಿನ
ಸಾಹೇಬರು ಅಲ್ಲೇ ಇದ್ರು, ಖಾಲಿ ಇದೆ, ನೀವು ಬರೋದ್ರೊಳ್ಗೆ ಕ್ಲೀನ್ ಮಾಡ್ಸಿ ಇಡಸಿರತೀನಿ. ನೀವು ಆರಾಮಾಗಿ ಬಂದು ಸಂಸಾರ ಹೂಡಬಹುದು ಸರ್…
ಧ್ವನಿ : ಸರಿ ಇಡತೀನಿ.
ವೆಂಕಟೇಶಯ್ಯ : ಓಕೆ ಸರ್… ನಮಸ್ಕಾರ

ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರೂ ಈ ಮಾತಿಗೆ ತಿರುಗಿ ನೋಡುತ್ತಾರೆ.
ಒಬ್ಬೊಬ್ಬರ ಭಾವ ಒಂದೊಂದು! ಬೇಸರ, ಸಂತೋಷ, ನಿರ್ಲಿಪ್ತತೆ ಇತ್ಯಾದಿ….
ಕಟ್ ಟು…

ದೃಶ್ಯ – ೬ / ಹಗಲು / ಬಸ್ ನಿಲ್ದಾಣ

ವೆಂಕಟೇಶಯ್ಯ ಜೀಪಿನಲ್ಲಿ ಕುಳಿತು ಕಾದಿದ್ದಾನೆ.
ಆಗ ಹಾರ್ನ್ ಮಾಡುತ್ತಾ ಪ್ರೈವೇಟ್ ಬಸ್ಸು ಬರುತ್ತದೆ.
ರಘುನಂದನ್ ಬಸ್ಸಿನಿಂದ ಇಳಿಯುತ್ತಾನೆ. ಜೊತೆಯಲ್ಲಿ ಮಡದಿ ಸುಮ ಕೂಡ ಇದ್ದಾಳೆ.
ರಘುನಂದನ್‌ನ ವಯಸ್ಸು ಸುಮಾರು ೪೦-೪೫ ವರ್ಷವಿರಬಹುದು.
ವೆಂಕಟೇಶಯ್ಯ ಜೀಪಿನಿಂದ ಇಳಿದು ಬಂದು ಅವರನ್ನು ತಾನೇ ಗುರುತಿಸಿ ಸ್ವಾಗತಿಸುತ್ತಾನೆ.

ವೆಂಕಟೇಶಯ್ಯ : ರಘುನಂದನ್ ಸಾರ್ ಅಲ್ವಾ ಸರ್ ?
ರಘುನಂದನ್ : ಹೌದು…
ವೆಂಕಟೇಶಯ್ಯ : ಸಾರ್ ನಮಸ್ಕಾರ. ನಾನು ವೆಂಕಟೇಶಯ್ಯ ಅಂತ ಸಾರ್.

ರಘುನಂದನ್ : ನಮಸ್ಕಾರ. (ಹಿಂದೆ ಇದ್ದ ಹೆಣ್ನನ್ನು ತೋರಿಸುತ್ತಾ) ನನ್ನ ಹೆಂಡತಿ ಸುಮಾ …

ವೆಂಕಟೇಶಯ್ಯ : ನಮಸ್ಕಾರಾಮ್ಮ… ಬನ್ನಿ ಲಗ್ಗೇಜ್ ಕೊಡಿ ಇಲ್ಲಿ. ಜೀಪ್ ಇದೆ, ಈ ಕಡೆ ಬನ್ನಿ…

ಎಂದು ಜೀಪಿನ ಬಳಿ ಕರೆದೊಯ್ಯುತ್ತಾನೆ. ಎಲ್ಲರೂ ಜೀಪೇರುತ್ತಾರೆ.
ರಸ್ತೆಯಲ್ಲಿ ಹೋಗುತ್ತಾ ವೆಂಕಟೇಶಯ್ಯ ತನ್ನ ಬಗ್ಗೆ ಊರಿನ ಬಗ್ಗೆ ಮಾತಾಡುತ್ತಾನೆ.

ವೆಂಕಟೇಶಯ್ಯ : ಇದೇ ಸಾರ್ ನಮ್ಮ ಈ ಕರಡಿಗುಡ್ಡದ ಮುಖ್ಯ ರಸ್ತೆ.

ಎಂದಾಗ ಜೀಪು ಸಡನ್ ಆಗಿ ಬ್ರೇಕ್ ಹಾಕುತ್ತದೆ. ಕುಳಿತವರು ಮುಗ್ಗರಿಸುತ್ತಾರೆ.
ಜೀಪಿಗೆ ಎಮ್ಮೆಯೊಂದು ಅಡ್ಡ ಬಂದಿರುತ್ತದೆ. ಅವು ರಸ್ತೆ ದಾಟಿದ ನಂತರ ಜೀಪು ಮುಂದುವರೆಯುತ್ತದೆ.

ಸುಮ : ಇಲ್ಲಿ ಸುತ್ತ-ಮುತ್ತಾ ತುಂಬಾ ಕರಡಿಗಳು ಇವೆಯಾ?

ವೆಂಕಟೇಶಯ್ಯ : (ನಕ್ಕು) ನಾನಂತೂ ಇಲ್ಲೀವರೆಗೂ ಒಂದೇ ಒಂದು ಕರಡೀನು ನೋಡಿಲ್ಲ.
ಆದ್ರೆ ಇಲ್ಲಿ ಜನ ಸ್ವಲ್ಪ ಕರಡಿಗಳ ಹಾಗೆ ಅಷ್ಟೇ (ಎಂದು ತನ್ನ ಜೋಕಿಗೆ ತಾನೇ ನಗುತ್ತಾ). ಬಹುಶಃ ಬಹಳ ಹಿಂದೆ ಕರಡಿಗಳು ತುಂಬಾ ಇದ್ವು ಅಂತ ಕಾಣುತ್ತೆ, ಅದಕ್ಕೇ ಈ ಊರಿಗೆ ಕರಡಿಗುಡ್ಡ ಅಂತ ಹೆಸರು ಬಂದಿರಬೇಕು. ಸುತ್ತಲೂ ಗುಡ್ಡಗಳ ಸಾಲು, ಇದಕ್ಕೆ ಹೊಂದಿಕೊಂಡ ಹಾಗೆ ದಟ್ಟವಾದ ಕಾಡಿದೆ. ಅಲ್ಲಿ ಕರಡಿ, ಜಿಂಕೆ, ಹುಲಿ ಕೂಡ ಇದೆ ಅಂತ ಹೇಳ್ತಾರೆ.
ಇವನು ಈ ಮಾತಾಡುವಾಗ ಹಂದಿಗಳ ಹಿಂಡು ರಸ್ತೆಯಲ್ಲಿ ಹಾದು ಹೋಗುವುದು,
ಇತ್ಯಾದಿ ಹಳ್ಳಿಯ ವಾತಾವರಣಕ್ಕೆ ಸಂಬಂಧಿಸಿದ ದೃಶ್ಯಗಳನ್ನು ತೋರಿಸಲಾಗುವುದು.
ಅದನ್ನು ನೋಡಿ ಸುಮ ಮುಖ ಕಿವುಚಿದರೆ, ರಘುನಂದನ್ ನಿರ್ಲಿಪ್ತನಾಗಿರುತ್ತಾನೆ.
ಜೀಪು ಮುಖ್ಯ ರಸ್ತೆಯಿಂದ ಸಣ್ಣ ರಸ್ತೆಗೆ ತಿರುಗುತ್ತದೆ.

ದೃಶ್ಯ – ೭ / ಹಗಲು / ಹೊರಾಂಗಣ-ಒಳಾಂಗಣ / ಕ್ವಾರ್ಟರ್ಸ್

ಜೀಪು ಕ್ವಾರ್ಟರ್ಸ್ ಮುಂದೆ ಬಂದು ನಿಲ್ಲುತ್ತದೆ.
ವೆಂಕಟೇಶಯ್ಯ ತಾನು ಮೊದಲು ಇಳಿದು ಕ್ವಾರ್ಟರ್ಸ್‌ನ ಬೀಗ ತೆಗೆಯುತ್ತಾನೆ.
ರಘುನಂದನ್ ಮತ್ತು ಸುಮ ಅವನನ್ನು ಹಿಂಬಾಲಿಸುತ್ತಾರೆ.

ವೆಂಕಟೇಶಯ್ಯ : ಇದನ್ನ ಕಟ್ಟಿಸಿ ಸುಮಾರು ಇಪ್ಪತ್ತು ವರ್ಷ ಆಗಿರಬಹುದು ಸಾರ್. ಎರಡು ರೂಂ ಇದೆ.
ಹಾಲು, ಅಡಿಗೆ ಮನೆ, ಬಚ್ಚಲು ಮನೆ. ಹಿಂದೆ ಹಿತ್ತಲು ಇದೆ. ಅಲ್ಲಿ ಬಾವಿ ಕೂಡ ಇದೆ.

ರಘುನಂದನ್ ಮತ್ತು ಸುಮ ಮನೆಯನ್ನೊಮ್ಮೆ ಸುತ್ತು ಹಾಕಿಬರುತ್ತಾರೆ.
ಅಲ್ಲಲ್ಲಿ ಜೇಡರ ಬಲೆ, ಮಣ್ಣು ಬಿದ್ದಿರುವುದು, ಧೂಳು ಉಳಿದಿರುವುದು ಕಾಣುತ್ತದೆ.
ರಘುನಂದನ್ ಅದನ್ನು ಗಮನಿಸಿದಾಗ ವೆಂಕಟೇಶಯ್ಯನಿಗೆ ಮುಜುಗರವಾಗುತ್ತದೆ.

ಸುಮ : ಇಲ್ಲಿ ಫೋನ್ ಇಲ್ವಾ?

ವೆಂಕಟೇಶಯ್ಯ : ಇದೆ ತಾಯಿ….

ರಘುನಂದನ್ ಅಲ್ಲೇ ಇದ್ದ ಹಳೆಯ ಕಾಲದ ಫೋನ್ ಕೈಗೆತ್ತಿಕೊಳ್ಳುತ್ತಾನೆ.
ಅದರಿಂದ ಯಾವ ಶಬ್ದವೂ ಬರುತ್ತಿಲ್ಲ ಎಂಬುದು ಅವನ ಮುಖಭಾವದಿಂದ ಗೊತ್ತಾಗುತ್ತದೆ.
ಸುಮ ರಘುನಂದನ್ ಮುಖ ನೋಡುತ್ತಾಳೆ.

ವೆಂಕಟೇಶಯ್ಯ : ನಿನ್ನೆ ಸರಿ ಇತ್ತಲ್ಲಾ… ಮಕ್ಕಳಿಗೆ ಫೋನ್ ಮಾಡಬೇಕಿತ್ತೇನೋ…

ಅದಕ್ಕೆ ಇಬ್ಬರೂ ಮಾತನಾಡುವುದಿಲ್ಲ.

ವೆಂಕಟೇಶಯ್ಯ : ಎಷ್ಟು ಮಕ್ಕಳು ತಾಯಿ?

ಸುಮ ರಘುನಂದನ್ ಮುಖ ನೋಡುತ್ತಾಳೆ.
ರಘುನಂದನ್ ತಲೆ ತಗ್ಗಿಸುತ್ತಾನೆ.
ವೆಂಕಟೇಶಯ್ಯ ಏನೋ ಅರ್ಥವಾದವನಂತೆ,

ವೆಂಕಟೇಶಯ್ಯ : ನೀವೇ ಪುಣ್ಯವಂತರು…. ನಂಗೆ ಮೂರು ಜನಾ ಹೆಣ್ಣು ಮಕ್ಕಳು!

ಎಂದು ಪೆಚ್ಚು ಪೆಚ್ಚಾಗಿ ನಗುತ್ತಾನೆ. ಅವನ ಮಾತಿಗೆ ಇಬ್ಬರೂ ಪ್ರತಿಕ್ರಿಯಿಸುವುದಿಲ್ಲ.

ವೆಂಕಟೇಶಯ್ಯ : ನೀವು ಸ್ವಲ್ಪ ರೆಸ್ಟ್ ತಗೊಂಡು ಸ್ನಾನ-ಗೀನ ಮುಗ್ಸಿ ಸಾರ್ … ನಾನ್ ಬರತೀನಿ.

ರಘುನಂದನ್ : ಆಯ್ತು…

ವೆಂಕಟೇಶಯ್ಯ ಹೋಗುತ್ತಾನೆ.
ರಘುನಂದನ್ ಬಾಗಿಲು ಹಾಕಿ ಬರುತ್ತಾನೆ.
ಸುಮ ಹಿಂಬಾಗಿಲಿನಿಂದ ಒಳಬರುತ್ತಾಳೆ.

ಸುಮ : ಇಂಪಾಸಿಬಲ್…

ರಘುನಂದನ್ : ಏನಾಯ್ತು?

ಸುಮ : ಟಾಯ್‌ಲೆಟ್‌ಗೆ ಕಾಲಿಡೋಕಾಗಲ್ಲ…

ರಘುನಂದನ್ : ಬಹಳ ದಿನದಿಂದ ಯಾರೂ ಬಳಸಿಲ್ಲ ಒಂದೊಂದಾಗಿ ಎಲ್ಲ ಸರಿ ಮಾಡ್ಕೊಂಡು ಹೊಸಾ
ಜಾಗಕ್ಕೆ ಹೊಂದಿಕೋಬೇಕು….

ಸುಮ : ಒಟ್ಟಿನಲ್ಲಿ ಕಾಡಿಗೆ ಕರಕೊಂಡು ಬಂದು, ಎಲ್ಲಾ ಪ್ರಾಣಿಗಳಿಗೂ ಅಡ್ಜೆಸ್ಟ್ ಮಾಡ್ಕೋಬೇಕು ಅಂತೀರ?

ರಘುನಂದನ್ : ಇಂಥಾ ಪರಿಸರ ಬೇಕು ಅಂದ್ರೂ ಸಿಟೀಲಿ ಸಿಗುತ್ತೇನೆ?

ಸುಮ : ನಾನು ಇಂಥಾ ಪರಿಸರ ಬೇಕು ಅಂತ ಯಾವಾಗ ನಿಮ್ಮನ್ನ ಕೇಳಿದ್ದೆ? ಈ ಭೂತಬಂಗಲೇಲಿ ನಾನು
ಒಬ್ಬಳೇ ಕಾಲ ಕಳೀಬೇಕು.

ಎಂದು ಹೊರಗೆ ಮಕ್ಕಳು ಆಟ ಆಡುತ್ತಿರುವುದನ್ನು ಅವಳು ಕಿಟಕಿಯಿಂದ ನೋಡುತ್ತಾಳೆ.
ಮಕ್ಕಳು ಕೇಕೆ ಹಾಕಿ ನಗುತ್ತಿದ್ದಾರೆ.
ರಘುನಂದನ್ ಅದನ್ನು ನೋಡಿ ಇರುಸು ಮುರುಸಾಗುತ್ತದೆ.

ಕಟ್ ಟು…

ದೃಶ್ಯ- ೮ / ಹಗಲು / ಕಚೇರಿ

ರಘುನಂದನ್ ಚೇಂಬರ್‌ನಲ್ಲಿ ಸ್ಟಾಫ್ ಎಲ್ಲ ನೆರೆದಿದ್ದಾರೆ.
ವೆಂಕಟೇಶಯ್ಯ ಎಲ್ಲರನ್ನೂ ಪರಿಚಯಿಸುತ್ತಾನೆ.

ವೆಂಕಟೇಶಯ್ಯ : ಸಾರ್ ಇವರು ಶ್ರೀಧರಮೂರ್ತಿ ಎಸ್‌ಡಿಸಿ. ನಾಲ್ಕು ವರ್ಷ ಆಯ್ತು ಇಲ್ಲಿಗ್ ಬಂದು ಒಳ್ಳೇ
ವರ್ಕರ್ರು… ಇವ್ರು ಸತ್ಯವತಿ ಟೈಪಿಸ್ಟು, ಇದೇ ಊರಿನವರು. ಇವರು ಮಹದೇವು ಅಂತ ಎಸ್‌ಡಿಸಿ, ಬಂದು ಒಂದು ವರ್ಷ ಆಯ್ತು. ಇನ್ನಿಬ್ಬರು ರಜಾದಲ್ಲಿದ್ದಾರೆ. ಈತ ಕೆಂಪಯ್ಯ ಅಂತ ಅಟೆಂಡರ್ರು, ನನ್ನ ಬಿಟ್ರೆ ಇವನೇ ಸೀನಿಯರ್ರು.

ರಘುನಂದನ್ : ಎಲ್ರಿಗೂ ನಮಸ್ಕಾರ, ನನ್ನ ಹೆಸರು ರಘುನಂದನ್ ಅಂತ. ಈ ಡಿಪಾರ್ಟ್‌ಮೆಂಟ್‌ನಲ್ಲಿ
ಹನ್ನೆರಡು ವರ್ಷ ಸರ್ವೀಸ್ ಆಗಿದೆ. ಮದುವೇಗೆ ಮುಂಚೆ ದಕ್ಷಿಣಕನ್ನಡ ಜಿಲ್ಲೇಲಿದ್ದೆ. ಮದುವೆಯಾದ ಮೇಲೆ ಮೈಸೂರ್‌ನಲ್ಲಿ ಸರ್ವೀಸ್ ಮಾಡ್ದೆ. ಇದು ನನ್ನ ಮೂರನೇ Posಣiಟಿg. ನಂಗೆ ಹಳ್ಳಿಗಳು, ಕಾಡು-ಮೇಡು ಅಂದ್ರೆ ತುಂಬಾ ಇಷ್ಟ. ಅದಕ್ಕೇ ಇಲ್ಲಿಗ್ ಹಾಕಿದಾಗ ತುಂಬಾ ಸಂತೋಷ ಪಟ್ಟು ಬಂದೆ. ಆಫೀಸ್‌ನ ಕೆಲ್ಸ Uಠಿ ಣo ಜಚಿಣe ಆಗಿರಬೇಕು, ಕೆಲಸದಲ್ಲಿ ಪ್ರಾಮಾಣಿಕತೆ, ಶಿಸ್ತನ್ನ ಮೈಗೂಡಿಸಿಕೊಂಡಿರಬೇಕು. ಯಾವುದೇ ಸಮಸ್ಯೆ ಇದ್ರೂ ನನ್ನ ಹತ್ರ ನೇರವಾಗಿ ಮಾತಾಡಿ… ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನ ಮರೀಬೇಡಿ… ಮೊದಲು ಆಫೀಸ್‌ನ ಕ್ಲೀನ್ ಮಾಡ್ಸಿ… ಸರಿಯಾಗಿ ಕೆಲ್ಸ ಮಾಡೋಕೆ, ಆಫೀಸ್‌ನ ಂಣmosಠಿheಡಿe ಚನ್ನಾಗಿರಬೇಕು…

ದೃಶ್ಯ – ೯ / ಆಫೀಸಿನ ಹೊರಗೆ

ಆಫೀಸಿನ ಹೊರಗೆ ಕಾರೊಂದು ಬಂದು ನಿಲ್ಲುತ್ತದೆ. ಕಾರಿನಿಂದ ಸಫಾರಿಧಾರಿಯೊಬ್ಬ ಇಳಿಯುತ್ತಾನೆ.
ಆಫೀಸಿನ ಗೇಟ್‌ನಲ್ಲಿದ್ದ ಜವಾನ ಎದ್ದು ಸಲ್ಯೂಟ್ ಹೊಡೆಯುತ್ತಾನೆ.

ಶ್ರೀಕಂಠಯ್ಯ : (ಮೆಲ್ಲನೆ) ಎಂಗಪ್ಪಾ ಹೊಸಾ ಸಾಹೇಬರು?

ಜವಾನ : (ತಾನೂ ಮೆಲ್ಲನೆ) ಸ್ವಲ್ಪ ಸ್ಟ್ರಿಕ್ಟು ಅನ್ಸುತ್ತೆ ಕಣಣ್ಣ

ಆಫೀಸಿನಲ್ಲಿ ಒಳಗೆ ಎಲ್ಲರೂ ಅವನನ್ನು ನೋಡಿ ನಮಸ್ಕರಿಸುತ್ತಾರೆ.
ಶ್ರೀಕಂಠಯ್ಯ ಟೇಬಲ್ ಮಧ್ಯೆ ನಡೆಯುತ್ತಲೇ,

ಶ್ರೀಕಂಠಯ್ಯ : ಎಲ್ಲಿ ಶ್ರೀಧರಮೂರ್ತಿ ನನ್ನ ಬಿಲ್ ಪಾಸ್ ಆಗಲೇ ಇಲ್ಲ.

ಶ್ರೀಧರಮೂರ್ತಿ : ಎಲ್ಲ ರೆಡಿ ಸಾರ್. ಸಾಹೇಬರು ಸೈನ್ ಆಗಬೇಕು ಅಷ್ಟೆ, ಈಗ್ ಕಳಿಸ್ತೀನಿ

ಶ್ರೀಕಂಠಯ್ಯ : ಬೇಗ ಕಳಿಸಿಬಿಡಪ್ಪ….

ಎಂದು ವೆಂಕಟೇಶಯ್ಯನ ಟೇಬಲ್ ಖಾಲಿ ಇರುವುದನ್ನು ನೋಡಿ, ಸತ್ಯವತಿಗೆ,

ಶ್ರೀಕಂಠಯ್ಯ : ಎಲ್ಲಮ್ಮ ಚಿಕ್ಕ ಸಾಹೇಬರು?

ಸತ್ಯವತಿ : ಒಳಗೆ ದೊಡ್ಡ ಸಾಹೇಬರತ್ರ ಮಾತಾಡ್ತಿದ್ದಾರೆ…

ಯಾರ ಪರ್ಮಿಷನ್ನೂ ಕೇಳದೆ ರಘುನಂದನ್ ಛೇಂಬರ್ ಬಾಗಿಲು ತೆರೆಯುತ್ತಾನೆ.
ಒಳಗೆ ರಘುನಂದನ್ ಹಾಗೂ ವೆಂಕಟೇಶಯ್ಯ ಮಾತನಾಡುತ್ತಿದ್ದಾರೆ.

ವ್ಯಕ್ತಿ : ನಮಸ್ಕಾರ ಸಾರ್, ನಾನು ಶ್ರೀಕಂಠಯ್ಯ ಅಂತ ಈ ತಾಲ್ಲೂಕಿನ ಕಂಟ್ರ್ಯಾಕ್ಟರ್ ಸಂಘದ ಅಧ್ಯಕ್ಷ.
ನೀವು ಇವತ್ತು ಚಾರ್ಜ್ ವಹಿಸಿಕೊಳ್ತೀರಿ ಅಂತ ಗೊತ್ತಾಯ್ತು, ವಿಶ್ ಮಾಡೋಕ್ ಬಂದೆ.

ರಘುನಂದನ್ : oಜಿಜಿiಛಿiಚಿಟ mಚಿಣಣeಡಿs ಜisಛಿuss ಮಾಡ್ತಿದ್ದೀವಿ. ಸ್ವಲ್ಪ ಹೊರಗಿರಿ, ನಾನೇ ಕರೀತೀನಿ.

ಶ್ರೀಕಂಠಯ್ಯನಿಗೆ ರಘುನಂದನ್ ಮಾತಿನಿಂದ ಪೆಚ್ಚಾದರೂ ತೋರಿಸಿಕೊಳ್ಳದೆ ‘ಆಯ್ತು ಸಾರ್’ ಎಂದು ಹೊರಬರುತ್ತಾನೆ.

ವೆಂಕಟೇಶಯ್ಯ : ಸಾರ್ ಈ ಆಸಾಮಿ ತುಂಬಾ ಠಿoತಿeಡಿಜಿuಟಟ ಸಾರ್…

ರಘುನಂದನ್ : ಇರಲಿ, ಆ ಆeveಟoಠಿmeಟಿಣಚಿಟ ಚಿಛಿಣiviಣies ಫೈಲ್ ಕೊಡಿ.

ವೆಂಕಟೇಶಯ್ಯ ಒಂದು ಫೈಲನ್ನು ಹುಡುಕಿ ತೆಗೆದುಕೊಡುತ್ತಾನೆ.
ಕ್ಲೋಸ್ ಅಪ್‌ನಲ್ಲಿ ‘ ಅಭಿವೃದ್ಧಿ ತಖ್ತೆ-’ ಫೈಲ್ ಹೆಸರು ಕಾಣಿಸುತ್ತದೆ.
ರಘುನಂದನ್ ಅದನ್ನು ತೆರೆಯುತ್ತಾನೆ.
ಅದರಲ್ಲಿ ಒಂದು ಬಿಳಿಯ ಖಾಲಿ ಹಾಳೆ ಮಾತ್ರ ಇದೆ.
ಇದನ್ನು ನೋಡಿ ರಘುನಂದನ್‌ಗೆ ಆಶ್ಚರ್ಯವಾಗುತ್ತದೆ.

ರಘುನಂದನ್ : ಇದೇನ್ರೀ ವೆಂಕಟೇಶಯ್ಯ ಖಾಲಿ ಫೈಲು!

ವೆಂಕಟೇಶಯ್ಯ : ಈ ವರ್ಷದ್ದು ಸಾರ್, ಅದಕ್ಕೇಂತ ಇನ್ನು ಈuಟಿಜs ಬಂದಿಲ್ಲ ಸಾರ್.

ರಘುನಂದನ್ ವಿಷಣ್ಣ ಭಾವದಿಂದ ನೋಡುತ್ತಾನೆ.

ರಘುನಂದನ್ : ನವೆಂಬರ್ ಮುಗೀತಾ ಬಂತಲ್ರೀ… ಫಂಡ್ಸ್‌ಗೆ ಬರೆದಿದ್ದೀರಾ?

ವೆಂಕಟೇಶಯ್ಯ : ಬರೆದಿದ್ದೀನಿ ಸಾರ್, ರೆಗ್ಯುಲರ್ ಆಗಿ ರಿಮೈಂಡರ್ಸೂ ಕಳಿಸಿದ್ದೀನಿ… ಪ್ರತಿ ಇಟ್ಟಿಲ್ಲ ಸಾರ್

ಆಫೀಸ್ ಹೊರಗೆ….

ವೆಂಕಟೇಶಯ್ಯ ಹೊರಬರುತ್ತಾನೆ. ಅಲ್ಲೇ ಕುಳಿತಿದ್ದ ಶ್ರೀಕಂಠಯ್ಯನ ಬಳಿ ಬಂದು,

ವೆಂಕಟೇಶಯ್ಯ : ಸಾಹೇಬ್ರು ಸ್ವಲ್ಪ sಣಡಿiಛಿಣ ಉ… ಏನು ಅಂದ್ಕೋಬೇಡಿ. ಹೋಗಿ ಮಾತಾಡಿಸಿ…

ಶ್ರೀಕಂಠಯ್ಯ : ಇರಲಿ… ಇರಲಿ…

ಎಂದು ಹೇಳಿ ತಾನೇ ಹೂವಿನ ಹಾರದ ತಟ್ಟೆ ಹಿಡಿದು ಒಳಹೋಗುತ್ತಾನೆ.

ದೃಶ್ಯ – ೧೦ / ಕಛೇರಿ (ಒಳಗೆ)

ಶ್ರೀಕಂಠಯ್ಯ ಛೇಂಬರ್ ಒಳಬಂದು,
ಶ್ರೀಕಂಠಯ್ಯ : ಕ್ಷಮಿಸಿ, ನಿಮ್ಮ ಕೆಲಸದ ಮಧ್ಯೆ ತೊಂದ್ರೆ ಕೊಡ್ತಾ ಇದ್ದೀನಿ.

ರಘುನಂದನ್ : ಪರವಾಗಿಲ್ಲ…. ಕೂತ್ಕೊಳಿ

ಶ್ರೀಕಂಠಯ್ಯ : (ನಿಂತೇ) ನಿಮಿಗೆ ಗೊತ್ತಿಲ್ಲ, ನಾವು ಒಂಥರದಲ್ಲಿ ಇಲಾಖೆಗೆ ಸಂಬಂಧಪಟ್ಟವರೇ. ಇಲಾಖೆ
ಸ್ಟಾಫ್ ಅಲ್ಲ ಅನ್ನೋದು ಬಿಟ್ರೆ ನಮ್ಮ ಕೆಲ್ಸ ಇದರ ಜೊತೆ ತಳಕು ಹಾಕಿಕೊಂಡಿದೆ; ಒಂಥರಾ ನಂಟಸ್ತನ.

ರಘುನಂದನ್ : ಕುಳಿತುಕೊಳಿ….

ಶ್ರೀಕಂಠಯ್ಯ : (ಕುಳಿತುಕೊಂಡು ಪೆಚ್ಚು ಪೆಚ್ಚಾಗಿ) ನೀವು ಮುಂದಿನ ಭಾನುವಾರ ನಮ್ಮ ಸಂಘದ ಜiಟಿಟಿeಡಿ
ಗೆ ಬರಬೇಕು. ಯಾವುದೇ ಆಫೀಸರ್ ಹೊಸದಾಗಿ ಬಂದಾಗಲೂ, ಹಳಬರಾಗಿ ಹೋಗುವಾಗಲೂ ಅವರನ್ನ ಗೌರವಿಸೋದು ನಮ್ಮ ಸಂಪ್ರದಾಯ.

ರಘುನಂದನ್ : ಕ್ಷಮಿಸಿ, ತುಂಬಾ ವರ್ಕ್ ಪ್ರೆಶರ್… ನೆಕ್ಟ್ ಟೈಂ ನೋಡೋಣ…

ಶ್ರೀಕಂಠಯ್ಯ : ದಯವಿಟ್ಟು ಇದನ್ನಾದ್ರು ಒಪ್ಪಿಸಿಕೋಬೇಕು. ಹೂವು ಹಣ್ಣು ಅಷ್ಟೇ.

ರಘುನಂದನ್ : (ಸ್ವಲ್ಪ ಯೋಚಿಸಿ) ಆಯ್ತು… (ಎಂದು ಹೇಳಿ ಟೇಬಲ್ ಮೇಲಿನ ಬೆಲ್ ಒತ್ತುತ್ತಾನೆ)
ಕೆಂಪಯ್ಯ : (ಒಳಬಂದು) ಸಾರ್…
ರಘುನಂದನ್ : ಈ ಹಣ್ಣನ್ನ ಎಲ್ಲರಿಗೂ ಹಂಚಿಬಿಡಪ್ಪ…
ಶ್ರೀಕಂಠಯ್ಯ : ನಾನು ಬರಲಾ?
ರಘುನಂದನ್ : ಸರಿ…
ಕಟ್ ಟು…

ದೃಶ್ಯ – ೧೧ / ಗೊರವಯ್ಯನ ಮನೆ

ಗೊರವಯ್ಯನ ಮನೆಯಲ್ಲಿ ತನ್ನ ವೇಷ ಇಟ್ಟುಕೊಂಡು ರಿಪೇರಿ ಮಾಡುತ್ತಾ ಹಾಡು ಹೇಳಿಕೊಡುತ್ತಿದ್ದಾನೆ.
ಗೌರಿ ಪೊರಕೆಯಿಂದ ಕಸ ಗುಡಿಸುತ್ತಾ ಹಾಡು ಕಲಿಯುತ್ತಿದ್ದಾಳೆ.

ಗೊರವಯ್ಯ : ಹುಟು ಬಂಜೆ ಹೊನ್ನಮ್ಮ, ಏಳು ತಲೆ ನಾಗೀಂದ್ರ

ಗೌರಿ : ಹುಟು ಬಂಜೆ ಹೊನ್ನಮ್ಮ, ಏಳು ತಲೆ ನಾಗೀಂದ್ರ

ಗೊರವಯ್ಯ : ಇಬ್ರೂ ಕುಂತುಗೊಂಡು ದುಕ್ಕವನು ಮಾಡುವಾಗ

ಗೌರಿ : ಇಬ್ರೂ ಕುಂತುಗೊಂಡು ದುಕ್ಕವನು ಮಾಡುವಾಗ

ಗೊರವಯ್ಯ : ಸ್ವಾಮಿ ಹಿಂಗ ತಿರುಗಿ ನೋಡುದ್ರು

ಗೌರಿ : ಅಜ್ಜಾ ನೋಡಿಲ್ಲಿ ಮಣ್ಣು…

ಬಿರುಕು ಸ್ವಲ್ಪ ದೊಡ್ಡದಾಗಿದೆ. ಅದರಿಂದ ಉದುರಿದ ಮಣ್ಣು ಗುಪ್ಪೆಯಾಗಿ ನಿಂತಿದೆ.
ಅದನ್ನು ಗುಡ್ಡೆ ಮಾಡಿದ ಹುಡುಗಿ ಮೊರಕ್ಕೆ ತುಂಬಿಕೊಳ್ಳುತ್ತಾಳೆ. ಅಲ್ಲೇ ಇದ್ದ ಗೊರವಯ್ಯನಿಗೆ ತೋರಿಸುತ್ತಾ,

ಗೊರವಯ್ಯ : ಹುಂ, ಬಿರುಕು ದೊಡ್ಡದಾಗ್ತಾ ಐತೆ… ಮರ ಕಡೀದೆ ಇದ್ರೆ ಕಷ್ಟಾನೇ…

ಗೌರಿ : (ನಗುತ್ತಾ) ಆಮೇಲೆ ಸಂಭೋ ಸಂಕರ…

ಗೊರವಯ್ಯ ಆಕೆಯ ತಮಾಷೆಯ ಮಾತಿಗೆ ನಗುವುದಿಲ್ಲ.
ಮೌನವಾಗಿ ಬಿರುಕನ್ನೇ ನೋಡುತ್ತಾನೆ.

ದೃಶ್ಯ – ೧೨ / ಕಛೇರಿ

ರಘುನಂದನ್ ಆಫೀಸಿನಲ್ಲಿ ಮೊದಲ ದಿನ, ಟಾಯ್‌ಲೆಟ್‌ನಿಂದ ಹೊರಬರುತ್ತಾನೆ.
ಅದೇ ಸಮಯಕ್ಕೆ ವೆಂಕಟೇಶಯ್ಯ ಫೈಲ್ ಹಿಡಿದು ಅವನ ಛೇಂಬರ್ ಒಳಬರುತ್ತಾನೆ.

ರಘುನಂದನ್ : ವೆಂಕಟೇಶಯ್ಯ, ಯಾಕ್ರೀ ನಲ್ಲೀಲ್ ನೀರೇ ಬರತಿಲ್ಲ?

ವೆಂಕಟೇಶಯ್ಯ : ಹೊರಗೆ ನೀರಿನ ಪೈಪು ಒಡೆದು ಹೋಗಿದ್ದರಿಂದ ಅದನ್ನ ಬ್ಲಾಕ್ ಮಾಡಿದಾರೆ ಸಾರ್

ರಘುನಂದನ್ : ಮತ್ತೆ ಆಫೀಸ್‌ನಲ್ಲಿ ನೀರಿಗೆ ಏನ್ ಮಾಡ್ತೀರ?

ವೆಂಕಟೇಶಯ್ಯ : ಕುಡಿಯುವ ನೀರನ್ನು ಪಕ್ಕದ ಮನೆಯಿಂದ ತರ್‌ತೀವಿ ಸಾರ್

ರಘುನಂದನ್ : ಮತ್ತೆ ಟಾಯ್‌ಲೆಟ್‌ಗೆ !?

ವೆಂಕಟೇಶಯ್ಯ : ನಾವ್ಯಾರೂ ಇಲ್ಲಿ ಟಾಯ್‌ಲೆಟ್ ಬಳಸುವುದೇ ಇಲ್ಲ, ಆಫೀಸ್ ಹಿಂದೆ ಹೋಗಿಬರುತ್ತೀವಿ

ರಘುನಂದನ್ : ಲೇಡೀಸ್ ಏನು ಮಾಡುತ್ತಾರೆ?

ವೆಂಕಟೇಶಯ್ಯ : ಅವರು ಮನೆಗೆ ಹೋಗಿ ಬರುತ್ತಾರೆ…

ರಘುನಂದನ್ : ಅಷ್ಟೊತ್ತು ಆಫೀಸಿನ ಕೆಲ್ಸ ಹೆಲ್ಡ್ ಅಪ್ ಆಗುತ್ತೆ ಅಲ್ಲವಾ?
(ರಘುನಂದನ್ ಪ್ರಶ್ನೆಗೆ ವೆಂಕಟೇಶಯ್ಯ ಉತ್ತರಿಸುವುದಿಲ್ಲ)
ರಘುನಂದನ್ : ಪೈಪ್ ಯಾಕ್ ಬ್ಲಾಕ್ ಮಾಡಿದ್ದಾರೆ ?

ವೆಂಕಟೇಶಯ್ಯ : ಒಂದು ದಿನ ನಮ್ಮ ಆಫೀಸಿಗೆ ನೀರು ಬರೋ ಪೈಪ್ ಮೇಲೆ ಗೌವರ್ನ್‌ಮೆಂಟ್ ಬಸ್ಸು
ಹರಿದು ಪೈಪ್ ಒಡೆದು ಹೋಯಿತು. ನಾವು ಜಿಲ್ಲಾಪಂಚಾಯಿತಿಯವರಿಗೆ ಹೀಗಾಗಿದೆ ಅಂತ ಬರದ್ವಿ. ಅವರು ಬಂದು ನೋಡಿ, ಒಡೆದು ಹೋಗಿರೋದು ನಿಮ್ಮ ಕಡೆ ಪೈಪು ಅದನ್ನ ನಾವು ಹಾಕೋಕಾಗಲ್ಲ, ನೀವೇ ಹಾಕಿಸಿಕೋಬೇಕು ಅಂದ್ರು… ಅಲ್ಲೀವರೆಗೂ ನೀರು ಹರಿದು ವೇಸ್ಟ್ ಆಗದೇ ಇರಲಿ ಅಂತ್ ಕನೆಕ್ಷನ್ ಬ್ಲಾಕ್ ಮಾಡಿದ್ರು. ಠಿiಠಿe ಡಿeಠಿಟಚಿಛಿe ಮಾಡೋಕೆ ಬರೆದಿದ್ದೀನಿ…

ರಘುನಂದನ್ : ಪೈಪು ಒಡೆದು ಎಷ್ಟು ದಿನ ಆಯ್ತು…

ವೆಂಕಟೇಶಯ್ಯ : ಮೂರು ತಿಂಗಳಾಯ್ತು, ಎರಡು ರಿಮೈಂಡರ್ ಕಳ್ಸಿದ್ದೀನಿ ಸಾರ್…

ರಘುನಂದನ್ : ಪ್ರತಿ ಇಟ್ಟುಕೊಂಡಿಲ್ಲ ತಾನೆ!

ವೆಂಕಟೇಶಯ್ಯ ತಲೆತಗ್ಗಿಸುತ್ತಾನೆ.

ರಘುನಂದನ್ :ಅಲ್ರೀ ವೆಂಕಟೇಶಯ್ಯ, ಇದನ್ನ ರಿಪೇರಿ ಮಾಡೋಕೆ ನೂರು-ಇನ್ನೂರು ರೂಪಾಯಿ
ಖರ್ಚಾಗಬಹುದು. ಅದನ್ನ ಹ್ಯಾಗೋ ರಿಪೇರಿ ಮಾಡಿಸೋದು ಬಿಟ್ಟು…..

ವೆಂಕಟೇಶಯ್ಯ ಮೌನವಾಗಿ ನಿಂತಿರುತ್ತಾನೆ.
ರಘುನಂದನ್ ಜೇಬಿನಿಂದ ಹಣ ತೆಗೆದುಕೊಟ್ಟು
ರಘುನಂದನ್ : ತಗೋಳಿ ಇವತ್ತೇ ಅದನ್ನ ರಿಪೇರಿ ಮಾಡಿಸಿ…
ಆಫೀಸಿನ ಗೋಡೆ ಗಡಿಯಾರ ಐದು ಗಂಟೆ ತೋರಿಸುತ್ತದೆ.

