ಬೆದರುಬೊಂಬೆ

ಪುಸ್ತಕಕ್ಕೆ ಮುನ್ನುಡಿ
ಹೊಸ ಮನೆಗೆ ಬೆರ್ಚಪ್ಪನಂತೆ:
ವಿಮರ್ಶಕರ ದುರ್ವಾಕ್ಯಗಳ
ಪಿಶಾಚ ಪೀಡೆಯ ಪರಿಹಾರಕ್ಕೆ
ಅದೊಂದು ಪೂರ್ವಭಾವೀ
ರಕ್ಷಾ ತಾಯಿತಿಯ ಪ್ರಯತ್ನ.
*****