ಸಾಕ್ಷಿ

ಹತ್ತಾರು ರಸ್ತೆಗಳು ಒಂದನ್ನೊಂದು ಕತ್ತರಿಸುತ್ತ ಕೂತರೆ ಹೋಗುವುದೆಲ್ಲಿಗೆ ಹೇಳು ಹತ್ತೂ ಕಡೆ ಕನ್ನಡಿ ಹಿಡಿದು ನೀ ಕೂತರೆ ನಾ ಬತ್ತಲಾಗದೆ ಉಪಾಯವಿದೆಯೆ? *****

ರಂಗದಿಂದೊಂದಿಷ್ಟು ದೂರ

ನಿನ್ನೆವರೆಗೆ ಜಯಭೇರಿ ಹೊಡೆದ ನಾ -ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು ಇನ್ನೇನುಂಟು? ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ ತೋಡಿದ ತಗ್ಗಿನಲ್ಲಿ ಒಣಗಿದ ಖುರ್‍ಚಿ ಹಾಕಿಸಿಕೊಂಡು ಒಬ್ಬಂಟಿ ಅಲ್ಲಲ್ಲಿ […]

ಚಕ್ರವ್ಯೂಹ

ಯುನಿವರ್‍ಸಿಟಿಯ ಸುತ್ತಾ ಜಿಟಿ ಜಿಟಿ ಮಳೆಯಲ್ಲಿ ಕಳಚದ ಪೊರೆಯಲ್ಲಿ ಗಾಳಿಮರಗಳ ಕಾಲಿಗೆ ಬಿದ್ದ ಅಂಗಾತ ಬೀದಿಗಳಲ್ಲಿ ಕಟ್ಟಡದಿಂದ ಕಟ್ಟಡಕ್ಕೆ ಹಾಯುವ ಗಂಭೀರತೆಯಲ್ಲಿ ಹಿರಿಯರ ಮುಖದರ್‍ಜೆಯಲ್ಲಿ ಸುಂಯನೆ ಸೆರಗು ಚಿಮ್ಮಿಸಿ ಹೊರಟ ಸ್ಕೂಟರಿನಲ್ಲಿ ಸಿಟಿಬಸ್ಸಿಗೆ ಜೋತು […]

ಸೂರ್ಯ

ಸೂರ್ಯ ಆಗಾಗ ಹಗಲುಗಳ ನುಂಗಿ ಸುಖವಾಗಿ ಸಾಯುತ್ತಿದ್ದ ಅಥವಾ ಬದುಕುತ್ತಿದ್ದ ಆಗೊಮ್ಮೆ ಈಗೊಮ್ಮೆ ಹೆಣ್ಣುಗಳ ತುಟಿಯಲ್ಲಿ ಪಿಸುನುಸುಳುತ್ತಿದ್ದ ಅಯ್ಯೋ ಗದ್ದಲ ಭೂಮಿಯ ತುಂಬ ಮಕ್ಕಳೋ ಮಕ್ಕಳು! *****

ಅನುಭವ ಇಲ್ಲದ ಕವಿತೆ

ಅನುಭವ ಇಲ್ಲದ ಕವಿತೆ ತಿಂಗಳು ತುಂಬದ ಕೂಸು ಅವಸರವಸರದಿಂದ ಉಸಿರಿಗಾಗಿ ವಿಲಿವಿಲಿಸುತ್ತ ಹೊರ ಬರುತ್ತದೆ ಬಿಸಿಲಿಗೆ ರಾತ್ರಿ ಅಂಗಡಿ ಮುಚ್ಚಿ ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ ತಪ್ಪಿ […]

ಒಪೆರಾ ಹೌಸ್

ಚೌಪಾಟಿ ಸಮುದ್ರದಿಂದ ಕೂಗಳತೆ ದೂರದಲ್ಲಿರುವ ಒಪೆರಾ ಹೌಸ್ ಚಿತ್ರಮಂದಿರದ ಹಳೇ ಕಟ್ಟಿಗೆಯ ಚಿತ್ತಾರದ ಕಮಾನಿರುವ ಅಪ್ಪರ್ ಸ್ಟಾಲ್‍ನಲ್ಲಿ ಕೊನೆಯ ಆಟದ ನಂತರ ಕಸ ಹೊಡೆಯುತ್ತಿದ್ದಾಗ ಇಂದ್ರನೀಲನಿಗೆ ಸೀಟಿನ ಅಡಿಗೆ ಸಿಕ್ಕಿದ ಆ ಚೀಲ ತುಸು […]

ತಿಳಿಯಲಿಲ್ಲ

ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […]

ಅರ್ಥ

ನಿನ್ನ ಮೈ ತುಂಬ ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ ಗಳ ಮುಳ್ಳು ಚುಚ್ಚಿ ಅರ್ಥಕ್ಕಾಗಿ ಕಾದು ಕೂತೆ ಏನೂ ಹೊರಡಲಿಲ್ಲ ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು ನಿನ್ನ ಬೋಳು ಮೈ ತೊಳೆದು ಚೊಕ್ಕ ಒರೆಸಿ ಹಗುರಾಗಿ ಮೀಟಿದೆ […]

ನೀನಾಗಲು

ಕವಿತೆ ಬರೆಯುತ್ತೇನೆಯೆ ನಾನು? ಇಲ್ಲ ಬಿಡು ನಿನಗಾಗಿ ನಾನು ಸತ್ತುಕೊಳ್ಳುವದಿಲ್ಲ ಇಲ್ಲದವುಗಳ ಬಿಚ್ಚಿ ತೆತ್ತುಕೊಳ್ಳುವದಿಲ್ಲ ಮೊಲೆಯಿರದ ಮೊಳಕೆಗಳ ಬಿತ್ತುಕೊಳ್ಳುವುದಿಲ್ಲ ನೀನೇನೋ ಅಂದುಕೊಂಡಿದ್ದೀಯ ಎಂದು ಅವರಂತಾಗಲು ವ್ಯಕ್ತಿತ್ವ ಸ್ಖಲಿಸಿಕೊಂಡು ಆಕಾಶದಲ್ಲಿಯೇ ಮನೆ ಕಟ್ಟಿಕೊಳ್ಳುವುದಿಲ್ಲ. ತಪ್ಪಿಸಿಕೊಳ್ಳುತ್ತ ಹಗುರು […]