ದೃಶ್ಯ – ೧೩ / ಆಫೀಸಿನ ಹೊರಗೆ

ಆಫೀಸಿನ ಹೊರಗೆ ಗೊರವಯ್ಯ ಕಾದು ಕುಳಿತಿದ್ದಾನೆ. ಜೊತೆಯಲ್ಲಿ ಗೌರಿಯೂ ಇದ್ದಾಳೆ.
ಅವನ ದೃಷ್ಟಿ ಕಛೇರಿಗೆ ಹೋಗಿಬರುವವರ ಮೇಲೆಯೇ ಇದೆ.
ರಘುನಂದನ್ ಹೊರಗೆ ಬರುತ್ತಾನೆ. ಜವಾನ ಎದ್ದು ಸಲ್ಯೂಟ್ ಹೊಡೆಯುತ್ತಾನೆ.
ಜೀಪು ಬಂದು ನಿಲ್ಲುತ್ತದೆ. ರಘುನಂದನ್ ಅದನ್ನು ಏರಿ ಹೋಗುತ್ತಾನೆ.
ಅವನು ಹೊರಟಂತೆಯೇ ಆಫೀಸಿನ ಇತರರು ಒಬ್ಬೊಬ್ಬರಾಗಿ ಹೊರಬರುತ್ತಾರೆ.
ವೆಂಕಟೇಶಯ್ಯ ಬಂದು ತಾವು ಸೈಕಲ್ ನಿಲ್ಲಿಸಿದ್ದ ಜಾಗದ ಹತ್ತಿರ ಹೋಗುತ್ತಾನೆ.
ಗೊರವಯ್ಯ ಅವನತ್ತ ಸರ ಸರನೆ ನಡೆದುಹೋಗುತ್ತಾನೆ.

ಗೊರವಯ್ಯ : ಬುದ್ದೀ ಅಡ್ಡಬಿದ್ದೆ…

ವೆಂಕಟೇಶಯ್ಯ : ಹುಂ…

ಗೊರವಯ್ಯ : ಬುದ್ಧೀ, ಬಿರುಕು ದೊಡ್ಡದಾಗತಾ ಐತೆ, ಮರ ಕಡೀಬೇಕು ಬುದ್ಧಿ…

ವೆಂಕಟೇಶಯ್ಯ : ಆಫೀಸ್ ಬಾಗಿಲು ಹಾಕಿದ ಮೇಲೆ ಬಂದಿದ್ದೀಯಲ್ಲ…

ಗೊರವಯ್ಯ : ಆಗಲೇ ಬಂದೇ ಬುದ್ಧಿ, ನೀವು ಸಾಯೇಬ್ರತ್ರ ಅವ್ರೆ ಅಂದ್ರು ಅದ್ಕೇ ಇಲ್ಲಿ ಕಾಯಕಂಡು
ಕೂತಕಂಡೆ.

ವೆಂಕಟೇಶಯ್ಯ : ನಾಳೆ ಬಾ ನೋಡೋಣ.

ಗೊರವಯ್ಯ ತನ್ನ ವಲ್ಲಿಯಲ್ಲಿ ಮುಚ್ಚಿಕೊಂಡಿದ್ದ ಹಲಸಿನ ಹಣ್ಣನ್ನ ತೆಗೆಯುತ್ತಾನೆ.
ವೆಂಕಟೇಶಯ್ಯ ಸುತ್ತ ನೋಡಿ

ವೆಂಕಟೇಶಯ್ಯ : (ಗದರು) ನಿಂಗೆ ಆಫೀಸಿಗೂ ಮನೇಗೂ ವ್ಯತ್ಯಾಸನೇ ಗೊತ್ತಾಗಲ್ಲ.

ಗೊರವಯ್ಯ : (ಪಶ್ಚಾತ್ತಾಪ) ತಪ್ಪಾಯ್ತು ಬುದ್ಧಿ….
ಎಂದು ಸೈಕಲ್ ಏರುತ್ತಾನೆ.
ಗೊರವಯ್ಯ ಹಣ್ಣು ಹಿಡಿದು ಗೌರಿ ಇದ್ದಲ್ಲಿಗೆ ಬರುತ್ತಾನೆ.

ಗೌರಿ : ಅವ್ರಿಗೆ ಬ್ಯಾಡವಂತ…. ನಾವೇ ಕುಯ್ಯಕಂಡು ತಿನ್ನೋಣ.

ಗೊರವಯ್ಯ ಮಾತನಾಡುವುದಿಲ್ಲ.

ದೃಶ್ಯ – ೧೪ / ರಘುನಂದನ್ ಮನೆ

ರಘುನಂದನ್ ಜೀಪಿನಲ್ಲಿ ಬಂದಿಳಿಯುತ್ತಾನೆ.
ಸುಮ ಮನೆಯ ಹೊರಗೆ ಬಾಗಿಲು ಹಾಕಿ ಕುಳಿತಿದ್ದಾಳೆ.
ರಘುನಂದನ್ ಜೀಪನ್ನು ಕಳಿಸಿ ಸುಮಳ ಹತ್ತಿರ ಬಂದವನು,

ರಘುನಂದನ್ : (ನಾಟಕೀಯವಾಗಿ) ಏನೂ ರಾಣೀಸಾಹೇಬರು, ಎಲ್ಲಾ ಕೆಲ್ಸ ಮುಗ್ಸಿ ಗಾಳಿ ಸೇವನೆಗೋಸ್ಕರ
ಹೊರಗೆ ಕುಳಿತಿರೋ ಹಾಗಿದೆ

ಸುಮ : (ತಾತ್ಸಾರ) ಗಾಳೀನು ಇಲ್ಲ ಎಂಥದ್ದೂ ಇಲ್ಲ. (ಚಿಂತೆ) ಒಳಗಡೆ ಇರೋಕೆ ಭಯ ಆಗಿ ಇಲ್ಲಿ ಬಂದು
ಕುಳಿತಿದ್ದೀನಿ.

ರಘುನಂದನ್ : ಭಯಾನ!? ಯಾಕೆ?

ಸುಮ : (ಎದ್ದು ನಿಂತು) ಮನೇ ಒಳಗೆ ಯಾರೋ ಓಡಾಡಿದ ಹಾಗೆ ಆಗ್ತಾ ಇದೆ. ಅಡ್ಗೇ ಮನೇಲಿರೋ
ಪಾತ್ರೆಗಳೆಲ್ಲಾ ಕೆಳಗೆ ಬಿದ್ವು ಅಂತ ಹೋಗಿ ನೋಡಿದರೆ, ಏನೋ ಆಚೆಗೆ ಓಡಿ ಹೋದ ಹಾಗೆ ಆಯ್ತು. ಆಮೇಲೆ ಬೆಡ್‌ರೂಂನಲ್ಲಿ ಯಾವುದೋ ಸಾಮಾನು ಬಿತ್ತು. ಅದೇನೂಂತ ಅಲ್ಲಿ ಹೋಗಿ ನೋಡಿದ್ರೆ ಏನೋ ಮಂಚದ ಕೆಳಕ್ಕೆ ಹೋಗಿ ಸೇರಿಕೊಂಡಹಾಗಾಯ್ತು. ಭಯವಾಗಿ ಬೆಡ್‌ರೂಂ ಬಾಗಿಲು ಹಾಕ್ಕೊಂಡು ಇಲ್ಲಿ ಬಂದು ಕೂತಿದ್ದೀನಿ.

ರಘುನಂದನ್ : (ಆಶ್ಚರ್ಯ) ಹೌದಾ! ನಡೀ ನೋಡೋಣ.

ಎಂದು ಒಳಕ್ಕೆ ಹೋಗುತ್ತಾನೆ. ಸುಮ ಅವನನ್ನು ಹಿಂಬಾಲಿಸಿಕೊಂಡು ಹೋಗುತ್ತಾಳೆ.
ಮೆಲ್ಲನೆ ರೂಂ ಬಾಗಿಲು ತೆರೆಯುತ್ತಾನೆ. ರೂಮಿನಲ್ಲಿ ಯಾರೂ ಕಾಣುವುದಿಲ್ಲ.
ಮಂಚದ ಕೆಳಗೆ ಬಗ್ಗಿ ನೋಡುತ್ತಾನೆ. ಹೆಗ್ಗಣವೊಂದು ಗೋಡೆ ಬದಿಯಲ್ಲಿ ಓಡಿ ಬಾಗಿಲಾಚೆ ಹೋಗುತ್ತದೆ.
ಸುಮ ಭಯದಿಂದ ಕಿರುಚಿಕೊಳ್ಳುತ್ತಾಳೆ. ರಘು ಅದನ್ನೇ ಹಿಂಬಾಲಿಸಿಕೊಂಡು ಹೋಗುತ್ತಾನೆ.
ಹೆಗ್ಗಣ ಬಿಲವೊಂದಕ್ಕೆ ಹೋಗಿ ಮರೆಯಾಗುತ್ತದೆ. ಅಡುಗೆ ಮನೆ ಮೂಲೆಯಲ್ಲಿ
ಒಂದು ಡೊಗರು ಆಗಿದ್ದು, ಮಣ್ಣು ಗುಡ್ಡೆಯಾಗಿ ಬಿದ್ದಿರುವುದು ಗಮನಕ್ಕೆ ಬರುತ್ತದೆ.
ವಸ್ತುಸ್ಥಿತಿಯನ್ನು ಅರಿತವನಂತೆ ಗಾಬರಿಯಿಂದ ನಿಂತಿದ್ದ ಹೆಂಡತಿಯ ಬಳಿ ಬಂದು,

ರಘುನಂದನ್ : ಅಯ್ಯೋ ಹುಚ್ಚಿ, ಅದು ಹೆಗ್ಗಣ, ಅಡಿಗೆ ಮನೇಲಿ ನೋಡಿದೆಯಾ ದೊಡ್ಡ ಬಿಲ
ಮಾಡಿಕೊಂಡಿದೆ.

ಸುಮ : (ಬಗ್ಗಿ ನೋಡಿ) ಎಷ್ಟೊಂದು ದೊಡ್ಡದಾಗಿದೆ…

ರಘುನಂದನ್ : ಹಳ್ಳಿ ಮನೆಗಳಲ್ಲಿ ಇದು ಕಾಮನ್

ಸುಮ : ಏನು ಕಾಮನ್ನೋ, ಇದೆಲ್ಲಾ ನೋಡಿದ್ರೆ ಮೈ ಜುಂ ಅನ್ನ್ಸುತ್ತೆ.

ರಘುನಂದನ್ : ಅದೇನೂ ಮಾಡಲ್ಲ. ಆ ದೊಗರಿದೆಯಲ್ಲಾ ಅದನ್ನ ಮುಚ್ಚಿದ್ರೆ ಆಯ್ತು, ಮತ್ತೆ ಬರೋಲ್ಲ.

ಸುಮ : ನಂಗ್ ಒಬ್ಬಳಿಗೇ ಭಯವಾಗ್ತಿದೇರಿ…

ರಘುನಂದನ್‌ದು ಧೈರ್ಯ ತುಂಬುವ ಅಸಹಾಯಕ ನೋಟ.

ದೃಶ್ಯ – ೧೫ / ಕಛೇರಿ

ವೆಂಕಟೇಶಯ್ಯನ ಬಳಿಗೆ ರೈತನೊಬ್ಬ ವೆಂಕಟೇಶಯ್ಯನ ಬಳಿ ಬಂದು ನಮಸ್ಕಾರ ಹಾಕುತ್ತಾನೆ.

ರೈತ : ಸ್ವಾಮಿ ಕಾಪಿಗ್ ಬರತೀರ?

ವೆಂಕಟೇಶಯ್ಯ : ಯಾಕ್ ಬರಬೇಕು…

ರೈತ : ನಮ್ಮ ಜಮೀನ್ದು ಎಡವಟ್ಟಾಗ್ ಬುಟ್ಟೈತೆ… ಅದರದು ಒಸಿ ಮಾತಾಡ್ಬೇಕಿತ್ತು.

ವೆಂಕಟೇಶಯ್ಯ : ನಂಗೆ ಅದಕ್ಕೆಲ್ಲಾ ಟೈಂ ಇಲ್ಲ. ರೀ ಶ್ರೀಧರಮೂರ್ತಿ, ಇವನದ್ದೇನು ಅದು ನೋಡ್ರಿ.
ಕಾಫಿಗೆಂತ ಹೊರಗಡೆ ಹೋಗಬಾರದು ಅಂತ ಸಾಹೇಬರು ಹೇಳಿದ್ದಾರೆ. ಇಲ್ಲೇ ಕುಂತು ಫೈಸಲ್ ಮಾಡಿ.

ಶ್ರೀಧರಮೂರ್ತಿ ಇತರರು ಕಿರುಗಣ್ಣಲ್ಲಿ ಇದನ್ನು ನೋಡುತ್ತಾರೆ.
ಅಷ್ಟರಲ್ಲಿ ರಘುನಂದನ್ ಬರುತ್ತಾನೆ.
ವೆಂಕಟೇಶಯ್ಯ ರಘುನಂದನ್ ಹಿಂಬಾಲಿಸಿ ಛೇಂಬರ್‌ಗೆ ಬರುತ್ತಾನೆ.

ವೆಂಕಟೇಶಯ್ಯ : ಸಾರ್… ಹೆಡ್ ಆಫೀಸ್‌ನಿಂದ ಒಂದು ಲೆಟರ್ ಬಂದಿದೆ ಸಾರ್…
(ರಘುನಂದನ್ ಆದನ್ನು ಪಡೆದು)

ರಘುನಂದನ್ : ಏನಂತೆ… (ಒಮ್ಮೆ ಕಣ್ಣಾಡಿಸಿ) ….ಕರಡಿಗುಡ್ಡದ ಸಾಲಿನಲ್ಲಿ ದೊರೆತ ಲೋಹದ
ನಿಕ್ಷೇಪವೊಂದರ ಪರಿಶೀಲನೆಯ ಸಲುವಾಗಿ ವಿದೇಶಿ ತಜ್ಞರ ಸಮಿತಿಯೊಂದಿಗೆ ಮಂತ್ರಿ ರಾಜೂದೇಸಾಯಿಯವರು ಮುಂದಿನ ತಿಂಗಳ ೫-೬ ರಂದು ಕರಡೀಗುಡ್ಡಕ್ಕೆ ಭೇಟಿ ಕೊಡಲಿದ್ದಾರೆ. ಅವರನ್ನು ಇಳಿಸಲು ಕರಡಿಗುಡ್ಡದ ಮೇಲಿರುವ ಐಬಿಯನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ. ಇದರ ಬಂದೂಬಸ್ತ್ ಇತ್ಯಾದಿಗಳನ್ನು ತಕ್ಷಣವೇ ಪರಿಶೀಲಿಸಿ ವರದಿ ಮಾಡತಕ್ಕದ್ದು….

ರಘುನಂದನ್ : ಇದೇನ್ರೀ ವೆಂಕಟೇಶಯ್ಯ, ನಾನು ಬಂದು ಇನ್ನು ಒಂದು ವಾರ ಆಗಿಲ್ಲ ಆಗಲೇ ಮಂತ್ರಿಗಳು
ಇಲ್ಲಿಗೆ ಬರತೀನಿ ಅಂತ ಬರೆದಿದ್ದಾರಲ್ರೀ?

ವೆಂಕಟೇಶಯ್ಯ : ನೀವು ಬಂದ ಘಳಿಗೆ ಅಂತಾದ್ದು ಸಾರ್. ನಾನು ಇಲ್ಲಿಗೆ ಬಂದು ಆರು ವರ್ಷ ಆಯ್ತು.
ಒಬ್ಬರೇ ಒಬ್ರು ಮಿನಿಸ್ಟ್ರು ನಮ್ಮ ತಾಲ್ಲೂಕಿಗೆ ತಲೆ ಹಾಕಿರಲಿಲ್ಲ. ಈಗ ಇವರು ಬರತಿರೋದು ಕೇಳಿ ಒಂದು ಕಡೆ ಸಂತೋಷ ಇನ್ನೊಂದು ಕಡೆ ಭಯ ಆಗ್ತಾ ಇದೆ…

ರಘುನಂದನ್ : ಭಯ ಯಾಕ್ರೀ? ನಮ್ಮ ಡ್ಯೂಟಿ ನಾವು ಮಾಡಿದರಾಯ್ತು. ಇರಲಿ, ಆ ಕರಡಿಗುಡ್ಡದ
ಮೇಲೆ ನಮ್ಮ ಇಲಾಖೆಗೆ ಸಂಬಂಧಪಟ್ಟ ಒಂದು ಐಬಿ ಇದೆ, ಅಲ್ಲಿ ವ್ಯವಸ್ಥೆ ಮಾಡಿ ಅಂತ ಬರೆದಿದ್ದಾರಲ್ಲ, ಅದು ವಿ‌ಐಪಿಗಳು ಉಳಕಳ್ಳೋದಕ್ಕೆ ಸರಿಯಾಗಿದೆಯೇನ್ರೀ ?

ವೆಂಕಟೇಶಯ್ಯ : ಇರಬೋದು ಸರ್…

ರಘುನಂದನ್ : ಇರಬಹುದು ಅಂದ್ರೆ ಏನ್ರೀ ?!

ವೆಂಕಟೇಶಯ್ಯ : (ಅನುಮಾನ) ಅದೂ, ಆ ಐಬಿ ಹ್ಯಾಗಿದೆ ಅಂತಾ ನಾನು ನೋಡಿಲ್ಲ ಸರ್.

ರಘುನಂದನ್ : ಏನ್ ಹಾಂಗಂದ್ರೆ?! ಇಷ್ಟು ವರ್ಷದಿಂದ ಕೆಲ್ಸ ಮಾಡ್ತಿದ್ದೀರಿ, ಡಿಪಾರ್ಟ್‌ಮೆಂಟ್‌ಗೆ
ಸಂಬಂಧಪಟ್ಟ ಐಬಿ ನೋಡಿಲ್ಲವಾ ?! ಈಗಲೇ ಹೋಗಿ ನೋಡ್ಕಂಡು ಬಂದು ರಿಪೋರ್ಟ್ ಕೊಡಿ.

ವೆಂಕಟೇಶಯ್ಯ : ಸಾರ್ ಅದು ಏನಾಗಿದೆ ಅಂದ್ರೆ, ಡಾಕ್ಟ್ರು ಗುಡ್ಡ-ಬೆಟ್ಟ ಹತ್ತಬಾರದು ಅಂತ ಸ್ಟ್ರಿಕ್ಟ್ ಆಗಿ
ಹೇಳಿಬಿಟ್ಟಿದ್ದಾರೆ ಸಾರ್…. ಹಾರ್ಟ್‌ಗೆ ಸಂಬಂಧಪಟ್ಟಿದ್ದು… ಕ್ಷಮಿಸಬೇಕು…

ರಘುನಂದನ್ : ಸರಿ ಆ ಶ್ರೀಧರಮೂರ್ತೀನೋ ಯಾರನ್ನಾದ್ರು ಕಳಿಸಿ ರಿಪೋರ್ಟ್ ತರಿಸಿ…

ವೆಂಕಟೇಶಯ್ಯ : ಯಾರಿಗೂ ಅಷ್ಟು ಜವಾಬ್ದಾರಿ ಇಲ್ಲ ಸಾರ್. ಆಮೇಲೆ ನಾಳೆ ಒಂದು ಹೋಗಿ
ಇನ್ನೊಂದಾದರೆ ಕಷ್ಟ. ಅದಕ್ಕೇ ನಾನು ಏನು ಹೇಳ್ತೀನಿ ಅಂದ್ರೆ, ಇಲ್ಲಿ ಯಾವುದಕ್ಕೂ ವ್ಯವಸ್ಥೆ ಸರಿ ಇಲ್ಲ ಅಂತ ಬರೆದು ಬಿಡೋಣ ಸಾರ್.

ರಘುನಂದನ್ : ಅಲ್ರೀ ವ್ಯವಸ್ಥೆ ಸರಿ ಇಲ್ಲ ಅಂದ್ರೆ ಸರಿ ಮಾಡ್ಸಿ ಅಂತಾರೆ. ಹಾಗಂತ ಹೇಳಿಸಿಕೊಳ್ಳೋಕೆ
ನಾನು ತಯಾರಿಲ್ಲ. ಆ ಐಬಿ ಫೈಲ್ ಕಳ್ಸಿ, ನಾನೇ ಹೋಗ್ತೀನಿ.

ವೆಂಕಟೇಶಯ್ಯ : ಛೆ! ಛೇ! ತಮಗೆ ಯಾಕ್ ಸಾರ್ ಶ್ರಮ, ನಾನೇ ಹ್ಯಾಗೋ ಹೋಗಿ ರಿಪೋರ್ಟ್ ಮಾಡ್ತೀನಿ.
ರಘುನಂದನ್ : ಡಾಕ್ಟ್ರು ಹೋಗಬೇಡ ಅಂತ ಹೇಳಿದ್ದಾರೆ ಅಂತ ಹೇಳಿದ್ರಲ್ರೀ..

ವೆಂಕಟೇಶಯ್ಯ : ನಿಜ ಸಾರ್, ಆದ್ರೆ ಸರ್ಕಾರಿ ಕೆಲ್ಸ ದೇವ್ರ ಕೆಲ್ಸ ಅಂತ ನೀವೆ ಅಂದ್ರಲ್ಲಾ ಸಾರ್! ಆ ದೇವ್ರೇ
ಒಂದು ದಾರಿ ತೋರಿಸ್ತಾನೆ ಬಿಡಿ
ಎಂದು ಹೇಳಿ ಚೇಂಬರ್‌ನಿಂದ ಹೊರ ಹೊರಡುತ್ತಾನೆ.

ದೃಶ್ಯ – ೧೬ / ಆಫೀಸಿನ ಹೊರಗೆ

ವೆಂಕಟೇಶಯ್ಯ ತನ್ನ ಸೀಟಿಗೆ ಬಂದು ಅಸಹನೆ ವ್ಯಕ್ತಪಡಿಸಿದ್ದನ್ನು ಸತ್ಯವತಿ ನೋಡುತ್ತಾಳೆ. ನಿರ್ಲಿಪ್ತ ನೋಟ…
ಹೊರಗೆ ನಿಂತಿದ್ದ ಗೊರವಯ್ಯ ವೆಂಕಟೇಶಯ್ಯನ ಮೇಲೆ ಕಣ್ಣಿಟ್ಟಿದ್ದವನು ಒಳಬರುತ್ತಾನೆ.

ಗೊರವಯ್ಯ : ಬುದ್ಧೀ ಅಡ್ಡಬಿದ್ದೆ…

ವೆಂಕಟೇಶಯ್ಯ : ಏನಯ್ಯಾ ಗೊರವಯ್ಯ, ಬೆಳ ಬೆಳಗ್ಗೇನೆ

ಗೊರವಯ್ಯ : ನಮ್ಮನೆ ಗ್ವಾಡೆ, ಬಿರುಕು… ಮರ….

ಎಂದು ಏನೋ ಹೇಳಲು ಹೊರಟ ಗೊರವಯ್ಯನನ್ನು ಅರ್ಧದಲ್ಲೇ ತಡೆದು.

ವೆಂಕಟೇಶಯ್ಯ : ನೀನು ಮುಂದಿನವಾರ ಬಾ ಹೋಗು…

ಗೊರವಯ್ಯ : ಕಳದ ಸಲಾನೂ ಇಂಗೇ ಹೇಳಿದ್ರಿ…(ಎಂದು ರಾಗ ಎಳೆಯುತ್ತಾನೆ)

ವೆಂಕಟೇಶಯ್ಯ : ಮಂತ್ರಿಗಳು ಬರತಾರಲ್ಲ ಎಂಗಪ್ಪ ಸುಧಾರಿಸೋದು ಅಂತ ನಾನು ತಲೆ ಕೆಡಿಸಿಕೊಂಡು
ಕೂತಿದ್ದೀನಿ, ನಿಂದೊಂದು… ಈಗ ಆಗಲ್ಲ ನೀನು ಓಗು…

ಗೊರವಯ್ಯ ಸಪ್ಪಗಾಗಿ ಹೊರನಡೆಯುತ್ತಾನೆ.
ವೆಂಕಟೇಶಯ್ಯ ಅವನು ಹೊರ ಹೋಗುವುದನ್ನೇ ನೋಡುತ್ತಾನೆ.
ಅವನ ಮನಸ್ಸಿನಲ್ಲಿ ಏನೊ ಹೊಳೆಯುತ್ತದೆ. ಕುರ್ಚಿಯಿಂದ ಮೇಲೆದ್ದು ಅವನನ್ನು ಹಿಂಬಾಲಿಸುತ್ತಾನೆ.
ಮುಂಬಾಗಿಲ ಬಳಿ ಅವನನ್ನು ಕೂಗಿ ನಿಲ್ಲಿಸುತ್ತಾನೆ.

ವೆಂಕಟೇಶಯ್ಯ : ಅಪ್ಪಾ ಗೊರವಯ್ಯ…

ಗೊರವಯ್ಯ : (ನಿಂತು, ತಿರುಗಿ) ಏನ್ ಬುದ್ಧೀ…

ವೆಂಕಟೇಶಯ್ಯ : (ಹತ್ತಿರ ಬಂದು, ಸುತ್ತನೋಡಿ) ನಿಂಗೆ ಈ ಗುಡ್ಡಗಾಡು ಪ್ರದೇಶ ಚನ್ನಾಗಿ ಗೊತ್ತೋ?

ಗೊರವಯ್ಯ : ಗೊತ್ತು ಬುದ್ದಿ… ಉಪಾದಾನಕ್ಕೆ ಅಂತ ನಾನು ಓಗ್ದೇ ಇರೋ ಜಾಗವೇ ಇಲ್ಲ.
ಯಾಕ್ ಬುದ್ಧೀ ?

ವೆಂಕಟೇಶಯ್ಯ : ಈ ಕರಡೀಗುಡ್ಡದಲ್ಲಿ ನಮ್ಮ ಆಫೀಸಿಂದು ಒಂದು ಹಳೇ ಬಂಗಲೆ ಇದೆ ನೋಡಿದ್ದೀಯ?

ಗೊರವಯ್ಯ : (ಕ್ಷಣ ಯೋಚಿಸಿ) ನನ್ನ ಕಣ್ಣಿಗೆ ಬಿದ್ದಿಲ್ಲವಲ್ಲ ಬುದ್ಧೀ…

ವೆಂಕಟೇಶಯ್ಯ : ಅದು ನಮ್ಮ ತಾತನ ಕಾಲದಲ್ಲಿ ಕಟ್ಟಿಸಿರೋ ಬಂಗಲೆ. ಆಪೀಸರ್‌ಗಳು ಈ ಕಡೆ ಬಂದ್ರೆ
ಉಳಕಳೋಕೇಂತ ಇರೋದು. ಆ ಗುಡ್ಡದ ಮೇಲೆ ಇದೆ, ಈಗ ಮಿನಿಸ್ಟರ್ ಬಂದಾಗ ಅಲ್ಲಿ ಉಳಿಸಬೇಕು… ನಂಗ್ ಹೋಗಿ ನೋಡಿಕಂಡ ಬರಾಕೆ ನಮಗೆ ಟೈಮಿಲ್ಲ. ಅದಕ್ಕೇ ನೀನು ನೋಡಿಕಂಡ ಬಂದು ಅಲ್ಲಿ ಯಾರನ್ನಾದ್ರು ಉಳಸಬೌದಾ ಅಂತ ಹೇಳಕಾಗುತ್ತ?

ಗೊರವಯ್ಯ : ಅದಕ್ಕೇನ ತಗಾಳಿ ಏಳ್ತೀನಿ… ಮುಂದಿನ ಪೋರಣಮೀಗೆ ಜಾತ್ರೆಗೋಗ್‌ಬೇಕು, ಈ ಗುಡ್ಡ
ದಾಟೇ ಓಗೋದು, ಆಗ ನೋಡ್ಕಂಡ್ ಬತ್ತೀನಿ ಬುಡೀ…

ವೆಂಕಟೇಶಯ್ಯ : ನೀನು ಅಮಾವಾಸ್ಯೆ-ಪೌರ್ಣಮಿ ಅಂತ ಕೂತಿದ್ರೆ ಆಗಲ್ಲ, ನಾಡಿದ್ದರೊಳಗೆ ರಿಪೋರ್ಟ್
ಕಳಿಸಬೇಕು. ಅಷ್ಟರಲ್ಲಿ ನೋಡಿಕೊಂಡ್ ಬಂದು ಹೇಳಬೇಕು. ಆಗುತ್ತಾ?

ಗೊರವಯ್ಯ : ಆ ಮರದ್ದೊಂದು ತಲೇ ತಿಂತಾಯ್ತಲ್ಲ ಬುದ್ಧೀ…. ಅದನ್ನ ಕಡಿಯಾಕೆ ಅಪ್ಪಣೆ ಚೀಟಿ
ಕೊಟ್ಟುಬಿಟ್ರೇ…. (ರಾಗ ಎಳೆಯುತ್ತಾನೆ)

ವೆಂಕಟೇಶಯ್ಯ : ಮೊದ್ಲು ನೀನು ನಮ್ಮ ಕೆಲ್ಸ ಮಾಡಿಕೊಡು ಆಮೇಲೆ ನಿನ್ನ ಕೆಲ್ಸ, ಆಯ್ತಾ?

ಗೊರವಯ್ಯ : ಸರಿ ಬುದ್ಧೀ… ಈಗ್ಲೇ ಒಂಟೇ

ವೆಂಕಟೇಶಯ್ಯ : ಅದನ್ನ ನೋಡ್ಕಂಡು ಮನೇ ಹತ್ರಕ್ಕೆ ಬಂದುಬಿಡು, ನಾನು ಕಾಯ್ತಿರತೀನಿ…

ಗೊರವಯ್ಯ : ಆಯ್ತು ಕಣ ಏಳೀ…

ಎಂದು ಉತ್ಸಾಹದಿಂದ ಹೊರಡುತ್ತಾನೆ. ವೆಂಕಟೇಶಯ್ಯನ ಮುಖದ ಮೇಲೆ ಸಮಾಧಾನದ ಗುರುತು.

ಕಟ್ ಟು…

ದೃಶ್ಯ – ೧೭ / ಕರಡಿಗುಡ್ಡ

ಗೊರವಯ್ಯ ಐಬಿಯನ್ನು ಹುಡುಕಿಕೊಂಡು ಅಲೆಯುತ್ತಿದ್ದಾನೆ.
ಅವನು ಹುಡುಕುವ ವಿವಿಧ ಹಂತಗಳು…
ಎಲ್ಲೂ ಕಾಣಿಸದೆ ಸುಸ್ತಾಗಿ ಒಂದು ಬಂಡೆಯ ಮೇಲೆ ಕುಳಿತುಕೊಳ್ಳುತ್ತಾನೆ.
ಆಗ ಅದೇ ದಾರಿಯಲ್ಲಿ ಕಾಡಿನಿಂದ ಸೌದೆ ಹೊರೆ ಹೊತ್ತ ರೈತನೊಬ್ಬ ಬರುತ್ತಾನೆ.

ರೈತ : ಅಜ್ಜಾ ಸ್ವಲ್ಪ ಈ ಹೊರ ಸರಿ ಮಾಡ್ತೀಯ ?

ಗೊರವಯ್ಯ ಅವನಿಗೆ ಸಹಾಯ ಮಾಡುತ್ತಾನೆ.

ಗೊರವಯ್ಯ : ಯಾವೂರಪ್ಪ ?

ರೈತ : ಇಲ್ಲೇ ಹುಣಿಸೆಕೊಪ್ಪಲು… ನೀನೇನು? ಕ್ವಾರಣ್ಯಕ್ಕೆ ಕಾಡಿಗೆ ಬಂದು ಬಿಟ್ಟಿದ್ದೀಯ.

ಗೊರವಯ್ಯ : ಕ್ವಾರಣ್ಯಕ್ಕಲ್ಲಪ್ಪ, ನಾನು ಈ ದೊಡ್ಡಮನುಸ್ರು ಉಳ್ಕಂತರಲ್ಲ, ಆ ಒಂದು ಬಂಗಲೆ ಇಲ್ಲೆಲ್ಲೋ
ಅದಂತೆ, ಅದನ್ನ ಹುಡುಕ್ತಾ ಇದ್ದೀನಿ. ನೀನೆಲ್ಲಾರ ಕಂಡಿದ್ದೀಯ…

ರೈತ : ಇಲ್ಲಿ ಸುತ್ತ ಮುತ್ತಾ ಯಾವುದೂ ಅಂತಾದ್ದು ನಾನು ಕಂಡಿಲ್ಲಪ್ಪ… (ಯೋಚಿಸಿ) ಆಂ! ಆಲ್ಲಿ ನೋಡು
ಆ ಗುಡ್ಡದ ಮಗ್ಗಲಲ್ಲಿ ಒಂದು ಪಾಳು ಬಿದ್ದಿರೋ ಬಂಗಲೆ ಐತೆ. ಅಲ್ಲಿ ಯಾರೂ ಇದ್ದಂಗಿಲ್ಲ.

ಗೊರವಯ್ಯ : ಅಂಗಾರೆ ಅದೇ ಇರಬೈದು. ನೋಡ್ಕಂಡ್ ಬತ್ತೀನಿ ನಡಿ…

ಎಂದು ಅವಸರದಲ್ಲಿ ಹೊರಡುತ್ತಾನೆ.

ರೈತ : ಅದನ್ನ ಯಾಕ್ ಹುಡುಕ್ತಿದ್ದೀಯ?

ಗೊರವಯ್ಯ : ದೊಡ್ಡಮನುಸ್ರು ಹೇಳಿದ್ದನ್ನ ಮಾಡಿರತಾನೆ ನಮ್ಮ ಅಟ್ಟಿ ಉಳ್ಕಳಾದು

ಎಂದು ಒಂದಷ್ಟು ಎತ್ತರಕ್ಕೆ ಹತ್ತುತ್ತಾನೆ.
ಅಲ್ಲಿ ದೂರದಲ್ಲಿ ಒಂದು ಹಳೆಯದಾದ ಬಿಲ್ಡಿಂಗ್ ಕಾಣುತ್ತದೆ.
ಗೊರವಯ್ಯನ ಮುಖ ಅರಳುತ್ತದೆ.
ಅದರತ್ತ ನಡೆಯುತ್ತಾನೆ.

ಕಟ್ ಟು…

ದೃಶ್ಯ – ೧೮ / ಹಗಲು / ರಘುನಂದನ್ ಮನೆ

ರಘುನಂದನ್ ಮಧ್ಯಾಹ್ನ ಮನೆಗೆ ಬರುತ್ತಾನೆ.
ಸುಮ ಬಂದು ಬಾಗಿಲು ತೆರೆಯುತ್ತಾಳೆ.

ರಘುನಂದನ್ : ಬಾಗಿಲು ತೆಗೆಯೋಕೆ ಯಾಕ್ ಇಷ್ಟು ಹೊತ್ತಾಯ್ತು?

ಸುಮ : ಕೈ ಎಲ್ಲಾ ಮಣ್ಣಾಗಿತ್ತು, ತೊಳಕೊಂಡು ಬಂದೆ…

ರಘುನಂದನ್ : ಮಣ್ಣಾಗೋ ಕೆಲ್ಸ ಏನ್ ಮಾಡ್ದೆ?

ಎಂದು ಕೈಕಾಲು ತೊಳೆಯಲು ಬಚ್ಚಲಿಗೆ ಹೋಗುತ್ತಾನೆ.

ಸುಮ : ಇನ್ನೇನು ಇದ್ದೇ ಇದೆಯಲ್ಲ ಹೆಗ್ಗಣದ ದೊಗರು ಮುಚ್ಚೋ ಕೆಲ್ಸ!

ರಘುನಂದನ್ : ಮೊನ್ನೆ ಅಡಿಗೆ ಮನೇಲಿ ಮುಚ್ಚಿ ಆಯ್ತಲ್ಲಾ ?

ಸುಮ : ಅಲ್ಲಿ ನೋಡಿ ಬಚ್ಚಲ ಪಕ್ಕದಲ್ಲಿ ಮತ್ತೆ ಕೊರಕೊಂಡು ಬಂದಿದೆ.

ರಘು ನೋಡುತ್ತಾನೆ. ಹೊಸದಾಗಿ ನೆಲಕೊರೆದ ಗುರುತು.

ದೃಶ್ಯ – ೧೯ / ಹೊರಾಂಗಣ / ಕಛೇರಿ

ರಘುನಂದನ್ ಊಟ ಮುಗಿಸಿ ಹಿಂತಿರುಗಿ ಆಫೀಸಿಗೆ ಜೀಪಿನಲ್ಲಿ ಬಂದಾಗ
ಮುಖ್ಯದ್ವಾರದಲ್ಲೇ ವೆಂಕಟೇಶಯ್ಯ ಏದುಸಿರು ಬಿಡುತ್ತಾ ಸೈಕಲ್‌ನಲ್ಲಿ ಎದುರಾಗುತ್ತಾನೆ.

ವೆಂಕಟೇಶಯ್ಯ : ಗುಡ್ ಆಫ್ಟರ್ ನೂನ್ ಸಾರ್…

ರಘುನಂದನ್ : ಏನ್ರೀ ವೆಂಕಟೇಶಯ್ಯ ನಿನ್ನೆ ಪತ್ತೇ ಇಲ್ಲ, ಇವತ್ತು ಬೆಳಗ್ಗೇನು ಕಾಣಸಿಲಿಲ್ಲ; ಲೀವ್
ಲೆಟರ್‌ನೂ ಕೊಟ್ಟಿಲ್ಲ…

ವೆಂಕಟೇಶಯ್ಯ : ಡ್ಯೂಟಿ ಮೇಲೆ ಹೋಗಿದ್ದೆ ಸಾರ್. ಕರಡಿಗುಡ್ಡದ ಐಬಿ ನೋಡಿಕೊಂಡು ಬನ್ನಿ ಅಂತ
ನೀವೇ ಹೇಳಿದ್ರಲ್ಲಾ ಸಾರ್.

ರಘುನಂದನ್ : ಓ! ನೋಡಿಕೊಂಡು ಬಂದ್ರಾ? ಹ್ಯಾಗಿದೆ ಐಬಿ?

ವೆಂಕಟೇಶಯ್ಯ : ಅದನ್ನ ಯಾರಾದ್ರು ಐಬಿ ಅಂತ ಕರೆಯೋಕ್ ಆಗುತ್ತಾ ಸಾರ್? ದನದ ಕೊಟ್ಟಿಗೇಗಿಂತ
ಕಡೆ. ಅಂಥಾ ಜಾಗಕ್ಕೆ ಮಿನಿಸ್ಟ್ರುನ ಕರಕೊಂಡು ಹೋಗೋಕ್ ಆಗುತ್ತಾ ಸಾರ್? ಅಲ್ಲ ಒಂದು ಗೆಸ್ಟ್ ಹೌಸ್ ಕಟ್ಟಿಸಬೇಕಾದ್ರೆ ಯಾವ ಜಾಗದಲ್ಲಿ ಕಟ್ಟಿಸಬೇಕು, ಎಲ್ಲಿ ಕಟ್ಟಿಸಬಾರದು ಅಂತ ಪರಿಜ್ಞಾನ ಬೇಡವೇ? ಜಿiಡಿsಣ oಜಿ ಚಿಟಟ ಅಲ್ಲಿಗೆ ಹೋಗೋದಿಕ್ಕೆ ಸರಿಯಾದ ರಸ್ತೇನೆ ಇಲ್ಲ. ಸುಮ್ನೆ ಸರ್ಕಾರದ ಹಣಾನ ಪೋಲು ಮಾಡಿಬಿಟ್ಟಿದ್ದಾರೆ ಸಾರ್.

ರಘುನಂದನ್ : ಹಾಗಾದ್ರೆ ಅಲ್ಲಿ ಈಗ ಏನೂ ವ್ಯವಸ್ಥೆ ಮಾಡೋಕೆ ಆಗಲ್ಲ ಅಂತೀರ?

ವೆಂಕಟೇಶಯ್ಯ : ವ್ಯವಸ್ಥೆ ಮಾಡಬೇಕು ಅಂದ್ರೆ ಮೊದ್ಲು ರಸ್ತೆ ಆಗಬೇಕು, ಬಿದ್ದಿರೋ ಗೋಡೆ ಎಲ್ಲ ಎತ್ತಿ
ಕಟ್ಟಬೇಕು, ಬಾಗಿಲು-ಚಿಲಕ ಹಾಕಿಸಬೇಕು, ಸುಣ್ಣ-ಬಣ್ಣ ಆಗಬೇಕು… ಬೆಳಕು- ನೀರು ವ್ಯವಸ್ಥೆ ಆಗಬೇಕು…. ಅದಕ್ಕೆ ಸ್ಯಾಂಕ್ಷನ್! ಕಂಟ್ರಾಕ್ಟೂ! ಇವೆಲ್ಲ ಅವಸರದಲ್ಲಿ ಆಗೋ ಕೆಲ್ಸ ಅಲ್ಲ. ಅದಕ್ಕೆ ಈಗ ಮಿನಿಸ್ಟ್ರನ್ನ ಬೇರೆ ಯಾವುದಾದರು ಗೆಸ್ಟ್ ಹೌಸ್‌ನಲ್ಲಿ ಇಳಿಸೋ ವ್ಯವಸ್ಥೆ ಮಾಡೋದು ಬಿಟ್ರೆ ಬೇರೆ ದಾರಿ ಇಲ್ಲ.

ರಘುನಂದನ್ : ಸದ್ಯಕ್ಕೆ ನಮ್ಮ ಐಬೀಲಿ ಅಗೋಲ್ಲ ಅಂತ ಒಂದು ಲೆಟರ್ ಮಾಡ್ಕೊಂಡ್ ಬನ್ನಿ… ಅದರಲ್ಲಿ
ನೀವು ಹೇಳಿದ ಎಲ್ಲಾ ಡೀಟೈಲ್ಸ್‌ನೂ ಮೆನ್ಷನ್ ಮಾಡ್ಬೇಕು….

ವೆಂಕಟೇಶಯ್ಯ : ಆಯ್ತು ಸಾರ್…

ಕಟ್ ಟು….

ದೃಶ್ಯ – ೨೦ / ಹಗಲು / ಹೊರಾಂಗಣ / ರಘುನಂದನ್ ಮನೆ

ಗೊರವಯ್ಯ ಭಿಕ್ಷೆ ಬೇಡಲೆಂದು ರಘುನಂದನ್ ಮನೆಗೆ ಬರುತ್ತಾನೆ. ಜೊತೆಯಲ್ಲಿ ಗೌರಿ ಇದ್ದಾಳೆ.
ಮನೆ ಹೊರಗೆ ನಿಂತು, ಡವರುಗ ಬಡಿಯುತ್ತಾನೆ.
ಸುಮ ಮನೆಯೊಳಗೆ ಏನೋ ಮಾಡುತ್ತಿದ್ದವಳು ಶಬ್ದ ಕೇಳಿ ಕಿಟಕಿ ತೆರೆಯುತ್ತಾಳೆ.
ಹೊರಗೆ ಕಿಟಕಿಯ ಪಕ್ಕದಲ್ಲೇ ನಿಂತ ಗೊರವಯ್ಯನ ಮುಖ ನೋಡಿ ಭಯಪಟ್ಟು ಸಣ್ಣಗೆ ಕಿರುಚಿ ಕಿಟಕಿ ಮುಚ್ಚುತ್ತಾಳೆ.
ಗೊರವಯ್ಯನಿಗೆ ಇದನ್ನು ನೋಡಿ ಆಶ್ಚರ್ಯವಾಗುತ್ತದೆ.

ಗೊರವಯ್ಯ : ನಾನು ಕಣವ್ವ ಗೊರವಯ್ಯ… ಕ್ವಾರಣ್ಯ ಭಿಕ್ಷಕ್ ಬಂದಿವ್ನಿ
ಸುಮ ಒಳಗೇ ಒಂದು ಕ್ಷಣ ಅನುಮಾನಿಸುತ್ತಾಳೆ.
ಗೊರವಯ್ಯ : ಎದರಬ್ಯಾಡ ತಾಯಿ, ಹೊರಗ್ ಬಾ. ಭಿಕ್ಷೆ ಆಕು ಒಳ್ಳೇದಾಗುತ್ತೆ…

ಸುಮ ಕಿಟಕಿಯನ್ನು ಸ್ವಲ್ಪವೇ ತೆರೆದು ನೋಡುತ್ತಾಳೆ.
ಅವಳ ಕಣ್ಣಿಗೆ ಗೌರಿ ಕಾಣಿಸುತ್ತಳೆ.
ಗೊರವಯ್ಯ ಕೊಳಲನ್ನು ಊದುತ್ತಲೇ ಇದ್ದಾನೆ.
ಸುಮ ಬಾಗಿಲು ತೆರೆಯುತ್ತಾಳೆ. ಅವಳ ಮೊರದಲ್ಲಿ ಅಕ್ಕಿ ಇದೆ.
ಗೌರಿ ಅದನ್ನು ತನ್ನ ಜೋಳಿಗೆಗೆ ಹಾಕಿಸಿಕೊಳ್ಳುತ್ತಾಳೆ.

ಗೊರವಯ್ಯ : ನನ್ನ ವೇಸ ನೋಡಿ ಎದುರಿಕಂಡ್ ಬುಟ್ರಾ ?

ಸುಮ : ಹೌದು! ನಾನು ಮೊದ್ಲು ಇದನ್ನ ನೋಡಿರಲಿಲ್ಲ. ಏನ್ ವೇಷ ಇದು ?

ಗೊರವಯ್ಯ : ಇದನ್ನ ಗೊರವರ ವೇಸ ಅಂತಾರೆ? ಇದು ಅಂತಿಂಥ ವೇಷ ಅಲ್ಲ ಕಣವ್ವ, ಪರಸಿವ
ತಾರಕಾಸುರನ್ನ ಸಮ್ಮಾರ ಮಾಡೋ ಟೈಮ್ನಲ್ಲಿ ಹಾಕ್ಕೊಂಡ ವೇಸ!

ಎಂದು ಇಡೀ ಕಥೆಯನ್ನು ಪದಕಟ್ಟಿ ಹಾಡುತ್ತಾನೆ. (ಅದರ ಗದ್ಯ ರೂಪ ಕೆಳಗಿನಂತಿದೆ)

ಗೊರವಯ್ಯ : ಕಾಲಾನುಕಾಲದ ಹಿಂದೆ ನಮ್ಮವ್ವ ಪಾರ್ವತಿ ಇದ್ದು, ಯಾವ ಭೂತ, ಪ್ರೇತ, ಪಿಶಾಚಿ, ನರಮಾನವರು ದೇವಮಾನವರಗೂ ಹೆದರುವವಳಲ್ಲಾ ಅಂದ್ರು… ಆಗ ತಂದೆ ಶಿವ ಎಲಲೇ ಪಾರ್ವತಿ ನೀನು ಅಂತಾ ಗಟ್ಟಿಗಾರ್ತಿ ಹೆಂಗಸಾ, ಲೋಕದ ಮೇಲಿನವುರೇ ಆಗಲಿ, ಕೈಲಾಸದ ದೇವಮಾನವುರೇ ಆಗಲಿ ಒಂದಲ್ಲಾ ಒಂದು ಟೈಮ್‌ನಲ್ಲಿ ಹೆದರಲೇ ಬೇಕಾಯ್ತದೆ ಅಂತಂದ್ರು… ಪಾರ್ವತಿಯಿದ್ದು, ಇಲ್ಲಾ ಇಲ್ಲಾ ನಾನು ಯಾರ್ಗೂ ಯಾವ ಕಾರಣಕ್ಕೂ ಹೆದರುವುಳಲ್ಲಾ ಅಂದ್ಲು… ಒಂದಿನ ಸ್ವಾಮಿ ಶಿವ ಲೋಕದ ಮ್ಯಾಲೆ ಸಂಚಾರ ಬರೋವತ್ಗೆ ಇತ್ಲಾಗೆ ತಾರಕಾಸುರನೆಂಬೋ ರಾಕ್ಷಸನ ಹಾವುಳಿ ಸ್ಯಾನೆ ಆಗೋಗ್ಬುಟ್ಟಿತ್ತು. ಆಗ ಶಿವನು ರಾಕ್ಷಸರೂಪಾಗಿ ಬಂದು ತಾರಕಾಸುರನ್ನ ಶಿರನ ಎರಡು ತುಂಡು ಮಾಡಿಬಿಟ್ರು… ಅದೇ ಯಾಸದಲ್ಲಿ ಕೈಲಾಸಕ್ಕೆ ಬಂದು ಎಡದ ಕೈಲಿದ್ದ ಕೊಳ್ಳು ಊದಕಂಡು, ಬಲದ ಕೈಯಾಗಿನ ಡಮರುಗಾ ಬಾರಿಸ್ಕಂಡು ಕುಣಿತರೇ, ಹೆಂಗವ್ವಾ ಅಂದ್ರೆ ಪಾರ್ವತಿ ಬೆಚ್ಚಿ ಬೆದರಂಗೇ…(ಹಾಡು)
ಕೈಲಾಸದೊಳಗೊಮ್ಮೆ ಶಿವನ ಮಾತಿಗೆ ಕೆರಳಿ
ಪಾರ್ವತಿಯು ನುಡಿದಳು ಭಯವೆಂಬುದರಿಯೆ ನಾ
ಭ್ರಮೆಬೇಡ ಭ್ರಮರಾಂಭೆ ನಸುನಗುತ ಶಿವನೆಂದ
ಆದಿ ಭಯ ಎಂದಿಗೂ ಯಾರನ್ನೂ ಬಿಡದೆಂದ

ಭೂಲೋಕದಲ್ಲಿತ್ತು ಮಣಿಮಲ್ಲರ ಪಿಡುಗು
ರಕ್ಕಸರ ವಧೆಗೆಂದು ಭುವಿಗಿಳಿದು ಪರಶಿವನು
ಕರಡಿ ಮುಂಡಾಸುಟ್ಟು ಕವಡೆ ಹಾರವ ತೊಟ್ಟು
ಡಮ ಡಮನೆ ಡಮ ಡಮನೆ ಡಮರು ಬಾರಿಸಿದ

ಗತಿಸಿದರು ರಕ್ಕಸರು ನರ್ತಿಸಿದ ಭೈರವನು
ಗೊರವ ವೇಷದಲೆ ತಾ ನಡೆದ ಹಿಮಗಿರಿಗೆ
ಡಮರುಗದ ರಣಘೋಷ ಪರಶಿವನ ಹೊಸವೇಷ
ಅಂಜಿದಳು ಅಳುಕಿದಳು ಕದವಿಕ್ಕಿ ಗಿರಿಜೆ

ಕೊಳಲೂದಿ ಶಿವ ಕರೆದ ಭಯವೇಕೆ ಶಂಕರಿ
ನಗುನಗುತ ಬಂದಳಾ ಆಭಯಂಕರಿ
ಅಂಬೆಯ ಕಿಂಕರ ಅರ್ಧನಾರೀಶ್ವರ
ಆನಂದ ತಾಂಡವದಿ ಕುಣಿದ ಪರಮೇಶ್ವರ

ಹಾಡು ಮುಗಿಯುತ್ತದೆ… ಸುಮಳಿಗೆ ಇದನ್ನು ಕೇಳಿ ತುಂಬಾ ಸಂತೋಷವಾಗುತ್ತದೆ.

ಸುಮ : ಇಂಟೆರೆಸ್ಟಿಂಗ್ ಆಗಿದೆ…

ಗೊರವಯ್ಯ : ಇದರಿಂದಾನೇ ನಮ್ಮ ಹೊಟ್ಟೆಪಾಡು ಕಣ್ರವ್ವ…

ಸುಮ : ಹೆಂಡ್ತಿ ಮಕ್ಕಳು ?

ಗೊರವಯ್ಯ : ನನ್ನದೊಂದು ಒಂಟಿ ಜೀವ ಕಣವ್ವ, ಒಂಟಿಯಾಗಿರಬೇಡ ಕಣ್ಲಾ ಮಗಾ ಅಂತ ಆ ಶಿವ ನಮ್ಮ
ಈ ಗೌರಿನ ಕರುಣಿಸ್ದ…
ಸುಮ : ಮೊಮ್ಮಗಳಾ?
ಗೊರವಯ್ಯ : ಇಲ್ಲ ಕಣವ್ವ, ಯಾವ್ದೋ ಅನಾಥ ಹುಡುಗಿ, ಜಾತ್ರೇಲಿ ಅಪ್ಪ-ಅವ್ವನ್ನ ಕಳಕಂಡು ಅಳ್ತಿತ್ತು,
ನಾನು ಕರಕಂಡಬಂದು ಸಾಕ್ಕಂಡಿದ್ದೀನಿ….
ಸುಮ : ನಿಮ್ಮದು ದೊಡ್ಡಗುಣ ಅಜ್ಜಾ…
ಗೊರವಯ್ಯ : ನಾ ಬತ್ತೀನಿ…
ಸುಮ ಅವರಿಬ್ಬರೂ ಹೋಗುವುದನ್ನೇ ನೋಡುತ್ತಾಳೆ.

ದೃಶ್ಯ – ೨೧ / ಹಗಲು / ಕಛೇರಿ ಒಳಗೆ

ರಘುನಂದನ್ ಟೇಬಲ್ ಮೇಲಿನ ಫೋನ್ ರಿಂಗಾಗುತ್ತದೆ.

ರಘುನಂದನ್ : ಹಲೋ… ರಘುನಂದನ್….

ಆಫೀಸರ್ : ನಾನ್ರೀ ಹೆಡ್ ಆಫೀಸ್‌ನಿಂದ, ಪುರುಷೋತ್ತಮ್…

ರಘುನಂದನ್ : ನಮಸ್ಕಾರ ಸಾರ್

ಆಫೀಸರ್ : ಐಬಿ ವಿಷಯಕ್ಕೆ ನೀವು ಬರಿದಿದ್ದ ಲೆಟರ್ ಬಂತು…. ಐಬಿ ಅಷ್ಟೊಂದು
ಅಧ್ವಾನವಾಗಿದೆಯೇನ್ರೀ?

ರಘುನಂದನ್ : ಹೌದು ಸಾರ್…

ಆಫೀಸರ್ : ನಿಮ್ಮ ಲೆಟರ್‌ನಲ್ಲಿ ಮೆನ್ಷನ್ ಮಾಡಿರೋ ಎಲ್ಲಾ ಡೀಟೈಲ್ಸು ಆ ಇನ್ಸ್‌ಪಕ್ಷನ್ ಬಂಗಲೇಗೆ
ಸಂಬಂಧಪಟ್ಟಿದ್ದೇನ್ರೀ ?

ರಘುನಂದನ್ : ನನ್ನ ನಂ.೨ ವೆಂಕಟೇಶಯ್ಯನವರನ್ನೇ ಕಳಿಸಿದ್ದೆ… ಅದು ಅವರು ಕೊಟ್ಟ
ರಿಪೋರ್ಟ್‌ನಲ್ಲಿರೋ ಡೀಟೈಲ್ಸ್‌ನೆಲ್ಲಾ ಪಾಯಿಂಟ್ ಟು ಪಾಯಿಂಟ್ ಅವರ ಹತ್ರ ಡಿಸ್‌ಕಸ್ ಮಾಡಿ ನನ್ನ ಲೆಟರ್ ಕಳಿಸಿದ್ದು ಸರ್…

ಆಫೀಸರ್ : ಅಲ್ಲಾ ರಘುನಂದನ್, ಇದು ಮಿನಿಸ್ಟರ್ ವಿಸಿಟ್‌ಗೆ ಸಂಬಂಧಿಸಿದ್ದು- ಸೀರಿಯಸ್ ವಿಷಯ….
ನೀವು ಸಬಾರ್ಡಿನೇಟ್ಸ್ ಮಾತು ನಂಬಿಕೊಂಡು ಕೂತಿದ್ದೀರಲ್ಲ . ಅವರು ಯಾವಾಗಲೂ ಜವಾಬ್ದಾರಿಯಿಂದ ನುಣುಚಿಕೊಳ್ಳೋಕೆ ನೋಡ್ತಾ ಇರತಾರೆ….

ರಘುನಂದನ್ : ಇಲ್ಲ ಸಾರ್ ಅವರು ತುಂಬಾ ಸೀನಿಯರ್ರು ಜೊತೆಗೆ ಸಿನ್ಸಿಯರ್ರು…

ಆಫೀಸರ್ : ಅದೇನೇ ಇರಲಿ. ಅವರಿಗೆ ಕೆಲವು ವಿಷಯ ಗೊತ್ತಿಲ್ಲ ಅಂತ ಕಾಣುತ್ತೆ. ರಸ್ತೆ ಸರಿ ಇಲ್ಲ
ಅನ್ನೋದು ಮೊದಲ ಪಾಯಿಂಟು. ಆದ್ರೆ ಈಗ ಆರು ತಿಂಗ್ಳು ಹಿಂದೆ ರಸ್ತೆ ರಿಪೇರಿ ಆಗಿದೆ ಅನ್ನೋ ರಿಪೋರ್ಟ್ ಇಲ್ಲೇ ನನ್ನ ಮುಂದಿದೆ. ಅದೂ ಅಲ್ದೆ ಎಂಟು ವರ್ಷದ ಹಿಂದೆ ಐಬಿ ಹಳೇದಾಗಿ ಬಿದ್ದು ಹೋಗ್ತಾ ಇದೆ, ರಿನೋವೇಟ್ ಮಾಡಿಸಬೇಕು ಅಂತ ಒಂದು ಲಕ್ಷದ ಏಳು ಸಾವಿರ ರೂಪಾಯಿ ಸ್ಯಾಂಕ್ಷನ್ ಮಾಡಿಸಿಕೊಂಡಿರೋ ದಾಖಲೆ ಕೂಡ ನನ್ನ ಟೇಬಲ್ ಮೇಲಿದೆ. ಇದರಲ್ಲಿ ಎಲೆಕ್ಟ್ರಿಸಿಟಿ, ವಾಟರ್‌ಸಪ್ಲೈ, ಫರ್ನಿಷಿಂಗ್ ಅಂತ ಎಲ್ಲಾದರ ಬಿಲ್ ನನ್ನ ಕಣ್ ಮುಂದೇನೆ ಇದೆ. ಇಷ್ಟೆಲ್ಲಾ ಮಾಡಿದ ಮೇಲೂ ಇಷ್ಟು ಬೇಗ ಹಾಳಾಗಿದೆ ಅಂದ್ರೆ ಏನ್ರೀ ಅರ್ಥ?

ರಘುನಂದನ್ : ಸ್ಸಾರಿ ಸರ್! ನಾನು ರೀಸೆಂಟ್ ಆಗಿ ಚಾರ್ಜ್ ತಗೊಂಡಿದ್ದೀನಿ ಸರ್. ಈ
ಡೀಟೈಲ್ಸ್ ಎಲ್ಲಾ ನಂಗೊತ್ತಿರಲಿಲ್ಲ.

ಆಫೀಸರ್ : ನೋಡಿ ರಘುನಂದನ್, ಐಬಿ ಇದೇ ಅಂತಾನೇ ಅಲ್ಲಿ ಠಿಡಿogಡಿಚಿmme ಜಿix ಮಾಡಿಸಿದ್ದೀನಿ.
ಈಗ ಠಿಡಿogಡಿಚಿmme ಛಿಚಿಟಿಛಿeಟ ಮಾಡೋಕ್ ಆಗೋಲ್ಲ. ನೀವೇ ಖುದ್ದಾಗಿ iಟಿsಠಿeಛಿಣ ಮಾಡಿ, ಈ miಟಿisಣeಡಿ visiಣ mಚಿಟಿಚಿge ಮಾಡೋದಿಕ್ಕೆ ಂbsoಟuಣe miಟಿimum ಡಿeಠಿಚಿiಡಿs ಎಷ್ಟಾಗುತ್ತೆ ಅನ್ನೋದನ್ನ ತಿಳಿಸಿ. ಂs ಚಿ sಠಿeಛಿiಚಿಟ ಛಿಚಿse, sಚಿಟಿಛಿಣioಟಿ ಮಾಡ್ತೀನಿ. ಒoಟಿಜಚಿಥಿ ಒಳಗೆ ನಂಗೆ ನಿಮ್ಮ ರಿಪೋರ್ಟ್ ಇಲ್ಲಿರಬೇಕು…. ಓಕೆ?

ರಘುನಂದನ್ : ಓಕೆ ಸಾರ್….

ಎಂದು ಫೋನ್ ಇಟ್ಟು ಕ್ಷಣ ಚಿಂತಿಸಿ ನಂತರ ಬೆಲ್ ಮಾಡುತ್ತಾನೆ.
ಜವಾನ ಕೆಂಪಣ್ಣ ಬಂದು ನಿಲ್ಲುತ್ತಾನೆ.

ರಘುನಂದನ್ : ವೆಂಕಟೇಶಯ್ಯನೋರನ್ನ ಕರಿ ಇಲ್ಲಿ…

ಕೆಂಪಣ್ಣ : ಸಾರ್ ಅವ್ರು ರಜ ಹಾಕಿ ಊರಿಗೆ ಹೋದ್ರಲ್ಲಾ ಸಾರ್. ಅದೇನೋ ಅವರ ಅತ್ತೆ ವೈಕುಂಠ ಇದೆ
ಮುಗಿಸ್ಕಂಡು ಸೋಮವಾರ ಬರತೀನಿ ಅಂತ ನಿಮಗೆ ಹೇಳಿದ್ರಲ್ಲಾ ಸಾರ್…

ರಘುನಂದನ್ : ಓ! … ಆ ಐಬಿ ಒಚಿiಟಿಣಚಿiಟಿಚಿಟಿಛಿe ಫೈಲ್ ತಗೊಂಡ ಬಾ.

ಕೆಂಪಯ್ಯ ಹೋಗುತ್ತಾನೆ. ರಘುನಂದನ್ ಚಿಂತಿಸುತ್ತಾ ಕೂರುತ್ತಾನೆ.

ಕಟ್ ಟು…

ದೃಶ್ಯ – ೨೨ / ರಾತ್ರಿ / ರಘುನಂದನ್ ಮನೆ

ರಾತ್ರಿ ರಘುನಂದನ್ ಮನೆಯಲ್ಲಿ ಹೆಂಡತಿಯೊಂದಿಗೆ ಮಾತನಾಡುತ್ತಾ ಕುಳಿತಿದ್ದಾನೆ.

ಸುಮ : ಇವತ್ತಿಗೆ ನಾವು ಇಲ್ಲಿಗೆ ಬಂದು ಒಂದು ತಿಂಗಳು ಆಯ್ತು ಯಾಕೋ ಬೋರ್ ಆಗ್ತಾ ಇದೆ. ನಾಳೆ
ಮೈಸೂರಿಗೆ ಹೋಗಿಬರೋಣ.

ರಘುನಂದನ್ : ನಾಳೇನ ಬೇಡ…. ಮುಂದಿನ ವಾರ ಹೋಗೋಣ.

ಸುಮ : ನಾಳೆ ಯಾಕ್ ಬೇಡ.

ರಘುನಂದನ್ : ನಾಳೆ ನಾನು ನಿನ್ನ ಕರಡೀಗುಡ್ಡಕ್ಕೆ ಕರಕೊಂಡು ಹೋಗ್ತೀನಿ ಬರತೀಯ?

ಸುಮ : (ನಿರುತ್ಸಾಹ) ಕರಡೀಗುಡ್ಡಕ್ಕಾ…. (ಮುನಿಸು) ನೀವು ಯಾವಾಗಲೂ ನನ್ನ ಆಸೆಗೆ ವಿರುದ್ಧವಾಗಿಯೇ
ಪ್ಲಾನ್ ಮಾಡ್ತೀರ

ರಘುನಂದನ್ : (ರಮಿಸುತ್ತಾ) ಹಾಗಲ್ಲ ಸುಮಾ, ಏನ್ ಗೊತ್ತಾ? ಮಂತ್ರಿ ರಾಜೂದೇಸಾಯಿ ಮುಂದಿನ
ತಿಂಗಳು ೫-೬ಕ್ಕೆ ಕರಡಿಗುಡ್ಡಕ್ಕೆ ವಿಸಿಟ್ ಮಾಡ್ತಿದ್ದಾರೆ, ಅವ್ರು ಉಳಕಳ್ಳೋಕೆ ಅಲ್ಲಿರೋ ನಮ್ಮ ಡಿಪಾರ್ಟ್‌ಮೆಂಟ್ ಐಬೀನ ವ್ಯವಸ್ಥೆ ಮಾಡಬೇಕು….

ಸುಮ : ಅಷ್ಟಕ್ಕೆ ಇಷ್ಟು ಸುತ್ತಿ ಬಳಸಿ ಮಾತು ಯಾಕೆ? ಆಫೀಸ್ ಕೆಲ್ಸ ಅಂತ ಹೇಳಿ ನಂಗೆ ಅರ್ಥ ಆಗುತ್ತೆ….
ಕಾಡು-ಮೇಡು ಅಂತ ಬಣ್ಣ ಯಾಕ್ ಕಟ್ತೀರ? ನೀವು ಹೋಗಿ ಬನ್ನಿ ನಾನು ಬರೋಲ್ಲ…

ರಘುನಂದನ್ : (ಅನುನಯಿಸುತ್ತಾ) ಪ್ಲೀಸ್ ಸುಮಾ…

ಸುಮ : ಇನ್ನು ಊಟ ತಿಂಡಿ ಬೇರೆ ಪ್ಯಾಕ್ ಮಾಡಿಕೊಬೇಕು…

ರಘುನಂದನ್ : ಅದು ಗೆಸ್ಟ್ ಹೌಸು. ಅದಕ್ಕೇಂತ ಒಬ್ಬ ಮೇಟಿ ಇರತಾನೆ ಊಟ-ತಿಂಡಿ ತಾಪತ್ರಯ
ಇರೋಲ್ಲ ಆರಾಮಾಗಿ ಕೈ ಬೀಸಿಕೊಂಡು ಹೋಗೋಣ… ಓಕೆ…

ಸುಮಳಿಗೆ ಅರ್ಧ ಮನಸ್ಸು

ಕಟ್ ಟು…

ದೃಶ್ಯ – ೨೩ / ಹಗಲು / ಹೊರಾಂಗಣ /ಕರಡಿಗುಡ್ಡ

ಮಾರನೆಯದಿನ ಜೀಪಿನಲ್ಲಿ ರಘುನಂದನ್ ಹೆಂಡತಿ ಸುಮಳೊಂದಿಗೆ ಕರಡಿಗುಡ್ಡಕ್ಕೆ ಹೋಗುತ್ತಾನೆ.
ಒಂದು ಹಂತದವರೆಗೂ ರಸ್ತೆಯಿದ್ದು ಒಂದೆಡೆ ಅದು ಕೊನೆಯಾಗುತ್ತದೆ.
ಡ್ರೈವರ್ ಜೀಪು ನಿಲ್ಲಿಸಿ ಇಳಿದು ಸುತ್ತಲೂ ಒಮ್ಮೆ ನೋಡಿ, ಕುಳಿತಿದ್ದ ರಘುನಂದನ್ ಬಳಿ ಬಂದು,

ಡ್ರೈವರ್ : ಸಾರ್, ಇಲ್ಲಿಂದ ಐಬೀಗೆ ಹ್ಯಾಗೆ ಹೋಗಬೇಕು ಸರ್.

ರಘುನಂದನ್ : ಯಾಕೆ ನೀನು ಯಾವತ್ತೂ ಐಬೀಗೆ ಹೋಗೇ ಇಲ್ವ?

ಡ್ರೈವರ್ : ಇಲ್ಲ ಸಾರ್, ನಾನು ಆಫೀಸ್‌ಗೆ ಸೇರಿ ಆರುತಿಂಗಳಾಯ್ತು ಅಷ್ಟೆ… ಆವಾಗಿನಿಂದ ಈ ಕಡೆ
ಬಂದಿಲ್ಲ…. ನೀವು ಕೂತಿರಿ ಸಾರ್, ನಾನು ಇಲ್ಲೇ ಎಲ್ಲಾದ್ರು ಹೋಗಿ ವಿಚಾರಿಸಿಕೊಂಡು ಬರತೀನಿ.

ರಘುನಂದನ್ ಸುಮಳ ಮುಖ ನೋಡುತ್ತಾನೆ. ಆಕೆ ನಿಟ್ಟುಸಿರು ಬಿಡುತ್ತಾಳೆ.

ರಘುನಂದನ್ : ಬೇಡ, ನಾವೇ ನಡಕೊಂಡು ಹೋಗಿ ನೋಡ್ತೀವಿ. ನೀನು ಜೀಪನಲ್ಲೇ ಇರು… ಅಲ್ಲಿಂದ
ಮೇಟೀನ ಕಳಿಸ್ತೀನಿ… ಊಟಕ್ಕೆ ಏನಾದ್ರು ಸಾಮಾನು ಬೇಕಾದ್ರೆ ಊರಿನಿಂದ ತಂದುಕೊಡುವೆಯಂತೆ.

ಡ್ರೈವರ್ : ಸರಿ ಸಾರ್…

ರಘುನಂದನ್ : ಬಾ ಸುಮ…

ಸುಮ : ನಡಕೊಂಡು ಹೋಗೋದಾ?

ರಘುನಂದನ್ : ಹುಂ, ಅದರಲ್ಲೇ ಇರೋದು ಮಜಾ. ಬಾ…

ಇಬ್ಬರೂ ಇಳಿದು ನಡೆಯುತ್ತಾರೆ.
ಅಲ್ಲಲ್ಲಿ ನಿಂತು ಸುತ್ತಲೂ ಐಬಿಗಾಗಿ ಹುಡುಕಿ ಮುಂದೆ ನಡೆಯುತ್ತಾರೆ
ದಾರಿ ಮಧ್ಯೆ ಸಿಕ್ಕ ಗಿಡ-ಮರ-ಹೂವಿನ ಬಗ್ಗೆ ರಘುನಂದನ್ ಮಾತನಾಡುತ್ತಾನೆ.
ಸುಮಳಿಗೆ ಅಷ್ಟೊಂದು ಆಸಕ್ತಿ ಇಲ್ಲ.
ಸ್ವಲ್ಪ ದೂರ ನಡೆದು ಒಂದು ತುದಿ ತಲಪುತ್ತಾರೆ.
ರಘುನಂದನ್ ಪರೀಕ್ಷಾತ್ಮಕ ದೃಷ್ಟಿಯಿಂದ ಸುತ್ತಲೂ ನೋಡುತ್ತಾನೆ.

ಸುಮ : ಅರ್ಧ ಗಂಟೆಯಿಂದ ಹುಡುಕ್ತಾನೇ ಇದ್ದೀರ? ಎಲ್ರೀ ನಿಮ್ಮ ಐಬಿ? ಹಸಿವಾಗ್ತಿದೆ.

ರಘುನಂದನ್ : ಇಲ್ಲಿ ಎಲ್ಲಾ ಗುಡ್ಡಗಳೂ ಒಂದೇ ತರ ಕಾಣಿಸುತ್ತೆ. ನಮಗೆ ಬೇಕಾದ ಕರಡಿಗುಡ್ಡ
ಯಾವುದು ಅಂತ ಹೇಳೋಕೆ ಒಬ್ರೂ ದಿಕ್ಕಿಲ್ಲ. ಮ್ಯಾಪ್ ಇದೆಯಲ್ಲ ಚಕ್ ಮಾಡೋಣ.

ಎಂದು ಹೇಳಿ ತನ್ನ ಕೈನಲ್ಲಿದ್ದ ಬ್ಲೂಪ್ರಿಂಟ್ ಹರಡಿ ಚಕ್ ಮಾಡುತ್ತಾನೆ.

ರಘುನಂದನ್ : ಇದ್ರಲ್ಲಿ ಯಾವುದೂ ಗುರುತೇ ಇಲ್ಲವಲ್ಲ… ಆ ಎತ್ತರದಲ್ಲಿದೆಯಲ್ಲಾ ಬಂಡೆ ಅದನ್ನ ಹತ್ತಿ
ನೋಡೋಣ.

ಸುಮ : ನಂಗೆ ಸುಸ್ತಾಗಿದೆ, ನೀವು ಬೇಕಾದ್ರೆ ಹತ್ತಿ ನೋಡಿಕೊಂಡ್ ಬನ್ನಿ… ಮನೆಯಿಂದ ತಿನ್ನೋಕೆ ಏನಾದ್ರು
ತಗಳೋಣ ಅಂದ್ರೂ ಕೇಳಲಿಲ್ಲ. ಮೇಟಿ ಇರತಾನೆ ಬಾ ಅಂದ್ರಿ… ಐಬೀನೆ ಇಲ್ಲ; ಇನ್ನು ಮೇಟಿ ಇನ್ನೆಲ್ಲಿ?!

ಎಂದು ಅಲ್ಲೇ ಒಂದೆಡೆ ಕುಸಿದು ಕೂರುತ್ತಾಳೆ.

ರಘುನಂದನ್ : ಸಿಗುತ್ತೆ ಎಲ್ಲಿ ಹೋಗುತ್ತೆ…

ಎಂದು ಒಬ್ಬನೇ ನಡೆದುಹೋಗಿ ಹುಡುಕುತ್ತಾನೆ.
ಆದರೆ ಎಷ್ಟು ಹುಡುಕಿದರೂ ಐಬಿ ಸಿಗುವುದೇ ಇಲ್ಲ.
ಕೊನೆಗೆ ನಿರಾಸೆಯಿಂದ ಹೆಂಡತಿ ಬಳಿ ಬರುತ್ತಾನೆ.

ಸುಮ ಐಬಿ ಸಿಕ್ಕಿತೇ ಎಂಬಂತೆ ಅವನನ್ನು ನೋಡುತ್ತಾಳೆ.

ರಘುನಂದನ್ : ಸ್ಸಾರಿ ಸುಮ, ಎಲ್ಲೂ ಕಾಣಿಸ್ತಿಲ್ಲ.

ಸುಮ : ನೀವೋ ನಿಮ್ಮ ಐಬೀನೋ. ಆ ಮಿನಿಸ್ಟ್ರು ಪ್ರೋಗ್ರಾಮ್ ದೇವ್ರೇ ಗತಿ…

ರಘುನಂದನ್ : ಏ, ವೆಂಕಟೇಶಯ್ಯ ಮೊನ್ನೆ ತಾನೆ ಬಂದು ನೋಡಿಕೊಂಡು ಹೋಗಿದ್ದಾರೆ, ಬಹುಶಃ ನಾವೇ
ದಾರಿ ತಪ್ಪಿರಬೇಕು… ಇದನ್ನ ಇಳಿದು ಆ ಕಡೆ ಗುಡ್ಡ ಹತ್ತಿ ನೋಡೋಣ್ವ?

ಸುಮ : ನೀವು ಯಾವ ಗುಡ್ಡನಾದ್ರು ಹತ್ತಿಕೊಳ್ಳೀ, ಯಾವ ಗುಡ್ಡನಾದ್ರು ಇಳಿಕೊಳಿ, ನಾನು ಮನೇಗ್
ಹೋಗ್ತೀನಿ…

ಎಂದು ಬಂದ ದಾರಿಯಲ್ಲಿ ಹಿಂತಿರುಗತೊಡಗುತ್ತಾಳೆ.

ರಘುನಂದನ್ : ಸುಮಾ, ಪ್ಲೀಸ್ ನಿಂತ್ಕೋ…

ಅವಳು ನಿಲ್ಲದೆ ನಡೆದಾಗ ವಿಧಿಯಿಲ್ಲದೆ ರಘುನಂದನ್ ಮೌನವಾಗಿ ಹಿಂಬಾಲಿಸುತ್ತಾನೆ.

ಕಟ್ ಟು…

ದೃಶ್ಯ – ೨೪ / ಹಗಲು / ಒಳಾಂಗಣ / ಕಛೇರಿ

ರಘುನಂದನ್ ಛೇಂಬರ್‌ನಲ್ಲಿ ವೆಂಕಟೇಶಯ್ಯನನ್ನು ಇದ್ದಾನೆ.

ರಘುನಂದನ್ : ಆ ಐಬಿ ಎಲ್ರೀ ಇದೆ ವೆಂಕಟೇಶಯ್ಯ?

ವೆಂಕಟೇಶಯ್ಯ : ಕರಡಿಗುಡ್ಡದಲ್ಲಿ ಸಾರ್…

ರಘುನಂದನ್ : ಕರಡೀಗುಡ್ಡ ಎಲ್ಲಿದೆ?

ವೆಂಕಟೇಶಯ್ಯ : ಸುತ್ತು ಮುತ್ತ ಇರೋವೆಲ್ಲ ಕರಡಿಗುಡ್ಡಗಳೇ ಸಾರ್…

ರಘುನಂದನ್ : ಅದೇ ಐಬಿ ಇರೋ ಕರಡೀಗುಡ್ಡ ಎಲ್ಲಿದೆ? ನಿನ್ನೆ ಎಲ್ಲಾ ಅಷ್ಟು ಹುಡುಕಿದರೂ ಸಿಗಲೇ ಇಲ್ಲ

ವೆಂಕಟೇಶಯ್ಯ : (ಗಾಬರಿ) ನೀವು ನಿನ್ನೆ ಐಬಿ ಹುಡುಕಿಕೊಂಡು ಹೋಗಿದ್ದಿರಾ?

ರಘುನಂದನ್ : ಹೌದು, ಮ್ಯಾಪ್ ಹಿಡಿದುಕೊಂಡು ಮೂರು ನಾಲ್ಕು ಕಿಲೋಮೀಟರ್ ಅಲೆದೆ. ಆದ್ರೆ ಆ
ಐಬೀನೆ ಸಿಗಲಿಲ್ಲ. ಇವತ್ತು ಸಂಜೆ ಒಳಗೆ ಹೆಡ್ ಆಪೀಸ್‌ಗೆ ರಿಪೋರ್ಟ್ ಕಳಿಸಬೇಕು, ನೀವು ಮೊನ್ನೆ ಹ್ಯಾಗೂ ಹೋಗಿ ನೋಡಿಕೊಂಡು ಬಂದಿದ್ದೀರಲ್ಲ, ನಡೀರಿ ನಾನು ಬರತೀನಿ ಹೋಗಿಬರೋಣ…

ವೆಂಕಟೇಶಯ್ಯ : (ಅನುಮಾನಿಸಿ) ಸಾರ್…ಅದೂ…

ರಘುನಂದನ್ : ಮತ್ತೆ ಗುಡ್ಡ-ಬೆಟ್ಟ ಹತ್ತಬೇಕು ಅಂತ ಯೋಚನೇನ? ನೀವು ಐಬೀವರೆಗೂ ಬರೋದ್
ಬೇಡ. ಜೀಪಲ್ಲೇ ಕೂತಿರಿ. ಎಲ್ಲಿದೆ ಅಂತ ತೋರಿಸಿ ಸಾಕು.

ರಘುನಂದನ್ ಪೆನ್ನಿನ ಕ್ಯಾಪ್ ಮುಚ್ಚಿ ಎದ್ದುನಿಲ್ಲುತ್ತಾನೆ.
ವೆಂಕಟೇಶಯ್ಯ ನಿಧಾನವಾಗಿ ತಲೆ ಎತ್ತಿ ಕೈ ಮುಗಿಯುತ್ತಾ,

ವೆಂಕಟೇಶಯ್ಯ : ಸಾರ್, ನೀವು ಈ ಗರೀಬನ್ನ ಕ್ಷಮಿಸಬೇಕು ಸಾರ್!

ರಘುನಂದನ್ : ಕ್ಷಮೆ! ಯಾಕ್ರೀ?

ವೆಂಕಟೇಶಯ್ಯ : ನಾನು… ನಾನು… ಮೊನ್ನೆ ಆ ಐಬೀನ ನೋಡೋಕ್ ಹೋಗಲಿಲ್ಲ ಸಾರ್. ಗೊರವಯ್ಯ
ಹೋಗಿ ನೋಡಿಕೊಂಡು ಬಂದದ್ದು ಸಾರ್. ಅದ್ರ ಪ್ರಕಾರ ನಾನು ರಿಪೋರ್ಟ್ ಕೊಟ್ಟೆ…

ರಘುನಂದನ್ : ಗೊರವಯ್ಯ ಅಂದ್ರೆ ಏನು ಮೇಟೀನ?

ವೆಂಕಟೇಶಯ್ಯ : ಅಲ್ಲ ಸಾರ್, ಅವನು ಒಬ್ಬು ಗೊರವರ ದೀಕ್ಷೆ ತಗೊಂಡಿರೋನು… ಅವನಿಗೆ ಈ ಪ್ರದೇಶ,
ಕಾಡು-ಮೇಡು ಎಲ್ಲ ಚನ್ನಾಗಿ ಗೊತ್ತು ಅಂತ ಕಳಿಸಿದ್ದೆ.

ರಘುನಂದನ್ : ನೀವು ಈ ಥರ ಕೆಲ್ಸ ಮಾಡ್ತಿದ್ರೆ ನಾನು ಆಕ್ಷನ್ ತಗೋಬೇಕಾಗುತ್ತೆ ಅಷ್ಟೆ…

ವೆಂಕಟೇಶಯ್ಯ : (ಕೈಮುಗಿದು) ಅದು ಮಾತ್ರ ಮಾಡಬೇಡಿ ಸಾರ್. ನಾನು ಮಕ್ಕಳೊಂದಿಗ….

ರಘುನಂದನ್‌ಗೆ ಮಕ್ಕಳೊಂದಿಗ ಎಂದದ್ದು ಚುಚ್ಚಿದಂತಾಗುತ್ತದೆ.

ರಘುನಂದನ್ : ಸರಿ ಸರಿ…. ನಾನೀಗ ಆ ಐಬಿನ ಇವತ್ತು ನೋಡ್ಲೇಬೇಕು. ಆ ಜಾಗ ಇನ್ಯಾರಿಗೆ ಗೊತ್ತಿದೆ?

ವೆಂಕಟೇಶಯ್ಯ : ಅದು ನಮ್ಮಲ್ಲಿ ಸರಿಯಾಗಿ ಯಾರಿಗೂ ಗೊತ್ತಿಲ್ಲ ಸಾರ್. ಅದೂ ಊರಿಂದ ಆಚೆ, ಕಾಡಿನ
ಮಧ್ಯೆ ಯಾವುದೋ ಗುಡ್ಡದ ಮೇಲೆ ಇರೋದು, ಸ್ವಲ್ಪ ದೂರ, ಹಾಗಾಗಿ ನಮ್ಮ ಆಫೀಸಿನಿಂದ ಯಾರೂ ಅದನ್ನ ಬಳಸ್ತಾನೇ ಇಲ್ಲ. ಅಲ್ಲದೆ, ನಾನು ಇಲ್ಲಿಗೆ ಬಂದಾಗಿನಿಂದ ಯಾರೂ ವಿ‌ಐಪಿಗಳೂ ಬಂದಿಲ್ಲ. ತುಂಬಾ ಹಳೇದು ಅಂತ ರೆಕಾರ್ಡ್ಸ್ ಹೇಳುತ್ತೆ.

ರಘುನಂದನ್ : (ವ್ಯಂಗ್ಯವಾಗಿ) ನಿಮ್ಮ ಅದೇ ರೆಕಾರ್ಡ್ಸು ಪ್ರತಿ ವರ್ಷ ಒಚಿiಟಿಣಚಿiಟಿಚಿಟಿಛಿe ಗೆ ಅಂತ ಒಂದಿಷ್ಟು
ಹಣಾನು ಖರ್ಚಾಗ್ತಾ ಇದೆ ಅಂತಾನು ಹೇಳುತ್ತೆ ಅದಕ್ಕೊಬ್ಬ ಮೇಟಿ ಇದ್ದಾನೆ ಅಂತಾನೂ ಹೇಳುತ್ತೆ…. ಆ ಮೇಟಿನ್ನಾದ್ರು ಕರೆಸಿ…

ವೆಂಕಟೇಶಯ್ಯ : ಅವನು ಒಂದನೇ ತಾರೀಕು ಅಷ್ಟೇ ಸಾರ್ ಬರೋದು, ಸಂಬಳಕ್ಕೆ… ಅವನೂ ಅಲ್ಲೇ
ಇರಬೋದು…

ರಘುನಂದನ್ : ಸರಿಹೋಯ್ತು… ಅದೇನು ನಿಮ್ಮ ವ್ಯವಸ್ಥೇನೋ ಒಂದೂ ಗೊತ್ತಾಗಲ್ಲ. (ಕ್ಷಣ ಬಿಟ್ಟು)
ಒಂದು ಕೆಲ್ಸ ಮಾಡಿ, ಆ ಗೊರವಯ್ಯನಿಗೆ ಈ ಪ್ರದೇಶ ಎಲ್ಲಾ ಚನ್ನಾಗಿ ಗೊತ್ತು ಅಂದ್ರಲ್ಲ, ಅವನ್ನೇ ಕರೆಸಿ ಜೊತೇಲಿ ಕರಕೊಂಡು ಹೋಗೋಣ.

ವೆಂಕಟೇಶಯ್ಯ : ಆಯ್ತು ಸಾರ್…

ರಘುನಂದನ್ : ಹಾಗೇ ಮೇಟಿ ಸಿಗ್ತಾನ ಅಂತಾನ ಅಂತ ನೋಡಿ…

ವೆಂಕಟೇಶಯ್ಯ : ಸರಿ ಸಾರ್…

ಎಂದು ತಲೆತಗ್ಗಿಸಿಕೊಂಡು ಹೊರಹೋಗುತ್ತಾನೆ.

ಕಟ್ ಟು…

ದೃಶ್ಯ – ೨೫ / ಹಗಲು / ಗೊರವಯ್ಯನ ಮನೆ

ವೆಂಕಟೇಶಯ್ಯ ಗೊರವಯ್ಯನ ಮನೆಗೆ ಸೈಕಲ್‌ನಲ್ಲಿ ಬರುತ್ತಾನೆ.
ಅಲ್ಲಿ ಗೊರವಯ್ಯನ ಮನೆ ತಿಳಿಯದೆ ಪಕ್ಕದ ಮನೆಯೊಂದರ ಬಳಿ ಹೋಗಿ ಅಲ್ಲಿದ್ದವರನ್ನು,

ವೆಂಕಟೇಶಯ್ಯ : ಇಲ್ಲಿ ಗೊರವಯ್ಯನ ಮನೆ ಯಾವುದಮ್ಮ?

ಹೆಂಗಸು : ಅದೇ ಸ್ವಾಮಿ… ಆದ್ರೆ ಆ ಒಜ್ಜ ಇಲ್ಲ…

ವೆಂಕಟೇಶಯ್ಯ : ಎಲ್ಲಿಗೋದ?

ಹೆಂಗಸು : ಯಾರಿಗೋ ದೀಕ್ಷೆ ಕೊಡಬೇಕು ಬರೋದು ಒಂದು ನಾಕೈದು ದಿನ ಆಗುತ್ತೆ ಅಂತ ಹೋಯ್ತ್ತು.

ವೆಂಕಟೇಶಯ್ಯ : (ಬೇಸರ) ಎಲ್ಲಿಗೆಂತ ಏನಾದ್ರು ಗೊತ್ತಾ?

ಹೆಂಗಸು : ಗೊತ್ತಿಲ್ಲ ಸ್ವಾಮಿ… ಏನಾಗಬೇಕಿತ್ತು ಸ್ವಾಮಿ?

ವೆಂಕಟೇಶಯ್ಯ : ಆಫೀಸ್‌ದೊಂದಿಷ್ಟು ಕೆಲ್ಸ ಇತ್ತು…

ಹೆಂಗಸು : ಅದೇನೋ ಮರ ಕಡಿಸಬೇಕು ಅಂತಿತ್ತು, ಅದಾ ಸ್ವಾಮಿ…

ವೆಂಕಟೇಶಯ್ಯ : (ತಲೆಯಾಡಿಸಿ, ಸ್ವಗತ) ನಮ್ಮ ತಲೆ ಕಡಿಯೋ ಸ್ಥಿತಿ ಬಂದಿದೆ (ಪ್ರಕಟ) ಅವನು ಬಂದ್ರೆ ಅರ್ಜೆಂಟ್ ಆಫೀಸ್ ಹತ್ರ ಬರೋಕ್ ಹೇಳಮ್ಮ

(ಎಂದು ಹೇಳಿ ಹೊರಡುತ್ತಾನೆ)

ದೃಶ್ಯ – ೨೬ / ಹಗಲು / ರಸ್ತೆ

ವೆಂಕಟೇಶಯ್ಯ ರಸ್ತೆಯಲ್ಲಿ ಸೈಕಲ್ ತುಳಿಯುತ್ತಿದ್ದಾನೆ.
ಅವನ ತಲೆಯಲ್ಲಿ ನೂರಾರು ಯೋಚನೆಗಳು.

ಇನ್ನೊಂದು ಕಡೆ ಗೊರವಯ್ಯ ಮತ್ತು ಇತರರು ಹೊಸದಾಗಿ ದೀಕ್ಷೆ ಪಡೆದವನಿಗೆ ಕುಣಿತ ಹೇಳಿಕೊಡುತ್ತಿದ್ದಾರೆ.

ಕುಣಿತದ-ಸೈಕಲಿನ ಎರಡೂ ಒovemeಟಿಣ ಗಳನ್ನು Iಟಿಣeಡಿಛಿuಣ ಮಾಡಲಾಗುತ್ತದೆ.

ಕಟ್ ಟು…

ದೃಶ್ಯ – ೨೭ / ಹಗಲು / ರಘುನಂದನ್ ಮನೆ

ರಘುನಂದನ್ ಜೀಪಿಳಿದು ತನ್ನ ಮನೆಗೆ ಬರುತ್ತಾನೆ.
ಬಾಗಿಲು ಮುಚ್ಚಿದೆ, ತಟ್ಟುತ್ತಾನೆ.
ಗೊರವಯ್ಯನ ಮನೆಯಲ್ಲಿದ್ದ ಹುಡುಗಿ ಗೌರಿ ಬಾಗಿಲು ತೆರೆಯುತ್ತಾಳೆ.
ಆಕೆಯನ್ನು ನೋಡಿ ರಘುನಂದನ್‌ಗೆ ಆಶ್ಚರ್ಯವಾಗುತ್ತದೆ.

ಗೌರಿ : ಯಾರು ?

ರಘುನಂದನ್ : (ತುಂಟುತನದಿಂದ) ನಾನು, ರಘುನಂದನ್ ಅಂತ. ನೀನು ಯಾರು?

ಗೌರಿ : (ನಾಚಿಕೆ) ನಾನು… ನಾನು… ಗೊತ್ತಿಲ್ಲ…. (ಒಳಗೋಡುತ್ತಾ) ಅವ್ವಾರೆ…

ಸುಮಾ : ಬಂದೇ… (ರಘುವನ್ನು ನೋಡಿ) ನೀವಾ! (ಗೌರಿಗೆ)

ರಘುನಂದನ್ : ಯಾರೀ ಹುಡುಗಿ? (ಎಂದು ಹುಸಿನಗುತ್ತಾ ಕುರ್ಚಿ ಮೇಲೆ ಕುಳಿತುಕೊಳ್ಳುತ್ತಾನೆ)

ಸುಮ : ಇದೇ ಊರಿನವಳು, ಗೌರೀ ಅಂತ. ಗೊರವಯ್ಯನ ಕುಲದವರು?

ರಘುನಂದನ್ : (ಆಶ್ಚರ್ಯ) ಯಾವ ಗೊರವಯ್ಯ ?

ಸುಮ : ಅದೇರಿ, ಆವತ್ತು ನಾನು ಕತೆ ಹೇಳಲಿಲ್ವ? ತಲೇಗೆಲ್ಲ ಕರಡಿ ಟೋಪಿ ಹಾಕಿರತಾರಲ್ಲ ಅವರು…

ರಘುನಂದನ್ : (ಕುತೂಹಲ) ಅವ್ರು ಇಲ್ಲಿಗೆ ಬಂದಿದ್ರ ?

ಸುಮ : ಹುಂ, ಯಾವುದೋ ಕೆಲಸದ ಮೇಲೆ ಊರಿಗೆ ಇವಳನ್ನೂ ಕರಕೊಂಡು ಹೊರಟಿದ್ರು, ನಂಗೆ
ಜೊತೆಯಾಗುತ್ತೆ, ನೀವು ಬರೋವರೆಗೂ ಇಲ್ಲೇ ಇರಲಿ ಅಂತ ಹೇಳಿ ಇರಿಸಿಕೊಂಡೆ. ತುಂಬಾ ಜಾಣೆ. ನಂಗೆ ಎಷ್ಟು ಕೆಲ್ಸ ಮಾಡಿಕೊಟ್ಟಳೂ ಅಂತೀರ?

ರಘುನಂದನ್ : ಒಳ್ಳೇದಾಯ್ತು ಬಿಡು…

ಸುಮ : ಇವಳು ಎಷ್ಟು ಚನ್ನಾಗಿ ಹಾಡು ಹೇಳ್ತಾಳೆ ಅಂತೀರ.

ರಘುನಂದನ್ : ಹೌದಾ! ಅಡಿಗೆ ಆಗಿದೆಯಾ?

ಸುಮ : ಬಂದೇ ಬಡಿಸ್ತೀನಿ.

ದೃಶ್ಯ – ೨೮ / ಹಗಲು / ಕಛೇರಿ

ರಘುನಂದನ್ ಜೀಪಿಳಿದು ಆಫೀಸ್ ಪ್ರವೇಶಿಸುತ್ತಾನೆ.
ಎಲ್ಲರೂ ನಮಸ್ಕರಿಸುತ್ತಾರೆ. ವೆಂಕಟೇಶಯ್ಯನ ಕುರ್ಚಿ ಖಾಲಿ ಇದೆ.
ರಘುನಂದನ್ ಅದನ್ನು ಗಮನಿಸುತ್ತಾನೆ. ಅಲ್ಲೇ ನಿಂತು,

ರಘುನಂದನ್ : ಏನು, ವೆಂಕಟೇಶಯ್ಯ ಇವತ್ತೂ ಬಂದಿಲ್ವ?

ಸತ್ಯವತಿ : ಇಲ್ಲ ಸಾರ್?… ಸಾರ್ ಹೆಡ್ ಆಫೀಸಿನಿಂದ ನಿಮ್ಮನ್ನ ಕೇಳಿಕೊಂಡು ಫೋನ್ ಬಂದಿತ್ತು, ವಿಷ್ಯ
ಏನೂಂತ ಹೇಳಲಿಲ್ಲ.

ರಘುನಂದನ್ : ಐಬಿ ರಿಪೋರ್ಟ್ ಎಲ್ಲಿ ಅಂತ ಕೇಳೋಕ್ ಫೋನ್ ಮಾಡಿರಬೇಕು… ಅದು ಗೊತ್ತಿರೋದು
ಈ ವೆಂಕಟೇಶಯ್ಯ ಒಬ್ಬರಿಗೇ! ಈತ ನೋಡಿದ್ರೆ ಎರಡು ದಿನದಿಂದ ಆಪೀಸ್‌ಗೆ ಬಂದಿಲ್ಲ. ಗೊರವಯ್ಯನ-ಮೇಟಿನ ಹುಡುಕಿಕೊಂಡು ಹೋದೋರು ತಾವೇ ನಾಪತ್ತೆ ಆದ್ರು!

ಜವಾನ : ಅವರಿಗೆ ತುಂಬಾ ಜ್ವರವಂತೆ… ಅವರ ಡಾಟರ್ರು ಬೆಳಗ್ಗೆ ಫೋನ್ ಮಾಡಿದ್ರು ಸಾರ್…

ರಘುನಂದನ್ : ಅಲ್ಲ ನಿಂಗೂ ಆ ಮೇಟಿ ಮನೆ ಎಲ್ಲೀಂತ ಗೊತ್ತಿಲ್ಲವೇನಯ್ಯ?

ಜವಾನ : ಇಲ್ಲ ಸಾರ್….

ರಘುನಂದನ್ : ನೀವೆಲ್ಲಾ ಆಫೀಸ್‌ಗೆ ಯಾಕ್ ಬರತೀರಿ? (ಎಲ್ಲರನ್ನೂ ಉದ್ದೇಶಿಸಿ) ನಮ್ಮ
ಡಿಪಾರ್ಟ್‌ಮೆಂಟ್‌ನಲ್ಲಿ ಇರೋ ಐಬಿ ಬಗ್ಗೆ ನಿಮಗೆ ಯಾರಿಗೂ ಗೊತ್ತಿಲ್ಲ. ಅದನ್ನ ನೋಡಿಕೊಳೋ ಮೇಟಿನ ಮನೇನು ಯಾರಿಗೂ ಗೊತ್ತಿಲ್ಲ. ತಿಂಗಳಿಗೊಂದು ಸಲ ಬಂದು ಸಂಬಳ ತಗೋತಾನಲ್ಲ ಅವನ ಮುಖಾನಾದ್ರು ನೋಡಿದ್ದೀರೋ ಇಲ್ವೋ? ಅವನೂ ಒಬ್ಬ ನಿಮ್ಮ ಸಹೋದ್ಯೋಗಿ…

ಶ್ರೀಧರಮೂರ್ತಿ : ಸಾರ್ ಆದ್ರೆ ಅವನು ಸ್ಟಾಫ್ ಅಲ್ಲ ಸಾರ್. ಕ್ಯಾಶುಯಲ್ ಲೇಬರ್ರು… ಹಾಗಾಗಿ ಸ್ಟಾಫ್
ರಿಜಿಸ್ಟರ್‌ನಲ್ಲಿ ಅವನ ಹೆಸರು, ಡೀಟೈಲ್ಸ್ ಯಾವುದೂ ಇಲ್ಲ. ಐಬಿ ಒಚಿiಟಿಣಚಿiಟಿಚಿಟಿಛಿe ಲೆಕ್ಕಾಚಾರ ಎಲ್ಲ ವೆಂಕಟೇಶಯ್ಯನವರೆ ನೋಡಿಕೊಳ್ಳೋದರಿಂದ, ಯಾರಿಗೆ ಯಾವಾಗ ದುಡ್ದು ಕೊಡತಾರೆ ಅಂತಾನೂ ನಮಗ್ ಗೊತ್ತಾಗಲ್ಲ. ಇಂಪಾರ್ಟೆಂಟ್ ಫೈಲ್ಸ್ ಎಲ್ಲಾ ಅವರ ಬೀರೂನಲ್ಲಿರುತ್ತೆ. ಯಾವಾಗಲೂ ಅದಕ್ಕೆ ಬೀಗ ಹಾಕಿ ಬೀಗದ ಕೈ ಅವರೇ ಇಟ್ಟುಕೊಂಡಿರುತ್ತಾರೆ.

ರಘುನಂದನ್ : ಸಧ್ಯ ಆಫೀಸ್ ಬೀಗದ ಕೈ ನಿಮ್ಮ ಹತ್ರ ಇದೆಯಲ್ಲಾ ಅದೇ ಪುಣ್ಯ.

ಶ್ರೀಧರಮೂರ್ತಿ ತಲೆ ತಗ್ಗಿಸುತ್ತಾನೆ.

ದೃಶ್ಯ – ೨೯ / ಹಗಲು / ವೆಂಕಟೇಶಯ್ಯನ ಮನೆ

ವೆಂಕಟೇಶಯ್ಯ ಮಂಚದ ಮೇಲೆ ಹೊದೆದುಕೊಂಡು ಮಲಗಿದ್ದಾನೆ.
ಅವನ ಮಗಳು ಭವಾನಿ ಬಂದು ಏಳಿಸುತ್ತಾಳೆ.

ಭವಾನಿ : ಅಪ್ಪಾ… ಅಪ್ಪಾ… ಸಾಹೇಬರು ಬಂದಿದ್ದಾರೆ…

ವೆಂಕಟೇಶಯ್ಯ ಗಡಬಡಿಸಿ ಏಳುತ್ತಾನೆ.
ರಘುನಂದನನ್ನು ನೋಡಿ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ.

ರಘುನಂದನ್ : ಇರಲಿ ಪರವಾಗಿಲ್ಲ… ಈಗ ಹ್ಯಾಗಿದೀರಿ ?

ವೆಂಕಟೇಶಯ್ಯ : ಪರವಾಗಿಲ್ಲ ಸಾರ್, ನೀವು ಯಾಕ್ ಬರೋಕ್ ಹೋದ್ರಿ. ಹೇಳಿಕಳಿಸಿದ್ರೆ ನಾನೇ ಬರತಿದ್ದೆ.

ರಘುನಂದನ್ : ಹೆಡ್ ಆಫೀಸ್‌ನಿಂದ ಮೇಲಿಂದ ಮೇಲೆ ಆ ಐಬಿ ವಿಷಯ ಏನಾಯ್ತು ಅಂತ ಫೋನ್
ಮಾಡ್ತಿದ್ದಾರೆ. ಮೇಟಿನ ಹುಡುಕ್ಕೊಂಡು ಬರತೀನಿ ಅಂತ ಅಂದ ನೀವು ಪತ್ತೇನೆ ಇಲ್ಲ… ಅವರಿಗೆ ಏನು ರಿಪೋರ್ಟ್ ಕಳಿಸೋದು ಅಂತ ಗೊತ್ತಾಗ್ತಾ ಇಲ್ಲ.

ವೆಂಕಟೇಶಯ್ಯ : ತುಂಬಾ ಹಳೇ ಕಾಲದ್ದು, ಅಲ್ಲಿ ಉಳಕಳ್ಳೋ ವ್ಯವಸ್ಥೆ ಇಲ್ಲ ಅಂತ ಇನ್ನೊಂದುಸಲ ಬರೆದು
ಬಿಡಿ ಸಾರ್… ಆಮೇಲೆ ನೋಡ್ಕಳೋಣ.

ರಘುನಂದನ್ : ಒಂದು ಸಲ ನಿಮ್ಮ ಮಾತು ನಂಬಿಕೊಂಡು ರಿಪೋರ್ಟ್ ಕಳ್ಸಿ ಹೆಡ್ ಆಫೀಸ್‌ನಿಂದ ಮಾತು
ಕೇಳಿದ್ದೀನಿ. ಇನ್ನೊಂದು ಸಲ ಆ ತಪ್ಪನ್ನ ಮಾಡಲ್ಲ?

ವೆಂಕಟೇಶಯ್ಯ ಭಾವುಕನಾಗಿ ಗೊಳ ಗೊಳನೆ ಅಳತೊಡಗುತ್ತಾನೆ.
ರಘುನಂದನ್‌ಗೆ ಗಾಬರಿಯಾಗಿ

ವೆಂಕಟೇಶಯ್ಯ : ನಿಜ ಸಾರ್…ನಾನು ತಪ್ಪು ಮಾಡಿದೀನಿ ಸಾರ್… ನಾನು ತಪ್ಪು ಮಾಡಿದ್ದೀನಿ.
ದೊಡ್ಡಮನಸ್ಸು ಮಾಡಿ ನೀವು ನನ್ನನ್ನ ಕ್ಷಮಿಸಬೇಕು ಸಾರ್…

ರಘುನಂದನ್ : ಹಳೇದೆಲ್ಲ ಬಿಟ್ಟು ಬಿಡಿ ವೆಂಕಟೇಶಯ್ಯ, ಮೇಟಿ ಸಿಕ್ನಾ ಅಷ್ಟು ಹೇಳಿ?

ವೆಂಕಟೇಶಯ್ಯ : ಮೇಟಿ ಎಲ್ಲಿ ಸಿಕ್ತಾನೆ ಸಾರ್?

ರಘುನಂದನ್ : ಎಲ್ಲಿ ಸಿಕ್ತಾನೆ ಅಂದ್ರೆ ಏನರ್ಥ? ಪ್ರತಿತಿಂಗಳೂ ಬಂದು ಸಂಬ್ಳ ತಗೊಂಡು ಹೋಗ್ತಾ
ಇದ್ದಾನಲ್ರೀ… ಸಂಬಳ ನೀವೇ ತಾನೆ ಕೊಡ್ತಿದ್ದದ್ದು?

ವೆಂಕಟೇಶಯ್ಯ : ಹೌದು ಸಾರ್, ಈ ಪಾಪೀನೆ ಕೊಡ್ತಿದ್ದದ್ದು… ಸಾರ್, ನಂಗೆ ಮೂರು ಜನ ಹೆಣ್ಣು
ಮಕ್ಳು ಸಾರ್. ಸಾಲ ಮಾಡಿ ಒಬ್ಳು ಮದ್ವೆ ಮಾಡಿದ್ದೀನಿ. ಇನ್ನೂ ಇಬ್ರು ಜನ ಓದ್ತಾ ಇದ್ದಾರೆ. ಮನೇಲಿ ನಮ್ಮ ಮಿಸೆಸ್‌ಗೆ ಯಾವಾಗಲೂ ಏನಾದ್ರು ಒಂದು ಕಾಯಿಲೆ ಇದ್ದೇ ಇರುತ್ತೆ ಸಾರ್. ಬರೋ ಸಂಬಳ ಸಾಕಾಗೋಲ್ಲ. ಮನೇ ಕಡೆ ತುಂಬಾ ತಾಪತ್ರಯ ಸಾರ್.

ರಘುನಂದನ್ : ಅದಕ್ಕೂ ಇದಕ್ಕೂ ಏನ್ರೀ ಸಂಬಂಧ?

ವೆಂಕಟೇಶಯ್ಯ : ನಾಲ್ಕು ವರ್ಷದಿಂದ ಆ ಮೇಟಿ ಮುಖಾನೇ ನಾನು ನೋಡಿಲ್ಲ ಸಾರ್.

ರಘುನಂದನ್ : ಮತ್ತೆ ಆಫೀಸ್ ರಿಜಿಸ್ಟರ್‌ನಲ್ಲಿ ಅವನು ಹೋದ ತಿಂಗಳು ಸಂಬಳ ತಗೊಂಡಿರೋದಕ್ಕೆ ಸೈನ್
ಮಾಡಿದ ದಾಖಲೆ ಇದೆ!

ವೆಂಕಟೇಶಯ್ಯ : ಆ ಸೈನ್ ಮಾಡಿರೋದು ನಾನೇ ಸಾರ್. ಅವನು ನಾಲ್ಕು ವರ್ಷದಿಂದ ಆಫೀಸ್ ಕಡೆ
ಮುಖಾನೇ ಹಾಕಿಲ್ಲ. ನಾನು ಈ ಆಫೀಸಿಗೆ ವರ್ಗವಾಗಿ ಬಂದಾಗ ಬರತಿದ್ದ ಸಾರ್. ಹಿಂದಿದ್ದ ಆಫೀಸರ್ ಟ್ರಾನ್ಸ್‌ಫರ್ ಆಗಿ ಹೋದ ಮೇಲೆ ಇದ್ದಕ್ಕಿದ್ದಂಗೆ ಬರೋದೇ ಬಿಟ್ಟು ಬಿಟ್ಟ ಸಾರ್. ನಾನೂ ಮೂರು ತಿಂಗ್ಳು ನೋಡ್ದೆ, ಅವನು ಬರಲಿಲ್ಲ. ಯಾರನ್ನೋ ಅವನೆಲ್ಲಿ ಅಂತ ಕೇಳ್ದೆ, ಅವರು ಅವನಿಗೆ ತುಂಬಾ ಕಾಯಿಲೆ ಅಂದ್ರು. ನಾನು ಅವನು ಸತ್ತು-ಗಿತ್ತು ಹೋಗಿರಬೇಕು ಅಂತ ಅವನ ಹೆಸರಲ್ಲಿ ಸೈನ್ ಮಾಡಿ ಸಂಬಳ ನಾನೇ ಖರ್ಚು ಮಾಡ್ಕಂಡ್‌ಬಿಟ್ಟೆ ಸಾರ್…. ಮಣ್ಣು ತಿನ್ನೋ ಕೆಲ್ಸ ಮಾಡಿದ್ದೀನಿ. ನನ್ನ ಕ್ಷಮಿಸಿಬಿಡಿ ಸಾರ್. ನಾನು ಮಕ್ಳಂದಿಗ ಕತ್ತಿಗೆ ಹಗ್ಗ ಹಾಕಿಸಬೇಡಿ ಸಾರ್…

ಎಂದು ರಘುನಂದನ್‌ನ ಕೈ ಹಿಡಿದು ಅಳುತ್ತಾನೆ.
ರಘುನಂದನ್ ಅವನಿಂದ ಬಿಡಿಸಿಕೊಂಡು,

ರಘುನಂದನ್ : ನೀವೇ ಏನೇ ಹೇಳಿ ವೆಂಕಟೇಶಯ್ಯ ನಾನು ಇದನ್ನ ಕ್ಷಮಿಸೋಕಾಗಲ್ಲ. ಇದು ದುಡ್ಡಿಗೆ ಸಂಬಂಧ ಪಟ್ಟ ವಿಷಯ… ಒisಚಿಠಿಠಿಡಿoಠಿಡಿiಚಿಣioಟಿ… veಡಿಥಿ seಡಿious mಚಿಣಣeಡಿ…

ಎಂದು ಹೇಳಿ ಎದ್ದು ಹೊರಡುತ್ತಾನೆ.
ಅಡಿಗೆ ಮನೆಯ ಬಾಗಿಲ ಮರೆಯಲ್ಲಿ ನಿಂತು ಇದನ್ನೆಲ್ಲಾ ಗಮನಿಸುತ್ತಿದ್ದ
ವೆಂಕಟೇಶಯ್ಯನ ಹೆಂಡತಿ ಮಕ್ಕಳ ಮುಖದಲ್ಲಿ ಭಯ ಮನೆಮಾಡಿದೆ.

ಕಟ್ ಟು…

ದೃಶ್ಯ – ೩೦ / ಹಗಲು / ಕಛೇರಿ

ಆಫೀಸಿನಲ್ಲಿ ಟೈಪಿಸ್ಟ್ ಸತ್ಯವತಿ ರಘುನಂದನ್ ಛೇಂಬರ್ ಬಾಗಿಲು ತೆರೆದು ಒಳಬರುತ್ತಾಳೆ.
ಅವಳ ಕೈನಲ್ಲಿ ಡಿಕ್ಟೇಷನ್ ತೆಗೆದುಕೊಳ್ಳುವ ನೋಟ್ ಬುಕ್ ಇದೆ.
ರಘುನಂದನ್ ಚಿಂತೆಯಲ್ಲಿ ಕುಳಿತಿದ್ದಾನೆ.
ಅವನ ಸ್ಥಿತಿ ನೋಡಿ, ಅವಳಿಗೆ ಮಾತನಾಡಿಸಲು ಸ್ವಲ್ಪ ಅಳುಕಾಗುತ್ತದೆ.

ಸತ್ಯವತಿ : (ಮೆಲ್ಲನೆ) ಸಾರ್…

ರಘುನಂದನ್ : (ಅವಳನ್ನು ನೋಡದೇ) ಹುಂ, ಬರಕೊಳಿ… ವೆಂಕಟೇಶಯ್ಯನವರಿಗೆ ಅಡ್ರೆಸ್ ಮಾಡಿ…

ಸತ್ಯವತಿ : ಯಾವ ವೆಂಕಟೇಶಯ್ಯ ಸಾರ್?

ರಘುನಂದನ್ : ಇನ್ಯಾರು ನಮ್ಮ ಆಫೀಸಿನ ವೆಂಕಟೇಶಯ್ಯ…

ಸತ್ಯವತಿ ಪೆನ್ಸಿಲ್ ಸಿದ್ಧ ಮಾಡಿಕೊಂಡು ವಿಷಯ ಏನಿರಬಹುದೆಂದು ಕುತೂಹಲದಿಂದ ಕಾಯುತ್ತಾಳೆ.

ರಘುನಂದನ್ : (ಕ್ಷಣ ಬಿಟ್ಟು) ನಮ್ಮ ಇಲಾಖೆಗೆ ಸಂಬಂಧಿಸಿದ ಇನ್ಸ್‌ಪೆಕ್ಷನ್ ಬಂಗಲೆಯ ಮೇಟಿ ನಾಲ್ಕು
ವರ್ಷದಿಂದ ಕೆಲಸಕ್ಕೆ ಬರದೆ ನಾಪತ್ತೆಯಾಗಿದ್ದರೂ ನೀವು ಅದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿಲ್ಲ. ಜೊತೆಗೆ ಅವನಿಗೆ ಸಲ್ಲಬೇಕಾಗಿದ್ದ ಸಂಬಳವನ್ನೂ ತಾವೇ ದುರುಪಯೋಗ ಪಡಿಸಿಕೊಂಡಿದ್ದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ತಮ್ಮ ಮೇಲೆ ಕ್ರಮ ಜರುಗಿಸಬಾರದೇಕೆ ಎಂಬುದಕ್ಕೆ ಡಿಸೆಂಬರ್ ಹದಿನೈದರ ಒಳಗೆ ತಮ್ಮ ವಿವರಣೆಯನ್ನು ಈ ಮೂಲಕ ಕೇಳಲಾಗುತ್ತಿದೆ….

ಸತ್ಯವತಿಗೆ ಈ ವಿಷಯ ಶಾಕ್ ತರುತ್ತದೆ.

ಸತ್ಯವತಿ : (ಮೆಲ್ಲನೆ) ಸಾರ್…

ರಘುನಂದನ್ : ಟೈಪ್ ಮಾಡಿಟ್ಟಿರಿ… ನಾನು ಊಟಕ್ಕೆ ಮನೇಗ್ ಹೋಗ್ ಬರತೀನಿ.

ಎಂದು ಅವಳ ಉತ್ತರಕ್ಕೆ ಕಾಯದೆ ಹೊರನಡೆಯುತ್ತಾನೆ.
ಸತ್ಯವತಿ ಆತಂಕದಿಂದ ಅವನತ್ತಲೇ ನೋಡುತ್ತಲೇ ನಿಲ್ಲುತ್ತಾಳೆ.

ಕಟ್ ಟು…

ದೃಶ್ಯ – ೩೧ / ಹಗಲು / ರಘುನಂದನ್ ಮನೆ

ರಘುನಂದನ್ ಜೀಪು ಕ್ವಾರ್ಟರ್ಸ್ ಮುಂದೆ ಬಂದು ನಿಲ್ಲುತ್ತದೆ.
ಅದರಿಂದ ಇಳಿದು ಮನೆಯತ್ತ ನಡೆಯುತ್ತಾನೆ. ಮನೆಯ ಬಾಗಿಲು ತೆರೆದಿರುತ್ತದೆ. ಒಳಬರುತ್ತಾನೆ.
ಅಲ್ಲಿದ್ದ ವೆಂಕಟೇಶಯ್ಯನ ಹೆಂಡತಿ ಮಕ್ಕಳು ಕುಳಿತಿದ್ದವರು ಗೌರವದಿಂದ ಎದ್ದು ನಿಲ್ಲುತ್ತಾರೆ.
ಅವರನ್ನು ಆ ಹೊತ್ತಿನಲ್ಲಿ ಅಲ್ಲಿ ನಿರೀಕ್ಷಿಸಿರದಿದ್ದ ರಘುನಂದನ್‌ಗೆ ಒಂದು ಕ್ಷಣ ಅಚ್ಚರಿಯಾಗುತ್ತದೆ.
ಏನು ಮಾಡುವುದು ಎಂದು ತೋಚದೆ ಮೌನವಾಗಿ ಕುರ್ಚಿಯಲ್ಲಿ ಕುಳಿತು ಶೂ ಬಿಚ್ಚತೊಡಗುತ್ತಾನೆ.
ಅವನಿಗೆ ಹೆಣ್ಣುಮಕ್ಕಳು ‘ಸೊರಕ್… ಸೊರಕ್’ ಎಂದು ಅಳುವ ಶಬ್ದ ಕೇಳಿಸುತ್ತದೆ.
ಸುಮ ಅಲ್ಲೇ ಇದ್ದು ಇದನ್ನೆಲ್ಲ ನೋಡುತ್ತಿದ್ದವಳು ಹೆಣ್ಣು ಮಕ್ಕಳಿಗೆ ಸುಮ್ಮನಿರುವಂತೆ ಸನ್ನೆ ಮಾಡುತ್ತಾಳೆ.

ಸುಮ : (ಮೆಲ್ಲನೆ) ರೀ, ನೀವು ವೆಂಕಟೇಶಯ್ಯನವರ ಮನೆಯಿಂದ್ ಹೋದ ಮೇಲೆ ಅವರ ವರ್ತನೇನೆ ಸರಿ
ಇಲ್ಲವಂತೆ. ಏನಾದ್ರು ಅನಾಹುತ ಮಾಡಿಕೊಂಡುಬಿಡ್ತಾರೇನೋ ಅಂತ ಇವರೆಲ್ಲ ಹೆದರಿದ್ದಾರೆ.

ರಘುನಂದನ್ : ಅದಕ್ಕೆ ನಾನು ಏನ್ ಮಾಡ್ಲಿ ಸುಮಾ? ಆಫೀಸ್ ಪ್ರೊಸೀಜರ್ ಫಾಲೋ ಮಾಡ್ಲೇಬೇಕು…

ವೆಂ.ಹೆಂಡತಿ : ಹಾಗನ್ಬೇಡಿ ಸಾರ್… ನಮ್ಮ ಸಂಸಾರ ಉಳಿಸೋದು ನಿಮ್ಮ ಕೈನಲ್ಲೇ ಇದೆ.

ಸುಮ : ಅವರಿಗೆ ತಮ್ಮ ತಪ್ಪು ಗೊತ್ತಾಗಿದೆ. ಪಶ್ಚಾತಾಪಕ್ಕಿಂತ ಬೇರೆ ಶಿಕ್ಷೆ ಇದೆಯಾ?

ವೆಂ.ಹೆಂಡತಿ : ಕೈ ಮುಗಿದು ಕೇಳಿಕೋತೀವಿ ಸಾರ್… ಇದೊಂದು ಸಾರಿ, ಮನಸ್ ಮಾಡಿ.

ರಘುನಂದನ್ : (ನಿಟ್ಟುಸಿರಿಟ್ಟು) ಸರಿ, ನೀವು ಮನೇಗ್ ಹೋಗಿ. ವೆಂಕಟೇಶಯ್ಯ ಹುಷಾರಾದ ಮೇಲೆ
ಆಫೀಸ್‌ಗೆ ಬರೋಕ್ ಹೇಳಿ.

ಹೆಣ್ಣುಮಕ್ಕಳ ಮುಖದಲ್ಲಿ ಧನ್ಯತಾಭಾವ ಮೂಡುತ್ತದೆ.
ಕೃತಜ್ಞತಾ ಭಾವದಿಂದ ಇಬ್ಬರಿಗೂ ಕೈ ಮುಗಿದು ಹೊರಡುತ್ತಾರೆ.

ಸುಮ : ಇರಿ… ಕುಂಕುಮ ಕೊಡ್ತೀನಿ….

ಎಂದು ಕುಂಕುಮ, ತಾಂಬೂಲ ತರಲು ಒಳಹೋಗುತ್ತಾಳೆ.

ಕಟ್ ಟು…

ದೃಶ್ಯ – ೩೨ / ಹಗಲು / ಒಳಾಂಗಣ / ಕಛೇರಿ

ಟೈಪಿಸ್ಟ್ ಸತ್ಯವತಿ ಛೇಂಬರ್ ಬಾಗಿಲು ತಳ್ಳಿಕೊಂಡು ಒಳಬರುತ್ತಾಳೆ.
ಕೈಯಲ್ಲಿ ಟೈಪ್ ಮಾಡಿದ ಲೆಟರ್ ಇದೆ.
ರಘುನಂದನ್ ಯಾವುದೋ ಫೈಲ್‌ನಲ್ಲಿ ಮುಖ ಹುದುಗಿಸಿದ್ದಾನೆ.

ಸತ್ಯವತಿ : (ಮೆಲ್ಲನೆ) ಸಾರ್…

ಎಂದು ಹೇಳಿ ಪತ್ರ ಇಡುತ್ತಾಳೆ. ರಘುನಂದನ್ ಗಮನಿಸಿಯೂ ಗಮನಿಸಿದವನಂತೆ.

ರಘುನಂದನ್ : ಏನ್ರೀ ಅದು ?

ಸತ್ಯವತಿ : ಸಾರ್ …

ರಘುನಂದನ್ : (ಅದರತ್ತ ನೋಡದೆ) ಅದನ್ನ ಹರಿದು ಹಾಕಿ…

ಸತ್ಯವತಿ : (ಸಂತೋಷ) ಥ್ಯಾಂಕ್ಸ್ ಸಾರ್….

ಎಂದು ಅದನ್ನು ಅಲ್ಲೇ ಹರಿದು ಕಸದಬುಟ್ಟಿಗೆ ಹಾಕುತ್ತಾಳೆ.
ರಘುನಂದನ್ ಅವಳ ಸಂಭ್ರಮವನ್ನು ಗಮನಿಸುತ್ತಾನೆ.

ದೃಶ್ಯ – ೩೩ / ಹಗಲು / ರಘುನಂದನ್ ಮನೆ

ರಾತ್ರಿ, ರಘುನಂದನ್ ಮತ್ತು ಸುಮ ಊಟ ಮಾಡಿ ಕುಳಿತಿದ್ದಾರೆ.

ಸುಮ : ಆ ಐಬಿ ಎಲ್ಲಿದೆ ಅಂತ ನಿಮ್ಮ ಆಫೀಸ್‌ನಲ್ಲಿ ಬೇರೆ ಯಾರಿಗೂ ಗೊತ್ತೇ ಇಲ್ವ?

ರಘುನಂದನ್ : ಉಹುಂ, ಹೆಚ್ಚಿನವರು ಇತ್ತೀನಿನವ್ರು; ಅವ್ರಲ್ಲೆಲ್ಲ ಸೀನಿಯರ್ ಅಂದ್ರೆ ವೆಂಕಟೇಶಯ್ಯನೇ….

ಸುಮ : ಹಾಗಾದ್ರೆ ಹಿಂದೆ ನೀವು ಇಲ್ಲಿಗೆ ಕೆಲ್ಸಕ್ಕೆ ಬರೋಕ್ ಮುಂಚೆ ಇದ್ರಲ್ಲ ಆಫೀಸರ್‌ಗಳು ಅವ್ರನ್ನ
ವಿಚಾರಿಸಿದ್ರೆ ಎಲ್ಲಿದೆ ಅಂತ ಗೊತ್ತಾಗುತ್ತೆ…

ರಘುನಂದನ್ : ಅವ್ರೆಲ್ಲಾ ರಿಟೈರ್, ಟ್ರಾನ್ಸ್‌ಫರ್ ಆಗಿ ಎಲ್ಲೆಲ್ಲಿದ್ದಾರೋ?

ಸುಮ : ಹುಡುಕಬೇಕು ಅಂದ್ರೆ ನಿಮ್ಮ ಆಫೀಸ್ ರೆಕಾರ್ಡ್ಸ್‌ನಲ್ಲಿ ಡೀಟೈಲ್ಸ್ ಸಿಗೋಲ್ವ? ಹುಡುಕಿನೋಡಿ…

ರಘುನಂದನ್ ಅವಳ ಮಾತುಗಳನ್ನೇ ಮೆಲುಕು ಹಾಕುತ್ತಾನೆ.

ದೃಶ್ಯ – ೩೪/ ಹಗಲು / ಒಳಾಂಗಣ / ಕಛೇರಿ

ವೆಂಕಟೇಶಯ್ಯ ರಘುನಂದನ್ ಛೇಂಬರ್ ಒಳಕ್ಕೆ ಕೆಲವು ಫೈಲ್‌ಗಳನ್ನು ಹಿಡಿದು ಬರುತ್ತಾನೆ.

ರಘುನಂದನ್ : ಡೀಟೈಲ್ಸ್ ಸಿಕ್ತಾ?

ವೆಂಕಟೇಶಯ್ಯ : ಸಿಕ್ತು ಸಾರ್… ಈ ಐಬಿ ಕಟ್ಟಿದಮೇಲೆ ಈ ಆಫೀಸ್‌ಗೆ ಎಂಟು ಜನ ಆಫೀಸರ್‌ಗಳು
ಬಂದು ಹೋಗಿದ್ದಾರೆ. ಬದುಕಿರೋ ಮೂವರಲ್ಲಿ ಈ ಕೃಷ್ಣಪ್ಪ ಇದ್ದಾರೆ ನೋಡಿ ಇವರ ಪೀರಿಯಡ್‌ನಲ್ಲೆ ಸುಮಾರು ಐವತ್ತೆಂಟು ಸಾವಿರ ರೂಪಾಯಿ ವೆಚ್ಚದಲ್ಲಿ ಕರಡಿಗುಡ್ಡದ ಮೇಲೆ ಐಬಿ ಕಟ್ಟಿದ್ದಾರೆ ಸಾರ್. ಇವರ ಯಾರು ಅಂತ ನಿಮಗೆ ಗೊತ್ತಿರಬೇಕು?

ರಘುನಂದನ್ : ಯಾರು ಹೇಳಿ?

ವೆಂಕಟೇಶಯ್ಯ : ಅದೇ ಸಾರ್ ಈಗ ಕೃಷ್ಣಕುಮಾರ್ ಅಂತ ಕಂದಾಯ ಸಚಿವರಾಗಿಲ್ವ, ಅವರೇ !… ಸಾರ್
ಇವರು ರಿಟೈರ್ ಆದಮೇಲೆ ರಾಜಕೀಯ ಸೇರಿದರು, ಇನ್‌ಪ್ಲೂಯನ್ಸ್ ಬಳಸಿಕೊಂಡು ಗೆದ್ದೂ ಬಿಟ್ರು. ಈ ಕಡೆಯವರು ಯಾರು ಹೋದ್ರೂ ಹಳೇದೆಲ್ಲ ನೆನಪಿಲ್ಲದವರ ತರ ಃehಚಿve ಮಾಡಿದ್ರಂತೆ…

ರಘುನಂದನ್ : ನಾವು ಹೋಗಿ ಐಬಿ ಎಲ್ಲಿ ಸ್ವಾಮಿ ಅಂತ ಅವರನ್ನ ಕೇಳೋ ಹಾಗಿಲ್ಲ… ಸರಿ, ಇನ್ಯಾರು ?

ವೆಂಕಟೇಶಯ್ಯ : ಇನ್ನೊಬ್ಬರು ಗೋಪಲ್‌ರಾವ್… ಇವರ ಪೀರಿಯಡ್‌ನಲ್ಲಿ ಹಳೆದಾದ ಐಬಿ ರಿಪೇರಿಗೆ ಅಂತ
ಒಂದು ಲಕ್ಷದ ಏಳು ಸಾವಿರ ರೂಪಾಯಿಗಳನ್ನ ಸ್ಯಾಂಕ್ಷನ್ ಮಾಡಿಸಿಕೊಂಡಿದ್ದಾರೆ. ಇವರು ರಿಟೈರ್ ಆದಮೇಲೆ ಮೈಸೂರಿಗೆ ಹೋಗಿ ಸೆಟ್ಲ್ ಆಗಿದ್ದಾರೆ… ದೇವೇಂದ್ರಪ್ಪ ಲಾಸ್ಟ್ ಆಫೀಸರ್ ಇವರು ಸರ್ವೀಸ್‌ನಲ್ಲಿ ಇದ್ದಾಗಲೇ…. (ಮೇಲೆಕ್ಕೆ ಎಂಬಂತೆ ಸನ್ನೆ) ಖಾಲಿ ಇದ್ದ ಜಾಗಕ್ಕೆ ನೀವು ಬಂದ್ರಿ…

ರಘುನಂದನ್ : (ಯೋಚಿಸಿ) ವೆಂಕಟೇಶಯ್ಯ, ನೀವು ಆ ಮೇಟಿ ಸತ್ತಿದ್ದಾನೊ ಬದ್ಕಿದಾನೊ ಅಂತ
ತಿಳ್ಕೋಬೇಕು. ಒಂದು ವೇಳೆ ನಮಗೆ ಆ ಮೇಟಿ ಸಿಕ್ಕಿಬಿಟ್ರೆ ನಮ್ಮ ಎಲ್ಲಾ ಪ್ರಾಬ್ಲಂ ಸಾಲ್ವ ಆಗೋಗುತ್ತೆ.

ವೆಂಕಟೇಶಯ್ಯ : ಹೌದು ಸಾರ್, ನಾನು ಆ ಕೆಲ್ಸ ಮಾಡ್ತೀನಿ. ನಾನು ಮಾಡಿರೋ ತಪ್ಪಿಗೆ ಪ್ರಾಯಶ್ಚಿತ್ತವಾಗಿ
ಈ ಐಬೀನ ಹುಡುಕೇ ಹುಡುಕಬೇಕು ಸಾರ್

ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ. ಅಷ್ಟರಲ್ಲಿ ಫೋನ್ ರಿಂಗಾಗುತ್ತದೆ. ರಘುನಂದನ್ ರಿಸೀವ್ ಮಾಡುತ್ತಾನೆ.

ಆಫೀಸರ್ : ನಾನ್ರೀ, ಹೆಡ್ ಆಫೀಸ್‌ನಿಂದ ಪುರುಷೋತ್ತಮ್ ಇಲ್ಲಿ…

ರಘುನಂದನ್ : ನಮಸ್ಕಾರ ಸಾರ್

ಆಫೀಸರ್ : ನಮಸ್ಕಾರ… ಎಲ್ರೀ ನಿಮ್ಮ ರಿಪೋರ್ಟು ?

ರಘುನಂದನ್ : ರೆಡಿ ಆಗ್ತಾ ಇದೆ ಸಾರ್… ಸಾರ್ ಪ್ರೋಗ್ರಾಂ ಕನ್‌ಫರ್ಮಾ ಸಾರ್

ಆಫೀಸರ್ : ಹೌದು ಯಾಕೆ ಅನುಮಾನ?

ರಘುನಂದನ್ : ಇಲ್ಲಾ ಸುಮ್ಮನೆ ಕೇಳ್ದೆ ಸಾರ್…

ಆಫೀಸರ್ : ನೋಡಿ ರಘುನಂದನ್ ಯಾವ ತೊಂದ್ರೇನು ಆಗದ ಹಾಗೆ ನೋಡಿಕೊಳಿ, ಇದ್ರಿಂದ
ನಿಮಗೂ ಒಳ್ಳೇ ಹೆಸರು ಬರಬೇಕು ನಮಗೂ ಬರಬೇಕು. ಹಾಂ! ಇನ್ನೊಂದು ವಿಷ್ಯ, ಮಿನಿಸ್ಟ್ರು ವಿಸಿಟ್‌ನ ಸೀಕ್ರೆಟ್ ಆಗಿ ಇಡಿ. ಜನಕ್ಕೆ ಗೊತ್ತಾದ್ರೆ ಅಹವಾಲು, ಸನ್ಮಾನ, ಉದ್ಭಾಟನೆ, ರಾಜಕೀಯ ಅಂತ ಅವಾಂತರ ಶುರುವಾಗುತ್ತೆ. ಜೊತೇಲಿ ಫಾರಿನ್ ಟೀಂ ಇರುತ್ತೆ. ಈ ಇನ್ಸ್‌ಟ್ರಕ್ಷನ್ನು ಮಿನಿಸ್ಟ್ರ ಆಫೀಸ್‌ನಿಂದಾನೇ ಬಂದಿರೋದು…

ರಘುನಂದನ್ : ಇಲ್ಲ ಸಾರ್ ಯಾರಿಗೂ ಲೀಕ್ ಮಾಡಲ್ಲ…ಓಕೆ ಸಾರ್. (ಎಂದು ಫೋನಿಟ್ಟು
ವೆಂಕಟೇಶಯ್ಯನ ಕಡೆ ತಿರುಗಿ) ನೋಡೀ ಆಗ್ಲೇ ಮೇಲಿಂದ ಪ್ರೆಶರ್ರು!…

ವೆಂಕಟೇಶಯ್ಯ ಸುಮ್ಮನೆ ನೋಡುತ್ತಾನೆ.

ಕಟ್ ಟು…

ದೃಶ್ಯ – ೩೫ / ಹಗಲು / ಕಛೇರಿ ಹೊರಭಾಗ

ಒಳಗೆ ಈ ಮಾತುಕತೆ ನಡೆಯುತ್ತಿದ್ದಾಗ ಹೊರಗೆ ಗೊರವಯ್ಯ ಬರುತ್ತಾನೆ.
ಜವಾನ ಅವನನ್ನು ಬಾಗಿಲಲ್ಲಿಯೇ ತಡೆದು ನಿಲ್ಲಿಸುತ್ತಾನೆ.

ಗೊರವಯ್ಯ : ನಾನು ಸಾಯೇಬ್ರನ್ನ ನೋಡ್ಬೇಕಿತ್ತಲ್ಲಪ್ಪ

ಜವಾನ : ಅವ್ರು ಯಾವುದೋ ಅರ್ಜೆಂಟ್ ಮೀಟಿಂಗ್‌ನಲ್ಲವರೆ, ನೀನು ಮುಂದಿನವಾರ ಬಾ

ಗೊರವಯ್ಯ : ಅವರೇ ಮನೆ ಹತ್ರ ಬಂದಿದ್ರಂತಲ್ಲ, ಯಾಕೆ ?

ಜವಾನ : ನಂಗೇನ್ ಗೊತ್ತಜ್ಜ… ಆದ್ರೆ ಈಗ ಯಾರನ್ನೂ ಒಳಗ್ ಬಿಡಬೇಡ ಅಂತ ಹೇಳವರೆ

ಗೊರವಯ್ಯ : ತಿರುಗಿ ತಿರುಗಿ ನನ್ನ ಕಾಲೆಲ್ಲಾ ಬಿದ್ದು ಹೋದವಲ್ಲಪ್ಪ…

ಜವಾನ : ಆಫೀಸ್ ಕೆಲ್ಸ ಅಂದ್ರೆ ಅಂಗೇಯ… ಬಾ ಅಂಗೇ ಟೀ ಕುಡಿಯೋಣ.

ದೃಶ್ಯ – ೩೬ / ಹಗಲು / ರಘುನಂದನ್ ಮನೆ

ಗೌರಿ ಹಾಡುತ್ತಿದ್ದಾಳೆ. ಸುಮ ಕುಳಿತು ಕೇಳುತ್ತಿದ್ದಾಳೆ.

ಬಣ್ಣದ ಗುಬ್ಯಾರು ಮಳಿರಾಜ
ಅವರು- ಮಣ್ಣಾಗಿ ಹೋದರು ಮಳಿರಾಜ
ಬಣ್ಣದ ಗುಬ್ಯಾರು ಮಣ್ಣಾಗಿ ಹೋದರು
ಅನ್ಯದ ದಿನ ಬಂದು ಮಳಿರಾಜ

ಒಕ್ಕಲಗೇರ್ಯಾಗ ಮಳಿರಾಜ-
ಅವರು- ಮಕ್ಕಳ ಮಾರ್ಯಾರ ಮಳಿರಾಜ
ಮಕ್ಕಳ ಮಾರಿ ರೊಕ್ಕ ಹಿಡಕಂಡು
ಭತ್ತಂಡ ತಿರಗ್ಯಾರ ಮಳಿರಾಜ

ಸೊಲಿಗಿ ಹಿಟ್ಟಿನಾಗ ಮಳಿರಾಜ-
ಅವರು- ಸುಣ್ಣಾನ ಕುಡಿಸ್ಯಾರ ಮಳಿರಾಜ
ಹಸ್ತು ಬಂದ ಕೇರಿ ಗಪ ಗಪ ತಿಂದು
ಒದ್ದಾಡಿ ಸತ್ತಾರ ಮಳಿರಾಜ

ಗಂಡುಳ್ಳ ಬಾಲ್ಯಾರು ಮಳಿರಾಜ-
ಅವರು- ಭಿಕ್ಷಾಕ ಹೊರಟಾರು ಮಳಿರಾಜ
ಗಂಡುಳ್ಳ ಬಾಲ್ಯಾರು ಭಿಕ್ಷಾಕ ಹೋದಾರು
ಅನ್ಯದ ದಿನ ಬಂದು ಮಳಿರಾಜ

ಸ್ವಾತೀಯ ಮಳಿಬಂದು ಮಳಿರಾಜ-
ಸುತ್ತ ದೇಶಾಕ ಆಗ್ಯಾದ ಮಳಿರಾಜ
ಹಳ್ಳ ಕೊಳ್ಳ ಹೆಣ ಹರಿದಾಡಿ ಹೋದವು
ಯಾವಾಗ ಬಂದ್ಯಪ್ಪ ಮಳಿರಾಜ…
ನೀನು ಯಾವಾಗ ಬಂದ್ಯಪ್ಪ ಮಳಿರಾಜ…

ಅಷ್ಟರಲ್ಲಿ ಹೊರಗೆ ಗೊರವಯ್ಯ ಬಂದು ಕೂಗುತ್ತಾನೆ.

ಗೊರವಯ್ಯ : ಅವ್ವಾ… ಅವ್ವಾರೆ.

ಸುಮ, ಗೌರಿನೊಂದಿಗೆ ಹೊರಬರುತ್ತಾಳೆ. ಗೌರಿಗೆ ತಾತನನ್ನು ನೋಡಿ ಸಂತೋಷವಾಗುತ್ತದೆ.

ಗೊರವಯ್ಯ : ಚಂದಾಕಿದ್ದೀಯ ಕೂಸೇ? ಅವ್ವಾವ್ರಿಗೆ ಏನೂ ಕಷ್ಟ ಕೊಡಲಿಲ್ಲ ತಾನೆ?

ಸುಮ : ಚನ್ನಾಗಿ ಹೊಂದಿಕೊಂಡಿದ್ಳು. ಅವಳು ಇದ್ದಿದ್ದರಿಂದ ನಂಗೂ ಬೇಜಾರು ಕಳೀತು. ಒಳಗ್ ಬನ್ನಿ…

ಗೊರವಯ್ಯ : ಇಲ್ಲ ತಾಯಿ, ಮನೇ ಕಡೆ ಬಿಟ್ಟಿದ್ದು ಬಿಟ್ಟಂಗೆ ಓಗಿದ್ದೆ, ಒಸಿ ನೋಡಬೇಕು. ಗೌರಿ ನಡಿ…

ಗೌರಿ ಅರ್ಧ ಮನಸ್ಸಿನಿಂದ ಸುಮಳ ಮುಖ ನೋಡುತ್ತಾಳೆ. ಸುಮಳಿಗೆ ಅವಳ ನೋಟದ ಮಾತು ಅರ್ಥವಾಗುತ್ತದೆ.

ಸುಮ : ಇವಳು ಇಲ್ಲೇ ಇರಲಿ ಬಿಡಿ….

ಗೊರವಯ್ಯ : ಬರೋವಾರ ಕರಕಂಡ್ ಬತ್ತೀನಿ… ನಡಿಯವ್ವಾ…

ಗೌರಿ ಇಷ್ಟವಿಲ್ಲದ ಹೊರಡುತ್ತಾಳೆ.
ಸುಮಳೂ ಮನಸ್ಸಿಲ್ಲದೆ ಕಳಿಸಿಕೊಡುತ್ತಾಳೆ.
ಇಬ್ಬರೂ ನಡೆದು ಮರೆಯಾಗುವುದನ್ನೇ ಸುಮ ನಿಂತು ನೋಡುತ್ತಾಳೆ.

ದೃಶ್ಯ – ೩೭ / ಹಗಲು / ರಘುನಂದನ್ ಮನೆ

ರಘುನಂದನ್ ಅವಸರದಲ್ಲಿ ಮನೆಗೆ ಬರುತ್ತಾನೆ.

ರಘುನಂದನ್ : ಸುಮಾ, ನಾನು ಮೈಸೂರಿಗೆ ಹೋಗ್ತಾ ಇದ್ದೀನಿ… ಕೆಲಸ ಆಗಲಿಲ್ಲಾಂದ್ರೆ ಒಂದಿನ ಉಳಕೋ
ಬೇಕಾಗಬಹುದು. ಬ್ಯಾಗಿಗೆ ಬಟ್ಟೆ ಹಾಕಿಕೊಡು.

ಸುಮ : ಮೈಸೂರಿಗಾದ್ರೆ ನಾನೂ ಬರತೀನಿ, ಅಪ್ಪ-ಅಮ್ಮನ್ನ ನೋಡಿದ ಹಾಗೂ ಆಗುತ್ತೆ?

ರಘುನಂದನ್ : ನಾನು ಆಫೀಸ್ ಕೆಲ್ಸದ ಮೇಲೆ ಹೋಗ್ತಿರೋದು, ಅಲ್ಲಿರೋದು ಒಂದು ಗಂಟೆ ಕೆಲ್ಸ ಅಷ್ಟೆ.

ಸುಮ : ಒಂದು ಗಂಟೇನೋ ಹತ್ತು ನಿಮಿಷಾನೋ. ನನ್ನ ಪಾಡಿಗೆ ನಾನು ನಮ್ಮ ತಂದೇ ಮನೇಲಿರತೀನಿ,
ನೀವು ಹೊರಡೂ ಅಂದಾಗ ಹೊರಡತೀನಿ.

ರಘುನಂದನ್ : ಆದ್ರೆ ಆ ಹುಡುಗೀನ್ ಏನ್ ಮಾಡ್ತೀಯ?

ಸುಮ : ಅವರ ತಾತ ಬಂದು ಕರಕೊಂಡು ಹೋದ್ರು…

ರಘುನಂದನ್ : ಅಂದ್ರೆ ಆ ಗೊರವಯ್ಯನಾ ?!

ಸುಮ : ಹೌದು…

ರಘುನಂದನ್ : ಎಷ್ಟು ಹೊತ್ತಾಯಿತು ಹೋಗಿ…

ಸುಮ : ತುಂಬಾ ಹೊತ್ತಾಯಿತು… ಯಾಕೆ ?

ರಘುನಂದನ್ : ಏನಿಲ್ಲ, ಆತ ಸಿಕ್ಕಿದ್ರೆ ಚನ್ನಾಗಿರೋದು…. ಇರಲಿ, ಬೇಗ ಹೊರಡು…

ಕಟ್ ಟು…

ದೃಶ್ಯ – ೩೮ / ಹಗಲು / ಮಾವನ ಮನೆ

ಮೈಸೂರಿನ ಮನೆಯೊಂದರ ಮುಂದೆ ರಘುನಂದನ್ ಜೀಪು ನಿಲ್ಲುತ್ತದೆ.
ಮನೆಯ ಗೇಟಿನ ಮೇಲೆ ‘ದಯಾನಂದ ದೊಡ್ಡಬಾವಿ, ಲೇಖಕರು’ ಎಂಬ ಬೋರ್ಡಿದೆ.
ರಘುನಂದನ್ ಜೀಪಿನಲ್ಲೇ ಕುಳಿತಿದ್ದಾನೆ. ಸುಮ ಕೆಳಗಿಳಿಯುತ್ತಾಳೆ.

ರಘುನಂದನ್ : ನಾನು ಕೆಲ್ಸ ಮುಗಿದ ತಕ್ಷಣ ಫೋನ್ ಮಾಡ್ತೀನಿ, ರೆಡಿಯಾಗಿರು…

ದಯಾನಂದ : ಮನೆವರೆಗೂ ಬಂದು ಹಾಗೇ ಹೋಗೋದಾ? ಕಾಫಿ ಕುಡಿದು ಹೋಗಿ ಬನ್ನಿ…

ಎಂದು ಒತ್ತಾಯಿಸಿ ಒಳಗೆ ಕರೆಯುತ್ತಾಳೆ.
ದಯಾನಂದನಿಗೆ ಬಂದ ಪ್ರಶಸ್ತಿ ಫಲಕಗಳು, ಪುಸ್ತಕಗಳು ಅವನ ಪ್ರಖ್ಯಾತಿಯನ್ನು ಸಾರಿ ಹೇಳುತ್ತಿವೆ.

ದಯಾನಂದ : ಹೇಗಿದೆ ಕೆಲ್ಸ?
ಅಷ್ಟರಲ್ಲಿ ಫೋನ್ ರಿಂಗಾಗುತ್ತದೆ. ಮಗಳು ಫೋನ್ ತೆಗೆದುಕೊಳ್ಳುತ್ತಾಳೆ.

ಸುಮ : ಹಲೋ… ಒಂದ್ನಿಮಿಷ ಸಾರ್. ಇದ್ದಾರೆ ಕೊಡ್ತೀನಿ. (ತಂದೆಗೆ ಫೋನ್ ಕೊಡುತ್ತಾ) ಅಪ್ಪಾ,
ಸಂಸ್ಕೃತಿ ಇಲಾಖೆ ಮಿನಿಸ್ಟ್ರು ನಿಮ್ಮ ಹತ್ರ ಮಾತಾಡಬೇಕಂತೆ.

ದಯಾನಂದ : (ಫೋನ್ ತೆಗೆದುಕೊಂಡು) ಹಲೋ… ನಮಸ್ಕಾರ ಸಾರ್. ಹೇಗಿದ್ದೀರಿ? ಮಂತ್ರಿಗಿರಿ ಅಂದ್ರೆ
ಸಾಮಾನ್ಯನೇ, ಇಡೀ ರಾಜ್ಯದ ಸಂಸ್ಕೃತಿ ಕಾಪಾಡೋ ಕೆಲ್ಸ… ಹೇಳಿ ನನ್ನಿಂದ ಏನಾಗಬೇಕು ಅಪ್ಪಣೆಯಾಗಲಿ? ಅಯ್ಯೋ ಖಂಡಿತ ಬೇಡ ಸಾರ್… ಯಾವ ಅಧ್ಯಕ್ಷಗಿರೀನು ಬೇಡ. ಪ್ರಶಸ್ತಿ ತಗೊಂಡೋರೇನು ನಮಗೆ ಕಿರೀಟ ಇಡೋಲ್ಲ, ಆದ್ರೆ ಸಿಗದೇ ಇದ್ದೋರು ಉಗುದು ಉಪ್ಪಿನಕಾಯಿ ಹಾಕ್ತಾರೆ…. ಒಬ್ಬನ ಸಂತೋಷಕ್ಕೆ ಉಳಿದವರ ಕೈನಲ್ಲಿ ಬೈಸಿಕೋಬೇಕಲ್ಲ ಕಮಿಟಿ ಅಧ್ಯಕ್ಷರು…

ಸುಮ ಹೆಮ್ಮೆಯಿಂದ ತಂದೆಯನ್ನು ನೋಡುತ್ತಾಳೆ.
ರಘುನಂದನ್ ಅಸಹನೆಯಿಂದ ಹೊರಟು ನಿಲ್ಲುತ್ತಾನೆ. ಮಾವನ ಮಾತು ಮುಗಿಯುವಂತೆ ಕಾಣುವುದಿಲ್ಲ.
ತಾನು ಹೋಗಿ ಬರುತ್ತೇನೆಂದು ಸನ್ನೆ ಮಾಡುತ್ತಾನೆ.

ದಯಾನಂದ : (ಫೋನ್ ಮೇಲೆ ಕೈಯಿಟ್ಟು) ಒಂದ್ನಿಮಿಷ ಸಾರ್… ಮಿನಿಸ್ಟ್ರು ಮಾತಾಡ್ತಿದ್ದಾರೆ.

ರಘುನಂದನ್ : ನೀವು ಮಾತಾಡಿ, ನಾನು ಆಮೇಲೆ ಬರತೀನಿ…
ಎಂದು ಅವನ ಉತ್ತರಕ್ಕೂ ಕಾಯದೆ ಹೊರಟುಹೋಗುತ್ತಾನೆ.
ದಯಾನಂದನ ಮಾತು ಮುಂದುವರಿಯುತ್ತದೆ.

ದಯಾನಂದ : ಕ್ಷಮಿಸಿ, ನಮ್ಮ ಅಳಿಯ ಹೊರಟಿದ್ರು, ನಾನು ಅಧ್ಯಕ್ಶಗಿರಿ ಬೇಡ ಅಂದಿದ್ದನ್ನ ಕೇಳಿ ಒಪ್ಪಿಕೊಳಿ ಅಂತ ಒತ್ತಾಯ ಮಾಡ್ತಾ ಇದ್ರು…. ಇಲ್ಲಿ ನೀವು ಬಿಡ್ತಾ ಇಲ್ಲ. ಸಂಸ್ಕೃತದಲ್ಲಿ ಒಂದು ಮಾತಿದೆ…

ದೃಶ್ಯ – ೩೯ / ಹಗಲು / ಗೋಪಾಲ್‌ರಾವ್ ಮನೆ

ಒಂದು ಹಳೆಯ ಮನೆಯ ಮುಂದೆ ಜೀಪು ಬಂದು ನಿಲ್ಲುತ್ತದೆ.
ಡ್ರೈವರ್‌ನನ್ನು ಜೀಪಿನಲ್ಲೇ ಕುಳಿತಿರಲು ಹೇಳಿ ರಘುನಂದನ್ ಒಬ್ಬನೇ ಮನೆ ಪ್ರವೇಶಿಸುತ್ತಾನೆ.

ರಘುನಂದನ್ : ಯಾರಿದ್ದೀರಿ ಒಳಗೆ?

ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಆಮೇಲೆ ನೋಡಿದರೆ ಮುಂಬಾಗಿಲಿಗೆ ಚಿಲಕ ಹಾಕಿದೆ.
ಅಕ್ಕ-ಪಕ್ಕ ನೋಡಿ ರಸ್ತೆ ಕಡೆ ತಿರುಗಿದವನಿಗೆ ಒಳಗಿನಿಂದ
‘ಯಾರು ಬೇಕು?’ ಎಂದು ಯಾವುದೋ ಕೂಗಿದಂತಾಗುತ್ತದೆ.
ಹತ್ತಿರ ಹೋಗಿ ನೋಡಿದರೆ ಕಿಟಕಿಯಿಂದ ಯಾರೋ ಹೆಂಗಸು ಇಣುಕಿ ನೋಡುತ್ತಿದ್ದಾಳೆ.

ರಘುನಂದನ್ : ಇದು ಗೋಪಾಲರಾವ್ ಮನೆ ಅಲ್ವ?

ಹೆಂಗಸು : ಹೌದು…

ರಘುನಂದನ್ : ನಾನು ರಘುನಂದನ್ ಅಂತ, ಇವ್ರು ಕೆಲಸ ಮಾಡಿದ ಆಫೀಸಿನಲ್ಲಿ ಈಗ ನಾನಿದ್ದೀನಿ. ಒಂದಿಷ್ಟು ಆಫೀಸಿನ ವಿಚಾರ ಮಾತಾಡಿಹೋಗೋಣ ಅಂತ ಬಂದೆ. ಸಾಹೇಬರು ಇದ್ದಾರ ಮನೆಯಲ್ಲಿ?

ಹೆಂಗಸು : ಇದ್ದಾರೆ… ಬನ್ನಿ ಒಳಗೆ.

ರಘುನಂದನ್ : ಬಾಗಿಲಿಗೆ ಚಿಲಕ ಹಾಕಿದೆ?

ಹೆಂಗಸು : ನೀವು ತೆಕ್ಕೊಂಡು ಬನ್ನಿ… ಯಾರೋ ಹುಡುಗರು ಹಾಕಿಬಿಟ್ಟಿರಬೇಕು.

ರಘುನಂದನ್ ಚಿಲಕ ತೆಗೆದು ಒಳ ಹೋಗುತ್ತಾನೆ. ಹೆಂಗಸು ಸ್ವಾಗತಿಸುತ್ತಾಳೆ. ಮನೆಯಲ್ಲಿ ಯಾರೂ ಕಾಣುವುದಿಲ್ಲ.

ಹೆಂಗಸು : ಕುಳಿತುಕೊಳ್ಳೀ… ಏನಾದ್ರು ತಗೋತೀರ?

ರಘುನಂದನ್ : ಏನೂ ಬೇಡೀಮ್ಮ… ಸಾಹೇಬರನ್ನ ಕರೀತೀರ ?

ಹೆಂಗಸು: ಅವರನ್ನ ಕರೆದ್ರೆ ಬರೋಲ್ಲ. ನಾವೇ ಅಲ್ಲಿಗ್ ಹೋಗಬೇಕು…

ರಘುನಂದನ್ : ಸರಿ ಹೋಗೋಣ ?

ಹೆಂಗಸು : ಬನ್ನಿ…

ಎಂದು ಹಿತ್ತಲ ಕಡೆ ಕರೆದೊಯ್ಯುತ್ತಾಳೆ. ಹಿಂಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ

ಹೆಂಗಸು : ಆ ಚಿಲಕ ನಂಗೆ ಎಟುಕೋಲ್ಲ, ಸ್ವಲ್ಪ ತೆಗೀತೀರ?

ರಘುನಂದನ್ ಚಿಲಕ ತೆಗೆಯುತ್ತಾನೆ.
ಈಗ ಆಕೆಯೇ ಬಾಗಿಲು ತೆರೆದು ಹೊರಕ್ಕೆ ಹೋಗುತ್ತಾಳೆ.
ಅವಳ ಹಿಂದೆಯೇ ಬಂದ ರಘುನಂದನ್‌ಗೆ ಅಲ್ಲಿ ಯಾರೂ ಕಾಣಿಸುವುದಿಲ್ಲ.

ರಘುನಂದನ್ : ಎಲ್ಲಿದ್ದಾರೆ ಸಾಹೇಬರು?

ಹೆಂಗಸು : ಹೀಗ್ ಬನ್ನಿ ತೋರಿಸ್ತೀನಿ…

ಎಂದು ಅವನ ಕೈ ಹಿಡಿದು ನೆಲ ಬಾವಿಯ ಮೆಟ್ಟಿಲುಗಳನ್ನು ಇಳಿಸಿಕೊಂಡು ನೀರಿನ ಬಳಿ ಬರುತ್ತಾಳೆ.

ಹೆಂಗಸು : ನೋಡಿ ನಮ್ಮೆಜಮಾನ್ರು ಅಲ್ಲಿದ್ದಾರೆ…

ಎಂದು ನೀರಿನತ್ತ ಕೈ ತೋರಿಸುತ್ತಾಳೆ

ರಘುನಂದನ್ : (ಆಶ್ಚರ್ಯ) ಇಲ್ಲಾ…!

ಹೆಂಗಸು : ಹೌದು! ಅವ್ರು ಇಲ್ಲಿಗೆ ಬಿದ್ದು ಮೂರು ವರ್ಷ ಆಯ್ತು. ನಾನು ಅವರ ಹತ್ರ ಹೋಗ್ತೀನಿ ಅಂದ್ರೆ
ಯಾರೂ ಬಿಡ್ತಾನೇ ಇರಲಿಲ್ಲ. ನೀವು ತುಂಬಾ ಒಳ್ಳೆಯವರು ಬಾಗಿಲು ತೆಗೆದು ನನ್ನ ಇಲ್ಲಿ ಬರೋಕ್ ಬಿಟ್ರಿ. (ನೀರಿನತ್ತ ತಿರುಗಿ) ರೀ, ನಾನು ನಿಮ್ಮ ಹತ್ರ ಬರತಾ ಇದ್ದೀನಿ…

ಎಂದು ನೀರಿಗೆ ಹಾರಲು ಹೋಗುತ್ತಾಳೆ.

ರಘುನಂದನ್ : ಅಯ್ಯೋ ತಾಯೀ ಏನ್ ಮಾಡ್ತಿದ್ದೀರಿ… ಯಾರಾದರೂ ಇದ್ದೀರ?

ಹೆಂಗಸು : ಬಿಡಿ, ನಾನು ನಮ್ಮ ಯಜಮಾನ್ರ ಹತ್ರ ಹೋಗಬೇಕು…

ರಘುನಂದನ್ : ನೀವು ಹೀಗ್ ಬನ್ನಿ…

ರಘುನಂದನ್ ಕಷ್ಟಪಟ್ಟು ಆಕೆಯನ್ನು ಹಿಡಿದು ಮೇಲಕ್ಕೆ ಕರೆದುಕೊಂಡು ಬರುತ್ತಾನೆ.
ಅಷ್ಟರಲ್ಲಿ ಆಕೆಯ ಮಗನಂತೆ ಕಾಣುವ ವ್ಯಕ್ತಿಯೊಬ್ಬ ಬರುತ್ತಾನೆ.

ಮಗ : ಅಯ್ಯಯ್ಯೋ, ಯಾರು ಬಾಗಿಲು ತೆರೆದಿದ್ದು…

ರಘುನಂದನ್ : ನಾನೇ… ಹಿಡ್ಕೊಳಿ.

ಮಗ : ಯಾಕ್ ತೆಗೆಯೋಕ್ ಹೋದ್ರಿ… ಇವರು ಸರಿ ಇಲ್ಲ… ನೀನು ಬಾಮ್ಮ…

ಎಂದು ಇಬ್ಬರೂ ಸೇರಿ ಆಕೆಯನ್ನು ರೂಮಿಗೆ ತಳ್ಳಿ ಬಾಗಿಲು ಭದ್ರ ಪಡಿಸುತ್ತಾರೆ.

ರಘುನಂದನ್ : ಸ್ಸಾರಿ, ಹೀಗೆ ಅಂತ ನಂಗೊತ್ತಿರಲಿಲ್ಲ… ನಾನು ಬಂದಾಗ ಮನೇಲಿ ಯಾರೂ ಇರಲಿಲ್ಲ.

ಮಗ : ನಾನು ನಮ್ಮ ತಾಯೀನ ಕೂಡಿ ಹಾಕಿ, ಇಲ್ಲೇ ಅಂಗಡೀಗೆ ಹೋಗಿದ್ದೆ…

ರಘುನಂದನ್ : ನಾನು ನಿಮ್ಮ ತಂದೇನ ನೋಡೋಣ ಅಂತ ಬಂದೆ… ನಾನು ರಘುನಂದನ್ ಅಂತ
ಕರಡೀಗುಡ್ಡದ ಆಫೀಸಿನಲ್ಲಿ ಕೆಲ್ಸ ಮಾಡ್ತೀನಿ… ನಿಮ್ಮ ತಂದೆ ಪೀರಿಯಡ್‌ನಲ್ಲಿ ಅಲ್ಲಿ ಐಬಿ ರಿನೋವೇಟ್ ಮಾಡಿಸಿದ್ದಾರೆ. ಈಗ ಅದು ಎಲ್ಲಿದೆ ಅಂತ ಯಾರಿಗೂ ಗೊತ್ತಿಲ್ಲ. ನಿಮ್ಮ ತಂದೆಯವರಿಗೆ ಡೀಟೈಲ್ಸ್ ಗೊತ್ತಿರುತ್ತೇನೋ ಅಂತ ಬಂದೆ.

ಮಗ: ಆದ್ರೆ ಈ ಐಬಿ ವಿಚಾರ ಕೇಳಿಕೊಂಡು ಎರಡು ವರ್ಷದ ಹಿಂದೆ ಇನ್ನೊಬ್ಬರು ಆಫೀಸರ್
ಬಂದಿದ್ರು. ನಮ್ಮ ತಂದೆಯಿಂದ ಕೆಲವು ಕ್ಲಾರಿಫಿಕೇಷನ್ ಬೇಕು ಅಂತ ಜಿಲ್ಲಾ ಕೇಂದ್ರಕ್ಕೆ ಕರಕೊಂಡು ಹೋಗಿದ್ರು… ಅಲ್ಲಿಂದ ಬಂದ ಮೇಲೆ ನಮ್ಮ ತಂದೆ ಹೇಗೆ ಹೇಗೋ ಆಡೋಕ್ ಶುರು ಮಾಡಿದ್ರು… ಯಾರನ್ನ ನೋಡಿದ್ರೂ ಪೊಲೀಸಿನವರು ಅಂತ ಭಯ ಪಡೋರು… ಒಂದಿನ ಮಧ್ಯೆ ರಾತ್ರಿ ಹಿತ್ತಲ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ್ರು…

ರಘುನಂದನ್ : ಐ ಯಾಮ್ ಸ್ಸಾರಿ. ಅವರ ಡೈರಿ ಗೀರಿ ಏನಾದ್ರು ಇದೆಯಾ?

ಮಗ : ಇಲ್ಲ. ಯಾವುದೋ ಸಂದರ್ಭದಲ್ಲಿ ಇದ್ದ ಬದ್ದ ಎಲ್ಲಾ ಕಾಗದಪತ್ರಗಳನ್ನ ಒಲೇಗ್ ಹಾಕಿಬಿಟ್ರು..

ರಘುನಂದನ್ : ಸರಿಬಿಡಿ… ನನಗೆ ಇನ್ನೇನು ಮಾಹಿತಿ ಸಿಗಲ್ಲ ಅಂದ ಹಾಗಾಯ್ತು. ನಾನು ಬರತೀನಿ.

ಎಂದು ನಿರಾಶೆಯಿಂದ ಎದ್ದು ಕೈ ಮುಗಿಯುತ್ತಾನೆ.

ಕಟ್ ಟು…

ದೃಶ್ಯ – ೪೦ / ರಾತ್ರಿ / ಮಾವನ ಮನೆ

ರಾತ್ರಿ ಮಾವನ ಮನೆಯಲ್ಲಿ ರಘುನಂದನ್ ಊಟಕ್ಕೆ ಕುಳಿತಿದ್ದಾನೆ. ಸುಮಳೂ ಇದ್ದಾಳೆ.

ಮಾವ : ಹೇಗಿದೆ ಹೊಸಾ ಜಾಗ, ಹೊಸಾ ಕೆಲ್ಸ?

ರಘುನಂದನ್ : ಪರವಾಗಿಲ್ಲ…

ಸುಮ : ಅವರಿಗೆ ಪರವಾಗಿಲ್ಲ…. ಆದ್ರೆ ಜೊತೆಯವರಿಗೆ ಕಷ್ಟ!

ರಘುನಂದನ್ ಹೆಂಡತಿಯತ್ತ ನೋಡುತ್ತಾನೆ.

ರಘುನಂದನ್ : ಸರ್ಕಾರಿ ನೌಕರನ ಹೆಂಡತಿ ಅಂದ್ಮೇಲೆ ಇದೆಲ್ಲಾ ಹೊಸದೇನಲ್ಲ.

ಮಾವ : ನೀವು ಹೇಳೋದು ನಿಜ, ಆದ್ರೆ ಕೆಲವು ಕಷ್ಟಗಳನ್ನ ತಪ್ಪಿಸಿಕೋಬಹುದು. ಮೊನ್ನೆ ಏನಾಯ್ತೂಂದ್ರೆ
ಒಂದು ವೇದಿಕೆ ಮೇಲೆ ಮಿನಿಸ್ಟರ್ ದೇಸಾಯಿಯವರೂ ಸೇರಿದ್ವಿ. ಬಹಳಾ ಹಳೇ ಪರಿಚಯ, ಹಾಗೇ ಮಾತಿಗೆ ಬಂದು ನಿಮ್ಮ ಅಳಿಯ ಏನು ಮಾಡ್ತಾ ಇದ್ದಾರೆ ಅಂತ ಕೇಳಿದ್ರು, ನಾನು ನಿಮ್ಮ ಇಲಾಖೇಲೆ ಕೆಲ್ಸ ಮಾಡ್ತಾ ಇದ್ದಾರೆ ಕರಡಿಗುಡ್ಡಕ್ಕೆ ಟ್ರಾನ್ಸ್‌ಪರ್ ಆಗಿ ಒಂದು ವಾರ ಆಯ್ತು ಅಂದೆ. ಅಯ್ಯೋ ಅಲ್ಲಿ ಯಾಕ್ ಹೋದ್ರು, ಅಂಥಾ ಹಳ್ಳೀಗಳಲ್ಲಿ ಜೀವನ ಮಾಡೋದು ಕಷ್ಟ, ನನ್ನನ್ನ ನೋಡೋಕೆ ಹೇಳಿ ಎಲ್ಲಿಗೆ ಬೇಕು ಅಲ್ಲಿಗೆ ಹಾಕಿಸೋಣ ಅಂದ್ರು, ನಾಳೇನೆ ಮೀಟ್ ಮಾಡೋಣ.

ರಘುನಂದನ್ : ನಾನು ಅವತ್ತೇ ಹೇಳಿದ್ದೀನಿ, ನಂಗೆ ಈ ಮಿನಿಸ್ಟರ್ ಮುಂದೆ ಎಲ್ಲಾ ಕೈ ಜೋಡಿಸಿಕೊಂಡು
ನಿಂತ್ಕಳೋದು ಇಷ್ಟ ಆಗಲ್ಲ. ಅಲ್ಲೇನು ಶಾಶ್ವತವಾಗಿ ಇರೋಕ್ ಹೋಗಿದ್ದೀವ. ಕೆಲವು ವರ್ಷ ಅಷ್ಟೆ. ಅಲ್ಲಿರೋವರು ಮನುಷ್ಯರೇ ತಾನೆ.

ಸುಮ : ಅಪ್ಪ ನೀವು ಯಾಕೆ ತಲೆಕೆಡಿಸಿಕೋತೀರ? ಇವ್ರು ಸರ್ಕಾರ ಉದ್ಧಾರ ಮಾಡೋಕ್ ಹೊರಟಿದ್ದಾರೆ,
ನಾಳೆ ರಾಷ್ಟ್ರಪತಿಗಳು ಕರೆದು ಮೆಡಲ್ ಕೊಡ್ತಾರೆ ನೋಡಿ…. ಎಷ್ಟು ಹೇಳಿದ್ರೂ ಅಷ್ಟೆ….

ಎಂದು ಹೇಳಿ ಒಳಗೆ ಹೋಗುತ್ತಾಳೆ
ಉಳಿದವರು ಯಾರೂ ಮಾತನಾಡುವುದಿಲ್ಲ.

ಕಟ್ ಟು…

ದೃಶ್ಯ- ೪೧ / ರಾತ್ರಿ / ಮಾವನ ಮನೆ ಬೆಡ್ ರೂಮ್

ರಘುನಂದನ್ ಕಿಟಕಿಯಿಂದ ಹೊರಗೆ ನೋಡುತ್ತಾ ಸಿಗರೇಟು ಸೇದುತ್ತಿದ್ದಾನೆ.
ಸುಮ ಮಲಗಲು ಬರುತ್ತಾಳೆ.
ಅವಳು ಒಳಗೆ ಬಂದಿದ್ದು ರಘುನಂದನ್ ಅರಿವಿಗೆ ಬರುತ್ತದೆ.

ರಘುನಂದನ್ : ಸುಮಾ, ನನ್ನ ಮೇಲೆ ನಿಮ್ಮ ತಂದೆ ಹತ್ರ ಕಂಪ್ಲೇಂಟ್ ಮಾಡಿದ್ಯಾ?

ಸುಮ ಮಾತನಾಡುವುದಿಲ್ಲ… ರಘುನಂದನ್ನೇ ಮಾತು ಮುಂದುವರಿಸುತ್ತಾನೆ.

ರಘುನಂದನ್ : ನಿಂಗೆ ಅಲ್ಲಿ ಇರೋದು ಕಷ್ಟ ಅನ್ನಿಸಿದ್ರೆ ಇಲ್ಲೇ ಇರು, ನಂದೇನು ಅಭ್ಯಂತರ ಇಲ್ಲ.

ಸುಮ : ನಾನು ಇಲ್ಲಿ ಒಂಟಿಯಾಗಿ ಇರಬೇಕು ?

ರಘುನಂದನ್ ಅಕೆಯ ಮಾತಿಗೆ ತಲೆತಗ್ಗಿಸುತ್ತಾನೆ, ಕ್ಷಣಬಿಟ್ಟು ಅನುನಯಿಸುವ ಧ್ವನಿಯಲ್ಲಿ

ರಘುನಂದನ್ : ನೋಡು ನಮ್ಮ ಕಷ್ಟನ ನಾವೇ ಅನುಭವಿಸಬೇಕು. ಯಾರೂ ಪರಿಹಾರ ಮಾಡೋಕಾಗಲ್ಲ.

ಸುಮ ಅವನ ಮಾತಿಗೆ ಪ್ರತಿಕ್ರಿಯಿಸದೆ ಮುಸುಕು ಹೊದ್ದು ಮಲಗುತ್ತಾಳೆ.
ರಘುನಂದನ್ ತಪ್ಪಿತಸ್ಥ ಭಾವನೆಯಲ್ಲಿ ಕಿಟಕಿಯಲ್ಲಿ ಹೊರನೋಡುತ್ತಾ ನಿಲ್ಲುತ್ತಾನೆ.

ಕಟ್ ಟು…

ದೃಶ್ಯ – ೪೨ / ಹಗಲು / ರಘುನಂದನ್ ಮನೆ

ರಘುನಂದನ್ ಮತ್ತು ಸುಮ ತಮ್ಮ ಕರಡಿಗುಡ್ಡದ ಕ್ವಾರ್ಟರ್ಸ್‌ಗೆ ಬಾಗಿಲು ತೆಗೆದು ಒಳಬರುತ್ತಾರೆ.
ರಘುನಂದನ್ ಸುಸ್ತಾದವನಂತೆ ಹಾಲ್‌ನಲ್ಲಿನ ಕುರ್ಚಿಯಲ್ಲಿ ಮೈ ಚಲ್ಲುತ್ತಾನೆ.

ಸುಮ ಬೆಡ್‌ರೂಂಗೆ ಹೋಗುತ್ತಾಳೆ. ಒಳಗೆ ಹೋದವಳು ಜೋರಾಗಿ ಕಿರುಚುತ್ತಾಳೆ.
ರಘುನಂದನ್ ಗಾಬರಿಯಿಂದ ಒಳಕ್ಕೆ ಓಡಿ ಹೋಗುತ್ತಾನೆ.
ಸುಮ ಶಾಕ್‌ನಲ್ಲಿ ನಿಂತಿದ್ದಾಳೆ.
ಬೆಡ್ ಮೇಲೆ ಬೆಕ್ಕು ಸತ್ತು ಬಿದ್ದಿದೆ.
ಅದು ಸಾಯುವ ಮುಂಚೆ ಯಾವುದೋ ಪ್ರಾಣಿಯೊಂದಿಗೆ ಹೋರಾಡಿದ ಲಕ್ಷಣ ಕಾಣುತ್ತದೆ.
ಅದರ ಪಕ್ಕದಲ್ಲಿಯೇ ಹೆಗ್ಗಣದ ಬಾಲವೂ ಬಿದ್ದಿದೆ.

ಸುಮ ಅಸಹ್ಯ-ಭಯದಿಂದ ಆಚೆ ಹೋಗುತ್ತಾಳೆ. ರಘುನಂದನ್ ದಿಗ್ಭ್ರಾಂತನಾಗಿ ನಿಂತಿದ್ದಾನೆ.
ಕಟ್ ಟು…

ದೃಶ್ಯ – ೪೩/ ಹಗಲು / ಒಳಾಂಗಣ / ಕಛೇರಿ

ರಘುನಂದನ್ ಟೈಪಿಸ್ಟ್ ಸತ್ಯವತಿಗೆ ಡಿಕ್ಟೇಷನ್ ಕೊಡುತ್ತಿದ್ದಾನೆ.

ರಘುನಂದನ್ : ಮೇಲ್ಕಾಣಿಸಿದ ಎಲ್ಲಾ ವಿವರಗಳಿಂದ ಕರಡಿಗುಡ್ಡದ ಐಬಿಯಲ್ಲಿ ಮಂತ್ರಿಗಳನ್ನು
ಉಳಿಸುವ ವಿಚಾರ ದುಸ್ತರವಾಗಿದೆ. ಆದ್ದರಿಂದ ಅದಕ್ಕೆ ತಾವು ಬೇರೆ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ.

ರಘುನಂದನ್ : ಸರಿ… ಟೈಪ್ ಮಾಡಿ ತಗೊಂಡ್ ಬನ್ನಿ…

ಎನ್ನುವಾಗ ಬಾಗಿಲು ತಳ್ಳಿಕೊಂಡು ವೆಂಕಟೇಶಯ್ಯ ಸಡಗರದಿಂದ ಒಳಗೆ ಬರುತ್ತಾನೆ.

ವೆಂಕಟೇಶಯ್ಯ : ಸಾರ್… ಸಾರ್… ಸಿಕ್ಕ ಬಿಟ್ಟ ಸಾರ್, ಸಿಕ್ಕಿಬಿಟ್ಟ.

ರಘುನಂದನ್ : ಯಾರ್ರೀ ಸಿಕ್ಕಿದ್ದು?

ವೆಂಕಟೇಶಯ್ಯ : ಮೇಟಿ ಸಾರ್… ಮೇಟಿ ಸಿಕ್ಕಿಬಿಟ್ಟ.

ರಘುನಂದನ್ : ಹೌದಾ! ಎಲ್ಲಿದ್ದಾನೆ…

ವೆಂಕಟೇಶಯ್ಯ : ಕರೀಗಟ್ಟದಲ್ಲಿ ಸಾರ್…

ರಘುನಂದನ್ : ಐಬಿ ವಿಷ್ಯ ಏನಾದ್ರು ಬಾಯಿ ಬಿಟ್ನಾ?

ವೆಂಕಟೇಶಯ್ಯ : ಅವನು ಯಾಕೋ ನನ್ನ ಹತ್ರ ಸರಿಯಾಗ್ ಮಾತಾಡಲಿಲ್ಲ. ಕುಡಿದಿದ್ದ ಅಂತಾ ಕಾಣುತ್ತೆ,
ಅದ್ಕೇ ನಿಮ್ಮನ್ನ ಕರಕೊಂಡೇ ಹೋಗೋಣ ಅಂತ ಬಂದ್ ಬಿಟ್ಟೆ…

ರಘುನಂದನ್ : ಸರಿ ನಡೀರಿ…

ಸತ್ಯವತಿ ಲೆಟರ್ ಟೈಪ್ ಮಾಡುವುದೇ ಬೇಡವೇ ಎಂಬ ಸಂದಿಗ್ಧದಲ್ಲಿ ಬೀಳುತ್ತಾಳೆ.

ಕಟ್ ಟು…

ದೃಶ್ಯ – ೪೪ / ಹಗಲು / ಹೊರಾಂಗಣ / ಮೇಟಿ ಮನೆ

ಮೇಟಿಯನ್ನು ಹುಡುಕಿಕೊಂಡು ವೆಂಕಟೇಶಯ್ಯ ಮತ್ತು ರಘುನಂದನ್ ಹಳ್ಳಿಯೊಂದರ ಮನೆಗೆ ಬರುತ್ತಾರೆ.
ಅದೊಂದು ಹಳೆಯದಾದ ಮುರುಕಲು ಮನೆ. ವೆಂಕಟೇಶಯ್ಯ ಬಾಗಿಲಲ್ಲಿ ನಿಂತು ಕೂಗುತ್ತಾರೆ.
ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
ಸ್ವಲ್ಪ ಹೊತ್ತಾದ ಮೇಲೆ ಬಾಗಿಲನ್ನು ತೆರೆದುಕೊಂಡು ಒಂದು ಹಣ್ಣು ಹಣ್ಣು ಮುದುಕಿ ಆಚೆ ಬರುತ್ತದೆ.

ವೆಂಕಟೇಶಯ್ಯ : ಸಿದ್ದಪ್ಪನ್ನ ಕರೆಯಜ್ಜಿ…

ಅಜ್ಜಿ : ಇಲ್ಲ ಸ್ವಾಮಿ…

ವೆಂಕಟೇಶಯ್ಯ : ಇಲ್ಲಾಂದ್ರೆ ಹ್ಯಾಗೆ? ಬೆಳಗ್ಗೆ ಮಾತಾಡಿಕೊಂಡು ಹೋಗಿದ್ದೀನಿ… ಎಲ್ಲಿಗ ಹೋದ?

ಅಜ್ಜಿ : ಗೊತ್ತಿಲ್ಲ ಸ್ವಾಮಿ…

ವೆಂಕಟೇಶಯ್ಯ : ಯಾವಾಗ ಬರತಾನೆ?

ಅಜ್ಜಿ : ಗೊತ್ತಿಲ್ಲ

ವೆಂಕಟೇಶಯ್ಯನಿಗೆ ನಿರಾಶೆಯಾಗುತ್ತದೆ. ಜೀಪಿನಲ್ಲಿ ಕುಳಿತಿದ್ದ ರಘುನಂದನ್ ಬಳಿ ಬರುತ್ತಾನೆ.

ವೆಂಕಟೇಶಯ್ಯ : ಸಾರಿ ಸರ್, ಆ ಸಿದ್ದಪ್ಪ ಎಲ್ಲಿಗೋ ಹೋಗ್‌ಬಿಟ್ಟಿದ್ದಾನೆ.

ರಘುನಂದನ್ : ನಾವು ಬರತೀವಿ ಅಂತ ಗೊತ್ತಾಗೇ ತಪ್ಪಿಸಿಕೊಂಡಿರಬಹುದ?

ವೆಂಕಟೇಶಯ್ಯ : ಇರಬಹುದು ಸಾರ್?

ರಘುನಂದನ್ : (ಸುತ್ತಲು ನೋಡಿ) ಈ ಊರಲ್ಲಿ ಏನು ಜನವೇ ಇಲ್ವ?

ವೆಂಕಟೇಶಯ್ಯ : ಇದ್ದಾರೆ. ಜೀಪು-ಗೀಪು ಬಂದ್ರೆ ಪೊಲೀಸಿನವರೇನೋ ಅಂತ ಹೆದರಿಕೊಂಡು ಒಬ್ರೂ
ಆಚೆ ಬರೋಲ್ಲ ಅಷ್ಟೆ…

ರಘುನಂದನ್ : ಬನ್ನಿ ಹೋಗೋಣ…

ವೆಂಕಟೇಶಯ್ಯ : ಸಿದ್ದಪ್ಪ ಸಾರ್…

ರಘುನಂದನ್ : ಇಲ್ಲಿದ್ದು ಪ್ರಯೋಜನ ಇಲ್ಲ ಬನ್ನಿ…

ಎಂದು ಅವನನ್ನು ಕೂರಿಸಿಕೊಂಡು ಊರಿನ ಹೊರಗೆ ಬರುತ್ತಾರೆ.

ಅಲ್ಲಿ ಒಂದು ಕಡೆ ಕೆಲವು ದನ ಕಾಯುವ ಹುಡುಗರು ಕಾಣಿಸುತ್ತಾರೆ.
ರಘುನಂದನ್ ಜೀಪು ನಿಲ್ಲಿಸಿ ವೆಂಕಟೇಶಯ್ಯನ ಕಿವಿಯಲ್ಲಿ ಏನೋ ಹೇಳುತ್ತಾನೆ.
ವೆಂಕಟೇಶಯ್ಯ ಅವರ ಬಳಿ ಹೋಗಿ ದುಡ್ಡುಕೊಟ್ಟು ಸಿದ್ದಪ್ಪನ ಬಗ್ಗೆ ವಿಚಾರಿಸುತ್ತಾನೆ.
ಎಲ್ಲವೂ ಮೂಕಾಭಿನಯದಲ್ಲಿ ನಡೆಯುತ್ತದೆ. ಮೊದಲು ಬಾಯಿ ಬಿಡಲು ಹಿಂದೆ-ಮುಂದೆ ನೋಡಿದರೂ ಇನ್ನೊಂದು ನೋಟು ಕೈ ಸೇರಿದಾಗ ಅವರು ಒಂದು ಕಡೆ ಕೈ ತೋರಿಸುತ್ತಾರೆ. ವೆಂಕಟೇಶಯ್ಯ ಪತ್ತೆ ಹಚ್ಚಿದೆ ಎಂದು ಬಂದು ರಘುನಂದನ್ ಕಡೆ ಗೆದ್ದ ನೋಟ ನೋಡುತ್ತಾನೆ.

ದೃಶ್ಯ – ೪೫ / ಹಳೇ ದೇವಸ್ಥಾನ-ಮಂಟಪ

ಯಾವುದೋ ಒಂದು ಪಾಳುಮಂಟಪದಲ್ಲಿ ಸಿದ್ದಯ್ಯ ಅಡಗಿ ಕುಳಿತಿರುತ್ತಾನೆ.
ಅವನು ಇವರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಾನೆ.
ಅವನನ್ನು ಹಿಡಿದು ಕೂರಿಸಿ ಮಾತಾಡುತ್ತಾರೆ.
ಅವನು ಗೂರಲು ರೋಗವಿರುವುದು ಗೊತ್ತಾಗುತ್ತದೆ. ಏದುಸಿರು ಬಿಡುತ್ತಾ ಮಾತನಾಡುತ್ತಾನೆ.
ಮಧ್ಯೆ ಮಧ್ಯೆ ಕೆಮ್ಮುತ್ತಾನೆ.

ಸಿದ್ದಯ್ಯ : ಬುದ್ಧಿ ನಂದೇನು ತಪ್ಪಿಲ್ಲ, ನನ್ನ ಬಿಟ್ಟುಬಿಡಿ ಬುದ್ದೀ… ನಿಮ್ಮ ಕಾಲಿಗ್ ಬೀಳ್ತೀನಿ

ರಘುನಂದನ್ : ನೀನು ಕೈ ಮುಗಿಯೋದು ಕಾಲಿಗೆ ಬೀಳೋದು ಬೇಡ. ಐಬಿ ಎಲ್ಲಿ ಅದನ್ನ ಹೇಳು ಮೊದ್ಲು?

ಮೇಟಿ : ನಂಗೊತ್ತಿಲ್ಲ ಬುದ್ಧೀ…

ರಘುನಂದನ್ : ಗೊತ್ತಿಲ್ಲ ಅಂದ್ರೆ ಏನಯ್ಯ ಅರ್ಥ? ನೀನೇ ತಾನೆ ಮೇಟಿ?

ಮೇಟಿ : ಹೌದು ಸ್ವಾಮಿ… ಅಲ್ಲ ಸ್ವಾಮಿ

ರಘುನಂದನ್ : ಯಾಕಯ್ಯ ಹಿಂದೆ ಎಲ್ಲಾ ಸಂಬಳ ತಗೊಂಡಿಲ್ವ ?

ಮೇಟಿ : ತಪ್ಪಾಗಿಬಿಟ್ಟೈತೆ ಕ್ಷಮಿಸಿಬಿಡಿ ಸ್ವಾಮಿ…

ರಘುನಂದನ್ : ಅದಿರಲಿ ಆ ಐಬಿ ಎಲ್ಲಿದೆ ಸ್ವಲ್ಪ ತೋರಿಸು ನಡಿ…

ಮೇಟಿ : ಐಬಿ ಇದ್ರಲ್ಲವಾ ಬುದ್ಧೀ ತೋರಿಸೋದು…

ರಘುನಂದನ್ : ಏನಂದೆ? ಐಬಿ ಇಲ್ಲಾ!

ಮೇಟಿ : ಹುಂ ಬುದ್ಧೀ, ಅಲ್ಲಿ ಯಾವ ಐಬೀನು ಇಲ್ಲಾ…

ರಘುನಂದನ್ ಅಚ್ಚರಿಯಿಂದ ವೆಂಕಟೇಶಯ್ಯನ ಮುಖ ನೋಡುತ್ತಾನೆ. ಅವನಿಗೂ ಅಷ್ಟೇ ಆಶ್ಚರ್ಯವಾಗಿದೆ.

ರಘುನಂದನ್ : ಅಲ್ಲಯ್ಯ ಐಬಿನೆ ಇಲ್ಲ ಅಂದ ಮೇಲೆ ಪ್ರತೀ ತಿಂಗ್ಳು ಮೇಟಿ ಅಂತ ಸಂಬಳ ಯಾಕ್
ತಗೋತಾ ಇದ್ದೆ?

ಮೇಟಿ : ನಂದೇನು ತಪ್ಪಿಲ್ಲ ಸ್ವಾಮಿ, ನಾನು ಮನೆ ಮನೇತಾವ ಓಗಿ ಸೌದೆ ಒಡಕಂಡು ಜೀವನ ಮಾಡ್ತಿದ್ದೆ
ಬುದ್ಧೀ. ವಾರಕ್ಕೊಂದು ಸಲ ಹಳೇ ಸಾಹೇಬರು ಕೃಷ್ಣಪ್ಪನವರ ಮನೇಗು ಓಗ್ತಿದ್ದೆ. ಒಂದಿನ ಅವ್ರು ನನ್ನ ಕರೆದುಬಿಟ್ಟು, ನೀನು ಇನ್ಮೇಲೆ ಯಾರ ಮನೇಗು ಓಗಿ ಕೆಲಸ ಮಾಡಬೇಡ ನಮ್ಮನೇಲಿ ಅಷ್ಟೇ ಮಾಡು. ತಿಂಗ್ಳಿಗೊಂದು ಸಲ ಆಫೀಸ್‌ತಾವ ಬಂದು ದುಡ್ಡು ತಗೊಂಡು ಹೋಗೋ ಅಂದ್ರು… ಅಂಗೇ ನಾನು ತಿಂಗ್ಳೆಲ್ಲಾ ಅವರ ಮನೆ ಕೆಲ್ಸ ಮಾಡ್ತಾ ಇದ್ದೆ, ಒಂದನೇ ತಾರೀಖು ಹೋಗಿ ಹೆಬ್ಬೆಟ್ಟು ಒತ್ತಿ ಸಂಬಳ ತಗಾತಾ ಇದ್ದೆ. ಇಂಗೇ ವರ್ಸಾನುಗಟ್ಟಲೆ ನಡ್ಕೊಂಡು ಬಂತು. ಆಮೇಲೆ ಅವರು ಒಂಟೋಗಿ ಇನ್ಯಾರೋ ಬಂದ್ರು. ನಾನು ಅವರ ಮನೇಲು ಕೆಲ್ಸ ಮಾಡ್ತಿದ್ದೆ ಆಫೀಸಿಗೋಗಿ ಸಂಬಳ ತಗಾತಿದ್ದೆ. ಇಂಗೇ ಐದು ಆರು ವರ್ಸ ಕಳೀತು. ಆಮೇಲೆ ಗೋಪಾಲಪ್ಪೋರು ಬಂದ್ರು. ನನ್ನ ಒಂದಿನ ಕರದು ವಿಚಾರಣೆ ಮಾಡಿದ್ರು. ನಿನ್ನ ಸಂಬಳ ಹೆಚ್ಗೆ ಮಾಡಿದ್ದೀನಿ. ಕ್ವಾಟ್ರಸ್‌ನಾಗೆ ಕೆಲ್ಸ ಮಾಡು ಸಂಬಳ ತಗೊಂಡೋಗು ಅಂದ್ರು. ನಾನು ಅಂಗೇ ಮಾಡ್ತಿದ್ದೆ. ಗೋಪಾಲಪ್ಪೋರು ಓಗಿ ಇನ್ಯಾರೋ ಆಫೀಸರ್ ಬತ್ತಾರೆ ಅಂದ್ರು. ನಂಗೆ ಈ ಗೂರಲು ಎಚ್ಚಾಯ್ತು, ಈ ಸವಾಸವೇ ಬ್ಯಾಡ ಅಂತ ಅತ್ಲಾಗೆ ಓಗೋದೆ ಬಿಟ್ಟು ಬಿಟ್ಟೆ ಸ್ವಾಮಿ… ಇಷ್ಟೇ ಸ್ವಾಮಿ ನಂಗೊತ್ತಿರೋದು. ನಂದೇನು ತಪ್ಪಿಲ್ಲ ಸ್ವಾಮಿ. ಸಂಬಳ ತಗಂಡಿರಾದಕ್ಕೆ ಕೆಲ್ಸ ಮಾಡಿದ್ದೀನಿ ಬುದ್ಧಿ…

ರಘುನಂದನ್ : ನೀವೆಲ್ಲಾ ಸೇರಿ ಏನೇನ್ ಕೆಲ್ಸ ಮಾಡಿದ್ದೀರಿ ಅಂತ ಗೊತ್ತಾಯ್ತಲ್ಲ… ಮಾಡಿದ್ದಕ್ಕೆ
ಅನುಭವಿಸ್ತೀರಾ ?…

ಎಂದು ಕೋಪದಲ್ಲಿ ಎದ್ದು ಹೊರಡುತ್ತಾನೆ.
ವೆಂಕಟೇಶಯ್ಯ ಅವನನ್ನು ಹಿಂಬಾಲಿಸುತ್ತಾನೆ.
ಹಿನ್ನೆಲೆಯಲ್ಲಿ ಮೇಟಿ ಸಿದ್ಧಯ್ಯ ಅಳುತ್ತಲೇ ಕುಳಿತಿದ್ದಾನೆ.

ಜೀಪಿನಲ್ಲಿ ರಘುನಂದನ್ ಮತ್ತು ವೆಂಕಟೇಶಯ್ಯ ಪ್ರಯಾಣಿಸುತ್ತಿದ್ದಾರೆ.
ರಘುನಂದನ್ ಎಲ್ಲೋ ನೋಡುತ್ತಿದ್ದಾನೆ. ಅವನ ಮುಖದಲ್ಲಿ ಕೋಪ, ತಿರಸ್ಕಾರ ಇತ್ಯಾದಿ ಭಾವನೆಗಳು ಮನೆ ಮಾಡಿವೆ.
ವೆಂಕಟೇಶಯ್ಯನ ಮುಖದಲ್ಲಿ ದುಗುಡವಿದೆ.
ಜೀಪು ಓಡುತ್ತಿದೆ.

ಕಟ್ ಟು…

ದೃಶ್ಯ – ೪೬ / ಹಗಲು / ರಘುನಂದನ್ ಮನೆ

ಸುಮ ಕಾಫಿ ಹಿಡಿದು ಬರುತ್ತಾಳೆ.
ರಘುನಂದನ್ ಹತಾಶೆಯಿಂದ ಇದ್ದಾನೆ.
ವೆಂಕಟೇಶಯ್ಯ ಚಿಂತೆಯಲ್ಲಿ ಕುಳಿತಿದ್ದಾನೆ.
ಸುಮ ಇಬ್ಬರಿಗೂ ಕಾಫಿ ಕೊಡುತ್ತಾಳೆ.

ವೆಂಕಟೇಶಯ್ಯ : (ಮೆಲ್ಲನೆ) ಸಾರ್… ಮುಂದೆ ಏನು ಮಾಡೋದು ಸಾರ್?

ರಘುನಂದನ್ : ಇನ್ನೇನ್ ಮಾಡೋದು. ಎಲ್ಲಾ ಸರ್ಕಾರಕ್ಕೆ ರಿಪೋರ್ಟ್ ಮಾಡೋದು.

ವೆಂಕಟೇಶಯ್ಯ : ತೊಂದ್ರೆ ಆಗಲ್ವಾ ಸಾರ್…

ರಘುನಂದನ್ : ಆದ್ರೆ ಆಗಲಿ…

ವೆಂಕಟೇಶಯ್ಯ : ಸಾರ್… ನನ್ನ ವಿ…ಷ…ಯ?

ರಘುನಂದನ್ : ಯಾವುದನ್ನೂ ಮುಚ್ಚಿಡೋಕ್ ಆಗೋಲ್ಲರೀ… ಎಲ್ಲಾದಕ್ಕೂ ಒಂದು ಮಿತಿ ಇದೆ.

ವೆಂಕಟೇಶಯ್ಯ : ಸಾರ್, ಮಗಳು ಭವಾನಿದು ಮದುವೆ ಗೊತ್ತಾಗಿದೆ ಸಾರ್. ಮುಂದಿನ ವಾರ
ಎಂಗೇಜ್‌ಮೆಂಟ್.

ರಘುನಂದನ್ : ಅದಕ್ಕೆ ನನ್ನ ಏನು ಮಾಡು ಅಂತೀರ?

ವೆಂಕಟೇಶಯ್ಯ : ಇದೆಲ್ಲಾ ಬಯಲಾದ್ರೆ….

ರಘುನಂದನ್ : ಹೇಳಿದ್ನಲ್ಲ ವೆಂಕಟೇಶಯ್ಯ, ಇದೆಲ್ಲಾ ನನ್ನ ಕೈ ಮೀರಿದ್ದು ಅಂತ…. ನಂಗೆ ತಲೆ ಕೆಟ್ಟಿದೆ, ಸ್ವಲ್ಪ ಒಂಟಿಯಾಗಿರೋಕ್ ಬಿಡಿ… ನಾಳೆ ಆಫೀಸ್‌ನಲ್ಲಿ ಸಿಕ್ತೀನಿ.

ವೆಂಕಟೇಶಯ್ಯ ನಿಧಾನವಾಗಿ ಎದ್ದು ಹೋಗುತ್ತಾನೆ.
ಸುಮ ಮೌನವಾಗಿ ಅದನ್ನು ನೋಡುತ್ತಾಳೆ.

ಕಟ್ ಟು…

ದೃಶ್ಯ – ೪೭ / ರಾತ್ರಿ / ರಘುನಂದನ್ ಮನೆ

ರಘುನಂದನ್ ನಿದ್ದೆ ಬರದೆ ಕಿಟಕಿ ಬಳಿ ನಿಂತು ಹೊರಗೆ ನೋಡುತ್ತಿದ್ದಾನೆ.
ಇವನನ್ನೇ ಗಮನಿಸುತ್ತಿದ್ದ ಸುಮ,

ಸುಮ : ಯಾಕ್ ನಿದ್ದೆ ಬರತಿಲ್ವಾ?

ರಘುನಂದನ್ : ಹ್ಯಾಗ್ ಬರುತ್ತೆ ?

ಸುಮ : ಏನ್ ಮಾಡಬೇಕು ಅಂದ್‌ಕೊಂಡಿದ್ದೀರ?

ರಘುನಂದನ್ : ಏನ್ ಮಾಡೋದು, ಈ ಭ್ರಷ್ಟಾಚಾರದ ಬಗ್ಗೆ ಹೆಡ್ ಆಫೀಸ್‌ಗೆ ಡೀಟೈಲ್ ಆಗಿ ರಿಪೋರ್ಟ್
ಮಾಡ್ತೀನಿ. ಅವ್ರು ಇಟಿquiಡಿಥಿ ಮಾಡ್ಲಿ. ತಪ್ಪು ಮಾಡಿದವರು ಅನುಭವಿಸ್ತಾರೆ.

ಸುಮ : ಯಾರು ಯಾರಿಗೆ ಶಿಕ್ಷೆ ಕೊಡಿಸಬೇಕು ಅಂತಿದ್ದೀರ?

ರಘುನಂದನ್ : ಇನ್ಯಾರಿಗೆ? ಕಟ್ಟಿಸಿದಿವಿ ಅಂತ ದುಡ್ಡು ನುಂಗಿ ಹಾಕಿದವರಿಗೆ, ಇಲ್ಲದ ಐಬೀನ ಇದೆ ಅಂತ
ರಿನೋವೇಟ್ ಮಾಡಿಸಿ ಸರ್ಕಾರದ ಕಣ್ಣಿಗೆ ಮಣ್ಣೆರಚಿದವರಿಗೆ, ಫೋರ್ಜರಿ ಮಾಡಿ ಸಂಬಳ ತಗೊಂಡವರಿಗೆ…

ಸುಮ : ಕಟ್ಟಿಸಿದವರು ಈಗ ಮಂತ್ರಿಯಾಗಿದ್ದಾರೆ. ರಿನೋವೇಟ್ ಮಾಡಿಸಿದವರು ಸತ್ತು ಹೋಗಿದ್ದಾರೆ.
ಸಂಬಳ ತಗಂಡವನು ಸಾಯೋ ಸ್ಥಿತೀಲಿದ್ದಾನೆ. ಇದರಲ್ಲಿ ಯಾರನ್ನ ಸಿಕ್ಕಿ ಹಾಕಿಸ್ತಿರಿ?

ರಘುನಂದನ್ : ಅದೆಲ್ಲಾ ಅನ್ನೋದು ಸರ್ಕಾರಕ್ಕೆ ಬಿಟ್ಟದ್ದು, ಮಿನಿಸ್ಟ್ರು ಬರೋ ದಿನ ಹತ್ರ ಬರತಾ ಇದೆ.
ಇನ್ನು ರಿಫೊರ್ಟ್ ತಡ ಮಾಡೋಕ್ ಆಗಲ್ಲ…. ರಿಪೋರ್ಟ್ ಕಳಿಸಿಬಿಟ್ರೆ ನನ್ನ ತಲೆ ಮೇಲಿನ
ಭಾರಾ ಇಳಿಯುತ್ತೆ.

ಸುಮ : ಏನ್ ವ್ಯವಸ್ಥೇನೋ…. !

ಎಂದು ಎದ್ದು ಲೈಟ್ ಆಫ್ ಮಾಡುತ್ತಾಳೆ.
ರಘುನಂದನ್ ನಿಂತೇ ಇದ್ದಾನೆ.
ಆ ಕತ್ತಲೆಯಲ್ಲಿ ಅವನ ಸಿಗರೇಟಿನ ಬೆಂಕಿಯಷ್ಟೇ ಕಾಣುತ್ತಿದೆ.

ಕಟ್ ಟು…

ದೃಶ್ಯ – ೪೮ / ರಾತ್ರಿ / ರಘುನಂದನ್ ಮನೆ

ಮಧ್ಯರಾತ್ರಿ…
ಬಾಗಿಲಮೇಲೆ ಸದ್ದಾಗುತ್ತದೆ.
ಮಲಗಿದ್ದ ರಘುನಂದನ್ ಸದ್ದಿಗೆ ಏಳುತ್ತಾನೆ.
ಹೊರಬಂದು ಬಾಗಿಲು ತೆರೆಯುತ್ತಾನೆ. ಬಾಗಿಲ ಹೊರಗೆ ವೆಂಕಟೇಶಯ್ಯನ ಮಗಳು ಭವಾನಿ ಮತ್ತು ಅವಳ ತಂಗಿ ನಿಂತಿದ್ದಾರೆ. ಅವರ ಕಣ್ಣಲ್ಲಿ ನೀರು. ಇವನನ್ನು ನೋಡಿ ಬಿಕ್ಕಳಿಸುತ್ತಾರೆ.

ರಘುನಂದನ್ : ಯಾಕಮ್ಮ? ಏನಾಯ್ತು?

ಭವಾನಿ : ಸಾರ್, ನಮ್ಮ ತಂದೆ ಎದೆನೋವು ಅಂತ ಒದ್ದಾಡ್ತಾ ಇದ್ದಾರೆ. ನಮಗೆ ಏನು ಮಾಡೋದು ಅಂತ
ಗೊತ್ತಾಗ್ತಾ ಇಲ್ಲ. ಆಸ್ಪತ್ರೇಗೆ ಕರಕೊಂಡು ಹೋಗೋಣ ಅಂದ್ರೆ ಯಾವ ಗಾಡೀನು ಸಿಗ್ತಾ ಇಲ್ಲ.

ರಘುನಂದನ್ ಬಂದು ಸಹಾಯ ಮಾಡಲಿ ಎಂಬ ಆಸೆ ಅವರ ಮುಖದಲ್ಲಿರುತ್ತದೆ.

ರಘುನಂದನ್ : ಒಂದ್ನಿಮಿಷ ಬಂದೇ…

ಎಂದು ಬಂದು ಶರಟು ಹಾಕಿಕೊಳ್ಳುತ್ತಾನೆ. ಸುಮ ಕೂಡ ಎದ್ದಿದ್ದಾಳೆ.

ಸುಮ : ಏನಾಯ್ತು?

ರಘುನಂದನ್ : ವೆಂಕಟೇಶಯ್ಯಂಗೆ ಹುಷಾರಿಲ್ಲವಂತೆ ನೋಡ್ಕಂಡ್ ಬರತೀನಿ.

ಎಂದು ಹೊರಬಂದು ಜೀಪು ತೆಗೆದು ಅದರಲ್ಲಿ ಭವಾನಿ ಹಾಗೂ ಅವಳ ತಂಗಿಯನ್ನು ಕೂರಿಸಿಕೊಂಡು ಹೊರಡುತ್ತಾನೆ.

ಕಟ್ ಟು…

ದೃಶ್ಯ – ೪೯ / ರಾತ್ರಿ / ಆಸ್ಪತ್ರೆ

ಇಸಿಜಿಯಲ್ಲಿ ಯಂತ್ರದ ಕ್ಲೋಸ್ ಅಪ್.
ವೈದ್ಯರು ಆ ರಿಪೋರ್ಟ್ ಅನ್ನು ಪರೀಕ್ಷಿಸುತ್ತಿದ್ದಾರೆ.
ವೆಂಕಟೇಶಯ್ಯ ಬೆಡ್ ಮೇಲೆ ಮಲಗಿದ್ದಾರೆ.

ವೈದ್ಯರು ಹೊರಬರುತ್ತಿದ್ದಾರೆ.
ಅಲ್ಲಿ ವೆಂಕಟೇಶಯ್ಯನ ಕುಟುಂಬ ಹಾಗೂ ರಘುನಂದನ್ ಇದ್ದಾರೆ.
ರಘುನಂದನ್ ವೈದ್ಯರನ್ನು ಹಿಂಬಾಲಿಸುತ್ತಾನೆ.

ಡಾಕ್ಟರ್ : ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಸರಿಯಾದ ಟೈಂನಲ್ಲಿ ಕರಕೊಂಡು ಬಂದಿದ್ದೀರ…
ಬೆಳಗ್ಗೇವರೆಗೂ ಅಬ್ಸರ್‌ವೇಶನ್‌ನಲ್ಲಿರಲಿ, ನೋಡೋಣ.

ರಘುನಂದನ್ : ಸರಿ ಸಾರ್…

ಕಟ್ ಟು…

ದೃಶ್ಯ – ೫೦ / ರಾತ್ರಿ / ರಘುನಂದನ್ ಮನೆ

ರಘುನಂದನ್ ಜೀಪಿನಲ್ಲಿ ಮನೆಗೆ ಬರುತ್ತಾನೆ.
ಸುಮ ಬಾಗಿಲು ತೆರೆಯುತ್ತಾಳೆ.

ಸುಮ : ಹ್ಯಾಗಿದ್ದಾರೆ?

ರಘುನಂದನ್ : ಮೈಲ್ಡ್ ಹಾರ್ಟ್ ಆಟ್ಯಾಕ್ ಅಂತೆ. ಡಾಕ್ಟರ್ ಟ್ರೀಟ್‌ಮೆಂಟ್ ಕೊಟ್ಟು
ಅಬ್ಸರ್‌ವೇಶನ್‌ನಲ್ಲಿಟ್ಟಿದ್ದಾರೆ.

ಸುಮ : ತಮ್ಮ ಕೆಲಸ ಹೋಗುತ್ತೆ ಅಂತ ಗಾಬರಿಯಾದ್ರೋ ಏನೋ?

ರಘುನಂದನ್ : ಸ್ವಲ್ಪ ಟೀ ಮಾಡ್ತೀಯ…

ರಘುನಂದನ್ ಏನೂ ಮಾತನಾಡುವುದಿಲ್ಲ. ಸಿಗರೇಟಿಗೆ ಬೆಂಕಿ ತಾಗಿಸುತ್ತಾನೆ.

ಕಟ್ ಟು…

ದೃಶ್ಯ – ೫೧ / ಹಗಲು / ಆಸ್ಪತ್ರೆ

ರಘುನಂದನ್ ಆಸ್ಪತ್ರೆಗೆ ಬರುತ್ತಾನೆ.
ವೆಂಕಟೇಶಯ್ಯನಿಗೆ ಅವರ ಮಗಳು ಕಾಫಿ ಕುಡಿಸುತ್ತಿದ್ದಾಳೆ.

ರಘುನಂದನ್ : ಹೇಗಿದ್ದೀರಿ ವೆಂಕಟೇಶಯ್ಯ?

ವೆಂಕಟೇಶಯ್ಯ : ಇನ್ನೂ ಬದ್ಕಿದ್ದೀನಿ ಸಾರ್…

ರಘುನಂದನ್ : ಎಲ್ಲ ಸರಿಹೋಗುತ್ತೆ. ಏನೂ ಯೋಚ್ನೆ ಮಾಡಬೇಡಿ.

ವೆಂಕಟೇಶಯ್ಯನದು ಕೈ ಚೆಲ್ಲಿದ ಪ್ರತಿಕ್ರಿಯೆ.
ಅಷ್ಟರಲ್ಲಿ ಅಲ್ಲಿಗೆ ಬಂದ ಡಾಕ್ಟರ್ ಅವರನ್ನು ಪರೀಕ್ಷಿಸಿ,

ಡಾಕ್ಟರ್ : ಹೆಚ್ಗೆ ಯೋಚ್ನೆ ಮಾಡೋಕ್ ಹೋಗಬೇಡಿ. ನಾಳೆ ನೀವು ಮನೇಗ್ ಹೋಗಬಹುದು.

ರಘುನಂದನ್ ಮುಖದಲ್ಲಿ ಸಮಾಧಾನ.

ಕಟ್ ಟು…

ದೃಶ್ಯ – ೫೨ / ಹಗಲು / ರಘುನಂದನ್ ಮನೆ

ಸುಮ ರಘುನಂದನ್‌ಗೆ ತಿಂಡಿ ತಂದುಕೊಡುತ್ತಾಳೆ.
ರಘುನಂದನ್ ಅದನ್ನು ಪಡೆದು ತಿನ್ನತೊಡಗುತ್ತಾನೆ.

ಸುಮ : ಪಾಪ! ವೆಂಕಟೇಶಯ್ಯನವರ ಹೆಂಡತಿ ಸ್ಥಿತಿ ನೋಡೋಕ್ ಆಗೋಲ್ಲ. ಮಗಳ ಎಂಗೇಜ್‌ಮೆಂಟ್‌ಗೆ
ಬರೀ ಒಂದು ವಾರ ಇರೋವಾಗ ಹೀಗಾಯ್ತಲ್ಲ ಅಂತ ತುಂಬಾ ನೊಂದುಕೊಂಡ್ರು… ಎಲ್ಲಿ ಮದುವೇನೆ ನಿಂತುಹೋಗುತ್ತೋ ಅನ್ನೋ ಆತಂಕ ಅವರದು. ಈ ಎನ್‌ಕ್ವೈಯರಿ ಯಾವಾಗ ಆಗಬಹುದು?

ರಘುನಂದನ್ : ನಾನು ರಿಪೋರ್ಟ್ ಕೊಟ್ಟ ತಕ್ಷಣ…

ಸುಮ : ನೀವು ತಡವಾಗಿ ಕೊಡೋಕ್ ಆಗೋಲ್ವ?

ರಘುನಂದನ್ : ಇಲ್ಲ. ಮಿನಿಸ್ಟರ್‌ನ ಇಲ್ಲದ ಐಬೀಲಿ ಇಳಿಸೋಕೆ ಆಗೋಲ್ಲ ಅನ್ನೋದನ್ನ ಈ
ರಿಪೋರ್ಟ್ ಕೊಟ್ಟೇ ಹೇಳಬೇಕು. ತಡವಾಗಿ ಅಂದ್ರೆ ಇವತ್ತೇ!

ಸುಮ : ಇಷ್ಟೆಲ್ಲಾ ಆದಮೇಲೂ ವೆಂಕಟೇಶಯ್ಯನ್ನ ಸಿಕ್ಕಿಹಾಕಿಸಬೇಕು ಅಂತಾನೆ ಡಿಸೈಡ್ ಮಾಡಿದ್ದೀರ?

ರಘುನಂದನ್ : ನನ್ನ ಕೆಲಸ ನಾನ್ ಮಾಡ್ತೀನಿ…

ಸುಮ : ನಾನೊಂದು ಐಡಿಯಾ ಹೇಳ್ಲಾ?

ರಘುನಂದನ್ : ಏನು?

ಸುಮ : ಇಲ್ಲದೇ ಇರೋ ಐಬೀನ ಇಲ್ಲ ಅನ್ನಿಸಿಬಿಡಿ.

ರಘುನಂದನ್ : ಅಂದ್ರೆ!?

ಸುಮ : ಬಿದ್ದು ಹೋಯಿತು ಅನ್ನೋದು?

ರಘುನಂದನ್ : ಚನ್ನಾಗಿದೆ. ಇಲ್ಲಿ ನಾಲ್ಕು ವರ್ಷದಿಂದ ಸರಿಯಾಗಿ ಮಳೇ ಕೂಡ ಬಂದಿಲ್ಲ. ಐಬಿ ಹ್ಯಾಗೆ
ಬಿದ್ದುಹೋಗುತ್ತೆ?

ಸುಮ : ಅದೇ ಆಗಿ ಬಿದ್ದು ಹೋಗದೇ ಇದ್ರೆ ಬ್ಯಾಡ, ತುಂಬಾ ಹಳೇದಾಗಿದೆ ಹೊಸದಾಗಿ ಕಟ್ಟಬೇಕು ಅಂತ
ನೀವೇ ಬೀಳಿಸಿಬಿಡಿ. ಆಗ ಯಾರೂ ಪ್ರಶ್ನೆ ಮಾಡೋಲ್ಲ. ಎಲ್ಲಾ ಸಮಸ್ಯೆಗಳು ಬಗೆಹರಿಯುತ್ವೆ.

ರಘುನಂದನ್ : ಈ ವಿಷಯದಲ್ಲಿ ಇಷ್ಟು ವರ್ಷ ಎಲ್ರೂ ಸುಳ್ಳು ಹೇಳಿಕೊಂಡೇ ಬಂದ್ರು… ಈಗ ನಾನೂ
ಅವರಲ್ಲಿ ಒಬ್ಬ ಆಗೂ ಅಂತೀಯ? ಇಷ್ಟು ವರ್ಷ ಸರಕಾರೀ ಉದ್ಯೋಗದಲ್ಲಿ ಹೇಗಿದ್ದೆ ಅಂತ ನಿಂಗೇ ಗೊತ್ತಲ್ಲ; ಈಗ ಯಾರದೋ ವಿಷಯಕ್ಕೆ ನನ್ನ ವ್ಯಕ್ತಿತ್ವ ಮಾರಿಕೋಬೇಕಾ?

ಸುಮ : ಒಂದು ಕ್ಷಣ ಯೋಚ್ನೆ ಮಾಡಿ. ಈಗ ಈ ಪ್ರಕರಣಾನ ಬಯಲಿಗೆ ಎಳೆಯೋದರಿಂದ
ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಅದರ ಬದಲು ಯಾರಿಗೂ ತೊಂದ್ರೆ ಆಗದೇ ಇರೋ ಒಂದು ಸುಳ್ಳು ಹೇಳೋದರಿಂದ ಎಷ್ಟು ಜನಕ್ಕೆ ಅನುಕೂಲ ಆಗುತ್ತೆ ನೋಡಿ. ನೀವೇನು ತಪ್ಪು ಮಾಡ್ತಾ ಇಲ್ಲ. ಇಲ್ಲದೇ ಇರೋದನ್ನ ಹೊಸಾದ್ ಕಟ್ತಾ ಇದ್ದೀರ. ಅಲ್ವಾ?

ರಘುನಂದನ್ ಯೋಚಿಸತೊಡಗುತ್ತಾನೆ.

ಕಟ್ ಟು…

ದೃಶ್ಯ – ೫೩ / ಹಗಲು / ಕಛೇರಿ

ಕಚೇರಿಯಲ್ಲಿ ರಘುನಂದನ್ ಟೈಪಿಸ್ಟ್ ಸತ್ಯವತಿಗೆ ಡಿಕ್ಟೇಷನ್ ಕೊಡುತ್ತಿದ್ದಾನೆ.

ರಘುನಂದನ್ : ಮೇಲ್ಕಾಣಿಸಿದ ಎಲ್ಲಾ ಕಾರಣಗಳಿಂದ-
ಮಂತ್ರಿಗಳ ವಿಸಿಟ್‌ಗೆ ಬೇರೆ ವ್ಯವಸ್ಥೆ ಮಾಡುವುದು.
ಈಗಿರುವ ಐಬಿಯನ್ನು ತಕ್ಷಣವೇ ನೆಲಸಮಗೊಳಿಸುವುದು. ಇದರ ಖರ್ಚು ಸುಮಾರು ೫೦ ಸಾವಿರ ರೂಪಾಯಿಗಳು.
ಅದೇ ಜಾಗದಲ್ಲಿ ಹೊಸಾ ಐಬಿ ನಿರ್ಮಾಣದ ಬಗ್ಗೆ ಸದ್ಯದಲ್ಲೇ ಪೂರ್ಣ ಪ್ರಮಾಣದ ವರದಿ ಕಳಿಸಲಾಗುತ್ತದೆ.
ತಾವು ನಮ್ಮ ವಿನಂತಿಯನ್ನು ಮನ್ನಿಸುತ್ತೀರೆಂದು ನಂಬಿದ್ದೇವೆ… ಸರಿಯಾಗಿದೆಯೇನ್ರೀ ಸತ್ಯವತಿ?

ಅಕೆ ನಿರ್ಭಾವುಕಳಾಗಿ ತಲೆಯಾಡಿಸುತ್ತಾಳೆ.

ಕಟ್ ಟು..

ದೃಶ್ಯ – ೫೪ / ಹಗಲು / ಗೊರವಯ್ಯನ ಮನೆ

ಗೊರವಯ್ಯನ ಮನೆಯಲ್ಲಿ ಹೆಚ್ಚಿನ ಮಣ್ಣು ಉದುರಿ ಬಿದ್ದಿದೆ.
ಅದರ ಅಡಿಯಲ್ಲಿ ಈತ ನಿತ್ಯ ಉಪಾದಾನಕ್ಕೆ ಬಳಸುವ ಡಮರುಗ, ಕೊಳಲು, ಇತ್ಯಾದಿ ವಸ್ತುಗಳು ಸೇರಿ ಹೋಗಿವೆ.
ಅದನ್ನು ನೋಡುತ್ತಾ ಅವನ ಮುಖದಲ್ಲಿ ನೋವು ಮಡುಗಟ್ಟುತ್ತದೆ…
ಆತ ಮಣ್ಣನ್ನು ತೆಗೆಯ ತೊಡಗುತ್ತಾನೆ.
ಅದನ್ನು ನೋಡಿ ಗೌರಿ ಕಣ್ಣಲ್ಲೂ ನೀರು…

ಕಟ್ ಟು…

ದೃಶ್ಯ – ೫೫ / ಹಗಲು / ಹೆಡ್ ಆಫೀಸ್

ಆಫೀಸರ್ ಪುರುಷೋತ್ತಮ್ ಮುಂದೆ ಕುಳಿತಿರುವ ರಘುನಂದನ್

ಆಫೀಸರ್ : (ನೋಡುತ್ತಿದ್ದ ಫೈಲನ್ನು ಮುಚ್ಚಿ) ಮಿ. ರಘುನಂದನ್, ಐಬಿ ಡೆಮಾಲಿಷ್ ಮಾಡೋದಿಕ್ಕೆ
ನೀವು ಕೊಟ್ಟ ರಿಪೋರ್ಟ್ ಎಲ್ಲಾ ಸ್ಟಡಿ ಮಾಡಿದ್ದೀನಿ. ಎಲ್ಲಾ ಕರೆಕ್ಟ್ ಆಗಿದೆ. I ಚಿm ಛಿoಟಿviಟಿಛಿeಜ… ನಿಮ್ಮ ಪೀರಿಯಡ್‌ನಲ್ಲಿ ಅದೇ ಜಾಗದಲ್ಲಿ ಇನ್ನೊಂದು ಹೊಸಾ ಐಬಿ ರೆಡಿಯಾಗಲಿ… ನನ್ನ ಕೈಲಿ ಆಗೋ ಎಲ್ಲಾ ಸಹಾಯ ನಾನು ಮಾಡ್ತೀನಿ…

ರಘುನಂದನ್ : ಥ್ಯಾಂಕ್ ಯು ಸಾರ್… ಆದ್ರೆ ಈಗ ಮಿನಿಸ್ಟರ್‌ನ ಉಳಿಸೋದು ಎಲ್ಲಿ ಸಾರ್?

ಆಫೀಸರ್ : ಓ! ನಿಮಗೆ ನಾನು ಹೇಳಲಿಲ್ಲ ಅಲ್ವಾ? ಮಿನಿಸ್ಟರ್ ಪ್ರೋಗ್ರಾಂ ಪೋಸ್ಟ್‌ಪೋನ್ ಆಗಿದೆ.

ರಘುನಂದನ್ : (ವಿಷಣ್ಣನಾಗಿ) ಅಯ್ಯಯ್ಯೋ! ಹೌದಾ ಸಾರ್! ಮುಂಚೇನೆ ಗೊತ್ತಾಗಿದ್ದಿದ್ರೆ…

ಆಫೀಸರ್ : ಮುಂಚೇನೆ ಗೊತ್ತಾಗಿದ್ರೆ? …

ರಘುನಂದನ್ : ಏನೂ ಇಲ್ಲ ಸಾರ್… ಟೆನ್ಷನ್ ಕಡಿಮೆಯಾಗ್ತಿತ್ತು ಅಂತ ಅಷ್ಟೆ…

ಆಫೀಸರ್ : ಕೀ ಪೋಸ್ಟ್‌ನಲ್ಲಿರೋ ನಮ್ಮ ನಮ್ಮಂತೋರಿಗೆ ಇದೆಲ್ಲಾ ಕಾಮನ್ ರಘುನಂದನ್…

ರಘುನಂದನ್ ಪೆಚ್ಚು ನಗೆ ನಗುತ್ತಾನೆ.

ಕಟ್ ಟು…

ದೃಶ್ಯ – ೫೬ / ಹಗಲು / ಗೊರವಯ್ಯನ ಮನೆ

ಗೊರವಯ್ಯ ಮತ್ತು ಗೌರಿ ಇಬ್ಬರೂ ಸೇರಿ ಬಿರುಕು ದೊಡ್ಡದಾದ ಗೋಡೆಗೆ ಮಣ್ಣು ಮೆತ್ತುತ್ತಿದ್ದಾರೆ.

ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಯುವಕ ಮತ್ತು ಅವನ ಸ್ನೇಹಿತ ಅತ್ತಲೇ ಬರುತ್ತಾರೆ.
ಯುವಕ ರೈತಸಂಘದ ಕಾರ್ಯಕರ್ತನಂತೆ ಕಾಣ ಬಹುದು.

ಯುವಕ : ಅಜ್ಜಾ ಗ್ವಾಡೆಗೆ ತ್ಯಾಪೆ ಹಾಕ್ತಾನೇ ಇರು, ಅದು ಉದುರುತನೇ ಇರಲಿ…

ಗೊರವಯ್ಯ : ಏನು ಮಾಡದಪ್ಪ ಬಿದ್ದೋಯ್ತದೆ ಅಂತ ಬುಡಕ್ಕಾದತಾ ? ಅಂಗೇನಾರ ಬಿದ್ರೆ ತಲೆ ಮೇಲೆ
ಕವುಚಿಕತ್ತದಲ್ಲಪ್ಪಾ.

ಯುವಕ : ಅದಕ್ಕೆ ಈ ಮರ ಕಡಿಯೋದೊಂದೇ ದಾರಿ ನೋಡು…

ಗೊರವಯ್ಯ : ಅದಕ್ಕೆ ಸಾಹೇಬ್ರು ಬಂದು ನೋಡಿ ಬರಕೊಡಬೇಕಂತಲ್ಲಪ್ಪ…

ಯುವಕ : ಅಯ್ಯೋ ನೀನೊಬ್ಬ. ಅವರು ಬರಕೊಟ್ರು; ಅದು ಆಯ್ತು. ನೀನು ಹುಂ ಅನ್ನು, ನಾಳೆನೇ
ಈ ಮರ ಇಲ್ಲ ಅನ್ನಿಸಿಬಿಡ್ತೀವಿ, ಅದು ಯಾವನು ಬರತಾನೋ ಬರಲಿ, ಪ್ಯಾಂಟ್
ಬಿಚ್ಚಾಕ್‌ಬಿಡತೀವಿ!

ಗೊರವಯ್ಯ : ಅಯ್ಯೊಯ್ಯೋ ಅದೆಲ್ಲಾ ರೇಜಿಗೆ ಬ್ಯಾಡಪ್ಪ. ಇವತ್ತು ಇನ್ನೊಂದಪ ಹೋಗಿ ಕೇಳ್ತೀನಿ.

ಯುವಕ : ಜಬರ್‌ದಸ್ತ್ ಮಾಡ್ಬೇಕು ಜಬರ್‌ದಸ್ತು. ಅಗಲೇ ಮಾತು ನಡಿಯಾದು…

ಗೊರವಯ್ಯ ಅವನ ಮಾತನ್ನೇ ಕುರಿತು ಚಿಂತಿಸುತ್ತಾನೆ.

ಕಟ್ ಟು…

ದೃಶ್ಯ – ೫೭ / ಹಗಲು / ರಘುನಂದನ್ ಮನೆ

ಸುಮ ಬಂದು ಬಾಗಿಲು ತೆರೆಯುತ್ತಾಳೆ.
ಎದುರಿಗೆ ನಿಂತಿರುವ ಗೌರಿ ಮತ್ತು ಗೊರವಯ್ಯ.
ಅವರನ್ನು ನೋಡಿ ಸುಮಾಗೆ ಆಶ್ಚರ್ಯವಾಗುತ್ತದೆ.

ಸುಮ : ನೀವಾ! ಯಾವಾಗ ಬಂದ್ರಿ… ಬನ್ನಿ..ಬನ್ನಿ

ಗೊರವಯ್ಯ : ನಿಮ್ಮನ್ನ ನೋಡಬೇಕು ನೋಡಬೇಕು ಅಂತ ಸ್ಯಾನೆ ಅಂಗಲಾಪು ಪಡ್ತಿದ್ಳು ಕಣವ್ವ… ನಂಗೂ
ಒಸಿ ಆಪೀಸ್ ಕೆಲ್ಸ ಇತ್ತು, ಅಂಗೇ ನಿಮ್ಮತಾವ ಬುಟ್ಟು ಓಗೋಣ ಅಂತ ಕರಕೊಂಡು ಬಂದೆ…

ಸುಮ : ನಿಜವಾಗಿ ಹೇಳಬೇಕೂಂದ್ರೆ ನಂಗೂ ಇವಳನ್ನ ನೋಡೋ ಮನಸ್ಸಾಗಿತ್ತು. ನಿಮ್ಮ ಮನೆ ಎಲ್ಲಿ?
ಯಾರ ಕೈಲಿ ಹೇಳಿ ಕಳಿಸೋದು ಅಂತ ಯೋಚ್ನೆ ಮಾಡ್ತಾ ಇದ್ದೆ.

ಗೌರಿ : ಅಜ್ಜಯ್ಯ ಈ ಸಲ ಬ್ಯಾರೆ ಬ್ಯಾರೆ ಪದ ಹೇಳ್ಕೊಟ್ರು ಕಣಕ್ಕ…

ಸುಮ : ಹೌದಾ! ಜಾಣೆ. ನಂಗೂ ಹೇಳಿಕೊಡೂವಂತೆ…. ಬಾ. ಬನ್ನಿ ತಾತ.

ಗೊರವಯ್ಯ : ನಾನು ಒಸಿ ಆಪೀಸ್‌ತಾವ ಒಗಿ ಬತ್ತೀನಿ ಕಣವ್ವ…

ಸುಮ : ಸರಿ…

ಗೊರವಯ್ಯ ಹೋಗುತ್ತಾನೆ.
ಎಂದು ಗೌರಿಯನ್ನು ಒಳಕ್ಕೆ ಕರೆದೊಯ್ಯುತ್ತಾಳೆ.

ಕಟ್ ಟು…

ದೃಶ್ಯ – ೫೮ / ಹಗಲು / ಕಛೇರಿ

ರಘುನಂದನ್ ಏನೋ ಕೆಲಸ ಮಾಡುತ್ತಿರುವಾಗ ಫೋನ್ ರಿಂಗಾಗುತ್ತದೆ.
ಬರೆಯುತ್ತಲೇ ಫೋನ್ ತೆಗೆದುಕೊಳ್ಳುತ್ತಾನೆ.

ರಘುನಂದನ್ : ಹಲೋ, ರಘುನಂದನ್…

ಆಫೀಸರ್ : ನಾನ್ರೀ ಪುರುಷೋತ್ತಮ್.

ರಘುನಂದನ್ : ನಮಸ್ಕಾರ ಸಾರ್.

ಪುರುಷೋತ್ತಮ : ನಮಸ್ಕಾರ… ಈಗ ಕರಡಿಗುಡ್ಡದ ಐಬೀನ ಡೆಮಾಲಿಶ್ ಮಾಡಬೇಕು ಅಂತ
ಬರೆದಿದ್ದರಲ್ಲ, ನಿಮ್ಮ ಪ್ರಪೋಸಲ್‌ನ ಅಪ್ರೂವ್ ಮಾಡಿದ್ದೀನ್ರೀ…

ರಘುನಂದನ್ : (ಸಂತೋಷ) ಹೌದಾ ಸರ್. ಥ್ಯಾಂಕ್ಯು ಸಾರ್

ಪುರುಷೋತ್ತಮ : ಆದ್ರೆ ಅದರದೊಂದು ಸ್ಪಾಟ್ ಇನ್ಸ್‌ಪೆಕ್ಷನ್ ಅಗಬೇಕಲ್ಲರೀ.

ರಘುನಂದನ್ : (ಗಾಬರಿ) ಸ್ಪಾಟ್ ಇನ್ಸ್‌ಪೆಕ್ಷಾನ್ನಾ ಸಾರ್!

ಆಫೀಸರ್ : ಹೌದು. ನಾನು ಶನಿವಾರ ಬೇರೆ ಯಾವುದೋ ಪರ್ಸನಲ್ ಕೆಲ್ಸದ ಮೇಲೆ ಆ ಕಡೆ ಬರತಾ
ಇದ್ದೀನಿ, ಬಂದಾಗ ಆ ಕೆಲ್ಸಾನೂ ಮುಗಿಸಿಬಿಡಬಹುದಲ್ಲಾ…

ರಘುನಂದನ್ : (ನಿಧಾನವಾಗಿ) ಬನ್ನಿ ಸಾರ್, ನಾನು ಅರೇಂಜ್ ಮಾಡಿರತೀನಿ…

ರಘುನಂದನ್ ಫೋನ್ ಇಟ್ಟು ತಲೆ ಮೇಲೆ ಕೈ ಹೊರುತ್ತಾನೆ.
ಟೇಬಲ್ ಮೇಲಿದ್ದ ಬೆಲ್ ಬಾರಿಸುತ್ತಾನೆ.
ಸ್ವಲ್ಪ ಹೊತ್ತು ಯಾರೂ ಬರುವುದಿಲ್ಲ.
ಅಸಹನೆ ಹೆಚ್ಚಾಗುತ್ತದೆ. ಮತ್ತೊಮ್ಮೆ ಬೆಲ್ ಬಾರಿಸುತ್ತಾನೆ.
ಆಗ ಜವಾನ ಬಾಗಿಲು ತೆಗೆದು

ಜವಾನ : ಬುದ್ಧೀ…

ರಘುನಂದನ್ : ಎಷ್ಟೊತ್ತಯ್ಯ ಕರೆಯೋದು. ಎಲ್ಲಾ ಎಲ್ಲಿ ಹಾಳಾಗ್ ಹೋಗಿರತೀರ… ಆ ವೆಂಕಟೇಶಯ್ಯನ
ಕರಿಯಯ್ಯ….

ಜವಾನ ಆಚೆ ಹೋಗುತ್ತಾನೆ.
ವೆಂಕಟೇಶಯ್ಯ ಒಳಬರುತ್ತಾನೆ.

ವೆಂಕಟೇಶಯ್ಯ : ಸಾರ್…

ರಘುನಂದನ್ : ಹೆಡ್ ಆಫೀಸಿನಿಂದ ಫೋನ್ ಬಂದಿತ್ತು… ಅವ್ರು ಸ್ಪಾಟ್ ಇನ್ಸ್‌ಪೆಕ್ಷನ್‌ಗೆ ಬರತಿದ್ದಾರೆ.

ವೆಂಕಟೇಶಯ್ಯ : ಯಾವ ಸ್ಪಾಟ್ ಇನ್ಸ್‌ಪೆಕ್ಷನ್ನು ಸಾರ್ ?

ರಘುನಂದನ್ : ಐಬೀ ನೋಡಬೇಕಂತ್ರೀ ಐಬೀ . ಎಲ್ಲಿಂದ ತಂದು ತೋರಿಸಲಿ ಹೇಳಿ? ಈಗ ಪ್ರಾಬ್ಲಂ
ನಿಮ್ಮ ತಲೆಯಿಂದ ನನ್ನ ಹೆಗಲಿಗೆ ಬಂದು ಕೂತುಕೊಳ್‌ತಲ್ಲ! ಏನು ಮಾಡಲಿ ?

ಅಷ್ಟರಲ್ಲಿ ಹೊರಗೆ ಯಾರೋ ಕೂಗಾಡುವುದು ಕೇಳಿಸುತ್ತದೆ.
ಆಗ ಜವಾನ ಒಳಬಂದು ವೆಂಕಟೇಶಯ್ಯನಿಗೆ

ಜವಾನ : ಸ್ವಾಮಿ, ಆ ಮುದುಕ ಬಂದು ರಾಂಗ್ ಮಾಡ್ತಾವ್ನೆ, ಏನು ಹೇಳಿದರೂ ಕೇಳಿಸ್ಕಂತಿಲ್ಲ.

ವೆಂಕಟೇಶಯ್ಯ : (ರಘುನಂದನ್‌ಗೆ) ಒಂದ್ನಿಮಿಷ ಬಂದೆ ಸಾರ್…

ಎಂದು ಹೊರಬರುತ್ತಾನೆ.

ದೃಶ್ಯ – ೫೯ / ಆಫೀಸ್ ಹೊರಗೆ

ಗೊರವಯ್ಯ ಹಾಲ್ ಮಧ್ಯೆ ನಿಂತು ಶ್ರೀಧರಮೂರ್ತಿಯೊಂದಿಗೆ ವಾದಿಸುತ್ತಿದ್ದಾನೆ.

ಶ್ರೀಧರಮೂರ್ತಿ : ಜೋರಾಗಿ ಬಾಯಿಮಾಡಬೇಡ, ಅಂತ ಎಷ್ಟು ಸಲವಯ್ಯ ನಿಂಗೆ ಹೇಳೋದು?

ಗೊರವಯ್ಯ : ನಾ ಮಾತಾಡಿರೆ ನಿಂಗೆ ಕಿರುಚಿದಂಗಿರತದಾ ಬುದ್ಧಿ ?

ಅಷ್ಟರಲ್ಲಿ ವೆಂಕಟೇಶಯ್ಯ ಹೊರಗೆ ಬರುತ್ತಾನೆ. ಅವನನ್ನು ನೋಡಿದ ಗೊರವಯ್ಯ,

ಗೊರವಯ್ಯ : ಏನ್ ಸ್ವಾಮಿ, ನಾಳಿಕ್ಕೋ ನಾಡದ್ದೋ ನನ್ನ ಮನೆ ಗ್ವಾಡೆ ಬಿದ್ದೋಗಂಗಾಗೈತಲ್ಲ, ಮರ
ಕಡಿಯಾಕೆ ನೀವು ನಂಗೆ ಆರ್ಡ್ರು ಕೊಡವ್ರಾ, ಇಲ್ವಾ?

ವೆಂಕಟೇಶಯ್ಯ : ಮೆತ್ತಗ್ ಮಾತೋಡೋ. ಏನ್ ಬೆಳ್ ಬೆಳಗ್ಗೇನೆ ಪರಮಾತ್ಮನ್ನ ಏರಿಸಿಕ್ಕೊಂಡ್ ಬಂದ್
ಬಿಟ್ಟಿದ್ದೀಯ? (ಕೈ ತೋರಿಸುತ್ತಾನೆ)

ಗೊರವಯ್ಯ : ನೋಡಿ ಎಂಗದೆ ನಮುಂತ ಬಡವರ ಪರಸಂಗ ? ವಸಿ ಮೆತ್‌ಗ್ ಮಾತಾಡಿದ್ರೆ ಹೊಟ್ಟಿಗೇನು
ತಿಂದಿಲ್ವಾ ಅಂತೀರ, ಜೋರಾಗಿ ಕೇಳಿದ್ರೆ ಕುಡಕಂಡ್ ಬಂದಿದ್ದೀಯ ಅಂತೀರ. ಅದೆಲ್ಲಾ ಬ್ಯಾಡ ಮರ ಕಡಿಯಾಕ್ ಈಗೇನ್ ಆರ್ಡ್ರು ಮಾಡವರಾ, ಇಲ್ವಾ?

ವೆಂಕಟೇಶಯ್ಯ : ನಿಂತ ಕಾಲ ಮೇಲೆ ಆರ್ಡರ್ ಮಾಡಿ ಅಂದ್ರೆ ಮಾಡೋಕಾಗಲ್ಲ ಕಣಯ್ಯ. ಅದಕ್ಕೆಲ್ಲಾ
ಇನ್ಸ್‌ಪೆಕ್ಷನ್ ಮಾಡಬೇಕು ಅಂತ ಅವತ್ತೇ ಹೇಳಲಿಲ್ವ ನಾನು.

ಗೊರವಯ್ಯ : ಅವತ್ತಿಂದಾ ಅದನ್ನೇ ಏಳ್ತಿದ್ದೀರ! ಯಾವತ್ತ ಸ್ವಾಮಿ ನೀವು ಬಂದು ನೋಡಾದು? ನಿಮ್ಮ ಕೆಲ್ಸ
ಆಗಬೇಕಾದ್ರೆ ಎಂಗ್ ಮಾಡಿಸಿಕಂಡ್ರಿ ನೋಡಿ.

ವೆಂಕಟೇಶಯ್ಯ : ಅಪ್ಪಾ, ನೀನು ಆ ಕೆಲ್ಸ ಮಾಡಿಕೊಟ್ಟಿದ್ದರಿಂದಾನೇ ನಾವೀಗ ನಾವು ಅನುಭವಿಸ್ತಾ
ಇರೋದು…

ಗೊರವಯ್ಯ : ನಾನು ಏನ್ ಮಾಡ್ದೆ ಅಂತ ಅಂಗಂತೀರ ಸ್ವಾಮಿ ?

ವೆಂಕಟೇಶಯ್ಯ : ಸುಮ್ನೆ ಮಾತಾಡಿ ನನ್ನ ಪಿತ್ಥ ನೆತ್ತಿಗೇರಿಸಬೇಡ ಹೋಗಯ್ಯ…

ಗೊರವಯ್ಯ : ಇಂಥಾ ಮಾತಾಡಿ ನಮ್ಮ ಹೊಟ್ಟೆ ಉರುಸ್‌ಬ್ಯಾಡಿ ಸ್ವಾಮಿ, ನಿಮ್ಮ ಕಾಲಿಗ್ ಬೀಳ್ತೀನಿ…

ವೆಂಕಟೇಶಯ್ಯ : ಏ ಕೆಂಪಾ ತಳ್ಳೋ ಇವನ್ನಾ…

ಎಂದು ಮತ್ತೆ ಚೇಂಬರ್‌ನೊಳಕ್ಕೆ ಹೋಗುತ್ತಾನೆ.
ಜವಾನ ಕೆಂಪಯ್ಯ ಗೊರವಯ್ಯನ ರೆಟ್ಟೆಗೆ ಕೈ ಹಾಕಿ ಹೊರಕ್ಕೆ ಎಳೆದೊಯ್ಯುತ್ತಾನೆ.

ಜವಾನ : ಬಾರಜ್ಜ ನೀನು…

ಗೊರವಯ್ಯ : ನಾನ್ ಬರಾಕಿಲ್ಲ, ನನ್ನ ಮನೆ ಬಿದ್ದೋಗುತ್ತೆ….

ಜವಾನ : ನಡಿಯಪ್ಪ ನೀನು… ಸುಮ್ಮನೆ ತೊಂದ್ರೆ ಕೊಡ್ಬೇಡ…

ಗೊರವಯ್ಯ : ನನ್ನೇ ಆಚೆಗೆ ತಳ್‌ತೀಯೇನಲೇ ? ನಾನು ಪಾರ್ವತಿ ಮಗಾ, ನಾನ್ ಸುಮ್ಕಿದ್ರೂ ನಮ್ಮವ್ವ
ಸುಮ್ಮಕಿರೋಲ್ಲ. ನಿನ್ನ ನೋಡ್ಕಂತಳೇ…..

ಎಂದು ಕೂಗಾಡುತ್ತಲೇ ಹೋಗುತ್ತಾನೆ.

ಕಟ್ ಟು…

ದೃಶ್ಯ – ೬೦ / ರಾತ್ರಿ / ರಘುನಂದನ್ ಮನೆ

ರಘುನಂದನ್ ರಾತ್ರಿ ಮನೆಯಲ್ಲಿ ಚಿಂತೆಯಲ್ಲಿದ್ದಾನೆ.
ಸುಮ ಅವನ ಸ್ಥಿತಿ ಗಮನಿಸುತ್ತಾಳೆ.

ಸುಮ : ರಘು ಯಾಕೆ ಇನ್ನೂ ಮಲಗಿಲ್ಲ…

ರಘುನಂದನ್ : ನಂಗೆ ನಿದ್ದೆ ಬರತಿಲ್ಲ ಸುಮ… ನಾನು ಇಲ್ಲದ ಐಬೀನ ಇಲ್ಲ ಅನ್ನಿಸೋಕೆ
ಹೋಗಬಾರದಿತ್ತು… I ಜiಜ ಚಿ misಣಚಿಞe….

ಸುಮ : ಹೀಗಾಗುತ್ತೆ ಅಂತ ನಾನು exಠಿeಛಿಣ ಮಾಡಲಿಲ್ಲ

ರಘುನಂದನ್ : ನಾನೊಂದು ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ಹಾಗ್ ಆಗಿದ್ದೀನಿ. ಹೊರಗೆಬರೋಕೆ ಯಾವ
ದಾರೀನು ಕಾಣಿಸ್ತಿಲ್ಲ.

ಸುಮ ಅವನ ಸ್ಥಿತಿ ನೋಡಿ ಮರುಗುತ್ತಾಳೆ.

ಕಟ್ ಟು…

ದೃಶ್ಯ – ೬೧ / ಮುಂಜಾನೆ / ರಘುನಂದನ್ ಮನೆ

ಬೆಳಗ್ಗೆ ಚುಮು ಚುಮು ಇರುವಾಗಲೇ ವೆಂಕಟೇಶಯ್ಯ ರಘುನಂದನ್ ಮನೆಯ ಬಾಗಿಲು ತಟ್ಟುತ್ತಾನೆ.
ಸುಮ ಬಂದು ಬಾಗಿಲು ತೆರೆಯುತ್ತಾಳೆ.

ವೆಂಕಟೇಶಯ್ಯ : ನಮಸ್ಕಾರ ತಾಯಿ, ಸಾಹೇಬ್ರು ಎದ್ದಿದಾರ?

ಸುಮ : ಇಲ್ಲ ಮಲಗಿದ್ದಾರೆ. ರಾತ್ರಿಯೆಲ್ಲಾ ತುಂಬಾ ತಲೆ ಕೆಡಿಸಿಕೊಂಡಿದ್ರು…

ವೆಂಕಟೇಶಯ್ಯ : ಅದಕ್ಕೇ ಒಂದು ಪರಿಹಾರ ಯೋಚ್ನೆ ಮಾಡ್ಕೊಂಡು ಹೇಳೋಣ ಅಂತ ಓಡೋಡಿ ಬಂದೆ
ತಾಯಿ. ಸ್ವಲ್ಪ ಏಳಿಸ್ತೀರ?

ಸುಮ ಏಳಿಸಲು ತಿರುಗಿದಾಗ ರಘು ಎದ್ದು ಹೊರಬಂದಿರುತ್ತಾನೆ.

ವೆಂಕಟೇಶಯ್ಯ : ಸಾರ್, ಆ ಗೊರವಯ್ಯ ಯಾವುದೋ ಹಳೇ ಬಿಲ್ಡಿಂಗ್ ನೋಡ್ಕಂಡ್‌ಬಂದು ಅದೇ ಐಬಿ
ಅಂದ್ನಲ್ಲಾ… ಈಗ ಅದನ್ನೇ ನಾವು ಐಬಿ ಅಂತ ಹೆಡ್ ಆಫೀಸಿನವರಿಗೆ ಯಾಕ್ ತೋರಿಸಬಾರದು?

ರಘುನಂದನ್ : ಈಗಾಗಲೇ ಮಾಡಿರೋದು ಸಾಲ್ದು ಅಂತ ಇನ್ನೊಂದು ತಪ್ಪು ಮಾಡು ಅಂತಿದ್ದೀರ?

ವೆಂಕಟೇಶಯ್ಯ : ಇಲ್ಲ ಸಾರ್, ಆಗಿರೋ ತಪ್ಪನ್ನು ಸರಿಪಡಿಸೋ ಮಾರ್ಗ ಹೇಳ್ತಾ ಇದ್ದೀನಿ. ನಾವು
ಬಿಲ್ಡಿಂಗ್ ಹಾಳಾಗಿದೆ ಅಂತ ಈಗಾಗಲೇ ರಿಪೋರ್ಟ್ ಕೊಟ್ಟಿದ್ದೀವಿ. ಈಗ ತೋರಿಸೋದು ಅಂತಾ ಹಾಳಾಗಿರೋ ಒಂದು ಬಿಲ್ಡಿಂಗು. ಹ್ಯಾಗಿದ್ರೂ ಅದನ್ನ ಒಡೆದು ಹೊಸಾದು ಕಟ್ಟೋದು ತಾನೆ?

ರಘುನಂದನ್ : ಏನೋಪ್ಪ, ನಂಗ್ ಒಂದೂ ತೋಚ್ತಾ ಇಲ್ಲ.

ಸುಮ : ರಘು, ವೆಂಕಟೇಶಯ್ಯನವರು ಹೇಳೋದೆ ಸರಿ ಅನ್ನಿಸುತ್ತೆ. ಈಗಾಗಲೇ ಐಬಿ ಇದೆ ಅಂತ ಹೇಳಿ ಸಿಕ್ಕಿ
ಹಾಕಿಕೊಂಡು ಆಗಿದೆ, ಯಾವುದಾದರೂ ಒಂದು ಬಿಲ್ಡಿಂಗ್‌ನ ತೋರಿಸಲೇ ಬೇಕಲ್ಲ…

ರಘುನಂದನ್ : ನೀವು ತೋರಿಸೋದು ಯಾವ ಬಿಲ್ಡಿಂಗೋ ಏನೋ? ಅವ್ರು ಒಪ್ಪಬೇಕಲ್ಲ?

ವೆಂಕಟೇಶಯ್ಯ : ಅದೆಲ್ಲಾ ವ್ಯವಸ್ಥೆ ಮಾಡೋಣ ಸಾರ್. ಅವ್ರು ಬರೋಕ್ ಮುಂಚೆ ನಾವು ಒಂದ್ಸಲ
ಹೋಗಿ ನೋಡಿಕೊಂಡು ಬಂದ್ರೆ ಆಯ್ತು.

ರಘುನಂದನ್ : ಅದೇನ್ ಮಾಡ್ತೀರೋ ಮಾಡಿ… ನೀರಲ್ಲಿ ಬಿದ್ದಾಗಿದೆಯಲ್ಲಾ!

ಎಂದು ಹೇಳಿ ರಘುನಂದನ್ ನಿಟ್ಟುಸಿರು ಬಿಡುತ್ತಾನೆ.

ದೃಶ್ಯ – ೬೨ / ಹಗಲು / ಗೊರವಯ್ಯನ ಮನೆ

ವೆಂಕಟೇಶಯ್ಯ ಗೊರವಯ್ಯನ ಮನೆಗೆ ಸೈಕಲ್‌ನಲ್ಲಿ ಬರುತ್ತಾನೆ.
ಗೊರವಯ್ಯ ಹೊರಗೆ ಏನೋ ಕೆಲಸ ಮಾಡುತ್ತಿದ್ದಾನೆ. ವೆಂಕಟೇಶಯನನ್ನು ನೋಡಿ ಸಂತೋಷವಾಗುತ್ತದೆ.

ಗೊರವಯ್ಯ : ಬುದ್ಧೀ, ಅಡ್ಡಬಿದ್ದೆ ಬುದ್ಧೀ…

ವೆಂಕಟೇಶಯ್ಯ : ಹುಂ… ನಮಸ್ಕಾರಪ್ಪ…

ಗೊರವಯ್ಯ : ನಿನ್ನೆ ನನ್ನ ಮನ್ಸು ರೋಸೋಗಿತ್ತು ಸ್ವಾಮಿ, ಏನೇನೋ ಅಂದುಬಿಟ್ಟೆ… ಏನು ಅಂದ್ಕೋಬೇಡಿ.

ವೆಂಕಟೇಶಯ್ಯ : ಇರಲಿ ಬಿಡಯ್ಯ… (ಮರದತ್ತ ನೋಡಿ) ಓಹೋಹೋ ಇದೇನೋ ಮರ…

ಗೊರವಯ್ಯ : ಹುಂ ಸ್ವಾಮಿ, ನೋಡಿ ಎಂಗೆ ಬಿರುಕು ಬಿಟ್ಟೈತೆ… ನೀವು ಅಟ್ಟೀ ವಳಿಕ್ ಬಂದ್ರೆ ಬೇರು
ತೋರಿಸ್ತೀನಿ.

ವೆಂಕಟೇಶಯ್ಯ : ಇರಲಿ ಬಿಡು… ಇಲ್ಲೇ ಕಾಣ್ಸುತ್ತಲ್ಲ.

ಗೊರವಯ್ಯ : ಸ್ವಾಮಿ, ಹಾವಿನ ಹೆಡೆ ಕೆಳ್ಗಿನ ಕಪ್ಪೆಯಂಗೆ ಬದುಕ್ತಿದ್ದೀನಿ ಬುದ್ಧೀ. ಯಾವಾಗ
ಮಗುಚಿಕಳುತ್ತೋ ಭಗವಂತನೇ ಬಲ್ಲ ?

ವೆಂಕಟೇಶಯ್ಯ : ಏನೂ ಯೋಚ್ನೆ ಮಾಡಬೇಡ. ಇದನ್ನ ಕಡೀಬೇಕಾದ್ದೆ…

ಗೊರವಯ್ಯ : ಅಂಗಾರೆ, ಇವತ್ತು ನಾಳೇಲಿ ಕಡಿಸಿಬಿಡ್ಲಾ ಬುದ್ಧಿ…

ವೆಂಕಟೇಶಯ್ಯ : ಅಂಗೆಲ್ಲಾ ಮಾಡಿಗೀಡಿಯ. ಸಾಹೇಬ್ರು ಬಂದು ಒಂದ್ಸಲ ನೋಡಿ ಆರ್ಡ್ರು ಮಾಡಿಬಿಡ್ಲೀ
ಆಮೇಲೆ ಕಡ್ಸಿಬಿಡೂವಂತೆ…

ಗೊರವಯ್ಯ : ನೀವೇ ವಸಿ ಇಂಗಿಂಗೆ ಅಂತ ಏಳಿಬುಡಿ ಬುದ್ಧೀ. ಅವರೊಂದ್ಸಲ ಯಾಕೆ?

ವೆಂಕಟೇಶಯ್ಯ : ನಂಗೆ ಆ ಅಧಿಕಾರ ಇಲ್ಲಪ್ಪ… ಈಗ ಏನಾಗಿದೆ ಅಂದ್ರೆ?

(ಮುಂದಿನ ದೃಶ್ಯ ಒಂದು ಸಣ್ಣ ಹಾಡಿನ ರೂಪದಲ್ಲಿ ಬರುತ್ತದೆ)
ವೆಂಕಟೇಶಯ್ಯ ಗೊರವಯ್ಯನನ್ನು ಏನೋ ಮಾತನಾಡುವುದು.
ಅವನು ಮೊದಲು ತಾನು ಬರುವುದಿಲ್ಲ ಎನ್ನುವುದು. ವೆಂಕಟೇಶಯ್ಯ ಅವನನ್ನು ಪುಸಲಾಯಿಸುವುದು…. ಇತ್ಯಾದಿ

ದೃಶ್ಯ – ೬೩ / ಹಗಲು / ಕರಡಿಗುಡ್ಡ

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ
ಜೋಡು ಹೆಂಡಿರಂಜಿ ಓಡಿ ಹೋಗುವಾಗ ಗೊಡೆ ಬಿದ್ದು ಬಯಲಾಯಿತಲ್ಲಾ \ಪ\

ಎಚ್ಚರವಗೊಳಲಿಲ್ಲ ಮನವೆ ಹುಚ್ಚನಾದೆನಲ್ಲಾ ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದು ಹೋಯಿತಲ್ಲಾ

ಮುಪ್ಪು ಬಂದಿತಲ್ಲಾ ಪಾಯಸ ತಪ್ಪದೆ ಉಣಲಿಲ್ಲ, ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ದೊಪ್ಪನೆ ಬಿತ್ತಲ್ಲಾ

ಯೋಗವು ಬಂತಲ್ಲ ಬದುಕು ವಿ
ಭಾಗವಾಯಿತಲ್ಲಾ ಭೋಗಿಶಯನ ಶ್ರೀ ಪುರಂದರ ವಿಠಲನ ಆಗ ನೆನೆಯಲಿಲ್ಲ.

ಜೀಪಿನಲ್ಲಿ ರಘುನಂದನ್, ವೆಂಕಟೇಶಯ್ಯ ಮತ್ತು ಗೊರವಯ್ಯ ಬರುತ್ತಾರೆ.
ಗುಡ್ಡ ಹತ್ತಿ ಒಂದು ಸ್ಥಳಕ್ಕೆ ಬರುತ್ತಾರೆ.
ಅಲ್ಲಿ ಬಿಲ್ಡಿಂಗ್ ಒಂದರ ಅಸ್ಥಿಪಂಜರ ಕಾಣುತ್ತದೆ. ಅದರ ಚಾವಣಿ ಹಾರಿಹೋಗಿದೆ.
ಸುತ್ತಲೂ ಬರಿಯ ಗೋಡೆಗಳು ನಿಂತಿವೆ.
ಅದನ್ನು ನೋಡಿ ವೆಂಕಟೇಶಯ್ಯ ಮತ್ತು ರಘುನಂದನ್‌ಗೆ ಅಚ್ಚರಿಯಾಗುತ್ತದೆ.
ಗೊರವಯ್ಯನೊಂದಿಗೆ ಏನೋ ಮಾತನಾಡುತ್ತಾರೆ.

ಷಾಟ್ ಬದಲಾದರೆ ಈ ಬಾರಿ ರಘುನಂದನ್ ಆಫೀಸರ್ ಜೊತೆಯಲ್ಲಿದ್ದಾನೆ.
ಜೊತೆಯಲ್ಲಿ ಆಫೀಸರ್ ಸಹಾಯಕನೊಬ್ಬನಿದ್ದಾನೆ. ಅವನು ಕೆಲವು ಛಾಯಾಚಿತ್ರಗಳನ್ನು ತೆಗೆಯುತ್ತಾನೆ.
(ಇಲ್ಲಿಗೆ ಹಾಡೂ ಮುಗಿಯುತ್ತದೆ)

ಅಫೀಸರ್ : ಇದೇನ್ರೀ ಇಷ್ಟೊಂದು ಹಾಳಾಗಿದೆ!

ವೆಂಕಟೇಶಯ್ಯ : ಈಗೊಂದು ಆರು ತಿಂಗಳ ಹಿಂದೆ ಭರ್ಜರಿ ಮಳೆ ಬಂತು ಸಾರ್. ಅವತ್ತು ಬೀಸಿದ
ಬಿರುಗಾಳಿಗೆ ಇದರ ಸೂರೆಲ್ಲಾ ಹಾರಿ ಹೋಗಿದೆ ಸಾರ್. (ದೂರದಲ್ಲಿ ಕೈ ಕಟ್ಟಿ ನಿಂತಿದ್ದ ಗೊರವಯ್ಯನನ್ನು ತೋರಿಸಿ) ಇವನೇ ಸಾರ್ ಇದರ ಮೇಟಿ.

ಆಫೀಸರ್ : veಡಿಥಿ bಚಿಜ! ಇಷ್ಟೊಂದು ಹಾಳಾಗಿದೆ ಅಂತ ನಾನು ಅಂದುಕೊಂಡಿರಲಿಲ್ಲ. ಮಿ.ರಘುನಂದನ್,
ಇದನ್ನ ತಕ್ಷಣ ಡೆಮಾಲಿಶ್ ಮಾಡಿಸಿ. ನೆಕ್ಟ್ ವೀಕ್‌ನಲ್ಲೇ ಠಿಚಿಥಿmeಟಿಣ ಡಿeಟeಚಿse ಆಗೋ ಹಾಗೆ ನಾನು ನೋಡ್ಕೋತೀನಿ. Iಟಿ ಣhe meಚಿಟಿ ಣime ಇದೇ ಜಾಗದಲ್ಲಿ ಹೊಸಾ ಗೆಸ್ಟ್ ಹೌಸ್ ಕಟ್ಟೋದಿಕ್ಕೆ ಒಂದು ಡೀಟೈಲ್ಡ್ ಪ್ರಪೋಸಲ್ ಕಳಿಸಿ, ನಾನು ಅಪ್ರೂವ್ ಮಾಡಿಸ್ತೀನಿ. ಅ‌ಒ ಬಂದು iಟಿಚಿuguಡಿಚಿಣe ಮಾಡಬೇಕು ಹಾಗ್ ಮಾಡ್ತೀನಿ. ಓಕೆ… ಒoಟಿಜಚಿಥಿ ಬಂದು ನನ್ನ ಠಿeಡಿsoಟಿಚಿಟ ಆಗಿ ಮೀಟ್ ಮಾಡಿ.
ರಘುನಂದನ್ : ಥಿes siಡಿ… ಖಿhಚಿಟಿಞ ಥಿou veಡಿಥಿ muಛಿh siಡಿ
ರಘುನಂದನ್ ಮುಖದಲ್ಲಿ ಸಮಾಧಾನ ಕಾಣುತ್ತದೆ. ಕಟ್ ಟು..

ದೃಶ್ಯ – ೬೪ / ಹಗಲು / ಗೊರವಯ್ಯನ ಮನೆ

ಗೊರವಯ್ಯನ ಮನೆಯ ಬಿರುಕು ದೊಡ್ದದಾಗಿದೆ.
ಗೊರವಯ್ಯ ಬಿರುಕಿಗೆ ಈ ಹಿಂದೆ ಮೆತ್ತಿದ್ದ ಮಣ್ನನು ಎರೆದು ಹಾಕುತ್ತಿದ್ದಾನೆ.
ಅದೇ ಊರಿನ ಯುವಕನೊಬ್ಬ ಅದನ್ನು ನೋಡಿ,

ಯುವಕ : ಇದೇನ್ ನಿಂಗ್ ಹುಚ್ಚು-ಗಿಚ್ಚು ಹಿಡದೈತೇನಜ್ಜ, ಮೆತ್ತಿರಾ ಮಣ್ಣೆಲ್ಲಾ ಹಂಗ್ ಎರೆದ್ ಹಾಕ್ತಾ
ಇದ್ದೀಯ! ಹಿಂಗಾದರೆ ಗೋಡೆ ಉಳಿಯುತ್ತಾ?

ಗೊರವಯ್ಯ : ಅದು ಅಂಗಲ್ಲ ಕಣಪ್ಪ, ದೊಡ್ಡ ಸಾಹೇಬ್ರು ಈ ಗೋಡೆ ನೋಡೋಕ್ ಬರತೀನಿ ಅಂದವ್ರೆ…
ಅವ್ರು ಬಂದಾಗ ಬಿರುಕು ದೊಡ್ಡದಾಗಿ ಇರಬೇಕು. ನಾವು ಮಣ್ಣು ಮೆತ್ತಿ ಸರಿ ಮಾಡ್ಕಂಡಿದ್ದೀವಿ ಅಂತ ಗೊತ್ತಾದ್ರೆ ಎಲ್ಲಾ ಸರಿಯಾಗೇ ಐತಲ್ಲ, ಮರ ಯಾಕ್ ಕಡೀಬೇಕು? ಅಂತ ಕೇಳ್ತಾರೆ. ಆಗ ಏನು ಉತ್ರ ಕೊಡ್ತೀಯ?

ಎಂದು ತನ್ನ ಕೆಲಸ ಮುಂದುವರಿಸುತ್ತಾನೆ. ಯುವಕ ಗೊರವಯ್ಯನನ್ನು ವಿಚಿತ್ರವಾಗಿ ನೋಡುತ್ತಾನೆ.

ಕಟ್ ಟು…

ದೃಶ್ಯ – ೬೫ / ಹಗಲು / ಹೆಡ್ ಆಫೀಸ್

ಹೆಡ್ ಆಫೀಸಿನಲ್ಲಿ ರಘುನಂದನ್ ಕುಳಿತಿದ್ದಾನೆ. ಆಫೀಸರ್ ಛಾಯಾಚಿತ್ರಗಳನ್ನು ನೋಡುತ್ತಾ ಕುಳಿತಿದ್ದಾರೆ.
ಫೋಟೋ ನೋಡುವುದನ್ನು ಮುಂದುವರೆಸುತ್ತಲೇ ಮಾತಾಡುತ್ತಾರೆ.

ಆಫೀಸರ್ : ರಘುನಂದನ್, ಕರಡಿಗುಡ್ಡ ಏರಿದ್ದು ನಂಗೆ ಹೊಸಾ ಎಕ್ಸ್‌ಪೀರಿಯನ್ಸು….

ರಘುನಂದನ್ : ಹೌದು ಸಾರ್ ನಂಗೂ ಇದೆಲ್ಲಾ ಹೊಸಾ ಎಕ್ಸ್‌ಪೀರಿಯನ್ಸೇ…

ಆಫೀಸರ್ : ನೀವು ಆ ಐಬಿ ಡೆಮಾಲಿಷನ್‌ಗೆ ಎಷ್ಟು ಹಣ್ದ ಕೇಳಿದ್ರಿ, ೫೦ ಸಾವಿರ ಅಲ್ವ ?

ರಘುನಂದನ್ : ಹೌದು ಸಾರ್…

ಆಫೀಸರ್ : ಸಿಟೀಲಿ ಏನಾದ್ರು ಮನೆ-ಗಿನೆ ಕಟ್ಟಿಸ್ತಾ ಇದ್ದೀರ?

ರಘುನಂದನ್ : ಇಲ್ಲ ಸಾರ್… ಯಾಕ್ ಸಾರ್?

ಆಫೀಸರ್ : ನೋಡಿ, ಬಿಲ್ಡಿಂಗ್ ಕಟ್ಟಿಸೋದಿಕ್ಕು ಖರ್ಚಾಗುತ್ತೆ; ಕೆಡುವೋದಿಕ್ಕೂ ಖರ್ಚಾಗುತ್ತೆ ಆದ್ರೆ ಇಲ್ಲದೇ
ಇರೋ ಕಟ್ಟಡಾನ ಇಲ್ಲ ಅನ್ನಿಸೋಕೆ ಖರ್ಚಾಗುತ್ತೆ ಅಂತ ಫಸ್ಟ್ ಟೈಂ ನಂಗ್ ಗೊತ್ತಾಯ್ತು…

ರಘುನಂದನ್ ಗಾಬರಿಯಿಂದ ಆಫೀಸರ್ ಮುಖ ನೋಡುತ್ತಾನೆ.

ಆಫೀಸರ್ : ಏನು ರಘುನಂದನ್ ನನ್ನನ್ನ ಸುಲಭವಾಗಿ ಫೂಲ್ ಮಾಡಬಹುದು ಅಂತ ತಿಳ್ಕೊಂಡರಾ?
ಯಾವುದೋ ಹಳೇ ಚರ್ಚ್ ತೋರಿಸಿ ಐಬಿ ಅಂದ್ರೆ ನಂಬೋವಷ್ಟು ಮೂರ್ಖನೇನ್ರೀ ನಾನು?

ರಘುನಂದನ್ : ಸಾರ್ ಅದೂ ಐಬೀನೆ ಸಾರ್. ಚರ್ಚಲ್ಲ…

ಆಫೀಸರ್ : ಈ ಫೋಟೋ ನೋಡಿ, ಇದರಲ್ಲಿ ಒಂದು ಪೋರ್ಷನ್ ಮಾರ್ಕ್ ಮಾಡಿದ್ದೀನಲ್ಲ, ಅದನ್ನ
ನೋಡಿ. ನಿಮಗೆ ಅದು ಹಳೇ ಚರ್ಚ್ ಅಲ್ಲವೋ ಹೌದೋ ಅಂತ ಗೊತ್ತಾಗುತ್ತೆ. ನಮ್ಮ ಹುಡುಗ ತುಂಬಾ ಶಾರ್ಪು ಹುಡುಕ್ಕೊಂಡು ಪೋಟೋ ತೆಗೆದಿದ್ದಾನೆ.

ಅದನ್ನು ನೋಡಿ ರಘುನಂದನ್ ಗಾಬರಿಯಾಗುತ್ತಾನೆ. ಅವನ ಮುಖದಲ್ಲಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಭಾವ.
ರಘುನಂದನ್ : I ಚಿm soಡಿಡಿಥಿ siಡಿ….
ಆಫೀಸರ್ : ನೀವೂ ಹೀಗೆಂತ ಅಂದುಕೊಂಡಿರಲಿಲ್ಲ ಙou mಚಿಥಿ hಚಿve ಣo ಜಿಚಿಛಿe ಣhe ಛಿoಟಿsequeಟಿಛಿess…

ಕಟ್ ಟು…

ದೃಶ್ಯ – ೬೬ / ರಾತ್ರಿ / ರಘುನಂದನ್ ಮನೆ

ಮನೆಯಲ್ಲಿ ಸುಮ ಆಫೀಸರ್ ಕೊಟ್ಟ ನೋಟೀಸ್ ಅನ್ನು ಓದುತ್ತಿದ್ದಾಳೆ.
ಅವಳ ಕಣ್ಣಿನಿಂದ ನೀರು ಹರಿಯುತ್ತದೆ. ತಲೆಯೆತ್ತಿ ಗಂಡನನ್ನು ನೋಡುತ್ತಾಳೆ. ಅವನು ವಿಸ್ಕಿಯನ್ನು ಗುಟಕರಿಸುತ್ತಿದ್ದಾನೆ.

ಸುಮ : ನಿಮ್ಮನ್ನ ಸಸ್ಪೆಂಡ್ ಮಾಡ್ತಾರಾ?

ರಘುನಂದನ್ : ಏನು ಬೇಕಾದ್ರು ಆಗಬಹುದು. ನಿನ್ನ ಮಾತು ಆ ವೆಂಕಟೇಶಯ್ಯನ ಮಾತು ಕೊನೆಗೆ ಆ
ಗೊರವಯ್ಯನ ಮಾತೂ ಕೇಳ್ದೆ; ಸುಳ್ಳ ಆದೆ. ನಾನು ದುಡ್ಡು ಹೊಡೀತನಂತೆ. ನಾಳೇ ಪೇಪರ್‌ನಲ್ಲಿ ಬರುತ್ತೆ ನೋಡು. ‘ಇಲ್ಲದ ಕಟ್ಟಡ ಇಲ್ಲ ಎನ್ನಿಸಲು ಸರ್ಕಾರಿ ಅಧಿಕಾರಿಯ ಪ್ರಯತ್ನ-ಬಯಲು’ ಅಂತ ದೊಡ್ಡದಾಗಿ ಬರುತ್ತೆ. ಆಮೇಲೆ ನಾನು ಎಲ್ಲೂ ಮುಖ ಎತ್ತಿಕೊಂಡು ತಿರುಗೋ ಹಾಗಿಲ್ಲ…

ಎಂದು ಮತ್ತಷ್ಟು ವಿಸ್ಕಿಯನ್ನು ಬಾಟಲಿಯಿಂದ ಗ್ಲಾಸಿಗೆ ಸುರಿದುಕೊಳ್ಳುತ್ತಾನೆ.
ಸುಮ ವ್ಯಥೆಯಿಂದ ಇದನ್ನೆಲ್ಲಾ ನೋಡುತ್ತಾಳೆ.

ಕಟ್ ಟು…

ದೃಶ್ಯ – ೬೭ / ರಾತ್ರಿ / ಮಾವನ ಮನೆ

ಸುಮ ತಂದೆಯ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದಾಳೆ.

ತಂದೆ : ಇಷ್ಟಕ್ಕೆಲ್ಲಾ ನೀನು ಯಾಕಮ್ಮ ಕಣ್ಣೀರು ಹಾಕ್ತೀಯ? ಇದೇನು ಅಷ್ಟೊಂದು ದೊಡ್ಡ ವಿಷ್ಯ ಅಲ್ಲ.
ನಾನು ನೋಡ್ಕೋತೀನಿ. ಅಲ್ಲಿ ನಿನ್ನ ಗಂಡ ಒಬ್ನೇ ಇರತಾನೆ. ನೀನು ಊರಿಗೆ ಹೋಗು. ಈ ಸಂದರ್ಭದಲ್ಲಿ ನೀನು ಅವನ ಜೊತೇಲಿ ಇರೋದು ಒಳ್ಳೇದು.

ಸುಮ ಕಣ್ಣೀರು ಒರೆಸಿಕೊಳ್ಳುತ್ತಾಳೆ.

ಕಟ್ ಟು…

ದೃಶ್ಯ – ೬೮ / ರಾತ್ರಿ / ಗೊರವಯ್ಯನ ಮನೆ

ಹೊರಗೆ ಮಳೆ ಸುರಿಯುತ್ತಿದೆ.
ಮುರುಕಲು ಗುಡಿಸಲಿನಲ್ಲಿ ಗೊರವಯ್ಯ ಮತ್ತು ಗೌರಿ ಮಲಗಿದ್ದಾರೆ.
ಗೋಡೆಯ ಬಿರುಕು ದೊಡ್ಡದಾಗಿರುವುದರಿಂದ ಅಲ್ಲಿಂದ ಬಂದ ಮಿಂಚು ಗುಡಿಸಲನ್ನು ಪ್ರಕಾಶಮಾನವಾಗಿಸುತ್ತಿದೆ.
ಗೋಡೆಯಿಂದ ನೀರು ಮಣ್ಣಿನೊಂದಿಗೆ ಬೆರೆತು ಬರುತ್ತಿದೆ.
ಮಧ್ಯರಾತ್ರಿ ಗೋಡೆಯ ತುಂಡೊಂದು ಹುಡುಗಿಯ ಕೈ ಮೇಲೆ ಬೀಳುತ್ತದೆ.
ಮಣ್ಣಿನ ಹೆಂಟೆ ಬಿದ್ದ ಪೆಟ್ಟಿಗೆ ಗೌರಿ ಕಿರುಚಿ ಏಳುತ್ತಾಳೆ.
ಗೊರವಯ್ಯನೂ ಏಳುತ್ತಾನೆ.
ಗೌರಿ ಮಣ್ಣಿನಲ್ಲಿ ಹೂತ ತನ್ನ ಕೈ ಆಚೆ ತೆಗೆಯಲು ಒದ್ದಾಡುತ್ತಿದ್ದಾಳೆ.
ಗೊರವಯ್ಯ ಮಣ್ಣನ್ನು ಬಗೆ ಮಾಡಿ ಕೈ ತೆಗೆಯುತ್ತಾನೆ.
ಅದನ್ನು ನೋಡಿ ಅವನ ಮುಖದಲ್ಲಿ ನೋವಿನ ಭಾವ ಕಾಣುತ್ತದೆ. ಅದು ನಿಧಾನವಾಗಿ ಕೋಪಕ್ಕೆ ತಿರುಗುತ್ತದೆ.

ಡಮರುಗದ ಕರ್ಕಶ ಶಬ್ದ ಅವನ ಮುಖದ ಮೇಲೆ ಪ್ರಾರಂಭವಾಗುತ್ತದೆ.

ಕತ್ತಲಲ್ಲಿ ಗೊರವಯ್ಯ ಡಮರುಗ ಬಾರಿಸಿಕೊಂಡು ರುದ್ರತಾಂಡವ ಮಾಡುತ್ತಾನೆ…

ದೃಶ್ಯ – ೬೯ / ಹಗಲು / ಹೆಡ್ ಆಫೀಸ್

ಆಫೀಸರ್ ಮುಂದೆ ಕುಳಿತಿರುವ ರಘುನಂದನ್

ಆಫೀಸರ್ : ಅಲ್ಲಾ ರಘುನಂದನ್ ನೀವು ತಿಡಿiಣeಡಿ ದಯಾನಂದ್ ಅವರ ಡಿeಟಚಿಣive ಅಂತ ಮೊದಲೇ
ಹೇಳಬಾರದೇನ್ರೀ? ನಿಮಿಗೆ ಗೊತ್ತಿಲ್ಲ, ನಾನು Uಟಿiveಡಿsiಣಥಿ ಯಲ್ಲಿ ಓದತಿರಬೇಕಾದ್ರೆ ನನ್ನ ಗುರುಗಳಾಗಿದ್ರು ಅವರು… ನಾನು Iಟಿಣeಡಿಟಿಚಿಟs ಠಿಚಿss ಮಾಡಿದ್ದೇ ಅವರ ಹೆಲ್ಪ್‌ನಿಂದ! ಊe is ಚಿ gಡಿeಚಿಣ mಚಿಟಿ! ಅಲ್ಲ ಅವರ ಅಳಿಯ ಅಂತ ಒಂದು ಮಾತು ಹೇಳಬಾರದಿತ್ತ ?

ರಘುನಂದನ್ : ನಂಗೆ ಆ ರೀತಿ ಹೆಸರಿನ ದುರುಪಯೋಗ ಇಷ್ಟ ಆಗಲ್ಲ ಸಾರ್…

ಆಫೀಸರ್ : ಆದ್ರೆ, ಅವರ ಹೆಸರು ಇಲ್ಲಿ ಪ್ರಸ್ತಾಪ ಆಗದೇ ಇದ್ರೆ ನಾನು ನಿಮ್ಮನ್ನ ಇಲ್ಲಿ ಕರಸ್ತಾನು ಇರಲಿಲ್ಲ;
ಈ Pಡಿobಟem soಟve ಮಾಡೋ ಪ್ರಯತ್ನಾನು ಮಾಡತಿರಲಿಲ್ಲ.

ರಘುನಂದನ್‌ಗೆ ಪೆಚ್ಚೆನಿಸುತ್ತದೆ. ಅನಿವಾರ್ಯವಾಗಿ ಸಹಿಸಿಕೊಂಡು ಕೂರುತ್ತಾನೆ.
ಅವನ ಸ್ಥಿತಿ ಪುರುಷೋತ್ತಮ್ ಸಾಹೇಬ್ರಿಗೆ ಅರ್ಥವಾಗುತ್ತದೆ.

ಆಫೀಸರ್ : (ಅನುನಯಿಸುತ್ತ) ನೋಡಿ ರಘುನಂದನ್ ನೀವು ಒಬ್ಬ ಸಿನ್ಸಿಯರ್ ಆಫೀಸರ್ ಅಂತ
ನಂಗೊತ್ತು. ನಿಮ್ಮಂತೋರು ಸರ್ಕಾರಿ ಸರ್ವೀಸ್‌ನಲ್ಲಿ ಇರಬೇಕು. ನಿಮಗೆ ಕೆಟ್ಟ ಹೆಸರು ಬರಬಾರದು ಅನ್ನೋದು ನನ್ನ ಉದ್ದೇಶ. ಮೇಲಾಗಿ ಈ ಪ್ರಕರಣದಲ್ಲಿ ನಿಮ್ಮ ತಪ್ಪೂ ಇಲ್ಲ ಅನ್ನಿ. ಏನೋ ಒಳ್ಳೇದು ಮಾಡೋಣ ಅಂತ ಹೋಗಿ ನೀವೇ ಸಿಕ್ಕಿ ಹಾಕಿಕೊಂಡ್ರಿ. ಇರಲಿ, ಆoಟಿ’ಣ ತಿoಡಿಡಿಥಿ ಎಲ್ಲ ಸರಿ ಮಾಡೋಣ. ತಕ್ಷಣಕ್ಕೆ ನೀವು ಒಂದು ಡಿeಠಿoಡಿಣ ಛಿಡಿeಚಿಣe ಮಾಡಿಕೊಡಬೇಕು.

ರಘುನಂದನ್ : ರಿಪೋರ್ಟ್!? ಏನ್ ರಿಪೋರ್ಟ್ ಸಾರ್?

ಆಫೀಸರ್ : Simಠಿಟe, ನೀವು ಆವತ್ತು ನನಗೆ ತೋರಿಸಿದ ಚರ್ಚ್ ಇದೆಯಲ್ಲಾ ಅದನ್ನೇ ಐಬಿ ಅಂತ ನಾನು
ಒಪ್ಪಿಕೊಂಡು ಸರ್ಕಾರಕ್ಕು ಹೇಳ್ತೀನಿ. ಆದ್ರೆ ಅದು ಇಷ್ಟು ಬೇಗ ಹ್ಯಾಗೆ ಹಾಳಾಯ್ತು ಅನ್ನೋದಕ್ಕೆ ಛಿoಟಿviಟಿಛಿiಟಿg ಇರೋತರ ರಿusಣiಜಿiಛಿಚಿಣioಟಿ ಯೋಚನೆ ಮಾಡಿ ಕೊಡಿ …. ಮುಂದಿನದು ನಂಗಿರಲಿ.

ರಘುನಂದನ್‌ಗೆ ಅವರ ಮಾತುಗಳು ಒಗಟಾಗಿ ಕಾಣಿಸುತ್ತವೆ.

ಕಟ್ ಟು…

ದೃಶ್ಯ – ೭೦ / ಹಗಲು / ಆಫೀಸ್

ರಘುನಂದನ್ ಛೇಂಬರ್‌ನಲ್ಲಿ ವೆಂಕಟೇಶಯ್ಯ ಕುಳಿತು ಮಾತನಾಡುತ್ತಿದ್ದಾರೆ.

ವೆಂಕಟೇಶಯ್ಯ : ಹಾಗಾದ್ರೆ ನಾವು ಈಗ ಮುಂದೆ ಏನ್ ಮಾಡೋದು ಸಾರ್ ?

ರಘುನಂದನ್ : ನಂಗೊಂದೂ ತೋಚ್ತಾ ಇಲ್ಲ ವೆಂಕಟೇಶಯ್ಯ… ಆ ಬಂಗಲೆ ಸ್ಥಿತೀಗೆ ಬರೋದಿಕ್ಕೆ ಏನು
ಕಾರಣ ಕೊಡೋದು ? ಫರ್ನೀಚರ್ ಏನಾಯ್ತು ? ಕಿಟಕಿ ಬಾಗಿಲು ಏನಾದ್ವು?

ವೆಂಕಟೇಶಯ್ಯ : ನಾನು ತುಂಬಾ ಯೋಚನೆ ಮಾಡಿ ಒಂದು ಹಾದಿ ಹುಡುಕಿದ್ದೀನಿ ಸಾರ್… ಆದ್ರೆ ನೀವು
ಒಪ್ಪಬೇಕು ಅಷ್ಟೇ…

ರಘುನಂದನ್ : ಹೇಳಿ ಏನದು ?

ವೆಂಕಟೇಶಯ್ಯ : ಸಾರ್ ನಾವು ಅವತ್ತು ಗೊರವಯ್ಯನ್ನ ಮೇಟಿ ಅಂತ ಸಾಹೇಬ್ರಿಗೆ ತೋರಿಸಿದ್ವಲ್ಲಾ ಸಾರ್.
ಈಗ ಅವನೇ ಯಾರದೋ ಜೊತೆ ಸೇರಿಕೊಂಡು ಫರ್ನಿಚರ್ ಮತ್ತೊಂದೆಲ್ಲಾ ಮಾರಿಕೊಂಡು, ಮರ-ಮುಟ್ಟು, ಕಿಟಕಿ-ಬಾಗಿಲೆಲ್ಲ ಕಳ್ಳತನದಲ್ಲಿ ಸಾಗಿಸಿಬಿಟ್ಟಿದ್ದಾನೆ ಅಂತ ಅವನ ಮೇಲೆ ಒಂದು ಕಂಪ್ಲೇಂಟ್ ಕೊಟ್ಟುಬಿಡೋದು ಸಾರ್…

ರಘುನಂದನ್ : ಅಂದ್ರೆ ಗೊರವಯ್ಯನೇ ಅಲ್ಲಿ ಮೇಟಿ ಅಂತ ಹೇಳೋದ….

ವೆಂಕಟೇಶಯ್ಯ : ಹೌದು ಸಾರ್… ನಾವು ಹಳೇ ಮೇಟಿ ಸಿದ್ಧಯ್ಯನ ಟಚ್ ಮಾಡೋಕೋದ್ರೆ ಏನೇನೋ
ಪ್ರಾಬ್ಲಂ ರೈಸ್ ಆಗುತ್ತೆ. ಅದಕ್ಕೆ ಗೊರವಯ್ಯನೇ ಅದ್ರ ಮೇಟಿ ಆಗಿದ್ದ ಅಂತ ಹೇಳಿಬಿಡೋದು…

ರಘುನಂದನ್ : (ದಿಗ್ಭ್ರಾಂತ) ಏನ್ ಮಾತಾಡ್ತಿದ್ದೀರಿ ವೆಂಕಟೇಶಯ್ಯ… ಪಾಪ! ಆ ಮುಗ್ಧ ಗೊರವಯ್ಯನ
ಮೇಲೆ ಸುಳ್ಳು ಆಪಾದನೆ ಹೊರಿಸೋದಾ ?! ನೋ… ಇಟ್ ಈಸ್ ನಾಟ್ ಫೇರ್…

ವೆಂಕಟೇಶಯ್ಯ : ಬೇರೆ ಏನೂ ದಾರಿ ಇಲ್ಲ ಸಾರ್…

ರಘುನಂದನ್ : ಆದ್ರೆ ಆ ಗೊರವಯ್ಯ ಯಾವ ತಪ್ಪೂ ಮಾಡ್ದೇ ಇದ್ರೂ ಕಳ್ಳ ಆಗಲ್ಲವೇನ್ರೀ ?

ವೆಂಕಟೇಶಯ್ಯ : ಹಾಗಲ್ಲ ಸಾರ್… ಆ ಗೊರವಯ್ಯನಿಗೆ ಹಿಂದಿಲ್ಲ ಮುಂದಿಲ್ಲ. ಅವನಿಗೆ ಈಗ ಬೇಕಿರೋದು
ಎರಡು ಹೊತ್ತಿನ ಊಟ ಅಷ್ಟೇ. ಅದಕ್ಕೋಸ್ಕರ ಬಿಸಿಲು-ಗಾಳಿ-ಮಳೆ ಅನ್ನದೆ ಮನೆ ಮನೆ ಅಲೀತಿರತಾನೆ… ನಾಳೆ ಜೈಲಿನಲ್ಲಿ ಅವನಿಗೆ ಕೂತಿದ್ದ ಕಡೆ ಊಟ ಹಾಕ್ತಾರಲ್ಲ ಸಾರ್. ಇದಕ್ಕಿಂತ ಇನ್ನೇನ್ ಬೇಕು ?

ರಘುನಂದನ್ ಮಾತು ಮರೆತವನಂತೆ ಕೂರುತ್ತಾನೆ. ಅವನ ಮುಂದೆ ಗೊರವಯ್ಯನ ಮುಖ ತೇಲಿ ಹೋಗುತ್ತದೆ.

ದೃಶ್ಯ- ೭೧ / ರಾತ್ರಿ / ರಘುನಂದನ್ ಮನೆ

ಮನೆಯಲ್ಲಿ ರಘುನಂದನ್ ಎದುರು ನಿಂತು ಸುಮ ಮಾತನಾಡುತ್ತಿದ್ದಾಳೆ.

ಸುಮ : ಇದು ಅನ್ಯಾಯ. ತುಂಬಾ ಅನ್ಯಾಯ. ಒಬ್ಬ iಟಿಟಿoಛಿeಟಿಣ ನ ಸಿಕ್ಕಿಹಾಕಿಸೋದಿಕ್ಕೆ ನೀವು ಹ್ಯಾಗೆ
ಒಪ್ಪಿಕೊಂಡ್ರಿ ರಘು ?

ರಘುನಂದನ್ : I ಜoಟಿ’ಣ hಚಿve ಚಿಟಿಥಿ sಚಿಥಿ!

ಸುಮ : ನೋಡಿ ರಘು, ನೀವು ಈ ಪ್ರಾಬ್ಲಂನ ಬೇರೆ ಹ್ಯಾಗಾದ್ರುs ssoಟve ಮಾಡ್ಕೊಳೊ ದಾರಿ ನೋಡಿ.
ಆದ್ರೆ ಯಾವ ಕಾರಣಕ್ಕೂ ಪಾಪ ಆ ಗೊರವಯ್ಯನ್ನ ಮಾತ್ರ ಸಿಕ್ಕಿ ಹಾಕಿಸಬೇಡಿ. ಅವನೊಬ್ಬ ಮುಗ್ಧ, ಅವನಿಗೆ ಸುಮ್ನೆ ತೊಂದ್ರೆ ಕೊಟ್ರೆ ನಾಳೆ ನಮಗೆ ಒಳ್ಳೇದಾಗಲ್ಲ. ನಾವು ಈಗ ಅನುಭವಿಸ್ತಾ ಇರೋದೆ ಸಾಕು.

ಎಂದು ಅಳುತ್ತಾ ಒಳ ಹೋಗುತ್ತಾಳೆ.
ರಘುನಂದನ್ ಮೌನವಾಗಿ ನಿಂತಿದ್ದಾನೆ.

ಕಟ್ ಟು…

ದೃಶ್ಯ- ೭೨ / ಹಗಲು / ಗೊರವಯ್ಯನ ಮನೆ

ರಘುನಂದನ್ ಮತ್ತು ವೆಂಕಟೇಶಯ್ಯ ಜೀಪಿನಲ್ಲಿ ಗೊರವಯ್ಯನ ಮನೆಯ ರಸ್ತೆಯಲ್ಲಿ ಬರುತ್ತಾರೆ.
ಇಬ್ಬರ ಮುಖದಲ್ಲೂ ದುಗುಡ ಮನೆ ಮಾಡಿದೆ.
ರಘುನಂದನ್ ಗಹನವಾದ ಚಿಂತೆಯಲ್ಲಿದ್ದಂತೆ ಕಾಣುತ್ತಿದ್ದಾನೆ.

ವೆಂಕಟೇಶಯ್ಯ : ಸಾರ್ ನೀವೇನು ಚಿಂತೆಮಾಡಬೇಡಿ ಸಾರ್. ಅವನತ್ರ ನಾನು ಮಾತಾಡಿ ಒಪ್ಪಿಸ್ತೀನಿ.

ರಘುನಂದನ್ : ನನ್ನ ಮನಸ್ಸು ಯಾಕೋ ಒಪ್ತಾ ಇಲ್ಲ ವೆಂಕಟೇಶಯ್ಯ. ನಡೀರಿ, ವಾಪಸ್ ಹೋಗೋಣ.

ರಘುನಂದನ್ : ನೀವು ಸಂಕೋಚ ಮಾಡಿಕೋಬೇಡಿ ಸಾರ್. ನಾನು ಊಚಿಟಿಜಟe ಮಾಡ್ತೀನಿ, ನೀವು
ಸುಮ್ನಿರಿ…

ಅಷ್ಟರಲ್ಲಿ ಗೊರವಯ್ಯನ ಮನೆಯ ರಸ್ತೆ ಬರುತ್ತದೆ.
ಗೊರವಯ್ಯನ ಮನೆಯ ಬಳಿ ಬಂದಂತೆ ಅಲ್ಲಿ ಜನರ ಗುಂಪು ಕಾಣುತ್ತದೆ.
ಜೀಪು ನಿಲ್ಲಿಸಿ ಇಳಿದು, ಜನರ ಮಧ್ಯೆ ಜಾಗ ಮಾಡಿಕೊಂಡು ಬಂದು ನೋಡುತ್ತಾರೆ.

ರಾತ್ರಿ ಬಿದ್ದ ಮಳೆಗೆ ಗೊರವಯ್ಯನ ಮನೆ ಉರುಳಿಬಿದ್ದಿದೆ.
ಅವಶೇಷಗಳ ಕೆಳಗೆ ಗೊರವಯ್ಯ ಸಿಕ್ಕಿ ಸತ್ತು ಹೋಗಿದ್ದಾನೆ.
ಬದಿಯಲ್ಲೇ ಗೌರಿ ಅಳುತ್ತಾ ನಿಂತಿದ್ದಾಳೆ.

ರಘುನಂದನ್ ದಿಗ್ಭ್ರಾಂತನಾಗಿ ಇದನ್ನು ನೋಡುತ್ತಾನೆ.
ಮನೆಯನ್ನು ಉರುಳಿಸಿದ ಮರದ ಬೇರು ಆಕಾಶಕ್ಕೆ ಮುಖ ಮಾಡಿದೆ.
ವೆಂಕಟೇಶಯ್ಯನಿಗೆ ಇದನ್ನು ನೋಡಿ ಮಾತೇ ಹೊರಡುತ್ತಿಲ್ಲ.

ರಘುನಂದನ್ ಒಂಟಿಯಾಗಿ ನಿಂತ ಗೌರಿಯ ಕಡೆ ನೋಡುತ್ತಾನೆ.
ಅವಳ ಬಳಿಗೆ ನಡೆದು ಅವಳ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಾನೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.